Tag: helmets

  • ಮುಷ್ಕರಕ್ಕೆ ಹೆದರಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ ಚಾಲಕ

    ಮುಷ್ಕರಕ್ಕೆ ಹೆದರಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ ಚಾಲಕ

    ಬೆಳಗಾವಿ: ಸಾರಿಗೆ ಮುಷ್ಕರಕ್ಕೆ ಇಳಿದಿರುವ ಸಾರಿಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಾರಿಗೆ ಬಸ್‍ಗಳನ್ನು ರಸ್ತೆಗೆ ಇಳಿಸಲು ಅಧಿಕಾರಿಗಳು ಇನ್ನಿಲ್ಲದ ಹರಸಾಹಸ ಮಾಡುತ್ತ ಇದ್ದಾರೆ. ಸಿಬ್ಬಂದಿ ಮೇಲೆ ಒತ್ತಡ ಹೇರಿ ಡ್ಯೂಟಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಬಸ್ ಚಾಲಕರೊಬ್ಬರು ಮುಷ್ಕರಕ್ಕೆ ಹೆದರಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

     

    ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಬಸ್‍ಗಳ ಓಡಾಟ ಸ್ಥಬ್ದವಾದ ಪರಿಣಾಮ ಸಾರಿಗೆ ಇಲಾಖೆ ಅಧಿಕಾರಿಗಳು ಇಂದು ಕೆಲವು ಸಿಬ್ಬಂದಿಗೆ ಒತ್ತಡ ಹೇರಿ ಡ್ಯೂಟಿಗೆ ನಿಯೋಜನೆ ಮಾಡಿದ್ದಾರೆ. ಹೀಗಾಗಿ ಮುಷ್ಕರಕ್ಕೆ ಹೆದರಿ ಬಸ್ ಚಾಲಕರೊಬ್ಬರು ಬಸ್ ಒಳಭಾಗದಲ್ಲಿ ಹೆಲ್ಮೆಟ್ ಧರಿಸಿ ಬೆಳಗಾವಿಯಿಂದ ಧಾರವಾಡಕ್ಕೆ ಬಸ್ ಚಾಲನೆ ಮಾಡಿದರು.

    ಸಾರಿಗೆ ಇಲಾಖೆಯ ಹಲವು ಚಾಲಕ ಹಾಗೂ ನಿರ್ವಾಹಕರಿಗೆ ಇಂದು ಮುಂಜಾನೆ ಡ್ಯೂಟಿ ಮುಗಿದ ಬಳಿಕವೂ ಹಿರಿಯ ಅಧಿಕಾರಿಗಳು ಡ್ಯೂಟಿ ಮುಂದುವರೆಸುವಂತೆ ಒತ್ತಡ ಹೇರುತ್ತಿದ್ದರು. ಪರಿಣಾಮ ಒಲ್ಲದ ಮನಸ್ಸಿನಿಂದಲೇ ಚಾಲಕರು ಮತ್ತು ನಿರ್ವಾಹಕರು ಬಸ್‍ಗಳನ್ನು ರಸ್ತೆ ಇಳಿಸಿದ್ದಾರೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ್ದು ವಿಶೇಷವಾಗಿದೆ.

  • ಹೆಲ್ಮೆಟ್ ಇಲ್ಲ ಅಂತ ತಡೆದವರಿಗೆ ಮರ್ಡರ್ ಕಥೆ ಹೇಳಿದ ಬೈಕ್ ಸವಾರ

    ಹೆಲ್ಮೆಟ್ ಇಲ್ಲ ಅಂತ ತಡೆದವರಿಗೆ ಮರ್ಡರ್ ಕಥೆ ಹೇಳಿದ ಬೈಕ್ ಸವಾರ

    -ಟ್ರಾಫಿಕ್ ಪೊಲೀಸರೇ ಶಾಕ್!

    ಚಿಕ್ಕಬಳ್ಳಾಪುರ: ಹಾಡಹಗಲೇ ಕಡಲೆಕಾಯಿ ಎಣ್ಣೆ ಮಾರಾಟ ಮಳಿಗೆಗೆ ಬಂದ ವ್ಯಕ್ತಿಯೊರ್ವ ಮಾಲೀಕನಿಗೆ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಪೊಲೀಸರ ಅತಿಥಿಯಾದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಬಜಾರ್ ರಸ್ತೆಯ ಗಂಗಮ್ಮ ಗುಡಿ ದೇವಾಲಯದ ಪಕ್ಕ ಅಡುಗೆ ಎಣ್ಣೆ ಅಂಗಡಿ ಇಟ್ಟುಕೊಂಡಿದ್ದ ಮಾಲೀಕ ದೇವರಾಜು ಚಾಕು ಇರಿತಕ್ಕೊಳಗಾದ ವ್ಯಕ್ತಿ. ದೇವನಹಳ್ಳಿ ಮೂಲದ ಸಂದೀಪ್ ಎಂಬಾತ ಚಾಕು ಇರಿದವ. ಅಂಗಡಿ ಮಾಲೀಕ ಮಾಲೀಕ ದೇವರಾಜು ಹಾಗೂ ಸಂದೀಪ್ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡಿಕೊಂಡಿದ್ದರು. ವ್ಯವಹಾರದಲ್ಲಿ ದೇವರಾಜು ಸಂದೀಪ್ ಗೆ ಹಣ ಕೊಡಬೇಕಿತ್ತಂತೆ. ಹೀಗಾಗಿ ತನ್ನ ಹಣ ತನಗೆ ಕೊಡು ಅಂತ ಸಂದೀಪ್ ಹಲವು ಬಾರಿ ಕೇಳಿದ್ದನು. ನನ್ನ ಬಳಿ ಹಣ ಇಲ್ಲ ಏನ್ ಮಾಡಿಕೊಳ್ಳತ್ತಿಯೋ ಮಾಡಿಕೋ ಎಂದು ದೇವರಾಜುಅವಾಜ್ ಹಾಕಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

    ದೇವರಾಜು ಮಾತುಗಳಿಂದ ಕೋಪಗೊಂಡ ಸಂದೀಪ್ ಮೊದಲೇ ಎಲ್ಲ ಪ್ಲಾನ್ ಮಾಡಿಕೊಂಡು ಇಂದು ಅಂಗಡಿಗೆ ಬಂದಿದ್ದಾನೆ. ಈ ವೇಳೆ ಸಂದೀಪ್ ಮತ್ತೆ ಹಣ ನೀಡುವಂತೆ ಕೇಳಿದ್ದಾನೆ. ದೇವರಾಜು ನನ್ನ ಬಳಿ ಹಣ ಇಲ್ಲ ಹೇಳಿದಾಗ ಕೋಪಗೊಂಡ ಸಂದೀಪ್ ತಂದಿದ್ದ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾನೆ. ದೇವರಾಜು ಚೀರಾಟ ಕೇಳಿ ಪಕ್ಕದ ಅಂಗಡಿ ಮಾಲೀಕ ರಕ್ಷಣೆಗೆ ಮುಂದಾಗಿದ್ದಾರೆ. ಸಂದೀಪ್ ಆತನಿಗೆ ಬೆದರಿಸಿ ದೇವರಾಜು ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

    ಆರೋಪಿ ಸಿಕ್ಕಿದ್ದು ಹೇಗೆ?
    ಚಾಕುವಿನಿಂದ ಇರಿದು ಕೊಲೆ ಮಾಡಿಬಿಟ್ಟಿದ್ದೀನಿ ಅಂತ ತನ್ನ ಅಪಾಚಿ ಬೈಕ್ ನಲ್ಲಿ ಎಸ್ಕೇಪ್ ಆಗುತ್ತಿದ್ದ ಸಂದೀಪ್ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾನೆ. ವಿಚಿತ್ರ ಅಂದ್ರೆ ಘಟನಾ ಸ್ಥಳದಿಂದ ಹಳೆಯ ಎಸ್ ಪಿ ಕಚೇರಿ ವೃತ್ತದ ಮೂಲಕ ಎಂ ಜಿ ರಸ್ತೆ ಕಡೆ ಸಂದೀಪ್ ಹೊರಟಿದ್ದನು. ಇದೇ ಮಾರ್ಗದಲ್ಲಿ ಟ್ರಾಫಿಕ್ ಎಎಸ್ ಐ ಹೆಲ್ಮೆಟ್ ಇಲ್ಲದ ಬೈಕ್ ಸವಾರರಿಗೆ ದಂಡ ವಿಧಿಸುತ್ತಿದ್ದರು. ಹೆಲ್ಮೆಟ್ ಇಲ್ಲದೇ ಬಂದ ಸಂದೀಪ್ ನನ್ನು ಪೊಲೀಸರು ದಂಡ ಹಾಕಲು ನಿಲ್ಲಿಸಿದ್ದಾರೆ.

    ಈ ವೇಳೆ ಭಯಗೊಂಡಿದ್ದ ಸಂದೀಪ್, ತಾನು ಕೊಲೆ ಮಾಡಿ ಬಂದಿದ್ದೇನೆ ಎಂದು ಚಾಕು ತೋರಿಸಿದ್ದಾನೆ. ಆದ್ರೆ ನಾನು ತಪ್ಪಿಸಿಕೊಂಡು ಹೋಗುತ್ತಿರಲಿಲ್ಲ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಶರಣಾಗಲು ಹೊರಟ್ಟಿದ್ದೇನೆ ಎಂದು ತಿಳಿಸಿದ್ದಾನೆ. ಆರೋಪಿಯ ಮಾತು ಕೇಳಿ ಒಂದು ಕ್ಷಣ ಶಾಕ್ ಗೆ ಒಳಗಾದ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ದೇವರಾಜು ಹೊಟ್ಟೆ, ಕೈ, ಕುತ್ತಿಗೆ ಸೇರಿದಂತೆ ಐದಾರು ಕಡೆ ತೀವ್ರ ಇರಿತಗಳಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಂದೀಪ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬೆಂಗಳೂರು: ಹೆಲ್ಮೆಟ್ ಇಲ್ಲದೆ ಬರೋರಿಗೆ ಉಚಿತ ಹೆಲ್ಮೆಟ್ ವಿತರಿಸಿದ ಟ್ರಾಫಿಕ್ ಪೊಲೀಸರು

    ಬೆಂಗಳೂರು: ಹೆಲ್ಮೆಟ್ ಇಲ್ಲದೆ ಬರೋರಿಗೆ ಉಚಿತ ಹೆಲ್ಮೆಟ್ ವಿತರಿಸಿದ ಟ್ರಾಫಿಕ್ ಪೊಲೀಸರು

    ಬೆಂಗಳೂರು: ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಬರುವವರಿಗೆ ಟ್ರಾಫಿಕ್ ಪೊಲೀಸರು ಇಂದು ಉಚಿತ ಹೆಲ್ಮೆಟ್ ವಿತರಣೆ ಮಾಡಿದ್ದಾರೆ.

    ಹೌದು. ಇಂದು ಕನ್ನಿಂಗ್ ಹ್ಯಾಮ್ ರೋಡ್‍ನಲ್ಲಿ ಓಡಾಡೋ ದ್ವಿಚಕ್ರ ವಾಹನ ಸವಾರರಿಗೆ ಒಂದು ಆಶ್ಚರ್ಯ ಕಾದಿತ್ತು. ಸಾಮಾನ್ಯವಾಗಿ ಹೆಲ್ಮೆಟ್ ಧರಿಸದೇ ಹೋಗುತ್ತಿದ್ದ ವಾಹನ ಸವಾರರನ್ನು ಹಿಡಿದು ದಂಡ ಹಾಕುತ್ತಿದ್ದ ಪೊಲೀಸರು ಇಂದು ದಂಡವಿಲ್ಲದೆ ಹೊಸ ಹೆಲ್ಮೆಟ್ ಕೊಟ್ಟು ಕಳಿಸುತ್ತಿದ್ರು.

    ಇಷ್ಟು ಒಳ್ಳೆ ಬುದ್ಧಿ ಪೊಲೀಸರಿಗೆ ಹೇಗಪ್ಪ ಬಂತು ಅಂತಾ ನೀವು ಯೋಚನೆ ಮಾಡಿದ್ರೆ ಅದ್ಕೆ ಕಾರಣವೂ ಇದೆ. ಸೋಮವಾರ ವಿಶ್ವ ಹೆಡ್ ಇಂಜ್ಯುರಿ ಡೇ. ಇದರ ಅಂಗವಾಗಿ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಸಹಯೋಗದೊಂದಿಗೆ ಫೋರ್ಟಿಸ್ ಆಸ್ಪತ್ರೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೋಂಡಿತ್ತು.

    ಹೀಗಾಗಿ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದ ವಾಹನ ಸವಾರರನ್ನು ಹಿಡಿದು ಪೋಲೀಸರು ಅವರಿಗೆ ಬುದ್ಧಿವಾದ ಹೇಳಿ, ಇಂದು ಮಾತ್ರ ನಿಮಗೆ ಹೆಲ್ಮೆಟ್ ಕೋಡುತ್ತಿದ್ದೇವೆ. ನಾಳೆ ಏನಾದ್ರೂ ಹೆಲ್ಮೆಟ್ ಇಲ್ಲದೇ ಬಂದ್ರೆ ಡಬಲ್ ದಂಡ ಹಾಕುತ್ತೇವೆ ಅಂತ ಎಚ್ಚರಿಸಿ ಕಳಿಸಿದ್ರು. ಕೆಲವರು ತಪ್ಪಾಯ್ತು ಅಂದ್ರೆ ಇನ್ನು ಕೆಲವರು ನಾಳೆಯಿಂದ ಮಿಸ್ ಮಾಡದೇ ಹೆಲ್ಮೆಟ್ ಹಾಕಿಕೊಳ್ಳುತ್ತೇವೆ ಅಂತ ಹೇಳಿದ್ರು.