Tag: health department

  • ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು

    ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು

    ಬೆಂಗಳೂರು: ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನಿನ್ನೆ 1,800 ಇದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು ದಿಢೀರನೆ 2 ಸಾವಿರ ಗಡಿ ದಾಟಿದೆ. ರಾಜ್ಯದಲ್ಲಿಂದು 2,130 ಹೊಸ ಪ್ರಕರಣಗಳು ದಾಖಲಾಗಿದ್ದು, ನಾಲ್ವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,395 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,53,776 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 32,685 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,77,36,222 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಸಿಂಗಾಪುರ ಭೇಟಿ ರದ್ದು – ನಾನು ಯಾರನ್ನೂ ದೂಷಿಸಲ್ಲ: ಕೇಜ್ರಿವಾಲ್ 

    ಕೋವಿಡ್‌ನಿಂದ ಇಂದು 4 ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,101 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.6.51 ಇದೆ. 9,866 ಸಕ್ರಿಯ ಪ್ರಕರಣಗಳಿವೆ. ಇಂದು 32,685 ಮಂದಿಯನ್ನು (24,496 ರ‍್ಯಾಪಿಡ್ ಆಂಟಿಜನ್, 8,189 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 95,524 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:  MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

    ಬೆಂಗಳೂರು ನಗರದಲ್ಲೇ 1,615 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 6, ಬಾಗಲಕೋಟೆ 15, ಬಳ್ಳಾರಿ 27, ಬೆಳಗಾವಿ 34, ಬೀದರ್ 13, ಚಾಮರಾಜನಗರ 7, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ತಲಾ ಒಂದೊಂದು ಪ್ರಕರಣ, ದಕ್ಷಿಣ ಕನ್ನಡ 20, ದಾವಣಗೆರೆ 6, ಧಾರವಾಡ 70, ಗದಗ 1, ಹಾಸನ 40, ಹಾವೇರಿ 8, ಕಲಬುರಗಿ 33, ಕೊಡಗು 47, ಕೋಲಾರ 18, ಕೊಪ್ಪಳ 3, ಮಂಡ್ಯ 22, ಮೈಸೂರು 51, ರಾಯಚೂರು 6, ರಾಮನಗರ 3, ಶಿವಮೊಗ್ಗ 12, ತುಮಕೂರು 41, ಉಡುಪಿ 7, ಉತ್ತರ ಕನ್ನಡ 6, ವಿಜಯಪುರ 2 ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 2 ಸಾವಿರ ಸಮೀಪದತ್ತ ಕೊರೊನಾ ಸೋಂಕಿನ ಪ್ರಕರಣ – ಮೂವರು ಬಲಿ

    ರಾಜ್ಯದಲ್ಲಿಂದು 2 ಸಾವಿರ ಸಮೀಪದತ್ತ ಕೊರೊನಾ ಸೋಂಕಿನ ಪ್ರಕರಣ – ಮೂವರು ಬಲಿ

    ಬೆಂಗಳೂರು: ಸತತ ಒಂದು ವಾರದಿಂದಲೂ 1,500ರ ಮಿತಿಯಲ್ಲಿದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 2 ಸಾವಿರ ಸಮೀಪಿಸಿದೆ. ರಾಜ್ಯದಲ್ಲಿಂದು 1,889 ಪ್ರಕರಣಗಳು ದಾಖಲಾಗಿದ್ದು, ಮೂರು ಮರಣ ಪ್ರಕರಣ ದಾಖಲಾಗಿದೆ.

    ಇಂದು ರಾಜ್ಯದಲ್ಲಿ 1,587 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,52,381 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 31,706 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,77,03,537 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಮಹಮ್ಮದ್ ಫಾಜಿಲ್ ಬರ್ಬರ ಹತ್ಯೆ- ಮಂಗಳೂರಿನ ಬಜ್ಬೆ, ಪಣಂಬೂರು, ಸುರತ್ಕಲ್, ಮುಲ್ಕಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

    ಕೋವಿಡ್‌ನಿಂದ ಇಂದು ಮೂರು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,097 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.5.95 ಇದೆ. 9,135 ಸಕ್ರಿಯ ಪ್ರಕರಣಗಳಿವೆ. ಇಂದು 31,706 ಮಂದಿಯನ್ನು (26,110 ರ‍್ಯಾಪಿಡ್ ಆಂಟಿಜನ್, 5,596 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 70,567 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ

    ಬೆಂಗಳೂರು ನಗರದಲ್ಲೇ 1,475 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 5, ಬಾಗಲಕೋಟೆಯಲ್ಲಿ 38, ಬಳ್ಳಾರಿಯಲ್ಲಿ 26, ಬೆಳಗಾವಿ 20, ಬೀದರ್‌ನಲ್ಲಿ 9, ಚಾಮರಾಜನಗರದಲ್ಲಿ 12, ಚಿಕ್ಕಬಳ್ಳಾಪುರದಲ್ಲಿ 13, ಚಿಕ್ಕಮಗಳೂರಿನಲ್ಲಿ 6, ಚಿತ್ರದುರ್ಗದಲ್ಲಿ 4, ದಕ್ಷಿಣ ಕನ್ನಡದಲ್ಲಿ 20, ದಾವಣಗೆರೆಯಲ್ಲಿ 6, ಧಾರವಾಡದಲ್ಲಿ 46, ಗದಗದಲ್ಲಿ 1, ಹಾಸನದಲ್ಲಿ 17 ಹಾವೇರಿಯಲ್ಲಿ 3, ಕಲಬುರಗಿಯಲ್ಲಿ 24, ಕೊಡಗಿನಲ್ಲಿ 21, ಕೋಲಾರದಲ್ಲಿ 23, ಕೊಪ್ಪಳದಲ್ಲಿ 9, ಮಂಡ್ಯದಲ್ಲಿ 19, ಮೈಸೂರಿನಲ್ಲಿ 39, ರಾಯಚೂರಿನಲ್ಲಿ 9, ರಾಮನಗರದಲ್ಲಿ 1, ಶಿವಮೊಗ್ಗದಲ್ಲಿ 11, ತುಮಕೂರಿನಲ್ಲಿ 12, ಉಡುಪಿಯಲ್ಲಿ 8, ಉತ್ತರ ಕನ್ನಡದಲ್ಲಿ 5, ವಿಜಯಪುರದಲ್ಲಿ 7 ಹಾಗೂ ಯಾದಗಿರಿಯಲ್ಲಿ ಶೂನ್ಯಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,425 ಮಂದಿಗೆ ಕೊರೊನಾ ಸೋಂಕು – ಓರ್ವ ಸಾವು

    ರಾಜ್ಯದಲ್ಲಿಂದು 1,425 ಮಂದಿಗೆ ಕೊರೊನಾ ಸೋಂಕು – ಓರ್ವ ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದೆ. ನಿನ್ನೆ 939 ಇದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 1,425ಕ್ಕೆ ಏರಿಕೆಯಾಗಿದೆ. ನಿನ್ನೆಯಂತೆ ಇಂದೂ ಒಂದು ಮರಣ ಪ್ರಕರಣ ದಾಖಲಾಗಿದೆ.

    ಇಂದು ರಾಜ್ಯದಲ್ಲಿ 1,459 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,49,147 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 23,150 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,76,38,495 ಮಂದಿಗೆ ಟೆಸ್ಟ್ ಮಾಡಲಾಗಿದೆ.

    ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,092 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.6.15 ಇದೆ. 8,861 ಸಕ್ರಿಯ ಪ್ರಕರಣಗಳಿವೆ. ಇಂದು 23,150 ಮಂದಿಯನ್ನು (9,335 ರ‍್ಯಾಪಿಡ್ ಆಂಟಿಜನ್, 13,815 RTPCR) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 85,475 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ನಗರದಲ್ಲೇ 1,198 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 19, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 15, ಬೆಳಗಾವಿ 12, ಬೀದರ್ ನಲ್ಲಿ 4, ಚಾಮರಾಜನಗರದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 4, ದಕ್ಷಿಣ ಕನ್ನಡದಲ್ಲಿ 12, ದಾವಣಗೆರೆಯಲ್ಲಿ 4, ಧಾರವಾಡದಲ್ಲಿ 17, ಕಲಬುರಗಿ ಹಾಗೂ ಕೊಡಗಿನಲ್ಲಿ ತಲಾ 7, ಕೋಲಾರದಲ್ಲಿ 8, ಮಂಡ್ಯದಲ್ಲಿ 5, ಮೈಸೂರಿನಲ್ಲಿ 53, ರಾಯಚೂರಿನಲ್ಲಿ 3, ಶಿವಮೊಗ್ಗ 9, ತುಮಕೂರಿನಲ್ಲಿ 18, ಉಡುಪಿಯಲ್ಲಿ 3, ಉತ್ತರ ಕನ್ನಡದಲ್ಲಿ 7, ವಿಯಪುರದಲ್ಲಿ 12 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ದಾಖಲಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಉಡುಪಿಯಲ್ಲಿ 85 ಮಂದಿಗೆ ಇಲಿ ಜ್ವರ – ಏನಿದರ ಲಕ್ಷಣ?

    ಉಡುಪಿಯಲ್ಲಿ 85 ಮಂದಿಗೆ ಇಲಿ ಜ್ವರ – ಏನಿದರ ಲಕ್ಷಣ?

    ಉಡುಪಿ: ದೇಶಕ್ಕೂ ಕಾಲಿಟ್ಟು ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಜ್ವರದ ಭೀತಿ ಮಾಸುವ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಅಪರೂಪದ ಇಲಿ ಜ್ವರ ಪತ್ತೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

    ಜಿಲ್ಲೆಯ 85 ಮಂದಿಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲಿ ಜ್ವರ ಕಾಣಿಸಿಕೊಂಡಿದ್ದು, ಇದು ಇಲಿಗಳ ಮಲಮೂತ್ರದಿಂದ ಹರಡುವ ಸೋಂಕಾಗಿದೆ. ಮಲೆನಾಡಿನ ತಪ್ಪಲಿನಲ್ಲಿ ಹೆಚ್ಚು ಜನಕ್ಕೆ ಇಲಿಜ್ವರ ಕಾಣಿಸಿಕೊಂಡಿದೆ. ಕುಂದಾಪುರ 40, ಉಡುಪಿ 32, ಕಾರ್ಕಳ 13 ಪ್ರಕರಣ ವರದಿಯಾಗಿದೆ. ಮಳೆಗಾಲದಲ್ಲಿ ಈ ಜ್ವರ ಕಾಣಿಸಿಕೊಳ್ಳಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತು ಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    ಏನಿದು ಇಲಿ ಜ್ವರ?
    ವೈಜ್ಞಾನಿಕವಾಗಿ ಲೆಪ್ಟೊಸ್ಪೈರೋಸಿಸ್ ಎಂದು ಕರೆಸಿಕೊಳ್ಳುವ ಈ ಇಲಿ ಜ್ವರ ಬರುವುದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ. ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಲ್ಲಿ ಇದೂ ಒಂದು. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿ ಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ. ಇದನ್ನೂ ಓದಿ: ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ರೋಗ ಹೇಗೆ ಹರಡುತ್ತದೆ?
    ಹೆಚ್ಚಾಗಿ ಇಲಿ, ಹೆಗ್ಗಣಗಳೇ ರೋಗಾಣುಗಳ ವಾಹಕಗಳು. ಈ ರೋಗ ಇಲಿಗಳನ್ನು ಬಾಧಿಸದಿದ್ದರೂ ಇವು ತಮ್ಮ ಜೀವನ ಪರ್ಯಂತ ಮೂತ್ರದಲ್ಲಿ ರೋಗಾಣುಗಳನ್ನು ವಿಸರ್ಜಿಸುತ್ತಿರುತ್ತವೆ. ಇಂತಹ ಇಲಿಗಳ ಮೂತ್ರದ ಸಂಪರ್ಕಕ್ಕೆ ಬರುವ ಮನುಷ್ಯ, ಪ್ರಾಣಿಗಳಿಗೆ ಸೋಂಕು ತಗಲುತ್ತದೆ. ಹಾಗೆಯೇ ರೋಗಪೀಡಿತ ಪ್ರಾಣಿಗಳ ಮೂತ್ರದ ಮೂಲಕವೂ ಈ ಕಾಯಿಲೆ ಹರಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಅಂಟುವುದಿಲ್ಲ.

    ಮಣ್ಣಿಗೆ ಸೇರಿದ ರೋಗಾಣುಗಳು ಸುಮಾರು ಆರು ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ, ನೆರೆ ಬಂದಾಗ ಈ ರೋಗದ ಹಾವಳಿ ಜಾಸ್ತಿ. ಪಾದದ ಚರ್ಮದಲ್ಲಿನ ಬಿರುಕುಗಳು, ಒಡೆದ ಹಿಮ್ಮಡಿ, ಗಾಯಗಳ ಮೂಲಕ ರೋಗಾಣುಗಳು ದೇಹ ಪ್ರವೇಶಿಸಬಹುದು. ಇಲಿಮೂತ್ರದಿಂದ ಕಲುಷಿತ ನೀರು, ಆಹಾರದ ಮೂಲಕವೂ ದೇಹ ಸೇರುವ ಕ್ರಿಮಿಗಳು ಬಾಯಿ, ಗಂಟಲು, ಅನ್ನನಾಳದ ಮೂಲಕ ಒಳ ಪ್ರವೇಶಿಸುತ್ತವೆ. ಕಣ್ಣು, ಕಿವಿಯ ಮೂಲಕವೂ ರೋಗಾಣುಗಳು ಶರೀರ ಸೇರಬಹುದು. ಸಾಮಾನ್ಯವಾಗಿ ಸೋಂಕು ತಗುಲಿದ ಎರಡು ದಿನಗಳಿಂದ ಎರಡು ಮೂರು ವಾರಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 939 ಮಂದಿ ಕೊರೊನಾ ಸೋಂಕು – ಓರ್ವ ಸಾವು

    ರಾಜ್ಯದಲ್ಲಿಂದು 939 ಮಂದಿ ಕೊರೊನಾ ಸೋಂಕು – ಓರ್ವ ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದ್ದು, ನಿನ್ನೆ 1,151 ರಷ್ಟು ಪತ್ತೆಯಾಗಿದ್ದ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಇಂದು 939ಕ್ಕೆ ಇಳಿದಿದೆ. ಕೆಲ ದಿನಗಳ ಬಳಿಕ ಒಂದು ಮರಣ ಪ್ರಕರಣ ದಾಖಲಾಗಿಲ್ಲ.

    ಇಂದು ರಾಜ್ಯದಲ್ಲಿ 1,204 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,47,688 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 11,750 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,76,15,345 ಮಂದಿಯನ್ನು ಟೆಸ್ಟ್ ಮಾಡಲಾಗಿದೆ.

    ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,091 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.7.99 ಇದೆ. 8,896 ಸಕ್ರಿಯ ಪ್ರಕರಣಗಳಿವೆ.

    ಇಂದು 11,750 ಮಂದಿಯನ್ನು (3,762 ರ‍್ಯಾಪಿಡ್‌ ಆ್ಯಂಟಿಜನ್‌, 7,988 ಆರ್‌ಟಿ-ಪಿಸಿಆರ್‌) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 1,02,781 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ನಗರದಲ್ಲೇ 813 ಪ್ರಕರಣಗಳು ದಾಖಲಾಗಿದ್ದು, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 10, ಬೆಳಗಾವಿ 8, ಬೀದರ್‌, ಚಾಮರಾಜನಗರದಲ್ಲಿ ತಲಾ 5, ದಕ್ಷಿಣ ಕನ್ನಡದಲ್ಲಿ 9, ಧಾರವಾಡದಲ್ಲಿ 2, ಕಲಬುರಗಿಯಲ್ಲಿ 18, ಕೊಡಗಿನಲ್ಲಿ 7, ಕೋಲಾರದಲ್ಲಿ 4, ಮಂಡ್ಯದಲ್ಲಿ 13, ಮೈಸೂರಿನಲ್ಲಿ 18, ರಾಯಚೂರಿನಲ್ಲಿ 3, ಉಡುಪಿಯಲ್ಲಿ 2, ಉತ್ತರ ಕನ್ನಡದಲ್ಲಿ 3, ಯಾದಗಿರಿ, ಹಾಸನ, ಹಾವೇರಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. ವಿಜಯಪುರ, ರಾಮನಗರ, ಕೊಪ್ಪಳ, ಗದಗ, ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಾತ್ರ ಶೂನ್ಯ ಪ್ರಕರಣ ದಾಳಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲೇ ಮೊದಲ ಬಾರಿಗೆ ವ್ಯಕ್ತಿಯಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ

    ದೇಶದಲ್ಲೇ ಮೊದಲ ಬಾರಿಗೆ ವ್ಯಕ್ತಿಯಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ

    ಲಕ್ನೋ: ಉತ್ತರಪ್ರದೇಶದ ಫತೇಪುರ್ ವ್ಯಕ್ತಿಯೊಬ್ಬರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಳೆದ 10 ದಿನಗಳಿಂದಲೂ ಈತ ತಲೆನೋವು, ಕೆಮ್ಮು, ನೆಗಡಿ, ಜ್ವರ ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದನು. ತಪಾಸಣೆಗೆ ಒಳಪಡಿಸಿದಾಗ ಆಫ್ರಿಕನ್ ಹಂದಿಜ್ವರ ಇರುವುದು ಪತ್ತೆಯಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ (CMO) ಅಲೋಕ್ ರಂಜನ್ ತಿಳಿಸಿದ್ದಾರೆ. ಇದನ್ನೂ ಓದಿ: ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ

    ಸದ್ಯ ಸೋಂಕು ವರದಿಯಾದ ವ್ಯಕ್ತಿ ಮತ್ತು ಆತನ ಕುಟುಂಬವನ್ನು ಪ್ರತ್ಯೇಕಿಸಲಾಗಿದ್ದು, ಹೊರಗೆ ತಿರುಗಾಡದಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾದಲ್ಲಿ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಸಿಕ್ತಿಲ್ಲ 

    ಅಸ್ಸಾಂನಲ್ಲಿ ಹಂದಿಗಳಲ್ಲಿ ಪತ್ತೆಯಾಗಿತ್ತು: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿತ್ತು. ಅಲ್ಲದೆ ಆಫ್ರಿಕನ್ ಹಂದಿಜ್ವರ ಪತ್ತೆಯಾದ ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿತ್ತು. ಜೊತೆಗೆ ವ್ಯಾಪ್ತಿ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿ ಕೊಂದ ಹಂದಿಗಳನ್ನು ಹೂಳಲಾಗಿತ್ತು ಎಂದು ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮಂಕಿಪಾಕ್ಸ್ ಭೀತಿ – ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ

    ಮಂಕಿಪಾಕ್ಸ್ ಭೀತಿ – ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ

    ನವದೆಹಲಿ: ದೇಶದಲ್ಲೂ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿನ ಭೀತಿಯಿಂದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಹೈ ಅಲರ್ಟ್ ಘೋಷಿಸಿದೆ. ವಿದೇಶಗಳಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದೆ.

    ಈ ಕುರಿತು ಆರೋಗ್ಯ ಸಚಿವಾಲಯ ತುರ್ತು ಅದೇಶ ಹೊರಡಿಸಿದ್ದು, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳಂತೆ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಇದರಿಂದ ಮಂಕಿಪಾಕ್ಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

    ದುಬೈನಿಂದ ಬಂದಿದ್ದ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆಯಷ್ಟೇ `ಮಂಕಿಪಾಕ್ಸ್’ ತಗುಲಿರುವುದು ಪತ್ತೆಯಾಗಿತ್ತು. ಇದು ದೇಶದಲ್ಲಿ ಪತ್ತೆಯಾದ 2ನೇ ಪ್ರಕರಣವಾಗಿತ್ತು. ಇದಕ್ಕೂ ಮುನ್ನ ಕೇರಳದ ಕೊಲ್ಲಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ದೃಢಪಟ್ಟಿತ್ತು.

    31 ವರ್ಷದ ವ್ಯಕ್ತಿಯೊಬ್ಬರು ಜುಲೈ 13ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಂದ ಸಂಗ್ರಹಿಸಲಾಗಿದ್ದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು. ವ್ಯಕ್ತಿಗೆ ರೋಗ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

    ಈ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯೊಂದಿಗೆ ಕೇಂದ್ರದ ವಿಶೇಷ ತಂಡವು ಪರಿಸ್ಥಿತಿ ಅವಲೋಕಿಸಿತ್ತು. ಬಳಿಕ ಮಂಕಿಪಾಕ್ಸ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರಕರಣ ಪತ್ತೆಯಾದಲ್ಲಿ, ಅದನ್ನು ತಡೆಯಲು ರಾಜ್ಯಗಳಿಗೆ ಎಲ್ಲ ರೀತಿಯ ಸಹಕಾರಗಳನ್ನು ನೀಡಲಾಗುತ್ತದೆ. ಮಂಕಿಪಾಕ್ಸ್ ಅಷ್ಟೇನೂ ಗಂಭೀರವಾದ ಕಾಯಿಲೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು ಧೈರ್ಯ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • 16ರ ಬಾಲಕಿಯಿಂದ 8 ಬಾರಿ ಅಂಡಾಣು ಮಾರಾಟ – 4 ಆಸ್ಪತ್ರೆಗಳು ಶಾಶ್ವತ ಬಂದ್

    16ರ ಬಾಲಕಿಯಿಂದ 8 ಬಾರಿ ಅಂಡಾಣು ಮಾರಾಟ – 4 ಆಸ್ಪತ್ರೆಗಳು ಶಾಶ್ವತ ಬಂದ್

    ಚೆನ್ನೈ: 16 ವರ್ಷದ ಬಾಲಕಿಯಿಂದ ಅಕ್ರಮವಾಗಿ ಅಂಡಾಣು ಪಡೆದು ಮಾರಾಟ ಮಾಡಿದ ಆರೋಪದ ಮೇಲೆ ತಮಿಳುನಾಡಿನ 4 ಆಸ್ಪತ್ರೆಗಳನ್ನು ಶಾಶ್ವತವಾಗಿ ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಆದೇಶಿಸಿದೆ.

    ಬಾಲಕಿಯ ತಾಯಿಯು ಅಕೆಯ ಅಂಡಾಣುಗಳನ್ನು 8 ಬಾರಿ ವಿವಿಧ ಕೇಂದ್ರಗಳಿಗೆ ದಾನ ಮಾಡುವಂತೆ ಒತ್ತಾಯಿಸಿದ್ದಳು ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ತಮಿಳುನಾಡು ಸಿಎಂಗೆ ಕೋವಿಡ್ – ಆಸ್ಪತ್ರೆಗೆ ದಾಖಲು

    21-35 ವಯೋಮಾನದ ಮಹಿಳೆಯರಿಗೆ ಒಂದು ಬಾರಿ ಮಾತ್ರವೇ ಅಂಡಾಣು ದಾನ ಮಾಡಲು ಅನುಮತಿಯಿದೆ. ಆದರೆ ಈ ಪ್ರಕರಣದಲ್ಲಿ ಬಾಲಕಿಯನ್ನು ಹಲವು ಬಾರಿ ಅಂಡಾಣು ಪಡೆಯಲು ಬಲವಂತ ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಹೇಳಿದ್ದಾರೆ.

    ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯನ್ನು ವಯಸ್ಕಳೆಂದು ತೋರಿಸಲು ನಕಲಿ ಆಧಾರ್ ಕಾರ್ಡ್ ಮಾಡಿಸಲಾಗಿದ್ದು, ನಕಲಿ ಗಂಡನ ಒಪ್ಪಿಗೆಯನ್ನೂ ಪಡೆಯಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: 100ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ಭಾರತದಲ್ಲಿ ಇಸ್ಲಾಮಿಕ್‌ ಸರ್ಕಾರ ಸ್ಥಾಪನೆ – ಪೊಲೀಸರಿಗೆ ಸಿಕ್ತು ಹೀಗೊಂದು ದಾಖಲೆ

    ಆಸ್ಪತ್ರೆಗಳು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕಾಯ್ದೆಯನ್ನು ಉಲ್ಲಂಘಿಸಿವೆ. ಅಲ್ಲದೆ, ಆಸ್ಪತ್ರೆಗಳು ಅರ್ಹ ಸಲಹೆಗಾರರನ್ನು ಹೊಂದಿಲ್ಲ, ಅಂಡಾಣು ದಾನಿ ಹುಡುಗಿಗೆ ಕಾರ್ಯವಿಧಾನದ ಸಾಧಕ-ಬಾಧಕಗಳ ಬಗ್ಗೆಯೂ ತಿಳಿಸಿಲ್ಲ ಎಂಬುದನ್ನು ವಿಚಾರಣಾ ಸಮಿತಿ ಕಂಡುಹಿಡಿದಿದೆ. ಹಾಗಾಗಿ ಆಧಾರ್ ದುರ್ಬಳಕೆ ಮತ್ತು ಪೋಕ್ಸೋ ಕಾಯ್ದೆಯಡಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಈ ಪ್ರಕರಣದಲ್ಲಿ ಭಾಗಿಯಾದ ಆಸ್ಪತ್ರೆಗಳಿಗೆ ವೈದ್ಯರೂ ಸೇರಿದಂತೆ 50 ಲಕ್ಷ ರೂ. ವರೆಗೆ ದಂಡ ಮತ್ತು ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಕಾಯ್ದೆಯಡಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಬಹುದು ಎಂದು ಆರೋಗ್ಯ ಸಚಿವರು ವಿವರಿಸಿದ್ದಾರೆ. ಇದನ್ನೂ ಓದಿ: ಮಾಲ್‌ನಲ್ಲಿ ನಮಾಜ್ – ಮಾಲ್ ಬಹಿಷ್ಕರಿಸುವಂತೆ ಹಿಂದೂ ಸಂಘಟನೆಗಳಿಂದ ಕರೆ

    ಆಸ್ಪತ್ರೆಯಲ್ಲಿ ದಾಖಲಾಗಿರುವ ಹಲವು ರೋಗಿಗಳ ಹಿತದೃಷ್ಟಿಯಿಂದ ಆಸ್ಪತ್ರೆ ಸ್ಥಗಿತಗೊಳಿಸಲು 2 ವಾರಗಳ ಕಾಲಾವಕಾಶ ನೀಡಲಾಗಿದೆ. ಅಲ್ಲದೆ ಆಸ್ಪತ್ರೆಗಳು ರಾಜ್ಯ ಆರೋಗ್ಯ ವಿಮಾ ಯೋಜನೆಯಡಿ ತಮ್ಮ ಎಂಪನೆಲ್‌ಮೆಂಟ್ (ಕೇಂದ್ರಸರ್ಕಾರದ ವಿಮೆ ಯೋಜನೆಗಳಿಗೆ ಆಯ್ಕೆಯಾದವರ ಪಟ್ಟಿ) ಅನ್ನು ಸಹ ಕಳೆದುಕೊಳ್ಳುತ್ತವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕಲುಷಿತ ನೀರು ಕುಡಿದು ಎರಡು ಗ್ರಾಮಗಳ 40 ಜನ  ಅಸ್ವಸ್ಥ – ಮಹಿಳೆ ಸಾವು

    ಕಲುಷಿತ ನೀರು ಕುಡಿದು ಎರಡು ಗ್ರಾಮಗಳ 40 ಜನ ಅಸ್ವಸ್ಥ – ಮಹಿಳೆ ಸಾವು

    ರಾಯಚೂರು: ನಗರಸಭೆಯ ಅವಾಂತರದ ಬೆನ್ನಲ್ಲೇ ಕಲುಷಿತ ನೀರು ಕುಡಿದು ಮಾನ್ವಿ ತಾಲೂಕಿನ ಗ್ರಾಮಗಳ 40 ಜನ ಆಸ್ಪತ್ರೆ ಸೇರುತ್ತಿದ್ದಾರೆ. ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ.

    ರಾಯಚೂರಿನ ಮಾನ್ವಿ ತಾಲೂಕಿನ ವಲ್ಕಂದಿನ್ನಿ ಹಾಗೂ ಜೂಕೂರು ಗ್ರಾಮದಲ್ಲಿ ಕಲುಷಿತ ನೀರು ಕುಡಿದು 40ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. 10ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂಕೂರು ಗ್ರಾಮದಲ್ಲಿ ವಾಂತಿ ಭೇದಿಯಿಂದ ಲಕ್ಷ್ಮಿ(28) ಸಾವನ್ನಪ್ಪಿದ್ದು, ಇದಕ್ಕೆ ಗ್ರಾಮಸ್ಥರು ಕಲುಷಿತ ನೀರೇ ಕಾರಣ ಎನ್ನುತ್ತಿದ್ದಾರೆ. ಇದನ್ನೂ ಓದಿ: ಅಬ್ಬರದ ಮಳೆ – ಮನೆಯ ಮೇಲೆ ಮರ ಬಿದ್ದು 6 ಜನರಿಗೆ ಗಾಯ 

    ಆದ್ರೆ ಸಾವಿನ ಬಗ್ಗೆ ಆರೋಗ್ಯ ಇಲಾಖೆ ಇನ್ನೂ ಸ್ಪಷ್ಟನೆ ನೀಡಿಲ್ಲ. ತುಂಗಭದ್ರಾ ನದಿಯಿಂದ ಕಾಲುವೆಗೆ ನೀರು ಹರಿಸಿ ಅದೇ ನೀರನ್ನು ಶುದ್ಧೀಕರಿಸದೇ ವಲ್ಕಂದಿನ್ನಿ ಹಾಗೂ ಜೂಕೂರು ಗ್ರಾಮಕ್ಕೆ ನೇರವಾಗಿ ಸರಬರಾಜು ಮಾಡಲಾಗಿದೆ. ಹಳ್ಳ ಹಾಗೂ ಚರಂಡಿಗಳ ನೀರು ತುಂಗಭದ್ರಾ ನದಿಗೆ ನೇರವಾಗಿ ಸೇರುವುದರಿಂದ ನದಿ ನೀರು ಕಲುಷಿತವಾಗಿದೆ.

    ಕಾರಣವೇನು?
    ಪಂಚಾಯತಿ ಅಧಿಕಾರಿಗಳು ನದಿಯಿಂದ ನೇರವಾಗಿ ಗ್ರಾಮಗಳಿಗೆ ನೀರನ್ನು ಸರಬರಾಜು ಮಾಡಿ ಯಡವಟ್ಟು ಮಾಡಿದ್ದಾರೆ. ನೀರು ಸರಬರಾಜು ಮಾಡುವ ಪೈಪುಗಳು ಅಲ್ಲಲ್ಲಿ ಹಾಳಾಗಿರುವುದರಿಂದ ಕೊಳಚೆ ನೀರು ಪೈಪಿಗೆ ಸೇರಿದೆ. ಇದೇ ನೀರನ್ನು ಕುಡಿದ ಮಕ್ಕಳು ಹಾಗೂ ದೊಡ್ಡವರು ವಾಂತಿ ಭೇದಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ.

    ಈ ಮಧ್ಯೆ ಎಚ್ಚೆತ್ತ ಆರೋಗ್ಯ ಇಲಾಖೆ ವಲ್ಕಂದಿನ್ನಿ ಗ್ರಾಮದ ಸಮುದಾಯ ಭವನದಲ್ಲಿ ಗ್ರಾಮಸ್ಥರಿಗೆ ಚಿಕಿತ್ಸೆ ವ್ಯವಸ್ಥೆ ಮಾಡಿದೆ. ವೈದ್ಯರು ಮತ್ತು ಆಶಾ ಅಂಗನವಾಡಿ ಕಾರ್ಯಕರ್ತರ ನಿಯೋಜನೆ ಮಾಡಲಾಗಿದೆ. ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿರುವವರಿಗೆ ಸಮುದಾಯ ಭವನದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

    ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲು ಗ್ರಾಮದಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು ಈಗ ಕಾಯಿಸಿ ಮತ್ತು ಸೋಸಿ ನೀರು ಕುಡಿಯಲು ಸೂಚನೆ ನೀಡಲಾಗುತ್ತಿದೆ. ಆದ್ರೆ ಕಲುಷಿತ ನೀರು ಸರಬರಾಜು ಮಾಡುವ ಮೊದಲೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ತಪ್ಪಿತಸ್ಥ ಅಧಿಕಾರಿಗಳನ್ನ ಅಮಾನತ್ತು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ನೂರ್ ಜಹರಾ ಖಾನಂ ಹೇಳಿದ್ದಾರೆ. ಇದನ್ನೂ ಓದಿ: ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು ಉ.ಕ ಪ್ರತ್ಯೇಕ ರಾಜ್ಯ ಕೂಗಿಗೆ ದನಿಗೂಡಿಸಿದ ಬಿಸಿ.ಪಾಟೀಲ್

    ಸದ್ಯ, ನೀರಿನ ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಿರುವ ಆರೋಗ್ಯ ಇಲಾಖೆ ವರದಿಗಾಗಿ ಕಾಯುತ್ತಿದೆ. ಗ್ರಾಮಗಳಲ್ಲಿ ತಲಾ ಒಂದು ಆರ್‍ಓ ಪ್ಲಾಂಟ್ ಇದ್ದರೂ ಇಲ್ಲಿನ ಜನ ಸಂಖ್ಯೆಗೆ ಶುದ್ಧ ಕುಡಿಯುವ ನೀರು ಸಾಲುತ್ತಿಲ್ಲ. ಹೀಗಾಗಿ ಜನ ಕಲುಷಿತ ನೀರನ್ನ ಕುಡಿಯುವ ಪರಸ್ಥಿತಿ ಎದುರಾಗಿದೆ. ಕನಿಷ್ಠ ಈಗಲಾದ್ರೂ ಮಾನ್ವಿ ತಾಲೂಕು ಆಡಳಿತ ಎಚ್ಚೆದ್ದು, ನೀರಿನ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಯಿಕಚ್ಚಿ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾವು

    ನಾಯಿಕಚ್ಚಿ ರೇಬಿಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾವು

    ಪಲಕ್ಕಾಡ್: ನಾಯಿ ಕಚ್ಚಿ ರೇಬೀಸ್ ಕಾಯಿಲೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಶ್ರೀಲಕ್ಷ್ಮೀ (19) ಮೃತ ವಿದ್ಯಾರ್ಥಿನಿ. ಈಕೆ ಪಲಕ್ಕಾಡ್ ಮೂಲದ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿ. ಇದನ್ನೂ ಓದಿ: ಟೈಲರ್ ಹತ್ಯೆಗೆ ಮುಸ್ಲಿಂ ಯುವಕರು ಬಳಸಿದ ಆಯುಧ ತಯಾರಾಗಿದ್ದೆಲ್ಲಿ? – ರಿಹರ್ಸಲ್ ಹೇಗಿತ್ತು ಗೊತ್ತಾ?

    ಏನಿದು ಘಟನೆ?
    ಮೇ 30ರ ಬೆಳಗ್ಗೆ ಶ್ರೀಲಕ್ಷ್ಮೀ ಅವರು ಕಾಲೇಜಿಗೆ ಹೋಗುತ್ತಿದ್ದಾಗ ಅವರ ಪಕ್ಕದ ಮನೆಯ ನಾಯಿ ಆಕೆಗೆ ಕಚ್ಚಿತ್ತು. ಆ ನಂತರ ಯುವತಿ ಆರೋಗ್ಯ ಇಲಾಖೆ ಸೂಚನೆಯಂತೆ ಲಸಿಕೆಯನ್ನೂ ಹಾಕಿಸಿಕೊಂಡರು. ಅದಾದ ಕೆಲವು ದಿನಗಳಿಂದ ಯಾವುದೇ ಲಕ್ಷಣಗಳು ಕಂಡುಬಂದಿರಲಿಲ್ಲ. ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀಲಕ್ಷ್ಮೀ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದನ್ನೂ ಓದಿ: ಕಟ್ಟಡದ ಟೆರೇಸ್ ಮೇಲಿಂದ ಗ್ಯಾಲರಿಗೆ ಹಗ್ಗ ಕಟ್ಟಿ ನೇಣು ಬಿಗಿದು ವೃದ್ಧ ಆತ್ಮಹತ್ಯೆ

    ಈ ವೇಳೆ ಪರೀಕ್ಷಿಸಿದಾಗ ರೇಬೀಸ್ ಕಾಯಿಲೆಯ ಲಕ್ಷಣಗಳಿರುವುದು ಕಂಡುಬಂದಿತ್ತು. ಕಳೆದ ಎರಡು ದಿನಗಳ ಹಿಂದೆಯಷ್ಟೇ ಲಕ್ಷಣಗಳು ಹೆಚ್ಚಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣ ಆಕೆಯನ್ನು ತ್ರಿಸ್ಸೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಜುಲೈ 1) ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ?

    ಶ್ರೀಲಕ್ಷ್ಮೀ ಕೊಯಮತ್ತೂರಿನಲ್ಲಿ ಮೊದಲ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದರು. ಈಕೆಗೆ ಸನತ್ ಮತ್ತು ಸಿದ್ಧಾರ್ಥನ್ ಹೆಸರಿನ ಇಬ್ಬರು ಸಹೋದರರಿದ್ದಾರೆ. ಕುಟುಂಬಕ್ಕೆ ಒಬ್ಬಳೇ ಹೆಣ್ಣು ಮಗಳಾಗಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Live Tv