Tag: health

  • ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

    ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

    ಮಾವು ಎಂದರೆ ಭಾರತೀಯರಿಗಂತೂ ಇಷ್ಟವಾದ ಹಣ್ಣು. ಇದು ಹಣ್ಣುಗಳ ರಾಜ ಎಂದೇ ಪ್ರಸಿದ್ಧಿ ಪಡೆದಿದೆ. ತಿನ್ನಲು ರುಚಿಕರವಷ್ಟೇ ಅಲ್ಲದೇ ಸುಗಂಧವನ್ನು ಹೊಂದಿದೆ. ಬೇಸಿಗೆ ಬಂತೆಂದರೆ ಸಾಕು ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳದ್ದೇ ಕಮಾಲು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರಿಗೂ ಮಾವಿನ ಹಣ್ಣು ಎಂದರೆ ತುಂಬಾ ಇಷ್ಟ. ಈ ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ಅನೇಕ ಲಾಭಗಳಿವೆ.

    ಜೀರ್ಣಕ್ರಿಯೆಗೆ ಸಹಕಾರಿ: ಮಾವಿನ ಹಣ್ಣು ಹಲವಾರು ಗುಣಗಳನ್ನು ಹೊಂದಿದ್ದು, ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಇದರಲ್ಲಿ ಅಮೈಲೇಸ್ ಜೀರ್ಣಕಾರಿ ಕಿಣ್ವಗಳಿರುತ್ತವೆ. ಇದರ ಜೊತೆಗೆ ಮಾವಿನಲ್ಲಿ ನೀರು ಮತ್ತು ಆಹಾರದ ನಾರಿನಾಂಶ ಜಾಸ್ತಿಯಾಗಿರುವುದರಿಂದ ಮಲಬದ್ಧತೆ ಮತ್ತು ಅತಿಸಾರದಂತಹ ಜೀರ್ಣಕಾರಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ರೋಗ ನಿರೋಧಕ ಶಕ್ತಿ ಹೆಚ್ಚಳ: ಇದರಲ್ಲಿ ವಿಟಮಿನ್ ಪೋಷಕಾಂಶವು ಹೇರಳವಾಗಿರುತ್ತದೆ. ವಿಟಮಿನ್ ಎ, ಬಿ, ಸಿ ಮತ್ತು ಇ ಖನಿಜಗಳು ಹೇರಳವಾಗಿದೆ. ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

    ಚರ್ಮದ ಕಾಂತಿ: ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಎ ಹೇರಳವಾಗಿದ್ದು, ಇದು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ. ಮಾವಿನ ಹಣ್ಣುಗಳನ್ನು ಮಿತವಾಗಿ ಸೇವಿಸಿದಾಗ ತ್ವಚೆಯ ಕಾಂತಿ ಹೆಚ್ಚುತ್ತದೆ. ಜೊತೆಗೆ ಇದು ಚರ್ಮದಲ್ಲಿ ಎಣ್ಣೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಚರ್ಮ ಸುಕ್ಕುಗಟ್ಟದಂತೆ ಕಾಪಾಡುತ್ತದೆ.

    ಹೃದಯದ ಆರೋಗ್ಯ: ಹೃದಯದ ಆರೋಗ್ಯವನ್ನು ವೃದ್ಧಿಸುವ ಪೋಷಕಾಂಶಗಳು ಮಾವಿನ ಹಣ್ಣಿನಲ್ಲಿ ಅಧಿಕವಾಗಿವೆ. ಮಾವಿನ ಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್‍ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    ತೂಕ ಕಡಿಮೆ: ಮಾವಿನ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ತೂಕ ಕಡಿಮೆ ಮಾಡಬಹುದು. ಮಾವಿನಲ್ಲಿ ಕೊಬ್ಬನ್ನು ಕಡಿಮೆ ಮಾಡುವ ಫೈಟೊಕೆಮಿಕಲ್‍ಗಳಿರುತ್ತವೆ. ಇದರ ಜೊತೆಗೆ ನಾರುಗಳು ಹೇರಳವಾಗಿವೆ. ನೀವು ನಾರಿನ ಹಣ್ಣು ಮತ್ತು ತರಕಾರಿಯನ್ನು ಸೇವಿಸಿದಾಗ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಆಗುತ್ತಿದೆ. ಇದರಿಂದ ತೂಕವು ಕಡಿಮೆ ಆಗುತ್ತದೆ. ಇದನ್ನೂ ಓದಿ: ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

  • ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ

    ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ

    ಶಿವಮೊಗ್ಗ: ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ನಿಯಮಿತವಾಗಿ ಆರೋಗ್ಯ ಮೇಳಗಳನ್ನು ಆಯೋಜಿಸಬೇಕು. ಅದರಲ್ಲೂ ತಮ್ಮ ಆರೋಗ್ಯ ವಿಷಯದಲ್ಲಿ ಹಿಂಜರಿಯುವ ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣ ಗೌಡ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ ಏರ್ಪಡಿಸಿಲಾಗಿತ್ತು. ಇದನ್ನೂ ಓದಿ: ಬಿಜೆಪಿ ಸೇರ್ತಾರಾ ಸಂಸದೆ ಸುಮಲತಾ ಆಪ್ತ?

    ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಸಚಿವರು, ಹೆಣ್ಣು ಮಕ್ಕಳು ಗರ್ಭಕೋಶದ ಸಮಸ್ಯೆ ಬಗ್ಗೆ ವೈದ್ಯರಲ್ಲಿ ತೋರಿಸಿಕೊಳ್ಳಲು ಹಿಂಜರಿಯುತ್ತಾರೆ. ಮಂಡ್ಯದಲ್ಲಿ ಆಯೋಜಿಸಿದ್ದ ಆರೋಗ್ಯ ಮೇಳ ಒಂದರಲ್ಲಿ 900 ಗರ್ಭಕೋಶದ ಸಮಸ್ಯೆಗಳು ವರದಿಯಾಗಿವೆ. ಆದ್ದರಿಂದ ಹೆಣ್ಣುಮಕ್ಕಳ ಗರ್ಭಕೋಶದ ಸಮಸ್ಯೆಗಳು ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇಂತಹ ಮೇಳಗಳು ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

    ಎಲ್ಲೆಡೆ ಕಣ್ಣಿನ ದೃಷ್ಟಿ ಸಮಸ್ಯೆ ಹೆಚ್ಚಾಗಿದ್ದು, ಹೋಬಳಿ ಮಟ್ಟದಲ್ಲಿ ಈ ಸಮಸ್ಯೆಗಳ ತಪಾಸಣೆ ನಡೆಯಬೇಕು. ನಮ್ಮ ಪ್ರಧಾನಿಯವರು ಉತ್ತಮ ಆರೋಗ್ಯಕ್ಕೆ ಪೂರಕವಾಗಿರುವ ಯೋಗಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕ್ರೀಡಾ ವಲಯದಲ್ಲಿ, ಹಳ್ಳಿ ಹಳ್ಳಿಯಲ್ಲಿ ಯೋಗಾ ಕೇಂದ್ರ ತೆರೆಯುವ ಬಗ್ಗೆ ಚಿಂತಿಸಲಾಗುತ್ತಿದೆ. ಕೋವಿಡ್‍ನಂತಹ ಸಂಕಷ್ಟ ಮತ್ತೊಮ್ಮೆ ಬರಬಾರದೆಂದು ನಮ್ಮ ಪ್ರಧಾನಿಯವರು ಮನೆ ಮನೆಗೆ ತೆರಳಿ ಲಸಿಕೆ ನೀಡುವಂತಹ ವ್ಯವಸ್ಥೆ ಮಾಡಿದ್ದಾರೆ. ಆರೋಗ್ಯ ಸೇವೆ ನೀಡುತ್ತಿರುವ ವೈದ್ಯರು, ಕಾರ್ಯಕರ್ತರು ರಾಜ್ಯಕ್ಕೆ ಗೌರವ ತರುವ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಪೊಲೀಸರ ಮೇಲೆ ಕೈ ಮಾಡೋದು, ಠಾಣೆಗೆ ನುಗ್ಗೋ ಪ್ರಯತ್ನ ಮಾಡೋದು ಅಕ್ಷಮ್ಯ ಅಪರಾಧ: ಬಿಎಸ್‍ವೈ

    ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್, ಸೇರಿದಂತೆ ಇತರರು ಹಾಜರಿದ್ದರು.

  • ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ನಾವು ದಿನನಿತ್ಯ ಬಳಸುವ ಅನೇಕ ಪದಾರ್ಥಗಳು ಔಷಧಿಯ ಗುಣಗಳನ್ನು ಹೊಂದಿರುತ್ತದೆ. ಅಂತಹದೇ ಶಕ್ತಿ ಮಸಾಲೆ ಪದಾರ್ಥಗಳಲ್ಲಿ ಒಂದಾದ ಏಲಕ್ಕಿಯಲ್ಲಿದೆ. ಇದನ್ನು ಪ್ರತಿನಿತ್ಯ ತಿನ್ನುವುದರಿಂದ ನಮ್ಮ ದೇಹದ ಆರೋಗ್ಯದ ಮೇಲೆ ಅಗಾಧ ಪರಿಣಾಮ ಬೀರುತ್ತದೆ.

    ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿ: ಏಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶ ಇದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಏಲಕ್ಕಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಮಲಬದ್ಧತೆ, ಆಮ್ಲೀಯತೆ, ಗ್ಯಾಸ್, ಹೊಟ್ಟೆ ಉಬ್ಬುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

    ರಕ್ತದೊತ್ತಡ ನಿಯಂತ್ರಣ: ಸಾಮಾನ್ಯ ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಏಲಕ್ಕಿ ಸಹಾಯ ಮಾಡುತ್ತದೆ. ಆಹಾರದಲ್ಲಿ ಏಲಕ್ಕಿಯನ್ನು ನಿಯಮಿತ ಬಳಕೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಏಲಕ್ಕಿಯಲ್ಲಿ ಉತ್ಕರ್ಷಣ ನಿರೋಧಕ ಅಧಿಕವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಬಾಯಿ ದುರ್ವಾಸನೆ ತಡೆ: ಏಲಕ್ಕಿ ತಿನ್ನುವುದರಿಂದ ದುರ್ವಾಸನೆ ನಿವಾರಿಸಲು ಹಾಗೂ ಹಲ್ಲಿನ ಆರೋಗ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಊಟವಾದ ನಂತರ ಪ್ರತಿನಿತ್ಯ ಒಂದು ಏಲಕ್ಕಿಯನ್ನು ತಿನ್ನುವುದರಿಂದ ನಿಮ್ಮ ಬಾಯಿಯಿಂದ ದುವಾರ್ಸನೆ ಬರದಂತೆ ತಡೆಗಟ್ಟುತ್ತದೆ. ಏಲಕ್ಕಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣವಿದ್ದು, ಇದರಿಂದಾಗಿ ಬೆಳ್ಳುಳ್ಳಿ ಹಾಗೂ ಈರುಳ್ಳಿಯ ವಾಸನೆಯನ್ನು ತೆಗೆಯಲು ಸಹಾಯ ಮಾಡುತ್ತದೆ.

    ಖಿನ್ನತೆಯನ್ನು ಕಡಿಮೆ ಮಾಡುತ್ತೆ: ಏಲಕ್ಕಿಯ ಪರಿಮಳಯುಕ್ತ ಗುಣಲಕ್ಷಣಗಳಿಂದಾಗಿ ಮಾನಸಿಕ ಒತ್ತಡ ಮತ್ತು ಖಿನ್ನತೆ ಕಡಿಮೆ ಮಾಡಲು ಹೆಚ್ಚು ಪ್ರಯೋಜನಾಕಾರಿಯಾಗಿದೆ. ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಅಥವಾ ಅದನ್ನು ನಿಮ್ಮ ಚಹಾಕ್ಕೆ ಸೇರಿಸಿ ಇದರ ರುಚಿ ಮತ್ತು ಪರಿಮಳವು ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ಸಹಾಯವಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

    ತೂಕ ಕಡಿಮೆ ಮಾಡಲು ಸಹಾಯ: ಏಲಕ್ಕಿಯು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಕಿಬ್ಬೊಟ್ಟೆಯಲ್ಲಿ ಉಬ್ಬುವಿಕೆಯನ್ನು ಕಡಿಮೆ ಮಾಡುತ್ತದೆ. ಕೊಬ್ಬು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದನ್ನು ಹೋಗಲಾಡಿಸಿ ತೂಕ ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

  • ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

    ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

    ಬೆಂಗಳೂರು: ಶಿವರಾತ್ರಿಗೆ ಶಿವ ಶಿವ ಅಂತಾ ಚಳಿ ಹೊರಟು ಹೋಗಿ, ಬೇಸಿಗೆ ಶುರುವಾಗುತ್ತೆ ಅಂತಾರೆ. ಈ ವರ್ಷದ ಬೇಸಿಗೆ ಆರಂಭವಾಗಿದ್ದು, ಜನರಿಗೆ ಇದ್ರ ಎಫೆಕ್ಟ್ ಜನರಿಗೆ ತಟ್ಟುತ್ತಿದೆ. ಈ ಹೊತ್ತಲ್ಲಿ ಜನರ ಹೆಲ್ತ್ ಸ್ವಲ್ಪ ಕೈ ಕೊಡ್ತಿದೆ. ಬೇಸಿಗೆಯಲ್ಲಿ ಆರೋಗ್ಯವನ್ನು ಹೇಗೆ ಕಾಪಾಡಬೇಕು ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

    ಸಿಲಿಕಾನ್ ಸಿಟಿಯಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತಲೇ ಇದೆ. ಮಾರ್ಚ್‍ನಿಂದ ಜೂನ್‍ವರೆಗೂ ಇರುವ ಬೇಸಿಗೆಯ ತೀವ್ರತೆಯಿಂದಾಗಿ ಅದೆಷ್ಟೋ ಜನರು ಆಸ್ಪತ್ರೆಗಳಿಗೂ ದಾಖಲಾಗುತ್ತಾರೆ. ಪ್ರಮುಖವಾಗಿ ಬೇಸಿಗೆಯಲ್ಲಿ ಯಾವ ರೀತಿಯ ಕಾಯಿಲೆಗಳು ಬರುತ್ತವೆ? ಅವುಗಳ ರೋಗಲಕ್ಷಣಗಳು ಏನು? ಯಾವ ರೀತಿ ಆರೋಗ್ಯವನ್ನು ಕಾಪಾಡಬೇಕು ಅಂತ ವೈದ್ಯರು ಒಂದಷ್ಟು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

    ಬೇಸಿಗೆಯಲ್ಲಿ 3 ಹಂತಗಳಲ್ಲಿ ಬಿಸಿಲಿಗೆ ಸಂಬಂಧಿಸಿದೆ ಕಾಯಿಲೆಗಳು ಬರುತ್ತೆ. Heat Exhaustion, Heat Cramps ಹಾಗೂ  ಊeಚಿಣ Heat Stroke 3 ಹಂತಗಳಲ್ಲಿ ಕಾಣಿಸಿಕೊಳ್ಳುತ್ತೆ. Heat Exhaustionನಿಂದಾಗಿ ದೇಹನದಲ್ಲಿನ ನೀರಿನ ಅಂಶ ಕ್ಷೀಣಿಸುತ್ತೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆದಾಗ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗಿ ಸುಸ್ತಾಗುತ್ತೆ. ನಂತರ 2ನೇ ಹಂತದಲ್ಲಿ Heat Cramps ನಿಂದಾಗಿ ದೇಹದ ಮಾಂಸಖಂಡಗಳು ಹಿಡಿದಂತಾಗುತ್ತೆ. ಹೊಟ್ಟೆಯ ಹಾಗೂ ಮಂಡಿಯ ಕೆಳಭಾಗದ ಕಾಲಿನಲ್ಲಿ ಹಿಡಿದಂತಾಗುತ್ತೆ. Heat Exhaustion, Heat Cramps ಆದಾಗಲೂ ನಿರ್ಲಕ್ಷ ವಹಿಸಿದರೆ 3ನೇ ಹಂತದಲ್ಲಿ Heat Stroke ಆಗುವಂತ ದಟ್ಟ ಸಾಧ್ಯತೆ ಇರುತ್ತೆ. ಇದರಿಂದಾಗಿ ಮೂತ್ರಪಿಂಡ, ಹೃದಯಕ್ಕೆ ಸಮಸ್ಯೆಯನ್ನು ನಾವೇ ತಂದುಕೊಂಡಂತಾಗುತ್ತೆ. ಇವೆಲ್ಲದರ ಜೊತೆಗೆ Loose Motion ಆಗೋದು, ಹಸಿವಾಗದೇ ಇರೋದು ಕೂಡ ಬೇಸಿಗೆಯ ಲಕ್ಷಣ ಎಂದು ವೈದ್ಯರು ಹೇಳುತ್ತಾರೆ. ಇದನ್ನೂ ಓದಿ: ಬೇಸಿಗೆಯ ಬೇಗೆಗೆ ಮಾಡಿ ತಂಪಾದ ಕಲ್ಲಂಗಡಿ ಸ್ಮೂತಿ

    ಬೇಸಿಗೆಯಲ್ಲಿ ಆರೋಗ್ಯವಂತರಾಗಿರಬೇಕು ಅಂದ್ರೆ ಒಂದಿಷ್ಟು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಅಂತಾರೆ ವೈದ್ಯರು. ಯಾವುದೇ ಕಾರಣಕ್ಕೂ ಹೆಚ್ಚಿನ ಕಾಲ ಮಧ್ಯಾಹ್ನದ ಬಿಸಿಲಿನಲ್ಲಿ ಹೊರ ಹೋಗಬಾರದು. ಆಗಾಗ ನೀರು ಕುಡಿಯುತ್ತಲೇ ಇರಬೇಕು. ಮೃದುವಾಗಿರೋ ತಿಳಿ ಬಣ್ಣದ ಗಾಳಿಯಾಡುವಂತಹ ಕಾಟನ್ ಬಟ್ಟೆ ಧರಿಸಬೇಕು. ರಸ್ತೆ ಬದಿ ಕತ್ತಿರಿಸಿ ಇಡಲಾಗಿರೋ ಹಣ್ಣುಗಳನ್ನು ಸೇವಿಸಬಾರದು. ಮಾಂಸಾಹಾರ ಹಾಗೂ ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು. ಇದನ್ನೂ ಓದಿ: ಬೇಸಿಗೆಯ ಬಿಸಿಲಿಗೆ ಚರ್ಮದ ಕಾಂತಿ ರಕ್ಷಣೆ ಮಾಡೋದು ಹೇಗೆ?

  • ಕೂದಲು ಉದುರುತ್ತಿದೆಯೇ?  ಹಾಗಿದ್ದರೆ ಈ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

    ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ಮನೆ ಮದ್ದುಗಳನ್ನು ಒಮ್ಮೆ ಟ್ರೈ ಮಾಡಿ

    ತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಿನವರಿಗಿದೆ. ಜೀವನಶೈಲಿ, ಪೋಷಕಾಂಶಗಳ ಕೊರತೆ, ಅಲರ್ಜಿ, ಹಾರ್ಮೋನ್ ಅಸಮತೋಲನ ಮತ್ತು ಅನುವಂಶೀಯವಾಗಿಯೂ ಬರಬಹುದು. ಇದಕ್ಕೆ ಕೆಲವು ಮನೆ ಮದ್ದುಗಳನ್ನು ಬಳಸಬಹುದಾಗಿದೆ.

    ಕೂದಲು ಉದುರುವ ಸಮಸ್ಯೆಗೆ ಕಾರಣ:
    * ಅತ್ಯಧಿಕ ಖಾರ, ಉಪ್ಪು, ಉಳಿ ಆಹಾರ ಸೇವನೆ
    * ಕಾಫಿ ಕುಡಿಯುವ ಚಟ
    * ಮದ್ಯಪಾನ
    * ಅತೀಹೆಚ್ಚು ಆಹಾರ ಸೇವನೆ
    * ಧೂಮಪಾನ
    * ಎಣ್ಣೆಯಲ್ಲಿ ಕರಿದ ಪದಾರ್ಥಗಳು
    * ಅಸಿಡಿಟಿ ಆಹಾರಗಳು ಇವುಗಳು ಪಿತ್ತವನ್ನು ಹೆಚ್ಚುಮಾಡುತ್ತದೆ ಇದರಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ.

    ಮನೆಮದ್ದುಗಳಾವವು:
    * ನಿಂಬೆ ರಸ, ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆಯ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ಇದರಿಂದ ತುರಿಕೆ, ತಲೆಹೊಟ್ಟು ಸಮಸ್ಯೆಗಳನ್ನು ನಿವಾರಿಸಬಹುದು.

    * ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಉಗುರು ಬೆಚ್ಚಗೆ ಇರುವಾಗ ಮೆಲ್ಲನೆ ಕೈಯಲ್ಲಿ ತೆಗೆದುಕೊಂಡು ತಲೆಕೂದಲಿನ ಬುಡಕ್ಕೆ ಹಚ್ಚಿ ಮೆಲ್ಲನೆ ಮಸಾಜ್ ಮಾಡಿ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

    * ಆಕರ್ಷಕ ಕೂದಲು ಬೇಕೆಂದರೆ ನಿಮ್ಮ ಊಟದಲ್ಲಿ  ಹಸಿರು ಸೋಪ್ಪು, ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡಿ.  ಇದನ್ನೂ ಓದಿ: ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    * ವಿಟಮಿನ್‍ಗಳಿರುವ ಆಹಾರವನ್ನು ಸೇವಿಸಿ. ಇದನ್ನೂ ಓದಿ: ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

    * ಈರುಳ್ಳಿಯ ರಸ ತೆಗೆದು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಹೊಟ್ಟು ನಿಧಾನವಾಗಿ ನಿವಾರಣೆಯಾಗುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಅಲೋವೆರಾ ಎಲೆಗಳಿಂದ ತಲೆ  ಚೆನ್ನಾಗಿ ಉಜ್ಜಿದ ನಂತರ 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಸಾಮಾನ್ಯ ತಂಪಾದ ನೀರಿನಿಂದ ಕೂದಲನ್ನು ಸ್ವಚ್ಛಗೊಳಿಸಿ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

  • ನಿಮ್ಮ ಕೂದಲ ಸೌಂದರ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ

    ನಿಮ್ಮ ಕೂದಲ ಸೌಂದರ್ಯ ಕಾಪಾಡಿಕೊಳ್ಳಲು ಈ ರೀತಿ ಮಾಡಿ

    ಕೂದಲು ಸೌಂದರ್ಯದ ಸಂಕೇತ. ಆದರೆ ಇಂದಿನ ಯುಗದಲ್ಲಿ ಕೂದಲನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಒಂದು ಸವಾಲಾಗಿದೆ. ಇಂದಿನ ಯುಗದಲ್ಲಿ ಮಾಲಿನ್ಯ, ಟೆನ್ಶನ್, ನಿಯಮಿತವಾಗಿ ಆಹಾರ ಸೇವಿಸದೇ ಇರುವುದು ಈ ಎಲ್ಲಾ ಕಾರಣದಿಂದಾಗಿ ನಿಮ್ಮ ಕೂದಲು ಉದುರುವುದು ಹೆಚ್ಚಾಗಬಹುದು. ನಿಮ್ಮ ಕೂದಲಿನ ಅಂದಕ್ಕೆ ಒಂದಿಷ್ಟು ಟಿಪ್ಸ್‍ಗಳನ್ನು ನೀಡುತ್ತೇವೆ. ಇದನ್ನು ನಿಯಮಿತವಾಗಿ ಪಾಲಿಸಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ.

    ಆರೋಗ್ಯಕರ ಆಹಾರವನ್ನು ಸೇವಿಸಿ:
    ಪ್ರತಿನಿತ್ಯ ಆರೋಗ್ಯಕರ ಆಹಾರವನ್ನು ಸೇವಿಸಿಸುವುದರಿಂದ ಪೌಷ್ಟಿಕಾಂಶದ ಕೊರತೆಗಳು, ಹಾರ್ಮೋನ್‍ಗಳ ಅಸಮತೋಲನ, ಥೈರಾಯ್ಡ್, ರಕ್ತ ಹೀನತೆ ಮತ್ತು ಇತರ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ವಿಟಮಿನ್-ಸಮೃದ್ಧ ಆಹಾರವು ಪೌಷ್ಟಿಕಾಂಶದ ಅಂತರವನ್ನು ತುಂಬಲು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ನೀವು ಆರೋಗ್ಯಕರ ಕೂದಲನ್ನು ಹೊಂದಲು ಸಹಾಯವಾಗುತ್ತದೆ. ನಿಮ್ಮ ದೇಹದ ಆರೋಗ್ಯವನ್ನು ನೀವು ನಿರ್ಲಕ್ಷಿಸುವುದರಿಂದ ನಿಮ್ಮ ಕೂದಲು ಉದುರುವುದು ಹೆಚ್ಚುತ್ತದೆ. ಇದರಿಂದಾಗಿ ಸಾಧ್ಯವಾದಷ್ಟು ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ಇದನ್ನೂ ಓದಿ: ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    ಅಂದಗೊಳಿಸುವತ್ತ ಗಮನ ಕೊಡಿ:
    ನಿಯಮಿತವಾಗಿ ಹೇರ್ ಕಟ್ ಮಾಡಿಸಿ. ಜೊತೆಗೆ ಸ್ಪ್ಲಿಟ್ ಹೇರ್‌ಗಳನ್ನು ತೆಗೆಯಬೇಕು. ನಿಮ್ಮ ಕೂದಲಿಗೆ ಅಗಲವಾದ ಹಲ್ಲಿನ ಬಾಚಣಿಗೆಗಳನ್ನು ಬಳಸಿ. ಸ್ಕಾರ್ಫ್, ಕ್ಯಾಪ್‍ಗಳು ಅಥವಾ ಛತ್ರಿಗಳಿಂದ ನಿಮ್ಮ ಕೂದಲನ್ನು ಸೂರ್ಯನಿಂದ ರಕ್ಷಿಸಿ. ನಿಮ್ಮ ಕೂದಲನ್ನು ಸೌಮ್ಯವಾದ ಶ್ಯಾಂಪೂವಿನಿಂದ ತೊಳೆಯಬೇಕು. ತಲೆ ಸ್ನಾನ ಮಾಡುವಾಗ ತುಂಬಾ ಬಿಸಿಯಾದ ನೀರನ್ನು ಬಳಸಬಾರದು. ಜೊತೆಗೆ ನೈಸರ್ಗಿಕವಾಗಿ ಮತ್ತು ನಿಧಾನವಾಗಿ ಒಣಗಿಸಬೇಕು. ಇದನ್ನೂ ಓದಿ: ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

    ಕೂದಲ ಸಂರಕ್ಷಣೆ ಸಾಂಪ್ರದಾಯಿಕ ಕೆಲವು ಟಿಪ್ಸ್:
    ತಾಯಂದಿರು ಮತ್ತು ಅಜ್ಜಿಯರು ಕೂದಲಿನ ಸಂರಕ್ಷಣೆಗೆ ಬಳಸುತ್ತಿದ್ದ ಕೆಲ ಟಿಪ್ಸ್‍ಗಳನ್ನು ನೀವೂ ಅಳವಡಿಸಿಕೊಳ್ಳಿ. ಪ್ರತಿನಿತ್ಯ ನಿಮ್ಮ ಕೂದಲಿಗೆ ಎಣ್ಣೆಯ ಮಸಾಜ್ ಮಾಡುವುದು, ವಾರಕ್ಕೊಮ್ಮೆ ಬೇವು ಅಥವಾ ಕರಿಬೇವಿನ ಎಲೆಗಳ ಹೇರ್ ಮಾಸ್ಕ್‍ಗಳನ್ನು ಬಳಸಬೇಕು. ಆವಕಾಡೊ, ಮೊಸರು, ಬಾಳೆಹಣ್ಣುಗಳನ್ನು ಬಳಸುವುದು. ಮೆಂತೆ, ಜೇನುತುಪ್ಪ, ಶಿಗೆಕಾಯಿ, ಮೊಟ್ಟೆ, ನೆಲ್ಲಿ ಕಾಯಿಗಳನ್ನು ತಲೆಗೆ ಬಳಸುವುದರಿಂದ ನಿಮ್ಮ ಕೂದಲಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತೀರಿ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    ನಿಮ್ಮ ಕೂದಲಿಗೆ ಸರಿಹೊಂದುವ ಶ್ಯಾಂಪು, ಕಂಡಿಷನರ್ ಬಳಸಿ:
    ಕೂದಲಿಗೆ ನೈಸರ್ಗಿಕ ಸೌಂದರ್ಯವನ್ನು ಕಳೆದುಕೊಳ್ಳದ ಶ್ಯಾಂಪುಗಳು ಮತ್ತು ಕಂಡಿಷನರ್‍ಗಳನ್ನು ಆರಿಸಿ. ನಿಮ್ಮ ಕೂದಲನ್ನು ತೊಳೆಯುವಾಗ ಮತ್ತು ಕಂಡೀಷನಿಂಗ್ ಬಳಸುವಾಗ ಉತ್ತಮ ಉತ್ಪನ್ನಗಳಿಗಾಗಿ ನಿಮ್ಮ ಕೇಶ ವಿನ್ಯಾಸಕರನ್ನು ಸಂಪರ್ಕಿಸಿ ಮತ್ತು ಅವುಗಳನ್ನು ಮಿತವಾಗಿ ಬಳಸಿ. ನಿಮ್ಮ ಕೂದಲಿಗೆ ಹೊಂದಾಣಿಕೆಯಾಗದ ಶ್ಯಾಪೂ ಮತ್ತು ಕಂಡೀಶನರ್‌ಗಳನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ ಮತ್ತು ಕೂದಲಿನ ಹೊಳಪನ್ನು ಮಂದಗೊಳಿಸುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    ನಿಮ್ಮ ಒತ್ತಡವನ್ನು ನಿರ್ವಹಿಸಿ:
    ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವೆಂದರೆ ಒತ್ತಡವಾಗಿದೆ. ಇದರಿಂದಾಗಿ ಧ್ಯಾನ, ವ್ಯಾಯಾಮ ಮತ್ತು ಪ್ರಾಣಾಯಾಮಗಳನ್ನು ನಿಯಮಿತವಾಗಿ ಮಾಡಿ. ನೀವು ಸಂತೋಷದಿಂದ ಇದ್ದರೆ ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ನಿಯಮಿತ ವ್ಯಾಯಾಮವು ಸುಧಾರಿತ ರಕ್ತ ಪರಿಚಲನೆ, ಸುಧಾರಿತ ಮನಸ್ಥಿತಿ, ಹೆಚ್ಚಿದ ಶಕ್ತಿ ಮತ್ತು ಸುಧಾರಿತ ನಿದ್ರೆ ಸೇರಿದಂತೆ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಈ ಎಲ್ಲಾ ಅಂಶಗಳು ನಿಮ್ಮ ಕೂದಲಿನ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

  • XE ರೂಪಾಂತರಿ ಮುಂಬೈನಲ್ಲಿ ಪತ್ತೆಯಾಗಿಲ್ಲ: ಮಹಾರಾಷ್ಟ್ರ ಸ್ಪಷ್ಟನೆ

    ಮುಂಬೈ: ಕೊರೊನಾ ಸೋಂಕಿನ ಹೊಸ ರೂಪಾಂತರಿಯಾಗಿರುವ ಎಕ್ಸ್‍ಇ ತಳಿ ಪತ್ತೆಯಾಗಿದೆ ಎಂದು ಬೃಹನ್ ಮುಂಬೈ ಮಹಾನಗರಪಾಲಿಕೆ (BMC) ವರದಿ ಮಾಡಿದ ಒಂದು ದಿನದ ಬಳಿಕ, ಎಕ್ಸ್‍ಇ ವೇರಿಯಂಟ್ ಪತ್ತೆಯಾಗಿಲ್ಲವೆಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟಪಡಿಸಿದ್ದಾರೆ.

    ಆರೋಗ್ಯ ಇಲಾಖೆಯ ಹೊಸ ತಳಿ ಪತ್ತೆಯಾಗಿರುವ ಬಗ್ಗೆ ಯಾವುದೇ ದೃಢೀಕರಣವನ್ನು ಸ್ವೀಕರಿಸಿಲ್ಲ. ಆದ್ದರಿಂದ ಎಕ್ಸ್‍ಇ ಪತ್ತೆಯಾಗಿರುವುದು ಕಂಡುಬಂದಿಲ್ಲ. ಮಾಹಿತಿ ಪ್ರಕಾರ ಎಕ್ಸ್‍ಇ ತಳಿಯು ಕೊರೊನಾ ರೂಪಾಂತರಿ ಓಮಿಕ್ರಾನ್‍ಗಿಂತಲೂ ಶೇ.10 ರಷ್ಟು ಹೆಚ್ಚು ಸೋಂಕನ್ನು ಹರಡುತ್ತದೆ. ಹಾಗಾಗಿ ನಾವು ಎನ್‍ಐಬಿ ಯಿಂದ ಮಹಾರಾಷ್ಟ್ರ ವರದಿ ಪಡೆದ ನಂತರ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ರಾಜೇಶ್ ಟೋಪೆ ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಕಾಲಿಟ್ಟ ಹೊಸ ರೂಪಾಂತರಿ ʼXEʼ – ಮುಂಬೈನಲ್ಲಿ ಮೊದಲ ಪ್ರಕರಣ ಪತ್ತೆ

    corona

    ವೈಜ್ಞಾನಿಕ ಪುರಾವೆ ಇಲ್ಲವೆಂದ ಕೇಂದ್ರ: ಮುಂಬೈನಲ್ಲಿ XE ಕೊರೊನಾ ತಳಿ ಪತ್ತೆಯಾಗಿದೆ ಎಂದು ಹೇಳಿದ್ದ ವರದಿಯನ್ನು ಕೇಂದ್ರ ಸರ್ಕಾರದ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಎಕ್ಸ್‍ಇ ತಳಿ ಪತ್ತೆಯಾಗಿರುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದ್ದಾರೆ. ಭಾರತದ ಸಾರ್ಸ್ ಕೋವ್-2 ಜೆನೆಟಿಕ್ಸ್ ಕಾನ್ಸೊರ್ಟಿಯಮ್‍ನ (INSACOG) ಜಿನೋಮ್ ಸೀಕ್ವೆನ್ಸಿಂಗ್ ತಜ್ಞರು ವಿವರವಾಗಿ ಪರಿಶೀಲನೆ ನಡೆಸಿದ್ದು, ಮಾದರಿಯಲ್ಲಿ ಪತ್ತೆಯಾಗಿರುವ ತಳಿಯ ಜಿನೋಮ್ ರಚನೆಗಳಿಗೂ ಎಕ್ಸ್‍ಇ ತಳಿಯ ರಚನೆಗಳೂ ಹೋಲಿಕೆಯಾಗಿಲ್ಲ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮತ್ತೆ ಶಾಕ್‌ ಕೊಟ್ಟ ಕೋವಿಡ್-‌ ಇಂಗ್ಲೆಂಡ್‌ನಲ್ಲಿ ʻXEʼ ಹೊಸ ರೂಪಾಂತರಿ ಪತ್ತೆ

    XE ವರ್ಗೀಕರಿಸುವುದು ಹೇಗೆ?: ತಳಿಯ ಗುರುತಿಸುವಿಕೆಯಲ್ಲಿ ಬಳಕೆಯಾಗಿರುವ ಸ್ವಯಂ ಚಾಲಿತ ಸಾಫ್ಟ್‍ವೇರ್ ವ್ಯವಸ್ಥೆಯಲ್ಲಿನ ಪ್ರಮಾದದಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ ಎಂದು ಐಎನ್‍ಎಸ್‍ಎಸಿಒಜಿ ಮೂಲಗಳು ತಿಳಿಸಿವೆ. ನಿರ್ದಿಷ್ಟ ಡೆಲ್ಟಾ ಮಾದರಿಗಳ ಜೊತೆಗೆ ಓಮಿಕ್ರಾನ್ ತಳಿ ಇದ್ದರೆ, ಸಾಫ್ಟ್‍ವೇರ್ ಅದನ್ನು XE ಎಂದು ವರ್ಗೀಕರಿಸುತ್ತಿದೆ. ಸ್ವಯಂ ಚಾಲಿತ ವಿಶ್ಲೇಷಣೆಯಲ್ಲಿ ಎದುರಾಗಿರುವ ಈ ದೋಷವನ್ನು ಪರಿಶೀಲಿಸಲು ತಜ್ಞರು ನೇರವಾಗಿ ವಿಶ್ಲೇಷಣೆ ನಡೆಸುವುದು ಅಗತ್ಯವಾಗಿದೆ’ ಎಂದು ಮೂಲಗಳು ಹೇಳಿವೆ.

    covid

    ಹಿನ್ನೆಲೆ ಏನು?: ಹಿಂದಿ ಸಿನಿಮಾ ಕ್ಷೇತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ 50 ವರ್ಷ ವಯಸ್ಸಿನ ಮಹಿಳೆಯಲ್ಲಿ `XE’ ತಳಿ ಸೋಂಕು ಪತ್ತೆಯಾದ ಬಗ್ಗೆ ವರದಿ ಪ್ರಕಟವಾಗಿತ್ತು. ಸೋಂಕಿನಿಂದ ಗುಣಮುಖರಾಗಿರುವ ಅವರು ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಸಾಗಿದ್ದರು. ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ವಿಶ್ಲೇಷಣೆಗಾಗಿ ರೋಗಿಯಿಂದ ಸಂಗ್ರಹಿಸಲಾಗಿರುವ ಮಾದರಿಯನ್ನು ಕಳುಹಿಸಲಾಗಿತ್ತು. ಪ್ರಾಥಮಿಕ ವಿಶ್ಲೇಷಣೆಯಲ್ಲಿ `XE’ ತಳಿ ಇರುವುದು ಪತ್ತೆಯಾಗಿತ್ತು.

  • ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    ನಾಲಿಗೆಗೆ ಕಹಿ ನೀಡುವ ಬೇವು ಆರೋಗ್ಯಕ್ಕೆ ಒಳ್ಳೆಯದು

    ಬೇವಿನ ಎಲೆ ಬಾಯಿಯನ್ನು ಕಹಿಯಾಗಿಸಿದ್ದರೂ ನಿಮ್ಮ ಕೇಶ ಸೌಂದರ್ಯಕ್ಕೆ ಸಿಹಿಯಾಗಿದೆ. ಕಹಿಯ ಅನುಭವ ಕಡಿಮೆ ಮಾಡಲು ಬೇವಿನ ಎಲೆಗಳ ಹಲವು ಕಾಯಿಲೆಗಳಿಗೆ ಮದ್ದಾಗಿದೆ.

    * ಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ.

    * ತೆಂಗಿನ ಎಣ್ಣೆಗೆ ಸ್ವಲ್ಪ ಬೇವಿನ ಎಲೆಗಳನ್ನು ಸೇರಿಸಿ ಕುದಿಸಿ. ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

    * ಬೇವಿನ ಎಲೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ, ಚರ್ಮ ಆರೋಗ್ಯ, ಕೂದಲಿಗೆ ಆರೋಗ್ಯ ಕಾಪಾಡುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    * ರಕ್ತವನ್ನು ಶುದ್ಧೀಕರಿಸಲು ಬೇವಿನ ಎಲೆ ಸಹಾಯ ಮಾಡುತ್ತದೆ.

    * ಬೇವಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹವು ಅನೇಕ ರೋಗಲಕ್ಷಣಗಳನ್ನು ತಡೆಯುವ ಶಕ್ತಿ ಒದಗಿಸುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಬೇವಿನ ಜ್ಯೂಸ್ ಸೇವನೆಯಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    * ಜ್ವರ, ಶೀತ, ನೆಗಡಿ ಇದ್ದಲ್ಲಿ, ಬೇವಿನ ಎಲೆಯ ಕಶಾಯ ಸೇವಿಸುವುದು ಉತ್ತಮ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ, ಹುಳುಕು ಹಲ್ಲು ಇರುವುದಿಲ್ಲ. ನಿಮ್ಮ ಹಲ್ಲು ಆರೋಗ್ಯಕರವಾಗಿರುತ್ತದೆ.

  • ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

    ಸರ್ವ ರೋಗಕ್ಕೂ ದಾಸವಾಳದಲ್ಲಿದೆ ಮದ್ದು

    ಬಾಯಾರಿಕೆ ಕಡಿಮೆ ಮಾಡಲು ತಂಪು ಪಾನೀಯ ಕುಡಿಯಬೇಕು ಎನಿಸಿದಾಗ ಕೆಮಿಕಲ್ ಮಿಶ್ರಿತ ಕೂಲ್ ಡ್ರಿಂಕ್ಸ್ ಕುಡಿಯುವ ಬದಲು ನೈಸರ್ಗಿಕ ಜ್ಯೂಸ್ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.

    * ಶೀತ, ಕೆಮ್ಮು ಹಾಗೂ ತಲೆನೋವು ಕಾಣಿಸಿಕೊಂಡಾಗ ದಾಸವಾಳ ಹೂವನ್ನು ತಿಂದರೆ ಅಥವಾ ಟೀ ಮಾಡಿ ಕುಡಿದರೆ ತಲೆ ನೋವು ಶಮನವಾಗುತ್ತದೆ.


    * ದಾಸವಾಳ ಹೂವಿನ ಜ್ಯೂಸ್ ಮಾಡಿ ಕುಡಿಯುವುದರಿಂದ ಮೊಡವೆ ಕಡಿಮೆಯಾಗುತ್ತೆ.
    * ದೇಹದಲ್ಲಿ ನೀರಿನ ಅಂಶ ಕೊರತೆ ಇರುವವರು ಹಾಗೂ ಡ್ರೈ ಸ್ಕಿನ್ ಇರುವವರು ದಾಸವಾಳ ಹೂವಿನ ಜ್ಯೂಸ್ ಕುಡಿಯುವುದು ಉತ್ತಮ.

    * ದಿನ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು. ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.

    * ದೇಹದಲ್ಲಿ ನೀರಿನಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ. ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು, ಡ್ರೈ ಸ್ಕಿನ್ ಇರುವವರು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು.

    * ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗಲು ದಾಸವಾಳವನ್ನು ತಿನ್ನುವುದು ಒಳ್ಳೆಯದು.

    * ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

    * ಈ ಹೂವಿನಿಂದ ತೆಗೆದ ರಸ ಕೂದಲಿಗೆ ಹೊಳಪು ನೀಡಿ ಉತ್ತಮ ಕಂಡೀಶನರ್‌ನಂತೆ ವರ್ತಿಸುತ್ತದೆ. ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ.

    * ದಾಸವಾಳ ಎಲೆಯ ಲೋಳೆ ತಲೆಗೆ ಬಳಸುವುದರಿಂದ ಕೂದಲು ಫಳಫಳ ಹೊಳೆಯುತ್ತದೆ.

    * ಬಾಡಿ ಹೀಟ್ ಆಗಿದ್ದರೆ ಅದನ್ನು ಕಮ್ಮಿ ಮಾಡಲು ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಒಳ್ಳೆಯದು.

    * ದಾಸವಾಳದಲ್ಲಿ ತಂಪು ನೀಡುವ ಅಂಶ ಹೆಚ್ಚಿರುವುದರಿಂದ, ಅದು ಕಣ್ಣುಗಳನ್ನು ಆಯಾಸದಿಂದ ಮುಕ್ತವಾಗಿರಿಸಿ, ತಂಪನ್ನು ನೀಡುತ್ತದೆ.

  • ನಾಲಿಗೆಗೆ ರುಚಿ, ಆರೋಗ್ಯಕ್ಕೂ ಒಳ್ಳೆಯದು ಒಣ ಖರ್ಜೂರ

    ನಾಲಿಗೆಗೆ ರುಚಿ, ಆರೋಗ್ಯಕ್ಕೂ ಒಳ್ಳೆಯದು ಒಣ ಖರ್ಜೂರ

    ಇಂದು ನಾವು ಸೇವಿಸುವ ಆಹಾರ, ಆರೋಗ್ಯಕ್ಕೆ ಒಳ್ಳೆಯದಾ ಎನ್ನುವುದನ್ನು ನಾವು ಹೆಚ್ಚಿನವರು ಗಮನಿಸುವಿದಿಲ್ಲ. ನಾಲಿಗೆಗೆ ರುಚಿ ನೀಡುತ್ತಿದ್ದರೆ ನಮಗೆ ಅಷ್ಟೆ ಸಾಕು ಎನ್ನವ ಮನೋಭಾವನೆ ಹೆಚ್ಚಿನವರಿಗೆ ಇರುತ್ತದೆ. ನಮ್ಮ ಆಹಾರ ಪದ್ಧತಿಯಲ್ಲಿ ಕೇವಲ ಸೊಪ್ಪು-ತರಕಾರಿಗಳು, ಹಣ್ಣು-ಹಂಪಲು ಇಷ್ಟಿದ್ದರೆ ಸಾಲದು. ಆಗಾಗ ಡ್ರೈ ಫ್ರೂಟ್ಸ್‌ಗಳನ್ನು ಕೂಡ ಮಿತವಾಗಿ ಸೇವನೆ ಮಾಡಬೇಕು. ಆರೋಗ್ಯಕರವಾದ ಅಂಶವನ್ನು ಒಳಗೊಂಡಿರುವ ಒಣ ಖರ್ಜೂರಗಳನ್ನು ದಿನಕ್ಕೆ ಒಂದೆರೆಡು ಬಾರಿಯಾದರೂ ಸೇವಿಸಲು ಮರೆಯದಿರಿ.

    * ಖರ್ಜೂರಗಳಲ್ಲಿ ನಾರಿನ ಅಂಶದ ಪ್ರಮಾಣ ಯಥೇಚ್ಛವಾಗಿ ಕಂಡುಬರುತ್ತದೆ. ಜೀರ್ಣಕ್ರೀಯೆಗೆ ಸಹಾಯಕಾರಿಯಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ

    * ವಿಟಮಿನ್ ಅಂಶಗಳು, ಖನಿಜಾಂಶಗಳು, ಕಬ್ಬಿಣದ ಅಂಶ, ಪೊಟ್ಯಾಶಿಯಂ ಅಂಶ, ಮೆಗ್ನೀಷಿಯಂ ಅಂಶ ಮತ್ತು ಕ್ಯಾಲ್ಸಿಯಂ ಅಂಶದ ಪ್ರಮಾಣ ಕೂಡ ಇದರಲ್ಲಿ ತುಂಬಾ ಹೇರಳವಾಗಿ ಕಂಡು ಬರುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ

    * ಮೂಳೆಗಳು, ಹಲ್ಲುಗಳ ಆರೋಗ್ಯ ಹೆಚ್ಚು ಸದೃಢತೆಯಾಗಿರಲು ಬೇಕಾಗಿರುವ ಕ್ಯಾಲ್ಸಿಯಂ ಅಂಶವನ್ನು ಖರ್ಜೂರ ಒಳಗೊಂಡಿದೆ.

    * ಮಕ್ಕಳ ಬೆಳವಣಿಗೆಯ ಹಂತದಲ್ಲಿ ದೇಹದ ಮೂಳೆಗಳ ಅಭಿವೃದ್ಧಿಯಲ್ಲಿ ಇದರ ಪಾತ್ರ ಬಹಳ ದೊಡ್ಡದಾಗಿರುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು

    * ಒಣ ಖರ್ಜೂರಗಳಲ್ಲಿ ಕೊಬ್ಬಿನ ಅಂಶ ತುಂಬಾನೇ ಕಡಿಮೆ ಇರುವುದರಿಂದ, ದೇಹದ ರಕ್ತದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾದಂತೆ ನೋಡಿಕೊಂಡು, ಹೃದಯ ಆರೋಗ್ಯ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು

    * ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ ಅಂಶ ಇರುವ ಕಾರಣದಿಂದ, ದೇಹದ ರಕ್ತಸಂಚಾರದಲ್ಲಿ ಏರು ಪೇರಾಗದಂತೆ ನೋಡಿಕೊಂಡು, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು