Tag: health

  • ಎಡಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿ ಹೆಚ್‍ಡಿಕೆ ಮಾತು ತೊದಲುತ್ತಿತ್ತು, ತುಂಬಾ ಸುಸ್ತಾಗಿದ್ರು!

    – ಸಂಜೆಯ ಹೆಲ್ತ್ ಬುಲೆಟಿನ್ ರಿಲೀಸ್

    ಬೆಂಗಳೂರು: ಮಂಗಳವಾರ ತಡರಾತ್ರಿ ದಿಢೀರ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಅವರ ಆರೋಗ್ಯದ ಕುರಿತು ವೈದ್ಯರು ಇದೀಗ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದಾರೆ.

    ಸದ್ಯ ಮಾಜಿ ಸಿಎಂ ಆರೋಗ್ಯ ಸುಧಾರಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಾಳೆ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡ್ತೀವಿ. ಇನ್ನೂ ಎರಡ್ಮೂರು ದಿನ ಆಸ್ಪತ್ರೆಯಲ್ಲಿರಬೇಕಾಗುತ್ತೆ ಎಂದು ಡಾ. ಸತೀಶ್ ಚಂದ್ರ ಹೇಳಿದ್ದಾರೆ. ಇದನ್ನೂ ಓದಿ: ನಾವು ಯಾವತ್ತೂ ನಿಮಗೆ ಸುಳ್ಳು ಹೇಳಲ್ಲ, ಸುಳ್ಳು ಆಶ್ವಾಸನೆ ಕೊಡಲ್ಲ: ರಾಹುಲ್ ಗಾಂಧಿ

    ಕುಮಾರಸ್ವಾಮಿಯವರ ಎಡಭಾಗದಲ್ಲಿ ರಕ್ತನಾಳ (Blood Vessel) ಸಮಸ್ಯೆಯಾಗಿತ್ತು. ಎಡಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿತ್ತು. ಹೀಗಾಗಿ ಅವರ ಮಾತು ತೊದಲುತ್ತಿತ್ತು, ತುಂಬಾ ಸುಸ್ತಾಗಿದ್ರು. ಅಡ್ಮಿಟ್ ಆದ ಒಂದು ಗಂಟೆಯಲ್ಲೇ ಆರೋಗ್ಯವಾಗಿದ್ದಾರೆ. ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ನಾಳೆ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡ್ತೀವಿ. ಇನ್ನೂ ಎರಡ್ಮೂರು ದಿನ ಆಸ್ಪತ್ರೆಯಲ್ಲಿರಬೇಕಾಗುತ್ತೆ ಎಂದು ಹೇಳಿದರು.

    ನಾಳೆ ಬೆಳಗ್ಗೆ ಮತ್ತೊಂದು ಹೇಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಈ ರೀತಿ ಸಮಸ್ಯೆಯಾದ ಮೂರು ಗಂಟೆಗಳಲ್ಲಿ ಆಸ್ಪತ್ರೆಗೆ ಬಂದಾಗ ಬೇಗ ಚೇತರಿಕೆ ಕಾಣಬಹುದು. ಮಾಜಿ ಮುಖ್ಯಮಂತ್ರಿಗಳು ಬೆಳಗ್ಗೆ 3.45 ಕ್ಕೆ ಆಸ್ಪತ್ರೆಗೆ ಬಂದಿದ್ದರು. ಅವರು ಮಾತನಾಡಲು ಕಷ್ಟಪಡುತ್ತಿದ್ದರು. ಎಡಭಾಗದ ರಕ್ತನಾಳ ಸಮಸ್ಯೆಯಿಂದ ಈ ರೀತಿಯಾಗಿತ್ತು. ಕೂಡಲೇ ಅವರಿಗೆ ಚಿಕಿತ್ಸೆ ಪ್ರಾರಂಭ ಮಾಡಿದೆವು. ಚಿಕಿತ್ಸೆ ನೀಡಲು ಶುರು ಮಾಡಿದ 1 ಗಂಟೆಯಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಇದನ್ನೂ ಓದಿ: ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ- ಹೆಲ್ತ್ ಬುಲೆಟಿನ್ ರಿಲೀಸ್

    ಎರಡು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ ಸದ್ಯ ಮನೆಯಲ್ಲೇ ಇದ್ದರು. ಮಂಗಳವಾರ ತಡರಾತ್ರಿ ಇವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅಲ್ಲದೇ ಸತತ ಪ್ರವಾಸದ ಹಿನ್ನೆಲೆ ಜ್ವರ ಕಾಣಿಸಿಕೊಂಡಿದ್ದು, ಮಂಗಳವಾರ ತಡರಾತ್ರಿ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ- ಹೆಲ್ತ್ ಬುಲೆಟಿನ್ ರಿಲೀಸ್

    ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ- ಹೆಲ್ತ್ ಬುಲೆಟಿನ್ ರಿಲೀಸ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy Health) ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದೆ.

    ಇಂದು ಬೆಳಗ್ಗಿನ ಜಾವ 3.40ಕ್ಕೆ ಕುಮಾರಸ್ವಾಮಿಯವರು ಸುಸ್ತು ಬಳಲಿಕೆಯಿಂದ ಆಸ್ಪತ್ರೆಗೆ ದಾಖಲಾಗಿದ್ರು. ಸದ್ಯ ಹೆಚ್‍ಡಿಕೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಡಾ. ಸತೀಶ್ಚಂದ್ರ ಹಾಗೂ ವೈದ್ಯರ ತಂಡ ಕುಮಾರಸ್ವಾಮಿಯವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಅವರ ಶೀಘ್ರ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥಿಸೋಣ ಎಂದು ಅಪೋಲೋ ಆಸ್ಪತ್ರೆಯ (Apollo Hospital) ಯೂನಿಟ್ ಹೆಡ್ ಹಾಗೂ ಉಪಾಧ್ಯಕ್ಷ ಡಾ ಗೋವಿಂದಯ್ಯ ಯತೀಶ್ ತಿಳಿಸಿದ್ದಾರೆ.

    ಕುಮಾರಸ್ವಾಮಿ ಆರೋಗ್ಯ ವಿಚಾರಿಸಲು ಪತ್ನಿ ಅನಿತಾ ಕುಮಾರಸ್ವಾಮಿ ಅಪೋಲೋ ಆಸ್ಪತ್ರೆಗೆ ಭೇಟಿ  ನೀಡಿದರು.  ಎರಡು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ ಸದ್ಯ ಮನೆಯಲ್ಲೇ ಇದ್ದರು. ಮಂಗಳವಾರ ತಡರಾತ್ರಿ ಇವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಅಲ್ಲದೇ ಸತತ ಪ್ರವಾಸದ ಹಿನ್ನೆಲೆ ಜ್ವರ ಕಾಣಿಸಿಕೊಂಡಿದ್ದು, ಮಂಗಳವಾರ ತಡರಾತ್ರಿ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಒಂದೊಂದೇ ಮೆಟ್ಟಿಲು ಹತ್ತೋದು ಒಳ್ಳೆಯದು- ಶಾಸಕ ಬಸವರಾಜ್‍ಗೆ ಸಚಿವ ಮಲ್ಲಿಕಾರ್ಜುನ್ ಕ್ಲಾಸ್

    ಈ ಹಿಂದೆ ಕೂಡಾ ಚುನಾವಣಾ ಸಮಯದಲ್ಲಿ ನಿರಂತರ ಪ್ರಚಾರದಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಇದೀಗ ಎರಡೆರಡು ಬಾರಿ ವಿದೇಶ ಪ್ರವಾಸ ಮಾಡಿದ್ದು, ಸತತ ಪ್ರವಾಸದಿಂದ ಅನಾರೋಗ್ಯ ಕಾಣಿಸಿಕೊಂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೀಟೋ ಡಯೆಟ್ ಬಗ್ಗೆ ತಿಳಿದುಕೊಂಡಿದ್ದೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ

    ಕೀಟೋ ಡಯೆಟ್ ಬಗ್ಗೆ ತಿಳಿದುಕೊಂಡಿದ್ದೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ

    ಸಾಮಾನ್ಯವಾಗಿ ಹೆಣ್ಣುಮಕ್ಕಳು ತೆಳ್ಳಗೆ ಬೆಳ್ಳಗೆ ಸುಂದರವಾಗಿ ಕಾಣಲು ಬಯಸುತ್ತಾರೆ. ಅಲ್ಲದೇ ಸುಂದರ ಮೈಕಟ್ಟು ಇರಬೇಕೆಂದು ಆಸೆಪಡುವುದು ಸಹಜ. ಅಂದವಾಗಿ ಕಾಣುವ ಸಲುವಾಗಿ ಯೋಗ, ಜಿಮ್, ವ್ಯಾಯಾಮ ಮಾಡುವುದರ ಜೊತೆಗೆ ಕೆಲವರು ಹಲವಾರು ಬಗೆಯ ಡಯೆಟ್ ಕೂಡಾ ಮಾಡುತ್ತಾರೆ. ಡಯೆಟ್ ಅಲ್ಲಿ ನಾನಾ ಬಗೆಯ ಡಯೆಟ್‌ಗಳಿರುತ್ತವೆ. ಡಯೆಟ್ ಮಾಡುವುದರಿಂದ ದಪ್ಪ ಇರುವವರು ತಮ್ಮ ತೂಕವನ್ನು ಇಳಿಸಿಕೊಂಡು ಸುಂದರವಾಗಿ ಕಾಣಬಹುದು. ಇಂತಹ ಡಯೆಟ್‌ಗಳಲ್ಲಿ ಕೀಟೋ ಡಯೆಟ್ (Keto Diet) ಕೂಡ ಒಂದು. ಏನಿದು ಕೀಟೋ ಡಯೆಟ್? ಇದು ಯಾವ ರೀತಿಯ ಆಹಾರವನ್ನು ಒಳಗೊಂಡಿರುತ್ತದೆ? ಈ ಡಯೆಟ್ ಮಾಡುವುದರಿಂದ ಆಗುವ ಲಾಭಗಳೇನು? ಹಾಗೆಯೇ ಇದರ ದುಷ್ಪರಿಣಾಮಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು..?- ಚಿಕಿತ್ಸೆ ಹೇಗೆ..?

    ಏನಿದು ಕೀಟೋ ಡಯೆಟ್?
    ಕೆಟೋಜೆನಿಕ್ ಆಹಾರವು ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುವುದಲ್ಲದೇ ನಮ್ಮ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೇ ಇದರಿಂದ ನಮ್ಮ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ ಮತ್ತು ಕೆಲವು ರೋಗಗಳಿಗೆ ತುತ್ತಾಗುವುದನ್ನು ತಪ್ಪಿಸಬಹುದು ಎಂದು ವರದಿಗಳು ತಿಳಿಸುತ್ತವೆ.

    ಕೆಟೋಜೆನಿಕ್ ಆಹಾರಗಳು ಮಧುಮೇಹ, ಕ್ಯಾನ್ಸರ್, ಅಪಸ್ಮಾರ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುತ್ತದೆ. ಇದನ್ನು ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಶತಮಾನಗಳಿಂದ ಬಳಸಲಾಗುತ್ತಿತ್ತು. 19ನೇ ಶತಮಾನದಲ್ಲಿ ಮಧುಮೇಹವನ್ನು ನಿಯಂತ್ರಿಸಲು ಈ ವಿಧಾನವನ್ನು ಸಾಮಾನ್ಯವಾಗಿ ಬಳಸಲಾಗುತ್ತಿತ್ತು. 1920ರಲ್ಲಿ ಮಕ್ಕಳಲ್ಲಿ ಉಂಟಾಗುವ ಅಪಸ್ಮಾರಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿ ಇದನ್ನು ಪರಿಚಯಿಸಲಾಯಿತು. ಇದು ಕಡಿಮೆ ಕಾರ್ಬೋಹೈಡ್ರೇಟ್ ಅನ್ನು ಹೊಂದಿದ್ದು, ಅಧಿಕ ಪ್ರೋಟೀನ್ ಆಹಾರವನ್ನು ಹೊಂದಿದೆ.

    ಕೀಟೋ ಡಯೆಟ್‌ನಲ್ಲಿ ನಾನಾಬಗೆಯ ಡಯೆಟ್‌ಗಳಿವೆ. ಉದಾಹರಣೆಗೆ ಸ್ಟ್ಯಾಂಡರ್ಡ್ ಕೆಟೋಜೆನಿಕ್ ಡಯೆಟ್ ಹಾಗೂ ಸೈಕ್ಲಿಕ್ ಕೆಟೋಜೆನಿಕ್ ಡಯೆಟ್‌ಗಳು ಕೀಟೋ ಡಯೆಟ್‌ನ ಅಡಿಯಲ್ಲಿ ಬರುತ್ತವೆ. ಕೀಟೋ ಆಹಾರದ ಪ್ರಯೋಜನಗಳನ್ನು ಕೆಳಗೆ ತಿಳಿಸಲಾಗಿದೆ.

    * ತೂಕ ಇಳಿಸುವಲ್ಲಿ ಸಹಕಾರಿ:
    ಕೆಟೋಜೆನಿಕ್ ಆಹಾರವು ತೂಕ ಇಳಿಸುವಲ್ಲಿ ಸಹಾಯ ಮಾಡುವುದಲ್ಲದೇ ಚಯಾಪಚಾಯವನ್ನು ಹೆಚ್ಚಿಸುತ್ತದೆ. ಇದು ಹಸಿವನ್ನು ಉತ್ತೇಜಿಸುವ ಹಾರ್ಮೋನ್‌ಗಳನ್ನು ಕಡಿಮೆ ಮಾಡುತ್ತದೆ. ಇದರಿಂದ ಹಸಿವು ಕಡಿಮೆಯಾಗುವುದಲ್ಲದೇ ತೂಕ ಇಳಿಸಿಕೊಳ್ಳಬಹುದು.

    * ಮೊಡವೆಗಳನ್ನು ಸುಧಾರಿಸುತ್ತದೆ:
    ಹಲವರಲ್ಲಿ ಮೊಡವೆಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅವರು ಸೇವಿಸುವ ಆಹಾರದಿಂದ ಅಥವಾ ಧೂಳು ಮತ್ತು ಮಾಲಿನ್ಯದಿಂದಾಗಿ ಉಂಟಾಗಬಹುದು. ಅದಕ್ಕಾಗಿ ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ಮೊಡವೆಗಳನ್ನು ಕಡಿಮೆ ಮಾಡಬಹುದು.

    * ಕ್ಯಾನ್ಸರ್ ತಡೆಗಟ್ಟುವಿಕೆ:
    ಕೆಲವು ಕ್ಯಾನ್ಸರ್ ರೋಗಗಳನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಸಹಾಯ ಮಾಡುವಲ್ಲಿ ಕೆಟೋಜೆನಿಕ್ ಆಹಾರ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಪರಿಶೀಲಿಸಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯ ಜೊತೆಗೆ ಕೆಟೋಜೆನಿಕ್ ಆಹಾರವು ಸುರಕ್ಷಿತ ಮತ್ತು ಸೂಕ್ತವಾದ ಪೂರಕ ಚಿಕಿತ್ಸೆಯಾಗಿದೆ ಎಂದು ಕೆಲವು ಅಧ್ಯಯನಗಳು ತಿಳಿಸುತ್ತವೆ. ಇದು ಸಾಮಾನ್ಯ ಕೋಶಗಳಿಂತ ಕ್ಯಾನ್ಸರ್ ಕೋಶಗಳಲ್ಲಿ ಹೆಚ್ಚು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಿ ಅವು ಸಾಯುವಂತೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. 

    * ಹೃದಯದ ಆರೋಗ್ಯವನ್ನು ಕಾಪಡಿಕೊಳ್ಳಬಹುದು:
    ನಾವು ತಿನ್ನುವ ಆಹಾರಗಳು ನಮ್ಮ ಹೃದಯದ ಮೇಲೆ ಬೇಗ ಪರಿಣಾಮ ಬೀರುತ್ತದೆ. ಹೆಚ್ಚಿನ ಕೊಬ್ಬಿನಾಂಶ ತುಂಬಿರುವ ಆಹಾರಗಳನ್ನು ತಿನ್ನುವುದರಿಂದ ಹೃದಯ ರಕ್ತನಾಳದ ಕಾಯಿಲೆಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಕೊಬ್ಬು ತುಂಬಿದ ದೇಹದ ಮೇಲೆ ಕೀಟೋ ಡಯೆಟ್ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರಮಾಡಬಹುದು. ಕೀಟೋ ಆಹಾರವನ್ನು ಅನುಸರಿಸುವಾಗ ಆರೋಗ್ಯಕರ, ಪೌಷ್ಟಿಕಾಂಶದ ಸಮತೋಲಿತ ಆಹಾರವನ್ನು ಸೇವಿಸುವುದು ಅತಿ ಮುಖ್ಯವಾಗಿದೆ. 

    *ಪಿಸಿಒಎಸ್ ರೋಗಲಕ್ಷಣಗಳನ್ನು ಸುಧಾರಿಸತ್ತದೆ:
    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಒಂದು ಹಾರ್ಮೋನ್ ಅಸ್ವಸ್ಥತೆಯಾಗಿದ್ದು, ಇದು ಪುರುಷ ಹಾರ್ಮೋನುಗಳು, ಅಂಡೋತ್ಪತ್ತಿ ಅಪಸಾಮಾನ್ಯ ಕ್ರಿಯೆ ಮತ್ತು ಪಾಲಿಸಿಸ್ಟಿಕ್ ಅಂಡಾಂಶಯಗಳಿಗೆ ಕಾರಣವಾಗಬಹುದು. ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರವು ಪಿಸಿಒಎಸ್ ಹೊಂದಿರುವ ಜನರಲ್ಲಿ ಚರ್ಮದ ಸಮಸ್ಯೆಗಳು ಮತ್ತು ತೂಕ ಹೆಚ್ಚಾಗುವಂತಹ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. 

    ಕೆಟೋಜೆನಿಕ್ ಆಹಾರಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಇದು ಕೆಲವೊಂದು ದುಷ್ಪರಿಣಾಮಗಳನ್ನು ಹೊಂದಿದೆ. ಆದ್ದರಿಂದ ಕೆಲವು ಜನರು ಈ ರೀತಿಯಾದ ಡಯೆಟ್ ಅನ್ನು ತಪ್ಪಿಸುವುದು ಒಳ್ಳೆಯದು.ಯಾರು ಈ ಡಯೆಟ್‌ನಿಂದ ದೂರ ಉಳಿದರೆ ಒಳಿತು ಎಂಬುದನ್ನು ಕೆಳಗೆ ತಿಳಿಸಲಾಗಿದೆ.

    1) ಮಧುಮೇಹ ಹೊಂದಿದ್ದು, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುತ್ತಿರುವವವರು.

    2) ಮೂತ್ರಪಿಂಡ ಕಾಯಿಲೆ ಅಥವಾ ಪ್ಯಾಂಕ್ರಿಯಾಟೈಟಿಸ್ ಇರುವವರು.

    3) ಗರ್ಭಾವಸ್ಥೆಯಲ್ಲಿ ಇರುವವರು ಮತ್ತು ಮಗುವಿಗೆ ಹಾಲುಣಿಸುವವರು.

    ಕೀಟೋ ಡಯೆಟ್‌ನಲ್ಲಿ ನೀವು ಸೇವಿಸಬಹುದಾದ ಆಹಾರಗಳು:
    * ಮೀನು ಮತ್ತು ಸೀಫುಡ್
    * ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿರುವ ತರಕಾರಿಗಳು.
    *ಚೀಸ್
    *ಅವಕಾಡೋ
    *ಮೊಟ್ಟೆ
    *ನಟ್ಸ್ ಮತ್ತು ಆರೋಗ್ಯಕರ ಎಣ್ಣೆ
    *ಮೊಸರು
    *ಸಕ್ಕರೆ ಹಾಕದ ಕಾಫಿ ಮತ್ತು ಟೀ
    *ಡಾರ್ಕ್ ಚಾಕೊಲೇಟ್ ಇತ್ಯಾದಿ..

    ಕೀಟೋ ಡಯೆಟ್‌ ಮಾಡುವ ಮೊದಲು ನೀವು ವೈದ್ಯರ ಸಲಹೆಯನ್ನು ಕೇಳಿ ಆಮೇಲೆ ಆಹಾರಕ್ರಮವನ್ನು ಅನುಸರಿಸಿದರೆ ಒಳ್ಳೆಯದು. ಆದ್ದರಿಂದ ಪ್ರತಿಯೊಬ್ಬರು ಈ ಡಯೆಟ್‌ ಅನ್ನು ಮಾಡುವ ಮೊದಲು ವೈದ್ಯರ ಸಲಹೆಯನ್ನು ಪಡೆದು ನಂತರ ನಿಮ್ಮ ದೇಹಕ್ಕೆ ಇದು ಸರಿಯಾಗಿ ಹೊಂದುವುದಾದರೆ ಮಾತ್ರ ಈ ಡಯೆಟ್‌ ಅನ್ನು ಕೈಗೊಳ್ಳಿ. ಇದನ್ನೂ ಓದಿ: ಕ್ಯಾನ್ಸರ್‌ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಯುಷ್ಮಾನ್ ಭಾರತ: ಬೀದರ್‌ನ ಸಾಯಿ ಗಣೇಶ ಆಸ್ಪತ್ರೆಗೆ ಪ್ರಶಸ್ತಿ

    ಆಯುಷ್ಮಾನ್ ಭಾರತ: ಬೀದರ್‌ನ ಸಾಯಿ ಗಣೇಶ ಆಸ್ಪತ್ರೆಗೆ ಪ್ರಶಸ್ತಿ

    ಬೀದರ್: ಆಯುಷ್ಮಾನ್ ಭಾರತ (Ayushman Bharat) ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯಲ್ಲೇ ಅತಿ ಹೆಚ್ಚು ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಿದ್ದಕ್ಕೆ ಚಿದ್ರಿ ರಸ್ತೆಯಲ್ಲಿ ಇರುವ ಸಾಯಿ ಗಣೇಶ ಕಿಡ್ನಿ ಆ್ಯಂಡ್ ಎಂಡ್ರಾಲಜಿ ಆಸ್ಪತ್ರೆಗೆ (Sai Ganesh Kidney And Andrology Hospital) ಪ್ರಶಸ್ತಿ ಲಭಿಸಿದೆ.

    ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಗಂಜಲಖೇಡ ಪ್ರಶಸ್ತಿ ಪ್ರದಾನ ಮಾಡಿದರು.

     

    ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್(BPL Card) ಹೊಂದಿದವರಿಗೆ ಯೋಜನೆಯಡಿ ನಿತ್ಯ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ ಎಂದು ಪ್ರಶಸ್ತಿ ಸ್ವೀಕರಿಸಿದ ಆಸ್ಪತ್ರೆಯ ಮುಖ್ಯಸ್ಥರೂ ಆದ ಕಿಡ್ನಿ ತಜ್ಞ ಡಾ. ಶಿವಪುತ್ರ ಖಪ್ಲೆ ಹೇಳಿದರು.  ಇದನ್ನೂ ಓದಿ: ಲೋಕಸಮರಕ್ಕೆ ಆಪರೇಷನ್ ಹಸ್ತ – ಕರಾವಳಿಯಿಂದ ಸ್ಪರ್ಧಿಸ್ತಾರಾ ಬಿಜೆಪಿಯ ಆ ಸಂಸದ?

    ಈ ಪ್ರಶಸ್ತಿ ಆಸ್ಪತ್ರೆಯ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೋಗಗಳಿಗೆ ಯೋಜನೆ ಲಾಭ ದೊರಕಿಸಿಕೊಡುವ ದಿಸೆಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೊಡಗಿಗೂ ವಿಸ್ತರಿಸಿದ ಮದ್ರಾಸ್ ಐ – ಕಳೆದ 20 ದಿನಗಳಲ್ಲಿ 136 ಪ್ರಕರಣಗಳು ಪತ್ತೆ

    ಕೊಡಗಿಗೂ ವಿಸ್ತರಿಸಿದ ಮದ್ರಾಸ್ ಐ – ಕಳೆದ 20 ದಿನಗಳಲ್ಲಿ 136 ಪ್ರಕರಣಗಳು ಪತ್ತೆ

    ಮಡಿಕೇರಿ: ರಾಜ್ಯದ ಎಲ್ಲೆಡೆ ಮದ್ರಾಸ್ ಐ (Madras Eye) ಸೋಂಕಿನ ಬಗ್ಗೆಯೇ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಬೇಸಿಗೆಗಾಲದಲ್ಲಿ ಜಾಸ್ತಿಯಾಗಿ ಹರಡುತ್ತಿದ್ದ ಮದ್ರಾಸ್ ಐ ಎಂಬ ಕಣ್ಣಿನ ಸೋಂಕು ಈಗ ಮಳೆಗಾಲದಲ್ಲೂ ಕಾಣಿಸಿಕೊಳ್ಳತೊಡಗಿದೆ. ಅಲ್ಲದೇ ಕೊಡಗಿನಲ್ಲಿ (Kodagu) ಈಗಾಗಲೇ ಸುಮಾರು 136 ಜನರಲ್ಲಿ ಮದ್ರಾಸ್ ಐ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ.

    ಬಿಳಿ ಮತ್ತು ಕೆಂಪು ಬಣ್ಣದ ಪದರ ರೀತಿಯ ವಸ್ತು ಕಣ್ಣಿನಲ್ಲಿ ಕಾಣಿಸಿಕೊಂಡು, ತುರಿಕೆ, ಕಣ್ಣಲ್ಲಿ ನೀರು ಬರುವುದು ಇತ್ಯಾದಿ ಈ ರೋಗದ ಲಕ್ಷಣಗಳಾಗಿವೆ. ಮಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿರುವ ಸೋಂಕು ಈಗ ಕೊಡಗಿನಲ್ಲೂ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಬಹುವೇಗವಾಗಿ ಹರಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 136 ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯಲ್ಲಿರುವ ಹಾಸ್ಟೆಲ್, ಶಾಲಾ, ಕಾಲೇಜು ಮಕ್ಕಳಲ್ಲೇ ಮದ್ರಾಸ್ ಐ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದನ್ನೂ ಓದಿ: ನನ್ನ ಹತ್ತಿರನೂ ಪೆನ್‌ಡ್ರೈವ್ ಇದೆ, ಬಿಡುಗಡೆಗಾಗಿ ಕಾಯ್ತಿದ್ದೇನೆ: ಲಕ್ಷ್ಮಣ ಸವದಿ

    ಜುಲೈ ತಿಂಗಳಲ್ಲಿ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 136ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಹಾಸ್ಟೆಲ್ ಶಾಲೆಗಳಲ್ಲಿ ಒಬ್ಬರಿಗೆ ಕಾಣಿಸಿಕೊಂಡರೆ ಎಲ್ಲರಿಗೂ ಹರಡುವ ಸಾಧ್ಯತೆ ಇದೆ. ಹೀಗಾಗಿ ರೋಗದ ಬಗ್ಗೆ ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನೂ ಓದಿ: ರೈತರ ದ್ರೋಹಿ ಯಾರಾದ್ರೂ ಇದ್ರೆ ಅದು ಸಿದ್ದರಾಮಯ್ಯ – ಈಶ್ವರಪ್ಪ ಕಿಡಿ

    ಈ ಸಾಂಕ್ರಮಿಕ ರೋಗ ಬ್ಯಾಕ್ಟೀರಿಯಾ ಮತ್ತು ವೈರಲ್‌ನಿಂದ ಹರಡುವ ಸಾಧ್ಯತೆ ಇದೆ. ಕಳೆದ 20 ದಿನಗಳಲ್ಲಿ ಕೊಡಗು ಜಿಲ್ಲೆಯ ಹಲವೆಡೆ ಮದ್ರಾಸ್ ಐ ಪ್ರಕರಣ ಕಂಡು ಬರುತ್ತಿದೆ. ಹೀಗಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ಸಾಂಕ್ರಮಿಕ ರೋಗ ಹರಡುವ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಕಣ್ಣು ನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಿ, ಉಪಚಾರ ಹಾಗೂ ಪ್ರಾಥಮಿಕ ವ್ಯವಸ್ಥೆಯನ್ನು ಸಮುದಾಯದ ಆರೋಗ್ಯ ಕೇಂದ್ರಗಳ ಮೂಲಕ ಮಾಡಲಾಗುತ್ತಿದೆ. ಇದನ್ನೂ ಓದಿ: ಸಿಂಗಾಪುರ ಉದ್ಯಮಿಗಳ ಜೊತೆಗೆ ಕೃಷ್ಣಭೈರೇಗೌಡ ಸಭೆ- 70 ಮಿಲಿಯನ್ ಡಾಲರ್ ಹೂಡಿಕೆ ಸಾಧ್ಯತೆ

    ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವ ಕಣ್ಣಿನ ತಜ್ಞರು ಈ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ತೂಕ ಕಡಿಮೆ ಮಾಡುವ ಉತ್ಸಾಹ ಬೇಡ, ಅತಿಯಾದ ಒತ್ತಡವೂ ಹೃದಯದ ಸಮಸ್ಯೆಗಳಿಗೆ ಕಾರಣ: ಡಾ. ಮಂಜುನಾಥ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರೋಗ್ಯ ಸೇವೆ ದೇವರ ಸೇವೆ: ರಾಜ್ಯಪಾಲ ಗೆಹ್ಲೋಟ್‌

    ಆರೋಗ್ಯ ಸೇವೆ ದೇವರ ಸೇವೆ: ರಾಜ್ಯಪಾಲ ಗೆಹ್ಲೋಟ್‌

    ಬೆಂಗಳೂರು: ಉತ್ತಮ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಪ್ರಮುಖ. ಆರೋಗ್ಯ ಸೇವೆ ದೇವರ ಸೇವೆ. ದೇವರ ಸೇವೆ ಮಾಡಲು ಆರಿಸಿಕೊಂಡ ಮಾರ್ಗ, ಸಮಾಜವನ್ನು ಆರೋಗ್ಯವಾಗಿ ಮತ್ತು ರೋಗ ಮುಕ್ತವಾಗಿಡಬೇಕೆಂಬ ವೈದ್ಯರ ಸಂಕಲ್ಪ ಶ್ಲಾಘನೀಯ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದರು.

    ಭಾರತೀಯ ಆರ್ಥೊಡಾಂಟಿಕ್ ಸೊಸೈಟಿ ಮತ್ತು ಬೆಂಗಳೂರು ಆರ್ಥೊಡಾಂಟಿಕ್ ಗ್ರೂಪ್ ಸಹಯೋಗದಲ್ಲಿ ದಯಾನಂದ ಸಾಗರ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಬೆಂಗಳೂರು ವತಿಯಿಂದ ಆಯೋಜಿಸಲಾಗಿದ್ದ ಸೀಳು ಮತ್ತು ಕ್ರಾನಿಯೋಫೇಶಿಯಲ್ ಆರ್ಥೊಡಾಂಟಿಕ್ಸ್ ರಾಷ್ಟ್ರೀಯ ಸಮ್ಮೇಳನ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಸ್ವಂತ ಕಾರು ಇದ್ದವರಿಗೆ BPL Card ಡೌಟ್- ರಾಜ್ಯ ಸರ್ಕಾರ ಗಂಭೀರ ಚಿಂತನೆ

    ಹುಟ್ಟಿನಿಂದಲೇ ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಇದು ದೈಹಿಕ ವೈಪರೀತ್ಯ ಮಾತ್ರವಲ್ಲ, ಇದಕ್ಕಿಂತ ಹೆಚ್ಚಾಗಿ ಈ ಸಮಸ್ಯೆ ಅವರ ಜೀವನದ ಮೇಲೆ ಭಾವನಾತ್ಮಕ, ಸಾಮಾಜಿಕ ಮತ್ತು ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಭಾರತದಲ್ಲಿ 700 ಮಕ್ಕಳಲ್ಲಿ 1 ಮಗುವಿಗೆ ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ಹುಟ್ಟುತ್ತದೆ. ನಮ್ಮ ದೇಶದಲ್ಲಿ ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳು ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯೊಂದಿಗೆ ಜನಿಸುತ್ತಾರೆ ಎಂದು ತಿಳಿದು ಬಂದಿದೆ ಎಂದರು.

    ಜನ್ಮಜಾತ ಸೀಳು ತುಟಿ ಮತ್ತು ಅಂಗುಳಿನ ವಿರೂಪತೆಯನ್ನು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಎದುರಿಸುತ್ತಿರುವ ಪರಿಸ್ಥಿತಿಗಳು ಅವರಿಗೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಬಹಳ ಗಂಭೀರ ಮತ್ತು ಶಾಶ್ವತ ಸ್ವಭಾವವನ್ನು ಹೊಂದಿರಬಹುದು. ಈ ಸವಾಲುಗಳನ್ನು ಎದುರಿಸಲು ಒಂದು ಸಮಗ್ರ ವಿಧಾನದ ಅಗತ್ಯವಿದೆ. ಬಾಧಿತ ಮಗುವಿಗೆ ತಾಯಿಯ ಸಹಾಯದ ಅಗತ್ಯವಿದೆ. ಆರ್ಥೊಡಾಂಟಿಕ್, ಓರಲ್ ಸರ್ಜನ್, ಪೀಡಿಯಾಟ್ರಿಕ್ ಡೆಂಟಿಸ್ಟ್, ನರ್ಸಿಂಗ್, ಸ್ಪೀಚ್ ಥೆರಪಿಸ್ಟ್ ಮತ್ತು ಸೈಕಲಾಜಿಕಲ್ ಕೌನ್ಸೆಲರ್‌ಗಳ ಬೆಂಬಲವು ಅವನ ಜೀವನಕ್ಕೆ ನಗು ತರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಆರಗ ಜ್ಞಾನೆಂದ್ರ ತ್ರಿಪುರ ಸುಂದರ ಅಲ್ಲ: ದರ್ಶನಾಪುರ ಲೇವಡಿ

    ಈ ಸಮ್ಮೇಳನದಲ್ಲಿ ವಿವಿಧ ವಿಶೇಷತೆಗಳ ತಜ್ಞರು ಅರ್ಥಪೂರ್ಣ ಚರ್ಚೆಯನ್ನು ನಡೆಸುತ್ತಾರೆ. ತಮ್ಮ ಜ್ಞಾನ ಮತ್ತು ಅನುಭವವನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದು ಈ ಮಕ್ಕಳ ಜೀವನದಲ್ಲಿ ನಗುವನ್ನು ತರಲು ಸಹಾಯಕವಾಗುತ್ತದೆ. ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ನಿರ್ವಹಣಾ ವಲಯದಲ್ಲಿ ಸಾಂಸ್ಥಿಕ ಬದ್ಧತೆ ಮತ್ತು ದೀರ್ಘಾವಧಿಯ ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.

    ಸೀಳು ತುಟಿ ಮತ್ತು ಅಂಗುಳಿನ ಸಮಸ್ಯೆ ಬಾಧಿತವಾಗಿರುವ ಪ್ರತಿಯೊಂದು ಮಗುವೂ ಸಕಾಲಿಕ ಮತ್ತು ಗುಣಮಟ್ಟದ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಸೌಲಭ್ಯಗಳು ಮತ್ತು ಔಟ್‌ರೀಚ್ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು ಎಂದು ಸಂಸ್ಥೆಗಳಿಗೆ ಮನವಿ ಮಾಡಿದರು. ಇದನ್ನೂ ಓದಿ: ಒಂದು ಫ್ರಿಡ್ಜ್‌ಗಾಗಿ 7 ತಿಂಗಳ ಗರ್ಭಿಣಿಯ ಜೀವವೇ ಹೋಯ್ತು!

    ದಯಾನಂದ ಸಾಗರ್ ಸಂಸ್ಥೆಗಳ ಅಧ್ಯಕ್ಷ ಡಾ. ಡಿ.ಹೇಮಚಂದ್ರ ಸಾಗರ್, ಇಂಡಿಯನ್ ಆರ್ಥೊಡಾಂಟಿಕ್ ಸೊಸೈಟಿಯ ಅಧ್ಯಕ್ಷ ಡಾ. ಬಲ್ವಿಂದರ್ ಸಿಂಗ್ ಠಕ್ಕರ್ ಮತ್ತು ಕಾರ್ಯದರ್ಶಿ ಡಾ. ಸಂಜಯ್ ಲಾಭ್, ದಯಾನಂದ ಸಾಗರ್ ಸಂಸ್ಥೆಗಳ ಕಾರ್ಯದರ್ಶಿ ಗಾಲಿಸ್ವಾಮಿ, ಜಂಟಿ ಕಾರ್ಯದರ್ಶಿ ಟಿಂಟಿಶಾ ಹೆಚ್. ಸಾಗರ್, ಪ್ರಾಂಶುಪಾಲ ಡಾ. ಹೇಮಂತ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಾರಕ ಕಾಯಿಲೆಗಳಿಂದ ಯುವಕರನ್ನು ದೂರವಿಡಲು ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ: ದಿನೇಶ್ ಗುಂಡೂರಾವ್

    ಮಾರಕ ಕಾಯಿಲೆಗಳಿಂದ ಯುವಕರನ್ನು ದೂರವಿಡಲು ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ: ದಿನೇಶ್ ಗುಂಡೂರಾವ್

    ಬೆಂಗಳೂರು: ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣ ನೀಡುವ ಮೂಲಕ ಯುವಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅಭಿಪ್ರಾಯ ಪಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಶುಕ್ರವಾರ ವಿಶ್ವ ಹೆಪಟೈಟಿಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಪಟೈಟಿಸ್ (Hepatitis) ಸೋಂಕು ಆಹಾರ ಮತ್ತು ಜೀವನಶೈಲಿಯಲ್ಲಿ ಆಗುವ ಬದಲಾವಣೆಗಳಿಂದ ಬರುತ್ತದೆ. ಮಾನವನ ಅಂಗಾಂಗದಲ್ಲಿ ಯಕೃತ್ತಿಗೆ (liver) ನಾವು ಹೆಚ್ಚು ಪ್ರಾಮುಖ್ಯತೆ ನೀಡಬೇಕಾಗಿದೆ. ಲಿವರ್ ಅನ್ನು ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೋ ಅದು ನಮಗೆ ಅಷ್ಟೇ ಉತ್ತಮ ಆರೋಗ್ಯವನ್ನು ನೀಡುವಂತಹ ಒಂದು ಅಂಗಾಂಗವಾಗಿದೆ ಎಂದು ತಿಳಿಸಿದರು.

    ಮಾನವನ ದೇಹದಲ್ಲಿ ಲಿವರ್ 500 ಕ್ಕೂ ಹೆಚ್ಚು ಕಾರ್ಯವನ್ನು ಮಾಡುವ ಪ್ರಮುಖ ಅಂಗಾಂಗ. A,B,C,D ಮತ್ತು E ರೀತಿಯ ಹೆಪಟೈಟಿಸ್ ವೈರಸ್‌ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ B ಮತ್ತು C ವೈರಸ್ ಲಿವರ್ ಡ್ಯಾಮೇಜ್ ಮಾಡುವ ವೈರಸ್‌ಗಳಾಗಿದ್ದು, ಮಾರಕ ಕಾಯಿಲೆಯನ್ನು ಉಂಟುಮಾಡುತ್ತವೆ ಎಂದರು.

    ಹೆಪಟೈಟಿಸ್ ವೈರಸ್‌ನಿಂದಾಗಿ ದೇಶದಲ್ಲಿ ಇಂದು 3.5 ಕೋಟಿಗೂ ಹೆಚ್ಚು ಜನರು ಇಂದು ಲಿವರ್ ಸಮಸ್ಯೆ ಎದುರಿಸುತ್ತಿದ್ದಾರೆ. ಕರ್ನಾಟದಲ್ಲಿ 1% ರಷ್ಟು ಹೆಪಟೈಟಿಸ್ ಸೋಂಕು ಕಂಡುಬಂದಿದೆ. 2030 ರೊಳಗೆ ಹೆಪಟೈಟಿಸ್ C ವೈರಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಹೆಪಟೈಟಿಸ್ B ವೈರಸ್ ಅನ್ನು ಕೂಡಾ ನಿಯಂತ್ರಣದಲ್ಲಿಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇದನ್ನೂ ಓದಿ: ಶಾಸಕತ್ವ ಅಸಿಂಧು ಕೋರಿ ಅರ್ಜಿ – ಸಿದ್ದರಾಮಯ್ಯಗೆ ಹೈಕೋರ್ಟ್‌ನಿಂದ ನೋಟಿಸ್‌ ಜಾರಿ

    ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಅತ್ಯವಶ್ಯಕವಾಗಿದೆ ಹೆಪಟೈಟಿಸ್ ವೈರಸ್ ಒಂದೇ ಅಲ್ಲ, ಕಿಡ್ನಿ ವೈಫಲ್ಯದಂತಹ ಮಾರಕ ಕಾಯಿಲೆಗಳಿಂದ ಯುವಕರನ್ನು ದೂರವಿಡಲು ವಿದ್ಯಾರ್ಥಿಗಳ ಪಠ್ಯದಲ್ಲಿಯೇ ಆರೋಗ್ಯ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದರು. ಯುವಕರು ಒಂದೆಡೆ ವ್ಯಸನಗಳಿಗೆ ಮಾರುಹೋಗಿ ನಂತರದ ದಿನಗಳಲ್ಲಿ ಕಾಯಿಲೆಗಳಿಗೆ ಈಡಾಗುತ್ತಾರೆ. ಅಲ್ಲದೇ ಆಹಾರ ಪದ್ಧತಿ, ಜೀವನ ಶೈಲಿಯಲ್ಲಾಗುವ ಬದಲಾವಣೆಗಳು ಇಂದು ಮಾರಕ ವೈರಸ್‌ಗಳು ಮನಷ್ಯನ ಅಂಗಾಂಗಗಳಿಗೆ ಸಮಸ್ಯೆಯುಂಟುಮಾಡುತ್ತಿವೆ ಎಂದರು.

    ಪ್ರೌಢ ಹಾಗೂ ಪದವಿ ಪಠ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣವನ್ನು ನೀಡುವ ಮೂಲಕ ಬಹುತೇಕ ಯುವಕರನ್ನು ಜಾಗೃತಗೊಳಿಸಬಹುದು. ಮಾರಕ ಕಾಯಿಲೆಗಳನ್ನು ಯುವಕರಿಂದ ದೂರವಿಡಬಹುದು. ಉತ್ತಮ ಆರೋಗ್ಯ ನೀಡುವ ಆಹಾರಗಳ ಬಗ್ಗೆ ಅರಿವು ಮೂಡಿಸಬೇಕು. ಹೆಪಟೈಟಿಸ್‌ನಂತಹ ವೈರಸ್‌ಗಳು, ಹೇಗೆ ಬರುತ್ತವೆ, ಲಿವರ್ ನ ಮಹತ್ವದ ಬಗ್ಗೆ ಶಿಕ್ಷಣ ಅತ್ಯಗತ್ಯ. ಹೆಪಟೈಟಿಸ್ ವೈರಸ್ ಆರಂಭದಲ್ಲೇ ಪತ್ತೆ ಹಚ್ವಿದರೆ ಲಿವರ್ ಫೇಲ್ಯೂರ್ ಆಗುವುದನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸ್ಕ್ರೀನಿಂಗ್ ಮಾಡುವುದರ ಜೊತೆಗೆ ಲಸಿಕೆ ಹಾಕುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಹೆಪಟೈಟಿಸ್ B ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಿ. ಪಾಸಿಟಿವ್ ಗರ್ಭಿಣಿಯರಿಗೆ ಜನಿಸುವ ಶಿಶುಗಳಿಗೆ ಹೆಪಟೈಟಿಸ್ ಬಿ ಚುಚ್ಚುಮದ್ದು ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು. ಇದನ್ನೂ ಓದಿ: ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ – ಪ್ರಧಾನಿ ಮೋದಿ ತಯಾರಿ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಮಾನ ತುರ್ತು ಭೂಸ್ಪರ್ಶದ ಬಳಿಕ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ

    ವಿಮಾನ ತುರ್ತು ಭೂಸ್ಪರ್ಶದ ಬಳಿಕ ಸೋನಿಯಾ ಗಾಂಧಿ ಆರೋಗ್ಯ ವಿಚಾರಿಸಿದ ಮೋದಿ

    ನವದೆಹಲಿ: ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ (Flight) ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ (Emergency Landing) ಮಾಡಿತ್ತು. ಇದಾದ 2 ದಿನಗಳ ಬಳಿ ಗುರುವಾರ ನರೇಂದ್ರ ಮೋದಿ (Narendra Modi) ಅವರು ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ಸೋನಿಯಾ ಗಾಂಧಿ (Sonia Gandhi) ಅವರ ಆರೋಗ್ಯ ವಿಚಾರಿಸಿದ್ದಾರೆ.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandgi) ಹಾಗೂ ತಾಯಿ ಸೋನಿಯಾ ಗಾಂಧಿ ಮಂಗಳವಾರ ಬೆಂಗಳೂರಿನಲ್ಲಿ ನಡೆದ 2 ದಿನಗಳ ಚಿಂತನ ಮಂಥನ ಅಧಿವೇಶನದ ಬಳಿಕ ದೆಹಲಿಗೆ ವಾಪಸಾಗುತ್ತಿದ್ದ ವೇಳೆ ಹವಾಮಾನ ವೈಪರೀತ್ಯದ ಹಿನ್ನೆಲೆ ವಿಮಾನವನ್ನು ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು.

    ಈ ವೇಳೆ ರಾಹುಲ್ ಗಾಂಧಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ತಾಯಿಯ ಫೋಟೋವನ್ನು ಹಂಚಿಕೊಂಡಿದ್ದರು. 76 ವರ್ಷದ ಸೋನಿಯಾ ಗಾಂಧಿ ವಿಮಾನದಲ್ಲಿ ಆಮ್ಲಜನಕದ ಮಾಸ್ಕ್ ಅನ್ನು ಧರಿಸಿ ಕುಳಿತುಕೊಂಡಿರುವುದು ಆ ಫೋಟೋದಲ್ಲಿ ಕಂಡುಬಂದಿದೆ. ಇದನ್ನೂ ಓದಿ: ಮೂತ್ರ ವಿಸರ್ಜನೆಗೆಂದು ವಂದೇ ಭಾರತ್ ರೈಲು ಹತ್ತಿದ ವ್ಯಕ್ತಿ 6,000 ರೂ. ಕಳ್ಕೊಂಡ

    ಇದೀಗ ಸಂಸತ್ತಿನ ಮುಂಗಾರು ಅಧಿವೇಶನ ಪ್ರಾರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕೂಡಾ ಅಧಿವೇಶನದ ಮೊದಲ ದಿನವೇ ಸಂಸತ್ತಿಗೆ ಆಗಮಿಸಿದ್ದಾರೆ. ಈ ವೇಳೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸಂಸದರನ್ನು ಭೇಟಿ ಮಾಡಿದ ಅವರು ಸಂಸದೆ ಸೋನಿಯಾ ಗಾಂಧಿ ಅವರನ್ನೂ ಭೇಟಿಯಾಗಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಸೋನಿಯಾ ಗಾಂಧಿ ತಾವು ಚೆನ್ನಾಗಿರುವುದಾಗಿ ಉತ್ತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಉಪ ಸಭಾಧ್ಯಕ್ಷರ ಬಗ್ಗೆ ದಲಿತ ಕಾರ್ಡ್ ಬಿಟ್ಟ ಸರ್ಕಾರಕ್ಕೆ ಕುಮಾರಸ್ವಾಮಿ ತಿರುಗೇಟು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ ಹಾಲಿ, ಮಾಜಿ ಸಿಎಂ

    ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ ಹಾಲಿ, ಮಾಜಿ ಸಿಎಂ

    ಬೆಂಗಳೂರು: ವಿಧಾನಸಭೆಯಲ್ಲಿ ನಡೆದ ಹೈಡ್ರಾಮಾ ವೇಳೆ ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆರೋಗ್ಯವನ್ನು ಹಾಲಿ, ಮಾಜಿ ಸಿಎಂ ಸೇರಿದಂತೆ ಹಲವು ನಾಯಕರು ವಿಚಾರಿಸಿದರು.

    ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯುಟಿ ಖಾದರ್, ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಯತ್ನಾಳ್ ಆರೋಗ್ಯ ವಿಚಾರಿಸಿದ್ದಾರೆ.

    ಯತ್ನಾಳ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಯತ್ನಾಳ್ ಅವರು ದೊಡ್ಡ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಸದ್ಯ ಅವರು ಸ್ಥಿರವಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಅವರನ್ನು ಮನೆಗೆ ಕಳುಹಿಸಿ ಕೊಡುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ತಳ್ಳಾಟ ನೂಕಾಟದಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದ ಯತ್ನಾಳ್ – ಆಸ್ಪತ್ರೆಗೆ ರವಾನೆ

    ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಯತ್ನಾಳ್ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸ್ಪೀಕರ್ ಚೇಂಬರ್ ಬಳಿ ಮಾರ್ಷಲ್‌ಗಳು ಅಮಾನುಷವಾಗಿ ನಡೆದುಕೊಂಡರು. ದೈಹಿಕವಾಗಿ ತಳ್ಳಾಟ ಮಾಡಿ, ಗಾಜುಗಳನ್ನು ಒಡೆದರು. ತಳ್ಳಾಟ ನೂಕಾಟ ಸುಮಾರು ಅರ್ಧ ಗಂಟೆ ನಡೆಯಿತು. ಸದ್ಯ ಯತ್ನಾಳ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಗುರುವಾರ ಅವರನ್ನು ಡಾಕ್ಟರ್‌ಗಳು ಮನೆಗೆ ಕಳುಹಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಂಪೂರ್ಣ ಗುಣಮುಖನಾಗಿದ್ದು, ಭಯಪಡೋ ಅವಶ್ಯಕತೆಯಿಲ್ಲ: ಯತ್ನಾಳ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ ಆರು ತಿಂಗಳು ಕಷ್ಟ ಕಷ್ಟ: ಸಮಂತಾ ದಿನಕ್ಕೊಂದು ಪೋಸ್ಟ್

    ಆ ಆರು ತಿಂಗಳು ಕಷ್ಟ ಕಷ್ಟ: ಸಮಂತಾ ದಿನಕ್ಕೊಂದು ಪೋಸ್ಟ್

    ರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಸಮಂತಾ, ದಿನಕ್ಕೊಂದು ಪೋಸ್ಟ್ ಮಾಡಿ ತಮ್ಮ ಅಂತರಾಳದ ದುಗುಡಗಳನ್ನು ಅಭಿಮಾನಿಗಳ ಮುಂಚೆ ಬಿಚ್ಚಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದ ಮೂಲಕ ಸದಾ ಅಭಿಮಾನಿಗಳ ಜೊತೆ ಕನೆಕ್ಟ್ ಆಗುವ ಸಮಂತಾ, ಈ ಬಾರಿ ಆರು ತಿಂಗಳ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಿನಕ್ಕೂ ಅವು ಯಾತನೆಯ ದಿನಗಳು ಎಂದಿದ್ದಾರೆ.

    ಆರೋಗ್ಯದ ಸಮಸ್ಯೆಯಿಂದಾಗಿ ಸಿನಿಮಾ ರಂಗಕ್ಕೆ ಒಂದು ವರ್ಷಗಳ ಕಾಲ ಗೈರಾಗಿದ್ದ ಸಮಂತಾ, ಟ್ರೀಟ್ ಮೆಂಟ್ ನಂತರ ಮತ್ತೆ ಬಂದಿದ್ದರು. ಒಪ್ಪಿಕೊಂಡಿದ್ದ ಪ್ರಾಜೆಕ್ಟ್ ಗಳನ್ನು ಅವರು ಮುಗಿಸಿಕೊಡಬೇಕಿತ್ತು. ಹಾಗಾಗಿ ಆರು ತಿಂಗಳ ಕಾಲ ನೋವಿನಲ್ಲೇ ಕೆಲಸ ಮಾಡಿದ್ದಾರೆ. ಇನ್ನೂ ಸಾಧ್ಯವಿಲ್ಲ ಅನಿಸಿ, ಒಂದಷ್ಟು ಪ್ರಾಜೆಕ್ಟ್ ಗಳಿಗೆ ತೆಗೆದುಕೊಂಡಿದ್ದ ಅಡ್ವಾನ್ಸ್ ವಾಪಸ್ಸು ಮಾಡಿ ಮತ್ತೆ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ.

    ಸಮಂತಾ (Samantha), ಒಪ್ಪಿಕೊಂಡಿದ್ದ ಸಿನಿಮಾಗಳನ್ನ ಮುಗಿಸಿಕೊಟ್ಟಿದ್ದಾರೆ. ಈಗ ತಮ್ಮ ಆರೋಗ್ಯದ ಕಡೆ ಗಮನ ವಹಿಸುತ್ತಿದ್ದಾರೆ. ಡಿವೋರ್ಸ್ ನಂತರ ಒಂದಲ್ಲಾ ಒಂದು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಸೂಕ್ತ ಚಿಕಿತ್ಸೆಗಾಗಿ ಅಮೆರಿಕಾಗೆ ಹಾರಿದ್ದಾರೆ. ತಮ್ಮ ಆರೋಗ್ಯ ಸುಧಾರಣೆಗೆ ಹೊಸ ಮಾದರಿಯ ಥೆರಪಿಯೊಂದನ್ನ ಮಾಡಿಸುತ್ತಿದ್ದಾರೆ. ಇದು ಆಮ್ಲಜನಕ ಥೆರಪಿಯಾಗಿದ್ದು, ಇದರ ಫೋಟೋವನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

    ನಾಗಚೈತನ್ಯ (NagaChaitanya) ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಮಯೋಸಿಟಿಸ್ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದರು. ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಚರ್ಮದ ಸಮಸ್ಯೆ, ಶ್ವಾಸಕೋಶದ ಸಮಸ್ಯೆಯನ್ನ ನಟಿ ಎದುರಿಸುತ್ತಿದ್ದರು. ಹಾಗಾಗಿ ಸಿನಿಮಾಗೆ ಕೊಂಚ ಬ್ರೇಕ್ ನೀಡಿ, ತಮ್ಮ ಹೆಲ್ತ್ ಕಡೆ ನಟಿ ಗಮನ ಕೊಡ್ತಿದ್ದಾರೆ. ಇದನ್ನೂ ಓದಿ:‘ದಸರಾ’ ನಂತರ ಮತ್ತೆ ಜೊತೆಯಾದ ಸತೀಶ್ ನೀನಾಸಂ ಮತ್ತು ಶರ್ಮಿಳಾ

    ಚ್‌ಬಿಓಟಿ ಹೆಸರಿನ ಚಿಕತ್ಸೆಯನ್ನು ಸ್ಯಾಮ್ ಪಡೆದುಕೊಳ್ಳುತ್ತಿದ್ದಾರೆ. ಎಚ್‌ಬಿಓಟಿ ಎಂದರೆ ಹೈಪರ್‌ಬ್ಯಾರಿಕ್ ಆಕ್ಸಿಜನ್ ಥೆರಪಿ ಎಂದರ್ಥ. ಈ ಚಿಕಿತ್ಸಾ ವಿಧಾನದಲ್ಲಿ ವ್ಯಕ್ತಿಗೆ ಪ್ರತ್ಯೇಕವಾಗಿ ಶುದ್ಧ ಆಮ್ಲಜನಕವನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೀಡಲಾಗುತ್ತದೆ. ಈ ಥೆರಪಿ ಮಾಡಿಸಲು ವಿಶೇಷವಾದ ಕೋಣೆ ಅಥವಾ ಚೇಂಬರ್‌ಗಳನ್ನು ನಿರ್ಮಿಸಿ ಅದರಲ್ಲಿ ಚಿಕಿತ್ಸೆ ಪಡೆಯುವವರನ್ನು ಕೂರಿಸಿ ಅಥವಾ ಮಲಗಿಸಿ ವೇಗವಾಗಿ ಶುದ್ಧ ಆಮ್ಲಜನಕವನ್ನು ಅವರ ದೇಹಕ್ಕೆ ಹರಿಸಲಾಗುತ್ತದೆ. ಈ ಚಿಕಿತ್ಸೆಯಿಂದ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಹಾಗೂ ರಕ್ತದಲ್ಲಿಯೂ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಚರ್ಮವು ಶುಷ್ಕವಾಗಿ ಬಿಳಿಚಿಕೊಳ್ಳುವುದರಿಂದ ರಕ್ಷಿಸುತ್ತದೆ, ರಕ್ತದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಶ್ವಾಸಕೋಶದ ಸೋಂಕುಗಳು ನಿವಾರಣೆಯಾಗುತ್ತದೆ. ಗಾಯಗಳು, ನೋವುಗಳು ಬೇಗನೆ ಮಾಯಲು, ವಾಸಿಯಾಗಲು ಪ್ರಾರಂಭವಾಗುತ್ತವೆ.

     

    ನಟಿ ಸಮಂತಾ, ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ‘ಖುಷಿ’ (Kushi)  ಸಿನಿಮಾ ಮುಗಿಸಿ ಕೊಟ್ಟಿದ್ದಾರೆ. ವರುಣ್ ಧವನ್ ಜೊತೆಗಿನ ಸಿಟಾಡೆಲ್ (Citadel) ಕೂಡ ಶೂಟಿಂಗ್ ಮುಗಿದಿದೆ. ಇಂಗ್ಲೀಷ್‌ನ ಒಂದು ಸಿನಿಮಾ, ಬಾಲಿವುಡ್ ಚಿತ್ರವೊಂದನ್ನ ನಟಿ ಓಕೆ ಎಂದಿದ್ದಾರೆ. ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ಮತ್ತೆ ಸಿನಿಮಾ ಮಾಡಲಿದ್ದಾರೆ. ಅಲ್ಲಿಯವರೆಗೂ ನಟಿ ಬ್ರೇಕ್‌ ತೆಗೆದುಕೊಳ್ಳಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]