ನವದೆಹಲಿ: ಸರಿಸುಮಾರು 800ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆಯನ್ನು ಹೆಚ್ಚಳ ಮಾಡಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಅನುಮತಿ ನೀಡಿದೆ.
ಯಾವ ಔಷಧಗಳ ಬೆಲೆ ಏರಿಕೆ: ಸಗಟು ಬೆಲೆ ಸೂಚ್ಯಂಕದ ಆಧಾರದ ಮೇಲೆ ಔಷಧಗಳ ಬೆಲೆಗಳ್ಲಿ ಶೇ 10.76 ರಷ್ಟು ಏರಿಕೆ ಮಾಡಲಾಗಿದೆ. ಇದರಿಂದಾಗಿ ಆ್ಯಂಟಿ ಬಯೋಟಿಕ್ ಔಷಧಗಳು, ಉರಿಯೂತ ನಿವಾರಕ ಔಷಧಗಳು, ಕಿವಿ-ಮೂಗು ಹಾಗೂ ಗಂಟಲಿಗೆ ಸಂಬಧಿತ ಔಷಧಗಳು, ಆ್ಯಂಟಿಸೆಪ್ಟಿಕ್, ಆ್ಯಂಟಿ ಫಂಗಲ್ ಹಾಗೂ ನೋವು ನಿವಾರಕ ಔಷಧಗಳ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ. ಬಹಳಷ್ಟು ವರ್ಷಗಳ ನಂತರ ಒಂದೇ ಬಾರಿಗೆ ಶೇ. 10 ರಷ್ಟು ಬೆಲೆಯೆರಿಕೆ ನಿರ್ಣಯವನ್ನು ಔಷಧ ಕಂಪನಿಗಳು ಸ್ವಾಗತಿಸಿವೆ. ಇದನ್ನೂ ಓದಿ: ಬೆಂಗಳೂರು ರಸ್ತೆಗೆ ಹೆವಿ ವೆಹಿಕಲ್‍ಗಳೇ ಕಂಟಕ- ಭಾರೀ ಗಾತ್ರದ ವಾಹನಗಳಿಂದ ರೂಲ್ಸ್ ಬ್ರೇಕ್
ಶೇ 11ರಷ್ಟು ಬೆಲೆ ಏರಿಕೆ: ಔಷಧದ ಬೆಲೆ ನಿಯಂತ್ರಣ ಕಾಯ್ದೆ 2013ರ ಪ್ರಕಾರ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು ವಾರ್ಷಿಕ ಸಗಟು ಬೆಲೆ ಸೂಚ್ಯಂಕ ಅನ್ವಯ ಪ್ರತಿ ವರ್ಷ ಏಪ್ರಿಲ್ 1 ರಂದು ಔಷಧಗಳ ಬೆಲೆಯನ್ನು ಪರಿಷ್ಕರಣೆ ಮಾಡುತ್ತದೆ. 2022ರ ಆರ್ಥಕ ವರ್ಷದಲ್ಲಿ ಸಗಟು ಬೆಲೆ ಸೂಚ್ಯಂಕ ಆಧಾರದ ಮೇಲೆ ಔಷಧಗಳ ಬೆಲೆಯಲ್ಲಿ ಶೇ 10.76ರಷ್ಟು ಏರಿಕೆ ಮಾಡಲಾಗಿದೆ ಎಂದು ಪ್ರಾಧಿಕಾರ ಹೇಳಿದೆ.
ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಗ್ರಾಹಕರ ಮೇಲೆ ಇದರಿಂದಾಗಿ ಇನ್ನಷ್ಟು ಹೊರೆ ಬೀಳಲಿದೆ. ಆರ್ಥಿಕ ಸಲಹೆಗಾರರ ಕಚೇರಿ ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಹಾಗೂ ವಾಣಿಜ್ಯ ಹಾಗೂ ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರವಾಗಿ ಸಗಟು ಬೆಲೆ ಸೂಚ್ಯಂಕವನ್ನು ನಿಗದಿ ಪಡಿಸಲಾಗುತ್ತದೆ.
ಮನುಷ್ಯನಿಗೆ ನಿದ್ರೆ ಬಹುಮುಖ್ಯವಾಗಿದ್ದು, ಪ್ರತಿನಿತ್ಯ 7 ರಿಂದ 9 ತಾಸು ಉತ್ತಮ ನಿದ್ದೆ ಬೇಕಾಗುತ್ತದೆ. ನಿದ್ರೆ ಸರಿಯಾಗಿ ಆದರೆ ಮಾತ್ರ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಜೊತಗೆ ನಮ್ಮ ಭಾವನೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಮಾನಸಿಕವಾಗಿ ದಣಿಯುತ್ತೀರಿ ಜೊತೆಗೆ ಮುಂಗೋಪ, ಇಡೀ ದಿನ ಕಿರಿಕಿರಿಯಂತಹ ಸಮಸ್ಯೆಗಳು ಎದುರಾಗುತ್ತದೆ. ಜೊತೆಗೆ ಆಲಸ್ಯರಾಗುತ್ತೀರಿ. ಇದು ಮಾನಸಿಕ ತೊಂದರೆಯಾಗಿದ್ದರೆ, ದೈಹಿಕವಾಗಿ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತೀರಿ.
ಕೇಂದ್ರ ನರಮಂಡಲದ ಮೇಲೆ ಪರಿಣಾಮ: ಕೇಂದ್ರ ನರಮಂಡಲವು ದೇಹದ ಪ್ರಾಥಮಿಕ ಮಾಹಿತಿಯ ಹೆದ್ದಾರಿಯಾಗಿದೆ. ಇದು ಸರಿಯಾಗಿ ಕೆಲಸ ಮಾಡಲು ನಿದ್ದೆ ಅವಶ್ಯವಿರುತ್ತದೆ. ಆದರೆ ತೀವ್ರವಾದ ನಿದ್ರಾಹೀನತೆಯಿಂದಾಗಿ ನರಮಂಡಲದಲ್ಲಿ ಪ್ರಮುಖ ತೊಂದರೆ ಆಗುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ
ರೋಗ ನಿರೋಧಕ ಶಕ್ತಿ ಕಡಿಮೆ: ನಿದ್ರಾಹೀನತೆಯಿಂದ ನಿಮ್ಮ ದೇಹವು ರೋಗ ನಿರೋಧಕಶಕ್ತಿಯನ್ನು ಬಲಪಡಿಸುವುದನ್ನು ನಿಲ್ಲಿಸುತ್ತದೆ. ನೀವು ಪ್ರತಿನಿತ್ಯ ಸಾಕಷ್ಟು ನಿದ್ದೆಯನ್ನು ಪಡೆಯದಿದ್ದರೆ, ನಿಮ್ಮ ದೇಹವು ಸೋಂಕು ಹಾಗೂ ಬ್ಯಾಕ್ಟಿರಿಯಾ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಜೊತೆಗೆ ರೋಗದಿಂದ ಚೇತರಿಸಿಕೊಳ್ಳಲು ಅಧಿಕ ಸಮಯ ಬೇಕಾಗುತ್ತದೆ. ಇಷ್ಟೇ ಅಲ್ಲದೇ ದೀರ್ಘಾವಧಿ ನಿದ್ರಾಹೀನತೆಯಿಂದಾಗಿ ಮಧುಮೇಹ ಹಾಗೂ ಹೃದ್ರೋಗದಂತಹ ಕಾಯಿಲೆಗಳು ಬರುವ ಸಂಭವವಿರುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ
ಜಿರ್ಣಾಂಗ ವ್ಯವಸ್ಥೆ: ನಿದ್ದೆ ಕಡಿಮೆ ಮಾಡುವುದರಿಂದ ಕೆಲವೊಮ್ಮೆ ನೀವು ವ್ಯಾಯಾಮ ಮಾಡುವಾಗ ಆಯಾಸವಾಗುತ್ತದೆ. ಇದರಿಂದಾಗಿ ತೂಕವು ಹೆಚ್ಚಾಗುತ್ತದೆ ಜೊತೆಗೆ ಜಿರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀಳುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
ಹೃದ್ರೋಗ ಕಾಯಿಲೆ: ಸಾಕಷ್ಟು ನಿದ್ದೆ ಮಾಡದಿದ್ದರೆ ಜನರು ಹೃದಯ ರಕ್ತನಾಳದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ಅಧ್ಯಯನದ ಪ್ರಕಾರ ನಿದ್ರಾಹೀನತೆಯಿಂದಾಗಿ ಹೃದಯಾಘಾತ ಮತ್ತು ಸ್ಟ್ರೋಕ್‍ನಂತಹ ಕಾಯಿಲೆಗಳು ಎದುರಾಗುವ ಸಂಭವವಿರುತ್ತದೆ. ಇದನ್ನೂ ಓದಿ:ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
ಚಿಕನ್‍ನಿಂದ ಮಾಡುವ ಹತ್ತು ಹಲವು ಪದಾರ್ಥಗಳನ್ನು ನೀವು ಸೇವಿಸಿರಬಹುದು. ಆದರೆ ನಾವು ಇಂದು ಹೇಳಲು ಹೊರಟಿರುವ ಚಿಕನ್ ರೋಸ್ಟ್ ನಿಮ್ಮ ಮನೆ ಮಂದಿಗೆ ಎಲ್ಲರಿಗೂ ಇಷ್ಟವಾಗುತ್ತದೆ. ಈ ಖಾದ್ಯ ನಿಮ್ಮ ಬಾಯಿ ರುಚಿ ಹೆಚ್ಚಿಸುವಲ್ಲಿ ಸಂಶಯವಿಲ್ಲ. ಹಾಗಿದ್ದರೆ ಇನ್ಯಾಕೆ ತಡ ಬನ್ನಿ ಮನೆಯಲ್ಲಿ ಸರಳವಾಗಿ ಚಿಕನ್ ರೋಸ್ಟ್ ಹೇಗೆ ಮಾಡುವುದು ಎನ್ನುವುದನ್ನು ನೋಡೋಣ…
ಬೇಕಾಗುವ ಸಾಮಗ್ರಿಗಳು:
* ಚಿಕನ್ – 1 ಕೆಜಿ
* ಮೆಣಸಿನ ಪುಡಿ – 1 ಚಮಚ
* ಗರಂ ಮಸಾಲ – 1 ಚಮಚ
* ಅರಿಶಿನ – ಅರ್ಧ ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
* ಕೊತ್ತಂಬರಿ ಸೊಪ್ಪು, ಪುದೀನ ಪೇಸ್ಟ್ – ಸ್ವಲ್ಪ
* ಕೊಬ್ಬರಿ ಎಣ್ಣೆ- 1 ಕಪ್
ಮಾಡುವ ವಿಧಾನ:
* ಚಿಕನ್ ತೊಳೆದಿಟ್ಟುಕೊಳ್ಳಬೇಕು.
* ಒಂದು ಪಾತ್ರೆಯಲ್ಲಿ ಮೆಣಸಿನಪುಡಿ, ಗರಂ ಮಸಾಲ, ಅರಿಶಿನ ಪುಡಿ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಕೊತ್ತಂಬರಿ ಮತ್ತು ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಮಾಡಿ ಚಿಕನ್, ತಯಾರಿಸಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೇಯಿಸಿದರೆ ಚಿಕನ್ ರೋಸ್ಟ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ
ನವದೆಹಲಿ: ಸರಿಸುಮಾರು ಮೂರು ವರ್ಷಗಳಿಂದ ಭಾರತ ಅನುಸರಿಸಿದ ಕೋವಿಡ್ ನಿರ್ವಹಣೆ ಮಾದರಿಯಿಂದ ಇಡೀ ಜಗತ್ತು ಪಾಠ ಕಲಿಯಬೇಕು ಎಂದು ಜಾಗತಿಕ ನಾಯಕರು ಅಕ್ಷಾ ಕಾರ್ಯಕ್ರಮದಲ್ಲಿ ಮೆಚ್ಚುಗೆಯ ಮಾತನಾಡಿದ್ದಾರೆ.
ಬಿಲ್ ಹಾಗೂ ಮಿಲಿಂಡಾ ಗೇಟ್ಸ್ ಫೌಂಡೇಶನ್ ಆಯೋಜಿಸಿದ ಆಕ್ಷಾ ಭಾರತದಿಂದ ಪಾಠಗಳು ಕಾರ್ಯಕ್ರಮದಲ್ಲಿ ಜಾಗತಿಕ ನಾಯಕರು ಭಾಗವಹಿಸಿದ್ದರು. ಕೊರೊನಾ ಸೋಂಕಿನ ನಿಯಂತ್ರಣದ ವೇಳೆ ಭಾರತ ಕೈಗೊಂಡಿರುವ ನಿರ್ಧಾರ ಕುರಿತಾಗಿ ಚರ್ಚೆ ಮಾಡಲಾಗಿದೆ.
ಈ ವೇಳೆ ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ದೇಶೀಯ ನಿರ್ದೇಶಕ ಟೇಕೂ ಕೊನಿಶಿ ಭಾರತದ ಕೋವಿಡ್ ನಿರ್ವಹಣಾ ಮಾದರಿಯಿಂದ ಉತ್ತಮವಾಗಿದ್ದು, ಅನುಕರಣೆಗೆ ಯೋಗ್ಯವಾಗಿದೆ. ಇದರಿಂದ ಇಡೀ ಜಗತ್ತು ಪಾಠ ಕಲಿಯಬೇಕು ಎಂದು ಹೇಳಿದ್ದಾರೆ.
Highlighted how India’s scientific evidence-based approach to combat #COVID19 helped the world in the fight against the pandemic, at a programme on ‘Lessons From India – The World’s Largest Vaccination Drive’. pic.twitter.com/bOwhVVTbAq
— Dr Mansukh Mandaviya (@mansukhmandviya) March 21, 2022
ಭಾರತದಲ್ಲಿನ ಯುನಿಸೆಫ್ ಪ್ರತಿನಿಧಿ ಯಾಸು ಮಾಸಾ ಕಿಮುರಾ, ಭಾರತ ದೇಶದಲ್ಲಿ ಕೊರೊನಾ ಸಮರ್ಥವಾಗಿ ನಿಭಾಯಿಸಿದೆ. ವಿವಿಧ ದೇಶಗಳಿಗೂ ಲಸಿಕೆ ಒದಗಿಸಿ ಸಹಾಯ ಮಾಡಿದೆ ಎಂದು ಹಾಡಿ ಹೊಗಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಭಾರತದ ಪ್ರತಿನಿಧಿ ಡಾ. ರೊಡೆರಿಕೊ ಆಫ್ರಿನ್ ಕೋವಿಡ್ ವಿರುದ್ಧದ ಹೋರಾಟಕ್ಕೆ ಭಾರತ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.
ಭಾರತವು ಸುರಕ್ಷಿತ ಲಸಿಕೆಗಳ ತಯಾರಿಕೆಗೆ ಹೊಸ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಅಷೇ ವೇಗದಲ್ಲಿ ಲಸಿಕೆಗಳನ್ನು ಜನರಿಗೆ ಮುಟ್ಟಿಸುವ ಕಾರ್ಯ ಮಾಡಿದೆ. ಕ್ರಿಸ್ ಎಲಿಯಾಸ್ ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಮಾತನಾಡಿ, ಭಾರತದ ಕೋವಿಡ್ ನಿರ್ವಹಣೆ ಯಶಸ್ಸು ಸಮರ್ಪಣೆ, ಪಾಲುಗಾರಿಕೆ ಹಾಗ ತಂತ್ರಜ್ಞಾನದ ಹಂಚಿಕೆಯ ಫಲವಾಗಿದೆ ಎಂದು ಹೇಳಿದ್ದಾರೆ.
ನವದೆಹಲಿ: ರಾಂಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲೂ ಪ್ರಸಾದ್ ಯಾದವ್ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆ ಅವರನ್ನು ದೆಹಲಿಯ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ.
ಲಾಲೂ, ಮೇವು ಹಗರಣ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ರಾಂಚಿಯ ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ (RIMS) ಬಹು ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ದಿನಗಳಿಂದ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟ ಪರಿಣಾಮ ದೆಹಲಿಯ ಏಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಕಿರುಕುಳ ಎದುರಿಸುತ್ತಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ರಾಂಚಿಯ ರಾಜೇಂದ್ರ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಾಲೂ ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಎರಡು ದಿನಗಳಿಂದ ಉಸಿರಾಟದ ತೊಂದರೆ ಎದುರಿಸುತ್ತಿದ್ದು, ಅಲ್ಲದೇ ನ್ಯುಮೋನಿಯಾ ಕೂಡ ಕಾಣಿಸಿಕೊಂಡಿತ್ತು. ಹಾಗಾಗಿ ಅವರ ವಯಸ್ಸನ್ನು ಪರಿಗಣಿಸಿ, ಇನ್ನಷ್ಟು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯ ಮೇರೆಗೆ ನಾವು ಅವರನ್ನು ರಿಮ್ಸ್‌ನಿಂದ ದೆಹಲಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇವೆ ಎಂದು ರಿಮ್ಸ್ ನಿರ್ದೇಶಕ ಡಾ.ಕಾಮೇಶ್ವರ್ ಪ್ರಸಾದ್ ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಆರ್ಥಿಕ ಅವನತಿಯತ್ತ ಶ್ರೀಲಂಕಾ – ಸಕ್ಕರೆ, ಬೇಳೆಗೆ ಚಿನ್ನದ ಬೆಲೆ, 1 ಟೀಗೆ 100 ರೂ.
ಬಹುಕೋಟಿ ಮೇವು ಹಗರಣದಲ್ಲಿ ಶಿಕ್ಷೆಗೆ ಗುರಿಯಾದ ಲಾಲೂ ಪ್ರಸಾದ್ ಯಾದವ್ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯ ಈಗಾಗಲೇ 5 ವರ್ಷ ಕಾರಾಗೃಹ ಶಿಕ್ಷೆ ಮತ್ತು 60 ಲಕ್ಷ ರೂ. ದಂಡ ವಿಧಿಸಿದೆ. ಫೆಬ್ರ್ರವರಿ 21ರಂದು ತೀರ್ಪು ಹೊರಬಿದ್ದ ಬಳಿಕ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮೇವು ಖರೀದಿಗಾಗಿ ಇರಿಸಿದ್ದ 139 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡ ಒಂದು ಪ್ರಕರಣದಲ್ಲಿ ಫೆಬ್ರುವರಿ 21ರಂದು ತೀರ್ಪು ಪ್ರಕಟವಾಗಿತ್ತು.
ಸೆಟ್ ದೋಸೆ, ನೀರ್ ದೋಸೆ, ರಾಗಿ ದೋಸೆ ಮತ್ತು ಗೋದಿ ದೋಸೆಯನ್ನು ನೀವು ಸವಿದಿರುತ್ತಿರ. ಆದರೆ ನಾವು ಇಂದು ತೆಳುವಾದ ಮತ್ತು ಗರಿಗರಿಯಾದ ರವಾ ದೋಸೆ ಮಾಡುವ ಸರಳ ವಿಧಾನವನ್ನು ನಿಮಗೆ ಹೇಳುತ್ತಿದ್ದೇವೆ.
ಬೇಕಾಗುವ ಸಾಮಗ್ರಿಗಳು:
* ಬಾಂಬೆ ರವಾ- 2ಕಪ್
* ಅಕ್ಕಿ ಹಿಟ್ಟು- ಅರ್ಧ ಕಪ್
* ಮೈದಾ – ಅರ್ಧ ಕಪ್
* ಶುಂಠಿ- ಸ್ವಲ್ಪ
* ಹಸಿ ಮೆಣಸಿನಕಾಯಿ- 2
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಕರಿಬೇವು- ಸ್ವಲ್ಪ
* ಜೀರಿಗೆ- 1 ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಕಾಳು ಮೆಣಸು- ಸ್ವಲ್ಪ
* ಈರುಳ್ಳಿ- 1
* ಅಡುಗೆ ಎಣ್ಣೆ- ಅರ್ಧ ಕಪ್
ಮಾಡುವ ವಿಧಾನ:
* ಒಂದು ಬೌಲ್‍ಗೆ ರವಾ, ಅಕ್ಕಿ ಹಿಟ್ಟು, ಮೈದಾ ಕತ್ತರಿಸಿದ ಶುಂಠಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಕಾಳುಮೆಣಸು, ಮತ್ತು ಕರಿಬೇವಿನ ಎಲೆ, ಜೀರಿಗೆ ಮತ್ತು ಉಪ್ಪನ್ನು ಸಹ ಸೇರಿಸಿ. ಇದನ್ನೂ ಓದಿ: ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ
* ಸ್ವಲ್ಪ ನೀರು ಹಾಕಿ, ನೀರ್ ದೋಸೆ ಹದಕ್ಕೆ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಬೇಕು.
ಬೆಂಗಳೂರು: ಲಕ್ಷಾಂತರ ಜನ ರೈತರ ಬದುಕಿಗೆ ಬೆನ್ನೆಲುಬು ಆಗಿರುವ ಅಡಿಕೆ ಬಳಕೆ ಆರೋಗ್ಯಕ್ಕೆ ಹಾನಿಕರವಲ್ಲ, ಬದಲಿಗೆ ಅನೇಕ ಬಗೆಯಲ್ಲಿ ಲಾಭಕರವಿದೆ ಎಂಬ ಬಗ್ಗೆ, ಸಂಶೋಧನೆಗಳು ನಡೆಯುತ್ತಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಲೋಕಸಭಾ ಸದಸ್ಯರೊಬ್ಬರು ಅಡಿಕೆ ಹಾನಿಕಾರಕ ಹಾಗೂ ಅದನ್ನು ಬ್ಯಾನ್ ಮಾಡಬೇಕು ಎಂದು ನೀಡಿದ್ದ ಹೇಳಿಕೆಯಿಂದ, ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ, ಅಡಿಕೆ ದೇಹಕ್ಕೆ ಹಾನಿಕಾರಕ ಅಲ್ಲ. ಈ ರೀತಿ ಹೇಳಿಕೆಯಿಂದಾಗಿ ಅಡಿಕೆ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಕರ್ನಾಟಕ ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ (Karnataka State Areca Task Force) ನಿಯೋಗದ ವತಿಯಿಂದ ದೆಹಲಿಗೆ ತೆರಳಿ ಸಚಿವರನ್ನು ಭೇಟಿ ಮಾಡಲಾಗಿತ್ತು ಎಂದರು. ಇದನ್ನೂ ಓದಿ: ಮಾಧುಸ್ವಾಮಿ ನನಗೆ ದೊಡ್ಡ ಭೂತದ ತರ ಕಾಣಿಸಿಬಿಟ್ರು: ಶಾಸಕ ರಂಗನಾಥ್
ಈ ಸಂಬಂಧ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ಥೋಮರ್ ಹಾಗೂ ರಾಜ್ಯ ಸಚಿವರನ್ನು ಭೇಟಿ ಮಾಡಲಾಗಿದ್ದು, ಅಡಿಕೆ ಬಗ್ಗೆ ಕೋರ್ಟ್‍ನಲ್ಲಿ ತೀರ್ಮಾನ ಆಗದೆ ಯಾವುದೇ ಹೇಳಿಕೆಗಳನ್ನು ನೀಡಬಾರದು, ಅದು ಅಡಿಕೆ ಬೆಳೆಗಾರರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು.
ಅಡಿಕೆ ಮನುಷ್ಯನ ದೇಹಕ್ಕೆ ಹಾನಿಕರಕ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಒಂದು ಅಫಿಡವಿಟ್ ನೀಡಿದ್ದು, ಈ ಅಫಿಡವಿಟ್ ಅನ್ನು ತೆಗೆಯುವ ಸಲುವಾಗಿ ನಾವು ಪ್ರಯತ್ನ ಮಾಡ್ತಿದ್ದೇವೆ ಹಾಗೂ ಅಡಿಕೆ ಹಾನಿಕರಕ ಅಲ್ಲಾ ಎಂಬ ಬಗ್ಗೆ ನಮ್ಮ ರಾಜ್ಯದಲ್ಲಿ ಸಂಶೋಧನೆಯನ್ನು ಸಹ ಮಾಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: ತವರಿಗೆ ನವೀನ್ ಮೃತದೇಹ- ಪ್ರಧಾನಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ
ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ (Ramaiah institute of medical sciences) ನಮ್ಮ ಟಾಸ್ಕ್ ಫೋರ್ಸ್ ಕಡೆಯಿಂದ ಸಂಶೋಧನೆ ನಡೆಯುತ್ತಲಿದೆ, ಹಾಗೂ ಕೇಂದ್ರದಿಂದಲೂ ಸಹ ಈ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತಿದೆ. ಅಡಿಕೆ ಸೇವನೆ, ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದರ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಇದರಿಂದ ಬರುವ ನಿರೀಕ್ಷೆಯಿದೆ ಹಾಗೂ ರೈತ ಸಮುದಾಯಕ್ಕೆ ಇದರಿಂದ ಬಹಳ ದೊಡ್ಡ ಯಶಸ್ಸು ದೊರೆಯಲಿದೆ. ನಾವು ನೀಡಿರುವ ಈ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮಗೆ ಅತ್ಯಂತ ಸಂತೋಷವಾಗಿದೆ ಎಂದರು.
ಬೇಸಿಗೆಯಲ್ಲಿ ಚರ್ಮದ ರಕ್ಷಣೆಗೆ ಕೆಲವು ರಾಸಾಯನಿಕಗಳಿಂದ ಸಿದ್ಧಪಡಿಸಿದ ಕ್ರೀಮ್‍ಗಳನ್ನು ಹಲವರು ಬಳಸುತ್ತಾರೆ. ಇದು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಪರಿಸರ ಮತ್ತು ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಚರ್ಮದ ಆರೈಕೆಗೆ ಇಲ್ಲಿದೆ ಪರಿಹಾರ.
* ಮೊಸರು ಚರ್ಮವನ್ನು ತಂಪಾಗಿಸುವ ಗುಣ ಹೊಂದಿದೆ. ಅಷ್ಟೇ ಅಲ್ಲ ಟ್ಯಾನ್ ಕೂಡ ಹೋಗಲಾಡಿಸುತ್ತದೆ. ಆದ್ದರಿಂದ ಇದನ್ನು 15 ರಿಂದ 20 ನಿಮಿಷಗಳ ಕಾಲ ಕಪ್ಪಾಗಿರುವ ಭಾಗಗಳ ಮೇಲೆ ಇಟ್ಟು, ನಂತರ ತೊಳೆಯಿರಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಮುಖದ ಟ್ಯಾನ್ ಮಾಯವಾಗುತ್ತೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ
ಮಗು ಜನಿಸಿದ ನಂತರ ಇನ್ನೂ ಗರ್ಭಿಣಿಯಂತೆ ಕಾಣುವ ಬಗ್ಗೆ ಕೆಲವರು ಚಿಂತಿತರಾಗಿರುತ್ತಾರೆ. ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡಲು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಿರುತ್ತಾರೆ. ಆದರೆ ಅದಾಗದೇ ಹಲವಾರು ರೋಗಗಳಿಗೂ ದಾರಿ ಆಗಬಹುದು. ಇದರಿಂದಾಗಿ ಹೆರಿಗೆ ನಂತರ ದೇಹವು ಚೇತರಿಸಿಕೊಳ್ಳುತ್ತಿದ್ದಾಗ ಏನು ಮಾಡಬೇಕು ಎಂಬುದರ ಬಗ್ಗೆ ಕೆಲವು ಮಾಹಿತಿ ಇಲ್ಲಿವೆ.
ಡಯೆಟ್ ಮಾಡಿ:
ಗರ್ಭಿಣಿಯಾಗಿರುವಾಗ ಯಾವ ರೀತಿ ತಮ್ಮ ಊಟ, ತಿಂಡಿ ಬಗ್ಗೆ ಕಾಳಜಿ ವಹಿಸುತ್ತೇವೆಯೋ ಅದೇ ರೀತಿ ಹೆರಿಗೆಯ ನಂತರವೂ ಕಾಳಜಿ ವಹಿಸಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಹೊಂದಿರುವಂಥಹ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಎದೆ ಹಾಲು ಆಗಬೇಕಾದರೆ ತಾಯಿಯ ದೇಹದಿಂದ 500 ಕ್ಯಾಲರಿ ಖರ್ಚಾಗುತ್ತದೆ. ಹಾಗಾಗಿ ತಾಯಿಯ ದೇಹಕ್ಕೆ ದಿನಕ್ಕೆ 2,500 ಕ್ಯಾಲರಿ ಬೇಕಾಗುತ್ತದೆ. ಡಯೆಟ್ ಮಾಡುವಾಗ ಈ ಆಹಾರವನ್ನು ಸೇವಿಸಿ ಆರೋಗ್ಯದಿಂದಿರಿ. ಇದನ್ನೂ ಓದಿ: ಅಂದಕಷ್ಟೇ ಅಲ್ಲ ಉತ್ತಮ ಆರೋಗ್ಯಕ್ಕೂ ಧರಿಸಿ ಕಾಲ್ಗೆಜ್ಜೆ
ಕ್ಯಾಬಿಜ್: ಇದನ್ನು ಸೇವಿಸುವುದರಿಂದ ಹೆಚ್ಚು ಹಸಿವಾಗುವುದಿಲ್ಲ. 1 ಬಟ್ಟಲು ಕ್ಯಾಬಿಜ್‍ಲ್ಲಿ 20 ಕ್ಯಾಲರಿಗಳಿರುತ್ತವೆ. ಇದರಿಂದಾಗಿ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಎಲೆಕೋಸ್ ಪಲ್ಯ ಮಾಡಿ ಸೇವಿಸಬಹುದು. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ
ಓಟ್ಸ್: ಆರೋಗ್ಯಕರ ಕಾರ್ಬೋಹೈಡ್ರೇಟ್‍ನಿಂದ ಓಟ್ಸ್ ಪೂರಕವಾಗಿದೆ. ಡಯಟ್ ಫುಡ್ ಎಂದಾಕ್ಷಣ ಓಟ್ಸ್ ನೆನಪಾಗುತ್ತದೆ. ಓಟ್ಸ್ ಕೇಕ್, ಪರೋಟ, ಮಾಡಿ ತಿನ್ನಬಹುದು. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
ಮೊಸರು: ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎನ್ನುವ ಭಾವನೆ ಕೆಲವರಲ್ಲಿ ಇದೆ. ಆದರೆ ಅದು ತಪ್ಪು. ಮೊಸರಲ್ಲಿ ಕೊಬ್ಬು ಕರಗಿಸುವ ಕಿಣ್ವ ಇರುತ್ತದೆ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಊಟದ ಸಮಯದಲ್ಲಿ ಮೊಸರನ್ನು ತಿನ್ನಿರಿ.
ನೀರು: ಮನುಷ್ಯನ ದೇಹಕ್ಕೆ ನೀರು ಅತ್ಯಗತ್ಯ. ಇದರಿಂದಾಗಿ ಪ್ರತಿನಿತ್ಯ 4ರಿಂದ 5 ಲೀಟರ್ ನೀರನ್ನು ಕುಡಿಯಬೇಕು. ನೀರು ನಮ್ಮ ದೇಹವನ್ನು ಪುನಃ ಜೀವಂತವಾಗಿಸಿ, ಅನಗತ್ಯ ಜೀವಾಣುವನ್ನು ಹೊರಹಾಕುತ್ತದೆ. ಸ್ಥೂಲ ಕಾಯತೆಯನ್ನು ಉಂಟು ಮಾಡುವ ಕೊಬ್ಬಿನಾಮ್ಲವನ್ನು ಹೊರಹಾಕುತ್ತದೆ. ಇದನ್ನೂ ಓದಿ:ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
ಮಸಾಜ್ ಮಾಡಿಕೊಳ್ಳುವುದು:
ಬೆವರಿಳಿಸದೆ ಹೊಟ್ಟೆ ಭಾಗದ ತೂಕ ಇಳಿಸುವ ಸುಲಭ ಉಪಾಯವೆಂದರೆ ಮಸಾಜ್. ನೀವು ಪ್ರತಿನಿತ್ಯ ಮಸಾಜ್ ಮಾಡುವುದರಿಂದ ಹೊಟ್ಟೆ ಭಾಗದ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ನಿಯಮಿತ ಮಸಾಜ್‍ನಿಂದ ಹೊಟ್ಟೆ ಭಾಗದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ಇದನ್ನೂ ಓದಿ:ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ
2022ರ ಹೋಳಿ ಹಬ್ಬ ಹತ್ತಿರವಾಗುತ್ತಿದೆ. ಎಲ್ಲೆಡೆ ಬಗೆ-ಬಗೆಯ ಬಣ್ಣಗಳು ರಂಗೇರಿಸಲು ಸಜ್ಜಾಗುತ್ತಿವೆ. ಹೌದು… ಹೋಳಿ ಎಂದೊಡನೆ ಎಲ್ಲರಿಗೂ ನೆನಪಾಗುವುದೇ ಬಣ್ಣದ ರಂಗು. ಅಂದು ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ, ನೀರಿನೊಂದಿಗೆ ಮಿಶ್ರಣ ಮಾಡಿ ಹೋಳಿ ಹಾಡುತ್ತಾ ಸಂಭ್ರಮಿಸುತ್ತಾರೆ. ಸೆಲಿಬ್ರೆಟಿಗಳ ಮನೆಗಳಲ್ಲಂತೂ ಇದು ಕೊಂಚ ಹೆಚ್ಚೆಂದೇ ಹೇಳಬಹುದು. ಆದರೆ, ಬಣ್ಣ ಹಾಕುವುದು ಸಂಭ್ರಮಕ್ಕೆ ಅಷ್ಟೇ ಅಲ್ಲ ಅಪಾಯವನ್ನೂ ಉಂಟುಮಾಡುತ್ತದೆ. ಬಣ್ಣದಲ್ಲಿ ಅಡಗಿರುವ ಹಾನಿಕಾರಕ ರಾಸಾಯನಿಕ ಅಂಶಗಳು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನಿಮ್ಮ ಚರ್ಮದ ಮೇಲೂ ಒಂದಿಷ್ಟು ಕಾಳಜಿ ಇರಬೇಕು. ಅದಕ್ಕೇನು ಮಾಡಬೇಕು? ಎಂಬುದರ ಬಗ್ಗೆ ಚರ್ಮರೋಗತಜ್ಞರಾದ ಪೂಜಾ ನಾಗದೇವ್ ಅವರು ಒಂದಿಷ್ಟು ಟಿಪ್ಸ್‌ಗಳನ್ನು ನೀಡಿದ್ದಾರೆ. ಅವುಗಳನ್ನಿಲ್ಲಿ ನೋಡಬಹುದು.
ಐಸ್‍ಕ್ಯೂಬ್ ಹಚ್ಚಿ: ಚರ್ಮವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಮೊದಲು ಮುಖವನ್ನು ಐಸ್‍ಕ್ಯೂಬ್‍ಗಳಿಂದ ಉಜ್ಜಬೇಕು. ಇದರಿಂದ ಚರ್ಮದ ಮೇಲೆ ತೆರೆದ ರಂಧ್ರಗಳಿದ್ದರೆ ಮುಚ್ಚಿಕೊಳ್ಳುತ್ತದೆ. ಹೋಳಿ ಹಬ್ಬದಲ್ಲಿ ಕೆಮಿಕಲ್ ಬಣ್ಣಗಳಿಂದ ಚರ್ಮದ ಕಾಂತಿ ಹಾಳಾಗುವುದನ್ನು ತಪ್ಪಿಸುತ್ತದೆ. ಐಸ್ ಕ್ಯೂಬ್‍ನಿಂದ 10 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ ಸಾವಯವ ತೈಲವನ್ನು ಹಾಕಿದರೆ, ನಂತರದಲ್ಲಿ ಉಂಟಾಗುವ ಮೊಡವೆಗಳನ್ನು ತಡೆಯಬಹುದು. ಇದನ್ನೂ ಓದಿ: ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ
ತೆಂಗಿನ ಎಣ್ಣೆ ಸೂಕ್ತ: ಮನೆಯಿಂದ ಹೊರಗೆ ಹೋಗುವ ಮೊದಲು ನಿಮ್ಮ ದೇಹ ಅಥವಾ ಮುಖಕ್ಕೆ ಮಂದವಾಗಿ ಮಾಯಿಶ್ಚರೈಸರ್ ಅಥವಾ ತೆಂಗಿನ ಎಣ್ಣೆಯನ್ನು ಹಚ್ಚುವುದು ಸೂಕ್ತ. ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಚರ್ಮವು ಎಣ್ಣೆಯನ್ನು ಬಹುಬೇಗನೇ ಹೀರಿಕೊಳ್ಳುತ್ತದೆ. ಇದರಿಂದ ಬಣ್ಣ ಹಾಕಿದರೂ ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ಇದು ನೋಡಿಕೊಳ್ಳುತ್ತದೆ. ನಂತರ ಬಣ್ಣವನ್ನು ನೀರಿನಿಂದ ಸುಲಭವಾಗಿ ತೆಗೆದುಹಾಕಬಹುದು.
ಸೂರ್ಯನಕಾಂತಿ ಮರೆಮಾಚದಿರಲಿ: ಸಹಜವಾಗಿ ಹೋಳಿ ಹಬ್ಬ ಹೊರಾಂಗಣದಲ್ಲಿಯೇ ನಡೆಯುವುದರಿಂದ ಸೂರ್ಯನ ಬೆಳಕಿಗೆ ಹೋಳಿ ಬಣ್ಣ ಹಾಗೂ ನೀರಿಗೆ ನಿರಂತರವಾಗಿ ಒಡ್ಡಿಕೊಳ್ಳುತ್ತದೆ. ಇದರಿಂದ ಚರ್ಮವನ್ನು ನಿರ್ಜಲೀಕರಣಗೊಳಿಸಬಹುದು. ಇದರಿಂದಾಗಿ ಒಮ್ಮೆ ಚರ್ಮವು ಬೇರೊಂದು ಬಣ್ಣಕ್ಕೆ ತಿರುಗಿದರೆ ಸ್ವ-ಭಾವಕ್ಕೆ ಮರುಪಡೆಯುವುದು ತುಂಬಾ ಕಷ್ಟವಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕ. ಇದನ್ನೂ ಓದಿ: ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ
ಉಗುರು ಬಣ್ಣ ಹಚ್ಚಿ: ನೀವು ಇಷ್ಟ ಪಡುವ ಯಾವುದೇ ಬಣ್ಣದಿಂದ ನಿಮ್ಮ ಕೈ ಮತ್ತು ಕಾಲಿನ ಬೆರಳುಗಳು ಅದೇ ಬಣ್ಣದ ಸ್ವರೂಪ ಪಡೆಯಬಹುದು. ಹಾಗಾಗಿ ನೀವು ಉಗುರು ಬಣ್ಣವನ್ನು ಹಚ್ಚುವುದರಿದ ಅದು ನೈಜ ಚರ್ಮದ ಬಣ್ಣದಿಂದ ಸುರಕ್ಷಿತವಾಗಿರಿಸುತ್ತದೆ. ಹೋಳಿಯ ನಂತರ ನೇಲ್ ಪಾಲಿಶ್ ರಿಮೂವರ್ ಅನ್ನು ಬಳಸಿ ಉಗುರು ಬಣ್ಣ ಮತ್ತು ಎಲ್ಲಾ ಹೋಳಿ ಬಣ್ಣವನ್ನು ಒಂದೇ ಸಮಯದಲ್ಲಿ ಸುಲಭವಾಗಿ ತೆಗೆದುಹಾಕಬಹುದು. ನೀವು ವರ್ಣರಂಜಿತ ಉಗುರು ಬಣ್ಣವನ್ನು ಬಳಸಲು ಬಯಸದಿದ್ದರೆ, ಸ್ಪಷ್ಟವಾದ ಟಾಪ್ ಕೋಟ್ ಸಾಕು.
ಲಿಪ್ ಬಗ್ಗೆಯೂ ಕೇರ್ ಇರಲಿ: ಹೋಳಿಯ ಬಣ್ಣದಲ್ಲಿ ಮಿಶ್ರಣಗೊಂಡಿರುವ ಬಣ್ಣಗಳನ್ನು ಮುಖಕ್ಕೆ ಎರಚಿದಾಗ ಇದರಲ್ಲಿನ ಹಾನಿಕಾರಕ ರಾಸಾಯನಿಕಗಳು ತುಟಿಯ ಅಂದವನ್ನು ಹಾಳುಮಾಡುತ್ತವೆ. ಆದ್ದರಿಂದ ಲಿಪ್‍ಬಾಮ್ ಅನ್ನು ಹಚ್ಚಿ, ಇದರಿಂದ ತುಟಿಯ ಮೇಲೆ ಕೂರುವ ಒಂದು ಪದರವು ಬಣ್ಣಗಳಿಂದ ರಕ್ಷಣೆ ಒದಗಿಸುತ್ತದೆ.