Tag: health

  • ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಕರಿಬೇವಿನಲ್ಲಿದೆ ಪರಿಹಾರ

    ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಕರಿಬೇವಿನಲ್ಲಿದೆ ಪರಿಹಾರ

    ರಿಬೇವು ಎಂದಾಕ್ಷಣ ಒಗ್ಗರಣೆಯ ನೆನಪಾಗುತ್ತದೆ. ಇದನ್ನು ಒಗ್ಗರಣೆ ಸೊಪ್ಪು ಎಂದು ಕೂಡ ಕರೆಯುತ್ತಾರೆ. ಕರಿಬೇವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಉಪಯೋಗಿಸದಿದ್ದರೆ ರುಚಿಯೇ ಬರುವುದಿಲ್ಲ. ಸಾಂಬಾರಿಗೆ ಒಗ್ಗರಣೆ ಹಾಕಲು, ಬಜೆ ಮಾಡಲು, ಚಟ್ನಿ ಮಾಡಲು, ಪಲ್ಯ ಮಾಡುವಾಗ ಇದರ ಬಳಕೆ ಹೆಚ್ಚು. ಕರಿಬೇವು ಇಲ್ಲದ ಅಡುಗೆ ರುಚಿಹೀನ ಎನ್ನಬಹುದು. ಈ ಕರಿಬೇವು ಅಡುಗೆಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಸೌಂದರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಅಷ್ಟೆ ಅಲ್ಲದೆ ಕರಿಬೇವಿನಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಸಿ, ಬಿ, ಎ ಪೋಷಕಾಂಶಗಳು ಇದ್ದು ಔಷಧೀಯ ಗುಣವನ್ನು ಹೊಂದಿದೆ.

    ಬಿಳಿ ಕೂದಲು ಕಡಿಮೆ: ಬಿಳಿ ಕೂದಲ ಸಮಸ್ಯೆಯನ್ನು ಕರಿಬೇವು ದೂರ ಮಾಡುತ್ತದೆ. ದೇಹದಲ್ಲಿ ಪೋಷಕಾಂಶದ ಕೊರತೆಯಾದಾಗ ಮಕ್ಕಳಿಗೆ ಕೂದಲು ಬೇಗ ಬಿಳಿಯಾಗುತ್ತದೆ. ಇಂತಹ ಸಮಸ್ಯೆಗೆ ಕರಿಬೇವು ತುಂಬಾ ಸಹಕಾರಿಯಾಗಿದೆ. ಹಾಗೂ ಕೂದಲ ಬೆಳವಣಿಗೆಗೂ ಉಪಯುಕ್ತವಾಗಿದೆ. ಕರಿಬೇವಿನ ಎಲೆಗಳನ್ನು ಒಣಗಿಸಿ, ಅದನ್ನು ಕೊಬ್ಬರಿ ಎಣ್ಣೆಯಲ್ಲಿ, ಎಣ್ಣೆ ಹಸಿರು ಬಣ್ಣಕ್ಕೆ ಬರುವವರೆಗೂ ಕುದಿಸಬೇಕು. ನಂತರ ತಣಿಸಿ ಕೂದಲಿಗೆ ಪ್ರತಿ ವಾರಕೊಮ್ಮೆ ಹಚ್ಚುವುದರಿಂದ ಕೂದಲು ಬಿಳಿಯಾಗುವುದನ್ನು ತಡೆಯಬಹುದು.

    ಎಸಿಡಿಟಿ ಕಡಿಮೆ: ಕರಿಬೇವಿನ ಮರದ ತೊಗಟೆಯನ್ನು ಒಣಗಿಸಿ, ಪುಡಿ ಮಾಡಿಕೊಂಡು, ಒಂದು ಚಮಚ ಆ ಪುಡಿಯನ್ನು ನೀರಲ್ಲಿ ಬೆರಸಿ ಸೇವಿಸದರೆ ಎಸಿಡಿಟಿ ಕಡಿಮೆಯಾಗುತ್ತದೆ. ಕರಿಬೇವಿಗೆ ಸಕ್ಕರೆ ಮತ್ತು ನಿಂಬೆ ರಸವನ್ನು ಸೇರಿಸಿ ಕಡಿಯುವುದರಿಂದ ಎಸಿಡಿಟಿ ಕಡಿಮೆ ಆಗುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ

    ಬೇಧಿ, ಆಮಶಂಕೆ ನಿವಾರಣೆ: ಎಳೆಯದಾದ ಕರಿಬೇವಿನ ಎಲೆಯನ್ನು ಜೇನು ತುಪ್ಪದೊಂದಿಗೆ ತಿನ್ನುವುದು, ಅಥವಾ ಕರಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮಜ್ಜಿಗೆಯೊಂದಿಗೆ ಸ್ವಲ್ಪ ಶುಂಠಿ ಸೇರಿಸಿ ಕುಡಿಯುವುದರಿಂದ ಬೇಧಿ, ಆಮಶಂಕೆಯನ್ನು ನಿವಾರಿಸಬಹುದು.

    ಬೊಜ್ಜು ಕರಗಿಸಲು ಕರಿಬೇವು: ಕೆಲವರಿಗೆ ದೇಹದ ತೂಕ ಕಡಿಮೆ ಮಾಡುವುದು ಹೇಗೆ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಕರಿಬೇವು ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಮೂಲಕ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ 8 ರಿಂದ 10 ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನುವುದರಿಂದ ದೇಹದ ತೂಕ ಕಡಿಮೆ ಮಾಡಬಹುದು. ಇದನ್ನೂ ಓದಿ: ನೋಡಲು ಪುಟ್ಟದಾಗಿರುವ ನೆಲನೆಲ್ಲಿಯಿಂದ ಬೆಟ್ಟದಷ್ಟು ಪ್ರಯೋಜನ

    ಕಾಮಾಲೆ ರೋಗಕ್ಕೆ ಕರಿಬೇವು ಮದ್ದು:  ಕರಿಬೇವು ಕಾಮಾಲೆ ರೋಗಕ್ಕೆ ರಾಮಮದ್ದು ಆಗಿದೆ. 10 ರಿಂದ 12 ಕರಿಬೇವಿನ ಎಲೆಗಳನ್ನ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಏಕೆಂದರೆ ಎಲೆಗಳ ಮೇಲೆ ಸಣ್ಣ ಪುಟ್ಟ ಕಶ್ಮಲಗಳು ಅಥವಾ ಹುಳು ಹಪ್ಪಟೆಗಳು ಹರಿದಿರುವ ಸಾಧ್ಯತೆ ಇರುತ್ತದೆ. ನಂತರ ಎಲೆಗಳನ್ನು ಅರೆದು ಆ ಮಿಶ್ರಣವನ್ನು ಸುಮಾರು 60 ರಿಂದ 100 ಮಿ.ಲೀ ಎಳೆನೀರಿನೊಂದಿಗೆ ಕುಡಿಯುವುದರಿಂದ ಕಾಮಾಲೆ ರೋಗವನ್ನು ಹೋಗಲಾಡಿಸಬಹುದು.

    ರಕ್ತಹೀನತೆ ನಿವಾರಣೆ: 1/2 ಚಮಚ ಕರಿಬೇವು ಸೊಪ್ಪಿನ ಪುಡಿಯನ್ನು, ಜೇನು ತುಪ್ಪದ ಜೊತೆ ಸಮ ಪ್ರಮಾಣದಲ್ಲಿ ಬೆರಸಿ ಸೇವಿಸುವುದರಿಂದ ಅದರಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ. ಕರಿಬೇವು ಅನೇಕ ರೋಗಗಳಿಗೆ ಸಹಕಾರಿಯಾಗಿದೆ. ಕರಿಬೇವಿನ ಕಷಾಯ ಕುಡಿಯುವುದರಿಂದ ದೇಹದಲ್ಲಿ ಉಷ್ಣತೆ ಕಡಿಮೆ ಮಾಡುವುದರ ಮೂಲಕ ಜ್ವರವನ್ನು ಕಡಿಮೆಮಾಡಬಹುದು. ಮತ್ತು ಕರಿಬೇವು ಮೂಗು ಕಟ್ಟುವುದು, ಶ್ವಾಸಕೋಶದ ಸಮಸ್ಯೆ, ಮತ್ತು ಹೃದಯ ರೋಗದ ಸಮಸ್ಯೆಗಳನ್ನೂ ಹೋಗಲಾಡಿಸುತ್ತದೆ. ಆಲ್ಕೋಹಾಲ್ ಸೇವಿಸುವವರು ಆಹಾರದಲ್ಲಿ ಕರಿಬೇವನ್ನು ಸೇವಿಸುವುದರಿಂದ ಲಿವರ್ ಸಂಬಂಧಿತ ಕಾಯಿಲೆಗಳಿಂದ ದೂರವಿರಬಹುದು. ಇದನ್ನೂ ಓದಿ: ಕಿಡ್ನಿ ಸ್ಟೋನ್‍ನಿಂದ ಬಳಲುತ್ತಿದ್ದೀರಾ..?- ಹಾಗಾದರೆ ಇಲ್ಲಿದೆ ಮನೆ ಮದ್ದು

    Live Tv

  • ಕಿಡ್ನಿ ಸ್ಟೋನ್‍ನಿಂದ ಬಳಲುತ್ತಿದ್ದೀರಾ..?- ಹಾಗಾದರೆ ಇಲ್ಲಿದೆ ಮನೆ ಮದ್ದು

    ಕಿಡ್ನಿ ಸ್ಟೋನ್‍ನಿಂದ ಬಳಲುತ್ತಿದ್ದೀರಾ..?- ಹಾಗಾದರೆ ಇಲ್ಲಿದೆ ಮನೆ ಮದ್ದು

    ಧುನಿಕ ಜೀವನ ಶೈಲಿ ಹಾಗೂ ಪ್ರತಿನಿತ್ಯ ಸೇವಿಸುವ ಆಹಾರದಿಂದಾಗಿ ಯುವ ಜನಾಂಗದವರಲ್ಲೂ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಕಿಡ್ನಿ ಸ್ಟೋನ್ ಎಂದರೆ ಯಾವಾಗ ಮೂತ್ರದಲ್ಲಿ ಅಧಿಕವಾಗಿ ಲವಣಾಂಶಗಳು ಶೇಖರಣೆ ಆಗುತ್ತದೆಯೋ ಅದು ಸ್ಫಟಿಕ ರೂಪಕ್ಕೆ ಮಾರ್ಪಟ್ಟು ಘನ ವಸ್ತುವಾಗಿ ರೂಪಗೊಳ್ಳುವುದಾಗಿದೆ.

    ಮೂತ್ರದಲ್ಲಿನ ಅಂಶಗಳಿಂದ ರೂಪುಗೊಳ್ಳುವ ಈ ಕಲ್ಲು ಒಂದು ಮರಳಿನ ಕಣದಿಂದ ಹರಳುಗಳ ಗಾತ್ರದವರೆಗೂ ಬೆಳೆಯುತ್ತವೆ. ಈ ಕಲ್ಲುಗಳು ಮೂತ್ರನಾಳದಲ್ಲಿ ಸೇರಿಕೊಂಡು ಮೂತ್ರ ಹರಿವನ್ನು ನಿರ್ಬಂಧಿಸಿದರೆ ಆಗ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆ ಜೊತೆಗೆ ಕೆಲವು ಮನೆ ಮದ್ದನ್ನು ಅನುಸರಿಸಿ.

    ತುಳಸಿ: ತುಳಸಿಯಲ್ಲಿರುವ ಮೂತ್ರವರ್ಧಕ ಗುಣ ಮತ್ತು ಕಲ್ಮಶ ನಿವಾರಕಗಳ ಗುಣಗಳು ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಹೊರಹಾಕಲು ನೆರವಾಗುತ್ತದೆ. ಅಷ್ಟೇ ಅಲ್ಲದೇ ತುಳಸಿ ಎಲೆಗಳ ರಸದಲ್ಲಿ ಅಸೆಟಿಕ್ ಆಮ್ಲವಿದ್ದು, ಈ ಆಮ್ಲದಿಂದಾಗಿ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.

    ಕಲ್ಲಂಗಡಿ ಬೀಜ: ನಿಮ್ಮ ಕಿಡ್ನಿ ಸ್ಟೋನ್ ಅನ್ನು ಹೊರಹಾಕಲು ಕಲ್ಲಂಗಡಿ ಮತ್ತು ಅದರ ಬೀಜ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಒಂದು ಲೀಟರ್‍ನಷ್ಟು ನೀರನ್ನು ಕುದಿಸಿಕೊಳ್ಳಿ ಹಾಗೂ ಬೀಜವನ್ನು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ಈ ನೀರಿಗೆ ಮಿಶ್ರ ಮಾಡಿ. ಅರ್ಧ ಗಂಟೆಗಳ ಕಾಲ ಈ ನೀರನ್ನು ಕುದಿಸಿ ನಂತರ ತಣಿಸಿ ಕುಡಿಯುವರಿಂದ ಕಿಡ್ನಿ ಸ್ಟೋನ್ ನಿವಾರಣೆಯಾಗಿ ನೋವಿನಿಂದಲೂ ಮುಕ್ತಿ ಪಡೆಯುತ್ತಿರಿ.

    ಬಾಳೆ ದಿಂಡು ಜ್ಯೂಸ್: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ನಿತ್ಯವೂ ಬಾಳೆ ದಿಂಡು ಜ್ಯೂಸ್ ಅನ್ನು ಕುಡಿಯಿರಿ. ಹಾಗೂ ಇದರ ಜೊತೆಗೆ ದೇಹಕ್ಕೆ ನಿಯಮಿತಕ್ಕಿಂತಲೂ ಅಧಿಕವಾಗಿ ನೀರನ್ನು ಕುಡಿಯಿರಿ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದನ್ನೂ ಓದಿ: ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ

    ಆ್ಯಪಲ್ ಸಿಡರ್ ವಿನೆಗರ್: ಒಂದು ಅಥವಾ ಎರಡು ಟೇಬಲ್ ಸ್ಪೂನ್‍ಗಳಷ್ಟು ಆ್ಯಪಲ್ ಸಿಡರ್ ವಿನೆಗರ್‍ಗೆ ಒಂದಿಷ್ಟು ನೀರನ್ನು ಬೆರೆಸಿ ಅದನ್ನು ಪ್ರತಿನಿತ್ಯ ಕುಡಿಯಿರಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಆಗಿರುವ ಕಲ್ಲನ್ನು ಕರಗಿಸಲು ಸಹಾಯವಾಗುತ್ತದೆ. ಇದನ್ನೂ ಓದಿ: ನೋಡಲು ಪುಟ್ಟದಾಗಿರುವ ನೆಲನೆಲ್ಲಿಯಿಂದ ಬೆಟ್ಟದಷ್ಟು ಪ್ರಯೋಜನ

    Live Tv

  • ಬಿಗಡಾಯಿಸುತ್ತಿದೆಯಾ ಪುಟಿನ್ ಆರೋಗ್ಯ? – ವೇದಿಕೆಯಲ್ಲಿ ಕಾಲು ನಡುಗುವ ವೀಡಿಯೋ ವೈರಲ್

    ಬಿಗಡಾಯಿಸುತ್ತಿದೆಯಾ ಪುಟಿನ್ ಆರೋಗ್ಯ? – ವೇದಿಕೆಯಲ್ಲಿ ಕಾಲು ನಡುಗುವ ವೀಡಿಯೋ ವೈರಲ್

    ಮಾಸ್ಕೋ: ಉಕ್ರೇನ್ ಮೇಲೆ ಯುದ್ಧ ಸಾರಿ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೆಲವು ದಿನಗಳಿಂದ ಆರೋಗ್ಯದ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹೊಸದೊಂದು ವೀಡಿಯೋ ಕೂಡಾ ಇದೀಗ ವೈರಲ್ ಆಗುತ್ತಿದೆ.

    ವ್ಲಾಡಿಮಿರ್ ಪುಟಿನ್ ಭಾನುವಾರ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಸ್ಥಿರವಾಗಿ ನಿಲ್ಲಲು ಹೆಣಗಾಡಿದ್ದಾರೆ. ತಮ್ಮ ಕಾಲುಗಳು ನಡುಗುತ್ತಿದ್ದಂತೆ ವೇದಿಕೆಯ ಡಯಾಸ್ ಅನ್ನು ಹಿಡಿದು, ಹಿಂದೆ-ಮುಂದೆ ತೂಗಾಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ಖಾಸಗಿ ರೈಲು ಸಂಚಾರ ಆರಂಭ- ಖಾಸಗೀಕರಣಕ್ಕೆ ರೈಲ್ವೆ ನೌಕರರ ವಿರೋಧ

    ಚಲನಚಿತ್ರ ನಿರ್ಮಾಪಕಿ ನಿಕಿತಾ ಮಿಖೈಲೋವ್ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ಪುಟಿನ್ ಅಸಹಜವಾಗಿ ವರ್ತಿಸಿದ್ದಾರೆ. ಭಾಷಣ ಮಾಡುವ ಸಂದರ್ಭ ಅಸ್ಥಿರವಾಗಿ ನಿಂತಿರುವ ವೀಡಿಯೋ ವೈರಲ್ ಆಗುತ್ತಿದ್ದು, ಇದೀಗ ಅವರ ಆರೋಗ್ಯದ ಬಗ್ಗೆ ಹೊಸ ಜಿಜ್ಞಾಸೆ ಉಂಟುಮಾಡಿದೆ.

    ಕೆಲವು ದಿನಗಳ ಹಿಂದೆ ಪುಟಿನ್‌ಗೆ ಕ್ಯಾನ್ಸರ್ ಕಾಯಿಲೆ ಇದ್ದು, ಅವರು ಹೆಚ್ಚೆಂದರೆ 3 ವರ್ಷ ಬದುಕಬಹುದು ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿತ್ತು. ಪುಟಿನ್‌ಗೆ 69 ವರ್ಷ ಆಗಿದ್ದು, ಅವರ ಕಣ್ಣಿನ ದೃಷ್ಟಿಯೂ ಗಂಭೀರವಾಗಿ ಹದಗೆಟ್ಟಿದೆ ಹಾಗೂ ಬೆರಳುಗಳು ನಿಯಂತ್ರಿಸಲಾಗದಷ್ಟು ಅಲುಗಾಡತೊಡಗಿವೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ಮಾಧ್ಯಮಗಳು ವರದಿ ಮಾಡಿತ್ತು. ಇದನ್ನೂ ಓದಿ: 5ಜಿ ತರಂಗಾಂತರ ಹರಾಜಿಗೆ ಕ್ಯಾಬಿನೆಟ್ ಅನುಮೋದನೆ

    ಪುಟಿನ್ ಅವರ ಹದಗೆಡುತ್ತಿರುವ ಆರೋಗ್ಯದ ಕಾರಣ ವೈದ್ಯರು ಸಾರ್ವಜನಿಕವಾಗಿ ಹೆಚ್ಚು ಸಮಯ ಕಾಣಿಸಿಕೊಳ್ಳದಂತೆ ಹೇಳಿರುವುದಾಗಿ ತಿಳಿದುಬಂದಿದೆ.

    Live Tv

  • ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ

    ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ

    ಬೇಸಿಗೆಯಲ್ಲಿ ಕಾಮಕಸ್ತೂರಿಯನ್ನು ನೀರಿನಲ್ಲಿ ನೆನಸಿ ಸೇವಿಸುವುದು ದೇಹಕ್ಕೆ ಒಳ್ಳೆಯದು. ಇದು ದೇಹದಲ್ಲಿನ ಉಷ್ಣಾಂಶವನ್ನು ಕಡಿಮೆಗೊಳಿಸಿ ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಕೆಲವು ಔಷಧೀಯ ಗುಣಗಳು ಇವೆ.

    ಬಾಯರಿಕೆ ಕಡಿಮೆ: ದೇಹ ಹೈಡ್ರೀಕರಿಸಿದ ಸ್ಥಿತಿಯಲ್ಲಿರಲು ಕಾಮಕಸ್ತೂರಿ ಬೀಜಗಳ ಸೇವನೆ ಒಳ್ಳೆಯದು. ಕಾಮಕಸ್ತೂರಿ ಬೀಜಗಳು ನೀರಿನ ವಿಷಯದಲ್ಲಿ ನಾಲ್ಕು ಪಟ್ಟು ಒಣ ತೂಕವನ್ನು ಹೀರಿಕೊಳ್ಳುತ್ತವೆ. ಇದು ಬೆವರಿನಿಂದ ಕಳೆದುಕೊಂಡಿರುವ ಎಲೆಕ್ಟ್ರೋಲೈಟ್‍ಗಳು ಮತ್ತು ನೀರನ್ನು ಬದಲಿಸಲು ಸಹಾಯ ಮಾಡುತ್ತದೆ. ಹೀಗಾಗಿ ಆಗಾಗ ಬಾಯಾರಿಕೆಯಾಗುವ ಸಮಸ್ಯೆ ಉಂಟಾಗುವುದಿಲ್ಲ. ಇದರ ಜೊತೆಗೆ ಇದು ತೂಕ ಇಳಿಸುವುದರಿಂದ ಹಿಡಿದು ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ದೇಹದ ಉಷ್ಣತೆ ಕಡಿಮೆ: ಬೇಸಿಗೆಯಲ್ಲಿ ಹೆಚ್ಚು ಬೆವರುವ ಕಾರಣ ನಾವು ಹೆಚ್ಚೆಚ್ಚು ನೀರು ಕುಡಿಯಬೇಕಾದ ಅಗತ್ಯವಿದೆ. ನೀರು ಮತ್ತು ಇತರ ಪಾನೀಯಗಳು ಜಲಸಂಚಯನ ಮತ್ತು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಪ್ರಮುಖವಾಗಿವೆ. ನೀವು ನಿಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಈ ಕಾಮಕಸ್ತೂರಿ ಬೀಜಗಳ ಸೇವನೆ ಮಾಡಬಹುದು. ದೊಡ್ಡ ದೊಡ್ಡ ರೆಸ್ಟೋರೆಂಟ್‍ಗಳಲ್ಲಿ ಕಾಮಕಸ್ತೂರಿಗಳನ್ನು ಬೆರಸಿರುವ ಜ್ಯೂಸ್, ಮಿಲ್ಕ್ ಶೇಕ್, ಫಾಲುಡಾದಂತಹ ದ್ರವ ಪದಾರ್ಥಗಳ ರುಚಿಯನ್ನು ನೀವು ಸವಿದಿರಬಹುದು. ಇದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

    ದೇಹಕ್ಕೆ ಅಗತ್ಯವಾದ ನೀರು, ಆಹಾರ ಒದಗಿಸುತ್ತೆ: ಕಾಮಕಸ್ತೂರಿ ಬೀಜಗಳು ವಿಟಮಿನ್ ಎ, ಇ, ಮತ್ತು ಕೆನಂತಹ ವಿಟಮಿನ್‍ಗಳನ್ನು ಖನಿಜಗಳು, ಕ್ಯಾಲ್ಸಿಯಂ, ಮೆಗ್ನೀಶಿಯಮ್ ಮತ್ತು ಕಬ್ಬಿಣದಿಂದ ತುಂಬಿವೆ. ಇವು ನಮ್ಮ ದೇಹಕ್ಕೆ ಅಗತ್ಯವಾದ ನೀರು ಹಾಗೂ ಆಹಾರವನ್ನು ಒದಗಿಸುತ್ತವೆ. ಇದನ್ನೂ ಓದಿ: ನೋಡಲು ಪುಟ್ಟದಾಗಿರುವ ನೆಲನೆಲ್ಲಿಯಿಂದ ಬೆಟ್ಟದಷ್ಟು ಪ್ರಯೋಜನ

    ಹೊಟ್ಟೆಯ ಆಮ್ಲವನ್ನು ಕಡಿಮೆ: ಕಾಮಕಸ್ತೂರಿ ಬೀಜಗಳು ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಾಮಕಸ್ತೂರಿ ಬೀಜಗಳನ್ನು ದೇಹವನ್ನು ಹೈಡ್ರೀಕರಿಸುವ ಪರಿಪೂರ್ಣ ಘಟಕಾಂಶವಾಗಿದೆ.

    ಪದೇ ಪದೇ ಹಸಿವಾಗುವುದನ್ನು ತಡೆಯುತ್ತೆ: ಪದೇ ಪದೇ ಹಸಿವಾಗುವುದನ್ನು ಕಾಮಕಸ್ತೂರಿ ಬೀಜಗಳು ತಡೆಯುತ್ತದೆ. ಹೊಟ್ಟೆ ತುಂಬಿಸಿದ ಅನುಭವವನ್ನು ಉಂಟು ಮಾಡುತ್ತದೆ. ಅಲ್ಲದೆ, ಇದು ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರ ಪರಿಣಾಮ ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಇಷ್ಟೇ ಅಲ್ಲ, ಇದು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ಡಯಟ್ ಚಾರ್ಟ್‌ನಲ್ಲಿ ಸೇರಿಸುವುದನ್ನು ಮರೆಯಬೇಡಿ. ಇದನ್ನೂ ಓದಿ: ನೀವು ಚಹಾ ಪ್ರೇಮಿಗಳೇ? ನಿತ್ಯ ಟೀ ಕುಡಿಯೋದ್ರಿಂದ ಏನು ಪ್ರಯೋಜನ ನೋಡಿ!

  • ನೋಡಲು ಪುಟ್ಟದಾಗಿರುವ ನೆಲನೆಲ್ಲಿಯಿಂದ ಬೆಟ್ಟದಷ್ಟು ಪ್ರಯೋಜನ

    ನೋಡಲು ಪುಟ್ಟದಾಗಿರುವ ನೆಲನೆಲ್ಲಿಯಿಂದ ಬೆಟ್ಟದಷ್ಟು ಪ್ರಯೋಜನ

    ಭೂಮಿಯಲ್ಲಿ ಬೆಳೆಯುವ ಅನೇಕ ಗಿಡ ಮೂಲಿಕೆಗಳು ರಾಮಬಾಣದಂತೆ ಇರುತ್ತದೆ. ಅದರಲ್ಲಿ ನೆಲನೆಲ್ಲಿಯೂ ಒಂದು. ನೆಲ್ಲಿಕಾಯಿ ಬಗ್ಗೆ ಎಲ್ಲರಿಗೂ ಎಲ್ಲರಿಗೂ ಗೊತ್ತೆ ಇದೆ. ಆದರೆ ಈ ನೆಲ ನೆಲ್ಲಿ ಬಗ್ಗೆ ಹಲವರಿಗೆ ಗೊತ್ತಿಲ್ಲ. ಗದ್ದೆ, ತೋಟಗಳಲ್ಲಿ ಬೆಳೆಯುವ ಈ ನೆಲನೆಲ್ಲಿ ನೋಡಲು ಪುಟ್ಟದಾಗಿದ್ದು, ಬೆಟ್ಟದಷ್ಟು ಪ್ರಯೋಜನ ಹೊಂದಿದೆ.

    ಕಾಮಾಲೆ ಕಡಿಮೆ ಆಗುತ್ತೆ: ಕಾಮಾಲೆಗೆ ನೆಲನೆಲ್ಲಿ ಉಪಯುಕ್ತ ಔಷಧವಾಗಿದೆ. ನೆಲೆನೆಲ್ಲಿಯ ಬೇರನ್ನು ತೆಗೆದುಕೊಂಡು, ಪೇಸ್ಟ್ ಮಾಡಿಕೊಂಡು, ಅದಕ್ಕೆ ಹಸುವಿನ ಹಾಲನ್ನು ಸೇರಿಸಬೇಕು. ಈ ಮಿಶ್ರಣಕ್ಕೆ ಒಂದು ಚಿಟಿಕೆ ಅರಿಶಿನ ಹಾಕಿ, ಒಂದು ಚಮಚ ಮಿಶ್ರಣವನ್ನು, ದಿನಕ್ಕೆ 2-3 ಬಾರಿ ಸೇವಿಸಿದಲ್ಲಿ, ಕಾಮಾಲೆ ರೋಗವನ್ನು ಕಡಿಮೆ ಮಾಡಬಹುದು. ಹಾಗೂ ಅದರ ಅಡ್ಡ ಪರಿಣಾಮವನ್ನು ಕೂಡ ನಿಯಂತ್ರಿಸಲು ಸಾಧ್ಯವಾಗುತ್ತದೆ.

    ಭೇದಿ ನಿಯಂತ್ರಣ: ಭೇದಿ ಉಂಟಾದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು, ಜಜ್ಜಿ, ರಸ ತೆಗೆದು, ದಿನಕ್ಕೆ 3 ಬಾರಿ ಸೇವಿಸುವುದರಿಂದ, ಭೇದಿ ನಿಯಂತ್ರಣಕ್ಕೆ ಬರುತ್ತದೆ.

    ಗಾಯ ವಾಸಿ: ನೆಲನೆಲ್ಲಿಯು ಗಾಯ ವಾಸಿ ಮಾಡುವ ಗುಣವನ್ನು ಹೊಂದಿದೆ. ನೆಲನೆಲ್ಲಿಯ ಗಿಡವನ್ನು ಬೇರು ಸಮೇತವಾಗಿ, ಜಜ್ಜಿ, ಗಾಯಕ್ಕೆ ಲೇಪಿಸುವುದರಿಂದ, ಗಾಯವು ಬೇಗ ವಾಸಿಯಾಗುತ್ತದೆ. ಇದನ್ನೂ ಓದಿ: ನೀವು ಚಹಾ ಪ್ರೇಮಿಗಳೇ? ನಿತ್ಯ ಟೀ ಕುಡಿಯೋದ್ರಿಂದ ಏನು ಪ್ರಯೋಜನ ನೋಡಿ!

    ಚರ್ಮ ರೋಗ ನಿವಾರಣೆ: ಚರ್ಮ ರೋಗ ನಿವಾರಣೆಗಾಗಿ ನೆಲನೆಲ್ಲಿಯ ಎಲೆಯನ್ನು ಉಪ್ಪಿನೊಂದಿಗೆ ಅರೆದು, ಚರ್ಮಕ್ಕೆ ಲೇಪಿಸುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

    ಜ್ವರವನ್ನು ಕಡಿಮೆ: ನೆಲನೆಲ್ಲಿಯ ಕಷಾಯ ಮಾಡುವಾಗ, ನೀರನ್ನು ಬಿಸಿಗಿರಿಸಿ, ನೆಲನೆಲ್ಲಿಯ ಎಲೆ, ಕೊಂಬೆ, ಕಾಯಿ, ಎಲ್ಲವನ್ನು ಕತ್ತರಿಸಿ ಹಾಕಬೇಕು, ನಂತರ ಅದಕ್ಕೆ ಅರ್ಧ ಇಂಚು ಶುಂಠಿಯನ್ನು ಜಜ್ಜಿ, ಮಾಡುತ್ತಿರುವ ಕಷಾಯಕ್ಕೆ ಹಾಕಬೇಕು, ನಂತರ ಕಾಲು ಚಮಚ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ, ಮಂದ ಉರಿಯಲ್ಲಿ ಕುದಿಸಬೇಕು. ಇಳಿಸುವಾಗ ಚಿಟಿಕೆ ಅರಿಶಿನ, ಸ್ವಲ್ಪ ಸೈ0ಧವ ಲವಣ ಹಾಕಿ, ಒಂದು ನಿಮಿಷ ಬಿಟ್ಟು ಇಳಿಸಿ, ಸೋಸಿದರೆ, ಕಷಾಯ ಸಿದ್ದವಾಗುತ್ತದೆ. ಇದನ್ನು, 10-15 mಟ ನಷ್ಟನ್ನು ಘಂಟೆಗೊಮ್ಮೆ ಕುಡಿಯುತ್ತ ಬಂದರೆ ಇದು ಎಲ್ಲ ರೀತಿಯ ಜ್ವರಕ್ಕೂ ರಾಮಬಾಣವಾಗಿದೆ.

    ನೆಲನೆಲ್ಲಿಯು ರೋಗ ನಿರೋಧಕ ಶಕ್ತಿ ಹೆಚ್ಚಳ: ನೆಲನೆಲ್ಲಿಯು ಕಿಡ್ನಿಯ ಕಲ್ಲು ಕರಗಿಸಲು ಸಹಕಾರಿಯಾಗಿದೆ. ಕಿಡ್ನಿಯ ಕಲ್ಲು ಕರಗಿಸುವಲ್ಲಿ ನೆಲನೆಲ್ಲಿಯ ಪಾತ್ರ ಮಹತ್ವದ್ದು, ಆದ್ದರಿಂದ ಇದನ್ನು ಸ್ಟೋನ್ ಬ್ರೇಕರ್ ಎಂದು ಕೂಡ ಕರೆಯುತ್ತಾರೆ. ನೆಲನೆಲ್ಲಿಯ ಜ್ಯೂಸ್ ಮಾಡಿ ಸೇವಿಸುವುದರಿಂದ ಕಿಡ್ನಿಯ ಕಲ್ಲು ನಿಧಾನವಾಗಿ ಕರಗುತ್ತಾ ಬರುತ್ತದೆ.

  • ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ

    ಆ್ಯಸಿಡ್ ದಾಳಿಗೊಳಗಾದ ಯುವತಿ ಆರೋಗ್ಯದಲ್ಲಿ ಚೇತರಿಕೆ

    ಬೆಂಗಳೂರು: ಕೋಟಿ ಹೃದಯಗಳ ಪ್ರಾರ್ಥನೆ ಕೊನೆಗೂ ಜಯಿಸಿದೆ. ಗುಣಮುಖವಾಗಿ ಮೊದಲಿನಂತಾಗಲಿ ಅನ್ನೋ ಕೋಟ್ಯಂತರ ಮನಸ್ಸುಗಳ ಆಸೆ ಈಡೇರಿದೆ.

    ಏಪ್ರಿಲ್ 28 ರಂದು ಸುಂಕದಕಟ್ಟೆಯಲ್ಲಿ ಯುವತಿ ಆ್ಯಸಿಡ್ ದಾಳಿಗೆ ಒಳಗಾಗಿ ಸೆಂಟ್ ಜಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಯುವತಿಯನ್ನ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿಗೆ ಬರೋಬ್ಬರಿ 16 ದಿನಗಳ ನಿರಂತರ ಹೋರಾಟದಲ್ಲಿ ಯುವತಿ ಗೆದ್ದು ಬಂದಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ನಡುವೆ, ಪ್ರತೀ ಕ್ಷಣವೂ ಏನೋ ಅನ್ನೋ ಆತಂಕ ಇದೀಗ ಇಲ್ಲ. ಬರ್ನಿಂಗ್ ಸ್ಪೆಷಲ್ ವಾರ್ಡ್ ನಲ್ಲಿ ಯುವತಿ ಆರೈಕೆಯಲ್ಲಿದ್ದಾರೆ. ಇದನ್ನೂ ಓದಿ: ಮಸಿ ಬಳಿದವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ: ಕಾಳಿಸ್ವಾಮಿ

    ಯುವತಿ ಸ್ವಲ್ಪ ಸ್ವಲ್ಪವೇ ಅನ್ನವನ್ನು ಸೇವಿಸೋಕೆ ಶುರು ಮಾಡಿದ್ದಾರೆ. ಡ್ರೈ ಫ್ರೂಟ್ಸ್ ಪುಡಿ ಮಾಡಿ, ಸರಿ ಜೊತೆ ಬೆರೆಸಿ ಕೊಡೋಕೆ ಸಹ ಡಾಕ್ಟರ್ ಹೇಳಿದ್ದಾರೆ. ಮುಖದ ಮುಂಭಾಗ ಮಾತ್ರ ಆಸಿಡ್‍ನಿಂದ ಸುಟ್ಟಿಲ್ಲ, ಮುಖದ ಎಡ ಮತ್ತು ಬಲಭಾಗ ಸುಟ್ಟಿದೆ ಅಂತಿದ್ದಾರೆ. ಇದಲ್ಲದೆ ಕಿವಿಯೊಂದು ತುಂಬಾನೆ ಹಾನಿಯಾಗಿದೆ. ಇನ್ನೂ 10% ನಷ್ಟು ಸ್ಕಿಮ್ ಟ್ರ್ಯಾನ್ಸ್ ಪ್ಲಾಂಟೇಷನ್ ಸರ್ಜರಿ ನಡೆಸಬೇಕಿದೆ. ಸದ್ಯ ಯುವತಿ ಮಾತನಾಡಿಸುತ್ತಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

    ಯುವತಿ ಗುಣಮುಖಳಾಗಲಿ ಅನ್ನೋದು ನಮ್ಮೆಲ್ಲರ ಆಶಯವಾಗಿತ್ತು. ಕನ್ನಡಿಗರ ಪ್ರಾರ್ಥನೆ ಕೊನೆಗೂ ಕೈ ಗೂಡಿದೆ. ಕುಟುಂಬ ತುಸು ನೆಮ್ಮದಿಯಾಗಿದೆ.

  • ಕೊರೊನಾಗೂ ಟೊಮ್ಯಾಟೊ ಫ್ಲೂಗೂ ಸಂಬಂಧವಿಲ್ಲ, ಇದು ಈಗಾಗಲೇ ಇರುವ ಕಾಯಿಲೆ: ಸುಧಾಕರ್‌

    ಕೊರೊನಾಗೂ ಟೊಮ್ಯಾಟೊ ಫ್ಲೂಗೂ ಸಂಬಂಧವಿಲ್ಲ, ಇದು ಈಗಾಗಲೇ ಇರುವ ಕಾಯಿಲೆ: ಸುಧಾಕರ್‌

    ಬೆಂಗಳೂರು: ಮಕ್ಕಳಲ್ಲಿ ಕಂಡುಬರುವ ಟೊಮ್ಯಾಟೊ ಫ್ಲೂ ರೋಗದ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಈಗಾಗಲೇ ಇರುವ ಕಾಯಿಲೆಯಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ಅಪರೂಪದ ವೈರಸ್ ರೋಗವಾಗಿರುವ ಟೊಮ್ಯಾಟೊ ಜ್ವರದ ಪ್ರಕರಣಗಳು ಕೇರಳ ರಾಜ್ಯದ ಅರ್ಯಂಕಾರು, ಅಂಚಲ್ ಹಾಗೂ ನೆಡುವತೂರ್ ನಲ್ಲಿ ಕಂಡುಬಂದಿದೆ. ಸಾಮಾನ್ಯವಾಗಿ 5 ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಕಂಡುಬರುವ ಈ ರೋಗ, ಚರ್ಮದ ತುರಿಕೆ, ಕೆಂಪಾಗುವುದು, ನೀರಡಿಕೆ ಮೊದಲಾದ ಲಕ್ಷಣಗಳನ್ನು ಹೊಂದಿದೆ. ತೀವ್ರ ಜ್ವರ, ಮೈ ಕೈ ನೋವು, ಕೀಲು ನೋವು, ಆಯಾಸ ಮೊದಲಾದ ಲಕ್ಷಣಗಳೂ ಕಂಡುಬರುತ್ತವೆ. ಇದನ್ನೂ ಓದಿ: ರಾಜ್ಯ ಸರ್ಕಾರದ ನದಿ ಜೋಡಣೆ ವಿರೋಧಿಸಿ ಸಮಾವೇಶ – ಸ್ವರ್ಣವಲ್ಲಿ ಶ್ರೀ

    corona

    ಕೇರಳದಲ್ಲಿ ಈ ರೋಗದ ಪ್ರಕರಣಗಳು ಪತ್ತೆಯಾಗಿರುವುದರಿಂದ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇರಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ? ಡಿಕೆಶಿಗೆ ನಟಿ ರಮ್ಯಾ ಪ್ರಶ್ನೆ

    ರಾಜ್ಯದ ಯಾವುದೇ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಈ ರೋಗ ಲಕ್ಷಣ ಕಂಡುಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಈ ಜಿಲ್ಲೆಗಳೂ ಸೇರಿದಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಿಂದ ಲಿಖಿತ ನಿರ್ದೇಶನ ನೀಡಲಾಗಿದೆ.

  • ನೀವು ಚಹಾ ಪ್ರೇಮಿಗಳೇ? ನಿತ್ಯ ಟೀ ಕುಡಿಯೋದ್ರಿಂದ ಏನು ಪ್ರಯೋಜನ ನೋಡಿ!

    ನೀವು ಚಹಾ ಪ್ರೇಮಿಗಳೇ? ನಿತ್ಯ ಟೀ ಕುಡಿಯೋದ್ರಿಂದ ಏನು ಪ್ರಯೋಜನ ನೋಡಿ!

    ಕೆಲವರಿಗೆ ಟೀ ಎಷ್ಟು ರೂಢಿ ಆಗಿರುತ್ತೆ ಎಂದರೆ ಪ್ರತಿನಿತ್ಯ ಒಂದು ಕಪ್ ಟೀ ಕುಡಿದಿಲ್ಲ ಎಂದರೆ ಮೂಡ್‌ ಸರಿಯಿಲ್ಲದ ಅನುಭವ ಆಗುತ್ತದೆ, ಮತ್ತೇ ಕೆಲವರಿಗೆ ತಲೆ ನೋವಿನಂತಹ ಸಮಸ್ಯೆ ಎದುರಾಗುತ್ತದೆ. ಆದರೆ ಪ್ರತಿನಿತ್ಯ ಟೀ ಕುಡಿಯುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದರಿಂದಾಗಿ ಚೀನಾ, ಜಪಾನ್‍ನಂತಹ ದೇಶಗಳಲ್ಲಿ ಗ್ರೀನ್ ಟೀ ಹಾಗೂ ಬ್ಲ್ಯಾಕ್ ಟೀಗಳನ್ನು ಜನರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ಹೀಗಾಗಿ ಇಲ್ಲಿ ಪ್ರತಿನಿತ್ಯ ಚಹಾವನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.

    ತೂಕ ಇಳಿಕೆ: ಟೀಯನ್ನು ಪ್ರತಿನಿತ್ಯ ಕುಡಿಯುವುದರಿಂದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಚಹಾದಲ್ಲಿರುವ ಫ್ಲೇವನಾಯ್ಡ್‌ಗಳು ಚಯಾಪಚಯವನ್ನು ಹೆಚ್ಚಿಸುವುದಿಲ್ಲ. ಜೊತೆಗೆ ಕೊಬ್ಬನ್ನು ಇಳಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಬೇಕೆಂದು ಯೋಚಿಸುವವರಿಗೆ ತಜ್ಞರು ಪ್ರತಿನಿತ್ಯ ಟೀ ಕುಡಿಯಲು ಸಲಹೆ ನೀಡುತ್ತಾರೆ.

    ಕ್ಯಾನ್ಸರ್ ವಿರುದ್ಧ ಹೋರಾಟ: ಬ್ಲ್ಯಾಕ್ ಮತ್ತು ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿನಿತ್ಯ ಟೀ ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳ ಅಪಾಯವನ್ನು ತಡೆಗಟ್ಟುತ್ತದೆ.

    ಮಾನಸಿಕ ಆರೋಗ್ಯ ಸುಧಾರಣೆ: ಆಧುನಿಕ ಜೀವನ ಶೈಲಿಯಿಂದಾಗಿ ಇಂದು ಪ್ರತಿಯೊಬ್ಬರು ಒಂದೆಲ್ಲ ಒಂದು ಒತ್ತಡವನ್ನು ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಟೀ ಕುಡಿಯುವುದರಿಂದ ಮಾನಸಿಕವಾಗಿ ಸಂತೋಷವಾಗಿರಲು ಸಹಾಯ ಮಾಡುತ್ತದೆ. ಜೊತೆಗೆ ಮಾನಸಿಕ ಒತ್ತಡ, ಆತಂಕ ಮತ್ತು ತಲೆನೋವನ್ನು ನಿವಾರಿಸುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

    ಜೀರ್ಣಕ್ರಿಯೆಯಲ್ಲಿ ಸುಧಾರಣೆ: ಅತಿಸಾರ, ಮಲಬದ್ಧತೆ, ಹುಣ್ಣು ಮತ್ತು ಹೊಟ್ಟೆಯ ತೊಂದರೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಗಿಡಮೂಲಿಕೆ ಚಹಾಗಳನ್ನು ಸೇವಿಸಬೇಕು. ಏಕೆಂದರೆ ಚಹಾದಲ್ಲಿರುವ ಔಷಧಿ ಗುಣಗಳು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವರು ಜೀರ್ಣಕ್ರಿಯೆಗಾಗಿ ಶುಂಠಿ ಮತ್ತು ಪುದೀನಾ ಚಹಾವನ್ನು ಸಹ ಸೇವಿಸುತ್ತಾರೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಹೃದಯದ ಆರೋಗ್ಯ: ಚಹಾವನ್ನು ಸೇವಿಸುವುದರಿಂದ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪಾರ್ಶ್ವ ವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.  ಇದನ್ನೂ ಓದಿ: ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

  • ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಜ್ಯೂಸ್‍ಗಳನ್ನು ಕುಡಿಯಿರಿ

    ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಈ ಜ್ಯೂಸ್‍ಗಳನ್ನು ಕುಡಿಯಿರಿ

    ದಿನೇ ದಿನೇ ಬಿಸಿಲಿನ ತಾಪ ಅಧಿಕವಾಗುತ್ತಿದೆ. ಇದರ ಜೊತೆಗೆ ಕೊರೊನಾ ಸೋಂಕಿತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಇವರೆಡರ ಮಧ್ಯೆ ನಮ್ಮ ಆರೋಗ್ಯದ ಕಡೆ ಗಮನ ಕೊಡುವುದು ಪ್ರಮುಖವಾಗಿರುತ್ತದೆ. ದೇಹಕ್ಕೆ ತಂಪನ್ನೂ ನೀಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಜ್ಯೂಸ್‍ಗಳಿವೆ. ಕೆಳಕಂಡಂತೆ ತಿಳಿಸಿರುವ ಜ್ಯೂಸ್‍ಗಳನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

    ನಿಂಬು ಶರಬತ್: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಸೇರಿಸಿ ಕುಡಿಯುವುದರಿಂದ ದೇಹದ ಆರೋಗ್ಯವು ಸುಧಾರಿಸುತ್ತದೆ. ಇದರಿಂದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.

    ಬೇಲದ ಹಣ್ಣು: ಬೇಲದ ಹಣ್ಣು ಬೇಸಿಗೆ ಕಾಲಕ್ಕೆ ಸರಿಯಾದ ಆಹಾರವಾಗಿದೆ. ಅದರಲ್ಲೂ ಬಿಸಿಲಿನ ತಾಪ ಹೆಚ್ಚಿದಾಗ ಈ ಶರಬತ್‍ನ್ನು ಮಾಡಿ ಕುಡಿಯುವುದು ದೇಹಕ್ಕೂ ಒಳ್ಳೆಯದು. ಇದರಲ್ಲಿ ಫೈಬರ್ ವಿಟಮಿನ್ ಸಿ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸಲು ಅನೇಕ ಪೋಷಕಾಂಶಗಳು ಹೇರಳವಾಗಿರುತ್ತವೆ. ಇದರಿಂದಾಗಿ ಮೊಡವೆ, ಚರ್ಮದಲ್ಲಿ ಸುಕ್ಕಾಗುವುದು ಹಾಗೂ ಬಿಳಿ ಕೂದಲಿನಂತಹ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?

    ಸೋರೆಕಾಯಿ ಜ್ಯೂಸ್: ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಪ್ರಮುಖವಾಗಿ ಪೋಷಕಾಂಶಗಳ ಅಗತ್ಯವಿರುತ್ತದೆ. ಇದರಿಂದಾಗಿ ಹಸಿರು ತರಕಾರಿಗಳನ್ನು ಸೇವಿಸಬೇಕು. ಸೋರೆಕಾಯಿ, ಪುದಿನಾ ಎಲೆಗಳಿಂದ ತಯಾರಿಸಿದ ಜ್ಯೂಸ್‍ನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ನಿಮ್ಮ ಚರ್ಮ ಹೊಳೆಯುವಂತೆ ಮಾಡುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

    ನೆಲ್ಲಿಕಾಯಿ ಜ್ಯೂಸ್: ಇದು ಸಾಂಪ್ರದಾಯಿಕ ರೋಗ ನಿರೋಧಕ ಜ್ಯೂಸ್ ಆಗಿದೆ. ಇದರಲ್ಲಿ ವಿಟಾಮಿನ್ ಸಿ ಹೇರಳವಾಗಿರುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ಉತ್ತಮ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಮಜ್ಜಿಗೆ: ಮಜ್ಜಿಗೆಯನ್ನು ಸೇವಿಸುವುದರಿಂದ ಕರುಳಿನ ಆರೋಗ್ಯ ಹೆಚ್ಚುತ್ತದೆ. ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಜ್ಜಿಗೆಗೆ ಪುದೀನ ಎಲೆ ಸೇರಿಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ಆರೋಗ್ಯವನ್ನು ಈ ರೀತಿ ಕಾಪಾಡಿಕೊಳ್ಳಿ

  • ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

    ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ

    ತಾಪಮಾನ ಹೆಚ್ಚಾಗುತ್ತಿದ್ದಂತೆ ನಿಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸುವುದು ಅಗತ್ಯವಾಗಿರುತ್ತೆ. ಅದರಲ್ಲೂ ಕರುಳಿನ ಬಗ್ಗೆ ವಿಶೇಷ ಗಮನ ಕೊಡಬೇಕು. ಬೇಸಿಗೆಯಲ್ಲಿ ನಿಮ್ಮ ಕರುಳಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಚೆನ್ನಾಗಿ ತಿನ್ನುವುದು ಹಾಗೂ ಆಹಾರದಲ್ಲಿ ನಿರ್ದಿಷ್ಟ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ. ಕರುಳಿನ ಆರೋಗ್ಯದಿಂದ ಮಾನಸಿಕ ಆರೋಗ್ಯ, ಮನಸ್ಥಿತಿ, ಸಣ್ಣ ಪುಟ್ಟ ಕಾಯಿಲೆಗಳು, ಹಾರ್ಮೋನ್‍ನಲ್ಲಿ ವ್ಯತ್ಯಾಸ, ಚರ್ಮದ ಪರಿಸ್ಥಿತಿಗಳು ಸುಧಾರಿಸುತ್ತವೆ.

    ನೀರನ್ನು ಹೆಚ್ಚಾಗಿ ಕುಡಿಯಿರಿ: ಬೇಸಿಗೆಯಲ್ಲಿ ಉಳಿದ ದಿನಗಳಿಗಿಂತ ಹೆಚ್ಚಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ಮುಖ್ಯವಾಗಿರುತ್ತದೆ. ನೀರಿನ ಜೊತೆಗೆ ಮಜ್ಜಿಗೆ, ಎಳೆನೀರನ್ನು ಅಧಿಕವಾಗಿ ಸೇವಿಸಿ. ಇದರಿಂದಾಗಿ ನಿಮ್ಮ ದೇಹದಲ್ಲಿ ಆಯಾಸವಾಗುವುದು ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ. ಜೊತೆಗೆ ಕರುಳಿನ ಆರೋಗ್ಯದಲ್ಲೂ ಸುಧಾರಣೆ ಕಾಣುತ್ತದೆ. ಅಷ್ಟೇ ಅಲ್ಲದೇ ಸೂರ್ಯನ ಶಾಖದಿಂದ ನಿಮ್ಮನ್ನು ರಕ್ಷಿಸಿ ನಿಮ್ಮ ತ್ವಚೆಯನ್ನು ಸುಂದರವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ

    ಹಸಿರು ತರಕಾರಿಯನ್ನು ಹೆಚ್ಚಾಗಿ ಸೇವಿಸಿ: ನೀವು ಪ್ರತಿನಿತ್ಯ ಸೇವಿಸುವ ಆಹಾರವನ್ನು ಸೇವಿಸುವಾಗ ಹಸಿರು ತರಕಾರಿ ಹಾಗೂ ತಾಜಾ ಹಣ್ಣನ್ನು ತಿನ್ನುವುದು ಉತ್ತಮ. ಇದರಿಂದ ಕರುಳಿನ ಆರೋಗ್ಯ ಉತ್ತಮವಾಗಲು ಸಹಾಯವಾಗುತ್ತದೆ. ಇದರ ಜೊತೆಗೆ ಮಸಾಲೆಯುಕ್ತ ಹಾಗೂ ಅತಿ ಹೆಚ್ಚು ಊಟ ಮಾಡುವುದರಿಂದ ಆದಷ್ಟು ದೂರವಿರಿ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!

    ಮೊಸರನ್ನು ಸೇವಿಸಿ: ಮೊಸರಿನಂತಹ ನೈಸರ್ಗಿಕ ಪ್ರೋಟಿನ್‍ಯುಕ್ತ ಆಹಾರವನ್ನು ಸೇವಿಸಿ. ಇದರಿಂದ ನಿಮ್ಮ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಬಿಸಿಲಿನ ಬೇಗೆಯಿಂದ ನಿಮ್ಮ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಸರಿಯಾಗಿ ನಿದ್ದೆ ಮಾಡಿ: ಪ್ರತಿಯೊಬ್ಬರಿಗೂ ಪ್ರತಿನಿತ್ಯ ಕನಿಷ್ಠ 7ರಿಂದ 8 ತಾಸುಗಳ ಕಾಲ ನಿದ್ದೆ ಬೇಕಾಗುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಯೂ ಸರಿಯಾಗಿ ಆಗುತ್ತದೆ. ಜೊತೆಗೆ ಕರುಳಿನ ಆರೋಗ್ಯದ ಉತ್ತಮವಾಗಿಡುತ್ತದೆ. ಜೊತೆಗೆ ನಿಮ್ಮ ಇಡೀ ದಿನ ಫ್ರೆಶ್ ಆಗಿರುತ್ತದೆ. ಇದನ್ನೂ ಓದಿ: ಮಾವಿನ ಹಣ್ಣು ಎಂದರೆ ಇ‌ಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?