Tag: Helo

  • ಟಿಕ್‌ಟಾಕ್‌ ಸೇರಿದಂತೆ 59 ಆ್ಯಪ್‌ಗಳಿಗೆ 79 ಪ್ರಶ್ನೆ ಕೇಳಿದ ಕೇಂದ್ರ

    ಟಿಕ್‌ಟಾಕ್‌ ಸೇರಿದಂತೆ 59 ಆ್ಯಪ್‌ಗಳಿಗೆ 79 ಪ್ರಶ್ನೆ ಕೇಳಿದ ಕೇಂದ್ರ

    – ಉತ್ತರಿಸಲು ಮೂರು ವಾರಗಳ ಗಡುವು

    ನವದೆಹಲಿ: ಗಲ್ವಾನ್‌ ಘರ್ಷಣೆಯ ಬಳಿಕ ನಿಷೇಧಗೊಂಡಿರುವ 59 ಚೀನಾ ಅಪ್ಲಿಕೇಶನ್‌ಗಳಿಗೆ ಸರ್ಕಾರ 79 ಪ್ರಶ್ನೆಗಳನ್ನು ಕೇಳಿ ಉತ್ತರ ನೀಡುವಂತೆ ಸೂಚಿಸಿದೆ.

    ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ 79 ಪ್ರಶ್ನೆಗಳನ್ನು ಸಿದ್ಧಪಡಿಸಿ ಜುಲೈ 22ರ ಒಳಗಡೆ ಉತ್ತರಿಸುವಂತೆ ನೋಟಿಸ್‌ ನೀಡಿದೆ. ಒಂದು ವೇಳೆ ಮೂರು ವಾರದ ಒಳಗಡೆ ಉತ್ತರಿಸದಿದ್ದರೆ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

    ಕಂಪನಿಯ ಮೂಲ ಯಾವುದು? ಪೇರೆಂಟ್‌ ಕಂಪನಿಯ ರಚನೆ ಹೇಗೆ? ಕಂಪನಿಗೆ ಹಣ ಹೂಡಿದವರು ಯಾರು? ದತ್ತಾಂಶ ನಿರ್ವಹಣೆ, ಸರ್ವರ್‌ಗಳ ಬಗ್ಗೆ ಸರ್ಕಾರ ಪ್ರಶ್ನೆ ಕೇಳಿದೆ.

    ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 69ರ ಸಾರ್ವಭೌಮ ರಾಷ್ಟ್ರಕ್ಕೆ ಇರುವ ಅಧಿಕಾರಗಳ ಅಡಿ ಕೇಂದ್ರ ಸರ್ಕಾರ ಚೀನಿ ಕಂಪನಿಗಳಿಗೆ ನೋಟಿಸ್‌ ನೀಡಿದೆ. ಈ ಕಂಪನಿಗಳು ನೀಡಿದ ಉತ್ತರಗಳನ್ನು ವಿಶೇಷ ಸಮಿತಿ ಪರಿಶೀಲಿಸಲಿದೆ.

    ಕಂಪನಿಗಳು ನೀಡಿದ ಉತ್ತರಗಳು ಸಮರ್ಪಕವಾಗಿದ್ದಲ್ಲಿ ನಿಷೇಧಗೊಂಡ ಅಪ್ಲಿಕೇಶನ್‌ಗಳು ಮತ್ತೆ ಆಪ್‌ ಸ್ಟೋರ್‌ಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತ್ತು.

  • ಡಿಜಿಟಲ್‌ ಸ್ಟ್ರೈಕ್‌ಗೆ‌ ಟಿಕ್‌ಟಾಕ್‌ ಬ್ಯಾನ್‌ – ಬೈಟ್‌ಡ್ಯಾನ್ಸ್‌ಗೆ 45 ಸಾವಿರ ಕೋಟಿ ರೂ. ನಷ್ಟ

    ಡಿಜಿಟಲ್‌ ಸ್ಟ್ರೈಕ್‌ಗೆ‌ ಟಿಕ್‌ಟಾಕ್‌ ಬ್ಯಾನ್‌ – ಬೈಟ್‌ಡ್ಯಾನ್ಸ್‌ಗೆ 45 ಸಾವಿರ ಕೋಟಿ ರೂ. ನಷ್ಟ

    ಬೀಜಿಂಗ್‌: ಭಾರತ ಸರ್ಕಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಟಿಕ್‌ಕಂಪನಿಯ ಮಾತೃಸಂಸ್ಥೆಗೆ 6 ಶತಕೋಟಿ ಡಾಲರ್‌(ಅಂದಾಜು 45 ಸಾವಿರ ಕೋಟಿ ರೂ.) ನಷ್ಟ ಉಂಟಾಗಲಿದೆ.

    ಈ ಸಂಬಂಧ ಟ್ವೀಟ್‌ ಮಾಡಿರುವ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್‌ ಟೈಮ್ಸ್‌, ಟಿಕ್‌ಟಾಕ್‌ ಕಂಪನಿಯ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ಗೆ ಭಾರತದ ಸರ್ಕಾರದ ನಿರ್ಧಾರದಿಂದಾಗಿ 6 ಶತಕೋಟಿ ಡಾಲರ್‌ ನಷ್ಟ ಉಂಟಾಗಲಿದೆ. ಭಾರತ, ಚೀನಾ ನಡುವಿನ ಘರ್ಷಣೆಯಿಂದಾಗಿ ಚೀನಾದ ಟಿಕ್‌ಟಾಕ್‌ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ ಎಂದು ಟ್ವೀಟ್‌ ಮಾಡಿದೆ.

    ವಿಶೇಷ ಏನೆಂದರೆ ಟಿಕ್‌ಟಾಕ್‌ಗೆ ಭಾರತದಿಂದ ಹೆಚ್ಚು ಆದಾಯ ಏನು ಬರುವುದಿಲ್ಲ. ಆದರೆ ಅತಿ ಹೆಚ್ಚು ಡೌನ್‌ಲೋಡ್‌ ಮಾಡಿದ ರಾಷ್ಟ್ರಗಳ ಪೈಕಿ ಭಾರತಕ್ಕೆ ಮೊದಲ ಸ್ಥಾನ ಸಿಕ್ಕಿದೆ. ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು 1 ಶತಕೋಟಿ ಡಾಲರ್‌ ಹಣವನ್ನು ಹೂಡಿಕೆ ಮಾಡಿತ್ತು. 2018ರಿಂದ ಆರಂಭಗೊಂಡ ಟಿಕ್‌ಟಾಕ್‌ ಅನ್ನು ಭಾರತದಲ್ಲಿ 20 ಕೋಟಿ ಜನ ಬಳಕೆ ಮಾಡುತ್ತಿದ್ದರು.

    ಬೈಟ್‌ಡ್ಯಾನ್ಸ್‌ ಕಂಪನಿ ಚೀನಾದಲ್ಲಿ ಟೌಟಿಯಾವೊ ಹೆಸರಿನಲ್ಲಿ ಸುದ್ದಿ ಸಂಸ್ಥೆಯನ್ನು ತೆರೆದಿದೆ. ಇದರ ಜೊತೆಗೆ ಬುಝ್‌ ವಿಡಿಯೋ, ವಿಗೋ ವಿಡಿಯೋ, ಹೆಲೋ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದೆ.

    ಅಪ್ಲಿಕೇಶನ್‌ಗಳ ಮೂಲಕ ಚೀನಾ ಭಾರತ ಪ್ರಜೆಗಳ ಮಾಹಿತಿಗಳನ್ನು ಕದಿಯುತ್ತಿದೆ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ 52 ಅಪ್ಲಿಕೇಶನ್‌ಗಳನ್ನು ನಿಷೇಧಿಸಿ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಈ ಅಪ್ಲಿಕೇಶನ್‌ಗಳ ಮೂಲಕ ಚೀನಾ ಸ್ಪೈವೇರ್‌ ಅಥವಾ ದುರುದ್ದೇಶಪೂರಿತ ತಂತ್ರಾಂಶಗಳನ್ನು ಸೇರಿಸಿ ಡೇಟಾವನ್ನು ಕದಿಯಬಹುದು ಎಂಬ ಗಂಭೀರ ಆರೋಪ ಈಗ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಸುರಕ್ಷತೆಯ ಕಾರಣ ನೀಡಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟಿಕ್‌ಟಾಕ್‌ ಸೇರಿದಂತೆ 59 ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

    ಈ ಬಗ್ಗೆ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಪ್ರತಿಕ್ರಿಯಿಸಿ, ದೇಶದ ಜನಗಳ ಡೇಟಾ ಭದ್ರತೆಗಾಗಿ ಚೀನಿ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ್ದೇವೆ. ಇದು ಡಿಜಿಟಲ್‌ ಸ್ಟ್ರೈಕ್‌. ನಮ್ಮ ದೇಶದ ಜನಗಳ ಮೇಲೆ ಕೆಟ್ಟ ದೃಷ್ಟಿ ಇರಿಸಿದರೆ ನಾವು ಸರಿಯಾಗಿಯೇ ತಿರುಗೇಟು ನೀಡುತ್ತೇವೆ ಎಂದು ತಿಳಿಸಿದ್ದಾರೆ.