Tag: Health Doctor

  • ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದ್ವೆ ಇಟ್ಟುಕೊಂಡ್ರೆ ಲೈಸೆನ್ಸ್ ರದ್ದು

    ಹೊರಾಂಗಣದಲ್ಲಿ ಸಭೆ, ಸಮಾರಂಭ, ಮದ್ವೆ ಇಟ್ಟುಕೊಂಡ್ರೆ ಲೈಸೆನ್ಸ್ ರದ್ದು

    ಬೆಂಗಳೂರು: ಶಿವಾಜಿನಗರ ವಲಯದಲ್ಲಿ ಹೊರಾಂಗಣ ಕಾರ್ಯಕ್ರಮಗಳನ್ನು ನಡೆಸುವುದನ್ನು ರದ್ದುಪಡಿಸಲಾಗಿದೆ. ಬಿಬಿಎಂಪಿಯ ಆಯುಕ್ತರ ಆದೇಶದ ಮೇರೆಗೆ ಕ್ವೀನ್ಸ್ ರಸ್ತೆ, ಶಿವಾಜಿನಗರ ವಲಯದ ಆರೋಗ್ಯ ವೈದ್ಯಾಧಿಕಾರಿ ಈ ನೋಟಿಸ್ ಹೊರಡಿಸಿದ್ದಾರೆ.

    ಕೊರೊನಾ ವೈರಸ್ ಹಾಗೂ ಕಾಲರಾ ಹಿನ್ನೆಲೆಯಲ್ಲಿ ಮದುವೆ, ಸಭೆ, ಸಮಾರಂಭಗಳನ್ನು ಹೋಟೆಲ್‍ಗಳು, ಕಲ್ಯಾಣ ಮಂಟಪಗಳು, ಸ್ಟಾರ್ ಹೋಟೇಲ್‍ಗಳಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಬಾರದೆಂದು ಸೂಚಿಸಿದ್ದಾರೆ.

    ಒಂದು ವೇಳೆ ಆದೇಶದ ಬಳಿಕವೂ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿದರೆ ಉದ್ಯಮ ಪರವಾನಗಿ ರದ್ದುಪಡಿಸಲಾವುದು. ಜೊತೆಗೆ ಹೋಟೆಲ್, ಕಲ್ಯಾಣ ಮಂಟಪಗಳನ್ನು ಮುಚ್ಚಲಾಗುವುದು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.

    ಕರ್ನಾಟಕದಲ್ಲಿ ಈಗಾಗಲೇ ಕೊರೊನಾ ಸೋಂಕಿನಿಂದ ವೃದ್ಧನೊಬ್ಬ ಮೃತಪಟ್ಟಿದ್ದಾನೆ. ಹೀಗಾಗಿ ರಾಜ್ಯಾದ್ಯಂತ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದ್ದರಿಂದ ಮದುವೆ, ಸಭೆ, ಸಮಾರಂಭ ನಡೆಸಬಾರದು ಎಂದು ಸೂಚಿಸಲಾಗಿದೆ.