ಚಿಕ್ಕೋಡಿ: ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddeshwar Swamiji) ಅನಾರೋಗ್ಯ ಹಿನ್ನೆಲೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ (Health) ಚೇತರಿಕೆಗಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದಲ್ಲಿ (Hukkeri Hiremath) ಮಹಾಮೃತ್ಯುಂಜಯ ಹೋಮ ನಡೆಸಲಾಯಿತು.
ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಮಹಾಮೃತ್ಯಂಜಯ ಹೋಮದಲ್ಲಿ 20ಕ್ಕೂ ಹೆಚ್ಚು ವೇದು ವಟುಗಳು ಭಾಗಿಯಾಗಿದ್ದರು. ಸಿದ್ದೇಶ್ವರ ಸ್ವಾಮೀಜಿ ಗುಣಮುಖರಾಗಲಿ ಎಂದು ಮಹಾಮೃತ್ಯುಂಜಯ ಜಪ ಪಠಿಸಿ ಹೋಮ ಮಾಡಿ ಪ್ರಾರ್ಥನೆ ಮಡಲಾಯಿತು. ಇದನ್ನೂ ಓದಿ:ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ
ಈ ಸಂದರ್ಭದಲ್ಲಿ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮೀಜಿ, ಸಿದ್ದೇಶ್ವರ ಶ್ರೀಗಳು ಹುಕ್ಕೇರಿ ಹಿರೇಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಶ್ರೀಗಳ ಆರೋಗ್ಯ ಚೇತರಿಕೆಯಾಗುತ್ತಿದ್ದು, ಯಾರು ಭಯ ಪಡುವ ಆತಂಕವಿಲ್ಲ. ಸುಳ್ಳು ಸುದ್ದಿಗಳಿಗೆ ಭಕ್ತರು ಕಿವಿಗೊಡೋದು ಬೇಡ. ಶ್ರೀಗಳು ಗುಣಮುಖರಾಗಲಿ. ಎಲ್ಲರೂ ಮನೆಗಳಲ್ಲಿ ಪ್ರಾರ್ಥನೆ ಪೂಜೆ ಮಾಡುವಂತೆ ಮನವಿ ಮಾಡಿದರು. ಇದನ್ನೂ ಓದಿ:ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ- ಭಕ್ತರಿಗೆ ದರ್ಶನ
Live Tv
[brid partner=56869869 player=32851 video=960834 autoplay=true]
ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (Siddeshwara Swamiji) ಗಳ ಆರೋಗ್ಯ ಸ್ಥಿರವಾಗಿದೆ ಎಂದು ಡಾ.ಎಸ್.ಬಿ ಪಾಟೀಲ್ (Dr. S B Patil) ತಂಡದಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದೆ.
ಜಾಸ್ತಿ ಆಹಾರ ಸ್ವೀಕರಿಸ್ತಿಲ್ಲ ಅಷ್ಟೇ. ಗಂಜಿ, ನೀರು, ದ್ರವಾಹಾರ ಕೊಡ್ತಿದ್ದೀವಿ. ಬೇಗ ಚೇತರಿಕೆ ಆಗ್ತಾರೆ. ಹೆಚ್ಚಿನ ಚಿಕಿತ್ಸೆಯ ಅಶ್ಯಕತೆ ಇಲ್ಲ. ಭಕ್ತರ ಜೊತೆ ಶ್ರೀಗಳು ಮಾತನಾಡಿದ್ದಾರೆ ಎಂದು ಡಾ. ಎಸ್.ಬಿ. ಪಾಟೀಲ್, ಡಾ.ಮಲ್ಲನ್ಣ ಮೂಲಿಮನಿ ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಸಿದ್ದೇಶ್ವರ ಸ್ವಾಮೀಜಿ ನನ್ನನ್ನು ಗುರುತು ಹಿಡಿದರು : ಬೊಮ್ಮಾಯಿ
ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಚೇತರಿಕೆ ಕಾಣುತ್ತಿದ್ದು, ಜ್ಞಾನಯೋಗಾಶ್ರಮಕ್ಕೆ ನಾಯಕರ ದಂಡೇ ಹರಿದುಬರುತ್ತಿದೆ. ಕಾಂಗ್ರೆಸ್ ನಾಯಕರ ಎಂ.ಬಿ ಪಾಟೀಲ್, ಎಂ.ಎಲ್.ಸಿ ಪ್ರಕಾಶ್ ಹುಕ್ಕೇರಿ, ಎಂ.ಬಿ ಪಾಟೀಲ್ ಜೊತೆ ಶ್ರೀಗಳು ಮೆದು ಧ್ವನಿಯಲ್ಲಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಸಿದ್ದೇಶ್ವರ ಶ್ರೀಗಳು ಆರಾಮಾಗಿದ್ದಾರೆ. ಯಾವುದೇ ಆತಂಕ ಪಡುವುದು ಬೇಡ. ಭಕ್ತರು ವದಂತಿಗೆ ಕಿವಿಗೊಡಬೇಡಿ ಎಂದು ಸಿದ್ದೇಶ್ವರ ಶ್ರೀ ಭೇಟಿ ಬಳಿಕ ಸುತ್ತೂರು ಶ್ರೀ (Suttur Sri) ಗಳು ಸ್ಪಷ್ಟನೆ ನೀಡಿದ್ದಾರೆ. ಇತ್ತ ಸಿದ್ದೇಶ್ವರ ಶ್ರೀಗಳ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ತಿಕೋಟ ತಾಲೂಕಿನ ಬಿಜ್ಜರಗಿ ಗ್ರಾಮದ ಮಾಣಿಕೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಜ್ಞಾನಯೋಗಾಶ್ರಮದ ಎದುರು ಸಿದ್ದೇಶ್ವರ ಸ್ವಾಮೀಜಿ ಬೇಗ ಗುಣಮುಖರಾಗಲಿ ಎಂದು ಭಕ್ತಗಣ ಹಾಗೂ ಶ್ರೀಗಳು ಸಿದ್ದೇಶ್ವರ ಸ್ವಾಮೀಜಿಯವರ ಗುರುಗಳಾಗಿದ್ದ ಮಲ್ಲಿಕಾರ್ಜುನ ಸ್ವಾಮೀಜಿ ಅವ್ರ ಗದ್ದುಗೆಗೆ ವಿಷೇಶ ಪೂಜೆ ಸಲ್ಲಿಸಿದ್ರು. ಹೂ, ಹಾರ, ಕಾಯಿ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿ, ಮಂಗಳಾರತಿ ಮಾಡಿ, ಆದ್ಯಾತ್ಮದ ದೇವರು ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ರು.
Live Tv
[brid partner=56869869 player=32851 video=960834 autoplay=true]
ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀ (Siddeshwara Sri) ಗಳು ಆರೋಗ್ಯ ಸ್ಥಿರವಾಗಿದೆ. ಶ್ರೀಗಳು ಆರೋಗ್ಯ ಚೇತರಿಕೆ ಆಗುತ್ತಿದೆ. ಶ್ರೀಗಳ ಭೇಟಿಗಾಗಿ ಗಣ್ಯಾತೀಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ ಮಠಾಧೀಶರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಇನ್ನು ಭಕ್ತಸಾಗರವೂ ಸಹಸ್ರಾರೂ ಸಂಖ್ಯೆಯಲ್ಲಿ ಹರಿದುಬರುತ್ತಿದೆ.
ವಿಜಯಪುರ (Vijayapura) ದ ಜ್ಞಾನ ಯೋಗಾಶ್ರಮದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಶ್ರೀಗಳು ಆರೋಗ್ಯ ಸ್ಥಿರವಾಗಿದೆ. ಶ್ರೀಗಳು ಆರೋಗ್ಯ ಚೇತರಿಕೆ ಆಗುತ್ತಿದೆ. ಪಲ್ಸ್, ಬಿಪಿ ಸರಿಯಾಗಿದೆ. ಯಾವುದೇ ಆತಂಕ ಇಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಶ್ರೀ ಸಿದ್ದೇಶ್ವರ ಶ್ರೀಗಳಿಗೆ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ.
ಶ್ರೀಗಳ ದರ್ಶನಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಸ್ವಾಮೀಜಿ ದರ್ಶನಕ್ಕಾಗಿ ಭಕ್ತಗಣ ಕಾಯ್ದುಕುಳಿತಿದ್ರು. ಜ್ಞಾನಯೋಗಿ ಆಶ್ರಮದ ಆವರಣದಲ್ಲಿ ಭಕ್ತರ ಸಾಗರವೇ ಸೇರಿತ್ತು. ದೇವರ ದರ್ಶನ ಆಗಬೇಕು, ಮತ್ತೆ ಅವರು ಪ್ರವಚನ ಹೇಳಬೇಕು ಅಂತ ಭಕ್ತರು ಕಣ್ಣೀರಿಟ್ಟರು.
ಹೀಗಾಗಿ ಜ್ಞಾನಯೋಗಾಶ್ರಮ ಆವರಣದಲ್ಲಿ ಎಲ್‍ಇಡಿ (LED) ಮೂಲಕ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಸಿದ್ದೇಶ್ವರ ಶ್ರೀಗಳು ದರ್ಶನ ನೀಡಿದ್ರು. ಶ್ರೀಗಳ ದರ್ಶನವಾಗುತ್ತಿದ್ದಂತೆ ಭಾವುಕರಾದ ಭಕ್ತರು ಸಾಷ್ಟಾಂಗ ನಮಸ್ಕಾರ ಹಾಕಿ ನಮನ ಸಲ್ಲಿಸಿದರು. ಸಿದ್ದೇಶ್ವರ ಸ್ವಾಮೀಜಿಗೆ ಜೈಕಾರ ಕೂಗಿದ್ರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್, ವಿಜಯೇಂದ್ರ ಸೇರಿದಂತೆ ಜಿಲ್ಲೆಯ ಹಲವು ಶಾಸಕರು, ಮಾಜಿ ಶಾಸಕರು ಸೇರಿದಂತೆ ಗಣ್ಯರು ತಂಡೋಪ ತಂಡವಾಗಿ ಬಂದು ಶ್ರೀಗಳ ದರ್ಶನ ಪಡೆದರು. ವೈದ್ಯರ ತಂಡದೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಸದ್ಯ ಸಿದ್ದೇಶ್ವರ ಶ್ರೀಗಳು ಆರೋಗ್ಯವಾಗಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಆದ್ರೆ ಭಕ್ತರು ಮಾತ್ರ ಮಠದ ಹೊರಗಡೆನೇ ಶ್ರೀಗಳ ದರ್ಶನಕ್ಕೆ ಕಾದು ಕುಳಿತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೊದಲೆಲ್ಲಾ ಹೆಡ್‌ಫೋನ್ (Headphone) ಬಳಕೆ ಟ್ರೆಂಡ್ ಆಗಿತ್ತು. ಈಗಲೂ ಆ ಟ್ರೆಂಡ್ ಇದೆ. ಟ್ರೆಂಡ್ ವಿಚಾರ ಹಾಗಿರಲಿ.. ಈ ಕೋವಿಡ್ ಬಂದ್ಮೇಲೆ ಹೆಡ್‌ಫೋನ್ ಬಳಕೆ ಮತ್ತಷ್ಟು ಹೆಚ್ಚಾಗಿದೆ. ಕೋವಿಡ್ (Covid-19) ಸಾಂಕ್ರಾಮಿಕದ ಕಾರಣ, ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಪದ್ಧತಿ ರೂಢಿಗತವಾಯ್ತು. ಇದ್ರಿಂದ ಆನ್‌ಲೈನ್ ಮೀಟಿಂಗ್, ವೀಡಿಯೋ ಕಾಲ್‌ಗಾಗಿ ಹೆಡ್‌ಫೋನ್ ಬಳಕೆಯೂ ಜಾಸ್ತಿಯಾಯ್ತು.
ಅಷ್ಟೇ ಅಲ್ಲ, ಸ್ನೇಹಿತರು, ಮನೆಯವರೊಂದಿಗೆ ಮಾತನಾಡುವುದಕ್ಕೂ ಹೆಡ್‌ಫೋನ್ ಬಳಸುವವರೇ ಹೆಚ್ಚು. ನಮ್ಮಲ್ಲಿ ಅನೇಕರು ಗಂಟೆಗಳ ಕಾಲ ಹೆಡ್‌ಫೋನ್‌ಗೆ ಅಂಟಿಕೊಂಡೇ ಇರುತ್ತಾರೆ. ಒಂದರ್ಥದಲ್ಲಿ ಇದು ಉತ್ತಮ ಎನಿಸಬಹುದು. ಫೋನ್‌ನಲ್ಲಿ ನೀವು ಕೇಳುವ ಆಡಿಯೋ ಹೊರಗಿನವರಿಗೆ ಗೊತ್ತಾಗಲ್ಲ. ಮತ್ತೆ ನಿಮ್ಮಿಂದ ಹೊರಗಿನವರಿಗೆ ಡಿಸ್ಟರ್ಬ್ ಕೂಡ ಆಗಲ್ಲ. ಆದರೆ ಹೆಡ್‌ಫೋನ್‌ಗೆ ಅತಿಯಾಗಿ ಅಂಟಿಕೊಳ್ಳೋದ್ರಿಂದ ನಮಗೆ ಹಾನಿಯೇ ಹೆಚ್ಚು. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?
ಹೆಡ್‌ಫೋನ್ ಹೆಚ್ಚಾಗಿ ಬಳಸುವವರಿಗೆ ಆತಂಕಕಾರಿ ಸುದ್ದಿಯೊಂದನ್ನು BMJ ಗ್ಲೋಬಲ್ ಹೆಲ್ತ್ ಜರ್ನಲ್ ಪ್ರಕಟಿಸಿದೆ. 100 ಕೋಟಿ ಯುವಜನರು ಹೆಡ್‌ಫೋನ್ ಬಳಕೆಯಿಂದ ಶ್ರವಣ ದೋಷ (Hearing Loss) ಸಮಸ್ಯೆಯನ್ನು ಹೆದರಿಸುತ್ತಿದ್ದಾರೆ ಎಂಬ ವಿಚಾರವನ್ನು ಜರ್ನಲ್ ತನ್ನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ವೈದ್ಯರು ಹೇಳೋದೇನು?
ಇತ್ತೀಚಿನ ದಿನಗಳಲ್ಲಿ ಶ್ರವಣ ಸಮಸ್ಯೆಯಿದೆ ಅಂತಾ ಬರುವ ರೋಗಿಗಳ ಸಂಖ್ಯೆಯೇ ಹೆಚ್ಚಿದೆ. ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದಾಗಿ ಇವರಿಗೆ ಶ್ರವಣ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ತಪಾಸಣೆಯಿಂದ ಗೊತ್ತಾಗಿದೆ. ಹೆಡ್‌ಫೋನ್ ಅತಿಯಾದ ಬಳಕೆ ಅವರ ನರಗಳಿಗೆ ತೀವ್ರತರ ಹಾನಿಯನ್ನುಂಟು ಮಾಡುತ್ತೆ ಎಂದು ಡಾ. ಕೆ.ಕೆ.ಹಂಡಾ ಹೇಳುತ್ತಾರೆ. ಇದನ್ನೂ ಓದಿ: ಹಾಲಿಡೇ ಹಾರ್ಟ್ ಸಿಂಡ್ರೋಮ್ ಅಂದ್ರೇನು ಗೊತ್ತಾ?
ಎಷ್ಟು ನಿಮಿಷ ಹೆಡ್‌ಫೋನ್ ಬಳಸಿದ್ರೆ ಉತ್ತಮ?
ದೀರ್ಘಕಾಲದವರೆಗೆ ಹೆಡ್‌ಫೋನ್‌ಗಳನ್ನು ಬಳಸಬಾರದು. ಹೆಡ್‌ಫೋನ್ ಬಳಕೆಯಿಂದ ದೂರ ಇರುವುದೇ ಉತ್ತಮ. ಬಳಸುವ ಅನಿವಾರ್ಯತೆ ಇದ್ದರೆ, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂಬುದು ವೈದ್ಯರ ಸಲಹೆ.
ಏನದು ಮುನ್ನೆಚ್ಚರಿಕೆ ಕ್ರಮ? ಬಳಕೆ ಸಮಯ ಮಿತಿಗೊಳಿಸಿ: ಹೆಡ್‌ಫೋನ್‌ಗಳ ಬಳಕೆ ಸಮಯವನ್ನು ಮಿತಿಗೊಳಿಸಬೇಕು. ನೀವು ಪ್ರತಿ 45 ನಿಮಿಷ ಹೆಡ್‌ಫೋನ್ ಬಳಸಿದ ನಂತರ 1 ಗಂಟೆ ಅಥವಾ 10-15 ನಿಮಿಷಗಳ ಕಾಲ ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ಇದನ್ನೂ ಓದಿ: ಈ ಕ್ರಮ ಅನುಸರಿಸಿದ್ರೆ ʼಆಲ್‌ಝೈಮರ್ʼ ರೋಗ ತಡೆಗಟ್ಟಬಹುದು
ವಾಲ್ಯೂಮ್ ಕಡಿಮೆ ಮಾಡಿ: ಕೆಲವರಿಗೆ ಹೆಚ್ಚಿನ ಸಮಯ ಹೆಡ್‌ಫೋನ್ ಬಳಸುವುದು ಅನಿವಾರ್ಯವಾಗಿರುತ್ತೆ. 4-5 ಗಂಟೆಗಳ ಕಾಲ ಹೆಡ್‌ಫೋನ್ ಬಳಸಲೇಬೇಕು ಎನ್ನುವವರು, ವಾಲ್ಯೂಮ್ ಕಡಿಮೆ ಮಾಡಿಕೊಳ್ಳುವುದು ಸೂಕ್ತ. ಇದರಿಂದ ಶ್ರವಣಕ್ಕೆ ಆಗಬಹುದಾದ ಹೆಚ್ಚಿನ ಅಪಾಯವನ್ನು ತಡೆಗಟ್ಟಬಹುದು.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ (Health Style) ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತಿದೆ. ಇದರೊಂದಿಗೆ ದೇಹದ ತೂಕವೂ ಹೆಚ್ಚಾಗಿ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ರೆ ದೆಹಲಿಯ ಹಿರಿಯ ಪೊಲೀಸ್ (Delhi Police) ಅಧಿಕಾರಿಯೊಬ್ಬರು 8 ತಿಂಗಳಲ್ಲಿ ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡು ಇಲಾಖೆಯಲ್ಲಿ ಭಾರೀ ಪ್ರಶಂಸೆ ಪಡೆದಿದ್ದಾರೆ.
130 ಕೆ.ಜಿ ತೂಕವಿದ್ದ ಮೆಟ್ರೋ (Metro) ಉಪ ಪೊಲೀಸ್ ಆಯುಕ್ತ ಜಿತೇಂದ್ರ ಮಣಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಆದ್ರೆ ಬದುಕನ್ನು ಸವಾಲಾಗಿ ಸ್ವೀಕರಿಸಿದ ಜೀತೆಂದ್ರ ಮಣಿ ಸಂಪೂರ್ಣ ಬದಲಾವಣೆ ಮಾಡಿಕೊಂಡಿದ್ದಾರೆ. ಪ್ರತಿದಿನ 15 ಸಾವಿರ ಹೆಜ್ಜೆ ನಡೆಯುವ ಜೊತೆಗೆ, ಪೌಷ್ಠಿಕ ಆಹಾರ ಸೇವನೆ ಮಾಡುವ ಕ್ರಮವನ್ನ ರೂಢಿಸಿಕೊಂಡಿದ್ದಾರೆ. ಜಂಕ್ ಫುಡ್‌ಗಳನ್ನ ಬದಿಗಿಟ್ಟು ರೊಟ್ಟಿ, ಸೂಪ್, ಸಲಾಡ್ ಹಾಗೂ ಹಣ್ಣುಗಳ ಆಹಾರ ಸೇವನೆಗೆ ತನ್ನನ್ನು ಒಗ್ಗಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಜೀತೇಂದ್ರ ಮಣಿ, 8 ತಿಂಗಳಲ್ಲಿ 32 ಲಕ್ಷಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿದ್ದೇನೆ. ಪ್ರತಿ ತಿಂಗಳು 4.5 ಲಕ್ಷ ಹೆಜ್ಜೆ ನಡೆಯುವ ಗುರಿ ಹಾಕಿಕೊಂಡಿದ್ದೆ. ಇದರಿಂದ 130 ಕೆ.ಜಿಯಿಂದ 84 ಕೆಜಿಗೆ ದೇಹವನ್ನು ಇಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಪೊಲೀಸ್ ಅಧಿಕಾರಿಗೆ ದೆಹಲಿ ಪೊಲೀಸ್ ಆಯುಕ್ತರು ಇಲಾಖೆಯಿಂದ ಪ್ರಶಂಸನಾ ಪತ್ರವನ್ನೂ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ನ್ಯೂ ಇಯರ್ ಸೆಲಬ್ರೇಷನ್‍ಗೆ ಕೌಂಟ್‍ಡೌನ್ ಶುರು- ಕರಾವಳಿ ತೀರಕ್ಕೆ ಪ್ರವಾಸಿಗರ ದಂಡು
Live Tv
[brid partner=56869869 player=32851 video=960834 autoplay=true]
ಪತ್ತನಂತಿಟ್ಟ: ಶಬರಿಮಲೆ(Sabarimala) ಯಾತ್ರೆಯ ಈ ಸೀಸನ್‌ನ ಮೊದಲ 35 ದಿನಗಳಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 23 ಮಂದಿ ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕೋವಿಡ್(Covid 19) ನಂತರದ ಆರೋಗ್ಯ ಸಮಸ್ಯೆಯೇ ಕಾರಣ ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಡಿದಾದ ಏರಿಳಿತದ ಹಾದಿ ಇರುವ ನೀಲಿಮಲ ಮತ್ತು ಅಪ್ಪಾಚ್ಚಿಮೇಡುಗಳಲ್ಲಿ ಬೆಟ್ಟ ಹತ್ತಬೇಕಾದರೆ ಹೆಚ್ಚಿನ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇದುವರೆಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ 106 ಮಂದಿಯನ್ನು ಪಂಪಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವುಗಳು ಕೋವಿಡ್ ನಂತರದ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಕಡಿದಾದ ಬೆಟ್ಟವನ್ನು ಹತ್ತುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಕೋವಿಡ್ ಹೊಂದಿರುವವರಲ್ಲಿ ಗಂಭೀರವಾಗಿರುತ್ತವೆ ಎನ್ನುವುದು ತಜ್ಞ ವೈದ್ಯರ ವಾದ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್ ಸುನಾಮಿಗೆ ಕಾರಣ ಏನು?
ಪಂಪಾ ಮತ್ತು ಸನ್ನಿಧಾನಂ ನಡುವಿನ ಕಾರ್ಡಿಯೋ ಕೇಂದ್ರಗಳಲ್ಲಿ ಕೇವಲ ಆಮ್ಲಜನಕ ಸಿಲಿಂಡರ್‌ಗಳು ಮಾತ್ರ ಇವೆ. ಸೂಕ್ತ ತುರ್ತು ಚಿಕಿತ್ಸೆ ಕೊಡಿಸಲು ಪಂಪಾದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಭಕ್ತರ ದಟ್ಟಣೆಯ ಸಮಯದಲ್ಲಿ ಅಂಬುಲೆನ್ಸ್ ಈ ಹಾದಿಯಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ. ಕೆಲವು ವಾರಗಳ ಹಿಂದೆ, ಇದೇ ರೀತಿ ಅಂಬುಲೆನ್ಸ್ ಬರುವಾಗ ನಡೆದ ಕಾಲ್ತುಳಿತದಲ್ಲಿ ಅನೇಕ ಜನರು ಗಾಯಗೊಂಡಿದ್ದರು.
Live Tv
[brid partner=56869869 player=32851 video=960834 autoplay=true]
ಹಾಲಿಡೇ ಹಾರ್ಟ್ ಸಿಂಡ್ರೋಮ್ (Holiday Heart Syndrome) ಎನ್ನುವುದು ಕೆಲವರಿಗೆ ಹೊಸ ಕಾಯಿಲೆ ಎನಿಸಬಹುದು. ಅತಿಯಾದ ಆಲ್ಕೋಹಾಲ್ (alcohol) ಸೇವನೆಯು ಹೃದಯ ಸಂಬಂಧಿ ಕಾಯಿಲೆಗೆ ಪ್ರಮುಖ ಕಾರಣವಾಗುತ್ತೆ. ಹೃದಯಾಘಾತವು (Heart Attack) ಯಾವುದೇ ಸೂಚನೆ ನೀಡದೆಯೂ ಸಂಭವಿಸಿ ಬಿಡಬಹುದು. ಅಮೆರಿಕಾದಲ್ಲಿ ಹೃದಯರಕ್ತನಾಳದ ಕಾಯಿಲೆಯು ಸಾಮಾನ್ಯ ಎನ್ನುವಂತಾಗಿದೆ.
ಹಾಲಿಡೇ ಹಾರ್ಟ್ ಸಿಂಡ್ರೋಮ್ ಅಂದ್ರೇನು?
ವರ್ಷದ ಯಾವುದೇ ಕಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಆದರೆ ರಜಾದಿನಗಳ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅದನ್ನು ಹಾಲಿಡೇ ಹಾರ್ಟ್ ಸಿಂಡ್ರೋಮ್ ಎನ್ನುತ್ತಾರೆ. ಏಕೆಂದರೆ ಈ ಸಮಯದಲ್ಲಿ ಜನರು ಪಾರ್ಟಿ, ಮೋಜು-ಮಸ್ತಿ ಮಾಡುತ್ತಾರೆ. ಆಲ್ಕೋಹಾಲ್‌ಯುಕ್ತ ಪಾನಿಯಾಗಳು ಮತ್ತು ಕ್ಯಾಲರಿ ತಿಂಡಿಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಹಾಲಿಡೇ ಹಾರ್ಟ್ ಸಿಂಡ್ರೋಮ್‌ನಿಂದ ಏನಾಗಬಹುದು?
ಇದರಿಂದ ಜೀವಕ್ಕೆ ಮುಂದೆ ಅಪಾಯ ಸಂಭವಿಸಬಹುದು. ಹೃದಯರಕ್ತನಾಳ ಸಂಬಂಧಿ ಸಮಸ್ಯೆಗೂ ಕಾರಣವಾಗುತ್ತೆ. ಇದನ್ನು ನಿರ್ಲಕ್ಷಿಸಿದರೆ ಪ್ರಾಣಕ್ಕೆ ಅಪಾಯ. ಅಷ್ಟೇ ಅಲ್ಲದೇ ನ್ಯುಮೋನಿಯಾಗೂ ಕಾರಣವಾಗಬಹುದು. ರಕ್ತ ಹೆಪ್ಪುಗಟ್ಟಿ ರಕ್ತನಾಳದಲ್ಲಿ ಅಡಚಣೆ ಉಂಟಾಗಬಹುದು.
ಕ್ರಿಸ್‌ಮಸ್, ನ್ಯೂ ಇಯರ್ ಹಾಲಿಡೇ ಅವಧಿಯಲ್ಲಿ ಶೇ.15 ಕೇಸ್ ಹೆಚ್ಚಳ
ಸ್ವೀಡಿಷ್ ಅಧ್ಯಯನದ ಪ್ರಕಾರ, ಕ್ರಿಸ್‌ಮಸ್ ಮತ್ತು ಹೊಸವರ್ಷದ ರಜಾದಿನಗಳ ಸಂದರ್ಭದಲ್ಲಿ ಹಾಲಿಡೇ ಹಾರ್ಟ್ ಸಿಂಡ್ರೋಮ್ ಸಮಸ್ಯೆ ಶೇ.15ರಷ್ಟು ಹೆಚ್ಚಿರುತ್ತದೆ. 75 ವರ್ಷ ಮೇಲ್ಪಟ್ಟವರು, ಮಧುಮೇಹ ಇರುವವರಿಗೆ ಹೆಚ್ಚು ಅಪಾಯ. ಇದನ್ನೂ ಓದಿ: ಮಧುಮೇಹಿಗಳು ಆಲೂಗಡ್ಡೆ ತಿನ್ನುವುದನ್ನು ನಿಲ್ಲಿಸಬೇಕೆ?
ಇದನ್ನು ತಡೆಗಟ್ಟುವುದು ಹೇಗೆ?
ರಜಾದಿನಗಳಲ್ಲಿ ಪಾರ್ಟಿ, ಮೋಜು-ಮಸ್ತಿ ಅಗತ್ಯವಿದ್ದರೂ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಜಂಕ್ ಫುಡ್‌ಗಳು ಮತ್ತು ಮದ್ಯಪಾನ ಸೇವನೆಯನ್ನು ಮಿತಗೊಳಿಸಿ. ಅಂತಹ ದಿನಗಳಲ್ಲಿ ಹೆಚ್ಚು ಶಾಂತ ರೀತಿಯಲ್ಲಿ ಇರಿ. ಇಂತಹ ಸಂದರ್ಭದಲ್ಲಿ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಡಿ.
Live Tv
[brid partner=56869869 player=32851 video=960834 autoplay=true]
ಕನ್ನಡ ಸಿನಿಮಾ ರಂಗದ ಹಿರಿಯ ನಿರ್ದೇಶಕ ಭಗವಾನ್ ಅವರ ಆರೋಗ್ಯದಲ್ಲಿ ಮೂರು ದಿನಗಳ ಹಿಂದೆ ಏರುಪೇರಾಗಿತ್ತು. ಕೂಡಲೇ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ವೈದ್ಯರು ತಿಳಿಸಿದ್ದರು. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ಭಗವಾನ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಟ, ನಿರ್ದೇಶಕ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಭಗವಾನ್ ಗುರುತಿಸಿಕೊಂಡಿದ್ದರು. 89 ವರ್ಷದ ಭಗವಾನ್ ಅವರು ಇತ್ತೀಚೆಗೆ ಶೀತ ಮತ್ತು ಜ್ವರದಿಂದ ಬಳಲುತ್ತಿದ್ದರು. ಉಸಿರಾಟದ ಸಮಸ್ಯೆಯಿಂದ 3 ದಿನದ ಹಿಂದೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಡಾ.ಮಂಜುನಾಥ್ ಅವರು ಭಗವಾನ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಭಗವಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಸುದ್ದಿಯು ಸಿಗುತ್ತಿದ್ದಂತೆಯೇ ಅನೇಕ ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಅಲ್ಲದೇ, ಸಿನಿಮಾ ರಂಗದ ಹಿತೈಷಿಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಂಡಿದೆ ಎನ್ನುತ್ತಿದ್ದಾರೆ ಅವರ ಆಪ್ತರು.
1966ರಲ್ಲಿ ʻಸಂಧ್ಯಾರಾಗʼ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಭಗವಾನ್ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ದೊರೈರಾಜ್ ಅವರ ಜೊತೆಗೂಡಿ ಸಾಕಷ್ಟು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದರು.
Live Tv
[brid partner=56869869 player=32851 video=960834 autoplay=true]
ಮಾಸ್ಕ್: ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಮಾಸ್ಕೋದಲ್ಲಿರುವ ತಮ್ಮ ಮನೆಯ (Home) ಟೆರೇಸ್‍ನ ಮೆಟ್ಟಿಲಿನಲ್ಲಿ ಬಿದ್ದು ಒದ್ದಾಡಿರುವುದಾಗಿ ರಷ್ಯಾದ ಮಾಧ್ಯಮವೊಂದು ವರದಿ ಮಾಡಿದೆ.
ಆರೋಗ್ಯ (Health) ಸಮಸ್ಯೆಯಿಂದ ಬಳಲುತ್ತಿರುವ 70 ವರ್ಷದ ಪುಟಿನ್ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮಾಸ್ಕೋದಲ್ಲಿರುವ ತಮ್ಮ ಮನೆಯ ಟೆರೇಸ್ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಮೆಟ್ಟಿಲಿನಿಂದ ಬಿದ್ದಿದ್ದಾರೆ. 5 ಮೆಟ್ಟಿಲುಗಳಲ್ಲಿ ಬಿದ್ದು ಹೊರಳಾಡಿರುವ ಪುಟಿರನ್ನು ಸಿಬ್ಬಂದಿ ಎಬ್ಬಿಸಿ ಬಳಿಕ ಕೂರಿಸಿದ್ದಾರೆ ಎಂದು ವೀಡಿಯೋ ಒಂದನ್ನು ನ್ಯೂಯಾರ್ಕ್‍ನ ಟೆಲಿಗ್ರಾಮ್ ಚಾನಲ್ ಬಿಡುಗಡೆಗೊಳಿಸಿದೆ. ಇದನ್ನೂ ಓದಿ: ಗುಜರಾತ್ ಚುನಾವಣೆ – ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ ಮೋದಿ
ಪುಟಿನ್ ಕಳೆದ ತಿಂಗಳು ಅವರ ಕ್ಯೂಬನ್ ಕೌಂಟರ್ಪಾರ್ಟ್ ಮಿಗುಯೆಲ್ ಡಯಾಜ್-ಕ್ಯಾನೆಲ್ ಅವರೊಂದಿಗಿನ ಸಭೆಯನ್ನು ಆರೋಗ್ಯ ಸಮಸ್ಯೆಯಿಂದ ರದ್ದುಪಡಿಸಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಪುಟಿನ್ ಕೈನಡುಗುತ್ತಿರುವುದು ಮತ್ತು ಕಾಲುಗಳಲ್ಲಿ ನಿಲ್ಲಲಾಗದೆ ಕುಸಿದು ಬಿದ್ದಿರುವುದು ಗೋಚರಿಸಿದ್ದು, ಇದೀಗ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಇದನ್ನೂ ಓದಿ: ಪ್ರಾಂಶುಪಾಲರಿಗೆ ಜೈಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯಿಸಿದ ABVP ಕಾರ್ಯಕರ್ತರು
ಕ್ಯಾನ್ಸರ್ (Cance) ಕಾಯಿಲೆಯಿಂದ ಬಳಲುತ್ತಿರುವ ಪುಟಿನ್ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಹೆಚ್ಚೆಂದರೆ ಅವರಿನ್ನು 3 ವರ್ಷ ಬದುಕಬಹುದೆಂದು ವೈದ್ಯರು ಹೇಳಿರುವುದಾಗಿ ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‍ಎಸ್‍ಬಿ ಈ ಹಿಂದೆ ವರದಿ ಮಾಡಿತ್ತು. ಪುಟಿನ್ 2014 ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ವರದಿಯೊಂದು ಬಿತ್ತರವಾಗಿದೆ.
Live Tv
[brid partner=56869869 player=32851 video=960834 autoplay=true]
ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ಆರೋಗ್ಯದ ಬಗ್ಗೆ ಆಗಾಗ್ಗೆ ಹೊಸ ಹೊಸ ಸುದ್ದಿಗಳು ಬರುತ್ತಲೇ ಇವೆ. ಸಮಂತಾ ಅವರು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮೊದಲು ಸುದ್ದಿ ಆಯಿತು. ಅದನ್ನು ಅವರ ಮ್ಯಾನೇಜರ್ ಅಲ್ಲಗಳೆದರು. ನಂತರ ಸ್ವತಃ ಸಮಂತಾ ಅವರೇ ತಮಗಿರುವ ಮಯೋಸಿಟಿಸ್ ಕಾಯಿಲೆ ಕುರಿತಂತೆ ಬರೆದುಕೊಂಡರು. ಫೋಟೋ ಸಮೇತ ಹಾಕಿ, ಚಿಕಿತ್ಸೆ ಪಡೆಯುತ್ತಿರುವ ಕುರಿತು ಹೇಳಿಕೊಂಡರು.
ಇದಾದ ನಂತರ ಅವರು ಯಶೋದಾ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡರು. ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಮತ್ತೆ ಅವರ ಆರೋಗ್ಯದ ಬಗ್ಗೆಯೇ ಮತ್ತೊಂದು ಸುತ್ತಿನ ಚರ್ಚೆ ಶುರುವಾಯಿತು. ಅವರ ಮ್ಯಾನೇಜರ್ ಈ ಕುರಿತು ಮತ್ತೆ ಸ್ಪಷ್ಟಪಡಿಸಿ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದರು. ಆದರೆ, ಸಿನಿಮಾ ರಿಲೀಸ್ ಸಂದರ್ಭದಲ್ಲಿ ಅವರು ಯಾವುದೇ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಕ್ಯಾಮೆರಾ ಮುಂದೆಯೂ ಬರಲಿಲ್ಲ. ಹೀಗಾಗಿ ಕಾಯಿಲೆಯಿಂದ ಅವರು ಗುಣಮುಖರಾಗಿಲ್ಲ ಎಂದಾಯಿತು. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್ ಸೇತುಪತಿ
ಈಗ ಟಾಲಿವುಡ್ ಅಂಗಳದಲ್ಲಿ ಸುಮಂತಾ ಅವರ ಕಾಯಿಲೆ ಬಗ್ಗೆ ಮತ್ತೆ ಚರ್ಚೆ ಆಗುತ್ತಿದೆ. ಇದೀಗ ಮಯೋಸಿಟಿಸ್ ಕಾಯಿಲೆ ಉಲ್ಬಣವಾಗಿದ್ದು, ಅವರನ್ನು ದಕ್ಷಿಣ ಕೊರಿಯಾಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಮೊದಲು ಅವರು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದರು ಎಂದು ಹೇಳಲಾಗಿತ್ತು. ಅಲ್ಲಿಂದ ಬಂದ ನಂತರ ಅವರು ಭಾರತದಲ್ಲೇ ಅದಕ್ಕೆ ಔಷಧಿ ಪಡೆದರು. ಇದೀಗ ದಕ್ಷಿಣ ಕೊರಿಯಾಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟನೆ ಬಂದಿಲ್ಲ.
Live Tv
[brid partner=56869869 player=32851 video=960834 autoplay=true]