Tag: health

  • ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    ಖರ್ಜೂರ ತಿಂದು ಆರೋಗ್ಯವಾಗಿರಿ – ಪ್ರತಿದಿನ ಒಂದೊಂದು ತಿಂದರೂ ನೀವು ಗಟ್ಟಿಯಾಗ್ತೀರಿ

    ಡ್ರೈ ಫ್ರೂಟ್ಸ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಡ್ರೈ ಫ್ರೂಡ್ಸ್ ಅನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಖರ್ಜೂರ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಅದ್ಭುತ ಆಹಾರವಾಗಿದೆ. ಇದನ್ನು ಪ್ರತಿನಿತ್ಯ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.

    ಉತ್ತಮ ಆರೋಗ್ಯ: ಅಧಿಕ ಪ್ರಮಾಣದ ಪೌಷ್ಟಿಕಾಂಶಗಳ ಜೊತೆಗೆ ಕ್ಯಾಲ್ಸಿಯಂ, ಮೆಗ್ನೀಷಿಯಂ ಅಂಶಗಳು ದೇಹದ ಮಾಂಸಖಂಡ ಹಾಗೂ ಮೂಳೆಗಳ ಅಭಿವೃದ್ಧಿಗೂ ಸಹಾಯ ಮಾಡುತ್ತವೆ. ದೇಹದಲ್ಲಿ ಪ್ರೋಟೀನ್ ಕೊರತೆ ಆಗದಂತೆ ನೋಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ನಿರ್ವಹಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.

    ಜೀರ್ಣಕ್ರಿಯೆ ವೃದ್ಧಿ: ಖರ್ಜೂರದಲ್ಲಿ ಅತಿಯಾದ ನಾರಿನ ಅಂಶಳಿರುತ್ತದೆ. ಇದರಿಂದಾಗಿ ದೇಹದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಜೊತೆಗೆ ಕರುಳಿನ ಕಾರ್ಯವನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

    ಅಧಿಕ ರಕ್ತದ ಒತ್ತಡ ನಿಯಂತ್ರಣ: ಪ್ರತಿನಿತ್ಯ ಒಂದರಿಂದ ಎರಡು ಖರ್ಜೂರವನ್ನು ಸೇವಿಸುವುದರಿಂದ ಅಧಿಕ ರಕ್ತದ ಒತ್ತಡವನ್ನು ತಡೆಯುತ್ತದೆ. ಇದರಿಂದಾಗಿ ಆರೋಗ್ಯವನ್ನು ಕಾಪಾಡಲು ಪ್ರಮುಖ ಪಾತ್ರವಹಿಸುತ್ತದೆ.

    ರಕ್ತಹೀನತೆ ನಿವಾರಣೆ: ರಕ್ತ ಹೀನತೆ ಸಮಸ್ಯೆ ಇದ್ದವರು ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಜೊತೆಗೆ ದೇಹದಲ್ಲಿ ಕಬ್ಬಿಣದ ಅಂಶ ಹೆಚ್ಚಾಗುತ್ತದೆ. ಕೆಂಪು ರಕ್ತಕಣಗಳನ್ನು ಹೆಚ್ಚು ಮಾಡಿ ದೇಹದ ಎಲ್ಲಾ ಭಾಗಗಳಿಗೂ ಆಮ್ಲಜನಕವನ್ನು ಸಮರ್ಪಕವಾಗಿ ಪೂರೈಕೆ ಮಾಡುವ ಕೆಲಸವನ್ನು ಮಾಡುತ್ತದೆ.

    ಶಕ್ತಿ ಹೆಚ್ಚಳ: ಅಶಕ್ತತೆ ಇದ್ದವರಿಗೆ ಖರ್ಜೂರ ಒಳ್ಳೆಯ ಮದ್ದಾಗಿದೆ. ಇದರಲ್ಲಿ ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಅನೇಕ ಪೋಷಕಾಂಶಗನ್ನು ಒಳಗೊಂಡಿದೆ. ಇದು ಸುಕ್ರೋಸ್, ಫ್ರಕ್ಟೋಸ್, ಮತ್ತು ಗ್ಲೂಕೋಸ್‍ನಂತಹ ನೈಸರ್ಗಿಕ ಅಂಶಗಳನ್ನು ಒಳಗೊಂಡಿದೆ.

    ಲೈಂಗಿಕ ಆರೋಗ್ಯ ವೃದ್ಧಿ: ಲೈಂಗಿಕ ಶಕ್ತಿಯನ್ನು ಪ್ರಚೋದಿಸುವ ಹಾರ್ಮೋನ್‍ಗಳು ಖರ್ಜೂರ ಸೇವನೆ ಮಾಡುವುದರಿಂದ ಉದ್ದೀಪನಗೊಳ್ಳುತ್ತದೆ. ನಿತ್ಯ ಬೆಳಗ್ಗೆ ಒಂದು ಲೋಟ ಬಿಸಿ ಹಾಲಿನ ಜೊತೆಗೆ ನೆನೆಸಿ ಸೇವಿಸಿದರೆ ಒಂದೆರಡು ತಿಂಗಳಲ್ಲಿಯೇ ಲೈಂಗಿಕ ಸಮಸ್ಯೆಗಳಲ್ಲಿ ಪರಿಹಾರ ಕಾಣಬಹುದು. ಇದನ್ನೂ ಓದಿ: ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ದೇಹದ ತೂಕ ಹೆಚ್ಚಳ: ಖರ್ಜೂರಗಳಲ್ಲಿ ಕಂಡುಬರುವ ಕ್ಯಾಲೊರಿ ಅಂಶಗಳು ಹಾಲಿನೊಂದಿಗೆ ಮಿಶ್ರಣ ಆಗುತ್ತದೆ. ಇದರಿಂದಾಗಿ ಸಹಜವಾಗಿ ದೇಹದ ತೂಕ ಹೆಚ್ಚಾಗುತ್ತದೆ.ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

  • ಜೀರಿಗೆ ಕಷಾಯ ಮಾಡಿ ನಾಲಿಗೆಗೆ ರುಚಿ ಆರೋಗ್ಯಕ್ಕೆ ಒಳ್ಳೆಯದು

    ಜೀರಿಗೆ ಕಷಾಯ ಮಾಡಿ ನಾಲಿಗೆಗೆ ರುಚಿ ಆರೋಗ್ಯಕ್ಕೆ ಒಳ್ಳೆಯದು

    ವಾತಾವರಣ ಬದಲಾದಂತೆ ಶೀತ, ಜ್ವರದಂತಹ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತವೆ. ಆರೋಗ್ಯಕರವಾದ ಹಾಗೂ ನಾಲಿಗೆಗೆ ರುಚಿ ನೀಡುವ ಈ ಜೀರಿಗೆ ಕಷಾಯವನ್ನು ಸೇವಿಸಬಹುದಾಗಿದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಈ ಕಷಾಯವನ್ನು ಮಾಡುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಗ್ರಿಗಳು:
    * ಜೀರಿಗೆ- 4 ಚಮಚ
    * ಉಪ್ಪು- ಸ್ವಲ್ಪ
    * ಹಾಲು- ಸ್ವಲ್ಪ
    * ಬೆಲ್ಲ- ಅರ್ಧ ಕಪ್
    * ಪುದೀನ- ಸ್ವಲ್ಪ
    * ಏಲಕ್ಕಿ-2
    * ದನಿಯಾ- ಕುಟ್ಟಿದ್ದು ಸ್ವಲ್ಪ ಇದನ್ನೂ ಓದಿ:   ಫಟಾ ಫಟ್ ಅಂತ ಮಾಡಿ ಘಮ್ ಎನ್ನುವ ಜೀರಿಗೆ ರಸಂ

    ಮಾಡುವ ವಿಧಾನ:

    * ಒಂದು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ನೀರನ್ನು ಹಾಕಿ ಕುದಿಸಿಕೊಳ್ಳಬೇಕು. ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ನಂತರ ದನಿಯಾ, ಜೀರಿಗೆ, ಏಲಕ್ಕಿ, ಬೆಲ್ಲ, ಪುದೀನ ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ನಂತರ ಕೊನೆಯಲ್ಲಿ ಹಾಲನ್ನು ಸೇರಿಸಿ ಸೋಸಿಕೊಳ್ಳಬೇಕು. ಈಗ ರುಚಿಯಾದ ಜೀರಿಗೆ ಕಷಾಯ ಸವಿಯಲು ಸಿದ್ಧವಾಗುತ್ತದೆ.

  • ಈ ಹಣ್ಣು, ತರಕಾರಿಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು

    ಈ ಹಣ್ಣು, ತರಕಾರಿಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದು

    ಣ್ಣುಗಳು ಸೇವೆನೆ ಆರೋಗ್ಯಕ್ಕೆ ಒಳ್ಳೆಯದು ಎಂದು ಗೊತ್ತಿರುವ ವಿಚಾರವಾಗಿದೆ. ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಲು ಹಣ್ಣುಗಳು ಸಹಾಯ ಮಾಡುತ್ತವೆ. ನೈಸರ್ಗಿಕವಾಗಿ ಸಿಗುವ ಹಣ್ಣುಗಳು ಅನೇಕ ಪೌಷ್ಟಿಕ ಗುಣಗಳನ್ನು ಹೊಂದಿರುತ್ತವೆ.

    ಕಿವಿ ಹಣ್ಣು: ಕ್ಯಾನ್ಸರ್ ರೋಗವನ್ನು ತಡೆಯುವ ಆಂಟಿ ಆಕ್ಸಿಡಂಟ್ ಸತ್ವವೂ ಕಿವಿ ಹಣ್ಣನಲ್ಲಿದೆ. ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್‌ಗಳ  ಮೂಲವೆಂದು ಪರಿಗಣಿಸಲಾಗುವ ಕಿವಿ ಹಣ್ಣಿನ ಸೇವನೆಯಿಂದ ಡಿಎನ್‍ಎ ಉತ್ತಮಗೊಳಿಸಬಹುದು. ಇದನ್ನೂ ಓದಿ: ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ಕಿತ್ತಳೆ ಹಣ್ಣು: ಕಿತ್ತಳೆ ರಸ ಮತ್ತು ಕಿತ್ತಳೆ ಹಣ್ಣುಗಳು ಮನುಷ್ಯನ ಆರೋಗ್ಯಕರ ರಕ್ತದೊತ್ತಡ,  ಫೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕ ಎಂದು ಕರೆಸಿಕೊಂಡಿರುವ ವಿಟಮಿನ್ ಸಿಯ ಉತ್ತಮ ಮೂಲವಾದ ಪೊಟ್ಯಾಸಿಯಮ್ ಅನ್ನು ಒದಗಿಸುತ್ತದೆ.

    ಸೇಬುಹಣ್ಣು: ಸೇಬಿನಲ್ಲಿ ಅತಿ ಹೆಚ್ಚಿನ ಮಟ್ಟದ ಫೈಬರ್ ಮತ್ತು ವಿಟಮಿನ್, ಖನಿಜಾಂಶಗಳಿವೆ. ಇದು ಪೆಕ್ಟಿನ್ ಎಂಬ ಅಂಶವನ್ನು ಒಳಗೊಂಡಿದ್ದು, ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    ಸೀಬೆಹಣ್ಣು: ವಿಟಮಿನ್ ಎ, ಕಾಪರ್, ಮತ್ತು ನಾರಿನಂಶವಿದೆ. ಚಳಿಗಾಲದಲ್ಲಿ ಸೀಬೆ ಹಣ್ಣನ್ನು ತಿನ್ನುವುದರಿಂದ ಜೀವಕೋಶದ ಹಾನಿ ಮತ್ತು ಉರಿಯೂತವನ್ನು ತಡೆಯುತ್ತದೆ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.

    ಬಾಳೆಹಣ್ಣು: ಬಾಳೆಹಣ್ಣು ಜೀರ್ಣಕ್ರಿಯೆ ಸಮಸ್ಯೆಗೆ ಒಳ್ಳೆಯದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಬಾಳೆಹಣ್ಣು ತಿನ್ನುವುದಾಗಿ ತಜ್ಞರು ಸಲಹೆ ನೀಡುತ್ತಾರೆ. ಅದಕ್ಕಾಗಿಯೇ ಊಟವಾದ ತಕ್ಷಣ ಒಂದು ಬಾಳೆಹಣ್ಣು ತಿನ್ನುವಂತೆ ಸಲಹೆ ನೀಡುವುದು. ಬಾಳೆಹಣ್ಣು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಸಿಕೊಳ್ಳಬಹುದು. ಇದನ್ನೂ ಓದಿ:   ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ

    ಸೀತಾಫಲ: ಸೀತಾಫಲ ಹಣ್ಣಿನಲ್ಲಿ ಪೊಟ್ಯಾಶಿಯಂ, ಫೈಬರ್ ಮತ್ತು ವಿಟಮಿನ್  ಅಧಿಕವಾಗಿರುತ್ತದೆ. ಜತೆಗೆ ಸೀತಾಫಲ ಹಣ್ಣು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೀಗಿರುವಾಗ ಮನೆಯಲ್ಲಿಯೇ ಬೆಳೆದ ಸೀತಾಫಲ ಹಣ್ಣನ್ನು ಸೇವಿಸುವ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.

  • ಅಕ್ಕಿ ಹಿಟ್ಟಿನಿಂದ ಮಾಡಿ ರುಚಿಯಾದ ಪೇಡ

    ಅಕ್ಕಿ ಹಿಟ್ಟಿನಿಂದ ಮಾಡಿ ರುಚಿಯಾದ ಪೇಡ

    ಪೇಡ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಈ ತಿನಿಸನ್ನು ಸುಲಭವಾಗಿ ಬಹುಬೇಗ ಮಾಡಬಹುದು. ಯಾವುದೇ ಹಬ್ಬ-ಹರಿದಿನ ಅಥವಾ ಅತಿಥಿಗಳು ಮನೆಗೆ ಭೇಟಿಕೊಟ್ಟಾಗ ಸಿದ್ಧಪಡಿಸಬಹುದು. ಪೇಡದಲ್ಲಿ ಅನೇಕ ವಿಧಗಳಿವೆ. ಸರಳವಾಗಿ ಅಕ್ಕಿ ಹಿಟ್ಟಿನಿಂದ ಪೇಡ ಹೇಗೆ ತಯಾರು ಮಾಡುವುದು ಎನ್ನುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಅಕ್ಕಿ ಹಿಟ್ಟು- 1 ಕಪ್
    * ಬೆಲ್ಲ- 1 ಕಪ್
    * ತೆಂಗಿನ ಹಾಲು- 1 ಕಪ್
    * ಏಲಕ್ಕಿ ಪುಡಿ- ಸ್ವಲ್ಪ
    * ತುಪ್ಪ- ಅರ್ಧ ಕಪ್


    ಮಾಡುವ ವಿಧಾನ:
    * ಮೊದಲು ಬಾಣಲೆಯಲ್ಲಿ ಅಕ್ಕಿ ಹಿಟ್ಟನ್ನು ಕಡಿಮೆ ಉರಿಯಲ್ಲಿ ಹುರಿದಿಟ್ಟುಕೊಳ್ಳಬೇಕು. ಇದನ್ನೂ ಓದಿ: ಬೆಂಡೆಕಾಯಿ ಪಲ್ಯವನ್ನು ಹೀಗೆ ಮಾಡಿದ್ರೆ ಸಖತ್ ಟೇಸ್ಟ್

    * ನಂತರ ಮತ್ತೊಂದು ಪಾತ್ರೆಯಲ್ಲಿ ಬೆಲ್ಲ, ನೀರು ಹಾಕಿ. ಬೆಲ್ಲವನ್ನು ಚೆನ್ನಾಗಿ ಕರಗಿಸಿ. ಇದನ್ನೂ ಓದಿ: ಹೋಟೆಲ್ ಸ್ಟೈಲ್‌ನಲ್ಲಿ ಮಾಡಿ ರುಚಿಯಾದ ಪನೀರ್ ಕರಿ

    * ತೆಂಗಿನ ಹಾಲು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಕುದಿಯಲು ಬಿಡಬೇಕು.

    * ಮಿಶ್ರಣಕ್ಕೆ ಹುರಿದ ಅಕ್ಕಿ ಹಿಟ್ಟು, ಏಲಕ್ಕಿ ಪುಡಿ, ತುಪ್ಪ ಸೇರಿಸಿ, ಮಿಶ್ರಣವು ದಪ್ಪವಾಗುವವರೆಗೆ, ಉಂಡೆಗಟ್ಟದಂತೆ ಮಿಕ್ಸ್ ಮಾಡಿ. ಇದನ್ನೂ ಓದಿ: ವಿಭಿನ್ನ ಟೇಸ್ಟ್‌ನ  ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ

    * ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ನಿಮಗೆ ಬೇಕಾದ ರೀತಿಯಲ್ಲಿ ಕಟ್ ಮಾಡಿಟ್ಟುಕೊಂಡರೆ ರುಚಿಯಾದ ಅಕ್ಕಿ ಪೇಡ ಸವಿಯಲು ಸಿದ್ಧವಾಗುತ್ತದೆ.  ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ

  • ಹೋಟೆಲ್ ಸ್ಟೈಲ್‌ನಲ್ಲಿ ಮಾಡಿ ರುಚಿಯಾದ ಪನೀರ್ ಕರಿ

    ಹೋಟೆಲ್ ಸ್ಟೈಲ್‌ನಲ್ಲಿ ಮಾಡಿ ರುಚಿಯಾದ ಪನೀರ್ ಕರಿ

    ನೀರ್ ಗ್ರೇವಿ, ಪನೀರ್ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಅದರಿಂದ ಯಾವುದೇ ಆಹಾರ ಪದಾರ್ಥವನ್ನು ತಯಾರಿಸಿದರೂ ಇಷ್ಟಪಟ್ಟು ತಿನ್ನುತ್ತಾರೆ. ಮನೆಯ ಚಿಣ್ಣರಿಂದ ಹಿಡಿದು ದೊಡ್ಡವರವರೆಗೂ ಇದು ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಪನೀರ್ ಗ್ರೇವಿಯನ್ನು ಫಟಾಫಟ್ ಅಂತಾ ಮಾಡುವ ವಿಧಾನ ನಿಮಗಾಗಿ.

    ಬೇಕಾಗುವ ಸಾಮಗ್ರಿಗಳು:
    * ಪನೀರ್ – 1 ಕಪ್
    * ಹಸಿಮೆಣಸು – 5
    * ಮೆಣಸಿನ ಪುಡಿ – 1 ಚಮಚ
    * ಅಕ್ಕಿ ಪುಡಿ – 1 ಚಮಚ
    * ಕಾರ್ನ್ ಪ್ಲೋರ್ – 2 ಚಮಚ
    * ಚಿಲ್ಲಿ ಸಾಸ್ – 1 ಚಮಚ
    * ಸೋಯಾ ಸಾಸ್ – 1 ಚಮಚ
    * ಟೊಮೆಟೋ – 1
    * ಈರುಳ್ಳಿ – 1 P
    * ಗ್ರೀನ್ ಕ್ಯಾಪ್ಸಿಕಮ್ – 1
    * ಬೆಳ್ಳುಳ್ಳಿ – 1
    * ಶುಂಠಿ – ಸ್ವಲ್ಪ
    * ಲಿಂಬೆ ರಸ – 1 ಚಮಚ
    * ಕೊತ್ತಂಬರಿ ಸೊಪ್ಪು – ಸ್ವಲ್ಪ
    * ಅಡುಗೆ ಎಣ್ಣೆ- ಸ್ವಲ್ಪ
    * ಗರಂ ಮಸಾಲ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಒಂದು ಪಾತ್ರೆಯಲ್ಲಿ ಅಕ್ಕಿ ಪುಡಿ, ಗರಂ ಮಸಾಲಾ, ಉಪ್ಪು ಮತ್ತು ನೀರು ಸೇರಿಸಿ ಮಿಶ್ರಣ ತಯಾರಿಸಿಕೊಂಡು, ಪನೀರ್ ತುಂಡುಗಳನ್ನು ಹಾಕಿ.

    * ಎಣ್ಣೆಯನ್ನು ಬಿಸಿ ಮಾಡಿ, ಪನೀರ್ ತುಂಡನ್ನು ಹಾಕಿ ಇದು ಕಂದು ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಬೇಕು. ಇದನ್ನೂ ಓದಿ: ವಿಭಿನ್ನ ಟೇಸ್ಟ್‌ನ  ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ

    * ಇನ್ನೊಂದು ಪಾತ್ರೆಯನ್ನು ಅಡುಗೆ ಎಣ್ಣೆ ಈರುಳ್ಳಿ, ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಕ್ಯಾಪ್ಸಿಕಮ್ ಅನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ, ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ

    * ನಂತರ, ಪಾತ್ರೆಗೆ ಹುರಿದ ಪನೀರ್ ಅನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಂತರ ಎಲ್ಲಾ ಸಾಮಗ್ರಿಗಳನ್ನು ಮಿಶ್ರಣ ಮಾಡಿದರೆ ಪನೀರ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.

  • ಬೀದಿ ಬದಿಯ ಅಂಗಡಿಗಳಲ್ಲಿ ಸಿಗುವ ಮೆಣಸಿನಕಾಯಿ ಬಜ್ಜಿ ಮಾಡುವುದು ಹೇಗೆ ಗೊತ್ತಾ?

    ಬೀದಿ ಬದಿಯ ಅಂಗಡಿಗಳಲ್ಲಿ ಸಿಗುವ ಮೆಣಸಿನಕಾಯಿ ಬಜ್ಜಿ ಮಾಡುವುದು ಹೇಗೆ ಗೊತ್ತಾ?

    ಚಳಿಗೆ ಬಿಸಿ ಬಿಸಿಯಾದ ತಿಂಡಿಯನ್ನು ತಿನ್ನಬೇಕು ಎಂದು ಪ್ರತಿಯೊಬ್ಬರಿಗೂ ಎನ್ನಿಸುತ್ತದೆ. ಚಳಿಗಾಲದಲ್ಲಿ ರುಚಿಯಾದ ತಿಂಡಿಯನ್ನು ಬಯಸುವುದು ಸಹಜವಾಗಿದೆ.  ಬೀದಿ ಬದಿ ಅಂಗಡಿಗಳಲ್ಲಿ ಸಿಗುವ ಬಜ್ಜಿ ಎಲ್ಲರಿಗೂ ಇಷ್ಟವಾಗುತ್ತದೆ. ವಿಭಿನ್ನ ಟೇಸ್ಟ್‌ನ  ಮೆಣಸಿನಕಾಯಿ ಬಜ್ಜಿ ಮನೆಯಲ್ಲಿಯೇ ಮಾಡಿ ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಕಡಲೆ ಹಿಟ್ಟು- 1ಕಪ್
    * ಅಕ್ಕಿ ಹಿಟ್ಟು- ಸ್ವಲ್ಪ
    * ಕಾರ್ನ್ ಫ್ಲೋರ್ – ಸ್ವಲ್ಪ
    * ಚಿರೋಟಿ ರವೆ – ಸ್ವಲ್ಪ
    * ಅಡುಗೆ ಸೋಡಾ- ಸ್ವಲ್ಪ
    * ಜೀರಿಗೆ- ಸ್ವಲ್ಪ
    * ಅರಿಶಿಣ- ಸ್ವಲ್ಪ
    * ರುಚಿಗೆ ತಕ್ಕಷ್ಟು ಉಪ್ಪು
    * ಅಡುಗೆ ಎಣ್ಣೆ- ಸ್ವಲ್ಪ
    * ಮೆಣಸಿನ ಕಾಯಿ- 5 ರಿಂದ 6

    ಮಾಡುವ ವಿಧಾನ:
    * ಮೊದಲಿಗೆ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಚಿರೋಟಿ ರವೆ ,ಅಡುಗೆ ಸೋಡಾ, ಉಪ್ಪು, ಜೀರಿಗೆ, ಬಣ್ಣಕ್ಕೆ ಅರಿಶಿಣ ಹಾಕಿ ಸ್ವಲ್ಪ ಗಟ್ಟಿಯಾದ ಹದಕ್ಕೆ ಮಿಶ್ರಣವನ್ನು ಸಿದ್ಧ ಪಡಿಸಿಕೊಳ್ಳಬೇಕು. ವಿಭಿನ್ನ ಟೇಸ್ಟ್‌ನ  ಬಾಳೆಕಾಯಿ ಸಮೋಸ ನೀವೂ ಒಮ್ಮೆ ರುಚಿ ನೋಡಿ

    * ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಿ. ಇದನ್ನೂ ಓದಿ: ಸುಲಭವಾಗಿ ಮಾಡಿ ಈರುಳ್ಳಿ ಸಮೋಸಾ

    * ಹಸಿ ಮೆಣಸಿನ ಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣಕ್ಕೆ ಬೇಯಿಸಿದರೆ ರುಚಿಯಾದ ಬಜ್ಜಿ ಸವಿಯಲು ಸಿದ್ಧವಾಗುತ್ತದೆ.

  • ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ಮೆಂತೆ ಸೊಪ್ಪಿನ ಸೇವನೆಯಿಂದ ಸಿಗಲಿದೆ ಆರೋಗ್ಯಕರ ಅಂಶ

    ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಣ್ಣು, ತರಕಾರಿಗಳು ಹಾಗೂ ಸೊಪ್ಪುಗಳ ಸೇವನೆ ಬಹು ಮುಖ್ಯವಾಗಿದ್ದು ಆಹಾರದಲ್ಲಿ ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಬಳಸಿಕೊಂಡರೆ ಆರೋಗ್ಯದ ಸಮಸ್ಯೆಗಳನ್ನು ನಾವು ಅರ್ಧಭಾಗದಷ್ಟು ಪರಿಹರಿಸಬಹು. ತರಕಾರಿ, ಸೊಪ್ಪುಗಳ ಮಹತ್ವವನ್ನೇ ಜನರು ಮರೆತು ಹೋಗುತ್ತಿದ್ದಾರೆ. ಪ್ರತೀ ಕಾಯಿಲೆ, ಸಮಸ್ಯೆಗಳಿಗೂ ವೈದ್ಯರ ಮೊರೆ ಹೋಗುವುದು ಸಾಮಾನ್ಯವಾಗಿ ಹೋಗಿದೆ. ಮೆಂತೆ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕೆ ಬೇಕಾಗುವ ಅಂಶಗಳು ದೊರೆಯಲಿದೆ.

    * ಕೆಮ್ಮು  ಚರ್ಮದ ಸಮಸ್ಯೆಯನ್ನು ಮೆಂತೆ ಸುಪ್ಪು ಸೇವನೆಯಿಂದ ನಿವಾರಣೆ ಮಾಡಿಕೊಳ್ಳ ಬಹುದಾಗಿದೆ.

    * ದೇಹದ ನೋವು, ಕಿಡ್ನಿ ಸಮಸ್ಯೆ ಮತ್ತು ಊತವನ್ನು ಇದು ಕಡಿಮೆ ಮಾಡುವುದು.

    * ರಕ್ತ ಹೀನತೆ ಸಮಸ್ಯೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗುವುದು.

    * ದೇಹಕ್ಕೆ ಬೇಕಾಗುವ ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಮೃದುಗೊಳಿಸುತ್ತದೆ. ಇದನ್ನೂ ಓದಿ:   ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ

    * ಮೆಂತ್ಯೆ ಎಲೆಗಳು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತವೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    * ಮೆಂತ್ಯ ಸೊಪ್ಪು ಸೇವನೆಯಿಂದ ಪುರುಷರಲ್ಲಿ ಲೈಂಗಿಕ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚುತ್ತದೆ ಮತ್ತು ಲೈಂಗಿಕಾಸಕ್ತಿ ಹೆಚ್ಚಿಸುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

  • ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ

    ಕಿವಿಹಣ್ಣು ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ

    ಕಿವಿಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಾಕಾರಿಯಾಗಿದೆ. ಇದರಲ್ಲಿ ವಿಟಾಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನ್ಯೂಜಿಲೆಂಡ್‌ನಲ್ಲಿ ಈ ಹಣ್ಣನ್ನು ಹೆಚ್ಚು ಬೆಳೆಯಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಭಾರತದ ಮಾರುಕಟ್ಟೆಗಳಲ್ಲೂ ಹಣ್ಣು ಸಿಗುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ಅನೇಕ ಪ್ರಯೋಜನವಿದೆ.

    ರಕ್ತ ಹೆಪ್ಪುಗಟ್ಟುವಿಕೆ ತಡೆಯುತ್ತದೆ: ಕಿವಿ ಫ್ರೂಟ್ ಸೇವನೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಕಾರಿಯಾಗಿದೆ. ಜೊತೆಗೆ ರಕ್ತದಲ್ಲಿನ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ದಿನಕ್ಕೆ 2 ರಿಂದ 3 ಕಿವಿಹಣ್ಣುಗಳ ಸೇವನೆಯಿಂದ ರಕ್ತ ತೆಳುವಾಗಿ, ಹೃದಯದ ಆರೋಗ್ಯ ಸುಧಾರಿಸುತ್ತದೆ.

    ರಕ್ತದೊತ್ತಡ ಕಡಿಮೆಗೊಳಿಸುತ್ತದೆ: ಕಿವಿ ಫ್ರೂಟ್‌ನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಹೃದಯಾಘಾತ, ಪಾರ್ಶ್ವವಾಯು ಸಮಸ್ಯೆ ಬರದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಹೇರಳವಾಗಿ ಲ್ಯೂಟೆನಾ ಎಂಬ ಆ್ಯಂಟಿ ಆಕ್ಸಿಡೆಂಟ್ ಹಾಗೂ ವಿಟಾಮಿನ್ ಸಿ ಸಿಗುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. 8 ವಾರಗಳ ಕಾಲ ಪ್ರತಿನಿತ್ಯ 3 ಹಣ್ಣುಗಳನ್ನು ಸೇವಿಸಬೇಕು. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    ಅಸ್ತಮಾ ತಡೆಗೆ ಸಹಾಯಕ: ಕಿವಿ ಫ್ರೂಟ್‌ನಲ್ಲಿ ಸಿ ವಿಟಾಮಿನ್ ಹಾಗೂ ರೋಗ ನಿರೋಧಕಗಳು ಹೆಚ್ಚಿರುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಅಸ್ತಮಾವನ್ನು ಕಡಿಮೆಗೊಳಿಸುತ್ತದೆ. ಕಿವಿ ಫ್ರೂಟ್‌ನ್ನು ಪ್ರತಿನಿತ್ಯ ಸೇವಿಸುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ.

    ಆರೋಗ್ಯದಾಯಕ ಚರ್ಮ: ಮುಖದಲ್ಲಿ ಮೊಡವೆ ಆಗುವುದರಿಂದ ಮುಖದ ಕಾಂತಿಯು ಕಡಿಮೆಗೊಳ್ಳುವುದರ ಜೊತೆಗೆ ಕಿರಿಕಿರಿ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡಲು ಪ್ರತಿನಿತ್ಯ ಕಿವಿಹಣ್ಣನ್ನು ಸೇವಿಸಿ. ಈ ಹಣ್ಣನ್ನು ಸೇವಿಸುವುದರಿಂದ ಮುಖದಲ್ಲಿ ಉಂಟಾಗುವ ಮೊಡವೆಗಳು ಕಡಿಮೆಯಾಗುತ್ತವೆ. ಕಿವಿಹಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳಿದ್ದು, ಇದು ಚರ್ಮವನ್ನು ಕಾಂತಿಯುತವಾಗಿಡುತ್ತದೆ. ಜೊತೆಗೆ ಮೂಳೆಗಳನ್ನು ಬಲಪಡಿಸುತ್ತದೆ. ರಾತ್ರಿ ಮಲಗುವಾಗ ಅಲೋವೆರಾದೊಂದಿಗೆ ಕಿವಿಹಣ್ಣಿನ ರಸವನ್ನು ಬೆರೆಸಿ ನಿಮ್ಮ ಚರ್ಮಕ್ಕೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

    ತೂಕವನ್ನು ಇಳಿಸಲು ಸಹಾಯಕ: ಹಣ್ಣಿನ ನಿಯಮಿತ ಸೇವನೆಯಿಂದ ದೇಹದ ತೂಕ ಕಡಿಮೆಯಾಗುತ್ತದೆ. ಇದರಲ್ಲಿ ನೀರಿನಾಂಶ ಅಧಿಕವಾಗಿದ್ದು, ಕೊಬ್ಬಿನಾಂಶ ಕಡಿಮೆಯಿದೆ. ಜೊತೆಗೆ ಅಗತ್ಯಕ್ಕೆ ತಕ್ಕಷ್ಟು ಕಬ್ಬಿಣಾಂಶವಿದೆ. ಇದನ್ನು ಉಪಾಹಾರದೊಂದಿಗೆ ಸೇವಿಸುವುದರಿಂದ ತೂಕ ಇಳಿಯುತ್ತದೆ.

  • ಮಶ್ರೂಮ್ ಸೇವಿಸಿ ಆರೋಗ್ಯಕರವಾದ ಪ್ರೋಟಿನ್‌ ಪಡೆದುಕೊಳ್ಳಿ

    ಮಶ್ರೂಮ್ ಸೇವಿಸಿ ಆರೋಗ್ಯಕರವಾದ ಪ್ರೋಟಿನ್‌ ಪಡೆದುಕೊಳ್ಳಿ

    ಣಬೆ ಬಾಯಿಗೆ ರುಚಿ ಮಾತ್ರವಲ್ಲ, ಅದರಲ್ಲಿ ದೇಹಕ್ಕೆ ಅಗತ್ಯವಿರುವ ಅನೇಕ ಅಂಶಗಳೂ ತುಂಬಿಕೊಂಡಿವೆ. ಅಣಬೆಯಲ್ಲಿನ ಪ್ರೊಟೀನ್ ವಿಟಮಿನ್, ಮಿನರಲ್, ಅಮಿನೊ ಆಸಿಡ್, ಆಂಟಿ ಬಯಾಟಿಕ್, ಮತ್ತು ಆಂಟಿ ಯಾಕ್ಸಿಡಂಟ್ ಅಂಶಗಳು ಆರೋಗ್ಯಕ್ಕೆ ಪೂರಕವಾಗಿದೆ. ಈ ಎಲ್ಲಾ ಅಂಶಗಳನ್ನು ಅಣಬೆ ಒಳಗೊಂಡಿದೆ.

    ಮಶ್ರೂಮ್ ನಿತ್ಯದ ಆಹಾರವಾಗಿ ಬಳಸಿದರೆ ಅದ್ಭುತ ಆರೋಗ್ಯ ಹೊಂದುವುದರಲ್ಲಿ ಸಂಶಯವೇ ಇಲ್ಲ. ಡಯಟ್‍ನಲ್ಲಿ ಅಣಬೆಗೆ ಮೊದಲ ಆದ್ಯತೆ ನೀಡಿದರೆ ಎಷ್ಟೋ ರೋಗಗಳನ್ನು ತಡೆಯಬಹುದಾಗಿದೆ. ಇದನ್ನೂ ಓದಿ: ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

    * ದೇಹದ ಆರೋಗ್ಯ ಸುಧಾರಣೆಗೆ ಸಹಾಯ ಮಾಡು ಅಂಶಗಳನ್ನು ಅಣಬೆ ಒಳಗೊಂಡಿದೆ. ಆರೋಗ್ಯ ಪ್ರಜ್ಞೆ ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಅಣಬೆಯನ್ನು ತಪ್ಪದೆ ಸೇವಿಸಬೇಕು. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    * ಅಣಬೆಯಲ್ಲಿ ವಿಟಮಿನ್ ಡಿ ಅಧಿಕವಾಗಿರುತ್ತದೆ. ಇದು ಮೊಡವೆಯನ್ನು ಕಡಿಮೆ ಮಾಡಲು ಸಹಾಯವನ್ನು ಮಾಡುತ್ತದೆ.

    * ಅಣಬೆಗಳು ಕರುಳಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರ. ಒಳ್ಳೆಯ ಬ್ಯಾಕ್ಟೀರಿಯಾಗಖನ್ನು ಒಳಗೊಂಡಿದ್ದು, ಅವುಗಳ ಸೇವನೆಯಿಂದ ನಮ್ಮ ದೇಹದಲ್ಲಿಯೂ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಪೋಷಣೆ ಮಾಡುತ್ತದೆ.

    * ಕಬ್ಬಿಣಾಂಶದ ಪರಿಣಾಮ ಹೇರವಾಗಿದ್ದು, ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ವರದಾನ ಎನ್ನ ಬಹುದಾಗಿದೆ. ಕೆಂಪು ರಕ್ತಕಣಗಳ ಉತ್ಪಾದನೆ ಪ್ರಮಾಣ ಹೆಚ್ಚಿಸುತ್ತದೆ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    * ಕ್ಯಾಲ್ಸಿಯಂ ಅಂಶ ಹೆಚ್ಚಾಗಿದ್ದು, ಸಂದು ನೋವಿಗೆ ಶಮನಕಾರಿಯಾಗಿದೆ.

    * ಕ್ಯಾನ್ಸರ್ ನಿರೋಧಕ ಅಂಶಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಸ್ತನ   ಕ್ಯಾನ್ಸರ್‌ ಬಾರದಂತೆ ತಡೆಯುತ್ತದೆ.

  • ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

    ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

    ರಿಯಾದ ಕಾಳಜಿ ಮಾಡದೇ ಮುಖದ ಕಾಂತಿ ಹಾಳಾಗಲು ಸಾಧ್ಯತೆ ಇಂದಿನ ದಿನಗಳಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಕೆಮಿಕಲ್ ಇರುವ ಕ್ರೀಮ್‌ಗಳನ್ನು ಬಳಸುವ ಬದಲು, ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳಿಂದ ಮುಖದ ಬಣ್ಣ ಬದಲಾಯಿಸ ಬಹುದಾಗಿದೆ. ಪ್ರತಿನಿತ್ಯ ನಾವು ಅನ್ನಕೆಂದು ಬೆಳೆಸುವ ಅಕ್ಕಿ ತೊಳೆದ ನೀರಿನಲ್ಲಿ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಅಂಶವಿದೆ.

    * ಅಕ್ಕಿ ತೊಳೆದ ನೀರಿಗೆ ಕಿತ್ತಲೆ ಸಿಪ್ಪೆ, ಲಿಂಬೆಯ ಸಿಪ್ಪೆ, ಗ್ರೀನ್ ಟೀ, ತುಳಸಿ ದಳಗಳು, ಬೇವಿನ ಎಲೆ, ಇವುಗಳಲ್ಲಿ ಯಾವುದಾದ್ರೂ ಒಂದನ್ನು ಮಿಕ್ಸ್ ಮಾಡಿಕೊಂಡು ಬಳಸಿದ್ರೂ ಕೂಡ ನಿಮ್ಮ ಚರ್ಮದ ಆರೋಗ್ಯ ವೃದ್ಧಿಯಾಗಲಿದೆ.

    * ನೀವು ಅಕ್ಕಿ ನೀರನ್ನು ರೆಫ್ರಿಜರೇಟ್‍ನಲ್ಲಿ ಇಟ್ಟು ನಂತರ ಅದನ್ನು ಫೇಶಿಯಲ್ ಟಿಶ್ಯೂ ಅಥವಾ ಹತ್ತಿ ಅಥವಾ ಕಾಟನ್ ಬಟ್ಟೆ ಬಳಸಿ ಮುಖಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ಬಿಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

    * ಅಕ್ಕಿ ನೀರಿನಲ್ಲಿ ಇರುವ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಸುಕ್ಕುಗಳು, ನಸುಕಂದು ಮುಂತಾದ ವಯಸ್ಸಾದ ಸುಕ್ಕು ತೆಗೆದುಹಾಕಲು ಸಹಾಯ ಮಾಡುತ್ತದೆ.

    * ಅಕ್ಕಿ ನೀರನ್ನು ನಿಮ್ಮ ಕೂದಲಿನ ಆರೈಕೆಗೆ ಬಳಸಬಹುದು. ಇದರಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಕೂದಲನ್ನು ಬಲಗೊಳಿಸುತ್ತದೆ. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

    * ಒಂದು ರಾತ್ರಿಯಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸದೇ ಇದ್ದರೂ ನಿಧಾನಕ್ಕೆ ಮೊಡವೆಗಳನ್ನು ಅದರ ಕಲೆಗಳನ್ನು ಮಾಯವಾಗಿಸುತ್ತದೆ.

    * ಚರ್ಮದ ಉರಿಯೂತವನ್ನು ಗುಣಪಡಿಸಲು ಅಕ್ಕಿನೀರು ಸಹಾಯ ಮಾಡುತ್ತದೆ. ಹತ್ತಿ ಚೆಂಡನ್ನು ಬಳಸಿ ಸಮಸ್ಯೆಯಿರುವ ಜಾಗದಲ್ಲಿ ಹಚ್ಚಿ ಒಣಗಲು ಬಿಡಿ. ನಂತರ ಅದನ್ನು ನೀರಿನಿಂದ ತೊಳೆಯಿರಿ.