Tag: health

  • 8ರ ಅಪ್ರಾಪ್ತೆ ಜೊತೆ 12ರ ಬಾಲಕ ಸೆಕ್ಸ್ – ಬಾಲಕಿಯ ಆರೋಗ್ಯದಲ್ಲಿ ಏರುಪೇರು

    8ರ ಅಪ್ರಾಪ್ತೆ ಜೊತೆ 12ರ ಬಾಲಕ ಸೆಕ್ಸ್ – ಬಾಲಕಿಯ ಆರೋಗ್ಯದಲ್ಲಿ ಏರುಪೇರು

    ಇಸ್ಲಾಮಾಬಾದ್: 12 ವರ್ಷದ ಬಾಲಕನೊಬ್ಬ 8 ವರ್ಷದ ಅಪ್ರಾಪ್ತೆ ಜೊತೆ ದೈಹಿಕ ಸಂಬಂಧ ಬೆಳೆಸಿರುವ ಶಾಕಿಂಗ್ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

    ಖಾದಿಂ ಹುಸೇನ್(12) ದೈಹಿಕ ಸಂಬಂಧ ಬೆಳೆಸಿದ ಬಾಲಕ. ಶಹದಾಕೋಟ್ ಜಿಲ್ಲೆಯ ಅದೀನ್ ಗ್ರಾಮದ ಖಾದಿಂ ಹುಸೇನ್ 7ನೇ ತರಗತಿ ಓದುತ್ತಿದ್ದು, 8 ವರ್ಷದ ಬಾಲಕಿ ಜೊತೆ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದಾನೆ.

    ಬಾಲಕಿ ಮನೆಗೆ ಹಿಂತಿರುಗಿದ ನಂತರ ಆಕೆಯ ಆರೋಗ್ಯದಲ್ಲಿ ಏರುಪೇರು ಆಗಿದೆ. ಬಳಿಕ ಆಕೆಯ ಪೋಷಕರು ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಬಾಲಕಿ ಬಲವಂತವಾಗಿ ಖಾದಿಂ ಹುಸೇನ್ ತನ್ನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಪೋಷಕರಿಗೆ ತಿಳಿಸಿದ್ದಾಳೆ.

    ವಿಷಯ ತಿಳಿದ ನಂತರ ಪೋಷಕರು ಈ ಘಟನೆ ಬಗ್ಗೆ ಗ್ರಾಮದ ಮುಖ್ಯ ವ್ಯಕ್ತಿಗಳ ಬಳಿ ಹೇಳಿದ್ದಾರೆ. ಆಗ ಗ್ರಾಮದ ಜಮೀನ್‍ದಾರರು ಬಾಲಕನನ್ನು 6 ತಿಂಗಳು ಮನೆಯಿಂದ ಹೊರ ಹಾಕಬೇಕು ಎಂದು ಶಿಕ್ಷೆ ವಿಧಿಸಿದ್ದರು. ಅಲ್ಲದೆ ಅಪ್ರಾಪ್ತೆಯ ಕುಟುಂಬಕ್ಕೆ 2 ಲಕ್ಷ ಪಾಕಿಸ್ತಾನ ರೂ. ನೀಡುವಂತೆ ಬಾಲಕನ ಕುಟುಂಬಕ್ಕೆ ಆದೇಶಿಸಿದೆ.

    ಖದಿಂ ಹುಸೇನ್ ಕುಟುಂಬದವರು ಬಡವರಾಗಿದ್ದು, ಅಪ್ರಾಪ್ತೆ ಕುಟುಂಬಕ್ಕೆ 2 ಲಕ್ಷ ರೂ. ನೀಡಲು ತಮ್ಮ ಬಳಿ ಇದ್ದ ಜಾನುವಾರುಗಳನ್ನು ಹಾಗೂ ಅರ್ಧ ಚಿನ್ನವನ್ನು ಮಾರಾಟ ಮಾಡಿ ಅದರದಲ್ಲಿ ಸಿಕ್ಕಿದ ಹಣವನ್ನು ಬಾಲಕಿಯ ಕುಟುಂಬಕ್ಕೆ ನೀಡಿದ್ದಾರೆ.

  • ಸಿಎಂ ಎಚ್‍ಡಿಕೆ ‘ಫಿಟ್ನೆಸ್’ ಬಗ್ಗೆ ಮಾಹಿತಿ ನೀಡಿ – ರಾಜ್ಯಪಾಲರಿಗೆ ಪತ್ರ

    ಸಿಎಂ ಎಚ್‍ಡಿಕೆ ‘ಫಿಟ್ನೆಸ್’ ಬಗ್ಗೆ ಮಾಹಿತಿ ನೀಡಿ – ರಾಜ್ಯಪಾಲರಿಗೆ ಪತ್ರ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ತಮ್ಮ ಆರೋಗ್ಯದ ಬಗ್ಗೆ ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದು, ಅವರ ಆರೋಗ್ಯ ಬಗ್ಗೆ ರಾಜ್ಯದ ಜನರಲ್ಲಿ ಆತಂಕ ಮೂಡಿದೆ. ಆದ್ದರಿಂದ ಸಿಎಂರ ಆರೋಗ್ಯದ ಕುರಿತು ಮಾಹಿತಿ ನೀಡಿ ಎಂದು ಸಾಮಾಜಿಕ ಹೋರಾಟಗಾರರೊಬ್ಬರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

    ಸಾಮಾಜಿಕ ಹೋರಾಟಗಾರ ಬಿಎಸ್ ಗೌಡ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದು, 2018ರ ಮೇ ತಿಂಗಳಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದ ಸಿಎಂ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರ ಕಾರ್ಯಕ್ರಮ ಹಾಗೂ ಇತರೇ ಸಭೆಯಗಳಲ್ಲಿ ನನ್ನ ಆರೋಗ್ಯ ಸರಿ ಇಲ್ಲ. ನಾನು ಯಾವಾಗ ಬೇಕಾದರೂ ಸಾಯುವ ಪರಿಸ್ಥಿತಿ ಇದೆ ಎಂದು ಅವರೇ ಪ್ರಸ್ತಾಪ ಮಾಡಿದ್ದಾರೆ. ಈ ವಿಚಾರ ಮಾಧ್ಯಮಗಳಲ್ಲಿ ಕೂಡ ಸುದ್ದಿಯಾಗಿದ್ದು, ರಾಜ್ಯದ ಮತದಾರನಾಗಿ ಮುಖ್ಯಮಂತ್ರಿಗಳ ಆರೋಗ್ಯ ಬಗ್ಗೆ ಆತಂಕವಾಗುತ್ತಿದೆ ಎಂದಿದ್ದಾರೆ.

    ಸಿಎಂ ಅವರ ಆರೋಗ್ಯ ಬಗ್ಗೆ ತಿಳಿದುಕೊಳ್ಳಲು ಆಸಕ್ತನಾಗಿದ್ದು, ಆದ್ದರಿಂದ ರಾಜ್ಯಪಾಲರು ಸಿಎಂ ಅವರ ಆರೋಗ್ಯದ ತಪಾಸಣೆಯ ದಾಖಲೆಗಳನ್ನು ಬಹಿರಂಗ ಪಡಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

  • ಬೆಂಗಳೂರಲ್ಲಿ ಮಳೆ, ಬೈರಮಂಗಲ ಕೆರೆಯಲ್ಲಿ ನೊರೆ!

    ಬೆಂಗಳೂರಲ್ಲಿ ಮಳೆ, ಬೈರಮಂಗಲ ಕೆರೆಯಲ್ಲಿ ನೊರೆ!

    – ಆಸ್ಪತ್ರೆ ಸೇರುತ್ತಿದ್ದಾರೆ ಜನ
    – ಬಜೆಟಿನಲ್ಲಿ ಶುದ್ಧೀಕರಣ ಘೋಷಣೆ, ಕೆಲ್ಸ ಮಾತ್ರ ಆಗಿಲ್ಲ

    ರಾಮನಗರ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾದರೆ ಬೆಳ್ಳಂದೂರು ಕೆರೆಯ ನೊರೆಯದ್ದೇ ಗೋಳು. ಇತ್ತ ಬಿಡದಿ ಬೈರಮಂಗಲ ಕೆರೆಯದ್ದು ಸಹ ನೊರೆಯದ್ದೆ ವ್ಯಥೆಯಾಗಿದೆ. ಹತ್ತಾರು ಹಳ್ಳಿಗಳ ಜೀವನಾಡಿಯಾಗಿದ್ದ ಕೆರೆ ಇದೀಗ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗಿರುವುದರಿಂದ ಈಗ ನೊರೆಯ ಹಾವಳಿ ಹೆಚ್ಚಾಗಿದೆ.

    ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾದ ಪರಿಣಾಮ ಬೈರಮಂಗಲ ಕೆರೆಯಲ್ಲಿ ಇದೀಗ ನೊರೆಯ ಆರ್ಭಟ ಜೋರಾಗಿದೆ. ರಸ್ತೆ ಪಕ್ಕದಲ್ಲಿ ನೊರೆಗಳು ಹಾರುತ್ತಿದ್ದು, ರೈತರ ಜಮೀನುಗಳಲ್ಲಿನ ಬೆಳೆ ನಾಶವಾಗುತ್ತಿದೆ. ಬೈರಮಂಗಲ ಕೆರೆ ಕಳೆದ ಹತ್ತು ವರ್ಷಗಳಿಂದ ಕಲುಷಿತಗೊಂಡು ಬಳಕೆಗೆ ಇರಲಿ ಮುಟ್ಟುವುದಕ್ಕೂ ಸಹ ಹಿಂಜರಿಯುವಂತಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದ ರಾಸಾಯನಿಕ ನೀರು ಹಾಗೂ ಬೆಂಗಳೂರಿನ ಕೊಳಚೆ ನೀರು ಕೆರೆ ಸೇರುತ್ತಿರುವುದರಿಂದ ಸುತ್ತಮುತ್ತಲ ಪರಿಸರವೆಲ್ಲ ಈಗಾಗಲೇ ಗಬ್ಬೆದ್ದು ಹೋಗಿದೆ.

    ಈ ನೊರೆ ಇದೀಗ ಮನುಷ್ಯರ ಮೇಲೂ ಸಹ ಹಾರುತ್ತಿದ್ದು, ಕೆಮಿಕಲ್‍ನಿಂದ ಕೂಡಿರುವ ನೊರೆಗೆ ಇದೀಗ ಮನುಷ್ಯರು ಸಹ ಆಸ್ಪತ್ರೆ ಹಿಡಿಯುವಂತಾಗಿದೆ. ಕಳೆದ 6 ವರ್ಷಗಳಿಂದ ಕೆರೆ ಶುದ್ಧೀಕರಣ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇನ್ನೂ ಆ ಕಾರ್ಯ ಮಾಡುತ್ತಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿ ಎಂದು ಸ್ಥಳೀಯ ರಾಮಣ್ಣ  ಹೇಳಿದ್ದಾರೆ.

    ಅಂದಹಾಗೇ ಬೈರಮಂಗಲ ಕೆರೆ ಕಳೆದ 10 ವರ್ಷಗಳ ಹಿಂದೆ ಹತ್ತಾರು ಗ್ರಾಮಗಳ ಜೀವನಾಡಿಯಾಗಿತ್ತು. ಆದರೆ ಬಿಡದಿ ಕೈಗಾರಿಕಾ ಪ್ರದೇಶವಾದ ಬಳಿಕ ಕೆರೆಯೆಲ್ಲ ಕೆಮಿಕಲ್ ತ್ಯಾಜ್ಯದಿಂದ ಗಬ್ಬೆದ್ದು ಹೋಗಿದೆ. ಕಳೆದ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ಕೆರೆಯ ಶುದ್ಧೀಕರಣಕ್ಕೆ ಬಜೆಟ್‍ನಲ್ಲಿ ಘೋಷಣೆ ಮಾಡಿವೆ. ಆದರೆ ಅದು ಕೇವಲ ಕಾಗದದ ಮೇಲಿನ ಘೋಷಣೆಯಾಗಿಯೇ ಉಳಿದುಕೊಂಡಿದೆ. ಒಂದೆರಡು ಬಾರಿ ಕೇಂದ್ರದಿಂದಲೂ ಕೂಡ ಕೆರೆ ಶುದ್ಧೀಕರಣಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಂಗಳೂರಿನಲ್ಲಿ ಮಳೆಯಾದರೆ ಸಾಕು ನಮಗೆ ಇಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದು ವೆಂಕಟೇಶ್‍ರೆಟ್ಟಿ ತಿಳಿಸಿದ್ದಾರೆ.

  • ಹೈ-ಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳ – ಕೂಸಿನ ಸುರಕ್ಷತೆಗೆ ವೈದ್ಯರ ಟಿಪ್ಸ್

    ಹೈ-ಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಳ – ಕೂಸಿನ ಸುರಕ್ಷತೆಗೆ ವೈದ್ಯರ ಟಿಪ್ಸ್

    ಕಲಬುರಗಿ: ಜಿಲ್ಲೆ ಸೇರಿದಂತೆ ಹೈದರಾಬಾದ್- ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಸೂರ್ಯನ ಹೊಡೆತಕ್ಕೆ ಪುಟ್ಟ ಕಂದಮ್ಮಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

    ದಿನದಿಂದ ದಿನಕ್ಕೆ ಹೈ-ಕ ಭಾಗದ 6 ಜಿಲ್ಲೆಯಲ್ಲಿ ಅಕ್ಷರಶಃ ಬಿಸಲಿನ ತಾಪ ಕಾದ ಕೆಂಡದಂತಾಗುತ್ತಿದೆ. ಹೀಗಾಗಿ ಕಲಬುರಗಿಯಲ್ಲಿನ ಜನರ ಬದುಕು ಸದ್ಯ ನರಕಯಾತನೆಯಂತಾಗಿದ್ದು, ಮನೆಯಲ್ಲಿದ್ರೂ ತೊಂದರೆ ಹೊರಗಡೆ ಬಂದ್ರೂ ತೊಂದರೆ ಎನ್ನುವಂತಾಗಿದೆ.

    ದೊಡ್ಡವರು ಹೇಗೋ ಅಬ್ಬಬ್ಬಾ ಎಂದು ದಿನ ಕಳೆಯುತ್ತಿದ್ದಾರೆ. ಆದರೆ ಹಸುಗೂಸುಗಳ ಸ್ಥಿತಿಗತಿ ದೇವರೇ ಕಾಪಾಡಬೇಕು ಎನ್ನುವ ಹಾಗಾಗಿದೆ. ಕಾರಣ ಬಿಸಿಲಿನ ಹೊಡೆತಕ್ಕೆ ಮಕ್ಕಳಿಗೆ ಡಿ-ಹೈಡ್ರೇಷನ್ ಆಗಿ ಆಸ್ಪತ್ರೆಗೆ ದಾಖಲಾಗುತ್ತಿವೆ. ಕಳೆದ ಕೆಲ ದಿನಗಳಿಂದ ಬಿಸಿಲು 43 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ನಿಮ್ಮ ಮಕ್ಕಳನ್ನು ಆದಷ್ಟು ಕೇರ್ ಮಾಡಿ ಎಂದು ಮಕ್ಕಳ ತಜ್ಞ ವೈದ್ಯರು ಹೇಳುತ್ತಾರೆ.

    ಕೂಸಿನ ಸುರಕ್ಷತೆಗೆ ವೈದ್ಯರ ಟಿಪ್ಸ್ ಹೀಗಿದೆ
    * ಮಗುವನ್ನು ತೆಳುವಾದ ಬಟ್ಟೆಯಿಂದ ಕವರ್ ಮಾಡಿ
    * ತಾಯಿ ಪದೇ ಪದೇ ಎದೆಹಾಲು ಉಣಿಸಬೇಕು
    * ತಾಯಿ ನೀರನ್ನು ಹೆಚ್ಚಿಗೆ ಸೇವಿಸಲಿ.

    ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿರುವ ಹೆರಿಗೆ ನಂತರದ ವಾರ್ಡ್‍ನಲ್ಲಿ ಏಸಿ ಇಲ್ಲ. ಹೀಗಾಗಿ ಫ್ಯಾನ್ ನಿಂದ ಬರೋ ಬಿಸಿಗಾಳಿಯಿಂದ ಬಳಲುವ ಅನಿವಾರ್ಯ ತಾಯಿಗೆ ಬಂದೊದಗಿದೆ. ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ಸಾವಿಗೂ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಕುರಿತು ಜಿಲ್ಲಾಸ್ಪತ್ರೆಯ ಸರ್ಜನ್ ಕೇಳಿದ್ರೆ, ನಮ್ಮ ಬಳಿ ಇರುವ ತನಕ ನಾವು ಕೇರ್ ಮಾಡುವುದಾಗಿ ಹೇಳುತ್ತಿದ್ದಾರೆ.

    ಬಿಸಿಲಿನಿಂದ ಉಂಟಾಗುತ್ತಿರೋ ನಾನಾ ಕಾಯಿಲೆ ಜೀವಕ್ಕೆ ಅಪಾಯ ತರಬಲ್ಲದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡುತ್ತಿದೆ.

  • ದ್ರಾಕ್ಷಿ ಸೇವನೆಯಿಂದ ಮೈಗ್ರೇನ್‍ಗೆ ಚಿಕಿತ್ಸೆ – ಸೌಂದರ್ಯ ಸಮಸ್ಯೆ ಕೂಡ ದೂರ

    ದ್ರಾಕ್ಷಿ ಸೇವನೆಯಿಂದ ಮೈಗ್ರೇನ್‍ಗೆ ಚಿಕಿತ್ಸೆ – ಸೌಂದರ್ಯ ಸಮಸ್ಯೆ ಕೂಡ ದೂರ

    ನಿಮಗೆ ಮೈಗ್ರೇನ್ ಬರುತ್ತಾ? ಹೇಗಪ್ಪ ಈ ಮೈಗ್ರೇನ್ ತಲೆನೋವು ಕಡಿಮೆ ಮಾಡುವುದು ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ದ್ರಾಕ್ಷಿ ಹಣ್ಣುಗಳನ್ನು ಸೇವಿಸಿದರೆ ಮೈಗ್ರೇನ್ ಕಡಿಮೆ ಮಾಡಿಕೊಳ್ಳಬಹುದು.

    ದ್ರಾಕ್ಷಿಯಲ್ಲಿ ಕ್ಯಾಲೋರಿ, ಫೈಬರ್, ವಿಟಮಿನ್ಸ್ ಹಾಗೂ ಮಿನರಲ್ಸ್ ಅಂಶಗಳು ಇರುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗುತ್ತದೆ. ಅಲ್ಲದೆ ದ್ರಾಕ್ಷಿ ತಿನ್ನುವುದರಿಂದ ಬ್ಯೂಟಿ ಪ್ರಾಬ್ಲಂ ಕೂಡ ದೂರವಾಗುತ್ತದೆ.

    ದ್ರಾಕ್ಷಿಯಲ್ಲಿ ಏನಿದೆ?
    ಒಂದು ಕಪ್ ದ್ರಾಕ್ಷಿಯಲ್ಲಿ 62 ಕ್ಯಾಲೋರಿ, 1.3 ಗ್ರಾಂ ಫ್ಯಾಟ್ ಹಾಗೂ 15 ಗ್ರಾಂ ಶುಗರ್ ಇರುತ್ತದೆ. ಇದನ್ನು ಸೇವಿಸುವುದರಿಂದ ಶುಗರ್ ಲೆವಲ್ ಕಂಟ್ರೋಲ್‍ನಲ್ಲಿ ಇರುತ್ತದೆ. ಇದರ ಹೊರತಾಗಿ ಇದರಲ್ಲಿ 1.8 ಮಿಲಿಗ್ರಾಂ ಸೋಡಿಯಂ, ಶೇ.3ರಷ್ಟು ಡೈಯಟ್ರಿ ಫೈಬರ್, ಶೇ.5ರಷ್ಟು ಪೋಟ್ಯಾಶಿಯಂ, ಶೇ.5ರಷ್ಟು ಕಾರ್ಬೋಹೈಡ್ರೆಟ್, 0.6ಗ್ರಾಂ ಪ್ರೋಟಿನ್, ಶೇ.1ರಷ್ಟು ವಿಟಮಿನ್ ಎ, ಶೇ.6ರಷ್ಟು ವಿಟಮಿನ್ ಸಿ, ಶೇ.1ರಷ್ಟು ಕ್ಯಾಲಿಶಿಯಂ, ಶೇ.1ರಷ್ಟು ಐರನ್, ಶೇ.1ರಷ್ಟು ಮ್ಯಾಗ್ನೇಶಿಂ ಹಾಗೂ ಶೇ.5ರಷ್ಟು ವಿಟಮಿನ್ ಬಿ-6 ಅಂಶಗಳು ಇರುತ್ತದೆ.

    ಲಾಭ ಏನು?
    ಡಯಾಬಿಟಿಸ್: ದ್ರಾಕ್ಷಿ ಸಿಹಿ ಆಗಿರುವುದರಿಂದ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುವವರು ತಿನ್ನಲು ಹಿಂದೇಟು ಹಾಕುತ್ತಾರೆ. ಈ ಕಲ್ಪನೆ ತಪ್ಪು. ದ್ರಾಕ್ಷಿ ಸೇವನೆಯಿಂದ ಬ್ಲಡ್ ಶುಗರ್ ಲೆವಲ್ ಕಂಟ್ರೋಲ್‍ನಲ್ಲಿ ಇರುವುದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಡಯಾಬಿಟಿಸ್ ಇರುವವರು ದ್ರಾಕ್ಷಿಯನ್ನು ವೈದ್ಯರ ಸಲಹೆ ಮೇರೆಗೆ ಮಿತ ಪ್ರಮಾಣದಲ್ಲಿ ಸೇವಿಸಬಹುದು.

    ಮೈಗ್ರೇನ್: ನಿಮಗೆ ಮೈಗ್ರೇನ್ ಇದ್ದರೆ ಒಂದು ಗ್ಲಾಸ್ ದ್ರಾಕ್ಷಿ ರಸವನ್ನು ಕುಡಿಯಬೇಕು. ಇದರಿಂದ ಮೈಗ್ರೇನ್ ಕಡಿಮೆಯಾಗುತ್ತದೆ. ದಿನನಿತ್ಯ ದ್ರಾಕ್ಷಿ ರಸದ ಸೇವನೆಯಿಂದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಸ್ತನ ಕ್ಯಾನ್ಸರ್: ಸಂಶೋಧನೆ ಪ್ರಕಾರ, ದಿನ 1 ಕಪ್ ದ್ರಾಕ್ಷಿ ಸೇವಿಸುವುದರಿಂದ ಸ್ತನದ ಕ್ಯಾನ್ಸರ್ ಶೇ.50ರಷ್ಟು ಕಡಿಮೆ ಆಗುತ್ತದೆ. ಇದರ ಹೊರತಾಗಿ ಹೃದಯದ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

    ರಕ್ತದ ಕೊರತೆ: ದ್ರಾಕ್ಷಿಯಲ್ಲಿ ಐರನ್ ಅಂಶ ಹೆಚ್ಚು ಇರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದ ಕೊರತೆಯನ್ನು ಕಡಿಮೆ ಮಾಡುತ್ತದೆ. ಎನಿಮಿಯಾ ಇರುವವರು 1 ಗ್ಲಾಸ್ ದ್ರಾಕ್ಷಿ ಜ್ಯೂಸಿಗೆ 2 ಚಮಚ ಜೇನು ತುಪ್ಪ ಬೆರೆಸಿ ದಿನನಿತ್ಯ ಕುಡಿಯಬೇಕು. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚುತ್ತದೆ.

    ಟಿಬಿ ಹಾಗೂ ಬ್ಲಡ್ ಇಂಫೆಕ್ಷನ್: ದ್ರಾಕ್ಷಿಯಲ್ಲಿ ಗ್ಲೂಕೋಸ್, ಮ್ಯಾಗ್ನೀಶಿಯಂ ಹಾಗೂ ಸೀಟ್ರಿಕ್ ಆ್ಯಸಿಡ್ ಅಂಶಗಳು ಇರುತ್ತದೆ. ಇದರಿಂದ ಟಿಬಿ ಹಾಗೂ ಬ್ಲಡ್ ಇಂಫೆಕ್ಷನ್ ಸಮಸ್ಯೆಯಿಂದ ದೂರ ಇರಿಸುತ್ತದೆ.

    ಗ್ಲೋಯಿಂಗ್ ಸ್ಕೀನ್: ನಿಮ್ಮ ಮುಖದಲ್ಲಿ ಸುಕ್ಕು ಇದ್ದರೆ ದ್ರಾಕ್ಷಿಯ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ತ್ವಚ್ಛೆಯ ಸಮಸ್ಯೆ ದೂರವಾಗುತ್ತದೆ. ಇದಕ್ಕಾಗಿ ದ್ರಾಕ್ಷಿ, ಅವಕಾಡೋ ಪಲ್ಪ್, 2 ಚಮಚ ಜೇನು ಹಾಗೂ ರೋಸ್ ವಾಟರ್ ಎಲ್ಲವನ್ನು ಮಿಶ್ರಣ ಮಾಡಿ. ಬಳಿಕ ಅದನ್ನು ಮುಖಕ್ಕೆ ಹಾಕಿ 15 ನಿಮಿಷದ ಬಿಡಬೇಕು. ಬಳಿಕ ನೀರಿನಿಂದ ಮುಖ ತೊಳೆದರೆ ನಿಮ್ಮ ಮುಖದಲ್ಲಿ ಗ್ಲೋ ಕಾಣಿಸುತ್ತದೆ.

    ಸನ್‍ಬರ್ನ್: ಬೇಸಿಗೆಯಲ್ಲಿ ಸನ್‍ಬರ್ನ್ ಸಮಸ್ಯೆ ಹೆಚ್ಚು ಕಾಡುತ್ತಿರುತ್ತದೆ. ದ್ರಾಕ್ಷಿ ಸೇವಿಸುವುದರಿಂದ ಸನ್‍ಬರ್ನ್ ಸಮಸ್ಯೆ ಕಡಿಮೆಯಾಗುತ್ತದೆ. ಡಯಟ್ ವೇಳೆ ದ್ರಾಕ್ಷಿ ಸೇವನೆ ಮತ್ತು ದಿನನಿತ್ಯ ಇದರ ರಸದಿಂದ ಮುಖವನ್ನು ಮಸಾಜ್ ಮಾಡಿದರೆ ಸನ್‍ಬರ್ನ್ ಸಮಸ್ಯೆ ದೂರವಾಗುತ್ತದೆ.

    ತಲೆಕೂದಲು ಬೆಳವಣಿಗೆ: ದ್ರಾಕ್ಷಿ ಎಣ್ಣೆಯನ್ನು ತಲೆಕೂದಲಿಗೆ ಹಾಕಿಕೊಂಡರೆ, ಅದು ಕೂದಲನ್ನು ಬಲಿಷ್ಟವಾಗಿ ಇರಿಸಲು ಸಹಾಯ ಮಾಡುತ್ತದೆ. ಎಣ್ಣೆಯಲ್ಲಿ ಕೆಲವು ಹನಿ ನಿಂಬೆಹಣ್ಣಿನ ರಸ ಹಾಕಿ ಅದನ್ನು ತಲೆಕೂದಲ ಬುಡಕ್ಕೆ ಹಾಕಬೇಕು. ಸ್ವಲ್ಪ ಹೊತ್ತಿನ ಬಳಿಕ ಸ್ವಚ್ಛ ನೀರಿನಿಂದ ತಲೆಕೂದಲನ್ನು ತೊಳೆಯಬೇಕು. ತಲೆಕೂದಲನ್ನು ತೊಳೆಯುವಾಗ ಕಂಡೀಶನರ್ ಬಳಸಲೇ ಬೇಕು. ಇದನ್ನು ಉಪಯೋಗಿಸುವುದರಿಂದ ತಲೆಕೂದಲು ಬಲಿಷ್ಟವಾಗುವುದಲ್ಲೇ ಹೇರ್ ಫಾಲ್ ಹಾಗೂ ಡ್ಯಾಂಡ್ರಫ್ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.

  • ಬೇಸಿಗೆ ಕಾಲದಲ್ಲಿ ಮೆಣಸಿನಕಾಯಿಯಿಂದ ಆಗುವ ಲಾಭಗಳು

    ಬೇಸಿಗೆ ಕಾಲದಲ್ಲಿ ಮೆಣಸಿನಕಾಯಿಯಿಂದ ಆಗುವ ಲಾಭಗಳು

    ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಸೇವನೆಯಿಂದ ನಮ್ಮ ದೇಹ ತಣ್ಣಗೆ ಇರುತ್ತದೆ ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಇದು ಸುಳ್ಳು. ಏಕೆಂದರೆ ಈ ಪದಾರ್ಥಗಳು ಸೇವಿಸುವುದರಿಂದ ಇನ್ನಷ್ಟು ದೇಹದ ಉಷ್ಣಾಂಶ ಹೆಚ್ಚಾಗುತ್ತದೆ.

    ಬೇಸಿಗೆ ಕಾಲದಲ್ಲಿ ಜನರು ಮಸಾಲ ಪದಾರ್ಥ ಸೇವಿಸಲು ಹಿಂಜರಿಯುತ್ತಾರೆ. ಆದರೆ ಮಸಾಲ ಪದಾರ್ಥ ತಿನ್ನುವುದರಿಂದ ಸೆಕೆ (ಬೇಗೆ) ಕಡಿಮೆಯಾಗುತ್ತದೆ. ಅದರಲ್ಲೂ ಆಹಾರದಲ್ಲಿ ಹಸಿಮೆಣಸಿನಕಾಯಿ ಇದ್ದರೆ, ಅದು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

    ಮೆಣಸಿನಕಾಯಿಯಿಂದ ಆಗುವ ಲಾಭಗಳು:
    ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್(Antioxidant) ಜೊತೆಗೆ ಡೈಯಟ್ರಿ ಫೈಬರ್(Dietary fiber) ಅಂಶಗಳು ಇರುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಿತ ಪ್ರಮಾಣದ ಹಸಿಮೆಣಸಿನಕಾಯಿ ಸೇವನೆಯಿಂದ ಗ್ಯಾಸ್ ಟ್ರಬಲ್, ಮಲಬದ್ಧತೆ ರೋಗದಿಂದ ದೂರ ಇರಬಹುದಾಗಿದೆ.

    ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ(Antibacterial) ಅಂಶ ಕೂಡ ಇರುತ್ತದೆ. ಹಸಿಮೆಣಸಿನಕಾಯಿ ಸೇವಿಸುವುದರಿಂದ ದೇಹದಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾ ಹೋಗುತ್ತದೆ. ಇದರಿಂದ ಇಮ್ಯೂನ್ಯೂ ಸಿಸ್ಟಮ್(Immune System) ಶಕ್ತಿಯುತವಾಗುತ್ತದೆ ಹಾಗೂ ಅಲರ್ಜಿ, ಸೋಂಕಿನಿಂದ ರಕ್ಷಿಸುತ್ತದೆ.

    ಸಂಶೋಧನೆ ಪ್ರಕಾರ ಹಸಿಮೆಣಸಿನಕಾಯಿ ಸೇವನೆಯಿಂದ ರಕ್ತದಲ್ಲಿ ಇರುವ ಶುಗರ್ ನಾರ್ಮಲ್ ಆಗುತ್ತದೆ. ಡಯಾಬಿಟಿಸ್(Diabetes) ರೋಗ ಇರುವವರು ಹಸಿ ಮೆಣಸಿನಕಾಯಿಯನ್ನು ಮಿತಿಯಲ್ಲಿ ಸೇವಿಸಬೇಕು. ಮೆಣಸಿನಕಾಯಿ ಸೇವನೆಯಿಂದ ವಿಟಮಿನ್-ಎ ಲೆವೆಲ್ ಹೆಚ್ಚಾಗುತ್ತದೆ. ಇದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.

  • ಬೇಸಿಗೆ ಕಾಲದಲ್ಲಿ ಗರ್ಭಿಣಿಯರ ಆರೋಗ್ಯ ಹೀಗಿರಲಿ

    ಬೇಸಿಗೆ ಕಾಲದಲ್ಲಿ ಗರ್ಭಿಣಿಯರ ಆರೋಗ್ಯ ಹೀಗಿರಲಿ

    ಬೇಸಿಗೆ ಬಂತೆಂದರೆ ಭವಿಷ್ಯದ ಅಮ್ಮಂದಿರಿಗೆ ಇನ್ನಿಲ್ಲದ ಬೇಸರ. ಗರ್ಭದಲ್ಲಿ ಪುಟ್ಟ ಕಂದಮ್ಮನನ್ನು ಹೊತ್ತುಕೊಂಡು ಬಿರುಬೇಸಿಗೆಯ ತಾಪ ತಾಳಲಾರದೆ ಒದ್ದಾಡುತ್ತಿರುತ್ತಾರೆ. ಯಾವಾಗ ಬೇಸಿಗೆ ಮುಗಿಯುತ್ತಪ್ಪ ಎಂದು ಕಾಯುತ್ತಿರುತ್ತಾರೆ. ತಾಯ್ತನವನ್ನು ಅನುಭವಿಸಲು ಕಾಯುತ್ತಿರುವ ಗರ್ಭಿಣಿಯರು ಆದಷ್ಟು ಬೇಗ ಈ ಸಮ್ಮರ್ ಮುಗಿಲಪ್ಪ ಎಂದು ಬೇಡಿಕೊಳ್ಳುತ್ತಿರುತ್ತಾರೆ.

    ಗರ್ಭಿಣಿಯರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಯಾಕಂದ್ರೆ ತಾಯಿ ಆರೋಗ್ಯವಾಗಿದ್ದರೆ ಮಾತ್ರ ಮಗುವೂ ಆರೋಗ್ಯವಾಗಿರುತ್ತದೆ. ಮಹಿಳೆಯ ಗರ್ಭಾವಸ್ಥೆಯ ದಿನಗಳು ಎಂದಿನಂತೆ ಇರುವುದಿಲ್ಲ. ಊಟ, ವಸತಿ, ಬಟ್ಟೆ, ಪಾನಿಯ, ಹೀಗೆ ಹತ್ತು ಹಲವು ರೀತಿಯಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಹೀಗಾಗಿ ಗರ್ಭಿಣಿಯರಿಗಾಗಿ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

    * ಪ್ರತಿ ದಿನ 10 ರಿಂದ 12 ಗ್ಲಾಸ್ ನೀರು ಕುಡಿಯುವುದು. ಇದರಿಂದ ನಿರ್ಜಲೀಕರಣ ಸಮಸ್ಯೆ ಎದುರಾಗಲ್ಲ.
    * ದಿನಕ್ಕೆ ಅರ್ಧ ಲೀಟರ್ ನಷ್ಟಾದರೂ ಹಾಲು ಕುಡಿಯಬೇಕು.
    * ಸಡಿಲವಾದ ಕಾಟನ್ ಬಟ್ಟೆ ಮತ್ತು ಹತ್ತಿ ಬಟ್ಟೆ ಧರಿಸುವುದು ಉತ್ತಮ.
    * ಮಾರುಕಟ್ಟೆಯಲ್ಲಿ ಗರ್ಭಿಣಿಯರಿಗಾಗಿಯೇ ಮ್ಯಾಕ್ಸಿ, ಗೌನ್, ಸಡಿಲವಾದ ಹತ್ತಿ ಬಟ್ಟೆ, ತಿಳಿ ಬಣ್ಣದ ಬಟ್ಟೆಗಳು ಸಿಗುತ್ತಿದ್ದು, ಅವುಗಳನ್ನು ಧರಿಸುವುದು ಉತ್ತಮ.
    * ಕೇವಲ ಹತ್ತಿ ಬಟ್ಟೆ ದೇಹದ ಉಷ್ಣವನ್ನು ಮತ್ತು ಬೆವರನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ.
    * ಬಿಸಿಲಿನಲ್ಲಿ ಹೆಚ್ಚು ಸುತ್ತಾಟ ಬೇಡ. ಹೋಗಲೇಬೇಕಿದ್ದರೆ ಸನ್‍ಗ್ಲಾಸ್, ಛತ್ರಿ, ಸನ್ ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದು.
    * ಬೆಳಗ್ಗೆ 10 ರಿಂದ ಸಂಜೆ 4.30ರ ವರೆಗೆ ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.


    * ಆದಷ್ಟು ಕಾಫಿ, ಟೀ ಕಡಿಮೆ ಮಾಡಿ.
    * ಉದ್ದವಾದ ಕೂದಲಿದ್ದರೆ, ಅಂತಹವರು ಕೂದಲನ್ನು ಸೇರಿಸಿ ಗಂಟು ಹಾಕಿ, ಬನ್ ಹಾಕಿ. ಇದರಿಂದ ಬೆವರುವುದನ್ನು ಕಡಿಮೆ ಮಾಡಬಹುದು.
    * ಬೇಸಿಗೆ ಕಾಲದಲ್ಲಿ ಹೆಚ್ಚು ಮಸಾಲೆ ಪದಾರ್ಥಗಳ ಸೇವನೆ ಬೇಡ.
    * ಒಂದೇ ಬಾರಿ ತಿನ್ನುವುದಕ್ಕಿಂತ ಆಗಾಗ ತಿನ್ನುವುದು ಒಳ್ಳೆಯದು.
    * ಹೆಚ್ಚೆಚ್ಚು ಸೌತೆಕಾಯಿ ಸೇವಿಸಿ, ಎಳನೀರು ಕುಡಿಯುವುದು, ಮಜ್ಜಿಗೆ, ಲಸ್ಸಿ ಕುಡಿಯಿರಿ
    * ಕಿತ್ತಳೆ ಹಣ್ಣಿನ ರಸ, ನಿಂಬೆಹಣ್ಣಿನ ರಸ ಸೇವಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

  • ಬೆಳಗ್ಗಿನ ಉಪಹಾರ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಓದಿ

    ಬೆಳಗ್ಗಿನ ಉಪಹಾರ ಆರೋಗ್ಯಕ್ಕೆ ಎಷ್ಟು ಮುಖ್ಯ ಎಂಬುದನ್ನು ಓದಿ

    ಗಿನ ಕಾಲದಲ್ಲಿ ಜನರು ಕೆಲಸದ ಒತ್ತಡದಲ್ಲಿ ಬೆಳಗ್ಗಿನ ಉಪಹಾರ ಸೇವಿಸಲು ಹಿಂದೇಟು ಹಾಕುತ್ತಾರೆ. ಆದರೆ ಬೆಳಗ್ಗೆ ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಬಳಹ ಮುಖ್ಯವಾಗುತ್ತದೆ. ಯಾಕೆಂದರೆ ಬೆಳಗ್ಗೆ ತಿಂಡಿ ಮಾಡಿಲ್ಲ ಅಂದರೆ ಮೆಟೋಬಾಲಿಸಂ(ಚಯಾಪಚಯ ಕ್ರಿಯೆ) ಕಡಿಮೆ ಆಗುತ್ತದೆ ಹಾಗೂ ದೇಹದ ತೂಕ ಹೆಚ್ಚಾಗುತ್ತದೆ. ಬೆಳಗ್ಗೆ ತಿಂಡಿ ಸೇವಿಸಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ ಅಲ್ಲದೆ, ರೋಗಗಳು ಕೂಡ ಬರುವುದಿಲ್ಲ. ಹಾಗಾಗಿ ಬೆಳಗ್ಗಿನ ಉಪಹಾರವನ್ನು ಸೇವಿಸಿದ್ರೆ ಒಳ್ಳೆಯದು.

    ಬೆಳಗ್ಗಿನ ಉಪಹಾರ ಸೇವಿಸಿದರೆ ನೆನಪಿನ ಶಕ್ತಿ ಸುಧಾರಿಸುತ್ತದೆ. ಮೆದುಳಿಗೆ ಮುಖ್ಯವಾಗಿ ಕಾರ್ಬೋಹೈಡ್ರೆಟ್ ಬೇಕಾಗುತ್ತದೆ. ಈ ಕಾರ್ಬೋಹೈಡ್ರೆಟ್ ಬೆಳಗ್ಗಿನ ಉಪಹಾರ ಸೇವಿಸುವುದರಿಂದ ಸಿಗುತ್ತದೆ. ಹಾಗಾಗಿ ಬೆಳಗ್ಗಿನ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಜನರು ಹೇಳುತ್ತಾರೆ. ಬೆಳಗ್ಗಿನ ತಿಂಡಿ ಸೇವಿಸುವುದರಿಂದ ಟೆನ್ಷನ್ ದೂರವಾಗುತ್ತದೆ ಹಾಗೂ ಮನುಷ್ಯನ ಮೂಡ್ ನಲ್ಲೂ ಸುಧಾರಣೆ ಕಾಣುತ್ತದೆ.

    ಇದರಿಂದ ಡಯಾಬಿಟಿಸ್(ಮಧುಮೇಹ)ದ ಭಯ ಇರುವುದಿಲ್ಲ. ನೀವು ಆರೋಗ್ಯಕರ ಉಪಹಾರ ಸೇವನೆ ಮಾಡುವುದರಿಂದ ಡಯಾಬಿಟಿಸ್ ಬರುವುದಿಲ್ಲ. ದಿನಾ ಬೆಳಗ್ಗೆ ಉಪಹಾರ ಸೇವಿಸಿಲ್ಲ ಎಂದರೆ ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಅಧ್ಯಯನದ ಪ್ರಕಾರ ಬೆಳಗ್ಗಿನ ಟಿಫಿನ್ ಸೇವಿಸಿದರೆ ದೇಹದ ತೂಕ ಹೆಚ್ಚಾಗುವುದಿಲ್ಲ ಎಂಬುದು ತಿಳಿದುಬಂದಿದೆ.

  • ಗೌಡ್ರ ಕುಟುಂಬದಲ್ಲೀಗ ಎಲೆಕ್ಷನ್ ಫಿಟ್‍ನೆಸ್ ಮಂತ್ರ – ಡಯೆಟ್‍ಗೆ ರೇವಣ್ಣ ನೋ ನೋ

    ಗೌಡ್ರ ಕುಟುಂಬದಲ್ಲೀಗ ಎಲೆಕ್ಷನ್ ಫಿಟ್‍ನೆಸ್ ಮಂತ್ರ – ಡಯೆಟ್‍ಗೆ ರೇವಣ್ಣ ನೋ ನೋ

    ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದಿಂದ ಮೂರು ಜನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅವರ ಮನೆಯಲ್ಲಿ ಫುಲ್ ಟೈಂ ಪಾಲಿಟಿಕ್ಸ್ ಟೆನ್ಶನ್ ಇರುತ್ತದೆ. ಆದರೂ ಇದರ ಮಧ್ಯೆ ಗೌಡರ ಕುಟುಂಬ ಚುನಾವಣೆ ಸಮಯದಲ್ಲಿ ಫುಲ್ ಹೆಲ್ತ್ ಫಿಟ್‍ನೆಸ್ ಮಂತ್ರ ಪಠಿಸುತ್ತಿದೆ.

    ಹೌದು. ತುಮಕೂರು, ಹಾಸನ, ಮಂಡ್ಯ ಎಂದು ಫುಲ್ ಎಲೆಕ್ಷನ್ ಪ್ರಚಾರಕ್ಕೆ ಓಡಾಡುತ್ತಿರುವ ಗೌಡರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ಸಿಎಂ ಕುಮಾರಸ್ವಾಮಿ ಅವರು ಕೂಡ ಆರೋಗ್ಯದ ಮಂತ್ರ ಜಪಿಸುತ್ತಲೇ ಮಗನಿಗಾಗಿ ಪ್ರಚಾರದ ಹುರುಪಿನಲ್ಲಿದ್ದಾರೆ.

    ದೇವೇಗೌಡರು ಮುದ್ದೆ ಬಸ್ಸಾರು ಬಿಟ್ರೆ ಮಾಂಸಹಾರ ಸೇವನೆ ಮಾಡುತ್ತಿಲ್ಲ. ಮಧ್ಯಾಹ್ನ, ಬೆಳಗ್ಗೆ ಹಸಿಕಾಳು ಇದ್ದೇ ಇರುತ್ತದೆ. ದೇವೇಗೌಡರು ಅಪ್ಪಿತಪ್ಪಿಯೂ ಜಿಡ್ಡು ಪದಾರ್ಥ ಮತ್ತು ಸ್ವೀಟ್ ಮುಟ್ಟವಂತಿಲ್ಲ. ನಿತ್ಯ ಬಿಸಿನೀರು ಸೇವನೆ ಮಾಡುತ್ತಾರೆ. ಸಮಯ ಸಿಕ್ಕಾಗ ಪ್ರಾಣಯಾಮ ಮಾಡುತ್ತಾರೆ. ಜೊತೆಗೆ ವೈದ್ಯರು ಕೊಟ್ಟ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಕೂಡ ವಾಕಿಂಗ್, ಮುದ್ದೆಯೂಟ ಮಾಡುತ್ತಾರೆ. ಪ್ರತೀ ದಿನ ಹೆಲ್ತ್ ಚೆಕಪ್ ಇರುತ್ತದೆ. ಮನೆಯಲ್ಲಿ ಇಬ್ಬರು ರಕ್ತದೊತ್ತಡ, ಬಿಪಿ ಶುಗರ್ ಲೆವೆಲ್ ನಿತ್ಯ ಚೆಕ್ ಮಾಡುತ್ತಿದ್ದಾರೆ. ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆ ಪಡೆದುಕೊಳ್ಳುತ್ತಾರೆ ಎಂದು ಡಾ. ಮಂಜುನಾಥ್ ತಿಳಿಸಿದ್ದಾರೆ.

    ರೇವಣ್ಣ ಮಾತ್ರ ಚುನಾವಣೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುವ ಅವರು ಅಲ್ಲಿ ಕೊಡುವ ಪ್ರಸಾದ ತಿಂದು ತಿಂದು ಶುಗರ್ ಲೆವಲ್ ಹೆಚ್ಚು ಮಾಡಿಕೊಳ್ಳುತ್ತಾರೆ. ವೈದ್ಯರ ಡಯೆಟ್ ಟಿಪ್ಸ್ ಪಾಲಿಸೋದು ಸ್ವಲ್ಪ ಕಡಿಮೆ. ಇದಕ್ಕಾಗಿ ಚುನಾವಣಾ ಟೈಂನಲ್ಲಿ ಪ್ರಸಾದ ತಿನ್ನೋದು ಸ್ವಲ್ಪ ಕಡಿಮೆ ಮಾಡಿ ಎಂದು ವೈದ್ಯರು ಸಲಹೆ ಕೊಟ್ಟಿದ್ದಾರೆ.

  • ಮಾತೆ ಮಹಾದೇವಿ ಗಂಭೀರ – ಐಸಿಯುನಲ್ಲಿ ಚಿಕಿತ್ಸೆ

    ಮಾತೆ ಮಹಾದೇವಿ ಗಂಭೀರ – ಐಸಿಯುನಲ್ಲಿ ಚಿಕಿತ್ಸೆ

    ಬೆಂಗಳೂರು: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ, ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

    ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು ಬಳಲುತ್ತಿದ್ದರು. ಹೀಗಾಗಿ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಮಾರ್ಚ್ 10ರಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv