Tag: health

  • ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಟಿ ಜಯಂತಿಯ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

    ಆಸ್ಪತ್ರೆಗೆ ಭೇಟಿ ನೀಡಿ ಹಿರಿಯ ನಟಿ ಜಯಂತಿಯ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಅಸ್ತಮಾದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜಯಂತಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿದ್ದಾರೆ.

    ಸೋಮವಾರ ಸ್ಯಾಂಡಲ್‍ವುಡ್ ಅಭಿನಯ ಶಾರದೆ ಜಯಂತಿ ಅವರು ಅಸ್ವಸ್ಥರಾಗಿದ್ದು, ಸುಮಾರು ಬೆಳಗ್ಗೆ 11 ಗಂಟೆಗೆ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ್ದು, ಜಯಂತಿ ಅವರ ಆರೋಗ್ಯ ವಿಚಾರಿಸಿದ್ದಾರೆ.

    ಜಯಂತಿ ಅವರು ಹಲವು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ್ದರು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಯಂತಿ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಭಾರತೀ ವಿಷ್ಣುವರ್ಧನ್, ಶ್ರೀನಾಥ್, ಶಿವರಾಜ್ ಕುಮಾರ್, ದೊಡ್ಡಣ್ಣ ಮತ್ತು ನಾಗೇಂದ್ರ ಪ್ರಸಾದ್ ಸೇರಿದಂತೆ ಹಿರಿಯ ಕಲಾವಿದರು ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ.

    ಜಯಂತಿ ಅವರು ಆಸ್ಪತ್ರೆಯಲ್ಲಿದ್ದಾಗೆ ಅವರು ಮೃತಪಟ್ಟಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿತ್ತು. ಈ ಬಗ್ಗೆ ಅವರ ಪುತ್ರ ಕೃಷ್ಣಕುಮಾರ್, ಮಾಧ್ಯಮಗಳ ಜೊತೆ ಮಾತನಾಡಿ ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳು ಯಾವುದೇ ರೀತಿಯಲ್ಲಿ ಗಾಬರಿಯಾಗೋದು ಬೇಡ. ಅಮ್ಮನ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ. ಸದ್ಯ ವೈದ್ಯಕೀಯ ತಪಾಸಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

  • ಅಮ್ಮ ಕ್ಷೇಮವಾಗಿದ್ದಾರೆ, ವದಂತಿ ಹಬ್ಬಿಸಬೇಡಿ- ಪುತ್ರ ಕೃಷ್ಣ ಕುಮಾರ್ ಮನವಿ

    ಅಮ್ಮ ಕ್ಷೇಮವಾಗಿದ್ದಾರೆ, ವದಂತಿ ಹಬ್ಬಿಸಬೇಡಿ- ಪುತ್ರ ಕೃಷ್ಣ ಕುಮಾರ್ ಮನವಿ

    ಬೆಂಗಳೂರು: ನಟಿ ಜಯಂತಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅಮ್ಮನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಅಂತಾ ಪುತ್ರ ಕೃಷ್ಣಕುಮಾರ್ ಮನವಿ ಮಾಡಿಕೊಂಡಿದ್ದಾರೆ.

    ಉಸಿರಾಟದ ತೊಂದರೆಯಿಂದಾಗಿ ಅಸ್ವಸ್ಥರಾದ ಬಳಿಕ ಅವರನ್ನು ಪುತ್ರ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಜಯಂತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆದಷ್ಟೂ ಬೇಗ ಗುಣಮುಖರಾಗಲಿದ್ದಾರೆ ಅಂತಾ ಕೃಷ್ಣ ಕುಮಾರ್ ತಿಳಿಸಿದ್ದಾರೆ.

    ಮಂಗಳವಾರ ಸಂಜೆಯಿಂದ ಫೇಸ್‍ಬುಕ್ ಮತ್ತು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲಾತಾಣಗಳಲ್ಲಿ ಕೆಲವರು ಜಯಂತಿ ಅವರ ಆರೋಗ್ಯದ ಕುರಿತು ಸುಳ್ಳು ಸುದ್ದಿಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಯಂತಿ ಪುತ್ರ ಮಾಧ್ಯಮಗಳಿಗೆ ತಾಯಿಯ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತ ಜಯಂತಿ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸ್ಯಾಂಡಲ್ ವುಡ್ ನ ಹಿರಿಯ, ಕಿರಿಯ ಕಲಾವಿದರು ಮತ್ತು ನಿರ್ದೇಶಕರು ಅಭಿನಯ ಶಾರದೆ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.

  • ಅಭಿನಯ ಶಾರದೆಗೆ ಮುಂದುವರೆದ ಚಿಕಿತ್ಸೆ-ಆಸ್ಪತ್ರೆಯತ್ತ ಸಿನಿ ಕಲಾವಿದರು

    ಅಭಿನಯ ಶಾರದೆಗೆ ಮುಂದುವರೆದ ಚಿಕಿತ್ಸೆ-ಆಸ್ಪತ್ರೆಯತ್ತ ಸಿನಿ ಕಲಾವಿದರು

    ಬೆಂಗಳೂರು: ಚಂದನವನ ಕಲಾ ಶಾರದೆ ಜಯಂತಿ ಸೋಮವಾರ ಉಸಿರಾಟದ ತೊಂದರೆಯಿಂದಾಗಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 30 ವರ್ಷಗಳಿಂದಲೂ ಜಯಂತಿ ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ರು. ಆದ್ರೆ ನಿತ್ಯ ಔಷಧಿ ತೆಗೆದುಕೊಳ್ಳುತ್ತಿದ್ದರಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದ್ರೆ ಭಾನುವಾರ ರಾತ್ರಿ ಏಕಾಏಕಿ ಉಸಿರಾಟದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ವೈದ್ಯರ ಸಲಗಹೆ ಮೇರೆಗೆ ಜಯಂತಿ ಅವರನ್ನು ಮಗ ಕೃಷ್ಣಮೂರ್ತಿ ಆಸ್ಪತ್ರೆಗೆ ದಾಖಲಿಸಿದ್ರು.

    ಇತ್ತ ಜಯಂತಿ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದ ನಂತರ ಸ್ಯಾಂಡಲ್‍ವುಡ್ ಹಿರಿಯ, ಕಿರಿಯ ಕಲಾವಿದರೆಲ್ಲಾ ಆಸ್ಪತ್ರೆಯತ್ತ ಆಗಮಿಸಿದರು. ಸದ್ಯ ಜಯಂತಿ ಅವರ ಆರೋಗ್ಯ ಸುಧಾರಿಸುತ್ತಿದೆ. ಆಸ್ಪತ್ರೆಗೆ ದಾಖಲಿಸಿದಾಗ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು, ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ನಾಲ್ಕೈದು ದಿನಗಳಲ್ಲಿ ಸಂಪೂರ್ಣ ಗುಣಮುಖರಾಗುವ ವಿಶ್ವಾಸವನ್ನ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ವ್ಯಕ್ತಪಡಿಸಿದ್ರು.

    ಐಸಿಯುನಲ್ಲಿರುವ ನಟಿ ಜಯಂತಿಗೆ ವಿಕ್ರಂ ಆಸ್ಪತ್ರೆ ಮುಖ್ಯ ವೈದ್ಯರಾದ ಡಾ. ಸತೀಶ್ ಚಿಕಿತ್ಸೆ ನೀಡ್ತಿದ್ದಾರೆ. ಇತ್ತ ಜಯಂತಿ ಆಸ್ಪತ್ರೆಗೆ ದಾಖಲಾಗ್ತಿದ್ದಂತೆ ಅವ್ರ ಆರೋಗ್ಯ ವಿಚಾರಿಸಲು ಅನೇಕರು ಆಸ್ಪತ್ರೆಗೆ ವಿಸಿಟ್ ಮಾಡಿದ್ರು. ನಟಿ ತಾರಾ, ಹಿರಿಯ ನಟಿಯರಾದ ಲೀಲಾವತಿ, ಸರೋಜಾ ದೇವಿ, ಗಿರಿಜಾ ಲೋಕೇಶ್, ಹೇಮ ಚೌಧರಿ, ದೊಡ್ಡಣ್ಣ, ಭೇಟಿ ನೀಡಿದ್ರು. ನಟ ವಿನೋದ್ ರಾಜ್ ಕುಮಾರ್, ಸರಿಗಮ ವಿಜಿ, ನಿರ್ದೇಶಕ ಭಗವಾನ್ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ರು.

  • 5 ಮಕ್ಕಳು, 60 ಕ್ಕೂ ಹೆಚ್ಚು ಮೊಮ್ಮಕಳು, ಮರಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೆಂಚುರಿ ಅಜ್ಜಿ

    5 ಮಕ್ಕಳು, 60 ಕ್ಕೂ ಹೆಚ್ಚು ಮೊಮ್ಮಕಳು, ಮರಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೆಂಚುರಿ ಅಜ್ಜಿ

    ಧಾರವಾಡ: ಇತ್ತೀಚಿನ ದಿನಗಳಲ್ಲಿ ಜನರು 70 ರಿಂದ 80 ವರ್ಷ ಬದುಕೋದು ಹೆಚ್ಚು. ಆದ್ರೆ ಧಾರವಾಡದ ಅಜ್ಜಿಯೊಬ್ಬರು 5 ಮಕ್ಕಳು, 60 ಕ್ಕೂ ಹೆಚ್ಚು ಮೊಮ್ಮಕ್ಕಳು, ಮರಿ ಮಕ್ಕಳೊಂದಿಗೆ ತಮ್ಮ 100ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ನಗರದ ಹಾವೇರಿಪೇಟೆಯ ಯಮ್ಮನಮ್ಮ ಮಂಗಳೂರು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ ಅಜ್ಜಿಯ ಗೆಳತಿಯರೂ ಸಂಭ್ರಮದಲ್ಲಿ ಭಾಗವಹಿಸಿ ಅಜ್ಜಿಯನ್ನು ಸನ್ಮಾನ ಮಾಡಿದರು.

    ಈ ವಯಸ್ಸಲ್ಲೂ ಅಜ್ಜಿಗೆ ರೊಟ್ಟಿ ಅಂದರೆ ಇಷ್ಟವಂತೆ. ಮೊಮ್ಮಕ್ಕಳು ಹಾಗೂ ಮರಿ ಮಕ್ಕಳು ಎಷ್ಟು ಜನಾ ಅಂತಾ ಕೇಳಿದ್ರೆ, ಲೆಕ್ಕಾ ಸಿಗಲ್ಲ ಬಿಡಿ ಅಂತಾ ಹೇಳ್ತಾರೆ. ಮೊದಲು ಹೊಲದಲ್ಲಿ ಕೆಲಸ ಮಾಡುವ ದಿನಗಳಲ್ಲಿ ಊಟ ನೀರು ಇಲ್ಲದೇ ಗದ್ದೆಗಳಲ್ಲಿ ಕೆಲಸ ಮಾಡಿದ್ದೇವೆ. ಇಂದು ಮಗ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಅಂತಾ ಅಜ್ಜಿ ಸಂತಸದಿಂದ ಹೇಳ್ತಾರೆ.

  • ಹಿರಿಯ ನಟಿ ಜಯಂತಿ ಅಸ್ವಸ್ಥ-ಬೆಂಗ್ಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು

    ಹಿರಿಯ ನಟಿ ಜಯಂತಿ ಅಸ್ವಸ್ಥ-ಬೆಂಗ್ಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಶಾರದೆ ಜಯಂತಿ ಅವರು ಅಸ್ವಸ್ಥರಾಗಿದ್ದು, ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಜಯಂತಿ ಅವರು ಹಲವು ವರ್ಷಗಳಿಂದ ಅಸ್ತಮಾದಿಂದ ಬಳಲುತ್ತಿದ್ದರು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಜಯಂತಿ ಪುತ್ರ ಕೃಷ್ಣಕುಮಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳು ಯಾವುದೇ ರೀತಿಯಲ್ಲಿ ಗಾಬರಿಯಾಗೋದು ಬೇಡ. ಅಮ್ಮನ ಆರೋಗ್ಯಕ್ಕಾಗಿ ಎಲ್ಲರೂ ಪ್ರಾರ್ಥಿಸಿ. ಸದ್ಯ ವೈದ್ಯಕೀಯ ತಪಾಸಣೆಗಳು ನಡೆಯುತ್ತಿವೆ ಅಂತಾ ಕೃಷ್ಣಕುಮಾರ್ ಹೇಳಿದ್ದಾರೆ.

  • ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಚೇತರಿಕೆ- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಚೇತರಿಕೆ- ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ತೂಕ ಇಳಿಸಿಕೊಳ್ಳಲು ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಬುಲೆಟ್ ಪ್ರಕಾಶ್ ದಪ್ಪಗಿದಿದ್ದಕ್ಕೆ ಸಣ್ಣ ಆಗಲು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆದ ನಂತರ ಬುಲೆಟ್ ಪ್ರಕಾಶ್ ದೇಹದಲ್ಲಿ 35 ಕೆ.ಜಿ ತೂಕ ಇಳಿಕೆಯಾಗಿತ್ತು. ತೂಕ ಇಳಿಕೆಯಾದ ಪರಿಣಾಮ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

    ಈ ಹಿಂದೆ ಬುಲೆಟ್ ಪ್ರಕಾಶ್ ಬರೋಬ್ಬರಿ 35 ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದರು. ಮುಂದೆ ಇನ್ನೂ ತೂಕ ಕಡಿಮೆ ಮಾಡಿಕೊಳ್ಳಲಿದ್ದೇನೆ ಎಂದು ಟ್ವೀಟ್ ಕೂಡ ಮಾಡಿದ್ದರು.

    ಬುಲೆಟ್ ಪ್ರಕಾಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದರು. ಬಳಿಕ ಎಲ್ಲರಿಗೂ ನಮಸ್ಕಾರ. ನಾನು ಸುಮಾರು 35 ಕೆಜಿ ತೂಕ ಕಡಿಮೆ ಮಾಡಿದ್ದೀನಿ, ಇನ್ನೂ ಕಡಿಮೆ ಮಾಡುತ್ತೇನೆ. ನಿಮಗೆ ನನ್ನಲ್ಲಿ ಬದಲಾವಣೆ ಕಾಣುತ್ತಿದೆಯಾ ಎಂಬುವುದಾಗಿ ಬರೆದುಕೊಂಡಿದ್ದರು.

    ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವೇಳೆ ಸಿಕ್ಸ್ ಪ್ಯಾಕ್ ಮಾಡುವುದಾಗಿ ಬುಲೆಟ್ ಪ್ರಕಾಶ್ ಹೇಳಿಕೊಂಡಿದ್ದರು.

  • ಅಪರೂಪದ ಕಾಯಿಲೆಯಿಂದ ಬಳಲುತ್ತಿರೋ ಬಗ್ಗೆ ಸುಳಿವು ನೀಡಿದ ಬಾಲಿವುಡ್ ನಟ ಇರ್ಫಾನ್ ಖಾನ್

    ಅಪರೂಪದ ಕಾಯಿಲೆಯಿಂದ ಬಳಲುತ್ತಿರೋ ಬಗ್ಗೆ ಸುಳಿವು ನೀಡಿದ ಬಾಲಿವುಡ್ ನಟ ಇರ್ಫಾನ್ ಖಾನ್

    ಮುಂಬೈ: ಬಾಲಿವುಡ್ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಅದರ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತು ಸ್ವತಃ ಇರ್ಫಾನ್ ಖಾನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ದೀಪಿಕಾ ಪಡುಕೋಣೆ ಹಾಗೂ ಇರ್ಫಾನ್ ನಟನೆಯ ಸಿನಿಮಾ ಚಿತ್ರೀಕರಣವನ್ನು ಮುಂದೂಡಲಾಗಿದೆ ಎಂದು ಕಳೆದ ತಿಂಗಳಷ್ಟೇ ನಿರ್ಮಾಪಕ ವಿಶಾಲ್ ಭಾರದ್ವಾಜ್ ತಿಳಿಸಿದ್ದರು. ಕೆಲ ತಿಂಗಳ ಮಟ್ಟಿಗೆ ಚಿತ್ರದ ಚಿತ್ರೀಕರಣವನ್ನು ಮುಂದೂಡುತ್ತಿದ್ದೇನೆ. ಯಾಕಂದ್ರೆ ಚಿತ್ರದಲ್ಲಿ ನಟಿಸುವ ಪ್ರಮುಖ ನಟರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜಾಂಡೀಸ್ ಕಾಯಿಲೆಯಿಂದ ನಟ ಇರ್ಫಾನ್ ಖಾನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಅಂತ ಹೇಳಿದ್ದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸ್ವತಃ ಇರ್ಫಾನ್ ಖಾನ್ ಟ್ವೀಟ್ ಮಾಡುವ ಮೂಲಕ ತಾವು ಅನಾರೋಗ್ಯಕ್ಕೀಡಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.

    `ಕೆಲವೊಂದು ಬಾರಿ ನಿಮ್ಮ ಜೀವನವನ್ನೇ ಘಾಸಿಗೊಳಿಸುವಂತಹ ಘಟನೆಗಳು ನಡೆಯುತ್ತವೆ. ಕಳೆದ 15 ದಿನಗಳಲ್ಲಿ ನನ್ನ ಜೀವನ ನಿಗೂಢ ಕಥೆಯಂತಾಗಿದೆ ಅಪರೂಪದ ಕಥೆಯನ್ನು ಹುಡುಕಲು ಹೊರಟ ನನಗೆ ಅಪರೂಪದ ರೋಗದ ಬಗ್ಗೆ ತಿಳಿಯುವಂತಾಗುತ್ತದೆ ಎಂದುಕೊಂಡಿರಲಿಲ್ಲ. ನಾನು ನನ್ನ ಜೀವನದಲ್ಲಿ ನನಗೆ ಬೇಕಾದ್ದನ್ನು ಹಠಕ್ಕೆ ಬಿದ್ದು ಪಡೆಯುತ್ತಿದ್ದೆ. ಹೀಗಾಗಿ ಎಂದಿಗೂ ಸೋತಿಲ್ಲ ಮತ್ತು ಹಾಗೆಯೇ ಇರಲು ಬಯಸುತ್ತೇನೆ. ನನ್ನ ಕುಟುಂಬದವರು ಮತ್ತು ಸ್ನೇಹಿತರು ನನ್ನ ಜೊತೆಗಿದ್ದಾರೆ. ಇನ್ನು 8-10 ದಿನಗಳಲ್ಲಿ ನನ್ನ ಆರೋಗ್ಯದ ಬಗ್ಗೆ ನಾನೇ ಇನ್ನಷ್ಟು ಮಾಹಿತಿಗಳನ್ನು ನೀಡುತ್ತೇನೆ. ಅಲ್ಲಿಯವರೆಗೆ ಯಾವುದೇ ರೀತಿಯ ಅನುಮಾನಗಳು ಬೇಡ. ನನಗೆ ಒಳ್ಳೆಯದನ್ನು ಬಯಸಿ ಅಂತ ಬರೆದುಕೊಂಡಿದ್ದಾರೆ.

  • ಹೃದಯಾಘಾತವಾಗಿ ಶ್ರೀದೇವಿ ನಿಧನ- ಹೃದಯಾಘಾತವಾಗಲು ಕಾರಣವೇನು? ಅಂಥ ಸಮಯದಲ್ಲಿ ಏನು ಮಾಡಬೇಕು? ಈ ಸುದ್ದಿ ಓದಿ

    ಹೃದಯಾಘಾತವಾಗಿ ಶ್ರೀದೇವಿ ನಿಧನ- ಹೃದಯಾಘಾತವಾಗಲು ಕಾರಣವೇನು? ಅಂಥ ಸಮಯದಲ್ಲಿ ಏನು ಮಾಡಬೇಕು? ಈ ಸುದ್ದಿ ಓದಿ

    ಮುಂಬೈ: ಹಿರಿಯ ಬಹು ಭಾಷಾ ನಟಿ ಶ್ರೀದೇವಿ ಶನಿವಾರ ಹೃದಯಾಘಾತದಿಂದ ದುಬೈನಲ್ಲಿ ನಿಧನರಾಗಿದ್ದಾರೆ. 80-90 ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಆ ಮೋಹಕ ತಾರೆ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

    ಹೃದಯಾಘಾತದಿಂದ ಆಕಸ್ಮಿಕವಾಗಿ ವಿಧಿವಶವಾಗಿರುವ ಶ್ರೀದೇವಿ ಅವರ ಆರೋಗ್ಯದಲ್ಲಿ ಈ ಹಿಂದೆ ಯಾವುದೇ ರೀತಿಯ ಏರುಪೇರು ಕಂಡುಬಂದಿರಲಿಲ್ಲ. ಹೃದಯಾಘಾತ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳುವುದು ಅಸಾಧ್ಯ.

    ಹೃದಯಾಘಾತ ಎಂದರೆ ಏನು?: ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯಾಘಾತ ಎನ್ನುವುದು ಒಬ್ಬ ಮನುಷ್ಯನ ಹೃದಯಕ್ಕೆ ರಕ್ತ ಪೂರೈಕೆಯನ್ನ ನಿಲ್ಲಿಸುತ್ತದೆ. ಇದರಿಂದ ಹೃದಯ ಬಡಿತ ನಿಂತುಹೋಗುತ್ತದೆ. ಈ ಸಮಯದಲ್ಲಿ ಎದೆ ನೋವು, ತಲೆ ಸುತ್ತು, ಉಸಿರಾಟಕ್ಕೆ ತೊಂದರೆಯಾಗುವುದು ಮತ್ತು ಮೂರ್ಛೆ ಹೋಗುವ ಪರಿಸ್ಥಿತಿ ಎದುರಾಗಬಹುದು.

    ಹೃದಯಾಘಾತಕ್ಕೆ ಕಾರಣಗಳೇನು?: ಒಬ್ಬ ಆರೋಗ್ಯವಂತ ವ್ಯಕ್ತಿಗೆ ಒಂದು ಸೆಕೆಂಡ್‍ನಲ್ಲಿ 60-100 ಹೃದಯ ಬಡಿತವಿರುತ್ತದೆ. ಆದರೆ ಹೃದಯಾಘಾತವಾಗುವ ಸಮಯದಲ್ಲಿ ಅಸಹಜ ಬಡಿತ ಕಾಣಿಸಿಕೊಳ್ಳಲಿದ್ದು, ಈ ಪರಿಸ್ಥಿತಿಯನ್ನು ಅರೆಥ್ಮಿಯಾಸ್ ಎಂದು ಕರೆಯಲಾಗುವುದು. ದೈಹಿಕ ಒತ್ತಡ, ರಕ್ತದ ಕೊರತೆ, ಹೃದಯಕ್ಕೆ ಅವಶ್ಯಕವಾದ ಆಮ್ಲಜನಕದ ಕೊರತೆ, ಅಧಿಕವಾಗಿ ವ್ಯಾಯಾಮ ಮಾಡುವುದು ಮತ್ತು ಅನುವಂಶಿಯ ಕಾರಣಗಳಿಂದ ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯಾಘಾತ ಆಗಬಹುದು.

    ಸ್ಥೂಲಕಾಯ, ಅಧಿಕ ರಕ್ತದ ಒತ್ತಡ, ಧೂಮಪಾನ, ಮಧುಮೇಹ, ಅತಿಯಾಗಿ ಮದ್ಯಪಾನ ಮಾಡುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ.

    ತಡೆಗಟ್ಟುವ ವಿಧಾನಗಳೇನು?: ನಿಯಮಿತವಾಗಿ ವೈದ್ಯರಲ್ಲಿ ಹೃದಯವನ್ನ ಪರೀಕ್ಷಿಸಿಕೊಳ್ಳುವುದು, ಆರೋಗ್ಯಕರ ಆಹಾರವನ್ನ ಸೇವಿಸುವುದು, ದೇಹದ ತೂಕದ ಬಗ್ಗೆ ಗಮನ ಹರಿಸುವುದು ಮತ್ತು ಧೂಮಪಾನ ಮಾಡದಿರುವುದರಿಂದ ಹೈದಯದ ಆರೋಗ್ಯ ಕಾಪಾಡಿಕೊಳ್ಳಬಹುದು.

    ವ್ಯಕ್ತಿಗೆ ಹೃದಯಾಘಾತವಾದಾಗ ಏನು ಮಾಡಬೇಕು?: ಇಂತಹ ತುರ್ತು ಪರಿಸ್ಥಿತಿಯಲ್ಲಿ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ(ಸಿಪಿಆರ್) ಮಾಡಬೇಕು ಅಥವಾ ಡಿಫಿಬ್ರಿಲೇಟರ್ ಉಪಯೋಗಿಸಬೇಕು. ಹೃದಯವನ್ನ ಜೋರಾಗಿ ಮೇಲಿಂದ ಒತ್ತಬೇಕು ಇದರಿಂದ ರಕ್ತ ಹೆಪ್ಪುಗಟ್ಟಿದ್ದರೆ ಸುಲಭವಾಗಿ ಹೃದಯಕ್ಕೆ ರಕ್ತ ಸಂಚಾರವಾಗುತ್ತದೆ. ಇದರ ಜೊತೆಗೆ ವ್ಯಕ್ತಿಗೆ ಉಸಿರಾಟದ ತೊಂದರೆಯಾದರೆ ವ್ಯಕ್ತಿಯ ಬಾಯಿಗೆ ಕೃತಕವಾಗಿ ಇನ್ನೊಬ್ಬ ವ್ಯಕ್ತಿ ಗಾಳಿಯನ್ನ ಊದಬೇಕು. ಇದರಿಂದ ಅವರ ದೇಹಕ್ಕೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇದರ ನಂತರ ವ್ಯಕ್ತಿಯನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.

  • ಗುಡ್‍ನ್ಯೂಸ್ ಮತ್ತೆ ಇಳಿಕೆ ಆಯ್ತು ಸ್ಟೆಂಟ್ ಬೆಲೆ

    ಗುಡ್‍ನ್ಯೂಸ್ ಮತ್ತೆ ಇಳಿಕೆ ಆಯ್ತು ಸ್ಟೆಂಟ್ ಬೆಲೆ

    ನವದೆಹಲಿ: ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ(ಎನ್‍ಪಿಪಿಎ) ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಡ್ರಗ್ ಎಲುಟಿಂಗ್ ಸ್ಟೆಂಟ್ ಬೆಲೆ(ಡಿಇಎಸ್) ಬೆಲೆಯನ್ನು ಇಳಿಕೆ ಮಾಡಿದೆ.

    ಇಲ್ಲಿಯವರೆಗೆ ಡಿಇಎಸ್ ಸ್ಟೆಂಟ್ ಬೆಲೆ 30,180 ರೂ. ದರ ನಿಗದಿಯಾಗಿತ್ತು. ಈಗ 2,300 ರೂ. ಇಳಿಕೆಯಾಗಿ 27,880 ರೂ. ಗರಿಷ್ಟ ದರ ನಿಗದಿಯಾಗಿದೆ. ಬಾರ್ ಮೆಟಲ್ ಸ್ಟೆಂಟ್ ಗರಿಷ್ಠ ಬೆಲೆ 7,400 ರೂ. ನಿಂದ 7,660 ರೂಪಾಯಿಗೆ ಏರಿಕೆಯಾಗಿದೆ.

    ಜಿಎಸ್‍ಟಿ ಹೊರತುಪಡಿಸಿದ ದರ ಇದಾಗಿದ್ದು, 5% ಜಿಎಸ್‍ಟಿ ಹೇರಿದರೆ ಡಿಇಎಸ್ ಬೆಲೆ 29,285 ರೂ. ಆದರೆ ಬಾರ್ ಮೆಟಲ್ ಸ್ಟಂಟ್ ಗರಿಷ್ಟ ದರ 8,043 ರೂ. ಆಗಲಿದೆ.

    ದೇಶದಲ್ಲಿ ಹೃದಯದ ರಕ್ತನಾಳಗಳಲ್ಲಿ ರಕ್ತ ಸಂಚಲನದ ಅಡೆತಡೆ ನಿವಾರಿಸುವ ಶಸ್ತ್ರಚಿಕಿತ್ಸೆಗೆ 95% ಡಿಇಎಸ್ ಸ್ಟಂಟ್‍ಗಳನ್ನು ಬಳಸಲಾಗುತ್ತಿದೆ. ನೂತನ ಪರಿಷ್ಕೃತ ದರ ಮಂಗಳವಾರದಿಂದ ಜಾರಿಯಾಗಿದ್ದು 2019ರ ಮಾರ್ಚ್ 31ರವರೆಗೆ ಈ ಬೆಲೆ ಜಾರಿಯಲ್ಲಿರಲಿದೆ.

    ಕಳೆದ ವರ್ಷ ಫಬ್ರವರಿ 14 ರಂದು ಎನ್‍ಪಿಪಿಎ ಬಾರ್ ಮೆಟಲ್ ಗರಿಷ್ಟ ದರ 7,400 ರೂ. ನಿಗದಿ ಪಡಿಸಿದ್ದರೆ, ಡಿಇಎಸ್ ಗರಿಷ್ಟ ದರ 30,180 ರೂ. ನಿಗದಿ ಪಡಿಸಿ ಆದೇಶ ಹೊರಡಿಸಿತ್ತು.

    ಕೇಂದ್ರ ಸರ್ಕಾರ ಸ್ಟೆಂಟ್ ಗಳ ಬೆಲೆಯನ್ನು ಇಳಿಸಿದ್ದಕ್ಕೆ ಖಾಸಗಿ ಆಸ್ಪತ್ರೆಗಳಿಂದ ವಿರೋಧ ವ್ಯಕ್ತವಾಗಿದೆ. ಬಹಳಷ್ಟು ಆಸ್ಪತ್ರೆಗಳು ಸ್ಟೆಂಟ್‍ಗಳಿಗೆ ಭಾರೀ ದರವನ್ನು ವಿಧಿಸಿ ರೋಗಿಗಳಿಂದ ಹಣವನ್ನು ಲೂಟಿ ಮಾಡುತ್ತಿದ್ದವು. ಸರ್ಕಾರ ಸ್ಟೆಂಟ್ ಗಳ ಬೆಲೆಯನ್ನು ಇಳಿಸಿದ ಬಳಿಕ ಶಸ್ತ್ರಚಿಕಿತ್ಸೆಗೆ ಬಳಕೆಯಾಗುತ್ತಿರುವ ಕ್ಯಾಥೆಟ್ರೆಸ್, ಬಲೂನ್ ಗಳು, ಗೈಡ್ ವಯರ್ ಗಳ ಬೆಲೆ ಏರಿಕೆಯಾಗಿದೆ. ಸ್ಟೆಂಟ್ ಗಳಿಗಿಂತಲೂ ಈಗ ಇವುಗಳ ಬೆಲೆ ಜಾಸ್ತಿಯಾಗಿದೆ. ಇವುಗಳ ಬೆಲೆಯನ್ನು ನಿಯಂತ್ರಿಸಲು ಸರ್ಕಾರದ ಬಳಿ ಕಾನೂನು ಇಲ್ಲದ ಕಾರಣ ಆಸ್ಪತ್ರೆಗಳು ರೋಗಿಗಳಿಂದ ಜಾಸ್ತಿ ಹಣವನ್ನು ಪಡೆಯುತ್ತಿದೆ.

    ಆಲ್ ಇಂಡಿಯಾ ಡ್ರಗ್ ಆ್ಯಕ್ಷನ್ ನೆಟ್‍ವರ್ಕ್(ಎಐಡಿಎಎನ್) ತನ್ನ ಹೇಳಿಕೆಯನ್ನು ಪ್ರಕಟಿಸಿ ಎನ್‍ಪಿಪಿಎ ನಿರ್ಧಾರವನ್ನು ಸ್ವಾಗತಿಸಿದೆ. ಅಲ್ಲದೇ ಆಸ್ಪತ್ರೆಗಳು ಆಂಜಿಯೋ ಪ್ಲಾಸ್ಟ್ ಹೆಸರಲ್ಲಿ ಹಣವನ್ನು ರೋಗಿಗಳಿಂದ ಲೂಟಿ ಮಾಡುತ್ತಿರುವ ಬಗ್ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ತನಿಖೆ ನಡೆಸಬೇಕೆಂದು ಎನ್‍ಪಿಇಎಗೆ ಪತ್ರದ ಮೂಲಕ ಬೇಡಿಕೆ ಇಟ್ಟಿದೆ.

  • ಚಿಕನ್ ಪ್ರಿಯರೇ, ನೀವು ಕೋಳಿ ಮಾಂಸ ತಿನ್ನೋ ಮೊದಲು ಈ ಸ್ಟೋರಿ ಓದಿ

    ಚಿಕನ್ ಪ್ರಿಯರೇ, ನೀವು ಕೋಳಿ ಮಾಂಸ ತಿನ್ನೋ ಮೊದಲು ಈ ಸ್ಟೋರಿ ಓದಿ

    ನವದೆಹಲಿ: ಚಿಕನ್ ಪ್ರಿಯರೇ, ನೀವು ತಿನ್ನುವ ಕೋಳಿ ಮಾಂಸ ತುಂಬಾ ಅಪಾಯಕಾರಿ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ.

    ಕೋಳಿಯಿಂದ ತಯಾರಿಸುವ ಬಿರಿಯಾನಿ, ಕಬಾಬ್, ಮಾಂಸ ಎಲ್ಲವು ತುಂಬಾ ಡೇಂಜರ್ ಆಗಿವೆ. ಕೋಳಿಗಳ ಬೆಳವಣಿಗೆ ಬೇಗವಾಗಬೇಕೆಂದು ಅವುಗಳಿಗೆ ಕಾಲಿಸ್ಟಿನ್ ಎಂಬ ಆ್ಯಂಟಿಬಯಾಟಿಕ್ಸ್ ಔಷಧವನ್ನು ನೀಡಲಾಗುತ್ತದೆ. ಆದ್ದರಿಂದ ಕೋಳಿ ಮಾಂಸ ಸೇವಿಸುವುದರಿಂದ ನಮ್ಮ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿದೆ.

    ಏನಿದು ವರದಿ?
    `ದಿ ಬ್ಯೂರೋ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸಂ’ ಎಂದು ಸಂಸ್ಥೆಯೊಂದು ಭಾರತದಲ್ಲಿ ಕೋಳಿ ಉದ್ಯಮದ ಕುರಿತು ತನಿಖೆ ನಡೆಸಿ ವರದಿಯೊಂದನ್ನು ಸಿದ್ಧ ಪಡಿಸಿದೆ. ಅದರ ಪ್ರಕಾರ ಕೋಳಿಗಳು ತ್ವರಿತ ಗತಿಯಲ್ಲಿ ಬೆಳೆಯಲಿ, ಅಧಿಕ ಲಾಭ ತಂದುಕೊಡಲಿ ಎಂಬ ಉದ್ದೇಶದಿಂದ ಅವುಗಳಿ ಕಾಲಿಸ್ಟಿನ್ ಔಷಧಿ ಕೊಡಲಾಗುತ್ತದೆ.

    ಕಾಲಿಸ್ಟಿನ್ ನನ್ನು ನ್ಯುಮೋನಿಯಾ ಮತ್ತು ಇತರೆ ಸೋಂಕು ರೋಗಗಳಿಗೆ ಚಿಕಿತ್ಸೆ ಕೊಡಲು ಬಳಸುವ ಔಷಧವಾಗಿದೆ. ಬೇರೆ ಯಾವ ಔಷಧದಿಂದ ರೋಗ ಗುಣವಾಗದು ಎಂದು ತಿಳಿದು ಬಂದಾಗ ಈ ಔಷಧವನ್ನು ನೀಡುತ್ತಾರೆ. ಆದ್ದರಿಂದ ಈ ಔಷಧವನ್ನು ಕಾಯಿಲೆ ಬಂದಾಗ ಮಾತ್ರ ಉಪಯೋಗಿಸಬೇಕು. ಕೋಳಿಗಳು ವೇಗವಾಗಿ ಬೆಳೆಯಲು ಈ ಔಷಧಿ ಕೊಡುವುದರಿಂದ ಅವುಗಳನ್ನು ತಿನ್ನುವ ನಮಗೂ ಕೂಡ ಆರೋಗ್ಯದಲ್ಲಿ ತೀವ್ರ ಪರಿಣಾಮ ಬೀರುತ್ತದೆ.

    ತಜ್ಞರು ಹೇಳೋದು ಏನು?
    ಈ ಔಷಧಿಯನ್ನು ತುಂಬಾ ಗಂಭೀರವಾದ ಅನಾರೋಗ್ಯಸ್ಥರಿಗೆ ಮಾತ್ರ ಉಪಯೋಗಿಸುತ್ತಾರೆ. ಆದರೆ ಬೇರೆ ಸಂದರ್ಭದಲ್ಲಿ ಅದನ್ನು ಬಳಸಿದರೆ ಅದು ವಿಷವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆ ಔಷಧಿಯನ್ನು ದೇಶಾದ್ಯಂತ ಕೋಳಿಗಳಿಗಾಗಿ ರಫ್ತು ಮಾಡಲಾಗುತ್ತದೆ. ಅದನ್ನು ಮೊದಲು ತಡೆಗಟ್ಟಬೇಕು ಎಂದು ತಜ್ಞರು ಹೇಳಿದ್ದಾರೆ.