Tag: health

  • ತಂದೆ ಸಂಗೀತ ಕೇಳ್ತಾ, ತಾಳಕ್ಕೆ ತಕ್ಕಂತೆ ಕೈಯಾಡಿಸ್ತಿದ್ದಾರೆ: ಎಸ್‍ಪಿಬಿ ಪುತ್ರ

    ತಂದೆ ಸಂಗೀತ ಕೇಳ್ತಾ, ತಾಳಕ್ಕೆ ತಕ್ಕಂತೆ ಕೈಯಾಡಿಸ್ತಿದ್ದಾರೆ: ಎಸ್‍ಪಿಬಿ ಪುತ್ರ

    ಚೆನ್ನೈ: ಹಿರಿಯ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಅಪ್ಪ ಸಂಗೀತ ಕೇಳುತ್ತಿದ್ದಾರೆ. ಜೊತೆಗೆ ತಾಳಕ್ಕೆ ತಕ್ಕಂತೆ ಕೈಯಾಡಿಸುತ್ತಿದ್ದಾರೆ ಎಂದು ಅವರ ಪುತ್ರ ಚರಣ್ ಅವರು ಮಾಹಿತಿ ನೀಡಿದ್ದಾರೆ.

    ಅಗಸ್ಟ್ 5ರಂದು ಕೊರೊನಾ ಸೋಂಕಿಗೆ ತುತ್ತಾಗಿದ್ದ ಎಸ್‍ಪಿಬಿಯವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಸ್ವಲ್ಪ ಗಂಭೀರವಾಗಿತ್ತು. ಆದರೆ ಕಳೆದ ನಾಲ್ಕು ದಿನಗಳಿಂದ ಎಸ್‍ಪಿಬಿಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಇಂದು ಅವರು ನಿನ್ನೆಗಿಂತ ಹೆಚ್ಚು ಗುಣಮುಖರಾಗಿದ್ದಾರೆ ಎಂದು ಅವರ ಪುತ್ರ ಚರಣ್ ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಮಾಡಿದ್ದಾರೆ.

    https://www.instagram.com/p/CEWl_Qjhbsa/

    ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಚರಣ್, ತಂದೆಯ ಆರೋಗ್ಯ ನಿನ್ನೆಗಿಂತ ಇಂದು ಹೆಚ್ಚು ಸುಧಾರಣೆಗೊಂಡಿದೆ. ಅವರ ಶ್ವಾಸಕೋಶಗಳು ಉತ್ತಮ ಸ್ಥಿತಿಗೆ ಮರುಳುತ್ತಿವೆ ಎಂದು ಎಂಜಿಎಂ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಜೊತೆಗೆ ತಂದೆ ಆರೋಗ್ಯವಾಗಿದ್ದು, ನನಗೆ ಏನ್ನನ್ನೋ ಬರೆದು ಹೇಳಲು ಬಂದರು. ಆದರೆ ಅವರ ಕೈಯಲ್ಲಿ ಪೆನ್ ಹಿಡಿದುಕೊಳ್ಳಲು ಆಗಲಿಲ್ಲ. ಇನ್ನೂ ಒಂದು ವಾರದಲ್ಲಿ ತಂದೆ ಸಂಪೂರ್ಣ ಗುಣಮುಖರಾಗುತ್ತಾರೆ ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.

    ಅಪ್ಪ ಇನ್ನೂ ವೆಂಟಿಲೇಟರ್ ನಲ್ಲೇ ಇದ್ದಾರೆ. ಆದರೆ ಅವರ ಆರೋಗ್ಯದಲ್ಲಿ ಬಹಳ ಚೇತರಿಕೆ ಕಂಡಿದೆ. ಅವರು ಸಂಗೀತವನ್ನು ಕೇಳುತ್ತಿದ್ದಾರೆ. ತಾಳಕ್ಕೆ ತಕ್ಕಂತೆ ಕೈಯಾಡಿಸುತ್ತಿದ್ದಾರೆ. ಕಳೆದ ಎರಡು ದಿನಗಳಿಗಿಂತ ಅಪ್ಪ ಇಂದು ಬಹಳ ಚೇತರಿಸಿಕೊಂಡಿದ್ದಾರೆ. ಅಪ್ಪನ ಆರೋಗ್ಯಕ್ಕಾಗಿ, ಅವರು ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಚರಣ್ ಇನ್‍ಸ್ಟಾಗ್ರಾಮ್‍ನಲ್ಲಿ ತಿಳಿಸಿದ್ದಾರೆ.

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡಿದ್ದವು. ಕೊರೊನಾ ಸೋಂಕು ತಗಲಿ ಅವರ ಶ್ವಾಸಕೋಶಗಳಿಗೆ ಹಾನಿಯಾಗಿತ್ತು.

  • ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲು

    ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲು

    ನವದೆಹಲಿ: ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಚಿವರು ಶ್ವಾಸಕೋಶ ಸಮಸ್ಯೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಫೋರ್ಟಿಸ್ ಎಸ್ಕೋರ್ಟ್ಸ್ ಹಾರ್ಟ್ ಇನ್ಸ್ ಸ್ಟಿಟ್ಯೂಟ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿ ಸುಧಾರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಪಾಸ್ವಾನ್ ಅವರಿಗೆ ಈ ಮೊದಲೇ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದು, 2017ರಲ್ಲಿ ಲಂಡನ್ ನಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಚಿವರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಈ ಹಿನ್ನೆಲೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಿ, ಚಿಕಿತ್ಸೆಗಳನ್ನು ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ಕ್ಷಣ ಕ್ಷಣಕ್ಕೂ ಕ್ಷೀಣಿಸ್ತಿದೆ ಎಸ್‍ಪಿಬಿ ಆರೋಗ್ಯ – ಅಂತಾರಾಷ್ಟ್ರೀಯ ವೈದ್ಯರಿಂದ ಚಿಕಿತ್ಸೆ

    ಕ್ಷಣ ಕ್ಷಣಕ್ಕೂ ಕ್ಷೀಣಿಸ್ತಿದೆ ಎಸ್‍ಪಿಬಿ ಆರೋಗ್ಯ – ಅಂತಾರಾಷ್ಟ್ರೀಯ ವೈದ್ಯರಿಂದ ಚಿಕಿತ್ಸೆ

    ಚೆನ್ನೈ: ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಗಂಭೀರ ಸ್ಥಿತಿ ತಲುಪಿದ್ದು, ಅವರಿಗೆ ಅಂತಾರಾಷ್ಟ್ರೀಯ ವೈದ್ಯರ ತಂಡದಿಂದ ಚಿಕಿತ್ಸೆ ಕೊಡಿಸಲಾಗುತ್ತದೆ.

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೈದ್ಯರ ತಂಡಗಳು ಎಸ್‍ಬಿಪಿಗೆ ಚಿಕಿತ್ಸೆ ನೀಡುತ್ತಿವೆ.

    ಕಳೆದ 17 ದಿನಗಳಿಂದ ಎಸ್‍ಪಿಬಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಏಳು ದಿನಗಳಿಂದ ಅವರ ಆರೋಗ್ಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತದೆ. ಕೊರೊನಾ ವೈರಸ್‍ನಿಂದ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗಿರುವ ಹಿನ್ನೆಲೆಯಲ್ಲಿ ರಕ್ತಸ್ರಾವ ಹೆಚ್ಚಾಗಿದೆ. ಆದ್ದರಿಂದ ಎಕ್ಮೋ ಮೆಷಿನ್ ಅಳವಡಿಸಿ ಚಿಕಿತ್ಸೆ ಮಾಡಲಾಗುತ್ತಿದೆ. ವೆಂಟಿಲೇಟರ್ ಮತ್ತು ಎಕ್ಮೋ ಮೆಷಿನ್ ಸಪೋರ್ಟ್‍ನಿಂದ ಎಸ್‍ಪಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ.

    ಎಸ್‍ಪಿಬಿ ಜೊತೆಗೆ ಅವರ ಪತ್ನಿ ಸಾವಿತ್ರಿಯವರಿಗೂ ಕೂಡ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಅವರನ್ನು ಕೂಡ ಎಸ್‍ಪಿಬಿಯವರು ದಾಖಲಾಗಿರುವ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಎಸ್‍ಪಿಬಿಯವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದು ಅವರು ಬೇಗ ಗುಣಮುಖರಾಗಲಿ ಎಂದು ಇಡೀ ದೇಶದ್ಯಾಂತ ಅವರ ಅಭಿಮಾನಿಗಳು ಪ್ರಾರ್ಥನೆ ಶುರು ಮಾಡಿದ್ದಾರೆ. ಜೊತೆಗೆ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಹುಷಾರಾಗಲಿ ಎಂದು ಬೇಗ ಗುಣಮುಖರಾಗಿ ಎಸ್‍ಪಿಬಿ ಸರ್ ಎಂದು ಗುರುವಾರ ಟ್ಟಿಟ್ಟರ್ ನಲ್ಲಿ ಟ್ರೆಂಡ್ ಮಾಡಲಾಗಿತ್ತು. ಸೆಲೆಬ್ರಿಟಿಗಳು ಸೇರಿದಂತೆ ಎಸ್‍ಪಿಬಿಯವರ ಸಾವಿರಾರು ಅಭಿಮಾನಿಗಳು ಟ್ವೀಟ್ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು.

  • ಎಸ್‍ಪಿಬಿ ಆರೋಗ್ಯ ಗಂಭೀರ – ದೇಶಾದ್ಯಂತ ಚೇತರಿಕೆಗಾಗಿ ಪ್ರಾರ್ಥನೆ

    ಎಸ್‍ಪಿಬಿ ಆರೋಗ್ಯ ಗಂಭೀರ – ದೇಶಾದ್ಯಂತ ಚೇತರಿಕೆಗಾಗಿ ಪ್ರಾರ್ಥನೆ

    ಚೆನ್ನೈ: ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

    ಕಳೆದ ಆಗಸ್ಟ್ 5ರಂದು ಎಸ್‍ಪಿಬಿ ಅವರಿಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

    ಎಸ್‍ಪಿಬಿಯವರ ಆರೋಗ್ಯ ಗಂಭೀರವಾಗುತ್ತಿದಂತೆ ಅವರು ಬೇಗ ಗುಣಮುಖರಾಗಲಿ ಎಂದು ಇಡೀ ದೇಶದ್ಯಾಂತ ಅವರ ಅಭಿಮಾನಿಗಳು ಪ್ರಾರ್ಥನೆ ಶುರು ಮಾಡಿದ್ದಾರೆ. ಜೊತೆಗೆ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಹುಷಾರಾಗಲಿ ಎಂದು ಬೇಗ ಗುಣಮುಖರಾಗಿ ಎಸ್‍ಪಿಬಿ ಸರ್ ಎಂದು ಟ್ಟಿಟ್ಟರ್ ನಲ್ಲಿ ಟ್ರೆಂಡ್ ಮಾಡಲಾಗಿದೆ. ಸೆಲಿಬ್ರಟಿಗಳು ಸೇರಿದಂತೆ ಎಸ್‍ಪಿಬಿಯವರ ಸಾವಿರಾರು ಅಭಿಮಾನಿಗಳು ಟ್ವೀಟ್ ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು, ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅವರು ಗುಣಮುಖರಾಗಿ ಬಂದು ಅವರ ಅದ್ಭುತ ಕಂಠದಿಂದ ನಮ್ಮನ್ನು ರಂಜಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ಜೊತೆಗೆ ತಮಿಳು ನಟ ಕಾರ್ತಿಯವರು ಟ್ವೀಟ್ ಮಾಡಿ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ.

    ಕಳೆದ ಶುಕ್ರವಾರವಷ್ಟೇ ಎಸ್‍ಪಿಬಿ ಆರೋಗ್ಯದಲ್ಲಿ ಭಾರೀ ಏರುಪೇರು ಕಂಡಿದ್ದು, ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು. ನಂತರ ಭಾನುವಾರ ಎಸ್‍ಪಿಬಿ ಪುತ್ರ ಎಸ್‍ಪಿ ಚರಣ್ ತಂದೆಯ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿ, ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸದ್ಯ ಅವರು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದಾರೆ ಎಂದು ತಿಳಿಸಿದ್ದರು. ಈಗ ಮತ್ತೆ ಇಂದು ಎಸ್‍ಪಿಬಿಯವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಗಂಭೀರ – ಪುತ್ರಿಯಿಂದ ಭಾವನಾತ್ಮಕ ಪತ್ರ

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಗಂಭೀರ – ಪುತ್ರಿಯಿಂದ ಭಾವನಾತ್ಮಕ ಪತ್ರ

    ನವದೆಹಲಿ : ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆಗಳು ಕಂಡು ಬಂದಿಲ್ಲ, ಚಿಂತಾಜನಕ ಪರಿಸ್ಥಿತಿ ಮುಂದುವರಿದಿದೆ ಎಂದು ಸೇನಾ ಸಂಶೋಧನಾ ಮತ್ತು ರೆಫರಲ್ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ. ಪ್ರಣಬ್ ಮುಖರ್ಜಿ ಪುತ್ರಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

    ಸದ್ಯ ಪ್ರಣಬ್ ಮುಖರ್ಜಿ ಅವರು ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಚಿಕಿತ್ಸೆ ಪೂರಕವಾದ ಸ್ಪಂದನೆ ಪೂರ್ಣ ಪ್ರಮಾಣದಲ್ಲಿ ದೊರಕುತ್ತಿಲ್ಲ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ಆರೋಗ್ಯ ವರದಿಯಲ್ಲಿ ಉಲ್ಲೇಖಿಸಿದೆ.

    ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಸ್ತಾ ಮುಖರ್ಜಿ ಟ್ವಿಟರ್ ನಲ್ಲಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ದೇವರು ಉತ್ತಮ ಮಾರ್ಗವನ್ನೇ ತೋರಿಸುತ್ತಾನೆ ಅದನ್ನು ಸ್ವೀಕರಿಸುವ ಶಕ್ತಿಯನ್ನು ದಯಪಾಲಿಸಲಿದ್ದಾನೆ. ಕಳೆದ ವರ್ಷ ಅಗಸ್ಟ್ 8 ರಂದು ಭಾರತ ರತ್ನ ಗೌರವ ನೀಡಲಾಗಿತ್ತು. ಇದು ಜೀವನ ಅತ್ಯಂತ ಖುಷಿಯ ಕ್ಷಣವಾಗಿತ್ತು. ಇದಾಗಿ ಸರಿಯಾಗಿ ಒಂದು ವರ್ಷಕ್ಕೆ ಅಗಸ್ಟ್ 10 ರಿಂದ ಅವರ ಆರೋಗ್ಯ ಗಂಭೀರವಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

    84 ವರ್ಷದ ಪ್ರಣಬ್ ಮುಖರ್ಜಿ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಆಸ್ಪತ್ರೆ ದಾಖಲಿಸಲಾಗಿತ್ತು. ಇದೇ ವೇಳೆ ಅವರಿಗೆ ಮೆದುಳು ಸಂಬಂಧಿಸಿದ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಬಂದ ಹಿನ್ನೆಲೆ ಆಪರೇಷನ್ ಕೂಡಾ ಮಾಡಲಾಗಿದ್ದು ಸದ್ಯ ಆರೋಗ್ಯ ತೀವ್ರ ಗಂಭೀರ ಪರಿಸ್ಥಿತಿಯಲ್ಲಿದೆ.

  • ಬಿಎಸ್‍ವೈಗೆ ಮುಂದಿನ ದಿನಗಳಲ್ಲಿ ಅನಾರೋಗ್ಯ ಕಾಡದಂತೆ ಪೂಜೆ

    ಬಿಎಸ್‍ವೈಗೆ ಮುಂದಿನ ದಿನಗಳಲ್ಲಿ ಅನಾರೋಗ್ಯ ಕಾಡದಂತೆ ಪೂಜೆ

    ಶಿವಮೊಗ್ಗ: ಈಗಾಗಲೇ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಯಾವುದೇ ಅನಾರೋಗ್ಯ ಬರದಿರಲಿ ಎಂದು ಪೂಜೆ ಸಲ್ಲಿಸಲಾಗಿದೆ.

    ನಿನ್ನೆಯಷ್ಟೇ ಸಿಎಂ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗದಿರಲಿ ಎಂದು ಹಾರೈಸಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

    ನಗರದ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪೂಜೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ, ಸಿಎಂ ಬಿಎಸ್ ವೈ ಪುತ್ರಿ ಅರುಣಾದೇವಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ಬಿಎಸ್ ವೈ ಅಭಿಮಾನಿಗಳು ಭಾಗವಹಿಸಿ ಬಿಎಸ್‍ವೈಗಾಗಿ ಪ್ರಾರ್ಥಿಸಿದರು.

  • ಬದಲಾಗ್ತಿದೆ ಹವಾಮಾನ- ನಿಮ್ಮ ಆಹಾರದಲ್ಲಿರಲಿ ಬೆಲ್ಲ

    ಬದಲಾಗ್ತಿದೆ ಹವಾಮಾನ- ನಿಮ್ಮ ಆಹಾರದಲ್ಲಿರಲಿ ಬೆಲ್ಲ

    -ಬೆಲ್ಲದಿಂದಾಗುವ 5 ಆರೋಗ್ಯಕರ ಲಾಭಗಳು

    ಳೆದ ಕೆಲ ದಿನಗಳಿಂದ ಹವಾಮಾನದಲ್ಲಿ ವಿಪರೀತ ಬದಲಾವಣೆ ಆಗುತ್ತಿದೆ. ದಿಢೀರ್ ಅಂತ ಬರೋ ಮಳೆ, ಕೆಲವೊಮ್ಮೆ ದಿನವಿಡೀ ಮೋಡ ಮುಸುಕಿದ ವಾತಾವರಣ ಹಿರಿಯ ಜೀವಿಗಳನ್ನು ಮುದ್ದೆ ಮಾಡುತ್ತವೆ. ಇತ್ತ ಮಕ್ಕಳಲ್ಲಿ ಕೆಮ್ಮು ಮತ್ತು ಶೀತ ಸಂಬಂಧಿತ ರೋಗಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಮಕ್ಕಳು ಮತ್ತು ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಆಹಾರದಲ್ಲಿ ಮಿತವಾಗಿ ಬೆಲ್ಲ ಬಳಕೆ ಮಾಡೋದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ.

    ನೀವು ಪ್ರತಿದಿನ ಮಾಡುವ ಅಡುಗೆಗಳಲ್ಲಿ ಬೆಲ್ಲ ಬಳಸುವುದರಿಂದ ನಿಮಗೆ ಅದು ಐರನ್ ಶಕ್ತಿಯನ್ನು ನೀಡುತ್ತದೆ. ಬೆಲ್ಲದಿಂದ ಮಾಡುವ ಸಿಹಿ ತಿಂಡಿ, ಬೆಲ್ಲದ ಟೀ, ಸಾಂಬಾರ್ ನಲ್ಲಿ ಸ್ವಲ್ಪ ಬೆಲ್ಲ ಹಾಕುವದರಿಂದ ಹೊಸ ರುಚಿಯ ಜೊತೆಗೆ ಗುಣಮಟ್ಟದ ಆಹಾರ ಸಿದ್ಧವಾಗುತ್ತದೆ.

    ಆಹಾರದಲ್ಲಿ ಬೆಲ್ಲದ ಬಳಕೆಯಿಂದಾಗುವ 5 ಪ್ರಯೋಜನಗಳು
    1. ಹೀಮೋಗ್ಲೊಬಿನ್ ಹೆಚ್ಚಳ: ಬೆಲ್ಲದಲ್ಲಿ ಐರನ್ ಪ್ರಮಾಣ ಯಥೇಚ್ಛವಾಗಿರುತ್ತದೆ. ಆಹಾರದಲ್ಲಿ ಬೆಲ್ಲ ಬಳಸುವದರಿಂದ ಸಹಜವಾಗಿ ಹಿಮೋಗ್ಲೊಬಿನ್ ಪ್ರಮಾಣ ಸಹಜವಾಗಿ ಹೆಚ್ಚಳವಾಗುತ್ತದೆ. ಅನಿಮಿಯಾ ರೋಗಿಗಳಿಗೆ ಬೆಲ್ಲದ ಅಮೃತ ಎಂದು ಹೇಳಲಾಗುತ್ತದೆ.
    2. ರಕ್ತದೊತ್ತಡದ ನಿಯಂತ್ರಣ: ಪ್ರತಿದಿನ ಆಹಾರದಲ್ಲಿ ಬೆಲ್ಲ ಬಳಸುವದರಿಂದ ರಕ್ತದೊತ್ತಡವನ್ನು ಕಂಟ್ರೋಲ್ ತರಬಹುದು. ರಕ್ತದೊತ್ತಡದ ಸಮಸ್ಯೆ ಇರೋ ರೋಗಿಗಳಿಗೆ ವೈದ್ಯರು ಬೆಲ್ಲ ಸೇವನೆಯ ಸಲಹೆ ನೀಡುತ್ತಾರೆ.

    3. ಚಳಿಯಿಂದ ರಕ್ಷಣೆ: ವಾತಾವರಣದಲ್ಲಿ ವ್ಯತ್ಯಾಸ ಆಗುತ್ತಿರುವ ಹಿನ್ನೆಲೆಯಲ್ಲಿ ಶೀತ ಸಂಬಂಧಿತ ರೋಗಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಬೆಲ್ಲದ ಹೆಚ್ಚು ಉಷ್ಣಾಂಶ ಹೊಂದಿರುವ ವಸ್ತು ಆಗಿರೋದರಿಂದು ಅದು ಮಕ್ಕಳನ್ನು ಬೆಚ್ಚಗಿರುಸುತ್ತದೆ. ಮಳೆಗಾಲದಲ್ಲಿ ಜನರು ಕಡ್ಲೆ ಹಿಟ್ಟು ಮತ್ತು ಬೆಲ್ಲ ಸೇರಿಸಿ ಪಾನಕ ತಯಾರಿಸಿ ಸೇವಿಸುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಸಣ್ಣ ಜ್ವರ ಕಾಣಿಸಿಕೊಂಡ್ರೆ ಕಾಳು ಮೆಣಸು, ಶುಂಠಿ ಮತ್ತು ಬೆಲ್ಲ ಹಾಕಿ ತಯಾರಿಸಿದ ಕಷಾಯ ಸೇವಿಸುತ್ತಾರೆ.
    4. ಮೂಳೆಗಳಿಗೆ ಸಹಕಾರಿ: ಬೆಲ್ಲ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಅಂಶವನ್ನು ಸಹ ಒಳಗೊಂಡಿರುತ್ತದೆ. ನಿಯಮಿತವಾಗಿ ಬೆಲ್ಲ ಸೇವಿಸುವದರಿಂದ ಮೂಳೆಗಳು ಬಲಗೊಳ್ಳುತ್ತವೆ. ಬೆಲ್ಲ ಮತ್ತು ಶುಂಠಿ ಎರಡೂ ಸೇರಿಸಿ ತಿನ್ನುವದರಿಂದ ಮೊಳಕಾಲಿನ ನೋವು ಕಡಿಮೆ ಆಗುತ್ತದೆ ಎಂದು ಮನೆಯಲ್ಲಿ ಹೇಳಿರೋದನ್ನು ನೀವು ಕೇಳಿರಬಹುದು.

    5. ತ್ವಚೆಯ ರಕ್ಷಣೆ: ನಿಮ್ಮ ಆಹಾರದ ಜೊತೆ ಬೆಲ್ಲ ಸೇವಿಸುವರಿಂದ ತ್ವಚೆಯ ರಕ್ಷಣೆ ಸಹ ಆಗುತ್ತದೆ. ಬೆಲ್ಲದಲ್ಲಿನ ಅಂಶಗಳು ಬ್ಲಡ್ ಪ್ಯೂರಿಫೈ ಕ್ರಿಯೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಬೆಲ್ಲ ಸೇವನೆಯುಂದ ನಿಮ್ಮ ತ್ವಚೆ ಗ್ಲೋ ಆಗುತ್ತದೆ.

  • ದೇಶದ ಪ್ರಜೆಗಳಿಗೆ ಸಿಗಲಿದೆ ಆರೋಗ್ಯ ಐಡಿ ಕಾರ್ಡ್‌

    ದೇಶದ ಪ್ರಜೆಗಳಿಗೆ ಸಿಗಲಿದೆ ಆರೋಗ್ಯ ಐಡಿ ಕಾರ್ಡ್‌

    – ಒಂದೇ ಕ್ಲಿಕ್‌ನಲ್ಲಿ ಸಿಗಲಿದೆ ರೋಗಿಯ ಸಂಪೂರ್ಣ ಆರೋಗ್ಯ ಮಾಹಿತಿ
    – ಎನ್‌ಡಿಎಚ್‌ಎಂ ಆರಂಭಿಸಲು ಸರ್ಕಾರ ಸಿದ್ಧತೆ
    – ಎಲ್ಲ ಪ್ರಜೆಗಳಿಗೆ ಕಾರ್ಡ್‌ ಕಡ್ಡಾಯವಲ್ಲ

    ನವದೆಹಲಿ: ಆಸ್ಪತ್ರೆಗೆ ಅಡ್ಮಿಟ್‌ ಆಗಿರುವ ರೋಗಿಗೆ ಈ ಹಿಂದೆ ಎಲ್ಲಿ ಚಿಕಿತ್ಸೆ ನೀಡಲಾಗಿತ್ತು? ಏನು ಚಿಕಿತ್ಸೆ ನೀಡಲಾಗಿತ್ತು? ಆ ಸಮಯದಲ್ಲಿ ರೋಗಿಯ ಆರೋಗ್ಯ ಹೇಗಿತ್ತು? ಯಾವ ಕಾರಣಕ್ಕೆ ಏನು ಪರೀಕ್ಷೆ ಮಾಡಿಸಲಾಗಿತ್ತು ಎಲ್ಲವೂ ಒಂದೇ ಕ್ಲಿಕ್‌ ನಲ್ಲಿ ಸಿಗಲಿದೆ.

    ಹೌದು, ಕೇಂದ್ರ ಸರ್ಕಾರ ರಾಷ್ಟ್ರೀಯ ಡಿಜಿಟಲ್‌ ಹೆಲ್ತ್‌ ಮಿಷನ್‌(ಎನ್‌ಡಿಎಚ್‌ಎಂ) ಆರಂಭಿಸಲು ಮುಂದಾಗಿದೆ. ಈ ಸೇವೆ ಆರಂಭಗೊಂಡರೆ ದೇಶದ ಪ್ರತಿಯೊಬ್ಬ ಪ್ರಜೆಗೆ ಆರೋಗ್ಯ ಐಡಿ ಕಾರ್ಡ್‌ ಸಿಗಲಿದೆ. ಇದನ್ನೂ ಓದಿ:ಮರಣ ಪ್ರಮಾಣ ಇಳಿಕೆ- 4 ತಿಂಗಳ ಬಳಿಕ ವೆಂಟಿಲೇಟರ್‌ ರಫ್ತಿಗೆ ಅನುಮತಿ

     

    ಈಗಾಗಲೇ ಪ್ರಸ್ತಾಪ ಸಿದ್ಧಗೊಂಡಿದ್ದು, ಈ ವಾರವೇ ಕ್ಯಾಬಿನೆಟ್‌ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿುವರು ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಈ ಐಡಿ ಕಾರ್ಡ್‌ ಎಲ್ಲರಿಗೂ ಕಡ್ಡಾಯವಲ್ಲ. ಜನರು ಸ್ವಇಚ್ಛೆಯಿಂದ ಕಾರ್ಡ್‌ ಮಾಡಿಸಬಹುದು. ಆರಂಭದಲ್ಲಿ ಹೆಲ್ತ್‌ ಐಡಿ, ವೈಯಕ್ತಿಕ ಆರೋಗ್ಯ ಮಾಹಿತಿ, ಡಿಜಿ ಡಾಕ್ಟರ್‌ ಮತ್ತು ಹೆಲ್ತ್‌ ರಿಜಿಸ್ಟ್ರಿ ಇರಲಿದೆ. ನಂತರದ ದಿನಗಳಲ್ಲಿ ಇ ಫಾರ್ಮಾಸಿ ಮತ್ತು ಟೆಲಿಮೆಡಿಸಿನ್‌ ಸೇವೆಗಳನ್ನು ಸೇರಿಸಲಾಗುತ್ತದೆ. ಈಗಾಗಲೇ ಹಲವು ದೇಶಗಳಲ್ಲಿ ಸರ್ಕಾರವೇ ಈ ರೀತಿಯ ಆರೋಗ್ಯ ಕಾರ್ಡ್‌ಗಳನ್ನು ನೀಡಿವೆ.

    ಕೆಲಸ ಹೇಗೆ? 
    ಈ ಸೇವೆ ಬೇಕಾದವರು ವೆಬ್‌ಸೈಟ್‌/ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡು ವಿವರಗಳನ್ನು ನೀಡಬೇಕಾಗುತ್ತದೆ. ಈ ವಿವರಗಳನ್ನು ಆ ವ್ಯಕ್ತಿ ಶೇರ್‌ ಮಾಡಿದರೆ ಮಾತ್ರ ಉಳಿದವರಿಗೆ ಸಿಗುತ್ತದೆ. ಹಣಕಾಸು ಸಚಿವಾಲಯ ಈ ಪ್ರಸ್ತಾಪಕ್ಕೆ 470 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಎನ್‌ಎಚ್‌ಎಯಲ್ಲಿ ಅಂತಿಮಗೊಂಡ ಬಳಿಕ ಈ ಪ್ರಸ್ತಾಪ 400 ಕೋಟಿ ರೂ. ಗಿಂತ ಜಾಸ್ತಿ ಆಗಲಾರದು ಎಂದು ವರದಿಯಾಗಿದೆ.

    ಲಾಭ ಹೇಗೆ? 
    ಈ ಸೇವೆ ದೇಶವ್ಯಾಪಿ ಇರಲಿದೆ. ವ್ಯಕ್ತಿ ಯಾವುದೇ ಮೂಲೆಗೆ ಹೋದಾಗ ಸಮಸ್ಯೆಯಾಗಿ ಆಸ್ಪತ್ರೆ ಸೇರಿದಾಗ ಆತನ ಆರೋಗ್ಯದ ಮಾಹಿತಿ ಕೂಡಲೇ ಸಿಗುವುದಿಲ್ಲ. ಆದರೆ ಈ ಆಪ್‌ನಲ್ಲಿ ವಿವರ ನೀಡಿದ್ದರೆ ಕೂಡಲೇ ವೈದ್ಯರಿಗೆ ಈ ಹಿಂದೆ ರೋಗಿಗೆ ಏನಾಗಿತ್ತು? ಯಾವ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ನೀಡಲಾಗಿತ್ತು? ಈ ಹಿಂದೆ ಎಲ್ಲಿ ಚಿಕಿತ್ಸೆ ನೀಡಲಾಗಿತ್ತು ಈ ಎಲ್ಲ ವಿವರಗಳು ಕೂಡಲೇ ಸಿಗಲಿದೆ. ಇದರಿಂದಾಗಿ ಕಡಿಮೆ ಅವಧಿಯಲ್ಲಿ ರೋಗಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.

  • ಬೆಂಗಳೂರಿನ ಹಿರಿಯ ವ್ಯಕ್ತಿಗೆ ಸೋಂಕು – ಅಜ್ಜ ಫಿಟ್ ಅಂಡ್ ಫೈನ್

    ಬೆಂಗಳೂರಿನ ಹಿರಿಯ ವ್ಯಕ್ತಿಗೆ ಸೋಂಕು – ಅಜ್ಜ ಫಿಟ್ ಅಂಡ್ ಫೈನ್

    ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಹಿರಿಯ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.

    105 ವರ್ಷದ ಶತಾಯುಷಿ ಅಜ್ಜನಿಗೆ ಕೊರೊನಾ ಸೋಂಕು ತಗುಲಿದೆ. ಅಜ್ಜನನ್ನು ಕೇರ್ ಟೇಕರ್ ಒಬ್ಬರು ನೋಡಿಕೊಳ್ಳುತ್ತಿದ್ದರು. ಈ ಕೇರ್ ಟೇಕರ್ ನಿಂದ ಅಜ್ಜನಿಗೂ ಕೊರೊನಾ ಬಂದಿದೆ. ಇದೀಗ ಶತಾಯುಷಿ ಅಜ್ಜ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    105 ವರ್ಷ ವಯಸ್ಸಾದರೂ ಅಜ್ಜ ಫಿಟ್ ಅಂಡ್ ಫೈನ್ ಆಗಿ ಇದ್ದಾರೆ. ಶತಾಯುಷಿ ಅಜ್ಜನಿಗೆ ಡಯಾಬಿಟಿಸ್ ಇಲ್ಲ. ಜೊತೆಗೆ ಕೊರೊನಾ ಗುಣಲಕ್ಷಣದ ತೀವ್ರತೆಯೂ ಇರಲಿಲ್ಲ. ಕೇವಲ ಜ್ವರ ಮಾತ್ರ ಬಂದಿತ್ತು. ಕೋವಿಡ್ ಟೆಸ್ಟ್ ಮಾಡಿಸಿದಾಗ ಮಂಗಳವಾರ ಪಾಸಿಟಿವ್ ಅಂತ ಗೊತ್ತಾಗಿದೆ.

    ಅಜ್ಜ ದಿನ ಬೆಳಗ್ಗೆ ಖರ್ಜೂರ, ಉಪ್ಪಿಟ್ಟು ಮಿತ ಆಹಾರ ಸೇವನೆ ಮಾಡುತ್ತಿದ್ದರು. ಆದ್ದರಿಂದ ಈ ಅಜ್ಜನ ಆರೋಗ್ಯದಲ್ಲಿ ಏನು ತೊಂದರೆ ಇಲ್ಲ. ಆಕ್ಸಿಜನ್ ಲೆವೆಲ್ ಕಡಿಮೆಯಾಗಬಹುದು ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • ಮಾಸ್ಕ್ ಏಕೆ? ಯಾರು? ಯಾವಾಗ? ಹೇಗೆ ಧರಿಸಬೇಕು?- ಇಲ್ಲಿದೆ ಸಂಪೂರ್ಣ ಮಾಹಿತಿ

    ಮಾಸ್ಕ್ ಏಕೆ? ಯಾರು? ಯಾವಾಗ? ಹೇಗೆ ಧರಿಸಬೇಕು?- ಇಲ್ಲಿದೆ ಸಂಪೂರ್ಣ ಮಾಹಿತಿ

    ಬೆಂಗಳೂರು: ಕೊರೊನಾ ಆತಂಕ ಮತ್ತು ತಡೆಗಾಗಿ ಸಾರ್ವಜನಿಕರು ಮಾಸ್ಕ್ ಧರಿಸುತ್ತಿದ್ದಾರೆ. ಆದ್ರೆ ಮಾಸ್ಕ್ ಧರಿಸೋದು ಹೇಗೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

    ಮಾಸ್ಕ್ ಏಕೆ ಧರಿಸಬೇಕು?: ಕೋವಿಡ್-19 ವೈರಸ್ ವ್ಯಕ್ತಿಯಿಂದ ವ್ಯಕ್ತಿಯ ನಡುವೆ ಆಗುವ ಸಂಪರ್ಕದಿಂದ ಸುಲಭವಾಗಿ ಹರಡುತ್ತದೆ. ವೈರಸ್ ಗಳನ್ನು ಹೊತ್ತ ನೀರಿನ ಹನಿಗಳು ಬೇಗನೆ ಒಣಗಿ, ಬೀಜಕಣಗಳಾಗಿ ತೇಲಾಡಿ ನಂತರ ನೆಲ ಅಥವಾ ಇನ್ಯಾವುದೇ ಪದರುಗಳ ಮೇಲೆ ಚಿಮ್ಮುತ್ತವೆ. ಕೋವಿಡ್-19 ಸಂಭವಿಸಲು ಕಾರಣವಾದ ಸಾರ್ಸ್-ಸಿಓವಿ-2 ವೈರಸ್ ಅನ್ನು ಗಾಳಿ ಅಥವಾ ಅನಿಲದಲ್ಲಿ ಘನ ಅಥವಾ ದ್ರವರೂಪದ ಕಣಗಳಾಗಿ ಮೂರು ಗಂಟೆಗಳವರೆಗೂ ಇರುತ್ತದೆ. ಪ್ಲಾಸ್ಟಿಕ್ ಮತ್ತು ತುಕ್ಕು ಹಿಡಿಯದ ಸ್ಟೀಲ್ ಗಳ ಮೇಲ್ಮೈಮೇಲೆ ಮೂರು ದಿನಗಳವರೆಗೆ ಇರಲಿದೆ. ಸೋಂಕಿತ ವ್ಯಕ್ತಿಯಿಂದ ಗಾಳಿಯಲ್ಲಿ ಚಿಮ್ಮುವ ಹನಿಗಳು ಉಸಿರಾಟದ ಮೂಲಕ ಇನ್ನೊಬ್ಬ ವ್ಯಕ್ತಿಯೊಳಗೆ ಪ್ರವೇಶಿಸುವ ಸಾಧ್ಯತೆಯನ್ನು ಮಾಸ್ಕ್ ಕಡಿಮೆ ಮಾಡುತ್ತದೆ.

    ಮಾಸ್ಕ್ ಯಾರು ಧರಿಸಬೇಕು?
    * ಕಾಯಿಲೆಯ ಲಕ್ಷಣಗಳಿರುವವರು
    * ಸಾರ್ವಜನಿಕ ಮತ್ತು ಜನಜಂಗುಳಿ ಸ್ಥಳದಲ್ಲಿ ಸಂಚರಿಸುವ ವ್ಯಕ್ತಿಗಳು
    * ಕೊರೊನಾ ಫ್ರಂಟ್ ಲೈನ್ ಕೆಲಸಗಾರರು
    * ಸೋಂಕು ಇರುವ ವ್ಯಕ್ತಿಗಳಿಗೆ ಆರೈಕೆ ಮಾಡುತ್ತಿರುವವರು
    * ಸಂಪರ್ಕ ಮತ್ತು ಶಂಕಿತ ಪ್ರಕರಣಗಳು.

    ಮಾಸ್ಕ್ ಯಾವಾಗ ಧರಿಸಬೇಕು? (ಆರೋಗ್ಯ ಸೇವಾ ಕಾರ್ಯಕರ್ತರು ಹೊರತುಪಡಿಸಿ)
    * ಕೆಮ್ಮು ಅಥವಾ ಜ್ವರ ಇದ್ದಾಗ ಮೂರು ಪದರುಗಳುಳ್ಳ ವೈದ್ಯಕೀಯ ಮಾಸ್ಕ್ ನಿಮ್ಮಿಂದ ಇತರರಿಗೆ ಸೋಂಕು ಹರಡುವುದನ್ನು ತಡೆಗಟ್ಟುತ್ತದೆ. ಆದರೆ ಇತರರಿಗೆ ಸೋಂಕು ಹರಡದಿರಲು ನೀವು ನಿಮ್ಮ ಕೈಗಳನ್ನು ತೊಳೆಯುತ್ತಿರಬೇಕು.
    * ವೈದ್ಯಕೀಯ ನೆರವು ನೀಡುವ ಕೇಂದ್ರಗಳಿಗೆ ಭೇಟಿ ನೀಡಿದಾಗ
    * ಕಾಯಿಲೆ ಪೀಡಿತರಿಗೆ ನೀವು ಶುಶ್ರೂಷೆ ನೀಡುತ್ತಿರುವವರಿಗೆ
    * ಸೋಂಕು ತಗುಲಿರುವ ಶಂಕೆ/ ಸೋಂಕು ತಗುಲಿದೆ ಎಂದು ಖಚಿತವಾಗಿರುವವರು ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಲ್ಲಿ ಅವರ ಕುಟುಂಬದ ಸದಸ್ಯರು 3 ಪದರುಗಳುಳ್ಳ ವೈದ್ಯಕೀಯ ಮಾಸ್ಕ್ ಧರಿಸಬೇಕು.

    ಮಾಸ್ಕ್ ಧರಿಸುವಾಗ ಅನುಸರಿಸಬೇಕಾದ ಅಂಶಗಳು
    1. ಮಾಸ್ಕ್ ಧರಿಸುವಾಗ:
    * ಮಾಸ್ಕ್ ತೆಗೆದುಕೊಳ್ಳುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಮುಟ್ಟಿ.
    * ಮಾಸ್ಕ್ ಪದರುಗಳನ್ನು ಬಿಡಿಸಿ, ಪದರುಗಳು ಕೆಳ ಮುಖವಾಗಿರುವುದನ್ನು ನೋಡಿಕೊಳ್ಳಿ.
    * ಮೂಗು, ಬಾಯಿ ಮತ್ತು ಗದ್ದದ ಭಾಗಗಳು ಮಾಸ್ಕ್ ನಿಂದ ಪೂರ್ಣವಾಗಿ ಮುಚ್ಚುವಂತೆ ಧರಿಸುವುದು.
    * ಮಾಸ್ಕ್ ಧರಿಸದ ಮೇಲೆ ಪದೇ ಪದೇ ಮುಟ್ಟಿಕೊಳ್ಳದಿರುವುದು.
    * ಕುತ್ತಿಗೆಯಿಂದ ಮಾಸ್ಕ್ ನೇತಾಡದಂತೆ ನೋಡಿಕೊಳ್ಳುವುದು.
    * ಮಾಸ್ಕ್ ಒದ್ದೆಯಾದಲ್ಲಿ ಅಥವಾ ತೇವವಾದ್ರೆ ಕೂಡಲೇ ಬದಲಾಯಿಸಿ.
    * ಒಮ್ಮೆ ಬಳಸುವಂತಹ ಮಾಸ್ಕ್ ಗಳನ್ನು ಯಾವುದೇ ಕಾರಣಕ್ಕೂ ಪುನರ್ಬಳಕೆ ಮಾಡಬಾರದು. (ಪುನರ್ ಬಳಸಬಹುದಾದವುಗಳನ್ನು ಹೊರತುಪಡಿಸಿ)

    2. ಮಾಸ್ಕ್ ತೆಗೆಯುವಾಗ
    * ಮಾಸ್ಕ್ ಮುಂಭಾಗವನ್ನು ಮುಟ್ಟದೇ ಲೇಸ್ ಗಳನ್ನು ಹಿಡಿದು ಹಿಂಭಾಗದಿಂದ ತೆಗೆಯಬೇಕು.
    * ಕೆಳಗಿನ ಲೇಸ್ ಸಡಿಲಿಸಿ ನಂತರ ಮೇಲಿನ ಲೇಸ್ ಸಡಿಲಗೊಳಿಸಿ.
    * ಹಿಂಭಾಗದ ಲೇಸ್ ಹಿಡಿದುಕೊಂಡು ಮಾಸ್ಕ್ ತೆಗೆಯಿರಿ. (ಎಚ್ಚರ ಮಾಸ್ಕ್ ಮುಂಭಾಗ ನಿಮ್ಮ ಮೂಗು, ಬಾಯಿ ಅಥವಾ ಕೈಯನ್ನು ಸ್ಪರ್ಶಿಸದಂತೆ ನೋಡಿಕೊಳ್ಳಿ)

    3. ಮಾಸ್ಕ್ ವಿಲೇವಾರಿ ಮಾಡುವುದು
    * ಮಾಸ್ಕ್ ತೆಗೆದ ನಂತರ ಅದರ ಮೇಲ್ಮೈಯನ್ನು ಅತಾಚುರ್ಯದಿಂದ ಮುಟ್ಟಿದಾಗ ಕೂಡಲೇ ಸೋಪ್/ ಸ್ಯಾನಿಟೈಸರ್/ ಬಿಸಿ ನೀರಿನಿಂದ ಕೈಗಳನ್ನು ತೊಳೆದುಕೊಳ್ಳಿ.
    * ಮಾಸ್ಕ್ ಸರಿಯಾಗಿ ಡಸ್ಟ್ ಬಿನ್ ನಲ್ಲಿ ಎಸೆಯಿರಿ.
    * ಪುನಃ ಬಳಸಬಹುದಾದ ಮಾಸ್ಕ್ ಆಗಿದ್ರೆ, ಅದನ್ನು ಸೋಪಿನ ನೀರಿನಲ್ಲಿ 30 ನಿಮಿಷಗಳ ಕಾಲ ಹುದುಗಿಸಿ. ನಂತರ ತೊಳೆದು ಚೆನ್ನಾಗಿ ಒಣಗಿಸಿ ಬಳಸಬೇಕು.