Tag: heat wave

  • ರಾಜ್ಯದ ಹವಾಮಾನ ವರದಿ: 02-05-2024

    ರಾಜ್ಯದ ಹವಾಮಾನ ವರದಿ: 02-05-2024

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಒಣಹವೆಯ ವಾತಾವರಣ ಮುಂದುವರಿಯಲಿದೆ.

    ಕಳೆದ ಏಪ್ರಿಲ್ ತಿಂಗಳಿನಲ್ಲಿ ಶೂನ್ಯ ಮಳೆ ದಾಖಲಾಗಿದೆ. ಮುಂದಿನ 3-4 ದಿನಗಳು ಬಿಸಿಲಿನ ಅಬ್ಬರ ಜೋರಾಗಿರಲಿದೆ. ಸಿಲಿಕಾನ್ ಸಿಟಿಯಲ್ಲಿ ಕನಿಷ್ಠ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಲಿದೆ. ಜೊತೆಗೆ ಉತ್ತರ ಒಳನಾಡು ಭಾಗದಲ್ಲಿ ಹೀಟ್ ವೇವ್ ಮುಂದುವರಿಯಲಿದೆ.

    ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಬಳ್ಳಾರಿ, ವಿಜಯನಗರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಉಷ್ಣ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಕೋಲಾರ ಮತ್ತು ಮಡಿಕೇರಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ವಿಪರೀತ ತಾಪ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 38-26
    ಮಂಗಳೂರು: 33-27
    ಶಿವಮೊಗ್ಗ: 39-23
    ಬೆಳಗಾವಿ: 38-23
    ಮೈಸೂರು: 39-24

    ಮಂಡ್ಯ: 39-26
    ಮಡಿಕೇರಿ: 33-21
    ರಾಮನಗರ: 39-26
    ಹಾಸನ: 37-22
    ಚಾಮರಾಜನಗರ: 38-25
    ಚಿಕ್ಕಬಳ್ಳಾಪುರ: 38-26

    ಕೋಲಾರ: 38-26
    ತುಮಕೂರು: 38-25
    ಉಡುಪಿ: 34-27
    ಕಾರವಾರ: 33-24
    ಚಿಕ್ಕಮಗಳೂರು: 36-22
    ದಾವಣಗೆರೆ: 40-24

    weather

    ಹುಬ್ಬಳ್ಳಿ: 40-23
    ಚಿತ್ರದುರ್ಗ: 39-24
    ಹಾವೇರಿ: 40-23
    ಬಳ್ಳಾರಿ: 43-28
    ಗದಗ: 41-24
    ಕೊಪ್ಪಳ: 41-26

    weather (1)

    ರಾಯಚೂರು: 44-29
    ಯಾದಗಿರಿ: 43-28
    ವಿಜಯಪುರ: 42-27
    ಬೀದರ್: 41-25
    ಕಲಬುರಗಿ: 43-27
    ಬಾಗಲಕೋಟೆ: 42-26

  • ತೀವ್ರ ಬಿಸಿಲಿನಿಂದ ರಸ್ತೆಯಲ್ಲೇ ಕುಸಿದು ಬಿದ್ದ ಸಂಸದ ಡಾ.ಉಮೇಶ್ ಜಾಧವ್

    ತೀವ್ರ ಬಿಸಿಲಿನಿಂದ ರಸ್ತೆಯಲ್ಲೇ ಕುಸಿದು ಬಿದ್ದ ಸಂಸದ ಡಾ.ಉಮೇಶ್ ಜಾಧವ್

    ಕಲಬುರಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಇಂದು ಬಿಸಿಲಿನ ತಾಪಕ್ಕೆ ಸಂಸದ ಡಾ.ಉಮೇಶ್ ಜಾಧವ್ (Dr. Umesh Jadhav) ಬಿದ್ದಿದ್ದಾರೆ.

    ಕಲಬುರಗಿಯಲ್ಲಿ ವಿರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ ನಡೆಯುತ್ತಿತ್ತು. ಇಲ್ಲಿಗೆ ಜಾಧವ್‌ ಭೇಟಿ ನೀಡಿದ್ದರು. ಈ ವೇಳೆ ಬಿಸಿಲಿನ ತಾಪಕ್ಕೆ ತಲೆಸುತ್ತು ಬಂದು ರಸ್ತೆಯಲ್ಲಿಯೇ ಕುಸಿದು ಬಿದ್ದರು. ಬಳಿಕ ಅವರನ್ನು ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

    ಇದಕ್ಕೂ ಮುನ್ನ ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಾಧವ್‌, ಕಲಬುರಗಿಯಲ್ಲಿ ಲಾ ಆಂಡ್ ಸಂಪೂರ್ಣವಾಗಿ ಸತ್ತು ಹೋಗಿದೆ. ರಾಮ ಮಂದಿರ ಉದ್ಘಾಟನೆ ಮರುದಿನ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಆಗಿತ್ತು. ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳಿಗೆ ನಿನ್ನೆ ಜಾಮೀನು ಮಂಜೂರು ಆಗಿದೆ. ಜಾಮೀನಿನ ಮೇಲೆ ಹೊರ ಬಂದ ಆರೋಪಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ ಎಂದಿದ್ದರು.

    ಜನವರಿ 23 ರಂದು ಕಲಬುರಗಿ ಬಂದ್ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿದ್ರು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಆದರೆ ಅಂದು ಗಲಾಟೆ ಮಾಡಿದ ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಪ್ರಿಯಾಂಕ್ ಖರ್ಗೆ ಡಿಕ್ಟೇರ್ ಶಿಪ್ ಮಾಡ್ತಿದ್ದಾರೆ. ಡಿಎನ್ ಎ ಟೆಸ್ಟ್ ಮಾಡಿಸ್ತಾರಂತೆ , ಮೊದಲು ನಿಮ್ಮದು ಡಿಎನ್ ಎ ಟೆಸ್ಟ್ ಮಾಡಿಸಬೇಕು. ನಾವು ಒಬ್ಬ ಸಾಮಾನ್ಯ ದಲಿತ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕಾಗಿತ್ತು ಅಂತಾ ನಾವು ಹೇಳಿದ್ದೀವಿ. ಒಂದು ಸುಳ್ಳನ್ನ ನೂರು ಸಲ ಹೇಳಿ ಪ್ರಿಯಾಂಕ್ ಖರ್ಗೆ ಸತ್ಯ ಮಾಡೋದಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದರು.

  • ರಾಜ್ಯದ ಬಹುತೇಕ ಕಡೆ ಮುಂದಿನ 4 ದಿನ ಉಷ್ಣ ಅಲೆಯ ಎಚ್ಚರಿಕೆ

    ರಾಜ್ಯದ ಬಹುತೇಕ ಕಡೆ ಮುಂದಿನ 4 ದಿನ ಉಷ್ಣ ಅಲೆಯ ಎಚ್ಚರಿಕೆ

    ಬೆಂಗಳೂರು: ಕಲಬುರಗಿ, ಬಾಗಲಕೋಟೆ, ತುಮಕೂರು, ಕೋಲಾರ ಸೇರಿದಂತೆ ಕರ್ನಾಟಕದ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣ ಅಲೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.

    ಬಾಗಲಕೋಟೆ, ಕಲಬುರಗಿ, ಬೆಳಗಾವಿ, ರಾಯಚೂರು ಜಿಲ್ಲೆಗಳಲ್ಲಿ ಬೆಚ್ಚನೆಯ ವಾತಾವರಣ ಇರಲಿದ್ದು, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ರಾಯಚೂರಿನಲ್ಲಿ 43.0 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

    ಎಚ್​ಎಎಲ್​ನಲ್ಲಿ 37.6 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 38.5ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 25.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 38.2ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 37.0ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇದನ್ನೂ ಓದಿ: ತೀವ್ರವಾದ ಬಿಸಿ ಗಾಳಿ- ಜಾರ್ಖಂಡ್‌ನಲ್ಲಿ 8 ತರಗತಿವರೆಗೆ ಇಂದಿನಿಂದ ರಜೆ ಘೋಷಣೆ

    ಹೊನ್ನಾವರದಲ್ಲಿ 34.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 26.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 36.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 29.3 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಶಿರಾಲಿಯಲ್ಲಿ 37.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.6 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಪಣಂಬೂರಿನಲ್ಲಿ 35.4 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 27.3 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

    ಬೀದರ್​ನಲ್ಲಿ 39.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 26.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಬಾಗಲಕೋಟೆಯಲ್ಲಿ 42.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 28.1 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಧಾರವಾಡದಲ್ಲಿ 39.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 23.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಗದಗದಲ್ಲಿ 40.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 24.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

    ಚಾಮರಾಜನಗರದಲ್ಲಿ 40.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.2 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಚಿತ್ರದುರ್ಗದಲ್ಲಿ 39.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 24.1 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

  • ತೀವ್ರವಾದ ಬಿಸಿ ಗಾಳಿ- ಜಾರ್ಖಂಡ್‌ನಲ್ಲಿ 8 ತರಗತಿವರೆಗೆ ಇಂದಿನಿಂದ ರಜೆ ಘೋಷಣೆ

    ತೀವ್ರವಾದ ಬಿಸಿ ಗಾಳಿ- ಜಾರ್ಖಂಡ್‌ನಲ್ಲಿ 8 ತರಗತಿವರೆಗೆ ಇಂದಿನಿಂದ ರಜೆ ಘೋಷಣೆ

    ರಾಂಚಿ: ಜಾರ್ಖಂಡ್‌ನಲ್ಲಿ (Jharkhand) ತೀವ್ರವಾದ ಬಿಸಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 8 ತರಗತಿವರೆಗೆ ರಜೆ ಘೋಷಣೆ ಮಾಡಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಇದು ಜಾರಿಯಲ್ಲಿರುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಉಮಾ ಶಂಕರ್ ಸಿಂಗ್ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

    ಸರ್ಕಾರಿ, ಖಾಸಗಿ, ಅನುದಾನಿತ ಮತ್ತು ಅನುದಾನರಹಿತ ಸೇರಿದಂತೆ ಎಲ್ಲಾ ವರ್ಗದ ಶಾಲೆಗಳಿಗೆ ಇದು ಅನ್ವಯಿಸುತ್ತದೆ. ಆದರೆ ಸರ್ಕಾರಿ, ಸರ್ಕಾರೇತರ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದನ್ನೂ ಓದಿ: ತೀವ್ರವಾಗಿರುವ ಬಿಸಿಲಿನಿಂದ ನಿಮ್ಮನ್ನು ನೀವು ಹೀಗೆ ರಕ್ಷಿಸಿಕೊಳ್ಳಿ

    ಸಮಯ ಬದಲಾವಣೆ: ಪ್ರತಿದಿನ ಶಾಲೆಗೆ ಹಾಜರಾಗಬೇಕಾದ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಬೇಸಿಗೆ ರಜೆಯ ಬಗ್ಗೆ ಪ್ರತ್ಯೇಕ ಆದೇಶವನ್ನು ನೀಡಲಾಗುವುದು ಎಂದು ಅದು ತಿಳಿಸಿದೆ. 9 ರಿಂದ 12 ರವರೆಗಿನ ತರಗತಿಗಳು ಮುಂದುವರಿಯುತ್ತದೆ. ಅವರು ಪ್ರಾರ್ಥನೆ, ಕ್ರೀಡೆಗಳು ಮತ್ತು ಇತರ ಚಟುವಟಿಕೆಗಳನ್ನು ಹೊರತುಪಡಿಸಿ ಬೆಳಗ್ಗೆ 7 ರಿಂದ 11.30 ರವರೆಗೆ ತರಗತಿಗಳು ನಡೆಯುತ್ತವೆ.

    ಹವಾಮಾನ ಇಲಾಖೆಯು ಜಾರ್ಖಂಡ್‌ನ 13 ಜಿಲ್ಲೆಗಳಿಗೆ ಏಪ್ರಿಲ್ 30 ಮತ್ತು ಮೇ 1 ರಂದು ಬಿಸಿಗಾಳಿ ಎಚ್ಚರಿಕೆಯನ್ನು ನೀಡಿದೆ. ಭಾರತದ ಹವಾಮಾನ ಇಲಾಖೆ (IMD) ಪೂರ್ವ ಭಾರತದಲ್ಲಿ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ನೀಡಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಪೂರ್ವ ಭಾರತದಾದ್ಯಂತ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಎಚ್ಚರಿಕೆ ನೀಡಿದೆ.

  • ರಾಜ್ಯದ ಹವಾಮಾನ ವರದಿ: 30-04-2024

    ರಾಜ್ಯದ ಹವಾಮಾನ ವರದಿ: 30-04-2024

    ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ತಾಪಮಾನ ಕಂಡುಬಂದಿದೆ. ಅಲ್ಲದೇ ಮುಂದಿನ ಒಂದು ವಾರಗಳ ಕಾಲ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಹೀಟ್‌ವೇವ್ ಅಲರ್ಟ್ ನೀಡಲಾಗಿದೆ. ಕನಿಷ್ಠ ತಾಪಮಾನ 2-3 ಡಿಗ್ರಿ ಏರಿಕೆಯಾಗಲಿದೆ. ಮಡಿಕೇರಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ಉತ್ತರ ಕರ್ನಾಟಕದ ಕೆಲ ನಗರಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಮೇಲ್ಪಟ್ಟು ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 38-23
    ಮಂಗಳೂರು: 33-28
    ಶಿವಮೊಗ್ಗ: 39-24
    ಬೆಳಗಾವಿ: 38-23
    ಮೈಸೂರು: 39-23

    ಮಂಡ್ಯ: 40-24
    ಮಡಿಕೇರಿ: 31-19
    ರಾಮನಗರ: 39-24
    ಹಾಸನ: 37-22
    ಚಾಮರಾಜನಗರ: 39-24
    ಚಿಕ್ಕಬಳ್ಳಾಪುರ: 38-24

    ಕೋಲಾರ: 38-24
    ತುಮಕೂರು: 39-24
    ಉಡುಪಿ: 34-28
    ಕಾರವಾರ: 31-26
    ಚಿಕ್ಕಮಗಳೂರು: 35-21
    ದಾವಣಗೆರೆ: 41-25

    weather

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-24
    ಹಾವೇರಿ: 40-24
    ಬಳ್ಳಾರಿ: 43-28
    ಗದಗ: 41-25
    ಕೊಪ್ಪಳ: 41-26

    weather (1)

    ರಾಯಚೂರು: 43-31
    ಯಾದಗಿರಿ: 43-30
    ವಿಜಯಪುರ: 42-28
    ಬೀದರ್: 41-28
    ಕಲಬುರಗಿ: 43-31
    ಬಾಗಲಕೋಟೆ: 42-28

  • ಮೊದಲ ಹಂತದಲ್ಲಿ ಭಾರೀ ಪ್ರಮಾಣದ ಮತದಾನ – ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ ಫಸ್ಟ್‌ ಟೈಂ ವೋಟರ್ಸ್‌

    ಮೊದಲ ಹಂತದಲ್ಲಿ ಭಾರೀ ಪ್ರಮಾಣದ ಮತದಾನ – ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ ಫಸ್ಟ್‌ ಟೈಂ ವೋಟರ್ಸ್‌

    – ನಾಗಾಲ್ಯಾಂಡ್‌ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

    ನವದೆಹಲಿ: 2024ರ ಮಹಾ ಮತ ಸಂಗ್ರಾಮದಲ್ಲಿ (Lok Sabha Election) ಇವತ್ತು ಮೊದಲ ಹಂತದ ಎಲೆಕ್ಷನ್ ಮುಗಿದಿದೆ ಭರ್ಜರಿ ಮತದಾನ ನಡೆದಿದೆ. ಬಿಸಿ ಗಾಳಿಯ (Heat Wave) ನಡುವೆಯೂ ಭಾರೀ ಪ್ರಮಾಣದಲ್ಲಿ ಮತದಾನ ನಡೆದಿದೆ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುವ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ (Election Commission) ತಿಳಿಸಿದೆ.

    21 ರಾಜ್ಯದ 102 ಕ್ಷೇತ್ರಗಳಲ್ಲಿ ಮತದಾನ ನಡೆಯಿತು.ವಿಶೇಷ ಅಂದರೆ ನಾಗಾಲ್ಯಾಂಡ್‌ನ (Nagaland) 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ ನಡೆದ ಬಗ್ಗೆ ವರದಿಯಾಗಿದೆ. 20 ಶಾಸಕರು ಒಳಗೊಂಡತೆ 4 ಲಕ್ಷ ಮತದಾರರು ಮತಗಟ್ಟೆಗೆ ಬರಲಿಲ್ಲ. ನಾಗಾ ಬುಡಕಟ್ಟಿನ ಜನ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದಾರೆ. 8 ಕೇಂದ್ರ ಸಚಿವರು ಸೇರಿ 1,625 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಇದನ್ನೂ ಓದಿ: ಲವ್‌ ಜಿಹಾದ್‌ ಹೆಚ್ಚಾಗುತ್ತಿದೆ, ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಪೋಷಕರಲ್ಲಿ ನೇಹಾ ತಂದೆ ನಿರಂಜನ್‌ ಮನವಿ

    ರಾತ್ರಿ 7 ಗಂಟೆಗೆ ಚುನಾವಣಾ ಆಯೋಗ ಮಾಧ್ಯಮಗಳಿಗ ಬಿಡುಗಡೆ ಮಾಡಿದ ಮತ ಪ್ರಮಾಣದ ವಿವರ

    ನಾಗಪುರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಾಖಂಡದಲ್ಲಿ ಸಿಎಂ ಪುಷ್ಕರ್‌ಸಿಂಗ್ ಧಾಮಿ, ಬಾಬಾ ರಾಮ್‌ದೇವ್, ರಾಜಸ್ಥಾನದಲ್ಲಿ ಡಿಸಿಎಂ ದಿಯಾ ಕುಮಾರಿ, ಮಣಿಪುರದಲ್ಲಿ ಸಿಎಂ ಬೀರೇನ್ ಸಿಂಗ್, ಅಸ್ಸಾಂನಲ್ಲಿ ಸರ್ಬಾನಂದ ಸೋನಾವಾಲ್ ಹಕ್ಕು ಚಲಾಯಿಸಿದರು.  ಇದನ್ನೂ ಓದಿ: ಮಗನನ್ನು ಸೈನಿಕನನ್ನಾಗಿ ಮಾಡಬೇಕೆಂಬ ಕನಸು ಕಂಡಿದ್ದೆ: ಆರೋಪಿ ಫಯಾಜ್‌ ತಂದೆ

    ತಮಿಳುನಾಡಲ್ಲಿ ಸಿಎಂ ಸ್ಟಾಲಿನ್, ಎಡಪ್ಪಾಡಿ ಪಳನಿಸ್ವಾಮಿ, ಚಿದಂಬರಂ, ಅಣ್ಣಾಮಲೈ, ತಮಿಳ್‌ಸೈ ಸೌಂದರರಾಜನ್, ಸೂಪರ್‌ಸ್ಟಾರ್ ರಜಿನಿಕಾಂತ್, ಕಮಲ್‌ಹಾಸನ್, ಅಜಿತ್, ವಿಜಯ್ ಸೇರಿ ಹಲವರು ಮತದಾನ ಮಾಡಿದರು.

    ಚುನಾವಣೆ ವೇಳೆ ಅಲ್ಲಲ್ಲಿ ಹಿಂಸಾಚಾರ ನಡೆದಿವೆ. ಮಣಿಪುರದ ಇಂಫಾಲದಲ್ಲಿ ಮತಗಟ್ಟೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮತದಾರರು ದಿಕ್ಕಾಪಾಲಾಗಿ ಓಡಿದ್ದಾರೆ. ಬಂಗಾಳದ ಚಂದ್ಮರಿ, ಕೂಚ್‌ಬೆಹಾರ್‌ನಲ್ಲಿ ಕಲ್ಲು ತೂರಾಟ ನಡೆದಿದೆ. ದಿನ್‌ಹಟಾದಲ್ಲಿ ಟಿಎಂಸಿ ಕಾರ್ಯಕರ್ತರು ಬಾಂಬ್ ಎಸೆದಿದ್ದಾರೆ. ಇತ್ತ ಛತ್ತಿಸ್‌ಘಡದ ಬಿಜಾಪುರ್‌ನಲ್ಲಿ ಮತಗಟ್ಟೆ ಸಮೀಪ ಗ್ರೆನೇಡ್ ಸ್ಫೋಟಗೊಂಡಿದೆ. ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.

     

  • ರಾಜ್ಯದ ಹವಾಮಾನ ವರದಿ: 16-04-2024

    ರಾಜ್ಯದ ಹವಾಮಾನ ವರದಿ: 16-04-2024

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಒಣಹವೆ ವಾತಾವರಣ ಮುಂದುವರಿಯಲಿದ್ದು, ಏಪ್ರಿಲ್ 18ರಿಂದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮುಂದಿನ ಮೂರು ದಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 18ರ ಬಳಿಕ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೀದರ್, ಗದಗ, ಕೊಪ್ಪಳ, ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ, ರಾಮನಗರ, ತುಮಕೂರು, ವಿಜಯಪುರದಲ್ಲಿ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 36-22
    ಮಂಗಳೂರು: 33-27
    ಶಿವಮೊಗ್ಗ: 39-23
    ಬೆಳಗಾವಿ: 38-23
    ಮೈಸೂರು: 38-23

    ಮಂಡ್ಯ: 38-23
    ಮಡಿಕೇರಿ: 33-19
    ರಾಮನಗರ: 38-23
    ಹಾಸನ: 37-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 37-23

    ಕೋಲಾರ: 36-22
    ತುಮಕೂರು: 38-23
    ಉಡುಪಿ: 33-27
    ಕಾರವಾರ: 31-26
    ಚಿಕ್ಕಮಗಳೂರು: 36-21
    ದಾವಣಗೆರೆ: 40-24

    ಹುಬ್ಬಳ್ಳಿ: 39-24
    ಚಿತ್ರದುರ್ಗ: 38-23
    ಹಾವೇರಿ: 39-24
    ಬಳ್ಳಾರಿ: 41-27
    ಗದಗ: 39-24
    ಕೊಪ್ಪಳ: 39-26

    ರಾಯಚೂರು: 41-28
    ಯಾದಗಿರಿ: 41-28
    ವಿಜಯಪುರ: 39-28
    ಬೀದರ್: 38-27
    ಕಲಬುರಗಿ: 40-29
    ಬಾಗಲಕೋಟೆ: 10-27

  • ರಾಜ್ಯದ ಹವಾಮಾನ ವರದಿ: 10-04-2024

    ರಾಜ್ಯದ ಹವಾಮಾನ ವರದಿ: 10-04-2024

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಜನ ಬಸವಳಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗಿದ್ದು, ಸದ್ಯ ಮತ್ತಷ್ಟು ತಾಪಮಾನ ಹೆಚ್ಚಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-21
    ಮಂಗಳೂರು: 37-22
    ಶಿವಮೊಗ್ಗ: 39-22
    ಬೆಳಗಾವಿ: 38-23
    ಮೈಸೂರು: 37-22

    ಮಂಡ್ಯ: 37-22
    ಮಡಿಕೇರಿ: 33-18
    ರಾಮನಗರ: 37-22
    ಹಾಸನ: 36-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 36-21

    ಕೋಲಾರ: 35-19
    ತುಮಕೂರು: 37-22
    ಉಡುಪಿ: 34-27
    ಕಾರವಾರ: 33-26
    ಚಿಕ್ಕಮಗಳೂರು: 36-20
    ದಾವಣಗೆರೆ: 39-23

    ಹುಬ್ಬಳ್ಳಿ: 38-23
    ಚಿತ್ರದುರ್ಗ: 38-22
    ಹಾವೇರಿ: 39-23
    ಬಳ್ಳಾರಿ: 40-26
    ಗದಗ: 39-24
    ಕೊಪ್ಪಳ: 39-25

    weather

    ರಾಯಚೂರು: 39-26
    ಯಾದಗಿರಿ: 39-27
    ವಿಜಯಪುರ: 39-27
    ಬೀದರ್: 37-24
    ಕಲಬುರಗಿ: 39-27
    ಬಾಗಲಕೋಟೆ: 40-27

  • ಬಿಸಿಲಿನ ಆರ್ಭಟಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ: ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಆರಂಭ

    ಬಿಸಿಲಿನ ಆರ್ಭಟಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ: ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಆರಂಭ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ (Raichur) ದಿನೇ ದಿನೇ ತಾಪಮಾನ ಹೆಚ್ಚಳವಾಗುತ್ತಲೇ ಇದೆ. ತಾಪಮಾನ ಹೆಚ್ಚಳದಿಂದ ಜನ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ (RIMS Hospital) ಹೀಟ್ ಸ್ಟ್ರೋಕ್ ಮ್ಯಾನೇಜ್ಮೆಂಟ್‌ ವಾರ್ಡ್‌‌ ಅನ್ನು ತೆರೆಯಲಾಗಿದೆ. ಬಿಸಿಲಿನ ತಾಪದಿಂದ ಉಂಟಾದ ಕಾಯಿಲೆಗಳ ಚಿಕಿತ್ಸೆಗೆ ರಿಮ್ಸ್ ವೈದ್ಯರು ವಿಶೇಷ ವಾರ್ಡ್ ಆರಂಭಿಸಿದ್ದಾರೆ.

    ಇಡೀ ರಾಜ್ಯದಲ್ಲಿ ಈ ಬಾರಿಯ ಬೇಸಿಗೆ (Summer) ಜನರನ್ನ ನಿತ್ರಾಣ ಮಾಡಿದೆ. ಅದರಲ್ಲೂ ಬಿಸಿಲನಾಡು ರಾಯಚೂರಿನಲ್ಲಿ ದಾಖಲೆಯ ತಾಪಮಾನ‌ ಜನರನ್ನ ಮನೆಯಿಂದ ಹೊರ ಬರದಂತೆ ಮಾಡಿದೆ. ಹೀಗಾಗಿ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಯಚೂರಿನ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಅತಿಯಾದ ಶಾಖ (Heat Wave) ಆರೋಗ್ಯ ಸಮಸ್ಯೆಗಳ ವಿಶೇಷ ವಾರ್ಡನ್ನ ತೆರೆಯಲಾಗಿದೆ. ಸದ್ಯ 8 ಹಾಸಿಗೆಗಳ ವಾರ್ಡನ್ನ ಅಗತ್ಯಕ್ಕೆ ತಕ್ಕಂತೆ 20 ಬೆಡ್‌ವರೆಗೆ ವಿಸ್ತರಿಸಲು ರಿಮ್ಸ್ ಆಡಳಿತ ಮಂಡಳಿ ಮುಂದಾಗಿದೆ.

    ವಿಶೇಷ ವಾರ್ಡ್‌ನಲ್ಲಿ ಅಗತ್ಯ ಫ್ಲೂಯಿಡ್ಸ್, ಡಿಫಿಬ್ರಲೇಟರ್ ಸೇರಿದಂತೆ ಅವಶ್ಯಕ ಪರಿಕರಗಳು, ಔಷಧಿ ವ್ಯವಸ್ಥೆ ಮಾಡಲಾಗಿದೆ. ಮಳೆ ಅಭಾವದಿಂದ ಈ ಬಾರಿ ರಣ ಬೇಸಿಗೆ ಇರುವುದರಿಂದ ಮೊದಲ ಬಾರಿಗೆ ಹೀಟ್ ಸ್ಟ್ರೋಕ್ ಮ್ಯಾನೇಜಮೆಂಟ್ ವಾರ್ಡ್‌ನ್ನ ತೆರೆಯಲಾಗಿದೆ. ಬೇಸಿಗೆಯ ಬೇಗೆಯಿಂದ ದೇಹದಲ್ಲಿ ಲವಣಾಂಶಗಳು ಏರುಪೇರಾದರೆ ಕಿಡ್ನಿ, ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆ ವಿಶೇಷ ವಾರ್ಡ್ ತೆರೆಯಲಾಗಿದೆ.

    ಇನ್ನೂ ರಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ಈವರೆಗೆ ಯಾವುದೇ ರೋಗಿಗಳು ದಾಖಲಾಗದಿದ್ದರು, ಬಿಸಿಲಿನ ಅಬ್ಬರಕ್ಕೆ ಉರಿ ಮೂತ್ರ ತೊಂದರೆ, ಕಿಡ್ನಿ ಸಮಸ್ಯೆ, ಕಿಡ್ನಿಯಲ್ಲಿ ಕಲ್ಲು, ಡಿಹೈಡ್ರೇಷನ್, ಹೆಚ್ಚು ಸುಸ್ತಾಗುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ಹಲವಾರು ಜನ ಬಳಲುತ್ತಿದ್ದು. ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ನಿರ್ಜಲೀಕರಣ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಅನಾರೋಗ್ಯ ಪೀಡಿತರು ಎಡತಾಕುತ್ತಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡುವಂತೆ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಬಿಸಿಲಿನಲ್ಲಿ ಹೆಚ್ಚು ಓಡಾಡುವುದು ಅಥವಾ ಕೆಲಸ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.

  • ರಾಜ್ಯದ ಹವಾಮಾನ ವರದಿ: 09-04-2024

    ರಾಜ್ಯದ ಹವಾಮಾನ ವರದಿ: 09-04-2024

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. 8 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆಯಾಗಿದ್ದು, ಸದ್ಯ ಮತ್ತಷ್ಟು ತಾಪಮಾನ ಹೆಚ್ಚಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ, ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 35-20
    ಮಂಗಳೂರು: 33-27
    ಶಿವಮೊಗ್ಗ: 39-22
    ಬೆಳಗಾವಿ: 38-23
    ಮೈಸೂರು: 37-21

    weather (1)

    ಮಂಡ್ಯ: 38-22
    ಮಡಿಕೇರಿ: 33-18
    ರಾಮನಗರ: 37-22
    ಹಾಸನ: 36-20
    ಚಾಮರಾಜನಗರ: 37-21
    ಚಿಕ್ಕಬಳ್ಳಾಪುರ: 36-20

    weather

    ಕೋಲಾರ: 34-20
    ತುಮಕೂರು: 37-21
    ಉಡುಪಿ: 34-26
    ಕಾರವಾರ: 33-26
    ಚಿಕ್ಕಮಗಳೂರು: 35-19
    ದಾವಣಗೆರೆ: 39-23

    Weather

    ಹುಬ್ಬಳ್ಳಿ: 39-23
    ಚಿತ್ರದುರ್ಗ: 38-23
    ಹಾವೇರಿ: 39-23
    ಬಳ್ಳಾರಿ: 40-26
    ಗದಗ: 39-25
    ಕೊಪ್ಪಳ: 39-26

    weather

    ರಾಯಚೂರು: 39-26
    ಯಾದಗಿರಿ: 40-27
    ವಿಜಯಪುರ: 39-27
    ಬೀದರ್: 37-24
    ಕಲಬುರಗಿ: 39-27
    ಬಾಗಲಕೋಟೆ: 40-27