ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಮದುವೆ ಆಗಿ ಕೆಲವೇ ತಿಂಗಳಿಗೆ ನಯನತಾರಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ ಮಾಡಿರುವ ಎಡವಟ್ಟು ಈಗ ನಯನತಾರಾ ಆಸ್ಪತ್ರೆಗೆ ದಾಖಲಾಗುವ ಹಾಗೆ ಮಾಡಿದೆ. ಅಷ್ಟಕ್ಕೂ ಆಗಿದ್ದೇನು.
ನವ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ನಯನತಾರಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಪತಿ ವಿಘ್ನೇಶ್ ಮಾಡಿದ ಕೆಲಸದಿಂದ ನಯನ ಆಸ್ಪತ್ರೆ ಸೇರುವಂತಾಗಿದೆ. ಸದ್ಯ ಈ ವಿಚಾರ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: `ಬ್ರಹ್ಮಾಸ್ತ್ರ’ ಚಿತ್ರ ರಿಲೀಸ್ ಬೆನ್ನಲ್ಲೇ ಇಟಲಿಗೆ ಹಾರಿದ ರಣ್‌ಬೀರ್ ಕಪೂರ್ ದಂಪತಿ
ನಯನತಾರಾ ಮೇಲಿನ ಪ್ರೀತಿಯಿಂದ ಅವರ ಪತಿ ವಿಘ್ನೇಶ್ ಶಿವನ್ ವೀಕೆಂಡ್ ಸ್ಪೆಷಲ್ ಅಡುಗೆ ಮಾಡಿದ್ದಾರೆ. ಇದನ್ನು ತಿಂದ ನಯನತಾರಾ ಆರೋಗ್ಯ ಹದಗೆಟ್ಟಿದೆಯಂತೆ. ಪತಿ ಮಾಡಿದ ಅಡುಗೆ ನಯನತಾರಾ ಫುಲ್ ವಾಂತಿ ಮಾಡಿಕೊಂಡಿದ್ದಾರಂತೆ. ಇದನ್ನೂ ಓದಿ: ನಿತಿನ್‌ಗೆ ನಾಯಕಿಯಾಗಬೇಕಿದ್ದ ರಶ್ಮಿಕಾ ಜಾಗಕ್ಕೆ ಕೃತಿ ಶೆಟ್ಟಿ ಎಂಟ್ರಿ
ವೈದ್ಯರು ನಯನತಾರಾಳನ್ನು ಕೆಲ ಗಂಟೆಗಳ ಕಾಲ ನಿಗಾದಲ್ಲಿಟ್ಟು ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಮಾಡಿದ್ದಾರೆ. ಈಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾರಂತೆ. ಆದರೆ ಈ ಸುದ್ದಿಗೆ ನಯನತಾರಾ ಅಥವಾ ವಿಘ್ನೇಶ್ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಶಾಲಾ ಕಾಲೇಜು ತರಗತಿಗಳಲ್ಲಿ ಹಿಜಬ್ ಬ್ಯಾನ್ ಮಾಡಿದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ವಿಳಂಬವಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್.ವಿ.ರಮಣ ಹೇಳಿದ್ದಾರೆ.
ಪ್ರಕರಣದ ವಿಚಾರಣೆ ಬಗ್ಗೆ ಇಂದು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಪ್ರಸ್ತಾಪಿಸಿದ ವೇಳೆ ನ್ಯಾಯಮೂರ್ತಿಗಳು ಹೀಗೆ ಅಭಿಪ್ರಾಯಪಟ್ಟಿದ್ದಾರೆ. ಈ ಅರ್ಜಿಯ ವಿಚಾರಣೆ ಆರಂಭಿಸಬೇಕಿತ್ತು, ಆದರೆ ವಿಚಾರಣೆ ನಡೆಸಬೇಕಿದ್ದ ನ್ಯಾಯಾಧೀಶರ ಪೈಕಿ ಓರ್ವರು ಅನಾರೋಗ್ಯಕ್ಕಿಡಾಗಿದ್ದಾರೆ. ಹೀಗಾಗಿ ವಿಚಾರಣೆ ವಿಳಂಬವಾಗುತ್ತಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಬಳಿಕ ವಿಶೇಷ ಪೀಠ ರಚನೆ ಮಾಡಲಾಗುವುದು ಎಂದು ಸಿಜೆಐ ಹೇಳಿದರು. ಇದನ್ನೂ ಓದಿ: ರಾಜ್ಯ ಹಾಳು ಮಾಡಿ ಸಿದ್ದರಾಮೋತ್ಸವ ಮಾಡುತ್ತಿದ್ದಾರೆ: ಅರಗ
ಕನಿಷ್ಠ ವಿಚಾರಣೆಗೆ ದಿನಾಂಕ ನಿಗಧಿಯಾದರೂ ಮಾಡಿ ಎಂದು ಮೀನಾಕ್ಷಿ ಅರೋರಾ ಮನವಿ ಮಾಡಿದರು. ಆದರೆ ಅದಕ್ಕೂ ಸಿಜೆಐ ನಿರಾಕರಿಸಿದರು. ಕಳೆದ ವಿಚಾರಣೆಯಲ್ಲಿ ಜುಲೈನಲ್ಲಿ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಲಾಗುವುದು ಎಂದು ತಿಳಿಸಿದರು.
ಶಾಲಾ ಕಾಲೇಜುಗಳ ತರಗತಿಯಲ್ಲಿ ಹಿಜಬ್ ಧರಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಈ ಹಿಂದೆ ಆದೇಶ ನೀಡಿತ್ತು. ಈ ಆದೇಶ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್ ಹಿಜಾಬ್ ಇಸ್ಲಾಂದ ಮೂಲಭೂತ ಅವಶ್ಯಕತೆ ಅಲ್ಲ ಎಂದು ಹೇಳಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್
Live Tv
[brid partner=56869869 player=32851 video=960834 autoplay=true]
ಬರ್ನ್: ವಿಶ್ವ ಆರೋಗ್ಯ ಸಂಸ್ಥೆ(WHO) ಮಂಕಿಪಾಕ್ಸ್ ಅನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಶನಿವಾರ ಘೋಷಣೆ ಮಾಡಿದೆ.
WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಜಾಗತಿಕವಾಗಿ ಏಕಾಏಕಿ ಹರಡುತ್ತಿರುವ ಮಂಕಿಪಾಕ್ಸ್ ಅಂತಾರಾಷ್ಟ್ರೀಯ ಕಾಳಜಿಯಿಂದಾಗಿ ತುರ್ತು ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.
ಕಳೆದ ತಿಂಗಳು WHO ತುರ್ತು ಸಭೆ ನಡೆಸಿ, ಮಂಕಿಪಾಕ್ಸ್ ಅನ್ನು ತುರ್ತು ಪರಿಸ್ಥಿತಿ ಅಲ್ಲ, ಇದು ಹೆಚ್ಚು ಅಪಾಯಕಾರಿಯಾಗಿಲ್ಲ ಎಂದು ತಿಳಿಸಿತ್ತು. ಈ ಘೋಷಣೆ ಬಳಿಕ ಜಾಗತಿಕವಾಗಿ ಮಂಕಿಪಾಕ್ಸ್ ಪ್ರಕರಣಗಳು ಏರಿಕೆ ಕಂಡವು. ಇದೀಗ ಒಟ್ಟು 75 ದೇಶಗಳಲ್ಲಿ ಮಂಕಿಪಾಕ್ಸ್ ಕಂಡುಬಂದಿದ್ದು, ಸೋಂಕಿಗೆ 16,000 ಜನರು ಗುರಿಯಾಗಿದ್ದಾರೆ ಹಾಗೂ 5 ಜನ ಮಂಕಿಪಾಕ್ಸ್‌ನಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್
ಮಂಕಿಪಾಕ್ಸ್ ಅನ್ನು ತುರ್ತು ಪರಿಸ್ಥಿತಿಯ ಪರಿಗಣನೆಗೆ ತೆಗೆದುಕೊಳ್ಳಲು ಕೆಲವು ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಈ ಹಿಂದೆ ಮಂಕಿಪಾಕ್ಸ್ ವೈರಸ್ ಅನ್ನು ಎದುರಿಸಿರದ ದೇಶಗಳಲ್ಲಿ ಇದು ಅತ್ಯಂತ ವೇಗವಾಗಿ ಹರಡುತ್ತಿದೆ. ಅಂತಾರಾಷ್ಟ್ರೀಯ ಆರೋಗ್ಯ ನಿಯಮಗಳ ಅಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲು 3 ಮಾನದಂಡಗಳನ್ನು ಪೂರೈಸಲಾಗಿದೆ. ತುರ್ತು ಪರಿಸ್ಥಿತಿಯ ಸಲಹೆಯೂ ಒಮ್ಮತಕ್ಕೆ ಬಾರದೇ ಇರುವುದು ಕೂಡಾ ಇದೀಗ ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದೆ.
ಮಂಕಿಪಾಕ್ಸ್ ವೈರಸ್ ಬಗೆಗಿನ ವೈಜ್ಞಾನಿಕ ತತ್ವ, ಪುರಾವೆಗಳು ಹಾಗೂ ಇತರ ಮಾಹಿತಿಗಳು ಪ್ರಸ್ತುತ ಸಾಕಷ್ಟಿಲ್ಲದಿರುವುದರಿಂದ ಇದರ ಬಗ್ಗೆ ಇನ್ನೂ ತಿಳಿದುಕೊಳ್ಳುವುದಿದೆ. ಇದು ಮಾನವನ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಅಂತಾರಾಷ್ಟ್ರೀಯವಾಗಿ ಹರಡುತ್ತಿದೆ. ಹಾಗೂ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಅಡ್ಡಿಪಡಿಸುತ್ತಿದೆ. ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೇಲಿನ ದಾಳಿ ವಿರೋಧಿಸಿ ಬಾಂಗ್ಲಾದಲ್ಲಿ ಪ್ರತಿಭಟನೆ
ಮಂಕಿಪಾಕ್ಸ್ ಈಗಾಗಲೇ ಭಾರತಕ್ಕೂ ಲಗ್ಗೆಯಿಟ್ಟಿದ್ದು, ಕೇರಳದಲ್ಲಿ 3 ಕೇಸ್‌ಗಳು ಪತ್ತೆಯಾಗಿವೆ.
Live Tv
[brid partner=56869869 player=32851 video=960834 autoplay=true]
ಒಣ ಶುಂಠಿ ಎಂದಾಕ್ಷಣ ಅದು ಏನಕ್ಕೂ ಬರಲ್ಲ ಎಂಬ ಭಾವನೆ ಬಂದಿರುತ್ತೆ. ಆದರೆ ಒಣ ಶುಂಠಿಯು ಹಸಿ ಶುಂಠಿಯಷ್ಟೇ ಪ್ರಾಮುಖ್ಯೆತಯೆನ್ನು ಪಡೆದಿದ್ದು, ಅನೇಕ ರೋಗಗಳಿಗೆ ರಾಮಬಾಣವಾಗಿದೆ. ಮಲಬದ್ಧತೆಯ ಸಮಸ್ಯೆಯ ಜೊತೆಗೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಒಣ ಶುಂಠಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ದೇಹದ ಆರೋಗ್ಯ ಹೆಚ್ಚುವುದನ್ನು ನೀವೇ ಸುಲಭವಾಗಿ ಕಂಡುಕೊಳ್ಳಬಹುರು
ತೂಕ ಇಳಿಸಲು ಸಹಾಯ: ಒಣ ಶುಂಠಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ಒಣ ಶುಂಠಿ ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಸಿವು ಕಡಿಮೆಯಾಗುತ್ತದೆ. ಇದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.
ಹೊಟ್ಟೆ ನೋವು ನಿವಾರಣೆ: ಒಣ ಶುಂಠಿಯ ಬಳಕೆಯು ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಹಾಗೂ ದೇಹದ ನೋವನ್ನು ಶಮನ ಮಾಡುತ್ತದೆ. ಇದಲ್ಲದೆ ಒಣ ಶುಂಠಿಯ ಸೇವನೆಯು ಹೊಟ್ಟೆಯನ್ನು ಶುದ್ಧೀಕರಿಸಲು ಮತ್ತು ದೇಹಕ್ಕೆ ಶಕ್ತಿಯನ್ನು ಒದಗಿಸಲು ಸಹಾಯ ಮಾಡುತ್ತದೆ.
ಜೀರ್ಣಶಕ್ತಿ ಬಲವಾಗಿಸುತ್ತೆ: ಒಣ ಶುಂಠಿಯ ಪುಡಿ ದೀರ್ಘಕಾಲದ ಅಜೀರ್ಣದಿಂದಾಗಿ ಹೊಟ್ಟೆ ನೋವು ಮತ್ತು ಕಿಬ್ಬೊಟ್ಟೆಯ ಅಸ್ವಸ್ಥತೆಯನ್ನು ನಿವಾರಿಸುತ್ತದೆ. ಒಣ ಶುಂಠಿಯ ಪುಡಿ ಈ ಸಮಸ್ಯೆಯನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಅಧಿಕಗೊಳಿಸುತ್ತದೆ. ಇದನ್ನೂ ಓದಿ: ಮುಖದಲ್ಲಿನ ಎಣ್ಣೆಯುಕ್ತ ಚರ್ಮವನ್ನು ಹೋಗಲಾಡಿಸಿ ಅಂದ ಹೆಚ್ಚಿಸಿಕೊಳ್ಳಿ
ಕೊಲೆಸ್ಟ್ರಾಲ್ ಕಡಿಮೆ: ಶುಂಠಿಯು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಮಟ್ಟದ ಎಲ್ಡಿಎಲ್ ಲಿಪೊಪ್ರೋಟೀನ್ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ ಒಣ ಶುಂಠಿ ಸೇವಿಸಿದರೆ ನಿಮ್ಮ ಸಮಸ್ಯೆಯಿಂದ ದೂರವಾಗಬಹುದು. ಇದನ್ನೂ ಓದಿ: ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ
Live Tv
[brid partner=56869869 player=32851 video=960834 autoplay=true]
ಎಣ್ಣೆಯುಕ್ತ ಚರ್ಮ ಹೊಂದಿರುವ ಜನರಿಗೆ ಮನೆಯಿಂದ ಹೊರಬಂದ ತಕ್ಷಣ ಮುಖದಲ್ಲಿ ಎಣ್ಣೆ, ಬೆವರು ಇತ್ಯಾದಿ ಸಮಸ್ಯೆಗಳು ಶುರುವಾಗುತ್ತವೆ. ಇದರಿಂದ ಮುಕ್ತಿ ಪಡೆಯಲು ಹಾಗೂ ಮುಖದ ಅಂದವನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಅನೇಕ ಮಾಯಿಶ್ಚರೈಸ್‍ಗಳನ್ನು ಬಳಸಿರುತ್ತೀರಾ. ಆದರೂ ಅದು ಕಡಿಮೆ ಆಗಿರುವುದಿಲ್ಲ. ಈ ಬೆವರು ಹಾಗು ಮುಖದಲ್ಲಿ ಉಂಟಾಗುವ ಅತಿಯಾದ ಎಣ್ಣೆಯನ್ನು ಹೊಗಲು ಸಿಂಪಲ್ಲಾಗಿ ಇಲ್ಲೊಂದಿಷ್ಟು ಮನೆ ಮದ್ದುಗಳಿವೆ.
ಮುಖವನ್ನು ಆಗಾಗೆ ತೊಳಿಯಿರಿ: ನಿಯಮಿತವಾಗಿ ಮುಖವನ್ನು ತೊಳೆಯುವುದರಿಂದ ಚರ್ಮದ ಮೇಲಿನ ಎಣ್ಣೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರತಿನಿತ್ಯ ಬೆಚ್ಚಗಿನ ನೀರನ್ನು ಮುಖಕ್ಕೆ ಸಿಂಪಡಿಸಿಕೊಳ್ಳಿ. ಇದರಿಂದ ಎಣ್ಣೆಯುಕ್ತ ಜಿಡ್ಡನ್ನು ಹೊಗಲಾಡಿಸಬಹುದು.
ರೋಸ್ ವಾಟರ್ ಸ್ಪ್ರೇ: ರೋಸ್ ವಾಟರ್ ಸ್ಪ್ರೇ ಮುಖಕ್ಕೆ ಸಿಂಪಡಿಸುವುದರಿಂದ ನಿಮಗೆ ತಾಜಾತನದ ಅನುಭವ ದೊರೆಯುತ್ತದೆ. ನಿಮ್ಮ ಮುಖ ಎಣ್ಣೆಯಿಂದ ಜಿಡ್ಡಾಗಿ ಕಾಣಿಸಿದಾಗ ಜೊತೆಗೆ ಮುಖದಲ್ಲಿ ಬೆವರುವಿಕೆಯನ್ನು ಅನುಭವಿಸುತ್ತಿರುವಾಗ ರೋಸ್ ವಾಟರ್ ಅನ್ನು ಸಿಂಪಡಿಸಿ ಅದನ್ನು ಯಾವುದಾದರೂ ಮೃದು ಬಟ್ಟೆ ಅಥವಾ ಹತ್ತಿಯಿಂದ ಸ್ವಚ್ಛಗೊಳಿಸಿ. ತಕ್ಷಣ ನಿಮ್ಮಲ್ಲಿರುವ ಆಯಾಸ ಮುಖ ತೊಲಗಿ ಫ್ರೆಶ್ ಆಗಿ ಕಾಣುತ್ತಿರಾ. ಇದನ್ನೂ ಓದಿ: ಹೊಟ್ಟೆನೋವಿಗೆ ಈ ಮನೆ ಮದ್ದು ರಾಮಬಾಣ
ಗ್ರೀನ್ ಟೀ: ಪ್ರತಿನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕರ ಜೀವನವನ್ನು ಪಡೆಯುತ್ತೀರಾ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೇ ಗ್ರೀನ್ ಟೀಯನ್ನು ಕುಡಿಯುವ ಬದಲು ಮುಖಕ್ಕೆ ಹಚ್ಚುವುದರಿಂದ ಎಣ್ಣೆಯುಕ್ತ ಚರ್ಮವನ್ನು ಹೊಗಲಾಡಿಸಬಹುದು. ಅದಕ್ಕಾಗಿ ತಯಾರಿಸಿದ ಗ್ರೀನ್ ಟೀಯನ್ನು ತಣ್ಣಗಾಗುವವರೆಗೆ ಹಾಗೇ ಬಿಡಿ. ನಂತರ ಒಂದು ಸಣ್ಣ ಬಾಟಲಿಯಲ್ಲಿ ಗ್ರೀ ಟೀಯನ್ನು ಸಿಂಪಡಿಸಿ. ಅದನ್ನು ಮುಖಕ್ಕೆ ಸ್ಪ್ರೇ ಮಾಡಿ. ಇದರಿಂದ ಎಣ್ಣೆಯುಕ್ತ ಚರ್ಮ ತೊಲಗುತ್ತದೆ.
ತುಳಸಿ ಸ್ಪ್ರೇ: ತುಳಸಿ ಸ್ಪ್ರೇಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಒಂದು ಕಪ್ ನೀರಿನಲ್ಲಿ 3-4 ತುಳಸಿ ಎಲೆಗಳನ್ನು ಹಾಕಿ ಮತ್ತು 2-3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. ನಂತರ ಅದನ್ನ ತಣ್ಣಗಾಗಿಸಿ, ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಅಗತ್ಯವಿದ್ದಾಗ ಬಳಸಿ, ಇದು ಮೊಡವೆಗಳಿಂದ ಪರಿಹಾರವನ್ನು ನೀಡುತ್ತದೆ. ಇದರಿಂದ ಎಣ್ಣೆಯುಕ್ತ ಚರ್ಮ ಹೊಗಲಾಡಿಸಿ, ಫ್ರೇಶ್‍ನೆಸ್ ಸಿಗುತ್ತೆ. ಇದನ್ನೂ ಓದಿ: ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಕರಿಬೇವಿನಲ್ಲಿದೆ ಪರಿಹಾರ
ಟೊಮೆಟೊ: ಟೊಮೆಟೊವನ್ನು ಮುಖದಲ್ಲಿ ಮುಡುವ ಮೊಡವೆಗೆ ಮನೆಮದ್ದಾಗಿದೆ. ಟೊಮೆಟೊದಲ್ಲಿ ಆಮ್ಲಗಳು ಚರ್ಮದಲ್ಲಿರುವ ಎಣ್ಣೆಯನ್ನು ಹಿರಿಕೊಂಡು ಮುಖವನ್ನು ಕಾಂತಿಯುತವಾಗಿ ಮಾಡುತ್ತದೆ. ನೀವು ಪ್ರತಿನಿತ್ಯ ಟೊಮೆಟೊವನ್ನು ಫೆಸ್ ಮಾಸ್ಕ್ ತರ ಮಾಡಿಕೊಂಡು 5 ನಿಮಿಷಗಳ ಕಾಲ ಬಳಸಿಕೊಳ್ಳಿ.
Live Tv
[brid partner=56869869 player=32851 video=960834 autoplay=true]
ತಮಿಳಿನ ಹೆಸರಾಂತ ನಟ ವಿಕ್ರಮ್ ಅವರಿಗೆ ಹೃದಯಾಘಾತವಾಗಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾದ ಸುದ್ದಿ, ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ನೆಚ್ಚಿನ ನಟನಿಗೆ ಅದೇನಾಯಿತು ಎನ್ನುವ ಆತಂಕದಲ್ಲೇ ಕೆಲ ಗಂಟೆಗಳನ್ನು ಕಳೆದಿದ್ದರು. ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನೂ ಸಲ್ಲಿಸಲಾಯಿತು. ಆದರೆ, ವಿಕ್ರಮ್ ಅವರಿಗೆ ಹೃದಯಾಘಾತವಾಗಿಲ್ಲ ಎನ್ನುವ ಸುದ್ದಿ ನಿರಾಳರನ್ನಾಗಿಸಿತು.
ವಿಕ್ರಮ್ ಅವರಿಗೆ ಆಗಿದ್ದು ಚೆಸ್ಟ್ ಡಿಸ್ ಕಂಫರ್ಟ್ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಹಾರ್ಟ್ ಅಟ್ಯಾಕ್ ಆಗಿದೆ ಎಂಬ ಸುದ್ದಿಯನ್ನು ಹಬ್ಬಿಸಿದರವರ ಮೇಲೆ ವಿಕ್ರಮ್ ಪುತ್ರ ಬೇಸರ ಮಾಡಿಕೊಂಡಿದ್ದಾರೆ. ವಿಕ್ರಮ್ ಅವರಿಗೆ ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇದೀಗ ಅವರ ಆರೋಗ್ಯದಲ್ಲಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ
ಚೆನ್ನೈನ ಕಾವೇರಿ ಆಸ್ಪತ್ರೆಯ ವೈದ್ಯರೇ ಈ ಕುರಿತು ಸ್ಪಷ್ಟನೆ ನೀಡಿದ್ದು, ಅವರ ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ. ಇಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ವಿಶ್ರಾಂತಿ ಪಡೆಯದೇ ಕೆಲಸ ಮಾಡಿದ್ದರಿಂದ ಈ ರೀತಿ ಆಗಿದೆ. ವಿಶ್ರಾಂತಿ ಪಡೆದರೆ ಸರಿ ಹೋಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಎರಡು ದಿನಗಳ ಹಿಂದೆ ಬಿಪಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಂಡಿದ್ದರೂ, ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದಿದ್ದಾರೆ ಅಪೋಲೊ ಆಸ್ಪತ್ರೆ ವೈದ್ಯರು. ಹಾಗಾಗಿ ಇನ್ನೂ ಒಂದು ವಾರ ಕಿಶೋರ್ ಐಸಿಯುನಲ್ಲೇ ಇರಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವೈದ್ಯರು, ‘ ಆಸ್ಪತ್ರೆಗೆ ಕಿಶೋರ್ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಲೆಫ್ಟ್ ಬ್ರೈನ್ ಬಳಿ ಬ್ಲಡ್ ಕ್ಲಾಟ್ ಆಗಿತ್ತು. ಇಮಿಡಿಯೇಟ್ ಸರ್ಜರಿ ಮಾಡಿದೆವು. ಸದ್ಯ ಅವರಿಗೆ ಪ್ರಜ್ಞೆ ಬಂದಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಆದರೆ, ಒಂದು ವಾರ ಕಾಲ ಐಸಿಯುನಲ್ಲೇ ಇರಬೇಕಾಗುತ್ತದೆ. ವೆಂಟಿಲೇಟರ್ ತೆಗೆಯಲು ನೋಡಿದ್ವಿ. ಆದ್ರೆ ಸದ್ಯಕ್ಕಿನ್ನೂ ಆಗ್ತಿಲ್ಲ. ತುಂಬಾ ರೆಸ್ಟ್ ಲೇಸ್ ಆಗಿರೋದ್ರಿಂದ ಈ ರೀತಿ ಆಗಿದೆ. ಅವರು ತುಂಬಾ ರೆಸ್ಟ್ ಮಾಡಬೇಕಾಗುತ್ತೆ’ ಎಂದಿದ್ದಾರೆ. ಇದನ್ನೂ ಓದಿ : Breaking- ಫಹಾದ್ ಫಾಸಿಲ್ ಗಾಗಿ ಸಿನಿಮಾ ಮಾಡಲು ಮತ್ತೆ ತಮಿಳಿಗೆ ಹೊರಟ ಪವನ್ ಕುಮಾರ್
ಕಿಶೋರ್ ಅವರು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದರೂ, ಕೆಲ ತಿಂಗಳುಗಳ ಕಾಲ ಅವರು ಹಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದೂ ವೈದ್ಯರು ಹೇಳಿದ್ದಾರೆ. ‘ಲೆಫ್ಟ್ ಬ್ರೈನ್ ಆಗಿರೋದ್ರಿಂದ ಮಾತನಾಡೋದಕ್ಕೆ ಸ್ವಲ್ಪ ಸಮಯವಾಗಬಹುದು. ಫಿಸಿಯೋತೆರಪಿ ಮಾಡಸಿಕೊಂಡರೆ ಸರಿ ಹೋಗುತ್ತದೆ. ಸ್ಟ್ರೋಕ್ ನಿಂದ ರೈಟ್ ಸೈಡ್ ಸ್ವಲ್ಪ ಸ್ವಾಧೀನ ಕಳೆದುಕೊಂಡಿದ್ದಾರೆ. ಈಗಲೂ ಕೂಡ ಸ್ವಲ್ಪ ಅವರ ಆರೋಗ್ಯ ಸ್ಥಿತಿ ಗಂಭೀರವೆ ಇದೇ. ಇನ್ನೂ ಒಂದು ವಾರ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಯಲಿದೆ’ ಎಂದಿದ್ದಾರೆ ವೈದ್ಯರು. ಈಗಾಗಲೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕಿಶೋರ್ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಾಸ್ಯ ನಟ ಚಿಕ್ಕಣ್ಣ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿತ್ತು. ಚಿಕ್ಕಣ್ಣ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದ್ದರು. ಈ ಸುದ್ದಿ ಓದಿದವರು ಸಹಜವಾಗಿಯೇ ಆತಂಕ ವ್ಯಕ್ತ ಪಡಿಸಿದ್ದರು. ಸ್ವತಃ ಚಿಕ್ಕಣ್ಣಗೆ ಕೆಲವರು ಕಾಲ್ ಮಾಡಿ ಆರೋಗ್ಯ ವಿಚಾರಿಸಿಕೊಂಡರು. ಇದೀಗ ಆ ಕುರಿತು ಸ್ವತಃ ಚಿಕ್ಕಣ್ಣ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ. ಚಿತ್ರೀಕರಣ ಸ್ಥಳದಿಂದಲೇ ವಿಡಿಯೋವೊಂದನ್ನು ಕಳುಹಿಸಿರುವ ಅವರು, “ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ಸುದ್ದಿ ಸುಳ್ಳು. ಯಾರೋ ಕಿಡಿಗೇಡಿಗಳು ಆ ರೀತಿ ಮಾಡಿದ್ದಾರೆ. ನಾನು ಉಪಾಧ್ಯಕ್ಷ ಸಿನಿಮಾದ ಶೂಟಿಂಗ್ ನಲ್ಲಿದ್ದೇನೆ. ಅದೇ ಸ್ಥಳದಿಂದಲೇ ಈಗ ಮಾತನಾಡುತ್ತಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಆರೋಗ್ಯ ಗಟ್ಟಿಮುಟ್ಟಾಗಿದ್ದು, ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ : ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಿಗೆ ಲೆಕ್ಕ ಕೇಳಿದೆ ಆಡಳಿತಾಧಿಕಾರಿ
ಚಿಕ್ಕಣ್ಣ ಅವರ ವಿಷಯದಲ್ಲಿ ಆಗಾಗ್ಗೆ ಈ ರೀತಿ ಸುಳ್ಳು ಸುದ್ದಿಗಳು ಹರಡುತ್ತಲೇ ಇರುತ್ತವೆ. ಈ ಹಿಂದೆ ನಿರೂಪಕಿಯೊಬ್ಬರನ್ನು ಚಿಕ್ಕಣ್ಣ ಮದುವೆ ಆಗಿದ್ದಾರೆ ಎಂದು ಗಾಸಿಪ್ ಹರಡಿಸಿದ್ದರು. ಈ ಕುರಿತಂತೆ ಆ ನಿರೂಪಕಿ ಮತ್ತು ಚಿಕ್ಕಣ್ಣ ಅದೆಲ್ಲವೂ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ಕೊಟ್ಟಿದ್ದರು. ಇಂದು ಅವರ ಆರೋಗ್ಯದ ಕುರಿತು ಸುಳ್ಳು ಸುದ್ದಿ ಹರಡಿದೆ.
ನಮ್ಮ ದೇಹದ ಪ್ರಮುಖ ಅಂಗ ಹೊಟ್ಟೆ. ನಮಗೆ ದಿನವೀಡಿ ಕೆಲಸ ಮಾಡಲು ಉತ್ಸಾಹ ಇರಬೇಕು ಎಂದು ಅದಕ್ಕೆ ಸೇವಿಸುವ ಆಹಾರ ಆಗಿರುತ್ತದೆ. ಆದರೆ ಕೆಲವೊಮ್ಮೆ ಮಲಬದ್ಧತೆ, ಅಜೀರ್ಣತೆ, ಎದೆಯುರಿ, ಗ್ಯಾಸ್ಟ್ರಿಕ್, ವಿಪರೀತ ಉಷ್ಣ ಹೀಗೆ ಹತ್ತು ಹಲವು ಕಾರಣದಿಂದಾಗಿ ಹೊಟ್ಟೆ ನೋವು ಬರುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಯಾವುದೇ ಅಡ್ಡ ಪರಿಣಾಮ ಬಿರದೇ ಕೆಲವು ಮನೆಮದ್ದುಗಳನ್ನು ಅನುಸರಿಸಿ.
ನಿಂಬೆ ಚಹಾ: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಇರುತ್ತದೆ. ಇದರಿಂದಾಗಿ ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವಲ್ಲಿ ನಿಂಬೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಾಗಿ ಊಟ ಮಾಡಿ ಜೀರ್ಣ ಆಗದೆ ಹೊಟ್ಟೆ ನೋವಿನಿಂದ ಬಳಲುತ್ತಿರುವವರು ನಿಂಬೆ ಚಹಾ ಮಾಡಿಕೊಂಡು ಕುಡಿಯಬೇಕು. ಆ ಸಂದರ್ಭದಲ್ಲಿ ನಿಂಬೆ ಹಣ್ಣಿನ ರಸ ನಮ್ಮ ಹೊಟ್ಟೆ ಸೇರಿದಾಗ ಬಹುಬೇಗನೆ ಜೀರ್ಣವಾಗುವಂತೆ ಮಾಡುತ್ತದೆ. ಇದರ ಜೊತೆಗೆ ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತದೆ.
ಪುದೀನ ಎಲೆ: ತಾಜಾ ಪುದೀನ ಎಲೆಗಳು ಸಹ ಅಜೀರ್ಣತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಳ್ಳೆಯ ಮನೆಮದ್ದು ಆಗಿದೆ. ಕೆಲವೊಮ್ಮೆ ನಮ್ಮ ಜೀಣಾರ್ಂಗದಲ್ಲಿ ಮಾಂಸ ಖಂಡಗಳ ಭಾಗದಲ್ಲಿ ಗ್ಯಾಸ್ಟ್ರಿಕ್‍ನ ಸಮಸ್ಯೆಯಿಂದ ವಿಪರೀತ ನೋವು ಉಂಟಾಗುತ್ತದೆ. ಜೊತೆಗೆ ಎದೆಯುರಿತದ ತರಹ ಭಾಸವಾಗುತ್ತದೆ. ಇಂತಹ ಸಮಯದಲ್ಲಿ ಪುದೀನ ಎಲೆಗಳನ್ನು ಸೇವಿಸಬೇಕು. ಈ ಪುದಿನ ಎಲೆಗಳಲ್ಲಿ ಆಂಟಿ- ಸ್ಪಸ್ಮೊಡಿಕ್ ಲಕ್ಷಣಗಳು ಹೆಚ್ಚಾಗಿದ್ದು, ಈ ರೀತಿಯ ಸಮಸ್ಯೆಗಳಿಗೆ ಬಹು ಬೇಗನೆ ಮುಕ್ತಿ ಕೊಡುತ್ತೇವೆ. ಪುದೀನ ಎಲೆಗಳಲ್ಲಿರುವ ಗಿಡಮೂಲಿಕೆಗಳು ಮನುಷ್ಯನ ಕರುಳಿನ ಮತ್ತು ಹೊಟ್ಟೆಯ ಏರಿಳಿತಗಳನ್ನು ನಿಯಂತ್ರಣ ಮಾಡುವ ಶಕ್ತಿಯನ್ನು ಹೊಂದಿವೆ.
ಶುಂಠಿ ತಿನ್ನಿ: ಶುಂಠಿಯ ಬೇರುಗಳನ್ನು ಹಾಗೆ ಹಲ್ಲಿನಿಂದ ಬೇಕಾದರೂ ಜಗಿದು ತಿನ್ನಬಹುದು ಅಥವಾ ಶುಂಠಿಯನ್ನು ಸಣ್ಣಗೆ ಚೂರುಗಳನ್ನಾಗಿ ಮಾಡಿಕೊಂಡು ಅದರಿಂದ ಚಹ ತಯಾರಿಸಿಕೊಂಡು ಕುಡಿಯಬಹುದು. ಇದರಿಂದ ಹೊಟ್ಟೆಗೆ ಸಂಬಂಧಿಸಿದ ಕೆಲವು ರೋಗಗಳಿಂದ ಮುಕ್ತಿ ಪಡೆಯಿರಿ. ಜೊತೆಗೆ ಶುಂಠಿ ಹೃದ್ರೋಗವನ್ನು ತಡೆಯುತ್ತದೆ, ಮುಟ್ಟಿನ ನೋವನ್ನು ನಿವಾರಿಸುತ್ತದೆ.
ಜೀರಿಗೆ ಕಷಾಯ: ಜೀರಿಗೆ ಕಷಾಯವು ಜಠರಕ್ಕೆ ಒಳ್ಳೆಯದು. ಇದರ ಜೊತೆಗೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬುವಿಕೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ಜೀರಿಗೆ ಕಷಾಯವನ್ನು ಮಾಡಿ ಕುಡಿಯುವುದು ಉತ್ತಮ ಪರಿಹಾರವಾಗಿದೆ. ಜೀರಿಗೆಯಲ್ಲಿ ಅಧಿಕ ಪ್ರಮಾಣದ ನಾರಿನಾಂಶ ಇರುವುದರಿಂದ, ಜೀರ್ಣಶಕ್ತಿ ಹೆಚ್ಚಿಸಿ, ನಮ್ಮ ಆರೋಗ್ಯ ಮತ್ತು ದೇಹದ ತೂಕ ಎರಡನ್ನೂ ಸಹ ಇದು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ. ಇದನ್ನೂ ಓದಿ: ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಕರಿಬೇವಿನಲ್ಲಿದೆ ಪರಿಹಾರ
ಇಂಗು: ಅಸ್ತಮಾ ಇದ್ದವರಿಗೆ ಇದು ಒಳ್ಳೆಯ ಮನೆಮದ್ದಾಗಿದೆ. ಅಷ್ಟೇ ಅಲ್ಲದೇ ಹೊಟ್ಟೆ ಉಬ್ಬರ ಸೇರಿದಂತೆ ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂಗಿನಿಂದ ಮಾಡಿದಂತಹ ಆಯುರ್ವೇದಿಕ್ ಕಷಾಯವು ಹೊಟ್ಟೆಯ ಅಸಿಡಿಟಿ, ಹೊಟ್ಟೆಯ ಗ್ಯಾಸ್ ಮತ್ತು ಸೆಳೆತದಿಂದ ಪರಿಹಾರ ನೀಡುವುದು. ಇದನ್ನೂ ಓದಿ: ದೇಹವನ್ನು ಹೈಡ್ರೇಟ್ ಮಾಡುವ ‘ತುಳಸಿ ಕಷಾಯ’ ಮಾಡಿ ಕುಡಿಯಿರಿ
ನವದೆಹಲಿ: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಶುಭ ಕೋರಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜೀವ ಉಳಿಸುವಲ್ಲಿ ವೈದ್ಯರ ಪಾತ್ರ ಎಷ್ಟು ಮಹತ್ವ ಎಂಬುದನ್ನು ಸ್ಮರಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶದ ಎಲ್ಲ ವೈದ್ಯರಿಗೂ ವೈದ್ಯರ ದಿನಾಚರಣೆಯ ಶುಭಾಶಯಗಳು. ಜೀವ ಉಳಿಸುವಲ್ಲಿ ಮತ್ತು ನಮ್ಮ ಗ್ರಹವನ್ನು ಆರೋಗ್ಯಕರವಾಗಿಸುವಲ್ಲಿ ವೈದ್ಯರ ಪಾತ್ರ ಅಪಾರವಾಗಿದೆ ಎಂದು ನೆನೆದಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಚೋಪ್ರಾಗೆ ವಜ್ರದ ಕಿರೀಟ