Tag: Heavy vehicle

  • ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ

    ಶಿವಮೊಗ್ಗ: ಭಾರೀ ಮಳೆಯಿಂದ (Rain) ಭೂ ಕುಸಿತ ಸಾಧ್ಯತೆ ಹಿನ್ನೆಲೆ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ (Agumbe Ghat) ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

    ಆಗುಂಬೆ ಘಾಟಿ 169ಎ ಹೆದ್ದಾರಿ ರಸ್ತೆಯಲ್ಲಿ ಸಂಚಾರ ಬಂದ್ ಮಾಡಿದ್ದು, ಭಾರೀ ವಾಹನಗಳ ಓಡಾಟಕ್ಕೆ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ಮಲ್ಪೆ – ಆಗುಂಬೆ ಹೆದ್ದಾರಿ ರಸ್ತೆಯಾಗಿರುವ ಆಗುಂಬೆ ಘಾಟಿಯಲ್ಲಿ ಭಾರೀ ಮಳೆಯಿಂದ ಭೂ ಕುಸಿತ ಸಾಧ್ಯತೆ ಹಿನ್ನೆಲೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಆದೇಶ ನೀಡಿದ್ದಾರೆ. ಇದನ್ನೂ ಓದಿ: 100 ಕೋಟಿ ಪ್ರಯಾಣಿಕರನ್ನ ಸೇಫ್ ಲ್ಯಾಂಡ್ ಮಾಡಿದ್ದ ವಿಮಾನಕ್ಕೆ ಏನಾಯ್ತು?

    ಭಾರೀ ವಾಹನಗಳು ಉಡುಪಿ – ಕುಂದಾಪುರ – ಸಿದ್ದಾಪುರ – ಮಾಸ್ತಿಕಟ್ಟೆ – ತೀರ್ಥಹಳ್ಳಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಿದ್ದು, ಆಗುಂಬೆ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: 40 ರೂ. ಬದಲಿಗೆ 34,000 ರೂ. ಪೇ ಮಾಡಿದ ಪ್ರಯಾಣಿಕ – ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

  • ಆಗುಂಬೆ ಘಾಟಿಯಲ್ಲಿ ನಾಳೆಯಿಂದ ಭಾರಿ ವಾಹನಗಳ ಸಂಚಾರ ನಿಷೇಧ

    ಆಗುಂಬೆ ಘಾಟಿಯಲ್ಲಿ ನಾಳೆಯಿಂದ ಭಾರಿ ವಾಹನಗಳ ಸಂಚಾರ ನಿಷೇಧ

    ಶಿವಮೊಗ್ಗ: ಮಲೆನಾಡು (Malenadu) ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ (Rain) ಹಿನ್ನೆಲೆ ಆಗುಂಬೆ ಘಾಟಿಯಲ್ಲಿ (Agumbe Ghat) ನಾಳೆಯಿಂದ (ಜೂ.27) ಭಾರಿ ವಾಹನ (Heavy Vehicle) ಸಂಚಾರವನ್ನು ನಿಷೇಧಿಸಲಾಗಿದೆ.

    ನಿರಂತರ ಮಳೆ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಯಿದ್ದು, ಜೂ.27ರಿಂದ ಸೆಪ್ಟೆಂಬರ್ 15ರವರೆಗೆ ಭಾರಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಬದಲಿ ಮಾರ್ಗ ಸೂಚಿಸಿ ಶಿವಮೊಗ್ಗ ಡಿಸಿ ಆದೇಶ ಹೊರಡಿಸಿದ್ದಾರೆ. ಬದಲಿ ಮಾರ್ಗವನ್ನು ಗುರುತಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ನೀಡಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ಮಳೆ- ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿಷೇಧ

    ಜಿಲ್ಲೆ ಸೇರಿದಂತೆ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ತೀರ್ಥಹಳ್ಳಿ-ಉಡುಪಿ ಮಾರ್ಗದಲ್ಲಿ ಸಂಚರಿಸುವ ಭಾರಿ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ. ತೀರ್ಥಹಳ್ಳಿ-ಮಾಸ್ತಿಕಟ್ಟೆ, ಸಿದ್ದಾಪುರ-ಕುಂದಾಪುರ ಉಡುಪಿ ಮಾರ್ಗದಲ್ಲಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರಾಜ್ಯದ ಸಂಸದರ ಜೊತೆ ಸಿಎಂ-ಡಿಸಿಎಂ ಸಭೆ

  • ವಾಹನ ಸವಾರರಿಗೆ ಗುಡ್‌ನ್ಯೂಸ್ – ಪೀಣ್ಯ ಫ್ಲೈಓವರ್‌ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್

    ವಾಹನ ಸವಾರರಿಗೆ ಗುಡ್‌ನ್ಯೂಸ್ – ಪೀಣ್ಯ ಫ್ಲೈಓವರ್‌ನಲ್ಲಿ ಹೆವಿ ವೆಹಿಕಲ್ ಸಂಚಾರಕ್ಕೆ ಗ್ರೀನ್ ಸಿಗ್ನಲ್

    – ಫೆಬ್ರವರಿ ಮೊದಲ ವಾರದಲ್ಲಿ ವಾಹನ ಸಂಚಾರಕ್ಕೆ ಸಿಗ್ನಲ್ ಕೊಟ್ಟ ಐಐಎಸ್‌ಸಿ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಿಂದ (Bengaluru) ರಾಜ್ಯದ 22 ಜಿಲ್ಲೆಗಳು ಸೇರಿದಂತೆ ಗೋವಾ, ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್ (Peenya Flyover) ಮೇಲೆ ಸಂಚರಿಸುವ ವಾಹನ ಸವಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಹೆವಿ ವಾಹನಗಳ (Heavy Vehicle) ಸಂಚಾರಕ್ಕೆ ಫ್ಲೈಓವರ್ ಫಿಟ್ ಆಗಿರುವ ಬಗ್ಗೆ ಐಐಎಸ್‌ಸಿ (IISC) ತಜ್ಞರ ವರದಿ ಎನ್‌ಹೆಚ್‌ಎಐ ಕೈ ಸೇರಿದೆ.

    ಬೆಂಗಳೂರಿನಿಂದ ರಾಜ್ಯದ ಶೇ.80ರಷ್ಟು ಜಿಲ್ಲೆಗಳಿಗೆ ಸಂಪರ್ಕಿಸುವ ಪೀಣ್ಯ ಫ್ಲೈಓವರ್‌ಗೆ ಹಿಡಿದಿದ್ದ ಗ್ರಹಣ ದೂರಾಗುವ ಸಂದರ್ಭ ಬಂದಿದೆ. ಇದೇ ಫೆಬ್ರವರಿ ಮೊದಲ ವಾರದಿಂದಲೇ ಹೆವಿ ವೆಹಿಕಲ್ ಓಡಾಟಕ್ಕೆ ಸಂಚಾರ ಮುಕ್ತವಾಗುವ ಸಾಧ್ಯತೆ ಇದೆ. ಫ್ಲೈಓವರ್ ಲೋಡ್ ಟೆಸ್ಟಿಂಗ್ ಬಳಿಕ ಫ್ಲೈಓವರ್ ಫಿಟ್ನೆಸ್ ಬಗ್ಗೆ ಪರೀಕ್ಷೆ ಮಾಡಿದ್ದ ಐಐಎಸ್‌ಸಿ ತಜ್ಞರ ತಂಡ ವರದಿ ಸಿದ್ಧಪಡಿಸಿ ಎನ್‌ಹೆಚ್‌ಎಐ ಅಧಿಕಾರಿಗಳಿಗೆ ರಿಪೋರ್ಟ್ ನೀಡಿದೆ. ಇದನ್ನೂ ಓದಿ: ಕೆ.ಎನ್.ರಾಜಣ್ಣ, ಶಾಮನೂರು ಶಿವಶಂಕರಪ್ಪಗೆ ಕೈ ಹೈಕಮಾಂಡ್ ವಾರ್ನಿಂಗ್

    2 ವರ್ಷದಿಂದ ಹೆವಿ ವಾಹನಗಳ ಸಂಚಾರಕ್ಕೆ ಹೇರಿದ್ದ ನಿರ್ಬಂಧ ಸದ್ಯ ಇದೇ ಫೆಬ್ರವರಿ ಮೊದಲ ವಾರದಲ್ಲಿ ತೆರವು ಮಾಡುವ ಸಾಧ್ಯತೆ ಇದೆ. ಫ್ಲೈಓವರ್ ಎರಡು ಪಿಲ್ಲರ್‌ಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದಾಗಿ ಹೆವಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಮಸ್ಯೆ ಪತ್ತೆಗೆ ಮುಂದಾಗಿದ್ದ ಐಐಎಸ್‌ಸಿ ತಜ್ಞರು ಫ್ಲೈಓವರ್ ಕೇಬಲ್‌ಗಳು ಹಾಳಾಗಿದ್ದ ಕಾರಣವನ್ನು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಪಿಲ್ಲರ್‌ಗಳಿಗೆ ಅಳವಡಿಕೆ ಮಾಡಿದ್ದ ಕೇಬಲ್‌ಗಳು ತುಕ್ಕು ಹಿಡಿದಿದ್ದೆ ದೋಷಕ್ಕೆ ಕಾರಣ ಎಂಬ ರಿಪೋರ್ಟ್ ನೀಡಿವೆ. ಇದನ್ನೂ ಓದಿ: ಕೆರೆಗೋಡು ಹನುಮ ಧ್ವಜ ಪ್ರಕರಣ – ಪಿಡಿಓ ಅಮಾನತು

    ಕೇಬಲ್‌ಗಳಿಗೆ ನೀರು ತಗುಲಿದ್ದ ಕಾರಣ ಸಂಪೂರ್ಣ ಕೇಬಲ್ ತುಕ್ಕು ಹಿಡಿದಿದ್ದ ಪರಿಣಾಮ ಪಿಲ್ಲರ್‌ಗಳಲ್ಲಿ ಅಳವಡಿಕೆ ಮಾಡಿದ್ದ ಕೇಬಲ್ ಹಾಳಾಗಿತ್ತು. ಸದ್ಯ ಈಗ ಆ ಎಲ್ಲವನ್ನು ತೆರವು ಮಾಡಿ ಈ ಹಿಂದೆ ಅಳವಡಿಕೆ ಮಾಡಿದ್ದ ಕೇಬಲ್‌ಗಳಿಗಿಂತ 4 ಪಟ್ಟು ಸದೃಢವಾದ ಕೇಬಲ್ ಅಳವಡಿಕೆ ಮಾಡುವುದರ ಜೊತೆಗೆ ತುಕ್ಕು ಹಿಡಿಯದಂತೆ ಗ್ರೀಸ್ ಇರುವ ಕೇಬಲ್ ಅನ್ನು ಅಳವಡಿಕೆ ಮಾಡಲಾಗಿದೆ. ಜೊತೆಗೆ ಮುಂದೆ ಈ ರೀತಿ ಸಮಸ್ಯೆಯಾದರೆ ವಾಹನ ಓಡಾಟ ನಿಲ್ಲಿಸದೇ ಹಾಗೇ ಸರಿ ಮಾಡಬಹುದಾದ ಕ್ಷಮತೆ ಕೂಡ ಕೇಬಲ್‌ಗೆ ಇದೆ ಎಂದು ಐಐಎಸ್‌ಸಿ ವರದಿ ನೀಡಿದೆ. ಇದನ್ನೂ ಓದಿ: ವಿಷ್ಣುವಿನ 11ನೇ ಅವತಾರವಾಗಲು ಮೋದಿ ಪ್ರಯತ್ನಿಸ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

    ಸದ್ಯ ಇದೇ ವಾರ ಐಐಎಸ್‌ಸಿ ತಜ್ಞರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆ ಮಾಡಲಿದ್ದು, ಸಭೆ ಬಳಿಕ ಸಂಚಾರ ಮುಕ್ತ ಯಾವಾಗ ಎಂಬ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ. ಕಳೆದೆರಡು ವರ್ಷಗಳಿಂದ ಟ್ರಾಫಿಕ್‌ನಿಂದ ಪರದಾಡುತ್ತಿದ್ದ ಹೆವಿ ವಾಹನಗಳಿಗೆ ಸದ್ಯ ಗುಡ್‌ನ್ಯೂಸ್ ಸಿಕ್ಕಿದ್ದು, ಇನ್ಮುಂದೆ ಟ್ರಾಫಿಕ್ ಕಿರಿಕಿರಿ ಇಲ್ಲದೆ ಸಂಚಾರ ಮಾಡಬಹುದಾಗಿದೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಕಾಂಗ್ರೆಸ್ ಸರ್ಕಾರ ತೆಗೆಯುವ ಗ್ಯಾರಂಟಿ: ಬೊಮ್ಮಾಯಿ

  • ಶಿರಾಡಿ ಘಾಟ್‍ನಲ್ಲಿ ಮತ್ತೆ ಭೂಕುಸಿತ – ಭಾರೀ ವಾಹನಗಳ ಸಂಚಾರ ನಿಷೇಧ

    ಶಿರಾಡಿ ಘಾಟ್‍ನಲ್ಲಿ ಮತ್ತೆ ಭೂಕುಸಿತ – ಭಾರೀ ವಾಹನಗಳ ಸಂಚಾರ ನಿಷೇಧ

    ಹಾಸನ: ಶಿರಾಡಿ ಘಾಟ್‍ನಲ್ಲಿ ಮತ್ತೆ ಭೂಕುಸಿತವಾಗಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧ ಮಾಡಲಾಗಿದೆ.

    ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪದ ರಸ್ತೆ ವಾರದ ಹಿಂದೆ ಸ್ವಲ್ಪ ಪ್ರಮಾಣದಲ್ಲಿ ಕುಸಿದಿತ್ತು. ಈ ಹಿನ್ನೆಲೆ ಲೋಕೋಪಯೋಗಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಚಿವರು ಭೇಟಿ ನೀಡಿದ ನಾಲ್ಕನೇ ದಿನಕ್ಕೆ ಮತ್ತೆ ಭೂಕುಸಿತ ಕಾಣಿಸಿಕೊಂಡಿದೆ.

    ಇಂದು ಮಧ್ಯಾಹ್ನದ ವೇಳೆಗೆ ಮತ್ತೆ ಭೂಕುಸಿತವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹಾಕಿದ್ದಾರೆ. ಲಘು ವಾಹನಗಳನ್ನು ಏಕ ಮುಖ ಸಂಚಾರದಂತೆ ಚಲಿಸಲು ಅವಕಾಶ ನೀಡಿದ್ದಾರೆ. ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ್ತೆ ರಸ್ತೆ ಕುಸಿಯುತ್ತಿದ್ದು, ಆತಂಕ ಹೆಚ್ಚಾಗಿದೆ.

    ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ರಸ್ತೆ ಕುಸಿದಿತ್ತು. ಈ ರಾಷ್ಟ್ರೀಯ ಹೆದ್ದಾರಿ 75 ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇದನ್ನೂ ಓದಿ: ಯುವಕರಿಗೆ ಪೊಲೀಸ್ ಕೆಲ್ಸ – ಕಲರ್ ಕಲರ್ ಕಥೆ ಕಟ್ಟಿದ್ದ ನಕಲಿ ಪೊಲೀಸಪ್ಪ ಪರಾರಿ 

    Live Tv
    [brid partner=56869869 player=32851 video=960834 autoplay=true]

  • ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ಬಂದ್

    ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ಬಂದ್

    – ಜೂ.15 ರಿಂದ ಅ.15ರ ವರೆಗೆ ಸಂಚಾರಕ್ಕೆ ಬ್ರೇಕ್

    ಶಿವಮೊಗ್ಗ: ಮಲೆನಾಡಿನ ಭಾಗದಲ್ಲಿ ಅತಿಯಾದ ಮಳೆಯಾಗುತ್ತಿದೆ. ಹೀಗಾಗಿ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ಭಾರೀ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಿಷೇಧಿಸಿದ್ದಾರೆ.

    ಅನೇಕ ದಿನಗಳಿಂದ ಮಲೆನಾಡಿನ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ ಆಗುಂಬೆ ಘಾಟಿಯಲ್ಲಿ ಅಧಿಕ ಭಾರದ ವಾಹನಗಳು ಸಂಚಾರ ನಡೆಸಿದರೆ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಒಂದು ವೇಳೆ ರಸ್ತೆ ಕುಸಿದು ಬಿದ್ದರೆ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ. ಜೊತೆಗೆ ಸಾರ್ವಜನಿಕರ ಆಸ್ತಿ ಮತ್ತು ಪ್ರಾಣ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ.

    ರಾಷ್ಟ್ರೀಯ ಹೆದ್ದಾರಿ 169 ಎ ರಸ್ತೆಯ ಮಾರ್ಗದಲ್ಲಿ ಅಂದರೆ ಶಿವಮೊಗ್ಗ-ತೀರ್ಥಹಳ್ಳಿ, ಉಡುಪಿ-ಮಂಗಳೂರು ರಸ್ತೆಯ ಆಗುಂಬೆ ಘಾಟಿಯಲ್ಲಿ ಮಳೆಗಾಲ ಮುಗಿಯುವವರೆಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಅಂದರೆ ಜೂನ್ 15 ರಿಂದ ಅಕ್ಟೋಬರ್ 15 ರವರೆಗೆ 12 ಟನ್‍ಗಿಂತ ಅಧಿಕ ಭಾರದ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ನಿಷೇಧಿಸಿ ಆದೇಶಿಸಿದ್ದಾರೆ.

    ಪರ್ಯಾಯ ಮಾರ್ಗಗಳು: 12 ಟನ್‍ಗಿಂತ ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ.
    * ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ-ಕೆರೆಕಟ್ಟೆ ಕಾರ್ಕಳ-ಉಡುಪಿ-ಮಂಗಳೂರು
    * ಶಿವಮೊಗ್ಗ-ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹುಲಿಕಲ್-ಹೊಸಂಗಡಿ-ಸಿದ್ದಾಪುರ-ಉಡುಪಿ

  • 2 ತಿಂಗಳ ಬಳಿಕ ಸಂಚಾರಕ್ಕೆ ಮುಕ್ತವಾಗಿದ್ದ ತುಂಗಾ ನದಿ ಹಳೆ ಸೇತುವೆ ಮತ್ತೆ ಬಂದ್

    2 ತಿಂಗಳ ಬಳಿಕ ಸಂಚಾರಕ್ಕೆ ಮುಕ್ತವಾಗಿದ್ದ ತುಂಗಾ ನದಿ ಹಳೆ ಸೇತುವೆ ಮತ್ತೆ ಬಂದ್

    ಶಿವಮೊಗ್ಗ: 2 ತಿಂಗಳ ಬಳಿಕ ವಾಹನ ಸಂಚಾರಕ್ಕೆ ಮುಕ್ತವಾಗಿದ್ದ ನಗರದ ಶಿವಮೊಗ್ಗ-ಬೆಂಗಳೂರು ಮಾರ್ಗ ರಸ್ತೆಯ ತುಂಗಾ ನದಿ ಹಳೆ ಸೇತುವೆ ಮತ್ತೆ ಬಂದ್ ಆಗಿದೆ.

    ಭಾರಿ ವಾಹನಗಳು ಸಂಚಾರ ತಡೆಗೆ ಸೇತುವೆ ಎರಡೂ ಭಾಗದಲ್ಲಿ ಆ್ಯಂಗ್ಲರ್ ಅಳವಡಿಕೆ ಮಾಡಲಾಗಿತ್ತು. ಆದರೆ ಅಳವಡಿಸಲಾಗಿದ್ದ ಆ್ಯಂಗ್ಲರ್ ಗೆ ಗೂಡ್ಸ್ ಆಟೋ ಡಿಕ್ಕಿ ಹೊಡೆದಿರುವ ಪರಿಣಾಮ ಆ್ಯಂಗ್ಲರ್ ಬೆಂಡ್ ಆಗಿದ್ದು, ಸೇತುವೆ ಮೇಲೆ ವಾಹನ ಸಂಚಾರ ಪುನಃ ಸ್ಥಗಿತಗೊಂಡಿದೆ.

    ಮಳೆಗೆ ಹಳೆ ಸೇತುವೆ ಮುಂಭಾಗ ರಸ್ತೆಯಲ್ಲಿ ಸೀಳು ಬಿಟ್ಟಿತ್ತು. ಆದ್ದರಿಂದ ದುರಸ್ಥಿ ಕಾಮಗಾರಿ ನಡೆದ 2 ತಿಂಗಳ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅಪಘಾತದ ಬಳಿಕ ಸಂಚಾರ ಸ್ಥಗಿತಗೊಳಿಸಿದ್ದು, ದಿಢೀರ್ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

  • ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಮೇಲೆ ಬೃಹತ್ ವಾಹನ ಸಂಚಾರಕ್ಕೆ ನಿಷೇಧ

    ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಮೇಲೆ ಬೃಹತ್ ವಾಹನ ಸಂಚಾರಕ್ಕೆ ನಿಷೇಧ

    ಬೆಂಗಳೂರು: ನಗರದ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಮೇಲೆ ಬಸ್ ಮತ್ತು ಬೃಹತ್ ವಾಹನಗಳ ಸಂಚಾರವನ್ನು ಸೋಮವಾರ ಸಂಜೆ 6 ಗಂಟೆಯಿಂದ ನಿಷೇಧಿಸಲಾಗಿದೆ.

    ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಸಿಲ್ಕ್ ಬೋರ್ಡ್ ಗೆ ಸಂಪರ್ಕ ಕಲ್ಪಿಸುವ ಮೇಲ್ಸತುವೆ ಇದಾಗಿದ್ದು, ಈ ಸೇತುವೆ ನಿರ್ಮಾಣವಾಗಿ 8 ವರ್ಷಗಳಾಗಿದೆ. ಆದ್ದರಿಂದ ನಿರ್ವಹಣೆಗಾಗಿ ಬೃಹತ್ ವಾಹನಗಳಿಗೆ ತಡೆ ಏರಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ನಿರ್ವಹಣೆ ನಡೆಯಲಿದೆ.

    ಸೇತುವೆ ನಿರ್ವಹಣೆಗಾಗಿ ಬೃಹತ್ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಿಲ್ಲ. ಲಘು ವಾಹನಗಳಾದ ಕಾರು ಮತ್ತು ದ್ವಿಚಕ್ರ ವಾಹನಗಳು ಸಂಚಾರ ಎಂದಿನಂತೆ ನಡೆಯಲಿದೆ. ಈ ಕುರಿತು ಬಿಇಟಿಎಲ್ ಪ್ರಕಟಣೆ ನೀಡಿದ್ದು, ಪ್ಲೈ ಓವರ್ ಮೇಲೆ ಯಾವುದೇ ಅಪಾಯವಿಲ್ಲ, ಕೇವಲ ನಿರ್ವಹಣೆಗಾಗಿಯೇ ಬೃಹತ್ ವಾಹನಗಳಿಗೆ ಪ್ರವೇಶ ನೀಡಿಲ್ಲವೆಂದು ತಿಳಿಸಿದೆ.

    ಮೇಲ್ಸತುವೆ ಮೇಲಿನ ರಸ್ತೆ ಮತ್ತು ಜಾಯಿಂಟ್ ಗಳ ನಿರ್ವಹಣೆ ಹಾಗೂ ಪಾಥ್ ಹೋಲ್ಸ್ ನಿರ್ವಹಣೆಯ ನಡೆಯಲಿದೆಯೆಂದು ಪ್ರಕಟಣೆಯಲ್ಲಿ ಬಿಇಟಿಎಲ್ ನ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com