Tag: health department

  • ನ್ಯೂಯಾರ್ಕ್‌ನಲ್ಲಿ ಪೋಲಿಯೊ – ತುರ್ತು ಪರಿಸ್ಥಿತಿ ಘೋಷಣೆ

    ನ್ಯೂಯಾರ್ಕ್‌ನಲ್ಲಿ ಪೋಲಿಯೊ – ತುರ್ತು ಪರಿಸ್ಥಿತಿ ಘೋಷಣೆ

    ವಾಷಿಂಗ್ಟನ್: ನಸ್ಸೌ ಕೌಂಟಿ ದ್ವೀಪದ ತ್ಯಾಜ್ಯದ ನೀರಿನ ಮಾದರಿಗಳಲ್ಲಿ ವೈರಸ್ ಕಂಡುಬಂದ ನಂತರ ನ್ಯೂಯಾರ್ಕ್ (New York) ಪೋಲಿಯೊ ತುರ್ತು ಪರಿಸ್ಥಿತಿಯನ್ನು (Polio Emergency) ಘೋಷಿಸಿದೆ.

    ನ್ಯೂಯಾರ್ಕ್‌ನ ಆರೋಗ್ಯ ಇಲಾಖೆಯಲ್ಲಿ (Health Department) ಪೋಲಿಯೊ ಲಸಿಕೆ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಲಸಿಕೆ ನಿರ್ವಾಹಕರ ವಿಭಾಗವನ್ನೂ ವಿಸ್ತರಿಸಲು ಯೋಜಿಸಿದೆ. ಅದಕ್ಕಾಗಿ ಆರೋಗ್ಯ ಕಾರ್ಯಕರ್ತರು, (medical workers) ಶುಶ್ರೂಷಕಿಯರು ಹಾಗೂ ಫಾರ್ಮಸಿಸ್ಟ್ (Pharmacists) ಸೇರಿಸಿಕೊಳ್ಳುವಂತೆ ಗವರ್ನರ್ ಕ್ಯಾಥಿ ಹೊಚುಲ್ ಆದೇಶಿಸಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದ ಪರೀಕ್ಷೆ ಪ್ರವೇಶ ಪತ್ರದಲ್ಲಿ ಮೋದಿ, ಧೋನಿ ಫೋಟೋ – ತನಿಖೆಗೆ ಆದೇಶ

    ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಆಯುಕ್ತರಾದ ಮೇರಿ ಬ್ಯಾಸೆಟ್, ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸದಿದ್ದರೆ ಅಥವಾ ಮಗುವಿನ ದೇಹವು ಲಸಿಕೆಯೊಂದಿಗೆ ನವೀಕೃತವಾಗದಿದ್ದರೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಬಹುದು. ಹಾಗಾಗಿ ನ್ಯೂಯಾರ್ಕ್‌ನ ಯಾವುದೇ ನಿವಾಸಿಗಳೂ ಇಂತಹ ಅಪಾಯಗಳನ್ನು ತಂದೊಡ್ಡಿಕೊಳ್ಳದಂತೆ ಮನವಿ ಮಾಡುತ್ತೇನೆ. ಈಗಾಗಲೇ ನ್ಯೂಯಾರ್ಕ್‌ನಲ್ಲಿ ಪೋಲಿಯೊ ಲಸಿಕೆ ಅಭಿಯಾನ (Polio Vaccine) ಪೂರ್ಣಗೊಳಿಸಲಾಗಿದೆ. ಆದರೂ ವೈರಸ್ (Virus) ಸೋಂಕಿಗೆ ಒಳಗಾಗಿರುವ ವ್ಯಕ್ತಿಯೊಂದಿಗೆ ನಿಕಟ ಸಂಪಕದಲ್ಲಿರುವುದು ಕಂಡುಬಂದಿರುವುದರಿಂದ ಜೀವಮಾನದ ಬೂಸ್ಟರ್ ಡೋಸ್ ಅನ್ನು ಪಡೆಯಬೇಕು ಎಂದು ಅವರು ಕೋರಿದ್ದಾರೆ. ಇದನ್ನೂ ಓದಿ: ಆರ್ಟಿಕಲ್ 370ಯನ್ನು ಮತ್ತೆ ತರುವ ಭರವಸೆ ನಾನು ನೀಡಲ್ಲ: ಆಜಾದ್

    ನ್ಯೂಯಾರ್ಕ್ ನಗರದಲ್ಲಿನ ರಾಕ್‌ಲ್ಯಾಂಡ್ ಕೌಂಟಿ, ಆರೆಂಜ್ ಕೌಂಟಿ, ಸುಲ್ಲಿವಾನ್ ಕೌಂಟಿ, ನಸ್ಸೌ ಕೌಂಟಿ ಪ್ರದೇಶದ ನಿವಾಸಿಗಳಿಗೆ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆಯು ಕಾರ್ಯಕರ್ತರಿಗೆ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ 600 ಮಂದಿಗೆ ಕೊರೊನಾ – ಸೋಂಕಿಗೆ ಇಬ್ಬರು ಬಲಿ

    ರಾಜ್ಯದಲ್ಲಿ 600 ಮಂದಿಗೆ ಕೊರೊನಾ – ಸೋಂಕಿಗೆ ಇಬ್ಬರು ಬಲಿ

    ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಇಳಿಮುಖವಾಗುತ್ತಿದ್ದು, ನಿನ್ನೆ 941 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 600ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿಂದು 600 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

    ಇಂದು ರಾಜ್ಯದಲ್ಲಿ 589 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 40,09,287 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 28,046 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,87,14,120 ಮಂದಿಗೆ ಟೆಸ್ಟ್ ಮಾಡಲಾಗಿದೆ.

    ಕೋವಿಡ್‌ನಿಂದ ಎರಡು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,205 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.2.13 ಇದೆ. 5,212 ಸಕ್ರಿಯ ಪ್ರಕರಣಗಳಿವೆ. ಇಂದು 28,046 ಮಂದಿಯನ್ನು (6,332 ರ‍್ಯಾಪಿಡ್ ಆಂಟಿಜನ್, 21,714 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 2,173 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ನಗರದಲ್ಲೇ 312 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 11, ಬಾಗಲಕೋಟೆ 5, ಬಳ್ಳಾರಿ 6, ಬೆಳಗಾವಿ 10, ಬೀದರ್ 0, ಚಾಮರಾಜನಗರ 11, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 8, ಚಿತ್ರದುರ್ಗ 2, ದಕ್ಷಿಣ ಕನ್ನಡ 22, ದಾವಣಗೆರೆ 3, ಧಾರವಾಡ 13, ಗದಗ 2, ಹಾಸನ 19, ಹಾವೇರಿ 2, ಕಲಬುರಗಿ 7, ಕೊಡಗು 22, ಕೋಲಾರ 15, ಕೊಪ್ಪಳ 2, ಮಂಡ್ಯ 6, ಮೈಸೂರು 54, ರಾಯಚೂರು 8, ರಾಮನಗರ 22, ಶಿವಮೊಗ್ಗ 9, ತುಮಕೂರು 3, ಉಡುಪಿ 14, ಉತ್ತರ ಕನ್ನಡ 10, ವಿಜಯಪುರದಲ್ಲಿ 1 ಪ್ರಕರಣ ಪತ್ತೆಯಾಗಿದ್ದು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 941 ಮಂದಿಗೆ ಕೊರೊನಾ ಸೋಂಕು – ಓರ್ವ ಸಾವು

    ರಾಜ್ಯದಲ್ಲಿಂದು 941 ಮಂದಿಗೆ ಕೊರೊನಾ ಸೋಂಕು – ಓರ್ವ ಸಾವು

    ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಇಳಿಮುಖವಾಗುತ್ತಿದೆ. ಇಂದು ರಾಜ್ಯದಲ್ಲಿ 941 ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಓರ್ವ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 788 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 40,08,698 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 23,101 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,86,86,074 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಚೈತ್ರಾ ಹಳ್ಳಿಕೇರಿ – ಅಕ್ಷತಾ ಕುಕ್ಕಿ ಔಟ್

    ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,203 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.4.07 ಇದೆ. 5,203 ಸಕ್ರಿಯ ಪ್ರಕರಣಗಳಿವೆ. ಇಂದು 23,101 ಮಂದಿಯನ್ನು (6,522 ರ‍್ಯಾಪಿಡ್ ಆಂಟಿಜನ್, 16,579 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 31,457 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಏರೋಪ್ಲೇನ್ ಕದ್ದು ಹಾರಾಟ ನಡೆಸಿದ ಪೈಲಟ್ – ವಾಲ್‌ಮಾರ್ಟ್‌ಗೆ ಗುದ್ದುತ್ತೇನೆಂದು ಬೆದರಿಕೆ

    ಬೆಂಗಳೂರು ನಗರದಲ್ಲೇ 526 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 16, ಬಾಗಲಕೋಟೆ 2, ಬಳ್ಳಾರಿ 13, ಬೆಳಗಾವಿ 12, ಬೀದರ್ 0, ಚಾಮರಾಜನಗರ 24, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 18, ಚಿತ್ರದುರ್ಗ 1, ದಕ್ಷಿಣ ಕನ್ನಡ 29, ದಾವಣಗೆರೆ 4, ಧಾರವಾಡ 4, ಗದಗ 0, ಹಾಸನ 36, ಹಾವೇರಿ 1, ಕಲಬುರಗಿ 15, ಕೊಡಗು 13, ಕೋಲಾರ 15, ಕೊಪ್ಪಳ 2, ಮಂಡ್ಯ 9, ಮೈಸೂರು 99, ರಾಯಚೂರು 10, ಶಿವಮೊಗ್ಗ 24, ತುಮಕೂರು 7, ಉಡುಪಿ 13, ಉತ್ತರ ಕನ್ನಡ 10, ವಿಜಯಪುರದಲ್ಲಿ 1 ಪ್ರಕರಣ ಪತ್ತೆಯಾಗಿದ್ದು ರಾಮನಗರ ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,286 ಮಂದಿಗೆ ಕೊರೊನಾ – ಮೂವರು ಸಾವು

    ರಾಜ್ಯದಲ್ಲಿಂದು 1,286 ಮಂದಿಗೆ ಕೊರೊನಾ – ಮೂವರು ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಖ್ಯೆ ಇಳಿಕೆಯಾದಂತೆ ಕಾಣುತ್ತಿದೆ. ಇಂದು 1,286ಕ್ಕೆ ಇಳಿಕೆಯಾಗಿದೆ. ಮೂವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 2,358 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,97,181 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 27,668 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,84,91,097 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನು ಓದಿ: ಉರಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ 

    ಕೋವಿಡ್‌ನಿಂದ ಇಂದು ಎರಡು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,182 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.4.64 ಇದೆ. 8,700 ಸಕ್ರಿಯ ಪ್ರಕರಣಗಳಿವೆ. ಇಂದು 27,668 ಮಂದಿಯನ್ನು (7,387 ರ‍್ಯಾಪಿಡ್ ಆಂಟಿಜನ್, 20,281 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 30,173 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ರಾಕೆಟ್ರಿ’ ಸಿನಿಮಾದಲ್ಲಿ ಇಸ್ರೊಗೆ ಕಳಂಕ ತರುವಂತಹ ಸುಳ್ಳುಗಳನ್ನು ಹೇಳಲಾಗಿದೆ: ಮಾಜಿ ವಿಜ್ಞಾನಿಗಳ ಆರೋಪ

    ಬೆಂಗಳೂರು ನಗರದಲ್ಲೇ 796 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 6, ಬಾಗಲಕೋಟೆ 3, ಬಳ್ಳಾರಿ 33, ಬೆಳಗಾವಿ 16, ಬೀದರ್ 3, ಚಾಮರಾಜನಗರ 17, ಚಿಕ್ಕಬಳ್ಳಾಪುರ 6, ಚಿಕ್ಕಮಗಳೂರು 20, ಚಿತ್ರದುರ್ಗ 4, ದಕ್ಷಿಣ ಕನ್ನಡ 18, ದಾವಣಗೆರೆ 5, ಧಾರವಾಡ 23, ಗದಗ 0, ಹಾಸನ 40, ಹಾವೇರಿ 6, ಕಲಬುರಗಿ 17, ಕೊಡಗು 46, ಕೋಲಾರ 43, ಕೊಪ್ಪಳ 3, ಮಂಡ್ಯ 20, ಮೈಸೂರು 64, ರಾಯಚೂರು 16, ರಾಮನಗರ 24, ಶಿವಮೊಗ್ಗ 19, ತುಮಕೂರು 12, ಉಡುಪಿ 7, ಉತ್ತರ ಕನ್ನಡ 17, ವಿಜಯಪುರದಲ್ಲಿ 2 ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕೊರೊನಾ ವೇಳೆ ಜನರಿಂದ ಸುಲಿಗೆ – 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್

    ಕೊರೊನಾ ವೇಳೆ ಜನರಿಂದ ಸುಲಿಗೆ – 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್

    ಬೆಂಗಳೂರು: ಕೋವಿಡ್ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ 577 ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗಿದೆ. ಈ ಪೈಕಿ ಈವೆರೆಗೆ ಪ್ರತಿಕ್ರಿಯೆ ನೀಡದ 30 ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

    ಸಾಂದರ್ಭಿಕ ಚಿತ್ರ

    ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ 577 ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೋಟಿಸ್ ನೀಡಿತ್ತು. ಈ ಪೈಕಿ 450ಕ್ಕೂ ಹೆಚ್ಚು ಆಸ್ಪತ್ರೆಗಳು ನೋಟಿಸ್‌ಗೆ ಪ್ರತಿಕ್ರಿಯೆ ನೀಡಿವೆ. ಹೆಚ್ಚುವರಿಯಾಗಿ ವಸೂಲಿ ಮಾಡಿದ್ದ ಹಣವನ್ನೂ ವಾಪಸ್ ನೀಡಿವೆ. ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದ 30 ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಜನಪ್ರಿಯತೆ ನೋಡಿ ಉರಿ ಶುರುವಾಗಿದೆ: ಡಾ. ಎಚ್.ಸಿ. ಮಹದೇವಪ್ಪ

    ಕೆಲವು ಆಸ್ಪತ್ರೆಗಳು ಕೋವಿಡ್ ಸಮಯದಲ್ಲಿ ರೋಗಿಗಳ ಶುಲ್ಕ ಪಡೆಯುವ ಜೊತೆಗೆ ಸರ್ಕಾರದಿಂದಲೂ ಹಣ ಪಡೆದಿವೆ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ ಪಡೆದುಕೊಳ್ಳುತ್ತಿದ್ದ ಸಂಭಾವನೆ ಬಹಿರಂಗ

    ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಅಡಿಯಲ್ಲಿ ಚಿಕಿತ್ಸೆ ನೀಡಲು ಆದೇಶಿಸಿತ್ತು. ಅದಕ್ಕಾಗಿ ಸಂಬಂಧಪಟ್ಟ ಆಸ್ಪತ್ರೆಗಳಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನಿಂದ ವೆಚ್ಚ ಬರಿಸಿತ್ತು. ಆದರೂ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನೋಟಿಸ್ ನೀಡಿತ್ತು. ಆದರೆ 30 ಆಸ್ಪತ್ರೆಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾಂಡೇಜ್ ಬದಲಿಗೆ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆ ತಲೆಗೆ ಡ್ರೆಸ್ಸಿಂಗ್ – ಬೆಚ್ಚಿಬಿದ್ದ ವೈದ್ಯರು

    ಬ್ಯಾಂಡೇಜ್ ಬದಲಿಗೆ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆ ತಲೆಗೆ ಡ್ರೆಸ್ಸಿಂಗ್ – ಬೆಚ್ಚಿಬಿದ್ದ ವೈದ್ಯರು

    ಭೋಪಾಲ್: ಮಧ್ಯಪ್ರದೇಶದ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಬಳಿಕ ಕಾಂಡೋಮ್ ಪ್ಯಾಕೆಟ್ ಬಳಸಿ ಮಹಿಳೆಯ ತಲೆ ಗಾಯಕ್ಕೆ ಡ್ರೆಸ್ಸಿಂಗ್ ಮಾಡಲಾಗಿದೆ. ಗಾಯದ ತೀವ್ರತೆಯಿಂದ ಆಕೆಯನ್ನು ಮೊರೆನಾದ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಈ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.

    ಮೊರೆನಾ ಜಿಲ್ಲಾಸ್ಪತ್ರೆ ವೈದ್ಯರು ಮಹಿಳೆಯ ತಲೆಯ ಭಾಗದ ಗಾಯಕ್ಕೆ ಡ್ರೆಸ್ಸಿಂಗ್ ಬದಲಾಯಿಸಲು ಮುಂದಾದಾಗ ಮಹಿಳೆಯ ತಲೆಯಲ್ಲಿ ಬ್ಯಾಂಡೇಜ್‌ಗೆ ಬದಲಾಗಿ ಕಾಂಡೋಮ್ ಪ್ಯಾಕೆಟ್ ಬಳಸಿರುವುದನ್ನು ಕಂಡು ಶಾಕ್ ಆಗಿದ್ದಾರೆ.

    ಚಿಕಿತ್ಸೆ ಪಡೆದ ಮಹಿಳೆಯನ್ನು ಧರ್ಮಗಢ ಮೂಲದ ರೇಷ್ಮಾ ಬಾಯಿ ಎಂದು ಗುರುತಿಸಲಾಗಿದೆ. ಈಕೆ ಇತ್ತೀಚೆಗೆ ತಲೆಯ ಗಾಯದ ಚಿಕಿತ್ಸೆಗಾಗಿ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋದಾಗ ರಕ್ತಸ್ರಾವ ನಿಲ್ಲಿಸಲು ಕಾಂಡೋಮ್ ಬಳಸಲಾಗಿದೆ. ಇದಾದ ಕೆಲ ದಿನಗಳಲ್ಲೇ ಮಹಿಳೆಗೆ ಗಾಯದ ತೀವ್ರತೆ ಹೆಚ್ಚಾಗಿದೆ. ಆಕೆಯನ್ನು ಮೊರೆನಾದಲ್ಲಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಅಂದು ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಡಾ.ಧರ್ಮೇಂದ್ರ ರಜಪೂತ್ ತುರ್ತು ಕರ್ತವ್ಯದಲ್ಲಿದ್ದರು. ವಾರ್ಡ್ ಬಾಯ್ ಆಗಿ ಅನಂತರಾಮ್ ಇದ್ದರು. ಈ ವೇಳೆ ವೈದ್ಯರು ವಾರ್ಡ್ ಬಾಯ್‌ಗೆ ಹತ್ತಿ ಪ್ಯಾಡ್‌ನ ಮೇಲೆ ಕೆಲವು ಕಾರ್ಡ್ ಬೋರ್ಡ್‌ಗಳನ್ನು ಇರಿಸುವಂತೆ ಸೂಚಿಸಿದರು. ಆದರೆ ವಾರ್ಡ್ಬಾಯ್ ಕಾಂಡೋಮ್ ಪ್ಯಾಕೆಟ್ ಅನ್ನು ಬಳಸಿದ್ದಾನೆ ಎಂದು ವರದಿಯಾಗಿದೆ.

    ಸದ್ಯ ಪೋರ್ಸಾ ಸಮುದಾಯ ಆರೋಗ್ಯ ಕೇಂದ್ರದ ಡ್ರೆಸ್ಸರ್‌ನನ್ನು ರಾಜ್ಯ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,121 ಮಂದಿಗೆ ಕೊರೊನಾ – ಸೋಂಕಿಗೆ ಐದು ಮಂದಿ ಬಲಿ

    ರಾಜ್ಯದಲ್ಲಿಂದು 1,121 ಮಂದಿಗೆ ಕೊರೊನಾ – ಸೋಂಕಿಗೆ ಐದು ಮಂದಿ ಬಲಿ

    ಬೆಂಗಳೂರು: ಕಳೆದ ಒಂದು ವಾರದಿಂದಲೂ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ನಿನ್ನೆ 1,200 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 1,121ಕ್ಕೆ ಇಳಿದಿದೆ. ರಾಜ್ಯದಲ್ಲಿಂದು 1,121 ಪ್ರಕರಣಗಳು ದಾಖಲಾಗಿದ್ದು, ಐವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,711 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,83,536 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 14,766 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,82,49,341 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಕಂಡಲ್ಲಿ ಗುಂಡು ಹಾರಿಸಲು ಅನುಮತಿ ಕೊಟ್ಟರಷ್ಟೇ ಹಿಂದೂಗಳು ಸೇಫ್: ಸಿದ್ದಲಿಂಗ ಸ್ವಾಮೀಜಿ

    ಕೋವಿಡ್‌ನಿಂದ ಇಂದು 5 ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,152 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.7.59 ಇದೆ. 9,880 ಸಕ್ರಿಯ ಪ್ರಕರಣಗಳಿವೆ. ಇಂದು 14,766 ಮಂದಿಯನ್ನು (3,177, ರ‍್ಯಾಪಿಡ್ ಆಂಟಿಜನ್, 11,589 RTPCR) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 45,950 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಶ್ಮೀರವನ್ನು ಬಿಟ್ಟು ಬನ್ನಿ: ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ ಒತ್ತಾಯ

    ಬೆಂಗಳೂರು ನಗರದಲ್ಲೇ 812 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 23 , ಬಾಗಲಕೋಟೆ 9, ಬಳ್ಳಾರಿ 33, ಬೆಳಗಾವಿ 23, ಬೀದರ್ 0, ಚಾಮರಾಜನಗರ 7, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 10, ಚಿತ್ರದುರ್ಗ 4, ದಕ್ಷಿಣ ಕನ್ನಡ 6, ದಾವಣಗೆರೆ 13, ಧಾರವಾಡ 16, ಗದಗ 1, ಹಾಸನ 21, ಹಾವೇರಿ 13, ಕಲಬುರಗಿ 4, ಕೊಡಗು 22, ಕೋಲಾರ 3, ಕೊಪ್ಪಳ 2, ಮಂಡ್ಯ 6, ಮೈಸೂರು 33, ರಾಯಚೂರು 7, ರಾಮನಗರ 13, ಶಿವಮೊಗ್ಗ 16, ತುಮಕೂರು 4, ಉಡುಪಿ 5, ಉತ್ತರ ಕನ್ನಡ 6, ವಿಜಯಪುರ 6 ಹಾಗೂ ಯಾದಗಿರಿಯಲ್ಲಿ 2 ಪ್ರಕರಣ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಬೀದಿ ಬದಿ ಪಾನಿಪುರಿ ತಿಂದು 100ಕ್ಕೂ ಹೆಚ್ಚು ಜನ ಅಸ್ವಸ್ಥ

    ಬೀದಿ ಬದಿ ಪಾನಿಪುರಿ ತಿಂದು 100ಕ್ಕೂ ಹೆಚ್ಚು ಜನ ಅಸ್ವಸ್ಥ

    ಕೋಲ್ಕತ್ತಾ: ಬೀದಿ ಬದಿ ಮಾರುವ ಪಾನಿಪುರಿ ತಿಂದು 100ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಸುಗಂಧ ಗ್ರಾಮ ಪಂಚಾಯತ್‌ನ ಡೋಗಾಚಿಯಾ ಪ್ರದೇಶದಲ್ಲಿ ನಡೆದಿದೆ. ಅತಿಸಾರದಿಂದ ಅಸ್ವಸ್ಥಗೊಂಡಿರುವುದಾಗಿ ಶಂಕಿಸಲಾಗಿದೆ.

    ಅತಿಸಾರ ಲಕ್ಷಣಗಳು ಕಂಡುಬಂದಿದ್ದು, ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿರುವುದಾಗಿ ಸ್ಥಳೀಯರು ದೂರು ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿ ರದ್ದು – ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಮರುಜೀವ

    ಮಾಹಿತಿ ಪಡೆದ ಆರೋಗ್ಯ ಇಲಾಖೆಯ ವಿಶೇಷ ತಂಡ ಸ್ಥಳಕ್ಕೆ ಆಗಮಿಸಿ ರೋಗಿಗಳಿಗೆ ಔಷಧ ವಿತರಣೆ ಮಾಡಿದ್ದಾರೆ. ಗಂಭೀರ ಅನಾರೋಗ್ಯ ಪರಿಣಾಮ ಕಂಡುಬಂದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ತಂಡವು ಸೂಚಿಸಿದೆ.

    ಅನಾರೋಗ್ಯಕ್ಕೆ ಒಳಗಾದವರಲ್ಲಿ ಡೊಗಾಚಿಯಾ, ಬಹಿರ್ ರಣಗಾಚಾ ಹಾಗೂ ಮಕಲ್ತಲಾ ನಿವಾಸಿಗಳು ಸೇರಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,692 ಮಂದಿಗೆ ಕೊರೊನಾ ಸೋಂಕು – ಇಬ್ಬರು ಸಾವು

    ರಾಜ್ಯದಲ್ಲಿಂದು 1,692 ಮಂದಿಗೆ ಕೊರೊನಾ ಸೋಂಕು – ಇಬ್ಬರು ಸಾವು

    ಬೆಂಗಳೂರು: ಕಳೆದ ಎರಡು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ನಿನ್ನೆ 1,886 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 1,692ಕ್ಕೆ ಇಳಿಕೆಯಾಗಿದೆ. ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,094 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,56,112 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 33,320 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,78,01,921 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ನಿವೃತ್ತಿ ಅಂಚಿನಲ್ಲಿರೋ ಸಿದ್ದು, ಯೋಗ್ಯತೆಯಿಲ್ಲದ ಡಿಕೆಶಿನ ಸಿಎಂ ಮಾಡಿ ಏನ್ ಮಾಡ್ಬೇಕು – ಅಶ್ವಥ್ ನಾರಾಯಣ

    ಕೋವಿಡ್‌ನಿಂದ ಇಂದು ಎರಡು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,104 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.5.07 ಇದೆ. 11,105 ಸಕ್ರಿಯ ಪ್ರಕರಣಗಳಿವೆ. ಇಂದು 33,320 ಮಂದಿಯನ್ನು (25,779 ರ‍್ಯಾಪಿಡ್ ಆಂಟಿಜನ್, 7,541 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 7,092 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಸತಿ ಶಾಲೆಯಲ್ಲಿ ‘ವಿಕ್ರಾಂತ್ ರೋಣ ‘ ಪೈರಸಿ ಸಿನಿಮಾ ವೀಕ್ಷಣೆ : ಕ್ರಮಕ್ಕೆ ಒತ್ತಾಯ

    ಬೆಂಗಳೂರು ನಗರದಲ್ಲೇ 1,154 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 22, ಬಾಗಲಕೋಟೆ 22, ಬಳ್ಳಾರಿ 17, ಬೆಳಗಾವಿ 41, ಬೀದರ್ 17, ಚಾಮರಾಜನಗರ 7, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 9, ಚಿತ್ರದುರ್ಗ 2, ದಕ್ಷಿಣ ಕನ್ನಡ 15, ದಾವಣಗೆರೆ 10, ಧಾರವಾಡ 73, ಗದಗ 2, ಹಾಸನ 48, ಹಾವೇರಿ 19, ಕಲಬುರಗಿ 31, ಕೊಡಗು 4, ಕೋಲಾರ 22, ಕೊಪ್ಪಳ 10, ಮಂಡ್ಯ 24, ಮೈಸೂರು 47, ರಾಯಚೂರು 7, ಶಿವಮೊಗ್ಗ 16, ತುಮಕೂರು 26, ಉಡುಪಿ 13, ಉತ್ತರ ಕನ್ನಡ 26, ವಿಜಯಪುರದಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದು ರಾಮನಗರ ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,886 ಕೊರೊನಾ ಕೇಸ್‌ ಪತ್ತೆ – ಸೋಂಕಿಗೆ ಓರ್ವ ಬಲಿ

    ರಾಜ್ಯದಲ್ಲಿಂದು 1,886 ಕೊರೊನಾ ಕೇಸ್‌ ಪತ್ತೆ – ಸೋಂಕಿಗೆ ಓರ್ವ ಬಲಿ

    ಬೆಂಗಳೂರು: ರಾಜ್ಯದಲ್ಲಿ ನಿನ್ನೆಗಿಂತ ಇಂದು ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಆರೋಗ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆ 2 ಸಾವಿರಕ್ಕೂ ಹೆಚ್ಚಿದ್ದ ಕೊರೊನಾ ಸೋಂಕಿನ ಪ್ರಕರಣ ಇಂದು 1,886ಕ್ಕೆ ಇಳಿಕೆಯಾಗಿದೆ. ಓರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,242 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,55,018 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 32,379 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,77,68,601 ಮಂದಿಯನ್ನು ಟೆಸ್ಟ್ ಮಾಡಲಾಗಿದೆ.

    ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,102 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.5.82 ಇದೆ. 10,509 ಸಕ್ರಿಯ ಪ್ರಕರಣಗಳಿವೆ. ಇಂದು 32,379 ಮಂದಿಯನ್ನು (23,348 ರ‍್ಯಾಪಿಡ್ ಆಂಟಿಜನ್, 9,031 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 92,376 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ನಗರದಲ್ಲೇ 1,342 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 60, ಬಾಗಲಕೋಟೆ 8, ಬಳ್ಳಾರಿ 28, ಬೆಳಗಾವಿ 34, ಬೀದರ್ 11, ಚಾಮರಾಜನಗರ 14, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 15, ಚಿತ್ರದುರ್ಗ 3, ದಕ್ಷಿಣ ಕನ್ನಡ 13, ದಾವಣಗೆರೆ 8, ಧಾರವಾಡ 40, ಗದಗ 5, ಹಾಸನ 40, ಹಾವೇರಿ 5, ಕಲಬುರಗಿ 30, ಕೊಡಗು 32, ಕೋಲಾರ 21, ಕೊಪ್ಪಳ 5, ಮಂಡ್ಯ 19, ಮೈಸೂರು 58, ರಾಯಚೂರು 13, ರಾಮನಗರ 3, ಶಿವಮೊಗ್ಗ 12, ತುಮಕೂರು 29, ಉಡುಪಿ 15, ಉತ್ತರ ಕನ್ನಡ 17, ವಿಜಯಪುರ 3 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]