Tag: health

  • ದೇಹದ ತೂಕ ಇಳಿಸಬೇಕಾ? ಈ ಸಲಹೆ ಪಾಲಿಸಿ

    ದೇಹದ ತೂಕ ಇಳಿಸಬೇಕಾ? ಈ ಸಲಹೆ ಪಾಲಿಸಿ

    ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರತಿಯೊಬ್ಬರು ಬಯಸುತ್ತಾರೆ. ಆದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ ಎನ್ನುವುದು ತಿಳಿದಿರುವ ವಿಚಾರವಾಗಿದೆ.

    ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಬಹಳ ಕಷ್ಟ. ನೀವು ಹೊಟ್ಟೆಯ ಕೊಬ್ಬನ್ನು ಕರಗಿಸಲು ಹಲವಾರು ಪ್ರಯತ್ನಗಳನ್ನು ಮಾಡಿರುತ್ತೀರಿ, ಕೆಲವು ಜೀವನಶೈಲಿ ಕೂಡ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತವೆ. ಮನೆಯಲ್ಲಿರುವ ಕೆಲವು ಪದಾರ್ಥ ಮತ್ತು ಕೆಲವು ಪ್ರತಿನಿತ್ಯ ರೂಢಿಯನ್ನು ಬೆಳಸಿಕೊಳ್ಳುವ ಮೂಲಕವಾಗಿ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಬಹುದಾಗಿದೆ.

    * ಸರಿಯಾದ ಸಮಯಕ್ಕೆ ಊಟ, ತಿಂಡಿ ತಿನ್ನುವ ಅಭ್ಯಾಸವನ್ನು ಇಟ್ಟುಕೊಳ್ಳುವುದು ಉತ್ತಮವಾಗಿದೆ. ಸಂಜೆ 7 ರ ಮೊದಲು ಆಹಾರ ಸೇವಿಸುವುದು ಉತ್ತಮವಾಗಿದೆ. ಅಲ್ಲದೇ ಊಟವಾದ ಸುಮಾರು 1 ರಿಂದ 2 ಗಂಟೆಗಳ ನಂತರ ಮಲಗುವುದು ಒಳ್ಳೆಯ ಅಭ್ಯಾಸವಾಗಿದೆ.

    * ಅಡುಗೆ ಮನೆಯಲ್ಲಿಯೇ ಹೊಟ್ಟೆಯ ಬೊಜ್ಜನ್ನು ಕರಗಿಸಲು ಬೇಕಾಗುವ ಹಲವಾರು ವಸ್ತುಗಳಿವೆ. ಮೆಂತ್ಯೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯದ ಪುಡಿಯನ್ನು ನೀರಿನೊಂದಿಗೆ ಸೇವಿಸುವುದು ಹೊಟ್ಟೆಯ ಬೊಜ್ಜನ್ನು ಕರಗಿಸಲು ರಾಮಬಾಣವಾಗುತ್ತದೆ.

    *ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೆನೆಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಮೆಂತ್ಯೆಯಲ್ಲಿನ ಕೆಲ ಪದಾರ್ಥಗಳು ಹೊಟ್ಟೆಯಲ್ಲಿನ ಬೊಜ್ಜನ್ನು ಕರಗಿಸುತ್ತದೆ ಹಾಗೂ ದೇಹದ ತೂಕ ಕಡಿಮೆ ಮಾಡುತ್ತದೆ.

    * ಹುಣಸೇ ಹಣ್ಣನ್ನು ಸೇವಿಸುವುದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮ್ಮ ದೇಹದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

    * ಒಣ ಶುಂಠಿಯ ಪುಡಿಯನ್ನು ಸೇವಿಸುವುದು ಉತ್ತಮ. ಏಕೆಂದರೆ ಅದು ಕೊಬ್ಬನ್ನು ಕರಗಿಸಲು ಉಪಯುಕ್ತವಾದ ಥರ್ಮೋಜೆನಿಕ್ ಏಜೆಂಟ್‍ಗಳನ್ನು ಹೊಂದಿದೆ. ಬಿಸಿ ನೀರಿನಲ್ಲಿ ಒಣಗಿದ ಶುಂಠಿಯನ್ನು ಸೇವಿಸುವುದರಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

    * ನಿಮಗೆ ನೀರು ಕುಡಿಯಬೇಕು ಎನಿಸಿದಾಗೆಲ್ಲ ಬೆಚ್ಚಗಿನ ನೀರನ್ನು ಕುಡಿಯಿರಿ. ಜೀರ್ಣಕ್ರೀಯೆಯನ್ನು ಸುಧಾರಿಸುತ್ತದೆ.

    * ನೀವು ಪ್ರತಿನಿತ್ಯ ಒಂದೇ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವ ಅಭ್ಯಾಸವನ್ನು ರೂಢಿಮಾಡಿಕೊಳ್ಳಿ.

  • ಉಗುಳುವುದನ್ನು ನಿಲ್ಲಿಸಿ(Stop Spitting) ಜಾಥಾಗೆ  ಚಾಲನೆ

    ಉಗುಳುವುದನ್ನು ನಿಲ್ಲಿಸಿ(Stop Spitting) ಜಾಥಾಗೆ ಚಾಲನೆ

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಉಗುಳುವ ಅಭ್ಯಾಸವನ್ನು ಬಿಡಬೇಕು ಎನ್ನುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಉಗುಳುವುದನ್ನು ನಿಲ್ಲಿಸಿ ಜಾತಾಕ್ಕೆ ಇಂದು ಚಾಲನೆ ನೀಡಲಾಗಿದೆ.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ(Stop Spitting)ಎಂಬ ಜಾಗೃತಿ ಜಾಥಾಗೆ ಚಾಲನೆ ನೀಡಿದ ಬಳಿಕ ವಿಶೇಷ ಆಯುಕ್ತರು(ಆರೋಗ್ಯ) ಡಿ.ರಂದೀಪ್ ಮಾತನಾಡಿದ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ ಎಂಬ ಜಾಗೃತಿ ಜಾಥಾವು ರೋಟರಿ, ನಮ್ಮ ಬೆಂಗಳೂರು ಪೌಂಡೇಷನ್, ಬ್ಯೂಟಿಫುಲ್ ಬೆಂಗಳೂರು ಹಾಗೂ ಇನ್ನಿತರೆ 20 ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿದ್ದು, ಇದರಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗೂ ಮಾರ್ಷಲ್‍ಗಳು ಸಹ ಪಾಲ್ಗೊಳ್ಳಲಿದ್ದಾರೆ. ನಗರದ ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಉಗುಳುವ ಅಭ್ಯಾಸವನ್ನು ಬಿಡಬೇಕು. ಎಲ್ಲೆಂದರಲ್ಲಿ ಉಗುಳುವುದರಿಂದ ಕೊರೊನಾ, ಕ್ಷಯ ರೋಗ ಸೇರಿದಂತೆ ಇನ್ನಿತರೆ ರೋಗಗಳು ಹರಡಲಿವೆ ಎಂದು ತಿಳಿಸಿದರು. ಇದನ್ನೂ ಓದಿ:  BB ಗೆದ್ದು ಬನ್ನಿ ಮಂಜು, ಲವ್ ಯೂ: ಶಿವರಾಜ್‍ಕುಮಾರ್

    ನಗರದ ಪಾದಚಾರಿ ಮಾರ್ಗ, ಬಸ್ ನಿಲ್ದಾಣ, ಬಸ್ ತಂಗುದಾಣ, ಟ್ರಾಫಿಕ್ ಸಿಗ್ನಲ್ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಉಗುಳುವುದರಿಂದ ಅಲ್ಲಿ ಸ್ವಚ್ಛತೆ ಹಾಳಾಗುವುದರ ಜೊತೆಗೆ ಸೌಂದರ್ಯ ಹಾಳಾಗುತ್ತದೆ. ಅಲ್ಲದೆ ನೋಡುಗರಿಗೆ ಕೆಟ್ಟದಾಗಿ ಕಾಣುತ್ತದೆ. ಈ ನಿಟ್ಟಿನಲ್ಲಿ ಎಲ್ಲೂ ಉಗುಳಬಾರದೆಂಬುದರ ಬಗ್ಗೆ ನಾಗರಿಕರಲ್ಲಿ ತಿಳುವಳಿಕೆ ಮೂಡಿಸಬೇಕು ಎಂದರು.

    ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳವ ಜವಾಬ್ದಾರಿ ಎಲ್ಲರ ಮೇಲಿದೆ. ಯಾರಾದರೂ ಸಾರ್ವಜನಿಕ ಸ್ಥಳದಲ್ಲಿ ಉಗುಳುತ್ತಿದ್ದರೆ ಅವರಿಗೆ ಉಗುಳುವುದರಿಂದ ರೋಗಳಳು ಹರಡಿವೆ. ಆದ್ದರಿಂದ ಉಗುಳೂವುದನ್ನು ಬಿಡಿ ಜೊತೆಗೆ ಇತರರಿಗೂ ಉಗುಳಬೇಡಿ ಎಂದು ಅರಿವು ಮೂಡಿಸುವ ಕೆಲಸ ಆಗಬೇಕಿದೆ. ನಗರವನ್ನು ಸ್ವಚ್ಛವಾಗಿಟ್ಟುಕೊಂಡರೆ ಸ್ವಚ್ಛ ಸರ್ವೇಕ್ಷನ್ ಅಭಿಯಾನದಲ್ಲಿ ಉತ್ತಮ ಅಂಕ ಪಡೆಯಬಹುದು ಇದಕ್ಕೆ ಎಲ್ಲಾ ನಾಗರಿಕರ ಸಹಕಾರ ಅಗತ್ಯ ಎಂದು ಹೇಳಿದರು.

    ಸಾರ್ವಜನಿಕ ಸ್ಥಳಗಳಲ್ಲಿ ಉಗುಳದೆ ಇರುವುದನ್ನು ನಾಗರಿಕರು ಅಭ್ಯಾಸ ಮಾಡಿಕೊಂಡಾಗ ನಗರ ಸ್ವಚ್ಛವಾಗಿ ಕಾಣುತ್ತದೆ. ಈ ಬಗ್ಗೆ ನಾಗರಿಗೆ ಸಂದೇಶ ರವಾನೆಯಾಗಬೇಕು ಎಂದ ವಿಶೇಷ ಆಯುಕ್ತರು ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಬೈಲಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದರು.

  • ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

    ಬೆಡ್‍ನಲ್ಲೇ ಮಲ, ಮೂತ್ರ ವಿಸರ್ಜನೆ – ಆರೋಗ್ಯದ ಬಗ್ಗೆ ನಟಿ ಯಶಿಕಾ ಆನಂದ್ ಅಪ್ಡೇಟ್

    ಚೆನ್ನೈ: ಇತ್ತೀಚೆಗಷ್ಟೇ ಕಾರು ಅಪಘಾತಕ್ಕೀಡಾಗಿ ಗೆಳತಿಯನ್ನು ಕಳೆದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ತಮಿಳು ನಟಿ ಯಶಿಕಾ ಆನಂದ್ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.

    ತಮ್ಮ ಆರೋಗ್ಯದ ಬಗ್ಗೆ ಇನ್ ಸ್ಟಾ ಖಾತೆಯಲ್ಲಿ ಪತ್ರ ಪೋಸ್ಟ್ ಮಾಡಿರುವ ನಟಿ, ನನಗೆ ಎದ್ದು ನಡೆಯಲು ಸಾಧ್ಯವಾಗುತ್ತಿಲ್ಲ. ಇನ್ನೂ ಸುಮಾರು 5 ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವ ಅನಿವಾರ್ಯತೆ ಇದೆ. ಮಲಗಿದ್ದಲ್ಲೇ ಮಲ-ಮೂತ್ರ ವಿರ್ಜನೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

    ಇನ್ ಸ್ಟಾ ಖಾತೆಯಲ್ಲಿ ಏನಿದೆ..?
    ನನ್ನ ಪೆಲ್ವಿಕ್ ಮೂಳೆಯಲ್ಲಿ ಅನೇಕ ಮುರಿತಗಳಾಗಿವೆ. ಹಾಗೆಯೇ ಬಲಗಾಲಿಗೂ ಗಂಭೀರ ಗಾಯಗಳಾಗಿವೆ. ಮುಂದಿನ 5 ತಿಂಗಳ ಕಾಲ ಎದ್ದೇಳಲು ಹಾಗೂ ನಡೆದಾಡಲು ಸಾಧ್ಯವಿಲ್ಲ. ಸದ್ಯ ಮಲಗಿದ್ದಲ್ಲೇ ಇದ್ದು, ಅಲ್ಲಿಯೇ ಮಲ-ಮೂತ್ರ ವಿಸರ್ಜನೆಯಾಗುತ್ತಿದೆ. ಬಲ, ಎಡ ಹೀಗೆ ಯಾವುದೇ ಭಾಗಕ್ಕೂ ತಿರುಗಲೂ ಆಗುತ್ತಿಲ್ಲ. ಹೀಗೆ ಹಲವು ದಿನಗಳಿಂದ ಒಂದೇ ರಿಯಾಗಿ ಮಲಗುತ್ತಿದ್ದೇನೆ. ಬೆನ್ನಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ. ನನ್ನ ಮುಖದ ಭಾಗಕ್ಕೆ ಯಾವುದೇ ರೀತಿಯ ಗಾಯಗಳಾಗದಿರುವುದೇ ನನ್ನ ಅದೃಷ್ಟ. ಆದರೆ ಇದು ನನಗೆ ಪುನರ್ಜನ್ಮವಾಗಿದೆ. ಇದನ್ನೂ ಓದಿ: ನಮ್ಮಲ್ಲಿ ಪರ, ವಿರೋಧಿ ಬಣಗಳಿಲ್ಲ, ಸಂಪುಟ ರಚನೆ ವೇಳೆ ಅಸಮಾಧಾನ ಸಹಜ- ನಳಿನ್

    ಘಟನೆಯ ಬಳಿಕ ಮಾನಸಿಕ ಹಾಗೂ ದೈಹಿಕವಾಗಿ ಗಾಯಗೊಂಡಿದ್ದೇನೆ. ದೇವರು ನನಗೆ ಶಿಕ್ಷೆ ನೀಡಿದ್ದಾನೆ. ಆದರೆ ಘಟನೆಯಲ್ಲಿ ನಾನು ಕಳೆದುಕೊಂಡಿರುವ ನೋವಿಗಿಂತ ಇದೇನೂ ದೊಡ್ಡದಲ್ಲ ಎಂದು ಯಶಿಕಾ ಬರೆದುಕೊಂಡಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿರುವ ಐಶಿಕಾ ಅವರಿಗೆ ಸರ್ಜರಿ ಯಶಸ್ವಿಯಾಗಿದ್ದು, ಆಗಸ್ಟ್ 3 ರಂದು ಐಸಿಯುವಿನಿಂದ ಜನರಲ್ ವಾರ್ಡ್‍ಗೆ ಸ್ಥಳಾಂತರ ಮಾಡಲಾಗಿದೆ. ಇದನ್ನೂ ಓದಿ: ದೇವರು, ರೈತರ ಹೆಸರಿನಲ್ಲಿ ಸಚಿವರ ಪ್ರಮಾಣವಚನ – ಗಮನ ಸೆಳೆದ ಅಂಶಗಳು

    ಜುಲೈ 24ರ ನಸುಕಿನ ಜಾವ ಚೆನ್ನೈನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಐಶಿಕಾ ಗಂಭೀರವಾಗಿ ಗಾಯಗೊಂಡರೆ ಅವರ ಆಪ್ತ ಸ್ನೇಹಿತೆ ವೆಲ್ಲಿಚೆಟ್ಟಿ ಭವಾನಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಇನ್ನಿಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗೊಂಡು ಬಚಾವ್ ಆಗಿದ್ದರು.

  • ಫಳಫಳ ಹೊಳೆಯುವ ಬಿಳಿ ಹಲ್ಲುಗಳಿಗೆ ಮನೆ ಮದ್ದು

    ಫಳಫಳ ಹೊಳೆಯುವ ಬಿಳಿ ಹಲ್ಲುಗಳಿಗೆ ಮನೆ ಮದ್ದು

    ಳದಿ ಹಲ್ಲುಗಳು ಸಾಮಾನ್ಯ ಹಲ್ಲಿನ ಸಮಸ್ಯೆಗಳಲ್ಲಿ ಒಂದಾಗಿದೆ. ಹಳದಿ ಹಲ್ಲುಗಳಿಗೆ ಚಿಕಿತ್ಸೆ ನೀಡಲು ಹಲವಾರು ಪರಿಹಾರಗಳಿದ್ದರೂ, ಅವುಗಳಲ್ಲಿ ಕೆಲವು ನಿಮ್ಮ ವಸಡುಗಳನ್ನು ಹಾನಿಗೊಳಿಸುತ್ತವೆ. ಹೀಗಾಗಿ ನೀವು ರಾಸಾಯನಿಕ  ಪ್ರಾಡೆಕ್ಟ್ ಬಳಸದೆ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಿಕೊಂಡು ಪರಿಹಾರ ಕಂಡುಕೊಳ್ಳ ಬಹುದಾಗಿದೆ.

    *1 ಟೀಸ್ಪೂನ್ ತೆಂಗಿನೆಣ್ಣೆಯನ್ನು ತೆಗೆದುಕೊಂಡು ನಿಮ್ಮ ಹಲ್ಲಿನ ಮೇಲೆ ಮಸಾಜ್ ಮಾಡಿ. 10 ನಿಮಿಷದ ಬಳಿಕ ನೀರಿನ ಸಹಾಯದಿಂದ ತೊಳೆಯಿರಿ. ಬ್ರಷ್‍ನ ಸಹಾಯದಿಂದ ನಿಮ್ಮ ಹಲ್ಲುಗಳನ್ನು ಉಜ್ಜಿ. ಉತ್ತಮ ಪರಿಹಾರ ಬೇಕೆಂದಲ್ಲಿ ಈ ವಿಧಾನವನ್ನು ಪ್ರತಿನಿತ್ಯ ಮಾಡಿರಿ.

    *ಬೇಕಿಂಗ್ ಸೋಡಾವನ್ನು ತೆಗೆದುಕೊಂಡು ಅದನ್ನು ಹನಿ ನೀರು ಹಾಕಿ ಪೇಸ್ಟನ್ನು ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಟೂತ್ ಪೇಸ್ಟ್ ಬಳಸಿ.

    *ಬಾಳೆಹಣ್ಣು, ಕಿತ್ತಳೆ ಅಥವಾ ನಿಂಬೆ ಸಿಪ್ಪೆಯನ್ನು ತೆಗೆದುಕೊಂಡು ನಿಮ್ಮ ಹಲ್ಲಿನ ಮೇಲೆ ನಯವಾಗಿ ಸ್ಕ್ರಬ್ ಮಾಡಿ. ನಂತರ ಒಂದು ಅಥವಾ ಎರಡು ನಿಮಿಷ ಬಿಟ್ಟು ನಿಮ್ಮ ಬಾಯಿಯನ್ನು ತೊಳೆಯಿರಿ.

    * ಇದ್ದಿಲಿನ ಪುಡಿಯನ್ನು ತೆಗೆದುಕೊಂಡು ಅದನ್ನು ನಿಮ್ಮ ಬ್ರಷ್‍ನ ಸಹಾಯದಿಂದ ಹಲ್ಲುಗಳಿಗೆ ಹಚ್ಚಿದರೆ ಬಿಳಿಯಾದ ಹಲ್ಲು ನಿಮ್ಮದಾಗುತ್ತದೆ.

    *ಕಹಿ ಬೇವಿನ ಎಲೆಗಳನ್ನು ಜಜ್ಜಿರಿ, ಇದಕ್ಕೆ ಒಂದು ಅಥವಾ ಎರಡು ಹನಿಗಳಷ್ಟು ಲಿಂಬೆರಸವನ್ನು ಬೆರೆಸಿ ಬಳಿಕ ಈ ಮಿಶ್ರಣದಿಂದ ನಿಮ್ಮ ಹಳದಿ ಹಲ್ಲುಗಳನ್ನು ಉಜ್ಜುವ ಮೂಲಕ ಅದನ್ನು ಬಿಳುಪಾಗಿಸಿರಿ.

    * ಎಳ್ಳಿನ ಬೀಜಗಳು ಹಲ್ಲಿನ ಹಳದಿ ಕಲೆ ನಿವಾರಣೆಗೆ ಅತ್ಯುತ್ತಮವಾದುದು. ಎಳ್ಳಿನ ಪುಡಿಯನ್ನು ಬಳಸಿ ಹಲ್ಲುಜ್ಜಿ ಫಳಫಳನೆ ಹೊಳೆಯುವ ಹಲ್ಲು ನಿಮ್ಮದಾಳುತ್ತದೆ.

    ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇತರ ಸಲಹೆಗಳು:
    * ನಿಮ್ಮ ಹಲ್ಲಿನ ತಪಾಸಣೆಯನ್ನು ತಪ್ಪಿಸಬೇಡಿ.
    * ದಿನಕ್ಕೆ ಎರಡು ಬಾರಿ ಹಲ್ಲುಜ್ಜಿ.
    * ಗಟ್ಟಿಯಾದ ಬ್ರಷ್ ಬದಲು, ಮೃದುವಾದ ಬ್ರಷ್ ಬಳಸಿ.


    * ಲಂಬವಾಗಿ ಹಲ್ಲುಜ್ಜಿ. ಕೆಲವರು ಅಡ್ಡ ಹಲ್ಲುಜ್ಜುವ ಅಭ್ಯಾಸ ಮಾಡಿಕೊಂಡಿದ್ದಾರೆ.ಇದು ಹಾನಿಗೆ ಕಾರಣವಾಗುತ್ತದೆ.
    * ನಿಮ್ಮ ಹಲ್ಲಿಗೆ ಸರಿ ಹೊಂದುವ  ಪೇಸ್ಟ್‌ಗಳ ಬಳಕೆಯನ್ನು ಮಾಡಿ

  • ಡಾರ್ಕ್ ಸರ್ಕಲ್‍ಗೆ ಶಾಶ್ವತ ಪರಿಹಾರ ಮನೆಮದ್ದು

    ಡಾರ್ಕ್ ಸರ್ಕಲ್‍ಗೆ ಶಾಶ್ವತ ಪರಿಹಾರ ಮನೆಮದ್ದು

    ಹಿಳೆಯರು ಸೌಂದರ್ಯ ಪ್ರಿಯರು. ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಕ್ರೀಮ್‍ಗಳನ್ನು ಬಳಕೆ ಮಾಡುತ್ತಲಿರುತ್ತಾರೆ. ಆದರೆ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಉಪಯೋಗಿಸಿಕೊಂಡು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಮಹಿಳೆಯರಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು ಹೆಚ್ಚಾಗುತ್ತವೆ. ಸುಕ್ಕುನ್ನು ಹೊಗಲಾಡಿಸಲು ಹೆಂಗಳೆಯರು ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಕ್ರೀಮ್‍ಗಳ ಬಳಕೆಯನ್ನು ಮಾಡಿರುತ್ತಾರೆ. ಆದರೆ ನೀವು ಒಮ್ಮೆ ಈ ಮದ್ದುಗಳನ್ನು ಬಳಸಿ ನೋಡಿ.

    ಆಯಾಸವಾದರೆ ನಿಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ಸಿಗುತ್ತಿಲ್ಲ ಎಂದರ್ಥ. ನಿದ್ರೆಯ ಕೊರತೆ ನಿಮ್ಮ ಚರ್ಮವನ್ನು ಮಂದವಾಗಿ, ಮಸುಕಾಗಿ ಪರಿವರ್ತಿಸುತ್ತದೆ. ಅಷ್ಟೇ ಅಲ್ಲ, ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಮೂಡಲಾರಂಭಿಸುತ್ತದೆ.

    * ದೇಹದಲ್ಲಿ ನೀರಿನ ಕೊರತೆಯುಂಟಾದರೆ ಕಣ್ಣುಗಳ ಕೆಳಗೆ ಸುಕ್ಕಾಗುತ್ತದೆ. ಹಾಗಾಗಿ ಹೆಚ್ಚು ನೀರು ಕುಡಿಯಬೇಕು. ಜೊತೆಗೆ ಸೌತೆಕಾಯಿಯನ್ನೂ ಹೆಚ್ಚು ಸೇವಿಸಬೇಕು.

    * ಪ್ರತಿದಿನ ಬಾದಾಮಿ ಎಣ್ಣೆಯಿಂದ ಕಣ್ಣುಗಳ ಕೆಳಗೆ ಕೈಗಳಿಂದ ಲಘುವಾಗಿ ಮಸಾಜ್ ಮಾಡಿದರೆ ಸುಕ್ಕು ಸಮಸ್ಯೆ ನಿವಾರಣೆಯಾಗುತ್ತದೆ.

    * ಟೊಮೆಟೊ ಮತ್ತು ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಕಣ್ಣುಗಳ ಸುತ್ತಲೂ ಹಚ್ಚಿ 20 ನಿಮಿಷಗಳ ಕಾಲ ಬಿಡಿ. ಅದನ್ನು ಚೆನ್ನಾಗಿ ತೊಳೆಯಿರಿ. ಇದನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡಿದರೆ ಸುಕ್ಕು ಕಡಿಮೆಯಾಗುತ್ತಾ ಬರುತ್ತದೆ.

    * ಸೌತೆಕಾಯಿಯ ರಸವನ್ನು ಹತ್ತಿ ಸಹಾಯದಿಂದ ಸುಕ್ಕು ಇರುವ ಕಡೆ ಹಚ್ಚಬೇಕು. ಹೀಗೆ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕಣ್ಣಿನ ಕೆಳಗಿರುವ ಸುಕ್ಕು ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.

    * ರಾತ್ರಿ ಮಲಗುವಾಗ ಅಲೋವೆರಾ ಅನ್ನು ಕಣ್ಣಿನ ಸುತ್ತ ಹಚ್ಚುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಮತ್ತು ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.

    * ಎರಡು ಟೀಸ್ಪೂನ್ ಮೊಸರಿಗೆ ಒಂದು ಟೀಚಮಚ ನಿಂಬೆ ರಸವನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ, ಈ ಪೇಸ್ಟ್ ಅನ್ನು ಡಾರ್ಕ್ ಸರ್ಕಲ್ ಆದ ಜಾಗಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆಯಬೇಕು.

  • ಬೆಳಗ್ಗೆ ಎದ್ದು ಬೆಚ್ಚಗಿನ ನೀರು ಕುಡಿಯಿರಿ- ಆರೋಗ್ಯ ಕಾಪಾಡಿಕೊಳ್ಳಿ

    ಬೆಳಗ್ಗೆ ಎದ್ದು ಬೆಚ್ಚಗಿನ ನೀರು ಕುಡಿಯಿರಿ- ಆರೋಗ್ಯ ಕಾಪಾಡಿಕೊಳ್ಳಿ

    ಬೆಳಗ್ಗೆ ಎದ್ದು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಹಲವರು ಇಟ್ಟುಕೊಂಡಿರುತ್ತಾರೆ. ಬೆಳಗ್ಗೆ ನೀರು ಕುಡಿಯುವುದರಿಂದ ಹಲವು ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಬೆಡ್ ಕಾಫಿ ಕುಡಿಯುವುದರಿಂದ ಆರೋಗ್ಯ ಹಾನಿಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ.

    * ಪ್ರತಿದಿನ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣವೇ ಒಂದು ಲೋಟ ಬೆಚ್ಚನೆಯ ನೀರು ಕುಡಿಯುವ ಅಭ್ಯಾಸವಿದ್ದರೆ ಒಳ್ಳೆಯದು ಎಂದು ವೈದ್ಯರು, ಹಿರಿಯರು ಹೇಳುತ್ತಾರೆ.

    * ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳ ಬುಹುದಾಗಿದೆ.

    * ನೀರನ್ನು ಹೆಚ್ಚಾಗಿ ನಾವು ಸೇವಿಸುವುದರಿಂದ ದೇಹದ ಮೈಕಾಂತಿ ಹೆಚ್ಚಾಗುತ್ತದೆ.

    * ಬಿಸಿ ನೀರು ಕುಡಿಯುವುದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ.

    * ಪ್ರತಿದಿನ ಒಂದು ಲೋಟ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ನಮ್ಮ ಜೀರ್ಣಕ್ರಿಯೆಗೂ ಸಹ ತುಂಬಾ ಸಹಾಯಕವಾಗುತ್ತದೆ.

    * ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ನಿಮಗೆ ಹೊಟ್ಟೆ ನೋವು ಸಹ ಇದ್ದರೆ ನಿವಾರಣೆಯಾಗುತ್ತದೆ.

    * ನೀರು ಸೇವನೆಯಿಂದ ರಕ್ತ ಪರಿಚಲನೆಗೆ ತುಂಬಾ ಸಹಾಯಕವಾಗಿದ್ದು, ಚರ್ಮವನ್ನು ಹೊಳೆಯುವಂತೆ ಮಾಡುವಂತಹ ಶಕ್ತಿ ಈ ಒಂದು ಲೋಟ ಬಿಸಿ ನೀರಿಗಿದೆ. ಅದಕ್ಕಾಗಿ ಇದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮವಾಗಿದೆ.

    * ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವ ಬದಲು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ವೇಗವಾಗಿ ತಮ್ಮ ದೈಹಿಕ ತೂಕಕ್ಕೆ ಸಂಬಂಧಪಟ್ಟಂತೆ ಒಳ್ಳೆಯ ಫಲಿತಾಂಶಗಳನ್ನು ಕಾಣಬಹುದು.

    * ನಿಮ್ಮ ತಲೆ ಕೂದಲು ಪ್ರತಿದಿನ ಉದುರುತ್ತಿದ್ದರೆ, ನಿಮ್ಮ ದೇಹದ ಚರ್ಮ ಕಾಂತಿ ಕಳೆದುಕೊಂಡಿದ್ದರೆ, ಅದಕ್ಕೆ ಮುಖ್ಯ ಕಾರಣ ದೇಹದಲ್ಲಿ ನೀರಿನ ಅಂಶ ಕಡಿಮೆ ಇರುವುದಾಗಿದೆ. ಹೀಗಾಗಿ ನೀವು ಬೆಳಗ್ಗೆ ನೀರು ಕುಡಿಯುವ ಅಭ್ಯಾಸವನ್ನು ಬೆಳಸಿಕೊಳ್ಳಿ.

  • ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಲಾಭ

    ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಸಿಗಲಿದೆ ಹಲವು ಲಾಭ

    ತ್ತಮವಾದ ಆರೋಗ್ಯ ಎಲ್ಲರಿಗೂ ಬೇಕು. ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ನಾವು ಸೇವಿಸುವ ಆಹಾರಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ನೀವು ಮನೆಯಲ್ಲಿ ಕೆಲವು ಪೌಷ್ಟಿಕಾಂಶವುಳ್ಳ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

    ನಮ್ಮಲ್ಲಿ ಹೆಚ್ಚಿನವರು ಕಡಲೆಕಾಯಿಯನ್ನು ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಕಡಲೆಕಾಯಿಯನ್ನು ಬಡವರ ಬಾದಮಿ ಎಂದು ಕೂಡ ಕರೆಯುವುದುಂಟು. ಕಡಲೆಕಾಯಿಯನ್ನು ಹಸಿ, ಹುರಿದು, ಬೇಯಿಸಿ ತಿನ್ನಬಹುದು.

    *ಕಡಲೆಕಾಯಿಯ ಸಿಪ್ಪೆಯಲ್ಲಿರುವ ಬಯೋಆಕ್ಟಿವ್ಸ್ ಮತ್ತು ಫೈಬರ್ ರೋಗದಿಂದ ರಕ್ಷಿಸುತ್ತದೆ ಮತ್ತು ಚರ್ಮದಲ್ಲಿನ ಕಾಯಿಲೆಯನ್ನು ದೂರ ಮಾಡಿ ಚರ್ಮವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದ್ವಿದಳ ಧಾನ್ಯವಾಗಿದ್ದು ಇದರಲ್ಲಿ ಸಾಕಷ್ಟು ಪ್ರಮಾಣದ ಪೋಷಕಾಂಶಗಳು, ಪ್ರೋಟೀನ್ ಇದೆ.

    * ದೇಹದಲ್ಲಿನ ಉರಿಯೂತ ಮತ್ತು ತುರಿಕೆ ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ.

    * ಕಡಲೆಕಾಯಿ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ.

    * ಶೇಂಗಾ ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೇ ಸುಸ್ತು, ಆಯಾಸವನ್ನು ಕಡಿಮೆ ಮಾಡುತ್ತದೆ.

    * ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

    * ಹುರಿದ ಕಡಲೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಗ್ರೀನ್ ಟೀಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವಿದೆ.

    * ಕಡಲೆಕಾಯಿ ಹೃದ್ರೋಗ, ಕ್ಯಾನ್ಸರ್ ಮತ್ತು ಹೃದಯಾಘಾತವನ್ನು ತಡೆಗಟ್ಟುವ ಗುಣಗಳನ್ನು ಹೊಂದಿದೆ.

  • ಚಿಕಿತ್ಸೆ ಫಲಕಾರಿಯಾಗದೇ ಯೋಧ ಸಾವು – ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ

    ಚಿಕಿತ್ಸೆ ಫಲಕಾರಿಯಾಗದೇ ಯೋಧ ಸಾವು – ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ

    ಕೋಲಾರ: ಅನಾರೊಗ್ಯ ಪೀಡಿತ ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಹುಲ್ಕೂರು ಗ್ರಾಮದ 52 ವರ್ಷದ ಪ್ರಕಾಶ್ ಹೆಚ್.ಆರ್. ಮೃತ ಯೋಧ.

    ಯೋಧ ಪ್ರಕಾಶ್ ಮೂರು ದಿನಗಳಿಂದ ಉಸಿರಾಟದ ತೊಂದರೆ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಜಯದೇಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ 28 ವರ್ಷಗಳಿಂದ ಸಿ.ಆರ್.ಪಿ.ಎಪ್ ನಲ್ಲಿ ಕೆಲಸ ಮಾಡುತಿದ್ದ ಪ್ರಕಾಶ್ ಅವರು ಜಮ್ಮುಕಾಶ್ಮೀರ, ನಗಾತ್, ಅರುಣಾಚಲ ಪ್ರದೇಶ ಇನ್ನಿತರ ಸ್ಥಳಗಳಲ್ಲಿ ದೇಶ ಸೇವೆ ಸಲ್ಲಿಸಿದ್ದರು. ಯಲಹಂಕ ಸಿಆರ್.ಪಿ.ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಇನ್ನೂ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನ ಸ್ವಗ್ರಾಮವಾದ ಹುಲ್ಕೂರು ಗ್ರಾಮದಲ್ಲಿ ನಡೆಸಲಾಗಿದೆ. ಯೋಧನ ಸಾವಿಗೆ ಕೋಲಾರ ಜಿಲ್ಲೆಯ ಜನ ಕಂಬನಿ ಮಿಡಿದಿದ್ದು, ಕೆಜಿಎಫ್ ಪೊಲಿಸರು ಗೌರವ ವಂದನೆ ಸಲ್ಲಿಸಿದರು.

  • ಬೇವು ತಲೆಹೊಟ್ಟಿಗೆ ಮದ್ದು

    ಬೇವು ತಲೆಹೊಟ್ಟಿಗೆ ಮದ್ದು

    ಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಎಲ್ಲರಲ್ಲಿಯೂ ಕಾಣಿಸಿಕೊಳ್ಳುವ ಸಹಜ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಬೇವು ಮದ್ದಾಗಿ ಕಾರ್ಯನಿರ್ವಹಿಸುತ್ತದೆ. ನೀವು ಕೆಮಿಕಲ್ ಅಂಶ ಇರುವ ಶಾಂಪೂ ಬಳಸುವ ಬದಲಾಗಿ ಮನೆಯಲ್ಲಿಯೇ ಸಿಗುವ ಈ ಬೇವನ್ನು ಬಳಸಿ ತಲೆ ಹೊಟ್ಟನ್ನು ನಿವಾರಿಸ ಬಹುದಾಗಿದೆ.

    * ಬೇವಿನ ಎಣ್ಣೆ ಕೂದಲ ಆರೈಕೆಗೆ ಹಾಗೂ ತಲೆಹೊಟ್ಟಿನ ನಿವಾರಣೆಗೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್‍ ಹೆಸರಿನಲ್ಲಿ ವಂಚನೆಗೆ ಯತ್ನ – ಮಹಿಳೆಯ ವಿರುದ್ಧ ಯಜಮಾನ ದೂರು

    * ಪ್ರತಿದಿನ ಬೆಳಗ್ಗೆ ಬೇವಿನ ಎಲೆಗಳನ್ನು ತಿನ್ನಬೇಕು. ಇಲ್ಲವಾದಲ್ಲಿ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದರ ತಿಳಿ ನೀರನ್ನು ಕುಡಿಯಬಹುದು ಅಥವಾ ಬೇವಿನ ಎಲೆಗಳನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಒಮ್ಮೆ ನೀವು ಇದನ್ನು ಪ್ರಯತ್ನಿಸಿದರೆ ಇದರ ಲಾಭದ ಅರಿವು ನಿಮಗಾಗುತ್ತದೆ.

    * ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್ ಮೊಸರು ಸೇರಿಸಿ. ನಂತರ ತಲೆಗೆ ಹಚ್ಚಿಕೊಳ್ಳಿ. 15-20 ನಿಮಿಷ ಬಿಟ್ಟು ಕೂದಲನ್ನು ತೊಳೆದುಕೊಳ್ಳಿ. ಮೊಸರಿನಲ್ಲಿನ ತಂಪಾದ ಮತ್ತು ಬೇವಿನ ಆ್ಯಂಟಿ ಫಂಗಲ್ ಗುಣಲಕ್ಷಣ ತಲೆಹೊಟ್ಟು ವಿರುದ್ಧ ಹೋರಾಡುತ್ತದೆ.

    * ಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ನಂತರ ಈ ಪೇಸ್ಟನ್ನು ತಲೆಬುರುಡೆಗೆ ಮಾಸ್ಕ್ ಹಾಕಿಕೊಳ್ಳಿ.

    * ಬೇವನ್ನು ನೀವು ಕಂಡೀಶನರ್ ಆಗಿಯೂ ಬಳಸಬಹುದು. ಈ ಬೇವಿನ ಕಂಡೀಶನರ್ ಮಾಡಲು ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಕುದಿಸಿ, ತಣ್ಣಗಾಗಲು ಬಿಡಿ. ನಿಮ್ಮ ಕೂದಲನ್ನು ಶಾಂಪೂ ಮಾಡಿದ ನಂತರ, ಈ ಬೇವಿನ ಮಿಶ್ರಣದಿಂದ ಕೂದಲನ್ನು ತೊಳೆಯಿರಿ.

  • ಅಮೆರಿಕದಿಂದ ತಲೈವಾ ರಿಟರ್ನ್- ಅಭಿಮಾನಿಗಳಲ್ಲಿ ಸಂಭ್ರಮ

    ಅಮೆರಿಕದಿಂದ ತಲೈವಾ ರಿಟರ್ನ್- ಅಭಿಮಾನಿಗಳಲ್ಲಿ ಸಂಭ್ರಮ

    ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಯುಎಸ್‍ನಿಂದ ಚೆನ್ನೈಗೆ ಬಂದಿಳಿದ್ದಿದ್ದು, ವಿಮಾನ ನಿಲ್ದಾಣದಿಂದ ಬರುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ತಲೈವಾ ಅವರು ತಮ್ಮ ಪತ್ನಿ ಲತಾ ಅವರೊಂದಿಗೆ ಯುಎಸ್‍ನಲ್ಲಿ ಮೂರು ವಾರ ಕಳೆದ ನಂತರ ಇಂದು ಮಧ್ಯರಾತ್ರಿಯಲ್ಲಿ ಚೆನ್ನೈಗೆ ಬಂದಿಳಿದಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ತಮ್ಮ ಕಾರಿನ ಕಡೆ ನಡೆದುಕೊಂಡು ಹೋಗುತ್ತಿದ್ದು, ಅವರು ನೀಲಿ ಶರ್ಟ್, ಕಪ್ಪು ಟೋಪಿ ಮತ್ತು ಫೇಸ್ ಮಾಸ್ಕ್ ಧರಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಅವರನ್ನು ನೋಡಲು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಕಾಯುತ್ತಿದ್ದರು. ಇದನ್ನೂ ಓದಿ: ಒಂದು ರೀತಿ ನನ್ನ ಮಗನನ್ನು ನಾನು ಕಳ್ಕೊಂಡಂತೆ ಭಾಸವಾಗ್ತಿದೆ: ಕಣ್ಣೀರಿಟ್ಟ ವಿಜಿ

    ರಜನಿಕಾಂತ್ ಮತ್ತು ಅವರ ಪತ್ನಿ ಲತಾ ಅವರೊಂದಿಗೆ ಯುಎಸ್‍ನಲ್ಲಿರುವ ಮಾಯೊ ಕ್ಲಿನಿಕ್‍ನಲ್ಲಿ ಆರೋಗ್ಯ ತಪಾಸಣೆಗಾಗಿ ಹೋಗಿದ್ದರು. ಅವರ ಆರೋಗ್ಯ ತಪಾಸಣೆ ಮುಗಿದ ನಂತರ ಯುಎಸ್‍ನಲ್ಲಿ ವಾರಗಳು ಕಳೆದು ಅಲ್ಲಿ ಅವರ ಅಭಿಮಾನಿಗಳನ್ನು ಭೇಟಿಯಾದರು.

    ರಜಿನಿಕಾಂತ್‍ಗೆ 2016ರಲ್ಲಿ ಮೂತ್ರಪಿಂಡದ ಸಮಸ್ಯೆ ಇರುವುದರಿಂದ ವರ್ಷಕ್ಕೆ ಒಂದು ಬಾರಿಯಂತೆ ಯುಎಸ್‍ಗೆ ಅವರು ಹೋಗಿ ಬರುತ್ತಿದ್ದರು. ‘ಅನ್ನತ್’ ಶೂಟಿಂಗ್ ಅನ್ನು ಪುನಾರಾಂಭಿಸಲು ರಜನಿ ಚೆನ್ನೈಗೆ ಮರಳಿದ್ದಾರೆ. ಇದನ್ನೂ ಓದಿ: ಸುಮಲತಾಗೆ ಯಾರೂ ಇಲ್ಲ ಅಂದ್ಕೋಬೇಡಿ, ಜೂ. ರೆಬೆಲ್ ಸ್ಟಾರ್ ಇದ್ದಾನೆ: ರಾಕ್‍ಲೈನ್ ವೆಂಕಟೇಶ್

    ಕೋವಿಡ್-19 2ನೇ ಅಲೆ ಬರುವ ಮೊದಲೇ ಇದರ ಬಹುಪಾಲು ಶೂಟಿಂಗ್ ಪೂರ್ಣಗೊಂಡಿದೆ. ಇತ್ತೀಚೆಗೆ ಚಿತ್ರದ ಪ್ರೊಡಕ್ಷನ್ ಹೌಸ್ ‘ಸನ್ ಪಿಕ್ಚರ್ಸ್’ ದೀಪಾವಳಿಯ ‘ನವಂಬರ್ 04’ ರಂದು ಅನ್ನತ್ ರಿಲೀಸ್ ಆಗುತ್ತದೆ. ‘ಸಿರುಥೈ ಶಿವಾ’ ನಿರ್ದೇಶನದ ಅಣ್ಣಾಥೆ ಗ್ರಾಮೀಣ ಮನರಂಜನೆಯ ಕಥೆಯಾಗಿದೆ. ಈ ಸಿನಿಮಾದಲ್ಲಿ ರಜಿನಿಕಾಂತ್, ನಯನತಾರಾ, ಕೀರ್ತಿ ಸುರೇಶ್, ಮೀನಾ, ಖುಷ್ಬು, ಪ್ರಕಾಶ್ ರಾಜ್ ಮತ್ತು ಸೂರಿ ನಟಿಸಿದ್ದಾರೆ. ಈ ಚಿತ್ರಕ್ಕೆ ‘ಡಿ ಇಮ್ಮನ್’ ಸಂಗೀತ ಸಂಯೋಜಿಸಿದ್ದಾರೆ.