ನವದೆಹಲಿ: ಭಾರತದ ಆರೋಗ್ಯ ಸಚಿವಾಲಯವು ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮತ್ತು ಬಿಸಿಸಿಐ (BCCI) ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್ ಪಂದ್ಯಗಳ ನೇರ ಪ್ರಸಾರದಲ್ಲಿ ತಂಬಾಕು ಮತ್ತು ಮದ್ಯದ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚನೆ ನೀಡಿದೆ.
ಕ್ರೀಡಾಂಗಣಗಳಲ್ಲಿನ ಬದಲಿ ಜಾಹೀರಾತುಗಳು, ರಾಷ್ಟ್ರೀಯ ದೂರದರ್ಶನ, ಕಾರ್ಯಕ್ರಮಗಳಲ್ಲಿನ ಉತ್ಪನ್ನಗಳು ಮತ್ತು ಕ್ರೀಡಾಪಟುಗಳು ಉತ್ಪನ್ನಗಳನ್ನು ಅನುಮೋದಿಸುವುದು ಸೇರಿದಂತೆ ಎಲ್ಲಾ ರೀತಿಯ ಜಾಹೀರಾತುಗಳನ್ನು ನಿಷೇಧಿಸಲು ಐಪಿಎಲ್ ಅನ್ನು ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲು ಆರೋಗ್ಯ ಇಲಾಖೆ ಒತ್ತಾಯಿಸಲಾಗಿದೆ.
ಭಾರತವು ಹೃದಯ ಕಾಯಿಲೆ, ಕ್ಯಾನ್ಸರ್, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಮತ್ತು ಯಕೃತ್ತಿನ ಸೋಂಕುಗಳು, ಕ್ಯಾನ್ಸರ್ ಮತ್ತು ಶ್ವಾಸಕೋಶದ ಕಾಯಿಲೆಗಳಂತಹ ವಿವಿಧ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚುತ್ತಿರುವ ಹೊರೆಯನ್ನು ಎದುರಿಸುತ್ತಿದೆ. ಭಾರತವು ಸಾಂಕ್ರಾಮಿಕವಲ್ಲದ ಕಾಯಿಲೆಗಳಾದ ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿಗಳಿಂದ ಗಣನೀಯ ಹೊರೆಯನ್ನು ಅನುಭವಿಸುತ್ತಿದೆ. ಇವು ವಾರ್ಷಿಕವಾಗಿ 70% ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗಿವೆ. ಇದನ್ನೂ ಓದಿ: ಹೆಣ್ಣನ್ನ ದೂಷಿಸುವುದು ಫ್ಯಾಷನ್ ಆಗಿದೆ – ಬ್ಯೂಟಿ ಜೊತೆ ಚಹಲ್ ಡೇಟಿಂಗ್ ವಂದತಿ ಬೆನ್ನಲ್ಲೇ ಧನಶ್ರೀ ರಿಯಾಕ್ಷನ್
ತಂಬಾಕು ಮತ್ತು ಮದ್ಯ ಸೇವನೆಯು ಅಪಾಯಕಾರಿ ಅಂಶಗಳಾಗಿವೆ. ತಂಬಾಕು ಸಂಬಂಧಿತ ಸಾವುಗಳಲ್ಲಿ ವಿಶ್ವಾದ್ಯಂತ ನಾವು ಎರಡನೇ ಸ್ಥಾನ ಪಡೆದಿದ್ದೇವೆ, ಸುಮಾರು 14 ಲಕ್ಷ ವಾರ್ಷಿಕ ಸಾವುಗಳು ಸಂಭವಿಸಿವೆ, ಆದರೆ ಮದ್ಯವು ಭಾರತೀಯರು ಬಳಸುವ ಅತ್ಯಂತ ಸಾಮಾನ್ಯವಾದ ಮನೋ-ಕ್ರಿಯಾತ್ಮಕ ವಸ್ತುವಾಗಿದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಅತುಲ್ ಗೋಯೆಲ್ ಐಪಿಎಲ್ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ರೋಗಗಳಲ್ಲಿ ಹೆಚ್ಚಿನವು ಧೂಮಪಾನ ಮತ್ತು ಅತಿಯಾದ ಮದ್ಯಪಾನ ಸೇರಿದಂತೆ ಜೀವನಶೈಲಿಯ ಆಯ್ಕೆಗಳೊಂದಿಗೆ ಸಂಬಂಧ ಹೊಂದಿವೆ. ಈ ಜೀವನಶೈಲಿಯ ಅಭ್ಯಾಸಗಳು ದೀರ್ಘಾವಧಿಯಲ್ಲಿ ವಿನಾಶಕಾರಿ ಫಲಿತಾಂಶಗಳನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ, ತಂಬಾಕು ಮತ್ತು ಸಿಗರೇಟ್‌ಗಳ ಮೇಲಿನ ನಿಷೇಧವು ಸಾಂಕ್ರಾಮಿಕವಲ್ಲದ ರೋಗಗಳ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ದೇಶದ ಮೇಲಿನ ಆರೋಗ್ಯ ರಕ್ಷಣಾ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಗುಜರಾತ್ | 5 ವರ್ಷದ ಬಾಲಕಿಯ ನರಬಲಿ – ದೇವಾಲಯದ ಮೆಟ್ಟಿಲುಗಳ ಮೇಲೆ ರಕ್ತ ಅರ್ಪಿಸಿದ ಪಾಪಿ!
ದೇಶದಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳಷ್ಟೇ ಪ್ರತಿ ವರ್ಷವೂ ಹೆಚ್ಚು ಸಾವಿಗೆ ಕಾರಣವಾಗುತ್ತಿರುವುದು ಹಾವು ಕಡಿತ. ಗ್ರಾಮೀಣ ಪ್ರದೇಶದ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದರು. ಆದ್ರೆ ಇದರ ಬಗ್ಗೆ ಸರ್ಕಾರ ಅಷ್ಟಾಗಿ ಕ್ರಮ ವಹಿಸುತ್ತಿರಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 81,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಂತೆ ಇದರ ಮೂರರಷ್ಟು ಮಂದಿ ಅಂಗಾಗ ವೈಫಲ್ಯಗಳೂ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದೆಲ್ಲದಕ್ಕೂ ಮುಕ್ತಿ ಕೊಡಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಿದೆ.
ಇತ್ತೀಚೆಗಷ್ಟೇ ಹಾವು ಕಡಿತ ಪ್ರಕರಣಗಳನ್ನು ಕೇಂದ್ರ ಸರ್ಕಾರ ಅಧಿಸೂಚಿತ ಕಾಯಿಲೆ ಎಂದು ಘೋಷಿಸಿದ ಬಳಿಕ ರಾಜ್ಯಗಳು ಇದನ್ನು ಸಮರ್ಪಕವಾಗಿ ಜಾರಿಗೆ ತರುವಂತೆ ಸೂಚನೆ ನೀಡಿದೆ. 2030ರ ವೇಳೆಗೆ ಸಾವು ಪ್ರಕರಣಗಳನ್ನು ಶೇ.50 ರಷ್ಟು ಕಡಿಮೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಅದಕ್ಕಾಗಿ ಹಾವು ಕಡಿತವನ್ನು ಅಧಿಸೂಚಿತ ರೋಗಗಳಾಗಿ ಘೋಷಿಸಿ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಹಾವು ಕಡಿತವನ್ನು ವರದಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಹಾವು ಕಡಿತ ಪ್ರಕರಣಗಳ ವರದಿಯನ್ನು ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ. ಈ ವರ್ಷ 9 ತಿಂಗಳ ಅವಧಿಯಲ್ಲಿಯೇ 9,529 ಹಾವು ಕಡಿತ ಪ್ರಕರಣಗಳು ವರದಿಯಾದರೆ, ಕಡಿತದಿಂದ 69 ಮಂದಿ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಹಾವು ಕಡಿತಕ್ಕೆ ಒಳಗಾದವರ ಹಾಗೂ ಈ ಕಡಿತದಿಂದ ಮೃತಪಟ್ಟವರ ಸಮಗ್ರ ಮಾಹಿತಿ ದೊರೆಯದೇ ಇದ್ದುದರಿಂದಾಗಿ ಆರೋಗ್ಯ ಇಲಾಖೆಯು ಫೆಬ್ರವರಿಯಲ್ಲಿ ಹಾವು ಕಡಿತವನ್ನು ಘೋಷಿತ ಕಾಯಿಲೆಯೆಂದು ಗುರುತಿಸಿತ್ತು. ಇದರಿಂದಾಗಿ ಹಾವು ಕಡಿತಕ್ಕೆ ಒಳಗಾಗಿ ಒಳರೋಗಿ ಹಾಗೂ ಹೊರರೋಗಿಗಳಾಗಿ ಆಸ್ಪತ್ರೆಗೆ ಭೇಟಿ ನೀಡಿದವರು, ಮರಣ ಹೊಂದಿದವರ ವಿವರವನ್ನು ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಕಡ್ಡಾಯವಾಗಿ ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿ ವೇದಿಕೆಯಡಿ ದಾಖಲಿಸುತ್ತಿವೆ. ಈ ಕ್ರಮವನ್ನು ಇನ್ನಷ್ಟು ಸಮರ್ಪಕವಾಗಿ ಜಾರಿಗೆ ತರಲು ಸೂಚಿಸಿದೆ.
ಹಾವು ಕಡಿತವನ್ನು ಘೋಷಿತ ಕಾಯಿಲೆಯೆಂದು ಗುರುತಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಈ ಕ್ರಮದಿಂದ ಹಾವು ಕಡಿತ ಪ್ರಕರಣಗಳ ಮೇಲೆ ನಿಗಾ ಮತ್ತು ನಿರ್ವಹಣೆ ಇಲಾಖೆಗೆ ಸಾಧ್ಯವಾಗಿದ್ದು, ಮಾರ್ಚ್ ಬಳಿಕ ಅಧಿಕ ಸಂಖ್ಯೆಯಲ್ಲಿ ಹಾವು ಕಡಿತ ಹಾಗೂ ಮರಣ ಪ್ರಕರಣಗಳು ವರದಿಯಾಗುತ್ತಿವೆ. 2022ರಲ್ಲಿ ರಾಜ್ಯದಲ್ಲಿ 3,425 ಹಾವು ಕಡಿತ ಪ್ರಕರಣಗಳು ವರದಿಯಾದರೆ, 17 ಮಂದಿ ಕಡಿತದಿಂದ ಮೃತಪಟ್ಟಿದ್ದರು. ಕಳೆದ ವರ್ಷ 6,596 ಪ್ರಕರಣಗಳು ವರದಿಯಾಗಿವೆ. ಕಡಿತಕ್ಕೆ ಒಳಗಾದವರಲ್ಲಿ 19 ಮಂದಿ ಮೃತಪಟ್ಟಿದ್ದರು. ಕೃಷಿ ಕೆಲಸದಲ್ಲಿ ತೊಡಗಿರುವಾಗ ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯಿಂದ 1 ಲಕ್ಷ ಪರಿಹಾರ ನೀಡುವ ಯೋಜನೆ ಜಾರಿಯಲ್ಲಿದೆ. ಇತರರಿಗೂ ಪರಿಹಾರ ಒದಗಿಸುವ ಬಗ್ಗೆ ಆರೋಗ್ಯ ಇಲಾಖೆಯಿಂದ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ.
ಹಾವು ಕಡಿತವನ್ನು ಏಕೆ ʻಅಧಿಸೂಚಿತ ಕಾಯಿಲೆʼ ಎಂದು ಪರಿಗಣಿಸಲಾಗುತ್ತದೆ? ಹಾವು ಕಡಿತಕ್ಕೆ ತಕ್ಷಣದ ಹಾರೈಕೆ ಅಗತ್ಯವಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ ರಕ್ತಸ್ರಾವ, ಪಾರ್ಶ್ವವಾಯು, ಅಂಗಾಗ ವೈಫಲ್ಯ ಮಾತ್ರವಲ್ಲದೇ ಸಾವೂ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿಯೇ ಇರುತ್ತದೆ. ಸಾವು ಮತ್ತು ತೀವ್ರತರವಾದ ಅಪಾಯಗಳಿಂದ ರಕ್ಷಣೆ ಮಾಡಲು ಆಂಟಿ ವೆನಮ್ ಬಳಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಅದಕ್ಕಾಗಿ ಹಾವು ಕಡಿತವನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಿಸಲಾಗಿದೆ.
ಭಾರತದಲ್ಲಿ 310ಕ್ಕೂ ಹೆಚ್ಚು ಜಾತಿಯ ಹಾವುಗಳಿದ್ದು, ಅವುಗಳಲ್ಲಿ 66 ವಿಷಕಾರಿ ಮತ್ತು 42 ಸೌಮ್ಯ ವಿಷಕಾರಿ, 23 ಪ್ರಭೇದದ ಹಾವುಗಳು ವಿಷಕಾರಿ ಎಂದು ಗುರುತಿಸಲಾಗಿದೆ. ಅದರಲ್ಲೂ ದೇಶದಲ್ಲಿ ನಾಗರಹಾವು, ಸಾಮಾನ್ಯ ಕ್ರೈಟ್, ರಸೆಲ್ಸ್ ವೈಪರ್ ಮತ್ತು ಗರಗಸ-ಸ್ಕೇಲ್ಡ್ ವೈಪರ್ ಹಾವುಗಳನ್ನು ಹೆಚ್ಚು ಅಪಾಯಕಾರಿ ಹಾವುಗಳೆಂದು ಗುರುತಿಸಲಾಗಿದೆ. ಸದ್ಯ ವಾಣಿಜ್ಯವಾಗಿ ಲಭ್ಯವಿರುವ ಆಂಟಿ ವೆನಮ್, ಶೇ.80 ರಷ್ಟು ಹಾವು ಕಡಿತದಿಂದ ಮರಣ ಪ್ರಮಾಣವನ್ನು ತಪ್ಪಿಸುತ್ತದೆ ಎಂದು ವರದಿಗಳು ಹೇಳಿವೆ.
ಚಿಕಿತ್ಸಾ ವ್ಯವಸ್ಥೆ ಹೇಗೆ?
ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಹಾವಿನ ನಂಜಿನ ಲಕ್ಷಣಗಳು ವ್ಯಕ್ತಿಗೆ ಕಂಡುಬಂದಲ್ಲಿ ತಕ್ಷಣ ರೋಗಿಯ ಅಥವಾ ಸಂಬಂಧಿಕರ ಒಪ್ಪಿಗೆ ಪತ್ರ ಪಡೆದು, ‘ಆ್ಯಂಟಿ ಸ್ನೇಕ್ ವೆನಮ್’ ಒದಗಿಸಲಾಗುತ್ತಿದೆ. 2030ರ ವೇಳೆಗೆ ಹಾವು ಕಡಿತ ಪ್ರಕರಣ ಹಾಗೂ ಮರಣವನ್ನು ಅರ್ಧದಷ್ಟು ಇಳಿಸುವ ಗುರಿಯನ್ನು ಇಲಾಖೆ ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಹಾವು ಕಡಿತಕ್ಕೆ ಒಳಗಾದವರಿಗೆ ಅಂಬುಲೆನ್ಸ್ ಸೇವೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ʻಕೃಷಿ ಕೆಲಸ ಸೇರಿ ವಿವಿಧ ಸಂದರ್ಭದಲ್ಲಿ ಹಾವು ಕಡಿತಕ್ಕೆ ಒಳಗಾದವರು ಚಿಕಿತ್ಸೆ ಪಡೆಯುವುದು ವಿಳಂಬವಾದಲ್ಲಿ ಜೀವಕ್ಕೆ ತೊಂದರೆಯಾಗುತ್ತದೆ. ಘೋಷಿತ ರೋಗವೆಂದು ಗುರುತಿಸಿದ್ದರಿಂದ ಹಾವು ಕಡಿತದಿಂದ ಉಂಟಾಗುತ್ತಿದ್ದ ಪ್ರಾಣ ಹಾನಿ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಒಂದು ವೇಳೆ ಹಾವು ಕಡಿತದಿಂದ ವ್ಯಕ್ತಿ ಮರಣ ಹೊಂದಿದಲ್ಲಿ ‘ಸಾವಿನ ಲೆಕ್ಕಗಳ ವರದಿ’ (ಡೆತ್ ಆಡಿಟ್) ಮಾಡಿಸಲಾಗುತ್ತಿದೆ. ಇದರಿಂದಾಗಿ ಹಾವು ಕಡಿತದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿದೆ’ ಎಂದು ಇಲಾಖೆ ತಿಳಿಸಿದೆ.
ಹಾವು ಕಡಿತವನ್ನು ಏಕೆ ವರದಿ ಮಾಡಬೇಕು?
ಹಾವು ಕಡಿತ ಪ್ರಕರಣಗಳನ್ನು ವರದಿ ಮಾಡುವುದರಿಂದ ನಿಖರ ಸಂಖ್ಯೆ ನಿರ್ಧರಿಸಲು, ಪ್ರಕರಣವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹಾಗೂ ಸರ್ಕಾರಕ್ಕೆ ಮಾಹಿತಿ ನೆರವು ಪಡೆಯಲು ಅನುಕೂಲವಾಗುತ್ತದೆ. ಇದರಿಂದ ಯಾವ ಪ್ರದೇಶಗಳಲ್ಲಿ ಹಾವು ಕಡಿತ ಹೆಚ್ಚಾಗುತ್ತದೆ ಎಂಬುದನ್ನು ಕಂಡುಕೊಂಡು ʻಆಂಟಿ ವೆನಮ್ʼ ಒದಗಿಸಲು ಸಹಾಯಕವಾಗುತ್ತದೆ.
ಕರ್ನಾಟಕದಲ್ಲಿ ಹಾವು ಕಡಿತ ಪ್ರಕರಣಗಳು
2022 – 17
2023 – 19
2024 – 69
ಕರ್ನಾಟಕದಲ್ಲಿ ಹಾವು ಕಡಿತದಿಂದ ಆದ ಸಾವುಗಳು
2022 – 3,425
2023 – 6,596
2024 – 9,529
ಭಾರತದಲ್ಲಿ ಆಂಟಿ ಸ್ನೇಕ್ ವೆನಮ್ (ವಿಷ ನಿರೋಧಕ) ಅನ್ನು ಪ್ರಮುಖ ನಾಲ್ಕು ಜಾತಿಯ ಹಾವುಗಳ ಕಡಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ದೇಶದಲ್ಲಿ ಒಟ್ಟು 290ಕ್ಕೂ ಹೆಚ್ಚು ಹಾವಿನ ಪ್ರಭೇದಗಳಿದ್ದು, ಅವುಗಳಲ್ಲಿ ಸಮಾರು 40 ವಿಷಪೂರಿತ ಹಾವುಗಳಿವೆ. ಆದರೆ, ಆಂಟಿ ಸ್ನೇಕ್ ವೆನಮ್ ತಯಾರಿಸುವಾಗ ಪ್ರಮುಖ ನಾಲ್ಕು ಹಾವುಗಳ ವಿಷವನ್ನು ಮಾತ್ರ ಬಳಸಲಾಗುತ್ತಿದೆ. ಈಶಾನ್ಯ ರಾಜ್ಯಗಳೂ ಸೇರಿದಂತೆ ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಹಾವು ಪ್ರಭೇದ ಇವೆ. ಈ ನಾಲ್ಕು ಜಾತಿಗೆ ಸೇರದ ಹಾವುಗಳಿಂದ ಕಡಿತಕ್ಕೊಳಗಾದವರಿಗೆ ಈಗ ಬಳಸುತ್ತಿರುವ ಆ್ಯಂಟಿ ಸ್ನೇಕ್ ವೆನಮ್ ಅಷ್ಟು ಉಪಯುಕ್ತವಾಗುವುದಿಲ್ಲ. ಭಾರತದಂಥ ವಿಸ್ತಾರವಾದ, ವೈವಿಧ್ಯಮಯ ದೇಶದಲ್ಲಿ ಇಲ್ಲಿನ ಪ್ರಾದೇಶಿಕ ಭಿನ್ನತೆ, ಹಾವುಗಳ ವೈವಿಧ್ಯಕ್ಕೆ ತಕ್ಕಂತೆ ಆಂಟಿ ಸ್ನೇಕ್ ವೆನಮ್ ತಯಾರಿಸುವ ದಿಸೆಯಲ್ಲಿ ಅಧ್ಯಯನಗಳು ನಡೆಯಬೇಕಿದೆ ಎನ್ನುವುದು ತಜ್ಞರ ನಿಲುವು. ಹಾವುಗಳ ವಿಷದ ಸಾಮರ್ಥ್ಯವು ಅವುಗಳ ವಯಸ್ಸಿನೊಂದಿಗೆ ಮತ್ತು ವಾತಾವರಣಕ್ಕೆ ತಕ್ಕಂತೆ ಬದಲಾಗಿರುತ್ತದೆ ಎಂದು 2020ರಲ್ಲಿ ಪ್ರಕಟವಾದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಹೇಳಿದೆ.
ಕೇರಳದಲ್ಲಿ ʻಸರ್ಪ’ ಸಾಧನೆ
2019ರಲ್ಲಿ ಕೇರಳದ ವಯನಾಡ್‌ನಲ್ಲಿ 5ನೇ ತರಗತಿಯ ಬಾಲಕಿಯೊಬ್ಬಳಿಗೆ ಶಾಲಾ ಕೊಠಡಿಯಲ್ಲಿಯೇ ಹಾವು ಕಚ್ಚಿ, ಆಕೆ ಮೃತಪಟ್ಟಿದ್ದಳು. 2019ರಲ್ಲಿ ರಾಜ್ಯದಲ್ಲಿ ಹಾವು ಕಚ್ಚಿ 130 ಮಂದಿ ಮೃತಪಟ್ಟಿದ್ದರು. 2030ರಲ್ಲಿ ಉತ್ತರಾ ಎನ್ನುವ ಮಹಿಳೆಗೆ ನಿದ್ರೆ ಮಾತ್ರ ನೀಡಿ, ಬೆಡ್ ರೂಮ್ ನಲ್ಲಿ ಮಲಗಿದ್ದಾಗ ಅವರ ಮೇಲೆ ಗಂಡನೇ ನಾಗರ ಹಾವನ್ನು ಎಸೆದಿದ್ದ ಹಾವು ಕಚ್ಚಿ ಉತ್ತರಾ ಅವರು ಮೃತಪಟ್ಟರು. ಆ ವರ್ಷ (2020) ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 80. ಈ ಎರಡು ಪ್ರಕರಣಗಳು ಹಾವು ಕಡಿತದ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರವನ್ನು ಪ್ರೇರೇಪಿಸಿತು.
ಇನ್ನೂ 2023ರಲ್ಲಿ ಕೇರಳದಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 40. 2024ರ ಆರಂಭದ ತಿಂಗಳಲ್ಲಿ ಹಾವು ಕಚ್ಚಿ ಸತ್ತವರ ಸಂಖ್ಯೆ 7. ಕೇರಳ ಕ್ರಮೇಣ ಹಾವು ಕಡಿತದ ಶೂನ್ಯ ಸಾವಿನ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ಕೇರಳದ ಈ ಸಾಧನೆಗೆ ಕಾರಣ, ಹಾವಿನ ಬಗ್ಗೆ ಅರಿವು ಮೂಡಿಸುವ ಮತ್ತು ಅವುಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ರೂಪಿಸಿರುವ ‘ಸರ್ಪ’ (ಸ್ನೇಕ್ ಅವೇರ್‌ನೆಸ್ ರನ್ನೂ ಮತ್ತು ಪ್ರೊಟೆಕ್ಷನ್) ಆ್ಯಪ್. ಇದರ ಮೂಲಕ ಸಂತ್ರಸ್ತರು ವೈಜ್ಞಾನಿಕವಾಗಿ ಹಾವನ್ನು ಹಿಡಿಯುವ ತರಬೇತಿ ಪಡೆದವರನ್ನು ಸಂಪರ್ಕಿಸಿ, ಶೀಘ್ರ ಚಿಕಿತ್ಸೆ ಪಡೆಯಬಹುದಾಗಿದೆ.
ಹಾವು ಕಚ್ಚಿದಾಗ ಏನು ಮಾಡಬೇಕು?
* ವಿಚಲಿತಗೊಳ್ಳದೆ ಶಾಂತವಾಗಿರಿ. ಕಡಿತಕೊಳ್ಳಗಾದ ವ್ಯಕ್ತಿಯನ್ನು ಸಮಾಧಾನ ಪಡಿಸಿ
* ಕಚ್ಚಿದ ಜಾಗ ಅಥವಾ ಗಾಯವನ್ನು ಹಾಗೆಯೇ ಬಿಡಿ
* ಕಡಿತದ ಜಾಗದಿಂದ ಬಿಗಿ ಬಟ್ಟೆ/ಆಭರಣ/ಗಡಿಯಾರ/ಉಂಗುರ/ಬೆಲ್ಫ್ ಪಾದರಕ್ಷೆಗಳನ್ನು ತೆಗೆಯಿರಿ
* ಕಡಿತಕ್ಕೆ ಒಳಗಾದ ವೃತ್ತಿಯು ಎಡ ಮಗ್ಗುಲಿಗೆ ಮಲಗುವಂತೆ ಮಾಡಿ. ಬಲಗಾಲು ಬಾಗಿರಲಿ, ಕೈಗಳು ತಲೆಯ ಕೆಳಭಾಗದಲ್ಲಿರಲಿ
* ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿರಿ
ಏನು ಮಾಡಬಾರದು?
* ಕಡಿತಕ್ಕೊಳಗಾದ ವ್ಯಕ್ತಿ ಗಾಬರಿಯಾಗುವುದಕ್ಕೆ ಅವಕಾಶ ನೀಡಬೇಡಿ
* ಕಚ್ಚಿದ ಹಾವನ್ನು ಹೊಡೆಯಬೇಡಿ ಅಥವಾ ಕೊಳ್ಳಬೇಡಿ. ಹೊಡೆದರೆ ಅದು ಮತ್ತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ
* ಕಡಿತದ ಗಾಯಕ್ಕೆ ವಿಷ ನಿರೋಧಕ ಔಷಧ ಹಾಕಬೇಡಿ
* ರಕ್ತ ಪರಿಚಲನೆ ತಡೆಯುವುದಕ್ಕಾಗಿ ಕಚ್ಚಿರುವ ಸ್ಥಳವನ್ನು ದಾರ, ಬಟ್ಟೆಯಿಂದ ಕಟ್ಟಬೇಡಿ ಗಾಯನಾಗಿರುವ ಭಾಗವನ್ನು ಕತ್ತರಿಸಬೇಡಿ
* ಕಡಿತಕ್ಕೊಳಗಾದ ವ್ಯಕ್ತಿಯನ್ನು ಅಂಗಾತವಾಗಿ ಮಲಗಿಸಬೇಡಿ. ದೇಹದಲ್ಲಿ ಗಾಳಿಯ ಸಂಚಾರವನ್ನು ಇದು ತಡೆಯಬಹುದು
* ಸಾಂಪ್ರದಾಯಿಕ ಅಥವಾ ಅಸುರಕ್ಷಿತವಾದ ಚಿಕಿತ್ಸೆಯನ್ನು ಪಡೆಯಬೇಡಿ ಎಂಬುದು ತಜ್ಞರ ಸಲಹೆ.
ನವದೆಹಲಿ: ತಿರುಪತಿ ಲಡ್ಡು ವಿವಾದದ (Tirupati Laddoo Row) ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯವು (Health Ministry) ಲಡ್ಡುಗಳನ್ನು ತಯಾರಿಸಲು ತುಪ್ಪದ ಪೂರೈಕೆ ಮಾಡುತ್ತಿದ್ದ ಎಆರ್ ಡೈರಿಗೆ ಶೋಕಾಸ್ ನೋಟಿಸ್ ನೀಡಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‍ಎಸ್‍ಎಸ್‍ಎಐ) ರವಾನಿಸಿದ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಡೈರಿ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯ ಒಂದರಲ್ಲಿ ತುಪ್ಪದ ಮಾದರಿ ಪರೀಕ್ಷಿಸಲಾಗಿತ್ತು. ಈ ವೇಳೆ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದ ಮಾದರಿಗಳಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ, ಬೀಫ್ ಟ್ಯಾಲೋ, ಹಂದಿ ಕೊಬ್ಬು ಸೇರಿದೆ ಎಂದು ವರದಿ ನೀಡಿತ್ತು. ಇದನ್ನೂ ಓದಿ: ಮುನಿರತ್ನ ವಿರುದ್ಧದ ಕೇಸ್‌ಗಳು ಅಧಿಕೃತವಾಗಿ ಎಸ್‌ಐಟಿಗೆ ವರ್ಗ
ವಿವಾದದ ಬೆನ್ನಲ್ಲೇ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಿದ ಆರೋಪದ ಮೇಲೆ ದೇವಾಲಯದ ಮಂಡಳಿಯು ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‍ನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಕಂಪನಿಯ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಜೆ.ಶ್ಯಾಮಲಾ ರಾವ್ ಘೋಷಿಸಿದ್ದರು.
ತಮಿಳುನಾಡು ಮೂಲದ ಎಆರ್ ಡೈರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಲಬೆರಕೆ ಆರೋಪಗಳನ್ನು ಬಲವಾಗಿ ನಿರಾಕರಿಸಿದೆ. ದೇವಾಲಯಕ್ಕೆ ಪ್ರತಿ ದಿನ 10 ಟನ್ ತುಪ್ಪದ ಅವಶ್ಯಕತೆಯಿದೆ. ನಾವು 0.1% ಅಗತ್ಯವನ್ನು ಪೂರೈಸಿಲ್ಲ ಎಂದು ಹೇಳಿಕೊಂಡಿದೆ.
ನವದೆಹಲಿ: ತಿರುಪತಿಯಲ್ಲಿ ಲಡ್ಡುಗಳನ್ನು (Tirupati Laddoo) ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂಬ ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಆರೋಪದ ಕುರಿತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ (J.P Nadda) ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಅವರಿಗೆ ವಿವರವಾದ ವರದಿ ಕೇಳಿದ್ದಾರೆ.
ಲಡ್ಡೂಗಳನ್ನು ದೇವಾಲಯಕ್ಕೆ ಭೇಟಿ ನೀಡುವ ಕೋಟಿಗಟ್ಟಲೆ ಭಕ್ತರಿಗೆ ನೀಡಲಾಗುತ್ತದೆ. ಇದರಿಂದಾಗಿ ಸಿಎಂ ಏನೇ ಹೇಳಿದರೂ ಅದು ಗಂಭೀರ ಮತ್ತು ಕಳವಳಕಾರಿ ವಿಷಯವಾಗಿದೆ. ಈ ಆರೋಪದ ವಿರುದ್ಧ ಕೂಲಂಕುಷ ತನಿಖೆ ನಡೆಸುವ ಅಗತ್ಯವಿದೆ. ಅಲ್ಲದೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಡ್ಡಾ ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಅವರು, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ (YS Jagan Mohan Reddy) ಅವರು ಅಧಿಕಾರದಲ್ಲಿದ್ದಾಗ ತಿರುಪತಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದ ಮಾದರಿಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಗುಜರಾತ್‍ನ ಸರ್ಕಾರಿ ಲ್ಯಾಬ್‍ನ ವರದಿಯನ್ನು ಅವರು ಉಲ್ಲೇಖಿಸಿದ್ದರು.
ಈ ವಿಚಾರವಾಗಿ ನಾಲ್ಕು ವರ್ಷಗಳ ಕಾಲ ಟಿಟಿಡಿಯ ಅಧ್ಯಕ್ಷರಾಗಿದ್ದ ರಾಜ್ಯಸಭಾ ಸಂಸದ ವೈವಿ ಸುಬ್ಬಾ ರೆಡ್ಡಿಯವರು, ದೇವರಿಗೆ ಪ್ರತಿನಿತ್ಯ ಅರ್ಪಿಸುವ ನೈವೇದ್ಯ ಮತ್ತು ಭಕ್ತರಿಗೆ ನೀಡುವ ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಹೇಳುವುದು ಹೇಯ ಕೃತ್ಯ ಎಂದು ಆಂಧ್ರ ಸಿಎಂಗೆ ಎಕ್ಸ್‌ನಲ್ಲಿ ತಿರುಗೇಟು ನೀಡಿದ್ದಾರೆ.
ಟಿಟಿಡಿ ಅಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದ ಪಕ್ಷದ ಹಿರಿಯ ನಾಯಕ ಕರುಣಾಕರ್ ರೆಡ್ಡಿ, ಟಿಡಿಪಿ ಸರ್ಕಾರ ಜಗನ್ ಮೋಹನ್ ರೆಡ್ಡಿ ವಿರುದ್ಧ ರಾಜಕೀಯ ಸೇಡು ತೀರಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ವಿವಾದದ ಬೆನ್ನಲ್ಲೇ, ಆಂಧ್ರಪ್ರದೇಶದ ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರು, ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಅಥವಾ ಸಿಬಿಐ ತನಿಖೆಗೆ ವಹಿಸಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನವದೆಹಲಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ. ಇತ್ತೀಚೆಗೆ ಆಫ್ರಿಕನ್ ದೇಶದಿಂದ ಭಾರತಕ್ಕೆ ಬಂದಿದ್ದರು ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ (Monkeypox) ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health Ministry) ಸೋಮವಾರ ದೃಢಪಡಿಸಿದೆ.
ಭಾನುವಾರ (ಸೆ.8) ಶಂಕಿತ ವ್ಯಕ್ತಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮಾದರಿ ಪರೀಕ್ಷೆ ಬಳಿಕ ಮಂಕಿಪಾಕ್ಸ್ ದೃಢಪಟ್ಟಿರುವುದಾಗಿ ಸಚಿವಾಲಯ ತಿಳಿಸಿದೆ. ರೋಗಿಯಲ್ಲಿ ಪಶ್ಚಿಮ ಆಫ್ರಿಕಾದ ಕ್ಲಾಡ್-2ನ Mpox ವೈರಸ್ ಇರುವಿಕೆಯನ್ನು ಪ್ರಯೋಗಾಲಯ ಪರೀಕ್ಷೆ ದೃಢಪಡಿಸಿದೆ. ಈ ಹಿನ್ನೆಲೆ ಅವರನ್ನು ಪ್ರತ್ಯೇಕವಾಗಿ ಇಡಲಾಗಿದೆ. ಸೋಂಕಿತ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸದೆ, ರೋಗಿಯು ಸ್ಥಿರವಾಗಿದ್ದಾರೆ, ಇತರೇ ರೋಗಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.
ರಾಜ್ಯಗಳಿಗೆ ಸೂಚನೆ:
ಮೊದಲ ಪ್ರಕರಣದ ವರದಿಯಾದ ಬೆನ್ನಲ್ಲೇ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದಿರುವ ಕೆಂದ್ರ ಆರೋಗ್ಯ ಸಚಿವಾಲಯ, ಮಂಕಿಪಾಕ್ಸ್ ಬಗ್ಗೆ ಜನಸಾಮಾನ್ಯರಿಗಿರುವ ಅನಗತ್ಯ ಭೀತಿಯನ್ನು ನಿವಾರಿಸುವಂತೆ ಸೂಚನೆ ನೀಡಿದೆ. ಭಾರತದಲ್ಲಿ ಹೊಸದಾಗಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಸಚಿವಾಲಯವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಎಲ್ಲಾ ಆಸ್ಪತ್ರೆಗಳಲ್ಲಿನ ಐಸೋಲೇಷನ್ ಸೌಲಭ್ಯ, ತರಬೇತಿ ಪಡೆದ ವೈದ್ಯರು ಇರುವಂತೆ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಉಪಕರಣಗಳು ಇರುವಂತೆ ನೋಡಿಕೊಳ್ಳಬೇಕು. ಶಂಕಿತರು ಮತ್ತು ಸೋಂಕು ದೃಢಪಟ್ಟವರ ಸಂಪರ್ಕಕ್ಕೆ ಬಂದ ಇತರರನ್ನು ಪತ್ತೆ ಮಾಡುವ ಕೆಲಸವನ್ನು ಮಾಡಬೇಕು ಎಂದು ರಾಜ್ಯಗಳಿಗೆ ಸಚಿವಾಲಯ ಸೂಚನೆ ನೀಡಿದೆ.
ಕರ್ನಾಟಕದಲ್ಲೂ ಹೈ ಅಲರ್ಟ್:
ವಿದೇಶಗಳಲ್ಲಿ ಮಂಕಿ ಪಾಕ್ಸ್ ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರ ಈಗಾಗಲೇ ನಿಗಾ ವಹಿಸಿದೆ. ಎರಡುವಾರಗಳ ಹಿಂದೆಯೇ ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್, ಮಂಕಿಪಾಕ್ಸ್ ಕಾಯಿಲೆಗೆ ಮುಂಜಾಗ್ರತ ಕ್ರಮವಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 50 ಬೆಡ್ ಹಾಸಿಗೆ ಮೀಸಲು ಇಡಲಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ರಾಜ್ಯದ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕ (ICU) ಬೆಡ್ ಸಿದ್ಧತೆಗೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು. ಇದನ್ನೂ ಓದಿ: ’ವೆಟ್ಟೈಯಾನ್’ ಚಿತ್ರದ ಸಾಂಗ್ ರಿಲೀಸ್- ಮಂಜು ವಾರಿಯರ್ ಜೊತೆ ತಲೈವಾ ಸಖತ್ ಸ್ಟೆಪ್ಸ್
ಮಂಕಿಪಾಕ್ಸ್ ಎಂದರೇನು?
ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುವ ರೋಗವೇ ಮಂಕಿಪಾಕ್ಸ್. ಈ ವೈರಸ್ ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ. ಕ್ಲಾಡ್ ಐ ಮತ್ತು ಕ್ಲಾಡ್ ಐಐ ಎಂಬ ಎರಡು ವಿಧದ ಮಂಕಿಪಾಕ್ಸ್ ಸೋಂಕುಗಳಿವೆ. ಕ್ಲಾಡ್ ಐ ಮಧ್ಯ ಆಫ್ರಿಕಾದಲ್ಲಿ ಕಂಡುಬಂತು. ಕ್ಲಾಡ್ ಐಐ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಐಬಿ ಎಂದು ಕರೆಯಲ್ಪಡುವ ಕ್ಲಾಡ್ ಐನ ಹೊಸ ರೂಪಾಂತರ ಬಹುಬೇಗ ಹರಡುತ್ತದೆ.
ಸೋಂಕಿನ ಲಕ್ಷಣಗಳೇನು?
ಸೋಂಕು ತಗುಲಿದ ನಂತರ 6ರಿಂದ 13 ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ 5ರಿಂದ 21 ದಿನಗಳ ಅವಧಿಯಲ್ಲೂ ಕಾಣಿಸಿಕೊಳ್ಳಬಹುದು.
* ಜ್ವರ
* ತೀವ್ರವಾದ ತಲೆನೋವು
* ದುಗ್ಧರಸ ಗ್ರಂಥಿಗಳಲ್ಲಿ ಊತ
* ಬೆನ್ನು ನೋವು
* ಸ್ನಾಯು ನೋವು
* ತೀವ್ರತರ ನಿತ್ರಾಣ
* ಮುಖ, ಕೈ, ಕಾಲುಗಳು, ಹಸ್ತ, ಪಾದಗಳಲ್ಲಿ ದುದ್ದುಗಳು
* 95% ಪ್ರಕರಣಗಳಲ್ಲಿ ಮುಖದಲ್ಲಿಯೇ ಹೆಚ್ಚು ದುದ್ದುಗಳು ಕಾಣಿಸಿಕೊಳ್ಳುತ್ತವೆ
ಹರಡುವುದು ಹೇಗೆ?
ಸೋಂಕು ಪೀಡಿತ ಪ್ರಾಣಿಯಿಂದ ಮನುಷ್ಯರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಮಂಕಿಪಾಕ್ಸ್ ವೈರಸ್ ಹರಡುತ್ತದೆ.
* ಸೋಂಕು ತಗುಲಿದ ಪ್ರಾಣಿಗಳ ಜೊತೆ ನೇರ ಸಂಪರ್ಕ ಹೊಂದುವ ಮನುಷ್ಯರಿಗೆ ರೋಗ ಹರಡುತ್ತದೆ.
* ರೋಗಕಾರಕ ಪ್ರಾಣಿಗಳ ರಕ್ತ, ಚರ್ಮ, ಗಾಯದಿಂದ.
* ರೋಗ ತಗುಲಿರುವ ಪ್ರಾಣಿಗಳ ಮಾಂಸ ಸೇವನೆ.
* ಸೋಂಕಿತ ವ್ಯಕ್ತಿಯ ಉಸಿರಾಟದಿಂದ ಹೊರಬೀಳುವ ಕಣಗಳಿಂದ.
* ಸೋಂಕಿತನ ಚರ್ಮದ ಗಾಯದಲ್ಲಿನ ಕೀವಿನಿಂದ.
* ಹೊಕ್ಕುಳಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣ.
* ಪ್ರಸವದ ವೇಳೆ ಅಥವಾ ಪ್ರಸವಾನಂತರ ನಿಕಟ ಸಂಪರ್ಕದಿಂದ.
ತಡೆ ಹೇಗೆ?
* ಚರ್ಮದಲ್ಲಿ ದುದ್ದು ಕಾಣಿಸಿಕೊಂಡವರಿಂದ ದೂರ ಇರುವುದು, ದುದ್ದು ಮುಟ್ಟದಿರುವುದು.
* ಸೋಂಕಿತರನ್ನು ಆಲಂಗಿಸಿಕೊಳ್ಳಬೇಡಿ, ಲೈಂಗಿಕ ಸಂಪರ್ಕ ಮಾಡಬೇಡಿ.
* ಸೋಂಕಿತರೊಂದಿಗೆ ಆಹಾರ ಸೇವನೆ, ಬಟ್ಟಲು, ಲೋಟ ಇತ್ಯಾದಿ ವಸ್ತುಗಳನ್ನು ಹಂಚಿಕೊಳ್ಳದಿರುವುದು.
* ಸೋಂಕಿತರು ಬಳಿಸಿದ ಬಟ್ಟೆ, ಟವಲ್, ಹೊದಿಕೆ ಮುಟ್ಟದಿರುವುದು.
* ಸೋಂಕಿತ ಪ್ರಾಣಿಗಳನ್ನು ಮುಟ್ಟದಿರುವುದು.
* ಸೋಂಕಿತರಿಂದ ಪ್ರತ್ಯೇಕವಾಗಿ ಇರಬೇಕು.
– ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂಗೆ ಬಲಿಯಾದವರ ಮಾಹಿತಿ ನೀಡಲು ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue) ಆರ್ಭಟ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಡೆಂಗ್ಯೂಗೆ ಸಾವು ಕೂಡ ಆತಂಕ ಮೂಡಿಸುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂಗೆ ಬಲಿಯಾದವರ ಮಾಹಿತಿ ನೀಡಲು ಆರೋಗ್ಯ ಸಚಿವರು (Dinesh Gundu Rao) ಸೂಚಿಸಿದ್ದಾರೆ. ಜೊತೆಗೆ ಡೆತ್ ಆಡಿಟ್ (Death Audit) ಮಾಡಲು ಮುಂದಾಗಿದ್ದಾರೆ.
ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದೆ. 5,374ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೂವರೆ ಸಾವಿರ ಸನಿಹಕ್ಕೆ ತಲುಪಿದೆ. ಹೀಗಾಗಿ ಆತಂಕ ಮೂಡಿಸಿದೆ. ಕೇಸ್ ಒಂದು ಕಡೆ ಆದರೆ ಮತ್ತೊಂದು ಕಡೆ ಸಾವು ಕೂಡ ಸಂಭವಿಸುತ್ತಿದೆ. ಇದುವರೆಗೂ ರಾಜ್ಯದಲ್ಲಿ ಡೆಂಗ್ಯೂಗೆ ಏಳು ಸಾವಾಗಿದೆ. ಹೀಗಾಗಿ ಸಾವಿನ ಬಗ್ಗೆ ಡೆತ್ ಆಡಿಟ್ ಮಾಡೋದಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ – ಭಾರತದ ಪರ ವಿಶಿಷ್ಟ ದಾಖಲೆ ಬರೆದ ಹಿಟ್‌ಮ್ಯಾನ್
ಖಾಸಗಿ ಆಸ್ಪತ್ರೆಗಳು ಕೂಡ ಡೆಂಗ್ಯೂ ಡೆತ್‌ಗಳನ್ನು ಮತ್ತು ಡೆಂಗ್ಯೂ ಕೇಸ್‌ಗಳನ್ನು ನೋಟಿಫೈ ಮಾಡಬೇಕಾಗುತ್ತದೆ. ಯಾವುದೇ ಖಾಸಗಿ ಆಸ್ಪತ್ರೆಗೆ ಬರುವ ಡೆಂಗ್ಯೂ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಜೊತೆಗೆ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು. ಡೆತ್ ಮಾಹಿತಿಯನ್ನು ಹಂಚಿಕೊಳ್ಳಲು ಸಚಿವರು ಸೂಚಿಸಿದ್ದು, ಖಾಸಗಿ ಆಸ್ಪತ್ರೆಯವರು ಡೆಂಗ್ಯೂ ಮಾಹಿತಿಯನ್ನು ಮುಚ್ಚಿಡುವಂತಿಲ್ಲ. ಇದನ್ನೂ ಓದಿ: ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಕೊಹ್ಲಿ
ಡೆಂಗ್ಯೂ ಪ್ರಕರಣ ಹೆಚ್ಚಾಗುತ್ತಿದ್ದು, ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಈಗ ಆಗಿರುವ ಸಾವುಗಳ ಬಗ್ಗೆ ಡೆತ್ ಆಡಿಟ್ ಮಾಡುತ್ತೇವೆ ಎಂದು ಹೇಳುತ್ತಿದ್ದು, ಆಡಿಟ್‌ನಲ್ಲಿ ಏನು ವರದಿ ಬರಲಿದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: ವಿಶ್ವಕಪ್ ಜೊತೆ ವಿಶ್ವದಾಖಲೆ – ಟೀಂ ಇಂಡಿಯಾದ ಸಾಧನೆ ಮುರಿಯುವುದು ಬಲು ಕಷ್ಟ
ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ (OTT Platform) ತಂಬಾಕು ವಿರೋಧಿ ಎಚ್ಚರಿಕೆ (Anti Tobacco Warning) ನೀಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯ (Health ministry) ಕಡ್ಡಾಯಗೊಳಿಸಿದೆ.
ಸಿನಿಮಾ ಥಿಯೇಟರ್‌ಗಳಲ್ಲಿ ಹಾಗೂ ದೂರದರ್ಶನ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆಯನ್ನು ಈ ಹಿಂದೆಯಿಂದಲೂ ಪ್ರದರ್ಶಿಸಲಾಗುತ್ತಿದೆ. ಆದರೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿರಲಿಲ್ಲ. ಇದೀಗ ಆರೋಗ್ಯ ಸಚಿವಾಲಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲೂ ಇದನ್ನು ಕಡ್ಡಾಯಗೊಳಿಸಿದೆ. ಈ ಹೊಸ ನಿಯಮವನ್ನು ಪ್ಲಾಟ್‌ಫಾರ್ಮ್‌ಗಳು ಅನುಸರಿಸದೇ ಹೋದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪನ್ನಗಳು ಅಥವಾ ಅವುಗಳ ಬಳಕೆಯನ್ನು ಪ್ರದರ್ಶಿಸುವಾಗ ಒಟಿಟಿ ಪ್ಲಾಟ್‌ಫಾರ್ಮ್‌ಗಳು ತಂಬಾಕು ವಿರೋಧಿ ಆರೋಗ್ಯದ ಎಚ್ಚರಿಕೆಯನ್ನು ಪರದೆಯ ಕೆಳಭಾಗದಲ್ಲಿ ಪ್ರದರ್ಶಿಸಬೇಕು. ಅಲ್ಲದೇ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕನಿಷ್ಟ 20 ಸೆಕೆಂಡುಗಳ ವರೆಗೆ ಆಡಿಯೋ ಅಥವಾ ದೃಶ್ಯದ ರೂಪದಲ್ಲಿ ಕಾರ್ಯಕ್ರಮದ ಪ್ರಾರಂಭದಲ್ಲಿ ಇಲ್ಲವೇ ನಡುವೆ ಪ್ರದರ್ಶಿಸಬೇಕೆಂದು ಆರೋಗ್ಯ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಯಾರಿಗೆ ಅಂತ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತೆ: ಹೆಬ್ಬಾಳ್ಕರ್ ಹೇಳಿಕೆ ಒಪ್ಪದ ಡಿಕೆಶಿ
ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ ವೆಬ್‌ಸೀರೀಸ್, ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹಾಗೂ ಧೂಮಪಾನವನ್ನು ವ್ಯಾಪಕವಾಗಿ ಪ್ರದರ್ಶಿಸಲಾಗುತ್ತಿದೆ. ಇದು ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯಿದೆ 2003ರ ಉಲ್ಲಂಘನೆಯಾಗಿದೆ. ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ದೇಶದಲ್ಲಿ ಯುವಕರು ಹಾಗೂ ಮಕ್ಕಳಿಗೆ ತಂಬಾಕು ಬಳಕೆಯನ್ನು ಉತ್ತೇಜಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಗಾ ಭಾಷಣದ ಮಧ್ಯೆ ಮೊಳಗಿತು ಖಲಿಸ್ತಾನ್ ಜಿಂದಾಬಾದ್ ಘೋಷಣೆ
ನವದೆಹಲಿ: ಕಳೆದ ವರ್ಷ ಭಾರತದ (India) ಕೆಮ್ಮಿನ ಸಿರಪ್ (Cough Syrup) ಸೇವಿಸಿದ ಬಳಿಕ ಗ್ಯಾಂಬಿಯಾ (Gambia) ಹಾಗೂ ಉಜ್ಬೇಕಿಸ್ತಾನದಲ್ಲಿ (Uzbekistan) ಹಲವು ಮಕ್ಕಳ ಸಾವಾಗಿತ್ತು. ಈ ಘಟನೆಯ ಬಳಿಕ ಇದೀಗ ಭಾರತ ಸರ್ಕಾರ ಕೆಮ್ಮಿನ ಸಿರಪ್‌ಗಳನ್ನು ವಿದೇಶಕ್ಕೆ ರಫ್ತು ಮಾಡುವ ಮೊದಲು ಅದನ್ನು ಪರೀಕ್ಷೆಗೆ (Lab Test) ಒಳಪಡಿಸುವುದು ಕಡ್ಡಾಯಗೊಳಿಸಿದೆ.
ಯಾವುದೇ ಕೆಮ್ಮಿನ ಸಿರಪ್ ಅನ್ನು ರಫ್ತು ಮಾಡುವುದಕ್ಕೂ ಮೊದಲು ಸರ್ಕಾರಿ ಪ್ರಯೋಗಾಲಯ ನೀಡಿದ ವಿಶ್ಲೇಷಣೆಯ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ನಿಯಮ ಜೂನ್ 1 ರಿಂದ ಜಾರಿಗೆ ಬರಲಿದೆ ಎಂದು ಮಂಗಳವಾರ ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತ ಇಡೀ ವಿಶ್ವದಲ್ಲೇ ಅತಿ ದೊಡ್ಡ ಔಷಧೀಯ ಉದ್ಯಮವನ್ನು ಹೊಂದಿದೆ. ಆದರೆ ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಭಾರತದ 3 ಕಂಪನಿಗಳು ತಯಾರಿಸಿದ ಕೆಮ್ಮಿನ ಸಿರಪ್‌ಗಳಲ್ಲಿ ವಿಷಕಾರಿ ಅಂಶವನ್ನು ಕಂಡು ಹಿಡಿದ ಬಳಿಕ ಅದರ ಖ್ಯಾತಿ ಅಲುಗಾಡುವಂತಾಯಿತು. ಇದನ್ನೂ ಓದಿ: ಭಾರೀ ಏರಿಕೆ ಕಂಡ Adani Enterprises ಷೇರು – ಮತ್ತಷ್ಟು ಹೂಡಿಕೆ ಮಾಡಿದ GQG
ಕಳೆದ ವರ್ಷ ಗ್ಯಾಂಬಿಯಾದ 70 ಹಾಗೂ ಉಜ್ಬೇಕಿಸ್ತಾನದ 19 ಮಕ್ಕಳ ಸಾವಾಗಿತ್ತು. ಬಳಿಕ ಮಕ್ಕಳ ಸಾವಿಗೆ ಭಾರತದ ಕಂಪನಿಗಳು ತಯಾರಿಸಿದ್ದ ಕೆಮ್ಮಿನ ಸಿರಪ್‌ಗಳ ಸಂಬಂಧವಿದೆ ಎಂಬುದು ತಿಳಿದುಬಂದಿತ್ತು.
ಸದ್ಯ ವಿದೇಶಗಳಿಗೆ ರಫ್ತು ಮಾಡುವ ಕೆಮ್ಮಿನ ಸಿರಪ್‌ಗಳ ಪರೀಕ್ಷೆಯನ್ನಷ್ಟೇ ಕೇಂದ್ರ ಕಡ್ಡಾಯಗೊಳಿಸಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಈ ಸಿರಪ್‌ಗಳನ್ನು ಮಾರಾಟ ಮಾಡುವುದಕ್ಕೂ ಮುನ್ನ ಪರೀಕ್ಷೆಯ ಅಗತ್ಯವಿದೆಯೇ ಎಂಬುದಕ್ಕೆ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: ಪಾಕಿಸ್ತಾನದಲ್ಲೂ ಜನ ಮೋದಿಯನ್ನು ಇಷ್ಟಪಡುತ್ತಾರೆ: ಅನೂಪ್ ಜಲೋಟಾ
ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ (Corona Case) ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ (Health Department) ಫುಲ್ ಅಲರ್ಟ್ ಆಗಿದೆ.
ಕಳೆದ 24 ಗಂಟೆಯಲ್ಲಿ 1,805 ಹೊಸ ಕೋವಿಡ್ ಕೇಸ್ ಪತ್ತೆಯಾಗಿದ್ದು, 6 ಮಂದಿ ಬಲಿಯಾಗಿದ್ದಾರೆ. 134 ದಿನಗಳ ಬಳಿಕ ಇದೇ ಮೊದಲ ಬಾರಿ ಸಕ್ರೀಯ ಕೇಸ್‌ಗಳ ಸಂಖ್ಯೆ 10 ಸಾವಿರ ದಾಟಿದೆ. ಪ್ರತಿದಿನ ಪಾಸಿಟಿವಿಟಿ ಪ್ರಮಾಣ ಶೇ.3.19ಕ್ಕೆ ಹೆಚ್ಚಿದೆ. ಇದನ್ನೂ ಓದಿ: ಕಿಡ್ನಿ ಸೋಂಕು – ನಮೀಬಿಯಾದಿಂದ ತಂದಿದ್ದ 8ರಲ್ಲಿ ಒಂದು ಚಿರತೆ ಸಾವು
ಇದರಿಂದ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,47,05,952 ಮಂದಿಗೆ ಸೋಂಕು ತಲುಪಿದ್ದು, ಅವರಲ್ಲಿ 4,41,64,815 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೇ 6 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 5,30,837ಕ್ಕೆ ಏರಿಕೆಯಾಗಿದೆ. 10,300 ಸಕ್ರೀಯ ಸೋಂಕು ಪ್ರಕರಣಗಳಿರುವುದು ಕಂಡುಬಂದಿದೆ.
ಈ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯದ (Health Ministry) ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಜೊತೆ ವರ್ಚುವಲ್ ಸಭೆ ನಡೆಸಿ, ಸೋಂಕು ನಿಯಂತ್ರಣಕ್ಕೆ ಹಲವು ಸಲಹೆ ಸೂಚನೆ ನೀಡಿದ್ದಾರೆ. ಮಾಸ್ಕ್ ಧರಿಸಲು ಹಾಗೂ ಟೆಸ್ಟಿಂಗ್ ಹೆಚ್ಚಳ ಮಾಡಲು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ತಿಂಗಳೊಳಗೆ ಸರ್ಕಾರಿ ಬಂಗಲೆ ತೊರೆಯುವಂತೆ ರಾಹುಲ್ ಗಾಂಧಿಗೆ ನೋಟಿಸ್
ಮುಂದಿನ ತಿಂಗಳ ಮೊದಲ ವಾರ ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಮಾಕ್‌ಡ್ರಿಲ್ (ಅಣುಕು ಕಾರ್ಯಾಚರಣೆ) ನಡೆಸಲು ತೀರ್ಮಾನಿಸಿದೆ. ಭಾನುವಾರ ದೆಹಲಿ ಆಸ್ಪತ್ರೆಯಲ್ಲೂ ಮಾರ್ಕ್ ಡ್ರಿಲ್ ನಡೆಸಲಾಗಿದೆ.
ಕೈರೋ: ಉತ್ತರ ಈಜಿಪ್ಟ್‌ನ (Egypt) ದಕಹ್ಲಿಯಾ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ಮಿನಿಬಸ್‌ವೊಂದು ಕಾಲುವೆಗೆ (Canal) ಉರುಳಿಬಿದ್ದ ಪರಿಣಾಮ 22 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ರಾಜಧಾನಿ ಕೈರೋದ ಈಶಾನ್ಯಕ್ಕೆ 100 ಕಿಮೀ ದೂರದಲ್ಲಿರುವ ದಕಾಹ್ಲಿಯಾ ಪ್ರಾಂತ್ಯದಲ್ಲಿ ಅಪಘಾತ (Egypt Bus Accident) ಸಂಭವಿಸಿದೆ. ಬಸ್‌ನಲ್ಲಿ ಸುಮಾರು 46 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನಿಂದ ಸ್ಟೇರಿಂಗ್ ನಿಯಂತ್ರಣ ಕಳೆದುಕೊಂಡಿದ್ದು, ಕಾಲುವೆಗೆ ಉರುಳಿದೆ. ಅಪಘಾತದಲ್ಲಿ 3 ಮಕ್ಕಳು ಸೇರಿ 22 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ (Health Ministry) ಅಧಿಕಾರಿ ಡಾ.ಶೆರಿಫ್ ಮಕೀನ್ ತಿಳಿಸಿದ್ದಾರೆ. ಇದನ್ನೂ ಓದಿ: ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ – ಪ್ರತಿಭಟನೆಗೆ ಸಜ್ಜಾದ ಭಕ್ತವೃಂದ
10.3 ಕೋಟಿ ಜನಸಂಖ್ಯೆ ಹೊಂದಿರುವ ಈಜಿಪ್ಟ್ನಲ್ಲಿ ರಸ್ತೆ ಅಪಘಾತಗಳು ಸಹಜವಾಗಿದೆ. ಕಳಪೆ ರಸ್ತೆಗಳು ಹಾಗೂ ಟ್ರಾಫಿಕ್ ನಿಯಮ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚಾಗಿವೆ. ಪ್ರತಿ ವರ್ಷವೂ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ (Transport Safety Record) 2021ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 7 ಸಾವಿರ ಜನರು ಸಾವನ್ನಪ್ಪಿದ್ದಾರೆ. ಕಳೆದ ಜುಲೈನಲ್ಲೂ ಭಾರೀ ರಸ್ತೆ ಅಪಘಾತ ಸಂಭವಿಸಿ 25 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. 35 ಮಂದಿ ಗಾಯಗೊಂಡಿದ್ದರು.
Live Tv
[brid partner=56869869 player=32851 video=960834 autoplay=true]