Tag: heavy rain

  • ಟಿಬಿ ಡ್ಯಾಂನ 26 ಗೇಟ್‌ಗಳಿಂದ 90,893 ಕ್ಯೂಸೆಕ್ ನೀರು ರಿಲೀಸ್ – ಮುಳುಗಡೆ ಭೀತಿಯಲ್ಲಿ ಹಂಪಿ ಸ್ಮಾರಕಗಳು

    ಟಿಬಿ ಡ್ಯಾಂನ 26 ಗೇಟ್‌ಗಳಿಂದ 90,893 ಕ್ಯೂಸೆಕ್ ನೀರು ರಿಲೀಸ್ – ಮುಳುಗಡೆ ಭೀತಿಯಲ್ಲಿ ಹಂಪಿ ಸ್ಮಾರಕಗಳು

    ಕೊಪ್ಪಳ: ಮಲೆನಾಡಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಟಿಬಿ ಡ್ಯಾಂಗೆ (TB Dam) ಒಳಹರಿವು ಹೆಚ್ಚಾಗಿದೆ. ಹೀಗಾಗಿ ಡ್ಯಾಂನ 26 ಗೇಟ್‌ಗಳಿಂದ 90,893 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಹಂಪಿ (Hampi) ಸ್ಮಾರಕಗಳಿಗೆ ಮುಳುಗಡೆ ಭೀತಿ ಎದುರಾಗಿದೆ.ಇದನ್ನೂ ಓದಿ: ಮಳೆಯಬ್ಬರ – ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

    ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು, ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ ಸದ್ಯ ಜಲಾಶಯದಿಂದ 90,893 ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಜಲಾಶಯದ 33 ಗೇಟ್‌ಗಳ ಪೈಕಿ 26 ಕ್ರಸ್ಟ್ ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತಿದೆ.

    ಏಕಾಏಕಿ ನೀರನ್ನು ಬಿಡುಗಡೆ ಮಾಡಿದ್ದು, ತುಂಗಭದ್ರಾ ನದಿ (Tungabhadra River) ಪಾತ್ರದಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ. ಹೀಗಾಗಿ ನದಿ ಪಾತ್ರದ ಗ್ರಾಮಗಳ ಜನರು ನದಿ ತೀರಕ್ಕೆ ಹೋಗದಂತೆ ಟಿಬಿ ಬೋರ್ಡ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾದರೆ, ಇನ್ನಷ್ಟು ಪ್ರಮಾಣದ ನೀರನ್ನು ನದಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸದ್ಯ 90,893 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಿರುವುದರಿಂದ ಹಂಪಿಯ ಕೆಲ ಸ್ಮಾರಕಗಳಿಗೆ ಮುಳುಗಡೆ ಭೀತಿ ಎದುರಾಗಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

  • ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ

    ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ

    ರಾಯಚೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ (Heavy Rain) ಹಿನ್ನೆಲೆ ನವರಂಗ್ ದರ್ವಾಜ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಪಕ್ಕದ ಕಟ್ಟಡದ ಮೇಲೆ ವಾಲಿ ಭಾರೀ ದುರಂತವೊಂದು ತಪ್ಪಿದೆ.

    ಸಿವಿಲ್ ಎಂಜಿನಿಯರ್ ಮಹ್ಮದ್ ದಸ್ತಗೀರ್ ಎಂಬುವವರ ಕಟ್ಟಡ ಮಹ್ಮದ್ ಸಿರಾಜ್ ಎಂಬುವವರ ಮನೆಯ ಮೇಲೆ ವಾಲಿದೆ. ಸತತ ಮಳೆ ಹಾಗೂ ಚರಂಡಿ ನೀರಿನಿಂದ ಕಟ್ಟಡದ ಬುನಾದಿ ಕುಸಿದಿದೆ ಎನ್ನಲಾಗಿದ್ದು, ಕಟ್ಟಡದ ಎಡಭಾಗ ಕುಸಿದು ಪಕ್ಕದ ಮನೆಯ ಮೇಲೆ ವಾಲಿದೆ. ಒಂದು ವೇಳೆ ಬಲಭಾಗದ ಕಡೆ ಮನೆ ವಾಲಿದ್ದರೆ ಭಾರೀ ದುರಂತವೇ ಸಂಭವಿಸುತ್ತಿತ್ತು.ಇದನ್ನೂ ಓದಿ: ಟೇಕಾಫ್‌ ಆದ ಕೆಲಹೊತ್ತಲ್ಲೇ ಅಮೆರಿಕ ಏರ್‌ಲೈನ್ಸ್‌ ವಿಮಾನದಲ್ಲಿ ಬೆಂಕಿ

    ಸುಮಾರು 14 ವರ್ಷಗಳ ಹಿಂದೆ 22*24 ವಿಸ್ತೀರ್ಣದಲ್ಲಿ ಕಟ್ಟಿರುವ ನಾಲ್ಕು ಅಂತಸ್ತಿನ ಕಟ್ಟಡ ಇದಾಗಿದ್ದು, ಬೀಳುವ ಹಂತಕ್ಕೆ ತಲುಪಿದೆ. ಬಾಡಿಗೆ ನೀಡಲು ಪುಟ್ಟ ಜಾಗದಲ್ಲಿ ನಾಲ್ಕು ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗಿದ್ದು, ರಸ್ತೆ ಪಕ್ಕದಲ್ಲೇ ಇರುವುದರಿಂದ ಸಾರ್ವಜನಿಕರು ಆತಂಕದಲ್ಲಿದ್ದಾರೆ.

    ಸದ್ಯ ಸ್ಥಳಕ್ಕೆ ಮಹಾನಗರ ಪಾಲಿಕೆ ಪ್ರಭಾರಿ ಅಧ್ಯಕ್ಷ ಸಾಜಿದ್ ಸಮೀರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಕೂಡಲೇ ತೆರವು ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದು, ಕಟ್ಟಡದ ಮಾಲೀಕ ಸ್ವಯಂ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಕಟ್ಟಡಕ್ಕೆ ಮೂರು ಕಬ್ಬಿಣದ ಪಿಲ್ಲರ್ ಅಳವಡಿಸಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಆಗಿನ ನಗರಸಭೆ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಹೇಗೆ ಅನುಮತಿ ನೀಡಿದ್ದರು ಎನ್ನುವ ಅನುಮಾನ ಮೂಡಿಸಿದೆ.ಇದನ್ನೂ ಓದಿ: ಇನ್ಸ್ಟಾಗ್ರಾಂ ಲವ್, ಸೆಕ್ಸ್, ದೋಖಾ ಆರೋಪ – ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

  • ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ – ದೂದ್‌ಗಂಗಾ ನದಿ ತೀರದಲ್ಲಿ ಹೈಅಲರ್ಟ್

    ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ – ದೂದ್‌ಗಂಗಾ ನದಿ ತೀರದಲ್ಲಿ ಹೈಅಲರ್ಟ್

    ಚಿಕ್ಕೋಡಿ: ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟ ಪ್ರದೇಶದಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮಹಾರಾಷ್ಟ್ರದ ಜಲಾಶಯಗಳು ಭರ್ತಿ ಹಂತ ತಲುಪಿವೆ. ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದೆ.

    ಕೊಲ್ಲಾಪುರ ಜಿಲ್ಲೆಯ ರಾಧಾನಗರಿ ಜಲಾಶಯ (Radhanagari Dam) ಸಂಪೂರ್ಣ ಭರ್ತಿ ಹಿನ್ನಲೆಯಲ್ಲಿ ದೂದ್‌ಗಂಗಾ ನದಿ (Doodh Ganga River) ಮೂಲಕ ಕೃಷ್ಣಾ ನದಿಗೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 8.5 ಟಿಎಂಸಿ ಸಾಮರ್ಥ್ಯದ ರಾಧಾನಗರಿ ಜಲಾಶಯದಿಂದ 4 ಗೇಟ್‌ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರು ದೂದ್‌ಗಂಗಾ ನದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಇನ್ಸ್ಟಾದಲ್ಲಿ ಬೆಂಗಳೂರಿಗರ ಬಗ್ಗೆ ನಾಲಗೆ ಹರಿಬಿಟ್ಟ ಒಡಿಶಾ ಯುವತಿ

    ಹೆಚ್ಚಿನ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ದೂದ್‌ಗಂಗಾ ನದಿ ತೀರದ ಜನರು ನದಿ ಪಾತ್ರಕ್ಕೆ ಇಳಿಯದಂತೆ ತಾಲೂಕಾಡಳಿತದಿಂದ ಸೂಚನೆ ನೀಡಲಾಗಿದೆ. ಇನ್ನೂ ಕೃಷ್ಣಾ ನದಿಗೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ 58 ಸಾವಿರ ಕ್ಯೂಸೆಕ್ ನೀರು ಒಳ ಹರಿವು ದಾಖಲಾಗಿದೆ.

  • ರಾಜ್ಯದ ಹವಾಮಾನ ವರದಿ 26-07-2025

    ರಾಜ್ಯದ ಹವಾಮಾನ ವರದಿ 26-07-2025

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿಯಲಿದೆ. ಇಂದೂ ಸಹ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮುಂದಿನ ಐದಾರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಭಾಗಗಳಾದ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ಕೊಡಗು, ಹಾಸನ, ಬೆಳಗಾವಿ, ಕಲಬುರಗಿ ಭಾಗಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ. ಬೆಂಗಳೂರಿನ ಕೆಲವೆಡೆ ಸಂಜೆ ವೇಳೆಗೆ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ
    ಬೆಂಗಳೂರು: 26-20
    ಮಂಗಳೂರು: 25-24
    ಶಿವಮೊಗ್ಗ: 23-21
    ಬೆಳಗಾವಿ: 23-21
    ಮೈಸೂರು: 25-21

    ಮಂಡ್ಯ: 26-21
    ಮಡಿಕೇರಿ: 20-18
    ರಾಮನಗರ: 27-21
    ಹಾಸನ: 22-18
    ಚಾಮರಾಜನಗರ: 26-22
    ಚಿಕ್ಕಬಳ್ಳಾಪುರ: 26-20

    ಕೋಲಾರ: 28-21
    ತುಮಕೂರು: 27-21
    ಉಡುಪಿ: 26-23
    ಕಾರವಾರ: 27-25
    ಚಿಕ್ಕಮಗಳೂರು: 20-18
    ದಾವಣಗೆರೆ: 25-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 25-21
    ಹಾವೇರಿ: 25-22
    ಬಳ್ಳಾರಿ: 28-23
    ಗದಗ: 26-22
    ಕೊಪ್ಪಳ: 27-23

    weather

    ರಾಯಚೂರು: 28-24
    ಯಾದಗಿರಿ: 27-24
    ವಿಜಯಪುರ: 26-23
    ಬೀದರ್: 25-23
    ಕಲಬುರಗಿ: 27-23
    ಬಾಗಲಕೋಟೆ: 26-23

  • ಬೀದರ್ | ಸತತ 1 ಗಂಟೆ ಧಾರಾಕಾರ ಮಳೆ – ರಸ್ತೆಗಳು ಸಂಪೂರ್ಣ ಜಲಾವೃತ

    ಬೀದರ್ | ಸತತ 1 ಗಂಟೆ ಧಾರಾಕಾರ ಮಳೆ – ರಸ್ತೆಗಳು ಸಂಪೂರ್ಣ ಜಲಾವೃತ

    ಬೀದರ್: ಸತತ ಒಂದು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಗಡಿಜಿಲ್ಲೆ ಬೀದರ್‌ನಲ್ಲಿ (Bidar) ಅವಾಂತರ ಸೃಷ್ಟಿಯಾಗಿದೆ.

    ಧಾರಾಕಾರ ಮಳೆಗೆ ಬೀದರ್ ನಗರದಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಮಳೆಯ ಅಬ್ಬರಕ್ಕೆ ನಗರ ಪ್ರಮುಖ ರಸ್ತೆಗಳು ಕೆರೆಯಂತಾಗಿವೆ. ಬೀದರ್ ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಕಮಠಾಣ ಸ್ಕೂಲ್‌ವರೆಗೆ ರಸ್ತೆ ಮೇಲೆ 3-4 ಅಡಿ ನೀರು ನಿಂತ್ತು ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.ಇದನ್ನೂ ಓದಿ: ಸರ್ಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟುಹಬ್ಬ ಆಚರಣೆ – ಮೂವರು ಸಾರಿಗೆ ಅಧಿಕಾರಿಗಳ ಅಮಾನತು

    ಕೆರೆಯಂತಾದ ರಸ್ತೆ ಮೇಲೆ ಸಂಚರಿಸಲು ವಾಹನ ಸವಾರರು ಪರದಾಡುತ್ತಿದ್ದು, ಬೈಕ್‌ಗಳನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ. ಇನ್ನೂ ಹಾಸನ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

    ಸಕಲೇಶಪುರ, ಆಲೂರು, ಬೇಲೂರು, ಹಾಸನ ನಗರದಲ್ಲಿ ಭಾರೀ ಮಳೆಯಿಂದಾಗಿ ವಿದ್ಯಾರ್ಥಿಗಳು, ವಾಹನ ಸವಾರರು, ಬೀದಿಬದಿ ವ್ಯಾಪಾರಸ್ಥರು ಪರದಾಡುವಂತಾಗಿತ್ತು.ಇದನ್ನೂ ಓದಿ: ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

  • ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ – ವರುಣಾರ್ಭಟಕ್ಕೆ ಭೂಕುಸಿತ, ಅಲ್ಲಲ್ಲಿ ಅವಾಂತರ

    ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ – ವರುಣಾರ್ಭಟಕ್ಕೆ ಭೂಕುಸಿತ, ಅಲ್ಲಲ್ಲಿ ಅವಾಂತರ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕೆಲವು ಭಾಗಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಅವಾಂತರ ಸೃಷ್ಠಿಯಾಗಿದೆ.

    ಪೂಂಚ್ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯ ಮೇಲೆ ಭೂಕುಸಿತವಾಗಿದ್ದು, ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಜೊತೆಗೆ ಮೂವರು ಗಾಯಗೊಂಡಿದ್ದಾರೆ. ಬೈಂಚ್-ಕಾಲ್ಸೇನ್ ಪ್ರದೇಶದಲ್ಲಿರುವ ಶಾಲೆ ಇದಾಗಿದ್ದು, ಶಾಲೆಯ ತಗಡಿನ ಛಾವಣಿ ಮೇಲೆ ದೊಡ್ಡ ಬಂಡೆ ಉರುಳಿದ್ದರಿಂದ ಸಾವು-ನೋವು ಸಂಭವಿಸಿದೆ.ಇದನ್ನೂ ಓದಿ: Breaking | ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್‌ ಧನಕರ್‌ ರಾಜೀನಾಮೆ

    ಇನ್ನೂ ರಿಯಾಸಿ ಜಿಲ್ಲೆಯಲ್ಲಿರುವ ಮಾತಾ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಅವಘಡದಲ್ಲಿ ಐವರು ಯಾತ್ರಿಕರು ಸೇರಿದಂತೆ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭೂಕುಸಿತ ಉಂಟಾಗಿದ್ದ ಜಾಗದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.

    ಮುಂಬೈನಲ್ಲಿ ಇಡೀ ರಾತ್ರಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಹೈವೇಗಳಲ್ಲೂ ಮಳೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ಉತ್ತರಾಖಂಡ್‌ದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಡೆಹ್ರಾಡೂನ್, ತೆಹ್ರಿ, ಪೌರಿ, ನೈನಿತಾಲ್, ಚಂಪಾವತ್ ಮತ್ತು ಉಧಮ್ ಸಿಂಗ್ ನಗರದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, 1ರಿಂದ 12ನೇ ತರಗತಿವರೆಗೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಇದನ್ನೂ ಓದಿ: ಇನ್ಮುಂದೆ VIP ಸಂಚಾರದ ವೇಳೆ ಸೈರನ್ ಬಳಕೆ ನಿಷೇಧ

  • ಮುಂಬೈಯಲ್ಲಿ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ – ತಪ್ಪಿದ ಭಾರೀ ಅವಘಡ

    ಮುಂಬೈಯಲ್ಲಿ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ – ತಪ್ಪಿದ ಭಾರೀ ಅವಘಡ

    – ಕೊಚ್ಚಿಯಿಂದ ಮುಂಬೈಗೆ ಆಗಮಿಸಿದ್ದ ವಿಮಾನ

    ಮುಂಬೈ: ಕೊಚ್ಚಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಭಾರೀ ಮಳೆಯಿಂದಾಗಿ ರನ್‌ವೇನಲ್ಲಿ ಜಾರಿ ಪಕ್ಕದ ಜಮೀನಿಗೆ ಹೋಗಿದ್ದು, ಬಳಿಕ ಪೈಲಟ್‌ನ ಚಾಣಕ್ಷ್ಯತನದಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ ಘಟನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.

    ಸೋಮವಾರ ಬೆಳಗ್ಗೆ 7:43ರ ಸುಮಾರಿಗೆ ಕೊಚ್ಚಿಯಿಂದ AI2744 ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗಿತ್ತು. ಅಲ್ಲಿಂದ ಹೊರಟು ಬೆಳಗ್ಗೆ 9:27ಕ್ಕೆ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಭಾರೀ ಮಳೆಯಿಂದಾಗಿ ವಿಮಾನವು ರನ್‌ವೇಯಿಂದ ಜರಿದು ಪಕ್ಕದ ಜಮೀನಿಗೆ ಹೋಗಿತ್ತು. ಬಳಿಕ ಪೈಲಟ್‌ನ ಚಾಣಕ್ಷ್ಯತನದಿಂದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.ಇದನ್ನೂ ಓದಿ: ಕನಕಪುರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ: ಡಿಕೆಶಿ

    VT-TYA ನೋಂದಣಿಯ ಏರ್‌ಬಸ್ A320ne ವಿಮಾನವನ್ನು ಲ್ಯಾಂಡಿಂಗ್ ವೇಳೆ ಟರ್ಮಿನಲ್‌ಗೆ ಸಂಪರ್ಕಿಸಲಾಗಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ಯಾವುದೇ ಅವಘಡ ಸಂಭವಿಸಿಲ್ಲ. ಇನ್ನೂ ವಿಮಾನವು ರನ್‌ವೇಯಿಂದ ಜರಿದು ಪಕ್ಕಕ್ಕೆ ಹೋಗಿದ್ದರಿಂದ ನಿಲ್ದಾಣದ ಪ್ರಾಥಮಿಕ ರನ್‌ವೇ 09/27 ಹಾಗೂ ವಿಮಾನದ 3 ಟೈರ್‌ಗಳು ಸ್ಫೋಟಗೊಂಡು ಸಣ್ಣಪುಟ್ಟ ಹಾನಿಯಾಗಿದೆ. ಹೀಗಾಗಿ ಯಾವುದೇ ಅಡಚಣೆಯಿಲ್ಲದೇ ವಿಮಾನಗಳ ಹಾರಾಟಕ್ಕಾಗಿ ಎರಡನೇ ರನ್‌ವೇಯನ್ನು ಬಳಸಲಾಯಿತು.

    ಮುಂಬೈ ವಿಮಾನ ನಿಲ್ದಾಣವು ಎರಡು ಛೇದಿಸುವ ರನ್‌ವೇಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ ಒಂದು ವಿಮಾನ ಮಾತ್ರ ಕಾರ್ಯನಿರ್ವಹಿಸಬಹುದು. ಜೊತೆಗೆ ಈ ವಿಮಾನ ನಿಲ್ದಾಣವು ವಿಶ್ವದ ಅತ್ಯಂತ ಜನದಟ್ಟಣೆಯಿಂದ ಕೂಡಿರುವ ಒಂದೇ ರನ್‌ವೇ ಕಾರ್ಯಾಚರಣೆ ಮಾಡುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

    ಮುಂಬೈನಲ್ಲಿ ನಿರಂತರ ಮಳೆಯಾಗುತ್ತಿರುವುದು ಈ ಅವಘಡಕ್ಕೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ, ಮುಂಬೈ ಉಪನಗರಗಳಲ್ಲಿ 115 ಮಿ.ಮೀ ಮಳೆಯಾಗಿದ್ದರೆ, ಕೊಲಾಬಾದಲ್ಲಿ ಕೇವಲ 11 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.ಇದನ್ನೂ ಓದಿ: ಇನ್ಮುಂದೆ ಉಪ್ಪಿ ʻನೆಕ್ಸ್ಟ್‌ ಲೆವೆಲ್‌ʼ – ಸದ್ದಿಲ್ಲದೇ ಸೆಟ್ಟೇರುತ್ತಿದೆ ಹೊಸ ಸಿನಿಮಾ

  • ಕತ್ರಾ ಮಾತಾ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ – ನಾಲ್ವರಿಗೆ ಗಾಯ

    ಕತ್ರಾ ಮಾತಾ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ – ನಾಲ್ವರಿಗೆ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ ಕತ್ರಾದ ವೈಷ್ಣೋದೇವಿ ಯಾತ್ರಾ (Vaishno Devi Yatra) ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ.

    ತ್ರಿಕೂಟ ಬೆಟ್ಟಗಳ ಮೇಲಿರುವ ದೇಗುಲಕ್ಕೆ ಕತ್ರಾದ ಮೂಲಕ ತೆರಳಬೇಕು. ಯಾತ್ರೆಯ ಆರಂಭಿಕ ಸ್ಥಳವಾದ ಬಂಗಂಗಾ (Banganga) ಪ್ರದೇಶದ ಬಳಿ ಬೆಳಗ್ಗೆ 8 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಇದನ್ನೂ ಓದಿ: 3 ವರ್ಷದ ಸಿನಿ ಪಯಣದ ಒಂದು ಝಲಕ್: ಕಾಂತಾರ ಅದ್ಭುತ ಲೋಕ

    ಭಾರೀ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು, ಹಲವಾರು ಯಾತ್ರಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಯಾತ್ರಾರ್ಥಿಗಳ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ.

  • ಕೊಡಗು | ಮಳೆಯಬ್ಬರಕ್ಕೆ ಹಾರಂಗಿ ಡ್ಯಾಂಗೆ ಹೆಚ್ಚಿದ ಒಳಹರಿವು – ನಾಲೆಗಳ ಬಳಿ ಭೂಕುಸಿತದ ಆತಂಕ

    ಕೊಡಗು | ಮಳೆಯಬ್ಬರಕ್ಕೆ ಹಾರಂಗಿ ಡ್ಯಾಂಗೆ ಹೆಚ್ಚಿದ ಒಳಹರಿವು – ನಾಲೆಗಳ ಬಳಿ ಭೂಕುಸಿತದ ಆತಂಕ

    ಕೊಡಗು: ಜಿಲ್ಲೆಯಾದ್ಯಂತ ಮಳೆಯಬ್ಬರ ಹೆಚ್ಚಾದ ಹಿನ್ನೆಲೆ ಹಾರಂಗಿ ಡ್ಯಾಂಗೆ (Harangi Dam) ಒಳಹರಿವು ಹೆಚ್ಚಾಗಿದ್ದು, ನಾಲೆಗಳಲ್ಲಿ ಭೂಕುಸಿತ (Land Slide) ಉಂಟಾಗುವ ಸಾಧ್ಯತೆಯಿದೆ.

    ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ. ಮಳೆಗಾಲದಲ್ಲೇ ನಾಲೆಗಳ ದುರಸ್ತಿ ಕಾರ್ಯ ನಡೆಸುತ್ತಿರುವುದರಿಂದ ನಾಲೆಯಲ್ಲಿ ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ.ಇದನ್ನೂ ಓದಿ: ಯಾವೆಲ್ಲ ದೇಶಗಳಿಗೆ ವೀಸಾ ಮುಕ್ತ ಚೀನಾ ಪ್ರವೇಶ? ಪ್ರವಾಸಿಗರನ್ನು ಸೆಳೆಯಲು ಕಾರಣಗಳೇನು?

    ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜೊತೆಗೆ ಕಾವೇರಿ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ ನೀರು ಹೆಚ್ಚಾದ ಹಿನ್ನೆಲೆ ಕೊಡಗು-ಮೈಸೂರು-ಹಾಸನ ಭಾಗದ ರೈತರು ನಾಲೆಗಳ ಮುಖಾಂತರ ನೀರು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕುಶಾಲನಗರ ತಾಲೂಕಿನ ಮದಲಾಪುರ ಗ್ರಾಮದ ಹಾರಂಗಿಯ ಎಡದಂಡೆಯಲ್ಲಿ ಜೆಸಿಬಿ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ. ಹೀಗಾಗಿ ಮಳೆ ಸಮಯದಲ್ಲಿ ನಾಲೆಗಳ ಬದಿಯ ಮಣ್ಣು ಸಡಿಲಗೊಂಡು ಭೂಕುಸಿತ ಉಂಟಾಗುವ ಸಾದ್ಯತೆ ಇದೆ.

    ಹಾರಂಗಿಯ ನಾಲೆಯಲ್ಲಿ ಕಾಮಗಾರಿ ನಡೆಸಲು ಅವಕಾಶ ಇಲ್ಲ. ಆದರೆ ನಾಲೆಗಳ ಏರಿಯ ಮೇಲೆ ರೋಡ್ ಸರ್ವಿಸ್ ಕೊಡುವುದಕ್ಕೆ ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಮೇ ತಿಂಗಳಲ್ಲಿ ಭಾರೀ ಮಳೆಯಾಗಿ ಕೆಲಸಕ್ಕೆ ತೊಂದರೆ ಉಂಟಾಗಿದೆ. ಈಗ ಕಾಮಗಾರಿ ನಡೆಸಿದರೆ ಮಣ್ಣು ಸಡಿಲಗೊಂಡು ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಮಳೆ ನಿಂತ ಬಳಿಕ ಕಾಮಗಾರಿ ನಡೆಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

    ಕಾವೇರಿ ನೀರಾವರಿ ನಿಗಮದ ಇಲಾಖೆಯ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಇದೀಗ ರೈತರು ಕಂಗಾಲಾಗಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 19-07-2025

     

  • ನಿರಂತರ ಮಳೆಗೆ ಕುಸಿದ ಮನೆ – ಒಂದೂವರೆ ವರ್ಷದ ಮಗು ಸಾವು, ಆರು ಜನರಿಗೆ ಗಾಯ

    ನಿರಂತರ ಮಳೆಗೆ ಕುಸಿದ ಮನೆ – ಒಂದೂವರೆ ವರ್ಷದ ಮಗು ಸಾವು, ಆರು ಜನರಿಗೆ ಗಾಯ

    ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಮನೆ ಕುಸಿದು ಒಂದೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಗಂಗಾವತಿ (Gangavathi) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ.

    ಪ್ರಶಾಂತಿ ಮೃತ ಮಗು. ಗಾಯಾಳುಗಳನ್ನು ಹನುಮಂತಿ (28), ದುರಗಮ್ಮ(65), ಭೀಮಮ್ಮ (19), ಹುಸೇನಪ್ಪ(46), ಫಕೀರಪ್ಪ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಟೆಕ್ಕಿ ಜೊತೆ ಆ.28ಕ್ಕೆ ಅನುಶ್ರೀ ಮದುವೆ!

    ಬುಧವಾರ ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಮನೆ ಕುಸಿದ ಪರಿಣಾಮ ಮನೆಯಲ್ಲಿದ್ದ ಮಗು ಸಾವನ್ನಪ್ಪಿದ್ದು, ಇನ್ನುಳಿದ ಆರು ಜನರು ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಗಂಗಾವತಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ಥಳಕ್ಕೆ ತಹಶೀಲ್ದಾರ್ ಯು.ನಾಗರಾಜ್ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್‌ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್‌ ಕೇಸ್ – ಬಾಗಲಕೋಟೆ ಯುವಕ ಅರೆಸ್ಟ್‌