Tag: health minister

  • Video Viral | ಪ್ರೆಸ್‌ ಮೀಟ್‌ ನಡೆಯುತ್ತಿದ್ದಾಗಲೇ ಕುಸಿದು ಬಿದ್ದ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ

    Video Viral | ಪ್ರೆಸ್‌ ಮೀಟ್‌ ನಡೆಯುತ್ತಿದ್ದಾಗಲೇ ಕುಸಿದು ಬಿದ್ದ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ

    – ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಘಟನೆ

    ಸ್ಟಾಕ್‌ಹೋಮ್: ಪ್ರೆಸ್‌ ಮೀಟ್‌ ನಡೆಯುತ್ತಿದ್ದ ವೇಳೆ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ ಎಲಿಸಬೆಟ್ ಲ್ಯಾನ್ (Elisabet Lann) ವೇದಿಕೆಯಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಲ್ಯಾನ್‌ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ಘಟನೆ ಸಂಭವಿಸಿದಿದೆ.

    ಸುದ್ದಿಗೋಷ್ಠಿಯಲ್ಲಿ (Press Conference) 48 ವರ್ಷದ ಎಲಿಸಬೆಟ್ ಲ್ಯಾನ್, ಸ್ವೀಡಿಷ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಪಕ್ಕದಲ್ಲಿ ನಿಂತಿದ್ದರು. ಪತ್ರಕರ್ತರು ಪ್ರಶ್ನೆ ಕೇಳುತ್ತಿರುವಾಗಲೇ ವೇದಿಕೆಯಿಂದ ಗಾಜಿನ ಪೋಡಿಯಂ ಸಮೇತ ಕುಸಿದುಬಿದ್ದಿದ್ದಾರೆ. ಇದನ್ನೂ ಓದಿ: ಸ್ಪೇನ್‌ನಲ್ಲಿ ಬೀಚ್‌ಗಳನ್ನು ಬಂದ್‌ ಮಾಡಿಸಿದ ನೀಲಿ ಡ್ರ್ಯಾಗನ್‌ – ಏನಿದರ ವಿಶೇಷ? 

    16 ಸೆಕೆಂಡುಗಳ ವಿಡಿಯೋ ವೈರಲ್‌
    ಎಲಿಸಬೆಟ್ ಲ್ಯಾನ್ ನೂತನ ಆರೋಗ್ಯ ಸಚಿವೆಯಾಗಿ (Swedish New Health Minister) ಅಧಿಕಾರ ಸ್ವೀಕರಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಪ್ರೆಸ್‌ಮೀಟ್‌ ಆಯೋಜನೆ ಮಾಡಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಅಧಿಕಾರಿಯೊಬ್ಬರ ಮಾತುಗಳನ್ನು ಆಲಿಸುತ್ತಿದ್ದರು. ಹಾಗೆಯೇ ಮುಂದಕ್ಕೆ ಬಾಗುತ್ತಲೇ ಪೋಡಿಯಂ ಸಮೇತ ನೆಲಕ್ಕೆ ಕುಸಿದು ಬಿದ್ದರು. ಈ ದೃಶ್ಯ 16 ಸೆಕೆಂಡುಗಳ ವಿಡಿಯೋನಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲೂ ವಿಡಿಯೋ ವೈರಲ್‌ ಆಗಿದೆ.

    ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಚಿವರನ್ನ ಸಹ ಅಧಿಕಾರಿಗಳು ಹಾಗೂ ವೇದಿಕೆ ಮುಂಭಾಗದಲ್ಲಿದ್ದ ಪತ್ರಕರ್ತರು ಆಕೆಯನ್ನ ಮೇಲೆತ್ತಿ ಕೂರಿಸಿದ್ದಾರೆ. ಸ್ವಲ್ಪ ನೀರು ಕುಡಿಸಿ ವಿಶ್ರಾಂತಿ ಕೊಡಿಸಿದ್ದಾರೆ. ಲ್ಯಾನ್ ಸ್ವಲ್ಪ ಸಮಯದ ನಂತರ ಮತ್ತೆ ಸುದ್ದಿಗೋಷ್ಠಿಗೆ ಹಾಜರಾಗಿ ಅನೇಕ ವಿಷಯ ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಕತಾರ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ನಾಯಕನ ಪುತ್ರ ಸೇರಿ 6 ಮಂದಿ ಬಲಿ – ಟಾಪ್‌ ಲೀಡರ್‌ ಪಾರು

    ಸದ್ಯ ನೂತನ ಸಚಿವರು ಕುಸಿದುಬಿದ್ದ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ಮೇಲ್ನೋಟಕ್ಕೆ ಕಡಿಮೆ ರಕ್ತದೊತ್ತಡದಿಂದ (ಲೋ ಬಿಪಿ) ಸಂಭವಿಸಿರಬಹುದು ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು

  • PUBLiC TV Exclusive | ನಮ್ಮ ಕ್ಲಿನಿಕ್‌ನಲ್ಲಿ ಔಷಧಿ ಖಾಲಿ ಖಾಲಿ – ಲ್ಯಾಬ್ ವರ್ಕ್ ಆಗ್ತಿಲ್ಲ, ರೋಗಿಗಳಿಗೆ ಚಿಕಿತ್ಸೆ ಸಿಗ್ತಿಲ್ಲ!

    PUBLiC TV Exclusive | ನಮ್ಮ ಕ್ಲಿನಿಕ್‌ನಲ್ಲಿ ಔಷಧಿ ಖಾಲಿ ಖಾಲಿ – ಲ್ಯಾಬ್ ವರ್ಕ್ ಆಗ್ತಿಲ್ಲ, ರೋಗಿಗಳಿಗೆ ಚಿಕಿತ್ಸೆ ಸಿಗ್ತಿಲ್ಲ!

    ಬೆಂಗಳೂರು: ನಮ್ಮ ಕ್ಲಿನಿಕ್‌ಗಳಲ್ಲಿ (Namma Clinic) ಆರೋಗ್ಯ ಸೇವೆ ಸಿಗದೇ ಜನ ಪರದಾಡ್ತಿದ್ದಾರೆ. ಮೂರು ತಿಂಗಳಿಂದ ಔಷಧಿನೂ ಇಲ್ಲ. ಲ್ಯಾಬ್ ಟೆಸ್ಟೂ ಮಾಡಂಗಿಲ್ಲ.. ʻಪಬ್ಲಿಕ್ ಟಿವಿʼ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ನಮ್ಮ ಕ್ಲಿನಿಕ್‌ಗಳ ಅವ್ಯವಸ್ಥೆ ಬಯಲಾಗಿದೆ.

    ನಮ್ಮ ಕ್ಲಿನಿಕ್‌ಗಳು ಬಡವರ ಪಾಲಿನ ಸಂಜೀವಿನಿ. ಉಚಿತವಾಗಿ ಆರೋಗ್ಯ ಸೇವೆ ಕೊಡುವ ನಮ್ಮ ಕ್ಲಿನಿಕ್ ಗಳು ಅದೆಷ್ಟೋ ಬಡ ರೋಗಿಗಳಿಗೆ ಆಸರೆಯಾದ ಆಸ್ಪತ್ರೆಗಳು (Hospitals). ಆದ್ರೆ ಇದೀಗಾ ಸರ್ಕಾರದ ನಿರ್ಲಕ್ಷ್ಯಕ್ಕೆ ನಮ್ಮ ಕ್ಲಿನಿಕ್‌ಗಳಲ್ಲಿ ಅವ್ಯವಸ್ಥೆ ಶುರುವಾಗಿದೆ. ಇದನ್ನೂ ಓದಿ: ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್

    ಬೆಂಗಳೂರಿನ ಹಲವು ವಾರ್ಡ್‌ಗಳ ನಮ್ಮ ಕ್ಲಿನಿಕ್‌ಗಳಲ್ಲಿ 2-3 ತಿಂಗಳಿಂದ ಮೆಡಿಸಿನ್ನೇ ಬಂದಿಲ್ಲ. ರಕ್ತ ಪರೀಕ್ಷೆ, ಥೈರಾಯಿಡ್, ಡೆಂಗ್ಯೂ ಸೇರಿ 20ಕ್ಕೂ ಹೆಚ್ಚು ಮಾದರಿಯ ದುಬಾರಿ ಟೆಸ್ಟ್‌ಗಳನ್ನ ಉಚಿತವಾಗಿ ಮಾಡಿಕೊಡಲಾಗ್ತಿತ್ತು. ಆದ್ರೆ ಹಲವು ನಮ್ಮ ಕ್ಲಿನಿಕ್ ಗಳಲ್ಲಿ ಲ್ಯಾಬ್ ಗಳಿದ್ರೂ ಅವುಗಳು ಕಾರ್ಯಾಚರಣೆ ಮಾಡದೇ ಧೂಳು ಹಿಡಿಯುತ್ತಿವೆ. ಆರೋಗ್ಯ ಸೇವೆಗಳು ಸಿಗದೇ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ನಿಗಮದ ಅಧಿಕಾರಿಗಳಿಗೆ ಇನ್‌ಡೆಂಟ್‌ ಕೊಟ್ರೂ ಬೇಡಿಕೆಗೆ ತಕ್ಕಂತೆ ಔಷಧಿಗಳನ್ನ ಕೊಡ್ತಿಲ್ಲ. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಹೇಳಿದ್ರೂ ತಲೆ ಕೆಡಿಸಿಕೊಳ್ತಿಲ್ಲ. ಬಡವರ ಆರೋಗ್ಯವನ್ನ ಸರಿ ಮಾಡಬೇಕಿದ್ದ ನಮ್ಮ ಕ್ಲಿನಿಕ್‌ಗಳು, ಇಗ ನಮ್ಮ ಕ್ಲಿನಿಕ್ ಗಳ ಆರೋಗ್ಯವೇ ಕೆಟ್ಟಂತಿದೆ. ಕೆಲವು ಕ್ಲಿನಿಕ್ ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೂಡ ಇರೋದಿಲ್ಲ. ಇದನ್ನೂ ಓದಿ: ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

    ಮಹಾಲಕ್ಷ್ಮಿ ಲೇಔಟ್‌ನ ಜೈ ಮಾರುತಿ ನಗರದ ನಮ್ಮ ಕ್ಲಿನಿಕ್‌ನಲ್ಲಿ ಲ್ಯಾಬ್‌ನ ಯಂತ್ರೋಪಕರಗಳಿದ್ರೂ ಅದಕ್ಕೆ ಬೇಕಾದ ಸಲಕರಣೆಗಳಿಲ್ಲ. ಬ್ಲಡ್ ಟೆಸ್ಟ್ ಬಿಟ್ರೆ ಬೇರೆ ಯಾವ ಟೆಸ್ಟಿಂಗ್ ಮಾಡೋದಿಲ್ಲ. ಮೆಡಿಸಿನ್ ಕೊರತೆಯ ಬಗ್ಗೆಯೂ ಅಲ್ಲಿನ ಸಿಬ್ಬಂದಿಯೇ ಅಸಹಾಯಕತೆ ತೋರಿದ್ದಾರೆ. ನಮ್ಮಲ್ಲಿ ಮಿಷಿನ್ಸ್ ಎಲ್ಲಾ ಇದೆ. ಕೆಲವೊಂದು ಮೆಡಿಸನ್ ಸಪ್ಲೈ ಇಲ್ಲ ಸರ್ಕಾರದಿಂದ. ಫಂಡ್ ಇಲ್ಲ ಅಂತ ಒಂದು ತಿಂಗಳಿಂದ ತಡೆಹಿಡಿದಿದ್ದಾರೆ. ಮಿಷಿನ್ಸ್ ಇದೆ. ಸಪ್ಲೈ ಮಾಡಿದ್ರೆ ಅಲ್ವಾ ನಾನು ಮಾಡಿಕೊಡೊದು ಸರ್. ಅದಕ್ಕೆ ಕೆಲವೊಂದು ಲ್ಯಾಬ್ ಟೆಸ್ಟ್ ಸ್ಟಾಪ್ ಆಗಿದೆ ಅಂತಾರೆ ಇಲ್ಲಿನ ಸಿಬ್ಬಂದಿ.

    ಕೇವಲ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಮಾತ್ರವಲ್ಲ. ಜಯನಗರ, ಪದ್ಮನಾಭನಗರ, ಮಲ್ಲೇಶ್ವರಂ, ಶಿವಾಜಿನಗರ ಕ್ಷೇತ್ರಗಳ ನಮ್ಮ ಕ್ಲಿನಿಕ್‌ಗಳಲ್ಲೂ ಆರೋಗ್ಯ ಸೇವೆಯಿಂದ ಜನ ವಂಚಿತರಾಗ್ತಿದ್ದಾರೆ. ಕೆಲವು ಮಾತ್ರೆಗಳು ಆಸ್ಪತ್ರೆಯಲ್ಲಿ ಸಿಕ್ಕಿದ್ರೆ, ಇನ್ನೂ ಕೆಲವು ಮಾತ್ರೆಗಳು ಹೊರಗಡೆ ಬರೆದುಕೊಡ್ತಾರೆ. ಲ್ಯಾಬ್ ಟೆಸ್ಟ್ ಕೂಡ ಹೊರಗಡೆನೇ ಬರೆದುಕೊಡ್ತಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದ ಭಾಷಣ – ಉದ್ರಿಕ್ತರಿಂದ ಶೇಖ್ ಹಸೀನಾ ತಂದೆ ನಿವಾಸ ಧ್ವಂಸ

    ಮತ್ತೊಂದೆಡೆ ನಮ್ಮ ಕ್ಲಿನಿಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗಳಿಗೆ ಮೂರು ತಿಂಗಳಿಂದ ಸಂಬಳವೇ ಆಗಿಲ್ಲ. ಜೀವನ ನಿರ್ವಹಣೆಯೂ ಕಷ್ಟ ಆಗ್ತಿದ್ದು, ಸಂಬಳಕ್ಕಾಗಿ ಪ್ರತಿ ತಿಂಗಳು ಕಾಯುವ ಸ್ಥಿತಿ ಇದೆ. ಇನ್ನೂ ಕೆಲ ಆಸ್ಪತ್ರೆಗಳಲ್ಲಿ ವೈದ್ಯರೇ ಕೈಯಿಂದ ಹಣ ಖರ್ಚು ಮಾಡಿ ಮೆಡಿಸಿನ್ ತರ್ತಾರೆ. ಆದ್ರೆ ಆ ಹಣವನ್ನ ಇಲಾಖೆ ಬೇಗ ರೀಫಂಡ್ ಮಾಡೋದಿಲ್ಲ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಕ್ಲಿನಿಕ್ ವೈದ್ಯರು ಧಾನಿಗಳಿಂದ ಮೆಡಿಸಿನ್ ತರಿಸಿಕೊಳ್ತಿದ್ದಾರೆ. ಆರೋಗ್ಯ ಇಲಾಖೆಯ ಸಚಿವ್ರು ಈ ಅವ್ಯವಸ್ಥೆಗೆ ಏನ್ ಪ್ರತಿಕ್ರಿಯೆ ಕೊಡ್ತಾರೆ ಕಾದು ನೋಡಬೇಕಿದೆ.

  • ರಾಜ್ಯಾದ್ಯಂತ ಹುಕ್ಕಾ ನಿಷೇಧಿಸಿ ಸಚಿವ ದಿನೇಶ್ ಗುಂಡೂರಾವ್ ಆದೇಶ

    ರಾಜ್ಯಾದ್ಯಂತ ಹುಕ್ಕಾ ನಿಷೇಧಿಸಿ ಸಚಿವ ದಿನೇಶ್ ಗುಂಡೂರಾವ್ ಆದೇಶ

    – ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಸರ್ಕಾರದಿಂದ ಆದೇಶ

    ಬೆಂಗಳೂರು: ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಮತ್ತು ತಂಬಾಕು ರಹಿತ ಹುಕ್ಕಾ ಬಳಕೆ ಮತ್ತು ಮಾರಾಟ, ಸೇವನೆಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಕಳವಳ ವ್ಯಕ್ತಪಡಿಸುತ್ತಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹುಕ್ಕಾ ನಿಷೇಧಿಸುವಲ್ಲಿ (Hookah Ban) ಪ್ರಮುಖ ಪಾತ್ರ ವಹಿಸಿದ್ದಾರೆ. ತಂಬಾಕು ರಹಿತ ಎಂದು ಹೇಳಿಕೊಂಡು‌ ನಡೆಯುತ್ತಿದ್ದ ಅನಾರೋಗ್ಯಕರ ಹುಕ್ಕಾ ಹಾವಳಿಗೆ ಕಡಿವಾಣ ಹಾಕಿದ್ದಾರೆ.

    ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಮತ್ತು ತಂಬಾಕು ಸಂಬಂಧಿತ ರೋಗಗಳ ಹೆಚ್ಚಳವನ್ನು ತಡೆಯುವ ನಿಟ್ಟಿನಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆಯನ್ನ ನಿಷೇಧಿಸುತ್ತಿರುವುದಾಗಿ ಆರೋಗ್ಯ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ. ವಿಶ್ವ ಆರೋಗ್ಯ, ಸಂಸ್ಥೆ (WHO) ನಡೆಸಿರುವ ಗ್ಲೋಬಲ್ ಅಡಲ್ಸ್ ಟೊಬ್ಯಾಕೋ ಸರ್ವೇ 2016-17, ಅಧ್ಯಯನದ ಪ್ರಕಾರ, ಕರ್ನಾಟಕದಲ್ಲಿ 22.8% ವಯಸ್ಕರು ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಪೈಕಿ 8.8% ರಷ್ಟು ಮಂದಿ ಧೂಮಪಾನಿಗಳಾಗಿದ್ದಾರೆ. ಕರ್ನಾಟಕದಲ್ಲಿ 23.9% ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಾಗಿ ಧೂಮಪಾನ ಮಾಡುತ್ತಾರೆ. ಇದು ರಾಜ್ಯದಲ್ಲಿ ತಂಬಾಕು ಸೇವನೆಯ ವ್ಯಾಪಕ ಅಪಾಯವನ್ನು ತೆರೆದಿಟ್ಟಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

    ಯುವ ಜನತೆಯು ಇತ್ತೀಚಿನ ವರ್ಷಗಳಲ್ಲಿ ತಂಬಾಕು ಉತ್ಪನ್ನಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು WHO ಗ್ಲೋಬಲ್ ಯೂತ್ ಟೊಬ್ಯಾಕೋ ಸರ್ವೇ (2019)ಯಲ್ಲಿ ದೃಢಪಟ್ಟಿದೆ. 13 ರಿಂದ15 ವರ್ಷ ವಯಸ್ಸಿನ ಸುಮಾರು ಐದನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಹಲವು ಬಗೆಯ ತಂಬಾಕು ಸೇವಿಸುತ್ತಿದ್ದಾರೆ. ತಂಬಾಕು ಒಳಗೊಂಡ ಶಿಶಾ ಮತ್ತು “ಹರ್ಬಲ್” ಶಿಶಾ ಇವೆಲ್ಲವೂ ವಿಷಕಾರಿ ಹೊಗೆಯನ್ನು ಹೊರಸೂಸುವುದರಿಂದ ಕ್ಯಾನ್ಸರ್, ಹೃದ್ರೋಗ ಹಾಗೂ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಮಹತ್ವದ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ.

    ತಂಬಾಕಿನ ಅತಿಯಾದ ಬಳಕೆಯಿಂದಾಗಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆಯೂ ಬೀಳುತ್ತಿದೆ. 35 ರಿಂದ 69 ವರ್ಷ ವಯಸ್ಸಿನ ವ್ಯಕ್ತಿಗಳಲ್ಲಿನ ತಂಬಾಕು ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಾಗಿ ರಾಜ್ಯ ಸರ್ಕಾರವು 2011ರಲ್ಲಿ 983 ಕೋಟಿ ರೂಪಾಯಿಗಳನ್ನು ವ್ಯಯಿಸಿದೆ. ಇದು ತಂಬಾಕು ಉತ್ಪನ್ನಗಳ ಬಳಕೆಗೆ ತಡೆಯೊಡ್ಡುವ ಅನಿವಾರ್ಯತೆಯನ್ನು ಎತ್ತಿ ತೋರಿಸುತ್ತದೆ. ತಂಬಾಕು ಬಳಕೆಯ ಮೂಲಕ ಮಾದಕ ದ್ರವ್ಯ ವ್ಯಸನಕ್ಕೆ ಒಳಗಾಗುತ್ತಿರುವುದು ಸರ್ಕಾರ ಗಮನಿಸಿದೆ. ಒಪಿಯಾಡ್ ಬಳಕೆಯಲ್ಲಿ ಅತಿಯಾದ ಹೆಚ್ಚಳ ಮತ್ತು ತಂಬಾಕು ಸೇವನೆಯು ಮಾದಕ ವ್ಯಸನದೆಡೆಗಿನ ಮೊದಲ ಹೆಜ್ಜೆ ಎಂಬುದನ್ನು ವಿಶ್ವ ಡ್ರಗ್ಸ್ ವರದಿ-2022 ಯಲ್ಲಿ ಉಲ್ಲೇಖಿಸಲಾಗಿದೆ.

    ಹುಕ್ಕಾ ಸೇವನೆಯ ಅಪಾಯಗಳು ಸಿಗರೇಟ್ ಸೇವನೆಗಿಂತ ಹಲವು ಪಟ್ಟು ಹೆಚ್ಚಾಗಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಹುಕ್ಕಾ ಹೊಗೆಯು ನಿಕೋಟಿನ್, ಟಾರ್ ಮತ್ತು ಭಾರವಾದ ಲೋಹ ಸೇರಿದಂತೆ ಅನೇಕ ಹಾನಿಕಾರಕ ಪದಾರ್ಥಗಳನ್ನು ಹೊಂದಿದೆ. ಹುಕ್ಕಾ ಸೇವಿಸುವವರು ವಿವಿಧ ರೀತಿಯ ಕ್ಯಾನ್ಸರ್ ಮತ್ತು ಹೃದ್ರೋಗ ಸೇರಿದಂತೆ ಹಲವು ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಶಿಕ್ಷಣ ಸಂಸ್ಥೆಗಳಿಗೆ ಸಮೀಪದಲ್ಲಿರುವ ಅಕ್ರಮ ಹುಕ್ಕಾ ಬಾರ್‌ಗಳು ಸೇರಿದಂತೆ ಹುಕ್ಕಾ ಮೇಲಿನ ನಿಷೇಧದಿಂದಾಗಿ ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ಬಾಗಿಲುಗಳು ಬಂದ್ ಆಗಲಿವೆ. ವಿಶೇಷವಾಗಿ ರಾಜ್ಯ ಸರ್ಕಾರವು ಹೇರಿದ ನಿಷೇಧವು, ಕೋಟ್ಪಾ 2003 ಮತ್ತು ಬಾಲ ನ್ಯಾಯ ಕಾಯಿದೆ, 2015 ಸೇರಿದಂತೆ ಕಾನೂನು ನಿಬಂಧನೆಗಳಿಂದ ಬೆಂಬಲಿತವಾಗಿದೆ. ಈ ನಿಯಮಗಳೆಲ್ಲವನ್ನೂ ಮೀರಿ ಹುಕ್ಕಾ ಬಾರ್‌ಗಳು ಇದುವರೆಗೂ ಕಾರ್ಯಾಚರಿಸುತ್ತಿತ್ತು.

    ರಾಜ್ಯದ ಜನತೆಯ ಆರೋಗ್ಯವನ್ನು ಸಂರಕ್ಷಿಸಲು ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಪಾಯಕಾರಿ ಅಂಶಗಳ ವಿರುದ್ಧದ ದಿಟ್ಟ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಹುಕ್ಕಾ ಬ್ಯಾನ್ ಮೂಲಕ ಆರೋಗ್ಯ ಸಚಿವರು ಪುನರುಚ್ಚರಿಸಿದ್ದಾರೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಬಾ‌ರ್‌ಗಳು, ಲಾಂಜ್‌ಗಳು, ಕೆಫೆಗಳು, ಕ್ಲಬ್‌ಗಳು ಮತ್ತು ಇತರ ಸ್ಥಳಗಳಲ್ಲಿ ಹುಕ್ಕಾ ಬಳಕೆ, ಮಾರಾಟ ಮತ್ತು ಸೇವೆಯ ನಿಷೇಧವು ಯುವಜನರನ್ನು ಮಾದಕ ವ್ಯಸನದಿಂದ ಮತ್ತು ತಂಬಾಕಿನ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸುವಲ್ಲಿ ನಿರ್ಣಾಯಕ ಹಂತವಾಗಿದೆ.

  • ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ: ದಿನೇಶ್ ಗುಂಡೂರಾವ್

    ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯ: ದಿನೇಶ್ ಗುಂಡೂರಾವ್

    ಬೆಂಗಳೂರು: ಒತ್ತಡದ ಜೀವನ ಶೈಲಿಯಲ್ಲಿ ದೈಹಿಕ ಆರೋಗ್ಯಕ್ಕೆ ನೀಡುವ ಮಹತ್ವವನ್ನ ಮಾನಸಿಕ ಆರೋಗ್ಯಕ್ಕೂ ನೀಡುವ ಅಗತ್ಯತೆ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅಭಿಪ್ರಾಯ ವ್ಯಕ್ತಪಡಿಸಿದರು.‌

    ಕ್ಲಿನಿಕಲ್ ಸೈಕಾಲಜಿ ಸೊಸೈಟಿ ಆಫ್ ಇಂಡಿಯಾ ಹಾಗೂ ನಿಮ್ಹಾನ್ಸ್‌ನ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ಮಾನಸಿಕ ಆರೋಗ್ಯ ಕುರಿತ ತಜ್ಞರ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಯೋಗ, ಧ್ಯಾನ, ಮನಸ್ಸಿನಲ್ಲಿ ಸದಾ ಧನಾತ್ಮಕ ಚಿಂತನೆಗಳನ್ನು ಮಾಡುವ ಮುಖೇನ ನಮ್ಮ ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು ಎಂದರು. ಇದನ್ನೂ ಓದಿ: ಬಿಬಿಎಂಪಿಯಲ್ಲಿ 118 ಕೋಟಿ ರೂ. ಬೋಗಸ್ ಬಿಲ್ – ಸಚಿವ ದರ್ಶನಾಪುರ

    ಮಾನಸಿಕ ಆರೋಗ್ಯ, ಬದಲಾಗುತ್ತಿರುವ ಜಗತ್ತು, ಹೊಸ ಸವಾಲುಗಳು ಮತ್ತು ಅವಕಾಶಗಳ ಕುರಿತಂತೆ ವಿವಿಧ ಶ್ರೇಣಿಯ ಮಾನಸಿಕ ಆರೋಗ್ಯ ತಜ್ಞರು, ವಿದ್ಯಾರ್ಥಿಗಳು, ಕ್ಲಿನಿಕಲ್ ಸೈಕಾಲಜಿಸ್ಟ್‌ಗಳು, ಮನಶಾಸ್ತ್ರಜ್ಞರನ್ನ ಒಟ್ಟುಗೂಡಿಸುವುದು ಸಹ ಮುಖ್ಯವಾಗಿದೆ. ಈ ರೀತಿಯ ಸಮ್ಮೇಳನಗಳು ಹೊಸ ವಿಚಾರಗಳು, ಸಂಶೋಧನೆಗಳನ್ನ ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.‌

    ಮಾನಸಿಕ ಆರೋಗ್ಯದ ಮಹತ್ವ ಮತ್ತು ಸಮುದಾಯದ ಮಾನಸಿಕ ಆರೋಗ್ಯ ಅಗತ್ಯಗಳನ್ನು ನಿಭಾಯಿಸುವಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ಪಾತ್ರ ಪ್ರಮುಖವಾದದ್ದು.‌ ಈ ನಿಟ್ಟಿನಲ್ಲಿ ನಿಮ್ಹಾನ್ಸ್ ಸಂಸ್ಥೆ ದೇಶದ ಒಂದು ರತ್ನ ಎಂದರೆ ತಪ್ಪಾಗಲಾರದು. ಅದರಲ್ಲೂ ನಿಮ್ಹಾನ್ಸ್ ಕರ್ನಾಟಕದಲ್ಲಿ ನೆಲೆಗೊಂಡಿರುವುದು ಅದೃಷ್ಟ ಎಂದರು.‌ ಇದನ್ನೂ ಓದಿ: ಕಮಿಷನ್ ಆರೋಪ; ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್‍ಗೆ ಇಳಿದಿದೆಯೇ: ಆರ್.ಅಶೋಕ್ ಪ್ರಶ್ನೆ

    ನಿಮ್ಹಾನ್ಸ್‌ನ CPSI – Psycho Legal Aid Cell ಹಾಗೂ ಮಾನಸಿಕ ಆರೋಗ್ಯದ ಕುರಿತಾದ ಎರಡು ಪುಸ್ತಕಗಳನ್ನು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧಾರ್ಮಿಕ ಕಟ್ಟುಪಾಡು ಮೀರಿ ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬ- ದಿನೇಶ್ ಗುಂಡೂರಾವ್ ಮೆಚ್ಚುಗೆ

    ಧಾರ್ಮಿಕ ಕಟ್ಟುಪಾಡು ಮೀರಿ ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬ- ದಿನೇಶ್ ಗುಂಡೂರಾವ್ ಮೆಚ್ಚುಗೆ

    ಬೆಂಗಳೂರು: ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಅಂಗಾಂಗ ದಾನ ಮಾಡಿದ ಮುಸ್ಲಿಂ ಕುಟುಂಬದ ಕಾರ್ಯವನ್ನ ಆರೋಗ್ಯ ಸಚಿವ (Health Minister) ದಿನೇಶ್ ಗುಂಡೂರಾವ್ (Dinesh Gundu Rao) ಶ್ಲಾಘಿಸಿದ್ದಾರೆ. ಅಲ್ಲದೇ ಅಂಗಾಂಗ ದಾನ (Organ Donation) ಮಾಡಿದ್ದ ಫಾರ್ದಿನ್ ಖಾನ್ ಅವರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಸನ್ಮಾನಿಸಿದ್ದಾರೆ.

    ಅಂಗಾಂಗ ದಾನ ನಿಜವಾಗಿಯೂ ಆತ್ಮಚೈತನ್ಯ ನೀಡುವ ಕಾರ್ಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಅಂಗಾಂಗ ದಾನಕ್ಕೆ ಧಾರ್ಮಿಕ ಕಟ್ಟುಪಾಡುಗಳಿವೆ. ಆದರೆ ಫಾರ್ದಿನ್ ಕುಟುಂಬ ಧಾರ್ಮಿಕ ಕಟ್ಟುಪಾಡುಗಳನ್ನು ಮೀರಿ ಅಂಗಾಂಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ಮರುಜೀವ ನೀಡಿದ್ದಾರೆ ಎಂದು ಅವರು ಪ್ರಶಂಶಿಸಿದ್ದಾರೆ. ಇದನ್ನೂ ಓದಿ: ಹೆಲ್ಪ್‌ಲೈನ್ ಹೆಸರಲ್ಲಿ ಒಬ್ಬರಿಗೆ 4 ಲಕ್ಷ ರೂ. ವೇತನ- ತನಿಖೆಗೆ ಆದೇಶಿಸಿದ ಸಚಿವ ಜಮೀರ್

    22 ವರ್ಷದ ಫಾರ್ದಿನ್ ಖಾನ್ ಜೂ.4 ರಂದು ಮದುವೆ ಸಮಾರಂಭ ಮುಗಿಸಿ ವಾಪಸ್ ಬರುತ್ತಿದ್ದಾಗ ತುಮಕೂರಿನ (Tumkur) ಶಿರಾ ಬಳಿ ಅಪಘಾತಕ್ಕೀಡಾಗಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ಬಳಿಕ ಜೂ.7ರ ಬೆಳಗ್ಗೆ ಫಾರ್ದಿನ್ ಖಾನ್ ಮೆದುಳು ನಿಷ್ಕ್ರೀಯಗೊಂಡಿರುವುದಾಗಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ (SPARSH Hospital) ವೈದ್ಯರು ಘೋಷಿಸಿದ್ದರು. ಆದರೆ ಉಳಿದೆಲ್ಲಾ ಅಂಗಾಂಗಗಳು ವೆಂಟಿಲೇಟರ್ ಸಹಾಯದಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವು.

    ಈ ದುಃಖದ ಸ್ಥಿತಿಯಲ್ಲೂ ಫಾರ್ದಿನ್ ಕುಟುಂಬದವರು ಆತನ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದರು. ಹೃದಯವನ್ನು ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದ 57 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ. ಪಿತ್ತಜನಕಾಂಗವನ್ನು ಯಶವಂತಪುರ ಸ್ಪರ್ಶ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 42 ವರ್ಷದ ರೋಗಿಗೆ ಕಸಿ ಮಾಡಲಾಗಿದೆ. ಎಡ ಮೂತ್ರಪಿಂಡ ಮತ್ತು ಫ್ಯಾಂಕ್ರಿಯಾಸ್‍ನ್ನು ಅಪೆÇೀಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗೆ ಬಹು ಅಂಗಾಂಗ ಕಸಿ ಮಾಡಲಾಗಿದೆ. ಬಲ ಮೂತ್ರಪಿಂಡವನ್ನು ಸ್ಪರ್ಶ್ ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗಿದೆ. ಕಣ್ಣಿನ ಕಾರ್ನಿಯಾವನ್ನು ನಾರಾಯಣ ನೇತ್ರಾಲಯಕ್ಕೆ ನೀಡಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಸುಪ್ರೀಂ ತಡೆ

  • ಗುಂಡಿನ ದಾಳಿಗೆ ಒಡಿಶಾದ ಆರೋಗ್ಯ ಸಚಿವ ಸಾವು

    ಗುಂಡಿನ ದಾಳಿಗೆ ಒಡಿಶಾದ ಆರೋಗ್ಯ ಸಚಿವ ಸಾವು

    ಭುವನೇಶ್ವರ: ಗುಂಡಿನ ದಾಳಿಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಒಡಿಶಾದ ಆರೋಗ್ಯ ಸಚಿವ (Odisha Health Minister) ಹಾಗೂ ಬಿಜೆಡಿ (BJD) ಹಿರಿಯ ನಾಯಕ ನಬಾ ದಾಸ್ (Naba Das) (61) ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಭಾನುವಾರ ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರ ಬಳಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ದಾಸ್ ಮೇಲೆ ಸಹಾಯಕ ಸಬ್ ಇನ್ಸ್ಪೆಕ್ಟರ್ (ASI) ಒಬ್ಬ ಗುಂಡು ಹಾರಿಸಿದ್ದ. ಇದನ್ನೂ ಓದಿ: ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್‌ 19 ವಿಶ್ವಕಪ್‌

    ತಕ್ಷಣವೇ ಅವರನ್ನು ವಿಮಾನದಲ್ಲಿ ಭುವನೇಶ್ವರಕ್ಕೆ ಚಿಕಿತ್ಸೆಗೆಂದು ಏರ್ ಲಿಫ್ಟ್ ಮಾಡಲಾಗಿತ್ತು. ಅವರ ಎದೆಯ ಭಾಗಕ್ಕೆ ಬುಲೆಟ್ ತಗುಲಿದ್ದರಿಂದ ತೀವ್ರವಾಗಿ ಗಾಯವಾಗಿತ್ತು. ಅವರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.

    ಗುಂಡಿನ ದಾಳಿಯ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯ ಕುರಿತು ಅಧಿಕಾರಿಗಳು ತನಿಖೆಗೆ ಆರಂಭಿಸಿದ್ದಾರೆ. ಇದನ್ನೂ ಓದಿ: ಸ್ಕೂಲ್‌ಡೇಯಲ್ಲಿ ರೇಣುಕಾಚಾರ್ಯ ರಾಜಕೀಯ ಭಾಷಣ – ಫುಲ್ ಕ್ಲಾಸ್, ವೇದಿಕೆಯಿಂದ ಕೆಳಗಿಳಿಸಿದ ಗ್ರಾಮಸ್ಥರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಊಹಾಪೋಹಗಳಿಗೆ ಕಿವಿಗೊಡದಂತೆ SMK ನಿವಾಸದಿಂದ ಸಂದೇಶ

    ಬೆಂಗಳೂರು: ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ಅವರ ಆರೋಗ್ಯದಲ್ಲಿ (Health) ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಊಹಾಪೋಹಗಳಿಗೆ ಕಿವಿಗೊಡದಂತೆ ಮನವಿ ಮಾಡುತ್ತೇವೆ ಎಂಬುದಾಗಿ ಎಸ್.ಎಂ.ಕೃಷ್ಣ ನಿವಾಸದಿಂದ ಸಂದೇಶ ಬಂದಿದೆ.

    ಶ್ವಾಸಕೋಶದ (Lungs) ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ (Chief Minister) ಎಸ್.ಎಂ ಕೃಷ್ಣ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಿಸಲಾಗಿದೆ. ಡಾ.ಸತ್ಯನಾರಾಯಣ್ ಮತ್ತು ಡಾ.ಸುನೀಲ್ ಕಾರಂತ್ ವೈದ್ಯರ ತಂಡದಿಂದ ಐಸಿಯುನಲ್ಲಿ ಚಿಕಿತ್ಸೆ (Treatment) ನೀಡಲಾಗುತ್ತಿದೆ. ಆರೋಗ್ಯ ಸಚಿವ ಡಾ.ಕೆ ಸುಧಾಕರ್ (K Sudhakar) ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ವೈದ್ಯರ ತಂಡದೊಂದಿಗೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಸಿಪಿಐ ಇಲ್ಲಾಳ್‍ ಮೇಲೆ ಹಲ್ಲೆ ಪ್ರಕರಣ- ಆಸ್ಪತ್ರೆಗೆ ಸಂಸದ ಜಾಧವ್ ಭೇಟಿ

    ಈ ನಡುವೆ ಎಸ್‌ಎಂ ಕೃಷ್ಣ ನಿವಾಸದಿಂದ ಸಂದೇಶ ಬಂದಿದ್ದು, ಎಸ್‌ಎಂ ಕೃಷ್ಣ ಅವರಿಗೆ ನಿನ್ನೆ ರಾತ್ರಿ ಜ್ವರ ಕಾಣಿಸಿಕೊಂಡ ಕಾರಣ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋವಿಡ್ ಹಾಗೂ ಜ್ವರಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಊಹಾಪೊಹದ ಮಾಹಿತಿಗಳಿಗೆ ಕಿವಿಗೊಡದಂತೆ ಎಸ್‌ಎಂಕೆ ಪರವಾಗಿ ಕೊರುತ್ತೇವೆ ಎಂಬುದಾಗಿ ಸಂದೇಶ ರವಾನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ

    ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ

    ಲಿಸ್ಬನ್: ಭಾರತೀಯ ಗರ್ಭಿಣಿ ಪ್ರವಾಸಿಯೊಬ್ಬರು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆಯಿಲ್ಲದೇ ಪೋರ್ಚುಗಲ್‍ನಲ್ಲಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ರಾಜೀನಾಮೆ ನೀಡಿದ್ದಾರೆ.

    ತುರ್ತು ಪ್ರಸೂತಿ ಸೇವೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರಿಂದಾಗಿ ಹಾಸಿಗೆಯ ಕೊರತೆ ಉಂಟಾಗಿತ್ತು. ಇದರಿಂದಾಗಿ 34 ವರ್ಷದ ಭಾರತೀಯ ಗರ್ಭಿಣಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸುವ ಸಮಯದಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು ತೀವ್ರ ಟೀಕೆಗೆ ಒಳಗಾಗಿದೆ. ಹೀಗಾಗಿ ಆರೋಗ್ಯ ಸಚಿವೆ ರಾಜೀನಾಮೆ ನೀಡಿದ್ದಾರೆ.

    ಈ ವೇಳೆ ಆರೋಗ್ಯ ಸಚಿವೆ ಮಾರ್ಟಾ ಟೆಮಿಡೊ ಮಾತನಾಡಿ, ಇನ್ನೂ ಮುಂದೆ ಯಾವುದೇ ಷರತ್ತುಗಳನ್ನು ಹೊಂದಿಲ್ಲ. ರಾಜೀನಾಮೆಯನ್ನು ಪ್ರಧಾನಮಂತ್ರಿ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಈ ರಾಜೀನಾಮೆಯನ್ನು ಲಿಸ್ಬನ್‍ನಲ್ಲಿ ಗರ್ಭಿಣಿ ಸಾವನ್ನಪ್ಪಿದ 5 ಗಂಟೆಯ ನಂತರ ಘೋಷಿಸಲಾಗಿದೆ. ಇದನ್ನೂ ಓದಿ: ಬ್ಲೇಡ್‍ನಿಂದ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು!

    crime

    ಘಟನೆಯೇನು?: 31 ವಾರಗಳ ಗರ್ಭಿಣಿಯಾಗಿದ್ದ ಭಾರತೀಯ ಮಹಿಳೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಅತಿದೊಡ್ಡ ಆರೋಗ್ಯ ಸೌಲಭ್ಯಗಳಲ್ಲಿ ಒಂದಾದ ಸಾಂಟಾ ಮಾರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆಯ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲಾಯಿತು. ಆದರೆ ನವಜಾತ ಶಿಶುಗಳ ವಿಭಾಗ ತುಂಬಿದ್ದರಿಂದ ಗರ್ಭಿಣಿಯನ್ನು ಡಿ ಸಾಂಟಾ ಮರಿಯಾ ಆಸ್ಪತ್ರೆಯಿಂದ ಸಾವೊ ಫ್ರಾನ್ಸಿಸ್ಕೊ ಕ್ಸೇವಿಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಆಕೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮೋದಿ ಆಡಳಿತದ ವಿರುದ್ಧ ಕೆಸಿಆರ್ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಜೂನ್ 9ರ ವರೆಗೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ED ಕಸ್ಟಡಿಗೆ

    ಜೂನ್ 9ರ ವರೆಗೆ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ED ಕಸ್ಟಡಿಗೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಅರೆಸ್ಟ್ ಆಗಿದ್ದ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ನನ್ನು ಜಾರಿ ನಿರ್ದೇಶನಾಲಯವು ಜೂನ್ 9ರ ವರೆಗೆ ಕಸ್ಟಡಿಗೆ ಪಡೆದುಕೊಂಡಿದೆ.

    ಜೈನ್ ಅವರನ್ನು ರೋಸ್ ರೆವೆನ್ಯೂ ನ್ಯಾಯಾಲಯಕ್ಕೆ ಮಂಗಳವಾರ ಹಾಜರುಪಡಿಸಲಾಗಿತ್ತು. ಜೈನ್ ಪರವಾಗಿ ಹಿರಿಯ ವಕೀಲ ಎನ್.ಹರಿಹರನ್ ಅವರು ವಾದ ಮಂಡಿಸಿದರು. ಕೇಂದ್ರೀಯ ಸಂಸ್ಥೆಯ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಇದನ್ನೂ ಓದಿ: ಕರ್ನಾಟದಲ್ಲಿದ್ದಿದ್ದರೆ ನಿಮ್ಮ ಸಂತೋಷದಲ್ಲಿ ನಾನೂ ಭಾಗಿಯಾಗ್ತಿದ್ದೆ: ಮೋದಿ

    ಹಿನ್ನೆಲೆ ಏನು?: ಏಪ್ರಿಲ್ ತಿಂಗಳಲ್ಲಿ ಸತ್ಯೇಂದ್ರ ಜೈನ್ ಕುಟುಂಬದ ಒಡೆತನದಲ್ಲಿರುವ 4.81 ಕೋಟಿ ರೂ. ಮೌಲ್ಯದ 5 ಸಂಸ್ಥೆಗಳಿಗೆ ಸೇರಿದ ಸ್ಥಿರಾಸ್ತಿಯನ್ನು ಇಡಿ ಜಪ್ತಿ ಮಾಡಿತ್ತು. 4 ವರ್ಷಗಳ ಹಿಂದೆ 2018ರಲ್ಲಿ ಇಡಿ ಸತ್ಯೇಂದ್ರ ಜೈನ್‌ರನ್ನು ವಿಚಾರಣೆಗೆ ಒಳಪಡಿಸಿತ್ತು. ಆ ಬಳಿಕ ಇದೀಗ ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (CBI) ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಇಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದೀಗ ಸತ್ಯೇಂದ್ರ ಜೈನ್‌ರನ್ನು ಬಂಧಿಸಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

    ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯೇಂದ್ರ ಜೈನ್ ಬಂಧನವಾಗಿದೆ ಎನ್ನಲಾಗಿದೆ. ಇವರು ಹಿಮಾಚಲ ಪ್ರದೇಶದ ಚುನಾವಣೆಯ ಎಎಪಿ ಉಸ್ತುವಾರಿಯಾಗಿದ್ದರು. ಸತ್ಯೇಂದ್ರ ಜೈನ್ ವಿರುದ್ಧ 8 ವರ್ಷಗಳಿಂದ ನಕಲಿ ಕೇಸ್ ಮುಂದುವರಿಯುತ್ತಿತ್ತು. ಇದುವರೆಗೆ ಇಡಿ ಹಲವು ಬಾರಿ ವಿಚಾರಣೆಗೆ ಒಳಪಡಿಸಿ ಕ್ಲೀನ್ ಚಿಟ್ ನೀಡಿತ್ತು. ಇದೀಗ ಮತ್ತೆ ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದೆ.