Tag: health

  • ಸಾಹಿತಿ ಪ್ರೊ.ದೊಡ್ಡ ರಂಗೇಗೌಡರ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ

    ಸಾಹಿತಿ ಪ್ರೊ.ದೊಡ್ಡ ರಂಗೇಗೌಡರ ಆರೋಗ್ಯ ವಿಚಾರಿಸಿದ ಸಚಿವ ಶಿವರಾಜ ತಂಗಡಗಿ

    – ಸಂಪೂರ್ಣ ವೈದ್ಯಕೀಯ ವೆಚ್ಚ ಸರ್ಕಾರದಿಂದ ಭರಿಸುವುದಾಗಿ ಘೋಷಣೆ

    ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಕೆಂಗೇರಿಯಲ್ಲಿರುವ ಗ್ಲನೆಗಲ್ ಬಿಜಿಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಸಾಹಿತಿ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯರಾದ ಪ್ರೊ. ದೊಡ್ಡ ರಂಗೇಗೌಡರನ್ನು (Doddarange Gowda) ಸಚಿವ ಶಿವರಾಜ ತಂಗಡಗಿ (Shivaraj Tangadagi) ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದರು.

    ಆಸ್ಪತ್ರೆಯ ವೈದ್ಯರಲ್ಲಿ ದೊಡ್ಡ ರಂಗೇಗೌಡರ ಆರೋಗ್ಯ ಪರಿಸ್ಥಿತಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಸಚಿವ ಶಿವರಾಜ ತಂಗಡಗಿ ಅವರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರದಿಂದಲೇ ಭರಿಸುವುದಾಗಿ ತಿಳಿಸಿದರು. ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು ಸೂಚಿಸಿದರು. ಇದನ್ನೂ ಓದಿ: ಮುಂಗಾರು ಚುರುಕು – ಕರಾವಳಿಗೆ ಮೂರು ದಿನ ರೆಡ್ ಅಲರ್ಟ್

    ಪ್ರೊ.ದೊಡ್ಡ ರಂಗೇಗೌಡರ ಕುಟುಂಬ ಸದಸ್ಯರನ್ನು ಸಹ ಭೇಟಿ ಮಾಡಿದ ಸಚಿವ ಶಿವರಾಜ ತಂಗಡಗಿ, ಅವರಿಗೆ ಧೈರ್ಯ ಹೇಳಿದರು. ಪ್ರೊ.ದೊಡ್ಡ ರಂಗೇಗೌಡರು ಕನ್ನಡ ಸಾಂಸ್ಕೃತಿಕ ಲೋಕದ ಆಸ್ತಿ. ಅವರ ಬಗ್ಗೆ ಅಪಾರವಾದ ಕಾಳಜಿ ಇದೆ. ಸರ್ಕಾರದಿಂದ ಅವರಿಗೆ ಎಲ್ಲ ರೀತಿಯ ನೆರವನ್ನು ನೀಡುವುದಾಗಿ ತಿಳಿಸಿದರು. ಇದನ್ನೂ ಓದಿ: ತಿರುಪತಿಗೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್ – ಸೇವೆಗೆ ಸಿದ್ಧವಾಯ್ತು ಕೃಷ್ಣ ರಾಜೇಂದ್ರ ಕಲ್ಯಾಣ ಮಂಟಪ

  • ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

    ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

    ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಾನಾ ಕಾಯಿಲೆಗಳಿಗೆ ತುತ್ತಾಗಿರುವ ಸಲ್ಮಾನ್ ಗೆ ಸಮಸ್ಯೆ ಉಲ್ಭಣಿಸಿದ್ದಲ್ಲಿ ಸ್ಟ್ರೋಕ್ ಕೂಡ ಆಗಬಹುದು ಅನ್ನುವ ಆತಂಕದಲ್ಲಿದ್ದಾರೆ ನಟ. ಈ ಮಾಹಿತಿಯನ್ನು ಸ್ವತಃ ಸಲ್ಮಾನ್ ಖಾನ್ ಅವರೇ ಹೇಳಿಕೊಂಡಿದ್ದಾರೆ.

    ಕಪಿಲ್ ಶೋದಲ್ಲಿ ಅನಾರೋಗ್ಯದ ಕುರಿತು ಮಾತಾಡಿರುವ ಸಲ್ಮಾನ್ ಖಾನ್, ತಾವು ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಒಂದೊಂದು ಸಲ ಮೆದುಳಿನ ರಕ್ತನಾಳದಲ್ಲಿ ಊತ ಕಾಣಿಸಿಕೊಳ್ಳುತ್ತದೆಯಂತೆ. ಇದು ಅತಿಯಾದರೆ, ನರ ಛಿದ್ರಗೊಂಡು ಪ್ರಾಣಕ್ಕೆ ಅಪಾಯ ತರುವುದು ಅನ್ನೋದು ಸಲ್ಮಾನ್ ಖಾನ್ ಮಾತು. ಹಾಗಾಗಿ ಪದೇ ಪದೇ ಅವರು ಸ್ಟ್ರೋಕ್‌ನ ಆತಂಕಕ್ಕೆ ಒಳಗಾಗುತ್ತಿದ್ದಾರಂತೆ.

    ಈ ಶೋನಲ್ಲಿ ಕೇವಲ ಕಾಯಿಲೆಗಳ ಬಗ್ಗೆ ಮಾತ್ರವಲ್ಲ, ಮದ್ವೆಯ ಬಗ್ಗೆಯೂ ಮಾತಾಡಿದ್ದಾರೆ. ಇವತ್ತಿನ ವಿಚ್ಛೇದನಗಳನ್ನು ನೋಡಿದರೆ, ಮದುವೆ ಭಯ ಆಗುತ್ತದೆ ಅಂದಿದ್ದಾರೆ. ಸಿಲ್ಲಿ ಕಾರಣಕ್ಕೆ ದಂಪತಿಗಳು ದೂರವಾಗುತ್ತಿದ್ದಾರೆ. ಆಸ್ತಿ, ಹಣದಾಸೆಗೂ ಡಿವೋರ್ಸ್ ಗಳು ನಡೆಯುತ್ತಿವೆ ಅಂತಾನೂ ಸಲ್ಮಾನ್ ನೇರವಾಗಿ ಮಾತಾಡಿದ್ದಾರೆ.

  • ಹಾಸನ | ಊಟಕ್ಕೆ ಕುಳಿತಾಗ ಕಾಣಿಸಿಕೊಂಡ ಎದೆ ನೋವು – ಮೇಲೇಳುತ್ತಿದ್ದಂತೆ ಕುಸಿದುಬಿದ್ದ ವ್ಯಕ್ತಿ ಸಾವು

    ಹಾಸನ | ಊಟಕ್ಕೆ ಕುಳಿತಾಗ ಕಾಣಿಸಿಕೊಂಡ ಎದೆ ನೋವು – ಮೇಲೇಳುತ್ತಿದ್ದಂತೆ ಕುಸಿದುಬಿದ್ದ ವ್ಯಕ್ತಿ ಸಾವು

    ಹಾಸನ: ಹೃದಯಾಘಾತದಿಂದ (Heart Attack) 35 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನ (Hassan) ನಗರದ ಸತ್ಯಮಂಗಲ ಬಡಾವಣೆಯಲ್ಲಿ ನಡೆದಿದೆ.

    ಮೃತರನ್ನು ಚೇತನ್ (35) ಎಂದು ಗುರುತಿಸಲಾಗಿದೆ. ಮೂಲಕತಃ ಕಿಕ್ಕೇರಿ ಮೂಲದವರಾದ ಚೇತನ್ ನಗರದ ಹಳೇ ಬಸ್ ನಿಲ್ದಾಣದ ಸಮೀಪ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದರು. ಸತ್ಯಮಂಗಲ ಬಡಾವಣೆಯಲ್ಲಿ ಪತ್ನಿ ಹಾಗೂ ಮಗು ಜೊತೆ ವಾಸವಿದ್ದರು. ಇದನ್ನೂ ಓದಿ: Hassan | ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು

    ರಾತ್ರಿ ಅಂಗಡಿ ಬಾಗಿಲು ಹಾಕಿಕೊಂಡು ಮನೆಗೆ ಚೇತನ್‌ ಮನೆಗೆ ಬಂದಿದ್ದರು. ಈ ವೇಳೆ ಅವರ ಪತ್ನಿ ಊಟಕ್ಕೆ ಕರೆದಿದ್ದು, ಊಟಕ್ಕೆ ಕುಳಿತುಕೊಳ್ಳುವಾಗ ದಿಢೀರ್ ಎದೆನೋವು ಕಾಣಿಸಿಕೊಂಡಿದೆ. ಎದೆ ನೋಯುತ್ತಿದೆ ಎಂದು ಪತ್ನಿಗೆ ಹೇಳಿ, ಮೇಲೆ‌ ಎದ್ದೇಳುವಾಗಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಷ್ಟರಲ್ಲಿ ಚೇತನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

    ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಇದನ್ನೂ ಓದಿ: ಬೆಂಗಳೂರು | ನಿಂತಲ್ಲೇ ಹೃದಯಾಘಾತ – ಕುಸಿದುಬಿದ್ದು ಕ್ಯಾಬ್‌ ಚಾಲಕ ಸಾವು

  • ಕಲಬುರಗಿ | ನಿವೃತ್ತ ನರ್ಸ್ ಯಡವಟ್ಟಿಗೆ ತಾಯಿ, ನವಜಾತ ಶಿಶು ಬಲಿ

    ಕಲಬುರಗಿ | ನಿವೃತ್ತ ನರ್ಸ್ ಯಡವಟ್ಟಿಗೆ ತಾಯಿ, ನವಜಾತ ಶಿಶು ಬಲಿ

    ಕಲಬುರಗಿ: ನಿವೃತ್ತ ನರ್ಸ್ ಯಡವಟ್ಟಿನಿಂದ ತಾಯಿ ಮಗು ಬಲಿಯಾದ್ದಾರೆ ಎಂಬ ಆರೋಪ ಕಲಬುರಗಿ (Kalaburagi) ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕೇಳಿಬಂದಿದೆ.

    ಇಂಗಳಗಿ ಗ್ರಾಮದ ನಿವಾಸಿ ಶ್ರೀದೇವಿ ಪ್ರಭಾನೂರ್ (28) ಹಾಗೂ ನವಜಾತ ಶಿಶು ಮೃತಪಟ್ಟಿದೆ. ಮಹಿಳೆ ನಿವೃತ ಆರೋಗ್ಯ ಸಹಾಯಕಿ ಗಂಗುಬಾಯಿ ಬಳಿ ಹೆರಿಗೆಗೆ ದಾಖಲಾಗಿದ್ದಳು. ಈ ವೇಳೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ. ನಿವೃತ್ತ ನರ್ಸ್ ಯಡವಟ್ಟಿನಿಂದಲೇ ತಾಯಿ ಹಾಗೂ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಧಾರವಾಡ | ಹಿಟ್ & ರನ್‌ಗೆ ಎಎಸ್ಐ ಬಲಿ

    ಮೃತ ಶ್ರೀದೇವಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಈ ಬಾರಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.

    ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಸ್9 ವಿರುದ್ಧ ಕ್ರಮಜರುಗಿಸುವಂತೆ ವಾಡಿ ಪೊಲೀಸರಿಗೆ ಮಹಿಳೆಯ ಪತಿ ದೂರು ನೀಡಿದ್ದಾರೆ. ಇದನ್ನೂ ಓದಿ: ಹೊಳೆ ದಡದಲ್ಲಿ ಮಹಿಳೆ ಶವ ಹೂತಿಟ್ಟಿದ್ದ ಕೇಸ್‌ಗೆ ಟ್ವಿಸ್ಟ್; ಲವ್ವಿಡವ್ವಿ ಅಂತಾ ಹೋಗಿದ್ದವನಿಂದಲೇ ಹತ್ಯೆ

  • ರೋಗನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆಕಾಯಿ ಸೂಪ್ – ಮಾಡೋದು ಹೇಗೆ ಗೊತ್ತಾ?

    ರೋಗನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆಕಾಯಿ ಸೂಪ್ – ಮಾಡೋದು ಹೇಗೆ ಗೊತ್ತಾ?

    ಳೆಗಾಲ ಆರಂಭ ಆದ್ರೆ ಸಾಕು ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳು ಆರಂಭ ಆಗ್ತಾವೆ.. ಇದರ ವಿರುದ್ಧ ಹೋರಾಡೋಕೆ ನಾವು ತಯಾರಾಗಬೇಕು. ಅದಕ್ಕಾಗಿ ಆರೋಗ್ಯ (Health) ವೃದ್ಧಿಸುವ ಆಹಾರ ಸೇವಿಸಬೇಕು. ಇವತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನುಗ್ಗೆಕಾಯಿ ಸೂಪ್ (Drumstick Soup) ಮಾಡೋದು ಹೇಗೆ ಅಂತ ಹೇಳ್ಕೊಡ್ತಿನಿ. ನೀವು ಮಾಡ್ನೋಡಿ..

    ಬೇಕಾಗುವ ವಸ್ತುಗಳು 

    • ನುಗ್ಗೆಕಾಯಿ 4-5
    • ಈರುಳ್ಳಿ,
    • ಟೊಮ್ಯಾಟೊ
    • ಕೋಸುಗಡ್ಡೆ (ಅರ್ಧ)
    • ಬೆಳ್ಳುಳ್ಳಿ
    • ಶುಂಠಿ
    • ಉಪ್ಪು
    • ಅರಿಶಿನಪುಡಿ
    • ಜೀರಿಗೆ
    • ತುಪ್ಪ

    ನುಗ್ಗೆಕಾಯಿ ಸೂಪ್‌ ತಯಾರಿಸುವುದು ಹೇಗೆ ?
    ಮೊದಲು ನುಗ್ಗೆಕಾಯಿಯನ್ನು ಸ್ವಚ್ಛವಾಗಿ ತೊಳೆದು ಕತ್ತರಿಸಿಟ್ಟುಕೊಳ್ಳಬೇಕು. ಬಳಿಕ ಈರುಳ್ಳಿ, ಟೊಮ್ಯಾಟೊ, ಕೋಸುಗಡ್ಡೆ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕತ್ತರಿಸಿ ಸೇರಿಸಿ, ಬೇಕಾದಷ್ಟು ನೀರು ಹಾಕಿ ಪ್ರೆಶರ್‌ ಕುಕ್ಕರ್‌ನಲ್ಲಿ ಇಡಬೇಕು.

    ನಂತರ ಉಪ್ಪು, ಅರಿಶಿನ ಪುಡಿ ಮತ್ತು ಜೀರಿಗೆ ಸೇರಿಸಿ. ಪ್ರಶರ್‌ ಕುಕ್ಕರ್‌ ಸುಮಾರು 5 ವಿಷಲ್ ಹಾಕಿದ ನಂತರ ಅದನ್ನು ತಣ್ಣಗಾಗಲು ಬಿಡಬೇಕು. ನಂತರ ಕುಕ್ಕರ್‌ನಿಂದ ನುಗ್ಗೆಕಾಯಿ ಪೀಸ್‌ಗಳನ್ನು ತೆಗೆದು, ಅದನ್ನು ಚಮಚದಿಂದ ಕಲಿಸಬೇಕು. ನಂತರ ನುಗ್ಗೆಕಾಯಿಗಳನ್ನು ಮತ್ತೆ ಆ ಮಿಶ್ರಣಕ್ಕೆ ಸೇರಿಸಿ ಕುದಿಸಬೇಕು.

    ನಂತರ, ತುಪ್ಪ, ಜೀರಿಗೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಹಾಕಬೇಕು. ಈಗ ನುಗ್ಗೆ ಕಾಯಿ ಸೂಪ್‌ ಸವಿಯಲು ಸಿದ್ಧ! ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಸೂಪ್‌ ತುಂಬಾ ಸಹಕಾರಿಯಾಗಿದೆ.

  • ಮನೆ ಮದ್ದು | ಮೊಡವೆಯ ಸಮಸ್ಯೆ ಕಾಡ್ತಿದ್ಯಾ? ಇಲ್ಲಿದೆ ಸುಲಭ ಪರಿಹಾರ

    ಮನೆ ಮದ್ದು | ಮೊಡವೆಯ ಸಮಸ್ಯೆ ಕಾಡ್ತಿದ್ಯಾ? ಇಲ್ಲಿದೆ ಸುಲಭ ಪರಿಹಾರ

    ಇಂದಿನ ಯುವಜನ ದೈಹಿಕ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡ್ತಾರೆ. ಅದಕ್ಕಾಗಿ ಟಿವಿ ಜಾಹೀರಾತಿನಲ್ಲಿ ತೋರಿಸುವ, ಬ್ಯೂಟಿ ಪ್ರೊಡಕ್ಟ್‌ಗಳನ್ನ ದುಬಾರಿ ಹಣ ಕೊಟ್ಟು ಖರೀದಿ ಮಾಡ್ತಾರೆ. ಇಂತಹ ರಾಸಾಯನಿಕ ವಸ್ತುಗಳ ಬಳಕೆಯಿಂದಾಗಿ ಮುಖದಲ್ಲಿ ಮೊಡವೆಗಳ ಸಮಸ್ಯೆಗಳು (Pimple Problem) ಹೆಚ್ಚಾಗುತ್ತದೆ. ಕೆಲವರಂತೂ ಈ ಮೊಡವೆಗಳಿಂದ ಮುಕ್ತಿ ಪಡೆಯಲು ಹರಸಾಹಸ ಪಡುತ್ತಾರೆ. ದುಬಾರಿ ಕಾಸ್ಮೆಟಿಕ್ ಖರೀದಿಸಿ ಮುಖಕ್ಕೆ ಹಚ್ಚಿ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ.

    ಈ ಪಿಂಪಲ್ (Pimple) ಸಮಸ್ಯೆ ಮುಖದ ಸೌಂದರ್ಯವನ್ನೇ ಹಾಳುಮಾಡುತ್ತದೆ ಅನ್ನೋದು ಕೆಲವರ ಅಭಿಪ್ರಾಯ. ಇನ್ನೂ ಕೆಲವರು ಇದೇ ಸಮಸ್ಯೆಯಿಂದ ಕೊರಗುತ್ತಿರುತ್ತಾರೆ. ಈ ಮೊಡವೆಗಳು ಕೆಲವೊಮ್ಮೆ ಹಾರ್ಮೋನ್ ಸಮಸ್ಯೆಯಿಂದ ಅಥವಾ ನಮ್ಮ ಆಹಾರ ಶೈಲಿಯಿಂದ ಬರುತ್ತದೆ. ಆದ್ರೆ ಇದನ್ನು ಹೋಗಲಾಡಿರುವ ಉಪಾಯ ಗೊತ್ತಿದ್ದವರು ಚಿಂತೆ ಮಾಡಬೇಕಿಲ್ಲ, ಕೊರಗುತ್ತಾ ಕೂರಬೇಕಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಸುಲಭವಾಗಿ ಮೊಡವೆ ಸಮಸ್ಯೆಯಿಂದ ಹೊರಬರುವುದು ಹೇಗೆ? ಅನ್ನೋದನ್ನ ತಿಳಿಯಬೇಕಾದ್ರೆ ಮುಂದೆ ಓದಿ…

    ಜೇನು ತುಪ್ಪ (Honey)
    ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಜೇನುತುಪ್ಪ ಮೊಡವೆ ನಿವಾರಿಸಲು ಸಹಕಾರಿ. ರಾತ್ರಿ ಮಲಗುವ ಮುನ್ನ ಮೊಡವೆ ಇರುವ ಭಾಗಕ್ಕೆ ಜೇನುತುಪ್ಪ ಹಚ್ಚಿ, ಬ್ಯಾಂಡೇಜ್‌ನಿಂದ ಮುಚ್ಚಬೇಕು. ರಾತ್ರಿಯಿಡೀ ಹಾಗೆ ಬಿಟ್ಟು, ಬೆಳಗ್ಗೆ ಎದ್ದ ಕೂಡಲೇ ಬ್ಯಾಂಡೇಜ್ ತೆಗೆದು ಮುಖವನ್ನು ತೊಳೆಯಬೇಕು. ಇದೇ ರೀತಿ ಮೊಡವೆ ಏಳುವ ಜಾಗಗಳಿಗೆ ಮಾಡಿದರೆ ಸುಲಭವಾಗಿ ಈ ಸಮಸ್ಯೆಯಿಂದ ಹೊರಬರಬಹುದು.

    ಐಸ್‌ಕ್ಯೂಬ್ (Ice Cube)
    ಐಸ್‌ಕ್ಯೂಬ್‌ನಿಂದಲೂ ಮುಖದಲ್ಲಿರುವ ಮೊಡವೆಯಿಂದ ನಿವಾರಣೆ ಪಡೆಯಬಹುದು. ಪ್ರತಿದಿನ 2 ರಿಂದ 3 ಬಾರಿ ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಮೊಡವೆಗಳು ಮಾಯವಾಗುತ್ತದೆ. ಈ ಐಸ್‌ಕ್ಯೂಬ್‌ಗಳಿಂದ ಮಸಾಜ್ ಮಾಡುವುದರಿಂದ ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ. ಅಲ್ಲದೇ ಚರ್ಮವನ್ನು ಹೆಚ್ಚು ತೆವವಾಗಿಸುತ್ತದೆ. ಇನ್ನು ಒಂದು ಬೌಲ್‌ನಲ್ಲಿ ನೀರು ತೆಗೆದುಕೊಂಡು ಅದಕ್ಕೇ 7ರಿಂದ 8 ಐಸ್‌ಕ್ಯೂಬ್‌ಗಳನ್ನು ಹಾಕಿ ಮುಖವನ್ನು ಈ ನೀರಿನಲ್ಲಿ 2 ರಿಂದ 3 ನಿಮಿಷ ಇಡಬೇಕು. ಇದೇ ರೀತಿ 2 ರಿಂದ 3 ಬಾರಿ ಮಾಡುವುದರಿಂದ ಮುಖದಲ್ಲಿರುವ ಡೆಡ್ ಸ್ಕಿನ್ ಸೆಲ್ಸ್‌ಗಳನ್ನ ಹೋಗಲಾಡಿಸುತ್ತದೆ.

    ಪಪ್ಪಾಯಿ ಹಣ್ಣು (Papaya)
    ಪಪ್ಪಾಯಿ ಹಣ್ಣು ವಿಟಮಿನ್ ಸಿ ಅಂಶವನ್ನು ಹೊಂದಿದೆ. ಪೂರ್ತಿ ಹಣ್ಣಾಗಿರುವ ಪಪ್ಪಾಯಿಯನ್ನು ಸಣ್ಣಗೆ ತುಂಡು ಮಾಡಿ, ಇದರಿಂದ ಮುಖಕ್ಕೆ ಮಸಾಜ್ ಮಾಡಬೇಕು. ಇದು ಸಹ ಮುಖದಲ್ಲಿರುವ ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ. 5 ನಿಮಿಷಗಳ ಬಳಿಕ ಮುಖವನ್ನು ಉಗುರು ಬೆಚ್ಚ ನೀರಿನಲ್ಲಿ ತೊಳೆಯಿರಿ. ಇದು ನಿಮ್ಮ ಮುಖದಲ್ಲಿರುವ ಮೊಡವೆಯನ್ನು ಸುಲಭವಾಗಿ ನಿವಾರಿಸುತ್ತದೆ.

    ಅಲೋವೆರಾ (Alovera)
    ಇದು ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದ್ದು, ಉರಿಯೂತ ನಿವಾರಕವಾಗಿದೆ. ಅಲ್ಲದೇ ಮೊಡವೆಯನ್ನು ಪರಿಣಾಮಕಾರಿಯಾಗಿ ಶಮನ ಮಾಡಲು ಅಲೋವೆರಾ ಸಹಾಯ ಮಾಡುತ್ತದೆ. ಅಲೋವೆರಾವು ಹೆಚ್ಚು ನೀರಿನಾಂಶವನ್ನು ಹೊಂದಿರುವುದರಿಂದ ತ್ವಚೆಗೆ ತೇವಾಂಶವನ್ನು ನೀಡಿ, ಉತ್ತಮವಾದ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಮುಖವನ್ನು ಚೆನ್ನಾಗಿ ತೊಳೆದು, ಬಳಿಕ ಅಲೋವೆರಾ ಜೆಲ್ ಅಥವಾ ಲೋಳೆಯನ್ನು ತ್ವಚೆಗೆ ಅನ್ವಯಿಸಬೇಕು. 30 ನಿಮಿಷದ ನಂತರ ಪುನಃ ಮುಖವನ್ನು ತೊಳೆಯಿರಿ.

    ತೆಂಗಿನ ಎಣ್ಣೆ (Coconut Oil)
    ಬಹುಪಯೋಗಿ ತೆಂಗಿನ ಎಣ್ಣೆಯು ಸೌಂದರ್ಯ ಹೆಚ್ಚಿಸಲೂ ಬಳಸಲಾಗುತ್ತದೆ. ಆಹಾರದ ತಯಾರಿಕೆಗೂ ತೆಂಗಿನ ಎಣ್ಣೆಯನ್ನು ಉಪಯೋಗಿಸುತ್ತಾರೆ. ತೆಂಗಿನ ಎಣ್ಣೆಯು ಉರಿಯೂತ ನಿವಾರಣೆ ಗುಣ ಮತ್ತು ಬ್ಯಾಕ್ಟೀರಿಯಾ ವಿರೋಧಿ ಸಂಯುಕ್ತಗಳನ್ನು ಹೊಂದಿದೆ. ತೆಂಗಿನ ಎಣ್ಣೆಯು ಮೊಡವೆಗಳನ್ನು ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ರಾತ್ರಿ ಮಲಗುವ ಮುನ್ನ ತ್ವಚೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆದಷ್ಟೂ ಬೇಗ ಮೊಡವೆಯನ್ನು ನಿವಾರಣೆ ಮಾಡುತ್ತದೆ. ಅಲ್ಲದೇ ಮೊಡವೆಗೆ ಶಾಶ್ವತ ಪರಿಹಾರವನ್ನು ನೀಡುತ್ತದೆ.

    ಮೊಸರು (Curd)
    ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಶುಷ್ಕ ತ್ವಚೆಯನ್ನು ಹೊಂದಲು ಸಹಕಾರಿಯಾಗಿದೆ. ಮುಖದ ಭಾಗಕ್ಕೆ ಮೊಸರನ್ನು ಹಚ್ಚಿ, 10 ನಿಮಿಷಗಳ ಕಾಲ ಅಥವಾ ಒಣಗುವವರೆಗೆ ಹಾಗೆಯೇ ಬಿಡಿ, ನಂತರ ತೊಳೆಯಿರಿ. ಅಲ್ಲದೇ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದಲೂ ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಉತ್ತಮ ಮಾರ್ಗವಾಗಿದೆ.

    ಮೊಡವೆಗಳಿಂದ ನಿವಾರಣೆ ಪಡೆಯಲು ಬೇರೆ ಬೇರೆ ಕಾಸ್ಮೆಟಿಕ್ ಅಥವಾ ಮೆಡಿಸಿನ್‌ಗಳನ್ನು ತೆಗೆದುಕೊಳ್ಳುವ ಬದಲು ಮನೆಯಲ್ಲೇ ಸಿಗುವ ವಸ್ತುಗಳಿಂದ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಈ ಮನೆಮದ್ದುಗಳು ಆರೋಗ್ಯಕ್ಕೆ ಅಡ್ಡಪರಿಣಾಮವನ್ನು ಬೀರದೆ ಶುಷ್ಕ ಹಾಗೂ ಕಾಂತಿಯುತ ತ್ವಚೆಯನ್ನು ಪಡೆಯಲು ಸಹಕರಿಸುತ್ತದೆ.

  • ಕೋವಿಡ್ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧ – ಮಕ್ಕಳಿಗೆ ಜ್ವರ, ಶೀತ ಇದ್ರೆ ರಜೆ ಕೊಡಲು ಸಿಎಂ ಸೂಚನೆ

    ಕೋವಿಡ್ ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧ – ಮಕ್ಕಳಿಗೆ ಜ್ವರ, ಶೀತ ಇದ್ರೆ ರಜೆ ಕೊಡಲು ಸಿಎಂ ಸೂಚನೆ

    – ಗರ್ಭಿಣಿಯರು, ವೃದ್ಧರಿಗೆ ಮಾಸ್ಕ್ ಕಡ್ಡಾಯ
    – ಸಾರ್ವಜನಿಕರ ಅನುಕೂಲಕ್ಕೆ ಕೊರೊನಾ ಸಹಾಯವಾಣಿ

    ಬೆಂಗಳೂರು: ಮಹಾಮಾರಿ ಕೋವಿಡ್ (Covid-19) ಎದುರಿಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ವಯಸ್ಕರು, ಬಾಣಂತಿ ಹಾಗೂ ಮಕ್ಕಳ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸಿಎಂ (Siddaramaiah) ಖಡಕ್ ಸೂಚನೆ ನೀಡಿದ್ದಾರೆ.

    ಕೋವಿಡ್‌ಗೆ ಸಂಬಂಧಿಸಿದಂತೆ ಪರಿಸ್ಥಿತಿ ಅವಲೋಕಿಸಲು ಆರೋಗ್ಯ ಇಲಾಖೆ (Health Department) ಮತ್ತು ಆರೋಗ್ಯ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾವೇರಿ ನಿವಾಸದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳು, ತಜ್ಞರು ಮತ್ತು ಸಚಿವರುಗಳಿಂದ ಮಾಹಿತಿ ಪಡೆದರು. ಎಂತಹದ್ದೇ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿರುವಂತೆ ಸಿಎಂ ಸೂಚನೆ ನೀಡಿದರು. ಇದನ್ನೂ ಓದಿ: ಮಂಡ್ಯದಲ್ಲಿ ಭಾರೀ ಮಳೆ – ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಳ

    ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥರಿಂದ ಮಾಹಿತಿ ಪಡೆದ ಸಿಎಂ, ಕಳೆದ ಜನವರಿಯಿಂದಲೂ ಕೊರೊನಾ ಪ್ರಕರಣಗಳು ಅಲ್ಲಲ್ಲಿ ಒಂದೂ ಎರಡು ಕಾಣಬರುತ್ತಿದ್ದು, ಮೇ ತಿಂಗಳಲ್ಲಿ ಉಲ್ಬಣವಾಗಿದೆ. ಮೇ ತಿಂಗಳ ನಾಲ್ಕನೇ ವಾರಕ್ಕೆ 62 ಪ್ರಕರಣಗಳು ವರದಿಯಾಗಿವೆ. ಆದರೆ ಗಂಭೀರ ಎನ್ನುವಂತಹ ಪ್ರಕರಣಗಳ ಸಂಖ್ಯೆ ಒಂದು ಮಾತ್ರ ಇದೆ. ಸಾರಿ ಪ್ರಕರಣಗಳಲ್ಲಿ ತಪಾಸಣೆ ಕಾರ್ಯ ಈಗಾಗಲೇ ನಡೆಯುತ್ತಿದೆ. ನೆರೆಯ ರಾಜ್ಯಗಳಾದ ಕೇರಳದಲ್ಲಿ 95, ತಮಿಳು ನಾಡಿನಲ್ಲಿ 66, ಮಹಾರಾಷ್ಟ್ರ ಗಳಲ್ಲಿ 56 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು. ಇದನ್ನೂ ಓದಿ: ಶಾಂತಿಯುತವಾಗಿ ಬದುಕಬೇಕಾದ್ರೆ ರೊಟ್ಟಿ ತಿನ್ನಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ರೆಡಿ ಇರುತ್ತೆ: ಮೋದಿ ವಾರ್ನಿಂಗ್‌

    ಮಕ್ಕಳಿಗೆ ಜ್ವರ ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬಂದರೆ ಶಾಲೆಗೆ ಕಳುಹಿಸದಂತೆ ಪೋಷಕರು ಕ್ರಮ ವಹಿಸಲು, ಶಾಲಾ ಕಾಲೇಜು ಮಂಡಳಿಗಳು ನಿಗಾ ವಹಿಸಲು ಸೂಚಿಸುವಂತೆ ಕ್ರಮ ಕೈಗೊಳ್ಳಲು ತಿಳಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ, ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ವೆಂಟಿಲೇಟರ್ ಸೇರಿದಂತೆ ಮೂಲಭೂತ ಸೌಕರ್ಯಗಳು ಕಡ್ಡಾಯವಾಗಿರುವಂತೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಇದನ್ನೂ ಓದಿ: ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಮುಖ್ಯರಸ್ತೆ, ಸರ್ವಿಸ್ ರಸ್ತೆ ವಿಲೀನ – ಡಿಕೆಶಿ ಸ್ಥಳ ಪರಿಶೀಲನೆ

    ಸಿಎಂ ಸೂಚನೆ ಏನು?
    * ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಚಿತವಾಗಿಯೇ ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ಎಲ್ಲಾ ಸವಲತ್ತು, ಸಲಕರಣೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು.
    * ಸದ್ಯಕ್ಕೆ ಆತಂಕ ಪಡುವ ಪರಿಸ್ಥಿತಿ ಬಂದಿಲ್ಲವಾದರೂ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ದಪಡಿಸಿಟ್ಟುಕೊಳ್ಳಿ.
    * ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಈ ಬಗ್ಗೆ ಅರಿವು ಮೂಡಿಸಬೇಕು.
    * ಪ್ರತೀ ವಾರ ಅಥವಾ ಅಗತ್ಯ ಬಿದ್ದರೆ ಮೂರು ದಿನಕ್ಕೊಮ್ಮೆ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಾ ತೀವ್ರ ನಿಗಾ ಇಡಬೇಕು.
    * ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ, ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಿ ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು.
    * ಶೀತ, ನೆಗಡಿ, ಜ್ವರ ಇರುವ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಆರೋಗ್ಯಕರ. ಶಾಲೆಗಳೂ ಈ ಬಗ್ಗೆ ಗಮನ ಹರಿಸಿ ಶೀತ, ನೆಗಡಿ ಇರುವ ಮಕ್ಕಳನ್ನು ವಾಪಸ್ ಪೋಷಕರ ಮೂಲಕ ಮನೆಗೆ ಕಳುಹಿಸಬೇಕು.
    * ಬಾಣಂತಿ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
    * ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೊನಾ ಸಹಾಯವಾಣಿ ಪ್ರಾರಂಭ ಮಾಡಲು ಸೂಚನೆ ನೀಡಿದರು.
    * ಮುಂದಿನ ದಿನಗಳಲ್ಲಿ ಅವಶ್ಯಕತೆ ಕಂಡು ಬಂದರೆ ವಿಮಾನ ನಿಲ್ದಾಣಗಳಲ್ಲಿ ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ತಪಾಸಣಾ ಘಟಕಗಳನ್ನು ಪ್ರಾರಂಭಿಸಲು ಕ್ರಮ ವಹಿಸುವಂತೆ ಸೂಚಿಸಿದರು.
    * ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಇರಬಾರದು. ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಆಸ್ಪತ್ರೆಗಳೂ ಸರ್ವ ಸನ್ನದ್ಧವಾಗಿ ಇರುವಂತೆ ಸೂಚಿಸಿದರು.
    * ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಲು ಸೂಚಿಸಿದರು.
    * ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಈಗಾಗಲೇ ಪಾಲಿಸುತ್ತಿದ್ದು, ರೂಪಾಂತರಿ ಕೊರೊನಾ ವೈರಾಣುವಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆಯಾಗಿ ರೋಗ ನಿಯಂತ್ರಣ ವ್ಯಾಕ್ಸಿನ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ಶುರುವಾದ ಅರ್ಧ ಗಂಟೆಯ ನಂತರವೇ ಪಾಕಿಸ್ತಾನಕ್ಕೆ ಮಾಹಿತಿ ನೀಡಿದ್ದೆವು: ಜೈಶಂಕರ್

  • ಒಂದು ವಾರ ಕಾದು ನೋಡಿ ಕೋವಿಡ್ ಗೈಡ್‍ಲೈನ್ಸ್ ಬಿಡುಗಡೆ? – ಯಾವ ರೂಲ್ಸ್ ಜಾರಿ ಆಗಬಹುದು?

    ಒಂದು ವಾರ ಕಾದು ನೋಡಿ ಕೋವಿಡ್ ಗೈಡ್‍ಲೈನ್ಸ್ ಬಿಡುಗಡೆ? – ಯಾವ ರೂಲ್ಸ್ ಜಾರಿ ಆಗಬಹುದು?

    ಬೆಂಗಳೂರು: ರಾಜ್ಯದಲ್ಲಿ ನಿಧಾನವಾಗಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದೆ. ಇದರಿಂದ ಒಂದು ವಾರಗಳ ಕಾಲ ಕೋವಿಡ್ ಸ್ಥಿತಿಗತಿ ಆಧರಿಸಿ ಗೈಡ್‍ಲೈನ್ಸ್ ಬಿಡುಗಡೆಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಕೇಸ್ ಏರಿಕೆಯಾದರೆ ನಿಯಂತ್ರಣ ಕ್ರಮಗಳ ಜಾರಿಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಏನು ರೂಲ್ಸ್ ಜಾರಿ ಆಗಬಹುದು?
    1. ಆಸ್ಫತ್ರೆಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಬಹುದು
    2. ಸಾಮಾಜಿಕ ಅಂತಹ ಪಾಲನೆಗೆ ಸೂಚಿಸಬಹುದು
    3. ಸಭೆ, ಸಮಾರಂಭಗಳಲ್ಲಿ ಮಾಸ್ಕ್ ಬಳಕೆಗೆ ಸೂಚಿಸಿ, ಸಾಮಾಜಿಕ ಅಂತರ ಪಾಲನೆಗೆ ಸೂಚಿಸಬಹುದು
    4. ಸ್ಯಾನಿಟೈಸರ್ ಬಳಕೆಗೆ ಸೂಚಿಸಬಹುದು
    5. ಕೇಸ್ ಹೆಚ್ಚಾದ್ರೆ ಟೆಸ್ಟಿಂಗ್ ಹೆಚ್ಚಿಸಬಹುದು
    6. ಬಸ್, ಮೆಟ್ರೋಗಳಲ್ಲಿ ಕೋವಿಡ್ ನಿಯಮಾವಳಿ ಪಾಲನೆಗೆ ಸೂಚಿಸಬಹುದು

    ಮಹಾಮಾರಿ ಕೊರೊನಾ ರಾಜ್ಯಕ್ಕೆ ಮತ್ತೆ ವಕ್ಕರಿಸಿಕೊಂಡಿದ್ದು, ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೋವಿಡ್ ಪಾಸಿಟಿವ್ ಕಾಣಿಸಿದೆ. ಮಲ್ಲೇಶ್ವರಂನ 45 ವರ್ಷದ ವ್ಯಕ್ತಿಗೆ ಹಾಗೂ ರಾಜಾಜಿನಗರದ 38 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇವರಿಬ್ಬರಿಗೂ ಕೋವಿಡ್ ಕಾಣಸಿಕೊಂಡಿದ್ದು, ಇಬ್ಬರನ್ನು ಹೋಂ ಐಸೂಲೇಷನ್‌ನಲ್ಲಿ ಇರಿಸಲಾಗಿದೆ.

    ಬೆಂಗಳೂರಿನಲ್ಲಿ ವೈಟ್‌ಫೀಲ್ಡ್‌ನ 84 ವರ್ಷದ ವೃದ್ಧ ಮೇ 17ರಂದು ಕೊರೊನಾಗೆ ಬಲಿಯಾಗಿದ್ದಾರೆ. ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೊರೊನಾಗೆ ತುತ್ತಾಗಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ಇವೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

    ಶನಿವಾರ ರಾಜ್ಯದಲ್ಲಿ 108 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ ಐವರಿಗೆ ಕೋವಿಡ್ ಬಂದಿದೆ. ಶನಿವಾರ ಬೆಂಗಳೂರಲ್ಲಿ 2, ಮೈಸೂರು 2 ಹಾಗೂ ವಿಜಯನಗರದಲ್ಲಿ ಒಂದು ಕೋವಿಡ್ ಕೇಸ್ ಪತ್ತೆಯಾಗಿತ್ತು.

  • ಬೆಂಗಳೂರಿನಲ್ಲಿ ಕೊರೋನಾಗೆ ಮೊದಲ ಬಲಿ

    ಬೆಂಗಳೂರಿನಲ್ಲಿ ಕೊರೋನಾಗೆ ಮೊದಲ ಬಲಿ

    ಬೆಂಗಳೂರು: ಇಡೀ ಜಗತ್ತನ್ನೇ ತಲೆಕೆಳಗೆ ಮಾಡಿಬಿಟ್ಟಿದ್ದ ಕೊರೋನಾ (Corona) ರೀ ಎಂಟ್ರಿ ಕೊಟ್ಟಿದ್ದು, ಮತ್ತೆ ಆತಂಕ ಮನೆ ಮಾಡಿದೆ. ಇದೀಗ ಕೋವಿಡ್ (Covid) ಸೋಂಕಿಗೆ ತುತ್ತಾಗಿ ವೃದ್ಧ ಬಲಿಯಾದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಬೆಂಗಳೂರಿನ ವೈಟ್‌ಫೀಲ್ಡ್‌ ಮೂಲದ 84 ವರ್ಷದ ವೃದ್ಧ ಉಸಿರಾಟದ ಸಮಸ್ಯೆ ಹಾಗೂ ಅಂಗಾಂಗ ವೈಫಲ್ಯ ಖಾಯಿಲೆಗಳಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ಕೋವಿಡ್‌ಗೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೇ 17ರಂದು ಕೋವಿಡ್‌ಗೆ ವೃದ್ಧ ಬಲಿಯಾಗಿದ್ದಾರೆ.  ರಾಜ್ಯದಲ್ಲಿ ಇಂದು 108 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ ಐವರಿಗೆ ಕೋವಿಡ್ ಪಾಸಿಟಿವ್ ಬಂದಿದೆ.

    ಇಂದು ಬೆಂಗಳೂರಲ್ಲಿ 2, ಮೈಸೂರು 2 ಹಾಗೂ ವಿಜಯನಗರದಲ್ಲಿ ಒಂದು ಕೋವಿಡ್ ಕೇಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ದಾಖಲಾಗಿದೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: 25,000 ರೂ.ಗೆ ಜೀತಕ್ಕಿರಿಸಿದ್ದ ಮಗ ಸಾವು – ರಹಸ್ಯವಾಗಿ ಸಮಾಧಿಯಲ್ಲಿ ಹೂತಿಟ್ಟಿದ್ದ ಮಾಲೀಕ ಅರೆಸ್ಟ್‌

    ಬೆಳಗಾವಿ ಜಿಲ್ಲೆಗೆ ಕೊರೋನಾ ಕಾಲಿಟ್ಟಿದ್ದು, 25 ವರ್ಷದ ಗರ್ಭಿಣಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ ಅಂತ ಬೆಳಗಾವಿ ಡಿಎಚ್‌ಒ ಡಾ.ಈಶ್ವರ್ ಗಡಾದಿ ಮಾಹಿತಿ ನೀಡಿದ್ದಾರೆ. ಇನ್ನು ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕ 10 ಬೆಡ್‌ಗಳ ವಾರ್ಡ್ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೋಮವಾರದಿಂದ ಕೋವಿಡ್ ಪರೀಕ್ಷೆ ಆರಂಭಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕನ್ನಡದ ರಜನಿ ಸಿನಿಮಾ ಖ್ಯಾತಿಯ ಮುಕುಲ್ ದೇವ್ ನಿಧನ

    ಕೊರೋನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: Bengaluru | ಅಕ್ರಮವಾಗಿ ನಾಡ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ಬಂಧನ

    ಮುಂಜಾಗ್ರತಾ ಕ್ರಮ ಏನು?
    *ಗರ್ಭಿಣಿಯರು, ಮಕ್ಕಳು ಮತ್ತು ಕೋಮಾರ್ಬಿಡ್ ವ್ಯಕ್ತಿಗಳು ಮಾಸ್ಕ್ ಧರಿಸಿದ್ರೆ ಒಳ್ಳೆದು.
    *ಗುಂಪು ಪ್ರದೇಶಗಳಲ್ಲಿ ಮಾಸ್ಕ್ ಹಾಕಿಕೊಳ್ಳಲು ಸಲಹೆ.
    *ಸ್ಯಾನಿಟೈಸರ್ ಬಳಕೆಗೂ ಸಲಹೆ ನೀಡಲಾಗಿದೆ.
    *ಐಎಲ್‌ಐ, ಸಾರಿ ಲಕ್ಷಣ ಇರುವವರು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು.

  • ಕೋವಿಡ್‌ ಏರಿಕೆ – ಮಾಸ್ಕ್‌ ಕಡ್ಡಾಯಗೊಳಿಸಿದ ಆಂಧ್ರ

    ಕೋವಿಡ್‌ ಏರಿಕೆ – ಮಾಸ್ಕ್‌ ಕಡ್ಡಾಯಗೊಳಿಸಿದ ಆಂಧ್ರ

    ನವದೆಹಲಿ: ಕೋವಿಡ್‌ (Covid) ಪ್ರಕರಣಗಳು ಏರಿಕೆ ಆಗುತ್ತಿದ್ದಂತೆ ಆಂಧ್ರಪ್ರದೇಶ ಸರ್ಕಾರ (Andhra Pradesh Govt) ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಿದೆ.

    ಜನರ ಗುಂಪು, ಸಭೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್‌ (Mask) ಧರಿಸುವಂತೆ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದೆ. ಇದನ್ನೂ ಓದಿ: ಮೆಟ್ರೋ ದರ ಏರಿಕೆ ಆಯ್ತು ಈಗ ಶೌಚಾಲಯ ಬಳಕೆಗೂ ಕಟ್ಟಬೇಕು ಕಾಸು!

    ದೇಶದಲ್ಲಿ ಈಗ ನಿಧಾನಗತಿಯಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆ ಕಾಣುತ್ತಿದೆ. ಆಂಧ್ರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ 19 ಪಾಸಿಟಿವ್‌ ಕೇಸ್‌ ದಾಖಲಾಗಿದೆ. ಗುಜರಾತ್‌ನಲ್ಲೂ 15 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದನ್ನೂ ಓದಿ: ಭಾರತ ಕೊಟ್ಟ ಏಟಿಗೆ ಡಿಆರ್‌ಎಸ್‌ ನಿಯಮವನ್ನೇ ಕೈಬಿಟ್ಟ ಪಿಎಸ್‌ಎಲ್‌!

    ನೆರೆ ರಾಜ್ಯ ಕೇರಳ ಒಂದರಲ್ಲೇ 186 ಕೇಸ್ ಇದ್ದು 95 ಸಕ್ರಿಯ ಪ್ರಕರಣಗಳು ಇವೆ. ಕರ್ನಾಟಕದಲ್ಲಿ 33 ಕೇಸ್ ದಾಖಲಾಗಿದ್ದು ಈ ಪೈಕಿ 16 ಸಕ್ರಿಯ ಪ್ರಕರಣಗಳಾಗಿವೆ.