Tag: hear attack

  • ಧಾರವಾಡದ ಡಿವೈಎಸ್‍ಪಿ ಶ್ರವಣ್ ಗಾಂವ್ಕರ್ ನಿಧನ

    ಧಾರವಾಡದ ಡಿವೈಎಸ್‍ಪಿ ಶ್ರವಣ್ ಗಾಂವ್ಕರ್ ನಿಧನ

    ಧಾರವಾಡ: ಜಿಲ್ಲಾ ಮೀಸಲು ಪಡೆಯ ಡಿವೈಎಸ್‍ಪಿ ಆಗಿದ್ದ ಶ್ರವಣ್ ಗಾಂವ್ಕರ್ (42) ಮಂಗಳವಾರ ನಸುಕಿನ ಜಾವ ನಿಧನರಾಗಿದ್ದಾರೆ.

    ಶ್ರವಣ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಕ್ಷಣ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದ್ರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

    ಧಾರವಾಡದ ರಜತಗಿರಿ ಬಡಾವಣೆಯಲ್ಲಿ ಶ್ರವಣ್ ಅವರ ಮನೆ ಇದ್ದು, ಇದೀಗ ಅವರು ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಸದ್ಯ ಶ್ರವಣ್ ಅವರ ಅಕಾಲಿಕ ನಿಧನಕ್ಕೆ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಂಬನಿ ಮಿಡಿದಿದ್ದು, ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರು ಬನಶಂಕರಿ ದೇಗುಲದಲ್ಲಿಲ್ಲ ಸಂಕ್ರಾಂತಿ – ಅರ್ಚಕರ ಸಾವಿನಿಂದ ಸೂತಕದ ಛಾಯೆ

    ಬೆಂಗ್ಳೂರು ಬನಶಂಕರಿ ದೇಗುಲದಲ್ಲಿಲ್ಲ ಸಂಕ್ರಾಂತಿ – ಅರ್ಚಕರ ಸಾವಿನಿಂದ ಸೂತಕದ ಛಾಯೆ

    ಬೆಂಗಳೂರು: ನಗರದ ಬನಶಂಕರಿ ದೇಗುಲದಲ್ಲಿ ಈ ಬಾರಿ ಸಂಕ್ರಾಂತಿ ಸಂಭ್ರಮವಿಲ್ಲ. ಯಾಕಂದ್ರೆ ದೇವಳದ ಮುಖ್ಯ ಅರ್ಚಕರ ಅಕಾಲಿಕ ಸಾವಿನಿಂದ ಬನಶಂಕರಿ ದೇಗುಲದಲ್ಲಿ ಸೂತಕದ ಛಾಯೆ ಆವರಿಸಿದೆ.

    ಹೃದಯಾಘಾತದಿಂದ ಭಾನುವಾರ ರಾತ್ರಿ ಪ್ರಧಾನ ಅರ್ಚಕ ಸೂರ್ಯ ಪ್ರಕಾಶ್ ಮೃತಪಟ್ಟಿದ್ದಾರೆ. ನಿನ್ನೆ ಪೂಜೆ ಮುಗಿಸಿ ಮನೆಗೆ ಮರಳಿದ ನಂತರ ಸೂರ್ಯಪ್ರಕಾಶ್ ಅವರಿಗೆ ಹೃದಯಾಘಾತವಾಗಿದೆ. ಹೀಗಾಗಿ ಈ ಸೂತಕದಿಂದಾಗಿ ಹಬ್ಬದ ದಿನವೇ ಬನಶಂಕರಿ ದೇಗುಲ ಬಂದ್ ಆಗಿದೆ.

    ಈ ಬಗ್ಗೆ ಮಾಹಿತಿ ತಿಳಿಯದ ಭಕ್ತರು ಹಬ್ಬದ ನಿಮಿತ್ತ ದೇವಸ್ಥಾನಕ್ಕೆ ಬಂದು ವಾಪಾಸ್ಸಾಗುತ್ತಿದ್ದಾರೆ.