Tag: health department

  • ಪಾನಿಪುರಿ, ಐಸ್‍ಕ್ರೀಂನಲ್ಲಿ ಡ್ರಗ್ಸ್ ಹಾಕಿ ಮಾರಾಟ – ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

    ಪಾನಿಪುರಿ, ಐಸ್‍ಕ್ರೀಂನಲ್ಲಿ ಡ್ರಗ್ಸ್ ಹಾಕಿ ಮಾರಾಟ – ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ

    ಬೆಂಂಗಳೂರು: ಮಕ್ಕಳು ಬ್ಯಾಗ್ ಯೂನಿಫಾರ್ಮ್ ಹಾಕ್ಕೊಂಡು ಸ್ಕೂಲಿಗೆ ಹೋಗುವಾಗ ಪೋಷಕರು ನೂರು ಕನಸು ಗರಿಗೆದರುತ್ತದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ಭವಿಷ್ಯ ಮಾದಕ ವ್ಯಸನದೊಳಗೆ ಬಂಧಿಯಾಗುತ್ತಿದೆ. ಶಾಲಾ ಮಕ್ಕಳನ್ನೇ ಈ ಕೆಟ್ಟ ಜಾಲ ಟಾರ್ಗೆಟ್ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯೇ ಭಯಾನಕ ಸತ್ಯವನ್ನು ಹೊರಹಾಕಿದೆ.

    ಪಾನಿಪುರಿಯಲ್ಲಿ ಡ್ರಗ್ಸ್ ಹಾಕಿಕೊಡಲಾಗುತ್ತಿದೆ. ಬೆಂಗಳೂರು ಡ್ರಗ್ಸ್ ಜಾಲದ ಸಿಟಿಯಾಗಿದೆ ಎಂದು ಶಾಸಕ ವಿಜಯ್ ಕುಮಾರ್ ಇತ್ತೀಚೆಗೆ ಭಾಷಣವೊಂದರಲ್ಲಿ ಹೇಳಿದಾಗ ಇದು ಸಾಧ್ಯನೇ ಇಲ್ಲ ಎಂದು ಹೇಳಿದ್ದರು. ಆದರೆ ಇದು ನಿಜ ಅಂತಾ ಆರೋಗ್ಯ ಇಲಾಖೆ ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿದೆ.

    ಶಾಲೆಯ ಅಕ್ಕಪಕ್ಕದಲ್ಲಿ ಪಾನಿಪುರಿಯೊಳಗೆ, ಐಸ್ ಕ್ರೀಂನಲ್ಲಿಯೇ ಮಕ್ಕಳಿಗೆ ಡ್ರಗ್ಸ್ ರುಚಿ ತೋರಿಸುವ ಜಾಲ ಬೆಳೆದಿದೆ. ಈ ಜಾಲದ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ. ಆದ್ದರಿಂದ ಈಗಾಗಲೇ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕೊಟ್ಟಿದ್ದು, ಶಾಲೆಯ ನೂರು ಮೀಟರ್ ಅಂತರದಲ್ಲಿರುವ ಅನುಮಾನಸ್ಪದ ಶಾಪ್, ಐಸ್‍ಕ್ರೀಂ ಪಾನೀಪುರಿ ಅಂಗಡಿಗಳ ಮೇಲೆ ಕಣ್ಣಿಡುವಂತೆ ಆದೇಶಿಸಿಲಾಗಿದೆ. ಅಲ್ಲದೇ ಪೋಷಕರಿಗೂ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಮತ್ತು ಸುರಕ್ಷತಾ ಇಲಾಖೆ ಜಂಟಿ ಆಯುಕ್ತ ಹರ್ಷವರ್ಧನ್ ಹೇಳಿದ್ದಾರೆ.

    ಮಕ್ಕಳ ಬದುಕು ಕಸಿದುಕೊಳ್ಳುವ ಈ ಜಾಲದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಇದ್ದರೆ ದೂರು ನೀಡುವಂತೆ ಆಹಾರ ಸುರಕ್ಷತಾ ಇಲಾಖೆ ಮನವಿ ಮಾಡಿದೆ. ಅಷ್ಟೇ ಅಲ್ಲದೇ ಆಹಾರ ಸುರಕ್ಷತಾ ವಿಭಾಗ ತನಿಖಾಧಿಕಾರಿಗಳ ತಂಡ ರಚನೆ ಮಾಡಿಕೊಂಡು ಈಗಾಗಲೇ ಕಾರ್ಯಚರಣೆಯನ್ನು ಆರಂಭಿಸಿವೆ.

  • ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದೊಡ್ಡ ಹಗರಣ – ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ

    ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದೊಡ್ಡ ಹಗರಣ – ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ

    ಬೆಂಗಳೂರು: ಒಂದೇ ಆಸ್ಪತ್ರೆ ನಿರ್ವಹಣೆ ಮತ್ತು ರಿಪೇರಿಗೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ ತೋರಿಸಲಾಗಿದೆ. ಕೆಲಸ ಆಗದಿದ್ರೂ ಬಿಲ್ ಮಾತ್ರ ರಿಲೀಸ್ ಆಗಿದೆ. ಆರೋಗ್ಯ ಇಲಾಖೆಯ ಕರ್ಮಕಾಂಡದ ಸ್ಟೋರಿ ಇದು.

    ಹೌದು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಇಂತಹದ್ದೊಂದು ದೊಡ್ಡ ಹಗರಣ ನಡೆದಿದೆ. ಆಸ್ಪತ್ರೆಯ ರಿಪೇರಿ ಹಾಗೂ ವಿವಿಧ ಕಾಮಗಾರಿಗೆ ಖರ್ಚಾಗಿರೋದು ಬರೋಬ್ಬರಿ 4.50 ಕೋಟಿ ರೂ. ಅಲ್ಲದೆ ನಿಯಮಗಳೆಲ್ಲ ಗಾಳಿಗೆ ತೂರಿ ಬೇಕಾದವರಿಗೆ ಟೆಂಡರ್ ನೀಡಲಾಗಿದೆ.

    ಬಣ್ಣ ಬಳಿಯೋಕೆ 35 ಲಕ್ಷ ರೂ., ಸ್ಟೀಲ್ ಕಂಬಿಗಳ ಅಳವಡಿಕೆಗೆ 25 ಲಕ್ಷ ರೂ., ಮೇಚ್ಛಾವಣಿ ರಿಪೇರಿಗೆ ಲಕ್ಷ ಲಕ್ಷ ಹಣ ಖರ್ಚಾಗಿದೆ. ಗೋಡೆ ಕಿತ್ತು ಹೋಗಿದ್ರು ಅದಕ್ಕೆ ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿ ರಿಪೇರಿ ಮಾಡಿದ್ದಾಗಿ ಲೆಕ್ಕ ನೀಡಿದ್ದಾರೆ. ವಾರ್ಡ್‍ಗಳು ಹಾಗೇ ಇದ್ರು ವಾರ್ಡ್ ರಿಪೇರಿ ಹೆಸರಲ್ಲಿ 50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಕೆಲಸವೇ ಆಗಿಲ್ಲವಾದ್ರೂ ದುಡ್ಡು ಮಾತ್ರ ರಿಲೀಸ್ ಆಗಿದೆ. ಹೀಗೆ ಕೆಸಿ ಜನರಲ್ ಆಸ್ಪತ್ರೆ ರಿಪೇರಿ ಖರ್ಚಿಗೆ ಆಗಿರೋದು ನಾಲ್ಕೂವರೆ ಕೋಟಿ ರೂ. RTI ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯ ಈ ಕರ್ಮಕಾಂಡ ಬಯಲಾಗಿದೆ.

    ಅತೀ ತುರ್ತು ಕೆಲಸ ಅಂತ ಟೆಂಡರ್ ಕರೆಯದೇ ಕಾಮಗಾರಿ ನೀಡಲಾಗಿದೆ. ಬೇಕಾದವರಿಗೆ ಕೆಲಸ ಕೊಟ್ಟು ಕೋಟಿ ಕೋಟಿ ಹಣ ಗುಳುಂ ಮಾಡಿರೋ ಆರೋಪ ಕೇಳಿಬಂದಿದೆ.

  • ನಗರದ ಮಧ್ಯೆ ಮುಸ್ಲಿಂ ಯುವತಿಯರ ಡ್ಯಾನ್ಸ್- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ನಗರದ ಮಧ್ಯೆ ಮುಸ್ಲಿಂ ಯುವತಿಯರ ಡ್ಯಾನ್ಸ್- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ತಿರುವನಂತಪುರ: ಕೇರಳದ ಮಲಪ್ಪುರಂನಲ್ಲಿ ಏಡ್ಸ್ ಜಾಗೃತಿ ಮೂಡಿಸುವ ಕುರಿತು ಆರೋಗ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಯುವತಿಯರು ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಸಾಂಪ್ರದಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಮಲಪ್ಪುರಂ ಆರೋಗ್ಯ ಇಲಾಖೆ ಫ್ಲಾಶ್ ಮಾಬ್ ಆಯೋಜಿಸಿತ್ತು. ಈ ಫ್ಲಾಶ್ ಮಾಬ್ ನಲ್ಲಿ ಬುರ್ಖಾ ಹಾಗೂ ಜಿನ್ಸ್ ಧರಿಸಿ ಮೂವರು ದಂತ ವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿಗಳು ಮಲಪ್ಪುರಂ ನಗರದ ಮುಖ್ಯ ವೃತ್ತದಲ್ಲಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದಾರೆ.

    ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿ ಬಂದಿದೆ. ಆದರೆ ಹಲವು ಮಂದಿ ಯುವತಿಯರಿಗೆ ಬೆಂಬಲ ನೀಡಿ ಕಮೆಂಟ್ ಮಾಡುತ್ತಿದ್ದಾರೆ.

    https://twitter.com/shilpasunil_rao/status/937567825035657216

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಗದಗದಲ್ಲಿ ಮಾನಸಿಕ ಅಸ್ವಸ್ಥನಿಗೆ ಸಿಕ್ತು ಗೃಹಬಂಧನದಿಂದ ಮುಕ್ತಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಗದಗದಲ್ಲಿ ಮಾನಸಿಕ ಅಸ್ವಸ್ಥನಿಗೆ ಸಿಕ್ತು ಗೃಹಬಂಧನದಿಂದ ಮುಕ್ತಿ

    ಗದಗ: ಮಗ ಮಾನಸಿಕ ಅಸ್ವಸ್ಥ, ಮಗನ ಚಿಂತೆಯಲ್ಲಿ ತಾಯಿ ಖಿನ್ನತೆಗೊಳಗಾಗಿದ್ದು, ಜೀವನ ನಿರ್ವಹಣೆಗಾಗಿ ಮಗಳು ದೇವದಾಸಿಯಾಗಿದ್ದರು. ಈಗ ಕೊನೆಗೂ ಸುಮಾರು 16 ವರ್ಷಗಳಿಂದ ಕುಟುಂಬ ಅನುಭವಿಸುತ್ತಿದ್ದ ನರಕಯಾತನೆಯಿಂದ ಮುಕ್ತಿ ಪಡೆದಿದೆ. ಈಗ ಕುಟುಂಬದಲ್ಲಿ ಹೊಸ ಬೆಳಕು ಮೂಡಿದೆ.

    ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಶರಣಪ್ಪ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಫೇಲಾದ ಕಾರಣಕ್ಕೆ ಅಂದಿನಿಂದಲೂ ಮಾನಸಿಕ ಅಸ್ವಸ್ಥರಾಗಿ ಬಿಟ್ಟಿದ್ದರು. ಇವರ ಕಾಟ ತಾಳಲಾರದೆ ತಂದೆ ಸಿದ್ದಪ್ಪ ಅವರ ಕೈಕಾಲುಗಳಿಗೆ ಬೇಡಿ ತೊಡಿಸಿ 16 ವರ್ಷ ಗೃಹ ಬಂಧನದಲ್ಲಿಟ್ಟಿದ್ದರು. ಮಗನ ಸ್ಥಿತಿಯನ್ನು ಕಂಡು ಚಿಂತೆಯಲ್ಲಿ ತಾಯಿ ಸಹ ಖಿನ್ನತೆಗೆ ಒಳಗಾಗಿದ್ದರು.

    ಅಕ್ಟೋಬರ್ 27 ರಂದು ಪಬ್ಲಿಕ್ ಟಿವಿ ಈ ಬಗ್ಗೆ ವರದಿ ಮಾಡಿತ್ತು. ಬಳಿಕ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಶರಣಪ್ಪ  ಅವರ ಮನೆಗೆ ಹೋಗಿ ಅವರಿಗೆ ಹಾಕಿದ್ದ ಬೇಡಿಯನ್ನು ತೆಗೆದು ನೊಂದ ಕುಟುಂಬದ ಅಳಲನ್ನು ಕೇಳಿ ಧೈರ್ಯ ಹೇಳಿ ಬಂದಿದ್ದಾರೆ.

    ಶರಣಪ್ಪರನ್ನು ನಾವು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳಿದ್ದೇವೆ. ಅಲ್ಲದೇ ದೇವದಾಸಿಯಾಗಿದ್ದ ಶರಣಪ್ಪ ಸಹೋದರಿಗೆ ಮನೆ ಮತ್ತು ಮಾಸಾಶನ ನೀಡುವ ಭರವಸೆ ನೀಡಿದ್ದೇವೆ. ಜೊತೆಗೆ ಪಬ್ಲಿಕ್ ಟಿವಿ ಈ ಕಾರ್ಯವನ್ನು ಶ್ಲಾಘಿಸಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಪಾಂಡುರಂಗ ಕಬಾಡಿ ಅವರು ತಿಳಿಸಿದರು.

    ಒಟ್ಟಿನಲ್ಲಿ 16 ವರ್ಷಗಳಿಂದ ನರಕಯಾತನೆ ಅನುಭವಿಸಿದ ಕುಟುಂಬದಲ್ಲಿ ಈಗ ಹೊಸ ಬೆಳಕು ಮೂಡಿದ್ದು, ಶರಣಪ್ಪ ಅವರು ಬೇಗನೇ ಗುಣಮುಖರಾಗಲಿ ಅನ್ನೋದು ನಮ್ಮ ಆಶಯವಾಗಿದೆ.

     

     

     

  • ಗಮನಿಸಿ: ಬಜ್ಜಿ, ಬೋಂಡಾ ನ್ಯೂಸ್ ಪೇಪರ್‍ನಲ್ಲಿ ಕಟ್ಟಿದ್ರೆ ಬೀಳುತ್ತೆ ದಂಡ!

    ಗಮನಿಸಿ: ಬಜ್ಜಿ, ಬೋಂಡಾ ನ್ಯೂಸ್ ಪೇಪರ್‍ನಲ್ಲಿ ಕಟ್ಟಿದ್ರೆ ಬೀಳುತ್ತೆ ದಂಡ!

    ಬೆಂಗಳೂರು: ಹೋಟೆಲ್‍ನವರು, ಬೀದಿ ವ್ಯಾಪಾರಿಗಳು ನ್ಯೂಸ್ ಪೇಪರ್‍ಗಳಲ್ಲಿ ಇನ್ಮುಂದೆ ಊಟ ಪಾರ್ಸಲ್ ಮಾಡೋ ಹಾಗಿಲ್ಲ. ಊಟ ಮಾತ್ರ ಅಲ್ಲ ಮನುಷ್ಯರು ತಿನ್ನುವ ಯಾವ ಆಹಾರವನ್ನ ಪಾರ್ಸಲ್ ಮಾಡೋ ಹಾಗಿಲ್ಲ.

    ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ ನ್ಯೂಸ್ ಪೇಪರ್ ನಲ್ಲಿ ಪಾರ್ಸೆಲ್ ಮಾಡೋದು ಬ್ಯಾನ್ ಮಾಡಿದೆ. ನ್ಯೂಸ್ ಪೇಪರ್‍ನಿಂದ ಮನುಷ್ಯನ ಆರೋಗ್ಯಕ್ಕೆ ಹಾನಿ ಉಂಟಾಗುತ್ತೆ ಅಂತ ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಿದೆ.

    ಪ್ರಸ್ತುತ ಆದೇಶ ಬೆಂಗಳೂರು, ಮೈಸೂರು, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ ಪಾಲಿಕೆ ವ್ಯಾಪ್ತಿಯಲ್ಲಿ ಈ ಕ್ಷಣದಿಂದಲೇ ಜಾರಿಗೆ ಬರಲಿದೆ. ಒಂದು ವೇಳೆ ಆರೋಗ್ಯ ಇಲಾಖೆ ಆದೇಶ ಮೀರಿದ್ರೆ ಕಾನೂನು ಕ್ರಮ ಜರುಗಿಸೋ ಜೊತೆಗೆ ದಂಡವನ್ನೂ ಕಟ್ಟಬೇಕಾಗುತ್ತದೆ.

  • ಲಕ್ಷ-ಲಕ್ಷ ಕೊಡಿ, ಗ್ರಾಮೀಣ ಸೇವೆಗೆ ರೆಡಿ- ಸರ್ಕಾರದ ಮುಂದೆ ವೈದ್ಯರಿಂದ ಭರ್ಜರಿ ಡಿಮಾಂಡ್!

    ಲಕ್ಷ-ಲಕ್ಷ ಕೊಡಿ, ಗ್ರಾಮೀಣ ಸೇವೆಗೆ ರೆಡಿ- ಸರ್ಕಾರದ ಮುಂದೆ ವೈದ್ಯರಿಂದ ಭರ್ಜರಿ ಡಿಮಾಂಡ್!

    ಬೆಂಗಳೂರು: ಸರ್ಜನ್‍ಗಳಾಗಿ ಕೆಲಸ ಮಾಡೋಕೆ ನಾವು ರೆಡಿ ಇದ್ದೇವೆ. ಆದ್ರೆ ಸಂಬಳ ಮಾತ್ರ ತಿಂಗಳಿಗೆ ಆರು ಲಕ್ಷ ರುಪಾಯಿ ಕೊಡಿ. ಇದು ಡಾಕ್ಟರ್‍ಗಳು ಸರ್ಕಾರದ ಮುಂದೆ ಇಟ್ಟಿರೋ ಪ್ರಸ್ತಾಪ.

    ಆರೋಗ್ಯ ಸಚಿವಾಲಯವು ಗ್ರಾಮೀಣ ಭಾಗಗಳಲ್ಲಿ ತಜ್ಞ ವೈದ್ಯರನ್ನು ತುಂಬಲೇಬೇಕು ಅನ್ನೋ ತೀರ್ಮಾನಕ್ಕೆ ಬಂದಿದೆ. ಇದಕ್ಕಾಗಿ ಆನ್‍ಲೈನ್ ಬಿಡ್ಡಿಂಗ್ ಮೂಲಕ ತಜ್ಞ ವೈದ್ಯರಿಗೆ ಅರ್ಜಿ ಸಲ್ಲಿಸಲು ಸೂಚಿಸಿತು. ಅದರಂತೆ ಸಂಬಳ, ಸೇವೆ ಮಾಡುವ ಸ್ಥಳ ಎಲ್ಲವನ್ನೂ ಪಕ್ಕಾ ಮಾಡಿ ಅಂತ ಹೇಳಿದ 12 ದಿನಗಳಲ್ಲೇ ಬರೋಬ್ಬರಿ 5,200 ಮಂದಿ ಅರ್ಜಿ ಸಲ್ಲಿಸಿದ್ದಾರೆ.

    11 ವಿಭಾಗಗಳಲ್ಲಿ ಇರೋ 1,221 ಹುದ್ದೆಗಳು ಖಾಲಿ ಇವೆ. ಕುತೂಹಲಕಾರಿ ವಿಷಯ ಅಂದ್ರೆ 60 ಸಾವಿರದಿಂದ ಆರು ಲಕ್ಷ ರುಪಾಯಿ ತನಕ ವೇತನವನ್ನು ಪ್ರಸ್ತಾಪಿಸಿದ್ದಾರೆ. ಸ್ತ್ರೀ ರೋಗ ತಜ್ಞರು ಆರು ಲಕ್ಷ ರುಪಾಯಿ ವೇತನ ಕೇಳುತ್ತಿದ್ದಾರೆ. ಹಾಗಿದ್ರೆ ಯಾವ್ಯಾವ ತಜ್ಞ ವೈದ್ಯರು ಎಷ್ಟೆಷ್ಟು ಸಂಬಳಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಅನ್ನೋದು ಇಲ್ಲಿದೆ.

    ಜನರಲ್ ಸರ್ಜರಿ– 60 ಸಾವಿರದಿಂದ 4 ಲಕ್ಷವರೆಗೂ
    ಜನರಲ್ ಮೆಡಿಸನ್ – 65 ಸಾವಿರದಿಂದ 5 ಲಕ್ಷದವರೆಗೆ
    ಮನಃಶಾಸ್ತ್ರಜ್ಞರು – 1 ಲಕ್ಷದಿಂದ 2 ಲಕ್ಷ
    ಸ್ತ್ರಿರೋಗ ಮತ್ತು ಪ್ರಸೂತಿ ತಜ್ಞರು – 80 ಸಾವಿರದಿಂದ 6 ಲಕ್ಷ ರುಪಾಯಿವರೆಗೆ
    ಮಕ್ಕಳ ತಜ್ಞರು – 70 ಸಾವಿರದಿಂದ 4.5 ಲಕ್ಷ ರೂ ತನಕ
    ಅರವಳಿಕೆ ತಜ್ಞರು – 80 ಸಾವಿರದಿಂದ 4 ಲಕ್ಷ
    ಕಣ್ಣಿನ ತಜ್ಞರು – 95 ಸಾವಿರದಿಂದ 5 ಲಕ್ಷ
    ಮೂಳೆ ತಜ್ಞರು – 60 ಸಾವಿರದಿಂದ 5 ಲಕ್ಷ ರುಪಾಯಿ
    ಇಎನ್‍ಟಿ-70 ಸಾವಿರದಿಂದ 3.5 ಲಕ್ಷದವರೆಗೆ
    ಚರ್ಮರೋಗ ತಜ್ಞರು – 80 ಸಾವಿರದಿಂದ 3 ಲಕ್ಷದವರೆಗೆ
    ವಿಕಿರಣ(ಎಕ್ಸ್‍ರೇ)ತಜ್ಞರು – 1.20 ಲಕ್ಷ ರುಪಾಯಿಯಿಂದ 3.5 ಲಕ್ಷದವರೆಗೆ

  • ಹಿರಿಯ ನಟಿ ಲೀಲಾವತಿ ಆಸ್ಪತ್ರೆ ಧ್ವಂಸ ಪ್ರಕರಣ- ಆರೋಗ್ಯ ಇಲಾಖೆಯಿಂದ ಆಸ್ಪತ್ರೆ ಭದ್ರತೆಗೆ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ

    ಹಿರಿಯ ನಟಿ ಲೀಲಾವತಿ ಆಸ್ಪತ್ರೆ ಧ್ವಂಸ ಪ್ರಕರಣ- ಆರೋಗ್ಯ ಇಲಾಖೆಯಿಂದ ಆಸ್ಪತ್ರೆ ಭದ್ರತೆಗೆ ಸೆಕ್ಯೂರಿಟಿ, ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ

    ಬೆಂಗಳೂರು: ಹಿರಿಯ ನಟಿ ಡಾ. ಲೀಲಾವತಿ ಅವರು ಬಡವರಿಗಾಗಿ ನಿರ್ಮಿಸಿದ್ದ ಆಸ್ಪತ್ರೆಯಲ್ಲಿ ಕಿಡಿಗೇಡಿಗಳ ದಾಂಧಲೆ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯ ಡಿ.ಎಚ್.ಓ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಗ್ರಾಮಾಂತರ ಪ್ರದೇಶದ ಬಡವರ ಅನುಕೂಲಕ್ಕಾಗಿ ಹಿರಿಯ ನಟಿ ಡಾ.ಲೀಲಾವತಿ ಸ್ವಂತ ಖರ್ಚಿನಲ್ಲಿ ಪ್ರಾಥಮಿಕ ಆಸ್ಪತ್ರೆಯನ್ನ ನಿರ್ಮಿಸಿದ್ದರು. ಆದರೆ ಕೆಲ ಕಿಡಿಗೇಡಿಗಳು ಆಸ್ಪತ್ರೆಯ ಮೇಲ್ಛಾವಣಿ ಒಡೆದು ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಔಷಧಿಗಳನ್ನ ಹೊರಗಡೆ ಬಿಸಾಡಿದ್ದರು. ಸೋಮವಾರದಂದು ಮಾಧ್ಯಮಗಳು ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದವು. ಸುದ್ದಿಯಿಂದ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಡಿ.ಎಚ್.ಓ ರಾಜೇಶ್, ಲೀಲಾವತಿ ಪ್ರಾಥಮಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

     

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಹಿರಿಯ ನಟಿ ಲೀಲಾವತಿಯವರ ಮನೆಗೆ ತೆರಳಿದ ಡಿ.ಎಚ್.ಓ ರಾಜೇಶ್, ಘಟನೆಯ ಬಗ್ಗೆ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಜೊತೆ ಚರ್ಚೆ ನಡೆಸಿದ್ದಾರೆ.

    ಮುಂದಿನ ದಿನಗಳಲ್ಲಿ ಈ ಪ್ರಾಥಮಿಕ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಲಾಗುವುದು ಹಾಗೂ ಆಸ್ಪತ್ರೆಯ ಸುತ್ತ ಸಿಸಿ ಕ್ಯಾಮರಾಗಳನ್ನ ಅಳವಡಿಸಿ, ಓರ್ವ ಸೆಕ್ಯೂರಿಟಿಯನ್ನ ಇಲಾಖೆಯ ವತಿಯಿಂದ ನೇಮಕ ಮಾಡಲಾಗುವುದು. ಈ ವಿಚಾರದ ಬಗ್ಗೆ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳಿಗೆ ಹಾಗೂ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

    ಇದೇ ವೇಳೆ ಮಾತನಾಡಿದ ಹಿರಿಯ ನಟಿ ಲೀಲಾವತಿ ಘಟನೆಯಿಂದ ನನ್ನ ಮನಸಿಗೆ ತುಂಬಾ ನೋವಾಗಿತ್ತು. ಆದರೆ ಮಾಧ್ಯಮಗಳ ಬೆಂಬಲದಿಂದ ಇಂದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಸ್ಪತ್ರೆಯ ನವೀಕರಣಕ್ಕೆ ಮನಸ್ಸು ಮಾಡಿದ್ದಾರೆ. ಇದರಿಂದ ನನಗೆ ಸ್ವರ್ಗವೇ ಸಿಕ್ಕಂತಾಗಿದೆ ಎಂದು ತಮ್ಮ ಮನಸ್ಸಿನ ಭಾವನೆಯನ್ನ ಮಾಧ್ಯಮದವರೊಂದಿಗೆ ಹಂಚಿಕೊಂಡರು.

  • ರೇಷನ್ ಅಂಗಡಿಯಲ್ಲಿ ಸಿಗೋ ಅಡುಗೆ ಎಣ್ಣೆ ಬಳಸೋ ಮುನ್ನ ಎಚ್ಚರವಾಗಿರಿ

    ರೇಷನ್ ಅಂಗಡಿಯಲ್ಲಿ ಸಿಗೋ ಅಡುಗೆ ಎಣ್ಣೆ ಬಳಸೋ ಮುನ್ನ ಎಚ್ಚರವಾಗಿರಿ

    ಕಲಬುರಗಿ: ರಾಜ್ಯ ಸರ್ಕಾರ ಪಡಿತರ ಚೀಟಿಯಡಿ ನೀಡುವ ಅಡುಗೆ ಎಣ್ಣೆಯನ್ನ ಸೇವನೆ ಮಾಡೋದಕ್ಕಿಂತ ಮೊದಲು ನೂರು ಸಲ ಯೋಚಿಸಿ. ಕಡಿಮೆ ಬೆಲೆಗೆ ಸಿಗ್ತಿದೆ ಅಂತಾ ಅದ್ರಲ್ಲಿ ಅಡುಗೆ ಮಾಡಿದ್ರೆ ಆಮೇಲೆ ಆಸ್ಪತ್ರೆ ಸೇರಬೇಕಾಗುತ್ತೆ. ಅವಧಿ ಮೀರಿದ ಎಣ್ಣೆ ಪ್ಯಾಕೆಟ್‍ಗಳು ವಿತರಣೆಯಾಗ್ತಿವೆ.

    ಬಿಪಿಎಲ್ ಕಾರ್ಡ್‍ದಾರರಿಗೆ ವಿಟಮಿನ್ ಎ, ವಿಟಮಿನ್ ಡಿ ಅಂಶವುಳ್ಳ ತಾಳೆಯೆಣ್ಣೆಯನ್ನು ವಿತರಿಸುತ್ತಿದೆ. ಆದ್ರೆ ಕಲಬುರಗಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಅವಧಿ ಮುಗಿದ ತಾಳೆ ಎಣ್ಣೆ ಮಾರಾಟ ಆಗ್ತಿರೋದು ಬೆಳಕಿಗೆ ಬಂದಿದೆ. ಸದ್ಯ ಅವಧಿ ಮೀರಿದ 15 ಸಾವಿರಕ್ಕೂ ಅಧಿಕ ಎಣ್ಣೆ ಪ್ಯಾಕೆಟ್‍ಗಳು ಪತ್ತೆಯಾಗಿವೆ.

     

     

    ಅವಧಿ ಮೀರಿದ ಎಣ್ಣೆ ಪ್ಯಾಕೆಟ್‍ಗಳನ್ನು ಮಾರಾಟ ಮಾಡದಂತೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಆದ್ರೆ ಅಧಿಕಾರಿಗಳ ಮಾತು ಕಡೆಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ಅದೇ ತಾಳೆ ಎಣ್ಣೆಯನ್ನ ಬಡವರಿಗೆ ವಿತರಿಸುವ ಮೂಲಕ ಬಡಜನರ ಆರೋಗ್ಯದ ಜೊತೆ ಚೆಲ್ಲಾಟವಾಡ್ತಿದ್ದಾರೆ.

    ಈ ಬಗ್ಗೆ ಎಚ್ಚೆತ್ತಿಕೊಂಡಿರೋ ಕಲಬುರಗಿ ಜನ ಅವಧಿ ಮೀರಿದ ತಾಳೆ ಎಣ್ಣೆ ಪ್ಯಾಕೆಟ್‍ಗಳನ್ನ ಮೊದಲು ಸೀಜ್ ಮಾಡುವಂತೆ ಆಹಾರ ಇಲಾಖೆಗೆ ಆಗ್ರಹಿಸಿದ್ದಾರೆ.

     

  • ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳು- ಸೀರಿಯಸ್ ಪೇಷಂಟ್‍ಗೂ ನೆಲದ ಮೇಲೆ ಚಿಕಿತ್ಸೆ

    ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳು- ಸೀರಿಯಸ್ ಪೇಷಂಟ್‍ಗೂ ನೆಲದ ಮೇಲೆ ಚಿಕಿತ್ಸೆ

    ಚಾಮರಾಜನಗರ: ನಾವು ಈ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವೀಲ್ ಚೇರ್ ಇಲ್ಲವೆಂದು ರೋಗಿಯನ್ನು ಎಳೆದುಕೊಂಡು ಹೋಗುವ ದೃಶ್ಯವನ್ನು ನೋಡಿದ್ದೆವು. ಆದರೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳ ಅಭಾವದಿಂದ ರೋಗಿಗಳು ನೆಲದ ಮೇಲೆ ಹಾಗೂ ಒಂದೇ ಹಾಸಿಗೆ ಮೇಲೆ ಇಬ್ಬರು ರೋಗಿಗಳು ಮಲಗುವ ಸ್ಥಿತಿ ಎದುರಾಗಿದೆ.

    300 ಹಾಸಿಗೆಗಳ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳ ಅಭಾವದಿಂದ ಒಂದೊಂದು ಹಾಸಿಗೆಯಲ್ಲಿ ಇಬ್ಬರು ರೋಗಿಗಳು ಮಲಗುವಂತ ಸ್ಥಿತಿ ನಿರ್ಮಾಣವಾಗಿದ್ರೆ, ಇನ್ನೂ ಕೆಲವು ರೋಗಿಗಳು ನೆಲದ ಮೇಲೆ ಮಲಗುವಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಜಿಲ್ಲೆಯಲ್ಲಿ ಆವರಿಸಿರುವ ಡೆಂಗ್ಯೂ ಹಾಗೂ ವೈರಲ್ ಫೀವರ್.

    ಪ್ರತಿ ನಿತ್ಯ 250 ಡೆಂಗ್ಯೂ ಲಕ್ಷಣಗಳಿರುವ ರೋಗಿಗಳು, 1500 ವೈರಲ್ ಫೀವರ್ ಇರುವ ರೋಗಿಗಳು ಹಾಗೂ ಇನ್ನಿತರ ರೋಗಗಳಿರುವ ನೂರಾರು ಮಂದಿ ರೋಗಿಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಅಭಾವ ಎದುರಾಗಿದೆ. ಇದರಿಂದ ರೋಗಿಗಳು ಪರಿತಪಿಸುತ್ತಿದ್ದಾರೆ.

     

  • ಸರ್ಕಾರದ ಆರೋಗ್ಯ ಇಲಾಖೆಯ ಬೊಕ್ಕಸದಲ್ಲಿ 1300 ರೂ. ಇಲ್ಲವಂತೆ!

    ಸರ್ಕಾರದ ಆರೋಗ್ಯ ಇಲಾಖೆಯ ಬೊಕ್ಕಸದಲ್ಲಿ 1300 ರೂ. ಇಲ್ಲವಂತೆ!

    ಚಾಮರಾಜನಗರ: ಸರ್ಕಾರದ ಆರೋಗ್ಯ ಇಲಾಖೆಯಲ್ಲಿ 1300 ರೂ. ಇಲ್ಲವಂತೆ. ಇಂತಹದೊಂದು ಪರಿಸ್ಥಿತಿ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ನಡೆದಿದೆ’.

    ವೀರನಪುರದ ಗ್ರಾಮದ ನಿವಾಸಿ ಮಹೇಶ್ ಎಂಬವರ ಪತ್ನಿಗೆ ಹೆರಿಗೆ ಭತ್ಯೆಗೆಂದು ನೀಡಲು 1300 ರೂ. ಇಲ್ಲದಂತಾಗಿದೆ. 2014 ಅಕ್ಟೋಬರ್ ತಿಂಗಳಿನಲ್ಲಿ ಮಹೇಶ್ ಪತ್ನಿ ಭಾಗ್ಯ ಅವರಿಗೆ ಹೆರಿಗೆಯಾಗಿತ್ತು. ಇದೀಗ ಮೂರು ವರ್ಷಗಳ ನಂತರ ಹೆರಿಗೆ ಭತ್ಯೆಯ ಹಣ ಬಂದಿದ್ದು, 1300 ರೂ ಚೆಕ್ ನೀಡಲಾಗಿದೆ.

    ಸರ್ಕಾರದಿಂದ ಬಂದ ಚೆಕ್ ನ್ನು ಬ್ಯಾಂಕ್ ಗೆ ತೆಗೆದುಕೊಂಡು ಹೋದ್ರೆ ಸರ್ಕಾರದ ಅಕೌಂಟ್‍ನಲ್ಲಿ ಹಣವಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಐದು ತಿಂಗಳ ನಂತರ ಹಣ ಬರುತ್ತದೆ ಆಗ ಹಣ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆದರೆ ವಿಪರ್ಯಾಸ ಎಂದರೆ ಚೆಕ್‍ನಿಂದ ಹಣ ಪಡೆಯುವ ಕಾಲಾವಧಿ ಕೇವಲ ಮೂರು ತಿಂಗಳು ಮಾತ್ರ ಇರುತ್ತದೆ.

    ಈ ಕುರಿತು ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ರೆ 1300 ರೂ ಹಣ ತೆಗೆದು ಕೊಳ್ಳಲು ಗುಂಡ್ಲುಪೇಟೆಯಿಂದ ಬೆಂಗಳೂರಿಗೆ ಬನ್ನಿ ಎಂದು ಹೇಳ್ತಿದ್ದಾರೆ ಎಂದು ಮಹೇಶ್ ಹೇಳುತ್ತಾರೆ.