Tag: health

  • ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಆರೋಗ್ಯ ಸ್ಥಿತಿ ಗಂಭೀರ

    ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಆರೋಗ್ಯ ಸ್ಥಿತಿ ಗಂಭೀರ

    ಭಾರತ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಶ್ಯಾಮ್ ಬೆನಗಲ್ (Shyam Benegal) ಆರೋಗ್ಯ (Health) ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಎರಡೂ ಕಿಡ್ನಿ ಫೇಲ್ (Kidney) ಆಗಿರುವ ಹಿನ್ನೆಲೆಯಲ್ಲಿ ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯಲ್ಲೇ ಅವರು ಡಯಾಲಿಸಿಸ್ ಗೆ (Dialysis) ಒಳಗಾಗಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಅವರ ಕಛೇರಿ ಸಿಬ್ಬಂದಿ ತಿಳಿಸಿದ್ದಾರೆ ಎಂದು ವರದಿ ಮಾಡಿದೆ.

    ಭಾರತ ಸಿನಿಮಾ ರಂಗ ಕಂಡ ಅತ್ಯಂತ ಪ್ರತಿಭಾವಂತ ಮತ್ತು ವಿಶೇಷ ಸಿನಿಮಾಗಳನ್ನು ನೀಡಿದ ನಿರ್ದೇಶಕರು. ಎಂಟು ರಾಷ್ಟ್ರ ಪ್ರಶಸ್ತಿಗಳನ್ನು ಇವರ ಚಿತ್ರಗಳು ಪಡೆದುಕೊಂಡಿವೆ. ಅಲ್ಲದೇ, ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣವನ್ನೂ ಪಡೆದಿದ್ದಾರೆ. ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಭಾರತ ಸರಕಾರವು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 2005ರಲ್ಲೇ ನೀಡಿ ಗೌರವಿಸಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಶಬಾನಾ ಅಜ್ಮಿ ಮತ್ತು ಅನಂತ್ ನಾಗ್ ಕಾಂಬಿನೇಷನ್ ನ ಅಂಕುರ್ ಇವರ ಮೊದಲ ಸಿನಿಮಾ. ಆನಂತರ ಮಥಣ್, ಭೂಮಿಕಾ: ದಿ ರೋಲ್, ವೆಲ್ ಡನ್ ಅಬ್ಬಾ, ಆರೋಹನ್, ನೇತಾಜಿ ಸುಭಾಸ್ ಚಂದ್ರ ಬೋಸ್ ಸೇರಿದಂತೆ ಸಾಕಷ್ಟು ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಅನೇಕ ಕಲಾವಿದರು ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಸ್ಟಾರ್ ಗಳನ್ನು ತಯಾರಿಸಿದ ಅಪರೂಪದ ನಿರ್ದೇಶಕರು ಕೂಡ ಇವರಾಗಿದ್ದಾರೆ.

  • ದೇಶದಲ್ಲಿ ಹೆಚ್3ಎನ್2 ವೈರಸ್ ಹಾವಳಿ – ರಾಜ್ಯಗಳಿಗೆ ಕೇಂದ್ರದಿಂದ ಮುಂಜಾಗ್ರತೆ ವಹಿಸುವಂತೆ ಸೂಚನೆ

    ದೇಶದಲ್ಲಿ ಹೆಚ್3ಎನ್2 ವೈರಸ್ ಹಾವಳಿ – ರಾಜ್ಯಗಳಿಗೆ ಕೇಂದ್ರದಿಂದ ಮುಂಜಾಗ್ರತೆ ವಹಿಸುವಂತೆ ಸೂಚನೆ

    ಬೆಂಗಳೂರು: ದೇಶದಲ್ಲಿ ಹೆಚ್3ಎನ್2 ವೈರಸ್ (H3N2 virus) ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯಗಳಿಗೆ ಕೇಂದ್ರದಿಂದ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.

    ಕೋವಿಡ್ (Covid) ಬಳಿಕ ದೇಶದಲ್ಲಿ ಮತ್ತೊಂದು ವೈರಸ್ ಕಾಟ ಆರಂಭವಾಗಿದೆ. ಈ ವಿಚಾರದ ಬಗ್ಗೆ ತಜ್ಞರ ಜೊತೆಗೆ ಮಾರ್ಚ್ 6ರಂದು ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಲಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಬ್ರಾಂಡೆಡ್ ಮದ್ಯ ವಶ – ಆರೋಪಿ ಬಂಧನ

    ಕೋವಿಡ್ ಎನ್ನುವ ಮಹಾಮಾರಿ ರಾಜ್ಯ ಬಿಟ್ಟು ಬಹುತೇಕ ತೊಲಗಿದೆ. ಆದರೆ ಈಗ ಹೆಚ್3ಎನ್2 ರೂಪದಲ್ಲಿ ಮತ್ತೊಂದು ವೈರಸ್ ದೇಶದ ಜನರಿಗೆ ಕಂಟಕವಾಗಿ ಕಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆಗೆ ಕೇಂದ್ರದಿಂದ ಸಂದೇಶ ರವಾನೆಯಾಗಿದೆ. ಇದನ್ನೂ ಓದಿ: ವಿರಾಟ್ ಶತಕಗಳಿಂದಲೇ ಭಾರತ ಗೆಲ್ಲುತ್ತಿತ್ತು – ಕೊಹ್ಲಿಯನ್ನು ಹೊಗಳಿ ಸಚಿನ್ ವಿರುದ್ಧ ಅಖ್ತರ್ ಟೀಕೆ

    ಆರೋಗ್ಯ ಇಲಾಖೆಯಿಂದ ಹೆಚ್3ಎನ್2 ವೈರಸ್ ಗಂಭೀರತೆ ಮತ್ತು ಪರಿಣಾಮದ ಬಗ್ಗೆ ಸೋಮವಾರ ಮಹತ್ವದ ಸಭೆ ನಡೆಯಲಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್ (Dr. Sudhakar K) ನೇತೃತ್ವದಲ್ಲಿ ತಜ್ಞರ ಜೊತೆಗೆ ಸಭೆ ನಡೆಯಲಿದೆ. ವೈರಸ್ ತಡೆಗೆ ಹಾಗೂ ಚಿಕಿತ್ಸೆ ವಿಧಾನದ ಬಗ್ಗೆ ಸಚಿವರು ಮಾಹಿತಿ ನೀಡಲಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಈ ಕುರಿತು ಗಮನ ಕೊಡುವಂತೆ ತಿಳಿಸಿರುವುದರಿಂದ ಹೆಚ್ಚಿನ ನಿಗಾವಹಿಸುವುದು ಅತೀ ಅಗತ್ಯ ಎಂದು ಡಾ. ಸುಧಾಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ – 13 ವರ್ಷದ ಬಾಲಕ ಸಾವು

    ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಪ್ರಕಾರ ದೀರ್ಘ ಕಾಲದ ಕೆಮ್ಮು ಈ ವೈರಸ್‌ನ ಪ್ರಮುಖ ಗುಣಲಕ್ಷಣ ಎಂದು ಪ್ರಾರಂಭಿಕ ಪ್ರಕರಣದಲ್ಲಿ ತಿಳಿದು ಬಂದಿದೆ. ಇದನ್ನು ಹೊರತುಪಡಿಸಿ ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯು ಸೆಳೆತ ಸಮಸ್ಯೆ ಕೂಡ ಕಂಡು ಬರಬಹುದು. ಇದನ್ನೂ ಓದಿ: ಮಹೇಶ್ ಬಾಬು ಸಿನಿಮಾಗೆ ಖ್ಯಾತ ನಟಿ ರೇಖಾ ಎಂಟ್ರಿ

    ಸುರಕ್ಷತೆ ಹೇಗಿರಬೇಕು?
    ಸೋಪು, ನೀರು ಬಳಸಿ ಆಗಾಗ ಕೈಗಳನ್ನ ತೊಳೆಯಬೇಕು. ಮಾಸ್ಕ್ ಧರಿಸಿ. ಜನ ಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಓಡಾಟ ಬೇಡ. ಪದೇ ಪದೇ ಮೂಗು, ಬಾಯಿ ಮುಟ್ಟಬೇಡಿ. ನೀರು ಜಾಸ್ತಿ ಸೇವಿಸಿ. ಜ್ವರ, ಮೈಕೈ ನೋವು ಇದ್ದರೆ ನಿರ್ಲಕ್ಷ್ಯ ಮಾಡದೇ ವೈದ್ಯರ ತಪಾಸಣೆ ಮಾಡಿಸಿ. ಇದನ್ನೂ ಓದಿ: `ಶಾಕುಂತಲಂ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ

    ಹೆಚ್3ಎನ್2 ಮಾರಣಾಂತಿಕ ರೋಗವಲ್ಲ. ಆದರೂ ರೋಗದ ಲಕ್ಷಣಗಳು ದೀರ್ಘಕಾಲದವರೆಗೆ ಸೋಂಕಿತರನ್ನು ಕಾಡಲಿದೆ. ಹಾಗಾಗಿ ಈ ಸೋಂಕು ಬೇರೆ ರೀತಿ ಪರಿಣಾಮ ಪಡೆದುಕೊಂಡು ಪ್ರತಿಕೂಲ ಪರಿಣಾಮ ಬೀರುವ ಮುನ್ನ ಎಚ್ಚೆತ್ತುಕೊಳ್ಳುವುದು ಅತೀ ಅವಶ್ಯ. ಜೊತೆಗೆ ಆರೋಗ್ಯ ಇಲಾಖೆಯಿಂದ ಗೈಡ್‌ಲೈನ್ಸ್ (Guidelines) ಕೂಡ ಬಿಡುಗಡೆ ಆಗಲಿದ್ದು ಅದನ್ನು ಫಾಲೋ ಮಾಡಲೇಬೇಕಾಗಿರುವುದು ಅನಿವಾರ್ಯವಾಗಿದೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಪ್ರಪೋಸ್ ಮಾಡಿದ ಯುವ ಕ್ರಿಕೆಟಿಗ

  • ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ- ಚಿಕಿತ್ಸೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು?

    ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ- ಚಿಕಿತ್ಸೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು?

    ಬೆಂಗಳೂರು: ಕೊರೋನಾ (Corona) ಬಳಿಕ ಪ್ರಸ್ತುತ ದೇಶದಲ್ಲಿ ಫ್ಲೂ (Flu) ಭೀತಿ ಎದುರಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ದೇಶದಾದ್ಯಂತ ಹೆಚ್3ಎನ್2 (H3N2) ರೋಗವು ವ್ಯಾಪಕವಾಗಿ ಹಬ್ಬುತ್ತಿದ್ದು ಕಳೆದ ಒಂದು ವಾರದಿಂದ ಶೇ. 10-15 ರಷ್ಟು ರೋಗಿಗಳ ಸಂಖ್ಯೆ ಏರಿಕೆಯಾಗಿದೆ. ಇದರ ಚಿಕಿತ್ಸೆ ಹೇಗೆ? ಏನು ಮಾಡಬೇಕು ? ಏನು ಮಾಡಬಾರದು? ಇದರ ಮುನ್ನೆಚ್ಚರಿಕಾ ಕ್ರಮಗಳೇನು ಎಂಬುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ.

     

    ಚಿಕಿತ್ಸೆ ಹೇಗೆ?
    ಹೆಚ್3ಎನ್2 ಎಂಬುವುದು ಇನ್‌ಫ್ಲುಯೆಂಜಾ (Influenza) ಎ ವೈರಸ್‌ನ ಎರಡನೇ ಜೀನ್‌ಗಳಿಂದ ಸೃಷ್ಟಿಯಾದ ತಳಿಯಾಗಿದೆ. ಈ ಉಪತಳಿಯು ಮೊದಲಿಗೆ ಅಮೇರಿಕಾದಲ್ಲಿ 1968ರಲ್ಲಿ ವರದಿಯಾಗಿತ್ತು. ಪ್ರಸ್ತುತ ಭಾರತದಲ್ಲಿ ಹೆಚ್3ಎನ್2 ರೋಗ ಕಾಣಿಸಿಕೊಂಡಿದ್ದು ದೊಡ್ಡವರು ಮಾತ್ರವಲ್ಲದೆ 15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲೂ ಈ ರೋಗ ಪತ್ತೆಯಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಮೂರು ತಿಂಗಳಿನಿಂದ ಜ್ವರ, ವಿಪರೀತ ಕೆಮ್ಮು, ವಾಕರಿಕೆ ಹಾಗೂ ಶೀತ ಹೆಚ್3ಎನ್2 ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ರೋಗದ ಲಕ್ಷಣಗಳು ಕಂಡುಬಂದ ವ್ಯಕ್ತಿಗೆ ರೋಗಲಕ್ಷಣದ ಚಿಕಿತ್ಸೆಯನ್ನು ಮಾತ್ರ ನೀಡಬೇಕು. ಈ ರೋಗಕ್ಕೆ ಯಾವುದೇ ಆ್ಯಂಟಿ ಬಯೋಟಿಕ್‌ನ ಅಗತ್ಯವಿಲ್ಲ. ಇದನ್ನೂ ಓದಿ: ನೀವು ವೈನ್‌ ಕುಡಿಯುತ್ತೀರಾ? ವೈನ್‌ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ

    ಏನು ಮಾಡಬಾರದು?
    ಹೆಚ್3ಎನ್2 ರೋಗಕ್ಕೆ ತುತ್ತಾಗಿರುವ ವ್ಯಕ್ತಿಯಿಂದ ಯಾವುದೇ ಕಾರಣಕ್ಕೂ ಶೇಕ್ ಹ್ಯಾಂಡ್ ಮಾಡಿಸಿಕೊಳ್ಳಬಾರದು. ಇಂತಹ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದರಿಂದ ಇತರರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಲಾಗಿದೆ. ಈ ರೋಗದ ಲಕ್ಷಣಗಳಿರುವವರು ವೈದ್ಯರ ಸಲಹೆಯಿಲ್ಲದೆ ಆ್ಯಂಟಿಬಯೋಟಿಕ್‌ (Antibiotic) ಮಾತ್ರೆಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಇಂತಹ ವ್ಯಕ್ತಿಗಳ ಜೊತೆ ಕುಳಿತು ಊಟ ಮಾಡಬಾರದು. ಇದನ್ನೂ ಓದಿ: ಚಳಿಗಾಲದಲ್ಲಿ ಕೀಲುನೋವಿನಿಂದ ಮುಕ್ತಿ ಪಡೆಯಲು ಈ ಆಹಾರ ಸೇವಿಸಿ

     

    ಏನು ಮಾಡಬೇಕು?
    ಹೆಚ್3ಎನ್2 ಸೋಂಕಿನ ತಡೆಗಟ್ಟುವಿಕೆಗಾಗಿ ಜನ ಸಮೂಹದಿಂದ ಕಿಕ್ಕಿರಿದ ಸ್ಥಳಗಳಿಗೆ ಅನಗತ್ಯವಾಗಿ ಹೋಗಬಾರದು. ಮಾಸ್ಕ್ ಕಡ್ಡಾಯ ಎಂಬ ನಿಯಮವನ್ನು ತಪ್ಪದೇ ಪಾಲಿಸುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ಈ ಸೋಂಕಿಗೆ ತ್ತುತಾದವರು ಹೆಚ್ಚು ಹೆಚ್ಚು ದ್ರವ ಆಹಾರಗಳನ್ನು ಸೇವನೆ ಮಾಡಬೇಕು. ಪದೇ ಪದೇ ಕಣ್ಣುಗಳನ್ನು ಮುಟ್ಟುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಕಣ್ಣುಗಳನ್ನು ಮುಟ್ಟಬಾರದು. ಆಗಾಗ ಕೈಗಳನ್ನು ಸೋಪು ನೀರಿನಿಂದ ತೊಳಿಯಬೇಕು. ಜ್ವರ ಮತ್ತು ಮೈಕೈ ನೋವುಗಳು ಕಾಣಿಸಿಕೊಂಡಲ್ಲಿ ಪ್ಯಾರಸಿಟಮಲ್ (Paracetamol) ಮಾತ್ರೆಗಳನ್ನು ತೆಗೆದುಕೊಳ್ಳುವುದು ಹೆಚ್ಚು ಸೂಕ್ತ. ಇದನ್ನೂ ಓದಿ: ಸಾಮಾನ್ಯ ನೆಗಡಿಗೆ ಇಲ್ಲಿದೆ ಸುಲಭ ಪರಿಹಾರಗಳು

  • ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..

    ಲೈಂಗಿಕ ಆಸಕ್ತಿ ಹೆಚ್ಚಾಗ್ತಿದೆಯೇ? – ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಷಯಗಳಿವು..

    ವೈಯಕ್ತಿಕ ಜೀವನಕ್ಕೆ ಲೈಂಗಿಕತೆ ಎಂಬುದು ತುಂಬಾನೇ ಮುಖ್ಯ. ಇದು ಸಂಬಂಧವನ್ನು ಗಟ್ಟಿಗೊಳಿಸುವ ಒಂದು ಭಾಗವೂ ಆಗಿದೆ. ಜೊತೆಗೆ ಆರೋಗ್ಯ (Health) ಸ್ವಾಸ್ಥ್ಯವನ್ನೂ ಕಾಪಾಡುತ್ತದೆ. ಆದ್ರೆ ಜೀವನಕ್ಕೆ ಸೆಕ್ಸ್ ಎಷ್ಟು ಮುಖ್ಯ ಎಂದು ಕೇಳಿದಾಗ ಒಬ್ಬೊಬ್ಬರು ಒಂದೊಂದು ಉತ್ತರ ನೀಡುತ್ತಾರೆ. ಹಾಗೆಯೇ ಹದಿಹರೆಯದವರು, ಯುವಕರು ತಮ್ಮ ದೇಹವು ಪ್ರೌಢಾವಸ್ಥೆಗೆ ಬರುವಾಗ ಹಾರ್ಮೋನ್‌ಗಳ ಪ್ರಭಾವದಿಂದ ಸಾಕಷ್ಟು ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗೆ ಒಳಗಾಗುತ್ತದೆ. ಇದರಿಂದ ನಿಮ್ಮ ಸಂವಹನ ಕ್ರಿಯೆಯೂ ಬದಲಾಗಬಹುದು.

    ಈ ಸಂದರ್ಭದಲ್ಲಿ ನಿಮ್ಮ ಲೈಂಗಿಕ ಆರೋಗ್ಯದ (Sexual Health) ಬಗ್ಗೆ ತಿಳಿವಳಿಕೆ ತುಂಬಾನೆ ಮುಖ್ಯವಾಗುತ್ತದೆ. ಕೆಲವು ತಜ್ಞ ವೈದ್ಯರು ನಿಮ್ಮ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಲೈಂಗಿಕತೆಯು ಹೇಗೆ ಪರಿಣಾಮ ಬೀರುತ್ತದೆ? ಅನಗತ್ಯ ಗರ್ಭಧಾರಣೆಗಳಿಂದ, ಅನಾರೋಗ್ಯಕರ ಸಂಬಂಧಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕು? ಅದಕ್ಕಾಗಿ ಉತ್ತಮ ಲೈಂಗಿಕ ಆರೋಗ್ಯ ಅಭ್ಯಾಸಗಳು ಹೇಗಿರಬೇಕು? ಎನ್ನುವುದರ ಬಗ್ಗೆ ಸಲಹೆ ನೀಡಿದ್ದಾರೆ.ಇದನ್ನೂ ಓದಿ: Exclusive Details- ಯುವರಾಜ್ ಸಿನಿಮಾಗೆ ಮೂರು ಟೈಟಲ್: ‘ಯುವ’ ಫಿಕ್ಸ್ ಆಗಿದ್ದು ಯಾಕೆ?

    ನೀವು ಸಂಭೋಗಿಸಲು ಬಯಸಿದ್ರೆ ಅದು ನಿಮ್ಮ ಆಯ್ಕೆಯಾಗಿರುತ್ತದೆ. ಆದರೆ ನೀವು ಲೈಂಗಿಕ ಸಂಬಂಧ ಹೊಂದಲು ನಿರ್ಧರಿಸಿದರೆ ಸುರಕ್ಷಿತ ಅಭ್ಯಾಸಗಳನ್ನು ತಪ್ಪದೇ ಅನುಸರಿಸಬೇಕಾಗುತ್ತದೆ. ಮುಖ್ಯವಾಗಿ…

    ಯಾವುದೇ ಲೈಂಗಿಕ ಸಂಬಂಧಕ್ಕೆ ಪ್ರವೇಶಿಸುವ ಮೊದಲು ದೀರ್ಘವಾಗಿ ಯೋಚಿಸಿ. ಏಕೆಂದರೆ ಲೈಂಗಿಕ ಕ್ರಿಯೆಗೆ ಒಮ್ಮೆ ಒಡ್ಡಿಕೊಂಡರೆ ಪದೇ ಪದೇ ಪ್ರಚೋದನೆಗೆ ಒಳಗಾಗಬಹುದು. ಇದನ್ನೂ ಓದಿ: Breaking- ‘ಕಬ್ಜ’ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ಬಿಗ್ ಬಿ ಅಮಿತಾಬ್ ಬಚ್ಚನ್

    • ಲೈಂಗಿಕತೆಯಿಂದ ಹರಡುವ ರೋಗಗಳ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಬೇಕು.
    • ಲೈಂಗಿಕತೆಯಿಂದ ಹರಡುವ ರೋಗಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕಾಂಡೋಮ್‌ಗಳಂತಹ ಸುರಕ್ಷತೆಯನ್ನು ಯಾವಾಗಲೂ ಬಳಸಬೇಕು.
    • ಗರ್ಭಕಂಠದ ಕ್ಯಾನ್ಸರ್ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ.
    • ಲೈಂಗಿಕತೆ ಬಯಸುವವರು ಒಬ್ಬರು ಪಾಲುದಾರರನ್ನ ಮಾತ್ರ ಹೊಂದಿರಬೇಕಾಗುತ್ತೆ.
    • ಮೊದಲು ಗರ್ಭನಿರೋಧಕ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಿ. ನಂತರ ಸೂಕ್ತವಾದ ಕ್ರಮ ಅನುಸರಿಸಿ
    • ನಿಯಮಿತ ಪ್ಯಾಪ್ ಪರೀಕ್ಷೆಗಳು (ಯಾವುದೇ ಅಸಹಜತೆಯನ್ನು ಪರೀಕ್ಷಿಸಲು ಗರ್ಭಾಶಯದ ಭಾಗವನ್ನು ಪರಿಶೀಲಿಸಲಾಗುತ್ತದೆ), ಶ್ರೋಣಿಯ ಪರೀಕ್ಷೆಗಳು (ಪುರುಷರ ಮೂತ್ರಭಾಗದ ಪರೀಕ್ಷೆ) ಹಾಗೂ ಲೈಂಗಿಕತೆಯ ಆವರ್ತಕ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
    • ಲೈಂಗಿಕ ಕ್ರಿಯೆಗೂ ಮುನ್ನ ನಿಮ್ಮ ಸಂಗಾತಿ ದೇಹದ ಆರೋಗ್ಯದ ಬಗ್ಗೆಯೂ ತಿಳಿದುಕೊಳ್ಳಬೇಕಾಗುತ್ತದೆ. ಅವರ ಗುಪ್ತಾಂಗಗಳಲ್ಲಿ ನೋವಾಗುತ್ತಿದೆಯೇ ಅಥವಾ ಗುಳ್ಳೆಗಳು ಇವೆಯೇ? ವಿಸರ್ಜನೆಯಾಗುತ್ತಿವೆಯೇ? ಅನ್ನೋದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.
    • ಮದ್ಯ ಸೇವನೆ ಮಾಡುವುದು ಹಾಗೂ ಅತಿಯಾದ ಲೈಂಗಿಕತೆಗಾಗಿ ಉದ್ರೇಕಗೊಳಿಸುವ ಮಾತ್ರೆಗಳನ್ನು ಬಳಸೋದನ್ನ ತಪ್ಪಿಸಿ. ಇದರಿಂದ ಅಪಾಯದ ಲೈಂಗಿಕತೆಯಿಂದ ದೂರ ಉಳಿಯಬಹುದು.
    • ಆರೋಗ್ಯಕರ ಸಂಬಂಧಕ್ಕಾಗಿ ಯಾವಾಗಲೂ ನಿಮ್ಮ ಸಂಗಾತಿಯೊಂದಿಗೆ ಗೌರವದಿಂದ ನಡೆದುಕೊಳ್ಳಿ, ಉತ್ತಮ ಸಂವಹನ ನಡೆಸಿ.

    ಸೆಕ್ಸ್ ಏಕೆ ಮುಖ್ಯ?
    * ಇದು ಹೆಣ್ಣು-ಗಂಡಿನ ನಡುವೆ ಬಾಂಧವ್ಯ ಬೆಸೆಯುತ್ತದೆ
    * ಸಂಗಾತಿಯೊಡೆಗೆ ನಿಮ್ಮ ಪ್ರೀತಿ ಹಾಗೂ ಸೆಳೆತ ಎಷ್ಟಿದೆ ಎಂದು ನಿರ್ಧರಿಸುತ್ತದೆ.
    * ಲೈಂಗಿಕ ಅತೃಪ್ತಿಯಿಂದ ದಾಂಪತ್ಯದಲ್ಲಿ ಬಿರುಕುಂಟಾಗುವುದನ್ನು ತಡೆಯುತ್ತದೆ.
    * ಸಂಬಂಧದಲ್ಲಿ ಭದ್ರತೆ ಭಾವನೆ ಮೂಡಿಸುತ್ತದೆ
    * ಇದು ಮನಸ್ಸು ಹಾಗೂ ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ
    * ಅಲ್ಲದೆ ಮಗುವನ್ನು ಪಡೆಯಬೇಕೆಂದರೆ ಸೆಕ್ಸ್ ಅತ್ಯವಶ್ಯಕ.
    * ಲೈಂಗಿಕ ಆರೋಗ್ಯದಿಂದ ನಿಮ್ಮ ದೈಹಿಕ ಆರೋಗ್ಯ ಸ್ವಾಸ್ಥ್ಯ ಸುರಕ್ಷಿತವಾಗಿರಲಿದೆ.
    * ಅನಪೇಕ್ಷಿತ ಗರ್ಭಧಾರಣೆ ತಡೆಯಬಹುದು.

  • ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ ಗುಣಮುಖ

    ಬೈಡನ್‌ಗಿದ್ದ ಕ್ಯಾನ್ಸರ್ ತೆಗೆದುಹಾಕಿದ ವೈದ್ಯರು – ಅಮೆರಿಕ ಅಧ್ಯಕ್ಷ ಈಗ ಸಂಪೂರ್ಣ ಗುಣಮುಖ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೆ (Joe Biden) ಇದ್ದ ಕ್ಯಾನ್ಸರ್ ಅನ್ನು ತೆಗೆದುಹಾಕಲಾಗಿದೆ. ಅವರು ಇದೀಗ ಗುಣಮುಖರಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಶ್ವೇತಭವನದ ವೈದ್ಯ ಕೆವಿನ್ ಓ’ಕಾನರ್ ಶುಕ್ರವಾರ ತಿಳಿಸಿದ್ದಾರೆ.

    80 ವರ್ಷ ಪ್ರಾಯದ ಅಮೆರಿಕ ಅಧ್ಯಕ್ಷರಿಗೆ (US President) ಎದೆಯಲ್ಲಿ ಚರ್ಮದ ಗಾಯದ ರೂಪದಲ್ಲಿ ಕ್ಯಾನ್ಸರ್ (Cancer) ಇದ್ದಿದ್ದು, ಅದನ್ನು ಫೆಬ್ರವರಿ ತಿಂಗಳಿನಲ್ಲಿ ತೆಗೆದುಹಾಕಲಾಗಿದೆ. ಬೈಡನ್‌ಗೆ ಇದ್ದಿದ್ದ ಎಲ್ಲಾ ಕ್ಯಾನ್ಸರ್ ಅಂಗಾಂಶಗಳನ್ನು ಯಶಸ್ವಿಯಾಗಿ ತೆಗೆದುಹಾಕಲಾಗಿದೆ. ಅವರ ಆರೋಗ್ಯದ ರಕ್ಷಣೆಯ ಭಾಗವಾಗಿ ಕಣ್ಗಾವಲು ಮುಂದುವರಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಅಲೆಸ್ ಬಿಲಿಯಾಟ್ಸ್ಕಿಗೆ 10 ವರ್ಷ ಜೈಲು

    Joe Biden

    ಫೆಬ್ರವರಿ 16ರಂದು ಬೈಡನ್ ಅವರ ವಾರ್ಷಿಕ ವೈದ್ಯಕೀಯ ತಪಾಸಣೆಯ ವೇಳೆ ಎದೆಯ ಮೇಲಿದ್ದ ಗಾಯವನ್ನು ತೆಗೆದುಹಾಕಲಾಗಿತ್ತು. ಬಳಿಕ ಅವರು ಕರ್ತವ್ಯಕ್ಕೆ ಯೋಗ್ಯ ಎಂದು ಘೋಷಿಸಲಾಗಿತ್ತು.

    ಬೈಡನ್ 2024ರಲ್ಲಿ 2ನೇ ಬಾರಿ ಅಧ್ಯಕ್ಷರಾಗುವ ನಿರೀಕ್ಷೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಆದರೂ ಅವರ ಪತ್ನಿ ಜಿಲ್ ಬೈಡನ್ ಸ್ಪರ್ಧಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬಗೆಗಿನ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿಲ್ಲ. ಇದನ್ನೂ ಓದಿ: ಶಾಸಕರ ದಾವಣಗೆರೆಯ ಮನೆ ಮೇಲೂ ರೇಡ್- ಇಂದು ಬೇನಾಮಿ ಆಸ್ತಿ ಮೇಲೂ ದಾಳಿ ಸಾಧ್ಯತೆ

  • ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲು ಮತ್ತು ಬೆವರು ಇವೆರಡು ತ್ವಚೆಯನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ. ಹೀಗಾಗಿ ಬಿಸಿಲಿನಲ್ಲಿ ತ್ವಚೆಯನ್ನು (Skin Care) ಆರೈಕೆಗೆ ಕೆಲವೊಂದು ಸಲಹೆಗಳನ್ನು ಅನುಸರಿಸಿ.

    ದಿನಕ್ಕೆ ಕನಿಷ್ಠ 2 ಬಾರಿ ಮುಖ ಸ್ವಚ್ಛಗೊಳಿಸಿ: ಬೇಸಿಗೆಕಾಲದಲ್ಲಿ ಬಿಸಿಲಿನಿಂದಾಗಿ ಹೆಚ್ಚಾಗಿ ಬೆವರುತ್ತೇವೆ. ಅಷ್ಟೇ ಅಲ್ಲದೇ ಚರ್ಮದಲ್ಲಿಯೂ ಹೆಚ್ಚು ಎಣ್ಣೆ ಅಂಶ ಕಾಣಿಸುತ್ತದೆ. ಇದರಿಂದಾಗಿ ದಿನಕ್ಕೆ 2 ಬಾರಿ ಮುಖವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯುವ ಮೊದಲು ಒಂದು ನಿಮಿಷಗಳ ಕಾಲ ಮುಖದ ಮೇಲೆ ಮೃದುವಾದ ಮಸಾಜ್ ಮಾಡಿ.

    ಸನ್‍ಸ್ಕ್ರೀನ್ ಹೆಚ್ಚು ಬಳಸಿ: ಬಿಸಿಲಿನ ಕಿರಣದಿಂದಾಗಿ ಚರ್ಮವು ಸುಡುವುದಷ್ಟೇ ಅಂದ ಕೆಡುತ್ತದೆ. ಹೀಗಾಗಿ ನೀವು ಹೊರಗಡೆ ಹೋಗುವ ಮುನ್ನ ಸನ್‍ಸ್ಕ್ರೀನ್‍ಗಳನ್ನು ಬಳಸುವುದು ಅಗತ್ಯವಾಗಿದೆ. ಇದರಿಂದಾಗಿ ತಕ್ಕಮಟ್ಟಿಗೆ ನಿಮ್ಮ ಚರ್ಮದ ತ್ವಚೆಯು ಕೆಡದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

    ಅಲೋವೆರಾ (Elovera): ಲೋಳೆರಸ ಬಿಸಿಲಿನಿಂದ ಸುಟ್ಟ ಗಾಯಕ್ಕೆ ಶಮನ ನೀಡುವುದಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಧನಾತ್ಮಕವಾಗಿ ಕಾಪಾಡುತ್ತದೆ. ತಾಜಾ ಅಲೋವೆರಾ ತೆಗೆದು ಅದನ್ನು ಸಂಪೂರ್ಣವಾಗಿ ಮುಖಕ್ಕೆ ಮಸಾಜ್ ಮಾಡಿ. ಅಲೋವೆರಾ ಲೋಳೆಯನ್ನು ಐಸ್ ಟ್ರೇಗೆ ಹಾಕಿಟ್ಟು ಬಳಿಕ ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ಇದನ್ನೂ ಓದಿ: ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

    ಸೌತೆಕಾಯಿ: ಸೌತೆಕಾಯಿ (Cucumber) ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದಲ್ಲದೆ, ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ. ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಬಿಸಿಲಿನಿಂದಾಗುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಹಚ್ಚಿದರೆ ತಂಪಾಗುತ್ತದೆ. ಜೊತೆಗೆ ಹೊಳಪು ಬರುತ್ತದೆ. ಇದನ್ನೂ ಓದಿ: ಮಧುಮೇಹಿಗಳಿಗೆ ಆಹಾರದ ಹೊರತಾಗಿ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲವು ಸಲಹೆ

    ಮಲಗುವ ಮುನ್ನ ಚರ್ಮಕ್ಕೆ ಆರೈಕೆ ಹೀಗಿರಲಿ: ಬೇಸಿಗೆಯಲ್ಲಿ (Summer) ರಾತ್ರಿ ಸಮಯದಲ್ಲಿ ಚರ್ಮದ ಆರೈಕೆಯನ್ನು ಕಡೆಗಣಿಸುವಂತಿಲ್ಲ. ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಾಗೂ ನೈಟ್ ಕ್ರೀಮ್‍ಗಳನ್ನು ಬಳಸಿ. ಇದರಿಂದಾಗಿ ಚರ್ಮದದಲ್ಲಿ ಉಂಟಾದ ಡ್ಯಾಮೇಜ್‍ಗಳನ್ನು ಸರಿಪಡಿಸಬಹುದಾಗಿದೆ. ಇದನ್ನೂ ಓದಿ: ನೀವು ವೈನ್‌ ಕುಡಿಯುತ್ತೀರಾ? ವೈನ್‌ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ

  • ಲೀಲಾವತಿ ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

    ಲೀಲಾವತಿ ಆರೋಗ್ಯ ವಿಚಾರಿಸಿದ ಹಿರಿಯ ಕಲಾವಿದರು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೀರಿಯಡ್ಸ್ ಸಮಯದಲ್ಲಾಗುವ ಹೊಟ್ಟೆನೋವಿಗೆ ಇಲ್ಲಿದೆ ಮನೆ ಮದ್ದು

    ಪೀರಿಯಡ್ಸ್ ಸಮಯದಲ್ಲಾಗುವ ಹೊಟ್ಟೆನೋವಿಗೆ ಇಲ್ಲಿದೆ ಮನೆ ಮದ್ದು

    ತುಚಕ್ರದಿಂದಾಗಿ (Period) ಮಹಿಳೆಯರಿಗೆ ದೈನಂದಿನ ಚಟುವಟಿಕೆಯಲ್ಲಿ ಅನೇಕ ತೊಡಕುಗಳು ಉಂಟಾಗುತ್ತದೆ. ಅಷ್ಟೇ ಅಲ್ಲದೇ ಹೊಟ್ಟೆ ನೋವು, ಬೆನ್ನು ನೋವು ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ಸುಲಭ ಮನೆ ಮದ್ದುಗಳು (Home Remedies) ಇಲ್ಲಿವೆ.

    ಹೊಟ್ಟೆಗೆ ಶಾಖ ಕೊಡಿ: ಬಿಸಿ ನೀರಿನ ಬಾಟಲಿ ಅಥವಾ ವಾಟರ್ ಬ್ಯಾಗ್ (Water Bag) ಅನ್ನು ಹೊಟ್ಟೆಯ ಮೇಲೆ ಇಟ್ಟುಕೊಳ್ಳುವುದರಿಂದ ಸ್ನಾಯುಗಳಿಗೆ ವಿಶ್ರಾಂತಿ ದೊರೆಕಿದ ಹಾಗಾಗುತ್ತದೆ. ಜೊತೆಗೆ ನಿಮಗೆ ಬೆನ್ನು ಹಾಗೂ ಸೊಂಟ ನೋವು ಸೇರಿದಂತೆ ಎಲ್ಲೆಲ್ಲಿ ನೋವು ಇರುತ್ತದೆಯೋ ಅಲ್ಲಿ ಸುಮಾರು 30 ನಿಮಿಷಗಳ ಕಾಲ ಶಾಖ ನೀಡಿ ಇದರಿಂದಾಗಿ ಸ್ನಾಯು ಸೆಳೆತವನ್ನು ಕಡಿಮೆ ಮಾಡಬಹುದು.

    ಹೆಚ್ಚು ನೀರು ಕುಡಿಯಿರಿ: ಋತುಚಕ್ರದ ಸಮಯದಲ್ಲಿ ಹೆಚ್ಚು ನೀರು ಕುಡಿಯಿರಿ. ಇದರಿಂದಾಗಿ ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯಬಹುದು. ನೀರನ್ನು ಕಡಿಮೆ ಕುಡಿಯುವುದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡವು ಹೆಚ್ಚಾಗಬಹುದು.

    ಹೊಟ್ಟೆಗೆ ಮಸಾಜ್ ಮಾಡಿ: ಋತುಚಕ್ರದ ಸಮಯದಲ್ಲಿ ಹೊಟ್ಟೆಯನ್ನು ಮಸಾಜ್ ಮಾಡುವುದು ಒಳ್ಳೆಯದು. ಇದರಿಂದಾಗಿ ಉತ್ತಮ ಪರಿಹಾರವನ್ನು ಕಾಣಬಹುದು. ಕಿಬ್ಬೊಟ್ಟೆಯ ಮಸಾಜ್‍ಗಾಗಿ ಹರಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಬೇಕು. ಹೀಗೆ ಮುಟ್ಟಿನ ಸಮಯದಲ್ಲಿ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನವನ್ನು ಕಾಣಬಹುದು.

    ಇಂಗು ಮತ್ತು ತುಪ್ಪ: ಋತುಚಕ್ರದ ಸಮಯದಲ್ಲಿ ಇಂಗು ಸ್ವಲ್ಪ ಬಳಕೆ ಮಾಡಿದರೇ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಒಂದು ಸಣ್ಣ ಸೌಟು ಅಥವಾ ಒಗ್ಗರಣೆ ಮಾಡುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ತುಪ್ಪ ಹಾಕಿ, 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಫ್ರೈ ಮಾಡಿ. 2 ನಿಮಿಷ ಅದನ್ನು ಮಿಕ್ಸ್ ಮಾಡಿದ ನಂತರ ತಣ್ಣಗಾದ ಮೇಲೆ ತಿಂದರೆ ನಿಮ್ಮ ಹೊಟ್ಟೆ ನೋವಿಗೆ ಬೈ ಬೈ ಹೇಳಬಹುದು. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ

    ಶುಂಠಿ ಟೀ: ಶುಂಠಿ ಟೀ ಅಥವಾ ಶುಂಠಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮುಟ್ಟು ವಿಳಂಬವಾಗುವುದನ್ನು ತಡೆಯಬಹುದು. ಹಾಗೆಯೇ ಸ್ನಾಯು ಸೆಳೆತವನ್ನು ತಡೆಯುತ್ತದೆ. ದೇಹದ ಆಂತರಿಕ ಅಂಗಗಳ ಉರಿಯೂತವು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಸಂಭವಿಸುತ್ತದೆ. ಅದನ್ನು ಸರಿಪಡಿಸಲು ಇದು ಉಪಯುಕ್ತವಾಗಿದೆ. ಒಂದು ಕಪ್ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕತ್ತರಿಸಿದ ಶುಂಠಿ ತುಂಡುಗಳನ್ನು ಹಾಕಿ ಕುದಿಸಿ ಸೋಸಿ ಕುಡಿಯಿರಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 4 & 5ನೇ ವರದಿ ಸಲ್ಲಿಕೆ – 3,630 ಶಿಫಾರಸು ಮಾಡಿದ ಆಯೋಗ

    ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ 4 & 5ನೇ ವರದಿ ಸಲ್ಲಿಕೆ – 3,630 ಶಿಫಾರಸು ಮಾಡಿದ ಆಯೋಗ

    – ಅಪೌಷ್ಟಿಕತೆ ನೀಗಿಸಲು 2 ಬದಲು 5 ಮೊಟ್ಟೆ

    ಬೆಂಗಳೂರು: ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ (Karnataka Administrative Reforms Commission) 4 ಮತ್ತು 5ನೇ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಸಲ್ಲಿಕೆ ಮಾಡಲಾಯಿತು. ಆಯೋಗದ ಅಧ್ಯಕ್ಷ ವಿಜಯ್ ಭಾಸ್ಕರ್, ಸಿಎಂಗೆ ವರದಿ ಸಲ್ಲಿಕೆ ಮಾಡಿದರು.

    ಆಯೋಗದ ವರದಿಯಲ್ಲಿ ವಿವಿಧ ಇಲಾಖೆಗಳಿಂದ ಸುಮಾರು 3,630 ಶಿಫಾರಸುಗಳನ್ನು ಆಯೋಗ ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಅಂಗನವಾಡಿ ಪ್ರಾರಂಭಿಸಿ ಅದೇ ಶಾಲೆಯಲ್ಲೇ ಶಿಕ್ಷಣ (Education) ಪಡೆಯಲು ಅನುಕೂಲ ಮಾಡಿಕೊಡುವುದು. ವಿದ್ಯಾರ್ಥಿಗಳು ಶಾಲೆಗಳನ್ನು ಬಿಡುವುದನ್ನು ತಪ್ಪಿಸಲು ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸುವುದು. 1-12ನೇ ತರಗತಿವರೆಗೆ ಕ್ಲಸ್ಟರ್ ಶಾಲೆ ಮಾಡಿ ವರ್ಗವಾಣಿ ಪ್ರಮಾಣ ಪತ್ರವನ್ನು (TC) ಪದೇ ಪದೇ TC ಪಡೆದುಕೊಳ್ಳುವುದು ಕಡಿಮೆ ಮಾಡಿದಂತಾಗುತ್ತದೆ ಎಂದು ಶಿಫಾರಸು ಮಾಡಿದೆ. ಇದನ್ನೂ ಓದಿ: ಸಿಡಿ ರಾಡಿ: ರಮೇಶ್ ಜಾರಕಿಹೊಳಿಗೆ ಬೆಂಬಲ- ಮಂತ್ರಿಯೂ ಬೇಡ ಎಂದ ಈಶ್ವರಪ್ಪ

    ಅಪೌಷ್ಟಿಕತೆಯಿಂದ ಬಳಲುತ್ತಿರುವ ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡಿ ಪೌಷ್ಟಿಕತೆ ಸುಧಾರಿಸಬೇಕು. ಅಪೌಷ್ಟಿಕತೆ ನೀಗಿಸಲು 2 ಬದಲು 5 ಮೊಟ್ಟೆ ನೀಡಬಹುದಾ ಎಂದು ಪರಿಶೀಲಿಸಿ. MBBS ಸೀಟು ಪಡೆಯುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೋಟಾ ಅಡಿಯಲ್ಲಿ ಶೇಕಡಾ 15ರಷ್ಟು ಸೀಟು ಮೀಸಲಿಡುವುದು. ಲೋಕಸೇವಾ ಆಯೋಗದ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14 ರಿಂದ 8ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ.

    BBMPಯಲ್ಲಿ 30 ಕಂದಾಯ ವಿಭಾಗಗಳಿಗೆ ವಿಕೇಂದ್ರೀಕರಣ ಮತ್ತು ಸಮನ್ವಯ ಸಾಧಿಸಲು 30 KAS ಅಧಿಕಾರಿಗಳನ್ನು ನೇಮಿಸಿ 5 ಲಕ್ಷಕ್ಕಿಂತ ಕಡಿಮೆ ವಹಿವಾಟು ಹೊಂದಿರುವ ಸಂಘಗಳು 5 ವರ್ಷಗಳಿಗೊಮ್ಮೆ ಲೆಕ್ಕಪತ್ರ ಸಲ್ಲಿಸಲು ಚಾರ್ಟರ್ಡ್ ಅಕೌಂಟೆಂಟ್‍ರಿಂದ ಲೆಕ್ಕ ಪರಿಶೋಧನೆ ಮಾಡಿಸುವ ಅಗತ್ಯವಿಲ್ಲ ಎಂದು ಶಿಫಾರಸು ಮಾಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡಾ 5 ರಿಂದ 10 NRI ಕೋಟಾ ಸೃಷ್ಟಿ ಮಾಡಬಹುದು ಅಂತ ಸಲಹೆ ನೀಡಿದೆ.

    ಸಂಪನ್ಮೂಲ ಹೆಚ್ಚಳಕ್ಕೆ ಕಾಯ್ದೆ ತಿದ್ದುಪಡಿ ಮಾಡಿ ಶೇಕಡಾ ಒಂದರಷ್ಟು 1% ಕ್ರೀಡಾ ಸೆಸ್ಸ್ ಹೆಚ್ಚಿಸಬಹುದು. ರಾಜ್ಯ ಸರ್ಕಾರ ಚುನಾವಣಾ ಪ್ರಾಧಿಕಾರ ರದ್ದುಗೊಳಿಸಬಹುದು. ಉದ್ಯೋಗ ಸೇವೆ ಇಲಾಖೆಯನ್ನು ಕೌಶಲ್ಯ ಮಿಷನ್ ಜೊತೆ ಅಂತಿಮಗೊಳಿಸಬಹುದು. ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮಸೂದೆ 2020ನ್ನು ಅಂತಿಮಗೊಳಿಸಬಹುದು ಅಂತ ಶಿಫಾರಸು ಮಾಡಿದೆ. ಇದನ್ನೂ ಓದಿ: NIAಗೆ ತಾಲಿಬಾನ್ ಹೆಸರಲ್ಲಿ ಭಯೋತ್ಪಾದನಾ ದಾಳಿ ಸಂದೇಶ – ದೇಶಾದ್ಯಂತ ಹೈಅಲರ್ಟ್ ಘೋಷಣೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯವನ್ನು ಎರಡು ನಿರ್ದೇಶನಾಲಯಗಳನ್ನಾಗಿ ಪ್ರತ್ಯೇಕಿಸಬಹುದು. 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ಕೆಲಸದ ಹೊರೆ ಇಳಿಸಲು BSC ನರ್ಸಿಂಗ್ ಕೋರ್ಸ್ ಹಾಗೂ ಪ್ಯಾರಾಮೇಡಿಕಲ್ ಕೋರ್ಸ್ ಆರಂಭಿಸಬಹುದು. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಸರ್ಕಾರಿ ವೈದ್ಯರು ಖಾಸಗಿ ವೃತ್ತಿಯನ್ನು (Pravite Practice) ನಿಷೇಧಿಸಬಹುದು. ಸರ್ಕಾರಿ ಆಸ್ಪತ್ರೆಗಳಲ್ಲೇ ಸಂಜೆ OPD ಪ್ರಾರಂಭಿಸಲು ಸಲಹೆಯನ್ನು ಆಯೋಗ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ನಂದಮೂರಿ ತಾರಕರತ್ನ ಆರೋಗ್ಯ ಹೇಗಿದೆ?: ಹೆಲ್ತ್ ಬುಲೆಟಿನ್ ಗಾಗಿ ಕಾದ ಅಭಿಮಾನಿಗಳು

    ನಟ ನಂದಮೂರಿ ತಾರಕರತ್ನ ಆರೋಗ್ಯ ಹೇಗಿದೆ?: ಹೆಲ್ತ್ ಬುಲೆಟಿನ್ ಗಾಗಿ ಕಾದ ಅಭಿಮಾನಿಗಳು

    ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು ನಟ ನಂದಮೂರಿ ತಾರಕರತ್ನ (Nandamuri Tarakaratna) ಅವರ ಸದ್ಯದ ಆರೋಗ್ಯ (Health) ಸ್ಥಿತಿ ತಿಳಿದುಕೊಳ್ಳಲು ಅಭಿಮಾನಿಗಳು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. ಎರಡು ದಿನಗಳ ಹಿಂದೆ ಆಸ್ಪತ್ರೆಯು ನಂದಮೂರಿ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿತ್ತು. ಆನಂತರ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಮೂಲಗಳ ಪ್ರಕಾರ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

    ನಿನ್ನೆ ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗದೇ ಇರುವ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರು ಒಬ್ಬೊಬ್ಬರೇ ಬೆಂಗಳೂರಿಗೆ ಆಗಮಿಸಿ, ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದರು. ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿರುವ (Serious) ಕಾರಣ, ಎರಡು ದಿನಗಳ ಕಾಲ ಏನೂ ಹೇಳಲು ಆಗುವುದಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಮಾತನಾಡಿದ್ದರು. ಬಾಲಕೃಷ್ಣ ಹಾಗೂ ಜ್ಯೂನಿಯರ್ ಎನ್.ಟಿ.ಆರ್ ಕೂಡ ಆರೋಗ್ಯ ವಿಚಾರಿಸಲು ಇಂದು ಬೆಂಗಳೂರಿಗೆ ಆಗಮಿಸಿದ್ದರು. ಇದನ್ನೂ ಓದಿ: ‘ದಸರಾ’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್

    ಮೊನ್ನೆಯಷ್ಟೇ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಬಂದು ನಾರಾಯಣ ಹೃದಯಾಲಯಕ್ಕೆ ತೆರಳಿ ನಂದಮೂರಿ ಅವರ ಆರೋಗ್ಯ ವಿಚಾರಿಸಿದ್ದರು. ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅವರು ಆಗಮಿಸಿದ್ದರು.  ಮೊನ್ನೆ ಸಂಜೆ ನಂದಮೂರಿ ಅವರ ಆರೋಗ್ಯದ ಕುರಿತು ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಆರೋಗ್ಯ ತೀರಾ ಹದಗೆಟ್ಟಿದೆ ಹಾಗೂ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರೆಸಿರುವುದಾಗಿ ಆಸ್ಪತ್ರೆ ತಿಳಿಸಿದ್ದರು.

    ಇಂಟ್ರಾ ಅಯೋರ್ಟಿಕ್ ಪಂಪ್, ವ್ಯಾಸೋಆಕ್ಟಿವ್ ನೆರವಿನಿಂದಲೂ ಚಿಕಿತ್ಸೆ ನೀಡಲಾಗಿದ್ದು, ಆಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿದೆ ಎಂದು ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಲಾಗಿದೆ. ಸ್ಟಂಟ್ ಅಳವಡಿಕೆಯ ನಂತರವೂ ರಕ್ತಸ್ರಾವ ನಿಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಆದರೂ, ನುರಿತ ವೈದ್ಯರ ತಂಡ ಚಿಕಿತ್ಸೆಯನ್ನು ಮುಂದುವರೆಸಿದೆ ಎಂದು ಹೆಲ್ತ್  ಬುಲೆಟಿನ್ ನಲ್ಲಿ ತಿಳಿಸಲಾಗಿತ್ತು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k