ವಿಶೇಷವೇನಿಲ್ಲ, ಆದರೂ ರುಚಿಯಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತದೆ. ಹಾಗಾದರೆ ನೀವು ಹೋಟೆಲ್‌ನಲ್ಲಿ ನಾಲಿಗೆ ಚಪ್ಪರಿಸಿ ತಿನ್ನುವ ಬಾಳೆಕಾಯಿ ಕಬಾಬ್ ಮನೆಯಲ್ಲಿ ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
*ಬಾಳೆಕಾಯಿ- 4
* ಮೈದಾ- 2 ಕಪ್
* ಅರಿಶಿಣ ಪುಡಿ- 1 ಚಮಚ
* ಏಲಕ್ಕಿ ಪುಡಿ- ಸ್ವಲ್ಪ
* ಸಕ್ಕರೆ- ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಜೀರಿಗೆ- 1 ಚಮಚ
* ಅಡುಗೆ ಎಣ್ಣೆ- 2 ಕಪ್
ಮಾಡುವ ವಿಧಾನ:
* ಬಾಳೆಕಾಯಿ ಸಿಪ್ಪೆ ತೆಗೆದು ಕಟ್ ಮಾಡಿಕೊಳ್ಳಬೇಕು.
* ಮೈದಾಹಿಟ್ಟು, ಅರಿಶಿಣ, ಉಪ್ಪು, ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ
* ಬಾಣಲೆಯಲ್ಲ ಅಡುಗೆ ಎಣ್ಣೆಯನ್ನು ಹಾಕಿ ಕಾಯಿಸ ಬೇಕು
* ನಂತರ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿಗಳನ್ನು ಅದಕ್ಕಿ ಬೋಂಡಾದಂತೆ ಕರಿಯಬೇಕು. ಇದನ್ನೂ ಓದಿ:ಅಕ್ಕಿ ರೊಟ್ಟಿಗೆ ಕಾಂಬಿನೇಷನ್ ಖಾರವಾದ ಚಿಕನ್ ಮಸಾಲ
* ಈಗ ರುಚಿ ರುಚಿಯಾದ ಬಾಳೆಕಾಯಿ ಕಬಾಬ್ ಸವಿಯಲು ಸಿದ್ಧವಾಗುತ್ತದೆ.
ಹೊಳೆಯುವ ಕಣ್ಣುಗಳ ಕೆಳಗೆ ಕಪ್ಪಾಗಿದ್ದರೆ, ನಿಮ್ಮ ಅಂದಕ್ಕೆ ಕಪ್ಪು ಚುಕ್ಕೆಯಾಗುತ್ತದೆ. ಡಾರ್ಕ್ ಸರ್ಕಲ್ ಸಮಸ್ಯೆ ಪ್ರತಿಯೊಬ್ಬರಿಗೂ ಕಾಡುತ್ತದೆ. ಕಣ್ಣಿನ ಕೆಳಗೆ ಕಪ್ಪಾಗುವುದು ಕೇವಲ ಮಹಿಳೆಯರಲ್ಲೇ ಅಲ್ಲದೇ ಪುರುಷರಲ್ಲು ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಸ್ಯೆ ಇಲ್ಲಿದೆ ಪರಿಹಾರ
* ಟೊಮೆಟೋ ರಸ, ನಿಂಬೆ ಹಣ್ಣಿನ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ. ಕಣ್ಣುಗಳ ಸುತ್ತ ಹಚ್ಚಿ ಸುಮಾರು ಅರ್ಧ ಗಂಟೆಯವರೆಗೆ ಇದನ್ನು ಹಾಗೆ ಬಿಟ್ಟು, ಆಮೇಲೆ ತಂಪಾದ ನೀರಿನಿಂದ ಮುಖ ತೊಳೆದುಕೊಳ್ಳಬೇಕು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
* ಕ್ಯಾರೆಟ್, ಬಿಟ್ರೂಟ್‍ಗಳಂತಹ ಹಸಿ ತರಕಾರಿಗಳನ್ನು ಹೆಚ್ಚು ಸೇವಿಸಿ. ವಿಟಮಿನ್ ಮತ್ತು ಮಿನರಲ್ಸ್‍ಗಳಿಂದ ಕೂಡಿದ ತರಕಾರಿಗಳು ದೇಹವನ್ನೂ ಕೂಡ ಆರೋಗ್ಯಯುತವಾಗಿಡುತ್ತದೆ. ಇದನ್ನೂ ಓದಿ: ಅಂದಕಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ಧರಿಸಿ ಕಾಲ್ಗೆಜ್ಜೆ
ಇಂದು ಮಹಿಳೆಯರು ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳಲು ವಿಭಿನ್ನ ರೀತಿಯ ಕಾಲ್ಗೆಜ್ಜೆಯನ್ನು ಧರಿಸುತ್ತಾರೆ. ಆದರೆ ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಅಂದ ಹೆಚ್ಚಾಗುವುದರ ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀಳುತ್ತದೆ. ಬೆಳ್ಳಿಯು ನಿಮ್ಮ ದೇಹವನ್ನು ರೋಗಗಳಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಅನೇಕ ವೈಜ್ಞಾನಿಕ ಉಪಯೋಗವಿದೆ.
ಬ್ಯಾಕ್ಟೀರಿಯಾ ನಾಶ: ಬೆಳ್ಳಿಯಲ್ಲಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಗುಣವಿದೆ. ಸಾವಿರ ವರ್ಷಗಳ ಹಿಂದೆ ನಾವಿಕರು ದೂರದ ಪ್ರಯಾಣ ಬೆಳೆಸುವಾಗ ಬೆಳ್ಳಿಯ ನಾಣ್ಯಗಳನ್ನು ನೀರಿನ ಬಾಟಲಿಯಲ್ಲಿ ಹಾಕಿರುತ್ತಿದ್ದರಂತೆ. ಇದರಿಂದಾಗಿ, ಬ್ಯಾಕ್ಟೀರಿಯಾಗಳು ನಾಶ ಹೊಂದುತ್ತವೆ ಎಂಬ ಉದ್ದೇಶ ಹೊಂದಿದ್ದರು. ಇದೇ ಕಾರಣದಿಂದಾಗಿ ಮಹಿಳೆಯರಿಗೆ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸುವುದು ಉತ್ತಮವಾಗಿದೆ. ಇದನ್ನೂ ಓದಿ:ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ
ಕಾಲು ನೋವು ಶಮನ: ಮಹಿಳೆಯರು ಹೆಚ್ಚಿನ ಸಮಯ ಅಡುಗೆ ಮನೆ, ಮನೆ ಸ್ವಚ್ಛಗೊಳಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುವುದರಲ್ಲೇ ಕಳೆಯುತ್ತಾರೆ. ಬೆಳಗ್ಗಿನಿಂದ ಸಂಜೆಯ ತನಕ ನಿಂತುಕೊಂಡು ಹೆಚ್ಚಿನ ಕೆಲಸ ಮಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಪಾದಗಳಲ್ಲಿ ಪ್ರಾರಂಭವಾಗುವ ಈ ನೋವುಗಳು ಕ್ರಮೇಣ ಬೆನ್ನು ಹಾಗೂ ಸೊಂಟಗಳಿಗೂ ಹಬ್ಬಿಕೊಳ್ಳುವ ಸಂಭವ ಇರುತ್ತದೆ. ಆದರೆ, ಬೆಳ್ಳಿಯ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಪಾದಗಳಲ್ಲಿ ಉಂಟಾಗುವ ನೋವನ್ನು ಅಲ್ಲಿಯೇ ತಡೆಗಟ್ಟಬಹುದು. ಜೊತೆಗೆ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಇದನ್ನೂ ಓದಿ:ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ
ರೋಗ ನಿರೋಧಕ ಶಕ್ತಿ ಹೆಚ್ಚಳ: ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ ಪದೇ ಪದೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಮಹಿಳೆಯರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕೂಡ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ಧರಿಸಬೇಕು. ಇದನ್ನೂ ಓದಿ:ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
ಮುಟ್ಟಿನ ಸಮಸ್ಯೆ ನಿವಾರಣೆ: ದೇಹದ ಹಾರ್ಮೋನ್‍ಗಳನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಮಹಿಳೆಯರು ಮುಟ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಜೊತೆಗೆ ಆರೋಗ್ಯಕರ ಗರ್ಭಾಶಯವನ್ನು ಕಾಪಾಡಿಕೊಳ್ಳುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
ಹೆಚ್ಚಿನವರಿಗೆ ಬಾಯಿ ದುರ್ವಾಸನೆ ಸಮಸ್ಯೆ ಕಾಡುತ್ತದೆ. ಬಾಯಿ ದುರ್ನಾತದಿಂದ ಜನರೊಂದಿಗೆ ಬೆರೆಯಲು ನಮಗೆ ಮುಜುಗರವಾಗುತ್ತದೆ. ಇಂತಹ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತದೆ. ನಿಮ್ಮ ಮನೆಯಲ್ಲಿಯೇ ದೊರೆಯುವ ಅನೇಕ ಪದಾರ್ಥಗಳಿಂದ ನಿಮ್ಮ ಬಾಯಿಯ ದುರ್ವಾಸನೆಯನ್ನು ನೈಸರ್ಗಿಕವಾಗಿ ತೊಲಗಿಸಬಹುದು.
* ಲವಂಗ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಗಾಗ್ಗೆ 3 ರಿಂದ 4 ಲವಂಗವನ್ನು ನಿಧಾನವಾಗಿ ಜಗಿಯಿರಿ.ನಿಮ್ಮ ಬಾಯಿಯ ದುರ್ವಾಸನೆ, ಹಲ್ಲು ನೋವು ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
* ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ. ಇದನ್ನೂ ಓದಿ:
* ನೀವು ಹೆಚ್ಚಾಗಿ ನೀರು ಸೇವನೆ ಮಾಡಬೇಕು. ಬ್ಯಾಕ್ಟೀರಿಯಾವನ್ನು ಹೊರಹಾಕಿ ನಿಮ್ಮ ದೇಹವನ್ನು ರಿಫ್ರೆಶ್ ಮಾಡುತ್ತದೆ. ಒಂದು ಗ್ಲಾಸ್ ನೀರಿನಲ್ಲಿ ನಿಂಬೆ ಹಣ್ಣಿನ ರಸ, ಸಕ್ಕರೆ, ಉಪ್ಪನ್ನು ಮಿಶ್ರಣ ಮಾಡಿ ಸೇವನೆ ಮಾಡಿ. ಇದನ್ನೂ ಓದಿ:ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
ಬಹುತೇಕ ಎಲ್ಲರ ಮನೆಯಲ್ಲಿ ಮಧ್ಯಾಹ್ನದ ಸಮಯದ ಊಟದ ನಂತರ ಒಂದು ಲೋಟದಲ್ಲಿ ಮಜ್ಜಿಗೆ ಸೇವನೆ ಮಾಡುವ ಅಭ್ಯಾಸ ಇರುತ್ತದೆ. ಬೇಸಿಗೆ ಮಾತ್ರವಲ್ಲದೆ ವರ್ಷವಿಡೀ ಮಜ್ಜಿಗೆಯನ್ನು ಸೇವಿಸುವವರಿರುತ್ತಾರೆ. ಆದರೆ ಅದರ ಪ್ರಯೋಜನಗಳು ತಿಳಿದಿರುವುದಿಲ್ಲ.ಆದರೆ ಮಜ್ಜಿಗೆ ಸೇವನೆ ಮಾಡುವುದರಿಂದ ಇರುವ ಲಾಭವನ್ನು ಕೇಳಿದರೆ ಖಂಡಿತವಾಗಿಯೂ ನೀವು ಪ್ರತಿನಿತ್ಯ ಮಜ್ಜಿಗೆ ಕುಡಿಯಲು ಶುರು ಮಾಡುತ್ತಿರ.
* ತಾಜಾ ಮಜ್ಜಿಗೆಗೆ ಶುಂಠಿಯ ರಸವನ್ನು ಸೇರಿಸಿ ಸೇವಿಸುವುದರಿಂದ ಪಿತ್ತರಸ, ತೂಕ ನಷ್ಟಕ್ಕೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
* ದೇಹದ ಕೊಲೆಸ್ಟ್ರಾಲ್ ಅಂಶವನ್ನು ಮಟ್ಟ ಹಾಕಲು ಪ್ರತಿ ದಿನ ಮಜ್ಜಿಗೆ ಕುಡಿಯುವುದು ಕೂಡ ಒಂದು ಒಳ್ಳೆಯದು
* ಮೊಡವೆ ಗುಳ್ಳೆಗಳು, ಸುಕ್ಕುಗಳು ಮತ್ತು ಗೆರೆಗಳು ಮಾಯವಾಗಬೇಕು ಎಂದರೆ ಪ್ರತಿದಿನ ನಿಯಮಿತವಾಗಿ ಒಂದು ಲೋಟ ಮಜ್ಜಿಗೆಯನ್ನು ಕುಡಿಯುವ ಅಭ್ಯಾಸ ಇಟ್ಟುಕೊಂಡಿರಿ ಇದನ್ನೂ ಓದಿ:ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು
* ಮಜ್ಜಿಗೆ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡಿ ದೇಹದ ತೂಕವನ್ನು ಕಡಿಮೆ ಮಾಡುಲು ಮಜ್ಜಿಗೆ ಸೇವನೆ ಒಳ್ಳೆಯದಾಗಿದೆ.
* ಎದೆಯುರಿ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟಿಕ್ ಸಮಸ್ಯೆಗೆ ಕಡಿವಾಣ ಹಾಕುತ್ತದೆ. ಕ್ರಮೇಣವಾಗಿ ದೇಹದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
* ಹುಳಿ ನೀರು, ಬೆಲ್ಲ, ಚಿಟಿಕೆ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ:ಸ್ಪೆಷಲ್ ಪೈನಾಪಲ್ ಪಾಯಸ ಮಾಡಿ ಹಬ್ಬವನ್ನು ಸಂಭ್ರಮಿಸಿ
* ನಂತರ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿದರೆ ಪಾನಕ ಸಿದ್ಧವಾಗುತ್ತದೆ.
ವಾತಾವರಣ ಬದಲಾಗುತ್ತಿದೆ. ಬಿಸಿಲ ಬೆಗೆ ಹೆಚ್ಚಾಗುತ್ತಿದ್ದು, ಬಾಯಾರಿಕೆಗೆ ಅಂಗಡಿಗಳಲ್ಲಿ ಸಿಗುವ ತಂಪು ಪಾನಿಯಗಳ ಮೊರೆ ಹೋಗುವುದು ಸಹಜ. ಆದರೆ ಇಂದು ನೀವು ಮನೆಯಲ್ಲಿಯೇ ರುಚಿಯಾದ ಹೆಸರುಬೇಳೆ ಪಾನಕ ತಯಾರಿಸಿ ಸವಿಯಿರಿ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಮೈ ತುರಿಕೆ, ಪಿತ್ತಕ್ಕೆ ಒಳ್ಳೆಯ ಪಾನಕವಾಗಿದೆ.
ಬೇಕಾಗುವ ಸಾಮಗ್ರಿಗಳು:
* ಹೆಸರುಬೇಳೆ- ಅರ್ಧ ಕಪ್
* ಬೆಲ್ಲ – ಅರ್ಧ ಕಪ್
* ತೆಂಗಿನಕಾಯಿ ತುರಿ – ಅರ್ಧ ಕಪ್
* ಏಲಕ್ಕಿ – 2
* ನಿಂಬೆರಸ- ಸ್ವಲ್ಪ
ಮಾಡುವ ವಿಧಾನ:
* ಹೆಸರುಬೇಳೆಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟಿರಬೇಕು. ಇದನ್ನೂ ಓದಿ: ಮನೆಮಂದಿಗೆ ಇಷ್ಟವಾಗುವ ಫಿಶ್ ಫ್ರೈ ಮಾಡುವ ಸುಲಭ ವಿಧಾನ
* ಹೆಸರುಬೇಳೆ, ಬೆಲ್ಲ, ತೆಂಗಿನಕಾಯಿ ತುರಿ, ಏಲಕ್ಕಿ ಬೀಜ ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೇಕು.
ಇಡೀ ದಿನ ಕುಳಿತೇ ಕೆಲಸ ಮಾಡುವುದರಿಂದ ಬೊಜ್ಜು ಬಂದು, ತೂಕದಲ್ಲಿ ಹೆಚ್ಚಾಗಿ ಆರೋಗ್ಯದಲ್ಲೂ ಅನೇಕ ವ್ಯತ್ಯಾಸ ಕಾಣುತ್ತೇವೆ. ಕೆಲವೊಬ್ಬರಿಗೆ ಈ ದೇಹ ತೂಕ ಮುಜುಗರ ಉಂಟು ಮಾಡುತ್ತವೆ. ಇದರಿಂದಾಗಿ ಇದನ್ನು ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯ ಪ್ರಯತ್ನವನ್ನು ಮಾಡುತ್ತಾರೆ. ಆದರೆ ತೂಕ ಇಳಿಸಲು ಹೋಗಿ ಪೋಷಕಾಂಶ ಕೊರತೆಯಿಂದ ಅನೇಕ ರೋಗಗಳಿಗೆ ನಾಂದಿಯಾಗುತ್ತದೆ. ಆದರೆ ಮನೆಯಲ್ಲೇ ಸುಲಭವಾಗಿ ಕೆಲವು ಆರೋಗ್ಯಪೂರ್ಣವಾದ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ತೂಕದಲ್ಲಿ ಗಣನೀಯ ಇಳಿಕೆಯನ್ನು ಕಾಣಬಹುದು.
ಸೋಂಪು: ಸೋಂಪು ಚಯಾಪಚಯಗಳು ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆ ಉಬ್ಬುವಿಕೆ ಸಮಸ್ಯೆ ಇದ್ದವರಿಗೆ ಇದು ರಾಮಬಾಣವಾಗಿದೆ. ಇಷ್ಟೇ ಅಲ್ಲದೇ ತೂವನ್ನು ಅತೀ ವೇಗವಾಗಿ ಕಡಿಮೆಗೊಳಿಸಲು ಇದು ಸಹಾಯ ಮಾಡುತ್ತದೆ. ಪ್ರತಿನಿತ್ಯ ಒಂದು ಚಮಚ ಸೋಂಪನ್ನು ನೀರಿನಲ್ಲಿ ರಾತ್ರಿ ನೆನೆಸಬೇಕು. ಬೆಳಗ್ಗೆ ಆ ಮಿಶ್ರಣವನ್ನು ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.
ಗ್ರೀನ್ ಟೀ: ನೀವು ಸಾಮಾನ್ಯವಾಗಿ ಕುಡಿಯುವ ಚಹಾ ಬದಲಿಗೆ ಗ್ರೀನ್ ಟೀಯನ್ನು ಕುಡಿಯುವುದನ್ನು ರೂಢಿಸಿಕೊಳ್ಳಿ. ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಗಣನೀಯವಾಗಿ ತೂಕವನ್ನು ಇಳಿಸಬಹುದು. ಕೊಬ್ಬನಾಂಶವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನೂ ಓದಿ:ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಲೆಮನ್ ವಾಟರ್: ತೂಕ ಇಳಿಕೆಗೆ ನಿಂಬೆ ಹಣ್ಣು ಸಹಾಯಕವಾಗಿದ್ದು, ನಿಂಬೆ ಹಣ್ಣಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣವು ದೇಹದಲ್ಲಿರುವ ವಿಷವನ್ನು ತೆಗೆದುಹಾಕಲು ಸಹಾಯಕವಾಗಿದೆ. ಜೊತೆಗೆ ಇದು ದೇಹಕ್ಕೆ ಆಕಾರವನ್ನು ತರುತ್ತದೆ. ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚನೆ ನೀರಿಗೆ ನಿಂಬೆ ರಸ ಹಾಕುವ ಮೂಲಕ ಕುಡಿಯಿರಿ. ಆಗ ನಿಮ್ಮ ತೂಕದಲ್ಲಿ ವ್ಯತ್ಯಾಸ ಕಾಣಬಹುದು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
ತರಕಾರಿ ಜ್ಯೂಸ್: ಡಯಟ್ ಮಾಡುವವರಿಗೆ ತರಕಾರಿ ಜ್ಯೂಸ್‍ಗಳನ್ನು ಹೆಚ್ಚು ಕುಡಿಯಲು ಜಿಮ್ ಟ್ರೇನರ್‍ಗಳು ಸಲಹೆ ನೀಡುತ್ತಾರೆ. ಇದರಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತದೆ. ಕ್ಯಾರೆಟ್, ಬೀಟ್ರೂಟ್, ಹಾಗಲಕಾಯಿಯಂತಹ ತರಕಾರಿ ರಸವು ಪೌಷ್ಟಿಕಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬ್ಲ್ಯಾಕ್ ಕಾಫಿ: ಬ್ಲ್ಯಾಕ್ ಕಾಫಿಯನ್ನು ಸೇವಿಸುವುದದರಿಂದ ಎನರ್ಜಿಯನ್ನು ಹೆಚ್ಚಿಸುತ್ತದೆ. ನೀವು ವರ್ಕೌಟ್‍ಗಳನ್ನು ಮುಗಿಸಿದ ನಂತರ ಬ್ಲ್ಯಾಕ್ ಕಾಫಿಯನ್ನು ಕುಡಿದರೆ ಒಳ್ಳೆಯದು. ಇದರಿಂದ ಗಣನೀಯವಾಗಿ ತೂಕ ಇಳಿಕೆಯಾಗುತ್ತದೆ.
ಗ್ಯಾಸ್ಟ್ರಿಕ್ ಸರ್ವೆ ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಾಣುವ ಸಮಸ್ಯೆಯಾಗಿದೆ. ಪ್ರತಿ ಬಾರಿ ಗ್ಯಾಸ್ಟ್ರಿಕ್ ಉಂಟಾದಾಗಲೂ ಮೆಡಿಕಲ್‍ನಿಂದ ಮಾತ್ರೆ ತಂದು ನುಂಗುವುದು, ಆಸ್ಪತ್ರೆಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ನೀವು ಮನೆ ಮದ್ದನ್ನು ಮಾಡಿ ಸೇವನೆ ಮಾಡಬಹುದು.
* ತಂಪಾಗಿರುವ ಹಾಲು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಆದಾಗ ಎದೆಯಲ್ಲಿ ಉಂಟಾಗುವ ಉರಿ ಮತ್ತು ಹುಳಿ ತೇಗು ಸಮಸ್ಯೆ ಬಹಳ ಬೇಗನೆ ನಿವಾರಣೆ ಆಗುತ್ತದೆ.
* ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಉಗುರು ಬೆಚ್ಚಗಾಗಿಸಲು ಸಾಧ್ಯವಿಲ್ಲದಿದ್ದರೆ ತಣ್ಣೀರೂ ಸರಿ ಅರ್ಧ ಚಿಕ್ಕ ಚಮಚ ಇಂಗು ಹಾಕಿ ಕುಡಿದು ಬಿಡಬೇಕು.
* ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 4 ರಿಂದ 5 ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇರಬಹುದಾಗಿದೆ.
* ಸೋಂಪು ಕಾಳುಗಳು ಚಹಾ ತಯಾರು ಮಾಡಿ ಸೇವನೆ ಮಾಡಬಹುದು. ಇದರಿಂದ ನಿಮ್ಮ ಜಠರ ನಾಳ ಆರೋಗ್ಯಕರವಾಗಿದ್ದು ನಿಮಗೆ ಅಜೀರ್ಣತೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ಇಲ್ಲವಾಗುತ್ತದೆ.
ತೆಂಗಿನ ಕಾಯಿಯನ್ನು ಚಟ್ನಿ, ಸಾಂಬಾರ್, ಸಿಹಿತಿಂಡಿಗಳಿಗೆ ಬಳಸುತ್ತಾರೆ. ಇದರಿಂದ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದಣಿವಾದಾಗ ಅದನ್ನು ನೀಗಿಸಲು ಅದರ ನೀರನ್ನು ಕುಡಿಯುತ್ತಾರೆ. ಇದು ಕೇವಲ ಅಡುಗೆಯ ರುಚಿಯನ್ನು ಹೆಚ್ಚಿಸಲಷ್ಟೇ ಅಲ್ಲ ಆರೋಗ್ಯಕ್ಕೂ ಅಷ್ಟೇ ಒಳ್ಳೆಯದಾಗಿದೆ.
ಥೈರಾಯ್ಡ್ ಸಮಸ್ಯೆಗೆ ಪರಿಹಾರ: ಇಂದಿನ ಯುಗದಲ್ಲಿ ಸರಿಯಾದ ಪೋಷಕಾಂಶಯುಕ್ತ ಆಹಾರವನ್ನು ಸೇವಿಸದೇ ಇರುವುದು, ಒತ್ತಡ ಮತ್ತು ಇತರ ಸಮಸ್ಯೆಗಳಂತಹ ಕಳಪೆ ಜೀವನಶೈಲಿಯಿಂದಾಗಿ ಬಹಳಷ್ಟು ಜನರಿಗೆ ಚಿಕ್ಕ ವಯಸ್ಸಿನಲ್ಲೇ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಆದರೆ ಇದನ್ನು ಕಡಿಮೆ ಮಾಡಿಕೊಳ್ಳಲು ತೆಂಗಿನಕಾಯಿ ಸೇವನೆ ಅತ್ಯುತ್ತಮ ಥೈರಾಯ್ಡ್ ಆಹಾರವಾಗಿದೆ. ಇದನ್ನು ಪ್ರತಿನಿತ್ಯ ನಿಮ್ಮ ಆಹಾರದಲ್ಲಿ ಬಳಸುವುದರಿಂದ ಥೈರಾಯ್ಡ್ ಗ್ರಂಥಿಯು ದೇಹದ ಚಯಾಪಚಯ ಪ್ರಕ್ರಿಯೆಗಳ ಮೇಲೆ ನಿಗಾ ಇಡಲು ಸಹಾಯ ಮಾಡುತ್ತದೆ.
3 ಬಾರಿಯಾದ್ರೂ ಎಳನೀರು ಕುಡಿಯಿರಿ: ಬೇಸಿಗೆಗಾಲ ಬಂತೆಂದರೆ ಸಾಕು ಜನರು ಸಾಧ್ಯವಾದಷ್ಟು ಎಳನೀರನ್ನು ಕುಡಿಯುತ್ತಾರೆ. ಇದರಿಂದ ತಮ್ಮ ದಣಿವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ. ವಾರಕ್ಕೆ 3 ರಿಂದ 4 ಬಾರಿ ಎಳೆನೀರನ್ನು ಕುಡಿಯುವುರಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
ಆರೋಗ್ಯಕ್ಕೆ ಉತ್ತಮ ತೆಂಗಿನ ಎಣ್ಣೆ: ನಮ್ಮ ದೇಹವನ್ನು ಕಾಂತಿಯುತವಾಗಿ ಮಾಡಲು ತೆಂಗಿನ ಎಣ್ಣೆ ಸಹಾಯಮಾಡುತ್ತದೆ. ಜೊತೆಗೆ ಇದು ನಿಮ್ಮ ಕೂದಲನ್ನು ಗಟ್ಟಿ ಮುಟ್ಟಾಗಿ ಬೆಳೆಯಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಕೊಬ್ಬಿನಾಂಶವನ್ನು ಕಡಿಮೆ ಮಾಡುವುದರ ಜೊತೆಗೆ ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ. ಇದು ಬಹುಬೇಗ ಜೀರ್ಣವೂ ಆಗುತ್ತದೆ. ಜೊತೆಗೆ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ತೂಕವು ಗಣನೀಯವಾಗಿ ಇಳಿಯುತ್ತದೆ. ಇದನ್ನೂ ಓದಿ: ಒಡೆದ ಹಿಮ್ಮಡಿಯ ಆರೈಕೆಗೆ ಏನು ಮಾಡಬೇಕು ಗೊತ್ತಾ?
ಕೊಲೆಸ್ಟ್ರಾಲ್ ನಿಯಂತ್ರಣ: ಸ್ಯಾಚುರೇಟೆಡ್ ಕೊಬ್ಬು ತೆಂಗಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುವುದರಿಂದ ಪ್ರತಿದಿನ ತೆಂಗಿನಕಾಯಿ ಸೇವಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣ ಮಾಡಲು ಸಹಕಾರಿಯಾಗುತ್ತದೆ. ತೆಂಗಿನ ಕಾಯಿಯಲ್ಲಿ ಹೇರಳವಾಗಿ ವಿಟಮಿನ್ ಅಂಶಗಳಿವೆ.
ರೋಗ ನಿರೋಧಕ ಶಕ್ತಿ ಹೆಚ್ಚಳ: ಆಂಟಿಫಂಗಲ್, ಆಂಟಿಬ್ಯಾಕ್ಟಿರಿಯಲ್ ಮತ್ತು ಆಂಟಿ ವೈರಲ್ ಅಂಶಗಳು ತೆಂಗಿನ ಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವದೆ. ಇದು ರೋಗಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ತೆಂಗಿನಕಾಯಿ ಸೇವಿಸುವುದರಿಂದದೇಹದ ರೋಗ ನಿರೋಧಕ ಶಕ್ತಿ ಅಧಿಕವಾಗುತ್ತದೆ. ತೆಂಗಿನ ಕಾಯಿಯ ಹಾಲನ್ನು ಮಕ್ಕಳಿಗೆ ನೀಡುವುದರಿಂದ ಮಕ್ಕಳ ಮೂಳೆಗಳು ಬಲಿಷ್ಠವಾಗುತ್ತದೆ.