Tag: heart problem

  • 7 ದಿನದ ಹಸುಗೂಸಿಗೆ ಹೃದಯ ಸಮಸ್ಯೆ – ಝೀರೋ ಟ್ರಾಫಿಕ್‍ನಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ರವಾನೆ

    7 ದಿನದ ಹಸುಗೂಸಿಗೆ ಹೃದಯ ಸಮಸ್ಯೆ – ಝೀರೋ ಟ್ರಾಫಿಕ್‍ನಲ್ಲಿ ಶಿವಮೊಗ್ಗದಿಂದ ಬೆಂಗ್ಳೂರಿಗೆ ರವಾನೆ

    ಶಿವಮೊಗ್ಗ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 7 ದಿನದ ಹಸುಗೂಸಿನ ಜೀವ ಉಳಿಸಲು ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಶಿವಮೊಗ್ಗದಿಂದ ಬೆಂಗಳೂರಿಗೆ ಅಂಬುಲೆನ್ಸ್‌ನಲ್ಲಿ ರವಾನಿಸಲಾಗಿದೆ.

    ಮೆಗ್ಗಾನ್ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗದಿಂದ ಜೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಕಂದಮ್ಮನನ್ನು ಅಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಬೇಲಿ ಮಲ್ಲೂರು ಗ್ರಾಮದ ಸ್ವಾಮಿ ಹಾಗೂ ಸುಧಾ ದಂಪತಿಗೆ ಫೆ. 4ರಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಜನನದ ನಂತರ ಮಗುವನ್ನು ಪರೀಕ್ಷಿಸಿದ ವೈದ್ಯರಿಗೆ ಮಗುವಿನ ಹೃದಯದಲ್ಲಿ ಸಣ್ಣ ರಂಧ್ರವಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಕೇವಲ 4 ಗಂಟೆ 32 ನಿಮಿಷದಲ್ಲಿ 370 ಕಿ.ಮೀ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ

    ಸ್ಕ್ಯಾನಿಂಗ್ ವರದಿಯಲ್ಲಿ ಸಹ ಹೃದಯದಲ್ಲಿ ರಂಧ್ರ ಇರುವುದು ದೃಢಪಟ್ಟಿದೆ. ಹೀಗಾಗಿ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಪೋಷಕರಿಗೆ ಸಲಹೆ ನೀಡಿದ್ದಾರೆ.

    ಈ ಹಿನ್ನೆಲೆ ಇಂದು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಮಗುವನ್ನು ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಅಂಬುಲೆನ್ಸ್‌ನಲ್ಲಿ ಕಳುಹಿಸಲಾಯಿತು. ನಗರದ ದೊಡ್ಡಪೇಟೆ ಠಾಣೆ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಜೊತೆಗೆ ಎಸ್ಕಾರ್ಟ್ ವಾಹನವನ್ನು ಅಂಬುಲೆನ್ಸ್ ಜೊತೆ ಕಳುಹಿಸಿದ್ದಾರೆ.

  • ಖಾತ್ಯ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

    ಖಾತ್ಯ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲು

    ಮುಂಬೈ: ಭಾರತೀಯ ಸಿನಿಮಾರಂಗದಲ್ಲಿ ಹೆಸರುವಾಸಿಯಾದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ ಮಣಿರತ್ನಂ(63) ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಮುಂಬೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದಾಗಲೇ ಮಣಿರತ್ನಂ ಅವರಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮುಂಬೈನಿಂದ ಚೆನ್ನೈನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

    ನಿರ್ದೇಶಕ ಮಣಿರತ್ನಂ ಅವರ ಅನಾರೋಗ್ಯ ಕುರಿತಾಗಿ ಸಾಮಾಜಿಕ ಜಾಲತಾಣಗಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ಮಣಿರತ್ನಂ ಅವರಿಗೆ ಈ ಹಿಂದೆಯೇ ಅಂದರೆ 2004 ರಲ್ಲಿ ‘ಯುವ’ ಸಿನಿಮಾ ಶೂಟಿಂಗ್ ನಲ್ಲಿದ್ದ ಸಂದರ್ಭದಲ್ಲಿ ಸೆಟ್‍ನಲ್ಲಿಯೇ ಹೃದಯಾಘಾತವಾಗಿತ್ತು. ಇದೇ ಕಾರಣದಿಂದ 2015 ರಲ್ಲಿ ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

    ಮಣಿರತ್ನಂ ಅವರು ಕನ್ನಡ, ಹಿಂದಿ, ತಮಿಳು ಚಿತ್ರಗಳಲ್ಲಿ ಹಲವಾರು ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಅವರು ಪ್ರಸ್ತುತ ‘ಪೊನ್ನಿಯನ್ ಸೆಲ್ವನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ‘ಅಮರಾರ್ ಕಲ್ಕಿ’ ಕಾದಂಬರಿಯನ್ನು ಆಧಾರಿತ ಚಿತ್ರವಾಗಿದೆ.

    https://twitter.com/LokeshJey/status/1140297666800152576

    ಈ ಸಿನಿಮಾದಲ್ಲಿ ಬಿಗ್ ಸ್ಟಾರ್ ಗಳಾದ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ಅಮಿತಾಭ್ ಬಚ್ಚನ್, ಅಮಲಾ ಪೌಲ್, ಜಯರಾಮ್ ರವಿ, ಕಾರ್ತಿ ಮತ್ತು ಅನುಷ್ಕಾ ಶೆಟ್ಟಿ ಮುಂತಾದ ನಾಯಕರು ಅಭಿನಯಿಸುತ್ತಿದ್ದಾರೆ.

  • ಉತ್ತರಕರ್ನಾಟಕದಲ್ಲೇ ಫಸ್ಟ್ ಟೈಂ- ವೈದ್ಯರಿಂದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

    ಉತ್ತರಕರ್ನಾಟಕದಲ್ಲೇ ಫಸ್ಟ್ ಟೈಂ- ವೈದ್ಯರಿಂದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

    ಧಾರವಾಡ: ಜಗತ್ತಿನಲ್ಲಿ ಇತ್ತೀಚೆಗೆ ಅತೀ ಹೆಚ್ಚು ಜನಪ್ರಿಯವಾಗಿರುವ ಕನಿಷ್ಠ ಗಾಯದ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಧಾರವಾಡ ನಾರಾಯಣ ಹೃದಯಾಲಯ ಯಶಸ್ವಿಯಾಗಿದೆ. ವಿಶೇಷ ಅಂದ್ರೆ ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಇಂತಹದ್ದೊಂದು ಪ್ರಯತ್ನ ಮಾಡಿ ಸಾಧನೆ ಮಾಡಿದ ಆಸ್ಪತ್ರೆ ಎಂದು ಎನಿಸಿಕೊಂಡಿದೆ.

    ಈ ಚಿಕಿತ್ಸೆ ಮೂಲಕ ತೀವ್ರ ಹೃದ್ರೋಗದಿಂದ ಬಳಲುತ್ತಿದ್ದ ಐದು ಜನಕ್ಕೆ ಚಿಕಿತ್ಸೆ ನೀಡಿ ನಾರಾಯಣ ಹೃದಯಾಲಯ ಹೊಸ ಜೀವನ ಕಲ್ಪಿಸಿದೆ. 28 ವರ್ಷದ ಸಾವಿತ್ರಿ ಕಮ್ಮಾರ್, 40 ವರ್ಷದ ಲಕ್ಷ್ಮಿದೇವಿ ಲೋಕನಗೌಡರ, 21 ವರ್ಷದ ವಿಶಾಲ್ ದೊಡ್ಡಮನಿ ಮತ್ತು ವಿಶೇಷ ಅಂದ್ರೆ 4 ವರ್ಷದ ಚೇತನ್ ಎಂಬಾತನಿಗೆ ಈ ಚಿಕಿತ್ಸೆ ಮೂಲಕ ಗುಣಪಡಿಸಿ ವೈದ್ಯ ಲೋಕದ ಸವಾಲು ಮೆಟ್ಟಿನಿಂತಿದ್ದಾರೆ.

    ಬೆಂಗಳೂರಿನ ಹೆಸರಾಂತ ವೈದ್ಯ ಡಾ. ರವಿಶಂಕರ್ ಶೆಟ್ಟಿ, ಧಾರವಾಡದ ಡಾ. ಷಣ್ಮುಖ ಹಿರೇಮಠ್, ಡಾ. ವಿವೇಕಾನಂದ ಗಜಪತಿ, ಡಾ. ಪ್ರಮೋದ್ ಹೂನ್ನೂರ ಅವರನ್ನೊಳಗೊಂಡ ತಂಡ ಈ ವಿನೂತನ ಶಸ್ತ್ರ ಚಿಕಿತ್ಸೆ ಮಾಡಿ ಯಶಸ್ವಿಯಾಗಿದೆ.

    ಈ ಚಿಕಿತ್ಸೆ ವಿಧಾನದ ಬಗ್ಗೆ ವಿವರಿಸಿದ ವೈದ್ಯ ಡಾ. ರವಿಶಂಕರ್, ಈ ವಿಧಾನದಲ್ಲಿ ಕೇವಲ ಪಕ್ಕೆಲುಬಿನ ಬದಿಯಲ್ಲಿ ಸಣ್ಣ ರಂಧ್ರವನ್ನು ಕೊರೆದು ಶಸ್ತ್ರ ಚಿಕಿತ್ಸೆ ನಿರ್ವಹಿಸಲಾಗುತ್ತದೆ. ಜೊತೆಗೆ ಹೃದಯ ಮತ್ತು ಶ್ವಾಸಕೋಶದ ಬೈಪಾಸ್ ಯಂತ್ರದ ನೆರವಿನಲ್ಲಿ ರಕ್ತನಾಳ ಹಾಗೂ ಕಿರು ರಕ್ತನಾಳಗಳನ್ನು ಕೆಲವೊಮ್ಮೆ ಆಂತರಿಕ ನರಸಮೂಹಕ್ಕೆ ಚಿಕಿತ್ಸೆ ನೀಡಲಾಗುತ್ತೆ ಎಂದು ವಿವರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾರ್ಟ್ ಪ್ರಾಬ್ಲಮ್‍ನಿಂದ ಬಳಲುತ್ತಿರೋ ಪುಟ್ಟ ಬಾಲೆಯ ಆಸೆ ನೆರವೇರಿಸಿದ್ರು ಚಾಲೆಂಜಿಂಗ್ ಸ್ಟಾರ್

    ಹಾರ್ಟ್ ಪ್ರಾಬ್ಲಮ್‍ನಿಂದ ಬಳಲುತ್ತಿರೋ ಪುಟ್ಟ ಬಾಲೆಯ ಆಸೆ ನೆರವೇರಿಸಿದ್ರು ಚಾಲೆಂಜಿಂಗ್ ಸ್ಟಾರ್

    ಬೆಂಗಳೂರು: ನೆಚ್ಚಿನ ನಟರನ್ನ ದೇವರೆಂದೇ ನಂಬುವ ಎಷ್ಟೋ ಅಭಿಮಾನಿಗಳಿದ್ದಾರೆ. ಇಂಥದ್ದೊಂದು ಘಟನೆ ಇದೀಗ ನಡೆದಿದೆ.

    ದರ್ಶನ್ ಪುಟ್ಟ ಅಭಿಮಾನಿ ಸಾವಿನ ಕೊನೆ ಘಳಿಗೆಯಲ್ಲಿದ್ದಾಗಲೂ ನಟರನ್ನ ನೋಡೋದಕ್ಕೆ ತವಕಿಸುತ್ತಿದ್ದರು. ಇದೀಗ ಆ ಬಾಲೆಯ ಆಸೆ ಪೂರೈಸಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.

    ದರ್ಶನ್ ಅವರ ಕಟ್ಟಾ ಅಭಿಮಾನಿ 11 ವರ್ಷದ ಪೂರ್ವಿಕಾ ಕಳೆದೆರೆಡು ವರ್ಷದಿಂದ ಹಾರ್ಟ್ ಪ್ರಾಬ್ಲಮ್‍ನಿಂದಾಗಿ ಬಳಲುತ್ತಿದ್ದು, ಹೊಟ್ಟೆಯಲ್ಲಿ ನೀರು ತುಂಬಿದೆ. ಈ ಕಾರಣ ಆಕೆ ಬದುಕೋದು ಕಷ್ಟ ಎಂದು ವೈದ್ಯರು ಹೇಳುತ್ತಿದ್ದಂತೆಯೇ ಆಕೆಯ ಕೊನೆಯ ಆಸೆಯ ಪ್ರಕಾರ ತನ್ನ ನೆಚ್ಚಿನ ನಟ ದರ್ಶನ್‍ರನ್ನ ಮೀಟ್ ಮಾಡಿದ್ದಾರೆ.

    ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ದರ್ಶನ್ ಅವರು ತಮ್ಮ ಪುಟ್ಟ ಅಭಿಮಾನಿಯನ್ನು ಸೆಟ್‍ಗೆ ಕರೆಸಿಕೊಂಡು ಪಕ್ಕದಲ್ಲಿ ಕೂರಿಸಿಕೊಂಡು ಧೈರ್ಯತುಂಬಿ ಕಳಿಸಿದ್ದಾರೆ.

    ಸದ್ಯ ಮಂಡ್ಯ ಮೂಲದ ಪೂರ್ವಿಕಾ ಕಳೆದ ಹಲವು ತಿಂಗಳಿಂದ ಚಿಕ್ಕಮಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.