Tag: Hejjaru

  • ‘ಹೆಜ್ಜಾರು’ವಿನ ಬ್ರೇಕ್ ಅಪ್ ಸಾಂಗ್ ರಿಲೀಸ್ : ಏನೇ ಸಿಕ್ತು ಮಳ್ಳಿ ನಿಂಗೆ?

    ‘ಹೆಜ್ಜಾರು’ವಿನ ಬ್ರೇಕ್ ಅಪ್ ಸಾಂಗ್ ರಿಲೀಸ್ : ಏನೇ ಸಿಕ್ತು ಮಳ್ಳಿ ನಿಂಗೆ?

    ನ್ನಡದ ಮೊಟ್ಟ ಮೊದಲ ಪ್ಯಾರಲಲ್ ಸ್ಟೋರಿ ಮೂವಿ ಎಂಬ ಹೆಗ್ಗಳಿಕೆಯೊಂದಿಗೆ ತೆರೆಗೆ ಬರಲು ಸಿದ್ದವಾಗಿದೆ ಹೆಜ್ಜಾರು (Hejjaru) ಸಿನಿಮಾ. ಚಿತ್ರ ತಂಡ ಈಗ ತನ್ನ ಸಿನಿಮಾದ ಪ್ರಚಾರ ಕಾರ್ಯಗಳನ್ನು ಚುರುಕುಗೊಳಿಸಿದೆ. ಅದರ ಮೊದಲ ಹಂತವಾಗಿ ಚಿತ್ರದ ಮೊದಲನೇ ಹಾಡನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡ ಕಡಿಮೆ ಸಮಯದಲ್ಲೇ ಅದು ಹಿಟ್ ಲಿಸ್ಟ್ ಸೇರಿರುವ ಸಂಭ್ರಮದಲ್ಲಿದೆ ಚಿತ್ರತಂಡ. ‘ನೀನೇ ಸಾಕಿದಾ ಗಿಣಿ’ ಹಾಡಿನಿಂದ (Song)  ‘ಹಂಗೋ ಹಿಂಗೋ ಇದ್ದೇ ನಾನು’ ಹಾಡಿನವರೆಗೂ ಹಿಟ್ ಆಗಿರುವ ಲೆಜೆಂಡರಿ ಬ್ರೇಕಪ್ ಹಾಡುಗಳ ಸಾಲಿಗೆ ‘ಏನೇ ಸಿಕ್ತು ಮಳ್ಳಿ ನಿಂಗೆ?’ ಕೂಡ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದು ನಿರ್ದೇಶಕ ಹರ್ಷಪ್ರಿಯ (Harshapriya) ಅವರ ಅಭಿಪ್ರಾಯ.

    ಪೂರ್ಣಚಂದ್ರ ತೇಜಸ್ವಿ (Poorchandra Tejaswi) ಅವರು ಕಥೆಯ ಇನ್ಟೆನ್ಸಿಟಿ ಬೇಡುವ ವಿಶೇಷ ರೀತಿಯ ಹಾಡುಗಳನ್ನು ಕಂಪೋಸ್ ಮಾಡಿದ್ದು ಈ ಹಾಡಿಗಾಗಿ ತಾವು ಪಟ್ಟ ಪರಿಶ್ರಮ ಈಗ ಫಲ ಕೊಟ್ಟಿರುವುದಕ್ಕೆ  ಕೇಳುಗರಿಗೆ ಧನ್ಯವಾದ ತಿಳಿಸಿದ್ದಾರೆ, ಹಿಟ್ ಸಾಂಗ್ಗಳ ಸರದಾರ ವಿಜಯ್ ಪ್ರಕಾಶ್ (Vijay Prakash) ಅವರ ಧ್ವನಿ ಈ  ಹಾಡಿಗಿದೆ.  ಇನ್ನು ಕಿರುತೆರೆಯ ಪುಟ್ಟಗೌರಿ ಮದುವೆ, ಅಕ್ಕ, ಗೀತಾ, ನಾಗಿಣಿ 2. ರಾಣಿ, ರಾಮಾಚಾರಿ ಮೊದಲಾದ ಯಶಸ್ವೀ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿರುವ ಕೆ ಎಸ್ ರಾಮ್ ಜೀ ಈ ಚಿತ್ರವನ್ನು ನಿರ್ಮಿಸಿದ್ದಾರೆ.  ಭಜರಂಗಿ ಮೋಹನ್ ಕೊರಿಯಾಗ್ರಫಿಯಲ್ಲಿ ಮೂಡಿ ಬಂದಿರುವ ಹುಕ್ ಸ್ಟೆಪ್ಗಳು ಈಗಿನ್ ರೀಲ್ಸ್ ಪ್ರಿಯರಿಗೆ ಹಬ್ಬವಾಗಿವೆ.

    ಮೊದಲ ಬಾರಿ ಹಿರಿತೆರೆಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಭಗತ್ ಆಳ್ವಾ ತಮ್ಮ ಮೊದಲ ಚಿತ್ರದಲ್ಲೇ ಇಂತಹದ್ದೊಂದು ಮಾಸ್ ಸಾಂಗಿಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ ಖುಶಿಯಲ್ಲಿದ್ದು ಜನರ ಪ್ರತಿಕ್ರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.  ಖಾಸಗಿ ಪುಟಗಳು ಚಿತ್ರದಿಂದ ಪರಿಚಿತರಾಗಿರುವ ಲಿಯೋನಿಲ್ಲ ಶ್ವೇತಾ ಡಿಸೋಜಾ ಹೆಜ್ಜಾರು ಚಿತ್ರದ ನಾಯಕ ನಟಿಯಾಗಿದ್ದು , ವಿಶಿಷ್ಟ ಪಾತ್ರಕ್ಕೆ ಜೀವತುಂಬಿದ್ದಾರೆ. ಹತ್ತಾರು ಹಿಟ್ ಧಾರಾವಾಹಿಗಳು ಮತ್ತು ಸಿನೆಮಾಗಳ ಗೀತರಚನಕಾರರಾಗಿ ಜನಪ್ರಿಯರಾಗಿದ್ದ ಹರ್ಷಪ್ರಿಯ  ಅವರು ಹೆಜ್ಜಾರು ಚಿತ್ರದ ಮೂಲಕ ನಿರ್ದೇಶಕರಾಗಿದ್ದು, ಸಿನೆಮಾದ  ಎಲ್ಲ ಹಾಡುಗಳನ್ನೂ ಅವರೇ ಬರೆದಿದ್ದಾರೆ.

    ತಮ್ಮ ಗರಡಿಯಲ್ಲಿ ಪಳಗಿದ ಹರ್ಷಪ್ರಿಯ ಅವರ ಈ ಗೀತೆಯನ್ನು ಮೆಚ್ಚಿರುವ ಪ್ರೇಮಕವಿ ಕಲ್ಯಾಣ್ ತಮ್ಮ ಶಿಷ್ಯನ ಮೊದಲ ಚಿತ್ರಕ್ಕೆ ಶುಭಕೋರಿದ್ದಾರೆ. ಜೊತೆಗೆ ಕನ್ನಡದ ಹಿರಿಯ ನಿರ್ದೇಶಕರುಗಳಾದ ಪ್ರೇಮ್ ಮತ್ತು ಶಶಾಂಕ್ ರವರು ಹಾಡಿನ ಬಗ್ಗೆ ಮೆಚ್ಚುಗೆಯ ಮಾತಾಡಿದ್ದು, ಸಿನೆಮಾ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

    ಚಿತ್ರದ ಕಾನ್ಸೆಪ್ಟ್ ಹೊಸದಾಗಿದ್ದು, ಪೋಸ್ಟರ್, ಪ್ರೊಮೋಷನಲ್ ಪ್ರೋಮೋಗಳಲ್ಲೂ ಚಿತ್ರತಂಡ ಹೊಸ ಹೊಸ ರೀತಿಯ ಪ್ರಯೋಗ ಮಾಡುತ್ತಿದೆ. ಭರವಸೆಯ ಪೋಷಕ ನಟ  ಗೋಪಾಲ್ ದೇಶಪಾಂಡೆ ಪ್ರಮುಖ ಪಾತ್ರದಲ್ಲಿದ್ದಾರೆ.  ಮತ್ತು ನಾಯಕ, ನಿರ್ದೇಶಕ  ನವೀನ್ ಕ್ರಷ್ಣ ಮೊದಲ ಬಾರಿಗೆ ನೆಗಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣಾ ಬಾಲರಾಜ್ ಕೂಡ  ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಖಾಕಿ ತೊಟ್ಟು ಎಷ್ಟೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಹೆಜ್ಜಾರುವಿನ ಪಾತ್ರ ಹೊಸ ಬಗೆಯದು ಅಂತ ನಟ ಮುನಿ ಹೇಳಿಕೊಂಡಿದ್ದಾರೆ. ಕ್ಯಾಮೆರಾ ಹಿಂದೆಯೇ  ಬಿಸಿಯಾಗಿದ್ದ ವಿನೋದ್ ಭಾರತಿ ನಿರ್ದೇಶಕರ ಕೋರಿಕೆಗೆ ಒಪ್ಪಿ ಕ್ಯಾಮೆರಾ ಮುಂದೆ ಬಂದಿದ್ದು ಇವರೊಂದಿಗೆ ಬಹಳಷ್ಟು ರಂಗಭೂಮಿಯ ಹೊಸ ಕಲಾವಿದರನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.

     

    ಈಗಾಗಲೇ ಚಿತ್ರ ಫೂಟೇಜ್ ನೋಡಿರುವವರು ಅಮರ್ ಗೌಡ ಅವರ ಕ್ಯಾಮೆರಾ ಕೈಚಳಕವನ್ನು ಮೆಚ್ಚಿದ್ದು ಮಲೆನಾಡಿನ ಮಳೆಯನ್ನು ಅವರು ಸೆರೆ ಹಿಡಿದಿರುವ ರೀತಿ ನೋಡುಗರಿಗೆ ಖಂಡಿತಾ ಇಷ್ಟವಾಗುತ್ತದೆ ಎನ್ನುತ್ತಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಭಟ್ ಸಂಭಾಷಣೆ ಬರೆದಿದ್ದು ನರಸಿಂಹ ಸಾಹಸ ಸಂಯೋಚನೆ ಮಾಡಿದ್ದಾರೆ. ಗಿರೀಶ್ ಕನಕಪುರ ಚಿತ್ರದ ಎಕ್ಸಿಕ್ಯುಟಿವ್ ಪ್ರೊಡ್ಯೂಸ್ ಆಗುವುದರ ಜೊತೆಗೆ ಕಲಾ ವಿಭಾಗವನ್ನೂ ನಿಭಾಯಿಸಿದ್ದಾರೆ, ಅಜಿತ್ ಡ್ರಾಕುಲಾ ಸಂಕಲನ ಮಾಡಿದ್ದು.. ದಯಾನಂದ್ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೂಟಿಂಗ್ ಮುಗಿಸಿದ ಹೆಜ್ಜಾರು ಸಿನಿಮಾ ಟೀಮ್

    ಶೂಟಿಂಗ್ ಮುಗಿಸಿದ ಹೆಜ್ಜಾರು ಸಿನಿಮಾ ಟೀಮ್

    ರ್ನಾಟಕದ ಕಿರುತೆರೆ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿ ಕರುನಾಡಿನ ಜನ ಮನ ಗೆದ್ದಿರುವಂತಹ ‘ಗಗನ ಎಂಟರ್‌ಪ್ರೈಸಿಸ್‌’ ಮೊದಲ ಬಾರಿಗೆ ‘ಹೆಜ್ಜಾರು’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದೆ. ಇಲ್ಲಿಯವರೆಗೂ ಬರೋಬ್ಬರಿ ಹದಿಮೂರು ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಿಸಿರುವ ಕೆ.ಎಸ್‌. ರಾಮ್‌ಜಿಯವರ ಮೊದಲ ನಿರ್ಮಾಣದ ಹೆಜ್ಜಾರು (Hejjaru) ಸಿನಿಮಾದ ಕೊನೆಯ ದಿನದ ಚಿತ್ರೀಕರಣ  (Shooting)ಕುಂಬಳಕಾಯಿ ಒಡೆಯುವ ಮೂಲಕ ಅದ್ದೂರಿಯಾಗಿ ಮುಗಿಸಿದ್ದಾರೆ.

    ಕಿರುತೆರೆಯ ಧಾರವಾಹಿಯ ಹೆಸರಾಂತ ಬರಹಗಾರ ಮತ್ತು ಜೀ ಕನ್ನಡ ವಾಹಿನಿಯ ಫಿಕ್ಷನ್‌ ಹೆಡ್‌ ಆಗಿ ಕಾರ್ಯ ನಿರ್ವಹಿಸಿ ಯಶಸ್ಸುಗಳಿಸಿದ ಹರ್ಷಪ್ರಿಯ (Harshipriya) ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶನದ ಕ್ಯಾಪ್‌ ತೊಟ್ಟಿದ್ದಾರೆ. ಚಿತ್ರಕ್ಕೆ ಅಮರ್‌.ಎಲ್‌ ಛಾಯಾಗ್ರಹಣವಿದ್ದು ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ.  ಇದನ್ನೂ ಓದಿ:ಆ ಸಂಬಂಧ ಅರ್ಧಕ್ಕೆ ನಿಂತು ಹೋಯಿತು, ಆದ್ರೆ ನನಗೆ ಮದುವೆ ಬಗ್ಗೆ ನಂಬಿಕೆಯಿದೆ- ನಟಿ ವೈಷ್ಣವಿ

    ಸಾಹಸ ದೃಶ್ಯದ ಸನ್ನಿವೇಶವನ್ನು ನರಸಿಂಹ ನಿರ್ದೇಶಿಸಿದ್ದು, ಭಜರಂಗಿ ಖ್ಯಾತಿಯ ಮೋಹನ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್‌ ಭಟ್ ಸಂಭಾಷಣೆ ಇರುವ ಈ ಚಿತ್ರದ ಮೂಲಕ ಭಗತ್‌ ಆಳ್ವ (Bhagat Alva) ನಾಯಕ ನಟನಾಗಿ ಹಿರಿತೆರೆಗೆ ಪಾದಾರ್ಪಣಿ ಮಾಡುತ್ತಿದ್ದು ಇವರಿಗೆ ಖಾಸಗಿ ಪುಟಗಳು ಖ್ಯಾತಿಯ ಲಿಯೋನಿಲ್ಲಾ ಶ್ವೇತಾ ಡಿಸೋಜ (Leonilla Shweta D’Souza) ನಾಯಕಿಯಾಗಿ  ಕಾಣಿಸಿಕೊಂಡ್ಡಿದ್ದಾರೆ.

    ಬಹುತೇಕ ರಂಗಭೂಮಿ ಕಲಾವಿದರಿರುವ ತಾರಾಗಣದಲ್ಲಿ ಗೋಪಾಲ್‌ ದೇಶಪಾಂಡೆ, ನವೀನ್‌ ಕೃಷ್ಣ, ಮುನಿ, ಅರುಣ ಬಾಲರಾಜ್‌ ಹೀಗೆ ಪರಿಚಿತ ಕಲಾವಿದರು ಜೊತೆಯಾಗಿದ್ದಾರೆ. ಈಗಷ್ಟೆ ಚಿತ್ರಿಕರಣ ಮುಗಿಸಿ ಕುಂಬಳಕಾಯಿ ಹೊಡೆದಿರುವಂತಹ ಚಿತ್ರತಂಡ ಸದ್ಯದಲ್ಲೇ ಪ್ರಚಾರ ಕಾರ್ಯಕ್ರಮ ಆರಂಭಿಸುವ ಮಾಹಿತಿ ನೀಡಿದ್ದಾರೆ. ಚಿತ್ರದ ಕಥೆಯ ಕುರುತು ಯಾವುದೇ ಸುಳಿವು ಬಿಟ್ಟುಕೊಡದ ಚಿತ್ರತಂಡ ಸದ್ಯದಲ್ಲೇ ವಿಶೇಷ ರೀತಿಯ ಕಾನ್ಸೆಪ್ಟ್‌ ಪೋಸ್ಟರ್‌ ಬಿಡುಗಡೆ ಮಾಡುವ ಸಿದ್ದತೆ ಮಾಡಿಕೊಳ್ಳುತ್ತಿದೆ.

  • ‘ಹೆಜ್ಜಾರು’ ಸಿನಿಮಾ ತಂಡದಿಂದ ನಟ ಶಂಕರ್ ನಾಗ್ ಅವರಿಗೆ ವಿಶೇಷ ಪತ್ರ

    ‘ಹೆಜ್ಜಾರು’ ಸಿನಿಮಾ ತಂಡದಿಂದ ನಟ ಶಂಕರ್ ನಾಗ್ ಅವರಿಗೆ ವಿಶೇಷ ಪತ್ರ

    ಕಿರುತೆರೆಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಲೇಖಕ, ನಿರ್ದೇಶಕ ಹರ್ಷಪ್ರಿಯ ಇದೇ ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅವರು ಹೆಜ್ಜಾರು (Hejjaru) ಎಂದು ಹೆಸರಿಟ್ಟಿದ್ದಾರೆ. ಶೀರ್ಷಿಕೆಯ ಮೂಲಕವೇ ಕುತೂಹಲ ಮೂಡಿಸಿರುವ ಹರ್ಷಪ್ರಿಯಾ, ತಾವು ಮತ್ತು ತಮ್ಮ ತಂಡ ನಟ ಶಂಕರ್ ನಾಗ್ ಅವರನ್ನು ಮಾನಸ ಗುರುಗಳು ಎಂದು ಕರೆದಿದ್ದಾರೆ. ಹಾಗಾಗಿಯೇ ಶಂಕರ್ ನಾಗ್ (Shankar Nag) ಅವರ ಹುಟ್ಟು ಹಬ್ಬಕ್ಕೆ ವಿಶೇಷ ಪತ್ರವೊಂದನ್ನು ಬರೆದಿದ್ದಾರೆ.

    ಶಂಕ್ರಣ್ಣ ನಾಗರಕಟ್ಟೆ, ಸಿನಿಮಾ ಬೀದಿ, ಸ್ವರ್ಗ ಎಂಬ ಅಡ್ರೆಸ್ ಗೆ ಪೋಸ್ಟ್ ಮಾಡಿರುವ ನಿರ್ದೇಶಕರು, ‘ಇಲ್ಲಿ ನಾವೆಲ್ಲರೂ ಕ್ಷೇಮ. ಅಲ್ಲಿ ನೀವೂ ಸಹಾ ಕ್ಷೇಮವಾಗಿದ್ದೀರಿ ಎಂದು ನಂಬಿದ್ದೇವೆ. ಈ ಪತ್ರ ಬರೆಯಲು ಕಾರಣವೇನೆಂದರೆ, ಕನ್ನಡ ಚಿತ್ರರಂಗ ಈಗ ನೀವು ಕಂಡ ಕನಸಿನಂತೆಯೇ ಭವ್ಯವಾಗಿ ಬೆಳಗುತ್ತಿದೆ. ದೇಶದೆಲ್ಲೆಡೆ ಕನ್ನಡ ಚಿತ್ರಗಳು ಸದ್ದು, ಸುದ್ದಿ ಮಾಡುತ್ತಿವೆ ಎಂಬುದು ನಿಮಗೂ ಗೊತ್ತಿರುವ ವಿಚಾರವೆ. ನೀವು ನಡೆದ ರಾಜಬೀದಿಯಲ್ಲಿ ಪುಟ್ಟ ಹೆಜ್ಜೆಗಳನ್ನು ಇಟ್ಟು ಹೊರಟಿದ್ದೇವೆ. ಹೆಜ್ಜಾರು ಚಿತ್ರದ ಎಲ್ಲಾ ತಂತ್ರಜ್ಞರಿಗೂ, ಕಲಾವಿದರಿಗೂ ನೀವು ಸದಾ ಮಾನಸ ಗುರುಗಳು’ ಎಂದು ಪತ್ರವನ್ನು ಮುಂದುವರೆಸಿದ್ದಾರೆ.  ಇದನ್ನೂ ಓದಿ:ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಕೇಳಿ ಬರಲಿದೆ ‘ಮೆಲ್ಲುಸಿರೆ ಸವಿಗಾನ’ ಹಾಡು

    ಪತ್ರವನ್ನು ಮುಂದುವರೆಸುತ್ತಾ, ‘ನಿಮ್ಮ ಪಾದರಸದಂತಹ ಉತ್ಸಾಹ, ಗುಲಗಂಜಿಯಷ್ಟಾದರೂ ನಮಗೂ ಸಿಗುವಂತೆ ಆಶೀರ್ವದಿಸಬೇಕೆಂದು ಈ ಮೂಲಕ ಬೇಡಿಕೊಳ್ಳುತ್ತೇವೆ. ಪ್ರತೀ ಕ್ಷಣವನ್ನೂ ಮರಳಿ ಬಾರದು ಎಂಬಂತೆ ಜೀವಿಸುವವರು ನೀವು. ಅಂತಹ ಕೆಲ ಕ್ಷಣಗಳನ್ನು ನಮ್ಮ ಹೆಜ್ಜಾರು ಕುರಿತಾದ ಮಾಹಿತಿಯಗಳನ್ನು ಓದಲು ಮೀಸಲಿಟ್ಟಿದ್ದು ನಮ್ಮ ಭಾಗ್ಯ. ನೀವು ಮೆಚ್ಚಿದ ಚಿತ್ರಕ್ಕೆ ಕನ್ನಡಿಗರ ಪ್ರೀತಿಯೂ ಸಿಗಲಿದೆ ಎಂಬ ನಂಬಿಕೆ ನಮ್ಮದು. ಸೃಜನಶೀಲತೆಯ ಸಾರ್ವಕಾಲಿಕ ಸಾರ್ವಭೌಮರಾದ ನಿಮಗೆ ಜನುಮದಿನದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

    ಹರ್ಷಪ್ರಿಯ (Harshapriya) ಕನ್ನಡ ಕಿರುತೆರೆ ಜಗತ್ತಿನಲ್ಲಿ ಗೆದ್ದ ಪ್ರತಿಭಾವಂತ ಬರಹಗಾರ, ಅವರು ಕಥೆಗಳನ್ನು ನೋಡುವ ರೀತಿಯೇ ಭಿನ್ನ. ನಿರ್ದೇಶನದಲ್ಲೂ ತಮ್ಮದೇ ಆದ ಕನಸು ಕಟ್ಟಿಕೊಂಡು ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಈ ಕಾರಣದಿಂದಾಗಿಯೇ ಹೆಜ್ಜಾರು ವಿಶೇಷ ಸಿನಿಮಾ ಆಗಲಿದೆ ಎನ್ನುವುದು ನಂಬಿಕೆ. ಇವರ ಕನಸಿಗೆ ವಿಮಲಾ ಎನ್ ಹಾಗೂ ಸುನೀತಾ ಟಿ.ಆರ್ ಸಾಥ್ ನೀಡಿದ್ದು, ಕೆ.ಎಸ್.ರಾಮ್ ಜಿ ಅವರು  ಈಸಿನಿಮಾವನ್ನು ಅರ್ಪಿಸಿದ್ದಾರೆ. ಅಮರ್.ಎಲ್ ಅವರ ಸಿನಿಮಾಟೋಗ್ರಫಿ ಮತ್ತು ನುರಿತ ತಂತ್ರಜ್ಞರ ತಂಡವು ಸಿನಿಮಾಗಾಗಿ ಕೆಲಸ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]