Tag: health

  • ಬಿಳಿ ಕಾಳುಮೆಣಸಿನಿಂದ ಸಿಗಲಿದೆ ಹಲವು ಆರೋಗ್ಯ ಪ್ರಯೋಜನ

    ಬಿಳಿ ಕಾಳುಮೆಣಸಿನಿಂದ ಸಿಗಲಿದೆ ಹಲವು ಆರೋಗ್ಯ ಪ್ರಯೋಜನ

    ರಿ ಕಾಳುಮೆಣಸಿನಂತೆ ಬಿಳಿ ಕಾಳುಮೆಣಸು ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನಿಮ್ಮ ಆಹಾರಕ್ರಮದಲ್ಲಿ ಬಿಳಿ ಕಾಳುಮೆಣಸನ್ನು ಬಳಸಿದೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳ ಬಹುದಾಗಿದೆ.

    * ಬಿಳಿ ಕಾಳುಮೆಣಸು ನೋವನ್ನು ತೊಲಗಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿರುವ ಕ್ಯಾಪ್ಸೈಸಿನ್ ಅಂಶವು ಶಾಖವನ್ನು ಉತ್ಪಾದಿಸುತ್ತದೆ. ಜೊತೆಗೆ ಸೆಳೆತ ಅಥವಾ ಉಳುಕು ನೋವಿನಿಂದ ಪರಿಹಾರ ನೀಡುತ್ತದೆ.

    * ಬಿಳಿ ಕಾಳುಮೆಣಸಿನಲ್ಲಿ ಕ್ಯಾಪ್ಸೈಸಿನ್ ಅಂಶವಿದೆ. ಇದು ದೇಹದೊಳಗಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

    * ನಿಮ್ಮ ಆಹಾರದಲ್ಲೂ ಬಿಳಿ ಕಾಳುಮೆಣಸು ಸೇರಿಸುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

    * ಕಾಳುಮೆಣಸಿನಲ್ಲಿರುವ ಕ್ಯಾಪ್ಸೈಸಿನ್ ಅಂಶವು ದೇಹದಲ್ಲಿನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ.

    * ನಿಮ್ಮ ಆಹಾರದಲ್ಲಿ ತಲೆನೋವನ್ನು ಗುಣಪಡಿಸಲು ಸಹ ಕಾಳುಮೆಣಸು ಸಹಾಯ ಮಾಡುತ್ತದೆ.

    * ಗಂಟಲು ನೋವಿದ್ದರೆ ಬಿಳಿ ಕಾಳುಮೆಣಸು ಸೇವಿಸಲು ಪ್ರಾರಂಭಿಸಿ. ಕೆಮ್ಮು ಮತ್ತು ಶೀತದಿಂದ ಸುಲಭವಾಗಿ ಪರಿಹಾರವನ್ನು ನೀಡುತ್ತದೆ.

    * ಫ್ಲೇವನಾಯ್ಡ್ಸ್, ವಿಟಮಿನ್ ಸಿ ಮತ್ತು ಎ ಸಮೃದ್ಧವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ

  • ಕೂದಲುದುರುವಿಕೆ ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಈರುಳ್ಳಿ ಎಣ್ಣೆ

    ಕೂದಲುದುರುವಿಕೆ ತಡೆಯಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ಈರುಳ್ಳಿ ಎಣ್ಣೆ

    ಪ್ರತಿಯೊಬ್ಬ ಮಹಿಳೆ ಹಾಗೂ ಪುರುಷರಲ್ಲಿ ಕೂದಲಿಗೆ ಸಂಬಂಧಿಸಿದಂತೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮನೆ ಮದ್ದು ಈರುಳ್ಳಿ.

    ಹೌದು. ಈರುಳ್ಳಿ ನಿಮ್ಮ ಕಣ್ಣಲ್ಲಿ ನೀರು ತರಿಸಬಹುದು, ಆದರೆ ಇದು ತಲೆ ತುಂಬಾ ಕೂದಲು ಬೆಳೆಯಲು ಸಹಾಯ ಮಾಡುತ್ತದೆ. ಈರುಳ್ಳಿಗೆ ನಿಮ್ಮ ತಲೆಗೂದಲು ಉದುರುವಿಕೆಯನ್ನು ತಡೆಗಟ್ಟುವ ಶಕ್ತಿಯಿದೆ. ಹೀಗಾಗಿ ಮನೆಯಲ್ಲಿಯೇ ಸುಲಭವಾಗಿ ಈರುಳ್ಳಿ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಕೂದಲು ದಟ್ಟವಾಗಿ ಹಾಗೂ ಉದ್ದವಾಗಿ ಬೆಳೆಯುತ್ತದೆ.

    ಬೇಕಾಗುವ ಸಾಮಗ್ರಿಗಳು:
    ಕೊಬ್ಬರಿ ಎಣ್ಣೆ- 200 ಮಿ.ಲೀ
    ಬೇವಿನ ಎಲೆಗಳು- 1 ಕಪ್
    ಈರುಳ್ಳಿ- ಅರ್ಧ ಕಪ್

    ಮಾಡುವ ವಿಧಾನ
    * ಮೊದಲು ಕರಿಬೇವಿನ ಎಲೆ ಹಾಗೂ ಈರುಳ್ಳಿಯನ್ನು ನೀರು ಬಳಸದೆ ರುಬ್ಬಿಕೊಳ್ಳಿ.

    * ಇತ್ತ ಒಂದು ಪಾತ್ರೆಗೆ ತೆಂಗಿನ ಎಣ್ಣೆಯನ್ನು ಹಾಕಿ ನಂತರ ರುಬ್ಬಿದ ಈರುಳ್ಳಿ ಹಾಗೂ ಕರಿಬೇವಿನ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ಬಿಸಿ ಮಾಡಿ. ಎಣ್ಣೆ ಸ್ವಲ್ಪ ಕಡು ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದಂತೆಯೇ ಉರಿ ನಿಲ್ಲಿಸಿ ರಾತ್ರಿ ಇಡೀ ಹಾಗೆಯೇ ಇಟ್ಟುಬಿಡಿ.

    * ಬೆಳಗ್ಗೆ ಇದನ್ನು ಸೋಸಿ ಎಣ್ಣೆ ಮತ್ತು ಮಿಶ್ರಣವನ್ನು ಬೇರ್ಪಡಿಸಿ. ಇದು ಸ್ವಲ್ಪ ದಪ್ಪವಾಗಿರುತ್ತದೆ. ಹೀಗಾಗಿ ಜರಡಿ ಮೂಲಕ ಹಾದುಹೋಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ.

    * ಹೀಗೆ ತೆಗೆದ ಎಣ್ಣೆಯನ್ನು ಒಂದು ಬಾಟ್ಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ವಾರದಲ್ಲಿ ಒಂದು ಸಲ ಹಚ್ಚಿದರೆ ನಿಮ್ಮ ಕೂದಲು ಸೊಂಪಾಗಿ ಹಾಗೂ ಉದ್ದವಾಗಿ ಬೆಳೆಯುವುದರಲ್ಲಿ ಎರಡು ಮಾತಿಲ್ಲ.

  • ಟೊಮೆಟೊ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ಟೊಮೆಟೊ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

    ರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಕೆಲವು ನಿಯಮಗನ್ನು ಪಾಲಿಸಲೇಬೇಕು. ತರಕಾರಿಗಳನ್ನು ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಚಾರ ತಿಳಿದಿದೆ. ಹೀಗಿರುವಾಗ ಟೊಮೆಟೊವನ್ನು ನಿಮ್ಮ ಆಹಾರಗಳಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಹಲವು ರೋಗಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ.

    ಟೊಮೆಟೊ ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ರೋಮಿಯಂ, ಕೋಲೀನ್, ಸತು ರಂಜಕವನ್ನು ಹೊಂದಿದೆ. ಸಾಧ್ಯವಾದಷ್ಟು ನಿಯಮಿತ ಪ್ರಮಾಣದಲ್ಲಿ ಆಗಾಗ ಟೊಮೆಟೊ ಹಣ್ಣುಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಬೇಕಾಗುವ ಹಲವು ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ.  ಇದನ್ನೂ ಓದಿ: ನೀವು ಮಾಡಿ ಮಶ್ರೂಮ್ ಪೆಪ್ಪರ್ ಫ್ರೈ

    * ಹಣ್ಣಾದ ಟೊಮೆಟೊವನ್ನು ಮುಖದ ಸೌಂದರ್ಯ ಹೆಚ್ಚಿಸಲು ಬಳಸಬಹುದು. ಟೊಮೆಟೊದಲ್ಲಿನ ಲೈಕೋಪೀನ್ ಮುಖದ ಕಾಂತಿ ಹೆಚ್ಚಿಸುತ್ತದೆ.

    * ಟೊಮೆಟೊ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಕೂದಲಿನ ಆರೋಗ್ಯವನ್ನು ಕಾಪಡುತ್ತದೆ.

    * ಹೊಟ್ಟೆಯ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ  ಕ್ಯಾನ್ಸರ್‌ಗಳನ್ನು ಕಡಿಮೆ ಮಾಡುವ ಗುಣ ಇದೆ.

    * ಟೊಮೆಟೊದಲ್ಲಿ ವಿಟಮಿನ್ ಸಿ ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತದೆ.

    * ಮಧುಮೇಹ ರೋಗಿಗಳು ತಮ್ಮ ಆಹಾರದಲ್ಲಿ ಟೊಮೆಟೊವನ್ನು ಸೇರಿಸಿಕೊಳ್ಳುವುದು ಸೂಕ್ತ. ಸಕ್ಕರೆ ಅಂಶವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

    * ನಿಮ್ಮ ಹೃದಯವನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಟೊಮೆಟೊ ಹಣ್ಣುಗಳಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ಮಾರಕ ಕ್ಯಾನ್ಸರ್ ಸಮಸ್ಯೆಯಿಂದ ನಿಮ್ಮನ್ನು ದೂರ ಇಡುವಂತಹ ಸಾಧ್ಯತೆ ಕೂಡ ಇದೆ. ಹಾಗಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಟೊಮೆಟೊ ಹಣ್ಣುಗಳನ್ನು ಬಳಕೆ ಮಾಡಲು ಹಿಂಜರಿಕೆ ಬೇಡ.

  • ಹಲಸಿನ ಹಣ್ಣಿನಲ್ಲಿದೆ ಮನೆಮದ್ದಿನ ಅಂಶ

    ಹಲಸಿನ ಹಣ್ಣಿನಲ್ಲಿದೆ ಮನೆಮದ್ದಿನ ಅಂಶ

    ಳೆಗಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣು ಎಂದರೆ ಹಲಸಿನಹಣ್ಣಾಗಿದೆ. ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಹತ್ತಾರು ಲಾಭಗಳು ಸಿಗಲಿವೆ. ಹಲವು ಕಾಯಿಲೆಗಳಿಗೆ ಬೇಕಾಗಿರುವ ಮದ್ದಿನ ಗುಣವನ್ನು ಹಲಸಿನ ಹಣ್ಣುಹೊಂದಿದೆ. ಹಣ್ಣಿನಲ್ಲಿ ಹೇರಳವಾಗಿರುವ ಜೀವಸತ್ವಗಳು ದೇಹಕ್ಕೆ ತುಂಬಾ ಒಳ್ಳೆಯದು. ಯಾವೇಲ್ಲಾ ರೋಗಗಳಿಗೆ ಮದ್ದು ಗೊತ್ತಾ? ಇದನ್ನೂ ಓದಿ: ಮನೆಯಲ್ಲಿ ಮಾಡಿ ಹಲಸಿನ ಹಣ್ಣಿನ ಇಡ್ಲಿ

    * ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಕಣ್ಣಿನ ಪೊರೆಯಂತಹ ಸಮಸ್ಯೆಗಳಿಗೆ ಈ ಹಣ್ಣನ್ನು ಸೇವಿಸುವುದು ಉತ್ತಮ. ಇದನ್ನೂ ಓದಿ: ವ್ಯಾಪಾರಿಗಳ ಮೇಲೆ ಖಾಕಿ ಖದರ್-ಕಾಲಿನಿಂದ ತರಕಾರಿ ಒದ್ದು ಪಿಎಸ್‍ಐ ದರ್ಪ

    *ಕಡಿಮೆ ಕೊಬ್ಬು, ಹೆಚ್ಚಿನ ಕ್ಯಾಲೋರಿ ಹೊಂದಿರುವ ಆಹಾರಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

    *ಹಲಸಿನ ಹಣ್ಣಿನಲ್ಲಿ ಫೈಬರ್ ಅಧಿಕವಾಗಿರುತ್ತದೆ. ಹೀಗಾಗಿ, ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಈ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

    *ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಈ  ವಿಟಮಿನ್ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು

    *ಹಲಸಿನ ಹಣ್ಣು ಅಲ್ಸರೇಟಿವ್, ಆಂಟಿ-ಸೆಪ್ಟಿಕ್, ಉರಿಯೂತ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

    * ಡಯಾಬಿಟೀಸ್ ಕಾಯಿಲೆಯನ್ನು ಹಲಸಿನಹಣ್ಣು ಕಡಿಮೆಮಾಡುತ್ತದೆ.

    * ಹೃದಯ ಸಮಸ್ಯೆ, ರಕ್ತದೊತ್ತಡ ಇರುವವರು ಈ ಹಣ್ಣನ್ನು ಸೇವಿಸಬಹುದು. ಈ ಸಮಸ್ಯೆಗಳಿಗೆ ಮದ್ದಾಗಿ ಕಾರ್ಯ ನಿರ್ವಹಿಸುತ್ತದೆ.

    * ಮೂಳೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಚರ್ಮದ ಮೇಳೆ ಆಗುವ ಕಪ್ಪು ಕಲೆಗಳನ್ನು ಹೊಡೆದೋಡಿಸುತ್ತದೆ.

  • ಬಾಬಾ ಕಾ ಡಾಬಾ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು

    ಬಾಬಾ ಕಾ ಡಾಬಾ ಮಾಲೀಕನಿಂದ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಗೆ ದಾಖಲು

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಒಂದೇ ವೀಡಿಯೋದಿಂದ ವೃದ್ಧ ದಂಪತಿಯ ಬದುಕು ಬದಲಾದ ತಿಳಿದೇ ಇದೆ. ಅದೇ ಬಾಬಾ ಕಾ ಡಾಬಾ ಮಾಲೀಕ ಕಾಂತ ಪ್ರಸಾದ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು, ದೆಹಲಿಯ ಸಫ್ತರ್‍ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಪ್ರಸಾದ್ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ರಾತ್ರಿ 11.50ರ ಸುಮಾರಿಗೆ ಸಫ್ತರ್‍ಜಂಗ್ ಆಸ್ಪತ್ರೆಯಿಂದ ನಮಗೆ ಮಾಹಿತಿ ಲಭ್ಯವಾಗಿಯಿತು. ತಕ್ಷಣವೇ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಎಂಎಲ್‍ಸಿ (ಮೆಡಿಕೋ ಲೀಗಲ್ ಕೇಸ್) ಸಂಗ್ರಹಿಸಿದರು. ಪ್ರಸಾದ್ ಅವರು ಆಲ್ಕೋಹಾಲ್ ಹಾಗೂ ನಿದ್ದೆ ಮಾತ್ರೆ ತೆಗೆದುಕೊಂಡಿದ್ದು, ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಡಿಸಿಪಿ ಅತುಲ್ ಕುಮಾರ್ ಠಾಕೂರ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಖರ್ಚು ಮಾಡಿದ್ದು 1 ಲಕ್ಷ, ಕೈಗೆ ಬಂದಿದ್ದು ಬರೀ 35 ಸಾವಿರ – ಬಾಬಾ ಕಾ ಡಾಬಾ ಹೊಸ ಶಾಪ್ ಕ್ಲೋಸ್!

    ಕಾಂತ ಪ್ರಸಾದ್ ಅವರ ಮಗ ಕರಣ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಮ್ಮ ತಂದೆ ಮದ್ಯ ಸೇವಿಸಿದ್ದು, ಜೊತೆಗೆ ನಿದ್ದೆ ಮಾತ್ರೆಗಳನ್ನು ಸಹ ನುಂಗಿದ್ದರು.

    ಈ ಕರಿತು ಕಾಂತ ಪ್ರಸಾದ್ ಅವರ ಪತ್ನಿ ಬಾದಾಮಿ ದೇವಿ ಸಹ ಪ್ರತಿಕ್ರಿಯಿಸಿ ಅಂಗಡಿ ಬಳಿಯೇ ಪ್ರಜ್ಞಾಹೀನರಾಗಿ ಬಿದ್ದರು. ಅವರು ಏನು ತಿಂದರು, ಏನು ಕುಡಿದರು ಎಂಬುದು ನನಗೆ ತಿಳಿದಿಲ್ಲ. ಪ್ರಜ್ಞಾಹೀನರಾಗಿ ಬೀಳುತ್ತಿದ್ದಂತೆ ಆಸ್ಪತ್ರೆಗೆ ಕೊಂಡೊಯ್ದರು. ವೈದ್ಯರು ಸಹ ನಮ್ಮ ಬಳಿ ಏನೂ ಹೇಳಿಲ್ಲ. ಅವರು ಏನು ಯೋಚಿಸುತ್ತಿದ್ದರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಾಬಾ ಕಾ ಡಾಬಾ ವೀಡಿಯೋ ಸಖತ್ ವೈರಲ್ ಆಗಿತ್ತು. ದೆಹಲಿಯ ಮಾಳವಿಯಾ ನಗರದಲ್ಲಿ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದ ವೃದ್ಧ ದಂಪತಿ, ಕೊರೊನಾದಿಂದಾಗಿ ಅನುಭವಿಸುತ್ತಿರುವ ಕಷ್ಟವನ್ನು ವೀಡಿಯೋದಲ್ಲಿ ತೋರಿಸಲಾಗಿತ್ತು. ಈ ವೀಡಿಯೋ ಗೌರವ್ ತಮ್ಮ ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ವೃದ್ಧ ದಂಪತಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದದ್ದರು. ಬಳಿಕ ಲಕ್ಷಾಂತರ ರೂಪಾಯಿ ಹಣ ಹರಿದು ಬಂದಿತ್ತು. ಬಳಿಕ ಹೊಸ ಹೋಟೆಲ್‍ನ್ನು ಸಹ ತೆರೆದಿದ್ದರು. ಆದರೆ ಅಷ್ಟೇನು ವ್ಯಾಪಾರವಾಗದ ಕಾರಣ ಹೊಸ ಹೋಟೆಲ್ ಮುಚ್ಚಿ, ಮತ್ತೆ ಈ ಹಿಂದೆ ಇದ್ದ ಸಣ್ಣ ಹೋಟೆಲ್ ತೆರೆದಿದ್ದರು.

  • ತೋಟದ ಮನೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ -ರೈತರಿಗೆ ವ್ಯಾಕ್ಸಿನ್ ಹಾಕಿದ ಸಿಬ್ಬಂದಿ

    ತೋಟದ ಮನೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ -ರೈತರಿಗೆ ವ್ಯಾಕ್ಸಿನ್ ಹಾಕಿದ ಸಿಬ್ಬಂದಿ

    ಬಳ್ಳಾರಿ: ತೋಟದ ಮನೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ ತೆರದು, ಕೊರೊನಾ ಲಸಿಕೆ ಹಾಕಿಸಿ ಕೊಳ್ಳದ ಜನರ ಮನವೊಲಿಸಿಜನರಿಗೆ ಲಸಿಕೆ ಹಾಕುವಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಬಳ್ಳಾರಿಯಲ್ಲಿ ಯಶಸ್ವಿಯಾಗಿದ್ದಾರೆ.

    ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುರೇಕೊಪ್ಪಾ ಗ್ರಾಮದಲ್ಲಿ ಬಹುತೇಕ ಜನರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತಿದ್ದರು. ಮನೆ ಮನೆಗೆ ಲಸಿಕೆ ಹಾಕಲು ಬಂದವರನ್ನು ಊಹಾಪೋಹಗಳಿಗೆ ಕಿವಿಗೊಟ್ಟು ಕೋವಿಡ್ ಲಸಿಕೆ ಪಡೆಯದೇ ಇದ್ದರು. ಬಹುತೇಕ ಜನರು ಕೃಷಿಕರಾಗಿದ್ದು, ಕೃಷಿ ಚಟುವಟಿಕೆಯಲ್ಲಿ ಲಸಿಕೆ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಅವರ ಗ್ರಾಮದ ಹೊರವಲಯದಲ್ಲಿ ಇರುವ ತೋಟದ ಮನೆಯಲ್ಲಿ ಕೋವಿಡ್ ಲಸಿಕಾ ಕೇಂದ್ರವನ್ನು ತೆರೆದು, ರೈತರಿಗೆ ಅಲ್ಲಿಗೆ ಬಂದು ಲಸಿಕೆ ಹಾಕಿ ಕೊಳ್ಳವಂತೆ ಮಾಡಿದ್ದರು. ಇದನ್ನೂ ಓದಿ: ಮರಗಳನ್ನು ರಕ್ಷಿಸುವ ಬುದ್ಧಿಮಾಂದ್ಯನಾಗಿ ತೆರೆ ಮೇಲೆ ಬಂದ ವಿಜಯ್

    ಸಂಡೂರು ತಾಲೂಕು ಆರೋಗ್ಯ ಇಲಾಖೆ ವಿಶೇಷ ಪ್ರಯತ್ನದಿಂದಾಗಿ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದ 100ಕ್ಕೂ ಅಧಿಕ ರೈತರಿಗೆ ಲಸಿಕೆ ಹಾಕಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ. ಕುಶಾಲ್ ರಾಜ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸಿ, ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತಿದ್ದ ರೈತರಿಗೆ ಲಸಿಕೆ ಹಾಕಿದ್ದಾರೆ.

  • ಖರ್ಜೂರದಲ್ಲಿದೆ ಮನೆಮದ್ದಿನ ಗುಣ

    ಖರ್ಜೂರದಲ್ಲಿದೆ ಮನೆಮದ್ದಿನ ಗುಣ

    ಡ್ರೈ ಫ್ರೂಟ್ಸ್ ಎಂದರೆಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಡ್ರೈ ಫ್ರೂಟ್ಸ್‍ಅನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಖರ್ಜೂರ ಮರುಭೂಮಿಯ ಬೆಳೆಯಾದರೂ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಅದ್ಭುತ ಆಹಾರವಾಗಿದೆ.  ಇದನ್ನೂ ಓದಿ: ಗಂಡ ಹೆಂಡತಿ ಮಧ್ಯೆಯೇ ಅಸಮಾಧಾನ ಇರುತ್ತೆ, ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ – ಸುಧಾಕರ್

    * ಒಣಗಿದ ಖರ್ಜೂರಗಳಲ್ಲಿ ಕಂಡುಬರುವ ರಂಜಕ, ಪೋಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಮುಂತಾದ ಖನಿಜಗಳು ನಮ್ಮ ಎಲುಬುಗಳನ್ನು ಬಲಪಡಿಸುತ್ತವೆ.

    * ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಖರ್ಜೂರ ಸೇವನೆ ಉತ್ತಮ. ಪ್ರತಿನಿತ್ಯ ಖರ್ಜೂರ ಸೇವನೆಯನ್ನು ರೂಢಿಯಲ್ಲಿಟ್ಟುಕೊಂಡರೆ ಆರೋಗ್ಯವೂ ಸುಧಾರಿಸುತ್ತದೆ. ಜೊತೆಗೆ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ: ರಾಮಲಿಂಗಾ ರೆಡ್ಡಿಯಿಂದ ಸಾವಿರಾರು ಮಂದಿಗೆ ಫುಡ್ ಕಿಟ್ ವಿತರಣೆ

    * ಖರ್ಜೂರಗಳನ್ನು ನಿಯಮಿತವಾಗಿ ಸೇವಿಸುವ ಜನರು ಉತ್ತಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಹೊಂದಬಹುದಾಗಿದೆ. ಖರ್ಜೂರಗಳಲ್ಲಿ ಕರಗುವ ನಾರಿನಂಶ ಅಧಿಕವಾಗಿದೆ.


    * ಒಂದು ಲೋಟ ಹಾಲಿಗೆ ಖರ್ಜೂರದ ಪೇಸ್ಟ್ ಅಥವಾ ಖರ್ಜೂರದ ಚೂರನ್ನು ಹಾಕಿಕೊಂಡು ಸೇವನೆ ಮಾಡುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು.

    * ಖರ್ಜೂರ ತೂಕ ನಷ್ಟಕ್ಕೆ ಸಹಾ ಸಹಾಯ ಮಾಡುತ್ತದೆ. ಕರಗುವ ನಾರಿನಂಶವಿದೆ, ಆದರೆ ಈ ನಾರಿನಂಶ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸುತ್ತವೆ ಹಾಗೂ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ.

    * ಖರ್ಜೂರ ತಿನ್ನುವುದರಿಂದ ಕ್ಯಾನ್ಸರ್ ರಕ್ತ ಕಣಗಳು ಹರಡುವುದನ್ನು ತಡೆಗಟ್ಟಬಹುದಾಗಿದೆ.

    * ಖರ್ಜೂರದಲ್ಲಿ ಕಬ್ಬಿಣದಂಶ ಇರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಬಹುದು.

  • ಅನ್‍ಲಾಕ್‍ಗೂ ಮೊದಲೇ ಕೋವಿಡ್ ನಿಯಮ ಉಲ್ಲಂಘನೆ- ಸೋಂಕು ಹರಡುವ ಭೀತಿ

    ಅನ್‍ಲಾಕ್‍ಗೂ ಮೊದಲೇ ಕೋವಿಡ್ ನಿಯಮ ಉಲ್ಲಂಘನೆ- ಸೋಂಕು ಹರಡುವ ಭೀತಿ

    ಬೀದರ್: ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 19 ಜಿಲ್ಲೆಗಳನ್ನು ಅನ್‍ಲಾಕ್ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಆದರೆ ಅನ್‍ಲಾಕ್‍ಗೂ ಮೊದಲೇ ಕೊರೊನಾ ನಿಯಮ ಉಲ್ಲಂಘನೆಯಾಗುತ್ತಿದೆ.

    ಗಡಿ ಜಿಲ್ಲೆ ಬೀದರ್‌ನಲ್ಲಿ ಜನರು ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿ ತೂರಿ ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿದ್ದಾರೆ. ನಗರದ ಗಾಂಧಿಗಂಜ್‍ನ ದಿನಸಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾಡಲು ಜನ ಮುಗಿ ಬಿದ್ದಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳದೆ ಸಂಪೂರ್ಣವಾಗಿ ಕೊವೀಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾ ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಅನ್‍ಲಾಕ್‍ನಿಂದ ಸೋಂಕು ಹೆಚ್ಚಳ ಆದ್ರೆ ಕಠಿಣ ಕ್ರಮ: ಸುಧಾಕರ್

    ಜೂನ್ 14 ರ ಬಳಿಕ ಕೊರೊನಾ ಸೋಂಕು ಅತಿ ಕಡಿಮೆಯಾಗುತ್ತಿರುವ ಗಡಿ ಜಿಲ್ಲೆ ಬೀದರ್‌ನಲ್ಲೂ ರಾಜ್ಯ ಸರ್ಕಾರ ಅನ್‍ಲಾಕ್ ಮಾಡಲು ಮುಂದಾಗಿದೆ. ಈ ಸಮಯದಲ್ಲಿ ಕೊವೀಡ್ ನಿಯಮಗಳ ಉಲ್ಲಂಘನೆ ಮಾಡುತ್ತಿರುವುದು ಬೀದರ್‍ಗೆ ಕಂಟಕವಾಗುವುದು ಪಕ್ಕಾ ಎನ್ನಲಾಗುತ್ತಿದೆ. ಇದನ್ನೂ ಓದಿ: ರೋಮಾಂಚನಕಾರಿ ಕಾರ್ಯಾಚರಣೆ ನಡೆಸಿ ಹಾಸನದಲ್ಲಿ ಪುಂಡಾನೆಗಳ ಸೆರೆ

    ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಕೆಯ ಹಾದಿ ಮುಂದುವರೆದಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಾವಾದ 24 ಗಂಟೆಗಳ ಅವಧಿಯಲ್ಲಿ 91,702 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,403 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,92,74,823ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,63,079ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,21,671ಕ್ಕೆ ಇಳಿಕೆಯಾಗಿದೆ.

  • ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ದೋಷ ಇದ್ಯಾ? –  ಕೆಲ ನಿಮಿಷದಲ್ಲಿ ಸರಿ ಮಾಡಿ

    ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ದೋಷ ಇದ್ಯಾ? – ಕೆಲ ನಿಮಿಷದಲ್ಲಿ ಸರಿ ಮಾಡಿ

    ನವದೆಹಲಿ: ಕೊರೊನಾ ಲಸಿಕೆ ಸ್ವೀಕರಿಸಿದವರಿಗೆ ಆನ್‍ಲೈನ್ ಮೂಲಕ ನೀಡುವ ಪ್ರಮಾಣ ಪತ್ರದಲ್ಲಿ ಯಾವುದೇ ದೋಷವಾಗಿದ್ದರೆ ಅದನ್ನು ಈಗ ಸರಿ ಮಾಡಬಹುದು.

    ಜನ್ಮ ವರ್ಷ, ಹೆಸರು, ಲಿಂಗದಲ್ಲಿ ಆಗಿರುವ ತಪ್ಪುಗಳನ್ನು ಬಳಕೆದಾರರೇ ಕೋವಿನ್ ವೆಬ್‍ಸೈಟ್‍ಗೆ ಹೋಗಿ ಎಡಿಟ್ ಮಾಡಬಹುದು. ವಿದೇಶಗಳು ತಮ್ಮ ದೇಶಕ್ಕೆ ಬರುವ ಪ್ರಯಾಣಿಕರಿಗೆ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಕಡ್ಡಾಯ ಮಾಡಿದೆ.  ಈ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈಗ ತಪ್ಪನ್ನು ಸರಿ ಮಾಡಿಕೊಳ್ಳಲು ಅವಕಾಶ ನೀಡಿದೆ.

    ಲಸಿಕೆಯ ಪ್ರಮಾಣಪತ್ರದಲ್ಲಿರುವ ವರ್ಷ, ಲಿಂಗ, ಹೆಸರುಗಳು ಪಾಸ್‍ಪೋರ್ಟ್ ನಲ್ಲಿರುವ ವಿವರಗಳಿಗೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಜನರು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಸ್ವೀಕರಿಸಿದ ಆರೋಗ್ಯ ಇಲಾಖೆ ಸಮಸ್ಯೆಯನ್ನು ಸರಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ವರನೇ ಬೇಕೆಂದ ವಧು – ಶಶಿ ತರೂರ್ ತಬ್ಬಿಬ್ಬು

    ಎಡಿಟ್ ಹೇಗೆ ಮಾಡಬೇಕು?
    ಹಂತ 1. ಆರಂಭದಲ್ಲಿ www.cowin.gov.in  ಹೋಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೊಂದಾಯಿಸಿ.

    ಹಂತ 2. ಈ ವೇಳೆ ನಿಮ್ಮ ಮೊಬೈಲ್ 6 ಸಂಖ್ಯೆಯ ಒಟಿಪಿ ಬರುತ್ತದೆ.

    ಹಂತ 3: ಇಲ್ಲಿ ಕ್ಲಿಕ್ ಮಾಡಿ Verify & Proceed ಒತ್ತಿ.

    cowin corona vaccine  2

    ಹಂತ 4: ನಂತರ ಅಕೌಂಟ್ ಡಿಟೇಲ್ಸ್ ಗೆ ಹೋಗಿ.

    ಹಂತ 5: ನೀವು ಲಸಿಕೆ ತೆಗೆದುಕೊಂಡರೆ “Raise an Issue” ಕ್ಲಿಕ್ ಮಾಡಿ.

    cowin corona vaccine 1

    ಹಂತ 6: ಈ ವೇಳೆ ವೆಬ್‍ಸೈಟ್ “What is the issue?”  ಎಂದು ಕೇಳುತ್ತದೆ. ಇಲ್ಲಿ “Correction in certificate” ಕ್ಲಿಕ್ ಮಾಡಿ ಏನು ತಪ್ಪಾಗಿದೆಯೋ ಅದನ್ನು ಸರಿಪಡಿಸಿಕೊಳ್ಳಬಹುದು. ಸರಿ ಮಾಡಿದ ಬಳಿಕ ಎಲ್ಲ ಮಾಹಿತಿ ಸರಿಯಾಗಿರುವ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.

  • ಕೊರೊನಾ ಸೋಂಕಿನಲ್ಲಿ ಭಾರಿ ಇಳಿಮುಖ – ಬೀದರ್ ರಾಜ್ಯಕ್ಕೆ ಮಾದರಿ

    ಕೊರೊನಾ ಸೋಂಕಿನಲ್ಲಿ ಭಾರಿ ಇಳಿಮುಖ – ಬೀದರ್ ರಾಜ್ಯಕ್ಕೆ ಮಾದರಿ

    ಬೀದರ್: ಕೊರೊನಾ ಎರಡನೇಯ ಅಲೆಯ ಪ್ರಾರಂಭದಲ್ಲಿ ರಾಜಧಾನಿ ಗಡಿ ಜಿಲ್ಲೆ ಬೀದರ್ ರೆಡ್ ಜೋನ್‍ನಲ್ಲಿತ್ತು. ಅಧಿಕಾರಿಗಳ ಸತತ ಪರಿಶ್ರಮದಿಂದಾಗಿ ಇಂದು ಅತಿ ಕಡಿಮೆ ಪಾಸಿಟಿವಿಟಿ ಮೂಲಕವಾಗಿ ರಾಜ್ಯಕ್ಕೆ ಮಾದರಿಯಾಗಿದೆ.

    ಕಳೆದ ಒಂದು ವಾರದಿಂದ 1ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ರೇಟ್ ದಾಖಲಾಗುವ ಮೂಲಕ ಗಡಿ ಜಿಲ್ಲೆ ಬೀದರ್ ರಾಜ್ಯಕ್ಕೆ ಮಾದರಿಯಾಗಿದೆ. ಮೇ 31 ರಂದು 0.60, ಜೂನ್ 01 ರಂದು 0.80, 02 ರಂದು 0.90, 03 ರಂದು 0.92, 04 ರಂದು 0.7, 05 ರಂದು 0.98, 06 ರಂದು 0.37, 07 ರಂದು 0.72 ಪಾಸಿಟಿವಿಟಿ ರೇಟ್ ದಾಖಲಾಗಿದೆ. ಇದನ್ನೂ ಓದಿ: ಜಸ್ಟ್ 1 ಮಾವಿನ ಹಣ್ಣಿನ ಬೆಲೆ 1 ಸಾವಿರ – ಈಗಲೇ ಮುಂಗಡ ಬುಕ್ಕಿಂಗ್

    ಜಿಲ್ಲಾಡಳಿತ, ಅರೋಗ್ಯ ಇಲಾಖೆ, ಜಿಲ್ಲಾ ಪಂಚಾಯತಿ ಹಾಗೂ ಪೊಲೀಸ್ ಇಲಾಖೆಯ ಸತತ ಪರಿಶ್ರಮದಿಂದಾಗಿ ಇಂದು ಬೀದರ್ ಅತಿ ಕಡಿಮೆ ಪಾಸಿಟಿವಿಟಿ ಹೊಂದಲು ಕಾರಣವಾಗಿದೆ. ಜೊತೆಗೆ ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಗಲಿರುಳು ಎನ್ನದ ಕೆಲಸ ಮಾಡಿದ್ದು ಇಂದು ಫಲಕೊಟ್ಟಿದೆ. ಕಳೆದ 15 ದಿನಗಳಿಂದ ಪಾಸಿಟಿವಿಟಿ ರೇಟ್ ಬಹಳ ಕಡಿಮೆಯಾಗಿದ್ದು, ಒಂದು ವಾರದಿಂದ 1 ಕ್ಕಿಂತ ಕಡಿಮೆ ಬರುತ್ತಿದೆ. ಎಲ್ಲಾ ಇಲಾಖೆಯ ಅಧಿಕಾರಿಗಳ ಸಂಘಟಿತ ಹೋರಾಟದಿಂದ ಪಾಸಿಟಿವಿಟಿ ಕಡಿಮೆ ಬರಲು ಸಾಧ್ಯವಾಗಿದೆ.

    ಕೊರೊನಾ ಮೂರನೇಯ ಅಲೆ ಬರುವ ಸಾದ್ಯತೆ ಇದ್ದು ಎಲ್ಲರು ಜಾಗೃತಿಯಿಂದ ಇರಬೇಕು. ಪ್ರತಿದಿನ 3 ಸಾವಿರ ಟೆಸ್ಟ್ ಮಾಡುತ್ತಿದ್ದರು ಒಂದಕ್ಕಿಂತ ಕಡಿಮ ಪಾಸಿಟಿವಿಟಿ ರೇಟ್ ಬರುತ್ತಿರುವುದು ಸಂತೋಷವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ. ಪಕ್ಕದಲ್ಲೆ ಮಹಾರಾಷ್ಟ್ರ, ತೆಲಂಗಾಣದದಲ್ಲಿ ಕೊರೊನಾ ಕಾಟ ಇದ್ದರೂ ನಡುಗಡ್ಡೆಯಂತ್ತಿರುವ ಬೀದರ್‍ನಲ್ಲಿ ಕೊರೊನಾ ಮಹಾಮಾರಿಗೆ ಬ್ರೇಕ್ ಹಾಕಿ ಅತಿ ಕಡಿಮೆ ಪಾಸಿಟಿವಿಟಿ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದು ಮಾತ್ರ ಸಂತೋಷದ ಸಂಗತಿಯಾಗಿದೆ.