Tag: health

  • ಬೆನ್ನುನೋವೆ? – ನಿತ್ಯ ಈ 5 ಯೋಗಾಸನ ಮಾಡಿ ಪರಿಹಾರ ಕಂಡುಕೊಳ್ಳಿ..

    ಬೆನ್ನುನೋವೆ? – ನಿತ್ಯ ಈ 5 ಯೋಗಾಸನ ಮಾಡಿ ಪರಿಹಾರ ಕಂಡುಕೊಳ್ಳಿ..

    ಧುನಿಕ ಜೀವನಶೈಲಿಯಲ್ಲಿ ಬಹುತೇಕ ಮಂದಿಗೆ ಬೆನ್ನುನೋವು (Back Pain) ಕಾಣಿಸಿಕೊಳ್ಳುವುದು ಸಹಜ. ಹೆಚ್ಚಿನ ಸಮಯ ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವುದು, ದೈಹಿಕ ವ್ಯಾಯಾಮ ಇಲ್ಲದಿರುವುದು, ಸರಿಯಾದ ಭಂಗಿಯಲ್ಲಿ ಕೂರದೇ ಇರುವುದು ಬೆನ್ನುನೋವಿಗೆ ಕಾರಣವಾಗುತ್ತದೆ. ಈ ರೀತಿಯ ಹವ್ಯಾಸಗಳಿಂದ ಬೆನ್ನುಮೂಳೆ ಸಂಕುಚಿತಗೊಳ್ಳುತ್ತದೆ. ಬೆನ್ನಿನ ಮೇಲೆ ಒತ್ತಡ ಹೆಚ್ಚಾಗಿ, ಬೆನ್ನಿನ ಸ್ನಾಯುಗಳು ದುರ್ಬಲವಾಗುತ್ತವೆ. ಐಟಿ ಕಂಪನಿಗಳ ಉದ್ಯೋಗಿಗಳಲ್ಲಿ ಬೆನ್ನುನೋವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಏಕೆಂದರೆ, ಅವರು ಹೆಚ್ಚಿನ ಸಮಯ ಕಂಪ್ಯೂಟರ್‌ ಮುಂದೆಯೇ ಕಳೆಯುತ್ತಾರೆ.

    ಬೆನ್ನುನೋವು ಉಪಶಮನಕ್ಕೆ ಹಲವಾರು ಪರಿಹಾರಗಳಿವೆ. ನೈಸರ್ಗಿಕವಾಗಿ ಪರಿಹಾರ ಬೇಕೆನ್ನುವವರು ಕೆಲವು ಯೋಗಾಸನಗಳನ್ನು ಮಾಡುವುದು ಒಳಿತು. ಇಲ್ಲಿ ತಿಳಿಸುವ ಐದು ಯೋಗಾಸನಗಳನ್ನು (Yogasana) ಪ್ರತಿ ನಿತ್ಯ ಅಭ್ಯಾಸ ಮಾಡಿದರೆ, ಬೆನ್ನುನೋವಿಗೆ ಪರಿಹಾರ ಸಿಗಲಿದೆ. ಇದನ್ನೂ ಓದಿ: ದೋಹಾ ಡೈಮಂಡ್ ಲೀಗ್‌ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ

    1. ಸುಪ್ತ ಪಾದಂಗುಷ್ಠಾಸನ
    ಒಂದು ಕಾಲನ್ನು ಚಾಚಿ ಇನ್ನೊಂದು ಕಾಲನ್ನು ಆಧಾರವಾಗಿಟ್ಟುಕೊಂಡಾಗ, ನರಮಂಡಲವು ಶಾಂತವಾಗುತ್ತದೆ. ಬೆನ್ನುಮೂಳೆಯು ಸ್ವಲ್ಪಮಟ್ಟಿಗೆ ಕುಗ್ಗುತ್ತದೆ. ಸ್ಯಾಕ್ರಮ್ ನಿಧಾನವಾಗಿ ಮತ್ತೆ ಜೋಡಿಸಲ್ಪಡುತ್ತದೆ. ಎತ್ತಿದ ಕಾಲಿಗೆ ಆಧಾರವಾಗಿ ಯೋಗ ಪಟ್ಟಿಯನ್ನು ಬಳಸುವುದರಿಂದ ಬೆನ್ನಿನ ಮೇಲಿನ ಯಾವುದೇ ಒತ್ತಡ ಇದ್ದರೂ ಕಡಿಮೆಯಾಗುತ್ತದೆ.

    2.ವಿಪರೀತ ಕರಣಿ
    ಈ ಭಂಗಿಯು ಸೊಂಟದ ಪ್ರದೇಶದಲ್ಲಿ ಸೂಕ್ಷ್ಮವಾದ ಎಳೆತವನ್ನು ಸೃಷ್ಟಿಸುತ್ತದೆ. ಊದಿಕೊಂಡ ಅಂಗಾಂಶಗಳಿಂದ ರಕ್ತ ಚಲನೆಯಾಗುತ್ತದೆ. ಉರಿಯೂತ ಕಡಿಮೆಯಾಗುತ್ತದೆ. ಜೊತೆಗೆ ಸೊಂಟವು ಮೃದುವಾಗುತ್ತದೆ. ಸೊಂಟದ ಕೆಳಗೆ ಮಡಿಸಿದ ಕಂಬಳಿ ಚಿಕಿತ್ಸಕ ಲಿಫ್ಟ್ ಅನ್ನು ನೀಡಬಹುದು. ಇದನ್ನೂ ಓದಿ: 40,000 ಫ್ಯಾನ್ಸ್‌ಗಳಿಂದ ವೈಟ್ ಜೆರ್ಸಿಯಲ್ಲಿ `ಕಿಂಗ್ ಕೊಹ್ಲಿ’ಗೆ ಗೌರವ

    3.ಸಾಲಂಬ ಭುಜಂಗಾಸನ
    ದಿಂಬನ್ನು ಬಳಸಿ ಈ ಆಸನ ಮಾಡುವುದರಿಂದ ದೇಹವು ಬೆಂಬಲಿತ ಲಿಫ್ಟ್ ಅನ್ನು ಅನುಭವಿಸಲು ಅನುವು ಮಾಡಿಕೊಡುತ್ತದೆ. ಇದು ಎದೆಗೂಡಿನ ಬೆನ್ನುಮೂಳೆಯನ್ನು ಜಾಗೃತಗೊಳಿಸುತ್ತದೆ. ಆಗಾಗ್ಗೆ ಬಾಗುವಿಕೆಯಿಂದ ಗಟ್ಟಿಯಾಗುತ್ತದೆ. ನೋವನ್ನು ಉಂಟುಮಾಡದೇ ಕೆಳ ಬೆನ್ನನ್ನು ಬಲಪಡಿಸುತ್ತದೆ.

    4.ಅರ್ಧ ಜಠರ ಪರಿವರ್ತನಾಸನ
    ಈ ಭಂಗಿಯಲ್ಲಿ, ಎದೆಯು ಮೇಲ್ಮುಖವಾಗಿ ಇರುವಾಗ ಮೊಣಕಾಲುಗಳು ಒಂದು ಬದಿಗೆ ಬೀಳುತ್ತವೆ. ಚಲನೆ ಕಡಿಮೆ, ಆದರೆ ಪರಿಣಾಮವು ಅಗಾಧವಾಗಿರುತ್ತದೆ. ಬೆನ್ನುಮೂಳೆಯ ಸ್ನಾಯುಗಳು ಮೃದುವಾಗುವಂತೆ ಮಾಡುತ್ತದೆ. ತಂತುಕೋಶವು ಒತ್ತಡವನ್ನು ಬಿಡುಗಡೆ ಮಾಡುತ್ತದೆ. ಇದನ್ನೂ ಓದಿ: ‘ಸಿತಾರೆ ಜಮೀನ್ ಪರ್’ ಗೆ ಬಾಯ್ಕಾಟ್‌ ಭಯ – ತ್ರಿವರ್ಣ ಧ್ವಜ ಡಿಪಿ ಹಾಕಿದ ಆಮೀರ್ ಖಾನ್!

    5.ಆನಂದ ಬಾಲಾಸನ
    ಈ ಭಂಗಿಯಲ್ಲಿ ನಿಧಾನವಾಗಿ ಆಕಡೆ ಈಕಡೆ ತೂಗಾಡುವಾಗ ಬೆನ್ನು ನೆಲಕ್ಕೆ ಮಸಾಜ್ ಮಾಡಿಕೊಳ್ಳುತ್ತದೆ. ಸ್ಯಾಕ್ರೊಲಿಯಾಕ್ ಕೀಲುಗಳನ್ನು ನಿರ್ಲಕ್ಷಿಸಿ, ಅವುಗಳಿಗೆ ಬೇಕಾದ ಸ್ಥಳಾವಕಾಶ ಸಿಗುತ್ತದೆ. ಮಲಗುವಾಗ ಮಕ್ಕಳು ಸಹಜವಾಗಿ ಹಿಗ್ಗುತ್ತವೆ. ಅದೇ ರೀತಿಯ ಅನುಭವವನ್ನು ಈ ಆಸನ ನೀಡುತ್ತದೆ.

  • ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ ಬೋಸ್‌ಗೆ ಎದೆ ನೋವು – ಆಸ್ಪತ್ರೆಗೆ ದಾಖಲು

    ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ ಬೋಸ್‌ಗೆ ಎದೆ ನೋವು – ಆಸ್ಪತ್ರೆಗೆ ದಾಖಲು

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜ್ಯಪಾಲ ಸಿ.ವಿ. ಆನಂದ ಬೋಸ್‌ (CV Ananda Bose) ಅವರಿಗೆ ಸೋಮವಾರ ಬೆಳಗ್ಗೆ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಸ್‌ ಅವರ ಆರೋಗ್ಯ ಸ್ಥಿರವಾಗಿದೆ ಎಂದು ರಾಜಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೋಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಅವರ ಮೇಲೆ ನಿಗಾ ಇಟ್ಟಿದ್ದಾರೆ. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿದೆ. ಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ | ಹಾರಿ ಬಿದ್ದು ಪ್ರಾಣಬಿಟ್ಟ ಮಹಿಳೆ – ವಿಡಿಯೋ ವೈರಲ್‌

    ಶನಿವಾರ ರಾತ್ರಿ ಮುರ್ಷಿದಾಬಾದ್‌ನ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಿಂದಿರುಗಿದ ನಂತರ ರಾಜ್ಯಪಾಲರಲ್ಲಿ ಎದೆ ನೋವು ಕಾಣಿಸಿಕೊಂಡಿತ್ತು. ಅವರಿಗೆ ಬಿಡುವಿಲ್ಲದೆ ಇರುವುದು ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿಕೊಂಡಿದ್ದಾರೆ.

    ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು (Mamata Banerjee) ಆಸ್ಪತ್ರೆಗೆ ಭೇಟಿ ನೀಡಿ ರಾಜ್ಯಪಾಲರ ಆರೋಗ್ಯವನ್ನು ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ರಾಜ್ಯಪಾಲರ ಆರೋಗ್ಯ ವಿಚಾರಿಸಿದ್ದೇನೆ. ಅವರ ಚಿಕಿತ್ಸೆಯ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನನ್ನ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಎಸ್‌ವೈ ವಿರುದ್ಧದ ಭ್ರಷ್ಟಾಚಾರ ಪ್ರಕರಣ – ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ಸುಪ್ರೀಂ

  • ಉತ್ತರ ಕನ್ನಡ ಜಿಲ್ಲೆಯ ನಾಲ್ವರಿಗೆ ಕೆಎಫ್‍ಡಿ ಸೋಂಕು – ಕಾಡಿಗೆ ತೆರಳದಂತೆ ಆರೋಗ್ಯ ಇಲಾಖೆ ಎಚ್ಚರಿಕೆ

    ಉತ್ತರ ಕನ್ನಡ ಜಿಲ್ಲೆಯ ನಾಲ್ವರಿಗೆ ಕೆಎಫ್‍ಡಿ ಸೋಂಕು – ಕಾಡಿಗೆ ತೆರಳದಂತೆ ಆರೋಗ್ಯ ಇಲಾಖೆ ಎಚ್ಚರಿಕೆ

    ಕಾರವಾರ: ಉತ್ತರ ಕನ್ನಡ (Uttara Kannada)  ಜಿಲ್ಲೆಯ ನಾಲ್ಕು ಜನರಲ್ಲಿ ಮಂಗನ ಕಾಯಿಲೆ (KFD) ಪತ್ತೆಯಾಗಿದೆ.

    ಶಿರಸಿ (Sirsi) ತಾಲೂಕಿನ ಹೆಗಡೆಕಟ್ಟದ ರೇವಣಕಟ್ಟದ, ಸಿದ್ದಾಪುರ ತಾಲೂಕಿನ ಕಾನಸೂರಿನಲ್ಲಿ ತಲಾ ಒಬ್ಬರಿಗೆ ಹಾಗೂ ಹೊನ್ನಾವರದ ಜನಕಡಕಲ್‍ನ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

    ಸಿದ್ದಾಪುರದ ಕಾನಸೂರಿನಲ್ಲಿ 14 ವರ್ಷದ ಬಾಲಕನಲ್ಲಿ ಸೋಂಕು ಪತ್ತೆಯಾಗಿದ್ದು, ಶಿರಸಿಯ ರೇವಣಕಟ್ಟಾದಲ್ಲಿ 58 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೂ ಹೊನ್ನಾವರದ ಇಬ್ಬರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್ ಮಹಾನಿರ್ದೇಶಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ

    ಬಿಸಿಲಿನ ಪ್ರಮಾಣ ಹೆಚ್ಚಾದ ಕಾರಣ ಸೋಂಕಿನ ಪ್ರಮಾಣದಲ್ಲೂ ಹೆಚ್ಚಳವಾಗುತ್ತಿದೆ. ಕೆಎಫ್‍ಡಿ ತಡೆಗೆ ರೈತರು ಕಾಡಿಗೆ ತೆರಳದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: Raichur | ಗ್ರಾನೈಟ್ ಕ್ವಾರಿಯಲ್ಲಿ ಸಿಡಿಮದ್ದು ಸ್ಫೋಟ – ಓರ್ವ ಸಾವು, ಇನ್ನೋರ್ವ ಗಂಭೀರ

  • ಬೇಸಿಗೆಯಲ್ಲಿ ಕುಡಿಯುವ ಎನರ್ಜಿ ಡ್ರಿಂಕ್ಸ್ ದೇಹಕ್ಕೆ ಎಷ್ಟು ಒಳ್ಳೆಯದು?

    ಬೇಸಿಗೆಯಲ್ಲಿ ಕುಡಿಯುವ ಎನರ್ಜಿ ಡ್ರಿಂಕ್ಸ್ ದೇಹಕ್ಕೆ ಎಷ್ಟು ಒಳ್ಳೆಯದು?

    ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ ಸಾಕು ತಂಪಾದ ದ್ರವ ಪದಾರ್ಥಗಳನ್ನು ಸೇವಿಸಲು ಇಷ್ಟಪಡುತ್ತೇವೆ. ಅವುಗಳಲ್ಲಿ ಜ್ಯೂಸ್, ಮನೆಯಲ್ಲಿ ತಯಾರಿಸುವ ಪಾನೀಯಗಳು ಹಾಗೂ ಎನರ್ಜಿ ಡ್ರಿಂಕ್ ದೇಹಕ್ಕೆ ತಂಪನ್ನು ನೀಡುತ್ತವೆ.

    ಎನರ್ಜಿ ಡ್ರಿಂಕ್ ಗಳು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ತಂಪನ್ನು ಕೂಡ ನೀಡುತ್ತದೆ. ಹೆಚ್ಚಾಗಿ ಎನರ್ಜಿ ಡ್ರಿಂಕ್ ಹೆಚ್ಚಾಗಿ ವ್ಯಾಯಾಮ ಅಥವಾ ಯೋಗ ಮಾಡುವವರು ದೇಹಕ್ಕೆ ಶಕ್ತಿ ನೀಡಬೇಕು ಯನ್ನುವ ಉದ್ದೇಶದಿಂದ ಸೇವಿಸುತ್ತಾರೆ.

    ಈ ಎನರ್ಜಿ ಡ್ರಿಂಕ್ ಗಳು ಕೆಫಿನ್, ಸಕ್ಕರೆ, ವಿಟಮಿನ್ ಬಿ ಸೇರಿದಂತೆ ಇನ್ನಿತರ ಕೆಲವು ಅಂಶಗಳನ್ನು ಒಳಗೊಂಡಿರುತ್ತದೆ. ಈ ಅಂಶಗಳಿಂದ ದೇಹಕ್ಕೆ ಕಡಿಮೆ ಸಮಯದಲ್ಲಿ ಶಕ್ತಿ ನೀಡುತ್ತದೆ ಆದರೆ ಇದು ದೇಹಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆಗಳು ಇರುತ್ತವೆ.

    ಇತ್ತೀಚಿಗೆ ಅಮೆರಿಕಾದಲ್ಲಿ 28 ವರ್ಷದ ಯುವತಿ ಎನರ್ಜಿ ಡ್ರಿಂಕ್ ಸೇವಿಸಿ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದರು. ಆದರೆ ಈ ಕುರಿತು ವೈದ್ಯರ ಮಾಹಿತಿಯ ಪ್ರಕಾರ ಕೆಲವೊಮ್ಮೆ ವ್ಯಾಯಾಮಕ್ಕೂ ಮುನ್ನ ಎನರ್ಜಿ ಡ್ರಿಂಕ್ ಸೇವಿಸುವುದು ಹೆಚ್ಚಿನ ಜನರಲ್ಲಿ ಅಪಾಯವನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

    ಸಾಮಾನ್ಯವಾಗಿ ಒಂದು ಎನರ್ಜಿ ಡ್ರಿಂಕ್ ನಲ್ಲಿ ಪ್ರತಿ ಕ್ಯಾನ್ ಗೆ 80 ಮಿಲಿ ಗ್ರಾಂ ನಿಂದ 500 ಮಿಲಿ ಗ್ರಾಂ ನಷ್ಟು ಇರುವ ಸಾಧ್ಯತೆಗಳಿರುತ್ತದೆ. ಅಂದರೆ ಅಂದಾಜು ನೂರು ಮಿಲಿ ಗ್ರಾಂ ಕೆಫಿನ್ ಹೊಂದಿರುವ ಕಾಫಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇನ್ನು ಎನರ್ಜಿ ಡ್ರಿಂಕ್ ಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಸಕ್ಕರೆ ಅಥವಾ ಕೃತಕ ಸಿಹಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ.

    ಅಮೇರಿಕನ್ ಹಾರ್ತ್ ಅಸೋಸಿಯೇಷನ್ ನಡೆಸಿದ ಅಧ್ಯಯನದ ಪ್ರಕಾರ, 900 ಮಿಲಿ ಎನರ್ಜಿ ಡ್ರಿಂಕ್ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಗಮನಾರ್ಹವಾಗಿ ಏರಿಕೆಯಾಗುತ್ತದೆ. ಇದರಿಂದ ಹೃದಯದ ಚಟುವಟಿಕೆಗಳಲ್ಲಿ ಏರಿಳಿತ ಉಂಟಾಗುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಕೆಫೀನ್ ಹಾಗೂ ಇನ್ನಿತರ ಅಂಶಗಳನ್ನು ಹೊಂದಿರುವ ಎನರ್ಜಿ ಡ್ರಿಂಕ್ ಸೇವಿಸಿದಾಗ ಹೃದಯ ಬಡಿತ ಹಾಗೂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಜೊತೆಗೆ ಶ್ವಾಸಕೋಶದ ಕಾಯಿಲೆ ಉಂಟಾಗುವ ಸಾಧ್ಯತೆ ಇರುತ್ತದೆ.

    ಸಕ್ಕರೆಯ ಅಧಿಕ ಸೇವನೆಯಿಂದ ತೂಕ ಹೆಚ್ಚಾಗುವುದು, ಮಧುಮೇಹ ಸಮಸ್ಯೆ, ಗಂಭೀರ ವೈದ್ಯಕೀಯ ಸ್ಥಿತಿಗಳಿಗೆ ಕಾರಣ, ಇನ್ನಿತರ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.

  • ನನಗೆ ಶುಗರ್ ಇದೆ, ಅನ್ನ ಬಿಟ್ಟು ಚಪಾತಿ ತಿಂತಾ ಇದೀನಿ: ಸಿದ್ದರಾಮಯ್ಯ

    ನನಗೆ ಶುಗರ್ ಇದೆ, ಅನ್ನ ಬಿಟ್ಟು ಚಪಾತಿ ತಿಂತಾ ಇದೀನಿ: ಸಿದ್ದರಾಮಯ್ಯ

    ಬೆಂಗಳೂರು: ನನಗೆ ಶುಗರ್‌ (Diabetes) ಇದೆ, ಅನ್ನ ಬಿಟ್ಟು, ಚಪಾತಿ ತಿಂತಾ ಇದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

    ವಿಧಾನಸೌಧದ ಆವರಣದಲ್ಲಿ ನಡೆದ ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅನ್ನಭಾಗ್ಯದ ಬಗ್ಗೆ ಅವರು ಮಾತನಾಡಿದರು. ಈ ವೇಳೆ, ಎಲ್ಲರೂ ಕೂಡ ಎರಡು ಹೊತ್ತು ಊಟ ಮಾಡಲೇಬೇಕು ಎಂದು ಅನ್ನಭಾಗ್ಯ ಯೋಜನೆ ತಂದಿದ್ದು. ಇಲ್ಲಿ ಎಷ್ಟು ಜನ ಇದ್ದಾರೋ ಗೊತ್ತಿಲ್ಲ ಅನ್ನ ಉಣ್ಣೋರು. ಜಾತ್ರೆ, ಹಬ್ಬ ಇದ್ದಾಗ ಮಾತ್ರ ನಾವು ಅನ್ನ ಉಣ್ಣೋರು. ನಮಗೆ ಅನ್ನನೇ ಸಿಕ್ತಾನೇ ಇರಲಿಲ್ಲ. ಎಲ್ಲರೂ ಕೂಡ ಅನ್ನ ಉಣ್ಣಲೇಬೇಕೆಂದು ಅನ್ನಭಾಗ್ಯ ಯೋಜನೆ ತಂದಿರೋದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಮಾಡಿಯೇ ಮಾಡ್ತೀವಿ, ಯಾರಿಗೂ ಅನ್ಯಾಯ ಮಾಡಲ್ಲ: ಸಿದ್ದರಾಮಯ್ಯ

    ಇದೇ ವೇಳೆ ಅವರ ಆರೋಗ್ಯದ ಬಗ್ಗೆ ಮಾತನಾಡಿ, ನನಗೆ ಈಗ ಶುಗರ್ ಕಾಯಿಲೆ ಬಂದಿದೆ. ನಾನು ಅನ್ನನೇ ತಿನ್ನೋದನ್ನು ಬಿಟ್ಟು ಬಿಟ್ಟಿದ್ದೇನೆ. ಚಪಾತಿ ತಿಂತಾ ಇದೀನಿ. ಸಿರಿ ಧಾನ್ಯಗಳನ್ನೂ ತಿನ್ನುವ ರೂಢಿ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ ಸೋಲಿನ ಕಹಿ ಬಗ್ಗೆ ಸಿಎಂ ಎದುರೇ ಸಚಿವ ಮುನಿಯಪ್ಪ ನೋವಿನ ಮಾತು

  • ಆಸ್ಪತ್ರೆಗೆ ಜಾಗ ಕೊಟ್ಟ ರೈತರಿಗೆ 60 ವರ್ಷದಿಂದ ಸಿಗದ ಪರಿಹಾರ – ಡಿಹೆಚ್‍ಓ ಕಾರು ಜಪ್ತಿ

    ಆಸ್ಪತ್ರೆಗೆ ಜಾಗ ಕೊಟ್ಟ ರೈತರಿಗೆ 60 ವರ್ಷದಿಂದ ಸಿಗದ ಪರಿಹಾರ – ಡಿಹೆಚ್‍ಓ ಕಾರು ಜಪ್ತಿ

    ಬೆಳಗಾವಿ: ಆಸ್ಪತ್ರೆಗಾಗಿ (Hospital) 60 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡ ರೈತರಿಗೆ (Farmers) ಇನ್ನೂ ಪರಿಹಾರ ನೀಡದ ಹಿನ್ನೆಲೆ ಬೆಳಗಾವಿ (Belagavi) ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

    ರೈತರಾದ ಫಕ್ಕೀರಪ್ಪ ತಳವಾರ, ಮಲ್ಲಿಕಾರ್ಜುನ ತಳವಾರ ಹಾಗೂ ಅಶೋಕತಾಯಿ ತಳವಾರ ಅವರು ಆಸ್ಪತ್ರೆಗಾಗಿ ಜಮೀನು ಕಳೆದುಕೊಂಡಿದ್ದರು. ಮೂರು ಜನ ರೈತರು, ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ಡಿಹೆಚ್‍ಓ (DHO) ಕಾರನ್ನು ಜಪ್ತಿ ಮಾಡುವಂತೆ ನ್ಯಾಯಾಲಯ (Court) ಆದೇಶಿಸಿದೆ.

    ವಕೀಲರ ಸಮೇತ ರೈತರು ಬಂದು ಕಾರನ್ನು ಜಪ್ತಿ ಮಾಡಿದ್ದಾರೆ. ಜಪ್ತಿಗೆ ಬರುತ್ತಿರುವ ವಿಚಾರ ತಿಳಿದು ಚಾಲಕ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ವೇಳೆ ಅಧಿಕಾರಿಗಳಿಗೆ ವಕೀಲರು ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಸಿಬ್ಬಂದಿ ಕಾರನ್ನು ತಂದುಕೊಟ್ಟಿದ್ದಾರೆ.

  • ರಷ್ಯಾದಲ್ಲಿ ಕೋವಿಡ್ ಮಾದರಿ ನಿಗೂಢ ವೈರಸ್!

    ರಷ್ಯಾದಲ್ಲಿ ಕೋವಿಡ್ ಮಾದರಿ ನಿಗೂಢ ವೈರಸ್!

    ಮಾಸ್ಕೋ: ರಷ್ಯಾದಲ್ಲಿ (Russia) ಕೋವಿಡ್ ಮಾದರಿಯ ನಿಗೂಢ ವೈರಸ್ (Virus) ವಿಜೃಂಭಿಸುತ್ತಿದೆ ಎಂಬ ಸುದ್ದಿ ಆತಂಕ ಮೂಡಿಸಿದೆ.

    ಅಲ್ಲಿನ ಪ್ರಜೆಗಳು ತೀವ್ರ ಸ್ವರೂಪದ ಶ್ವಾಸಕೋಶ ಸಂಬಂಧಿ ರೋಗಗಳು, ದೀರ್ಘಕಾಲಿಕ ಜ್ವರದಿಂದ ಬಳಲುತ್ತಿದ್ದಾರೆ. ವೈರಸ್ ಕಾರಣದಿಂದ ಅವರು ಕೆಮ್ಮುವಾಗ ರಕ್ತ ಕೂಡ ಬೀಳುತ್ತಿದೆ. ಹಲವು ನಗರಗಳಲ್ಲಿ ಈ ವೈರಸ್ ತೀವ್ರ ವೇಗದಲ್ಲಿ ಹಬ್ಬುತ್ತಿದೆ. ವೈದ್ಯರು ಕೋವಿಡ್ ಟೆಸ್ಟ್ ಮಾಡಿದಾಗ ನೆಗೆಟಿವ್ ಎಂದು ಬಂದಿದೆ. ಹೀಗಾಗಿ ಇದು ಹೊಸ ವೈರಸ್ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ನಿಮ್ಮ ವಕ್ಫ್‌ಗೆ ಒಬ್ಬ ಮುಸ್ಲಿಮೇತರರೂ ಬರುವುದಿಲ್ಲ – ಅಮಿತ್ ಶಾ

    ಆದರೆ ಈ ವರದಿಗಳನ್ನು ರಷ್ಯಾ ತಳ್ಳಿ ಹಾಕಿದೆ. ಮಿಸ್ಟರಿ ವೈರಸ್ ಕುರಿತ ವರದಿಗಳು ಆಧಾರರಹಿತ. ಅಂಥಾದ್ದೇನು ನಮ್ಮ ದೇಶದಲ್ಲಿ ಕಂಡುಬಂದಿಲ್ಲ ಎಂದು ರಷ್ಯಾ ತಿಳಿಸಿದೆ. ಇದನ್ನೂ ಓದಿ: ನ್ಯಾಯಾಧೀಶರ ಮನೆಯಲ್ಲಿಯೇ 7 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ

  • ಬ್ಲಡ್ ಶುಗರ್ ಲೆವೆಲ್ ಏರಿಕೆ – ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು

    ಬ್ಲಡ್ ಶುಗರ್ ಲೆವೆಲ್ ಏರಿಕೆ – ಲಾಲೂ ಪ್ರಸಾದ್ ಯಾದವ್ ಆಸ್ಪತ್ರೆಗೆ ದಾಖಲು

    – ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಆರ್‌ಜೆಡಿ ಮುಖ್ಯಸ್ಥ

    ಪಾಟ್ನಾ: ಆರೋಗ್ಯ ಹದಗೆಟ್ಟ ಕಾರಣ ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ (Lalu Prasad Yadav) ಅವರನ್ನು ಬಿಹಾರದ ಪರಾಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ದೆಹಲಿಗೆ ತೆರಳುವ ಸಲುವಾಗಿ ಸಂಜೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಲಾಲೂ ಪ್ರಸಾದ್ ಯಾದವ್ ಅವರ ಬ್ಲಡ್ ಶುಗರ್ ಲೆವೆಲ್ (Blood Sugar Level) ಏರಿಕೆಯಾಗಿ ಆರೋಗ್ಯ ಹದಗೆಟ್ಟಿದೆ. ಏರ್ ಅಂಬುಲೆನ್ಸ್ ಮೂಲಕ ಲಾಲೂ ಪ್ರಸಾದ್ ಅವರನ್ನು ದೆಹಲಿಯ ಏಮ್ಸ್‌ಗೆ ಕರೆದೊಯ್ಯುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಾರದೇ ಇದ್ದರೆ ಈ ಸಂಸತ್ತನ್ನೇ ಕಾಂಗ್ರೆಸ್‌ ವಕ್ಫ್‌ಗೆ ನೀಡ್ತಿತ್ತು: ಕಿರಣ್‌ ರಿಜಿಜು

    ಬಿಹಾರದ 13 ಕೋಟಿ ಜನರ ಆಶೀರ್ವಾದ ಲಾಲೂ ಪ್ರಸಾದ್ ಯಾದವ್ ಅವರೊಂದಿಗಿದೆ. ಚಿಂತಿಸುವ ಅಗತ್ಯವಿಲ್ಲ ಎಂದು ಆರ್‌ಜೆಡಿ ನಾಯಕ ಭಾಯಿ ವೀರೇಂದ್ರ ತಿಳಿಸಿದ್ದಾರೆ. ಇದನ್ನೂ ಓದಿ: 15 ವರ್ಷದ ವಿದ್ಯಾರ್ಥಿ ಮೇಲೆ ರೇಪ್‌ ಆರೋಪ – ಶಿಕ್ಷಕಿ ಬಂಧನ

    ಕಳೆದ ವರ್ಷ ಲಾಲೂ ಪ್ರಸಾದ್ ಅವರನ್ನು ಮುಂಬೈನ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಆಂಜಿಯೋಪ್ಲ್ಯಾಸ್ಟಿಗೆ ಒಳಪಡಿಸಲಾಯಿತು. ಅವರ ಆರೋಗ್ಯ ಹದಗೆಟ್ಟ ಬಳಿಕ ಜುಲೈ 2024ರಲ್ಲಿ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ಲಾಲೂ ಪ್ರಸಾದ್ ದಾಖಲಾಗಿದ್ದರು. ಡಿಸೆಂಬರ್ 2022ರಲ್ಲಿ ಸಿಂಗಾಪುರದಲ್ಲಿ ಲಾಲೂ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಕಿರಿಯ ಮಗಳು ರೋಹಿಣಿ ಆಚಾರ್ಯ ತಮ್ಮ ಮೂತ್ರಪಿಂಡವನ್ನು ತಂದೆಗೆ ದಾನ ಮಾಡಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಎಲ್ಲಾ ಅಧಿಕಾರ ಅನುಭವಿಸಿದ್ದೇನೆ, ಮಂತ್ರಿ ಮಾಡೋದು ಸಿಎಂಗೆ ಬಿಟ್ಟ ವಿಚಾರ: ಆರ್.ವಿ.ದೇಶಪಾಂಡೆ

  • 46 ವರ್ಷದ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ವಾಷರ್ – ಅಗ್ನಿಶಾಮಕ ಸಿಬ್ಬಂದಿ ನೆರವು ಕೋರಿದ ವೈದ್ಯರು

    46 ವರ್ಷದ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ವಾಷರ್ – ಅಗ್ನಿಶಾಮಕ ಸಿಬ್ಬಂದಿ ನೆರವು ಕೋರಿದ ವೈದ್ಯರು

    ತಿರುವನಂತಪುರಂ: ಅಗ್ನಿ ಅವಘಡ ಸೇರಿದಂತೆ ಇನ್ನಿತರ ಕಾರ್ಯಾಚರಣೆಗಳ ಮೂಲಕ ಜನರ ಜೀವ ಉಳಿಸುವ ಅಗ್ನಿಶಾಮಕ ದಳದ ಸಿಬ್ಬಂದಿ (Firefighters), ಕೇರಳದ (Kerala) ಕಾಸರಗೋಡಿನ (Kasaragod) ವ್ಯಕ್ತಿಯೊಬ್ಬನ ಶಸ್ತ್ರಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವಹಿಸಿ ಸೈ ಎನಿಸಿಕೊಂಡಿದ್ದಾರೆ.

    ಹೌದು ಕೇರಳದಲ್ಲಿ ವ್ಯಕ್ತಿಯ ಮರ್ಮಾಂಗದಲ್ಲಿ ಸಿಲುಕಿದ ವಾಷರ್‌ನ್ನು ತೆಗೆಯಲು ಉತ್ತರ ಕೇರಳ ಜಿಲ್ಲೆಯ ಕನ್ಹಂಗಾಡ್‌ನಲ್ಲಿರುವ ಜಿಲ್ಲಾ ಆಸ್ಪತ್ರೆ ವೈದ್ಯರು ಅಗ್ನಿಶಾಮಕ ದಳದ ಸಹಾಯ ಕೋರಿದ್ದರು. ಅದರಂತೆ ಅಗ್ನಿಶಾಮಕ ಸಿಬ್ಬಂದಿಯ ಚಾಣಕ್ಷತನದಿಂದ ವ್ಯಕ್ತಿಯೊಬ್ಬನ ಜೀವ ಉಳಿದಂತಾಗಿದೆ. ಇದನ್ನೂ ಓದಿ: ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ – ತುಮಕೂರು ಎಸ್ಪಿಗೆ ಸಚಿವ ರಾಜಣ್ಣ ಪುತ್ರ ದೂರು

    ಮೂರು ದಿನಗಳಿಂದ 46 ವರ್ಷದ ವ್ಯಕ್ತಿಯ ಜನನಾಂಗದ ಭಾಗದಲ್ಲಿ ಯಂತ್ರದ ವಾಷರ್‌ ಸಿಲುಕಿತ್ತು. ಇದರಿಂದ ವ್ಯಕ್ತಿಯ ಖಾಸಗಿ ಭಾಗದಲ್ಲಿ ತೀವ್ರ ಊತವಿತ್ತು. ಇದು ಮೂತ್ರ ವಿಸರ್ಜನೆಗೆ ತೊಡಕಾಗಿತ್ತು. ಈ ವಾಷರ್‌ ತೆಗೆಯಲು ವೈದ್ಯರು ಅಗ್ನಿಶಾಮಕ ಸಿಬ್ಬಂದಿಯ ಸಹಾಯ ಕೇಳಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆರಳುಗಳಲ್ಲಿ ಸಿಲುಕಿಕೊಂಡಿರುವ ಉಂಗುರಗಳನ್ನು ತೆಗೆಯಲು ಬಳಸುವ ಸಾಧನವಾದ ರಿಂಗ್ ಕಟ್ಟರ್ ಬಳಸಿ ವಾಷರ್‌ನ್ನು ಕತ್ತರಿಸಿ ತೆಗೆದಿದ್ದಾರೆ. ಇದು ಎರಡು ಗಂಟೆಗಳ ಕಾಲ ನಡೆದ ಪ್ರಕ್ರಿಯೆಯಾಗಿತ್ತು ಎಂದು ಕಾಞಂಗಾಡ್ ಠಾಣೆಯ ಅಗ್ನಿಶಾಮಕ ಮತ್ತು ರಕ್ಷಣಾ ಠಾಣಾಧಿಕಾರಿ ಪಿ ವಿ ಪವಿತ್ರನ್ ತಿಳಿಸಿದ್ದಾರೆ.

    ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಸಹಾಯವನ್ನು ಕೋರಿ ಮಾರ್ಚ್ 25 ರಂದು ರಾತ್ರಿ 10 ಗಂಟೆ ಸುಮಾರಿಗೆ ಜಿಲ್ಲಾ ಆಸ್ಪತ್ರೆಯ ವೈದ್ಯರಿಂದ ಕರೆ ಬಂದಿತ್ತು. ನಂತರ ಅಗ್ನಿಶಾಮಕ ಮತ್ತು ರಕ್ಷಣಾ ತಂಡದ ಐವರು ಸಿಬ್ಬಂದಿ ಆಸ್ಪತ್ರೆಗೆ ತೆರಳಿದ್ದರು. ಬಳಿಕ ವೈದ್ಯರು ಅನಸ್ತೇಷಿಯಾ ನೀಡಿದಾಗ ಕಬ್ಬಿಣದ ವಾಷರ್‌ನ್ನು ಕತ್ತರಿಸಲಾಯಿತು ಎಂದು ತಿಳಿಸಿದ್ದಾರೆ.

    ಕುಡಿದ ಮತ್ತಿನಲ್ಲಿದ್ದಾಗ ಯಾರೋ ವಾಷರ್‌ನ್ನು ಹಾಗೆ ಹಾಕಿದ್ದಾರೆ ಎಂದು ವ್ಯಕ್ತಿ ವೈದ್ಯರ ಬಳಿ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಪತ್ನಿ ತುಂಡರಿಸಿ ಸೂಟ್‍ಕೇಸ್‍ಗೆ ತುಂಬಿ, ಪುಣೆಯಲ್ಲಿ ವಿಷ ಸೇವಿಸಿದ್ದ ಹಂತಕ!

  • ಸನ್‍ಸ್ಕ್ರೀನ್‌ಗಳನ್ನು ಆಯ್ಕೆ ಮಾಡುವಾಗ ತಪ್ಪದೇ ಈ ಅಂಶಗಳನ್ನು ಗಮನಿಸಿ

    ಸನ್‍ಸ್ಕ್ರೀನ್‌ಗಳನ್ನು ಆಯ್ಕೆ ಮಾಡುವಾಗ ತಪ್ಪದೇ ಈ ಅಂಶಗಳನ್ನು ಗಮನಿಸಿ

    ಬೇಸಿಗೆ ಕಾಲ ಶುರುವಾಗಿದ್ದು, ಉರಿಬಿಸಿಲು ಮಾತ್ರ ಎಂದಿನಂತೆ ಈ ಬಾರಿಯೂ ಜೋರಾಗಿಯೇ ಇದೆ. ಅದರಲ್ಲೂ ಸೂರ್ಯನ ಕಿರಣಗಳು ನೇರವಾಗಿ ನಮ್ಮ ದೇಹದ ಮೇಲೆ ಬೀಳುವುದರಿಂದ ಚರ್ಮವು ಹಾನಿಯಾಗುತ್ತದೆ. ಸನ್ ಟ್ಯಾನ್, ಸನ್ ಬರ್ನ್ ನಂತಹ ಸಮಸ್ಯೆಗಳು ಎದುರಾಗುತ್ತದೆ. ಸುಡು ಬಿಸಿಲಿನಲ್ಲಿ ಮೈಯೊಡ್ಡಿಕೊಂಡು ಹೋದರೆ, ಮೈಯೆಲ್ಲಾ ಕಲೆಗಳು ಮೂಡುವುದು. ಅದರಲ್ಲೂ ಕೈ ಮತ್ತು ಮುಖದ ಮೇಲೆ ಇದು ಹೆಚ್ಚಾಗಿರುವುದು.

    ಬೇಸಿಗೆಯ ಕಾಲ ಬಂತೆಂದರೆ ಆರೋಗ್ಯ ಕಾಳಜಿ ಮಾತ್ರವಲ್ಲ, ತ್ವಚೆಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಕೆಲವೊಮ್ಮೆ ಎಷ್ಟೇ ಕಾಳಜಿ ಮಾಡಿದರೂ ಸುಡುವ ಬಿಸಿಲಿನಿಂದ ಚರ್ಮವು ಬೇಗನೇ ಟ್ಯಾನ್ ಆಗುತ್ತದೆ, ಚರ್ಮ ಸುಟ್ಟಂತೆ ಆಗಿ ಶುಷ್ಕವಾಗುತ್ತದೆ. ಬೇಸಿಗೆಯಲ್ಲಿ ಟ್ಯಾನಿಂಗ್ (Tanning), ಪಿಗ್ಮೆಂಟೇಶನ್ ಮತ್ತು ಸನ್ ಬರ್ನ್ ಸಾಮಾನ್ಯ ಸಮಸ್ಯೆಗಳಾಗಿವೆ. ಹಾಗೇ, ಸೂರ್ಯನ UVA ಕಿರಣಗಳು ನೇರವಾಗಿ ಚರ್ಮದ ಮೇಲೆ ಬೀಳುವುದರಿಂದ ಚರ್ಮ ಹಾನಿಗೊಳಗಾಗುತ್ತದೆ.

    ಬೇಸಿಗೆಯಲ್ಲಿ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ (Sunscreen) ಅಥವಾ ಲೋಷನ್‌ಗಳು ಅತ್ಯಗತ್ಯ. ಆದರೆ ಅನೇಕ ಮಂದಿ ಸನ್‍ಸ್ಕ್ರೀನ್ ಹಚ್ಚಿ ಕೂಡ ಸಮಸ್ಯೆಗೊಳಗಾಗುತ್ತಾರೆ. ಏಕೆಂದರೆ ಕೆಲ ಲೋಷನ್‌ಗಳು ಕೆಲವರ ಚರ್ಮದ ಪ್ರಕಾರಕ್ಕೆ ಸರಿ ಹೊಂದುವುದಿಲ್ಲ ಅಥವಾ ಮೊಡವೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗಾಗಿ ನಮ್ಮ ಚರ್ಮದ ವಿಧ ಹಾಗೂ ಯಾವ ಬಗೆಯ ಸನ್‍ಸ್ಕ್ರೀನ್ ಕ್ರೀಮ್ ಬಳಕೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು.

    ಚರ್ಮಗಳಲ್ಲಿ ಮೂರು ವಿಧಗಳಿವೆ. ಅವುಗಳೆಂದರೆ ಒಣ ಚರ್ಮ (Dry Skin), ಎಣ್ಣೆಯುಕ್ತ ಚರ್ಮ (Oily Skin), ಸಂಯೋಜಿತ ಚರ್ಮಗಳು (Combination Skin). ಇದರಲ್ಲಿ ಕೆಲವರ ಚರ್ಮ ಒಂದೊಂದು ರೀತಿಯ ವಿಧಗಳಿಗೆ ಹೊಂದಿಕೊಂಡಿರುತ್ತದೆ. ಈ ಮೂರು ವಿಧದ ಚರ್ಮದ ರೀತಿ ಹೊಂದಿರುವವರೆಗೂ ಬೇರೆ ಬೇರೆ ರೀತಿಯಾದಂತಹ ಚರ್ಮದ ಆರೈಕೆಯ ನಿಯಮಗಳಿರುತ್ತದೆ. ಅದರ ಅನುಗುಣವಾಗಿಯೇ ಚರ್ಮಕ್ಕೆ ಸರಿಹೊಂದುವ ಸನ್‍ಸ್ಕ್ರೀನ್ ಅಥವಾ ಲೋಷನ್‌ಗಳನ್ನು ಬಳಸಬೇಕು.

    ಸೂರ್ಯನ ಕಿರಣದಿಂದ ಚರ್ಮವನ್ನು ರಕ್ಷಿಸಲು ಸನ್‍ಸ್ಕ್ರೀನ್ ಕ್ರೀಮ್ ಅಥವಾ ಲೋಷನ್‌ಗಳನ್ನು ಬಳಸುತ್ತೇವೆ. ಇದು ಚರ್ಮದ ಮೇಲೆ ಉಂಟಾಗುವ ಹಾನಿ ಹಾಗೂ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಸನ್‌ಸ್ಕ್ರೀನ್‌ಗಳನ್ನು ಗಣನೀಯವಾಗಿ ಬಳಸುವುದರಿಂದ ಮುಖದಲ್ಲಿ ಮೊಡವೆ, ಶುಷ್ಕತೆ, ಸುಕ್ಕು, ತುರಿಕೆ ಸೇರಿದಂತೆ ಇನ್ನಿತರ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು ಎಂದು ಸಲಹೆ ನೀಡಲಾಗುವುದು. ಜೊತೆಗೆ ಚರ್ಮವು ಸಮಸ್ಯೆಗಳಿಂದ ಮುಕ್ತವಾಗಿರುತ್ತದೆ.

    ಸನ್‌ಸ್ಕ್ರೀನ್‌ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು:
    ಸನ್‌ಸ್ಕ್ರೀನ್‌ ಕ್ರೀಮ್‍ಗಳನ್ನು ಖರೀದಿಸುವಾಗ ಅದರ ಮೇಲೆ ಎಸ್‍ಪಿಎಫ್ ಪ್ರಮಾಣ ಎಷ್ಟಿದೆ ಎನ್ನುವುದನ್ನು ಮೊದಲು ಗಮನಿಸಬೇಕು. ಎಸ್‍ಪಿಎಫ್ (SPF) ಎಂದರೆ ಸನ್ ಪ್ರೊಟೆಕ್ಷನ್ ಫ್ಯಾಕ್ಟರ್, ಇದು UVB ವಿಕಿರಣದ ವಿರುದ್ಧ ಸನ್‌ಸ್ಕ್ರೀನ್ ನೀಡುವ ರಕ್ಷಣೆಯ ಮಟ್ಟವನ್ನು ಅಳೆಯುತ್ತದೆ. ಸನ್‌ಸ್ಕ್ರೀನ್‌ಗಳು SPF 15, SPF 30 ಮತ್ತು SPF 50 ನಂತಹ ವಿಧಗಳಿವೆ.

    ಸನ್‌ಸ್ಕ್ರೀನ್‌ಗಳನ್ನು ಆರಿಸುವಾಗ 30+ ಎಸ್‍ಪಿಎಫ್ ಗಿಂತ ಹೆಚ್ಚಿರಬೇಕು. 30 ಎಸ್‍ಪಿಎಫ್ ಕ್ರೀಮ್ ಗಳು ಶೇಕಡಾ 97 ರಷ್ಟು ಯುವಿಬಿ ಕಿರಣಗಳಿಂದ ರಕ್ಷಿಸಿದರೆ, 50 ಎಸ್‍ಪಿಎಫ್ ಕ್ರೀಮ್ ಶೇಕಡಾ 100ರಷ್ಟು ಯುವಿಬಿ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಸನ್‌ಸ್ಕ್ರೀನ್‌ನಲ್ಲಿ ಆಕ್ಟಿನೊಕ್ಸೇಟ್ ಮತ್ತು ಆಕ್ಸಿಬೆನ್‍ಝೋನ್ ನಂತಹ ಅಂಶಗಳು ಇವೆಯೇ ಎನ್ನುವುದನ್ನು ಪರಿಶೀಲಿಸಬೇಕು. ಕೆಲವರಿಗೆ ರಾಸಾಯನಿಕ ಉತ್ಪನ್ನಗಳಿಂದ ಅಲರ್ಜಿ ಉಂಟಾಗುವುದು. ಹಾಗಾಗಿ ಸನ್ ಸ್ಕ್ರೀನ್‌ಗಳನ್ನು ಆರಿಸುವಾಗ ಎಚ್ಚರವಹಿಸಬೇಕು.


    ಸನ್‌ಸ್ಕ್ರೀನ್‌ಗಳನ್ನು ಬಳಸುವ ವಿಧಾನ
    ಸನ್‌ಸ್ಕ್ರೀನ್‌ ಹಚ್ಚುವ ಮೊದಲು ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು. ಜೊತೆಗೆ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಕ್ರೀಮ್ ಅನ್ನು ಮುಖಕ್ಕೆ ಅನ್ವಯಿಸುವ ಮೊದಲು ನಿಮ್ಮ ಕೈಗಳಿಗೆ ಸ್ವಲ್ಪ ಹಚ್ಚಿಕೊಂಡು ಪರೀಕ್ಷಿಸಿಕೊಳ್ಳಬೇಕು. ಮನೆಯಿಂದ ಹೊರಗೆ ಹೋಗುವ ಮೊದಲು ಅಂದರೆ 30 ನಿಮಿಷ ಮೊದಲು ಮುಖದ ಭಾಗಗಳಿಗೆ ಹಾಗೂ ಕೈಕಾಲುಗಳಿಗೆ ಕ್ರೀಮ್‌ಗಳನ್ನು ಹಚ್ಚಿಕೊಳ್ಳಬೇಕು. ಹೆಚ್ಚು ಬೆವರುವರಾದರೆ ಅಥವಾ ಮುಖವನ್ನು ಆಗಾಗ ಉಚ್ಚಿಕೊಳ್ಳುವವರಾದರೆ ಪ್ರತಿ 2 ಗಂಟೆಗೊಮ್ಮೆ ಸನ್‌ಸ್ಕ್ರೀನ್‌ಗಳನ್ನು ಹಚ್ಚಿಕೊಳ್ಳಬೇಕು.

    ಈ ರೀತಿಯಾಗಿ ಬಿಸಿಲಿನಿಂದ ಮುಖದ ಸೌಂದರ್ಯ ವನ್ನು ಕಾಪಾಡಿಕೊಳ್ಳಬಹುದು. ಸನ್‌ಸ್ಕ್ರೀನ್‌ಗಳನ್ನು ಬರೀ ಬೇಸಿಗೆಗಾಲದ ಹೊರತು ಎಲ್ಲಾ ಕಾಲಗಳಲ್ಲೂ ಬಳಸುವುದರಿಂದ ಚರ್ಮವು ಸುಂದರವಾಗಿರುತ್ತದೆ. ಮತ್ತು ಮುಖದ ಸುಕ್ಕುಗಳನ್ನು ನಿವಾರಿಸುತ್ತದೆ.