Tag: Health ministry

  • ಸೋಂಕಿನಿಂದ ಗುಣಮುಖರಾಗಿ 3 ತಿಂಗಳ ನಂತರ ಲಸಿಕೆ, ಬೂಸ್ಟರ್ ಡೋಸ್: ಕೇಂದ್ರ

    ಸೋಂಕಿನಿಂದ ಗುಣಮುಖರಾಗಿ 3 ತಿಂಗಳ ನಂತರ ಲಸಿಕೆ, ಬೂಸ್ಟರ್ ಡೋಸ್: ಕೇಂದ್ರ

    ನವದೆಹಲಿ: ಕೋವಿಡ್ ಸೋಂಕಿತರು ಗುಣಮುಖರಾದ ಮೂರ ತಿಂಗಳ ನಂತರ ಲಸಿಕೆ ನೀಡಬೇಕು ಎಂಬ ನಿಯಮ ಬೂಸ್ಟರ್ ಡೋಸ್‍ಗೂ ಅನ್ವಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ 3 ತಿಂಗಳ ನಂತರ ಕೋವಿಡ್ ಲಸಿಕೆಗಳು ಸೇರಿದಂತೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಹೆಚ್ಚುವರಿ ಆರೋಗ್ಯ ಕಾರ್ಯದರ್ಶಿ ವಿಕಾಸ್ ಶೀಲ್ ಶುಕ್ರವಾರ ರಾಜ್ಯಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಇತ್ತೀಚೆಗೆ ಕರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಬೂಸ್ಟರ್ ಡೋಸ್‍ಗಳು ಸೇರಿದಂತೆ ಲಸಿಕೆ ಪ್ರಮಾಣವನ್ನು ಮೂರು ತಿಂಗಳವರೆಗೆ ವಿಳಂಬಗೊಳಿಸುವಂತೆ ಆರೋಗ್ಯ ಸಚಿವಾಲಯವು ರಾಜ್ಯಗಳನ್ನು ಕೇಳಿದೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

    15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್-19 ಲಸಿಕೆಯನ್ನು ಜನವರಿ 3 ರಿಂದ ಪ್ರಾರಂಭಿಸಲಾಯಿತು. ಆರೋಗ್ಯ ಸಿಬ್ಬಂದಿ ಮತ್ತು 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್‍ನ್ನು ರಾಷ್ಟ್ರೀಯ ಕೋವಿಡ್ ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಜನವರಿ 10 ರಿಂದ ಪ್ರಾರಂಭಿಸಲಾಯಿತು. ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಮುನ್ನೆಚ್ಚರಿಕೆ ಡೋಸ್ ಆಗಿ ನೀಡಲಾಗುತ್ತಿದೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಲಸಿಕೆಯ ಎರಡನೇ ಡೋಸ್ ಪಡೆದ ನಂತರ 3 ತಿಂಗಳ ಅವಧಿಯಲ್ಲಿ ಬೂಸ್ಟರ್ ಡೋಸ್ ನೀಡಲಾಗುವುದು. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

    ಹಲವು ದೇಶಗಳಲ್ಲಿ ಕೋವಿಡ್ ಲಸಿಕೆ ಹಾಗೂ ಬೂಸ್ಟರ್ ಡೋಸ್ ನೀಡಿಕೆ ಅಂತರವು ಆರು ತಿಂಗಳುಗಳಾಗಿರುತ್ತದೆ. ಇದು ಲಸಿಕೆಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ಕಡಿಮೆಯಾಗಲು ಪ್ರಾರಂಭಿಸುವ ಸಮಯ ಎಂದು ವಿಜ್ಞಾನವು ನಿರೂಪಿಸಿದೆ. ಕೋವಿಡ್‍ನಿಂದ ಚೇತರಿಸಿಕೊಂಡ ನಂತರ ಜನರು ಶೀಘ್ರದಲ್ಲೇ ಲಸಿಕೆಯನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಆದರೂ ಅನೇಕ ದೇಶಗಳು ಲಸಿಕೆ ನೀಡುವ ವಿಚಾರದಲ್ಲಿ ಕೆಲವು ದಿನಗಳ ಅಂತರವನ್ನು ಕಾಯ್ದು ವ್ಯಾಕ್ಸಿನ್ ನೀಡುತ್ತಿವೆ. ಸೋಂಕಿನಿಂದ ಚೇತರಿಕೆಯ ನಂತರ ಮೂರು ತಿಂಗಳ ಅಂತರವನ್ನು ಕಾಯ್ದುಕೊಳ್ಳುವ ಆರೋಗ್ಯ ಸಚಿವಾಲಯದ ನಿರ್ದೇಶನವು ತಜ್ಞರ ಸಮಿತಿಯ ಶಿಫಾರಸುಗಳನ್ನು ಆಧರಿಸಿದೆ.

  • ಓಮಿಕ್ರಾನ್ ಭೀತಿ – ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪತ್ರ

    ಓಮಿಕ್ರಾನ್ ಭೀತಿ – ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪತ್ರ

    ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಸೋಂಕು ಹರಡುವಿಕೆ ತೀವ್ರವಾಗುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸೋಂಕು ಹೆಚ್ಚಾಗುತ್ತಿರುವ ಎಂಟು ರಾಜ್ಯಗಳಿಗೆ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ ಪತ್ರ ಬರೆದಿದ್ದು ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ.

    ದೆಹಲಿ, ಹರಿಯಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಜಾರ್ಖಂಡ್‌ಗೆ ಪತ್ರ ಬರೆಯಲಾಗಿದ್ದು ವ್ಯಾಕ್ಸಿನೇಷನ್‌ ವ್ಯಾಪ್ತಿ ಹೆಚ್ಚಿಸಬೇಕು. ಟೆಸ್ಟಿಂಗ್ ಹೆಚ್ಚು ಮಾಡಬೇಕು ಮತ್ತು ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಸಿದ್ಧವಾಗಿಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: 4 ಬಾರಿ ಕೋವಿಡ್‌ ಲಸಿಕೆ ಪಡೆದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್‌

    ದೇಶದ ಎಲ್ಲ ರಾಜ್ಯಗಳಲ್ಲಿ ಸದ್ಯ ಓಮಿಕ್ರಾನ್ ಪತ್ತೆಯಾಗುತ್ತಿದ್ದು, ಮುಂಬೈ, ದೆಹಲಿ ಸೇರಿದಂತೆ 14 ಮಹಾನಗರಗಳಲ್ಲಿ ಸೋಂಕು ಹೆಚ್ಚುತ್ತಿದೆ. ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಓಮಿಕ್ರಾನ್ ಹರಡುವಿಕೆ ವೇಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಬರೆಯಲಾಗಿದ್ದು ತಕ್ಷಣದ ಕ್ರಮಕ್ಕೆ ಸಲಹೆ ನೀಡಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಶ್ಲೇಷಿಸಲಾದ 115 ಕೋವಿಡ್ -19 ಮಾದರಿಗಳಲ್ಲಿ ಶೇ.46 ರಷ್ಟು ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ವೇಗವಾಗಿ ಹರಡುತ್ತಿರುವ ರೂಪಾಂತರವು ಕ್ರಮೇಣ ಸಮುದಾಯದಲ್ಲಿ ಹರಡುತ್ತಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ದೆಹಲಿ ಆಸ್ಪತ್ರೆಗಳಲ್ಲಿ 200 ಕೋವಿಡ್ ರೋಗಿಗಳಿದ್ದು, ಅವರ ಪೈಕಿ 102 ಮಂದಿ ನಗರಕ್ಕೆ ಸೇರಿದವರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಐವರಿಗೆ ಓಮಿಕ್ರಾನ್ ದೃಢ – 43ಕ್ಕೇರಿದ ಸೋಂಕಿತರ ಸಂಖ್ಯೆ

    24 ಗಂಟೆಗಳ ಅವಧಿಯಲ್ಲಿ ಮುಂಬೈನಲ್ಲಿ 2,510 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಶೇ. 82 ಕ್ಕೆ ಜಿಗಿದಿದೆ. ದೆಹಲಿಯಲ್ಲಿ ಬುಧವಾರ 923 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ಪ್ರಮಾಣ ಶೇ. 86 ರಷ್ಟು ಹೆಚ್ಚಿದೆ. ರಾತ್ರಿ ಕರ್ಫ್ಯೂ, ಸೆಕ್ಷನ್ 144 ಮತ್ತು ಕಡ್ಡಾಯ ವ್ಯಾಕ್ಸಿನೇಷನ್‌ ನಿರ್ಧಾರಗಳನ್ನು ಹಲವು ರಾಜ್ಯಗಳು ಕೈಗೊಂಡಿವೆ. ಪ್ರಕರಣಗಳು ಹೆಚ್ಚಾದಂತೆ ಹೊಸ ವರ್ಷದ ಸಂಭ್ರಮಾಚರಣೆಯನ್ನು ನಿಯಂತ್ರಣದಲ್ಲಿಡಲು ಹಲವಾರು ರಾಜ್ಯಗಳು ಕಠಿಣ ನಿರ್ಬಂಧಗಳನ್ನು ವಿಧಿಸಿವೆ.

  • ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 29 ಕೋಟಿ ಡೋಸ್ ಲಸಿಕೆ ಪೂರೈಕೆ

    ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ 29 ಕೋಟಿ ಡೋಸ್ ಲಸಿಕೆ ಪೂರೈಕೆ

    ನವದೆಹಲಿ: ದೇಶದಲ್ಲಿ ಇದುವರೆಗೂ 29 ಕೋಟಿಗೂ ಅಧಿಕ ಡೋಸ್ ಲಸಿಕೆಯನ್ನು ಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಕೆ ಮಾಡಿದೆ. 29,10,54,050 ಡೋಸ್ ಲಸಿಕೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಉಚಿತವಾಗಿ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

    ಲಸಿಕೆ ವ್ಯರ್ಥವಾಗಿರುವುದು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ದೇಶದಲ್ಲಿ 26,04,19,412 ಡೋಸ್ ಲಸಿಕೆ ಹಾಕಲಾಗಿದೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಬಾಕಿ ಇದೆ ಅವುಗಳನ್ನು ಕೆಲವೇ ದಿನಗಳಲ್ಲಿ ಹಾಕಲಾಗುವುದು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪೂರೈಕೆ ಮಾಡಿರುವ ಒಟ್ಟಾರೆ ಲಸಿಕೆಯ ಪೈಕಿ ಇನ್ನೂ 3.06 ಕೋಟಿ ಡೋಸ್ ಲಸಿಕೆ ಬಾಕಿ ಇದೆ. ಇಂದು ಬೆಳಗ್ಗೆಯ ತನಕ 3,06,34638 ಲಸಿಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ದಾಸ್ತಾನು ಇದೆ ಎಂದು ಕೇಂದ್ರ ಸಚಿವಾಲಯ ತನ್ನ ಮಾಹಿತಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್

    ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂದಿನ ಮೂರು ದಿನಗಳಲ್ಲಿ 24.53,080 ಡೋಸ್ ಲಸಿಕೆಯನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದು, ದೇಶದಾದ್ಯಂತ ನಾಳೆಯಿಂದ ಉಚಿತವಾಗಿ ಲಸಿಕೆ ಹಾಕುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

  • ಬಿಸಿ ಪಾಟೀಲ್‌ ಲಸಿಕೆ ಪ್ರಕರಣ – ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ರವಾನೆ

    ಬಿಸಿ ಪಾಟೀಲ್‌ ಲಸಿಕೆ ಪ್ರಕರಣ – ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ರವಾನೆ

    ಬೆಂಗಳೂರು: ಕೃಷಿ ಸಚಿವ ಬಿಸಿ ಪಾಟೀಲ್‌ ಮನೆಯಲ್ಲೇ ಲಸಿಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.

    ಮನೆಯಲ್ಲೇ ಲಸಿಕೆ ಹಾಕಿಸಲು ಕಾರಣರಾದ ಅಧಿಕಾರಿಗೆ ಕಾರಣ ಕೇಳಿ ನೋಟಿಸ್‌ ಕೊಟ್ಟಿದ್ದೇವೆ. ಇನ್ಮುಂದೆ ಇಂಥ ಘಟನೆ ಮರುಕಳಿಸಿದಂತೆ ನೋಡಿಕೊಳ್ಳುತ್ತೇವೆ. ಪ್ರಕರಣ ನಮ್ಮ ಅರಿವಿಗೆ ಬಾರದೇ ನಡೆದಿದೆ ಎಂದು ಆರೋಗ್ಯ ಸಚಿವ ಸುಧಾಕರ್ ವರದಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಿಸಿ ಪಾಟೀಲ್‌ ಪ್ರಕರಣದ ಬಗ್ಗೆ ವರದಿಯನ್ನು ನೀಡುವಂತೆ ರಾಜ್ಯ ಆರೋಗ್ಯ ಇಲಾಖೆಗೆ ಸೂಚಿಸಿದ್ದರು.

    ಬಿಸಿ ಪಾಟೀಲ್ ಮತ್ತು ಅವರ ಪತ್ನಿ ವನಜಾ ಹಿರೆಕೆರೂರಿನ ತಮ್ಮ ಮನೆಯಲ್ಲಿಯೇ ವೈದ್ಯರನ್ನು ಕರೆಸಿ ಲಸಿಕೆ ಪಡೆದಿದ್ದರು. ಮನೆಯಲ್ಲೇ ಲಸಿಕೆ ಹಾಕಿಸಿಕೊಳ್ಳಲು ಕೊರೊನಾ ಲಸಿಕೆ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಈ ಕಾರಣಕ್ಕೆ ಬಿಸಿ ಪಾಟೀಲ್‌ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಕೇಂದ್ರ ಆರೋಗ್ಯ ಇಲಾಖೆ ಕಾರಣ ಕೇಳಿ ವರದಿ ನೀಡುವಂತೆ ಸೂಚಿಸಿತ್ತು.

  • ದೇಶದ ಎಲ್ಲರಿಗೂ ಲಸಿಕೆ ನೀಡ್ತೇವೆ ಅಂತ ಹೇಳೇ ಇಲ್ಲ – ಕೇಂದ್ರ ಸರ್ಕಾರ

    ದೇಶದ ಎಲ್ಲರಿಗೂ ಲಸಿಕೆ ನೀಡ್ತೇವೆ ಅಂತ ಹೇಳೇ ಇಲ್ಲ – ಕೇಂದ್ರ ಸರ್ಕಾರ

    ನವದೆಹಲಿ: ದೇಶದ ಎಲ್ಲ ಪ್ರಜೆಗಳಿಗೆ ಕೊರೊನಾ ಲಸಿಕೆ ನೀಡುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಐಸಿಎಂಆರ್‌ ನಿರ್ದೇಶಕ ಬಲರಾಮ್‌ ಭಾರ್ಗವ್‌ ಮತ್ತು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ದೇಶದಲ್ಲಿ ಎಲ್ಲ ಪ್ರಜೆಗಳಿಗೆ ಲಸಿಕೆ ನೀಡುವ ಬಗ್ಗೆ ಮಾತನಾಡಿಲ್ಲ. ಈ ವಿಚಾರದ ಬಗ್ಗೆ ವಾಸ್ತವ ಮಾಹಿತಿಗಳನ್ನಾಧರಿಸಿ ಚರ್ಚಿಸಬೇಕೇ ಹೊರತು ಒಟ್ಟಾರೆಯಾಗಿ ಮಾತನಾಡಬಾರದು ಎಂದು ಹೇಳಿದರು.

    ಇಡೀ ದೇಶಕ್ಕೆ ಲಸಿಕೆ ನೀಡುವ ಅಗತ್ಯವಿಲ್ಲ. ಕೊರೊನಾ ಹರಡುವ ಸರಣಿಯನ್ನು ಮುರಿಯಲು ನಿರ್ದಿಷ್ಟವಾದ ವರ್ಗದ ಜನರಿಗೆ ನೀಡಿದರೆ ಸಾಕಾಗುತ್ತದೆ. ಸಣ್ಣ ಸಂಖ್ಯೆಯ ಜನರಿಗೆ ನೀಡುವ ಮೂಲಕ ಲಸಿಕೆ ಹಂಚುವ ಕಾರ್ಯಕ್ರಮ ಆರಂಭಿಸುತ್ತೇವೆ. ಲಸಿಕೆ ಬಂದ ಮೇಲೂ ಮಾಸ್ಕ್‌ ಧರಿಸುವುದು ಮುಖ್ಯ ಎಂದು ತಿಳಿಸಿದರು.

    ವೈರಸ್ ಹರಡುವ ಸರಪಳಿ ಮುರಿಯುವುದು ನಮ್ಮ ಉದ್ದೇಶ. ಸೋಂಕು ಹರಡುವುದನ್ನು ತಡೆಯಲು ನಾವು ಯಶಸ್ವಿಯಾದರೆ ಎಲ್ಲರಿಗೂ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಬಲರಾಮ್‌ ಭಾರ್ಗವ್‌ ಹೇಳಿದರು.

    ಜಗತ್ತಿನ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಮಾಣ ಮತ್ತು ಸಾವಿನ ಪ್ರಮಾಣ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಕಾಯ್ದುಕೊಳ್ಳುವ ಮೂಲಕ ಸೋಂಕು ಮತ್ತಷ್ಟು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ವಿವರಿಸಿದರು.

    ಕೇಂದ್ರ ಸರ್ಕಾರ ಹೇಳಿದ್ದು ಏನು?
    ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಹಾರದಲ್ಲಿ ಬಿಜೆಪಿ ಗೆದ್ದರೆ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಹೇಳಿದ್ದರು. ಈ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿತ್ತು.

  • ಒಂದೇ ದಿನ 904 ಮಂದಿ ಕೊರೊನಾಗೆ ಬಲಿ – ಸೋಂಕಿತರ ಸಂಖ್ಯೆ 19.64 ಲಕ್ಷಕ್ಕೆ ಏರಿಕೆ

    ಒಂದೇ ದಿನ 904 ಮಂದಿ ಕೊರೊನಾಗೆ ಬಲಿ – ಸೋಂಕಿತರ ಸಂಖ್ಯೆ 19.64 ಲಕ್ಷಕ್ಕೆ ಏರಿಕೆ

    ನವದೆಹಲಿ: ದೇಶದಲ್ಲಿ ದಿನೇ ದಿನೇ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಬುಧವಾರ ಒಂದೇ ದಿನ ಬರೋಬ್ಬರಿ 904 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಕಳೆದ 24 ಗಂಟೆಯಲ್ಲಿ 56,282 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 19,64,537ಕ್ಕೆ ಏರಿಕೆಯಾಗಿದೆ. ಬುಧವಾರ ಒಂದೇ ದಿನ 904 ಮಂದಿ ಮಹಾಮಾರಿ ಕೊರೊನಾ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದ.

    ದೇಶದಲ್ಲಿ 19,64,537ಕ್ಕೆ ಪೈಕಿ 5,95,501 ಸಕ್ರಿಯ ಪ್ರಕರಣಗಳಿದ್ದು, 13,28,337 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದೂವರೆಗೂ 40,699 ಮಂದಿ ಹೆಮ್ಮಾರಿ ಕೊರೊನಾ ವೈರಸ್‍ಗೆ ಬಲಿಯಾಗಿದ್ದಾರೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.67ರಷ್ಟಿದೆ.

    ಕರ್ನಾಟದಲ್ಲಿ ಬುಧವಾರ 5,619 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ. ಅಲ್ಲದೇ ಕಳೆದ ದಿನ ಕೊರೊನಾಗೆ 100 ಜನರು ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 2,804ಕ್ಕೆ ಬಂದು ತಲುಪಿದೆ.

  • 24 ಗಂಟೆಯಲ್ಲಿ 57 ಸಾವಿರಕ್ಕೂ ಹೆಚ್ಚಿನ ಮಂದಿಗೆ ಕೊರೊನಾ – ದೇಶದಲ್ಲಿ 764 ಮಂದಿ ಬಲಿ

    24 ಗಂಟೆಯಲ್ಲಿ 57 ಸಾವಿರಕ್ಕೂ ಹೆಚ್ಚಿನ ಮಂದಿಗೆ ಕೊರೊನಾ – ದೇಶದಲ್ಲಿ 764 ಮಂದಿ ಬಲಿ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೀಗ ಕೋವಿಡ್ ಸೋಂಕಿತರ ಸಂಖ್ಯೆ 16.95 ಲಕ್ಷ ಸಮೀಪಿಸಿದೆ.

    ಕಳೆದ 24 ಗಂಟೆಯಲ್ಲಿ ದೇಶದಲ್ಲಿ 57,117 ಕೊರೊನಾ ಪ್ರಕರಣ ದಾಖಲಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 16,95,988ಕ್ಕೆ ಏರಿಕೆ ಆಗಿದೆ. ಇನ್ನೂ ಒಂದೇ ದಿನ 764 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

    16,95,988 ಸೋಂಕಿತ ಪೈಕಿ 5,65,103 ಸಕ್ರಿಯ ಪ್ರಕರಣಗಳಿದ್ದು, 10,94,374 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ ಇದುವರೆಗೂ ದೇಶದಲ್ಲಿ ಕೊರೊನಾದಿಂದ 36,511 ಮಂದಿ ಸಾವನ್ನಪ್ಪಿದ್ದಾರೆ.

    ಮಹಾರಾಷ್ಟ್ರದಲ್ಲಿ 9 ಸಾವಿರ ಪೊಲೀಸರಿಗೆ ಪಾಸಿಟಿವ್ ಆಗಿದ್ದು, 7 ಸಾವಿರ ಜನ ಚೇತರಿಸಿಕೊಂಡಿದ್ದಾರೆ. ಪ್ರಪಂಚದಲ್ಲಿ ಸೋಂಕಿತರ ಸಂಖ್ಯೆ 1.76 ಕೋಟಿಗೆ ತಲುಪಿದೆ. 6.77 ಲಕ್ಷ ಜನ ಬಲಿಯಾಗಿದ್ದಾರೆ. ಯುವ ಜನಾಂಗವೇ ಬಲಿಯಾಗುತ್ತಿರುವುದಕ್ಕೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

    ಇನ್ನೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ಅಮೆರಿಕ ಇದ್ದರೆ, ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. ಇನ್ನೂ ಭಾರತದ್ದು ಮೂರನೇ ಸ್ಥಾನದಲ್ಲಿದೆ.

  • ಇಂದು ಒಂದೇ ದಿನದಲ್ಲಿ 941 ಮಂದಿಗೆ ಸೋಂಕು, 37 ಜನರ ಸಾವು

    ಇಂದು ಒಂದೇ ದಿನದಲ್ಲಿ 941 ಮಂದಿಗೆ ಸೋಂಕು, 37 ಜನರ ಸಾವು

    – ಧಾರಾವಿಯಲ್ಲಿ 60 ವೈರಸ್ ಪೀಡಿತರು

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ತೀವ್ರತೆ ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್‍ನಲ್ಲಿ ಸೋಂಕಿನ ತೀವ್ರತೆ ಅಧಿಕವಾಗಿದೆ.

    ದೇಶದಲ್ಲಿ ಗುರುವಾರ ಒಂದೇ ದಿನದಲ್ಲಿ 941 ಮಂದಿಗೆ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 13 ಸಾವಿರ ದಾಟಿದೆ. ಇಂದು 37 ಮಂದಿ ಸಾವನ್ನಪ್ಪಿದ್ದು, ಕೊರೊನಾಗೆ ಬಲಿಯಾದವರ ಸಂಖ್ಯೆ 430 ದಾಟಿದೆ. ಮುಂಬೈನ ಧಾರಾವಿಯಲ್ಲಿ ಸೋಂಕು ಹರಡುತ್ತಿರುವ ವೇಗ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಇಂದು 11 ಮಂದಿಗೆ ಇಲ್ಲಿ ವೈರಸ್ ಹಬ್ಬಿದ್ದು, ಸೋಂಕಿತರ ಸಂಖ್ಯೆ 60 ದಾಟಿದೆ. 7 ಮಂದಿ ಕೇವಲ ಈ ಕೊಳಗೇರಿಯಲ್ಲಿಯೇ ಸಾವನ್ನಪ್ಪಿದ್ದಾರೆ.

    ಕೊರೊನಾದ ಮತ್ತೊಂದು ಡೇಂಜರ್ ಹಾಟ್‍ಸ್ಪಾಟ್ ಎಂದ್ರೆ ಮಧ್ಯಪ್ರದೇಶದ ಇಂದೋರ್. ಸೋಂಕು ತಗುಲಿದ 980 ಮಂದಿಯಲ್ಲಿ 550ಕ್ಕೂ ಹೆಚ್ಚು ಮಂದಿ ಇಂದೋರ್‌ಗೆ ಸೇರಿದವರಾಗಿದ್ದಾರೆ. ಇಲ್ಲಿ ಕೇವಲ ಬುಧವಾರ ಒಂದೇ ದಿನ 117 ಮಂದಿಗೆ ಸೋಂಕು ತಗುಲಿದೆ. ಮೃತ 53 ಮಂದಿ ಪೈಕಿ 37 ಮಂದಿ ಇದೇ ನಗರಕ್ಕೆ ಸೇರಿದವರಾಗಿದ್ದಾರೆ.

    ದೇಶದಲ್ಲಿ ಕೊರೊನಾ ಸಾವುಗಳು ಶೇಕಡಾ 3ರಷ್ಟಿದೆ. ಆದರೆ ಇಂದೋರ್ ನಲ್ಲಿ ಮಾತ್ರ ಡಬಲ್ ಇರುವುದು ಆತಂಕ ಮೂಡಿಸಿದೆ. ಕೇರಳದಲ್ಲಿ ಮಾತ್ರ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. ಚೀನಾದಿಂದ ಭಾರತಕ್ಕೆ 6.5 ಲಕ್ಷ ಮೆಡಿಕಲ್ ಕಿಟ್, ವೈದ್ಯಕೀಯ ಸಾಮಾಗ್ರಿಯನ್ನು ಹೊತ್ತ ವಿಮಾನ ಬೀಜಿಂಗ್‍ನಿಂದ ದೆಹಲಿಗೆ ಹೊರಟಿದೆ. ಆದರೆ ಕಳೆದ ವಾರ ಭಾರತಕ್ಕೆ ಚೀನಾ ಕಳಿಸಿದ್ದ 1.70 ಲಕ್ಷ ಪಿಪಿಇ ಕಿಟ್‍ಗಳ ಪೈಕಿ ಶೇಕಡಾ 30ರಷ್ಟು ಕೆಲಸವೇ ಮಾಡುತ್ತಿಲ್ಲ. ಕಳಪೆಯಾಗಿವೆ ಎನ್ನಲಾಗಿದೆ. ಈ ಮಧ್ಯೆ, ಏಪ್ರಿಲ್ 20ರಿಂದ ಆನ್‍ಲೈನ್ ಶಾಪಿಂಗ್‍ಗೆ ಅವಕಾಶ ನೀಡಲಾಗಿದೆ.

    ಜಗತ್ತಿನಲ್ಲಿ ಕೊರೊನಾ:
    ವಿಶ್ವಾದ್ಯಂತ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 21 ಲಕ್ಷ ದಾಟಿದೆ. 1.36 ಲಕ್ಷ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ ಕೊರೊನಾಗೆ ಬುಧವಾರ ಒಂದೇ ದಿನ 2,500ಕ್ಕೂ ಹೆಚ್ಚು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 29 ಸಾವಿರ ದಾಟಿದೆ. ಸ್ಪೇನ್‍ನಲ್ಲಿ ಮೃತರ ಸಂಖ್ಯೆ 20 ಸಾವಿರ ಸಮೀಪಿಸಿದೆ. ಇಟಲಿಯಲ್ಲಿ 22 ಸಾವಿರ ಮಂದಿ, ಫ್ರಾನ್ಸ್ ನಲ್ಲಿ 17 ಸಾವಿರ ಮಂದಿ, ಬ್ರಿಟನ್‍ನಲ್ಲಿ 13 ಸಾವಿರ ಮಂದಿ ಬಲಿಯಾಗಿದ್ದಾರೆ.

    ಇಟಲಿಯಲ್ಲಿ ಸಾವುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಚೀನಾದಲ್ಲಿ ಕೊರೊನಾಗಾಗಿಯೇ ನಿರ್ಮಿಸಲಾಗಿದ್ದ ಸಾವಿರ ಹಾಸಿಗೆಗಳ ಆಸ್ಪತ್ರೆ ಮುಚ್ಚಲಾಗಿದೆ. ಕೊರೊನಾದಿಂದ ಅತೀ ಹಿರಿಯ ಅಜ್ಜಿಯೊಬ್ಬರು ಚೇತರಿಸಿಕೊಂಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ 106 ವರ್ಷದ ವೃದ್ಧೆ ಬರ್ಮಿಂಗ್ ಹ್ಯಾಮ್ ಆಸ್ಪತ್ರೆಯಿಂದ 3 ವಾರದ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ.

  • ಲಾಕ್‍ಡೌನ್ ಹೇರದಿದ್ರೆ 2 ಲಕ್ಷ ಜನರಿಗೆ ಸೋಂಕು ತಗುಲುತ್ತಿತ್ತು – ಕೇಂದ್ರ ಸರ್ಕಾರ

    ಲಾಕ್‍ಡೌನ್ ಹೇರದಿದ್ರೆ 2 ಲಕ್ಷ ಜನರಿಗೆ ಸೋಂಕು ತಗುಲುತ್ತಿತ್ತು – ಕೇಂದ್ರ ಸರ್ಕಾರ

    – 24 ಗಂಟೆಗಳಲ್ಲಿ 1,035 ಜನರಿಗೆ ಕೊರೊನಾ, 40 ಸಾವು

    ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,035 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 40 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 239 ಜನ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7,447ಕ್ಕೆ ಏರಿದೆ. ಜೊತೆಗೆ 642 ಜನರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

    ದೆಹಲಿಯಲ್ಲಿ ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಭಾರತದ ಪೂರ್ವಭಾವಿ ತಯಾರಿ ನಡೆಸಿತ್ತು. ನಾವು ಶ್ರೇಣೀಕೃತ ವಿಧಾನವನ್ನು ಅನುಸರಿಸಿದ್ದೇವೆ. ಪರಿಣಾಮ ದೇಶದಲ್ಲಿ ಕೋವಿಡ್-19 ಮೀಸಲಾದ 586 ಆಸ್ಪತ್ರೆಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಆರೋಗ್ಯಕರ ಭಾರತಕ್ಕಾಗಿ ಲಾಕ್‍ಡೌನ್ ವಿಸ್ತರಣೆ ಅನಿವಾರ್ಯ: ಮೋದಿ

    ಕೊರೊನಾ ವಿರುದ್ಧ ಹೋರಾಡಲು ಲಾಕ್‍ಡೌನ್ ಮತ್ತು ಪೂರಕ ಕ್ರಮಗಳು ಬಹು ಮುಖ್ಯ ಪಾತ್ರವಹಿಸಿದವು. ನಾವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಈ ಸಮಯದಲ್ಲಿ 2 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಇತ್ತು ಎಂದು ಅಗರ್ವಾಲ್ ತಿಳಿಸಿದರು. ಇದನ್ನೂ ಓದಿ: ಲಾಕ್‍ಡೌನ್ ಪಾಲಿಸದಿದ್ರೆ ಸೀಲ್‍ಡೌನ್: ಸಿಎಂ ಎಚ್ಚರಿಕೆ

    ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಮಾತನಾಡಿ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಆಸ್ಪತ್ರೆಗಳಲ್ಲಿ ಅಥವಾ ಕೆಲಸ ಮಾಡುತ್ತಿರುವ ಸ್ಥಳಗಳಲ್ಲಿ ಪೊಲೀಸ್ ಭದ್ರತೆ ಒದಗಿಸುವಂತೆ ಗೃಹ ಸಚಿವಾಲಯ ಇಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ಜೊತೆಗೆ ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿರುವಂತೆ ಸೂಚಿಸಿದೆ ಎಂದು ಹೇಳಿದರು.

    https://twitter.com/ANI/status/1248926314922487810

    ಐಸಿಎಂಆರ್ ಹಿರಿಯ ಅಧಿಕಾರಿ ಆರ್ ಗಂಗಖೇಡ್ಕರ್ ಮಾತನಾಡಿ, ಈಗ ನೀಡಿರುವ ಅವಧಿ ಸಾಕಾಗದಿದ್ದರೆ, ಒಂದು ವೇಳೆ ಒತ್ತಡ ಹೇರಿದರೆ ಔಷಧಿಯನ್ನು ಕಂಡು ಹಿಡಿಯುವುದು ತಪ್ಪಾಗಬಹುದು. ಮಲೇರಿಯಾಗೆ ನೀಡಲಾಗುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯು ರೋಗನಿರೋಧಕತೆಯಂತೆ ಕೆಲಸ ಮಾಡುತ್ತದೆ. ಕೋವಿಡ್-19 ರೋಗಿಗೆ ಔಷಧಿ ಬಳಸುವ ಮುನ್ನ ಪ್ರಯೋಗ ಮಾಡಬೇಕಾಗುತ್ತದೆ. ಅಲ್ಲಿಯವರೆಗೂ ನಾವು ಯಾವುದೇ ಔಷಧಿಯನ್ನು ಸಾರ್ವಜನಿಕರಿಗೆ ಶಿಫಾರಸು ಮಾಡುವುದಿಲ್ಲ ಎಂದು ತಿಳಿಸಿದರು.

  • 24 ಗಂಟೆಗಳಲ್ಲಿ 549 ಮಂದಿಗೆ ಸೋಂಕು, 17 ಜನ ಸಾವು

    24 ಗಂಟೆಗಳಲ್ಲಿ 549 ಮಂದಿಗೆ ಸೋಂಕು, 17 ಜನ ಸಾವು

    – ಪಿಪಿಇ ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ

    ನವದೆಹಲಿ: ಕೋವಿಡ್-19 ಚಿಕಿತ್ಸೆ ನೀಡಲು ಅಗತ್ಯವಿರುವ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಲಭ್ಯತೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಆದರೆ ಇವುಗಳನ್ನು ಸರಿಯಾಗಿ ಬಳಸಬೇಕು ಎಂದು ಒತ್ತಿ ಹೇಳಿದೆ.

    ದೆಹಲಿಯಲ್ಲಿ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗ್ರವಾಲ್, ಕಳೆದ 24 ಗಂಟೆಗಳಲ್ಲಿ 549 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ 17 ಜನರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 166ಕ್ಕೆ ಏರಿಕೆ ಕಂಡಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 5734 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 473 ಜನರು ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿಸಿದರು.

    ಹರ್ಯಾಣದ ಕರ್ನಾಲ್‍ನಲ್ಲಿ ‘ಅಡಾಪ್ಟ್ ಎ ಫ್ಯಾಮಿಲಿ’ ಅಭಿಯಾನದಡಿ 13,000 ನಿರ್ಗತಿಕ ಕುಟುಂಬಗಳಿಗೆ 64 ಲಕ್ಷ ರೂ.ಗಳ ಸಹಾಯ ನೀಡಲಾಗುತ್ತಿದೆ. ಪಿಪಿಇ (ವೈಯಕ್ತಿಕ ರಕ್ಷಣಾ ಸಲಕರಣೆ), ಮಾಸ್ಕ್ ಮತ್ತು ವೆಂಟಿಲೇಟರ್ ಗಳ ಸರಬರಾಜು ಈಗ ಪ್ರಾರಂಭವಾಗಿದೆ. ಭಾರತದಲ್ಲಿ 20 ದೇಶೀಯ ತಯಾರಕರನ್ನು ಪಿಪಿಇಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ. 1.7 ಕೋಟಿ ಪಿಪಿಇಗಳಿಗೆ ಆದೇಶಗಳನ್ನು ನೀಡಲಾಗಿದೆ ಮತ್ತು ಸರಬರಾಜು ಪ್ರಾರಂಭವಾಗಿದೆ. 49,000 ವೆಂಟಿಲೇಟರ್ ಗಳಿಗೆ ಆದೇಶಿಸಲಾಗಿದೆ ಎಂದು ತಿಳಿಸಿದರು.

    ರೈಲ್ವೆ ಇಲಾಖೆ 2,500ಕ್ಕೂ ಹೆಚ್ಚು ವೈದ್ಯರನ್ನು ಮತ್ತು 35,000 ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಿದೆ. ಅವರ 586 ಆರೋಗ್ಯ ಘಟಕಗಳು, 45 ಉಪ ವಿಭಾಗೀಯ ಆಸ್ಪತ್ರೆಗಳು, 56 ವಿಭಾಗೀಯ ಆಸ್ಪತ್ರೆಗಳು, 8 ಉತ್ಪಾದನಾ ಘಟಕ ಆಸ್ಪತ್ರೆಗಳು ಮತ್ತು 16 ವಲಯ ಆಸ್ಪತ್ರೆಗಳು ತಮ್ಮ ಮಹತ್ವದ ಸೌಲಭ್ಯಗಳೊಂದಿಗೆ ಕೋವಿಡ್-19 ವಿರುದ್ಧ ಹೋರಾಡಲು ಸಿದ್ಧವಾಗಿದೆ ಎಂದು ಲಾವ್ ಅಗರ್‍ವಾಲ್ ಮಾಹಿತಿ ನೀಡಿದ್ದಾರೆ.

    80,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ 5,000 ಬೋಗಿಗಳನ್ನು ಪ್ರತ್ಯೇಕ ಘಟಕಗಳಾಗಿ ಪರಿವರ್ತಿಸುತ್ತಿದೆ. ಅದರಲ್ಲಿ 3,250 ಅನ್ನು ಬೆಡ್‍ಗಳಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

    ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಅಧಿಕಾರಿ ಮಾತನಾಡಿ, ಈವರೆಗೆ 1,30,000 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 5,734 ಮಾದರಿಗಳಲ್ಲಿ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತರ ಸಂಖ್ಯೆ ಕಳೆದ 1ರಿಂದ 1.5 ತಿಂಗಳುಗಳಲ್ಲಿ ಶೇ.3ರಿಂದ 5ರ ನಡುವೆ ಇದೆ. ಇದು ಗಣನೀಯವಾಗಿ ಹೆಚ್ಚಿಲ್ಲ ಎಂದು ತಿಳಿಸುತ್ತದೆ. ಬುಧವಾರ ನಾವು 13,143 ಮಾದರಿಗಳನ್ನು ಪರೀಕ್ಷಿಸಿದ್ದೇವೆ ಎಂದು ತಿಳಿಸಿದರು.