Tag: helath

  • ಹೋಟೆಲ್‍ನಲ್ಲಿ ಸಿಗುವ ಇಡ್ಲಿ ಸಾಂಬಾರ್ ಮಾಡುವುದು ಹೇಗೆ ಗೊತ್ತಾ?

    ಹೋಟೆಲ್‍ನಲ್ಲಿ ಸಿಗುವ ಇಡ್ಲಿ ಸಾಂಬಾರ್ ಮಾಡುವುದು ಹೇಗೆ ಗೊತ್ತಾ?

    ನಾವು ಹೋಟೆಲ್‍ನಲ್ಲಿ ಮಾಡುವ ಅಡುಗೆಗಳನ್ನು ಮನೆಯಲ್ಲಿ ಮಾಡಿ ಸವಿಯಬೇಕು ಎಂದು ಟ್ರೈ ಮಾಡುತ್ತಿರುತ್ತೇವೆ. ಇಡ್ಲಿ ಜೊತೆಗೆ ಕೊಡುವ ಸಾಂಬಾರ್‌ ಎಂದರೆ ಹಲವರಿಗೆ ಇಷ್ಟ.   ಸಾಂಬಾರ್ ಜೊತೆ ಇಡ್ಲಿ  ತಿನ್ನಲು ತುಂಬಾ ರುಚಿಯಾಗಿರುತ್ತದೆ. ಕೇವಲ 15 ನಿಮಿಷಗಳಲ್ಲಿ ಈ ಇಡ್ಲಿ, ಸಾಂಬಾರ್ ಮಾಡಲು ಟ್ರೈ ಮಾಡಬಹುದಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಹಸಿರು ಮೆಣಸಿನಕಾಯಿ – 4
    * ಟೊಮ್ಯಾಟೋ – 3
    * ಸಾಸಿವೆ – 1ಚಮಚ
    * ಕೊತ್ತಂಬರಿ- ಸ್ವಲ್ಪ
    * ಒಣ ಮೆಣಸಿನಕಾಯಿ- 2
    * ಕರಿಬೇವು- ಸ್ವಲ್ಪ
    * ಜೀರಿಗೆ – 1 ಚಮಚ
    * ಮೆಂತ್ಯ – ಅರ್ಧ ಚಮಚ
    * ಈರುಳ್ಳಿ – 2
    * ಹುಣಸೆ ಹಣ್ಣು- ಸ್ವಲ್ಪ
    * ತರಕಾರಿಗಳು -ನಿಮ್ಮ ಆಯ್ಕೆ
    * ಅರಿಶಿಣ ಪುಡಿ – ಸ್ವಲ್ಪ
    * ಮೆಣಸಿನ ಪುಡಿ – 1 ಚಮಚ
    * ಅಡುಗೆ ಎಣ್ಣೆ – 1 ಚಮಚ
    * ಸಾಂಬಾರ್ ಪುಡಿ – 2 ಚಮಚ
    * ತೊಗರಿ ಬೇಳೆ – 1 ಚಮಚ


    ಮಾಡುವ ವಿಧಾನ:
    * ಮೊದಲು ಕುಕ್ಕರ್‍ಗೆ ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಮೆಂತ್ಯ, . ಈರುಳ್ಳಿ, ಹಸಿರು ಮೆಣಸಿನಕಾಯಿ, ಕತ್ತರಿಸಿದ ಟೊಮ್ಯಾಟೋ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಬೇಯಿಸಲು ಬಿಡಿ.

    * ಟೊಮ್ಯಾಟೋ ಮೃದುವಾದ ನಂತರ, ನಿಮ್ಮ ಆಯ್ಕೆಯ ತರಕಾರಿಗಳನ್ನು ಸೇರಿಸಿ. ತರಕಾರಿಗಳು ಅರ್ಧ ಬೆಂದ ನಂತರದಲ್ಲಿ ಮೆಣಸಿನ ಪುಡಿ, ಅರಿಶಿಣ ಪುಡಿ, ಸಾಂಬಾರ್ ಪುಡಿ ಸೇರಿಸಿ ಮಿಶ್ರಣ ಮಾಡಿ ಬೇಯಿಸಿ ಸ್ವಲ್ಪ ಸಮಯ ಬೇಯಲು ಬಿಟ್ಟಿರಬೇಕು. ಇದನ್ನೂ ಓದಿ:  ಹುಣಸೆ ಹಣ್ಣಿನ ರಸಂ ಮಾಡುವ ವಿಧಾನ ನಿಮಗಾಗಿ

    * ತೊಗರಿ ಬೇಳೆ ಸೇರಿಸಿ. ನೀರು, ಹುಣಸೆ ಹಣ್ಣಿನ ಹುಳಿ ಸೇರಿಸಿ 4 ಸೀಟಿ ಬರುವವರೆಗೆ ಬೇಯಿಸಿ.
    * ತಣ್ಣಗಾದ ನಂತರ ಬೆಳೆಯನ್ನು ತರಕಾರಿಗಳಿಗೆ ಹಾಕಿ ಸ್ವಲ್ಪ ಸ್ಮಾಷ್ ಮಾಡಿ ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ಕೊತ್ತಂಬರಿ ಸೊಪ್ಪು, ಅಡುಗೆ ಎಣ್ಣೆ, ಸಾಸಿವೆ, ಕರಿಬೇವು, ಒಣ ಮೆಣಸಿನ ಕಾಯಿಯ ಒಗ್ಗರಣೆ ಹಾಕಿದರೆ ಸಾಂಬಾರ್ ಸಿದ್ಧವಾಗುತ್ತದೆ. ಇದನ್ನೂ ಓದಿ:  ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾ

  • ಕಡಲೆ ಹಿಟ್ಟಿನಿಂದ ಬಜ್ಜಿ ಮಾತ್ರವಲ್ಲ, ರುಚಿಯಾದ ಲಾಡು ಮಾಡಿ!

    ಕಡಲೆ ಹಿಟ್ಟಿನಿಂದ ಬಜ್ಜಿ ಮಾತ್ರವಲ್ಲ, ರುಚಿಯಾದ ಲಾಡು ಮಾಡಿ!

    ಡಲೆ ಹಿಟ್ಟಿನಿಂದ ಬಜ್ಜಿಯನ್ನು ತಯಾರಿಸಿ ಗೊತ್ತಿದೆ. ಆದರೆ ಕಡಲೆ ಹಿಟ್ಟಿನಿಂದ ಸಿಹಿಯಾದ ತಿಂಡಿಯನ್ನು ತಯಾರಿಸಬಹುದು. ಯಾವುದೇ ವಿಶೇಷ ದಿನ ಅಥವಾ ಹಬ್ಬದ ಸಂದರ್ಭದಲ್ಲಿ ರುಚಿಯಾಗಿ ಏನಾದರೂ ತಿನ್ನಬೇಕು. ಸಿಹಿಯಾಗಿ ಏನಾದರೂ ಮಾಡಿ ತಿಂದರೆ ಚೆನ್ನಾಗಿರುತ್ತದೆ ಅನ್ನಿಸುತ್ತಿರುತ್ತದೆ. ಹೀಗಾಗಿ ನೀವು ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಲಾಡು ಮಾಡಿ, ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಹಿಟ್ಟು- 3 ಕಪ್
    * ಎಳ್ಳು – 4-5 ಚಮಚ
    * ತೆಂಗಿನ ತುರಿ -1 ಕಪ್
    * ಬೆಲ್ಲ-2 ಕಪ್
    * ತುಪ್ಪ- ಅರ್ಧ ಕಪ್
    * ಗೋಡಂಬಿ- ಸ್ವಲ್ಪ ಇದನ್ನೂ ಓದಿ:  ಬಿಸ್ಕೆಟ್ ನಿಂದ ತಯಾರಿಸಿ ಸಿಹಿಯಾದ ಬರ್ಫಿ

    ಮಾಡುವ ವಿಧಾನ:
    *  ಪಾತ್ರೆಗೆ ಕಡಲೆ ಹಿಟ್ಟನ್ನು ಹಾಕಿ, ಅದಕ್ಕೆ ಸ್ವಲ್ಪ ನೀರು ಸೇರಿಸಿ ಕಲೆಸಿ, ಮಿಶ್ರಣ ತಯಾರಿಸಿಕೊಳ್ಳಬೇಕು.
    * ನಂತರ ತವಾಗೆ ತುಪ್ಪ ಹಾಕಿ ಬಿಸಿಯಾದಾಗ ಅದರಲ್ಲಿ ಕಡಲೆ ಹಿಟ್ಟು ಹಾಕಿ ಫ್ರೈ ಮಾಡಿ. ಬಳಿಕ ಇದೇ ರೀತಿ ಎಳ್ಳು ಮತ್ತು ತೆಂಗಿನ ತುರಿ ಹಾಕಿ ಫ್ರೈ ಮಾಡಿಕೊಳ್ಳಬೇಕು. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಉಳಿದ ತುಪ್ಪವನ್ನು ಪ್ಯಾನ್‍ಗೆ ಹಾಕಿ 2 ನಿಮಿಷ ಬಿಸಿ ಮಾಡಿ. ಬಳಿಕ ಅದಕ್ಕೆ ಸ್ವಲ್ಪ ಬೆಲ್ಲ ಹಾಕಿ ಬೆಲ್ಲ ಕರಗುವಷ್ಟು ಹೊತ್ತು ಬಿಸಿ ಮಾಡಿ. ಫ್ರೈ ಮಾಡಿಟ್ಟ ಹಿಟ್ಟು, ಎಳ್ಳು ಮತ್ತು ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ


    * ಕೈಗೆ ತುಪ್ಪ ಸವರಿಕೊಂಡು ಆ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿದರೆ ಲಾಡು ಸಿದ್ಧವಾಗುತ್ತದೆ. ಇದನ್ನೂ ಓದಿ: ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ

  • ಶವ ಸಂಸ್ಕಾರಕ್ಕೆ ಜಾಗ ಸಿಗದೆ ಊರಿಂದ ಊರಿಗೆ ಅಲೆದಾಡಿದ ಕುಟುಂಬಸ್ಥರು

    ಶವ ಸಂಸ್ಕಾರಕ್ಕೆ ಜಾಗ ಸಿಗದೆ ಊರಿಂದ ಊರಿಗೆ ಅಲೆದಾಡಿದ ಕುಟುಂಬಸ್ಥರು

    ರಾಂಚಿ: ಕೋವಿಡ್-19 ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವ ಸಂಸ್ಕಾರ ಮಾಡಲು ಸ್ಥಳೀಯರು ಜಾಗ ನೀಡಲು ನಿರಾಕರಿಸಿದ್ದರಿಂದ ಸಾವನ್ನಪ್ಪಿ 24 ಗಂಟೆ ಕಳೆದಿದ್ದರೂ ಶವ ಸಂಸ್ಕಾರಕ್ಕಾಗಿ ಕುಟುಂಬಸ್ಥರು ಶ್ರಳವನ್ನು ಹುಡುಕುತ್ತಿದ್ದ ಘಟನೆ ನಡೆದಿದೆ.

    ಇಕ್ಲಾಸಸ್ ಲಕ್ರ (65) ಮೃತರಾಗಿದ್ದಾರೆ. ಜಾಖರ್ಂಡ್ ರಾಜ್ಯದ ಗುಮ್ಲಾ ಜಿಲ್ಲೆಯ ಸಾದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶವ ಸಂಸ್ಕಾರ ಮಾಡಲು ಒಂದು ಊರಿನಿಂದ ಮತ್ತೊಂದು ಊರಿಗೆ ಅಲೆದಾಡಿದ್ದರೂ ಸ್ಥಳೀಯ ಗ್ರಾಮಸ್ಥರು ಕೂಡಾ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಆದ್ದರಿಂದ ಕೊನೆಗೆ ಬಿಷ್ಣುಪುರದ ವಿಭಾಗಧಿಕಾರಿ ಕಚೇರಿ ಬಳಿಗೆ ಶವವನ್ನು ತಂದಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಲಕ್ರಾ ಭಾನುವಾರ ಮಧ್ಯಾಹ್ನ 12ಕ್ಕೆ ಮೃತಪಟ್ಟಿದ್ದು, ಶವವನ್ನು ಮೊದಲಿಗೆ ಸಾಂಕ್ರಾಮಿಕದಿಂದ ಮೃತಪಟ್ಟ ಶವ ಸಂಸ್ಕಾರ ಮಾಡುವ ಸ್ಥಳವಾದ ಮುಂದರ್ ಡ್ಯಾಮ್ ಬಳಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಶವ ಹೂಳದಂತೆ ಗ್ರಾಮಸ್ಥರು ತಡೆ ನೀಡಿದ್ದಾರೆ.

    ನಂತರ ಹತ್ತಿರದಲ್ಲಿದ್ದ ಜೆಹಂಗುಟ್ವಾ ಹಳ್ಳಿಗೆ ಶವವನ್ನು ತೆಗೆದುಕೊಂಡು ಹೋಗಲಾಗಿದೆ. ಅಲ್ಲಿಯೂ ಕೂಡಾ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ತದನಂತರ ಬಹರಾಧಿಪ ಎಂಬ ಹಳ್ಳಿಗೆ ತೆಗೆದುಕೊಂಡು ಹೋದಾಗಲೂ ಅದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಕೊನೆಗೆ ಟ್ರಾಕ್ಟರ್‍ನಲ್ಲಿ ಶವವನ್ನು ತೆಗೆದುಕೊಂಡು ವಿಭಾಗಾಧಿಕಾರಿ ಕಚೇರಿ ಹೊರಗಡೆ ನಿಲ್ಲಿಸಲಾಗಿತ್ತು.

     ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತರಾದ ಸ್ಥಳೀಯ ಆಡಳಿತ ಚೇಡಾ ಹಳ್ಳಿಯಿಂದ ಎರಡು ಕಿಲೋ ಮೀಟರ್ ದೂರಕ್ಕೆ ಶವವನ್ನು ತೆಗೆದುಕೊಂಡು ಹೋದಾಗ ಅಲ್ಲಿಯೂ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಇದೀಗ ಲಕ್ರಾ ಹುಟ್ಟರೂ ಜೋರಿಗೆ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ.

    ಮೃತದೇಹ ಸಂಸ್ಕಾರ ಮಾಡಲು ಊರಿಂದ ಊರಿಗೆ ಅಲೆದಾಡುತ್ತಿದ್ದರೂ ಸ್ಥಳೀಯ ಆಡಳಿತ ಯಾವುದೇ ನೆರವು ನೀಡುತ್ತಿಲ್ಲ. ಆರೋಗ್ಯ ಇಲಾಖೆಯಿಂದ ಕೇವಲ ಪಿಪಿಇ ಕಿಟ್‍ಗಳನ್ನು ನೀಡಿದ್ದಾರೆ ಎಂದು ಲಕ್ರಾ ಕುಟುಂಬಸ್ಥರು ಆರೋಪಿಸಿದ್ದಾರೆ.

  • ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ- ಮುಂಜಾನೆ 6 ಗಂಟೆಗೆ ವೈದ್ಯಕೀಯ ತಪಾಸಣೆ

    ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ- ಮುಂಜಾನೆ 6 ಗಂಟೆಗೆ ವೈದ್ಯಕೀಯ ತಪಾಸಣೆ

    ಬೆಂಗಳೂರು: ಶತಾಯುಷಿ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದ್ದು, ಮಠದಲ್ಲಿ ಭಕ್ತರು ಸಂತಸಗೊಂಡಿದ್ದಾರೆ.

    ಬಿಜಿಎಸ್ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಮುಂಜಾನೆ 6 ಗಂಟೆಗೆ ನುರಿತ ವೈದ್ಯರಿಂದ ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. 7.30ರ ಲಿಂಗ ಪೂಜೆ ಬಳಿಕ ಬಿಜಿಎಸ್ ವೈದ್ಯರ ತಂಡ ಸಿಟಿ ಸ್ಕ್ಯಾನ್ ಮಾಡಲಿದ್ದಾರೆ. ಸಿಟಿ ಸ್ಕ್ಯಾನ್ ಬಳಿಕ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಲ್ಲಿ ಡಿಸ್ಚಾರ್ಜ್ ಸಾಧ್ಯತೆಗಳಿವೆ ಎಂಬುದಾಗಿ ತಿಳಿದುಬಂದಿದೆ.

    ಆಸ್ಪತ್ರೆಯಲ್ಲಿ ಶಿವಕುಮಾರ ಶ್ರೀಗಳ ಜೊತೆ ಮಠದ ಕಿರಿಯ ಶ್ರೀಗಳು ಇದ್ದಾರೆ. ಮಠದಲ್ಲಿ ನೂರಾರು ಭಕ್ತರು ಶ್ರೀಗಳು ಕುಳಿತುಕೊಳ್ಳುತ್ತಿದ್ದ ಹಳೇಮಠದ ಗದ್ದುಗೆಗೆ ನಮಸ್ಕರಿಸಿ ವಾಪಸ್ಸಾಗುತಿದ್ದಾರೆ. ಶ್ರೀಗಳು ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

    ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿ ಸ್ವಾಮೀಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಶುಕ್ರವಾರ ನಗರದ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ವಾಮೀಜಿ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಬಿಪಿಯಲ್ಲಿ ಬದಲಾವಣೆಯಾಗಿದೆ ಅಷ್ಟೇ. ಯಾರೂ ಹೆದರಬೇಡಿ. ಶ್ರೀಗಳ ಆರೋಗ್ಯ ಬೇಗ ಸುಧಾರಿಸುತ್ತದೆ ಎಂದು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ನಿನ್ನೆ ತಿಳಿಸಿದ್ದರು.

    ಶ್ರೀಗಳಿಗೆ ಗುರುವಾರ ರಾತ್ರಿ ಸುಮಾರು 1 ಗಂಟೆಗೆ ಜ್ವರ, ಬಿಪಿ, ಕಫ ಕಂಡುಬಂದಿತ್ತು. ಈಗಾಗಲೇ ರಕ್ತ ಪರೀಕ್ಷೆ, ಎಕ್ಸ್ ರೇ ಮಾಡಲಾಗಿದೆ. ಇದರಲ್ಲಿ ನಿಮೋನಿಯಾ ಕಂಡು ಬಂದಿದೆ. ರಕ್ತ ಪರೀಕ್ಷೆಯ ಮಾಡಿದ್ದೇವೆ. ರಿಪೋರ್ಟ್‍ನಲ್ಲಿ ಸ್ವಾಮೀಜಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಹೇಳಿದ್ದರು.