Tag: health

  • ಕೊರೊನಾ ಜಾಗೃತಿ ಮೂಡಿಸಲು ಪೇಂಟಿಂಗ್ ಮಾಡಿದ ಡಿಸಿಪಿ

    ಕೊರೊನಾ ಜಾಗೃತಿ ಮೂಡಿಸಲು ಪೇಂಟಿಂಗ್ ಮಾಡಿದ ಡಿಸಿಪಿ

    ಧಾರವಾಡ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕಲಾವಿದ ಮಂಜುನಾಥ ಹಿರೇಮಠ ನಗರದ ಗೋಡೆಗಳ ಮೇಲೆ ಬರಹಗಳನ್ನು ಬರೆದು ಜಾಗೃತಿ ಮೂಡಿಸುತ್ತಿರುವುದಕ್ಕಿ ಡಿಸಿಪಿ ಕೈ ಜೋಡಿಸಿದ್ದಾರೆ.

    ಮಂಜುನಾಥ ಅವರ ಕಲಾಕೃತಿ ನೋಡಿದ ಡಿಸಿಪಿ ರಾಮರಾಜನ್ ಅವರು, ತಾವೂ ಕೂಡಾ ಕೈಯಲ್ಲಿ ಬ್ರಷ್ ಹಿಡಿದು ಪೇಂಟಿಂಗ್ ಮಾಡಿದರು. ನಗರದ ಜುಬ್ಲಿ ವೃತ್ತದಲ್ಲಿ ಮಾಸ್ಕ್ ಧರಿಸಿ ಕೊರೊನಾ ಓಡಿಸಿ ಎಂದು ಗೋಡೆ ಬರಹ ಬರೆದು ಜಾಗೃತಿ ಮೂಡಿಸುತ್ತಿರುವ ಮಂಜುನಾಥ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಜನರು ಸರಿಯಾಗಿ ಕೈ ತೊಳೆಯಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಇಲ್ಲದೇ ಹೊರಗೆ ಬರಬಾರದು ಎಂದು ಡಿಸಿಪಿ ರಾಮರಾಜನ್ ಕರೆ ನೀಡಿದರು.

    ದೇಶಾದ್ಯಂತ ಕೊರೋನಾ ಎರಡನೇ ಅಲೆಯ ಅಬ್ಬರ ಮುಂದುವರಿದಿದೆ, ಕಳೆದ 24 ಗಂಟೆಗಳ ಅವಧಿಯಲ್ಲಿ 2.57 ಲಕ್ಷಕ್ಕೂ ಅಧಿಕ ಹೊಸ ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 4,194 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ಯಾದಗಿರಿ ಲಾಕ್‍ಡೌನ್ ಓಪನ್, ಮಾರುಕಟ್ಟೆಗಳಲ್ಲಿ ಜನಜಂಗುಳಿ

    ಯಾದಗಿರಿ ಲಾಕ್‍ಡೌನ್ ಓಪನ್, ಮಾರುಕಟ್ಟೆಗಳಲ್ಲಿ ಜನಜಂಗುಳಿ

    ಯಾದಗಿರಿ: ಮೂರು ದಿನ ಫುಲ್ ಲಾಕ್‍ಡೌನ್ ಆಗಿದ್ದ ಯಾದಗಿರಿ ಇಂದು ಮತ್ತೆ ಓಪನ್ ಆದ ಪರಿಣಾಮ, ಹೊಲ್ ಸೇಲ್ ಮಾರುಕಟ್ಟೆಯಲ್ಲಿ ಜನಜಂಗುಳಿಂದ ತುಂಬಿ ತುಳುಕುತ್ತಿದೆ.

    ಪೊಲೀಸರಿಗೂ ಕೇರ್ ಮಾಡದ ಜನ, ಸಾಮಾಜಿಕ ಅಂತರ ಮರೆತು ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಕಳೆದ ಮೂರುದಿನಗಳಿಂದ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ,ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ತನಕ ತರಕಾರಿ ಮತ್ತು ದಿನಸಿ ಖರೀದಿಗೆ ಅವಕಾಶವನ್ನು ಜಿಲ್ಲಾಡಳಿತ ನೀಡಿದೆ. ಆದರೆ ಕೋವಿಡ್ ನಿಯಮಾವಳಿಗಳನ್ನು ಪಾಲನೆ ಕಡ್ಡಾಯವಾಗಿದ್ದರು ಜನ ಮಾತ್ರ ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ.

    ಪೊಲೀಸರು ಮತ್ತು ನಗರಸಭೆ ಸಿಬ್ಬಂದಿ ಮಾರುಕಟ್ಟೆಯಲ್ಲಿ ಜಾಗೃತಿ ಮೂಡಿಸುತ್ತಿದ್ದರು, ಜನ ಮಾತ್ರ ತಲೆ ಕೆಡಸಿಕೊಳ್ಳುತ್ತಿಲ್ಲ. ಇದರಿಂದಾಗಿ ಕೊರೊನಾ ಹರಡಲು ಮಾರುಕಟ್ಟೆ ಹಾಟ್ ಸ್ಪಾಟ್ ಆದಂತಾಗಿದೆ.

  • ಜೀನಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    ಜೀನಿ ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

    – ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ
    – ರಾಜ್ಯವ್ಯಾಪಿ ಜನಪ್ರಿಯವಾಗುತ್ತಿದೆ ಸಿರಿಧಾನ್ಯಗಳ ಪೌಡರ್

    ಮೇಲ್ನೋಟಕ್ಕೆ ಎಷ್ಟೇ ಗಟ್ಟಿಮುಟ್ಟಾಗಿದ್ರು ಕಾಯಿಲೆಗಳು ಕಾಡಲು ಶುರು ಮಾಡಿವೆ. ಕಾಯಿಲೆ ಅಂದಾಕ್ಷಣ ದೊಡ್ಡದೊಡ್ಡ ಕಾಯಿಲೆಗಳೇ ಆಗಬೇಕೆಂದೇನಿಲ್ಲ. ದೊಡ್ಡ ಕಾಯಿಲೆಯಿಂದ ಹಿಡಿದು ಸಣ್ಣ ನೆಗಡಿ, ಕೆಮ್ಮೂ ಸಹ ಘಟಾನುಘಟಿಗಳನ್ನ ನಡುಗಿಸಿ ಬಿಡುತ್ತಿದೆ. ಇಷ್ಟಕ್ಕೆಲ್ಲ ಕಾರಣ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು.

    ರೋಗ ನಿರೋಧಕ ಶಕ್ತಿ ಕಡಿಮೆಯಾಗಲು ಕಾರಣ ಏನು ಅಂತ ನೋಡಿದರೆ ನಾವು ತಿನ್ನುತ್ತಿರುವ ಆಹಾರದಲ್ಲಿ ಯಾವುದೇ ಸತ್ವ ಇಲ್ಲ. ಜೊತೆಗೆ ಆಹಾರವೇ ಸ್ಲೋ ಪಾಯಿಸನ್ ಆಗಿ ನಮ್ಮನ್ನ ನಿಶ್ಯಕ್ತರನ್ನಾಗಿ ಮಾಡುತ್ತಿದೆ. ನಾವು ತಿನ್ನುತ್ತಿರುವ ಆಹಾರ ಬೆಳೆಯಲು ಭೂಮಿಗೆ ಹಾಕುತ್ತಿರುವ ರಸಗೊಬ್ಬರ, ಕೀಟಗಳಿಂದ ಕಾಪಾಡಲು ಕೀಟ ನಾಶಕ ಬಳಸುತ್ತಿದ್ದಾರೆ. ಬೆಳೆ ಬೆಳೆದ ಮೇಲೆ ಇದನ್ನು ನಾವು ಆಹಾರವಾಗಿ ಬಳಸುತ್ತಿದ್ದೇವೆ. ಇದರಲ್ಲಿ ಬಹುತೇಕ ಪೋಷಕಾಂಶಗಳು ನಾಶವಾಗಿ ನಮ್ಮ ದೇಹಕ್ಕೆ ರಸಗೊಬ್ಬರದ ಅಂಶ ಹಾಗೂ ಕೀಟ ನಾಶಕ ಅಂಶ ಸೇರ್ಪಡೆಯಾಗ್ತಿದೆ. ಇದು ನಮ್ಮ ಆರೋಗ್ಯ ಹಾಳಾಗಲು ಕಾರಣವಾಗಿದೆ.

    ಇದಕ್ಕೆಲ್ಲ ಪರಿಹಾರ ಏನು ಅಂತ ನೋಡೋದಾದ್ರೆ, ಮೊದಲು ನಮ್ಮ ಆಹಾರದ ಆರೋಗ್ಯವನ್ನ ಕಾಪಾಡಬೇಕು. ಅಂದ್ರೆ ರಸಗೊಬ್ಬರ ರಹಿತ, ಕೀಟ ನಾಶಕ ಬಳಸದೆ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರವನ್ನ ಬಳಸಲು ಶುರು ಮಾಡಬೇಕು. ಇಷ್ಟಕ್ಕೆ ನಮ್ಮ ಆರೋಗ್ಯಕ್ಕೆ ಬೇಕಾದ ಅಂಶಗಳು ಸಿಗೋದು ಸ್ವಲ್ಪ ಕಷ್ಟ. ಯಾಕಂದ್ರೆ ನಮ್ಮಲ್ಲಿ ಒಂದೊಂದು ಧಾನ್ಯಗಳು ಒಂದೊಂದು ವಿಶೇಷ ಗುಣಗಳನ್ನ ಹೊಂದಿದೆ.

    ಸಿರಿಧಾನ್ಯಗಳು ಇತ್ತೇಚೆಗೆ ಸಾಮಾನ್ಯವಾಗಿ ಕಾಡುವ ಬಿಪಿ, ಶುಗರ್ ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಬಿಜಾಪುರದಿಂದ ಬಿಳಿ ಜೋಳ, ಬಳ್ಳಾರಿ ನವಣೆ, ಹಾವೇರಿಯ ಕಡಲೆಕಾಳು, ಶಿರಾದ ಕೊರಲೆ, ಚಿಕ್ಕನಾಯಕನಹಳ್ಳಿಯ ಹೆಸರುಕಾಳು, ಚಿಕ್ಕಮಗಳೂರಿನ ಏಲಕ್ಕಿ, ಪುತ್ತೂರಿನ ಮೆಣಸು, ಬೆಳ್ತಂಗಡಿಯ ಗೋಡಂಬಿ, ಚಳ್ಳಕೆರೆಯ ಕಡಲೆ ಬೀಜ, ಕೋಲಾರದ ರಾಗಿ, ಮೈಸೂರಿನ ಹುರುಳಿಕಾಳು, ದಾವಣಗೆರೆಯ ಮುಸುಕಿನ ಜೋಳ, ಹೊಸದುರ್ಗದ ಸಾಮೆ ಊದಲು, ಕಲಬುರಗಿಯಿಂದ ತೊಗರಿಕಾಳು, ಬಾಗಲಕೋಟೆಯ ಸಜ್ಜೆ ಸೇರಿದಂತೆ 9 ಸಿರಿಧಾನ್ಯ ಹಾಗೂ 14 ಕಾಳುಗಳನ್ನ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ರೈತರಿಂದ ನೇರವಾಗಿ ಖರೀದಿ ಮಾಡಿ ಈ ಜೀನಿಯನ್ನ ತಯಾರಿಸಲಾಗುತ್ತದೆ. ರೈತರಿಂದ ನೇರವಾಗಿ ಸಿರಿಧಾನ್ಯಗಳನ್ನ ಖರೀದಿ ಮಾಡಿದ ನಂತರ ಅದನ್ನ ಅಕ್ಕಿ ಮಾಡಲಾಗುತ್ತದೆ.

    ಸಿರಿಧಾನ್ಯಗಳು ಸೇರಿದಂತೆ 14 ರೀತಿಯ ಕಾಳುಗಳನ್ನು ನೀರಿನಲ್ಲಿ ತೊಳೆದು ನೆರಳಿನಲ್ಲಿ ಒಣಗಿಹಾಕಲಾಗುತ್ತದೆ. ಒಣಗಿದ ಕಾಳುಗಳನ್ನ ಮಹಿಳೆಯರು ಕ್ಲೀನ್ ಮಾಡ್ತಾರೆ. ನಂತರ ಮಣ್ಣಿನ ಮಡಿಕೆಯಲ್ಲಿ ಹದವಾಗಿ ಹುರಿಯಲಾಗುತ್ತೆ. ಹುರಿದ ಕಾಳುಗಳನ್ನ ಸರಿಯಾದ ಪ್ರಮಾಣದಲ್ಲಿ ಒಟ್ಟಿಗೆ ಮಿಶ್ರಣ ಮಾಡಲಾಗುತ್ತದೆ.

    ನಂತರ ಹುರಿದ ಕಾಳುಗಳನ್ನ ಪೌಡರ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ನೀವು ಮನೆಯಲ್ಲಿ ಹೇಗೆ ಅಕ್ಕಿ ಹಿಟ್ಟು, ರಾಗಿ ಹಿಟ್ಟನ್ನ ಮಾಡುತ್ತಿರೋ ಅದೇ ರೀತಿ ಮಾಡಲಾಗುತ್ತದೆ. ಇದರ ಎಕ್ಸ್ಪೆರಿ ಡೇಟ್ ಕೇವಲ 5 ತಿಂಗಳು ಮಾತ್ರ. ನ್ಯಾಚುರಲ್ ಆಗಿ ಪೌಡರ್ ಪ್ಯಾಕೇಟ್ ಆದ 5 ತಿಂಗಳ ವರೆಗೆ ಕೆಡುವುದಿಲ್ಲ. ಓಪನ್ ಮಾಡಿದ ನಂತರ ಒಂದು ತಿಂಗಳಲ್ಲಿ ಖಾಲಿ ಮಾಡಬೇಕು. ಬಳಕೆ ಮಾಡುವಾಗ ಮಾತ್ರ ತೆರೆದು, ಉಳಿದ ಸಂದರ್ಭದಲ್ಲಿ ಪ್ಯಾಕೇಟ್ ಮುಚ್ಚಿಡಬೇಕು.

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಯರಗುಂಟೆ ಗ್ರಾಮದಲ್ಲಿ 200 ಜನರಿಗೆ ದಿಲೀಪ್ ಉದ್ಯೋಗ ನೀಡಿದ್ದಾರೆ. ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶದಿಂದಲೇ ಯಂತ್ರಗಳನ್ನ ಹಾಕದೇ ಕೈಯಿಂದಲೇ ಮಾಡಿಸಲಾಗುತ್ತಿದೆ. ಒಂದು ಯಂತ್ರ 20 ಜನರ ಕೆಲಸ ಕಸಿದುಕೊಳ್ಳುತ್ತದೆ. ಹಾಗಾಗಿ ನಾವು ಯಂತ್ರಗಳನ್ನ ಹಾಕೋದಿಲ್ಲ ಅಂತಾರೆ ದಿಲೀಪ್.

    ಮಧ್ಯಾಹ್ನ ಕಾರ್ಮಿಕರಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಸಹ ದಿಲೀಪ್ ಮಾಡ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀನಿ ತಯಾರಿಕೆ ಮಾಡ್ತಿದ್ರು. ಬೆಂಗಳೂರಿನ ಕಂಪನಿಗಳಂತೆಯೇ ಕಾರ್ಮಿಕರಿಗೆ ಯೂನಿಫಾರಂ ಜೊತೆಗೆ ಹೈಜೆನಿಕ್ ಮೇಂಟೇನ್ ಮಾಡಲು ಹ್ಯಾಂಡ್ ಗ್ಲೌಸ್, ಮಾಸ್ಕ್, ಕ್ಯಾಪ್‍ಗಳನ್ನು ಇಲ್ಲಿನ ಕಾರ್ಮಿಕರು ಬಳಸ್ತಾರೆ. ಒಟ್ಟಾರೆ ಜೀನಿ ತಯಾರಿಕೆಯಲ್ಲಿ ಸುರಕ್ಷಿತಾ ಕ್ರಮಗಳನ್ನ ಜೀವಿತಾ ಎಂಟಪ್ರ್ರೈಸಸ್ ಅನುಸರಿಕೊಂಡು ಹೋಗುತ್ತಿದೆ.

  • ಕಣ್ಣುಗಳ ಆರೋಗ್ಯಕ್ಕೆ ಯಾವ ಆಹಾರ ಸೇವನೆ ಮಾಡಬೇಕು ಗೊತ್ತಾ?

    ಕಣ್ಣುಗಳ ಆರೋಗ್ಯಕ್ಕೆ ಯಾವ ಆಹಾರ ಸೇವನೆ ಮಾಡಬೇಕು ಗೊತ್ತಾ?

    ನುಷ್ಯನ ದೇಹದಲ್ಲಿ ಕಣ್ಣು ಬಹುಮುಖ್ಯವಾದ ಅಂಗ. ಮನುಷ್ಯನ ಆರೋಗ್ಯ, ಸುಖ-ಸಂತೋಷ, ನೋವು-ದುಃಖ ಎಲ್ಲವೂ ಕೂಡ ಕಣ್ಣಿನಲ್ಲಿಯೇ ವ್ಯಕ್ತವಾಗುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮವಾಗಿರುತ್ತದೆ. ನಾವು ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಮೊದಲು ನಮ್ಮ ಕಣ್ಣುಗಳಿಗೆ ಅಗತ್ಯವಾಗಿ ಆರೋಗ್ಯಕರ ಸ್ಥಿತಿಯಲ್ಲಿ ಇರಬೇಕೆಂದರೆ ನಮ್ಮ ಕಣ್ಣುಗಳಿಗೆ ರಕ್ಷಣೆಕೊಡುವ ಆಹಾರಗಳನ್ನು ಸೇವಿಸಿದರೆ ಮಾತ್ರ ಸಾಧ್ಯ.

    * ಕ್ಯಾರೆಟ್ ಮತ್ತು ಇತರ ಹಣ್ಣು-ತರಕಾರಿಗಳು ಕಣ್ಣಿನ ಆರೋಗ್ಯಕ್ಕೆ ಉತ್ತಮ. ವಿಟಮಿನ್ ಎ ಇರುವ ಆಹಾರ ಪದಾರ್ಥಗಳು ರೆಟಿನಾ ಮತ್ತು ಕಣ್ಣಿನ ಇತರ ಭಾಗಗಳು ಚೆನ್ನಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.

    * ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ಕೂಡ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದ್ದು, ಇದು ಕಣ್ಣುಗಳ ದೃಷ್ಟಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.

     

    * ಮೊಟ್ಟೆಯನ್ನು ಒಂದು ಸಂಪೂರ್ಣ ಆಹಾರವೆಂದು ಪರಿಗಣಿಸಬಹುದು. ನಿಮ್ಮ ಉಪಹಾರಕ್ಕೆ ಒಂದು ಮೊಟ್ಟೆಯನ್ನು ಸೇರಿಸಿದರೆ ನಿಮ್ಮ ದಿನಪೂರ್ತಿ ಅಗತ್ಯವಿರುವ ವಿಟಮಿನ್‍ಗಳ ಮತ್ತು ಜೀವಸತ್ವಗಳ ಪೂರೈಕೆಯಾಗುತ್ತದೆ.

     

    * ಬೀಟ್‍ರೂಟ್ ವಿಟಮಿನ್ ಎ ಸಮೃದ್ಧವಾಗಿ ಇರುವ ಬೇರಿನ ಜಾತಿಯ ಆಹಾರ. ನಿಮ್ಮ ಕಣ್ಣುಗಳು ಉತ್ಸಾಹಭರಿತ ಮತ್ತು ಸಂತೋಷದಿಂದ ಕೂಡಿರಬೇಕಾದಲ್ಲಿ ಈ ಬೀಟ್‍ರೂಟ್ ತರಕಾರಿಯನ್ನು ಸಾಕಷ್ಟು ಸೇವಿಸಬೇಕು.

    * ಕ್ಯಾರೆಟ್ ಜ್ಯೂಸ್ ಕಣ್ಣಿನ ದೃಷ್ಟಿಗೆ ವಿಟಮಿನ್ ಎ ಬಹಳ ಮುಖ್ಯ. ಕ್ಯಾರೆಟ್‍ನಲ್ಲಿ ವಿಟಮಿನ್ ಎ ಅಧಿಕವಾಗಿದ್ದು,ಕಣ್ಣುಗಳ ರೆಟಿನಾದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

    *   ಪಾಲಕ್, ಮೆಂತ್ಯೆ, ಹರಿವೆ ಮುಂತಾದ ಸೋಪ್ಪುಗಳಲ್ಲಿ ವಿಟಮಿನ್ ಸಿ ಇರುತ್ತದೆ.

    * ಮೂಸಂಬಿ, ಕಿತ್ತಳೆ, ನಿಂಬೆ, ದಾಳಿಂಬೆ ಮುಂತಾದ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಈ ವಿಟಮಿನ್ ಕಣ್ಣಿನ ನರಗಳು ಆರೋಗ್ಯವನ್ನು ಕಾಪಾಡುತ್ತದೆ.

  • ಕೆಮ್ಮಿಗೆ ಇದೆ ಪವರ್‌ಫುಲ್ ಮನೆಮದ್ದು

    ಕೆಮ್ಮಿಗೆ ಇದೆ ಪವರ್‌ಫುಲ್ ಮನೆಮದ್ದು

    ಸಾಮಾನ್ಯವಾಗಿ ವಾತಾವರಣದಲ್ಲ ಆಗುವ ಏರುಪೇರಿನಿಂದಾಗಿ, ಕೆಮ್ಮು ಮತ್ತು ಶೀತ ಬರುವುದು ಸಹಜವಾಗಿದೆ. ಕೆಮ್ಮು ಎಂದು ಮಾತ್ರೆಗಳ ಮೊರೆ ಹೋಗುವ ಮೊದಲು ನೈಸರ್ಗಿಕ ಚಿಕಿತ್ಸೆಯೇ ಉತ್ತಮವಾಗಿದೆ. ಹೀಗಾಗಿ ಈ ಮನೆಮದ್ದುಗಳನ್ನು ಒಮ್ಮೆ ಉಪಯೋಗಿಸಿ.

    * ಟೀ ಸ್ಪೂನ್ ಜೇನುತುಪ್ಪ, ಟೀ ಸ್ಪೂನ್ ಆಲಿವ್ ಆಯಿಲ್ ಮತ್ತು 3 ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಕೆಳಗಿಳಿಸಿ. ಅದನ್ನು ತಣ್ಣಗಾಗಲು ಬಿಡಿ. ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಕೆಮ್ಮು ಬಂದಾಗ ಈ ಸಿರಪ್ ಸೇವನೆ ಸಹಾಯ ಮಾಡುತ್ತದೆ. ನಿಂಬೆ ಮತ್ತು ಜೇನುತುಪ್ಪವು ಗಂಟಲಿನ ಸೋಂಕನ್ನು ಶಮನಗೊಳಿಸುತ್ತದೆ ಮತ್ತು ಜೇನುತುಪ್ಪವು ಕೆಮ್ಮಿನಿಂದ ಪರಿಹಾರವನ್ನು ನೀಡುತ್ತದೆ. ಜೇನುತುಪ್ಪದಿಂದ ಉತ್ತಮ ನಿದ್ರೆ ಸಹ ಬರುತ್ತದೆ. ಆಲಿವ್ ಎಣ್ಣೆ ಗಂಟಲಿನಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ.

    * ಸ್ವಲ್ಪ ಜೇನುತುಪ್ಪದೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ. ಒಂದು ಚಿಟಿಕೆ ಕೇನ್ ಪೆಪ್ಪರ್ ಸೇರಿಸಿ. ಕೆಮ್ಮು ನಿವಾರಣೆಗೆ ಇದನ್ನು ನುಂಗಿ. ಜೇನುತುಪ್ಪವು ಗಂಟಲು ನೋವಿಗೆ ಚಿಕಿತ್ಸೆ ನೀಡುತ್ತದೆ . ಕೆಲವು ಸಂಶೋಧನೆಗಳ ಪ್ರಕಾರ, ಜೇನುತುಪ್ಪವು ಕೆಮ್ಮನ್ನು ನಿವಾರಿಸುತ್ತದೆ ಮತ್ತು ನಿಂಬೆ ಉರಿಯೂತವನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    * ನಿಮ್ಮ ಗಂಟಲು ತೆರವುಗೊಳಿಸಲು ಪ್ರತಿದಿನ ಎರಡು ಬಾರಿ ಅರ್ಧ ಟೀ ಚಮಚ ಅರಿಶಿನದೊಂದಿಗೆ ಒಂದು ಲೋಟ ಹಾಲು ಕುಡಿಯಬೇಕು ಆಗ ಕೆಮ್ಮೆ ಕಡಿಮೆಯಾಗುತ್ತದೆ.

    * ಅರ್ಧ ಗ್ಲಾಸ್ ನೀರಿಗೆ ಟೀ ಸ್ಪೂನ್ ಜೇನುತುಪ್ಪ, 1 ಟೀ ಸ್ಪೂನ್ ದಾಲ್ಚಿನ್ನಿ ಪುಡಿ ಸೇರಿಸಿ, ಚೆನ್ನಾಗಿ ಮಿಶ್ರಮಾಡಿ ಪ್ರತಿ ದಿನ ಬೆಳಿಗ್ಗೆ ಎರಡು ಬಾರಿ ಈ ಮಿಶ್ರಣವನ್ನು ಸೇವಿಸಬೇಕು.

    * ಅರ್ಧ ಟೀ ಚಮಚ ಶುಂಠಿ ಪುಡಿ. ಒಂದು ಚಿಟಕಿ ದಾಲ್ಚಿನ್ನಿ. 1-2 ಲವಂಗವನ್ನು ನೀರಿಗೆ ಹಾಕಿ ಮಸಾಲೆ ಟೀ ಮಾಡಿ ಕುಡಿಯುವುದರಿಂದ ಕಫ್ ನಿಧಾನವಾಗಿ ಕಡಿಮೆಯಾಗುತ್ತದೆ.

    * ಈರುಳ್ಳಿಯ ರಸವನ್ನು ಬಿಸಿ ಮಾಡಿಕೊಂಡು ಇದಕ್ಕೆ, ಬೆಳ್ಳುಳ್ಳಿಯ ಒ0ದೆರಡು ದಳವನ್ನು ಜಜ್ಜಿ ಸೇರಿಸಿಕೊಂಡು ಈ ಮಿಶ್ರಣವನ್ನು ಒಂದು ದೊಡ್ಡ ಗ್ಲಾಸ್‍ನಷ್ಟು ಉಗುರು ಬೆಚ್ಚಗಿನ ಬಿಸಿನೀರಿಗೆ ಸೇರಿಸಿ ಹಾಗೂ ಒಂದು ಟೇಬಲ್ ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯುತ್ತಾ ಬಂದರೆ ಕೆಮ್ಮಿನ ಸಮಸ್ಯೆ ಕೂಡಲೇ ಕಡಿಮೆಯಾಗುತ್ತಾ ಬರುತ್ತದೆ.

  • ಉತ್ತಮ ಆರೋಗ್ಯಕ್ಕೆ ಲವಂಗ ಮದ್ದು

    ಉತ್ತಮ ಆರೋಗ್ಯಕ್ಕೆ ಲವಂಗ ಮದ್ದು

    ನಾವು ಮನೆಮದ್ದನ್ನು ಮಾಡುವುದರಿಂದ ಕೆಲವೊಮ್ಮೆ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುಬಹುದು. ಭಾರತೀಯರ ಮಸಾಲೆ ಪದಾರ್ಥವಾಗಿ ಬಳಕೆಯಾಗುವ ಲವಂಗ ಕೇವಲ ಖಾದ್ಯದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ.

    ಆಯುರ್ವೇದದಲ್ಲಿ ತನ್ನದೇ ಆದ ಸ್ಥಾನ ಪಡೆದಿದ್ದು, ತಲತಲಾಂತರಗಳಿಂದ ಬಳಸಲಾಗುತ್ತಿದೆ. ರುಚಿಕರವಾದ ಲವಂಗವನ್ನು ಅನೇಕ ರೋಗಗಳನ್ನು ಗುಣಪಡಿಸಲು ಬಳಸುವ ಶಕ್ತಿಯನ್ನು ಹೊಂದಿದೆ.

    * ರಾತ್ರಿ ಮಲಗುವ ಮುನ್ನ ಎರಡು ಲವಂಗ ಅಗಿದು, ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯುವುದ ರಿಂದ ಹಲಾವರು ಅನಾರೋಗ್ಯ ಸಮಸ್ಯೆಗಳಿಂದ ದೂರ ಇರಬಹುದಾಗಿದೆ.

    * ಗಂಟಲು ನೋವು ನೋವನ್ನು ನಿವಾರಿಸಲು ಸಹ ಲವಂಗ ಸಹಾಯ ಮಾಡುತ್ತದೆ.

    * ಲವಂಗವು ಇಮ್ಯೂನ್ ಬೂಸ್ಟರ್ ಹೊಂದಿರುತ್ತದೆ. ಹೀಗಾಗಿ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

    * ಲವಂಗವನ್ನು ರಾತ್ರಿ ಸೇವಿಸುವುದರಿಂದ ಮಲಬದ್ಧತೆ, ಅತಿಸಾರ, ಅಸಿಡಿಟಿಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

    * ಜೀರ್ಣಕ್ರಿಯೆಯನ್ನು ಸಹ ಸುಧಾರಿಸುವ ಶಕ್ತಿಯನ್ನು ಲವಂಗ ಹೊಂದಿದೆ.

    * ಆಂಟಿ ಬ್ಯಾಕ್ಟೀರಿಯಾ ಗುಣಗಳನ್ನು ಹೊಂದಿರುವುದರಿಂದ ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

    * ಲವಂಗ ಬಾಯಿಯ ಆರೋಗ್ಯಕ್ಕೆ ಸಹ ಒಳ್ಳೆಯದು.ಬಾಯಿಯಲ್ಲಿ ಇಡುವುದರಿಂದ ದುರ್ವಾಸನೆ ಸಹ ಹೋಗುತ್ತದೆ.

    * ಲವಂಗವನ್ನು ಬೆಚ್ಚಗಿನ ನೀರಿನ ಜೊತೆ ಸೇವಿಸುವುದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ. ಹಲ್ಲು ನೋವಿರುವ ಜಾಗದಲ್ಲಿ ನೀವು ಲವಂಗ ಇರಿಸಿಕೊಳ್ಳಬಹುದು.

  • ನಾನಾ ಸಮಸ್ಯೆಗೆ ತೊಂಡೆಕಾಯಿ ಮದ್ದು

    ನಾನಾ ಸಮಸ್ಯೆಗೆ ತೊಂಡೆಕಾಯಿ ಮದ್ದು

    ತರಕಾರಿಗಳು ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುತ್ತವೆ. ಆದರೆ ತರಕಾರಿಯಲ್ಲಿಯೂ ಕೆಲವಷ್ಟು ಮಾತ್ರ ಆಯ್ಕೆ ಮಾಡಿ ತಿನ್ನುತ್ತೇವೆ. ತೊಂಡೆಕಾಯಿ ಎಂದರೆ ಕೆಲವರಿಗೆ ಇಷ್ಟವಾಗುವುದೇ ಇಲ್ಲ. ಆದರೆ ಇದು ಹಲವು ಕಾಯಿಲೆಗಳಿಗೆ ಮದ್ದಾಗಿದೆ.

    ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ತೊಂಡೆಕಾಯಿಯನ್ನು ಹೆಚ್ಚಿನ ಜನರು ಇಷ್ಟಪಡುವುದಿಲ್ಲ, ಇದರಲ್ಲಿರುವ ಅತ್ಯದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಂಡರೆ ತೊಂಡೆಕಾಯಿಯನ್ನು ಖಂಡಿತ ಇಷ್ಟಪಟ್ಟು ತಿನ್ನುತ್ತಿರಿ.

    * ತೊಂಡೆಕಾಯಿ ಪಲ್ಯ, ಸಾಂಬರ್‍ನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ, ದೇಹದಲ್ಲಿ ಏರುಪೇರಾಗಿರುವ ಸಕ್ಕರೆ ಅಂಶದ ಪ್ರಮಾಣವನ್ನು ಸಹಜ ಸ್ಥಿತಿಯ ಮರಳಿಸಲು ಸಹಕಾರಿಯಾಗಿದೆ.

    * ತೊಂಡೆಕಾಯಿಯಲ್ಲಿ ಇರುವಂತಹ ಕೆಲವು ಅಂಶವು ಬೊಜ್ಜು ವಿರೋಧಿಯಾಗಿದೆ. ಜೀರ್ಣ ಕ್ರೀಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಧಾರಣೆ ಮಾಡುವುದು ಮತ್ತು ಬೊಜ್ಜು ತಡೆಯುವುದುಕ್ಕೆ ಸಹಾಯಕಾರಿಯಾಗಿದೆ.

    * ತೊಂಡೆಕಾಯಿಯಲ್ಲಿ ಕಬ್ಬಿಣಾಂಶವು ಉತ್ತಮ ಪ್ರಮಾಣದಲ್ಲಿದ್ದು, ಇದು ನಿಶ್ಯಕ್ತಿಯನ್ನು ಕಡಿಮೆ ಮಾಡುತ್ತದೆ.

    * ಆಯುರ್ವೇದದಲ್ಲಿ ತೊಂಡೆಕಾಯಿಯ ಬಳ್ಳಿ, ಎಲೆಗಳು, ಬೇರು, ಕಾಯಿ, ಹಣ್ಣು ಎಲ್ಲವೂ ಉಪಯೋಗಿಸಲಾಗುತ್ತದೆ. ಕಜ್ಜಿ, ತುರಿಕೆ, ಕುಷ್ಟ ರೋಗದಂತಹ ಹಲವಾರು ಸಮಸ್ಯೆಗಳಿಗೆ ಔಷಧಿಯಾಗಿ ಉಪಯೋಗಿಸಲಾಗುತ್ತದೆ.

    * ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ ಇರುವುದರಿಂದ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೂತ್ರಪಿಂಡದಲ್ಲಿ ಆಗುವ ಕಲ್ಲುಗಳಿಗೆ ಮನೆಮದ್ದಿನಂತೆ ಕೆಲಸ ಮಾಡುತ್ತದೆ.

  • ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಅರ್ಜುನ್ ಜನ್ಯ

    ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಅರ್ಜುನ್ ಜನ್ಯ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಮ್ಯಾಜಿಕಲ್ ಕಂಪೋಸರ್ ಎಂದೇ ಫೇಮಸ್ ಆಗಿರುವ ಅರ್ಜುನ್ ಜನ್ಯರವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋಗಳು ಹರಿದಾಡುತ್ತಿದ್ದವು. ಇದೀಗ ಈ ಬಗ್ಗೆ ಸ್ವತಃ ಅರ್ಜುನ್ ಜನ್ಯರವರೇ ಪ್ರತಿಕ್ರಿಯಿಸುವ ಮೂಲಕ ಸುಳ್ಳು ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.

    ಈ ವಿಚಾರವಾಗಿ ಅರ್ಜುನ್ ಜನ್ಯರವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ, ಈ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಕುಟುಂಬದ ಪರಿಸ್ಥಿಯ ಬಗ್ಗೆ ಹಾಗೂ ನನ್ನ ಆರೋಗ್ಯದ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುತ್ತಿದ್ದಾರೆ. ಇದು ಸರಿ ಹೋಗಬಹುದೆಂದು ನಾನು ಸಮಾಧಾನವಾಗಿದ್ದೆ, ಆದರೆ ದಿನೇ ದಿನೇ ಇದು ಹೆಚ್ಚಾಗುತ್ತಿದೆ. ಜನರಲ್ಲಿ ನಾನು ವಿನಂತಿಸಿಕೊಳ್ಳುತ್ತೇನೆ. ಏಕೆಂದರೆ ಸಾಮಾಜಿಕ ಜಾಲಾತಾಣಗಳಲ್ಲಿ ನೀಡುತ್ತಿರುವ ಮಾಹಿತಿ ಅಪ್ಪಟ ಸುಳ್ಳು, ನಾನು ಆರೋಗ್ಯವಾಗಿಯೇ ಇದ್ದೇನೆ. ನನಗೆ ಕೋವಿಡ್ ಬಂದು ಗುಣಮುಖನಾಗಿ ವೈದ್ಯರ ಸಲಹೆಯಂತೆ, ಈಗ ಮನೆಯಲ್ಲಿಯೇ ಹತ್ತು ದಿನದ ಐಸೋಲೇಶನ್‍ನಲ್ಲಿದ್ದೇನೆ. ಇದರಲ್ಲಿ ಈಗಾಗಲೇ ಆರು ದಿನಗಳು ಪೂರ್ಣಗೊಂಡಿದೆ. ಇನ್ನು ಉಳಿದ ನಾಲ್ಕೈದು ದಿನಗಳು ಕಳೆದ ನಂತರ ನನ್ನ ದೈನಂದಿನ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ.

    ಮತ್ತೊಮ್ಮೆ ಈ ರೀತಿಯ ಹೀನ ಕಾರ್ಯಗಳನ್ನು ಮಾಡುತ್ತಿರುವವರಲ್ಲಿ ವಿನಂತಿಸಿಕೊಳ್ಳುತ್ತೇನೆ. ಇನ್ನು ಮುಂದಾದರೂ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಅಂತಾ ವಿನಂತಿಸಿಕೊಳ್ಳುತ್ತೇನೆ. ಇದರಿಂದ ಜನರಲ್ಲಿ ಕಳವಳ ಹಾಗೂ ಕುಟುಂಬದವರಿಗೂ ಇದರಿಂದ ಮಾನಸಿಕವಾಗಿ ನೋವು ಹಾಗೂ ತೊಂದರೆಯಾಗುತ್ತದೆ.

    ಈಗಾಗಲೇ ನನ್ನ ಗಮನಕ್ಕೆ ಬಂದಂತಹ ಎಲ್ಲಾ ಸಾಕ್ಷಿಗಳನ್ನು ಸೈಬರ್ ಪೊಲೀಸ್‍ಗೆ ನೀಡಿದ್ದೇನೆ. ದಯವಿಟ್ಟು ನೀವು ಮಾಡಿದ ವೀಡಿಯೋಗಳನ್ನು ಈ ಕೂಡಲೇ ತೆಗೆಯಬೇಕೆಂದು ಕೇಳಿಕೊಳ್ಳುತ್ತೇನೆ. ಇಂತಹ ಸಂದರ್ಭಗಳಲ್ಲಿ ಸಾಧ್ಯವಾದರೆ ಒಳ್ಳೆಯದನ್ನು ಬಯಸಿ ಸಹಕರಿಸಿ ಎಂದು ಲೆಟರ್ ಒಂದನ್ನು ಪೋಸ್ಟ್ ಮಾಡಿದ್ದಾರೆ.

    ಕಳೆದ ವರ್ಷ ಅರ್ಜುನ್ಯ ಜನ್ಯನವರು ಹೃದಾಯಾಘಾತಕ್ಕೆ ಒಳಗಾಗಿ ಮೈಸೂರಿನ ರಿಂಗ್ ರೋಡ್ ಬಳಿ ಇರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

  • ಬೇಸಿಗೆಯ ಬಿಸಿಲಿಗೆ ಚರ್ಮದ ಕಾಂತಿ ರಕ್ಷಣೆ ಮಾಡೋದು ಹೇಗೆ?

    ಬೇಸಿಗೆಯ ಬಿಸಿಲಿಗೆ ಚರ್ಮದ ಕಾಂತಿ ರಕ್ಷಣೆ ಮಾಡೋದು ಹೇಗೆ?

    ಮಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಸೌಂದರ್ಯದ ಕುರಿತಾಗಿ ಕಾಳಜಿಯನ್ನು ವಹಿಸುತ್ತಾರೆ. ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಬಣ್ಣವು ಕಂದು ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಇಂತಹ ಸಮಸ್ಯೆಗೆ ಕೆಲವು ಮನೆ ಮನೆಮದ್ದು ಮತ್ತು ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದಾಗಿದೆ.

    * ಬಿಸಿಲಿನಲ್ಲಿ ಹೊರಗಡೆ ಸುತ್ತಾಡಿ ಬಂದಿದ್ದೀರಾ ಎಂದಾದರೆ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ತ್ವಚೆಯ ತಾಪಮಾನ ಕುಗ್ಗುವುದರಿಂದ ತ್ವಚೆ ಕಪ್ಪಾಗುವುದನ್ನು ತಪ್ಪಿಸಬಹುದಾಗಿದೆ.

    * ಬಿಸಿಲಿನಲ್ಲಿ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ, ಪ್ರತಿ 2 ಗಂಟೆಗಳಿಗೊಮ್ಮೆ ಮಾರುಕಟ್ಟೆಯಲ್ಲಿ ಸಿಗುವ ಸನ್‍ಸ್ಕ್ರೀನ್ ಲೋಶನ್ ಚರ್ಮಗಳಿಗೆ ಹಚ್ಚ ಬಹುದಾಗಿದೆ.

    * ಬಿಸಿಲು ಮುಖಕ್ಕೆ ತಾಗದಂತೆ ಹ್ಯಾಟ್ ಹಾಕಿ, ಸ್ಟಾಲ್ ಉಪಯೋಗಿಸಿ, ಬಿಸಿಲಿನಲ್ಲಿ ಚಲಿಸುವಾಗ ಕೊಡೆ ಬಳಸಿ ಸೂರ್ಯನ ಪ್ರಖರ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಬಹುದು.

    * ಬೇಸಿಗೆ ಕಾಲದಲ್ಲಿ ದೇಹ ತ್ವಚೆ ಡ್ರೈ ಆಗುತ್ತಿರುತ್ತದೆ. ವಿಟಮಿನ್‍ಗಳನ್ನು ಹೊಂದಿರುವ ಹಣ್ಣು ಹಂಪಲುಗಳು, ಹಣ್ಣಿನ ರಸವನ್ನು ಸೇವಿಸಿ ದೇಹವನ್ನು ತಂಪಾಗಿರಿಸುವ ಮೂಲಕವೂ ಚರ್ಮದ ಕಾಂತಿಯನ್ನು ಕಾಪಾಡಬಹುದಾಗಿದೆ.

    * ಸಹಜವಾಗಿಯೇ ಬೇಸಿಗೆಯಲ್ಲಿ ಹೆಚ್ಚು ಬೆವರುತ್ತೇವೆ. ಆದ್ದರಿಂದ ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು. ಹೀಗಾಗಿ ಕನಿಷ್ಠ ದಿನಕ್ಕೆ 3-4 ಲೀಟರ್ ನೀರು ಕುಡಿಯುವುದು ಒಳ್ಳೆಯದು.

    * ನಿಂಬೆ ರಸಕ್ಕೆ ಮೊಸರು ಅಥವಾ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ಮುಖ ತೊಳೆದರೆ ಫ್ರೆಶ್ ಅನ್ನಿಸುತ್ತದೆ.


    * ಬೇಸಿಗೆಯಲ್ಲಿ ತಣ್ಣಿರಿನಿಂದ ಮುಖ ತೊಳೆಯಿರಿ. ಮೆತ್ತನೆಯ ಬಟ್ಟೆಯಿಂದ ಮುಖ ಒರೆಸಿ, ರೋಸ್ ವಾಟರ್ ಹಚ್ಚಬಹುದಾಗಿದೆ.

    * ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಅರಿಶಿಣ ಬೆರೆಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಇಮ್ಮಡಿಯಾಗುತ್ತದೆ.

    * ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ ಮತ್ತು ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯಿರಿ. ಬಿಸಿಲಿಗೆ ಕಪ್ಪು ಚುಕ್ಕೆ, ತುರಿಕೆ, ನವೆ ಉಂಟಾದರೆ ಮೊಸರು, ಟೊಮ್ಯಾಟೊ, ಲಿಂಬೆಹಣ್ಣಿನ ಜ್ಯೂಸ್ ಹಚ್ಚಬಹುದು.

  • ಮನೆ ಮದ್ದು ಮೂಲಂಗಿ ಸೇವನೆಯ ಲಾಭಗಳು

    ಮನೆ ಮದ್ದು ಮೂಲಂಗಿ ಸೇವನೆಯ ಲಾಭಗಳು

    ಡುಗೆಗೆ ಬಳಸುವ ತರಕಾರಿಯಲ್ಲಿ ಕೆಲವೊಂದು ಮಾತ್ರ ಆಯ್ಕೆ ಮಾಡಿಕೊಂಡು ತಿನ್ನುವುದು ಹೆಚ್ಚು. ಆದರೆ ನಾವು ಬೇಡ ಎಂದು ದೂರ ತಳ್ಳುವ ಮೂಲಂಗಿಯಿಂದ ನಮ್ಮ ಆರೋಗ್ಯಕ್ಕೆ ಹಲವು ಉತ್ತಮ ಪೋಷಕಾಂಶಗಳು ಸಿಗುತ್ತವೆ. ಮೂಲಂಗಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಸಿಗುವ ಅಂಶಗಳನ್ನು ಕೇಳಿದರೆ ಖಂಡಿತವಾಗಿಯೂ ಮೂಲಂಗಿಯನ್ನು ತಿನ್ನಲು ಪ್ರಾರಂಭಿಸುತ್ತಿರಿ.

    * ಪ್ರತಿದಿನ ಬೆಳಗ್ಗೆ ಮೂಲಂಗಿಯನ್ನು ತಿನ್ನುವುದರಿಂದ ಕಾಮಾಲೆ ಅಲ್ಲದೆ ಮಧುಮೇಹ ರೋಗವನ್ನು ಸಹ ದೂರ ಮಾಡಬಹುದು
    * ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಮೂಲಂಗಿಯನ್ನು ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದಾಗಿದೆ.
    * ಮೂಲಂಗಿ ರಸದೊಂದಿಗೆ ಶುಂಠಿ ರಸವನ್ನು ಬೆರಸಿ ಕುಡಿಯುವುದರಿಂದ ಹಸಿವು ಹೆಚ್ಚುವುದಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳನ್ನು ದೂರ ಮಾಡುತ್ತದೆ.

    * ಒಂದು ಚಮಚ ಜೇನು ತುಪ್ಪಕ್ಕೆ, ಒಂದು ಚಮಚ ಮೂಲಂಗಿ ರಸ ಸೇರಿಸಿ ಸೇವಿಸಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ.
    * ಮೂಲಂಗಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
    * ಜಾಂಡೀಸ್ ಅಥವಾ ಕಾಮಾಲೆ ರೋಗಕ್ಕೆ ಮೂಲಂಗಿ ರಾಮಬಾಣದಂತೆ ಕೆಲಸ ಮಾಡುತ್ತದೆ.
    * ಮೂಲಂಗಿ ಮತ್ತು ಉಪ್ಪು ಸೇರಿಸಿ ನುಣ್ಣಗೆ ಅರಿದು ಚೇಳು ಕಚ್ಚಿದ ಸ್ಥಳಕ್ಕೆ ಹಚ್ಚಿದರೆ ಚೇಳಿನ ವಿಷ ಏರುವುದಿಲ್ಲ

    ಮೂಲಂಗಿಯಿಂದ ಆರೋಗ್ಯಕ್ಕೆ ಬೇಕಾಗುವ ಉತ್ತಮ ಪ್ರಮಾಣದ ಫೈಬರ್ ಸಿಗುತ್ತದೆ. ಮೂಲಂಗಿಯನ್ನು ಬೇಡ ಎಂದು ದೂರ ತಳ್ಳುವ ಬದಲಾಗಿ ಇನ್ನಾದರೂ ಪ್ರತಿನಿತ್ಯದ ಆಹಾರದಲ್ಲಿ ಕೊಂಚ ಪ್ರಮಾಣದಲ್ಲಾದರೂ ಸೇರಿಸಿಕೊಳ್ಳಿ.