Tag: Healthy food

  • ಕಾರ್ನ್‌ನಿಂದ ಮಾಡಿ ಕ್ರಿಸ್ಪಿ ಪಕೋಡಾ

    ಕಾರ್ನ್‌ನಿಂದ ಮಾಡಿ ಕ್ರಿಸ್ಪಿ ಪಕೋಡಾ

    ಸ್ವೀಟ್‌ ಕಾರ್ನ್‌ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಕರಿಗೂ ಇಷ್ಟವಾಗುತ್ತೆ. ಬೇಯಿಸಿಕೊಂಡು, ಸುಟ್ಟುಕೊಂಡು ತಿನ್ನೋದು ಅಂದ್ರೇನೆ ಮಜಾ. ಆದ್ರೆ ಯಾವಾಗಲೂ ಒಂದೇ ರೀತಿ ತಿಂದು ಬೇಜಾರಾಗಿದ್ಯಾ? ಅದಕ್ಕೆ ಹೊಸದಾಗಿ ಮಾಡಿ ಕಾರ್ನ್‌ ಪಕೋಡಾ….

    ಬೇಕಾಗುವ ಸಾಮಗ್ರಿಗಳು;
    ಕಾರ್ನ್‌
    ಬೆಳ್ಳುಳ್ಳಿ
    ಮೆಣಸಿನಕಾಯಿ
    ಕರಿಬೇವು
    ಅರಿಶಿಣ
    ಕೆಂಪು ಖಾರದ ಪುಡಿ
    ಧನಿಯಾ ಪುಡಿ
    ಇಂಗು
    ಗರಂ ಮಸಾಲಾ
    ರುಚಿಗೆ ತಕ್ಕಷ್ಟು ಉಪ್ಪು
    ಕಡಲೆ ಹಿಟ್ಟು/ಬಜ್ಜಿ ಹಿಟ್ಟು
    ಅಕ್ಕಿ ಹಿಟ್ಟು
    ಎಣ್ಣೆ

    ಮಾಡುವ ವಿಧಾನ:
    ಮೊದಲಿಗೆ ಕಾರ್ನ್‌ನನ್ನು ಚೆನ್ನಾಗಿ ಬೇಯಿಸಿ. ಬೇಯಿಸಿದ ಕಾರ್ನ್‌ ಆರಿದ ನಂತರ ಒಂದು ಬೌಲ್‌ಗೆ ಹಾಕಿಕೊಳ್ಳಿ. ಅದಕ್ಕೆ ಉದ್ದವಾಗಿ ಕತ್ತರಿಸಿದ ಈರುಳ್ಳಿ, ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ, ಮೆಣಸಿನಕಾಯಿ, ಕರಿಬೇವು, ಅರಿಶಿಣ, ಕೆಂಪು ಖಾರದ ಪುಡಿ, ಧನಿಯಾ ಪುಡಿ, ಸ್ವಲ್ಪ ಇಂಗು, ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ.

    ಆನಂತರ ಅದಕ್ಕೆ ಕಡಲೆ ಹಿಟ್ಟು ಅಥವಾ ಬಜ್ಜಿ ಹಿಟ್ಟು ಹಾಕಿ ಕಲಸಿಕೊಳ್ಳಿ. ಕೊನೆಗೆ ಅಗತ್ಯಕ್ಕನುಸಾರವಾಗಿ ನೀರು ಹಾಕಿಕೊಂಡು ಬಜ್ಜಿ ಮಾಡುವ ಹದಕ್ಕೆ ಮಿಶ್ರಣಮಾಡಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ಬಳಿಕ ಎಣ್ಣೆಯಲ್ಲಿ ಚೆನ್ನಾಗಿ ಕರಿದರೆ ಕಾರ್ನ್‌ ಪಕೋಡಾ ತಯಾರಾಗುತ್ತದೆ.

    ಇದನ್ನೂ ಸಾಸ್‌, ಚಟ್ನಿಯೊಂದಿಗೆ ಸವಿಯಬಹುದು!

  • ಮನೆಯಲ್ಲೇ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ತಯಾರಿಸಿ

    ಮನೆಯಲ್ಲೇ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ತಯಾರಿಸಿ

    ಪ್ರತಿದಿನ ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದ್ದು. ಅದರಲ್ಲೂ ಕ್ಯಾರೆಟ್‌ ಸೂಪ್‌ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಹೌದು, ಕ್ಯಾರೆಟ್‌ ಸೂಪ್‌ನಲ್ಲಿ ಅಧಿಕ ಪ್ರೋಟಿನ್‌ ಅಂಶವಿದೆ. ಈ ಕ್ಯಾರೆಟ್ ಸೂಪ್‌(Carrot Soup) ಸವಿಯಲು ನೀವು ರೆಸ್ಟೋರೆಂಟ್‌ ಹೋಗಬೇಕು ಎಂದೇನಿಲ್ಲಾ. ರುಚಿ ರುಚಿಯಾದ, ಆರೋಗ್ಯಕರವಾದ ರೆಸ್ಟೋರೆಂಟ್‌ ಶೈಲಿಯ ಕ್ಯಾರೆಟ್‌ ಸೂಪ್‌ ಮಾಡೋದು ಹೇಗೆ ಅಂತಾ ನಾವು ಹೇಳಿಕೊಡುತ್ತೇವೆ.

    ಬೇಕಾಗಿರುವ ಸಾಮಾಗ್ರಿಗಳು:
    ಎಣ್ಣೆ – 2 ಟೇಬಲ್‌ ಸ್ಪೂನ್‌
    ಬೆಳ್ಳುಳ್ಳಿ – 2
    ಕ್ಯಾರೆಟ್ – 4
    ಆಲೂಗಡ್ಡೆ – ½
    ಶುಂಠಿ – ½
    ಈರುಳ್ಳಿ – ½
    ಉಪ್ಪು – ಸ್ವಲ್ಪ
    ಪುದೀನ ಸೊಪ್ಪು – ಸ್ವಲ್ಪ
    ಕರಿ ಮೆಣಸು – ½ ಟೀಸ್ಪೂನ್

    ಮಾಡುವ ವಿಧಾನ:
    * ಮೊದಲನೆಯದಾಗಿ, ಪ್ರೆಶರ್ ಕುಕ್ಕರ್‌ಗೆ 2 ಟೇಬಲ್‌ ಸ್ಪೂನ್‌ ಎಣ್ಣೆ ಹಾಕಿ, 2 ಬೆಳ್ಳುಳ್ಳಿ ಮತ್ತು 1 ಇಂಚು ಶುಂಠಿಯನ್ನು ಹಾಕಿ.
    * ಬಳಿಕ ½ ಈರುಳ್ಳಿ ಹಾಕಿ ಒಂದು ನಿಮಿಷ ಫ್ರೈ ಮಾಡಿ.
    * ಈಗ 4 ಕ್ಯಾರೆಟ್, ¼ ಆಲೂಗಡ್ಡೆ ಮತ್ತು 1 ಟೀಸ್ಪೂನ್ ಉಪ್ಪು ಹಾಕಿ.
    * 2 ಕಪ್ ನೀರು ಮತ್ತು 6 ಎಸಳು ಪುದೀನ ಎಲೆಗಳನ್ನು ಸೇರಿಸಿ.
    * ಕುಕ್ಕರ್‌ ಮುಚ್ಚಿ 4 ಸೀಟಿ ಹೊಡೆಸಿ, ಅಂದರೆ ಕ್ಯಾರೆಟ್ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.
    * ಬೆಂದ ನಂತರ ಕುಕ್ಕರ್‌ನಿಂದ ಪುದೀನ ಎಲೆಗಳನ್ನು ತೆಗೆದುಹಾಕಿ.
    * ತಣ್ಣಗಾದ ಬಳಿಕ ಬೇಯಿಸಿದ ತರಕಾರಿಗಳನ್ನು ಬ್ಲೆಂಡರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
    * ಬೇಯಿಸಿದ ತರಕಾರಿಯಲ್ಲಿ ಉಳಿದಿರುವ ನೀರನ್ನು ಹಾಗೂ ರುಬ್ಬಿಕೊಂಡ ಪೇಸ್ಟ್ ಅನ್ನು ಕಡಾಯಿಗೆ ವರ್ಗಾಯಿಸಿ.
    * 2 ನಿಮಿಷಗಳ ಸೂಪ್ ದಪ್ಪವಾಗುವವರೆಗೆ ಕುದಿಸಿ.
    * ಬಳಿಕ ಇದಕ್ಕೆ ಸ್ವಲ್ಪ ಕರಿ ಮೆಣಸಿನ ಪುಡಿ ಸೇರಿಸಿ.
    * ಈಗ ರುಚಿಯಾದ, ಆರೋಗ್ಯಕರವಾದ ಕ್ಯಾರೆಟ್ ಸೂಪ್ ಸವಿಯಲು ಸಿದ್ಧ.

  • ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು

    ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು

    ಈಗಿನ ಕಾಲದಲ್ಲಿ ಡಯಾಬಿಟಿಸ್ ಅನ್ನೋ ಪದ ಕೇಳಿದ್ರೆ ಸಾಕು ಎಲ್ಲರು ಹೆದರುವ ಪರಿಸ್ಥಿತಿ ಬಂದಿದೆ. ಹಿಂದೆಲ್ಲ ಸಕ್ಕರೆ ಕಾಯಿಲೆ ಬರೀ ವಯಸ್ಸಾದೋರಿಗೆ ಬರುತ್ತೇ ಅಂತಾ ಮಾತಿತ್ತು. ಆದ್ರೆ ಈಗಿನ ಕಾಲಮಾನದಲ್ಲಿ ಸಣ್ಣ ಸಣ್ಣ ಮಕ್ಕಳು ಕೂಡ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮ ಜೀವನ ಶೈಲಿ. ಹೌದು, ನಮ್ಮ ದೇಹದ ಆರೋಗ್ಯ ನಿಂತಿರೋದೆ ನಮ್ಮ ಜೀವನ ಶೈಲಿ ಮೇಲೆ ಅಂದ್ರೆ ತಪ್ಪಾಗಲ್ಲ. ನಾವು ಪ್ರತಿನಿತ್ಯ ಹೇಗೆ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡ್ತಿವೋ ಹಾಗೆ ನಮ್ಮ ಆರೋಗ್ಯ ಇರತ್ತೆ.

    ಈಗಿನ ಕಾಲದಲ್ಲಿ ನಾವು ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಕಡಿಮೆ. ಡಯಾಬಿಟಿಸ್ ಕಾಯಿಲೆಗಳು ಇತ್ತೀಚೆಗೆ ಸರ್ವೆ ಸಾಮಾನ್ಯ ವೃದ್ಧರಿಂದ ಹಿಡಿದು ಪುಟ್ಟ ಮಕ್ಕಳಲ್ಲೂ ಡಯಾಬಿಟಿಸ್ ಕಾಯಿಲೆ ಕಂಡುಬರುತ್ತದೆ. ಡಯಾಬಿಟಿಸ್ ನಿಯಂತ್ರಿಸಲು ರೋಗಿಗಳು ಹಲವಾರು ಮಾತ್ರೆ, ಔಷಧಿಗಳನ್ನು ಸೇವಿಸ್ತಾರೆ. ಆದ್ರೆ ಕೇವಲ ಮಾತ್ರೆ ಸೇವಿಸದ್ರೆ ಡಯಾಬಿಟಿಸ್ ನಿಯಂತ್ರಣವಾಗಲ್ಲ. ಔಷಧಿ ಜೊತೆಗೆ ಸರಿಯಾಗಿ ಮಿತವಾದ ಆಹಾರ ಸೇವನೆಯಿಂದ ಹಾಗೂ ವ್ಯಾಯಾಮದಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಿಸಬಹುದು. ಯಾವೆಲ್ಲ ಆಹಾರಗಳು ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತ ಎಂಬ ಪಟ್ಟಿ ಇಲ್ಲಿದೆ.

    ಡಯಾಬಿಟಿಸ್ ನಿಯಂತ್ರಿಸಲು ಉಪಯುಕ್ತವಾದ 10 ಆಹಾರಗಳು:

    1. ಕೊಬ್ಬಿನಾಂಶವಿರುವ ಮೀನುಗಳು: ಸಾಲ್ಮನ್, ಹೆರ್ರಿಂಗ್ ಮ್ಯಾಕ್ರೆಲ್ ತರಹದ ಮೀನುಗಳಲ್ಲಿ ಡಿಎಚ್‍ಎ ಮತ್ತು ಇಎಫ್‍ಎ, ಓಮೆಗಾ-3 ಕೊಬ್ಬಿನಾಂಶವಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆದು. ಇಂತಹ ಮೀನಿನಲ್ಲಿರುವ ಪೌಷ್ಟಿಕಾಂಶವು ರಕ್ತನಾಳದಲ್ಲಿರುವ ಜೀವಕೋಶಗಳನ್ನು ಕಾಪಾಡಿ, ದೇಹದಲ್ಲಿ ರಕ್ತ ಸಂಚಲನವನ್ನು ವೃದ್ಧಿಸುತ್ತದೆ. ಅಲ್ಲದೆ ಇದನ್ನು ಸೇವಿಸುವುದರಿಂದ ಡಯಾಬಿಟಿಸ್ ನಿಯಂತ್ರಿಸಬಹುದು.

    2. ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕಾಂಶದ ಜೊತೆಗೆ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ. ಅಷ್ಟೆ ಅಲ್ಲದೆ ಹಸಿರು ತರಕಾರಿ ಹೃದಯಕ್ಕೆ ಹಾಗೂ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

    3. ದಾಲ್ಚಿನ್ನಿ: ಇದರಲ್ಲಿ ರೋಗನಿರೋಧಕ ಅಂಶವು ಹೆಚ್ಚಾಗಿ ಇರುತ್ತದೆ. ದಾಲ್ಚಿನ್ನಿಯನ್ನು ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ, ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಸರಿಯಾಗಿ ಇಡುತ್ತದೆ. ಅಲ್ಲದೆ ಇದರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    4. ಮೊಟ್ಟೆ: ಪ್ರತಿದಿನವು ಕೋಳಿ ಮೊಟ್ಟೆಯನ್ನು ಆಹಾರದಲ್ಲಿ ಸೇವಿಸುವುದರಿಂದ ಅದ್ಭುತ ಪ್ರಯೋಜನವನ್ನು ಪಡೆಯಬಹುದು. ಇದು ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನೊಡಿಕೊಳ್ಳುತ್ತದೆ. ಮೊಟ್ಟೆಯಲ್ಲಿ ಉತ್ತಮ ಪೌಷ್ಟಿಕಾಂಶ ಹಾಗೂ ಕೊಬ್ಬಿನಾಂಶ ಇರುವುದರಿಂದ ದೇಹಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‍ಗಳನ್ನು ನೀಡಿ ಕೆಟ್ಟ ಕೊಲೆಸ್ಟ್ರಾಲ್‍ಗಳನ್ನು ದೂರವಿಡುತ್ತದೆ.

    5. ಕಾಮಕಸ್ತೂರಿ ಬೀಜ: ದಿನನಿತ್ಯ ಆಹಾದಲ್ಲಿ ನೇರವಾಗಿ ಅಥವಾ ಹಾಲು, ನೀರು, ಜ್ಯೂಸ್‍ನಲ್ಲಿ ಕಾಮಸ್ತೂರಿ ಬೀಜವನ್ನು ಸೇರಿಸಿ ತಿನ್ನುವುದರಿಂದ ದೇಹಕ್ಕೆ ಫೈಬರ್ ಅಂಶ ದೊರೆಯುತ್ತದೆ. ಹಾಗೆಯೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇಂಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

    6. ಅರಶಿಣ: ಅರಶಿಣ ಒಂದು ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವ ಪದಾರ್ಥವಾಗಿದೆ. ಪ್ರತಿದಿನ ಹಾಲು ಅಥವಾ ನೀರಿನಲ್ಲಿ ಅರಶಿಣ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಿಸಬಹುದು ಹಾಗೂ ಹೃದಯ ಮತ್ತು ಕಿಡ್ನಿ ಸರಿಯಾಗಿ ದೇಹದಲ್ಲಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

    7. ಒಣ ಬೀಜಗಳು: ಬಾದಾಮಿ, ಗೇರು ಬೇಜ, ಪಿಸ್ತಾ, ಶೇಗಾ ಬೀಜ, ವಾಲ್‍ನಟ್ಸ್‍ನಲ್ಲಿ ಆರೋಗ್ಯಕರ ಪೌಷ್ಟಿಕಾಂಶ ಇರುತ್ತದೆ. ಒಣ ಬೀಜಗಳನ್ನು ನಿತ್ಯವು ಸೇವಿಸುವುದರಿಂದ ಜೀರ್ಣಶಕ್ತಿಯು ಹೆಚ್ಚಾಗುತ್ತದೆ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಅಲ್ಲದೆ ದೇಹದಲ್ಲಿ ಸಕ್ಕರೆ ಅಂಶ ಮಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ.

    8. ಆಲಿವ್ ಎಣ್ಣೆ: ಅಡುಗೆಯಲ್ಲಿ ಆಲಿವ್ ಎಣ್ಣೆ ಬಳಸುವುದರಿಂದ ದೇಹಕ್ಕೆ ಉತ್ತಮ ಒಲಿವಿಕ್ ಆಮ್ಲ ದೊರೆಯುತ್ತದೆ. ಇದು ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಹಾಗೆಯೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

    9. ಬೆಳುಳ್ಳಿ: ಇದರಲ್ಲಿ ರೋಗನಿರೋಧಕ ಅಂಶವಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ರಕ್ತದಲ್ಲಿ ಸೇರೆದಂತೆ ನೋಡಿಕೊಳ್ಳುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

    10. ಅಗಸೆ ಬೀಜ: ಅಗಸೆ ಬೀಜವನ್ನು ನೇರವಾಗಿ ಅಥವಾ ಪುಡಿ ಮಾಡಿ ಆಹಾರದೊಂದಿಗೆ ಸೇರಿಸಿ ತಿನ್ನುವುದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ ಆದ್ದರಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣವಾಗುತ್ತದೆ.

    ನೋಡದ್ರಲ್ಲ ಯಾವ ಯಾವ ಆಹಾರವನ್ನು ಸೇವಿಸುವುದರಿಂದ ಡಯಾಬಿಟಿಸ್ ಕಾಯಿಲೆಯನ್ನು ನಿಯಂತ್ರಣವಾಗುತ್ತೆ ಅಂತಾ. ಕೇವಲ ಆರೋಗ್ಯಕರ ಆಹಾರವನ್ನು ಸೇವಿಸಿದರೆ ಸಾಲಲ್ಲಾ. ಆಹಾರದ ಜೊತೆ ಯೋಗ, ವ್ಯಾಯಾಮದ ಅಭ್ಯಾಸ ಮಾಡಿಕೊಂಡರೆ ಉತ್ತಮ ಆರೋಗ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹೃದಯದ ಆರೋಗ್ಯಕ್ಕಾಗಿ ಅವಶ್ಯವಾದ 10 ಆಹಾರಗಳು

    ಹೃದಯದ ಆರೋಗ್ಯಕ್ಕಾಗಿ ಅವಶ್ಯವಾದ 10 ಆಹಾರಗಳು

    ಮನುಷ್ಯನ ದೇಹದಲ್ಲಿ ತುಂಬಾ ಮುಖ್ಯವಾದ ಭಾಗ ಅಂದ್ರೆ ಹೃದಯ. ನಮ್ಮ ದಿನ ನಿತ್ಯದ ಜೀವನದಲ್ಲಿ ನಾವು ಆರೋಗ್ಯವಾಗಿರಬೇಕು ಅಂತಾ ಹಲವಾರು ಬಗೆಯ ವ್ಯಾಯಾಮ ಮಾಡ್ತೀವಿ, ಡಯಟ್ ಕೂಡ ಮಾಡ್ತೀವಿ. ಆದ್ರೆ ಹೃದಯಕ್ಕೆ ಬೇಕಾದ ಆರೋಗ್ಯಕರ ಆಹಾರಗಳು ಯಾವುದು? ಅಂತಾ ತುಂಬಾ ಜನರಿಗೆ ಗೊತ್ತಿರಲ್ಲ. ನಿಮ್ಮ ನಿತ್ಯದ ಆಹಾರದಲ್ಲಿ ಯಾವ ಯಾವ ಆಹಾರವನ್ನು ಸೇವಿಸಿದರೇ ಹೃದಯಕ್ಕೆ ಒಳ್ಳೆದು ಎಂಬ ಪಟ್ಟಿ ಇಲ್ಲಿದೆ.

    ಹೌದು, ನಾವು ಹೇಳುವ ಕೆಲವು ಆಹಾರವನ್ನು ನೀವು ಪ್ರತಿನಿತ್ಯವು ಸೇವೆಸುವುದರಿಂದ ಹಲವು ಹೃದಯ ಸಂಬಂಧಿತ ರೋಗಗಳಿಂದ ಪಾರಾಗಬಹುದು. ಹೃದಯದ ಆರೋಗ್ಯ ಕಾಪಾಡಲು ಹಲವು ಬಗೆ ಬಗೆಯ ತರಾಕಾರಿ, ಹಣ್ಣುಗಳು ಹಾಗೂ ಆಹಾರಗಳು ಇದೆ. ಅವುಗಳು ಯಾವುದು ಅನ್ನೋ ಕಂಪ್ಲೀಟ್ ವಿವರ ಇಲ್ಲಿದೆ.

    ಹೃದಯಕ್ಕೆ ಅವಶ್ಯವಾದ 10 ಆಹಾರಗಳು ಯಾವುದು?

    1. ಓಮೇಘಾ- 3ಎಸ್ ಗುಣವುಳ್ಳ ಮೀನುಗಳು ಅಂದರೆ ಸಾಲ್ಮನ್, ಟುನಾ, ಮ್ಯಕ್ರೇಲ್, ಹೆರ್ರಿಂಗ್ ಮತ್ತು ಟ್ರಾಟ್ ಪ್ರಜಾತಿಯ ಮೀನುಗಳನ್ನು ಸೇವಿಸುವುದರಿಂದ ನಿಮ್ಮ ಹೃದಯಕ್ಕೆ ಉತ್ತಮ ಪೋಷಕಾಂಶ ದೊರೆಯುತ್ತದೆ.

    2. ಬಾದಾಮಿ, ವಾಲ್‍ನಟ್‍ಗಳಂತಹ ಒಣ ಬೀಜಗಳನ್ನು ಸೇವಿಸುವುದರಿಂದ ಬೇಗ ನಿಮ್ಮ ಹೊಟ್ಟೆ ತುಂಬುತ್ತದೆ ಹಾಗೂ ದೇಹಕ್ಕೂ ಒಳ್ಳೆಯದು. ಇದರಿಂದ ನೀವು ಕೊಲೆಸ್ಟ್ರಾಲ್ ಇರುವ ತಿನಿಸುಗಳನ್ನು ತಿನ್ನುವುದು ಕಡಿಮೆಯಾಗುತ್ತದೆ. ಹೀಗೆ ಮಾಡಿದರೇ ಅಪಾಯಕಾರಿ ಕೊಲೆಸ್ಟ್ರಾಲ್ ಹೃದಯಕ್ಕೆ ಸೇರುವುದಿಲ್ಲ.

    3. ಸ್ಟ್ರಾಬೆರಿ, ಬ್ಲೂಬೆರಿ, ಕ್ಯಾನ್‍ಬೆರಿ ಅಥವಾ ರಸ್‍ಬೆರಿ ಅಂತಹ ಹಣ್ಣುಗಳನ್ನು ಮೊಸರು ಅಥವಾ ಧಾನ್ಯಗಳೊಡನೆ ಸೇವಿಸುವುದರಿಂದ ಹೃದಯಕ್ಕೆ ಬೇಕಾದ ಫೈಟೋನ್ಯೂಟ್ರಿಯಂಟ್‍ಗಳು ಹಾಗೂ ಫೈಬರ್ ದೊರೆಯುತ್ತದೆ.

    4. ಅಗಸೆ ಬೀಜದಲ್ಲಿ (ಫ್ಲಾಕ್ಸ್ ಸೀಡ್) ಓಮೇಘಾ-3 ಕೊಬ್ಬಿನಾಮ್ಲಗಳ ಅಂಶವಿರುತ್ತದೆ. ಅಗಸೆ ಬೀಜವನ್ನು ಪುಡಿ ಮಾಡಿ ಅಥವಾ ನೇರವಾಗಿ ತಿನ್ನುವುದರಿಂದ ದೇಹಕ್ಕೆ ಪೋಷಕಾಂಶ ದೊರೆಯುತ್ತದೆ. ಅಲ್ಲದೆ ರಕ್ತದ ಒತ್ತಡವನ್ನು ಇದು ಕಡಿಮೆ ಮಾಡುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಿಡಿತದಲ್ಲಿಡುತ್ತದೆ.

    5. ಓಟ್ ಮೀಲ್ ನಲ್ಲಿ ಪೋಷಕಾಂಶದ ಆಗರವೇ ತುಂಬಿರುತ್ತದೆ. ಇದನ್ನು ದಿನ ನಿತ್ಯದ ಆಹಾದಲ್ಲಿ ಸೇವಿಸುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.

    6. ಕೆಂಪು ಅಲಸಂದೆ ಕಾಳು ಅಥವಾ ಕಿಡ್ನಿಬೀನ್ಸ್ ಗಳಂತಹ ಧಾನ್ಯಗಳನ್ನು ತಿನ್ನುವುದರಿಂದ ದೇಹಕ್ಕೆ ವಿಟಮಿನ್-ಬಿ ಹಾಗೂ ಮಿನರಲ್ಸ್ ಸಿಗುತ್ತದೆ.

    7. ದಿನವು ಕಾಲು ಕಪ್ ಕೆಂಪು ವೈನ್ ಕುಡಿಯುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಸರಿಯಾಗಿರುತ್ತದೆ. ಇದರಿಂದ ಹೃದಯಾಘಾತದಿಂದ ಕೊಂಚ ದೂರವಿರಬಹುದು.

    8. ಕಿತ್ತಳೆ ಹಣ್ಣು, ಪಪಾಯ ಹಣ್ಣುಗಳಲ್ಲಿ ಬೇಟಾ- ಕ್ಯಾರೊಟಿನ್, ಪೊಟಾಷಿಂ, ಮ್ಯಾಗ್‍ನೀಷಿಯಂ ತರಹದ ಫೈಬರ್‍ಗಳು ದೊರೆಯುತ್ತದೆ. ಇದರಿಂದ ಹೃದಯಕ್ಕೆ ಉತ್ತಮ ಪೌಷ್ಠಿಕಾಂಶ ಸಿಗುತ್ತದೆ.

    9. ಟೊಮಾಟೊ ಅಲ್ಲಿ ವಿಟಮಿನ್-ಸಿ ಮತ್ತು ಎ, ಆಲ್ಫಾ ಮತ್ತು ಬೇಟಾ ಕ್ಯಾರೊಟಿನ್ ಹಾಗೂ ಲೈಕೋಪೆನ್ ಅಂಶವಿರುತ್ತದೆ. ಇದನ್ನು ತಿನ್ನುವುದರಿಂದ ಹೃದಯದಲ್ಲಿ ಕೊಲೆಸ್ಟ್ರಾಲ್ ಹಾಗೂ ರಕ್ತದ ಒತ್ತಡವನ್ನು ಇದು ನಿಯಂತ್ರಿಸುತ್ತದೆ.

    10. ಡಾರ್ಕ್ ಚಾಕೋಲೇಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೋಕೋ ಅಂಶವಿರುತ್ತದೆ. ಡಾರ್ಕ್ ಚಾಕೋಲೇಟ್ ನನ್ನು ಸೇವಿಸುವುದರಿಂದ ಹೃದಯದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುತ್ತದೆ.

    ನೋಡಿದ್ರಲ್ಲ ಯಾವ ಯಾವ ಆಹಾರಗಳನ್ನು ಸೇವಿಸಿದರೇ ಹೃದಯದ ಆರೋಗ್ಯಕ್ಕೆ ಒಳ್ಳೇದು ಅಂತಾ. ನೀವು ನಿಮ್ಮ ದಿನನಿತ್ಯ ಡಯಟ್‍ನಲ್ಲಿ ಈ ಆಹಾರವನ್ನು ಸೇವಿಸಿದ್ದೇ ಆದರೇ ನಿಮ್ಮ ಹೃದಯದ ಆರೋಗ್ಯವನ್ನು ಉತ್ತಮಗೊಳಿಸಿಕೊಂಡು ಆರೋಗ್ಯಕರ ಬದುಕು ನಿಮ್ಮದಾಗಿಸಿಕೊಳ್ಳಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews