Tag: health

  • ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

    ನಟಿ ಸಮಂತಾ ಆರೋಗ್ಯದ ಬಗ್ಗೆ ಮತ್ತೆ ಆತಂಕ: ‘ಶಾಕುಂತಲಾ’ ಸಿನಿಮಾ ರಿಲೀಸ್ ಮುಂದಕ್ಕೆ

    ಕ್ಷಿಣದ ಖ್ಯಾತ ನಟಿ ಸಮಂತಾ (Samantha) ಅವರ ಆರೋಗ್ಯದ ಬಗ್ಗೆ ಹಲವು ದಿನಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಸಮಂತಾ ಅವರ ಮ್ಯಾನೇಜರ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಸಮಂತಾ ಅವರ ಆರೋಗ್ಯ ಚೆನ್ನಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದೂ ತಿಳಿಸಿದ್ದಾರೆ. ಆದರೂ, ಸಮಂತಾ ಅವರ ಆರೋಗ್ಯದ (Health) ಬಗ್ಗೆ ಅನುಮಾನ ಮೂಡುವುದು ನಿಂತಿಲ್ಲ. ಕಾರಣ, ಸಮಂತಾ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತು ಅವರ ಸಿನಿಮಾಗಳ ಕೆಲಸಗಳು ಅಲ್ಲಲ್ಲೇ ನಿಂತಿವೆ.

    ಸಮಂತಾ ನಟನೆಯ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಎರಡೂ ಸಿನಿಮಾಗಳಲ್ಲೂ ಇವರೇ ಹೀರೋ, ಇವರೇ ಹಿರೋಯಿನ್. ಶಾಕುಂತಲಾ (Shakuntala) ಮತ್ತು ಯಶೋಧಾ (Yashodha) ಚಿತ್ರಗಳನ್ನು ಮುಗಿಸಿರುವ ಸಮಂತಾ, ಅದರ ಬಿಡುಗಡೆಗಾಗಿ ಕಾಯುತ್ತಿದ್ದರು. ಆದರೆ, ಎರಡೂ ಚಿತ್ರಗಳ ರಿಲೀಸ್ ಮುಂದಕ್ಕೆ ಹೋಗುತ್ತಿವೆ. ಈಗಾಗಲೇ ಚಿತ್ರದ ಪೋಸ್ಟರ್, ಫಸ್ಟ್ ಲುಕ್ ಹೀಗೆ ಏನೆಲ್ಲ ರಿಲೀಸ್ ಆಗುತ್ತಿವೆ. ಒಂದಕ್ಕೂ ಸಮಂತಾ ರಿಯ್ಯಾಕ್ಟ್ ಮಾಡಿಲ್ಲ. ಆಯಾ ಪೋಸ್ಟರ್ ಅನ್ನು  ಅವರು ಹಂಚಿಕೊಂಡಿಲ್ಲ.

    ಅಂದುಕೊಂಡಂತೆ ಆಗಿದ್ದರೆ, ಶಾಕುಂತಲಾ ಸಿನಿಮಾ ರಿಲೀಸ್ ಇನ್ನಷ್ಟೇ ಆಗಬೇಕಿತ್ತು. ಆದರೆ, ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಮುಂದಕ್ಕೆ ಹಾಕಿದ್ದಾರೆ. ಕಾರಣವನ್ನು ಮಾತ್ರ  ಅವರು ನೀಡಿಲ್ಲ. ಹಾಗಾಗಿ ಸಮಂತಾ ಅವರ ಅನಾರೋಗ್ಯವೇ ಚಿತ್ರ ಮುಂದೂಡಲು ಕಾರಣ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳಲ್ಲಿ (Fans) ಆತಂಕವೂ ಹೆಚ್ಚಾಗಿದೆ. ಈ ಕುರಿತು ಸ್ಪಷ್ಟನೆ ಸಿಗಬೇಕಿದೆ ಎನ್ನುತ್ತಿದ್ದಾರೆ ಫ್ಯಾನ್ಸ್. ಇದನ್ನೂ ಓದಿ:ರಿಷಬ್ ಶೆಟ್ಟರ ‘ಕಾಂತಾರ’ ಸಿನಿಮಾ ಹೇಗಿದೆ? ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬರೆದ ಸುದೀರ್ಘ ರಿವ್ಯೂ

    ಸಮಂತಾ ಚರ್ಮರೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಅಮೆರಿಕಾಗೆ (America) ತೆರಳಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಹೀಗಾಗಿಯೇ ಅವರು ಯಾವುದೇ ಶೂಟಿಂಗ್ ಮತ್ತು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಎಲ್ಲದಕ್ಕೂ ಸಮಂತಾ ಅವರು ಉತ್ತರ ಕೊಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಎಸ್.ಎಂ ಕೃಷ್ಣ ಚೇತರಿಸಿಕೊಳ್ಳುತ್ತಿದ್ದು, ಗಾಬರಿ ಬೇಡ: ಬಸವರಾಜ್ ಬೊಮ್ಮಾಯಿ

    ಎಸ್.ಎಂ ಕೃಷ್ಣ ಚೇತರಿಸಿಕೊಳ್ಳುತ್ತಿದ್ದು, ಗಾಬರಿ ಬೇಡ: ಬಸವರಾಜ್ ಬೊಮ್ಮಾಯಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ (SM Krishna) ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯಾರೂ ಆತಂಕ ಹಾಗೂ ಗಾಬರಿ ಪಡಬೇಡಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ಇಂದು ಆಸ್ಪತ್ರೆಗೆ ಭೇಟಿ ನೀಡಿ ಎಸ್‍ಎಂಕೆ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಎಸ್ ಎಂ ಕೃಷ್ಣರವರು ಜ್ವರದಿಂದ ಬಳಲುತ್ತಿದ್ದರು. ನಿನ್ನೆ ವೈದೇಹಿ ಆಸ್ಪತ್ರೆ (Vydehi Hospital) ಗೆ ದಾಖಲಿಸಿದ್ರು. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ಆಸ್ಪತ್ರೆ (Manipal Hospital) ಗೆ ಸೇರಿಸಲಾಗಿತ್ತು. ನಿರಂತರ ಚಿಕಿತ್ಸೆಯಿಂದ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.

    ಎರಡು ಮೂರು ದಿನಗಳಲ್ಲಿ ಅವರು ಡಿಸ್ಜಾರ್ಜ್ (Discharge) ಆಗುತ್ತಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಯಾರು ಆತಂಕಕ್ಕೆ ಒಳಗಾಗಬಾರದು, ಗಾಬರಿ ಬೇಡ ಎಂದು ಇದೇ ವೇಳೆ ಸಿಎಂ ಮನವಿ ಮಾಡಿಕೊಂಡರು. ಇದನ್ನೂ ಓದಿ: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು, ವೈದ್ಯರ ತಂಡ ಆರೈಕೆ ಮಾಡ್ತಿದೆ: ಎಸ್‍ಎಂಕೆ ಹೆಲ್ತ್ ಬುಲೆಟಿನ್

    ಹೆಲ್ತ್ ಬುಲೆಟಿನ್ ರಿಲೀಸ್: ಶ್ವಾಸಕೋಶ‌ (Lungs Infection) ದ ಸೊಂಕಿನಿಂದ ಬಳಲುತ್ತಿರುವ ಎಸ್‍ಎಂಕೆಗೆ ಡಾ. ಸತ್ಯನಾರಾಯಣ್ ಮತ್ತು ಡಾ ಸುನೀಲ್ ಕಾರಂತ್ ರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು ವೈದ್ಯರ ತಂಡ ಆರೈಕೆ ಮಾಡ್ತಾ ಇದೆ. ಶ್ವಾಸಕೋಶದ ಒಳಗಡೆ ಆಕ್ಸಿಜನ್ ಪ್ರಮಾಣ ಏರುಪೇರು ಆಗ್ತಾ ಇದ್ದು, ವೈದ್ಯರ ತಂಡ ನಿಗಾವಹಿಸಿದೆ. ಆರೋಗ್ಯ ಸಚಿವ ಡಾ. ಸುಧಾಕರ್ (Dr. Sudhakar) ಮೇಲ್ವಿಚಾರಣೆ ನಡೆಸುತ್ತಾ ಇದ್ದಾರೆ. ಅಲ್ಲದೆ ವೈದ್ಯರ ತಂಡದ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಬೆಂಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ಅವರ ಆರೋಗ್ಯದಲ್ಲಿ (Health) ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡುತ್ತೇವೆ ಎಂಬುದಾಗಿ ಎಸ್.ಎಂ.ಕೃಷ್ಣ ನಿವಾಸದಿಂದ ಸಂದೇಶ ಬಂದಿದೆ.

    ಶ್ವಾಸಕೋಶದ (Lungs) ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ (Chief Minister) ಎಸ್.ಎಂ ಕೃಷ್ಣ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಿಸಲಾಗಿದೆ. ಡಾ.ಸತ್ಯನಾರಾಯಣ್ ಮತ್ತು ಡಾ.ಸುನೀಲ್ ಕಾರಂತ್ ವೈದ್ಯರ ತಂಡದಿಂದ ಐಸಿಯುನಲ್ಲಿ ಚಿಕಿತ್ಸೆ (Treatment) ನೀಡಲಾಗುತ್ತಿದೆ. ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K Sudhakar) ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯರ ತಂಡದೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಿಪಿಐ ಇಲ್ಲಾಳ್‍ ಮೇಲೆ ಹಲ್ಲೆ ಪ್ರಕರಣ- ಆಸ್ಪತ್ರೆಗೆ ಸಂಸದ ಜಾಧವ್ ಭೇಟಿ

    ಈ ನಡುವೆ ಎಸ್‌ಎಂ ಕೃಷ್ಣ ನಿವಾಸದಿಂದ ಸಂದೇಶ ಬಂದಿದ್ದು, ಎಸ್‌ಎಂ ಕೃಷ್ಣ ಅವರಿಗೆ ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ಹಾಗೂ ಜ್ವರಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಊಹಾಪೊಹದ ಮಾಹಿತಿಗಳಿಗೆ ಕಿವಿಗೊಡದಂತೆ ಎಸ್‌ಎಂಕೆ ಪರವಾಗಿ ಕೊರುತ್ತೇವೆ ಎಂಬುದಾಗಿ ಸಂದೇಶ ರವಾನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

    ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ (Farmer Chief Minister) ಎಸ್‌.ಎಂ ಕೃಷ್ಣ (SM Krishna) ಅವರನ್ನು ಆಸ್ಪತ್ರೆ ದಾ‌ಖಲಿಸಲಾಗಿದೆ.

    ಶ್ವಾಸಕೋಶ (Lungs) ಸಮಸ್ಯೆಯಿಂದ ಬಳುತ್ತಿರುವ ಎಸ್‌.ಎಂ ಕೃಷ್ಣರನ್ನು ಬೆಂಗಳೂರಿನ ಮಣಿಪಾಲ್ ಆಸ್ಫತ್ರೆಗೆ (Manipal Hospital) ದಾಖಲಿಸಲಾಗಿದ್ದು, ಡಾ.ಸತ್ಯನಾರಾಯಣ್ ಮತ್ತು ಡಾ.ಸುನೀಲ್ ಕಾರಂತ್ ವೈದ್ಯರ ತಂಡದಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಬಲವಂತವಾಗಿ ಮತಾಂತರಕ್ಕೆ ಯತ್ನ – 11 ಮಂದಿಯ ವಿರುದ್ಧ ಎಫ್‍ಐಆರ್

    ಶ್ವಾಸಕೋಶದಲ್ಲಿ ಆಕ್ಸಿಜನ್ ಪ್ರಮಾಣ ಏರುಪೇರು ಆಗುತ್ತಿದ್ದು, ವೈದ್ಯರ ತಂಡ ಹೆಚ್ಚಿನ ನಿಗಾ ವಹಿಸಿದೆ. ಸದ್ಯ ಆರೋಗ್ಯ ಸಚಿವ ಡಾ‌.ಸುಧಾಕರ್ ಮೇಲ್ವಿಚಾರಣೆ ನಡೆಸುತ್ತಿದ್ದು, ವೈದ್ಯರ ತಂಡದ ಜೊತೆ ಸಂಪರ್ಕದಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಆರೋಗ್ಯವಾಗಿದ್ದೇನೆ, ಕಾರ್ಯಕರ್ತರು ಆತಂಕ ಪಡೋ ಅಗತ್ಯವಿಲ್ಲ: ಹೆಚ್.ಡಿ ದೇವೇಗೌಡ

    ನಾನು ಆರೋಗ್ಯವಾಗಿದ್ದೇನೆ, ಕಾರ್ಯಕರ್ತರು ಆತಂಕ ಪಡೋ ಅಗತ್ಯವಿಲ್ಲ: ಹೆಚ್.ಡಿ ದೇವೇಗೌಡ

    ಬೆಂಗಳೂರು: ನನ್ನ ಆರೋಗ್ಯ ಉತ್ತಮವಾಗಿದ್ದು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ (H.D Devegowda) ಅವರು ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ವಲ್ಪ ಪ್ರಮಾಣದಲ್ಲಿ ಅನಾರೋಗ್ಯ ಉಂಟಾದ ಕಾರಣಕ್ಕೆ ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದ್ದರು. ಆದಕಾರಣ ಕೆಲ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾಯಿತು. ಇನ್ನು ಕೆಲ ದಿನ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

    ಮನೆಯಿಂದಲೇ ನನ್ನೆಲ್ಲಾ ರಾಜಕೀಯ, ಸಂಸದೀಯ ಹಾಗೂ ಪಕ್ಷದ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಲಿದ್ದೇನೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೆಲವು ದಿನಗಳ ಮಟ್ಟಿಗೆ ನನ್ನ ಭೇಟಿಗೆ ಬರುವುದು ಬೇಡ ಎಂದು ಮಾಜಿ ಪ್ರಧಾನಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೇವೇಗೌಡ್ರ ಮನೆಗೆ ಬೊಮ್ಮಾಯಿ ಭೇಟಿ – ಆರೋಗ್ಯ ವಿಚಾರಿಸಿ, ಈಗ್ಲೂ ಮುದ್ದೆ ತಿಂತೀರಾ ಸರ್ ಎಂದ ಸಿಎಂ

    ಕೆಲ ದಿನಗಳ ನಂತರ ನಾನೇ ಖುದ್ದು ಪಕ್ಷದ ಕಚೇರಿಗೆ ಭೇಟಿ ನೀಡುವುದರ ಜೊತೆಗೆ, ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗಲಿದ್ದೆನೆ. ಯಾವುದೇ ಕಾರಣಕ್ಕೂ ಮುಖಂಡರು, ಕಾರ್ಯಕರ್ತರು ಅನ್ಯತಾ ಭಾವಿಸಬಾರದು ಎಂದು ಕೋರುತ್ತೇನೆ. ಅಲ್ಲದೆ ನನ್ನ ನಿವಾಸಕ್ಕೆ ಭೇಟಿ ನೀಡಿ ನನ್ನ ಆರೋಗ್ಯ (Health) ವಿಚಾರಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಂದಾಯ ಸಚಿವ ಅಶೋಕ್ ಸೇರಿದಂತೆ ಇತರೆ ಎಲ್ಲಾ ಸಚಿವರು, ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

    ಹಾಗೆಯೇ, ನನ್ನ ಆರೋಗ್ಯಕ್ಕಾಗಿ ನಾಡಿನ ದೇವಾಲಯಗಳಲ್ಲಿ ಪೂಜೆ, ಹರಕೆ ಮಾಡಿಕೊಂಡು ಅನ್ನದಾನ ಇತ್ಯಾದಿಗಳನ್ನು ಮಾಡಿದ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ನನ್ನ ಹೃದಯ ತುಂಬಿ ಬಂದಿದೆ. ಅವರೆಲ್ಲರಿಗೂ ನನ್ನ ಶುಭ ಹಾರೈಕೆಗಳು ಎಂದು ಹೆಚ್‍ಡಿಡಿ ಹೇಳಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಅವರೇ ವಯಸ್ಸು‌ ಆಗೋಯ್ತಲ್ಲ ನಮ್ಗೆ: ಎದುರಿಗೆ ಸಿಕ್ಕ ಸಿದ್ದರಾಮಯ್ಯರಿಂದ ಜೋಕ್

    Live Tv
    [brid partner=56869869 player=32851 video=960834 autoplay=true]

  • ನಟಿ ಸಮಂತಾ ಆರೋಗ್ಯ ಹೇಗಿದೆ? ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದ ಮ್ಯಾನೇಜರ್

    ನಟಿ ಸಮಂತಾ ಆರೋಗ್ಯ ಹೇಗಿದೆ? ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದ ಮ್ಯಾನೇಜರ್

    ಮಿಳಿನ ಖ್ಯಾತ ನಟಿ ಸಮಂತಾ (Samantha) ಅವರ ಆರೋಗ್ಯದ ಕುರಿತು ವಾರದಿಂದ ನಾನಾ ರೀತಿಯ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವರು ಅನಾರೋಗ್ಯದಿಂದ ಇರುವ ಕಾರಣಕ್ಕಾಗಿಯೇ ಸಾರ್ವಜನಿಕವಾಗಿ ಸಮಂತಾ ಕಾಣಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿತ್ತು. ಆರೋಗ್ಯ ಏರುಪೇರಿನ ಹಿನ್ನೆಲೆಯಲ್ಲಿ ಅವರು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನುವ ಸುದ್ದಿಯೂ ಹರಿದಾಡಿತ್ತು. ಈ ನಡುವೆ ಅಮೆರಿಕಾಗೆ ಅವರು ಹಾರಲಿದ್ದಾರೆ ಎನ್ನುವ ಮಾಹಿತಿಯೂ ಇತ್ತು.

    ಅಂದಹಾಗೆ ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಮಂತಾ ಚರ್ಮ ರೋಗದಿಂದ ನರಳುತ್ತಿದ್ದಾರೆ ಎಂದಾಗಿತ್ತು. ಅಮೆರಿಕಾಗೆ (America) ತೆರಳಿ, ಅವರು ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನಲಾಗಿತ್ತು. ಇದೆಲ್ಲವಕ್ಕೂ ಸಮಂತಾ ಮ್ಯಾನೇಜರ್ ಉತ್ತರಿಸಿದ್ದಾರೆ. ಹರಿದಾಡುತ್ತಿರುವುದು ಗಾಸಿಪ್ ಎಂದು ಹೇಳಿದ್ದಾರೆ. ಸಮಂತಾ ಆರೋಗ್ಯವಾಗಿದ್ದು (Health), ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷ: ಕೊನೆಗೂ ಮೌನ ಮುರಿದ ಶಿಲ್ಪಾ ಶೆಟ್ಟಿ ಪತಿ

    ಸಮಂತಾ ಆರೋಗ್ಯವಾಗಿದ್ದಾರೆ, ಅಭಿಮಾನಿಗಳು ಆತಂಕ ಪಡಬೇಕಿಲ್ಲ ಎಂದು ಹೇಳಿರುವ ಮ್ಯಾನೇಜರ್ (Manager), ಸಮಂತಾ ಅಮೆರಿಕಾಗೆ ಚಿಕಿತ್ಸೆಗಾಗಿ ತೆರಳುತ್ತಿರುವ ವಿಚಾರವನ್ನು ಮಾತ್ರ ಹೇಳಿಲ್ಲ. ಆ ಕುರಿತು ಅವರು ಪ್ರತಿಕ್ರಿಯೆ ಕೂಡ ನೀಡಿಲ್ಲ. ಆದರೆ, ಸಮಂತಾಗೆ ಏನೂ ಆಗಿಲ್ಲ. ಈ ರೀತಿಯಲ್ಲಿ ಸುಳ್ಳು ಸುದ್ದಿ ಪ್ರಕಟಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲು ಸಮಂತಾ ತಿಳಿಸಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    ಪುಷ್ಪಾ (Pushpa) ಸಿನಿಮಾದ ನಂತರ ಸಮಂತ್ ಸಖತ್ ಬ್ಯುಸಿ ಆಗಿ ಹೋದರು. ಸದ್ಯ ಅವರು ಪ್ರಮುಖವಾಗಿ ನಟಿಸಿರುವ ಎರಡು ಚಿತ್ರಗಳು ಶೂಟಿಂಗ್ ಮುಗಿಸಿವೆ. ಯಶೋಧಾ (Yashodha) ಮತ್ತು ಶಾಕುಂತಲೆ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಎರಡೂ ಸಿನಿಮಾಗಳ ಕುತೂಹಲ ಮೂಡಿಸಿದ್ದು, ಸದ್ಯದಲ್ಲೇ ಬಿಡುಗಡೆ ಆಗುವ ಕುರಿತು ಸುದ್ದಿಯಿದೆ.

    Live Tv
    [brid partner=56869869 player=32851 video=960834 autoplay=true]

  • ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್

    ಸಮಂತಾಗೆ ಗಂಭೀರ ಆರೋಗ್ಯ ಸಮಸ್ಯೆಯಾ? ಆತಂಕಗೊಂಡ ಫ್ಯಾನ್ಸ್

    ಕ್ಷಿಣದ ಖ್ಯಾತ ನಟಿ ಸಮಂತಾ (Samantha) ಹಲವು ದಿನಗಳಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಅವರ ನಟನೆಯ ಶಾಕುಂತಲಾ ಮತ್ತು ಯಶೋಧಾ (Yashodha) ಸಿನಿಮಾಗಳ ಹಲವು ಕಾರ್ಯಕ್ರಮಗಳು ಜರುಗಿದ್ದರೂ, ಅವರು ಒಂದಕ್ಕೂ ಪ್ರತಿಕ್ರಿಯಿಸಿಲ್ಲ. ಅಲ್ಲದೇ ಹಲವು ದಿನಗಳಿಂದ ಯಾವುದೇ ಶೂಟಿಂಗ್ ನಲ್ಲೂ ಅವರು ಪಾಲ್ಗೊಳ್ಳದೇ ಇರುವ ಕಾರಣಕ್ಕಾಗಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸಮಂತಾ ಈಗ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದಾರೆ.

    ತಮಿಳು ಮಾಧ್ಯಮಗಳು ವರದಿ ಮಾಡಿದಂತೆ ಸಮಂತಾ ಅವರು ಗಂಭೀರ (Serious) ಆರೋಗ್ಯ (Health) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅತೀ ಶೀಘ್ರದಲ್ಲೇ ಅವರು ವಿದೇಶಕ್ಕೂ ಹಾರಿ, ಅಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿ ಮಾಡಿವೆ. ವಿದೇಶಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತಹ ಸಮಸ್ಯೆ ಏನಾಗಿದೆ ಎನ್ನುವ ಕುರಿತು ಸರಿಯಾದ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಅವರು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಕೆಲ ಮಾಧ್ಯಮಗಳು ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿದರೆ, ಕೆಲವರು ಬೇರೆ ಸಮಸ್ಯೆಗಳ ಕುರಿತು  ಬರೆದಿದ್ದಾರೆ. ಹಾಗಾಗಿ ಸಮಂತಾಗೆ ಇಂಥದ್ದೆ ಸಮಸ್ಯೆ ಇದೆ ಎಂದು ಗೊತ್ತಾಗಿಲ್ಲ. ಅವರು ಕೂಡ ಈ ಕುರಿತು ಎಲ್ಲಿಯೂ ಹೇಳಿಕೊಂಡಿಲ್ಲ. ಸಮಂತಾ ಆಪ್ತರ ಪ್ರಕಾರ, ನಟಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು ನಿಜ. ಚಿಕಿತ್ಸೆಗಾಗಿ (Treatment) ವಿದೇಶಕ್ಕೂ (Abroad) ಹೋಗುತ್ತಾರೆ ಎನ್ನುವುದೂ ಅಷ್ಟೇ ಸತ್ಯ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ.

    ಸಮಂತಾ ನಟನೆಯ ಯಶೋಧಾ ಮತ್ತು ಶಾಂಕುತಲಾ (Shakuntala) ಸಿನಿಮಾಗಳು ಬಹುತೇಕ ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಮೊನ್ನೆಯಷ್ಟೇ ಎರಡು ಸಿನಿಮಾಗಳ ಲುಕ್ ರಿಲೀಸ್ ಆಗಿದೆ. ಟ್ರೈಲರ್ ಕೂಡ ಬಿಡುಗಡೆ ಮಾಡಿದ್ದಾರೆ. ಈ ಎರಡೂ ಚಿತ್ರಗಳು ಸಮಂತಾ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಲಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ನನ್ನ ಆರೋಗ್ಯ ಸ್ಥಿರವಾಗಿದೆ: ಆನಂದ್ ಮಾಮನಿ

    ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ನನ್ನ ಆರೋಗ್ಯ ಸ್ಥಿರವಾಗಿದೆ: ಆನಂದ್ ಮಾಮನಿ

    ಬೆಳಗಾವಿ: ಮನುಷ್ಯನಿಗೆ ಜೀವನದಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರಿಳಿತ ಸಹಜ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ನನ್ನ ಆರೋಗ್ಯ ಸ್ಥಿರವಾಗಿದೆ ಎಂದು ಡೆಪ್ಯೂಟಿ ಸ್ಪೀಕರ್ (Deputy Speaker) ಆನಂದ್ ಮಾಮನಿ (Anand Mamani) ಚೆನ್ನೈನ ಆಸ್ಪತ್ರೆಯಿಂದ (Chennai Hospital) ವೀಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

    ಹೇಳಿಕೆಯಲ್ಲಿ ಏನಿದೆ:
    ಮನುಷ್ಯನಿಗೆ ಜೀವನದಲ್ಲಿ ಸ್ವಾಭಾವಿಕವಾಗಿ ಆರೋಗ್ಯದಲ್ಲಿ ಏರಿಳಿತ ಆಗೋದು ಸಹಜ. ಕೆಲವು ವರ್ಷಗಳಿಂದ ನನಗೆ ಮಧುಮೇಹ ಖಾಯಿಲೆ ಇದೆ. ಆದ್ರೆ, ಕೆಲ ಮಾಧ್ಯಮದಲ್ಲಿ ಬೇರೆ ಬೇರೆ ಕಾರಣ ಹೇಳಿ ಸುಳ್ಳು ವದಂತಿಗಳು ಬರುತ್ತಿದೆ. ಮನೆ ದೇವರಾದ ಜಾಲಿಕಟ್ಟಿ ಬಸವಣ್ಣ, ತಂದೆ-ತಾಯಿ, ರಾಜ್ಯದ ಜನರ ಆಶೀರ್ವಾದ ಇದೆ. ನಾನು ಆರೋಗ್ಯವಾಗಿದ್ದೇನೆ. ಸುಳ್ಳು ವಂದತಿಗೆ ನಮ್ಮ ಕಾರ್ಯಕರ್ತರು ಕಿವಿಗೊಡಬಾರದು. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು

    ನನ್ನ ಕುಟುಂಬ ಸದಸ್ಯರು ನನ್ನ ಬೆನ್ನಿಗೆ ನಿಂತಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ, ಮಾಧ್ಯಮ ಸ್ನೇಹಿತರ ಸಹಕಾರ ಇದೆ. ಸಿಎಂ ಬಸವರಾಜ ಬೊಮ್ಮಾಯಿ (Basavarj Bommai) ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಯಾವುದೇ ಕಾರಣಕ್ಕೂ ಧೈರ್ಯಗೆಡುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ನಿಮ್ಮ ಬೆನ್ನಿಗಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಬಿಎಸ್‍ವೈ (B.S Yediyurappa) ಸೇರಿದಂತೆ ಅನೇಕ ಶಾಸಕರು ನನಗೆ ಸಲಹೆ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ನಾನು ಧೈರ್ಯವಾಗಿ ಬಂದು ತಮ್ಮೆಲ್ಲರ ಸೇವೆಗೆ ಮತ್ತೆ ಅಣಿಯಾಗುತ್ತೇನೆ. ನಾನು ಚೆನ್ನೈನಲ್ಲಿರುವ ಕಾರಣಕ್ಕೆ ಚಿಂತಾಜನಕ, ಶಿಫ್ಟ್ ಮಾಡ್ತಾರೆ ಅನ್ನೋದು ಯಾವುದು ಇಲ್ಲ. ಚೆನ್ನೈ ಆಸ್ಪತ್ರೆಗೆ ತಜ್ಞ ವೈದ್ಯರು ಬಂದ ಬಳಿಕ ತಪಾಸಣೆ ಮಾಡಿ ಔಷಧಿ ತೆಗೆದುಕೊಂಡು ಬರುತ್ತೇನೆ. ಆದಷ್ಟು ಬೇಗ ರಾಜಧಾನಿಗೆ ಬಂದು ತಮ್ಮ ಸಂಪರ್ಕಕ್ಕೆ ಸಿಗುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಘಾಟನೆಗೆ ರಾಷ್ಟ್ರಪತಿ; ಜಂಬೂಸವಾರಿ ಮೆರವಣಿಗೆಗೆ ಮೋದಿ! ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಮೈಸೂರು

    Live Tv
    [brid partner=56869869 player=32851 video=960834 autoplay=true]

  • ನ್ಯೂಯಾರ್ಕ್‌ನಲ್ಲಿ ಪೋಲಿಯೊ – ತುರ್ತು ಪರಿಸ್ಥಿತಿ ಘೋಷಣೆ

    ನ್ಯೂಯಾರ್ಕ್‌ನಲ್ಲಿ ಪೋಲಿಯೊ – ತುರ್ತು ಪರಿಸ್ಥಿತಿ ಘೋಷಣೆ

    ವಾಷಿಂಗ್ಟನ್: ನಸ್ಸೌ ಕೌಂಟಿ ದ್ವೀಪದ ತ್ಯಾಜ್ಯದ ನೀರಿನ ಮಾದರಿಗಳಲ್ಲಿ ವೈರಸ್ ಕಂಡುಬಂದ ನಂತರ ನ್ಯೂಯಾರ್ಕ್ (New York) ಪೋಲಿಯೊ ತುರ್ತು ಪರಿಸ್ಥಿತಿಯನ್ನು (Polio Emergency) ಘೋಷಿಸಿದೆ.

    ನ್ಯೂಯಾರ್ಕ್‌ನ ಆರೋಗ್ಯ ಇಲಾಖೆಯಲ್ಲಿ (Health Department) ಪೋಲಿಯೊ ಲಸಿಕೆ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಲಸಿಕೆ ನಿರ್ವಾಹಕರ ವಿಭಾಗವನ್ನೂ ವಿಸ್ತರಿಸಲು ಯೋಜಿಸಿದೆ. ಅದಕ್ಕಾಗಿ ಆರೋಗ್ಯ ಕಾರ್ಯಕರ್ತರು, (medical workers) ಶುಶ್ರೂಷಕಿಯರು ಹಾಗೂ ಫಾರ್ಮಸಿಸ್ಟ್ (Pharmacists) ಸೇರಿಸಿಕೊಳ್ಳುವಂತೆ ಗವರ್ನರ್ ಕ್ಯಾಥಿ ಹೊಚುಲ್ ಆದೇಶಿಸಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದ ಪರೀಕ್ಷೆ ಪ್ರವೇಶ ಪತ್ರದಲ್ಲಿ ಮೋದಿ, ಧೋನಿ ಫೋಟೋ – ತನಿಖೆಗೆ ಆದೇಶ

    ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಆಯುಕ್ತರಾದ ಮೇರಿ ಬ್ಯಾಸೆಟ್, ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸದಿದ್ದರೆ ಅಥವಾ ಮಗುವಿನ ದೇಹವು ಲಸಿಕೆಯೊಂದಿಗೆ ನವೀಕೃತವಾಗದಿದ್ದರೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಬಹುದು. ಹಾಗಾಗಿ ನ್ಯೂಯಾರ್ಕ್‌ನ ಯಾವುದೇ ನಿವಾಸಿಗಳೂ ಇಂತಹ ಅಪಾಯಗಳನ್ನು ತಂದೊಡ್ಡಿಕೊಳ್ಳದಂತೆ ಮನವಿ ಮಾಡುತ್ತೇನೆ. ಈಗಾಗಲೇ ನ್ಯೂಯಾರ್ಕ್‌ನಲ್ಲಿ ಪೋಲಿಯೊ ಲಸಿಕೆ ಅಭಿಯಾನ (Polio Vaccine) ಪೂರ್ಣಗೊಳಿಸಲಾಗಿದೆ. ಆದರೂ ವೈರಸ್ (Virus) ಸೋಂಕಿಗೆ ಒಳಗಾಗಿರುವ ವ್ಯಕ್ತಿಯೊಂದಿಗೆ ನಿಕಟ ಸಂಪಕದಲ್ಲಿರುವುದು ಕಂಡುಬಂದಿರುವುದರಿಂದ ಜೀವಮಾನದ ಬೂಸ್ಟರ್ ಡೋಸ್ ಅನ್ನು ಪಡೆಯಬೇಕು ಎಂದು ಅವರು ಕೋರಿದ್ದಾರೆ. ಇದನ್ನೂ ಓದಿ: ಆರ್ಟಿಕಲ್ 370ಯನ್ನು ಮತ್ತೆ ತರುವ ಭರವಸೆ ನಾನು ನೀಡಲ್ಲ: ಆಜಾದ್

    ನ್ಯೂಯಾರ್ಕ್ ನಗರದಲ್ಲಿನ ರಾಕ್‌ಲ್ಯಾಂಡ್ ಕೌಂಟಿ, ಆರೆಂಜ್ ಕೌಂಟಿ, ಸುಲ್ಲಿವಾನ್ ಕೌಂಟಿ, ನಸ್ಸೌ ಕೌಂಟಿ ಪ್ರದೇಶದ ನಿವಾಸಿಗಳಿಗೆ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆಯು ಕಾರ್ಯಕರ್ತರಿಗೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಯರ್ ಹಿತ, ಮಿತವಾಗಿ ಕುಡಿದ್ರೆ ಹೃದ್ರೋಗದಿಂದ ಮುಕ್ತಿ- ಕೂದಲಿನ ಅಂದಕ್ಕೆ ನಾಂದಿ

    ಬಿಯರ್ ಹಿತ, ಮಿತವಾಗಿ ಕುಡಿದ್ರೆ ಹೃದ್ರೋಗದಿಂದ ಮುಕ್ತಿ- ಕೂದಲಿನ ಅಂದಕ್ಕೆ ನಾಂದಿ

    ಸಾಮಾನ್ಯವಾಗಿ ಮೋಜು, ಮಸ್ತಿ ಸಮಯದಲ್ಲಿ ಬಿಯರ್‌ನ್ನು ಕುಡಿದು ಅನೇಕರು ಖುಷಿ ಪಡುತ್ತಾರೆ. ಆದರೆ ಬಿಯರ್ ಆಲ್ಕೋಹಾಲಿಕ್ ಪಾನೀಯವಾಗಿರುಗವುದರಿಂದ, ಬಿಯರ್(Beer) ಸೇವನೆಯು ಆರೋಗ್ಯಕ್ಕೆ(Health) ಒಳ್ಳೆಯದು ಎಂದು ಯಾರಾದರೂ ಸಲಹೆ ಮಾಡಿದರೆ, ಅದು ನಿಮಗೆ ಸ್ವಲ್ಪ ವಿಚಿತ್ರ ಹಾಗೂ ಆಘಾತಕಾರಿಯಾಗಬಹುದು. ಆದರೆ ಬಿಯರ್‌ನ್ನು ಹಿತ ಮಿತವಾಗಿ ಕುಡಿದರೆ ಅನೇಕ ರೋಗದಿಂದ ಪಾರಾಗಬಹುದಾಗಿದೆ.

    ಹೃದ್ರೋಗದಿಂದ ದೂರ: ವಾರಕ್ಕೆ 2 ಬಾರಿ ಬಿಯರ್‌ನ್ನು ಕುಡಿಯುವ ಮಹಿಳೆಯರಿಗೆ ಹೃದಯಾಘಾತವಾಗುವುದು(Heart Attack) 30 ಪ್ರತಿಶತದಷ್ಟು ಕಡಿಮೆ. ಆದರೆ ಅದಕ್ಕಿಂತ ಅಧಿಕ ಸೇವಿಸಿದರೇ ಮಾತ್ರ ಅನಾಹುತಗಳು ಉಂಟಾಗುತ್ತವೆ. ಬಿಯರ್‌ನಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದೆ. ಇದರಿಂದಾಗಿ ಹೃದ್ರೋಗಕ್ಕೆ ಕಾರಣವಾಗುವ ಹೋಮೋಸಿಸ್ಟೈನ್ ಎಂಬ ಹಾನಿಕಾರಕ ರಾಸಾಯನಿಕವನ್ನು ದೇಹದಲ್ಲಿ ನಿರ್ಮಿಸುವುದನ್ನು ತಡೆಯುತ್ತದೆ.

    ಒತ್ತಡವನ್ನು ನಿವಾರಿಸುತ್ತೆ: ಬಿಯರನ್ನು ಕುಡಿಯುವುದರಿಂದ ಒತ್ತಡವು ಕಡಿಮೆ ಆಗುತ್ತದೆ. ಆದರೆ ಮಿತವಾಗಿ ಸೇವಿಸಬೇಕು. ಯುರೋಪ್ ಹಾಗೂ ಅಮೆರಿಕಾದಲ್ಲಿನ ಅನೇಕ ಸ್ಪಾಗಳಲ್ಲಿ ಸ್ನಾನಕ್ಕೆ ಬಿಯರ್‌ನ್ನು ಬಳಸುತ್ತಾರೆ. ಇದರಿಂದಾಗಿ ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಬಿಯರ್‌ನ್ನು ಕುಡಿಯುವುದರಿಂದ ಚರ್ಮದ ತ್ವಚ್ಛೆಯು ಹೆಚ್ಚುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ.

    ಕೂದಲಿನ ಆರೋಗ್ಯ: ಬಿಯರ್ ಕೇವಲ ತ್ವಚೆಗೊಂದೇ ಅಲ್ಲದೇ ತಲೆಕೂದಲಿನ(Hair) ಆರೋಗ್ಯಕ್ಕೂ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ಬಿಯರ್‌ನಿಂದ ಅನೇಕರು ಶಾಂಪೂಗಳನ್ನು ತಯಾರಿಸುತ್ತಾರೆ. ಇದರಿಂದಾಗಿ ಹಾನಿಗೊಳಗಾದ ಕೂದಲನ್ನು ಸರಿಪಡಿಸಲು ಮತ್ತು ನಿಮ್ಮ ಕೂದಲಿನ ಪರಿಣಾಮವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುತ್ತದೆ. ಬಿಯರ್‍ನ್ನು ಕೂದಲಿಗೆ ಹಚ್ಚುವುದರಿಂದ ದಪ್ಪ ಹಾಗೂ ಉದ್ದನೆಯ ಕೂದಲನ್ನು ಪಡೆಯಬಹುದಾಗಿದೆ.

    ನ್ಯುಮೋನಿಯಾ ದೂರ: ಬಿಯರ್‌ಗಳಲ್ಲಿರುವ ಒಂದು ಬಗೆಯ ರಾಸಾಯನಿಕ ಸಂಯುಕ್ತವು ವೈರಾಣು ಪ್ರತಿಬಂಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಮಕ್ಕಳಲ್ಲಿ ನ್ಯುಮೋನಿಯಾ ಅಥವಾ ಶ್ವಾಸಕೋಶಗಳ ಉರಿಯೂತಕ್ಕೆ ಕಾರಣವಾಗಬಹುದಾದ ವೈರಾಣುವಿನಿಂದ ರಕ್ಷಿಸುತ್ತದೆ. ಇದನ್ನೂ ಓದಿ: ಗೋಡಂಬಿ ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು

    ಮೆದುಳಿನ ಆರೋಗ್ಯ: ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ ಬಿಯರ್‌ನ ಅಲ್ಪ ಪ್ರಮಾಣದ ಸೇವನೆಯು, ಮೆದುಳಿನ ಕಾರ್ಯಕ್ಷಮತೆಯ ಕುಸಿತದ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ನಿಮ್ಮ ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಹೃದಯ, ಕುತ್ತಿಗೆ, ಅಥವಾ ಮೆದುಳಿಗೆ ರಕ್ತ ಸಂಚಾರವಾಗುವುದನ್ನು ತಡೆಗಟ್ಟಬಲ್ಲ ರಕ್ತದ ಹೆಪ್ಪುಗಟ್ಟುವಿಕೆಯನ್ನು ಬಿಯರ್ ತಡೆಗಟ್ಟುತ್ತದೆ. ಜೊತೆಗೆ ಲಕ್ವ ಹೊಡೆಯುವುದನ್ನು ನಿವಾರಿಸುತ್ತದೆ. ಇದನ್ನೂ ಓದಿ: ಅನೇಕ ರೋಗಗಳಿಗೆ ಒಣ ಶುಂಠಿ ರಾಮಬಾಣ

    Live Tv
    [brid partner=56869869 player=32851 video=960834 autoplay=true]