Tag: hebri

  • ಸೋಮವಾರ ಸಂಜೆ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ – ದೃಢಪಡಿಸಿದ ಪರಮೇಶ್ವರ್

    ಸೋಮವಾರ ಸಂಜೆ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ – ದೃಢಪಡಿಸಿದ ಪರಮೇಶ್ವರ್

    ಬೆಂಗಳೂರು: ವಿಕ್ರಂ ಗೌಡ ಎಂಬ ಗ್ರೇಡೆಡ್ ನಕ್ಸಲ್‌ನನ್ನು (Naxal) ಪೊಲೀಸರು ಸೋಮವಾರ ಸಂಜೆ ಎನ್‌ಕೌಂಟರ್ ಮಾಡಿದ್ದಾರೆ ಎಂದು ಗೃಹಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

    ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ (Vikram Gowda) ಎನ್‌ಕೌಂಟರ್ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ವಿಕ್ರಂನನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ವಿಕ್ರಂ ತಪ್ಪಿಸಿಕೊಂಡು ಓಡಾಡುತ್ತಿದ್ದ. ಅನೇಕ ಎನ್‌ಕೌಂಟರ್‌ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ಸೋಮವಾರ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಸೋಮವಾರ ಪೊಲೀಸರ ಮೇಲೆ ವಿಕ್ರಂ ಶೂಟ್ ಮಾಡಿದ್ದ. ಪೊಲೀಸರು ಪ್ರತಿದಾಳಿ ನಡೆಸಿ ಎನ್‌ಕೌಂಟರ್ ಮಾಡಿದ್ದಾರೆ. ವಿಕ್ರಂ ಜೊತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರಿದಿದೆ. ವಿಕ್ರಂ ಗೌಡ ಸಕ್ರಿಯರಾಗಿದ್ದ ಎಂದು ಪೊಲೀಸರು ಆತನನ್ನು ಹುಡುಕುತ್ತಿದ್ದರು ಎಂದರು. ಇದನ್ನೂ ಓದಿ: VRS ತೆಗೆದೊಕೊಳ್ಳಿ ಅಥವಾ ವರ್ಗಾವಣೆಯಾಗಿ – ಹಿಂದೂಯೇತರ ಸಿಬ್ಬಂದಿ ಬೇಡ: ತಿರುಪತಿ ಬೋರ್ಡ್‌

    ವಿಕ್ರಂ ಗೌಡ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದು, ಆತನ ಮೇಲೆ ನಿಗಾ ಇಟ್ಟಿದ್ದರು. ಈಗ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಮಾಡಿದ್ದಾರೆ. ನಾವು ರಾಜ್ಯದಲ್ಲಿ ನಕ್ಸಲ್ ಕಾಲ ಮುಗೀತು ಅಂದುಕೊಂಡಿದ್ದೆವು. ಆದರೆ ಕಳೆದ ವಾರ ರಾಜು ಮತ್ತು ಲತಾ ಎಂಬ ನಕ್ಸಲರು ಪತ್ತೆ ಆಗಿದ್ದಾರೆ. ಅವರಿಬ್ಬರೂ ತಪ್ಪಿಸಿಕೊಂಡು ಹೋಗಿದ್ದಾರೆ ಎಂದು ಕೂಂಬಿಂಗ್ ನಡೆಸಲಾಯಿತು. ಕಳೆದ ಒಂದು ವಾರದಿಂದ ಕೂಂಬಿಂಗ್ ನಡೆಯುತ್ತಿತ್ತು. ಆಗ ಇದ್ದಕಿದ್ದಂತೆ ವಿಕ್ರಂ ಗೌಡ ಬರುವ ಮಾಹಿತಿ ಸಿಕ್ಕಿತ್ತು. ಆ ಸಂದರ್ಭದಲ್ಲಿ ಪೊಲೀಸರಿಗೆ ವಿಕ್ರಂ ಗೌಡನನ್ನು ಎನ್‌ಕೌಂಟರ್ ಮಾಡುವುದು ಅನಿವಾರ್ಯವಾಯಿತು ಎಂದು ತಿಳಿಸಿದರು. ಇದನ್ನೂ ಓದಿ: 75 ವರ್ಷದ ವೃದ್ಧೆ ಮೇಲೆ ಭಿಕ್ಷಾಟನೆ ಮಾಡುತ್ತಿದ್ದ ಯುವಕನಿಂದ ಅತ್ಯಾಚಾರ

    ಪೊಲೀಸರ ಮೇಲೆ ವಿಕ್ರಂ ಗೌಡ ತಂಡ ದಾಳಿ ಮಾಡಿದೆ. ಹಾಗಾಗಿ ಪೊಲೀಸರು ಎನ್‌ಕೌಂಟರ್ ಮಾಡಬೇಕಾಯಿತು. ನಕ್ಸಲರನ್ನು ಮುಖ್ಯ ವೇದಿಕೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಪಾವಗಡ ಭಾಗದಲ್ಲಿ ನಕ್ಸಲರನ್ನು ಮಾತನಾಡಿ ಮುಖ್ಯವೇದಿಕೆಗೆ ಕರೆತರಲಾಗಿತ್ತು. ಈಗಲೂ ಈ ಪ್ರಯತ್ನ ನಡೆಯುತ್ತಿದೆ. ಶರಣಾಗಲು ಬಯಸುವ ನಕ್ಸಲರಿಗೆ ಸಾಮಾನ್ಯ ಬದುಕು ನಡೆಸಲು ಸರ್ಕಾರ ಅವಕಾಶ ಮಾಡಿಕೊಡಲಿದೆ. ಅದು ಇದ್ದಿದ್ದೇ. ಆದರೆ ಅರಣ್ಯ ಭಾಗದಲ್ಲಿದ್ದು, ಪೊಲೀಸರ ಮೇಲೆ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದರೇ ಈ ಥರ ಘಟನೆ ಆಗೋದು ಸಹಜ ಎಂದು ಹೇಳಿದರು. ಇದನ್ನೂ ಓದಿ: Naxal Encounter| 3 ರಾಜ್ಯಕ್ಕೆ ಬೇಕಾಗಿದ್ದ ಮೋಸ್ಟ್‌ ವಾಟೆಂಡ್‌ ನಕ್ಸಲ್‌ ನಾಯಕ ವಿಕ್ರಂ ಗೌಡ ಯಾರು?

  • ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟಿಪ್ಪರ್ – ಒಬ್ಬ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟಿಪ್ಪರ್ – ಒಬ್ಬ ಸ್ಥಳದಲ್ಲೇ ಸಾವು

    ಉಡುಪಿ: ಪೆಟ್ರೋಲ್ ಪಂಪ್ (Petrol Pump) ಒಂದರಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟಿಪ್ಪರ್ (Tipper) ಹರಿದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೆಬ್ರಿ (Hebri) ಸಮೀಪದ ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ.

    ಶಿವರಾಜ್ (38) ಟಿಪ್ಪರ್ ಹರಿದ ಪರಿಣಾಮ ಸಾವನ್ನಪ್ಪಿದ ಕಾರ್ಮಿಕ. ಮೃತ ಶಿವರಾಜ್ ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿ. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ಬದಿಗಿಟ್ಟು ಮಲಗಿದ್ದರು. ನಿದ್ರೆಗೆ ಜಾರಿದ್ದ ವೇಳೆ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವು

    ಅದೇ ಪೆಟ್ರೋಲ್ ಪಂಪ್‌ಗೆ ಬಂದು ಪೆಟ್ರೋಲ್ ಹಾಕಿಸಿ ನಿರ್ಗಮಿಸುತ್ತಿದ್ದ ಟಿಪ್ಪರ್, ಅಲ್ಲೇ ಮಲಗಿದ್ದ ಶಿವರಾಜ್ ಹಾಗೂ ಮಹೇಂದ್ರ ಮೇಲೆ ಹರಿದಿದೆ. ಇದರಿಂದ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನಾದಿನಿ ಜೊತೆ ಅಶ್ಲೀಲ ವರ್ತನೆ – ಪ್ರಶ್ನಿಸಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ

  • ಆದಿ ಉಡುಪಿ – ಮಲ್ಪೆ ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಹಸಿರು ನಿಶಾನೆ

    ಆದಿ ಉಡುಪಿ – ಮಲ್ಪೆ ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಹಸಿರು ನಿಶಾನೆ

    ಉಡುಪಿ: ಕಳೆದ ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169A ಹೆದ್ದಾರಿಯ ಆದಿ ಉಡುಪಿಯಿಂದ ಮಲ್ಪೆವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಹಸಿರು ನಿಶಾನೆ ತೋರಿಸಿದೆ.

    ಈ ಹೆದ್ದಾರಿ ಹಾದು ಹೋಗುವ ಪರ್ಕಳದಿಂದ ಹಿರಿಯಡ್ಕ ವರೆಗೆ ಚತುಷ್ಪಥ ಹಾಗೂ ಹಿರಿಯಡ್ಕದಿಂದ ಹೆಬ್ರಿ ವರೆಗೆ ದ್ವಿಪಥವಾಗಿ ಅಭಿವೃದ್ಧಿಪಡಿಸಲು ಒಟ್ಟು ರೂ. 350 ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಅನುಮೋದನೆ ನೀಡಿದೆ. ಕಳೆದ 20 ವರ್ಷದಿಂದ ಬಹಳ ಬೇಡಿಕೆಯಿದ್ದ ರಸ್ತೆಗೆ ಸರ್ಕಾರ ಅನುಮೋದನೆ ನೀಡಿದ್ದರಿಂದ ಮೀನುಗಾರಿಕಾ ವಹಿವಾಟು, ಮಲ್ಪೆ ಕಡಲ ತೀರಕ್ಕೆ ಪ್ರವಾಸಿಗರ ಓಡಾಟ ಮಾಡಲು ಅನುಕೂಲವಾಗಲಿದೆ.

    ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಂ ಹೆದ್ದಾರಿಯ ಮಲ್ಪೆಯಿಂದ ಹೆಬ್ರಿವರೆಗೆ ಸಮಗ್ರ ಅಭಿವೃದ್ಧಿಯ ಯೋಜನಾ ವರದಿ ಸಿದ್ಧಪಡಿಸಿ ಅನುಮೋದನೆಗಾಗಿ ಮಾರ್ಚ್ 23 ರಂದು ಸಂಸದೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಯವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.

    ಉಡುಪಿ ಜಿಲ್ಲೆಯ ಬಹು ಬೇಡಿಕೆಯಾಗಿರುವ ಈ ಪ್ರಮುಖ ಹೆದ್ದಾರಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಮುತುವರ್ಜಿವಹಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿ ಹೆದ್ದಾರಿ ಅಭಿವೃದ್ಧಿಯ ಪ್ರಾಮುಖ್ಯತೆಯ ವಸ್ತುಸ್ಥಿತಿಗಳನ್ನು ಮನವರಿಕೆ ಮಾಡಿ ನಂತರ ಯೋಜನೆಗೆ ಅನುಮೋದನೆ ದೊರಕುವವರೆಗೆ ನಿರಂತರವಾಗಿ ಪ್ರಯತ್ನಿಸಿ ಶ್ರಮವಹಿಸಿದ ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

  • ಹೆಬ್ರಿ ಬಸ್ ನಿಲ್ದಾಣದಲ್ಲಿ ಫ್ಯಾಮಿಲಿ ಫೈಟ್- ಬಟ್ಟೆ ಹರಿದುಕೊಂಡ ಸಂಬಂಧಿಕರು

    ಹೆಬ್ರಿ ಬಸ್ ನಿಲ್ದಾಣದಲ್ಲಿ ಫ್ಯಾಮಿಲಿ ಫೈಟ್- ಬಟ್ಟೆ ಹರಿದುಕೊಂಡ ಸಂಬಂಧಿಕರು

    ಉಡುಪಿ: ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಿದ್ದ ಕೌಟುಂಬಿಕ ಜಗಳ ಬೀದಿಗೆ ಬಂದಿದ್ದು, ಉಡುಪಿ ಜಿಲ್ಲೆ ಹೆಬ್ರಿ ಪೇಟೆಯಲ್ಲಿ ಒಂದೇ ಕುಟುಂಬದ ಸಂಬಂಧಿಗಳು ಬಟ್ಟೆ ಹರಿದುಕೊಂಡು ಜಗಳ ಕಾದಿದ್ದಾರೆ.

    ಹೆಬ್ರಿ ಬಸ್ ಸ್ಟ್ಯಾಂಡ್ ಸಮೀಪ ನಡೆದ ಫ್ಯಾಮಿಲಿ ಡ್ರಾಮ ಈಗ ಜಗಜ್ಜಾಹೀರಾಗಿದೆ. ಮೊಬೈಲ್‍ನಲ್ಲಿ ಮೆಸೇಜ್ ಕಳುಹಿಸುವ ವಿಚಾರಕ್ಕೆ ಆರಂಭವಾದ ಜಗಳ ಕುಟುಂಬದ ಸದಸ್ಯರ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಆರಂಭದಲ್ಲಿ ಈ ಹೈಡ್ರಾಮಾವನ್ನು ಸುತ್ತಮುತ್ತಲಿನ ಜನ ನಿಂತು ನೋಡಿದರೆ ಹೊಡೆದಾಟ ಆರಂಭವಾಗಿ ಯುವಕನ ಅಂಗಿ ಹರಿಯುತ್ತಿದ್ದಂತೆ ಸಾರ್ವಜನಿಕರು ಕೂಡ ಮಧ್ಯಪ್ರವೇಶ ಮಾಡಿದ್ದಾರೆ.

    ಮಿಥುನ್ ಸ್ಥಳೀಯ ಬಿಜೆಪಿ ಮುಖಂಡನಾಗಿದ್ದು, ಜಗಳದಲ್ಲಿ ಖಾಸಗಿ ವಿಚಾರಗಳು ಪ್ರಸ್ತಾಪವಾಗಿದ್ದು ಅವಾಚ್ಯ ಪದಗಳಿಂದ ಎರಡು ಕಡೆಯವರು ಬೈದುಕೊಂಡಿದ್ದಾರೆ. ಸಾರ್ವಜನಿಕರು ಎಷ್ಟು ತಿಳಿ ಹೇಳಿದರೂ ಮಾತಿನ ಚಕಮಕಿ ಮತ್ತು ಬೈಗುಳ ನಿಲ್ಲಲೇ ಇಲ್ಲ. ಸಾಮಾಜಿಕ ಹೋರಾಟಗಾರರು- ಕೆಲ ಸಂಘಟನೆಯ ಮುಖಂಡರು ಸ್ಥಳಕ್ಕೆ ಆಗಮಿಸಿದ ನಂತರ ಕುಟುಂಬದ ಸದಸ್ಯರ ನಡುವಿನ ಜಗಳ ಕೊಂಚ ಕಡಿಮೆಯಾಗಿದೆ. ಆಮೇಲೆ ರಾಜಿಯಾಗಿದೆ.

    ಒಂದೇ ಕುಟುಂಬದ ಬೀದಿರಂಪ ಸ್ಥಳೀಯರ ಮೊಬೈಲ್‍ನಲ್ಲಿ ನೆರೆಸಯಾಗಿದ್ದು ಸದ್ಯ ವಾಟ್ಸಪ್ ಫೇಸ್‍ಬುಕ್‍ನಲ್ಲಿ ಹರಿದಾಡುತ್ತಿದೆ. ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಬರುವ ಮೊದಲೇ ಗಲಾಟೆ ಮಾಡಿದವರು ಕಾಲ್ಕಿತ್ತಿದ್ದಾರೆ.

  • ದಂಡನೆಗೆ ನೊಂದು ಪದವಿ ವಿದ್ಯಾರ್ಥಿ ಆತ್ಮಹತ್ಯೆ- ಕಾಲೇಜು ಎದುರು ಪ್ರತಿಭಟನೆ

    ದಂಡನೆಗೆ ನೊಂದು ಪದವಿ ವಿದ್ಯಾರ್ಥಿ ಆತ್ಮಹತ್ಯೆ- ಕಾಲೇಜು ಎದುರು ಪ್ರತಿಭಟನೆ

    ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ಸರ್ಕಾರಿ ಕಾಲೇಜು ವಿದ್ಯಾರ್ಥಿ ನೇಣಿಗೆ ಶರಣಾದ ಬೆನ್ನಲ್ಲೇ ಕಾಲೇಜು ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಹೆಬ್ರಿ ಕಾಲೇಜಿನ ವಿದ್ಯಾರ್ಥಿ ಚರಣ್ ಶೆಟ್ಟಿ (19) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದನು.

    ಹೆಬ್ರಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ಕಲಿಯುತ್ತಿದ್ದ ವಿದ್ಯಾರ್ಥಿಗೆ ಉಪನ್ಯಾಸಕರು ಮಾನಸಿಕ ಕಿರುಕುಳ ನೀಡಿದ್ದರು ಎಂಬುದು ಸಹಪಾಠಿಗಳ ಆರೋಪವಾಗಿದೆ. ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಚರಣ್ ಶೆಟ್ಟಿ ಕಾಲೇಜು ಡೇ ದಿನ ಮದ್ಯ ಸೇವಿಸಿ ಗಲಾಟೆ ಮಾಡಿದ್ದ. ಹೀಗಾಗಿ ವಿದ್ಯಾರ್ಥಿಯನ್ನು ಉಪನ್ಯಾಸಕರು ತರಾಟೆಗೆ ತೆಗೆದುಕೊಂಡಿದ್ದರು. ಪೋಷಕರ ಸಭೆಯಲ್ಲಿ ಉಪನ್ಯಾಸಕರ ಜೊತೆ ಚರಣ್ ವಾಗ್ವಾದ ಮಾಡಿದ್ದ. ಬಳಿಕ ತರಗತಿಯಲ್ಲೂ ನಡುವೆ ವಾದ, ಚರ್ಚೆ ನಡೆದಿತ್ತು. ಅದಾಗಿ ಆತನನ್ನು ತರಗತಿಯಿಂದ ಹೊರಗೆ ಕಳುಹಿಸಿದ್ದರು.

    ಈ ನೋವು ಅವಮಾನದಿಂದ ಸಹಪಾಠಿಗಳಿಗೆ ಕರೆ ಮಾಡಿದ್ದ ಚರಣ್, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದನು. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿರುವ ವಿದ್ಯಾರ್ಥಿಗಳು ಇವತ್ತು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಇಂದು ಕಾಲೇಜಿಗೆ ರಜೆ ನೀಡಲಾಗಿತ್ತು. ಸಹಪಾಠಿಗಳು ಕಾಲೇಜಿಗೆ ಆಗಮಿಸಿ ಮೃತನ ಫೋಟೋ ಇಟ್ಟು ಮೌನ ಪ್ರಾರ್ಥನೆ ಸಲ್ಲಿಸಿದರು.

    ರಜೆಯ ಹೊರತಾಗಿಯೂ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಶಿಕ್ಷಕರನ್ನು ತರಾಟೆಗೆ ತಗೆದುಕೊಂಡರು. ಪ್ರಾಂಶುಪಾಲರು ಸೇರಿ ನಾಲ್ವರು ಉಪನ್ಯಾಸಕರ ಮೇಲೆ ಕೇಸು ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ದೂರು ದಾಖಲಿಸಿದರು.

  • ರಾಜೀನಾಮೆ ನೀಡಿ ಸರ್ಕಾರಿ ಮೊಬೈಲ್ ಮೇಜ್ ಮೇಲಿಟ್ಟು ಹೊರಟೇ ಬಿಟ್ರು ಹೆಬ್ರಿ ಠಾಣಾ ಎಸ್‍ಐ!

    ರಾಜೀನಾಮೆ ನೀಡಿ ಸರ್ಕಾರಿ ಮೊಬೈಲ್ ಮೇಜ್ ಮೇಲಿಟ್ಟು ಹೊರಟೇ ಬಿಟ್ರು ಹೆಬ್ರಿ ಠಾಣಾ ಎಸ್‍ಐ!

    ಉಡುಪಿ: ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಉಡುಪಿ ಜಿಲ್ಲೆಯ ಹೆಬ್ರಿ ಠಾಣಾ ಎಸ್‍ಐ ರಾಜೀನಾಮೆ ನೀಡಿದ್ದಾರೆ.

    ಹೆಬ್ರಿ ಎಸ್‍ಐಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರಂತೆ. ಹಾಗಾಗಿ ಎಸ್‍ಐ ರಾಜೀನಾಮೆ ನೀಡಿ ಠಾಣೆಯಿಂದ ತೆರಳಿದ್ದಾರೆ. ಸರ್ಕಾರಿ ಮೊಬೈಲ್ ಮೇಜಿನ ಮೇಲಿಟ್ಟು ಠಾಣೆಯಿಂದ ಎಸ್ ಐ ಮಹಾಬಲ ಶೆಟ್ಟಿ ಹೊರಟು ಹೋಗಿದ್ದಾರೆ.

    ಸಿವಿಲ್ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳ ತರಾಟೆಗೆ ಮನನೊಂದು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಎಸ್ ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಎಸ್ ಐ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದು, ಮನವೊಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

  • ಉಡುಪಿಯ ಹೆಬ್ರಿಯಲ್ಲಿ ಮಂಡ್ಯ ಪೊಲೀಸರ ಎಡವಟ್ಟು- ಆರೋಪಿಯೆಂದು ತಿಳಿದು ಕರವೇ ಜಿಲ್ಲಾಧ್ಯಕ್ಷರ ತಲೆಗೆ ಪಿಸ್ತೂಲಿಟ್ರು

    ಉಡುಪಿಯ ಹೆಬ್ರಿಯಲ್ಲಿ ಮಂಡ್ಯ ಪೊಲೀಸರ ಎಡವಟ್ಟು- ಆರೋಪಿಯೆಂದು ತಿಳಿದು ಕರವೇ ಜಿಲ್ಲಾಧ್ಯಕ್ಷರ ತಲೆಗೆ ಪಿಸ್ತೂಲಿಟ್ರು

    ಉಡುಪಿ: ಮಂಡ್ಯ ಪೊಲೀಸರು ಹಾಸನದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಿಗೆ ಪಿಸ್ತೂಲ್ ತಲೆಗಿಟ್ಟು ಹಲ್ಲೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಮರಾವತಿ ಹೋಟೆಲ್‍ನಲ್ಲಿ ಹಾಸನದ ಕರವೇ ಕಾರ್ಯಕರ್ತರು ತಿಂಡಿಗೆಂದು ಬಂದಿದ್ದರು. ಈ ಸಂದರ್ಭದಲ್ಲಿ ಮಂಡ್ಯದಿಂದ ಬಂದ ಸುಮಾರು 15 ಮಂದಿ ಪೊಲೀಸರು ಹಾಸನದ ಕರವೇ ಅಧ್ಯಕ್ಷ ಸತೀಶ್ ಪಾಟೀಲ್ ತಲೆಗೆ ಪಿಸ್ತೂಲ್ ಹಿಡಿದು ಹಲ್ಲೆ ನಡೆಸಿದರು.

    ಕೇರಳ ರಾಜ್ಯ ಸರ್ಕಾರ ಮಲಯಾಳಂ ಭಾಷೆ ಕಡ್ಡಾಯ ಮಾಡಿದ್ದ ಹಿನ್ನೆಲೆಯಲ್ಲಿ ಕರವೇ ಇಂದು ಉಡುಪಿಯಿಂದ ಕಾಸರಗೋಡು ಚಲೋ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಅದಕ್ಕಾಗಿ ರಾಜ್ಯದ ಹಲವು ಭಾಗದ ಕರವೇ ಕಾರ್ಯಕರ್ತರು ಉಡುಪಿಗೆ ಬಂದಿದ್ದರು. ಹಾಸನದಿಂದ ಬಂದ ಕರವೇ ಕಾರ್ಯಕರ್ತರು ಉಡುಪಿಯ ಗಡಿ ಭಾಗ ಹೆಬ್ರಿಯ ಅಮರಾವತಿ ಹೋಟೆಲ್‍ನಲ್ಲಿ ತಂಗಿದ್ದರು.

    ಬೆಳಗ್ಗೆ ನಿದ್ದೆಯಿಂದ ಎದ್ದು ಟೀ ಕುಡಿಯುತ್ತಿದ್ದ ಸಂದರ್ಭದಲ್ಲಿ ಜೀಪುಗಳಲ್ಲಿ ಬಂದ ಪೊಲೀಸರು ಸತೀಶ್ ಪಾಟೀಲ್ ಗೆ ಎರಡೇಟು ಬಿಗಿದು ಪಿಸ್ತೂಲನ್ನು ತಲೆಗೆ ಇಟ್ಟಿದ್ದಾರೆ. ಏನು ನಡೆಯುತ್ತಿದೆ ಎಂದು ಗೊತ್ತಾಗದ ಕರವೇ ಕಾರ್ಯಕರ್ತರು ಪೊಲೀಸರನ್ನು ವಿಚಾರಿಸಿದ್ದಾರೆ. ಈ ಸಂದರ್ಭ ಜೊತೆಯಲ್ಲಿದ್ದವರಿಗೂ ಪೊಲೀಸರು ಥಳಿಸಿದ್ದಾರೆ. ಒಂದೆರಡು ನಿಮಿಷ ಕಳೆಯುತ್ತಿದ್ದಂತೆ ಸತ್ಯ ಬಹಿರಂಗವಾಗಿದೆ.

     

    ಆರೋಪಿಯೆಂದು ತಪ್ಪು ತಿಳಿದ ಪೊಲೀಸರು: ಮಂಡ್ಯ ಪೊಲೀಸರು ಯಾವುದೋ ಒಂದು ಪ್ರಕರಣ ಸಂಬಂಧ ಆರೋಪಿಗಳನ್ನು ಹುಡುಕಿಕೊಂಡು ಉಡುಪಿಗೆ ಬಂದಿದ್ದರು. ಪೊಲೀಸರಿಗೆ ಆರೋಪಿಯ ಲೊಕೇಶನ್ ಹೆಬ್ರಿ ಆಸುಪಾಸಿನಲ್ಲಿ ಕಾಣಿಸಿಕೊಂಡಿತ್ತು. ಸತೀಶ್ ಆರೋಪಿಯಂತೆ ಕಂಡ. ನೋಡಿದವರೇ ಪರಾರಿಯಾಗುವ ಮೊದಲು ಹಿಡಿಯೋಣ ಎಂದು ಮಂಡ್ಯ ಪೊಲೀಸರು ತಲೆಗೆ ಪಿಸ್ತೂಲ್ ಇಟ್ಟಿದ್ದಾರೆ. ಕರವೇ ಹಾಸನ ಜಿಲ್ಲಾಧ್ಯಕ್ಷನನ್ನು ಆರೋಪಿ ಎಂದು ತಪ್ಪಾಗಿ ಭಾವಿಸಿ ಇಷ್ಟೆಲ್ಲಾ ಎಡವಟ್ಟು ಮಾಡಿದ್ದಾರೆ.

    ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಗೊತ್ತಾದ ಕೂಡಲೇ ಕರವೇ ಕಾರ್ಯಕರ್ತರು ಪೊಲೀಸರ ಮೇಲೆ ಮುಗಿಬಿದ್ದರು. ಅನ್ಯಾಯವಾಯ್ತು.., ಪೊಲೀಸರು ದೌರ್ಜನ್ಯ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೆಬ್ರಿ ಅಮರಾವತಿ ಹೋಟೆಲ್‍ನಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯ್ತು. ಕರವೇ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾದರು. ಮಂಡ್ಯ ಪೊಲೀಸರು ಮತ್ತು ಹಾಸನ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಸ್ಥಳಕ್ಕಾಗಮಿಸಿ ಪೊಲೀಸರು ಮತ್ತು ಕಾರ್ಯಕರ್ತರ ಜಗಳ ಬಿಡಿಸಿದರು. ಮಂಡ್ಯ ಪೊಲೀಸರು ನಮ್ಮದು ತಪ್ಪಾಗಿದೆ ಎಂದು ಕ್ಷಮೆ ಯಾಚಿಸಿದ ಮೇಲೆ ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳಲಾಯ್ತ      

    ಕಾಸರಗೋಡು ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಕರವೇ ಪ್ರವೀಣ್ ಶೆಟ್ಟಿ ಬಣ ಉಡುಪಿಗೆ ಬಂದಿತ್ತು. ಹಾಸನ- ಚಿಕ್ಕಮಗಳೂರು- ಕಾರವಾರ ಸೇರಿದಂತೆ ಹತ್ತಿರದ ಜಿಲ್ಲೆಗಳಿಂದ ಜನ ಉಡುಪಿಗೆ ಬಂದಿದ್ದರು. ಪೊಲೀಸರು ಕ್ಷಮೆ ಕೇಳಿದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ರೆ ಪೊಲೀಸರು ಕರ್ತವ್ಯದಲ್ಲಿದ್ದಾಗ ಪ್ರಜ್ಞೆಯನ್ನು ಇಟ್ಟುಕೊಳ್ಳಬೇಕು. ಅಮಾಯಕರ ಮೇಲೆ ಹಲ್ಲೆಯನ್ನು ಮಾಡಬಾರದು. ಈ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಪ್ರವೀಣ್ ಶೆಟ್ಟಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಗೆಳೆಯರ ಜೊತೆ ಟಿ ಕುಡಿಯುತ್ತಿದ್ದೆ, ನನಗೆ ಏನಾಗ್ತಿದೆ ಅಂತ ಗೊತ್ತಾಗಿಲ್ಲ. ಪಿಸ್ತೂಲು ಕಣ್ಣಮುಂದೆ ಬಂದಾಗ ಜೀವಭಯವಾಯ್ತು. ಯಾರು ಏನು ಮಾಡುತ್ತಿದ್ದಾರೆ ಎಂದೂ ತಿಳಿಯಲಿಲ್ಲ. ಮಫ್ತಿಯಲ್ಲಿದ್ದದ್ದರಿಂದ ನನಗೆ ಬಂದವರು ಪೊಲೀಸರು ಅಂತನೂ ಗೊತ್ತಾಗಲಿಲ್ಲ. ಯಾರೋ ಆಗಂತುಕರು ಬಂದು ದಾಳಿ ನಡೆಸುತ್ತಿದ್ದಾರೆ ಎಂದು ಭಾವಿಸಿದೆ ಅಂತ ಸತೀಶ್ ಪಾಟೀಲ್ ಪಬ್ಲಿಕ್ ಟಿವಿ ಜೊತೆ ಆತಂಕದಿಂದಲೇ ಮಾತನಾಡಿದರು.