Tag: heavy rain

  • ರಣ ಮಳೆಗೆ ನಡುಗಿದ ಮುಂಬೈ – ಹಲವೆಡೆ ಟ್ರಾಫಿಕ್‌ ಜಾಮ್‌, ಶಾಲಾ-ಕಾಲೇಜುಗಳಿಗೆ ರಜೆ, ರೆಡ್‌ ಅಲರ್ಟ್‌ ಘೋಷಣೆ

    ರಣ ಮಳೆಗೆ ನಡುಗಿದ ಮುಂಬೈ – ಹಲವೆಡೆ ಟ್ರಾಫಿಕ್‌ ಜಾಮ್‌, ಶಾಲಾ-ಕಾಲೇಜುಗಳಿಗೆ ರಜೆ, ರೆಡ್‌ ಅಲರ್ಟ್‌ ಘೋಷಣೆ

    – ಮುಳುಗಿದ ರೈಲ್ವೆ ಹಳಿಗಳು; ವಿಮಾನ ಹಾರಾಟಕ್ಕೂ ತೊಂದರೆ

    ಮುಂಬೈ: ಮಹಾರಾಷ್ಟ್ರದ ಮುಂಬೈ (Mumbai) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿಂದು ಬೆಳಗ್ಗೆ ಭಾರೀ ಮಳೆಯಿಂದಾಗಿ (Heavy Rain) ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಭಾರೀ ಪ್ರಮಾಣದ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

    ಅಧಿಕಾರಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಗರಿಷ್ಠ 54 ಮಿ.ಮೀ. ಗಿಂತ ಹೆಚ್ಚು ಮಳೆಯಾಗಿದೆ. ಇನ್ನೂ ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 72 ಮಿ.ಮೀ. ಮತ್ತು 65 ಮಿ.ಮೀ. ಮಳೆಯಾಗಿದೆ. ಹಾಗಾಗಿ ಮುಂಬೈ ಮಹಾನಗರ ಪಾಲಿಕೆಯು, ಅನಗತ್ಯ ಓಡಾಟ ನಿಲ್ಲಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಮೀನುಗಾರರು (Fishermen) ಕಡಲಿಗಿಳಿಯದಂತೆ ಸೂಚಿಸಿದೆ. ಇದನ್ನೂ ಓದಿ: ಮಾವೋವಾದಿಗಳು ಇಟ್ಟಿದ್ದ ಐಇಡಿ ಸ್ಫೋಟ – ಓರ್ವ ಪೊಲೀಸ್ ಸಾವು, ಮೂವರಿಗೆ ಗಾಯ

    ವಿಮಾನ ಹಾರಟಕ್ಕೂ ತೊಂದರೆ
    ಮಳೆಯಿಂದಾಗಿ ಮುಂಬೈನ ವಿಮಾನ ನಿಲ್ದಾಣದಲ್ಲಿ (Mumbai Airport) ಲ್ಯಾಂಡಿಂಗ್‌ ಮಾಡುವ ಮುನ್ನ 9 ವಿಮಾನಗಳು ಹಲವು ಸುತ್ತುಗಳನ್ನು ಹಾಕಿ ನಂತರ ಪ್ರಯಾಸದಿಂದ ಇಳಿದಿವೆ. ಒಂದು ವಿಮಾನವನ್ನ ಸೂರತ್‌ಗೆ ಮಾರ್ಗ ಬದಲಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: Video Viral | ಯೋಧನನ್ನ ಕಂಬಕ್ಕೆ ಕಟ್ಟಿ ಟೋಲ್ ಪ್ಲಾಜಾ ಸಿಬ್ಬಂದಿಯಿಂದ ಥಳಿತ; ನಾಲ್ವರು ಅರೆಸ್ಟ್‌

    ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು:
    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮಳೆ ಹೆಚ್ಚಳವಾಗಿದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಮಳೆ ಸುರಿಯುತ್ತಿದ್ದು ಹಲವು ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್‌ ಶೆಟ್ಟಿ ತಿಮರೋಡಿ ಅರೆಸ್ಟ್‌ ಮಾಡಲು ಪರಮೇಶ್ವರ್‌ ಸೂಚನೆ

    ರೆಡ್‌ ಅಲರ್ಟ್‌ ಘೋಷಣೆ
    ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದೆ. ಹೀಗಾಗಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಕೆಲವು ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದೆ. ಮಂಗಳವಾರ ಸಹ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹೇಳಿದೆ.

    ರೈಲು ಸಂಚಾರದಲ್ಲಿ ವಿಳಂಬ
    ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೇಂದ್ರೀಯ ರೈಲ್ವೆಯ ಉಪನಗರ ರೈಲು ಸಂಚಾರದಲ್ಲೂ ಸಮಸ್ಯೆ ಎದುರಾಗಿದೆ. ಕೆಲವು ಪ್ರದೇಶಗಳಲ್ಲಿ ಹಳಿಗಳು ಮುಳುಗಿವೆ. ಕುರ್ಲ ಮತ್ತು ತಿಲಕ್ ನಗರ ನಿಲ್ದಾಣಗಳ ನಡುವೆ ಚಾರ್ಜಿಂಗ್‌ ಪಾಯಿಂಟ್‌ಗಳೇ ಗೋಚರಿಸದಂತಾಗಿದೆ. ಹೀಗಾಗಿ ಕೆಲ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. ಆದ್ರೆ ಯಾವುದೇ ಸಂಚಾರ ಸ್ಥಗಿತಗೊಳಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ರಾಜ್ಯಾದ್ಯಂತ ಮುಂದಿನ ಒಂದು ವಾರ ಭಾರೀ ಮಳೆ – ಎಲ್ಲಾ ಜಿಲ್ಲೆಗೂ ಯೆಲ್ಲೋ ಅಲರ್ಟ್

    ರಾಜ್ಯಾದ್ಯಂತ ಮುಂದಿನ ಒಂದು ವಾರ ಭಾರೀ ಮಳೆ – ಎಲ್ಲಾ ಜಿಲ್ಲೆಗೂ ಯೆಲ್ಲೋ ಅಲರ್ಟ್

    ಬೆಂಗಳೂರು: ರಾಜ್ಯಾದ್ಯಂತ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಎಲ್ಲಾ ಜಿಲ್ಲೆಗಳಿಗೂ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್ (Yellow Alert) ಘೋಷಿಸಿದೆ.ಇದನ್ನೂ ಓದಿ: ನಿಂತಿದ್ದ ಟ್ರಕ್‌ಗೆ ಪಿಕಪ್ ವ್ಯಾನ್ ಡಿಕ್ಕಿ – ಏಳು ಮಕ್ಕಳು ಸೇರಿ 10 ಮಂದಿ ಸಾವು

    ಮುಂದಿನ ಒಂದು ವಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸುವ ಮುನ್ಸೂಚನೆಯಿದ್ದು, ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗಲಿದೆ. ಇಂದು (ಆ.13) ಕರಾವಳಿ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ನಾಳೆಯಿಂದ (ಆ.14) ಕರಾವಳಿ ಸಹಿತ ಎಲ್ಲಾ ಜಿಲ್ಲೆಗಳಿಗೂ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.

    ಬೆಂಗಳೂರಿಗೂ ಮುಂದಿನ ಒಂದು ವಾರ ಭಾರೀ ಮಳೆಯಾಗಲಿದ್ದು, ಗಾಳಿ, ಗುಡುಗು ಸಹಿತ ಮಳೆ ಅಬ್ಬರಿಸುವ ಸಾಧ್ಯತೆಯಿದೆ.ಇದನ್ನೂ ಓದಿ: ಟ್ಯಾರಿಫ್‌ ವಾರ್‌ ನಡುವೆ ಮುಂದಿನ ತಿಂಗಳು ಅಮೆರಿಕಗೆ ಮೋದಿ ಭೇಟಿ

  • ಧಾರವಾಡ | ಎಡೆಬಿಡದೆ ಸುರಿದ ಮಳೆಗೆ ಕುಸಿದ ಮನೆ

    ಧಾರವಾಡ | ಎಡೆಬಿಡದೆ ಸುರಿದ ಮಳೆಗೆ ಕುಸಿದ ಮನೆ

    ಧಾರವಾಡ: ಕಳೆದ ಮೂರು ದಿನಗಳಿಂದ ಧಾರವಾಡ (Dharwad) ತಾಲೂಕಿನ ನವಲಗುಂದದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮನೆಯೊಂದು ಕುಸಿದಿದೆ.

    ನವಲಗುಂದ (Navalgund) ಪಟ್ಟಣದ ಹಳ್ಳದ ಓಣಿಯಲ್ಲಿರುವ ಮಕ್ತುಮಬಿ ನರಗುಂದ ಅವರಿಗೆ ಸೇರಿದ ಮನೆ ಕುಸಿದು ಬಿದ್ದಿದೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದೀಗ ಮನೆಯಿಲ್ಲದೆ ಮಕ್ತುಮಬಿ ನರಗುಂದ ಅವರ ಕುಟುಂಬ ಪರದಾಡುತ್ತಿದ್ದು, ಪಕ್ಕದ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಎಟಿಎಂ ಕಳ್ಳತನ ಮಾಡುವಾಗಲೇ ಎಎಸ್ಐಯಿಂದ ಕಳ್ಳ ಅರೆಸ್ಟ್‌ – ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

    ಸ್ಥಳಕ್ಕೆ ವಿಪತ್ತು ನಿರ್ವಹಣಾ ಅಧಿಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದಾರೆ. ಮನೆ ಕಳೆದುಕೊಂಡ ಕುಟುಂಬಸ್ಥರು ಸರ್ಕಾರ ಆದಷ್ಟು ಬೇಗ ಪರಿಹಾರವನ್ನ ನೀಡಬೇಕು ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

  • ಕಲಬುರಗಿ ಚಂದ್ರಂಪಳ್ಳಿ ಜಲಾಶಯ ವ್ಯಾಪ್ತಿಯಲ್ಲಿ ಭಾರೀ ಮಳೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ

    ಕಲಬುರಗಿ ಚಂದ್ರಂಪಳ್ಳಿ ಜಲಾಶಯ ವ್ಯಾಪ್ತಿಯಲ್ಲಿ ಭಾರೀ ಮಳೆ; ನದಿ ಪಾತ್ರದ ಜನರಿಗೆ ಎಚ್ಚರಿಕೆ

    ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದ (Chandrampalli Dam) ಜಲಾಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ (Rain) ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು ಯಾವುದೇ ಕ್ಷಣದಲ್ಲಿ ಭರ್ತಿಯಾಗುವ ಹಂತದಲ್ಲಿದೆ. ನೀರು ಗರಿಷ್ಠ ಮಟ್ಟ ತುಂಬಿದ ನಂತರ ಒಳಹರಿವಿನ ನೀರನ್ನು ಅಣೆಕಟ್ಟಿನ ಕೋಡಿಯ ಗೇಟ್‌ಗಳ ಮುಖಾಂತರ ನದಿಗೆ ಹರಿಬಿಡಲಾಗುತ್ತಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.

    ಚಂದ್ರಂಪಳ್ಳಿ ಅಣೆಕಟ್ಟಿನ ನದಿ ಪಾತ್ರದ ರೈತರು, ಸಾರ್ವಜನಿಕರು, ದನಕರುಗಳನ್ನು ಮೇಯಿಸುವವರು ಮತ್ತು ದನಕರುಗಳಿಗೆ ನೀರು ಕುಡಿಸುವುದಾಗಲಿ, ಹಳ್ಳಕ್ಕೆ ಇಳಿಯುವುದಾಗಲಿ, ಮೀನು ಹಿಡಿಯುವುದಾಗಲಿ, ಬಟ್ಟೆ ಒಗೆಯುವುದಾಗಲಿ ಹಾಗೂ ಇನ್ನಿತರ ಯಾವುದೇ ಕಾರಣಕ್ಕೂ ನದಿಗೆ ಇಳಿಯಬಾರದು ಎಂದು ಕೆಎನ್‌ಎನ್‌ಎನ್‌ಎಲ್ ಚಂದ್ರಂಪಳ್ಳಿ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಚೇತನ ಕಳಸ್ಕರ್ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಂಪುಟದಿಂದ ರಾಜಣ್ಣ ಕಿಕ್‌ಔಟ್‌ – ಆಪ್ತನ ತಲೆದಂಡದಿಂದ ಮೌನಕ್ಕೆ ಶರಣಾದ ಸಿಎಂ

    ನದಿ ಪಾತ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆ ಮತ್ತು ಸಾರ್ವಜನಿಕರ ಆಸ್ತಿಗಳಿದ್ದಲ್ಲಿ ಮುಂಜಾಗ್ರತೆಯಾಗಿ ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದು ಕೋರಲಾಗಿದೆ.

  • ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ

    ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (IMD) ನೀಡಿದೆ.ಇದನ್ನೂ ಓದಿ: ಖಾಸಗಿ ಆಸ್ಪತ್ರೆಯ ಉದ್ಘಾಟನೆ ವೇಳೆ 10 ನಿಮಿಷ ಲಿಫ್ಟ್‌ನಲ್ಲಿ ಸಿಲುಕಿದ ರಾಮಲಿಂಗಾ ರೆಡ್ಡಿ

    ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ರಾಮನಗರ, ಚಿತ್ರದುರ್ಗ ಸೇರಿ ಹಲವೆಡೆ ಅಧಿಕ ಮಳೆಯಾಗುವ ಸಾಧ್ಯತೆಯಿದ್ದು, ಆ.16ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ತಿಳಿಸಿದೆ.

    ಕಳೆದ 2-3 ದಿನಗಳಿಂದ ಬೆಂಗಳೂರಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು (ಆ.11) ಕೂಡ ಮಧ್ಯಾಹ್ನದ ವೇಳೆಗೆ ಮಳೆ ಅಬ್ಬರಿಸುವ ನಿರೀಕ್ಷೆಯಿದೆ. ಮುಂದಿನ ಐದು ದಿನಗಳ ಕಾಲ ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದೆ.ಇದನ್ನೂ ಓದಿ: ಟರ್ಕಿಯಲ್ಲಿ 6.1 ತೀವ್ರತೆಯ ಭೂಕಂಪ – ಓರ್ವ ಸಾವು, 29 ಮಂದಿಗೆ ಗಾಯ

     

  • ಮೇಘಸ್ಪೋಟಕ್ಕೆ ನಾಶವಾಯ್ತು ಧರಾಲಿ – ಗ್ರಾಮದ ವಿಶೇಷತೆ ಏನು? ಮೊದಲು ಹೇಗಿತ್ತು?

    ಮೇಘಸ್ಪೋಟಕ್ಕೆ ನಾಶವಾಯ್ತು ಧರಾಲಿ – ಗ್ರಾಮದ ವಿಶೇಷತೆ ಏನು? ಮೊದಲು ಹೇಗಿತ್ತು?

    ತ್ತೀಚಿಗಷ್ಟೇ ಉತ್ತರಾಖಂಡದ (Uttarakhand) ಉತ್ತರಕಾಶಿಯಲ್ಲಿರುವ (Uttarakashi) ಧರಾಲಿ (Dharali) ಗ್ರಾಮದಲ್ಲಿ ಬೆಚ್ಚಿ ಬೀಳಿಸುವಂತಹ ಭಯಾನಕ ಘಟನೆ ಎಂದು ಸಂಭವಿಸಿತು. ಕ್ಷಣಾರ್ಧದಲ್ಲಿ ಊರಿಗೆ ಊರೇ ಕೊಚ್ಚಿಕೊಂಡು ಹೋಗಿ ಸರ್ವನಾಶವಾಯಿತು. ಬೆಟ್ಟದಿಂದ ರೌದ್ರಾವತಾರದಲ್ಲಿ ಹರಿದು ಬಂದ ನೀರು ಗ್ರಾಮವನ್ನೇ ನೆಲಸಮಗೊಳಿಸಿತು. ಈ ದುರಂತಕ್ಕೂ ಮುನ್ನ ಈ ಧರಾಲಿ ಗ್ರಾಮ ಒಂದು ಸುಂದರ ತಾಣ. ಧಾರ್ಮಿಕ ಮತ್ತು ಪೌರಾಣಿಕ ಮಹತ್ವದ ಒಂದು ನೆಲೆ. ಯಾತ್ರೆಗಳಿಗೆ ಹೋಗುವವರಿಗೆ ಒಂದು ನೆಮ್ಮದಿಯ ತಂಗುದಾಣವಾಗಿತ್ತು. ಎಲ್ಲವೂ ಬದಲಾಗಿದೆ. ಹಿಂದೆ ಇಲ್ಲೊಂದು ಪ್ರದೇಶವಿತ್ತು ಎಂಬುದನ್ನೇ ಅಳಿಸಿ ಹಾಕಿದೆ. 

    ಸಾಮಾನ್ಯವಾಗಿ ಉತ್ತರ ಭಾರತದ (North India) ಉತ್ತರ ಗಡಿಯಲ್ಲಿರುವ ರಾಜ್ಯಗಳಾದ ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಇವೆಲ್ಲವೂ ಹಿಮಾಲಯ ಬೆಟ್ಟಗಳಿಂದ ಸುತ್ತುವರೆದಿದೆ. ಇನ್ನು ಮಳೆಗಾಲದಲ್ಲಿ ಮಳೆಯ ಪ್ರಮಾಣವೂ ಹೆಚ್ಚಾಗಿಯೇ ಇರುತ್ತದೆ. ಈ ಪ್ರದೇಶಗಳಲ್ಲಿ ಈ ಹಿಂದೆಯೂ ಹಲವು ಮೇಘಸ್ಫೋಟಗಳು (Cloudburst) ಸಂಭವಿಸಿದ್ದವು. ಇದರಿಂದ ಹಲವರು ಪ್ರಾಣ ಕಳೆದುಕೊಂಡರೆ, ಇನ್ನೂ ಕೆಲವರು ತಮ್ಮದನ್ನೆಲ್ಲ ಕಳೆದುಕೊಂಡು ಏನು ಇಲ್ಲದಂತೆ ಬದುಕುತ್ತಿದ್ದಾರೆ. ಇಂತಹ ಸ್ಥಿತಿಗೆ ಮತ್ತೊಮ್ಮೆ ಉತ್ತರ ಕಾಶಿಯ ಧರಾಲಿ ಗ್ರಾಮ ಉದಾಹರಣೆಯಾಗಿದೆ. 

    ಹೌದು, ಧರಾಲಿ ಗ್ರಾಮ ಈ ಮೇಘಸ್ಫೋಟಕ್ಕೂ ಮುನ್ನ ಹೇಗಿತ್ತು ಗೊತ್ತಾ? ಅದೊಂದು ನೈಸರ್ಗಿಕ ತಾಣವೇ ಹೌದು, ಈ ಗ್ರಾಮ ಭಗೀರಥಿ ನದಿಯಿಂದ ಸುತ್ತುವರೆಯಲ್ಟಟ್ಟಿದ್ದು, ಸೇಬು, ರಾಜಮ, ಪೈನ್, ಡಿಯೋಡರ್ ಕಾಡುಗಳು ಈ ಪ್ರದೇಶದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆಧ್ಯಾತ್ಮಿಕತೆ, ಸೌಂದರ್ಯ ಎಲ್ಲದರಿಂದಲೂ ಪರಿಪೂರ್ಣಗೊಂಡಿರುವ ಈ ಗ್ರಾಮವನ್ನು ದೇವರನಾಡು ಎಂದೇ ಕರೆಯುತ್ತಾರೆ. ಗಂಗೋತ್ರಿ ಹೆದ್ದಾರಿಯಲ್ಲಿ ಕಂಡುಬರುವ ಒಂದು ಅದ್ಭುತ ನಗರವೇ ಧರಾಲಿ. ಪ್ರಾಚೀನ ಕಾಲದಲ್ಲಿ ಋಷಿಮುನಿಗಳಿಗೆ ಇದೊಂದು ಧ್ಯಾನ ಮಾಡುವ ಸ್ಥಳವಾಗಿತ್ತು. ಇಲ್ಲಿನ ಸ್ಥಳೀಯ ಜಾನಪದ ಕಲೆಯು ಜನರನ್ನ ಪ್ರತಿಬಿಂಬಿಸುತ್ತದೆ. 

    ಈ ಗ್ರಾಮವು ಪ್ರವಾಸಿಗರನ್ನು ಕೈಬೀಸಿ ತನ್ನೆಡೆಗೆ ಕರೆಯುತ್ತದೆ. ಚಾರಣಕ್ಕೆ ಸೂಕ್ತವಾದ ಪ್ರದೇಶ. ಪಕ್ಷಿ ವೀಕ್ಷಣೆಗೆ ಮತ್ತು ಪ್ರಕೃತಿ ಪ್ರೇಮಿಗಳಿಗೆ ಇದೊಂದು ಸ್ವರ್ಗವೇ ಹೌದು. ಇಲ್ಲಿ ಹಿಮಾಲಯನ್ ಪಕ್ಷಿ ಪ್ರಭೇದಗಳ ಸೌಂದರ್ಯಕ್ಕೆ ಜನರು ಕರಗಿ ಹೋಗುವುದಂತೂ ಖಂಡಿತ. ಇನ್ನು ಚಾರ್ ಧಾಮ್ ಯಾತ್ರೆಗೆ (Chardham Yatra) ಹೋಗುವ ಯಾತ್ರಾರ್ಥಿಗಳಿಗೆ ಇದೊಂದು ನಿಲ್ದಾಣ. ಧರಾಲಿಯಿಂದ ಗಂಗಾ ನದಿಯ (Ganga River) ಉಗಮ ಸ್ಥಾನ ಗಂಗೋತ್ರಿಯು (Gangotri) ಕೇವಲ 20 ಕಿ.ಮೀ ದೂರದಲ್ಲಿದೆ. ಅದಲ್ಲದೆ ಗಂಗಾ ನದಿ  ಎಂಬ ನೈಸರ್ಗಿಕ ಬಿಸಿನೀರಿನ ಬಗ್ಗೆಗಳು ಇಲ್ಲಿ ಕಂಡು ಬರುವುದರಿಂದ ಆಯುರ್ವೇದ ಚಿಕಿತ್ಸೆಗಾಗಿ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಹೀಗಾಗಿ ಇದೊಂದು ಜನಪ್ರಿಯ ತಾಣವಾಗಿದೆ.

    ಇದೆಲ್ಲದರ ಹೊರತಾಗಿ ಧರಾಲಿಯಲ್ಲಿ ಪೌರಾಣಿಕ ಇತಿಹಾಸವನ್ನು ಹೊಂದಿರುವ ಒಂದು ದೇವಾಲಯವಿದೆ ಅದೇ ಕಲ್ಪ ಕೇದಾರ ದೇಗುಲ (Kalpa Kedar Temple). ಪಾಂಡವರು (Pandavas) ನಿರ್ಮಿಸಿದ್ದಾರೆ ಎಂದು ನಂಬಲಾಗಿರುವ ದೇವಾಲಯವೇ ಇದು. ಪ್ರಾಚೀನ ಕಾಲದಿಂದಲೂ ಉಳಿದುಕೊಂಡು ಬಂದಂತಹ ಆ ಯುಗದ ಕೊನೆಯ ಅವಶೇಷವೇ ಇದು. ಸಮುದ್ರಮಟ್ಟದಿಂದ 2,100 ಅಡಿ ಎತ್ತರದಲ್ಲಿರುವ ಈ ದೇವಾಲಯವನ್ನು ಆಧ್ಯಾತ್ಮಿಕ ರತ್ನವೆಂದು ಕರೆಯಲಾಗುತ್ತದೆ. ಪೌರಾಣಿಕ ಮಾಹಿತಿ ಪ್ರಕಾರ, ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಹಿಮಾಲಯಕ್ಕೆ ಭೇಟಿ ನೀಡಿದಾಗ ಈ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದೆ. 1935 ಮತ್ತು 1938ರ ನಡುವೆ ಹಿಮನದಿಯಿಂದಾಗಿ ಈ ದೇಗುಲ ಹೂತುಹೋಗಿತ್ತು. ಆದರೂ ಕೂಡ ಈ ಗುಮ್ಮಟ ಹಾಗೆ ಉಳಿದುಕೊಂಡು ಬಂದಿದೆ. ದೇವಾಲಯದ ಮೇಲ್ಭಾಗ ಕಾಲಭೈರವನ ಮುಖದಿಂದ ಅಲಂಕರಿಸಲ್ಪಟ್ಟಿದೆ. ಈ ದೇಗುಲದ ಇನ್ನೊಂದು ವಿಶೇಷತೆ ಏನೆಂದರೆ ಇದು ಐದು ಮುಖದ ಶಿವಲಿಂಗವನ್ನು ಹೊಂದಿದೆ. ಜೊತೆಗೆ ನಂದಿಯ ಬೆನ್ನಿನ ಆಕಾರದಲ್ಲಿ ಈ ಶಿವಲಿಂಗವಿದೆ. ಪ್ರತಿ ಮಳೆಗಾಲದಲ್ಲಿ ಖೀರ್ ಗಂಗಾ ನದಿಯು (Kheera Ganga) ಉಕ್ಕಿ ಹರಿಯುತ್ತದೆ. ಈ ಮೂಲಕ ನದಿಯ ನೀರು ಗರ್ಭಗುಡಿಯೊಳಗಿರುವ ಲಿಂಗವನ್ನು ಸ್ಪರ್ಷಿಸಿ ಅಭಿಷೇಕ ಮಾಡುತ್ತದೆ ಎಂಬ ನಂಬಿಕೆ ಇದೆ.  ಈ ದೇವಾಲಯ ಭಾಗಶಃ ನೆಲದಲ್ಲಿ ಹುದುಗಿಕೊಂಡಿರುವ ರೀತಿಯಲ್ಲಿದೆ.  ನಂಬಿಕೆಗಳ ಪ್ರಕಾರ ಶಿವನು ಪಾಪ ಮುಕ್ತಿಗಾಗಿ ದಶಕಗಳ ಕಾಲ ತನ್ನನ್ನು ತಾನು ಮರೆಮಾಡಿಕೊಂಡಿದ್ದನು ಎನ್ನಲಾಗುತ್ತದೆ. ಆದರೆ ಇತ್ತೀಚಿಗೆ ಸಂಭವಿಸಿದ ಪ್ರವಾಹದಿಂದಾಗಿ ಎಲ್ಲವು ಬದಲಾಗಿದೆ. ಶಿವಲಿಂಗದ ಮೇಲೆ ಹರಿಯುತ್ತಿದ್ದ ನದಿಯು ಈಗ ಇಡೀ ದೇವಾಲಯವನ್ನೇ ಆಕ್ರಮಿಸಿಕೊಂಡಿದೆ. 

    ಈ ದೇವಾಲಯದ ವಾಸ್ತುಶಿಲ್ಪ ಕೇದಾರನಾಥ ಧಾಮದಂತೆಯೇ (Kedarnath Dham) ಇದೆ. 1945ರಲ್ಲಿ ಗ್ರಾಮಸ್ಥರಿಗೆ ಈ ದೇವಸ್ಥಾನದ ಇರುವಿಕೆಯ ಕುರಿತು ಮಾಹಿತಿ ಬೆಳಕಿಗೆ ಬಂದಿತ್ತು. ದಿನಗಳೆದಂತೆ ಸ್ಥಳೀಯರು ಪೂಜೆ ಮಾಡಲು ಪ್ರಾರಂಭಿಸಿದರು. ಸುಮಾರು ಹಲವು ದಶಕಗಳಿಂದ ಹುದುಗಿಕೊಂಡಿರುವ 240 ದೇವಾಲಯಗಳ ಪೈಕಿ ಕಲ್ಪ ಕೇದಾರ ದೇವಾಲಯ ಒಂದೇ ಉಳಿದುಕೊಂಡಿದೆ. ಪೌರಾಣಿಕ ಸಂಪರ್ಕವನ್ನು ಹೊಂದಿದ್ದ ಈ ದೇವಾಲಯ ಮತ್ತೆ ಭೂಮಿಯ ಒಳಗೆ ಸೇರಿಕೊಂಡ ಹಾಗೆ ಆಗಿದೆ.

    ಇದೀಗ ಧರಾಲಿ ಗ್ರಾಮದಲ್ಲಿ ಸಂಭವಿಸಿದ ಜಲಪ್ರಳಯಕ್ಕೆ ಇಡೀ ಗ್ರಾಮವೇ ಕೊಚ್ಚಿ ಹೋಗಿ ಐವರು ಸಾವನ್ನಪ್ಪಿದ್ದಾರೆ. ಇನ್ನು ಹಲವಾರು ಜನರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ತಜ್ಞರ ಮಾಹಿತಿ ಪ್ರಕಾರ ಇದು ಮೇಘಸ್ಪೋಟವಲ್ಲ, ಹಿಮ ಕೊಳ ಸ್ಫೋಟ ಎಂದು ಹೇಳುತ್ತಿದ್ದಾರೆ. ವಿನಾಶದ ಪ್ರಮಾಣದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭೀಕರತೆಯನ್ನ ತೋರಿಸುತ್ತಿದೆ. 

    ಹಿಂದೆ ಯಾವಾಗ ಮೇಘಸ್ಫೋಟವಾಗಿತ್ತು?

    ಇದಕ್ಕೂ 2025ರಲ್ಲಿ ಮುನ್ನ ಹಿಮಾಚಲ ಪ್ರದೇಶದಲ್ಲಿ (Himachal Pradesh) ಮಳೆಯ ಪ್ರಮಾಣದಲ್ಲಿ ಏರಿಕೆಯಾಗಿ ಮಂಡಿ, ಕುಲ್ಲು, ಚಾಂಬಾ ರಸ್ತೆಗಳಲ್ಲಿ ಮೇಘ ಸ್ಫೋಟ ಉಂಟಾಗಿ ಭಾರೀ  ದುರಂತ ಸಂಭವಿಸಿತ್ತು. ಈ ಸಮಯದಲ್ಲಿ ಮಳೆ ಸಂಭಂಧಿತ ಅವಘಡದಿಂದಾಗಿ 106 ಜನ ಸಾವನ್ನಪ್ಪಿದ್ದರು. 

    2012ರಲ್ಲಿ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರಭಾವದಿಂದಾಗಿ 31 ಜನ ಸಾವನ್ನಪ್ಪಿದ್ದರೆ, 40 ಜನ ನಾಪತ್ತೆಯಾಗಿದ್ದರು. 

    2010ರಲ್ಲಿ ಹಿಮಾಚಲ ಪ್ರದೇಶದ ಕರ್ಹಲ್ ಕಣಿವೆಯಲ್ಲಿ ಮೇಘ ಸ್ಫೋಟ ಸಂಭವಿಸಿ ಲಕ್ಷಾಂತರ ಮೌಲ್ಯದ ಆಸ್ತಿ ನಾಶವಾಗಿತ್ತು.

  • ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

    ವಿಜಯಪುರ | ಮಳೆಯಬ್ಬರಕ್ಕೆ ಮೈದುಂಬಿದ ಡೋಣಿ ನದಿ – ಸಾತಿಹಾಳ ಸೇತುವೆ ಜಲಾವೃತ

    ವಿಜಯಪುರ: ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ಸುರಿದ ಭಾರೀ ಮಳೆಗೆ ಡೋಣಿ ನದಿ (Doni River) ಮೈದುಂಬಿ ಹರಿಯುತ್ತಿದ್ದು, ಸಾತಿಹಾಳ ಸೇತುವೆ (Satihal Bridge) ಸಂಪೂರ್ಣವಾಗಿ ಜಲಾವೃತಗೊಂಡಿದೆ.ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಮಂಡನೆ – ಆ.16ಕ್ಕೆ ವಿಶೇಷ ಸಂಪುಟ ಸಭೆ

    ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ಇದೀಗ ಕಡಿಮೆಯಾಗಿದೆ. ಮಳೆ ನಿಂತರೂ ಕೂಡ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಹರಿಯುವ ಡೋಣಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಸಾತಿಹಾಳ ಸೇತುವೆ ಜಲಾವೃತಗೊಂಡಿದೆ. ಹೀಗಾಗಿ ಬಸವನಬಾಗೇವಾಡಿ – ಸಾತಿಹಾಳ – ದೇವರಹಿಪ್ಪರಗಿ ಮಾರ್ಗದ ಸಂಪರ್ಕ ಕಡಿತಗೊಂಡಿದೆ.

    ಸೇತುವೆ ಜಲಾವೃತಗೊಂಡಿದ್ದರೂ ಜನರು ಅಪಾಯವನ್ನು ಲೆಕ್ಕಿಸದೇ ಸೇತುವೆ ಮೇಲೆ ಓಡಾಟ ನಡೆಸಿದ್ದಾರೆ. ಸೇತುವೆ ಮೇಲೆ ಹೊರಟಾಗ ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.ಇದನ್ನೂ ಓದಿ:ಬೆಂಗಳೂರಿನಲ್ಲಿ ದೆಹಲಿ ನಂತರದ ದೊಡ್ಡ ಮೆಟ್ರೋ ಸಂಚಾರ ಜಾಲ: ತೇಜಸ್ವಿ ಸೂರ್ಯ

  • ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು

    ಉತ್ತರಕಾಶಿಯಲ್ಲಿ ಮೇಘಸ್ಫೋಟ – ಈವರೆಗೆ 274 ಮಂದಿ ರಕ್ಷಣೆ, ಪತ್ತೆಯಾಗದ 59 ಜನರು

    ಹೆಲಿಕಾಪ್ಟರ್ ಬಳಸಿ ರಕ್ಷಣಾ ಕಾರ್ಯಾಚರಣೆ

    ಡೆಹ್ರಾಡೂನ್: ಧರಾಲಿಯಲ್ಲಿ (Dharali) ಸಂಭವಿಸಿದ್ದ ಭೀಕರ ಮೇಘಸ್ಫೋಟದಲ್ಲಿ ಸಿಲುಕಿ ನಾಪತ್ತೆಯಾಗಿದ್ದವರ ಪೈಕಿ 274 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಇನ್ನೂ 59 ಜನರ ರಕ್ಷಣೆಗಾಗಿ ಶೋಧ ಕಾರ್ಯ ನಡೆದಿದೆ.

    ಆ.5ರ ಮಧ್ಯಾಹ್ನ ಉತ್ತರಕಾಶಿಯ ಧರಾಲಿಯಲ್ಲಿ ಖೀರ್ ಗಂಗಾ ನದಿಯ ನೀರು ಭಾರೀ ಪ್ರಮಾಣದಲ್ಲಿ ಹರಿದು ಬಂದು ಮೇಘಸ್ಫೋಟ ಸಂಭವಿಸಿತ್ತು. ಪರಿಣಾಮ ಅಲ್ಲಿದ್ದ ಮನೆಗಳು, ಹೋಟೆಲ್, ಹೋಂಸ್ಟೇಗಳು ಸೇರಿ ಎಲ್ಲವೂ ಕೊಚ್ಚಿಕೊಂಡು ಹೋಗಿ ಸರ್ವನಾಶವಾಗಿತ್ತು. ಜೊತೆಗೆ ಗ್ರಾಮಸ್ಥರು, ಪ್ರವಾಸಿಗರು ಸೇರಿದಂತೆ ಹಲವರು ನಾಪತ್ತೆಯಾಗಿದ್ದರು. ಈವರೆಗೂ 274 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಈ ಪೈಕಿ ಗಂಗೋತ್ರಿ ಹಾಗೂ ಇತರ ಪ್ರವಾಸಿತಾಣಗಳಲ್ಲಿ ಸಿಲುಕಿಕೊಂಡಿದ್ದ ಗುಜರಾತ್‌ನ 131 ಮತ್ತು ಮಹಾರಾಷ್ಟ್ರದ 123 ಪ್ರವಾಸಿಗರನ್ನು ಉತ್ತರಕಾಶಿ ಹಾಗೂ ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿದೆ.ಇದನ್ನೂ ಓದಿ: ಮೇಘಸ್ಫೋಟವಲ್ಲ ಉತ್ತರಾಖಂಡದಲ್ಲಿ ಸಂಭವಿಸಿದ್ದು ಹಿಮಕೊಳ ಸ್ಫೋಟ!

    ನಾಪತ್ತೆಯಾದವರ ರಕ್ಷಣೆಗಾಗಿ ಪ್ಯಾರಾಮಿಲಿಟರಿ ಪಡೆ ಹಾಗೂ ವೈದ್ಯಕೀಯ ತಂಡಗಳು ಸರಕು ಸಾಗಾಣೆ ಮಾಡಲು ಬಳಸುವ ಚಿನೂಕ್ ಹೆಲಿಕಾಪ್ಟರ್ ಮತ್ತು ಏರ್-ಲಿಫ್ಟಿಂಗ್‌ನ್ನು ಬಳಸಿಕೊಳ್ಳುತ್ತಿವೆ. ಅದಲ್ಲದೇ ಇಂಡೋ ಟಿಬೆಟಿಯನ್ ಗಡಿ ಪೊಲೀಸರು ಉಪಯೋಗಿಸುವ ಹೆಲಿಕಾಪ್ಟರ್‌ಗಳನ್ನು ಕೂಡ ರಕ್ಷಣಾ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಇವುಗಳ ಬಳಕೆಯಿಂದಾಗಿ ರಕ್ಷಣಾ ಕಾರ್ಯ ಸುಗಮವಾಗಿ ಸಾಗುತ್ತಿದ್ದು, 50 ನಾಗರಿಕರು ಹಾಗೂ 9 ಸೈನಿಕರ ಪತ್ತೆಗಾಗಿ ಸದ್ಯ ಶೋಧ ಕಾರ್ಯ ಮುಂದುವರೆದಿದೆ.

    ಸದ್ಯ ಘಟನಾ ಸ್ಥಳಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತನಾಡಿದ್ದಾರೆ. ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

    ಮೇಘಸ್ಫೋಟದಿಂದಾಗಿ ಧರಾಲಿ ಗ್ರಾಮವು ಸಂಪೂರ್ಣವಾಗಿ ನಾಶವಾಗಿದೆ. ಈ ದುರಂತದಿಂದಾಗಿ ಧರಾಲಿ ಎಲ್ಲಾ ಸಂಪರ್ಕಗಳಿಂದ ಕಡಿತಗೊಂಡಿದೆ. ದಕ್ಷಿಣ ಹರ್ಸಿಲ್‌ನಲ್ಲಿರುವ ಸೇನಾ ಶಿಬಿರವೂ ಸಹ ನಾಶವಾಗಿದೆ ಎನ್ನಲಾಗಿದೆ. ದುರಂತದಲ್ಲಿ ಈವರೆಗೂ 5 ಜನರು ಸಾವನ್ನಪ್ಪಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.ಇದನ್ನೂ ಓದಿ: ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು

  • 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಜಾರಿ – ಭಾರೀ ಮಳೆಯಾಗುವ ಸಾಧ್ಯತೆ

    6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಜಾರಿ – ಭಾರೀ ಮಳೆಯಾಗುವ ಸಾಧ್ಯತೆ

    ಬೆಂಗಳೂರು: ಇಂದು ರಾಜ್ಯದ 6 ಜಿಲ್ಲೆಗಳಳಿಗೆ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್‌ ಜಾರಿ ಮಾಡಿದ್ದು ಭಾರೀ ಮಳೆಯಾಗುವ (Heavy Rain) ಸಾಧ್ಯತೆಯಿದೆ.

    ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೀದರ್ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆಯಾಗಿದೆ. ಗಂಟೆಗೆ 30-40ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ಕೆಲ‌ ಜಿಲ್ಲೆಗಳಲ್ಲಿ ಮಿಂಚು ಗುಡುಗು ಸಹಿತ ಭಾರೀ ಮಳೆ‌ಯಾಗಲಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆ ಹಲವೆಡೆ ರಸ್ತೆಗಳು ಜಲಾವೃತ

     
    ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಎಫ್‌ಐಆರ್‌ ದಾಖಲು

    ರಾತ್ರಿ ಇಡೀ ಬೆಂಗಳೂರು ನಗರದಾದ್ಯಂತ ಮಳೆಯಾಗಿತ್ತು. ಇಂದು ಬೆಳಗ್ಗೆ ನಗರದ ಹಲವು ಕಡೆ ತುಂತುರು ಮಳೆಯಾಗಿದೆ.

  • ವಿಜಯಪುರ | ನಿರಂತರ ಮಳೆಗೆ ಸರ್ಕಾರಿ ಶಾಲೆ ಜಲಾವೃತ – ವಿದ್ಯಾರ್ಥಿಗಳ ಪರದಾಟ

    ವಿಜಯಪುರ | ನಿರಂತರ ಮಳೆಗೆ ಸರ್ಕಾರಿ ಶಾಲೆ ಜಲಾವೃತ – ವಿದ್ಯಾರ್ಥಿಗಳ ಪರದಾಟ

    ವಿಜಯಪುರ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸರ್ಕಾರಿ ಶಾಲೆಯೊಂದು ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಇದನ್ನೂ ಓದಿ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    ಮಂಗಳವಾರ ರಾತ್ರಿಯಿಂದ ಶುರುವಾದ ಮಳೆ ನಿರಂತರವಾಗಿ 12 ಗಂಟೆಗಳ ಕಾಲ ಸುರಿದಿದೆ. ಪರಿಣಾಮ ವಿಜಯಪುರ (Vijayapura) ಜಿಲ್ಲೆಯ ತಿಕೋಟ ಗ್ರಾಮದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯೊಂದು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಶಾಲಾ ಆವರಣ ಕೆರೆಯಂತಾಗಿದ್ದು, ಕೊಠಡಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ನೀರು ಹೊರಹಾಕಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ನೀರಿನ ಪ್ರಮಾಣದಲ್ಲಿ ಇಳಿಮುಖ ಕಂಡಿದೆ.

    ಇನ್ನೂ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಕೆಲವೆಡೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮೆಕ್ಕೆಜೋಳ, ಜೋಳ, ಶೇಂಗಾ ಬೆಳೆಯುವ ರೈತರಿಗೆ ಸದ್ಯ ಮಳೆಯ ಅವಶ್ಯಕತೆ ಇತ್ತು. ಕೂಡ್ಲಿಗಿ ಹಾಗೂ ಸುತ್ತಮುತ್ತಲು ಭಾರೀ ಮಳೆ ಸುರಿದ ಪರಿಣಾಮ ದೊಡ್ಡ ಕೆರೆ ಕೋಡಿ ಬಿದ್ದಿದೆ. ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಆಗಸ್ಟ್ ತಿಂಗಳಲ್ಲಿ ಕೆರೆ ಕೋಡಿ ಬಿದ್ದಿರೋದ್ರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಇದನ್ನೂ ಓದಿ: ದೇವಭೂಮಿಯಲ್ಲಿ ಮೇಘಸ್ಫೋಟ – ಧರಾಲಿಯಲ್ಲಿ ಈವರೆಗೆ ಐವರ ಸಾವು ದೃಢ; 150 ಜನರ ರಕ್ಷಣೆ