Tag: health

  • ನನ್ನ ಕೈಯಿಂದ ಅವಳು ಸಿಗರೇಟ್‌ ಕಿತ್ತೆಸೆದ ಆ ದಿನವೇ ನನಗೆ ನೋ ಸ್ಮೋಕಿಂಗ್‌ ಡೇ!

    ನನ್ನ ಕೈಯಿಂದ ಅವಳು ಸಿಗರೇಟ್‌ ಕಿತ್ತೆಸೆದ ಆ ದಿನವೇ ನನಗೆ ನೋ ಸ್ಮೋಕಿಂಗ್‌ ಡೇ!

    ವತ್ತು ಬೆಳಗ್ಗೆ ಪೇಪರ್‌ ಕೈಗೆತ್ತಿಕೊಂಡು ತಿರುಗಿಸುವಾಗ ʻನೋ ಸ್ಮೋಕಿಂಗ್‌ ಡೇʼ ಎಂಬ ತಲೆ ಬರಹದ ಒಂದು ಆರ್ಟಿಕಲ್‌ ಕಣ್ಣಿಗೆ ಬಿತ್ತು. ಅದನ್ನು ನೋಡುತ್ತಿದ್ದಂತೆ ನಾಲ್ಕೈದು ವರ್ಷಗಳ ನಾನು ನನ್ನ ಕಣ್ಮುಂದೆ ಬಂದೆ! ಆಗಿನ ನನ್ನನ್ನು ನೆನಪಿಸಿಕೊಂಡ್ರೆ ಅವ್ನೆನಾ ನಾನು? ಅದೇ ವ್ಯಕ್ತಿನಾ? ಆ ತೋಟದ ರಹಸ್ಯ ಜಾಗವೊಂದರಲ್ಲಿ ಸಿಗರೇಟ್‌ ಮುಚ್ಚಿಟ್ಟು ಸೇದುತ್ತಿದ್ದವ ನಾನೆನಾ? ಇಂತಹ ಹಲವು ಪ್ರಶ್ನೆಗಳು ಮನಸ್ಸಲ್ಲಿ ಸಾಲಾಗಿ ಬಂದು ನನ್ನನ್ನು ಅಣಕಿಸಿದವು. ಹೀಗಿದ್ದವ ಹೇಗೆ ತಕ್ಷಣ ಸಿಗರೇಟ್‌ ಬಿಟ್ಟೆ ಎಂಬುದನ್ನು ನೆನಪಿಸಿಕೊಂಡ್ರೆ ಈಗ ನನಗೆ ನಗು ಬರುತ್ತೆ!

    ಅವತ್ತು ಜುಲೈ 23 ಅವಳ ಹುಟ್ಟುಹಬ್ಬ! ಬಾ ಇವತ್ತು ʻಪವಿತ್ರ ವನಕ್ಕೆʼ ಒಂದು ಕೇಕ್‌ ಬಲಿಕೊಟ್ಟು ಹುಟ್ಟುಹಬ್ಬ ಆಚರಿಸೋಣ ಎಂದು ಮಾತಾಡ್ಕೊಂಡಿದ್ವಿ.. ಅವಳು ಬರೋದು ಸ್ವಲ್ಪ ತಡ ಆಯ್ತು.. ಅವಳ ದಾರಿ ಕಾಯ್ತಾ, ಸಿಗರೇಟ್‌ ಹಚ್ಕೊಂಡು ಅವಳು ಬರುವ ದಾರಿ ನೋಡುತ್ತಾ ಇದ್ದೆ. ಇನ್ನೇನೂ ಒಂದು ಪಫ್‌ ಬಾಕಿ ಇತ್ತು.. ಬಂದವಳೇ ಸಿಗರೇಟ್‌ ಕಿತ್ತೆಸೆದು… ಗೋಪಾಲ ಇನ್ಮುಂದೆ ಸಿಗರೇಟ್‌ ಸೇದ್ರೆ ಕಾಲು ಮುರುದು ಬಿಡ್ತೀನಿ ಅಂತ ಜೋರ್‌ ಮಾಡಿದ್ಲು… ನಾನು ಥ್ಯಾಂಕ್ಸ್‌ ಅಂತ ಹಲ್ಲು ಬಿಟ್ಟೆ..! ಆಗ ಅವಳು ʻಸಿಗರೇಟ್‌ʼ ಬಗ್ಗೆ ಒಂದಷ್ಟು ಪಾಠ ಮಾಡಿದ್ದನ್ನು ಇಲ್ಲಿ ಹಂಚಿಕೊಳ್ತಾ ಇದಿನಿ!

    ಪ್ರೇಮಿಯೊಬ್ಬನಿಗೆ ʻಸಿಗರೇಟ್‌ʼ ಪಾಠ!
    ದೀಪ ಸುಡುತ್ತದೆ ಎಂದು ಗೊತ್ತಿದ್ರೂ, ದೀಪದ ಜ್ವಾಲೆಯ ಮಕರಂದ ಹೀರಲು ಪತಂಗ ಅದರತ್ತ ಸುಳಿಯುತ್ತದೆ. ಹಾಗೇ ಧೂಮಪಾನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ವಿಚಾರ ಗೊತ್ತಿದ್ರೂ ಸಹ ಸಿಗರೇಟ್‌ ಬಳಿ ಜನ ಸುಳಿಯುತ್ತಾರೆ. ಸಾಕಷ್ಟು ಮಂದಿ ತಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಚಟದ ಕಾರಣದಿಂದ ಸಿಗರೇಟ್‌ಗೆ ಅಡಿಕ್ಟ್‌ ಆಗ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ತಂಬಾಕು ಪ್ರತಿ ವರ್ಷ 8 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅವರಲ್ಲಿ 7೦ ಲಕ್ಷಕ್ಕೂ ಹೆಚ್ಚು ಮಂದಿಯ ಸಾವಿಗೆ ತಂಬಾಕು ಸೇವನೆಯೇ ಮುಖ್ಯ ಕಾರಣವಾಗಿದೆ. ಅದರಲ್ಲಿ ನೀನು ಒಬ್ಬ ಆಗ್ಬೇಕಾ?

    ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಧೂಮಪಾನವು, ಧೂಮಪಾನಿಗಳ ಸುತ್ತಮುತ್ತಲಿನವರ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಿನ್ನಿಂದ ಯಾಕೆ ಸುತ್ತಮುತ್ತ ಇದ್ದೋರ ಆರೋಗ್ಯ ಹಾಳಾಗ್ಬೇಕು? ನಿನ್ನ ಜೊತೆ ಹೆಚ್ಚಿರೋದು ನಾನೇ ಅಲ್ವಾ ಗೋಪಾಲ? ಸಿಗರೇಟ್‌ ಬೇಕಾ ಹೇಳು?

    ಸಿಗರೇಟ್ ಸೇದುವುದು ಹೃದಯ, ರಕ್ತನಾಳಗಳು ಮತ್ತು ರಕ್ತ ಕಣಗಳನ್ನು ಹಾನಿಗೊಳಿಸುತ್ತದೆ. ಸಿಗರೇಟ್‌ನಲ್ಲಿರುವ ರಾಸಾಯನಿಕಗಳು ಮತ್ತು ಟಾರ್‌ಗಳು ವ್ಯಕ್ತಿಯ ಹೃದಯದ ಅಪಾಯವನ್ನು ಹೆಚ್ಚಿಸಬಹುದು, ಇದು ರಕ್ತನಾಳಗಳಲ್ಲಿ ಪ್ಲೇಕ್‌ನ ರಚನೆಗೆ ಕಾರಣವಾಗುತ್ತದೆ. ಈ ರಚನೆಯು ರಕ್ತದ ಹರಿವನ್ನು ಮಿತಿಗೊಳಿಸುತ್ತದೆ. ಇದು ಎದೆ ನೋವು, ಸ್ಟ್ರೋಕ್, ಹೃದಯಾಘಾತಕ್ಕೆ. ಹೃದಯದಲ್ಲಿ ನಾನಿದಿನಿ ಅಂತ ಹೇಳ್ತಾ ಇರ್ತಿಯಾ, ಈ ಹೊಗೆ ಇದನ್ನೆಲ್ಲ ಮಿಕ್ಸ್‌ ಮಾಡಿ ಹೃದಯದಲ್ಲಿ ಇಟ್ಕೋತಿಯಾ ನನ್ನ?

    ಸಿಗರೇಟ್ ಸೇದುವುದು ಕಣ್ಣಿನ ಪೊರೆ, ಒಣ ಕಣ್ಣುಗಳು, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ವಿವಿಧ ಕಣ್ಣಿನ ಸಮಸ್ಯೆಗೆ ಕಾರಣ ಆಗತ್ತೆ. ಈಗಲೇ ಕನ್ನಡಕ ಬಂದಿದೆ ನೋಡು..! ನಾನು ನಿನ್ನ ಕಣ್ಣಿಗೆ ಚೆನ್ನಾಗಿ ಕಾಣ್ಬೇಕು! ನಗ್ಬೇಡಾ..! ನಿಂಗೆ ಸಿಗರೇಟ್‌ ಬಿಡೋಕೆ ಒಂದಷ್ಟು ಟಿಪ್ಸ್‌ ಹೇಳ್ತಿನಿ ಕೇಳು. ಬರೆದ್ಕೋ ಆ ಬೇಡದೇ ಇರೋ ಕವಿತೆ ಬರಿಯೋಕೆ ಇಟ್ಕೊಂಡಿರೋ ಡೈರಿಲಿ.. ನಾನೇ ಬರೆದ್ಕೊಡ್ತಿನಿ ಕೊಡು ಇಲ್ಲಿ..!

    ಸಿಗರೇಟ್‌ ಸೇದಬೇಕು ಎನಿಸಿದಾಗ – ಆಳವಾದ ಉಸಿರನ್ನು ಎಳೆದ್ಕೋ, ಇದು ಸಿಗರೇಟ್‌ ಬೇಕು ಅನ್ನೋ ಬಯಕೆಯನ್ನ ಆದಷ್ಟು ದೂರ ಮಾಡತ್ತೆ. ಬೆಳಗಿನ ವಾಕಿಂಗ್‌ ಮನಸ್ಸನ್ನು ಉಲ್ಲಾಸಭರಿತವಾಗಿಸುತ್ತದೆ. ಇದು ಒತ್ತಡವನ್ನು ತಗ್ಗಿಸುತ್ತದೆ. ಇದರಿಂದ ಸಿಗರೇಟ್‌ ಸೇದಬೇಕು ಎಂಬ ಬಯಕೆ ಆಗುವುದಿಲ್ಲ. ಈಜು, ಸೈಕ್ಲಿಂಗ್‌, ಬೈಕಿಂಗ್‌, ಯೋಗ ಮತ್ತು ನೃತ್ಯದಂತಹ ಅನೇಕ ಚಟುವಟಿಕೆಗಳು ಸಹ ಸಿಗರೇಟ್‌ನಿಂದ ತಪ್ಪಿಸಿಕೊಳ್ಳಲು ಇರೋ ಬೆಸ್ಟ್‌ ಐಡಿಯಾ ಫಾಲೋ ಮಾಡು. ಅರ್ಥ ಆಯ್ತಾ?

    ಇದೆಲ್ಲ ನೆನಪಿಸಿಕೊಂಡು ಪೇಪರ್‌ ಇಡುವ ಹೊತ್ತಿಗೆ, ಸರಿಯಾಗಿ ಹಾಲಿನವನು ಬಂದ..! ಅವನ ಜೇಬಲ್ಲಿ ಸಿಗರೇಟ್‌ ಪ್ಯಾಕ್‌ ನೋಡಿ ಅವನಿಗೆ ನಾನೊಂದಷ್ಟು ಪಾಠ ಮಾಡ್ದೇ… ಅವನು ಈಗ ಸಿಗರೇಟ್‌ ಬಿಟ್ನಂತೆ!

    – ಗೋಪಾಲಕೃಷ್ಣ

  • ಹೈದರಾಬಾದ್‌ನಲ್ಲಿ ದಂಪತಿ ಆತ್ಮಹತ್ಯೆ – ಇಬ್ಬರು ಮಕ್ಕಳು ಶವವಾಗಿ ಪತ್ತೆ

    ಹೈದರಾಬಾದ್‌ನಲ್ಲಿ ದಂಪತಿ ಆತ್ಮಹತ್ಯೆ – ಇಬ್ಬರು ಮಕ್ಕಳು ಶವವಾಗಿ ಪತ್ತೆ

    – ಹಣಕಾಸು ಸಮಸ್ಯೆ, ಅನಾರೋಗ್ಯದಿಂದ ಬಳಲುತ್ತಿರೋದಾಗಿ ಡೆತ್ ನೋಟ್

    ಹೈದರಾಬಾದ್: ಹಣಕಾಸು ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದು, ಇಬ್ಬರು ಮಕ್ಕಳು ಕೂಡ ಶವವಾಗಿ ಪತ್ತೆಯಾದ ಘಟನೆ ಹೈದರಾಬಾದ್‌ನ (Hyderabad) ಹಬ್ಸಿಗುಡದಲ್ಲಿ (Habsiguda) ನಡೆದಿದೆ.

    ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಕ್ಕಳನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಗಂಡ-ಹೆಂಡತಿಯ ಮೃತದೇಹ ಬೇರೆಬೇರೆ ಕೋಣೆಗಳಲ್ಲಿ ಪತ್ತೆಯಾಗಿದ್ದು, ಅಪ್ರಾಪ್ತ ಮಕ್ಕಳು ಬೆಡ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಭಾರತೀಯ ಕುಸ್ತಿ ಒಕ್ಕೂಟದ ಮೇಲಿನ ಅಮಾನತು ವಾಪಸ್

    ಹಬ್ಸಿಗುಡ ಪ್ರದೇಶದ ರವೀಂದ್ರನಗರ ಕಾಲೋನಿಯಲ್ಲಿರುವ ನಿವಾಸದಲ್ಲಿ ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ಬಳಿಕ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ದಂಪತಿ ಮೊದಲು ತಮ್ಮ ಮಕ್ಕಳನ್ನು ಕತ್ತು ಹಿಸುಕಿ ಕೊಂದು ನಂತರ ನೇಣು ಹಾಕಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎನ್ ರಾಜೇಂದರ್ ತಿಳಿಸಿದ್ದಾರೆ. ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದು ತವರಿಗೆ ಬಂದ ಕ್ಯಾಪ್ಟನ್ ರೋಹಿತ್‌ಗೆ ಭರ್ಜರಿ ಸ್ವಾಗತ

    ಇನ್ನು ಘಟನೆಗೆ ಸಂಬಂಧಿಸಿದಂತೆ ಆತ್ಮಹತ್ಯೆಗೂ ಮುನ್ನ ಪತಿ ಬರೆದಿದ್ದ ಡೆತ್ ನೋಟನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಗಳು ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಝೀರೋ ಬ್ಯಾಲೆನ್ಸ್ ಇದ್ದ ರನ್ಯಾ ಅಕೌಂಟ್‌ಗೆ 2 ದಿನದಲ್ಲಿ 10 ಲಕ್ಷ ಹಣ!

    ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಜೀವನವನ್ನು ಕೊನೆಗೊಳಿಸುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನನ್ನ ವೃತ್ತಿಜೀವನದಲ್ಲಿ ಕಷ್ಟಪಡುತ್ತಿದ್ದೇನೆ ಮತ್ತು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುತ್ತಿದ್ದೇನೆ. ನಾನು ಮಧುಮೇಹ, ನರಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮೂತ್ರಪಿಂಡದ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದೇನೆ ಎಂದು ತೆಲುಗಿನಲ್ಲಿ ಪತಿ ಡೆತ್ ನೋಟ್ ಬರೆದಿದ್ದಾರೆ. ಇದನ್ನೂ ಓದಿ: ಕೊಪ್ಪಳ ಗ್ಯಾಂಗ್‌ರೇಪ್ ಪ್ರಕರಣ – ಮೂವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

    ಮೆಹಬೂಬ್‌ನಗರ ಜಿಲ್ಲೆಯ ಕಲ್ವಕುರ್ತಿ ಬ್ಲಾಕ್‌ನ ಮುಕುರಲ್ಲಾ ಗ್ರಾಮದವರಾದ ದಂಪತಿ ತಮ್ಮ ಮಕ್ಕಳೊಂದಿಗೆ ಒಂದು ವರ್ಷದ ಹಿಂದೆ ಹಬ್ಸಿಗುಡಕ್ಕೆ ಬಂದು ನೆಲೆಸಿದ್ದರು. ಖಾಸಗಿ ಕಾಲೇಜುವೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದ ಪತಿ ಕಳೆದ ಆರು ತಿಂಗಳಿನಿಂದ ನಿರುದ್ಯೋಗಿಯಾಗಿದ್ದರು. ದೀರ್ಘಕಾಲದ ನಿರುದ್ಯೋಗದಿಂದಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರಬಹುದು. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ರಾಜೇಂದರ್ ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರೋಧ

  • ತೂಕ ಹೆಚ್ಚಾಗೋ ಭಯ, ಐದಾರು ತಿಂಗಳು ಊಟವಿಲ್ಲ, ಬರೀ ನೀರು – ಯೂಟ್ಯೂಬ್‌ ನೋಡಿ ಡಯಟ್‌ ಮಾಡ್ತಿದ್ದ ಕೇರಳ ಯುವತಿ ಸಾವು!

    ತೂಕ ಹೆಚ್ಚಾಗೋ ಭಯ, ಐದಾರು ತಿಂಗಳು ಊಟವಿಲ್ಲ, ಬರೀ ನೀರು – ಯೂಟ್ಯೂಬ್‌ ನೋಡಿ ಡಯಟ್‌ ಮಾಡ್ತಿದ್ದ ಕೇರಳ ಯುವತಿ ಸಾವು!

    – ಆಸ್ಪತ್ರೆಗೆ ದಾಖಲಿಸುವಾಗ 24 ಕೆಜಿಗೆ ಇಳಿದಿದ್ದ ಶ್ರೀನಂದ!

    ತಿರುವನಂತಪುರಂ: ತೂಕ ಹೆಚ್ಚಾಗೋ ಭಯದಲ್ಲಿದ್ದ ಕಳೆದ 5-6 ತಿಂಗಳಿನಿಂದ ಊಟ ಮಾಡದೇ ಕೇವಲ ನೀರು ಕುಡಿದು ಡಯಟ್‌ ಮಾಡುತ್ತಿದ್ದ ಯುವತಿ ಸಾವಿಗೀಡಾಗಿರುವ ಘಟನೆ ಕೇರಳದ (Kerala) ಕಣ್ಣೂರಿನ ಕೂತುಪರಂಬ ಎಂಬಲ್ಲಿ ನಡೆದಿದೆ.

    ಮೃತ ಯುವತಿಯನ್ನು ಶ್ರೀನಂದ (18) (Sreenanda) ಎಂದು ಗುರುತಿಸಲಾಗಿದೆ. ಆಕೆ ತೂಕ ಹೆಚ್ಚಾಗುವ ಭಯದಿಂದ ಆಹಾರ ತ್ಯೆಜಿಸುವ ಗೀಳಾದ ʻಅನೋರೆಕ್ಸಿಯಾʼ (Anorexia) ಎಂಬ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಈ ಖಾಯಿಲೆಯಿಂದ ಬಳಲುತ್ತಿರುವ ಜನ ತೆಳ್ಳಗಿನ ದೇಹವನ್ನು ಹೊಂದಿದ್ದರೂ ಸಹ ಅಧಿಕ ತೂಕ ಹೊಂದಿದ್ದೇವೆ ಎಂದು ಭಾವಿಸುತ್ತಾರೆ. ಇದರಿಂದ ಆಹಾರ ಸೇವಿಸುವುದನ್ನು ಬಿಡುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಶ್ರೀನಂದ ಸುಮಾರು 5 ರಿಂದ 6 ತಿಂಗಳುಗಳಿಂದ ಈ ಸ್ಥಿತಿಯಿಂದ ಬಳಲುತ್ತಿದ್ದಳು. ಕೆಲವು ತಿಂಗಳುಗಳಿಂದ ಏನನ್ನೂ ತಿನ್ನುತ್ತಿರಲಿಲ್ಲ. ಈ ವಿಚಾರವನ್ನು ಅವರ ಕುಟುಂಬ ಸದಸ್ಯರಿಂದ ಆಕೆ ಮುಚ್ಚಿಟ್ಟಿದ್ದಳು. ಸುಮಾರು ಐದು ತಿಂಗಳ ಹಿಂದೆ, ಯುವತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ವೈದ್ಯರು ಆಕೆಗೆ ಊಟ ಮಾಡಬೇಕು ಎಂದು ಸಲಹೆ ಕೊಟ್ಟಿದ್ದರು. ಅಲ್ಲದೇ ಮನೋವೈದ್ಯರ ಸಲಹೆ ಪಡೆಯುವಂತೆ ಸೂಚಿಸಿದ್ದರು. ಇನ್ನೂ ಹಲವು ದಿನಗಳಿಂದ ಯುವತಿ ಕೇವಲ ಬಿಸಿ ನೀರನ್ನು ಮಾತ್ರ ಕುಡಿಯುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.

    ಎರಡು ವಾರಗಳ ಹಿಂದೆ ಯುವತಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣ, ಸೋಡಿಯಂ ಕಡಿಮೆಯಾಯಿತು. ಜೊತೆಗೆ ಉಸಿರಾಟದ ಸಮಸ್ಯೆಯೂ ಇತ್ತು. ಆಗ ತಲಶ್ಶೇರಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆಗ ಆಕೆಯ ತೂಕ ಕೇವಲ 24ಕ್ಕೆ ಇಳಿದಿತ್ತು. ವೆಂಟಿಲೇಟರ್‌ ಸಹಾಯದಲ್ಲಿ ಇರಿಸಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಏನಿದು ಅನೋರೆಕ್ಸಿಯಾ ನರ್ವೋಸಾ?
    ಅನೋರೆಕ್ಸಿಯಾ ಕಾಯಿಲೆ ಬಗ್ಗೆ ತಲಶ್ಶೇರಿ ಸಹಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಪ್ರಭು ಮಾಹಿತಿ ನೀಡಿದ್ದು, ಇದು ಸಂಪೂರ್ಣವಾಗಿ ಆಹಾರದ ಬಗೆಗಿನ ಅಸ್ವಸ್ಥತೆಯಲ್ಲ. ಇದು ಮಾನಸಿಕ ಸ್ಥಿತಿಯೂ ಆಗಿದೆ. ಈ ಕಾಯಿಲೆಯಿಂದ ಬಳಲುವವರು ತೂಕ ಜಾಸ್ತಿ ಹೊಂದಿದ್ದೇವೆ ಎಂಬ ಭ್ರಮೆಯಲ್ಲಿರುತ್ತಾರೆ. ಅಥವಾ ತೂಕ ಜಾಸ್ತಿಯಾಗುತ್ತದೆ ಎಂಬ ಭಯದಲ್ಲಿ ಆಹಾರವನ್ನು ತ್ಯೆಜಿಸುತ್ತಾರೆ. ಇದರಿಂದ ಕ್ರಮೇಣ ತಮ್ಮ ಹಸಿವಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    ಅನೋರೆಕ್ಸಿಯಾ ನರ್ವೋಸಾ ರೋಗಕ್ಕೆ ಕಾರಣಗಳು ತಿಳಿದಿಲ್ಲ. ಇದು ಮಾನಸಿಕ ಆರೋಗ್ಯ, ಆನುವಂಶಿಕ ಬದಲಾವಣೆಗಳು ಮತ್ತು ಪರಿಸರದ ಅಂಶಗಳಿಂದ ಈ ಕಾಯಿಲೆ ಬರಬಹುದು. ಇದು ಎಲ್ಲಾ ಲಿಂಗ, ಜನಾಂಗಗಳು, ವಯಸ್ಸು ಮತ್ತು ದೇಹ ಪ್ರಕಾರಗಳ ಮೇಲೂ ಪರಿಣಾಮ ಬೀರಬಹುದು ಎಂದಿದ್ದಾರೆ.

    ಈ ಕಾಯಿಲೆಯಿಂದ ಬಳಲುವವರಿಗೆ ಮಾನಸಿಕ ಚಿಕಿತ್ಸೆ, ಔಷಧಿಗಳು, ಪೌಷ್ಟಿಕಾಂಶ ಸಮಾಲೋಚನೆ, ವಾರಕ್ಕೊಮ್ಮೆ ಸಮಾಲೋಚನೆ ಮತ್ತು ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಚೇತರಿಕೆ ಸಾಧ್ಯ. ಆದಾಗ್ಯೂ, ಅಂತಹ ಅಸ್ವಸ್ಥತೆಗಳು ರಾತ್ರೋರಾತ್ರಿ ಗುಣವಾಗುವುದಿಲ್ಲ. ಒಬ್ಬ ವ್ಯಕ್ತಿಯು ಅನುಭವಿಸಿದ ತೀವ್ರತೆ ಮತ್ತು ಅವಧಿಯನ್ನು ಅವಲಂಬಿಸಿ, ಚೇತರಿಕೆಗೆ ಸಮಯ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.

  • ಮಕ್ಕಳಲ್ಲೂ ಕಾಡ್ತಿದೆ ಮಾರಕ ಕ್ಯಾನ್ಸರ್ – ಅಂಕಿ ಅಂಶ ಬಿಚ್ಚಿಟ್ಟ ಶರಣು ಪ್ರಕಾಶ್ ಪಾಟೀಲ್

    ಮಕ್ಕಳಲ್ಲೂ ಕಾಡ್ತಿದೆ ಮಾರಕ ಕ್ಯಾನ್ಸರ್ – ಅಂಕಿ ಅಂಶ ಬಿಚ್ಚಿಟ್ಟ ಶರಣು ಪ್ರಕಾಶ್ ಪಾಟೀಲ್

    ಬೆಂಗಳೂರು: ಮಕ್ಕಳಲ್ಲಿ ಹೆಚ್ಚು ಕ್ಯಾನ್ಸರ್ (Cancer) ಪತ್ತೆ ಆಗುತ್ತಿರುವುದು ಬೆಳಕಿಗೆ ಬಂದಿದೆ. ಖುದ್ದು ರಾಜ್ಯ ಸರ್ಕಾರವೇ ಈ‌ ಬಗ್ಗೆ ಅಂಕಿ ಅಂಶಗಳನ್ನು ಕೊಟ್ಟಿದೆ. ಈ ಬಗ್ಗೆ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ (Congress) ಸದಸ್ಯೆ ಉಮಾಶ್ರೀಯವರ ಪ್ರಶ್ನೆಗೆ ಸಚಿವ ಶರಣು ಪ್ರಕಾಶ್ ಪಾಟೀಲ್ (Sharanu Prakash Patil) ಉತ್ತರ ನೀಡಿದ್ದಾರೆ.

    ಪ್ರತಿ ವರ್ಷ ರಾಜ್ಯದಲ್ಲಿ 0-14 ವಯಸ್ಸಿನ ಮಕ್ಕಳಲ್ಲಿ 1533 ಪ್ರಕರಣಗಳು ಕಂಡುಬರುತ್ತಿವೆ. ಗಂಡುಮಕ್ಕಳಲ್ಲಿ 876 ಕೇಸ್ ಮತ್ತು ಹೆಣ್ಣುಮಕ್ಕಳಲ್ಲಿ 657 ಕೇಸ್ ದಾಖಲಾಗುತ್ತಿದೆ. ಗಂಡು ಮಕ್ಕಳಲ್ಲಿ ಸಾಮಾನ್ಯವಾಗಿ 45% ರಕ್ತ ಕ್ಯಾನ್ಸರ್ ಹಾಗೂ 14.5% ಲಿಂಪೋಮಾ ಕ್ಯಾನ್ಸರ್, 12.9 % ಮೆದುಳು, 5.6% ಮೂಳೆ ಸಂಬಂಧಿಸಿದ ಕ್ಯಾನ್ಸರ್, 3.6% ಮೂತ್ರಪಿಂಡ ಕ್ಯಾನ್ಸರ್, 2.6% ಕಣ್ಣಿನ ಕ್ಯಾನ್ಸರ್ ಬರುತ್ತಿದೆ.

    ಹೆಣ್ಣುಮಕ್ಕಳಲ್ಲಿ 44.6% ರಕ್ತ ಕ್ಯಾನ್ಸರ್, 12.1% ಮೆದುಳು- ನರ ಕ್ಯಾನ್ಸರ್, 9.5% ದುಗ್ದ ಗ್ರಂಥಿ ಅಥವಾ ಲಿಂಪೋಮಾ ಕ್ಯಾನ್ಸರ್, 5.8% ಮೂಳೆ ಕ್ಯಾನ್ಸರ್ ಹಾಗೂ 3.4% ಮೃದು ಅಂಗಾಂಗ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

    ಕಿದ್ವಾಯಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ರೀತಿ ಕ್ಯಾನ್ಸರ್ ಚಿಕಿತ್ಸೆ ಕೊಡುತ್ತಿದ್ದೇವೆ. ಬೋನ್ ಮ್ಯಾರೋ ಚಿಕಿತ್ಸೆ ಕೂಡಾ ಕಿದ್ವಾಯಿ ಆಸ್ಪತ್ರೆಯಲ್ಲಿ ಈಗ ಕೊಡುತ್ತಿದ್ದೇವೆ. ABRKಯಲ್ಲಿ ಚಿಕಿತ್ಸೆಗೆ ಹಣ ಕೊಡಲು ತೀರ್ಮಾನ ಮಾಡಲಾಗಿದೆ. ಕ್ಯಾನ್ಸರ್ ಜಾಗೃತಿ ಮೂಡಿಸೋ ಕೆಲಸ ಮಾಡ್ತಿದ್ದಾರೆ. 4 ಭಾಗದಲ್ಲಿ ಮಕ್ಕಳ ಕ್ಯಾನ್ಸರ್‌ಗೆ ಚಿಕಿತ್ಸೆಗೆ ಆಸ್ಪತ್ರೆ ನಿರ್ಧಾರ ಮಾಡಲಾಗಿದೆ. ಇನ್ನೂ ಮೈಸೂರು, ಕಲಬುರ್ಗಿ, ಹುಬ್ಬಳ್ಳಿಯಲ್ಲಿ ಆಸ್ಪತ್ರೆಯಲ್ಲಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ. ಕ್ಯಾನ್ಸರ್ ಬಗ್ಗೆ ಜಿಲ್ಲಾ, ತಾಲೂಕು ಮಟ್ಟದ ಜಾಗೃತಿ ಮೂಡಿಸಲು ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ.

  • ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

    ಮೋದಿಗೂ ಅಚ್ಚುಮೆಚ್ಚು ತಾವರೆ ಬೀಜ – ದಿನ ಬಳಸೋದ್ರಿಂದ ಆರೋಗ್ಯಕ್ಕೆ ಆಗೋ ಪ್ರಯೋಜನವೇನು?

    ಮ್ಮ ಬಾಯಿ ರುಚಿಗೆ ದಿನನಿತ್ಯ ನಾವು ಒಂದಲ್ಲ ಒಂದು ರೀತಿಯ ತಿಂಡಿಯ ಮೊರೆ ಹೋಗ್ತೇವೆ, ಅದರಲ್ಲಿ ಎಷ್ಟೋ ರಾಸಾಯನಿಕ ಬಳಸಿ ತಯಾರಿಸಿದ್ದಾಗಿರುತ್ತವೆ. ಅಂತಹ ಆರೋಗ್ಯಕ್ಕೆ ಹೊಂದದ ಆಹಾರ ಬದಿಗಿಟ್ಟು, ಆರೋಗ್ಯಕ್ಕೆ ಒಗ್ಗುವ ಉತ್ತಮವಾದ ನೈಸರ್ಗಿಕವಾದ ತಿಸಿಸೊಂದರ ಬಗ್ಗೆ ತಿಳಿದುಕೊಳ್ಳೋಣ. ಅದೇ ಈ ʻತಾವರೆ ಬೀಜಗಳುʼ ಪುಟ್ಟ ಶಕ್ತಿಶಾಲಿ ಬೀಜಗಳಲ್ಲಿ ಅದೆಂತಹ ಶಕ್ತಿ ಇದೆ ಅಂದ್ರೆ ಇದಕ್ಕೆ ಪ್ರಧಾನಿ ಮೋದಿಯೇ ಮನಸೋತಿದ್ದಾರೆ.

    ತಾವರೆ ಬೀಜಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಮೆಗ್ನೀಷಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಮನುಷ್ಯನ ದೇಹಕ್ಕೆ ಅಗತ್ಯವಿರುವ ಖನಿಜಗಳನ್ನು ಹೊಂದಿದೆ. ಕೊಲೆಸ್ಟ್ರಾಲ್ ಮಟ್ಟ ಸಮತೋಲನಗೊಳಿಸಲು ಮತ್ತು ಹೃದಯವನ್ನು ಆರೋಗ್ಯವಾಗಿಡಲು ಪೊಟ್ಯಾಸಿಯಮ್ ಸಹಾಯಮಾಡುತ್ತದೆ. ವಿಟಮಿನ್ ಎ, ಬಿ1, ಸಿ ಸಹ ಇದರಲ್ಲಿದ್ದು, ಪ್ರತಿದಿನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾಗಿದೆ.

    ತಾವರೆ ಬೀಜಗಳ ಬಗ್ಗೆ ಮೋದಿ ಹೇಳಿದ್ದೇನು?
    ಇತ್ತೀಚೆಗೆ ಪ್ರಧಾನಿ ಮೋದಿಯವರು ಬಿಹಾರದ ರ‍್ಯಾಲಿಯಲ್ಲಿ ಮಾತನಾಡುವಾಗ, ವರ್ಷದ 300 ದಿನಗಳ ಕಾಲ ತಾವರೆಯ ಬೀಜಗಳನ್ನು ಸೇವಿಸುವುದಾಗಿ ಹೇಳಿದ್ದರು. ಅಲ್ಲದೇ, ಈ ಆಹಾರವನ್ನು ಸೂಪರ್‌ ಫಾಸ್ಟ್‌ ಫುಡ್‌ ಆಗಿ ವಿಶ್ವಕ್ಕೆ ಪರಿಚಯಿಸುವ ಅಗತ್ಯವಿದೆ ಎಂದಿದ್ದರು.

    ಮಖಾನ ಮಂಡಳಿ – ಕೇಂದ್ರ ಬಜೆಟ್‌ನಲ್ಲಿ ಘೋಷಣೆ
    ಇನ್ನೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಮಂಡಿಸಿದ್ದ ಬಜೆಟ್‌ನಲ್ಲಿ, ಬಿಹಾರದಲ್ಲಿ ವಿಶೇಷ ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದು ರಾಜ್ಯದಲ್ಲಿ ಮಖಾನಾದ ಉತ್ಪಾದನೆ, ಮಾರುಕಟ್ಟೆ, ಮೌಲ್ಯವರ್ಧನೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದರು.

    ಸೂಪರ್‌ ಮಾರ್ಕೇಟ್‌ನಲ್ಲಿ ತಾವರೆಯ ಬೀಜಗಳು ಮಾರಟಕ್ಕೆ ಲಭ್ಯವಿದ್ದು, ಅತೀ ಹೆಚ್ಚು ಬೇಡಿಕೆ ಇರುವ ಆಹಾರ ಪದಾರ್ಥವಾಗಿದೆ. ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಕಡಿಮೆ ಇರುವುದರಿಂದ, ಇದು ತಿನ್ನಲು ರುಚಿಯಾಗಿದೆ. ಇತ್ತೀಚೆಗೆ ಸೂಪರ್‌ಮಾರ್ಕೆಟ್‌ಗಳಲ್ಲಿ ವಿವಿಧ ರುಚಿಯಲ್ಲಿಯೂ ತಾವರೆಯ ಬೀಜಗಳು ಲಭ್ಯವಿದೆ.

    ತಾವರೆಯ ಬೀಜಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ?
    ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಗ್ಯಾಲಿಕ್ ಆಮ್ಲ, ಕ್ಲೋರೊಜೆನಿಕ್ ಆಮ್ಲ ಮತ್ತು ಎಪಿಕಾಟೆಚಿನ್ ನಂತಹ ಉತ್ಕರ್ಷಣ (Antioxidants) ನಿರೋಧಕಗಳು ತಾವರೆಯ ಬೀಜದಲ್ಲಿ ಇರುತ್ತವೆ.

    ಮಖಾನ ಸೇವನೆಯಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟು, ಹೃದಯ ಕಾಯಿಲೆಗಳಿಂದ ರಕ್ಷಿಸುತ್ತದೆ. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ.

    ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ, ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಚರ್ಮದ ಆರೋಗ್ಯ ಹಾಗೂ ಹೊಳಪು ಹೆಚ್ಚಾಗುತ್ತದೆ.

    ದೇಹಕ್ಕೆ ಬೇಕಿರುವ ಅತ್ಯವಶ್ಯವಾದ ಪ್ರೋಟೀನ್‌ಗಳು ಮಖಾನಾದಲ್ಲಿ ಸಮೃದ್ಧವಾಗಿವೆ. ಇದರಲ್ಲಿನ ಪ್ರೋಟೀನ್‌ ಸ್ನಾಯು ನಿರ್ವಹಣೆ ಸಹಕಾರಿಯಾಗಿದೆ. ವರ್ಕೌಟ್‌ನಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗುವವರಿಗೆ ಬಹಳಷ್ಟು ಎನರ್ಜಿಯನ್ನು ಇದು ನೀಡುತ್ತದೆ.

    ಮಖಾನಾದಲ್ಲಿ ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಮತ್ತು ಜೀವಕೋಶದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

    ಮಖಾನಾವು ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಹೊಂದಿದ್ದು, ಮೂಳೆ, ಹಲ್ಲುಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ. ನಿಮ್ಮ ಆಹಾರದಲ್ಲಿ ಮಖಾನಾವನ್ನು ಸೇರಿಸುವುದರಿಂದ ಮೂಳೆಯ ಆರೋಗ್ಯ ಸುಧಾರಿಸುತ್ತದೆ.

    ಮಖಾನಾದಲ್ಲಿ ನೈಸರ್ಗಿಕವಾಗಿ ಸೋಡಿಯಂ ಕಡಿಮೆ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ಸಮತೋಲನಗೊಳಿಸಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

  • ಬಳ್ಳಾರಿ | ರೈತರಿಗೆ ವಿತರಿಸಲು ಇಟ್ಟಿದ್ದ 2,000 ಕೋಳಿಗಳು ಹಕ್ಕಿಜ್ವರಕ್ಕೆ ಬಲಿ

    ಬಳ್ಳಾರಿ | ರೈತರಿಗೆ ವಿತರಿಸಲು ಇಟ್ಟಿದ್ದ 2,000 ಕೋಳಿಗಳು ಹಕ್ಕಿಜ್ವರಕ್ಕೆ ಬಲಿ

    ಬಳ್ಳಾರಿ: ಸಂಡೂರು ತಾಲೂಕಿನ ಕುರೇಕುಪ್ಪ ಫಾರ್ಮ್‍ನಲ್ಲಿ ಹಕ್ಕಿಜ್ವರ (Bird Flu) ಪತ್ತೆಯಾಗಿದ್ದು ಸಾವಿರಾರು ಕೋಳಿಗಳು ಸಾವನ್ನಪ್ಪಿವೆ.

    ಕುರೇಕುಪ್ಪ ಜಾನುವಾರು ಸಂವರ್ಧನೆ ಮತ್ತು ತರಬೇತಿ ಕೇಂದ್ರದಲ್ಲಿನ ಕೋಳಿಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹಕ್ಕಿಜ್ವರದಿಂದ 2,000 ಕೋಳಿಗಳು ಸತ್ತಿರುವುದು ದೃಢಪಟ್ಟಿದೆ. ತರಬೇತಿ ಕೇಂದ್ರದಲ್ಲಿ ರೈತರಿಗೆ ವಿತರಿಸಲು ಅಸೀಲ್ ತಳಿಯ ಕೋಳಿಗಳನ್ನು ಸಾಕಲಾಗಿತ್ತು.

    ಕಳೆದ ಹತ್ತು ದಿನಗಳಿಂದ ಪ್ರತಿದಿನ ಮೂವತ್ತು ಕೋಳಿಗಳು ಸಾಯುತ್ತಿವೆ. ಕೋಳಿಗಳ ಸ್ಯಾಂಪಲ್‍ನ್ನು ಭೋಪಾಲ್‍ನಲ್ಲಿನ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಇದೀಗ ಕೋಳಿಗಳಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿದೆ. ಇನ್ನೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.

    ಕೇಂದ್ರದ ಒಂದು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಹಳ್ಳಿಗಳು, ಜನವಸತಿ ಪ್ರದೇಶಗಳು ಇಲ್ಲ. 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಕೋಳಿ ಫಾರ್ಮ್‍ಗಳು ಇಲ್ಲ. ಇದರಿಂದ ಹಕ್ಕಿಜ್ವರ ಬೆರೆಡೆಗೆ ಹರಡುವ ಸಾಧ್ಯತೆ ಕಡಿಮೆ ಇದೆ.

  • ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಇರೋದು ದೃಢ – ಕೋಳಿಗಳ ಮಾರಣಹೋಮಕ್ಕೆ ಮುಂದಾದ ಜಿಲ್ಲಾಡಳಿತ

    ಚಿಕ್ಕಬಳ್ಳಾಪುರದಲ್ಲಿ ಹಕ್ಕಿ ಜ್ವರ ಇರೋದು ದೃಢ – ಕೋಳಿಗಳ ಮಾರಣಹೋಮಕ್ಕೆ ಮುಂದಾದ ಜಿಲ್ಲಾಡಳಿತ

    ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ (Chikkaballapur) ಹಕ್ಕಿ ಜ್ವರ (Bird flu) ಇರುವುದು ದೃಢಪಟ್ಟಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದ್ದಾರೆ.

    ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಭೂಪಾಲ್‍ನ ಪ್ರಯೋಗಾಲಯ ನೀಡಿದ ವರದಿಯಿಂದ ವರದಹಳ್ಳಿ ಗ್ರಾಮದಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವುದು ದೃಢವಾಗಿದೆ. ಸಂತೆಯಿಂದ ಕೋಳಿ ತಂದು ಸಾಕಾಣಿಕೆ ಮಾಡಿರುವುದರಿಂದ ವೈರಸ್ ತಗುಲಿರಬಹುದು. ರೋಗನಿಯಂತ್ರಣಕ್ಕಾಗಿ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 18 ವರ್ಷ ತುಂಬುವುದು ಇಷ್ಟವಿಲ್ಲ ಅಂತ ಹುಟ್ಟುಹಬ್ಬಕ್ಕೂ ಮುನ್ನವೇ ಮಗನನ್ನು ಕೊಂದ ಮಹಿಳೆ

    ಗ್ರಾಮದಲ್ಲಿರುವ ಇತರೆ ಕೋಳಿಗಳ ಹತ್ಯೆಗೆ ಕ್ರಮ ಕೈಗೊಳ್ಳಲಾಗುವುದು. ವರದಹಳ್ಳಿ ಗ್ರಾಮದ ಜನರ ಬಳಿ ಕೋಳಿಗಳನ್ನು ಕೊಡಲು ಮನವಿ ಮಾಡುತ್ತೇನೆ. ಕೋಳಿಗಳನ್ನು ಪಡೆದು ನಿಯಾಮಾನುಸಾರ ನಿಗದಿತ ಏರಿಯಾದಲ್ಲಿ ಕೋಳಿಗಳ ಹತ್ಯೆ ಮಾಡಿ ಮುಚ್ಚಿ ಹಾಕುತ್ತೇವೆ. ವೈರಸ್ ಹರಡದಂತೆ ತಡೆಯಲು ಕೋಳಿಗಳ ಹತ್ಯೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ICC Champions Trophy | ಟೂರ್ನಿಯಿಂದ ಔಟ್‌ ಆದ್ರೂ ಪಾಕ್‌ಗೆ ಸಿಕ್ತು ನಗದು ಬಹುಮಾನ

  • ಇಂದು `ಹಗ್‌ ಡೇʼ – ಒಂದು ಅಪ್ಪುಗೆಯ ಮಹತ್ವ ನಿಮಗೆಷ್ಟು ಗೊತ್ತು?

    ಇಂದು `ಹಗ್‌ ಡೇʼ – ಒಂದು ಅಪ್ಪುಗೆಯ ಮಹತ್ವ ನಿಮಗೆಷ್ಟು ಗೊತ್ತು?

    ನುಷ್ಯ ಯಾವುದೋ ಸಾಧನೆಯ ಬೆನ್ನು ಬಿದ್ದೋ, ಹಣದ ಹಿಂದೆ ಬಿದ್ದೋ ಚಿಕ್ಕ ಚಿಕ್ಕ ಸಂಗತಿಗಳಲ್ಲಿರುವ ಬಹುದೊಡ್ಡ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾನೆ. ಹಾಗೇ ಈ ʻಹಗ್‌ʼ ಸಹ ಒಂದು, ನಮ್ಮವರಿಗಾಗಿ ನಮಗಾಗಿ ನಾವು ಕೊಡುವ ಕೆಲವು ಕ್ಷಣಗಳು, ನಮ್ಮ ಬದುಕಿನಲ್ಲಿ ಬಂಗಾರದ ಘಮವನ್ನು ಕೊಡಬಹುದು! ಅದಕ್ಕಾಗಿ ʻಹಗ್‌ ಡೇʼ ಬಹಳ ಪ್ರಮುಖವಾಗಿ ನನಗೆ ಕಾಣುತ್ತದೆ.ನನ್ನ ಬದುಕಿನಲ್ಲಿ ಯಾರೋ ಇದ್ದಾರೆ ಎಂಬ ಬಹುದೊಡ್ಡ ಖಾತ್ರಿಯನ್ನು ಈ ಅಪ್ಪುಗೆ ಖಂಡಿತ ಬಲಪಡಿಸುತ್ತದೆ ಎಂಬುದು ನನ್ನ ನಂಬಿಕೆ.

    `ಹಗ್‌ ಡೇ ಇತಿಹಾಸ
    ಜನರು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಪ್ರೋತ್ಸಾಹಿಸುವ ಸಲುವಾಗಿ ಅಪ್ಪುಗೆಯ ದಿನವನ್ನು (Hug Day 2025) ಮೊದಲು 1986 ರಲ್ಲಿ ಅಮೆರಿಕದಲ್ಲಿ ಆಚರಿಸಲಾಯಿತು. ಕಾಲಾನಂತರದಲ್ಲಿ, ಇದು ಪ್ರಪಂಚದಾದ್ಯಂತ ಆಚರಣೆಗೆ ಬಂತು.

    ಹಗ್ ಡೇಯನ್ನು ಏಕೆ ಆಚರಿಸಲಾಗುತ್ತದೆ?
    ಫೆಬ್ರವರಿಯಲ್ಲಿ ವ್ಯಾಲೆಂಟೈನ್ಸ್‌ ವೀಕ್‌ನಲ್ಲಿ ಈ ದಿನ ಪ್ರೇಮಿಯನ್ನು ಅಪ್ಪಿಕೊಳ್ಳುವುದು ತುಂಬಾ ವಿಶೇಷವಾಗಿದೆ. ನೀವು ಪ್ರೀತಿಸುತ್ತಿದ್ದರೆ ಈ ಸಂದರ್ಭದಲ್ಲಿ ನಿಮ್ಮ ಪ್ರೇಮಿಯನ್ನು ಸಹ ತಬ್ಬಿಕೊಳ್ಳಬಹುದು!

    ಅಪ್ಪಿಕೊಳ್ಳುವುದರಿಂದಾಗುವ ಅನೇಕ ಪ್ರಯೋಜನಗಳು
    ಆಲಿಂಗನದಿಂದ ಅನೇಕ ಆರೋಗ್ಯಕರ (Health) ಪ್ರಯೋಜನಗಳು ಸಿಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ತಬ್ಬಿಕೊಂಡಾಗ ಪ್ರೀತಿ ಮತ್ತು ವಿಶ್ವಾಸವು ಹೆಚ್ಚಾಗುತ್ತದೆ ಎಂಬುದು ಅಧ್ಯಯನದಿಂದ ಬಹಿರಂಗವಾಗಿದೆ.

    ಅಪ್ಪುಗೆ ವ್ಯಕ್ತಿಯ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆಕ್ಸಿಟೋಸಿನ್ ಹಾರ್ಮೋನ್ ಮಟ್ಟವನ್ನು ಬಹುಪಟ್ಟು ಹೆಚ್ಚಿಸುತ್ತದೆ. ಈ ಹಾರ್ಮೋನ್ ನಮ್ಮ ಶಾಂತತೆ ಮತ್ತು ಸಂತೋಷದ ಭಾವನೆಗಳಿಗೆ ಕಾರಣವಾಗಿದೆ. ಆಕ್ಸಿಟೋಸಿನ್ ಹಾರ್ಮೋನ್‌ನನ್ನು ಸಂತೋಷದ ಹಾರ್ಮೋನ್ ಎಂದೂ ಸಹ ಕರೆಯುತ್ತಾರೆ. ಈ ಆಕ್ಸಿಟೋಸಿನ್ ಹಾರ್ಮೋನ್ ಜನರ ಒತ್ತಡ ಕಡಿಮೆ ಮಾಡುತ್ತದೆ.

    ಅಪ್ಪಿಕೊಳ್ಳುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಬಹುಶಃ ನೀವು ಇದನ್ನು ಕೇಳಲು ಸ್ವಲ್ಪ ವಿಚಿತ್ರವೆನಿಸಬಹುದು. ಆದರೂ ಇದು ನಿಜ. ಅಪ್ಪುಗೆಯಿಂದ ಮಹಿಳೆಯರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಅಪ್ಪುಗೆಯು ಅವರ ಮನಸ್ಸಿನಿಂದ ಭಯವನ್ನು ಹೋಗಲಾಡಿಸುತ್ತದೆ ಮತ್ತು ಶಾಂತಿಯನ್ನು ನೀಡುತ್ತದೆ. ಸಣ್ಣ ಅಪ್ಪುಗೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ.

    ಅಪ್ಪಿಕೊಳ್ಳುವುದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ. ಅಧ್ಯಯನದ ಪ್ರಕಾರ, ಒತ್ತಡಕ್ಕೆ ಸಂಬಂಧಿಸಿದ ಮೆದುಳಿನ ಭಾಗವು ಅಪ್ಪುಗೆಯ ನಂತರ ಹೈಪರ್ ಆ್ಯಕ್ಟಿವ್ ಆಗುತ್ತದೆ. ಇದು ಒತ್ತಡದ ಭಾವನೆಗಳನ್ನು ಸಂತೋಷದ ಭಾವನೆಗಳಾಗಿ ಪರಿವರ್ತಿಸುತ್ತದೆ. 400ಕ್ಕೂ ಹೆಚ್ಚು ಜನರ ಮೇಲೆ ಅಪ್ಪುಗೆಯಿಂದ ಆಗುವ ಪ್ರಯೋಜನಗಳನ್ನು ಸೈಕಲಾಜಿಕಲ್ ಸೈನ್ಸ್ ಜರ್ನಲ್ ಅಧ್ಯಯನ ಮಾಡಿದೆ. ಪ್ರೀತಿ ಪಾತ್ರರನ್ನು ನಿಯಮಿತವಾಗಿ ತಬ್ಬಿಕೊಳ್ಳುವ ಜನರು ರೋಗಗಳಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

    ಅಪ್ಪಿಕೊಳ್ಳುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.‌ ಪ್ರೀತಿ ಪಾತ್ರರನ್ನು ತಬ್ಬಿಕೊಂಡ ನಂತರ, ಮೆದುಳು ವೇಗವಾಗಿ ಕೆಲಸ ಮಾಡುತ್ತದೆ, ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಗಾಯಕ್ಕೆ ಔಷಧಿಯಂತೆ, ಮನಸ್ಸಿನ ನೋವುಗಳಿಗೆ ಅಪ್ಪುಗೆ ಮದ್ದಾಗಬಹುದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

  • ನೋವು ನಿವಾರಕ ಹುಲಿ ಮೂತ್ರ! – ಚೀನೀ ಝೂನಿಂದ ಮಾರಾಟ, ಬಾಟಲ್‌ಗೆ 596 ರೂ.

    ನೋವು ನಿವಾರಕ ಹುಲಿ ಮೂತ್ರ! – ಚೀನೀ ಝೂನಿಂದ ಮಾರಾಟ, ಬಾಟಲ್‌ಗೆ 596 ರೂ.

    ಬೀಜಿಂಗ್‌: ಕೋವಿಡ್‌ ವೈರಸ್‌ನ (Covid Virus) ತವರು ದೇಶ ಚೀನಾ (China) ಈಗ ಹುಲಿ ಮೂತ್ರವನ್ನು (Tiger Urine) ಮಾರಾಟ ಮಾಡುವ ಮೂಲಕ ಸುದ್ದಿಯಾಗಿದೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಇದೆ ಎಂದು ಹೇಳಿ ಮೃಗಾಲಯವೊಂದು (Chinese zoo) ಹುಲಿ ಮೂತ್ರವನ್ನು ಮಾರಾಟ ಮಾಡಲು ಆರಂಭಿಸಿದೆ.

    ಚುವಾನ್ ಪ್ರಾಂತ್ಯದಲ್ಲಿ, ಯಾನ್ ಬೈಫೆಂಗ್ಕ್ಸಿಯಾ ವನ್ಯಜೀವಿ ಮೃಗಾಲಯವು ಬಾಟಲ್ ಹುಲಿ ಮೂತ್ರವನ್ನು ಸಂಧಿವಾತ, ಉಳುಕು ಮತ್ತು ಸ್ನಾಯು ನೋವಿಗೆ ಪರಿಹಾರವಾಗಿ ಮಾರಾಟ ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 250 ಎಂಎಲ್‌ ಸೈಬಿರಿಯನ್‌ ಹುಲಿ ಮೂತ್ರಕ್ಕೆ 50 ಯುವಾನ್‌ (ಅಂದಾಜು 596 ರೂ.) ಬೆಲೆಯನ್ನು ನಿಗದಿ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಸಾಂದರ್ಭಿಕ ಚಿತ್ರ

    ಹುಲಿ ಮೂತ್ರಕ್ಕೆ ಬಿಳಿ ವೈನ್‌, ಶುಂಠಿ ಚೂರನ್ನು ಹಾಕಿ ಮಿಶ್ರಣ ಮಾಡಿ ನೋವು ಇರುವ ಜಾಗಕ್ಕೆ ಹಾಕಿದರೆ ನೋವು ಕಡಿಮೆಯಾಗುತ್ತದೆ ಎಂದು ತನ್ನ ಪ್ರಚಾರದ ಲೇಬಲ್‌ನಲ್ಲಿ ಮುದ್ರಿಸಿತ್ತು. ಅಷ್ಟೇ ಅಲ್ಲದೇ ಹುಲಿ ಮೂತ್ರವನ್ನು ಕುಡಿಯಲೂಬಹುದು ಎಂದು ಹೇಳಿತ್ತು. ಆದರೆ ಅಲರ್ಜಿಯಾದರೆ ಕುಡಿಯುವುದನ್ನು ನಿಲ್ಲಿಸುವಂತೆ ಉಲ್ಲೇಖಿಸಿತ್ತು. ಇದನ್ನೂ ಓದಿ: AI ರಂಗದಲ್ಲಿ ಡೀಪ್‌ಸೀಕ್ ಸಂಚಲನ – ಅಮೆರಿಕ ಷೇರುಪೇಟೆ ಶೇಕ್!

    ತಜ್ಞರು ಹುಲಿ ಮೂತ್ರ ಮಾರಾಟ ಮಾಡುವ ಅಭ್ಯಾಸವನ್ನು ಅನೈತಿಕ ಮತ್ತು ಅಪಾಯಕಾರಿ ಎಂದು ಹೇಳಿ ಖಂಡಿಸಿದ್ದಾರೆ. ಹುಲಿ ಮೂತ್ರವು ಸಾಂಪ್ರದಾಯಿಕ ಚೀನೀ ಔಷಧದಲ್ಲಿ ಮಾನ್ಯತೆ ಪಡೆದ ಚಿಕಿತ್ಸೆಯಲ್ಲ. ಪುರಾವೆಗಳಿಲ್ಲದೆ ಅದರ ಮೌಲ್ಯವನ್ನು ಉತ್ಪ್ರೇಕ್ಷಿಸುವುದು ಸಾಂಪ್ರದಾಯಿಕ ಚೀನೀ ಔಷಧಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ.

    ಚೀನೀ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಹುಲಿಯನ್ನು ಶಕ್ತಿಯ ಲಾಂಛನಗಳಾಗಿ ನೋಡಲಾಗುತ್ತದೆ. ಪ್ರಾಚೀನ ವೈದ್ಯಕೀಯ ಸಾಹಿತ್ಯದಲ್ಲಿ ಹುಲಿ ಮೂಳೆಗಳನ್ನು ಸಂಧಿವಾತ ಮತ್ತು ಅಪಸ್ಮಾರ ಸೇರಿದಂತೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಿದ ಬಗ್ಗೆ ಉಲ್ಲೇಖವಿದೆ.

    ಹುಲಿ ಬೇಟೆಯನ್ನು ಚೀನಾ ಸರ್ಕಾರ ನಿಷೇಧಿಸಿದೆ. ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಚೀನಿ ಸಾಮಾಜಿಕ ಜಾಲತಾಣದಲ್ಲಿ ಈಗ ಈ ವಿಚಾರದ ಬಗ್ಗೆ ಜನ ಚರ್ಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

     

  • ದರ್ಶನ್‌ಗೆ ಕಡಿಮೆಯಾದ ಬೆನ್ನು ನೋವು – ಸದ್ಯಕ್ಕಿಲ್ಲ ಆಪರೇಷನ್

    ದರ್ಶನ್‌ಗೆ ಕಡಿಮೆಯಾದ ಬೆನ್ನು ನೋವು – ಸದ್ಯಕ್ಕಿಲ್ಲ ಆಪರೇಷನ್

    ಮೈಸೂರು: ಬೆನ್ನು ನೋವಿನಿಂದ (Back Pain) ಬಳಲುತ್ತಿರುವ ನಟ ದರ್ಶನ್‌ಗೆ (Darshan) ಕಳೆದ ವಾರ ಮೈಸೂರಿನ (Mysuru) ವೈದ್ಯ ಡಾ. ಅಜಯ್ ಹೆಗ್ಡೆ ನೀಡಿದ್ದ ಎಪಿಡ್ಯೂರಲ್ ಇಂಜೆಕ್ಷನ್ ವರ್ಕ್ ಆಗಿದೆ. ಹೀಗಾಗಿ ಕೊಲೆ ಆರೋಪಿ ದರ್ಶನ್‌ಗೆ ಸದ್ಯಕ್ಕೆ ಆಪರೇಷನ್ ಅವಶ್ಯಕತೆ ಇಲ್ಲ. ನಾನು ಮೊದಲಿಗಿಂತಲೂ ಚೆನ್ನಾಗಿದ್ದೇನೆ ಎಂದು ವೈದ್ಯರಿಗೆ ದರ್ಶನ್ ದೂರವಾಣಿ ಮೂಲಕ ಹೇಳಿದ್ದಾರೆ.

    ಕಳೆದ ವಾರ ಕೊಟ್ಟ ಇಂಜೆಕ್ಷನ್‌ನಿಂದ ದರ್ಶನ್ ಬೆನ್ನು ನೋವಿನಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಬಹುತೇಕ ಇಂಜೆಕ್ಷನ್‌ನಿಂದಲೇ ನೋವು ನಿವಾರಣೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈಗಾಗಲೇ ಪ್ರತಿನಿತ್ಯ ವರ್ಕೌಟ್ ಶುರು ಮಾಡಿರುವ ದರ್ಶನ್ ಫುಲ್ ಬಾಡಿ ವರ್ಕೌಟ್ ಶುರು ಮಾಡಿದ ನಂತರ ಏನಾದರು ನೋವು ಕಾಣಿಸಿಕೊಂಡರೆ ಮತ್ತೆ ಪರೀಕ್ಷೆಗೆ ಒಳಪಡಲಿದ್ದಾರೆ. ಇದನ್ನೂ ಓದಿ: ಬಣಗಳ ಗುದ್ದಾಟ – ರಾಮುಲು, ರೆಡ್ಡಿ ಗಲಾಟೆ | ಕಡೆಗೂ ಆರ್‌ಎಸ್‌ಎಸ್‌ ಎಂಟ್ರಿ

    ಫೆಬ್ರವರಿಯಿಂದ ಶೂಟಿಂಗ್‌ನಲ್ಲಿ ನಿರಂತರವಾಗಿ ಭಾಗವಹಿಸುವ ನಟ ದರ್ಶನ್ ದೇಹವನ್ನು ಮೊದಲಿನ ರೀತಿ ತರಲು ವರ್ಕೌಟ್‌ಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ. ವೈದ್ಯರ ಸಲಹೆಯಂತೆ ಮತ್ತೆ ಎಂದಿನ ಶೈಲಿಯಲ್ಲೇ ದರ್ಶನ್ ನಿಧಾನವಾಗಿ ಜಿಮ್‌ನಲ್ಲಿ ಕಸರತ್ತು ಆರಂಭಿಸಿದ್ದಾರೆ. ಇದನ್ನೂ ಓದಿ: 50 ವರ್ಷಗಳ ಬಳಿಕ ದಂಡಿ ಮಾರಮ್ಮನ ಅದ್ಧೂರಿ ತೆಪ್ಪೋತ್ಸವ – ವೈಭವ ಕಣ್ತುಂಬಿಕೊಂಡ ಭಕ್ತಗಣ