Tag: helmate

  • ಹೆಲ್ಮೆಟ್ ಧರಿಸಿ ಆಸ್ಪತ್ರೆಯಲ್ಲಿ ಕಳ್ಳನ ಕರಾಮತ್ತು- ಮಹಿಳಾ ಸಿಬ್ಬಂದಿಯಿರುವಾಗ್ಲೇ 4,500 ರೂ.ನೊಂದಿಗೆ ಎಸ್ಕೇಪ್

    ಹೆಲ್ಮೆಟ್ ಧರಿಸಿ ಆಸ್ಪತ್ರೆಯಲ್ಲಿ ಕಳ್ಳನ ಕರಾಮತ್ತು- ಮಹಿಳಾ ಸಿಬ್ಬಂದಿಯಿರುವಾಗ್ಲೇ 4,500 ರೂ.ನೊಂದಿಗೆ ಎಸ್ಕೇಪ್

    ಉಡುಪಿ: ಹೆಲ್ಮೆಟ್ ಧರಿಸಿ ಆಗಂತುಕನ ಸ್ಟೈಲ್ ನಲ್ಲಿ ಬಂದ ಐನಾತಿ ಕಳ್ಳನೊಬ್ಬ ಕರಾಮತ್ತು ತೋರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಉಡುಪಿಯ ಕುಂದಾಪುರದ ವಿನಾಯಕ ಖಾಸಗಿ ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿ ಸೀದಾ ಬಿಲ್ ಕೌಂಟರ್ ಬಳಿ ಬಂದಿದ್ದಾನೆ. ಇವನ್ಯಾರೋ ಆಗಂತುಕ ಅಂತ ಆಸ್ಪತ್ರೆ ಮಹಿಳಾ ಸಿಬ್ಬಂದಿ ಓಡಿ ಹೋಗಿದ್ದಾರೆ. ಹೆಲ್ಮೆಟ್ ಧರಿಸಿ ಟೇಬಲ್ ಹಾರಿ ಬಂದ ಕಳ್ಳ ನಗದು ದೋಚಿ ಪರಾರಿಯಾಗಿದ್ದಾನೆ. ಈ ಮೂಲಕ ಖದೀಮ ಕಳ್ಳ ಕೆಲವೇ ಸೆಂಕೆಂಡುಗಳಲ್ಲಿ ಕೈಚಳಕ ತೋರಿದ್ದಾನೆ.

    ಕೌಂಟರ್ ನಲ್ಲಿದ್ದ 4,500 ರೂಪಾಯಿ ಕದ್ದ ಕಳ್ಳ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕಳ್ಳನ ಕೈಚಳಕ ನೋಡಿ ಬೊಬ್ಬೆ ಹೊಡೆಯಲು ಯತ್ನಿಸಿದಾಗ ನಾಲ್ಕೈದು ನರ್ಸ್ ಗಳು ಬಂದಿದ್ದಾರೆ. ಅಷ್ಟರಲ್ಲಿ ಕಳ್ಳ ಓಡಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಮಹಿಳಾ ಸಿಬ್ಬಂದಿ ಇರುವಾಗಲೇ ಸಮಯ ಹೊಂಚು ಹಾಕಿ ಆಸ್ಪತ್ರೆಗೆ ನುಗ್ಗಿ ಕಳ್ಳ ದರೋಡೆ ಮಾಡಿದ್ದಾನೆ.

    ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ರಸ್ತೆಯಲ್ಲಿರುವ ಸಿಸಿಟಿವಿ ಜಾಲಾಡುತ್ತಿದ್ದಾರೆ.

    https://www.youtube.com/watch?v=YeZV1Qf5Q2E&feature=youtu.be

  • ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

    ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

    ಚೆನ್ನೈ: ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಬಸ್ ಚಾಲಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಬಸ್ ಕೊಯಮತ್ತೂರಿನಿಂದ ಈರೋಡ್ ಕಡೆ ಸಂಚರಿಸುತ್ತಿತ್ತು. ಈ ಬಸ್ ನಲ್ಲಿ ಇದೇ ಮೊದಲ ಬಾರಿಗೆ ಬಸ್ ಚಾಲಕ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೂ ಐಎಸ್‍ಐ ಹೆಲ್ಮೆಟ್ ಕಡ್ಡಾಯ- ಮೈಸೂರು ಪೊಲೀಸ್ ಆಯುಕ್ತರಿಂದ ಸುತ್ತೋಲೆ

    ಹೆಲ್ಮೆಟ್ ಧರಿಸಲು ಕಾರಣವೇನು?
    ತಮಿಳುನಾಡು ಸಾರಿಗೆ ಇಲಾಖೆಯ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆ ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದಾಗಿ ಕೊಯಮತ್ತೂರು ಪ್ರಯಾಣಿಕರು ಬಸ್ ಗಾಗಿ ಕಾದು ಸುಸ್ತಾಗಿದ್ದರು. ಕೊನೆಗೊಂದು ಬಸ್ ಬಂತು. ಆ ಬಸ್ ನಲ್ಲಿ ಜನವಿಲ್ಲದ ಕಾರಣ ಪ್ರಯಾಣಿಕರು ಬೇಗ ಬೇಗ ಹತ್ತಿ ಸೀಟ್ ನಲ್ಲಿ ಕುಳಿತುಕೊಂಡ್ರು. ಇದನ್ನೂ ಓದಿ: ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಈ ವೇಳೆ ಬಸ್ ಚಾಲಕ ಹೆಲ್ಮೆಟ್ ಹಾಕಿರುವುದು ಕೆಲ ಮಂದಿಯ ಗಮನಕ್ಕೆ ಬಂದಿದೆ. ಕೂಡಲೇ ಅದರಲ್ಲೊಬ್ಬ ಪ್ರಯಾಣಿಕ ಚಾಲಕನ ಹತ್ತಿರ ಹೋಗಿ ಯಾಕೆ ಹೆಲ್ಮೆಟ್ ಧರಿಸಿದ್ದೀರಿ ಎಂದು ಕೇಳಿದ್ದಾನೆ. ಈ ವೇಳೆ ಚಾಲಕ ಸಾರಿಗೆ ನೌಕರರು ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಮಾತ್ರ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾನು ಅವರಿಗೆ ಟಾರ್ಗೆಟ್ ಆಗಬಾರದೆಂದು, ನನ್ನ ರಕ್ಷಣೆಗೋಸ್ಕರ ನಾನು ಹೆಲ್ಮೆಟ್ ಹಾಕ್ಕೊಂಡು ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿದ್ದಾರೆ. ಚಾಲಕನ ಒಳ್ಳೆಯತನದ ಗುಣಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

     

    https://youtu.be/5-2to324ssU

  • ಈ ವರ್ಷ ಇಲ್ಲಿಯವರೆಗೆ 1 ಕೋಟಿ ಕೇಸ್ ದಾಖಲಿಸಿದ ಟ್ರಾಫಿಕ್ ಪೊಲೀಸ್

    ಈ ವರ್ಷ ಇಲ್ಲಿಯವರೆಗೆ 1 ಕೋಟಿ ಕೇಸ್ ದಾಖಲಿಸಿದ ಟ್ರಾಫಿಕ್ ಪೊಲೀಸ್

    ಬೆಂಗಳೂರು: ನಗರದ ಟ್ರಾಫಿಕ್ ಪೊಲೀಸರಿಂದ ಈ ವರ್ಷ ದಾಖಲೆ ಪ್ರಮಾಣದ ಕೇಸ್ ದಾಖಲಾಗಿದೆ.

    ನಗರ ಸಂಚಾರಿ ಪೊಲೀಸರು ಈ ವರ್ಷ ಇಲ್ಲಿಯವರೆಗೆ 1 ಕೋಟಿ ಕೇಸ್ ದಾಖಲು ಮಾಡಿದ್ದಾರೆ. ಸೆಪ್ಟಂಬರ್ ತಿಂಗಳ ಅಂತ್ಯದ ವೇಳೆಗೆ 80,93,719 ಪ್ರಕರಣಗಳು ದಾಖಲಾಗಿದ್ದವು. 21 ಸಂಚಾರಿ ನಿಯಮ ಉಲ್ಲಂಘನೆ ಕೇಸುಗಳು ನಗರದಲ್ಲಿ ಪ್ರತಿ ನಿಮಿಷಕ್ಕೆ ದಾಖಲಾಗುತ್ತಿವೆ. ದಶಕಗಳಲ್ಲೇ ಅತ್ಯಧಿಕ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಈ ವರ್ಷ ದಾಖಲಾಗಿವೆ.

    1 ಕೋಟಿ ಕೇಸ್ ಗಳಲ್ಲಿ ನೋ ಪಾರ್ಕಿಂಗ್ ಕೇಸ್ ಗಳೇ ಹೆಚ್ಚಿವೆ. 2015 ರಲ್ಲಿ 76,26,671 ಕೇಸ್ ದಾಖಲಾಗಿತ್ತು. 2016 ರಲ್ಲಿ ಸಂಚಾರಿ ಪೊಲೀಸರು 1,80,438 ಕೇಸು ದಾಖಲಿಸಿದ್ದರು. ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ, ನೋ ಪಾರ್ಕಿಂಗ್ ಕೇಸ್ ಗಳೇ ಹೆಚ್ಚಾಗಿದ್ದು, ಈ ವರ್ಷ 1.08 ಕೋಟಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನ ಪೊಲೀಸರು ದಾಖಲಿಸಿದ್ದಾರೆ.