Tag: health department

  • ಬದುಕಿದ್ದಾಗ ಶಕ್ತಿ ಮೀರಿ ಪ್ರಯತ್ನಿಸಿದ್ರೂ ಆಗ್ಲಿಲ್ಲ – ಸಾವನ್ನಪ್ಪಿದ 65 ದಿನಗಳ ಬಳಿಕ ನರ್ಸ್ ವರ್ಗಾವಣೆ!

    ಬದುಕಿದ್ದಾಗ ಶಕ್ತಿ ಮೀರಿ ಪ್ರಯತ್ನಿಸಿದ್ರೂ ಆಗ್ಲಿಲ್ಲ – ಸಾವನ್ನಪ್ಪಿದ 65 ದಿನಗಳ ಬಳಿಕ ನರ್ಸ್ ವರ್ಗಾವಣೆ!

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಆರೋಗ್ಯ ಇಲಾಖೆಯು (Health Department) ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಶುಶ್ರೂಷಕಿಯೊಬ್ಬಳನ್ನ (Nurse) ಆಕೆ ಸಾವನ್ನಪ್ಪಿದ 65 ದಿನಗಳ ನಂತರ ವರ್ಗಾವಣೆ ಮಾಡಿರುವ ಗೊಂದಲ ಮೂಡಿಸಿರುವ ಘಟನೆ ಬೆಳಕಿಗೆ ಬಂದಿದೆ.

    ರಾಷ್ಟ್ರೀಯ ಆರೋಗ್ಯ ಮಿಷನ್ ಭಾಗವಾಗಿ (National Health Mission) ಫೆಬ್ರವರಿ 23ರಂದು ಶುಶ್ರೂಷಕಿಯರ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಶಿವಪುರಿ ಜಿಲ್ಲೆಯ ನರ್ಸ್ ಹೆಸರೂ ಸೇರಿದೆ. ಬದುಕಿದ್ದಾಗ ಶಕ್ತಿ ಮೀರಿ ಪ್ರಯತ್ನಿಸಿದರೂ ವರ್ಗಾವಣೆ ಆಗಿರಲಿಲ್ಲ. ಇದೀಗ ಆಕೆ ಮೃತಪಟ್ಟ 65 ದಿನಗಳ ನಂತರ ವರ್ಗಾವಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ವೀರಶೈವ ಲಿಂಗಾಯತರು ಬಿಜೆಪಿಗೇ ಮತ ಹಾಕಿ ಗೆಲ್ಲಿಸಿ – ಬಿಎಸ್‌ವೈ ಮನವಿ

    ಶಿವಪುರಿ ನರ್ಸ್ ಅನ್ನು ಬೇತುಲ್ ನಿವಾಸಿ ತನ್ವಿ ದಾಬಂದೆ (28) ಎಂದು ಗುರುತಿಸಲಾಗಿದ್ದು, ಆಕೆ ಮರಣದ ನಂತರ ರೈಸನ್‌ಗೆ ವರ್ಗಾಯಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಮೊದಲ ತೃತೀಯಲಿಂಗಿ ಸುದ್ದಿ ನಿರೂಪಕಿ ಮೇಲೆ ಗುಂಡಿನ ದಾಳಿ

    ಮೂಲಗಳ ಪ್ರಕಾರ, ನರ್ಸ್ ಆಗಿದ್ದ ಯುವತಿ 2022ರ ಡಿಸೆಂಬರ್ 20ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಾರ್ಡ್ ಬಾಯ್ ಈಕೆಯನ್ನು ಡ್ಯೂಟಿಗೆ ಬರುವಂತೆ ಕರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿತ್ತು. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತನ್ನ ಕೋಣೆಯಲ್ಲಿ ಬಿದ್ದಿದ್ದಳು. ಅದೇ ಕೋಣೆಯಲ್ಲಿ ನಿದ್ರೆ ಮಾತ್ರೆಗಳೂ ಪತ್ತೆಯಾಗಿದ್ದವು. ನಂತರ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು ಎಂದು ಪೊಲೀಸರು ತನಿಖೆ ನಂತರ ತಿಳಿಸಿದ್ದರು.

  • Aero India 2023: ತುರ್ತು ಆರೋಗ್ಯ ಸೇವೆಗಾಗಿ 30 ವೈದ್ಯಕೀಯ ತಂಡಗಳ ನಿಯೋಜನೆ

    Aero India 2023: ತುರ್ತು ಆರೋಗ್ಯ ಸೇವೆಗಾಗಿ 30 ವೈದ್ಯಕೀಯ ತಂಡಗಳ ನಿಯೋಜನೆ

    ಬೆಂಗಳೂರು: ಫೆಬ್ರವರಿ 13 ರಿಂದ 17ರ ವರೆಗೆ ಏರೋ ಇಂಡಿಯಾ-2023 (Aero India 2023) ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸೇವೆ ಕಲ್ಪಿಸಲು ಆರೋಗ್ಯ ಇಲಾಖೆ (Health Department) 30 ವೈದ್ಯಕೀಯ ತಂಡಗಳನ್ನ (Medical Team) ನಿಯೋಜನೆ ಮಾಡಿದೆ.

    ಯಲಹಂಕ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಈ ಸಂದರ್ಭದಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ

    ಏನೇನು ಸಿದ್ಧತೆ?
    ವೈಮಾನಿಕ ಪ್ರದರ್ಶನದ ದಿನಗಳಲ್ಲಿ 30 ತುರ್ತು ಆರೋಗ್ಯ ವಿಪತ್ತು ನಿರ್ವಹಣಾ ತಂಡಗಳನ್ನ ನಿಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲಿ ಒಬ್ಬ ತಜ್ಞ ವೈದ್ಯರು (Doctors), ಶುಶ್ರೂಷಕಿ, ಫಾರ್ಮಾಸಿಸ್ಟ್ ಮತ್ತು ಸಹಾಯಕ ಸಿಬ್ಬಂದಿ ಅಂಬುಲೆನ್ಸ್ (Ambulance) ವಾಹನದೊಂದಿಗೆ ಇರುತ್ತಾರೆ. ಇದನ್ನೂ ಓದಿ: ಸಚಿವರಿಗೆ ತುರಿಕೆ ಪುಡಿ ಎರಚಿದ ಅನಾಮಿಕ – ಸಭೆಯಲ್ಲೇ ಕುರ್ತಾ ತೆಗೆದು ಕೈ ತೊಳೆದುಕೊಂಡ ಸಚಿವ

    ಒಳಾಂಗಣದಲ್ಲಿ 10 ತಂಡಗಳು ಹಾಗೂ ಹೊರಾಂಗಣದಲ್ಲಿ 20 ತಂಡಗಳ ನಿಯೋಜನೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿಯ 45 ಅಂಬುಲೆನ್ಸ್ (Ambulance) ವಾಹನಗಳ ಬಳಕೆ ಮಾಡಲಾಗುತ್ತಿದೆ. 70 ವೈದ್ಯರು, 80 ಅರೆ ವೈದ್ಯಕೀಯ ಸಿಬ್ಬಂದಿ ಮತ್ತು 27 ಸಹಾಯಕ ಸಿಬ್ಬಂದಿಯೂ ಈ ತಂಡದಲ್ಲಿ ಇರಲಿದ್ದಾರೆ. ಇದನ್ನೂ ಓದಿ: ವಾಲ್ಮೀಕಿ ಜಾತ್ರೆ: ಸುದೀಪ್ ಅಭಿಮಾನಿಗಳಿಂದ ಕುರ್ಚಿಗಳು ಪೀಸ್ ಪೀಸ್

    ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳು (Private Hospital) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಕೈ ಜೋಡಿಸಿವೆ. ಖಾಸಗಿ ಆಸ್ಪತ್ರೆಗಳಲ್ಲಿ 1,928 ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 750 ಹಾಸಿಗೆಗಳನ್ನ ಕಾಯ್ದಿರಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಅಧಿಕಾರಿಗಳೂ ಈ ತಂಡದಲ್ಲಿದ್ದು, ಈಗಾಗಲೇ ಅಣುಕು ಪ್ರದರ್ಶನ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಮಸ್ಯೆಗಳ ಗೂಡಾದ 108 ಆಂಬುಲೆನ್ಸ್ ಸೇವೆ – ಡಕೋಟ ಎಕ್ಸ್‌ಪ್ರೆಸ್‌ ಸ್ಥಗಿತಕ್ಕೆ ಮುಂದಾದ ಆರೋಗ್ಯ ಇಲಾಖೆ

    ಸಮಸ್ಯೆಗಳ ಗೂಡಾದ 108 ಆಂಬುಲೆನ್ಸ್ ಸೇವೆ – ಡಕೋಟ ಎಕ್ಸ್‌ಪ್ರೆಸ್‌ ಸ್ಥಗಿತಕ್ಕೆ ಮುಂದಾದ ಆರೋಗ್ಯ ಇಲಾಖೆ

    ಬೆಂಗಳೂರು: 108 ಆಂಬುಲೆನ್ಸ್ (108 Ambulances) ಸೇವೆ ಸಮಸ್ಯೆಗಳ ಗೂಡಾಗಿದೆ. ಜೀವ ಉಳಿಸಬೇಕಿರೋ ಆಂಬುಲೆನ್ಸ್‌ಗಳು ಡಕೋಟ ಎಕ್ಸ್‌ಪ್ರೆಸ್‌ ಆಗ್ತಿವೆ. 340ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಗುಜರಿಗೆ ತಲುಪಿದ್ದು. 340 ಆಂಬುಲೆನ್ಸ್‌ಗಳ ಸ್ಥಗಿತಕ್ಕೆ ಆರೋಗ್ಯ ಇಲಾಖೆ (Health Department) ಮುಂದಾಗಿದೆ.

    ಕಳೆದ ಎರಡ್ಮೂರು ತಿಂಗಳ ಹಿಂದೆ ಸಂಬಳ ವಿಚಾರಕ್ಕೆ ನೌಕರರು ಮುಷ್ಕರ ಮಾಡಿ 108 ಸೇವೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತೆರೆದಿಟ್ಟು ಸೇವೆ ಸ್ಥಗಿತಕ್ಕೆ ಮುಂದಾಗಿದ್ರು. ಈ ಘಟನೆ ಆದ ಬಳಿಕ ಈಗ ಮತ್ತೊಂದು ವಿಚಾರ ಬಯಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯದ 108 ಸೇವೆಯ ಆಂಬುಲೆನ್ಸ್‌ಗಳು ಗುಜರಿಗೆ ತಲುಪಿರೋ ವಿಚಾರ ಬಯಲಾಗಿದೆ. ಇಂಜಿನ್ ಸಮಸ್ಯೆ, ಬೋರ್ ಸಮಸ್ಯೆ ಮತ್ತು ಟೆಕ್ನಿಕಲ್ ಸಮಸ್ಯೆಯಿಂದ 340ಕ್ಕೂ ಹೆಚ್ಚು ಆಂಬುಲೆನ್ಸ್‌ಗಳನ್ನು ಸ್ಥಗಿತ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿ (Bengaluru) ಒಟ್ಟು 709 ಆಂಬುಲೆನ್ಸ್‌ಗಳಿದ್ದು, ಅದರಲ್ಲಿ 340 ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ಕೆಲವೊಂದನ್ನು ರೆಡಿ ಮಾಡಿಸಿಕೊಂಡು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ATMನಿಂದ ಹಣ ಡ್ರಾ ಮಾಡಿ ಕೊಟ್ಟು ವೃದ್ಧನಿಗೆ ವಂಚಿಸಿದ ಸೆಕ್ಯೂರಿಟಿ ಗಾರ್ಡ್ – ದೋಚಿದ್ದು 2.50 ಲಕ್ಷ ರೂ.!

    ಶೀಘ್ರದಲ್ಲಿ 340 ಆಂಬುಲೆನ್ಸ್ ಸ್ಥಗಿತಗೊಳಿಸಿ ಹೊಸದಾಗಿ ಖರೀದಿ ಮಾಡೋ ಪ್ಲ್ಯಾನ್ ಮಾಡಿದ್ದಾರಂತೆ. ಸದ್ಯ ಜಿವಿಕೆ (GVK) ಆವರಣ ಸೇರಿದಂತೆ ಹಲವೆಡೆ ಕೆಟ್ಟು ನಿಂತ ಆಂಬುಲೆನ್ಸ್‌ಗಳನ್ನು ನಿಲ್ಲಿಸಲಾಗಿದೆ. 2008ರಿಂದಲೂ ಕೂಡ ಜಿವಿಕೆ ಸಂಸ್ಥೆ ಆಂಬುಲೆನ್ಸ್ ಸೇವೆ ನೀಡ್ತಾ ಇದೆ. ಆದರೆ ಜಿವಿಕೆ ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಅಪಸ್ವರ ಎದ್ದಿದ್ದು, ಸಂಸ್ಥೆಯ ಕಾರ್ಯ ವೈಖರಿ ಚೆನ್ನಾಗಿಲ್ಲ ಅಂತಾ ಸ್ವತಃ ಆಂಬುಲೆನ್ಸ್ ನೌಕರರೇ ಹೇಳಿದ್ದಾರೆ. ಹೀಗಾಗಿ ಜಿವಿಕೆ ಟೆಂಡರ್ ಅವಧಿ ಮುಕ್ತಾಯ ಆಗಿರುವ ಹಿನ್ನೆಲೆ ಹೊಸದಾಗಿ ಟೆಂಡರ್ ಕರೆದ್ರು ಆಂಬುಲೆನ್ಸ್ ಸೇವೆ ನೀಡಲು ಯಾವ ಕಂಪನಿಗಳು ಮುಂದೆ ಬರದೇ ಇರೋದು ಬಹಿರಂಗ ಆಗಿದೆ. ಫೆಬ್ರವರಿ 6ಕ್ಕೆ ಟೆಂಡರ್ ಅವಧಿ ಮುಕ್ತಾಯ ಆಗ್ತಾ ಇದ್ದು. ಯಾವ ಕಂಪನಿಗಳು ಮುಂದೆ ಬರದೇ ಇದ್ರೆ ಸದನದ ಗಮನಕ್ಕೆ ತಂದು ಆಂಬುಲೆನ್ಸ್‌ಗಳಲ್ಲಿ ಇರುವ ಸಮಸ್ಯೆಯನ್ನು ಸರಿಪಡಿಸುತ್ತೇವೆ ಅಂತಿದ್ದಾರೆ ಇಲಾಖೆ ಅಧಿಕಾರಿಗಳು. ಇದನ್ನೂ ಓದಿ: ಕಿಲ್ಲರ್ BMTCಗೆ ಮತ್ತೊಂದು ಬಲಿ – ಮೂವರ ಸ್ಥಿತಿ ಗಂಭೀರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ – ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

    ಕರ್ನಾಟಕದಲ್ಲಿ ಝಿಕಾ ವೈರಸ್‌ ಭೀತಿ – ಚಿಕಿತ್ಸಾ ಕ್ರಮ ಪಟ್ಟಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

    ಬೆಂಗಳೂರು: ರಾಯಚೂರಿನ (Raichuru) ಬಾಲಕಿಯೊಬ್ಬರಲ್ಲಿ ಝಿಕಾ ವೈರಸ್‌ (Zika Virus) ಸೋಂಕು ಪತ್ತೆಯಾಗಿರುವುದು ರಾಜ್ಯದಲ್ಲಿ ಆತಂಕ ಮೂಡಿಸಿದೆ. ಸೋಂಕಿನ ಬಗ್ಗೆ ಎಚ್ಚೆತ್ತಿರುವ ಆರೋಗ್ಯ ಇಲಾಖೆ, ವೈರಸ್‌ಗೆ ಚಿಕಿತ್ಸಾ ಕ್ರಮ, ಟೆಸ್ಟಿಂಗ್ ವಿಧಾನ ಮತ್ತು ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿದೆ.

    ಸೋಂಕಿನ ರೋಗ ಲಕ್ಷಣಗಳೇನು? ಅದನ್ನು ಪತ್ತೆ ಹಚ್ಚಲು ಮಾಡಬೇಕಾದ ಪರೀಕ್ಷಾ ವಿಧಾನಗಳೇನು? ಸೋಂಕಿತರನ್ನು ಗುಣಪಡಿಸಲು ಅನುಸರಿಸಬೇಕಾದ ಚಿಕಿತ್ಸಾ ಕ್ರಮಗಳೇನು ಎಂಬ ಬಗ್ಗೆ ಆರೋಗ್ಯ ಇಲಾಖೆ ಪಟ್ಟಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

    ಝಿಕಾ ವೈರಸ್ ರೋಗ ಲಕ್ಷಣಗಳು
    ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ ನೋವು

    ಝಿಕಾ ವೈರಸ್ ಟೆಸ್ಟಿಂಗ್ ವಿಧಾನ ಹೇಗೆ?
    ಝಿಕಾ ವೈರಸ್ ಪತ್ತೆಯಾದ ಸುತ್ತಮುತ್ತ ಪ್ರದೇಶದಲ್ಲಿ ಕಡ್ಡಾಯವಾಗಿ ಝಿಕಾ ವೈರಸ್ ಟೆಸ್ಟ್ ಮಾಡಬೇಕು. ಇತ್ತೀಚೆಗೆ ಹೊರರಾಜ್ಯ, ಹೊರದೇಶಗಳಿಗೆ ಪ್ರಯಾಣ ಮಾಡಿದ ವ್ಯಕ್ತಿಗಳಿಗೆ ಕಡ್ಡಾಯವಾಗಿ ಝಿಕಾ ವೈರಸ್ ಟೆಸ್ಟ್ ಮಾಡಬೇಕು. ಗರ್ಭಿಣಿಯರು ಇರುವ ಪ್ರದೇಶದ ಸುತ್ತಮುತ್ತ ಹೆಚ್ಚು ನಿಗಾ ಇಡಬೇಕು. ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಬೇಕು. ಇದನ್ನೂ ಓದಿ: ಸಿದ್ದರಾಮಯ್ಯರಿಗೆ ಕ್ಷೇತ್ರವೇ ಸಿಗ್ತಿಲ್ಲ, ಮುಖ್ಯಮಂತ್ರಿ ಆಗೋಕೆ ಹೇಗೆ ಸಾಧ್ಯ: ಅಭಯ್ ಪಾಟೀಲ್ ವ್ಯಂಗ್ಯ

    ಝಿಕಾ ವೈರಸ್‌ಗೆ ಚಿಕಿತ್ಸಾ ಕ್ರಮ ಹೇಗೆ?
    ಸೌಮ್ಯ ‌ಗುಣಲಕ್ಷಣ ಇರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ಅಗತ್ಯವಿಲ್ಲ. ಝಿಕಾ ವೈರಸ್‌ಗೆ ಸಾಮಾನ್ಯ ಮೈಕೈ ನೋವು, ಜ್ವರಕ್ಕೆ ನೀಡುವ ಚಿಕಿತ್ಸೆ ನೀಡಬಹುದು. ರೋಗ ಲಕ್ಷಣಗಳಿರುವ ರೋಗಿಗಳಿಗೆ ವೈದ್ಯಕೀಯ ಸಲಹೆ ಪಡೆದುಕೊಂಡೇ ಚಿಕಿತ್ಸೆ ನೀಡಬೇಕು. ಸದ್ಯಕ್ಕೆ ಝಿಕಾ ವೈರಸ್‌ಗೆ ವ್ಯಾಕ್ಸಿನ್ ಇಲ್ಲ.

    Live Tv
    [brid partner=56869869 player=32851 video=960834 autoplay=true]

  • ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

    ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ

    ರಾಯಚೂರು: ಜಿಲ್ಲೆಯಲ್ಲಿ ಝಿಕಾ ವೈರಸ್ (Zika Virus) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ (Shankar Patil Munenakoppa) ರಾಯಚೂರಿನಲ್ಲಿಂದು (Raichur) ಕೇಂದ್ರ, ರಾಜ್ಯ ತಜ್ಞರ ತಂಡ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚಿಸಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ, ಪ್ರಕರಣ ಪತ್ತೆಯಾದ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 151 ಗರ್ಭಿಣಿಯರ (Pregnant Women) ಮೇಲೆ ನಿಗಾ ಇಡಲಾಗಿದೆ. 21 ಗರ್ಭಿಣಿಯರ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವೈರಸ್ ಪತ್ತೆಯಾದ ತಾಲೂಕಿನ 57 ಗರ್ಭಿಣಿಯರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಸಂಗ್ರಹಿಸಿದ ನೀರನ್ನು ಹೆಚ್ಚುದಿನ ಇಡದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳಿಗೆ ಸಹಾಯ ಮಾಡಲು ಸಿದ್ಧ, ಸದ್ಯಕ್ಕೆ ಅಲ್ಲಿ ಅವಶ್ಯಕತೆ ಇಲ್ಲ: ನಟ ವಿಶಾಲ್

    ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಅಲರ್ಟ್ ಆಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಿರ್ಲಕ್ಷ್ಯ ವಹಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆ ಜಿಲ್ಲೆಯಲ್ಲಿ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳನ್ನ ವಜಾ ಮಾಡಲಾಗಿತ್ತು. ಈಗಲೂ ಅಮಾನತು ಬದಲು ವಜಾ ಮಾಡುವ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ರೀತಿಯ ಅಧಿಕಾರವನ್ನ ಜಿಲ್ಲಾಧಿಕಾರಿಗೆ ನೀಡಿದ್ದೇವೆ. ಅಧಿಕಾರಿಗಳನ್ನ ಬಳಸಿಕೊಂಡು ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಲಿ. ನಾವೂ ನಿರಂತರವಾಗಿ ಸಭೆ ಮಾಡಿ, ಸೂಚನೆ ನೀಡುತ್ತಿದ್ದೇವೆ. ರೋಗ, ಸೊಳ್ಳೆಗಳು ಉಲ್ಬಣಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ ಅಂತ ಸಚಿವ ಶಂಕರ್ ಪಾಟೀಲ್ ಬಿ. ಮುನೇನಕೊಪ್ಪ ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

    ರಾಯಚೂರಿನ ಮಾನ್ವಿಯ ಕೋಳಿ ಕ್ಯಾಂಪ್‌ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ರಾಜ್ಯದ ಮೊದಲ ಪ್ರಕರಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದು ಗರ್ಭಿಣಿಯರ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ದಂಪತಿಗಳಿಗೆ ಕಾಂಡೋಮ್ (Condom) ನೀಡಿ ಜಾಗೃತಿ ಮೂಡಿಸಲಾಗಿತ್ತು. ಇದೀಗ ತೀವ್ರ ನಿಗಾವಹಿಸಿದ್ದು, ಮಾದರಿ ಸಂಗ್ರಹಗಳನ್ನು ಪ್ರಯೋಗಾಲಕ್ಕೆ ಪರೀಕ್ಷೆಗೆ ಕಳುಹಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

    ರಾಯಚೂರಿನಲ್ಲಿ ಝಿಕಾ ವೈರಸ್ ಪತ್ತೆ – ದಂಪತಿಗೆ ಕಾಂಡೋಮ್ ನೀಡಿ ಜಾಗೃತಿ

    ರಾಯಚೂರು: ರಾಜ್ಯದಲ್ಲೇ ಮೊದಲ ಝಿಕಾ ವೈರಸ್ (Zika Virus) ಪ್ರಕರಣ ರಾಯಚೂರಿನಲ್ಲಿ (Raichur) ಪತ್ತೆಯಾಗಿರುವ ಹಿನ್ನೆಲೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ರಾಜ್ಯ, ಕೇಂದ್ರ ತಂಡಗಳು ರಾಯಚೂರಿನಲ್ಲಿ ಬೀಡು ಬಿಟ್ಟಿವೆ. ಗರ್ಭಿಣಿಯರ ಮೇಲೆ ವೈರಸ್ ಹೆಚ್ಚು ಪರಿಣಾಮ ಬೀರುವುದರಿಂದ ಆರೋಗ್ಯ ಇಲಾಖೆ (Health Department)‌ ಕಾಂಡೋಮ್ (Condom) ವಿತರಣೆ ಮಾಡುತ್ತಿದೆ.

    ರಾಯಚೂರಿನ ಮಾನ್ವಿಯ ಕೋಳಿ ಕ್ಯಾಂಪ್‌ನ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿರುವುದು ರಾಜ್ಯದ ಮೊದಲ ಪ್ರಕರಣವಾಗಿರುವುದರಿಂದ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು ಕೋಳಿ ಕ್ಯಾಂಪ್ ಸುತ್ತಮುತ್ತಲ ಗ್ರಾಮಗಳಲ್ಲಿ ಸೊಳ್ಳೆಗಳ ನಿಯಂತ್ರಣ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ನಿರಂತರ ಫಾಗಿಂಗ್ ನಡೆಸಲಾಗುತ್ತಿದೆ.

    ಕೋಳಿ ಕ್ಯಾಂಪ್ ಸುತ್ತಮುತ್ತಲ 5 ಕಿ.ಮೀ ವ್ಯಾಪ್ತಿಯ ಗ್ರಾಮಗಳಲ್ಲಿ ಲಾರ್ವಾ ಸರ್ವೆ, ಗರ್ಭಿಣಿಯರ ರಕ್ತ ಪರೀಕ್ಷೆ, ಜ್ವರದ ಪ್ರಕರಣ ಪತ್ತೆ ಕಾರ್ಯ ನಡೆದಿದೆ. ಗರ್ಭಿಣಿಯರಲ್ಲಿ ಝಿಕಾ ವೈರಸ್ ಪತ್ತೆಯಾದರೆ ಹುಟ್ಟುವ ಮಗುವಿನ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಗರ್ಭಿಣಿಯರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಜೊತೆಗೆ ಮಗುವನ್ನು ಬಯಸುವವರು ಇನ್ನೂ 6 ತಿಂಗಳು ಮುಂದೂಡಿ ಎಂದು ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ದಂಪತಿಗೆ ಕಾಂಡೋಮ್ ವಿತರಣೆ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ತಪಾಸಣೆ ಮಾಡುವುದರ ಜೊತೆಗೆ ಅರಿವು ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಗಡಿ ವಿವಾದದ ನಡುವೆಯೂ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಭೇಟಿ

    ವೈರಸ್ ಪತ್ತೆಗೆ ಕಾರಣ ತಿಳಿಯುವ ಹಿನ್ನೆಲೆ ಕೇಂದ್ರ ತಜ್ಞರ ತಂಡ, ವೈದ್ಯರು, ಅಧಿಕಾರಿಗಳು ನಿರಂತರ ಸಭೆ ನಡೆಸುತ್ತಿದ್ದಾರೆ. ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಮಲೇರಿಯಾ ವಿಭಾಗದ ವೈದ್ಯರು ಝಿಕಾ ವೈರಸ್ ನಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳು ಹಾಗೂ ನಿಯಂತ್ರಣ ಬಗ್ಗೆ ಚರ್ಚೆ ನಡೆಸಿದ್ದಾರೆ. ಗ್ರಾಮಗಳಲ್ಲಿ ಸಂಗ್ರಹಿಸಿರುವ ರಕ್ತ ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು, ವೈದ್ಯರು ವೈರಸ್ ಪತ್ತೆಯಾದ ಬಾಲಕಿ ಮನೆಗೆ ಪದೇ ಪದೇ ಬಂದು ಹೋಗುತ್ತಿರುವುದಕ್ಕೆ ಬಾಲಕಿ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ.

    ಒಟ್ಟಿನಲ್ಲಿ ರಾಜ್ಯದಲ್ಲಿ ಪತ್ತೆಯಾದ ಮೊದಲ ಝಿಕಾ ಪ್ರಕರಣ ಅಧಿಕಾರಿಗಳನ್ನು ಅಲರ್ಟ್ ಮಾಡಿದೆ. ಕೇಂದ್ರದಿಂದ ಬಂದ ತಂಡ ರಾಯಚೂರು ಜಿಲ್ಲೆಯಲ್ಲಿನ ತ್ಯಾಜ್ಯ ವಿಲೆವಾರಿ ನಿರ್ವಹಣೆ ವೈಫಲ್ಯ, ಗ್ರಾಮೀಣ ಪ್ರದೇಶಗಳಲ್ಲಿನ ಸ್ವಚ್ಛತೆ ಕೊರತೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದೆ. ಸೊಳ್ಳೆ ಕಚ್ಚುವುದರಿಂದ ಮಾತ್ರ ವೈರಸ್ ಹರಡುವುದರಿಂದ ಜನ ಗಾಬರಿಗೊಳ್ಳಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಜನರಿಗೆ ಧೈರ್ಯ ನೀಡುತ್ತಿದ್ದಾರೆ. ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ – ಅರುಣಾಚಲ ಪ್ರದೇಶದಲ್ಲಿ ವಾಯು ಗಸ್ತು ಆರಂಭಿಸಿದ ಭಾರತೀಯ ಸೇನೆ

    Live Tv

    [brid partner=56869869 player=32851 video=960834 autoplay=true]

  • ನ.30 ರಿಂದ ಪುರುಷ ಸಂತಾನಹರಣ ಚಿಕಿತ್ಸಾ ಶಿಬಿರ – ಚಿಕಿತ್ಸೆಗುಂಟು 1,100 ರೂ. ಪ್ರೋತ್ಸಾಹಧನ

    ನ.30 ರಿಂದ ಪುರುಷ ಸಂತಾನಹರಣ ಚಿಕಿತ್ಸಾ ಶಿಬಿರ – ಚಿಕಿತ್ಸೆಗುಂಟು 1,100 ರೂ. ಪ್ರೋತ್ಸಾಹಧನ

    ಹುಬ್ಬಳ್ಳಿ: ಜನಸಂಖ್ಯಾ (Population) ನಿಯಂತ್ರಣಕ್ಕಾಗಿ ಹುಬ್ಬಳ್ಳಿ ಆರೋಗ್ಯ ಇಲಾಖೆಯಿಂದ (Health Department) ಇದೇ ತಿಂಗಳ ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಪುರುಷ ಸಂತಾನಹರಣ ಚಿಕಿತ್ಸೆ (Vasectomy Treatment) ಬೃಹತ್ ಶಿಬಿರ ಹಮ್ಮಿಕೊಳ್ಳಲಾಗಿದೆ.

    ಪುರುಷರಿಗಾಗಿ ಗಾಯವಿಲ್ಲದ, ಹೊಲಿಗೆಯಿಲ್ಲದ ಬೃಹತ್ ಪುರುಷ ಸಂತಾನಹರಣ ಶಸ್ತ್ರ ಚಿಕಿತ್ಸಾ (Vasectomy Treatment) ಶಿಬಿರವನ್ನು ಚಿಟಗುಪ್ಪಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ. ಇದನ್ನೂ ಓದಿ: ಹಿಂದೂ ಸಂಕೇತ ಬಳಸಿ, ಹಿಂದೂ ಸಮಾಜದ ಮೇಲೆ ದುಷ್ಕೃತ್ಯ – ಪೇಜಾವರ ಶ್ರೀ ಬೇಸರ

    ಈ ಚಿಕಿತ್ಸೆ ಮಾಡಿಸಿಕೊಂಡವರಿಗೆ ಸರ್ಕಾರದಿಂದ (Government) 1,100 ರೂ. ಸಹಾಯಧನವನ್ನೂ ನೀಡಲಾಗುತ್ತದೆ. ಸರ್ಕಾರಿ ನೌಕರರಾಗಿದ್ದಲ್ಲಿ ವಿಶೇಷ ಭತ್ಯೆಯನ್ನು ವೇತನದಲ್ಲಿ ಪಡೆದುಕೊಳ್ಳಬಹುದಾಗಿದೆ. ಆಸಕ್ತರು ಶಿಬಿರದಲ್ಲಿ ಭಾಗವಹಿಸಬಹುದು ಎಂದು ಹುಬ್ಬಳ್ಳಿ ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪೀಸ್‌ಪೀಸ್ ಪ್ರೇಮಿ ಅಫ್ತಾಬ್ ಹತ್ಯೆಗೆ ಯತ್ನ – ಪೊಲೀಸ್ ವ್ಯಾನ್ ಮೇಲೆ ದಾಳಿ

    ನೋಂದಣಿಗಾಗಿ ಮೊಬೈಲ್ ಸಂಖ್ಯೆ: 9481734230, 7353921555, 9880907064 ಸಂಪರ್ಕಿಸುವಂತೆ ಕೋರಿದೆ.

    Live Tv
    [brid partner=56869869 player=32851 video=960834 autoplay=true]

  • ಕೋಲಾರದಲ್ಲಿ ಮೆದುಳು ಜ್ವರ ಪತ್ತೆ- ಆರೋಗ್ಯ ಇಲಾಖೆಯಿಂದ ಅಲರ್ಟ್

    ಕೋಲಾರದಲ್ಲಿ ಮೆದುಳು ಜ್ವರ ಪತ್ತೆ- ಆರೋಗ್ಯ ಇಲಾಖೆಯಿಂದ ಅಲರ್ಟ್

    ಕೋಲಾರ: ಜಿಲ್ಲೆಯಲ್ಲಿ ಮೆದುಳು ಜ್ವರ (Brain Fever) ಪತ್ತೆಯಾಗಿದ್ದು, ಆರೋಗ್ಯ ಇಲಾಖೆಯಿಂದ ಅಲರ್ಟ್ ಘೊಷಿಸಲಾಗಿದೆ.

    ಕೋಲಾರ ತಾಲೂಕು ತೊಟ್ಲಿ ಗ್ರಾಮದಲ್ಲಿ ಮೆದುಳು ಜ್ವರ ಪ್ರಕರಣ ಪತ್ತೆಯಾಗಿದೆ. ಇದೊಂದು ಸಾಂಕ್ರಾಮಿಕ ರೋಗವಾದ ಹಿನ್ನೆಲೆ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

    ತೊಟ್ಲಿ ಗ್ರಾಮದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆ ನಿಷೇಧ ಮಾಡಲಾಗಿದೆ. ಅಲ್ಲದೆ ಗ್ರಾಮ ಪಂಚಾಯತಿಯಿಂದ ಶುಚಿತ್ವ ಕಾಪಾಡುವಂತೆ ಆರೋಗ್ಯ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಒಂದರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆಯೂ ಇಲಾಖೆ ತಿಳುವಳಿಕೆ ನೀಡುತ್ತಿದೆ.

    ಮೆದುಳು ಜ್ವರದ ಲಕ್ಷಣಗಳೆನು..?: ಜ್ವರ, ತಲೆನೋವು, ತ್ವಚೆಯಲ್ಲಿ ಗುಳ್ಳೆಗಳು, ಹಸಿವು ಇಲ್ಲದಿರುವುದು, ಮೈಯಲ್ಲಿ ನಡುಕ, ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು, ಮಾತನಾಡುವಾಗ ತೊದಲುವುದು ಮೊದಲಾದವುಗಳಾಗಿವೆ.

    ಪಾರಾಗುವುದು ಹೇಗೆ?: ಸೊಳ್ಳೆಯಿಂದ ಹರಡುವ ರೋಗವನ್ನು ತಡೆಯಲು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಗೊಳಿಸುವುದು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಲ್ಲಿಸುವುದು. ಅಲ್ಲದೆ ಸಾಕಷ್ಟು ನೀರು ಕುಡಿಯುವುದರಿಂದ ಮೆದುಳು ಜ್ವರದಿಂದ ಪಾರಾಗಬಹುದು.

    Live Tv
    [brid partner=56869869 player=32851 video=960834 autoplay=true]

  • ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಉಪತಳಿ BQ.1 ಪತ್ತೆ – ಕರ್ನಾಟಕದಲ್ಲಿ ಕಟ್ಟೆಚ್ಚರ

    ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಉಪತಳಿ BQ.1 ಪತ್ತೆ – ಕರ್ನಾಟಕದಲ್ಲಿ ಕಟ್ಟೆಚ್ಚರ

    ಬೆಂಗಳೂರು: ಕಳೆದ ಕೆಲ ತಿಂಗಳುಗಳಿಂದ ಜನರಲ್ಲಿ ಕೊರೊನಾ (Corona) ಭೀತಿ ಕಡಿಮೆಯಾಗಿದೆ. ನವರಾತ್ರಿ ಕಳೆದು ಇದೀಗ ದೇಶಾದ್ಯಂತ ಜನರು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಆದರೆ ಇದರ ನಡುವೆಯೇ ಕರ್ನಾಟಕಕ್ಕೆ (Karnataka) ಓಮಿಕ್ರಾನ್ (Omicron) ಉಪತಳಿ BQ.1ನ ಭೀತಿ ಹುಟ್ಟಿಕೊಂಡಿದೆ.

    ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ (Maharashtra) ಒಮಿಕ್ರಾನ್ ರೂಪಾಂತರಿ BQ.1 ತಳಿ ಪತ್ತೆಯಾಗಿದ್ದು, ಇದೀಗ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ (Health Department) ಸೂಚನೆ ನೀಡಿದೆ.

    ದೀಪಾವಳಿ, ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಯಿದ್ದು, ಈ ವೇಳೆ ರೋಗ ಹರಡುವ ಭೀತಿಯೂ ಹುಟ್ಟಿಕೊಂಡಿದೆ. ಈ ಹಿನ್ನೆಲೆ ಜ್ವರ, ಕೆಮ್ಮು, ನೆಗಡಿಯ ಲಕ್ಷಣ ಇರುವವರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಉಸಿರಾಟದ ಸಮಸ್ಯೆ ಇರುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ

    ಏರ್ ಕಂಡೀಷನ್ ಇರುವ ಜಾಗ, ಒಳಾಂಗಣ ಪ್ರದೇಶ, ಆರೋಗ್ಯ ಸಂಸ್ಥೆಗಳಲ್ಲಿ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು. ಬೂಸ್ಟರ್ ಡೋಸ್ ಪಡೆಯಲು ಬಾಕಿ ಇರುವವರು ಕಡ್ಡಾಯವಾಗಿ ಪಡೆಯಬೇಕು. ಉಳಿದಂತಹ ಸಿಎಬಿ ನಿಯಮವನ್ನು ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ತಿಳಿಸಿದೆ.

    ಅಮೆರಿಕದಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿದ್ದ ಓಮಿಕ್ರಾನ್ ಉಪತಳಿ BQ.1 ಕಳೆದ ವಾರ ಭಾರತದಲ್ಲಿ ಮೊದಲ ಬಾರಿ ಪತ್ತೆಯಾಗಿದೆ. ಪುಣೆ ಮೂಲದ ವ್ಯಕ್ತಿಯೊಬ್ಬರ ಕೊರೊನಾ ಸ್ಯಾಂಪಲ್‌ನ ಜಿನೋಮ್ ಪರೀಕ್ಷೆ ವೇಳೆ ಈ ಹೊಸ ಓಮಿಕ್ರಾನ್ ಉಪತಳಿ ಪತ್ತೆಯಾಗಿದೆ. ಇದನ್ನೂ ಓದಿ: 5 ದಿನದಲ್ಲಿ ಮತ್ತೆ ಗೂಗಲ್‌ಗೆ ಭಾರತ ದಂಡ – 936 ಕೋಟಿ ಫೈನ್ ಹಾಕಿದ ಸಿಸಿಐ

    Live Tv
    [brid partner=56869869 player=32851 video=960834 autoplay=true]

  • ಜಿಮ್‍ಗಳಲ್ಲಿನ ಪ್ರೊಟೀನ್ ಪೌಡರ್‌ನಿಂದ ಸೈಡ್ ಎಫೆಕ್ಟ್- ಸಾಂಪಲ್ಸ್ ಲ್ಯಾಬ್‍ಗೆ ಕೊಟ್ಟ ಆರೋಗ್ಯ ಇಲಾಖೆ

    ಜಿಮ್‍ಗಳಲ್ಲಿನ ಪ್ರೊಟೀನ್ ಪೌಡರ್‌ನಿಂದ ಸೈಡ್ ಎಫೆಕ್ಟ್- ಸಾಂಪಲ್ಸ್ ಲ್ಯಾಬ್‍ಗೆ ಕೊಟ್ಟ ಆರೋಗ್ಯ ಇಲಾಖೆ

    ಬೆಂಗಳೂರು: ಜಿಮ್‍ (Gym) ಗಳಲ್ಲಿ ನೀಡುವ ಪ್ರೋಟಿನ್ ಪೌಡರ್ (Protein Powder) ಬಗ್ಗೆ ದೊಡ್ಡ ಚರ್ಚೆಯಾಗಿತ್ತು. ಪ್ರೊಟೀನ್ ಪೌಡರ್ ಸೈಡ್ ಎಫೆಕ್ಟ್ ನ ಅಸಲಿಯತ್ತಿಗೆ ಆರೋಗ್ಯ ಇಲಾಖೆ ಮುಂದಾಗಿದ್ದು, ಇನ್ನೊಂದು ವಾರದಲ್ಲಿ ಸ್ಯಾಂಪಲ್ ಟೆಸ್ಟಿಂಗ್ ರಿಪೋಟ್ ಔಟ್ ಆಗಲಿದೆ.

    ಜಿಮ್‍ಗಳಲ್ಲಿ ಬಾಡಿ ಬಿಲ್ಡ್ ಗಾಗಿ ನೀಡುವ ಪ್ರೊಟೀನ್ ಪೌಡರ್ ಗಳು ಕಿಡ್ನಿ, ಲಿವರ್ ಸೇರಿದಂತೆ ದೇಹದಲ್ಲಿ ಅಡ್ಡ ಪರಿಣಾಮ ಉಂಟುಮಾಡುವ ಬಗ್ಗೆ ಅಂದು ಸದನದ ಶೂನ್ಯವೇಳೆಯಲ್ಲಿ ಸತೀಶ್ ರೆಡ್ಡಿ (Sathish Reddy) ಪ್ರಸ್ತಾಪಿಸಿದ್ರು. ಇದರ ಬಗ್ಗೆ ಪರಿಶೀಲನೆ ಮಾಡುವ ಭರವಸೆಯನ್ನು ಆರೋಗ್ಯ ಇಲಾಖೆ (Health Department) ನೀಡಿತ್ತು. ಈಗಾಗಲೇ ಆಹಾರ ಸುರಕ್ಷತೆ ಅಧಿಕಾರಿಗಳು ಬೆಂಗಳೂರು ಜಿಮ್‍ಗೆ ತೆರಳಿ ಅಲ್ಲಿ ಬಳಕೆ ಮಾಡುವ ಪ್ರೊಟೀನ್ ಪೌಡರ್ ಸ್ಯಾಂಪಲ್ಸ್ ಸಂಗ್ರಹಿಸಿ ಸೆಂಟ್ರಲ್ ಲ್ಯಾಬ್‍ಗೆ ರವಾನಿಸಲಾಗಿದೆ. ಇನ್ನೊಂದು ವಾರದಲ್ಲಿ ರಿಪೋರ್ಟ್ ಕೂಡ ಬರಬಹುದು ಅಂತಾ ಆರೋಗ್ಯ ಸಚಿವರು ಹೇಳಿದ್ದಾರೆ.

    ಪ್ರೊಟೀನ್ ಪೌಡರ್ ನಲ್ಲಿ ದೇಹಕ್ಕೆ ಮಾರಕವಾಗುವ ಕೆಮಿಕಲ್ (chemical) ಬಳಕೆ ಮಾಡಿದ್ರೆ ಆಹಾರ ಸುರಕ್ಷತೆ ಗುಣಮಟ್ಟ ಕಾಯ್ದುಕೊಳ್ಳದೇ ಇದ್ರೆ ಅಂತಹ ಜಿಮ್‍ಗಳ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ. ಅನುಮತಿ ರಹಿತ ಕೆಮಿಕಲ್ ಪ್ರೊಟೀನ್ ಪೌಡರ್ ಬಳಕೆ ಮಾಡುವ ಜಿಮ್‍ಗಳನ್ನು ಅನಧಿಕೃತ ಜಿಮ್ ಅಂತಾನೇ ಘೋಷಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಅಂದಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸುವಂತೆ ಮುತಾಲಿಕ್‍ಗೆ ಮನವಿ: ಉಡುಪಿಯಲ್ಲಿ ಕಾದಿದ್ಯಾ ಗುರು-ಶಿಷ್ಯನ ಹಣಾಹಣಿ?

    ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ (Heart Attack) ದ ಬಗ್ಗೆಯೂ ಆರೋಗ್ಯ ಇಲಾಖೆ ಕಳವಳ ವ್ಯಕ್ತಪಡಿಸಿದೆ. ಜಿಮ್‍ಗೆ ಹೋಗೋದು ವ್ಯಾಯಾಮ ಮಾಡೋದು ದೇಹಕ್ಕೆ ಒಳ್ಳೆಯದು. ಆದರೆ ಆಹಾರ ಗುಣಮಟ್ಟ ಕಾಯ್ದುಕೊಳ್ಳದೇ ಪ್ರೊಟೀನ್ ಪೌಡರ್‍ಗಳ ಬಳಕೆ ಮಾತ್ರ ತೀರಾ ಡೇಂಜರ್, ಇದಕ್ಕೆ ಆರೋಗ್ಯ ಇಲಾಖೆ ಮೂಗುದಾರ ಹಾಕುತ್ತಾ ಅಂತಾ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]