Tag: health

  • ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    ಳಿಗಾಲ ಬಂತೆಂದರೆ ಸಾಕು ರೋಗ ರುಜಿನಗಳು ಹೆಚ್ಚಾಗುತ್ತದೆ. ನಮ್ಮ ದೇಹಕ್ಕೆ ಕೊಬ್ಬನಾಂಶವಿರುವ ಆಹಾರದ ಅವಶ್ಯಕತೆ ಈ ಸಮಯದಲ್ಲಿ ಹೆಚ್ಚಾಗಿರುತ್ತದೆ. ಕೊಬ್ಬಿನಾಂಶವಿರುವ ಆಹಾರವನ್ನು ಸೇವಿಸುವುದರಿಂದ ದೇಹವನ್ನು ಸಮೃದ್ಧವಾಗಿಸುವುದರ ಜೊತೆಗೆ ದೇಹಕ್ಕೆ ಜೀವಸತ್ವ ಹಾಗೂ ಇತರ ಪೋಷಕಾಂಶಗಳನ್ನು ಪಡೆಯಬಹುದು. ಇದರಿಂದಾಗಿ ಆರೋಗ್ಯಕರ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ.

    ಅಷ್ಟೇ ಅಲ್ಲದೇ ಆಯಾಸ, ಚರ್ಮ ಹಾಗೂ ಕೂದಲಿನ ಸಮಸ್ಯೆಗಳು ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಹಾರ್ಮೋನ್‌ಗಳ ಸಮತೋಲನ ಕಾಪಾಡಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವು ಸಹಾಯಕವಾಗಿದೆ. ಚಳಿಗಾಲದಲ್ಲಿ ನಾಲಿಗೆ ರುಚಿಗಾಗಿ ಬಿಸಿ ಬಿಸಿ ಆಹಾರ ಸೇವಿಸುವುದರ ಜೊತೆಗೆ ಆರೋಗ್ಯಕ್ಕೆ ಅವಶ್ಯಕವಾಗಿರುವ ಪ್ರೋಟೀನ್ ಇರುವ ಪದಾರ್ಥಗಳನ್ನು ಸೇವಿಸುವುದು ಅಗತ್ಯವಾಗಿದೆ.

    ಮೊಟ್ಟೆ: ಮೊಟ್ಟೆಗಳು ದೇಹದ ಅಂಗಾಂಶಗಳನ್ನು ಸದೃಢಗೊಳಿಸುವುದರ ಜೊತೆಗೆ ಪ್ರೋಟಿನ್‌ನ್ನು ಹೆಚ್ಚಿಸುತ್ತದೆ. ವಯಸ್ಕರು ದಿನಕ್ಕೆ ಎರಡು ಮೊಟ್ಟೆಗಳನ್ನು ನಿಯಮಿತವಾಗಿ ತಿನ್ನಬಹುದು. ಮೊಟ್ಟೆಯಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳಿವೆ. ಆರೋಗ್ಯಕ್ಕೆ ಬೇಕಾಗುವ ಅಂಶಗಳನ್ನು ಒದಗಿಸುತ್ತದೆ.

    ಮೀನು: ನಿಯಮಿತವಾಗಿ ಮೀನಿನ ಸೇವನೆಯಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮೀನು ಸೇವನೆ ಸಹಾಯ ಮಾಡುತ್ತದೆ.

    ಡ್ರೈ ಫ್ರೂಟ್ಸ್: ಆರೋಗ್ಯಕರ ಜೀವನ ನಡೆಸಲು ಡ್ರೈ ಫ್ರೂಟ್ಸ್ ಗಳು ಅವಶ್ಯಕವಾಗಿದ್ದು, ಪ್ರೊಟೀನ್‌ಗಳು ಇದರಲ್ಲಿ ಹೆಚ್ಚಿರುತ್ತದೆ. ಡ್ರೈ ಫ್ರೂಟ್ಸ್ ಗಳನ್ನು ಪ್ರತಿದಿನ ಮುಂಜಾನೆ ತಿನ್ನುವುದರಿಂದ ಬೊಜ್ಜು, ಹೃದ್ರೋಗ ಮತ್ತು ಮಧುಮೇಹದಂತಹ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಿನವರು ನೀರಿನಲ್ಲಿ ನೆನೆಹಾಕಿ ಸೇವಿಸುತ್ತಾರೆ. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    ಮೊಸರು: ಸಾಮಾನ್ಯವಾಗಿ ಹಾಲಿನ ಉತ್ಪನ್ನಗಳಿಂದ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತದೆ. ಅದರಲ್ಲೂ ಮೊಸರು ಜೀರ್ಣಕ್ರಿಯೆ ಸುಧಾರಿಸಲು ಸಹಾಯಕಾರಿಯಾಗಿದೆ ಜೊತೆಗೆ ಮೊಸರು ಸೇವನೆಯಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

    ಚೀಸ್ ಅಥವಾ ಬೆಣ್ಣೆ: ಟೋಸ್ಟ್, ತರಕಾರಿಗಳು, ದಾಲ್ ಅಥವಾ ಚಪಾತಿಗಳನ್ನು ತಿನ್ನುವಾಗ ಹೆಚ್ಚಾಗಿ ಚೀಸ್ ಅಥವಾ ಬೆಣ್ಣೆಯನ್ನು ಬಳಸಿ. ಇದರಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶ ಮತ್ತು ವಿಟಮಿನ್ ಹೊಂದಿರುತ್ತದೆ. ಇದರಿಂದಾಗಿ ದೇಹವನ್ನು ಸಮೃದ್ಧವಾಗಿಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಮೂಲಂಗಿಯಲ್ಲಿದೆ ಆರೋಗ್ಯಕರ ಗುಣಗಳು

  • ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಕಣ್ಣೀರು ಹಾಕುತ್ತಾ ಮಹಿಳೆ ಎಸ್ಕೇಪ್

    ಲಸಿಕೆ ಹಾಕಿಸಿಕೊಳ್ಳಿ ಅಂದಿದ್ದಕ್ಕೆ ಕಣ್ಣೀರು ಹಾಕುತ್ತಾ ಮಹಿಳೆ ಎಸ್ಕೇಪ್

    ಬೀದರ್: ಆರೋಗ್ಯ ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಳ್ಳಿ ಎಂದ್ರೆ, ಮಹಿಳೆಯೊಬ್ಬಳು ಕಣ್ಣೀರು ಹಾಕುತ್ತಾ ಸ್ಥಳದಿಂದ ಪರಾರಿಯಾಗಿರುವ ಘಟನೆ ಬೀದರ್ ನಗರದ ಶಿವಾಜಿ ವೃತ್ತದಲ್ಲಿ ಇಂದು ನಡೆದಿದೆ.

    ಇಂದು ಲಸಿಕಾ ಮಹಾಮೇಳ ನಡೆಯುತ್ತಿರುವಾಗ ಆಟೋದಲ್ಲಿ ಬಂದ ಮೂವರು ಮಹಿಳೆಯರನ್ನು ನಿಲ್ಲಿಸಿ ಲಸಿಕೆ ಹಾಕಿಸಿಕೊಳ್ಳಿ ಎಂದು ಆರೋಗ್ಯ ಸಿಬ್ಬಂದಿಗಳು ಹೇಳಿದ್ದಾರೆ. ಈ ವೇಳೆ ಓರ್ವ ಮಹಿಳೆ ಕಣ್ಣೀರು ಹಾಕುತ್ತಾ ಸ್ಥಳದಿಂದ ಕಾಲ್ಕಿತ್ತಿದರೆ ಉಳಿದ ಇಬ್ಬರು ಮಹಿಳೆಯರು ಲಸಿಕೆ ತೆಗೆದುಕೊಳ್ಳದೆ ಸ್ಥಳದಿಂದ ಪಲಾಯನವಾಗಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕುರಿತ ರಮೇಶ್‌ ಕುಮಾರ್‌ ಹೇಳಿಕೆಗೆ ಕಾಂಗ್ರೆಸ್‌ ನಾಯಕರಿಂದಲೇ ಟೀಕೆ

    ಯಾಕೆ ಕಣ್ಣೀರು ಹಾಕುತ್ತಿದ್ದಿಯಾ ಎಂದು ಆರೋಗ್ಯ ಸಿಬ್ಬಂದಿಗಳು ಕೇಳಿದರೆ ಯಾವುದೇ ಉತ್ತರ ನೀಡದೆ ಮಹಿಳೆ ಸ್ಥಳದಿಂದ ಕಾಲ್ಕಿತ್ತುವ ಮೂಲಕ ಹೈಡ್ರಾಮಾ ಮಾಡಿದ್ದಾರೆ. ಈಗಾಗಲೇ ಶೇ. 96ರಷ್ಟು ಮೋದಲ ಡೋಸ್ ಲಸಿಕಾಕರಣ ಮಾಡಿರುವ ಜಿಲ್ಲಾಡಳಿತಕ್ಕೆ ಉಳಿದ ಶೇ.4 ರಷ್ಟು ಲಸಿಕೆ ನೀಡೋದೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

  • ಮೂಲಂಗಿಯಲ್ಲಿದೆ ಆರೋಗ್ಯಕರ ಗುಣಗಳು

    ಮೂಲಂಗಿಯಲ್ಲಿದೆ ಆರೋಗ್ಯಕರ ಗುಣಗಳು

    ಮೂಲಂಗಿ ನೋಡಿದರೆ ಮೂಗು ಮುರಿಯುವವರೇ ಹೆಚ್ಚಾಗಿದ್ದಾರೆ. ಮೂಲಂಗಿ ವಾಸನೇ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ. ಆದರೆ ಮೂಲಂಗಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ನಾರಿನಂಶ ಮತ್ತು ವಿಟಮಿನ್ ಅಧಿಕವಿದ್ದು, ಮಲಬದ್ಧತೆ ಮತ್ತು ಮಲವ್ಯಾಧಿಯಂತಹ ಕಾಯಿಲೆಗಳನ್ನು ಗುಣಪಡಿಸಲು ಮೂಲಂಗಿ ಸಹಕಾರಿಯಾಗಿದೆ. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    * ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.


    * ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡುತ್ತದೆ. ಇದನ್ನೂ ಓದಿ: ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ – ಮೋದಿ ಟ್ವಿಟ್ಟರ್‌ ಖಾತೆ ಹ್ಯಾಕ್‌

    * ಮೂಲಂಗಿ ಸೊಪ್ಪಿನ ರಸವನ್ನು ಸೇವಿಸಿದರೆ ಮೂತ್ರ ಕಟ್ಟಿಕೊಳ್ಳುವ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.


    *ಹಸಿ ಮೂಲಂಗಿ ಹಾಕಿ ಸಲಾಡ್ ಮಾಡಿ ತಿಂದರೆ ಮೂಲವ್ಯಾಧಿ ಸಮಸ್ಯೆ ಕಡಿಮೆಯಾಗುವುದು. ಇದನ್ನೂ ಓದಿ: ನಾವು ಮಠಕ್ಕೆ ಬಂದು ಮೊಟ್ಟೆ ತಿಂತೀವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲು

    * ಮೂಲಂಗಿ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕಂಡುಬರುತ್ತದೆ. ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸಿದರೆ ಜೀರ್ಣಕ್ರಿಯೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ.


    * ತೂಕ ಇಳಿಸಿಕೊಳ್ಳಲು ಬಯಸಿದರೆ, ಮೂಲಂಗಿ ಎಲೆ ಎಲ್ಲರಿಗೂ ಉತ್ತಮ ಆಯ್ಕೆಯಾಗಿದೆ. ಹೌದು, ಮೂಲಂಗಿ ಎಲೆಗಳಿಂದ ತಯಾರಿಸಿದ ಜ್ಯೂಸ್ ಸೇವಿಸುವ ಮೂಲಕ ನೀವು ಸುಲಭವಾಗಿ ತೂಕವನ್ನು ಕಡಿಮೆ ಮಾಡಬಹುದು

    ಮೂಲಂಗಿ ಜ್ಯೂಸ್ ಮಾಡುವುದು ಹೇಗೆ?: ಮೂಲಂಗಿ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಬಳಿಕ ಸಣ್ಣ ತುಂಡುಗಳಾಗಿ ಕತ್ತರಿಸಿ, ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದಕ್ಕೆ ರುಚಿಗೆ ತಕ್ಕಂತೆ ಉಪ್ಪು, ಚಿಟಿಕೆ ಕರಿಮೆಣಸಿನ ಪುಡಿ ಮತ್ತು ನಿಂಬೆ ರಸವನ್ನು ಸೇರಿಸಿದರೆ ಮೂಲಂಗಿ ಎಲೆಗಳ ಜ್ಯೂಸ್ ಸವಿಯಲು ಸಿದ್ಧವಾಗುತ್ತದೆ.

  • ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ನಿಮಗಾಗಿ

    ಆರೋಗ್ಯಕರವಾದ ನುಗ್ಗೆಕಾಯಿ ಸೂಪ್ ಮಾಡುವ ವಿಧಾನ ನಿಮಗಾಗಿ

    ಳಿಗಾಲ ಬಂತೆಂದರೆ ಸಾಕು  ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ನುಗ್ಗೆಕಾಯಿ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ನುಗ್ಗೆಕಾಯಿ -3
    * ಈರುಳ್ಳಿ -1
    * ಟೊಮೆಟೋ -1
    * ಶುಂಠಿ -ಸ್ವಲ್ಪ
    * ಬೆಳ್ಳುಳ್ಳಿ – 2
    * ರುಚಿಗೆ ತಕ್ಕಷ್ಟು ಉಪ್ಪು
    * ಅರಿಶಿನ ಪುಡಿ-1 ಚಮಚ
    * ಜೀರಿಗೆ ಪುಡಿ -1 ಚಮಚ
    * ಕಾಳುಮೆಣಸು -1 ಚಮಚ
    * ಕೊತ್ತಂಬರಿ ಸೊಪ್ಪು – ಸ್ವಲ್ಪ


    ಮಾಡುವ ವಿಧಾನ:
    * ಮೊದಲು ಕುಕ್ಕರ್‌ಗೆ ಹೆಚ್ಚಿದ ನುಗ್ಗೆಕಾಯಿ, ಈರುಳ್ಳಿ ಟೊಮೆಟೋ, ಶುಂಠಿ, ಬೆಳ್ಳುಳ್ಳಿ , ಉಪ್ಪು, ಅರಿಶಿನ ಪುಡಿ ಜೀರಿಗೆ ಪುಡಿ ಮತ್ತು 2 ಕಪ್ ನೀರನ್ನು ಹಾಕಿ 3 ಸೀಟಿ ಕೂಗಿಸಿಕೊಳ್ಳಬೇಕು.


    * ನಂತರ ಕುಕ್ಕರ್ ತಣ್ಣಗಾದ ಆದನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾ ಯಿ ತಿರುಳನ್ನು ಸಿಪ್ಪೆಯಿಂದ ಬೇರೆ ಪಡಿಸಿ ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ 

    * ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸೂಪ್ ಸಿದ್ಧವಾಗುತ್ತದೆ. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ

  • ತ್ವಚೆಯ ಅಂದ ಹೆಚ್ಚಿಸಲು ಹಾಲಿನ ಫೇಸ್‍ಪ್ಯಾಕ್

    ತ್ವಚೆಯ ಅಂದ ಹೆಚ್ಚಿಸಲು ಹಾಲಿನ ಫೇಸ್‍ಪ್ಯಾಕ್

    ತ್ವಚೆ ಚಂದವಿದ್ದಷ್ಟು ಮುಖದ ಕಾಂತಿಯೂ ಹೆಚ್ಚುತ್ತದೆ. ಮುಖದ ರಕ್ಷಣೆಗಾಗಿ ಸಾವಿರಾರು ರೂ. ಖರ್ಚು ಮಾಡಿ ತ್ವಚೆಯನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದರಲ್ಲೂ ಚಳಿಗಾಲ ಬಂದರೆ ಸಾಕು. ಚರ್ಮಗಳಲ್ಲಿ ಮೂಡುವ ಬಿರುಕು ಮುಖದ ಅಂದವನ್ನು ಕೆಡಿಸುತ್ತದೆ.

    ಚರ್ಮವನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕು. ತಮ್ಮ ತ್ವಚೆಯ ರಕ್ಷಣೆಗೆ ಸಾವಿರಾರು ರೂ. ನೀಡುವ ಬದಲು ಮನೆಯಲ್ಲೇ ಸಿಂಪಲ್ ಆಗಿ ಫೇಸ್ ಪ್ಯಾಕ್‍ಗಳನ್ನು ಮಾಡಿಕೊಂಡು ಮುಖದ ಅಂದವನ್ನು ಹೆಚ್ಚಿಸಿಕೊಳ್ಳಿ. ಹಾಲನ್ನು ಬಳಸಿ ಯಾವ ರೀತಿ ಫೇಸ್ ಪ್ಯಾಕ್‍ಗಳನ್ನು ಮಾಡಬಹುದು ಎನ್ನುವುದಕ್ಕೆ ಕುರಿತು ಮಾಹಿತಿ ಇಲ್ಲಿವೆ ನೋಡಿ.

    ಗುಲಾಬಿ ಎಸಳಿನ ಫೇಸ್‍ಪ್ಯಾಕ್:
    ತಾಜಾ ಗುಲಾಬಿ ಎಸಳುಗಳನ್ನು ರಾತ್ರಿಯಿಡೀ ಹಾಲಿನಲ್ಲಿ ನೆನೆಸಿ, ಮರುದಿನ ಬೆಳಗ್ಗೆ ಎಸಳುಗಳನ್ನು ಮತ್ತು ಹಾಲನ್ನು ಒಟ್ಟಿಗೆ ಪುಡಿಮಾಡಿ. ಅದಕ್ಕೆ ಒಂದು ಚಮಚ ಶ್ರೀಗಂಧದ ಪುಡಿಯನ್ನು ಸೇರಿಸಿ ಫೇಸ್ ಪ್ಯಾಕ್ ಮಾಡಿ. ಈ ಫೇಸ್ ಪ್ಯಾಕ್ ಮುಖದ ಮೇಲೆ ಹೊಳಪು ಪಡೆಯಲು ಅನುವು ಮಾಡಿಕೊಡುತ್ತದೆ.

    ಆಲೂಗಡ್ಡೆ ಸಿಪ್ಪೆ ಪೇಸ್ಟ್: ಆಲೂಗಡ್ಡೆಯ ಸಿಪ್ಪೆ ತೆಗೆದು ಅದರ ಜೊತೆ ಹಾಲನ್ನು ಹಾಕಿ ಪೇಸ್ಟ್ ಮಾಡಿ. ಪೇಸ್ಟ್ ಮಾಡುವಾಗ ಅರ್ಧ ಕಪ್‍ಗಿಂತ ಕಡಿಮೆ ಹಾಲು ಸೇರಿಸಿ. ಸ್ವಲ್ಪ ಸಮಯದವರೆಗೆ ಫ್ರಿಡ್ಜ್‍ನಲ್ಲಿ ಇರಿಸಿ, ಆ ನಂತರ ಅದನ್ನು ಮುಖಕ್ಕೆ ಹಚ್ಚಿ ಮತ್ತು 15 ನಿಮಿಷಗಳ ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.

    ಹಾಲು ಮತ್ತು ಜೇನುತುಪ್ಪ ಮಿಶ್ರಣದ ಫೇಸ್‍ಪ್ಯಾಕ್: ಅರ್ಧ ಕಪ್ ಹಾಲಿಗೆ ಎರಡು ಚಮಚ ಜೇನುತುಪ್ಪ ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ ಬ್ರಶ್‍ನ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ಅದನ್ನು ಒಣಗಲು ಬಿಡಿ, ನಂತರದಲ್ಲಿ ಅದನ್ನು ನಿಮ್ಮ ಕೈಗಳಿಂದ ಉಜ್ಜಿ ಅದನ್ನು ತೆಗಿಯಿರಿ. ಈ ಫೇಸ್‍ಪ್ಯಾಕ್ ಮುಖದ ಮೇಲಿನ ಕಲೆಗಳನ್ನು ತೆಗೆಯಲು ನಿಮಗೆ ಅನುಕೂಲವಾಗುತ್ತದೆ. ಇದನ್ನೂ ಓದಿ: ನಿಮ್ಮ ಪಾದಗಳ ಅಂದ ಹೆಚ್ಚಿಸಲು ಈ ಮೆಹಂದಿ ಡಿಸೈನ್ ಸೂಕ್ತ

    ಬಾದಾಮಿ ಪೇಸ್ಟ್: ಒಂದು ಬಟ್ಟಲಿನಲ್ಲಿ 5-6 ಬಾದಾಮಿಗಳನ್ನು ಹಾಲಿನಲ್ಲಿ ರಾತ್ರಿ ನೆನೆಸಿ, ನೆನೆಸಿದ ಬಾದಾಮಿಯನ್ನು ಮರುದಿನ ಪೇಸ್ಟ್ ಮಾಡಿ ಮತ್ತು 2 ಚಮಚ ಮಜ್ಜಿಗೆ ಸೇರಿಸಿ ನಂತರ ಅದನ್ನು ಮುಖಕ್ಕೆ 15 ನಿಮಿಷಗಳ ಕಾಲ ಹಚ್ಚಿದರೆ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಬಹುದು.  ಇದನ್ನೂ ಓದಿ: ಮಾಲಿನ್ಯ ನಿಯಂತ್ರಣಕ್ಕೆ ಟಾಸ್ಕ್‌ಫೋರ್ಸ್‌- 17 ತಂಡ ರಚನೆ

  • ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ: ವೈದ್ಯರು

    ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ: ವೈದ್ಯರು

    ಬೆಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಶಿವರಾಂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.

    ನಟನ ಆರೋಗ್ಯದ ಕುರಿತು ಮಾಹಿತಿ ನೀಡಿರುವ ವೈದ್ಯರು, ಶಿವರಾಂ ಆರೊಗ್ಯ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಚೇತರಿಕೆ ಕಂಡುಬಂದಿಲ್ಲ. ಸದ್ಯ ನಿನ್ನೆ ಹೇಗಿದ್ರೋ ಇಂದೂ ಹಾಗೇ ಇದ್ದಾರೆ. ಹಾಗಾಗಿ ಇಂದು ನುರಿತ ವೈದ್ಯರು ಪರೀಕ್ಷೆ ಮಾಡಿ ನಂತರ ಮಾಹಿತಿ ನೀಡಲಿದ್ದಾರೆ. ಈಗಾಗಲೇ ಕೋಮಾದಲ್ಲಿದ್ದು, ಶಿವರಾಮ್ ಅವರು ಬದುಕುಳಿದ್ರೆ ಮಿರಾಕಲ್ ಎಂದು ಹೇಳಿದ್ದಾರೆ.

    ಮನೆಯಲ್ಲಿ ಪೂಜೆ ಮಾಡುತ್ತಿದ್ದ ಸಂದರ್ಭದಲ್ಲಿ ಬಿದ್ದು ಬ್ರೈನ್ ಡ್ಯಾಮೇಜ್ ಆಗಿ ಶಿವರಾಂ ಬೆಂಗಳೂರಿನ ಸೀತಾ ಸರ್ಕಲ್ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯ ನಟನ ಆರೊಗ್ಯ ವಿಚಾರಿಸಲು ಇಂದು ಕೂಡ ಹಲವು ಕಲಾವಿದರು ಆಗಮಿಸಲಿದ್ದಾರೆ.  ಇದನ್ನೂ ಓದಿ: ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

  • ರುಚಿಕರವಾದ ಮೊಟ್ಟೆ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    ರುಚಿಕರವಾದ ಮೊಟ್ಟೆ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ

    ಮಾಂಸಾಹಾರ ಪ್ರಿಯರಿಗೆ ಸವಿಯಲು ಬಗೆ ಬಗೆಯ ರುಚಿಕರ ಖಾದ್ಯಗಳಿವೆ. ನಾನ್‍ವೆಜ್ ಅಡುಗೆಯಲ್ಲಿ ಮೊಟ್ಟೆ ಬಿರಿಯಾನಿ ಸರಳವಾಗಿ ಮಾಡುವ ಅಡುಗೆಯಲ್ಲಿ ಒಂದಾಗಿದೆ. ಈ ಅಡುಗೆಗೆ ಹೆಚ್ಚಿನ ಸಮಯ, ಪರಿಶ್ರಮವೂ ಅಗತ್ಯವಿಲ್ಲ. ನಾನ್‍ವೆಜ್ ಅಡುಗೆಯಲ್ಲಿ ಹೊಸ ಪ್ರಯತ್ನ ಮಾಡುವವರಿಗೂ ಇದು ಕಷ್ಟವೆನಿಸುವುದಿಲ್ಲ. ಈ ವಿಧಾನವನ್ನು ಅನುಸರಿಸಿ ಮನೆಯಲ್ಲೇ ಮೊಟ್ಟೆ ಬಿರಿಯಾನಿ ಮಾಡಿ, ಅದರ ರುಚಿ ಸವಿದು ಎಂಜಾಯ್ ಮಾಡಿ.

    ಬೇಕಾಗುವ ಪದಾರ್ಥಗಳು

    ಅಕ್ಕಿ- 2ಕಪ್‌
    ಮೊಟ್ಟೆ- 5
    ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ- ಸ್ವಲ್ಪ
    ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    ಹಸಿಮೆಣಸಿನ ಕಾಯಿ- 3
    ಈರುಳ್ಳಿ- 2
    ಟೊಮೆಟೋ- 2
    ಕೊಬ್ಬಂಬರಿ ಸೊಪ್ಪು- ಸ್ವಲ್ಪ
    ಮೊಸರು – ಅರ್ಧ ಕಪ್‌
    ದನಿಯಾ ಪುಡಿ- 1 ಚಮಚ
    ಖಾರದ ಪುಡಿ- 1 ಚಮಚ
    ಬಿರಿಯಾನಿ ಮಸಾಲೆ ಪುಡಿ- 2 ಚಮಚ
    ಅರಿಶಿಣದ ಪುಡಿ- ಅರ್ಧ ಚಮಚ
    ರುಚಿಗೆ ತಕ್ಕಷ್ಟು ಉಪ್ಪು
    ಅಡುಗೆ ಎಣ್ಣೆ- ಅಧ ಕಪ್‌
    ತುಪ್ಪ- 2 ಚಮಚ

    ಮಾಡುವ ವಿಧಾನ:
    *ಮೊದಲಿಗೆ ಒಲೆಯ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ತುಪ್ಪ ಹಾಗೂ ಅಡುಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ನಂತರ ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ, ಏಲಕ್ಕಿ, ಕಲ್ಲು ಹೂ ಹಾಕಿ ಫ್ರೈ ಮಾಡಿಕೊಳ್ಳಬೇಕು.

    * ನಂತರ ಈರುಳ್ಳಿ ಹಾಗೂ ಹಸಿಮೆಣಸಿನ ಕಾಯಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಬಳಿಕ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಟೊಮೆಟೋವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ.

    *ತದನಂತರ ಖಾರದ ಪುಡಿ, ಅರಿಶಿಣ, ದನಿಯಾ ಪುಡಿ ಹಾಗೂ ಬಿರಿಯಾನಿ ಮಸಾಲಾ ಪುಡಿ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.

    * ಬಳಿಕ ಮೊಸಲು ಕುದಿಸಿ. ಅಳತೆಗೆ ತಕ್ಕಷ್ಟು ನೀರು ಹಾಗೂ ನೆನೆಸಿಟ್ಟುಕೊಂಡ ಅಕ್ಕಿಯನ್ನು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2-3 ಕೂಗು ಕೂಗಿಸಿಕೊಂಡು, ಬೇಯಿಸಿದ ಮೊಟ್ಟೆಗಳನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಎಗ್ ಬಿರಿಯಾನಿ ಸವಿಯಲು ಸಿದ್ಧ.

  • ಬೆಳಗ್ಗಿನ ತಿಂಡಿಗೆ ಮಾಡಿ ಶೇಂಗಾ ಬಾತ್

    ಬೆಳಗ್ಗಿನ ತಿಂಡಿಗೆ ಮಾಡಿ ಶೇಂಗಾ ಬಾತ್

    ಬೇಕಾಗುವ ಸಾಮಗ್ರಿಗಳು:
    * ಶೇಂಗಾ- ಅರ್ಧ ಕಪ್
    * ಕಡಲೆಬೇಳೆ- 1 ಚಮಚ
    * ಮೆಣಸು- 1 ಚಮಚ
    * ಜೀರಿಗೆ- 1 ಚಮಚ
    * ಕರಿಬೇವು ಸ್ವಲ್ಪ
    * ಒಣಮೆಣಸಿನಕಾಯಿ- ಮೂರು
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಒಂದು ಬಾಣಲೆಯನ್ನು ಬಿಸಿಗಿಟ್ಟು ಅದಕ್ಕೆ ಮೂರರಿಂದ ನಾಲ್ಕು ಚಮಚ ಎಣ್ಣೆ ಸೇರಿಸಿ ಸಾಸಿವೆ, ಕಡಲೆಬೇಳೆ, ಶೇಂಗಾವನ್ನು ಹುರಿದು ನಂತರ ಪುಡಿ ಮಾಡಿಕೊಂಡಿರಬೇಕು.
    * ಅಡುಗೆ ಎಣ್ಣೆ,ಹುರಿದ ಮಸಾಲೆ, ಕರಿಬೇವು, ಒಣಮೆಣಸಿನಕಾಯಿ, ಅರ್ಧ ಚಮಚ ಇಂಗು ಸೇರಿಸಿ ಒಗ್ಗರಣೆ ತಯಾರಿಸಿ. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಇದಕ್ಕೆ ಮೊದಲೇ ತಯಾರಿಸಿದ ಅನ್ನವನ್ನು ಸೇರಿಸಿ ಕಾಲು ಚಮಚ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.
    *ಬೇಕಿದ್ದಲ್ಲಿ ಅರ್ಧ ನಿಂಬೆ ರಸ ಸೇರಿಸಿಕೊಳ್ಳಬಹುದು. ಚೆನ್ನಾಗಿ ಕಲೆಸಿದ ನಂತರ ಅನ್ನವನ್ನು 2 ನಿಮಿಷ ಬಿಸಿ ಮಾಡಿದರೆ ರುಚಿಯಾದ ಶೇಂಗಾ ಬಾತ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮಟನ್ ದೋಸೆ ಮಾಡುವ ವಿಧಾನ ಮಾಂಸಪ್ರಿಯರಿಗಾಗಿ

  • ಬಿಸಿ ಬಿಸಿಯಾದ ನೂಡಲ್ಸ್ ಕಟ್ಲೆಟ್ ಮಾಡುವ ವಿಧಾನ ನಿಮಗಾಗಿ

    ಬಿಸಿ ಬಿಸಿಯಾದ ನೂಡಲ್ಸ್ ಕಟ್ಲೆಟ್ ಮಾಡುವ ವಿಧಾನ ನಿಮಗಾಗಿ

    ಕ್ಕಳಿಗಂತೂ ನೂಡಲ್ಸ್ ಅಂದರೆ ಪಂಚಪ್ರಾಣ. ಕೆಲಸಕ್ಕೆ ಹೋಗುವ ತಾಯಂದಿರು ನೂಡಲ್ಸ್ ಅನ್ನು ಆಯ್ಕೆಮಾಡಿಕೊಳ್ಳುತ್ತಾರೆ. ಅತ್ಯಂತ ಸರಳವಾಗಿ ರುಚಿಯಾಗಿ ಬೇಗ ತಯಾರಿಸುವ ಅಡುಗೆಯನ್ನು ತಾಯಂದಿರು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಈ ನೂಡಲ್ಸ್ ಕಟ್ಲೆಟ್ ಮಕ್ಕಳಿಗೆ ಇಷ್ಟವಾಗುವುದು ಖಂಡಿತ. ಹಾಗಿದ್ದರೆ ನಿಮ್ಮ ಮಕ್ಕಳ ಹಸಿವನ್ನು ತಣಿಸುವ ರುಚಿಕರವಾದ ನೂಡಲ್ಸ್ ಖಾದ್ಯ ಇಲ್ಲಿದೆ.

    ಬೇಕಾಗುವ ಸಾಮಗ್ರಿಗಳು:
    * ನೂಡಲ್ಸ್ – 150 ಗ್ರಾಮ್ಸ್
    * ತರಕಾರಿ – ಅರ್ಧ ಕಪ್
    * ಬಟಾಣಿ – ಅರ್ಧ ಕಪ್
    * ಈರುಳ್ಳಿ – ಅರ್ಧ ಕಪ್
    * ಹಸಿಮೆಣಸು – 4
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಚಾಟ್ ಮಸಾಲಾ – ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- 1 ಕಪ್


    ಮಾಡುವ ವಿಧಾನ:
    * ಕುದಿಯುತ್ತಿರುವ ನೀರಿನಲ್ಲಿ ನೂಡಲ್ಸ್ ಹಾಕಿ ತೆಗೆದಿಟ್ಟುಕೊಳ್ಳಬೇಕು.
    * ಪಾತ್ರೆಯಲ್ಲಿ ಬೇಯಿಸಿದ ತರಕಾರಿ, ನೂಡಲ್ಸ್, ಬಟಾಣಿ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲೆ, ಕಾರ್ನ್ ಫ್ಲೋರ್ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ಈಗ ಈ ಮಿಶ್ರಣವನ್ನು ನಿಮ್ಮ ಹಸ್ತವನ್ನು ಬಳಸಿಕೊಂಡು ಕಟ್ಲೆಟ್ ಆಕಾರವನ್ನು ನೂಡಲ್ಸ್ ಅನ್ನು ಮಾಡಿಕೊಳ್ಳಿ. ಇದನ್ನು ಚಪ್ಪಟೆ ಆಕಾರದಲ್ಲಿ ತಟ್ಟಿಕೊಳ್ಳಿ. ಇದನ್ನೂ ಓದಿ:  ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
    * ಬಿಸಿ ಎಣ್ಣೆಗೆ ನೂಡಲ್ ಕಟ್ಲೆಟ್ ಅನ್ನು ಹಾಕಿ ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎಣ್ಣೆಯಲ್ಲಿ ಬೇಯಿಸಿಕೊಳ್ಳಬೇಕು. ಈಗ ನೂಡಲ್ಸ್ ಕಟ್ಲೆಟ್ ಸವಿಯಲು ಸಿದ್ಧವಾಗುತ್ತದೆ. ನೀವು ಟೊಮೆಟೋ ಸಾಸ್ ಅನ್ನು ಬಳಸಿಕೊಂಡು ಈ ಆರೋಗ್ಯಕರ ಹಾಗೂ ರುಚಿಕರವಾದ ಖಾದ್ಯವನ್ನು ಸವಿಯಿರಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

  • ಧೂಮಪಾನಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ 2

    ಧೂಮಪಾನಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ ನಂಬರ್ 2

    ನವದೆಹಲಿ: ಕ್ಯಾನ್ಸರ್‌ಗೆ ಕಾರಣವಾಗುವ ಗುಟ್ಕಾ ಮತ್ತು ತಂಬಾಕು ಬಳಕೆ ಮೇಲಿನ ನಿಯಂತ್ರಣಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಭಾರತದಲ್ಲಿ 16ರಿಂದ 64ರ ವಯೋಮಾನ ಒಟ್ಟಾರೆ 25 ಕೋಟಿಗಿಂತ ಹೆಚ್ಚು ಮಂದಿ ಧೂಮಪಾನದ ದಾಸರಾಗಿದ್ದಾರೆ. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ಅತಿ ಹೆಚ್ಚು ಧೂಮಪಾನಿಗಳನ್ನು ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ ಎಂದು ವರದಿಯೊಂದು ತಿಳಿಸಿದೆ. ಅಲ್ಲದೆ ದುಮಪಾನ ತ್ಯಜಿಸುವವರ ಸಂಖ್ಯೆ ಭಾರತದಲ್ಲಿ ವಿರಳವಾಗಿದೆ ಎಂದು ವರದಿಯೊಂದಿಗೆ ತಿಳಿಸಿದೆ. ದಿ ಇಂಟರ್‌ನ್ಯಾಷನಲ್‌ ಕಮಿಷನ್‌ ಟು ರೀಗ್ನೈಟ್‌ ದಿ ಫೈಟ್‌ ಅಗೇನ್ಸ್ಟ್‌ ಸ್ಮೋಕಿಂಗ್ ಎಂಬ ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್

    ಈ ಪ್ರಕಾರ ಭಾರತ ಮತ್ತು ಚೀನಾದಲ್ಲಿ 16ರಿಂದ 64 ವರ್ಷದೊಳಗಿನ 50 ಕೋಟಿಗಿಂತ ಹೆಚ್ಚು ಮಂದಿ ತಂಬಾಕು ವ್ಯಸನಿಗಳನ್ನು ಒಳಗೊಂಡಿರುವ ಚೀನಾ, ವಿಶ್ವಾದ್ಯಂತ ವರ್ಷಕ್ಕೆ 8 ಲಕ್ಷ ಮಂದಿಯ ಸಾವು ಮತ್ತು 20 ಕೋಟಿ ಜನರ ಅಂಗವಿಕಲತೆಗೆ ಕಾರಣವಾಗುವ ತಂಬಾಕಿಗೆ ಈಗಲೂ 114 ಕೋಟಿ ಮಂದಿ ದಾಸರಾಗಿದ್ದಾರೆ ಎಂಬ ಕಳವಳಕಾರಿ ಅಂಶವನ್ನು ಈ ವರದಿಯಲ್ಲಿ ತಿಳಿಸಲಾಗಿದೆ.