Tag: health

  • ಸೋಡಾ ಮಿಶ್ರಿತ ಪಾನೀಯ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಬೇಡಿ

    ಸೋಡಾ ಮಿಶ್ರಿತ ಪಾನೀಯ ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಬೇಡಿ

    ಸೋಡಾ ಅಥವಾ ಸೋಡಾ ಮಿಶ್ರಿತ ಪಾನೀಯ ಅಂದರೆ ಹಲವರಿಗೆ ಅಚ್ಚುಮೆಚ್ಚು. ಅದರಲ್ಲೂ ಅಜೀರ್ಣ, ಹೊಟ್ಟೆ ಉಬ್ಬರ ಇತ್ಯಾದಿಗಳಿಗೆ ಬಹುತೇಕ ಮಂದಿ ಸೋಡಾದ ಮೊರೆ ಹೋಗುತ್ತಾರೆ. ಕೇವಲ ಸೋಡಾ ಮಾತ್ರವಲ್ಲದೆ ಕೆಲವು ತಂಪು ಪಾನೀಯಗಳು ಕೂಡ ಕೆಲವರ ದೈನಂದಿನ ಆಹಾರದ ಒಂದು ಭಾಗವಾಗಿಬಿಟ್ಟಿದೆ. ಆದರೆ ಇಷ್ಟವೆಂದು ಈ ಪಾನೀಯಗಳನ್ನು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ.

    ಯಾಕೆಂದರೆ ಸೋಡಾದಲ್ಲಿ ಯಾವುದೇ ಪೋಷಕಾಂಶ ಇರುವುದಿಲ್ಲ. ಸೋಡಾ ಸೇವನೆಯಿಂದ ಆರೋಗ್ಯಕ್ಕೆ ಉಪಯೋಗ ಆಗುವುದಕ್ಕಿಂತ ಅಡ್ಡಪರಿಣಾಮವೇ ಹೆಚ್ಚಾಗಿವೆ. ಆರೋಗ್ಯಕ್ಕೆ ಉಪಯುಕ್ತವಾದ ಒಂದು ಅಂಶವು ಸೋಡಾದಲ್ಲಿ ಇಲ್ಲ. ಇದರಲ್ಲಿ ಇರುವಂತಹ ಅನೈಸರ್ಗಿಕ ಅಂಶಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

    ಅತೀಯಾಗಿ ಸೋಡಾ ಅಥವಾ ತಂಪು ಪಾನೀಯಗಳನ್ನು ಸೇವಿಸಿದರೆ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕ್ಯಾಲ್ಸಿಯಂ ಕೊರತೆ, ತೂಕ ಹೆಚ್ಚುವಿಕೆ, ನಿದ್ರಾಹೀನತೆ ಎಂತಹ ಕಾಯಿಲೆಗಳು ಬರುತ್ತದೆ.

    ಸೋಡಾ ಸೇವನೆ ಆರೋಗ್ಯಕ್ಕೆ ಎಷ್ಟು ಹಾನಿಕರ?

    ನೀರು
    ಸೋಡಾದಲ್ಲಿ ಹೆಚ್ಚಾಗಿ ನಲ್ಲಿ ನೀರನ್ನು ಬಳಸಲಾಗುತ್ತದೆ. ಹೀಗಾಗಿ ಇದರಲ್ಲಿ ಕ್ಲೋರಿನ್, ಫ್ಲೋರೈಡ್ ಮತ್ತು ಇತರ ಕೆಲವು ಲೋಹಗಳು ಸೇರಿಕೊಂಡಿರುತ್ತದೆ. ಈ ಲೋಹದ ಅಂಶ ದೇಹ ಸೇರಿದರೆ ಅನಾರೋಗ್ಯಕ್ಕೆ ಬಹುಬೇಗ ತುತ್ತಾಗುತ್ತೇವೆ.

    ಸಕ್ಕರೆ
    ಒಂದು ಸಣ್ಣ ಕ್ಯಾನ್ ತಂಪು ಪಾನೀಯದಲ್ಲಿ ಅಂದಾಜು 10 ಚಮಚ ಸಕ್ಕರೆ ಇರುತ್ತದೆ. ಈ ಪಾನೀಯವನ್ನು ಕುಡಿದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿ, ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಏರುಪೇರು ಮಾಡುತ್ತದೆ. ಇದರಿಂದಾಗಿ ಮಧುಮೇಹ ಅಥವಾ ಇನ್ಸುಲಿನ್ ಪ್ರತಿರೋಧಕ ಸಮಸ್ಯೆ ಉಂಟಾಗುತ್ತದೆ.

    ಅಲ್ಲದೇ ಹೆಚ್ಚಾಗಿ ಸಕ್ಕರೆ ಅಂಶವಿರುವ ಪಾನೀಯಗಳನ್ನು ಸೇವಿಸಿದರೆ ತೂಕ ಹೆಚ್ಚಳವಾಗುತ್ತದೆ ಮತ್ತು ಇತರೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಕಾಡಲು ಆರಂಭವಾಗುತ್ತದೆ.

    ಕೆಫಿನ್
    ಹೆಚ್ಚಿನ ಸೋಡಾಗಳಲ್ಲಿ ಕೆಫಿನ್ ಅಂಶವಿರುತ್ತದೆ. ಇದು ಕ್ಯಾನ್ಸರ್, ಸ್ತನದಲ್ಲಿ ಗಡ್ಡೆ, ಹೃದಯ ಸಂಬಂಧಿ ಸಮಸ್ಯೆ, ರಕ್ತದೊತ್ತಡ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುವುದು. ಆದ್ದರಿಂದ ಹೆಚ್ಚು ಸೋಡಾ ಅಂಶವಿರುವ ಪಾನೀಯ ಸೇವಿಸುವವರು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ.

    ಫಾಸ್ಪರಸ್ ಆಮ್ಲ
    ಸೋಡಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫಾಸ್ಪರಸ್ ಆಮ್ಲದ ಅಂಶ ಇರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟುಮಾಡುತ್ತದೆ. ಇದರಿಂದಾಗಿ ಅಸ್ಥಿರಂಧ್ರತೆ, ದಂತಕುಳಿ ಮತ್ತು ಮೂಳೆಗಳ ಸಮಸ್ಯೆ ಬರುತ್ತದೆ.

  • ಸತ್ತಿಲ್ಲ ಬದುಕಿದ್ದಾನೆ ಸರ್ವಾಧಿಕಾರಿ ಕಿಮ್- ಉಹಾಪೋಹದ ಬಳಿಕ ಕಾಣಿಸಿಕೊಂಡ ಹುಚ್ಚುದೊರೆ

    ಸತ್ತಿಲ್ಲ ಬದುಕಿದ್ದಾನೆ ಸರ್ವಾಧಿಕಾರಿ ಕಿಮ್- ಉಹಾಪೋಹದ ಬಳಿಕ ಕಾಣಿಸಿಕೊಂಡ ಹುಚ್ಚುದೊರೆ

    ಸಿಯೋಲ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಬಹಳ ದಿನಗಳ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ. ಈ ಮೂಲಕ ತನ್ನ ಆರೋಗ್ಯದ ಬಗ್ಗೆ ಇದ್ದ ಉಹಾಪೋಹಗಳಿಗೆ ತೆರೆ ಎಳೆದಿದ್ದಾನೆ.

    ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಕಿಮ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆತ ಸಾವನ್ನಪ್ಪಿರಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ಸುದ್ದಿ ಮಾಡಿದ್ದವು. ಆದರೆ ಕಿಮ್ ಇಂದು ತನ್ನ ದೇಶದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಈ ಎಲ್ಲ ಗಾಳಿ ಸುದ್ದಿಗಳಿಗೂ ಬ್ರೇಕ್ ಹಾಕಿದ್ದಾನೆ.

    ಕಿಮ್ ತನ್ನ ಸಹೋದರಿ ಮತ್ತು ತನ್ನ ಅಪ್ತ ಅಧಿಕಾರಿಗಳೊಂದಿಗೆ ಇಂದು ಕಾಣಿಸಿಕೊಂಡಿದ್ದು, ತನ್ನ ದೇಶದಲ್ಲಿ ಆರಂಭವಾದ ನೂತನ ರಸಗೊಬ್ಬರ ಕಾರ್ಖಾನೆಯನ್ನು ಟೇಪ್ ಕತ್ತರಿಸುವ ಮೂಲಕ ಓಪನ್ ಮಾಡಿದ್ದಾನೆ. ಜೊತೆಗೆ ಶುಕ್ರವಾರವೇ ಕಿಮ್ ಹೊರಗೆ ಬಂದಿದ್ದು, ತನ್ನ ದೇಶದ ರಾಜಧಾನಿ ಪ್ಯೊಂಗ್ಯಾಂಗ್ ಬಳಿಯ ಸುನ್‍ಚಾನ್‍ನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂದು ತಿಳಿದು ಬಂದಿದೆ.

    ಇದೇ ವೇಳೆ ರಸಗೊಬ್ಬರ ಕಾರ್ಖಾನೆ ಓಪನ್ ಮಾಡಿ ಮಾತನಾಡಿದ ಕಿಮ್ ಜಾಂಗ್-ಉನ್, ಆಧುನಿಕ ರಸಗೊಬ್ಬರ ಕಾರ್ಖಾನೆಯನ್ನು ನಿರ್ಮಿಸುವುದು ನಮ್ಮೆಲ್ಲರ ಕನಸಾಗಿತ್ತು. ಈ ಸುದ್ದಿ ಕೇಳಿದರೆ ನಮ್ಮ ಅಜ್ಜ ಕಿಮ್ ಇಲ್ ಸುಂಗ್ ಮತ್ತು ಅಪ್ಪ ಕಿಮ್ ಜಾಂಗ್ ಇಲ್ ಬಹಳ ಸಂತೋಷ ಪಡುತ್ತಿದ್ದರು ಎಂದು ಹೇಳಿದನು ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಈ ಕಾರ್ಯಕ್ರಮದ ನಂತರ ತಕ್ಷಣ ಆತನ ಫೋಟೋಗಳು ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಈ ವಿಚಾರವಾಗಿ ವಾರದ ಹಿಂದೆ ಮಾತನಾಡಿದ್ದ ಉತ್ತರ ಕೊರಿಯಾದ ಭದ್ರತಾ ಸಲಹೆಗಾರ ಮೂನ್ ಜೇ-ಇನ್, ಕಿಮ್ ಜಾಂಗ್-ಉನ್ ಜೀವಂತವಾಗಿ ಇದ್ದಾರೆ. ಚೆನ್ನಾಗಿ ಇದ್ದಾರೆ. ಅವರು ಏಪ್ರಿಲ್ 13ರಿಂದ ಉತ್ತರ ಕೊರಿಯಾದ ಪೂರ್ವದಲ್ಲಿರುವ ರೆಸಾರ್ಟ್ ಪಟ್ಟಣವಾದ ವೊನ್ಸಾನ್‍ನಲ್ಲಿ ತಂಗಿದ್ದರು ಎಂದು ಹೇಳಿದ್ದರು. ಆದರೆ ಈ ಮಾಹಿತಿಯನ್ನು ಒಪ್ಪದ ರಾಷ್ಟ್ರೀಯ ಮಾಧ್ಯಮಗಳು ಕಿಮ್ ಆರೋಗ್ಯ ಸರಿಯಿಲ್ಲ. ಆತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ ಎಂದು ವರದಿ ಮಾಡಿದ್ದವು.

    ಕಿಮ್ ಆರೋಗ್ಯದ ಬಗ್ಗೆ ಅನುಮಾನ ಬರಲು ಕಾರಣವೇನು?
    ಕಿಮ್ ಜಾಂಗ್-ಉನ್ ಸರ್ವಾಧಿಕಾರಿಯಾಗಿದ್ದು, ಹೆಚ್ಚು ಹೆಚ್ಚು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದನು. ಆದರೆ ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವರದಿಗಳ ಪ್ರಕಾರ ಕಿಮ್ ಏಪ್ರಿಲ್ 15 ರಂದು ನಡೆದ ತನ್ನ ಅಜ್ಜ ಮತ್ತು ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಹುಟ್ಟುಹಬ್ಬದ ಆಚರಣೆಗೂ ಗೈರು ಹಾಜರಾಗಿದ್ದನು. ಅಧಿಕಾರಕ್ಕೆ ಏರಿದ ಬಳಿಕ ಇಲ್ಲಿಯವರೆಗೆ ಈ ಕಾರ್ಯಕ್ರಮಕ್ಕೆ ಗೈರಾಗಿರಲಿಲ್ಲ. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿತ್ತು.

    ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಆತನ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಕಾರಣದಿಂದ ಆತನ ಆರೋಗ್ಯ ಹದಗೆಟ್ಟಿದ್ದು ಆತ ಸಾವನ್ನಪ್ಪಿರಬಹುದು ಎಂದು ಹೇಳಲಾಗಿತ್ತು. ಈ ನಡುವೆ ಚೀನಾದಿಂದ ಉನ್ನತ ವೈದ್ಯರ ತಂಡ ಉತ್ತರ ಕೊರಿಯಾಗೆ ಹೋಗಿದ್ದು, ಆತನಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಲಾಗಿತ್ತು.

  • ‘ಕಿಮ್ ಜೀವಂತವಾಗಿದ್ದಾರೆ’ – ಉಪಗ್ರಹ ಚಿತ್ರ ಸಾಕ್ಷಿಯಂತೆ

    ‘ಕಿಮ್ ಜೀವಂತವಾಗಿದ್ದಾರೆ’ – ಉಪಗ್ರಹ ಚಿತ್ರ ಸಾಕ್ಷಿಯಂತೆ

    ವಾಷಿಂಗ್ಟನ್: ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಜೀವಂತವಾಗಿದ್ದಾರಾ ಅಥವಾ ಮೃತಪಟ್ಟಿದ್ದಾರಾ ಎನ್ನುವ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಕೊರಿಯಾದ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಈಗ ಪೂರ್ವ ಕರಾವಳಿಯ ವೊನ್ಸನ್ ನಲ್ಲಿ ನಿಂತಿದ್ದ ರೈಲಿನ ಬಗ್ಗೆ ಉಪಗ್ರಹ ಚಿತ್ರವೊಂದು ಪ್ರಕಟವಾಗಿದೆ.

    ಕಿಮ್ ಜಾಂಗ್ ಮೃತಪಟ್ಟಿದ್ದಾರೆ ಎಂದು ಜಪಾನ್ ಮಾಧ್ಯಮಗಳು ಭಾನುವಾರ ಸುದ್ದಿ ಪ್ರಕಟಿಸಿತ್ತು. ಆದರೆ ದಕ್ಷಿಣ ಕೊರಿಯಾ ಸರ್ಕಾರ ಕಿಮ್ ಜಾಗ್ ಮೃತಪಟ್ಟಿಲ್ಲ ಎಂದು ಪ್ರಕಟಣೆ ನೀಡಿತ್ತು. ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ. ಏ.13 ರಿಂದ ವೋನ್ಸಾನ್ ನಲ್ಲಿ ಇದ್ದಾರೆ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇಯ್ ಇನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೂನ್ ಚುಂಗ್ ಇನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ದಕ್ಷಿಣ ಕೊರಿಯ ಸರ್ಕಾರ ಅಧಿಕೃತ ಹೇಳಿಕೆ ನೀಡಿದ್ದರೂ ಈಗ ಕಿಮ್ ಅವರ ಖಾಸಗಿ ರೈಲಿನ ಬಗ್ಗೆ ಚರ್ಚೆ ಆರಂಭವಾಗಿದೆ. ಖಾಸಗಿ ಉಪಗ್ರಹ ವೊನ್ಸನ್ ರೈಲ್ವೇ ನಿಲ್ದಾಣದಲ್ಲಿ ಕಿಮ್ ಅವರ ರೈಲು ನಿಂತಿದ್ದ ಚಿತ್ರವನ್ನು ತೆಗೆದಿದೆ.

    250 ಮೀಟರ್ ಉದ್ದದ ರೈಲು ನಿಲ್ದಾಣದಲ್ಲಿ ನಿಂತರೂ ಅರ್ಧ ಭಾಗ ಹೊರಗಡೆ ಕಾಣುತ್ತದೆ. ಈ ರೈಲು ಏ.15 ರಂದು ಕಾಣಿಸಿರಲಿಲ್ಲ. ಆದರೆ ಏ. 21 ಮತ್ತು ಏ.23 ರಂದು ಕಾಣಿಸಿತ್ತು. ಕಿಮ್ ಜಾಂಗ್ 2014ರಲ್ಲಿ ಅಧಿಕಾರಕ್ಕೆ ಏರಿದ ಬಳಿಕ ವೊನ್ಸನ್ ಕಾಂಪ್ಲೆಕ್ಸ್ ನವೀಕರಣಗೊಂಡಿದೆ. ಶೂಟಿಂಗ್ ರೇಂಜ್, ಕುದುರೆ ಓಡಿಸುವ ಟ್ರ್ಯಾಕ್, ಐಶಾರಾಮಿ ವಿಲ್ಲಾಗಳು ಇಲ್ಲಿ ನಿರ್ಮಾಣಗೊಂಡಿದೆ. ರೈಲು ನಿಂತಿದ್ದ ಹಿನ್ನೆಲೆಯಲ್ಲಿ ಕಿಮ್ ಇಲ್ಲಿ ವಿಶ್ರಾಂತಿ ಪಡೆಯುತ್ತಿರಬಹುದು ಎಂದು ವರದಿಯಾಗಿದೆ.

    ಕೆಲ ದಿನಗಳ ಹಿಂದೆ ಕಿಮ್ ಜಾಂಗ್ ಹೃದಯ, ರಕ್ತನಾಳದ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದು, ಅವರ ಆರೋಗ್ಯ ಮತ್ತಷ್ಟು ಕೀಣಿಸಿದೆ ಎನ್ನಲಾಗಿತ್ತು. ಇದೀಗ ಕಿಮ್ ಜಾಂಗ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಚೀನಾ, ಹಾಂಕಾಂಗ್, ಜಪಾನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಬಗ್ಗೆ ಉತ್ತರ ಕೊರಿಯಾದ ಸರ್ಕಾರಿ ಟಿವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಿಮ್ ಹೃದಯಕ್ಕೆ ಸ್ಟಂಟ್ ಅಳವಡಿಸುವಾಗ ವೈದ್ಯರ ಕೈ ಭಯದಿಂದ ವಿಪರೀತವಾಗಿ ನಡುಗಿ ಎಡವಟ್ ಆಗಿದೆ. ಇದರಿಂದಲೇ ಕಿಮ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ವರದಿಯಾಗಿದೆ.

    ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಅವರ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಅವರ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ. ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವರದಿಗಳ ಪ್ರಕಾರ ಕಿಮ್ ಏಪ್ರಿಲ್ 15 ರಂದು ನಡೆದ ತನ್ನ ಅಜ್ಜ ಮತ್ತು ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಹುಟ್ಟುಹಬ್ಬದ ಆಚರಣೆಗೂ ಗೈರು ಹಾಜರಾಗಿದ್ದರು. ಅಧಿಕಾರಕ್ಕೆ ಏರಿದ ಬಳಿಕ ಇಲ್ಲಿಯವರೆಗೆ ಈ ಕಾರ್ಯಕ್ರಮಕ್ಕೆ ಗೈರಾಗಿರಲಿಲ್ಲ. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

    ಉತ್ತರ ಕೊರಿಯಾ ತಮ್ಮ ದೇಶದ ನಾಯಕರ ಆರೋಗ್ಯದ ವಿಚಾರವನ್ನು ರಾಷ್ಟ್ರದ ಭದ್ರತೆಯ ವಿಚಾರವೆಂದು ಪರಿಗಣಿಸುತ್ತದೆ. ಈ ಕಾರಣಕ್ಕೆ ಕಿಮ್ ಆರೋಗ್ಯ ಬಗ್ಗೆ ಎಲ್ಲಿಯೂ ಸುದ್ದಿ ಪ್ರಕಟವಾಗಿಲ್ಲ.

  • ಸಾಧಾರಣ ಕೆಮ್ಮು, ನೆಗಡಿಗೆ ಮನೆಮದ್ದು ಈರುಳ್ಳಿ ಸಿರಪ್

    ಸಾಧಾರಣ ಕೆಮ್ಮು, ನೆಗಡಿಗೆ ಮನೆಮದ್ದು ಈರುಳ್ಳಿ ಸಿರಪ್

    ಮೊದಲೆಲ್ಲಾ ಕೆಮ್ಮು, ಶೀತ ಬಂದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗಿನಿಂದ ಕೊರೊನಾ ವೈರಸ್ ಕಾಟ ಶುರುವಾಯ್ತೋ ಆಗಿನಿಂದ ಸಣ್ಣದಾಗಿ ಕೆಮ್ಮು ಬಂದರೂ ಭಯ ಆಗುತ್ತಿದೆ. ಏಕೆಂದರೆ ಕೆಮ್ಮು, ನೆಗಡಿ, ಜ್ವರ ಕೊರೊನಾ ವೈರಸ್ ಲಕ್ಷಣವಾಗಿದ್ದು, ಕೆಮ್ಮು ಬಂದಾಗ ಸೋಂಕಿಗೆ ತುತ್ತಾಗಿ ಬಿಟ್ವಾ? ಇದು ಸಾಧಾರಣ ಕೆಮ್ಮಾ? ಅಥವಾ ಕೊರೊನಾ ವೈರಸ್ ಲಕ್ಷಣವಾ ಎಂಬ ಪ್ರಶ್ನೆ ಕಾಡಲು ಆರಂಭವಾಗುತ್ತದೆ. ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬಿದ್ದ ಮೇಲೆ ವಾತಾವರಣ ಬದಲಾವಣೆಯಿಂದ ಕೆಮ್ಮು, ನೆಗಡಿ ಆಗುವುದು ಸಹಜ.

    ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದಲೇ ಗುಣಪಡಿಸಿಕೊಳ್ಳಬಹುದು. ಕೆಮ್ಮು, ನೆಗಡಿಗೆ ಸಾಕಷ್ಟು ಮನೆಮದ್ದುಗಳಿವೆ. ಅದರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಈರುಳ್ಳಿ ಸಿರಪ್. ಹೌದು. ಈರುಳ್ಳಿ ಸಿರಪ್ ಕೆಮ್ಮು, ನೆಗಡಿಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದು, ಇದನ್ನು ತಯಾರಿಸುವುದು ಕೂಡ ಸುಲಭವಾಗಿದೆ. ಮನೆಯಲ್ಲಿ ಈರುಳ್ಳಿ ಸಿರಪ್ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟರೆ ಕೆಮ್ಮು ಬಂದಾಗ ಅದನ್ನು ಹೋಗಲಾಡಿಸಲು ಮದ್ದಾಗಿ ಬಳಸಬಹುದಾಗಿದೆ.

    ಈರುಳ್ಳಿ ಸಿರಪ್ ಮಾಡುವ ವಿಧಾನ
    ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು ಚಿಕ್ಕದಾಗಿ ಕತ್ತರಿಸಿ ಗಾಜಿನ ಜಾರ್ ನಲ್ಲಿ ಹಾಕಿಡಿ. ನಂತರ ಅದರ ಮೇಲೆ 2 ಚಮಚ ಜೇನು ತುಪ್ಪ ಹಾಕಿ. ರಾತ್ರಿ ಈ ಮಿಶ್ರಣ ಮಾಡಿ ಜಾರ್ ನ ಮುಚ್ಚಳ ಹಾಕಿಡಿ. ಸುಮಾರು 6-10 ಗಂಟೆಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಜಾರ್ ತಳದಲ್ಲಿ ಸಂಗ್ರಹವಾದ ಮಿಶ್ರಣವನ್ನು ಬೇರೆ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ. ಕೆಮ್ಮು ಇದ್ದವರು ಈ ರಸವನ್ನು 1 ಚಮಚದಂತೆ ದಿನಕ್ಕೆ 2-3 ಬಾರಿ ತೆಗೆದುಕೊಂಡರೆ ಕೆಮ್ಮು ಕಡಿಮೆಯಾಗುತ್ತದೆ.

    ಈರುಳ್ಳಿಯ ಆರೋಗ್ಯಕರ ಲಾಭವೇನು?
    ಈರುಳ್ಳಿಯಲ್ಲಿ ರಂಜಕದ ಅಂಶವಿದೆ. ಈರುಳ್ಳಿಯಲ್ಲಿರುವ ಖಾರ ಹಾಗೂ ಘಾಟು ಅದರಲ್ಲಿ ಅಡಗಿರುವ ಔಷಧೀಯ ಗುಣಗಳನ್ನು ಸೂಚಿಸುತ್ತದೆ. ಇದು ದೇಹದಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವಲ್ಲಿ ಸಹಕಾರಿಯಾಗಿದ್ದು, ಈರುಳ್ಳಿ ಸೇವನೆಯಿಂದ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ. ಈರುಳ್ಳಿಯಲ್ಲಿ ಏಲ್ಲಿನ್ ಎಂಬ ಅಂಶವಿದೆ. ಈ ಅಂಶ ಬೆಳ್ಳುಳ್ಳಿಯಲ್ಲಿಯೂ ಇರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿ ಏಲ್ಲಿನ್ ಅಂಶ ಉತ್ಪತ್ತಿಯಾಗುತ್ತದೆ. ಇದು ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ.

    ಜೇನು ತುಪ್ಪದಲ್ಲಿರುವ ಆರೋಗ್ಯಕರ ಲಾಭವೇನು?
    ಜೇನು ತುಪ್ಪದಲ್ಲಿ ವಿಟಮಿನ್ ಬಿ, ಆ್ಯಂಟಿಬಾಡಿ, ಖನಿಜಾಂಶಗಳು, ಪ್ರೀಬಯೋಟಿಕ್ ಅಂಶ ಅಡಕವಾಗಿದೆ. ಜೇನು ತುಪ್ಪ ಸೇವನೆ ಮಾಡಿದರೆ ಅದು ಗಂಟಲಿನಲ್ಲಿ ಉಂಟಾದ ಕೆರೆತ ಕಡಿಮೆ ಮಾಡುತ್ತದೆ. ಜೇನು ತುಪ್ಪದಲ್ಲಿ ಆ್ಯಂಟಿಬಯೋಟಿಕ್ ಹಾಗೂ ಆ್ಯಂಟಿಫಂಗಲ್ ಅಂಶವಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆರೋಗ್ಯ ವೃದ್ಧಿಸುತ್ತದೆ.

    ಈ ಈರುಳ್ಳಿ ಸಿರಪ್ ಅನ್ನು ಒಂದು ವರ್ಷಕ್ಕಿಂತ ಒಳಗಿನ ಮಕ್ಕಳಿಗೆ ಕೊಡಬೇಡಿ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ದೊಡ್ಡವರು ಈ ಸಿರಪ್ ಸೇವಿಸಬಹುದು.

  • ಬಿಜೆಪಿ ಹಿರಿಯ ಕಾರ್ಯಕರ್ತ ಸೋಮಶೇಖರ್ ಭಟ್ ಆರೋಗ್ಯ ವಿಚಾರಿಸಿದ ಪ್ರಧಾನಿ

    ಬಿಜೆಪಿ ಹಿರಿಯ ಕಾರ್ಯಕರ್ತ ಸೋಮಶೇಖರ್ ಭಟ್ ಆರೋಗ್ಯ ವಿಚಾರಿಸಿದ ಪ್ರಧಾನಿ

    ಉಡುಪಿ: ಬಿಜೆಪಿಯ ಹಿರಿಯ ಕಾರ್ಯಕರ್ತ ಸೋಮಶೇಖರ್ ಭಟ್ ಗೆ ಬೆಳ್ಳಂಬೆಳಗ್ಗೆ ಒಂದು ಫೋನ್ ಕರೆ ಬಂದಿತ್ತು. ಯಾರಪ್ಪ ಇದು.. ಅನ್ ನೋನ್ ನಂಬರ್ ಅಂತ ರಿಸೀವ್ ಮಾಡಿದ್ರೆ ಅವರಿಗೆ ಶಾಕ್ ಆಗಿತ್ತು.

    ಹೌದು. ಬೆಳಗ್ಗೆ 8.30ಕ್ಕೆ ಕಾಲ್ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಆ ಕಡೆಯಿಂದ ಹಲೋ ಎಂದಿದ್ದು ಮತ್ಯಾರೂ ಅಲ್ಲ ಪ್ರಧಾನಿ ನರೇಂದ್ರ ಮೋದಿಯವರೇ. ಹೇಗಿದ್ದೀರಿ, ಆರೋಗ್ಯ ಹೇಗಿದೆ ಅಂತ ಪ್ರಧಾನಿಗಳು ಸೋಮಶೇಖರ್ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.

    ದೇಶಾದ್ಯಂತ ಕೊರೊನಾ ಆತಂಕ ಆವರಿಸಿದ್ದು, ಹಿರಿಯ ನಾಗರಿಕರು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಸರ್ಕಾರ ಆದೇಶಿಸಿತ್ತು. ಈ ನಡುವೆ ಬಿಜೆಪಿಯ ಹಿರಿಯ ಕಾರ್ಯಕರ್ತ ಸೋಮಶೇಖರ್ ಭಟ್ ಜನಸಂಘ ಕಾಲದಿಂದ ಬಿಜೆಪಿಯಲ್ಲಿ ಸಕ್ರಿಯ ನಾಯಕ. ಪ್ರಧಾನಿ ಮೋದಿಯ ಆಪ್ತವಲಯದವರು. ಹೀಗಾಗಿ ಮೋದಿ ಸೋಮಶೇಖರ್ ಭಟ್ ಆರೋಗ್ಯ ವಿಚಾರಿಸಿದರು. ಕೋವಿಡ್-19 ಸಂದರ್ಭದಲ್ಲಿ ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಮೋದಿ ಕಾಳಜಿವಹಿಸಬೇಕು. ಆರೋಗ್ಯ ಜೋಪಾನ ಎಂದು ಹೇಳಿದರು.

    ಆರ್ ಎಸ್ ಎಸ್ ಕ್ಯಾಂಪ್, ಜನಸಂಘದ ದಿನಗಳು, ಎಮರ್ಜೆನ್ಸಿಯ ಕಾಲವನ್ನು ಇಬ್ಬರು ಮೆಲುಕು ಹಾಕಿದ್ದಾರೆ. ತಮ್ಮ ವಲಯದ ಎಲ್ಲಾ ಹಿರಿಯರು- ಮಕ್ಕಳು ನಾಗರಿಕರಿಗೆ ಜಾಗೃತಿಯ ಮಾಹಿತಿ ರವಾನೆ ಮಾಡಿ ಎಂದು ವಿನಂತಿಸಿದರು.

  • ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಕಷಾಯಗಳು

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಕಷಾಯಗಳು

    ರೋಗ್ಯವೇ ಭಾಗ್ಯ ಎನ್ನುವ ಹಿರಿಯರ ಮಾತು ಸುಳ್ಳಲ್ಲ. ಯಾಕೆಂದರೆ ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ. ಈಗಿನ ಜೀವನಶೈಲಿಯಲ್ಲಿ ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯದ ಕಡೆಗೆ ಸರಿಯಾಗಿ ಗಮನ ಕೊಡಲ್ಲ. ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ಕೂಡ ಕೆಲವರಿಗೆ ಆಗೋದಿಲ್ಲ.

    ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗಿ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಆರೋಗ್ಯವಾಗಿರಲು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಕೊಳ್ಳಬೇಕು. ಪೌಷ್ಠಿಕ ಆಹಾರದ ಜೊತೆಗೆ ಆರೋಗ್ಯಕ್ಕೆ ಹಿತವಾದ ಕಷಾಯಗಳನ್ನು ದಿನನಿತ್ಯ ಕುಡಿದರೆ ಸುಲಭವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಔಷಧೀಯ ಸಸ್ಯಗಳು, ಬೇರುಗಳು, ಕಾಳುಗಳು ಇವೆ. ಅವುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಕೆಲವು ಕಷಾಯಗಳನ್ನು ಸೇವಿಸಿದರೆ ಅದು ದೇಹದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಮ್ಮು, ಶೀತ, ಜ್ವರ ಇಂಥ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಇತರ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡಿ ಆರೋಗ್ಯ ಕಾಪಾಡುತ್ತದೆ.

    ಆರೋಗ್ಯಕರ ಕಷಾಯಗಳು ಯಾವುದು?

    1. ಅರಿಶಿಣ ಮತ್ತು ಹಾಲು ಕಷಾಯ
    ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅರಶಿಣ ಮಿಶ್ರಿತ ಹಾಲು ಕುಡಿದರೆ ಕೆಮ್ಮು, ಗಂಟಲು ಕೆರೆತ ಕಡಿಮೆ ಆಗುತ್ತದೆ. ಬೇಕಾದರೆ ರುಚಿಗೆ ಹಾಲಿಗೆ ಅರಿಶಿಣ ಜೊತೆಗೆ ಸ್ವಲ್ಪ ಶುಂಠಿ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಯಬಹುದು.

    2. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯ
    ನಿಂಬೆ ರಸದಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯವನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಏಲಕ್ಕಿ, ಮತ್ತು ಕಾಳು ಮೆಣಸು ಮಿತವಾಗಿ ಬಳಸಬೇಕು. ಯಾಕೆಂದರೆ ತುಂಬಾ ಬಳಸಿದರೆ ಉಷ್ಣವಾಗುತ್ತದೆ. ನೀರಿಗೆ ಕಾಳುಮೆಣಸು(ಪುಡಿ ಮಾಡಿದ್ದು), ಏಲಕ್ಕಿ, ನಿಂಬೆರಸ ಹಾಕಿ ಕುದಿಸಿ ಕುಡಿಯುವುದರಿಂದ ಸಾಮಾನ್ಯ ಶೀತ ನಿವಾರಣೆಯಾಗುತ್ತದೆ.

    3. ತುಳಸಿ ಮತ್ತು ಕಾಳು ಮೆಣಸಿನ ಕಷಾಯ
    ತುಳಸಿ ದೇಹದ ಆರೋಗ್ಯವನ್ನು ಕಾಡುವುವಲ್ಲಿ ಪರಿಣಾಮಕಾರಿಯಗಿದ್ದು, ತುಳಿಸಿ ಎಲೆಗಳನ್ನು ನೀರಿಗೆ ಹಾಕಿ ಕುಡಿದರೆ ಒಳ್ಳೆಯದು. ಕೆಮ್ಮು ಇದ್ದರೆ ತುಳಸಿ, ಕಾಳು ಮೆಣಸು, ಶುಂಠಿ ಜಜ್ಜಿ ಎರಡು ಲೋಟ ನೀರಿಗೆ ಹಾಕಿ, ಅದು ಅರ್ಧ ಲೋಟದಷ್ಟು ಆಗುವ ತನಕ ಕುದಿಸಿ. ಬಳಿಕ ಅದನ್ನು ಸೋಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ. 2 ಲೀಟರ್ ನೀರಿಗೆ 5-6 ತುಳಸಿ ಎಲೆ, 3-4 ಕಾಳು ಮೆಣಸು ಹಾಕಿ ಕುದಿಸಿ, ಈ ಕಷಾವನ್ನು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

    4. ಅಶ್ವಗಂಧ ಕಷಾಯ ಮತ್ತು ಅಣಬೆ ಸೂಪ್
    ಅಶ್ವಗಂಧದಲ್ಲಿ ರೋಗ ನಿರೋಧಕ ಗುಣ ಅಡಕವಾಗಿದೆ. ಹೀಗಾಗಿ ಆಯುರ್ವೇದದಲ್ಲಿ ಅನೇಕ ಆರೋಗ್ಯ ಸಮಸ್ಯೆ ನಿವಾರಿಸಲು ಇದನ್ನು ಬಳಸುತ್ತಾರೆ. ಅಣಬೆ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಅಣಬೆ ಸೂಪ್ ಹಾಗೂ ಅಶ್ವಗಂಧ ಹಾಕಿ ಕಷಾಯ ಕುಡಿದರೆ ಒಳ್ಳೆದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಆರೋಗ್ಯ ಚೆನ್ನಾಗಿರುತ್ತದೆ.

    5. ಪುದೀನಾ ಮತ್ತು ರೋಸ್‍ಮೆರಿ ಕಷಾಯ
    ಪುದೀನಾದಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಅಂಶವಿದೆ. ಪುದೀನಾ ಮತ್ತು ರೋಸ್‍ಮೆರಿ ಎರಡನ್ನು ಮಿಶ್ರಣ ಮಾಡಿದ ಕಷಾಯ ಸೇವನೆಯಿಂದ ಹವಾಮಾನ ಬದಲಾವಣೆಯಿಂದ ಕಾಣಿಸುವ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಬಹುದು.

  • ಮನೆಯಲ್ಲಿದ್ದು ತೂಕ ಹೆಚ್ಚಾಗ್ತಿದಿಯಾ – ಜೀರಾ ಜ್ಯೂಸ್ ಕುಡಿಯಿರಿ

    ಮನೆಯಲ್ಲಿದ್ದು ತೂಕ ಹೆಚ್ಚಾಗ್ತಿದಿಯಾ – ಜೀರಾ ಜ್ಯೂಸ್ ಕುಡಿಯಿರಿ

    ಲಾಕ್‍ಡೌನ್‍ನಿಂದ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯತೆ ಇದೆ. ಇದರಿಂದ ಕೆಲವರು ಪ್ರತಿದಿನ ಮಾಡುತ್ತಿದ್ದ ಜಿಮ್, ವರ್ಕೌಟ್ ಎಲ್ಲವೂ ಬಂದ್ ಆಗಿದೆ. ಹೀಗಾಗಿ ಅವರಿಗೆ ಮನೆಯಲ್ಲಿಯೇ ಇದ್ದು ತೂಕ ಹೆಚ್ಚಾಗುತ್ತಿದೆ ಎಂಬ ಭಯವಿರುತ್ತದೆ. ಮನೆಯಲ್ಲಿ ಜೀರಿಗೆ ಇದ್ದೆ ಇರುತ್ತದೆ. ಆದ್ದರಿಂದ ಪ್ರತಿದಿನ ಜೀರಾ ಜ್ಯೂಸ್ ಕುಡಿದು ದೇಹದ ತೂಕ ಹೆಚ್ಚಾಗುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಸಿಂಪಲ್ ಆಗಿ ಜೀರಾ ಜ್ಯೂಸ್ ಮಾಡುವ ವಿಧಾನ ನಿಮಗಾಗಿ….

    ಬೇಕಾಗುವ ಸಾಮಾಗ್ರಿಗಳು
    1. ಜೀರಿಗೆ – ಒಂದು ಟೀ ಸ್ಪೂನ್
    2. ನೀರು – ಒಂದು ಗ್ಲಾಸ್
    3. ಜೇನುತುಪ್ಪ – 1/2 ಟೀ ಸ್ಪೂನ್
    4. ನಿಂಬೆಹಣ್ಣು – 2 ಹನಿ

    ಬೇಕಾಗುವ ಸಾಮಾಗ್ರಿಗಳು
    * ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ನೀರಿನಲ್ಲಿ ಒಂದು ಟೀ ಸ್ಪೂನ್ ಜೀರಿಗೆ ಮಿಕ್ಸ್ ಮಾಡಿ ಮುಚ್ಚಿಡಿ.
    * ಬೆಳಗ್ಗೆ ಜೀರಿಗೆ ಮಿಶ್ರಿತ ನೀರನ್ನ 5 ರಿಂದ 7 ನಿಮಿಷ ಕುದಿಸಿಕೊಳ್ಳಿ. ಕುದಿಸಿದ ಮೇಲೆ ನೀರನ್ನು ಸೋಸಿಕೊಳ್ಳುವ ಮೂಲಕ ಜೀರಿಗೆಯನ್ನು ಬೇರ್ಪಡಿಸಿಕೊಳ್ಳಿ.
    * ಜೀರಿಗೆ ಮಿಶ್ರಿತ ನೀರು ಕುದಿಸಿದ ಮೇಲೆ ತಣ್ಣಗಾಗಲು ಬಿಡಿ.
    * ಸಂಪೂರ್ಣವಾಗಿ ತಣ್ಣಗಾಗುವ ಮೊದಲೇ ಎರಡು ಹನಿ ನಿಂಬೆ ರಸ ಮತ್ತು ಅರ್ಧ ಟೀ ಸ್ಪೂನ್ ಸೇರಿಸಿದರೆ ಜೀರಾ ಜ್ಯೂಸ್ ಕುಡಿಯಲು ಸಿದ್ಧ.

    ಇದನ್ನು ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹಣೆ ಕಡಿಮೆ ಆಗೋದನ್ನು ತಡೆಯುತ್ತದೆ. ಈ ಜ್ಯೂಸ್ ಸೇವನೆ ಜೊತೆ ಡಯಟ್ ಪಾಲಿಸಿದರೆ ಆರೋಗ್ಯಕ್ಕೆ ಒಳ್ಳೆಯದು.

  • ದಾಸವಾಳ ಜ್ಯೂಸ್ ಕುಡಿಯಿರಿ ಆರೋಗ್ಯ ಹೆಚ್ಚಿಸಿಕೊಳ್ಳಿ

    ದಾಸವಾಳ ಜ್ಯೂಸ್ ಕುಡಿಯಿರಿ ಆರೋಗ್ಯ ಹೆಚ್ಚಿಸಿಕೊಳ್ಳಿ

    ಬೇಸಿಗೆಯಲ್ಲಿ ನೀರು ಬಾಯಾರಿಕೆ ಆಗೋದು ಹೆಚ್ಚು. ಆಗ ಬರೀ ನೀರಿಗಿಂತ ತಣ್ಣಗೆ ಇರುವ ಪಾನೀಯ ಸೇವಿಸಲು ಹೆಚ್ಚು ಬಯಸುತ್ತೇವೆ. ಬಾಯಾರಿಕೆ ಕಡಿಮೆ ಮಾಡಲು ತಪ್ಪು ಪಾನೀಯ ಕುಡಿಯಬೇಕು ಎನಿಸಿದಾಗ ಕೆಮಿಕಲ್ ಮಿಶ್ರಿತ ಕೂಲ್ ಡ್ರಿಂಕ್ಸ್ ಕುಡಿಯುವ ಬದಲು ನೈಸರ್ಗಿಕ ಜ್ಯೂಸ್ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯವೂ ಒಳ್ಳೆಯದು. ಅದರಲ್ಲೂ ಬೆಸಿಗೆಯಲ್ಲಿ ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಒಳ್ಳೆದು.

    ಈ ಸ್ಪೆಷಲ್ ಹೆಲ್ತಿ ಜ್ಯೂಸ್ ಮಾಡೋದು ಹೇಗೆ? ಇದರಿಂದ ಆರೋಗ್ಯಕ್ಕೆ ಲಾಭವೇನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

    ಬೇಕಾಗಿರುವ ಸಾಮಗ್ರಿ
    * ದಾಸಾವಾಳದ ಹೂ 20-25
    * ನೀರು 1/4 ಲೀಟರ್
    * ನಿಂಬೆ ಹಣ್ಣು 5-6
    * ಸಕ್ಕರೆ 250ಗ್ರಾಂ

    ಮಾಡುವ ವಿಧಾನ
    ಮೊದಲು 1/4 ಲೀಟರ್ ನೀರನ್ನು ಕುದಿಯಲು ಪಾತ್ರೆಯಲ್ಲಿ ಹಾಕಿ ಸ್ಟವ್ ಮೇಲೆ. ಆ ಬಳಿಕ ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಸಕ್ಕರೆ ಹಾಕಿ. ಸಕ್ಕರೆ ಕರಗಿದ ನಂತರ ಗ್ಯಾಸ್ ಆಫ್ ಮಾಡಿ, ಅದಕ್ಕೆ ದಾಸವಾಳದ ಹೂಗಳ ಎಸಳನ್ನು ಹಾಕಿ(ದಾಸಾವಾಳದ ಹೂ ಹಾಕಿದ ಮೇಲೆ ನೀರನ್ನು ಕುದಿಸಬೇಡಿ), ನೀರು ತಣ್ಣಗಾದ ಮೇಲೆ ಅದನ್ನು ಸೋಸಿ ಅದಕ್ಕೆ ನಿಂಬೆ ರಸ ಸೇರಿಸಿ ಕಲಿಸಿ. ಈ ಮಿಶ್ರಣ 2 ತಿಂಗಳವರೆಗೆ ಚೆನ್ನಾಗಿರುತ್ತದೆ. ಬೇಕಾದಾಗ ಅರ್ಧ ಲೋಟ ಜ್ಯೂಸ್‍ಗೆ ಅರ್ಧ ಲೋಟ ನೀರು ಬಳಸಿ ಮಿಕ್ಸ್ ಮಾಡಿ ಕುಡಿಯಬಹುದು.

    1. ಹೃದಯದ ಆರೋಗ್ಯಕ್ಕೆ ಒಳ್ಳೆಯದು
    ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ದಾಸವಾಳ ಜ್ಯೂಸ್ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕವಾಗುತ್ತದೆ. ಬೊಜ್ಜು ನಿವಾರಕ ಗುಣ ಕೂಡ ಹೊಂದಿದ್ದು, ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೀಗಾಗಿ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ.

    2. ಕೆಮ್ಮು-ಶೀತ ನಿವಾರಿಸುತ್ತೆ
    ಅಲರ್ಜಿ ಸಮಸ್ಯೆ ಇರುವವರಿಗೆ ಬೇಸಿಗೆಯಲ್ಲಿ ಕೆಮ್ಮು-ಶೀತ ಆಗೋದು ಸಾಮಾನ್ಯ. ಆದರೆ ಈ ಸಮಸ್ಯೆಯನ್ನು ನಿವಾರಿಸುವ ಸಾಮಾಥ್ರ್ಯ ದಾಸವಾಳ ಜ್ಯೂಸ್‍ನಲ್ಲಿದೆ. ಈ ಜ್ಯೂಸ್‍ನಲ್ಲಿ ದಾಸವಾಳ ಹೂ ಹಾಗೂ ನಿಂಬೆರಸ ಇರುವುದರಿಂದ ದೇಹಕ್ಕೆ ವಿಟಮಿನ್ ಸಿ ಅಂಶ ಹೆಚ್ಚು ದೊರೆಯುತ್ತದೆ. ಹೀಗಾಗಿ ಇದನ್ನು ಕುಡಿದರೆ ಕೆಮ್ಮು-ಶೀತ ಕಡಿಮೆ ಆಗುತ್ತದೆ.

    3. ಬಿಪಿ ಕಡಿಮೆ ಮಾಡುತ್ತದೆ
    ಅಧಿಕ ರಕ್ತದೊತ್ತಡ ಇರುವವರು ದಾಸವಾಳ ಜ್ಯೂಸ್ ಕುಡಿದರೆ ಒಳ್ಳೆದು. ಇದು ಬಿಪಿ ಹಾಗೂ ಸಂಧಿವಾತ ನೋವು ಕಡಿಮೆಯಾಗುತ್ತದೆ. ದಾಸವಾಳ ಆ್ಯಂಟಿಆಕ್ಸಿಡೆಂಟ್ ಅಂಶವಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಶೂನ್ಯವಾಗಿರುವುದರಿಂದ ಬೊಜ್ಜನ್ನು ಕರಗಿಸುತ್ತದೆ, ದೇಹದ ಆರೋಗ್ಯ ಕಾಪಾಡುತ್ತದೆ.

    4. ದೇಹದ ಉಷ್ಣತೆ ಕಡಿಮೆ ಮಾಡುತ್ತದೆ
    ಬೇಸಿಗೆಯಲ್ಲಿ ದೇಹದ ಉಷ್ಣತೆ ಕಾಪಾಡುವಲ್ಲಿ ದಾಸವಾಳ ಜ್ಯೂಸ್ ಸಹಕಾರಿ. ಇದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ಬಿಳಿ ಬಣ್ಣದ ದಾಸವಾಳ ಹೂ ಜ್ಯೂಸ್ ಕಣ್ಣುಗಳಿಗೆ ತಂಪು ನೀಡುತ್ತದೆ.

    5. ಕೂದಲಿನ ಆರೋಗ್ಯಕ್ಕೆ ಉತ್ತಮ
    ದಾಸವಾಳದ ಹೂ ಹಾಗೂ ಎಲೆ ಕೂದಲನ್ನು ಬಾಹ್ಯವಾಗಿ ಆರೈಕೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿ. ಅದರಲ್ಲೂ ದಾಸವಾಳ ಜ್ಯೂಸ್ ಕುಡಿದರೆ ಆಂತರಿಕವಾಗಿ ಕೂಡ ಕೂದಲಿಗೆ ಪೋಷಣೆ ನೀಡುತ್ತದೆ. ಕೂದಲಿಗೆ ಅಗ್ಯತವಾದ ವಿಟಮಿನ್‍ಗಳನ್ನು ಈ ಜ್ಯೂಸ್ ಒದಗಿಸುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಸಹಕರಿಸುತ್ತದೆ.

    6. ಮೂತ್ರ ನಾಳದ ಸೋಂಕು ನಿವಾರಣೆ
    ಮೂತ್ರ ನಾಳದ ಸೋಂಕು ನಿವಾರಣೆಗೆ ಈ ಜ್ಯೂಸ್ ತುಂಬಾ ಒಳ್ಳೆಯದು. ದೇಹದ ಉಷ್ಣತೆ ಹೆಚ್ಚಾದರೆ ಕೆಲವರಿಗೆ ಮೂತ್ರ ಮಾಡುವಾಗ ಉರಿ ಕಂಡು ಬರುತ್ತದೆ. ಅದನ್ನು ಕಡಿಮೆ ಮಾಡುವಲ್ಲಿ ಎಳನೀರಿನಷ್ಟೇ ಪರಿಣಾಮಕಾರಿಯಾಗಿ ದಾಸವಾಳ ಜ್ಯೂಸ್ ಕೂಡ ಕೆಲಸ ಮಾಡುತ್ತದೆ. ಮಹಿಳೆಯರಿಗೆ ಕಾಡುವ ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಕೂಡ ದಾಸವಾಳ ಜ್ಯೂಸ್ ಉಪಯುಕ್ತವಾಗಿದೆ. ಆದರೆ ಗರ್ಭಣಿಯರು ಹಾಗೂ ಈಗಾಗಲೇ ಅನಾರೋಗ್ಯಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವ ಮಂದಿ ಈ ಜ್ಯೂಸ್ ಕುಡಿಯಬಾರದು.

  • ಪಾಲಾಕ್‍ನಿಂದ ಚಿಕನ್‍ವರೆಗೆ – ನಿಮ್ಮ ಅಡುಗೆ ಮನೆಯಲ್ಲಿ ಆರೋಗ್ಯಕರ ಆಹಾರ ಪದಾರ್ಥಗಳು

    ಪಾಲಾಕ್‍ನಿಂದ ಚಿಕನ್‍ವರೆಗೆ – ನಿಮ್ಮ ಅಡುಗೆ ಮನೆಯಲ್ಲಿ ಆರೋಗ್ಯಕರ ಆಹಾರ ಪದಾರ್ಥಗಳು

    ರೋಗ್ಯಕರ ಜೀವನ ಶೈಲಿಯನ್ನು ಕಾಪಾಡಿಕೊಳ್ಳಲು ಪ್ರೋಟೀನ್ ಒಳಗೊಂಡ ಆಹಾರ ಪದಾರ್ಥಗಳು ತುಂಬಾ ಉಪಯುಕ್ತವಾಗುತ್ತವೆ. ಅದೇ ರೀತಿ ನಮ್ಮ ಆರೋಗ್ಯದ ಮೇಲೆ ಕೆಲ ಋಣಾತ್ಮಕ ಅಂಶಗಳು ಕೂಡ ಬಹಳ ಪರಿಣಾಮವನ್ನು ಬೀರುತ್ತವೆ. ನಾವು ಆರೋಗ್ಯವಂತರಾಗಿರಬೇಕೆಂದು ಯೋಚಿಸದೆ ಅದಕ್ಕೆ ಪೂರಕವಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಅವಲಂಬಿಸಬೇಕಾಗುತ್ತದೆ. ಒಂದು ಸಣ್ಣ ತೊಡಕಿನಿಂದ ಅಥವಾ ಒಂದು ಆಹಾರ ಪದಾರ್ಥದಿಂದ ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುವ ಸಾಧ್ಯತೆಯೂ ಹೆಚ್ಚಿರುತ್ತದೆ.

    ಇದನ್ನ ಹೊರತು ಪಡಿಸಿ ನಮ್ಮ ಅಡುಗೆ ಮನೆಗಳಲ್ಲಿ ಸಾಕಷ್ಟು ಉತ್ತಮ ಆಹಾರ ಪದಾರ್ಥಗಳು ಲಭ್ಯವಿರುತ್ತದೆ. ಅವುಗಳಲ್ಲಿ ಕೆಲವು ಫೈಬರ್ ಮತ್ತು ಸೂಕ್ಷ್ಮ ಪೋಷಕಾಂಶಗಳಿಂದಲೂ ಸಮೃದ್ಧವಾಗಿರುತ್ತವೆ. ಆ ಆರೋಗ್ಯಯುತ ಆಹಾರ ಪದಾರ್ಥಗಳಾವುವು? ಮತ್ತು ಅವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ….

    ಪಾಲಾಕ್ ಸೊಪ್ಪು: ಆರೋಗ್ಯಕರ ಆಹಾರ ಪದಾರ್ಥದ ಪಟ್ಟಿಯಲ್ಲಿ ಪಾಲಕ್ ಸೊಪ್ಪು ಅಗ್ರಸ್ಥಾನದಲ್ಲಿದೆ. ಈ ಪದಾರ್ಥ ಫೈಬರ್ ನಲ್ಲಿ ಮಾತ್ರವಲ್ಲ, ಬೀಟಾ ಕ್ಯಾರೋಟಿನ್, ವಿಟಮಿನ್ ಕೆ, ಮ್ಯಾಂಗನೀಸ್, ಫೋಲೇಟ್, ಕಬ್ಬಿಣ, ಕಾಪರ್, ಕ್ಯಾಲ್ಸಿಯಂ, ಪೋಟ್ಯಾಷಿಯಮ್ ಮತ್ತು ವಿಟಮಿನ್ ಸಿಯಂತಹ ಸೂಕ್ಷ್ಮ ಪೋಷಕಾಂಶಗಳನ್ನೂ ಸಹ ಹೊಂದಿದೆ. ಇವೆಲ್ಲವೂ ದೇಹದ ಚಯಾಪಚಯ ಪ್ರಕ್ರಿಯೆ, ಪ್ರತಿರಕ್ಷಣಾ ವ್ಯವಸ್ಥೆ ಮತ್ತು ತೂಕ ನಿರ್ವಹಣೆ ಮಾಡುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಪಾಲಾಕ್ ಸೊಪ್ಪನ್ನು ನಿಂಬೆ ಅಥವಾ ಕಿತ್ತಳೆ ರಸದ ಜೊತೆಗೆ ಸೇವಿಸಿದರೆ ವಿಟಮಿನ್ ಸಿಯ ಅನುಕೂಲವನ್ನೂ ಪಡೆಯಬಹುದು.

    ಸೇಬು: ಸೇಬು ಹಣ್ಣಿನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‍ಗಳು ಅಧಿಕವಾಗಿದ್ದು, ಇದು ಅತ್ಯಂತ ಆರೋಗ್ಯಕರ ಆಹಾರಗಳಲ್ಲಿ ಒಂದಾಗಿದೆ. ದಿನಕ್ಕೆ ಒಂದು ಸೇಬು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವ ಪಾತ್ರವನ್ನು ವಹಿಸುತ್ತದೆ. ಸೇಬುಗಳನ್ನು ಸೇವಿಸಲು ಉತ್ತಮ ಸಮಯವೆಂದರೆ ಲಘು ಆಹಾರ, ಉಪಾಹಾರದ ನಂತರ ಮತ್ತು ಊಟದ ಮೊದಲು.

    ಬೆಳ್ಳುಳ್ಳಿ: ಬೆಳ್ಳುಳ್ಳಿ ಅನೇಕ ನಿತ್ಯ ಜೀವನದಲ್ಲಿ ಉತ್ತಮವಾದ ಆರೋಗ್ಯ ಕಾಪಾಡುವ ಮೂಲಕ ನಾವು ಅದರಿಂದ ಹೆಚ್ಚಿನ ಪ್ರಮಾಣದ ಸೂಕ್ಷ್ಮ ಪೋಷಕಾಂಶಗಳನ್ನು ಕಾಣಬಹುದು. ಬೆಳ್ಳುಳ್ಳಿಯಲ್ಲಿ ಕಂಡುಬರುವ ಆ್ಯಂಟಿಆಕ್ಸಿಡೆಂಟ್ ಆಲಿಸಿನ್ ಉರಿಯೂತವನ್ನು ಕಡಿಮೆ ಮಾಡುವುದಲ್ಲದೆ ಹೃದಯ ಕಾಯಿಲೆ ಮತ್ತು ಕ್ಯಾನ್ಸರ್ ಮುಂತಾದ ಪರಿಸ್ಥಿತಿಗಳನ್ನು ತಡೆಯಲು ಸಹಾಯ ಮಾಡುತ್ತದೆ.

    ಅರಿಶಿಣ: ಅರಿಶಿಣ ಮತ್ತೊಂದು ಆರೋಗ್ಯಕರ ಆಹಾರ ಪದಾರ್ಥವಾಗಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರಿಶಿಣದಲ್ಲಿ ಆ್ಯಂಟಿಆಕ್ಸಿಡೆಂಟ್‍ನ ಹೆಸರಿನ ಕರ್ಕ್ಯುಮಿನ್ ಕಂಡುಬರುತ್ತದೆ. ಇದರಿಂದ ಕ್ಯಾನ್ಸರ್, ಹೃದ್ರೋಗ, ಸಂಧಿವಾತ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ.

    ಆವಕಾಡೊ: ಕೀಟೋ ಡಯಟ್‍ಗೋಸ್ಕರ ಜನರು ವ್ಯಾಪಕವಾಗಿ ಸೇವಿಸುವ ಆವಕಾಡೊವನ್ನು ದೇಹಕ್ಕೆ ಉತ್ತಮ ಕೊಬ್ಬಿನಿಂದ ತುಂಬಿದೆ. ಈ ಹಣ್ಣಿನಲ್ಲಿರುವ ಕಡಿಮೆ ಸಕ್ಕರೆ ಅಂಶವು ಪ್ರಕೃತಿಯಲ್ಲಿ ವಿಶಿಷ್ಟತೆಯನ್ನುಂಟು ಮಾಡುತ್ತದೆ. ಇದನ್ನು ಫ್ರೂಟ್ ಸಲಾಡ್‍ಗಳು ಅಥವಾ ಇತರ ಸುಲಭ ಆಹಾರ ಪದಾರ್ಥಗಳಲ್ಲಿ ಬಳಸಬಹುದು.

    ಚಿಕನ್ ಬ್ರೆಸ್ಟ್: ಮೂಳೆಗಳಿಲ್ಲದ ಚಿಕನ್ ಎದೆಯು 31 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಪ್ರಮುಖವಾದ ಪದಾರ್ಥಗಳಲ್ಲಿ ಒಂದಾಗಿದೆ. ಇದರಿಂದ ದೊರೆಯುವ ಪೋಷಕಾಂಶ ಉತ್ತಮ ಗುಣಮಟ್ಟದ್ದಾಗಿದೆ. ಇದು ನಮ್ಮ ದೈನಂದಿನ ಪೋಷಕಾಂಶದ ಶೇ. 50 ರಷ್ಟು ಪೂರೈಸಲು ಸಹಾಯ ಮಾಡುತ್ತದೆ. ಬೇಯಿಸಿದ ಅಥವಾ ಹುರಿದ ಚಿಕನ್ ಬ್ರೆಸ್ಟ್ ಊಟದ ಒಂದು ಭಾಗವಾಗಿ ಸೇವಿಸಬಹುದು. ಜೊತೆಗೆ ಸಣ್ಣ ಸಣ್ಣ ಪೀಸ್ ರೂಪದಲ್ಲಿ ಸೂಪ್ ಮತ್ತು ಸಲಾಡ್‍ಗಳ ರೂಪದಲ್ಲಿಯೂ ಸೇವಿಸಬಹುದು.

    ಮೊಟ್ಟೆ: ಮೊಟ್ಟೆ ನಮ್ಮ ನಿತ್ಯ ಆಹಾರ ಪದ್ಧತಿಯಲ್ಲಿ ದೇಹಕ್ಕೆ ಉತ್ತಮ ಪೋಷಕಾಂಶವನ್ನು ಒದಗಿಸುವ ಒಂದು ಪದಾರ್ಥವಾಗಿದೆ. ಇದು ನಮ್ಮ ದೇಹಕ್ಕೆ ಬೇಕಾದ ಎಲ್ಲ ಅಗತ್ಯ ಅಮೈನೋ ಆಮ್ಲಗಳು, ಜೀವಸತ್ವಗಳು ಮತ್ತು ಮಿನರಲ್‍ಗಳನ್ನು ಪರಿಪೂರ್ಣ ಪ್ರಮಾಣದಲ್ಲಿ ಒದಗಿಸುತ್ತದೆ. ಮೊಟ್ಟೆಯ ಹಳದಿ ಲೊಳೆಯಲ್ಲಿರುವ ಕೊಲೆಸ್ಟ್ರಾಲ್ ರಕ್ತದ ಕೊಲೆಸ್ಟ್ರಾಲ್ ಹೆಚ್ಚಿಸಲು ಕಾರಣವಲ್ಲ ಎಂದು ಇತ್ತೀಚಿನ ಅಧ್ಯಯನಗಳು ತೋರಿಸಿವೆ. ಆದ್ದರಿಂದ ಸಂಪೂರ್ಣ ಮೊಟ್ಟೆಯನ್ನು ಸೇವಿಸುವುದು ದೇಹಕ್ಕೆ ಸುರಕ್ಷಿತವಾಗಿದೆ. ಬೆಳಗಿನ ಉಪಹಾರದ ಜೊತೆ ಮೊಟ್ಟೆಯನ್ನು ಸೇವಿಸುವುದು ಉತ್ತಮ.

    ಕ್ಯಾರೆಟ್: ಕ್ಯಾರೆಟ್ ಸಲಾಡ್‍ಗಳಲ್ಲಿ ಮತ್ತು ಊಟದಲ್ಲೂ ಸಾಮಾನ್ಯ ಪದಾರ್ಥವಾಗಿದೆ. ಇದು ಹೆಚ್ಚು ರುಚಿಕರ ಮಾತ್ರವಲ್ಲ, ವಿಟಮಿನ್ ಎಯ ಬೀಟಾ ಕ್ಯಾರೋಟಿನ್ ಅನ್ನು ಒಳಗೊಂಡಿದೆ. ಅಲ್ಲದೆ ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು ಇದು ಅತ್ಯಂತ ಆರೋಗ್ಯಕರವಾಗಿದೆ. ಕ್ಯಾರೆಟ್‍ನ್ನು ಹಸಿಯಾಗಿ ಅಥವಾ ಅರ್ಧ ಬೇಯಿಸಿ ತಿನ್ನಲು ಯೋಗ್ಯವಾಗಿರುತ್ತದೆ.

    ಕೋಸುಗಡ್ಡೆ: ಹಸಿಯಾಗಿ ಮತ್ತು ಬೇಯಿಸಿದ ಎರಡೂ ಶೈಲಿಯಲ್ಲೂ ಕೋಸುಗಡ್ಡೆ ಹೆಚ್ಚು ರುಚಿಯಾಗಿರುತ್ತದೆ. ಇದು ಫೈಬರ್, ವಿಟಮಿನ್ ಕೆ ಮತ್ತು ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದೆ ಮತ್ತು ಇತರ ತರಕಾರಿಗಳಿಗೆ ಹೋಲಿಸಿದರೆ ಯೋಗ್ಯ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿದೆ.

    ನೆಲ್ಲಿಕಾಯಿ: ನೆಲ್ಲಿಕಾಯಿ ಸೇವನೆಯಿಂದ ಉತ್ತಮ ಆರೋಗ್ಯ ಮಾತ್ರವಲ್ಲದೆ, ದೇಹಕ್ಕೆ ಉತ್ತಮವಾದ ಪೋಷಕಾಂಶವನ್ನು ಒದಗಿಸುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನೆಲ್ಲಿಕಾಯಿ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಇರುವ ವಿಟಮಿನ್ ‘ಸಿ’ಗಿಂತ ಅತಿ ಹೆಚ್ಚು ಪ್ರಮಾಣದ ವಿಟಮಿನ್ ‘ಸಿ’ಯನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಳಗಿನ ಜಾವ ನೆಲ್ಲಿಕಾಯಿಯನ್ನು ಸೇವಿಸುವುದು ಉತ್ತಮ.

    ಮೊಸರು: ಹಾಲಿನಂತೆ ಮೊಸರು ಕೂಡ ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಮೊಸರು ಹಾಲಿಗೆ ಹೋಲಿಸಿದರೆ ಸುಲಭವಾಗಿ ದೇಹದಲ್ಲಿ ಜೀರ್ಣವಾಗುತ್ತದೆ. ಮೊಸರಿನಲ್ಲಿರುವ ಪ್ರೋಬಯಾಟಿಕ್‍ಗಳು ದೇಹದ ಜೀರ್ಣಕ್ರಿಯೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದದ ಪ್ರಕಾರ ಮೊಸರನ್ನು ರಾತ್ರಿಯ ಸಮಯದಲ್ಲಿ ಸೇವಿಸುವುದು ಒಳ್ಳೆಯದಲ್ಲ, ಬದಲಿಗೆ ರಾತ್ರಿ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಸೇವಿಸಬಹುದು.

    ನಟ್ಸ್ (ಬೀಜಗಳು): ನಟ್ಸ್ ಗಳು ಹಲವಾರು ಸೂಕ್ಷ್ಮ ಪೋಷಕಾಂಶಗಳಿಂದ ಕೂಡಿರುತ್ತವೆ. ಹಗಲಿನಲ್ಲಿ ಸಣ್ಣ ಹಸಿವಿನ ನೋವನ್ನು ನಿಗ್ರಹಿಸಲು ನೀವು ಬಾದಾಮಿ, ವಾಲ್ ನಟ್ಸ್, ಪಿಸ್ತಾ, ಗೋಡಂಬಿ ಮುಂತಾದ ನಟ್ಸ್ ಗಳನ್ನು ಸೇವಿಸಹುದು.

    ಫ್ಲಾಕ್ಸ್ ಸೀಡ್ಸ್ (ಅಗಸೆಬೀಜ): ಫ್ಲಾಕ್ಸ್ ಸೀಡ್ಸ್ ಮಾನವನ ದೇಹಕ್ಕೆ ಅತ್ಯಂತ ಆರೋಗ್ಯಕರವಾಗಿರುವ ಪದಾರ್ಥ. ಒಮೆಗಾ-3 ಕೊಬ್ಬಿನ ಆಮ್ಲಗಳನ್ನು ಹೆಚ್ಚಾಗಿ ಒಳಗೊಂಡಿದೆ. ಇದು ಹೃದಯಕ್ಕೆ ಅತ್ಯಂತ ಪೋಷಕಾಂಶವನ್ನು ಒದಗಿಸುವ ಆಹಾರದಲ್ಲಿ ಒಂದಾಗಿದೆ. ಹುರಿದ ಫ್ಲಾಕ್‍ಸೀಡ್‍ನ ಪುಡಿ ರುಚಿಯಲ್ಲಿ ಉತ್ತಮವಾಗಿರುತ್ತದೆ. ಆದನ್ನು ದಾಲ್, ಸೂಪ್, ಸಲಾಡ್ ಮತ್ತು ಮಜ್ಜಿಗೆ ಜೊತೆ ಸೇರಿಸಿ ಸವಿಯಬಹುದು.

    ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿ ಆರೋಗ್ಯಕರ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದೆ. ತೆಂಗಿನ ಎಣ್ಣೆಯಲ್ಲಿ ಕೊಬ್ಬು ಕರಗಿಸುವ ಗುಣವಿದೆ ಎಂದು ಅಧ್ಯಯನಗಳು ತೋರಿಸಿವೆ. ಜೊತೆಗೆ ರಕ್ತದಲ್ಲಿ ಎಚ್‍ಡಿಎಲ್ ಮಟ್ಟವನ್ನು ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ ಚರ್ಮದ ಆರೋಗ್ಯಕ್ಕೂ ಸಹಕಾರಿಯಾಗಿದೆ.

    ಡೇಟ್ಸ್ (ಕರ್ಜೂರ): ಮಾನವನ ತ್ವರಿತ ಶಕ್ತಿಗಾಗಿ ಡೇಟ್ಸ್ ಅತ್ಯುತ್ತಮ ಆಹಾರವಾಗಿದೆ. ಈ ಸಣ್ಣ ನೈಸರ್ಗಿಕ ಪದಾರ್ಥ ಕಬ್ಬಿಣದ ಅಂಶದಿಂದ ಕೂಡಿದೆ. ಶುಗರ್ ಲೆವೆಲ್ ಏರಿಳಿತವನ್ನು ಸರಿಪಡಿಸಲು ಈ ಪದಾರ್ಥವನ್ನು ಸೇವಿಸಲು ಹೆಚ್ಚಾಗಿ ಎಲ್ಲರೂ ಸಲಹೆ ನೀಡುತ್ತಾರೆ. ಡೇಟ್ಸ್ ನ್ನು ವರ್ಕ್ಔಟ್ ಪೂರ್ವ ಆಹಾರವಾಗಿಯೂ ಸೇವಿಸಬಹುದು.

    ಕ್ವಿನೋವಾ (ನವಣೆ ಅಕ್ಕಿ): ಕ್ವಿನೋವಾ ಅಂಟು ರಹಿತವಾದ ಒಂದು ಆರೋಗ್ಯಕರ ಆಹಾರ ಪದಾರ್ಥ. ಹೆಚ್ಚಿನ ಪ್ರೋಟೀನ್ ಮತ್ತು ಹೆಚ್ಚಿನ ಫೈಬರ್ ಧಾನ್ಯವನ್ನು ನಮ್ಮ ದೈನಂದಿನ ಪೋಷಕಾಂಶ ಅಗತ್ಯತೆಗಳನ್ನು ಪೂರೈಸಲು ದಿನದಲ್ಲಿ ಯಾವುದೇ ಸಮಯದಲ್ಲಿ ಇದನ್ನು ತಿನ್ನಬಹುದು. ಕ್ವಿನೋವಾ ಗಂಜಿ, ಪಲಾವ್, ಸಲಾಡ್ ಮಾಡಿಕೊಂಡು ಸೇವಿಸಬಹುದು. ಜೊತೆಗೆ ಇದು ಅತ್ಯಂತ ರುಚಿಕರ ಮತ್ತು ಆರೋಗ್ಯಕರ.

    ನಮ್ಮ ಆರೋಗ್ಯ ಮತ್ತು ಫಿಟ್ನೆಸ್ ಮಟ್ಟವನ್ನು ಕಾಪಾಡಿಕೊಳ್ಳಲು ಬೇಡದಿರುವಆಹಾರ ಪದಾರ್ಥಗಳನ್ನು ನಿತ್ಯ ಜೀವದಿಂದ ಹೊರತೆಗೆಯಿರಿ. ಈ ಆರೋಗ್ಯಕರ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಿ.

  • ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರ- ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಬೆಂಗಳೂರು: ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದೀಗ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಬುಲೆಟ್ ಪ್ರಕಾಶ್ ಶನಿವಾರ ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.

    ಇದುವರೆಗೆ ಮೂರು ಆಸ್ಪತ್ರೆಯನ್ನು ಬದಲಿಸಿರುವ ಬುಲೆಟ್ ಪ್ರಕಾಶ್ ಶನಿವಾರ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಇದೀಗ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಲಿವರ್ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಕಾಶ್, ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿದೆ. ಹೀಗಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ. ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಕೃತಕ ಉಸಿರಾಟ ಸಾಧನದಿಂದ ಉಸಿರಾಡುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತಾ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.