Tag: Helicopter Fish

  • ಮಲ್ಪೆ ಬಂದರಿನಲ್ಲಿ ಸಿಕ್ತು ಹೆಲಿಕಾಪ್ಟರ್ ಫಿಶ್- ಭಾರೀ ಗಾತ್ರದ ಮೀನು ನೋಡಿ ಜನ ಶಾಕ್

    ಮಲ್ಪೆ ಬಂದರಿನಲ್ಲಿ ಸಿಕ್ತು ಹೆಲಿಕಾಪ್ಟರ್ ಫಿಶ್- ಭಾರೀ ಗಾತ್ರದ ಮೀನು ನೋಡಿ ಜನ ಶಾಕ್

    ಉಡುಪಿ: ಅರಬ್ಬೀ ಸಮುದ್ರದಿಂದ ಭಾರೀ ಗಾತ್ರದ ಹೆಲಿಕಾಪ್ಟರ್ ಫಿಶ್‍ನನ್ನು ಬಲೆಹಾಕಿ ಹಿಡಿಯಲಾಗಿದೆ. ಮಲ್ಪೆ ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಅಪರೂಪದ ಮೀನೊಂದು ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹೆಲಿಕಾಪ್ಟರ್ ಮೀನಿನ ಗಾತ್ರ ಆಕಾರ ನೋಡಿದರೆ ಆಶ್ಚರ್ಯಗೊಳ್ಳುತ್ತಾರೆ.

    Helicopter fish

    ಉಡುಪಿಯ ಮಲ್ಪೆ ಬಂದರಿನಲ್ಲಿ ಭಾರೀ ಗಾತ್ರ ಉದ್ದ ಬಾಲ, ಅಕ್ಕಪಕ್ಕ ಬೆನ್ನ ಮೇಲೆ ಅಗಲಗಲ ರೆಕ್ಕೆಯಿರುವ ಬಲು ಅಪರೂಪದ ಮೀನು ಸಿಕ್ಕಿದೆ. ಉಡುಪಿಯಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನಲ್ಲಿ ಬಲೆ ಬೀಸಲಾಗಿತ್ತು. ಬಂಗುಡೆ, ಅಂಜಲ್ ಮೀನಿನ ಜೊತೆಗೆ ಭಾರೀ ಗಾತ್ರದ ಈ ಮೀನು ಬಿದ್ದಿದೆ. ಇದನ್ನೂ ಓದಿ:  ಅತ್ಯಾಚಾರಕ್ಕೆ ನಿರಾಕರಿಸಿದ ಗೃಹಿಣಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ

    Helicopter fish

    ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಎಂಬ ಹೆಸರಿದೆ. ಹೆಲಿಕಾಪ್ಟರ್ ಫಿಶ್ ಅಂತ ಅಡ್ಡ ಹೆಸರಿದೆ. ಭಾರೀ ಗಾತ್ರದ ಮೀನು 84 ಕಿಲೋ ತೂಗುತ್ತಿತ್ತು. ಕರ್ನಾಟಕದ ಮಂದಿಗೆ ಹೆಲಿಕಾಪ್ಟರ್ ಫಿಶ್ ನ ಮಾಂಸ ಇಷ್ಟ ಇಲ್ಲ. ಇಲ್ಲಿನವರಿಗೆ ಅದರ ರುಚಿ ಹಿಡಿಸುವುದಿಲ್ಲ. ಕೇರಳಿಗರು ಕೆಜಿಗೆ ಐವತ್ತು ರೂಪಾಯಿ ಕೊಟ್ಟು ನೆಮ್ಮೀನ್ ನ ಮಾಂಸವನ್ನು ಖರೀದಿ ಮಾಡುತ್ತಾರೆ. ಮಲ್ಪೆಯಿಂದ ಮಂಗಳೂರು ಮೂಲಕ ಕೇರಳಕ್ಕೆ ನೆಮ್ಮಿನನ್ನು ರವಾನೆ ಮಾಡಲಾಯಿತು. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‍ನವರು ದೇಶ ಭಕ್ತರಾ?: ರಾಮಲಿಂಗಾರೆಡ್ಡಿ

    Helicopter fish

    ಬೋಟ್ ಮಾಲೀಕ ಲುಕ್ಮನ್ ಈ ಕುರಿತಂತೆ ಮಾತನಾಡಿ, ಆಳ ಸಮುದ್ರದಲ್ಲಿ ವಿಭಿನ್ನ ಜಾತಿಯ ಮೀನುಗಳು ಬಲೆಗೆ ಬೀಳುತ್ತವೆ ಮನುಷ್ಯರು ಬಳಸುವ ಮೀನುಗಳನ್ನು ನಾವು ತೆಗೆದುಕೊಂಡು ದಡಕ್ಕೆ ಬರುತ್ತೇವೆ. ತಿನ್ನದ ಜಾತಿಯ ಅದೆಷ್ಟೋ ಮೀನುಗಳನ್ನು ಸಮುದ್ರಕ್ಕೆ ಎಸೆದು ಬರುತ್ತೇವೆ. ಹೆಲಿಕಾಪ್ಟರ್ ಫಿಶ್ ಮಾಂಸದ ರುಚಿ ಉಡುಪಿ-ಮಂಗಳೂರು ಮತ್ತು ಕರ್ನಾಟಕದ ಜನಕ್ಕೆ ಇಲ್ಲ. ಕೇರಳದ ಜನ ಇದನ್ನು ಮಾಂಸ ಮಾಡಿ ಬೇರೆ, ಬೇರೆ ಖಾದ್ಯಗಳಿಗಾಗಿ ಬಳಸುತ್ತಾರೆ ಎಂದರು. ಇದನ್ನೂ ಓದಿ: ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ- ಯುವಕ ಸಾವು

    ಮತ್ತೊಬ್ಬರು, ಇದು ನೆಮ್ಮೀನ್ ಮೀನಾಗಿದ್ದು. ಸಣ್ಣ ಗಾತ್ರದಲ್ಲಿ ಸಿಕ್ಕರೆ ಈ ಮೀನನ್ನು ಇಲ್ಲಿ ಸಾರು, ಗಸಿ ಮಾಡಲು ಉಪಯೋಗಿಸುತ್ತೇವೆ. ಬಲಿತ ಮೀನುಗಳನ್ನು ಜನ ಖರೀದಿ ಮಾಡುವುದಿಲ್ಲ. ಕೇರಳಕ್ಕೆ ಹೋಗುವ ಮೀನಿನ ವಾಹನಗಳಲ್ಲಿ ಇದನ್ನು ತುಂಬಿ ಕಳುಹಿಸಲಾಗುತ್ತದೆ. ಕಾಸರಗೋಡು – ಮಲಬಾರ್ ಕಡಲತೀರದ ಡಾಬಾಗಳಲ್ಲಿ ಹೋಟೆಲ್‍ಗಳಲ್ಲಿ ಇದನ್ನು ಬಿರಿಯಾನಿ, ತವಾ ಫ್ರೈ ಮಾಡುತ್ತಾರೆ ಎಂದರು. ಸುಮಾರು ನೂರು ಕಿಲೋ ತೂಗುವ ಮೀನುಗಳು ಕೆಲವೊಮ್ಮೆ ಮಲ್ಪೆ, ಬೈಂದೂರು ಮೀನುಗಾರರ ಬಲೆಗೆ ಸಿಲುಕುತ್ತವೆ ಎಂದು ಹೇಳಿದರು.