Tag: health

  • ಚಳಿಗಾಲದಲ್ಲಿ ಕೀಲುನೋವಿನಿಂದ ಮುಕ್ತಿ ಪಡೆಯಲು ಈ ಆಹಾರ ಸೇವಿಸಿ

    ಚಳಿಗಾಲದಲ್ಲಿ ಕೀಲುನೋವಿನಿಂದ ಮುಕ್ತಿ ಪಡೆಯಲು ಈ ಆಹಾರ ಸೇವಿಸಿ

    ತ್ತೀಚಿನ ದಿನಗಳಲ್ಲಿ ಮಳೆಗಾಲ, ಚಳಿಗಾಲ (Winter) ಬಂತೆಂದರೆ ಸಾಕು ಯುವಕರಿಂದ ವಯಸ್ಸಾದವರವರೆಗೂ ಕೀಲು ನೋವು, ಮೂಳೆ ನೋವುಗಳು (Bones And Joints) ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಕೆಲವು ಆಧುನಿಕ ಶೈಲಿಯ ಆಹಾರ ಪದ್ಧತಿಯೂ ಕಾರಣವಾಗುತ್ತದೆ. ಈ ಕೀಲು ನೋವು, ಮೂಳೆ ನೋವಿನಿಂದ ಮುಕ್ತಿ ಪಡೆಯಲು ಕೆಲವನ್ನು ಸೇವಿಸುವುದು ಅಗತ್ಯವಿದೆ.

    ಹಾಲು, ಮೊಸರು, ಚೀಸ್: ಇವುಗಳಲ್ಲವೂ ಕ್ಯಾಲ್ಸಿಯಂನ ಮೂಲವಾಗಿದೆ. ಮೊಸರು, ಚೀಸ್ ಹಾಗೂ ಹಾಲಿನ (Milk) ಪದಾರ್ಥಗಳನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ. ಇದರಿಂದಾಗಿ ಕೀಲು ನೋವು, ಮೂಳೆ ನೋವನ್ನು ತಡೆಗಟ್ಟಬಹುದು.

    ಮೀನು: ದೈನಂದಿನವಾಗಿ ಮೀನು ಸೇವನೆಯಿಂದ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚುತ್ತದೆ. ಇದರಿಂದಾಗಿ ಕೀಲು ನೋವು ಹಾಗೂ ಮೂಳೆ ನೋವು ಕಡಿಮೆ ಆಗುತ್ತದೆ. ಜೊತೆಗೆ ಮೆದುಳು ಹಾಗೂ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

    ಸೊಪ್ಪನ್ನು ಹೆಚ್ಚಾಗಿ ಸೇವಿಸಿ: ಕೋಸುಗಡ್ಡೆ, ಬಸಳೆ, ಪಾಲಕ್‍ನಂತಹ ಸೊಪ್ಪನ್ನು ಹೆಚ್ಚಾಗಿ ಸೇವಿಸಿ. ಇದು ಕ್ಯಾಲ್ಸಿಯಂ ಅನ್ನು ಒದಗಿಸುತ್ತವೆ.

    ಅರಿಶಿನ: ಅರಿಶಿನವನ್ನು ಸರ್ವರೋಗಕ್ಕೂ ರಾಮಬಾಣ ಎಂದು ಕರೆಯುತ್ತಾರೆ. ಇದರಲ್ಲಿರುವ ಕರ್ಕ್ಯುಮಿನ್ ಎಂಬ ನೈಸರ್ಗಿಕ ರಾಸಾಯನಿಕ ಶಕ್ತಿಯು ಮೂಳೆಗಳ ನೋವು ಹಾಗೂ ಕೀಲು ನೋವನ್ನು ಕಡಿಮೆ ಮಾಡುತ್ತದೆ.

    ಬೆಳ್ಳುಳ್ಳಿ: ಬೆಳ್ಳುಳ್ಳಿಯು ಕೀಲು ನೋವು ನಿವಾರಣೆ ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳು ಅಪಾರ ಪ್ರಮಾಣದಲ್ಲಿ ಇದೆ. ಹೀಗಾಗಿ ಚಳಿಗಾಲದಲ್ಲಿ ಎದುರಾಗುವ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು. ಇದನ್ನೂ ಓದಿ: ಸ್ಪ್ಲಿಟ್ ಹೇರ್ ಕೊನೆಗೊಳಿಸಲು ಇಲ್ಲಿದೆ ಕೆಲವು ಮುಂಜಾಗ್ರತಾ ಕ್ರಮಗಳು

    ಶುಂಠಿ: ಹಲವಾರು ರೋಗಗಳಿಗೆ ಮನೆಮದ್ದು ಎನಿಸಿರುವ ಶುಂಠಿಯು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ವಿಶೇಷವಾಗಿ ಮಳೆಗಾಲದ ಹಾಗೂ ಚಳಿಗಾಲದ ಸಮಯದಲ್ಲಿ ಅನೇಕ ರೋಗಗಳಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು

    ವಾಲ್ ನಟ್: ಡ್ರೈಫ್ರೂಟ್ಸ್‌ಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಅದರಲ್ಲೂ ವಿಶೇಷವಾಗಿ ವಾಲ್‍ನಟ್ ಸೇವನೆಯಿಂದ ಕೀಲು ನೋವಿನಿಂದ ಮುಕ್ತಿ ಪಡೆಯಬಹುದಾಗಿದೆ. ಇದರಲ್ಲಿರುವ 3 ಫ್ಯಾಟಿ ಆಮ್ಲಗಳು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ನಂದಮೂರಿ ತಾರಕರತ್ನ ಸ್ಥಿತಿ ಇನ್ನೂ ಗಂಭೀರ : ಬೆಂಗಳೂರಿಗೆ ಬಂದ ಜ್ಯೂ.ಎನ್.ಟಿ.ಆರ್

    ನಟ ನಂದಮೂರಿ ತಾರಕರತ್ನ ಸ್ಥಿತಿ ಇನ್ನೂ ಗಂಭೀರ : ಬೆಂಗಳೂರಿಗೆ ಬಂದ ಜ್ಯೂ.ಎನ್.ಟಿ.ಆರ್

    ತೆಲುಗಿನ ಖ್ಯಾತ ನಟ ಹಾಗೂ ರಾಜಕಾರಣಿ ನಂದಮೂರಿ ತಾರಕರತ್ನ (Nandamuri Tarakaratna) ಆರೋಗ್ಯದಲ್ಲಿ (Health) ಯಾವುದೇ ಬದಲಾವಣೆ ಆಗದೇ ಇರುವ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರು ಒಬ್ಬೊಬ್ಬರೇ ಬೆಂಗಳೂರಿಗೆ ಆಗಮಿಸಿ, ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿರುವ ಕಾರಣ, ಎರಡು ದಿನಗಳ ಕಾಲ ಏನೂ ಹೇಳಲು ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ (Jr. NTR) ಕೂಡ ಆರೋಗ್ಯ ವಿಚಾರಿಸಲು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಜೊತೆಗೆ ಆರೋಗ್ಯ ಸಚಿವ ಕೆ.ಸುಧಾಕರ್ ಕೂಡ ನಟನಿಗೆ ಜೊತೆಯಾಗಿದ್ದಾರೆ.

    ನಿನ್ನೆಯಷ್ಟೇ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಬಂದು ನಾರಾಯಣ ಹೃದಯಾಲಯಕ್ಕೆ ತೆರಳಿ ನಂದಮೂರಿ ಅವರ ಆರೋಗ್ಯ ವಿಚಾರಿಸಿದ್ದರು. ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅವರು ಆಗಮಿಸಿದ್ದರು.  ನಿನ್ನೆ ಸಂಜೆ ನಂದಮೂರಿ ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಆರೋಗ್ಯ ತೀರಾ ಹದಗೆಟ್ಟಿದೆ ಹಾಗೂ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿರುವುದಾಗಿ ಆಸ್ಪತ್ರೆ ತಿಳಿಸಿದೆ. ಹೃದಯದ ರಕ್ತನಾಳುಗಳು ಬ್ಲಾಕ್ ಆಗಿರುವುದರಿಂದ ಅವುಗಳನ್ನು ಸರಿಪಡಿಸಲು ವೈದ್ಯರು ಸತತ ಪ್ರಯತ್ನ ನಡೆಸಿದ್ದಾರೆ.

    ಇಂಟ್ರಾ ಅಯೋರ್ಟಿಕ್ ಪಂಪ್, ವ್ಯಾಸೋಆಕ್ಟಿವ್ ನೆರವಿನಿಂದಲೂ ಚಿಕಿತ್ಸೆ ನೀಡಲಾಗಿದ್ದು, ಆಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ. ಸ್ಟಂಟ್ ಅಳವಡಿಕೆಯ ನಂತರವೂ ರಕ್ತಸ್ರಾವ ನಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಆದರೂ, ನುರಿತ ವೈದ್ಯರ ತಂಡ ಚಿಕಿತ್ಸೆಯನ್ನು ಮುಂದುವರೆಸಿದೆ ಎಂದು ಹೆಲ್ತ್‍ ಬುಲೆಟಿನ್ ನಲ್ಲಿ ತಿಳಿಸಲಾಗಿತ್ತು.

    ನಂದಮೂರಿ ತಾರಕರತ್ನ ಅವರಿಗೆ ಶುಕ್ರವಾರ ತೀವ್ರ ಹೃದಯಾಘಾತ (Heart Attack) ವಾಗಿತ್ತು, ಕೂಡಲೇ ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿತ್ತು.  ಮೊನ್ನೆ ತಡರಾತ್ರಿ 12 ಗಂಟೆ ಸಂದರ್ಭದಲ್ಲಿ ಆಂಧ್ರದ ಕುಪ್ಪಂನಿಂದ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬಳಿಕ ಯಶಸ್ವಿಯಾಗಿ ಆಂಜಿಯೋಗ್ರಾಮ್ (Angiogram) ಮಾಡಿ ಸ್ಟಂಟ್ ಅಳವಡಿಕೆ ಮಾಡಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿರುವುದಾಗಿ ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ

    ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ

    ತೆಲುಗಿನ ಖ್ಯಾತ ಚಿತ್ರನಟ ನಂದಮೂರಿ ತಾರಕರತ್ನ (Nandamuri Tarakaratna) ಆರೋಗ್ಯ (health) ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಬೆಂಗಳೂರಿಗೆ ಬಂದಿಳಿದಿದ್ದು, ನಾರಾಯಣ ಹೃದಯಾಲಯಕ್ಕೆ ತೆರಳಿ ನಂದಮೂರಿ ಅವರ ಆರೋಗ್ಯ ವಿಚಾರಿಸಿದರು. ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ನಾರಾಯಣ ಹೃದಯಾಲಯ ತಜ್ಞರು ತಿಳಿಸಿದ್ದಾರೆ. ಸಂಜೆ ನಂದಮೂರಿ ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಆರೋಗ್ಯ ತೀರಾ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದೆ. ಹೃದಯದ ರಕ್ತನಾಳುಗಳು ಬ್ಲಾಕ್ ಆಗಿರುವುದರಿಂದ ಅವುಗಳನ್ನು ಸರಿಪಡಿಸಲು ವೈದ್ಯರು ಸತತ ಪ್ರಯತ್ನ ನಡೆಸಿದ್ದಾರೆ.

    ಇಂಟ್ರಾ ಅಯೋರ್ಟಿಕ್ ಪಂಪ್, ವ್ಯಾಸೋಆಕ್ಟಿವ್ ನೆರವಿನಿಂದಲೂ ಚಿಕಿತ್ಸೆ ನೀಡಲಾಗಿದ್ದು, ಆಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ. ಸ್ಟಂಟ್ ಅಳವಡಿಕೆಯ ನಂತರವೂ ರಕ್ತಸ್ರಾವ ನಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಆದರೂ, ನುರಿತ ವೈದ್ಯರ ತಂಡ ಚಿಕಿತ್ಸೆಯನ್ನು ಮುಂದುವರೆಸಿದೆ ಎಂದು ಹೆಲ್ತ್‍ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.

    ನಂದಮೂರಿ ತಾರಕರತ್ನ ಅವರಿಗೆ ಶುಕ್ರವಾರ ತೀವ್ರ ಹೃದಯಾಘಾತ (Heart Attack) ವಾಗಿತ್ತು, ಕೂಡಲೇ ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿತ್ತು.  ತಡರಾತ್ರಿ 12 ಗಂಟೆ ಸಂದರ್ಭದಲ್ಲಿ ಆಂಧ್ರದ ಕುಪ್ಪಂನಿಂದ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬಳಿಕ ಯಶಸ್ವಿಯಾಗಿ ಆಂಜಿಯೋಗ್ರಾಮ್ (Angiogram) ಮಾಡಿ ಸ್ಟಂಟ್ ಅಳವಡಿಕೆ ಮಾಡಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿರುವುದಾಗಿ ಆಸ್ಪತ್ರೆ ಮೂಲಗಳು ಬೆಳಗ್ಗೆ ಮಾಹಿತಿ ನೀಡಿದ್ದವು.

    ತಾರಕರತ್ನ ಅವರು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಯುವ ಗಲಮ್ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಪ್ಪಂಗೆ ತೆರಳಿದ್ದರು. ಲೋಕೇಶ್ ಮಸೀದಿಯಿಂದ ಪ್ರಾರ್ಥನೆ ಸಲ್ಲಿಸಿ ಹೊರಬಂದಾಗ ಅಲ್ಲಿ ನೆರೆದಿದ್ದ ಟಿಡಿಪಿ ಕಾರ್ಯಕರ್ತರು ಏಕಾಏಕಿ ಲೋಕೇಶ್ ಕಡೆಗೆ ನುಗ್ಗಿದ್ದು, ಅಲ್ಲಿಯೇ ನಿಂತಿದ್ದ ತಾರಕರತ್ನ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಕುಪ್ಪಂನ ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಪಿಇಎಸ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ಪಿಇಎಸ್ ವೈದ್ಯಕೀಯ ಕಾಲೇಜು ವೈದ್ಯರ ಸಲಹೆಯಂತೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಹೆಲ್ತ್ ಬುಲೆಟಿನ್ ರಿಲೀಸ್

    ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಹೆಲ್ತ್ ಬುಲೆಟಿನ್ ರಿಲೀಸ್

    ತೆಲುಗಿನ ಖ್ಯಾತ ಚಿತ್ರನಟ ಮತ್ತು ರಾಜಕಾರಣಿ ನಂದಮೂರಿ ತಾರಕರತ್ನ (Nandamuri Tarakaratna) ಆರೋಗ್ಯ (health) ಸ್ಥಿತಿ ಗಂಭೀರವಾಗಿದೆ (serious) ಎಂದು ನಾರಾಯಣ ಹೃದಯಾಲಯ ತಜ್ಞರು ತಿಳಿಸಿದ್ದಾರೆ. ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ (health bulletin) ರಿಲೀಸ್ ಮಾಡಿದ್ದು, ಆರೋಗ್ಯ ತೀರಾ ಹದಗೆಟ್ಟಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದೆ. ಹೃದಯದ ರಕ್ತನಾಳುಗಳು ಬ್ಲಾಕ್ ಆಗಿರುವುದರಿಂದ ಅವುಗಳನ್ನು ಸರಿಪಡಿಸಲು ವೈದ್ಯರು ಸತತ ಪ್ರಯತ್ನ ನಡೆಸಿರುವುದಾಗಿ ತಿಳಿಸಿದೆ.

    ಇಂಟ್ರಾ ಅಯೋರ್ಟಿಕ್ ಪಂಪ್, ವ್ಯಾಸೋಆಕ್ಟಿವ್ ನೆರವಿನಿಂದಲೂ ಚಿಕಿತ್ಸೆ ನೀಡಲಾಗಿದ್ದು, ಆಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ. ಸ್ಟಂಟ್ ಅಳವಡಿಕೆಯ ನಂತರವೂ ರಕ್ತಸ್ರಾವ ನಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಆದರೂ, ನುರಿತ ವೈದ್ಯರ ತಂಡ ಚಿಕಿತ್ಸೆಯನ್ನು ಮುಂದುವರೆಸಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.  ಇದನ್ನೂ ಓದಿ: ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ನಂದಮೂರಿ ತಾರಕರತ್ನ ಅವರಿಗೆ ಶುಕ್ರವಾರ ತೀವ್ರ ಹೃದಯಾಘಾತ (Heart Attack) ವಾಗಿತ್ತು, ಕೂಡಲೇ ಅವರನ್ನು ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಅಲ್ಲಿಂದ  ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಹೊಸೂರು ರಸ್ತೆಯ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿತ್ತು.  ತಡರಾತ್ರಿ 12 ಗಂಟೆ ಸಂದರ್ಭದಲ್ಲಿ ಆಂಧ್ರದ ಕುಪ್ಪಂನಿಂದ ಅಂಬುಲೆನ್ಸ್ ಮೂಲಕ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಬಳಿಕ ಯಶಸ್ವಿಯಾಗಿ ಆಂಜಿಯೋಗ್ರಾಮ್ (Angiogram) ಮಾಡಿ ಸ್ಟಂಟ್ ಅಳವಡಿಕೆ ಮಾಡಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿರುವುದಾಗಿ ಆಸ್ಪತ್ರೆ ಮೂಲಗಳು ಬೆಳಗ್ಗೆ ಮಾಹಿತಿ ನೀಡಿದ್ದವು.

    ತಾರಕರತ್ನ ಅವರು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಯುವ ಗಲಮ್ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಪ್ಪಂಗೆ ತೆರಳಿದ್ದರು. ಲೋಕೇಶ್ ಮಸೀದಿಯಿಂದ ಪ್ರಾರ್ಥನೆ ಸಲ್ಲಿಸಿ ಹೊರಬಂದಾಗ ಅಲ್ಲಿ ನೆರೆದಿದ್ದ ಟಿಡಿಪಿ ಕಾರ್ಯಕರ್ತರು ಏಕಾಏಕಿ ಲೋಕೇಶ್ ಕಡೆಗೆ ನುಗ್ಗಿದ್ದು, ಅಲ್ಲಿಯೇ ನಿಂತಿದ್ದ ತಾರಕರತ್ನ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಕುಪ್ಪಂನ ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಪಿಇಎಸ್ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ಪಿಇಎಸ್ ವೈದ್ಯಕೀಯ ಕಾಲೇಜು ವೈದ್ಯರ ಸಲಹೆಯಂತೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಪ್ಲಿಟ್ ಹೇರ್ ಕೊನೆಗೊಳಿಸಲು ಇಲ್ಲಿದೆ ಕೆಲವು ಮುಂಜಾಗ್ರತಾ ಕ್ರಮಗಳು

    ಸ್ಪ್ಲಿಟ್ ಹೇರ್ ಕೊನೆಗೊಳಿಸಲು ಇಲ್ಲಿದೆ ಕೆಲವು ಮುಂಜಾಗ್ರತಾ ಕ್ರಮಗಳು

    ತ್ತೀಚಿನ ದಿನಗಳಲ್ಲಿ ವಾಡಿಕೆಗಿಂತ ಅಧಿಕವಾಗಿಯೇ ಚಳಿ ಬೀಳುತ್ತಿದೆ. ಈ ವೇಳೆ ತ್ವಚ್ಛೆ ಜತೆಗೆ ಕೂದಲಿನ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುವುದು ಅವಶ್ಯವಾಗಿದೆ. ಈ ಸಂದರ್ಭದಲ್ಲಿ ಸ್ಪ್ಲಿಟ್ ಹೇರ್‌ಗಳು (Split Hair)  ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೂದಲು ಸೀಳುವಿಕೆಯಿಂದ ಉದುರುವುದು ಹೆಚ್ಚಾಗುತ್ತಿದೆ. ಇದರಿಂದಾಗಿ ಕೂದಲಿನ ಸೀಳುವಿಕೆಯನ್ನು ತಡೆಗಟ್ಟಲು ಕೆಲವು ಮುಂಜಾಗ್ರತೆಯನ್ನು ತೆಗೆದುಕೊಳ್ಳುವುದು ಅವಶ್ಯವಾಗಿದೆ.

    ಕೂದಲನ್ನು ಆಗಾಗ ಕಟ್ ಮಾಡಿ: ಕೂದಲನ್ನು ಆಗಾಗಾ ಕತ್ತರಿಸುವುದರಿಂದ ಕೂದಲು ಸೀಳುವಿಕೆಯನ್ನು ತಡೆಯಬಹುದು. ಇದು ಸುಲಭದ ಮಾರ್ಗವಾಗಿದೆ. ಅಷ್ಟೇ ಅಲ್ಲದೇ ಉತ್ತಮ ಕೂದಲಿನ (Hair) ಆರೋಗ್ಯವನ್ನು (Health) ಕಾಪಾಡಿಕೊಳ್ಳಲು ಪ್ರತಿ 2-3 ತಿಂಗಳಿಗೊಮ್ಮೆ ನಿಮ್ಮ ಕೂದಲನ್ನು ಕತ್ತರಿಸಬೇಕು.

    haircut salon

    ಬಿಸಿ ನೀರಿನಲ್ಲಿ ಕೂದಲ ಸ್ನಾನ ಬೇಡ: ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಲು ಜನರು ಇಷ್ಟಪಡುತ್ತಾರೆ. ಹೀಗಾಗಿ ಇದು ಕೂದಲು ಸೀಳಲು ಹಾಗೂ ಉದುರಲು ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಆದಷ್ಟು ತಣ್ಣನೆಯ ನೀರು ಅಥವಾ ಉಗುರು ಬೆಚ್ಚಗಿನಿಯ ನೀರಿನನ್ನು ಬಳಸಬೇಕು.

    ಆಯಿಲ್ ಮಸಾಜ್: ಚರ್ಮದ ಆರೈಕೆಯನ್ನು ಯಾವ ರೀತಿಯಾಗಿ ಮಾಡಿಕೊಳ್ಳುತ್ತಿರೋ ಅದೇ ರೀತಿ ಕೂದಲಿನ ಆರೈಕೆಯನ್ನು ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ವಾರಕೊಮ್ಮೆಯಾದರೂ ಕೂದಲಿಗೆ ಆಯಿಲ್ ಹಾಕಿ ಮಸಾಜ್ ಮಾಡುವುದರಿಂದ ಕೂದಲು ಕವಲೊಡೆಯುವುದು ತಪ್ಪುತ್ತದೆ. ಜೊತೆಗೆ ಇದರಿಂದಾಗಿ ಕೂದಲಿನ ಅಂದವು ಹೆಚ್ಚುತ್ತದೆ. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ

    ಕೂದಲನ್ನು ಮೃದುವಾಗಿ ಬಾಚಿ: ಸಾಮಾನ್ಯವಾಗಿ ಕೂದಲನ್ನು ಬಾಚುವಾಗ ಅದರ ಕಡೆ ಹೆಚ್ಚಿನವರು ಗಮನ ನೀಡುವುದೇ ಇಲ್ಲ. ಇದರಿಂದಾಗಿ ಕೂದಲು ಅತಿ ಬೇಗ ಉದುರಲು ಪ್ರಾರಂಭವಾಗುವುದರ ಜೊತೆಗೆ ಕವಲೊಡೆಯುತ್ತದೆ. ಇದರಿಂದಾಗಿ ನೀವು ಕೂದಲನ್ನು ಬಾಚುವ ಮುನ್ನ ಬಾಚಣಿಕೆಯನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಕೂದಲಿನ ಉದುರುವಿಕೆಯು ಕಡಿಮೆ ಆಗುತ್ತದೆ.

    ಒದ್ದೆ ಕೂದಲನ್ನು ಹಾಗೇ ಬಿಡಬೇಡಿ: ತಲೆ ಸ್ನಾನ ಮಾಡಿದ ಬಳಿಕ ಕೂದಲನ್ನು ಹಾಗೇ ಬಾಚಿ ಕಟ್ಟಬೇಡಿ, ಇದರಿಂದ ಕೂದಲಿಗೆ ಹೆಚ್ಚು ಹಾನಿಯಾಗುತ್ತದೆ. ಹೀಗಾಗಿ ಮೃದು ಟವಲ್ ಅಥವಾ ಹೇರ್ ಡ್ರೈಯರ್‍ನ ಬಳಸಿ ಕೂದಲನ್ನು ಒಣಗಿಸಿ. ರಾತ್ರಿ ತಲೆಸ್ನಾನ ಮಾಡುವ ಅಭ್ಯಾಸವಿದ್ದರೆ ಒದ್ದೆ ಕೂದಲಿನಲ್ಲಿ ಮಲಗಬೇಡಿ. ಇದರಿಂದ ಸ್ಪ್ಲಿಟ್ ಕೂದಲು ಹೆಚ್ಚಾಗಬಹುದು. ಇದನ್ನೂ ಓದಿ: ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾದಾಮಿ ಹಲ್ವಾ ಮಾಡಿ ಸಂಕ್ರಾಂತಿಯನ್ನು ಸ್ಪೆಷಲ್ ಆಗಿ ಸಂಭ್ರಮಿಸಿ

    ಬಾದಾಮಿ ಹಲ್ವಾ ಮಾಡಿ ಸಂಕ್ರಾಂತಿಯನ್ನು ಸ್ಪೆಷಲ್ ಆಗಿ ಸಂಭ್ರಮಿಸಿ

    ಸಾಮಾನ್ಯವಾಗಿ ಹಬ್ಬಕ್ಕೆ ಸಿಹಿ ಮಾಡುವುದು ವಾಡಿಕೆ. ಅದರಲ್ಲೂ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ವಿಶೇಷವಾಗಿ ಪಟ್ ಅಂತಾ ಬಾದಾಮಿ ಹಲ್ವಾವನ್ನು ಮಾಡಿ ಮನೆ ಮಂದಿಗೆಲ್ಲಾ ನೀಡಿ ನೀವು ಸವಿಯಿರಿ.

    ಬೇಕಾಗುವ ಸಾಮಗ್ರಿಗಳು:
    * ಬಾದಾಮಿ- 2 ಕಪ್
    * ಸಕ್ಕರೆ- 1 ಕಪ್
    * ತುಪ್ಪ- ಅರ್ಧ ಕಪ್
    * ದ್ರಾಕ್ಷಿ, ಗೋಡಂಬಿ ಇದನ್ನೂ ಓದಿ: ಸಿಹಿಯಾದ ಬಾದಾಮ್ ಪುರಿ ಮಾಡುವ ಸರಳ ವಿಧಾನ

    ಮಾಡುವ ವಿಧಾನ:
    * ಬಿಸಿಯಾದ ನೀರಿನಲ್ಲಿ ಬಾದಾಮಿ ಬೀಜಗಳನ್ನು ಹಾಕಿ, ಸ್ವಲ್ಪ ಸಮಯದ ನಂತರ ಅದನ್ನು ಹೊರತೆಗೆದು ಸಿಪ್ಪೆ ಸುಲಿದಿಟ್ಟುಕೊಳ್ಳಬೇಕು.
    * ಬೀಜಗಳನ್ನು ಚೆನ್ನಾಗಿ ಗ್ರೈಂಡ್ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಮಾಡಿ ಎಳ್ಳಿನ ಲಡ್ಡು

    * ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದು ಕರಗಿದ ಮೇಲೆ ಬಾದಾಮಿ ಪೇಸ್ಟ್ ಅನ್ನು ಸೇರಿಸಿ.
    * ತುಪ್ಪ ಮತ್ತು ಬಾದಾಮಿ ಪೇಸ್ಟ್ ಅನ್ನು ಚೆನ್ನಾಗಿ ಕಲಕುತ್ತಾ, ಹುರಿದಿಟ್ಟುಕೊಳ್ಳಿ.
    * ಬಾದಾಮಿ ಪೇಸ್ಟ್ ಮತ್ತು ತುಪ್ಪಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡುತ್ತಾ ಬಂದರೆ ಬಾದಾಮಿ ಹಲ್ವಾ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು

    ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು

    ತ್ತೀಚೆಗೆ ವಿಪರೀತ ಚಳಿಯಿಂದಾಗಿ ಜನರಲ್ಲಿ ಶೀತ (Common Cold), ಕೆಮ್ಮು, ಉಸಿರಾಟದ ತೊಂದರೆ ಸಾಮಾನ್ಯವಾಗಿಯೇ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಅನೇಕರಿಗೆ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ, ಜೊತೆಗೆ ಶಾಲಾ ವಿದಾರ್ಥಿಗಳಿಗೂ ಪಾಠದ ಕಡೆಯೂ ಗಮನಕೊಡಲಾಗುವುದಂತಹ ಸಮಸ್ಯೆ ಸಾಮಾನ್ಯವಾಗಿದೆ. ಆದರೆ ಈ ಶೀತವನ್ನು ಹೊಗಲಾಡಿಸಲು ಕೆಲವು ಸುಲಭ ಮನೆಮದ್ದುಗಳು (Home Remedies) ಇಲ್ಲಿವೆ.

    ಶುಂಠಿ ಟೀ: ಚಹಾ ಪ್ರಿಯರಿಗಂತೂ ಶುಂಠಿ ಚಹಾ ಎಂದರೆ ಅಚ್ಚುಮೆಚ್ಚು. ಶುಂಠಿ ಟೀ ಕುಡಿಯಲು ಉತ್ತಮ ರುಚಿ ಮಾತ್ರವಲ್ಲದೇ ಸಾಮಾನ್ಯ ಶೀತ ಹಾಗೂ ಕೆಮ್ಮನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ಮೂಗು ಕಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ನೆಗಡಿಗೆ ರಾಮಬಾಣ – ಶುಂಠಿ ಚಹಾ ರೆಸಿಪಿ

    ನಿಂಬೆ, ದಾಲ್ಚಿನ್ನಿ, ಜೇನುತುಪ್ಪದ ಮಿಶ್ರಣ: ನೆಗಡಿ ಹಾಗೂ ಕೆಮ್ಮಿಗೆ ಮತ್ತೊಂದು ಪರಿಣಾಮಕಾರಿ ಮದ್ದು ಎಂದರೆ ನಿಂಬೆ, ದಾಲ್ಚಿನ್ನಿ ಹಾಗೂ ಜೇನು ತುಪ್ಪದ ಮಿಶ್ರಣವಾಗಿದೆ. ಇದನ್ನು ಶೀತವಿದ್ದಾಗ ದಿನಕ್ಕೆ 2 ಬಾರಿ ಸೇವಿಸಬೇಕು. ಇದರಿಂದಾಗಿ ಶೀತ ಹಾಗೂ ಕೆಮ್ಮು ಅತಿ ಬೇಗ ಕಡಿಮೆ ಆಗುತ್ತದೆ.

    ಉಗುರು ಬೆಚ್ಚನೆಯ ನೀರು: ಚಳಿಗಾಲದ ಸಮಯದಲ್ಲಿ ಉಗುರು ಬೆಚ್ಚನೆಯ ನೀರು ಕುಡಿಯುವುದರಿಂದ ದೇಹವೂ ಆರಾಮದಾಯಕವಾಗೆನಿಸುತ್ತದೆ. ಸಾಮಾನ್ಯ ಶೀತ, ಕೆಮ್ಮು, ಹಾಗೂ ಗಂಟಲು ನೋವಿರುವವರು ಆಗಾಗ ಬೆಚ್ಚಗಿನ ನೀರನ್ನು ಕುಡಿಯುತ್ತಿರಬೇಕು. ಇದರಿಂದಾಗಿ ಗಂಟಲಿನ ಊರಿತ ಕಡಿಮೆ ಆಗುತ್ತದೆ.

    ಅರಿಶಿನ ಹಾಗೂ ಹಾಲು: ಅರಿಶಿನವು ರೋಗನಿರೋಧಕ ಗುಣಕ್ಕೆ ಹೆಸರುವಾಸಿ ಆಗಿದೆ. ಇದು ಅನೇಕ ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಬೆಚ್ಚಗಿನ ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದರಿಂದ ಆದಷ್ಟು ಬೇಗ ಶೀತ ಕೆಮ್ಮಿನಿಂದ ಮುಕ್ತಿ ಪಡೆಯಬಹುದು. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ

    ಕರಿಮೆಣಸು: ಕರಿಮೆಣಸನ್ನು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಹಾಗೆಯೇ ಇದು ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ. ಅರ್ಧ ಟೀಸ್ಪೂನ್ ಕರಿಮೆಣಸು ಪುಡಿಯನ್ನು ತುಪ್ಪದೊಂದಿಗೆ ಸೇವಿಸುವುದರಿಂದ ಕೆಮ್ಮು ಸಮಸ್ಯೆಯಿಂದ ಪಾರಾಗಬಹುದು. ಇದನ್ನೂ ಓದಿ: ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

    ಸಂಕ್ರಾಂತಿಗೂ ಇರಲಿದೆ ಮೈ ಕೊರೆವ ಚಳಿ- ಆರೋಗ್ಯದ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ!

    ಬೆಂಗಳೂರು: `ಬೆಳಗ್ಗೆ ಎದ್ದರೆ ಸಾಕು ಹೊರಗೆ ಕಾಲಿಡೋಕೆ ಆಗಲ್ಲ, ಚಳಿಯಪ್ಪಾ ಚಳಿ’ ಇದು ಸದ್ಯ ಬೆಂಗಳೂರಿನ (Bengaluru) ಪರಸ್ಥಿತಿ. ಹಾಗಾಗಿ ಚಳಿ ಇನ್ನೂ ಎಷ್ಟು ದಿನ ಇರುತ್ತೆ? ಇದ್ರಿಂದ ಜನರ ಆರೋಗ್ಯದಲ್ಲಾದ ಏರುಪೇರುಗಳೇನು? ಅನ್ನೋ ಚಿಂತೆ ಜನರಲ್ಲಿ ಮನೆ ಮಾಡಿದ್ದು, ಹವಾಮಾನ ಇಲಾಖೆ (Meteorological Department) ಆರೋಗ್ಯ (Health) ಸಲಹೆ ನೀಡಿದೆ.

    ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಚಳಿಯಿದೆ. ಬೆಂಗಳೂರಿಗೂ ಸಹ ಕೊರವ ಚಳಿಯ ಎಫೆಕ್ಟ್ ತಟ್ಟಿದ್ದು, ಸಿಲಿಕಾನ್ ಸಿಟಿ ಜನ ಥಂಡಾ ಹೊಡೆದಿದ್ದಾರೆ. ಈ ಚಳಿ ಕಾಟ ಈ ತಿಂಗಳ ಕೊನೆಯವರೆಗೂ ಇರಲಿದೆ ಅಂತಾ ಹವಾಮಾನ ಇಲಾಖೆ ಹೇಳಿದೆ. ಆದ್ರೆ ಸಂಕ್ರಾಂತಿವರೆಗೆ (Sankranti Festival) ಹೆಚ್ಚು ಶೀತ, ಚಳಿಗಾಳಿ ಇರಲಿದೆ. ಮುಂದಿನ ವಾರದಲ್ಲಿ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಹೇಳಿದ್ದಾರೆ. ಇದನ್ನೂ ಓದಿ: ಪಿಲ್ಲರ್ ದುರಂತ ಬಳಿಕ ಮತ್ತೊಂದು ಎಡವಟ್ಟು – ಬ್ರಿಗೇಡ್ ರಸ್ತೆಯಲ್ಲಿ 30 ಅಡಿ ಆಳಕ್ಕೆ ಕುಸಿದ ರಸ್ತೆ

    ಕಳೆದ ಕೆಲ ದಿನಗಳಿಂದ ಹೆಚ್ಚಾಗಿದ್ದು, ಬಹುತೇಕ ಕಡೆ ಕನಿಷ್ಠ ಉಷ್ಣಾಂಶ ಕೂಡ ಗಮನಾರ್ಹವಾಗಿ ಇಳಿಕೆ ಕಂಡಿದೆ. ನಿನ್ನೆ ಅತೀ ಕಡಿಮೆ ಕನಿಷ್ಠ ಉಷ್ಣಾಂಶ ಬಾಗಲಕೋಟೆಯಲ್ಲಿ 8.4 ದಾಖಲಾಗಿದೆ. ಇಂದು ಬೀದರ್, ವಿಜಯಪುರ, ಬಾಗಲಕೋಟೆ, ಬಳ್ಳಾರಿ ಹಾಗೂ ಮಂಡ್ಯ (Mandya) ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ರುಚಿಯಾದ ಅನಾನಸ್ ಕೇಸರಿಬಾತ್ ಮಾಡಿ ಮಕ್ಕಳಿಗೆ ನೀಡಿ

    ಇನ್ನೂ ಶೀತ ಅಲೆಯ ಬಗ್ಗೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಈ ಚಳಿಯಿಂದ ಮೂಗಿನಿಂದ ರಕ್ತ ಬರಬಹುದು, ಚರ್ಮದಲ್ಲಿ ಡ್ರೈನೆಸ್‌ (ಚರ್ಮ ಒಣಗುವಿಕೆ) ಉಂಟಾಗಬಹುದು, ಚರ್ಮ ತುರಿಕೆಯ ಸಾಧ್ಯತೆ ಹಾಗೂ ವೃದ್ಧರು ಮಕ್ಕಳಿಗೆ ನಡುಕ ಉಂಟಾಗಬಹುದು ಎಚ್ಚರಿಕೆ ನೀಡಿದ್ದಾರೆ.

    ಆದ್ದರಿಂದ ತಲೆ, ಕೈ, ಕಾಲಿಗೆ ಸಾಕ್ಸ್ ಹಾಕಬೇಕು, ಕಿವಿಗೆ ಹತ್ತಿ ಇಟ್ಟುಕೊಳ್ಳಬೇಕು, ಸೂರ್ಯನ ಬೆಳಕಿಗೆ ಮೈ ಒಡ್ಡಿ ನಿಲ್ಲಬೇಕು ಎಂದು ಹವಾಮಾನ ತಜ್ಞ ಪ್ರಸಾದ್ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ

    ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ

    ಬೆಟ್ಟದ ನೆಲ್ಲಿಕಾಯಿ (Amla) ತಿನ್ನಲು ಹುಳಿಯಾಗಿದ್ದರೂ, ಇದು ದೇಹದ ಆರೋಗ್ಯಕ್ಕೆ ಬಹುಮುಖ್ಯವಾಗಿದೆ. ಇದರಲ್ಲಿ ಖನಿಜಗಳು ಮತ್ತು ವಿಟಮಿನ್ ಹೇರಳವಾಗಿದ್ದು, ವಿವಿಧ ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ವಿಶೇಷವಾಗಿ ಚಳಿಗಾಲದ (Winters) ಸಮಯದಲ್ಲಿ ನಮ್ಮನ್ನು ಆರೋಗ್ಯದಿಂದಿಡಲು (Health) ಸಹಾಯ ಮಾಡುತ್ತದೆ.

    ತೂಕ ಇಳಿಕೆ: ಅಧಿಕ ತೂಕದಿಂದಾಗಿ ಬಳಲುತ್ತಿರುವವರು ಚಳಿಗಾಲದ ಸಮಯದಲ್ಲಿ ಸಿಗುವ ಸಮೃದ್ಧ ಹಾಗೂ ರುಚಿಕರವಾದ ನೆಲ್ಲಿಕಾಯಿಯನ್ನು ತಿನ್ನುಬೇಕು. ಇದು ದೇಹಕ್ಕೂ ಒಳ್ಳೆಯದು ಜೊತೆಗೆ ತೂಕವನ್ನು ಕಡಿಮೆ ಮಾಡುತ್ತದೆ.

    ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಕೊರೊನಾದಂತಹ ಅನೇಕ ಸೋಂಕುಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಇಮ್ಯುನಿಟಿ ಪವರ್ ಬೇಕಾಗುತ್ತದೆ. ಇದಕ್ಕೆ ಬೆಟ್ಟದ ನೆಲ್ಲಿಕಾಯಿಯನ್ನು ಸೇವಿಸಿ. ಇದರಲ್ಲಿ ರೋಗನಿರೋಧಕ ಅಂಶಗಳು ಹಾಗೂ ವಿಟಮಿನ್ ಸಿ ಹೇರಳವಾಗಿದೆ. ಇದರಿಂದಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    ಹೃದಯದ ಆರೋಗ್ಯ: ನೆಲ್ಲಿಕಾಯಿಯಲ್ಲಿರುವ ಅಮೈನೋ ಆಮ್ಲಗಳು ಮತ್ತು ಆ್ಯಂಟಿ – ಆಕ್ಸಿಡೆಂಟ್ ಅಂಶಗಳು ಹೃದಯದ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುತ್ತದೆ. ಇದರಿಂದಾಗಿ ನೆಲ್ಲಿಕಾಯಿ ತಿನ್ನುವುದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

    ಜೀರ್ಣಕ್ರಿಯೆಗೆ ಸಹಾಯ: ಇತ್ತೀಚಿನ ದಿನಗಳಲ್ಲಿ ಜೀರ್ಣಕ್ರಿಯೆ ಸಮಸ್ಯೆಯು ಅನೇಕರಿಗೆ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಕೆಲವರಲ್ಲಿ ಮಲಬದ್ಧತೆಯ ಸಮಸ್ಯೆಯು ಕಾಡುತ್ತದೆ, ಆದರೆ ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಈ ಅಜೀರ್ಣ ಸಮಸ್ಯೆಯಿಂದ ಸುಲಭವಾಗಿ ಪಾರಾಗಬಹುದು.

    ಮಧುಮೇಹವನ್ನು ನಿಯಂತ್ರಣ: ದೇಹದ ರಕ್ತ ಸಂಚಾರದಲ್ಲಿ ಸಕ್ಕರೆ ಅಂಶದ ಪ್ರಮಾಣ ಹೆಚ್ಚಾದರೆ ಅದರಿಂದ ನಿಮ್ಮ ಮಧುಮೇಹದ ಮಟ್ಟ ನಿಯಂತ್ರಣ ತಪ್ಪಿ ಏರಿಕೆಯಾಗುತ್ತದೆ. ಇದರ ಜೊತೆಗೆ ಇನ್ನು ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ನೆಲ್ಲಿಕಾಯಿಯಲ್ಲಿ ಕ್ರೋಮಿಯಂ ಆಮ್ಲ ಹೆಚ್ಚಾಗಿರುವುದೆ. ಇದರಿಂದ ಬೆಟ್ಟದ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಮಧಮೇಹವನ್ನು ನಿಯಂತ್ರಿಸಬಹುದು. ಇದನ್ನೂ ಓದಿ: ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ

    ಕೂದಲು ಉದುರುವುದಕ್ಕೆ ಪರಿಹಾರ: ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಈ ಕೂದಲು ಉದುರಲು ಟೆನ್ಶನ್, ನೀರು, ಆಹಾರ ಹೀಗೆ ಹಲವಾರು ಸಮಸ್ಯೆಗಳಿವೆ, ಆದರೆ ನೆಲ್ಲಿಕಾಯಿಯಲ್ಲಿರುವ ಆಮ್ಲ ಹಾಗೂ ಪ್ರೋಟಿನ್ ಅಂಶಗಳಿಂದ ಕೂದಲು ಉದುರುವುದು ಕಡಿಮೆ ಆಗುತ್ತದೆ. ಇದನ್ನೂ ಓದಿ: ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು

    ಒಣ ಕೆಮ್ಮಿಗೆ ಮನೆಯಲ್ಲಿಯೇ ಮಾಡಿ ಸಿಂಪಲ್ ಮದ್ದು

    ದಿನದಿಂದ ದಿನಕ್ಕೆ ಬದಲಾಗುತ್ತಿರುವ ವಾತಾವರಣದಿಂದಾಗಿ ಆರೋಗ್ಯವು (Health) ಹದಗೆಡುತ್ತಿದೆ. ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆ ಅನೇಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ನೆಗಡಿ, ಜ್ವರ ಬೇಗ ಕಡಿಮೆ ಆದರೂ ಒಣ ಕೆಮ್ಮು (Dry Cough) ಹಾಗೇ ಇರುತ್ತದೆ. ಈ ಒಣ ಕೆಮ್ಮಿನ ಕಿರಿಕಿರಿಯಿಂದ ಮುಕ್ತಿ ಪಡೆಯಲು ಕೆಲವು ಔಷಧಿಗಳನ್ನು ಸಿಂಪಲ್ ಆಗಿ ಮನೆಯಲ್ಲೇ ತಯಾರಿಸಿ.

    ತುಳಸಿ: ಹಲವು ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ ಹಲವು ರೋಗಗಳಿಗೆ ಉತ್ತಮ ಮದ್ದಾಗಿದೆ. ಕೆಮ್ಮನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ. ನಿಯಮಿತವಾಗಿ ತುಳಸಿ ಎಲೆಗಳನ್ನು ಸೇವಿಸಿ ಚೆನ್ನಾಗಿ ಅಗೆಯಬೇಕು. ಇದಕ್ಕೆ ಚಿಟಿಕೆ ಉಪ್ಪು ಅಥವಾ ಕಾಳುಮೆಣಸಿನ ಪುಡಿಯೊಂದಿಗೆ ಸೇವಿಸಿದರೆ ಕೆಮ್ಮು ಬೇಗ ಕಡಿಮೆಯಾಗುತ್ತದೆ.

    ಬಿಸಿ ನೀರು, ಉಪ್ಪು: ಒಣ ಕೆಮ್ಮಿನಿಂದ ಉಂಟಾಗುವ ಅಸ್ವಸ್ಥತೆ ಮತ್ತು ಕಿರಿಕಿರಿ ಕಡಿಮೆ ಮಾಡಲು ಉಪ್ಪು ನೀರಿನಿಂದ ಗಾರ್ಗ್ಲಿಂಗ್ ಮಾಡಿ. ಇದರಿಂದಾಗಿ ಬಾಯಿ ಮತ್ತು ಗಂಟಲಿನ ಬ್ಯಾಕ್ಟೀರಿಯಾ ತೊಲಗಲು ಸಹಾಯ ಮಾಡುತ್ತದೆ. ಒಂದು ಟೀಸ್ಪೂನ್ ಟೇಬಲ್ ಉಪ್ಪನ್ನು ದೊಡ್ಡ ಗಾಜಿನ ಬೆಚ್ಚಗಿನ ನೀರಿನಲ್ಲಿ ಕರಗಿಸಿ, ಗಾರ್ಗ್ಲ್‌ ಮಾಡಿ. ಇದರಿಂದ ಕೆಮ್ಮು ಕಡಿಮೆ ಆಗುತ್ತದೆ. ಇದನ್ನೂ ಓದಿ: ವಯಸ್ಸಾದ ಲಕ್ಷಣ ಕಾಣಬಾರದೇ, ಹಾಗಾದರೆ ತುಪ್ಪ ಸೇವಿಸಿ

    ಜೇನುತುಪ್ಪ, ಶುಂಠಿ: ಕೆಮ್ಮಿಗೆ ಜೇನುತುಪ್ಪ ಮತ್ತು ಶುಂಠಿ ಎರಡೂ ಅತ್ಯುತ್ತಮ ಔಷಧವೆಂದು ಸಾಬೀತಾಗಿದೆ. ಅಗತ್ಯ ಪ್ರಮಾಣದ ಶುಂಠಿ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸಿದರೇ, ಕಡಿಮೆ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇದರಿಂದ ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಒಂದು ಚಮಚ ಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ ಎರಡು ಬಾರಿ ಈ ರಸ ಕುಡಿಯುವುದರಿಂದ ಬಹುಬೇಗ ಕೆಮ್ಮು ಕಡಿಮೆ ಮಾಡುತ್ತದೆ.

    ತುಪ್ಪ ಮತ್ತು ಕರಿ ಮೆಣಸು: ತುಪ್ಪವು ಗಂಟಲನ್ನು ಮೃದುವಾಗಿಡುವ ಕೆಲಸ ಮಾಡುತ್ತದೆ. ಜೊತೆಗೆ ಕೆಮ್ಮು ಹೆಚ್ಚು ಕಾಣಿಸಿಕೊಂಡರೆ ಕರಿ ಮೆಣಸು ಉತ್ತಮ ಔಷಧವಾಗಿದೆ. ಕರಿಮೆಣಸಿನ ಪುಡಿಯ ಜೊತೆ ತುಪ್ಪ ಬೆರೆಸಿ ತಿಂದರೆ ಒಣ ಕೆಮ್ಮಿನಿಂದ ಮುಕ್ತಿ ಪಡೆಯಬಹುದು. ನಿಯಮಿತವಾಗಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.

    ಈರುಳ್ಳಿ ರಸ: ಈರುಳ್ಳಿ ಕೇವಲ ಆಹಾರಕ್ಕೆ ಪರಿಮಳವೊಂದೇ ಅಲ್ಲದೇ, ಔಷಧಿಗೂ ಬಳಸುತ್ತಾರೆ. ಈರುಳ್ಳಿ ಸಾರವು ಉರಿಯೂತದ ಪರಿಣಾಮವನ್ನು ಹೊಂದಿದೆ. ಇದರಿಂದಾಗಿ ಶ್ವಾಸನಾಳವನ್ನು ಸಡಿಲಗೊಳಿಸುತ್ತದೆ. ಇದು ಕೆಮ್ಮು ಸೆಳೆತವನ್ನು ಕಡಿಮೆ ಮಾಡುತ್ತದೆ. ಈರುಳ್ಳಿ ರಸಕ್ಕೆ ಜೇನುತುಪ್ಪ ಹಾಕಿ, ಮಿಶ್ರಣ ಮಾಡಬೇಕು. ಈ ಒಂದು ಚಮಚ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ತೆಗೆದುಕೊಳ್ಳಿ.

    ಏಲಕ್ಕಿ: ಒಣ ಕೆಮ್ಮಿಗೆ ಏಲಕ್ಕಿ ಪರಿಣಾಮಕಾರಿ ಆಯುರ್ವೇದ ಪರಿಹಾರವಾಗಿದೆ. ಇದು ಗಂಟಲನ್ನು ಶಮನಗೊಳಿಸಲು ಮತ್ತು ಉಸಿರಾಟದ ಪ್ರದೇಶವನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಏಲಕ್ಕಿ ಶ್ವಾಸನಾಳದ ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದನ್ನೂ ಓದಿ: ಸೆಣಬಿನ ಬೀಜದ ಎಣ್ಣೆ ಬಗ್ಗೆ ತಿಳಿದಿದ್ದೀರಾ? ಇದರಲ್ಲಿದೆ ತ್ವಚೆ ಸೌಂದರ್ಯದ ಗುಟ್ಟು

    Live Tv
    [brid partner=56869869 player=32851 video=960834 autoplay=true]