Tag: hebbuli film

  • ಅಮಲಾ ಪೌಲ್ ಪ್ಯಾಂಟ್‌ಲೆಸ್ ಫೋಟೋಶೂಟ್ ನೋಡಿ ಕಾಲೆಳೆದ ನೆಟ್ಟಿಗರು

    ಅಮಲಾ ಪೌಲ್ ಪ್ಯಾಂಟ್‌ಲೆಸ್ ಫೋಟೋಶೂಟ್ ನೋಡಿ ಕಾಲೆಳೆದ ನೆಟ್ಟಿಗರು

    ನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ (Amala Paul) ಸಿನಿಮಾಗಿಂತ ಈಗೀಗ ವೈಯಕ್ತಿಕ ವಿಚಾರವಾಗಿಯೇ ಸುದ್ದಿಯಾಗ್ತಿದ್ದಾರೆ. ಸದ್ಯ ಪ್ಯಾಂಟ್‌ಲೆಸ್ ಆಗಿ ಫೋಟೋಶೂಟ್ ಮಾಡಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದನ್ನೂ ಓದಿ:ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ: ಪತ್ನಿ ಬರ್ತ್‌ಡೇಗೆ ರಿಷಬ್ ಲವ್ಲಿ ವಿಶ್

    ಮದುವೆಯಾಗಿ ಒಂದು ಮಗುವಿನ ತಾಯಿ ಆಗಿರೋ ಅಮಲಾ ಈಗೀಗ ಮತ್ತಷ್ಟು ಹಾಟ್ ಆಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ತಿದ್ದಾರೆ. ಪ್ಯಾಂಟ್ ಧರಿಸದೇ ಟಾಪ್ ಹಾಕಿಕೊಂಡು ಅಮಲಾ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಓವರ್ ಸೈಜ್ ಇರೋ ಒಂದು ಟೀ ಶರ್ಟ್ ಧರಿಸಿದ್ದಾರೆ.

    ಪ್ಯಾಂಟ್ ಧರಿಸದೇ ಫೋಟೋಗೆ ಪೋಸ್ ಕೊಟ್ಟ ಅಮಲಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ನಟಿ ಬೇಕಂತಲೇ ಹೀಗೆ ಮಾಡಿದ್ರಾ? ಅಥವಾ ಫ್ಯಾಷನ್ ಭಾಗವೇ ಎಂದೆಲ್ಲಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಸಿನಿಮಾ ಚಾನ್ಸ್‌ಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದೇ ಅಮಲಾಗೆ ನೆಟ್ಟಿಗರು ಟೀಕಿಸಿದ್ದಾರೆ. ಇದಕ್ಕೆಲ್ಲಾ ನಟಿ ಏನಂತಾರೆ ಎಂದು ಕಾದುನೋಡಬೇಕಿದೆ.

    ಕಳೆದ ವರ್ಷ ಅಮಲಾ ಅವರು ದಿ ಗೋಟ್ ಲೈಫ್, ಲೆವೆಲ್ ಕ್ರಾಸ್ ಸಿನಿಮಾಗಳಲ್ಲಿ ನಟಿಸಿದ್ದರು. ಸದ್ಯ ಅವರು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಸಮಸ್ಯೆ ಇರೋದು ನನ್ನ ಬಟ್ಟೆಯಲ್ಲಿ ಅಲ್ಲ- ಟ್ರೋಲಿಗರಿಗೆ ಅಮಲಾ ಪೌಲ್ ತಿರುಗೇಟು

    ಸಮಸ್ಯೆ ಇರೋದು ನನ್ನ ಬಟ್ಟೆಯಲ್ಲಿ ಅಲ್ಲ- ಟ್ರೋಲಿಗರಿಗೆ ಅಮಲಾ ಪೌಲ್ ತಿರುಗೇಟು

    ನ್ನಡದ ‘ಹೆಬ್ಬುಲಿ’ (Hebbuli Film) ನಟಿ ಅಮಲಾ ಪೌಲ್ (Amala Paul) ಇತ್ತೀಚೆಗೆ ಕೊಚ್ಚಿಯ ಕಾಲೇಜುವೊಂದಕ್ಕೆ ಸಿನಿಮಾ ಪ್ರಚಾರಕ್ಕಾಗಿ ಭಾಗಿಯಾಗಿದ್ದರು. ಈ ವೇಳೆ, ಅವರು ಧರಿಸಿದ ಬಟ್ಟೆ ಬಗ್ಗೆ ಭಾರೀ ಟ್ರೋಲ್ ಆಗಿದ್ದರು. ಈ ಬಗ್ಗೆ ನಟಿ ಮಾತನಾಡಿ, ಸಮಸ್ಯೆ ಇರೋದು ಬಟ್ಟೆಯಲ್ಲಿ ಅಲ್ಲ, ಕ್ಯಾಮೆರಾಮ್ಯಾನ್‌ಗಳಲ್ಲಿ ಎಂದು ಖಡಕ್ ಉತ್ತರ ನೀಡಿದ್ದಾರೆ.

    ನನಗೆ ಯಾವ ಬಟ್ಟೆ ಆರಾಮ ಎನಿಸುತ್ತದೆಯೋ ಅದನ್ನು ಮಾತ್ರ ಧರಿಸುವೆ. ಸಮಸ್ಯೆ ಇರೋದು ಬಟ್ಟೆಯಲ್ಲ, ಕ್ಯಾಮೆರಾಗಳು ಹೇಗೆ ನನ್ನ ಉಡುಗೆ ಶೈಲಿಯನ್ನು ತೋರಿಸುತ್ತಾರೆ ಎಂಬುದರಲ್ಲಿ. ಅದನ್ನು ನಿಯಂತ್ರಿಸೋದು ನನ್ನ ಕೈಯಲ್ಲಿ ಇಲ್ಲ. ನಾನು ಎಲ್ಲ ರೀತಿಯ ಡ್ರೆಸ್‌ನ ಹಾಕುತ್ತೇನೆ ಎಂದು ಅಮಲಾ ಪೌಲ್ ಮಾತನಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ 1 ಲಕ್ಷ ನೆರವು ನೀಡಿದ ನಟ ವಿನೋದ್ ರಾಜ್

     

    View this post on Instagram

     

    A post shared by Amala Paul (@amalapaul)

    ನನ್ನ ಬಟ್ಟೆಯಿಂದಾಗಿ ವಿದ್ಯಾರ್ಥಿಗಳು ಮುಜುಗರಕ್ಕೆ ಒಳಗಾಗಿಲ್ಲ. ನಾನು ಸಾಂಪ್ರದಾಯಿಕ ಸೇರಿದಂತೆ ಎಲ್ಲಾ ರೀತಿಯ ಉಡುಪುಗಳನ್ನು ಧರಿಸುತ್ತೇನೆ. ಆ ಉಡುಪನ್ನು ಧರಿಸುವ ಮೂಲಕ, ವಿದ್ಯಾರ್ಥಿಗಳಲ್ಲಿ ಅವರ ಡ್ರೆಸ್ಸಿಂಗ್ ಆಯ್ಕೆಗಳ ಬಗ್ಗೆ ವಿಶ್ವಾಸವನ್ನು ತುಂಬಲು ನಾನು ಬಯಸುತ್ತೇನೆ ಎಂದಿದ್ದಾರೆ ಅಮಲಾ. ಈ ಮೂಲಕ ಟ್ರೋಲಿಗರಿಗೂ ನಟಿ ತಿರುಗೇಟು ನೀಡಿದ್ದಾರೆ.

    ಅಂದಹಾಗೆ, ಅಮಲಾ ನಟನೆಯ ‘ಲೆವೆಲ್ ಕ್ರಾಸ್’ (Level Cross) ಎಂಬ ಸಿನಿಮಾ ರಿಲೀಸ್ ಆಗಿದೆ. ಹೆರಿಗೆಯ ನಂತರ ಮತ್ತೆ ಈ ಚಿತ್ರದ ಮೂಲಕ ನಟಿ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

  • ಕಿಚ್ಚನ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಆಗಸ್ಟ್‌ 2ರಂದು ಸುದೀಪ್‌ ಸಿನಿಮಾ ರಿಲೀಸ್‌

    ಕಿಚ್ಚನ ಫ್ಯಾನ್ಸ್‌ಗೆ ಗುಡ್‌ ನ್ಯೂಸ್- ಆಗಸ್ಟ್‌ 2ರಂದು ಸುದೀಪ್‌ ಸಿನಿಮಾ ರಿಲೀಸ್‌

    ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿಮಾನಿಗಳಿಗೆ ಗುಡ್ ನ್ಯೂಸ್‌ವೊಂದು ಸಿಕ್ಕಿದೆ. ಸುದೀಪ್ ನಟಿಸಿರುವ ಸಿನಿಮಾ ಇದೀಗ ರಿಲೀಸ್‌ಗೆ ಸಜ್ಜಾಗಿದೆ. ‘ಹೆಬ್ಬುಲಿ’ (Hebbuli) ಸಿನಿಮಾ ಮರುಬಿಡುಗಡೆಗೆ ಸಜ್ಜಾಗಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಮಾಜಿ ಪತ್ನಿಗೆ ಪ್ರೀತಿ ತೋರಿಸಿದ ಹಾರ್ದಿಕ್‌- ಮತ್ತೆ ಒಂದಾಗ್ತಾರಾ?

    ‘ಮ್ಯಾಕ್ಸ್’ (Max) ಚಿತ್ರಕ್ಕಾಗಿ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಈಗ ಸುದೀಪ್ ನಟನೆಯ ಸೂಪರ್ ಹಿಟ್ ಚಿತ್ರ ‘ಹೆಬ್ಬುಲಿ’ (Hebbuli) ಮತ್ತೊಮ್ಮೆ ಬಿಡುಗಡೆಗೆ ರೆಡಿಯಾಗಿದೆ. ಇದೇ ಆಗಸ್ಟ್ 2ರಂದು ಹೆಬ್ಬುಲಿ ಚಿತ್ರ ತೆರೆಕಾಣಲಿದೆ.

    ಸುದೀಪ್ ಜೊತೆ ಅಮಲಾ ಪೌಲ್ (Amala Paul) ಜೋಡಿಯಾಗಿ ನಟಿಸಿದ್ದರು. ‘ಗಜಕೇಸರಿ’ ಖ್ಯಾತಿಯ ಕೃಷ್ಣ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ನಿರ್ಮಾಪಕ ಉಮಾಪತಿ ನಿರ್ಮಾಣ ಮಾಡಿದ್ದರು. 7 ವರ್ಷಗಳ ನಂತರ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಈಗಾಗಲೇ ಜಾಕಿ, ಎ, ರಾಬರ್ಟ್, ಶಾಸ್ತ್ರಿ ಸಿನಿಮಾಗಳು ಮರುಬಿಡುಗಡೆಯಾಗಿ ಸದ್ದು ಮಾಡಿತ್ತು. ಹಾಗಾಗಿ ಕಿಚ್ಚನ ಸಿನಿಮಾ ರೀ ರಿಲೀಸ್ ಆಗಲಿದೆ.

    ಇನ್ನೂ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗುವ ನಿರೀಕ್ಷೆಯಿದೆ. ಅಕ್ಟೋಬರ್ ಕೊನೆಯ ವಾರದಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮ ಬರುತ್ತಿರುವ ಕಾರಣ ಅದಕ್ಕೂ ‘ಮ್ಯಾಕ್ಸ್’ ಚಿತ್ರ ಅಬ್ಬರಿಸಲಿದೆ ಎನ್ನಲಾಗಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಗಂಡು ಮಗುವಿಗೆ ಜನ್ಮ ನೀಡಿದ ‘ಹೆಬ್ಬುಲಿ’ ನಟಿ

    ಗಂಡು ಮಗುವಿಗೆ ಜನ್ಮ ನೀಡಿದ ‘ಹೆಬ್ಬುಲಿ’ ನಟಿ

    ನ್ನಡದ ‘ಹೆಬ್ಬುಲಿ’ (Hebbuli) ಸಿನಿಮಾದ ನಟಿ ಅಮಲಾ ಪೌಲ್ (Amala Paul) ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಮಗುವಿನ ಹೆಸರನ್ನು ಕೂಡ ರಿವೀಲ್ ಮೀಡಿದ್ದಾರೆ. ಇದನ್ನೂ ಓದಿ:‘ಏಕಂ’ ವೆಬ್ ಸಿರೀಸ್ ರಿಲೀಸ್‌ ಬಗ್ಗೆ ಮಾಹಿತಿ ಹಂಚಿಕೊಂಡ ಸಿಂಪಲ್‌ ಸ್ಟಾರ್

    ‘ಜೂನ್ 11ರಂದು ಜನಿಸಿದ ಪವಾಡ’ ಎಂದು ನಟಿ ಅಡಿಬರಹ ನೀಡಿದ್ದು, ಗಂಡು ಮಗುವಿಗೆ ‘ಇಲೈ’ ಎಂದು ಹೆಸರಿಟ್ಟಿದ್ದಾರೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಗುವನ್ನು ಹಿಡಿದು ಬರುವಾಗ ಮನೆಯಲ್ಲಿ ಅಮಲಾರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

     

    View this post on Instagram

     

    A post shared by Jagat Desai (@j_desaii)

    ಕಳೆದ ವರ್ಷ ನವೆಂಬರ್‌ನಲ್ಲಿ ಕೊಚ್ಚಿಯಲ್ಲಿ ಉದ್ಯಮಿ ಜಗತ್ ದೇಸಾಯಿ (Jagat Desai) ಜೊತೆ ಅಮಲಾ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುನ್ನುಡಿ ಬರೆದರು.

    ಕನ್ನಡದ ‘ಹೆಬ್ಬುಲಿ’ ಸಿನಿಮಾದಲ್ಲಿ ಸುದೀಪ್‌ಗೆ (Sudeep) ನಾಯಕಿಯಾಗಿ ಅಮಲಾ ನಟಿಸಿದ್ದರು. ಇತ್ತೀಚೆಗೆ ರಿಲೀಸ್‌ ಆದ ‘ಆಡುಜೀವಿತಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.