Tag: health department

  • ಜನರ ಮಧ್ಯೆಯೇ ಕೊರೊನಾದಿಂದ ಮೃತಪಟ್ಟ ವೃದ್ಧೆಯ ಶವ ಸಾಗಾಟ!

    ಜನರ ಮಧ್ಯೆಯೇ ಕೊರೊನಾದಿಂದ ಮೃತಪಟ್ಟ ವೃದ್ಧೆಯ ಶವ ಸಾಗಾಟ!

    – ಮುಂಜಾಗ್ರತಾ ಕ್ರಮ ಕೈಗೊಳ್ಳದ ಸಿಬ್ಬಂದಿ, ಬಿಬಿಎಂಪಿ

    ಬೆಂಗಳೂರು: ಮಹಾಮಾರಿ ಕೊರೊನಾದಿಂದ ಪ್ರತಿದಿನ ಒಂದೊಂದು ಅಮಾನವೀಯ ಘಟನೆ ಬೆಳಕಿಗೆ ಬರುತ್ತಿವೆ. ಇದೀಗ ಕೊರೊನಾ ಸೋಂಕಿತ ವೃದ್ಧೆಯ ಶವವನ್ನು ಪ್ಲಾಸ್ಟಿಕ್ ‌ ಕವರ್‌ನಲ್ಲಿ ಸುತ್ತಿ ಜನರ ಮಧ್ಯೆಯೇ ಸಾಗಾಟ ಮಾಡಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರಾಮಕೃಷ್ಣ ಪಾಳ್ಯ ಲೇಔಟ್‍ನ ಮಾಲಗಾಳ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. 60 ವರ್ಷದ ವೃದ್ಧೆ ಕೊರೊನಾ ಸೋಂಕು ಬಂದಿದ್ದು, ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ವೃದ್ಧೆ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮನೆಯಲ್ಲೇ ನರಳಿ ನರಳಿ ಪ್ರಾಣಬಿಟ್ಟ ಸೋಂಕಿತ!

    ಈ ಹಿನ್ನೆಲೆಯಲ್ಲಿ ಮೃತ ಸೋಂಕಿತ ವೃದ್ಧೆಯ ಶವವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಬೇರೆಡೆಗೆ ಸಾಗಿಸಿದ್ದಾರೆ. ಆದರೆ ಆರೋಗ್ಯ ಸಿಬ್ಬಂದಿ ವೃದ್ಧೆಯ ಶವವನ್ನು ಪ್ಲಾಸ್ಟಿಕ್ ‌ ಕವರ್‌ನಲ್ಲಿ ಸುತ್ತಿಕೊಂಡು ತೆಗೆದುಕೊಂಡು ಹೋಗಿದ್ದಾರೆ.

    ಕೊರೊನಾದಿಂದ ಮೃತಪಟ್ಟವರ ಶವವನ್ನು ಬೇರೆಡೆಗೆ ಸಾಗಿಸುವಾಗ ಆ ರಸ್ತೆಯನ್ನು ಬಂದ್ ಮಾಡಬೇಕಿತ್ತು. ಯಾಕೆಂದರೆ ಜನರು ಓಡಾಟ ಮಾಡುತ್ತಿದ್ದರೆ ಅವರಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದರೆ ಸಿಬ್ಬಂದಿಯಾಗಲಿ, ಬಿಬಿಎಂಪಿಯಾಗಲಿ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿಲ್ಲ. ಜನರ ಮಧ್ಯೆಯೇ ಸ್ಟ್ರಕ್ಚರ್ ನಲ್ಲಿ ಅಮಾನವೀಯವಾಗಿ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಸ್ಥಳೀಯರೊಬ್ಬರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

    ಆರೋಗ್ಯ ಸಿಬ್ಬಂದಿ ಸೋಂಕಿತೆ ವೃದ್ಧೆ ಶವವನ್ನು ಎಲ್ಲಿಗೆ ತೆಗೆದುಕೊಂಡು ಹೋದರು, ಎಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಬಿಬಿಎಂಪಿ ಕಣ್ಣು ಮುಚ್ಚಿ ಕುಳಿತಿದಿಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

  • ಕೊರೊನಾ ಹಿಟ್ ಲಿಸ್ಟ್‌ನಲ್ಲಿ 15 ರಾಜ್ಯ, 67 ಜಿಲ್ಲೆ

    ಕೊರೊನಾ ಹಿಟ್ ಲಿಸ್ಟ್‌ನಲ್ಲಿ 15 ರಾಜ್ಯ, 67 ಜಿಲ್ಲೆ

    – ಮಹಾಮಾರಿ ಪೀಡಿತ ಜಿಲ್ಲೆಗಳಿಗೆ ಕೇಂದ್ರ ಟೀಂ

    ನವದೆಹಲಿ: ಭಾರತ ಅನ್‍ಲಾಕ್ ಆಗುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನದಿನಕ್ಕೆ ಹೆಚ್ಚಾಗುತ್ತಿದೆ. ದೇಶದ ಹದಿನೈದು ರಾಜ್ಯಗಳ ಐವತ್ತಕ್ಕೂ ಹೆಚ್ಚು ಜಿಲ್ಲೆಯಲ್ಲಿ ಅಟ್ಟಹಾಸ ಮೇರೆಯುತ್ತಿದೆ. ಹೀಗೆ ತೀವ್ರಗತಿಯಲ್ಲಿ ಏರುತ್ತಿರುವ ಸೋಂಕಿಗೆ ಬ್ರೇಕ್ ಹಾಕಲು ಖುದ್ದು ಈಗ ಕೇಂದ್ರ ಆರೋಗ್ಯ ಇಲಾಖೆ ಅಖಾಡಕ್ಕೆ ಇಳಿದಿದೆ. ರಾಜ್ಯಗಳಿಗೆ ವಿಶೇಷ ಟೀಂಗಳನ್ನು ಕಳುಹಿಸಲು ಮುಂದಾಗಿದೆ.

    ಮೂರನೇ ಅವಧಿಯಲ್ಲಿ ಶುರುವಾದ ಕೊರೊನಾ ಸೋಂಕು ಏರಿಕೆಯ ಪ್ರಮಾಣ ಇನ್ನು ತಗ್ಗಿಲ್ಲ. ಭಾರತ ಅನ್‍ಲಾಕ್ ಆಗುತ್ತಿದ್ದಂತೆ ಕೊರೊನಾ ಸೋಂಕಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಹೀಗೆ ಹೆಚ್ಚಳವಾಗುತ್ತಿರುವ ಸೋಂಕು ದೇಶದಲ್ಲಿ ಸಮುದಾಯಕ್ಕೆ ಹರಡುವ ಭೀತಿ ಸೃಷ್ಟಿಸಿದೆ.

    ಈ ಹಿನ್ನೆಲೆಯಲ್ಲಿ ಐಸಿಎಂಆರ್ ಜೊತೆಗೆ ಅಧ್ಯಯನ ನಡೆಸಿರುವ ಕೇಂದ್ರ ಆರೋಗ್ಯ ಇಲಾಖೆ, ಭಾರತದಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ 15 ರಾಜ್ಯಗಳ 67 ಜಿಲ್ಲೆಗಳಲ್ಲಿ ನಗರ ಸಭೆಗಳ ವ್ಯಾಪ್ತಿಯನ್ನು ಪತ್ತೆ ಮಾಡಿದೆ. ಈ ಜಿಲ್ಲೆಗಳಿಗೆ ಕೇಂದ್ರದ ತಂಡ ಭೇಟಿ ನೀಡಲಿದ್ದು, ಕೊರೊನಾಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಿದೆ. ಈ ಟೀಂನಲ್ಲಿ ತಲಾ ಒಬ್ಬರು ಸಾರ್ವಜನಿಕ ಆರೋಗ್ಯ ಅಧಿಕಾರಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಜಂಟಿ ಕಾರ್ಯದರ್ಶಿ ಹುದ್ದೆಯ ನೊಡೇಲ್ ಅಧಿಕಾರಿ ಇರಲಿದ್ದಾರೆ. ಇವರು ಆಯಾ ಜಿಲ್ಲಾಡಳಿತದ ಜೊತೆಗೂಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಿದ್ದಾರೆ.

    ಅಂದಹಾಗೆ ಕೇಂದ್ರ ಆರೋಗ್ಯ ಇಲಾಖೆ ಕಳೆದ ಬಾರಿ 80ಕ್ಕೂ ಹೆಚ್ಚು ಜಿಲ್ಲೆಗಳನ್ನು ತನ್ನ ಹಿಟ್ ಲಿಸ್ಟ್‌ನಲ್ಲಿ ಗುರುತಿಸಿತ್ತು. ಆದರೆ ಈ ಬಾರಿ ಈ ಪಟ್ಟಿ ಮತ್ತಷ್ಟು ಪರಿಷ್ಕರಿಸಿ 67 ಜಿಲ್ಲೆಗಳ ನಗರಸಭೆ ಪ್ರದೇಶಗಳನ್ನು ಗುರುತಿಸಿದೆ. ಹಿಟ್ ಲಿಸ್ಟ್‌ನಲ್ಲಿರುವ ರಾಜ್ಯಗಳು ಯಾವುದು? ಯಾವ ರಾಜ್ಯದಲ್ಲಿ ಎಷ್ಟು ಜಿಲ್ಲೆ ಹಿಟ್ ಲಿಸ್ಟ್‌ನಲ್ಲಿದೆ ಅನ್ನೊದು ನೋಡುವುದಾದರೆ:

    ಮಹಾರಾಷ್ಟ್ರ 07, ತೆಲಂಗಾಣ 04, ತಮಿಳುನಾಡು 07, ರಾಜಸ್ಥಾನ 05, ಅಸ್ಸಾಂ 06, ಹರಿಯಾಣ 04, ಗುಜರಾತ್ 03, ಕರ್ನಾಟಕ 04, ಉತ್ತರಾಖಂಡ 03, ಮಧ್ಯಪ್ರದೇಶ 05, ಪಶ್ಚಿಮ ಬಂಗಾಳ 03, ದೆಹಲಿ 03, ಬಿಹಾರ 04, ಉತ್ತರ ಪ್ರದೇಶ 04 ಮತ್ತು ಒಡಿಶಾ 05 ಜಿಲ್ಲೆ ಹಿಟ್ ಲಿಸ್ಟ್‌ನಲ್ಲಿದೆ.

    ಕರ್ನಾಟಕಕ್ಕೂ ಕೇಂದ್ರದ ಪವರ್ ಫುಲ್ ತಂಡ
    ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ರಾಜ್ಯದ ನಾಲ್ಕು ಜಿಲ್ಲೆಗೆ ಕೇಂದ್ರದ ತಂಡ ಬರಲಿದೆ. 947 ಕೇಸ್ ಗಳಿರುವ ಉಡುಪಿ ಜಿಲ್ಲೆ, 769 ಸೋಂಕು ಪತ್ತೆಯಾಗಿರುವ ಕಲಬುರಗಿ, 642 ಪ್ರಕರಣಗಳಿರುವ ಯಾದಗಿರಿ ಹಾಗೂ 533 ಕೇಸ್‍ಗಳಿರುವ ಬೆಂಗಳೂರು ಗ್ರಾಮೀಣ ಭಾಗಕ್ಕೆ ಈ ತಂಡಗಳ ಬರಲಿದೆ.

    ಕೇಂದ್ರದಿಂದ ಬರುವ ಈ ತಂಡಗಳ ಕೆಲಸ:
    * ರಾಜ್ಯ ಆರೋಗ್ಯ ಇಲಾಖೆ ಜಿಲ್ಲಾಡಳಿತದೊಂದಿಗೆ ಸೇರಿ ಸೋಂಕು ಹಬ್ಬುತ್ತಿರುವ ಬಗ್ಗೆ ಅಧ್ಯಯನ
    * ಮುಂದಿನ ಅಪಾಯಗಳನ್ನು ಗುರುತಿಸುವುದು
    * ಸೋಂಕು ಸಮುದಾಯಕ್ಕೆ ಹಬ್ಬದಂತೆ ನೋಡಿಕೊಳ್ಳುವುದು
    * ಪುರಸಭೆ ಮಟ್ಟದಿಂದ ಕಾರ್ಯಚರಣೆ ಚುರುಕುಗೊಳಿಸುವುದು
    * ಸೋಂಕಿನ ತೀವ್ರತೆ ಆಧರಿಸಿ ಸೂಕ್ತ ಆಸ್ಪತ್ರೆ ಬೆಡ್ ಚಿಕಿತ್ಸೆ ವ್ಯವಸ್ಥೆ ಮಾಡುವುದು
    * ಕೊರೊನಾ ಹರಡುವಿಕೆ ಮತ್ತು ಸಾವಿನ ಪ್ರಮಾಣ ತಗ್ಗಿಸುವುದು ಕಾರ್ಯ ಮಾಡಲಿದೆ

    ಕೇಂದ್ರ ಆರೋಗ್ಯ ಇಲಾಖೆ ಅನ್‍ಲಾಕ್ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದೆ. ಯಾವುದೇ ಕಾರಣಕ್ಕೂ ಸೋಂಕು ಸಮುದಾಯಕ್ಕೆ ಹಬ್ಬದಂತೆ ನೋಡಿಕೊಳ್ಳಲು ಹಿಟ್ ನಗರಗಳ ಮೇಲೆ ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತಿದೆ.

  • SSLC ಪರೀಕ್ಷೆ ಯಾವುದೇ ಕಾರಣಕ್ಕೂ ರದ್ದು ಪಡಿಸಲ್ಲ- ಸಚಿವ ಶ್ರೀರಾಮುಲು ಸ್ಪಷ್ಟನೆ

    SSLC ಪರೀಕ್ಷೆ ಯಾವುದೇ ಕಾರಣಕ್ಕೂ ರದ್ದು ಪಡಿಸಲ್ಲ- ಸಚಿವ ಶ್ರೀರಾಮುಲು ಸ್ಪಷ್ಟನೆ

    ಮಡಿಕೇರಿ: ಕೆಲ ರಾಜ್ಯಗಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದು ಮಾಡಿರುವಂತೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ನಡೆದ ಕೊರೊನಾ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿಯೇ ಬರಲು ವ್ಯವಸ್ಥೆ ಮಾಡಲಾಗುವುದು. ಎಲ್ಲ ವಿದ್ಯಾರ್ಥಿಗಳಿಗೆ ತಪ್ಪದೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ಅಲ್ಲದೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಿಂದ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಭಾಗಗಳಿಂದ ಬರುವ ವಿದ್ಯಾರ್ಥಿಗಳ ಸಂಚಾರಕ್ಕೆ ಸಮಸ್ಯೆಯಾದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಹಾಸ್ಟೆಲ್ ವ್ಯವಸ್ಥೆ ಕೂಡ ಮಾಡಿದ್ದೇವೆ ಎಂದರು.

    ಶಾಲೆಗಳನ್ನು ತೆರೆಯುವ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕಾಗಿ ವಿಶೇಷ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಶಾಲೆ ತೆರೆದರೆ ಆಗುವ ಸಾಧಕ ಬಾಧಕಗಳ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಸಮಿತಿ ನೀಡುವ ವರದಿಯನ್ನು ಪರಿಶೀಲಿಸಿದ ಬಳಿಕ ಶಾಲೆ ಆರಂಭಿಸುವ ಕುರಿತು ಚರ್ಚಿಸಲಾಗುವುದು ಎಂದರು.

    ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು, ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಕೊಡಗು ಡಿಎಚ್‍ಓ ಮೋಹನ್ ಅವರು ಜಿಲ್ಲೆಯಲ್ಲಿ 53 ತಜ್ಞ ವೈದ್ಯರ ಕೊರತೆ ಇದ್ದು, 17 ಎಂಬಿಬಿಎಸ್ ವೈದ್ಯರ ಕೊರತೆ ಇದೆ. ಜಿಲ್ಲಾಧಿಕಾರಿಗಳು ವೈದ್ಯರನ್ನು ನೇಮಿಸಿಕೊಂಡರೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡರು.

  • ಇಲಾಖೆ ಹೇಳೋದು ಒಂದು, ಆರೋಗ್ಯ ಸಚಿವರು ಹೇಳೋದು ಮತ್ತೊಂದು

    ಇಲಾಖೆ ಹೇಳೋದು ಒಂದು, ಆರೋಗ್ಯ ಸಚಿವರು ಹೇಳೋದು ಮತ್ತೊಂದು

    ಉಡುಪಿ: ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್ ಕಡ್ಡಾಯ ಎಂದು ಸೋಮವಾರವಷ್ಟೇ ಸರ್ಕಾರ ಆದೇಶ ಹೊರಡಿಸಿದ್ದು, ಇದೀಗ ಆರೋಗ್ಯ ಸಚಿವ ಶ್ರೀರಾಮುಲು ಅವರು ಇನ್ನು ಮುಂದೆ ಸರ್ಕಾರಿ ಕ್ವಾರಂಟೈನ್ ಇರಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಜನ ಆರೋಗ್ಯ ಇಲಾಖೆಯನ್ನು ನಂಬಬೇಕಾ ಅಥವಾ ಆರೋಗ್ಯ ಸಚಿವರನ್ನು ನಂಬಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.

    ಹೌದು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ಇರೋದಿಲ್ಲ. ವ್ಯಕ್ತಿಯ ಮನೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡುತ್ತೇವೆ. ಸೀಲ್ ಮಾಡಿದ ಮೇಲೆ ಆತ ಮನೆಯಲ್ಲೇ ಇರಬೇಕು. ಹೊರಬಂದ್ರೆ ಕೇಸ್ ಹಾಕುವ ತೀರ್ಮಾನ ಮಾಡಿದ್ದೇವೆ. ಈ ತೀರ್ಮಾನವನ್ನು ರಾಜ್ಯ ಮಟ್ಟದಲ್ಲೇ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗೆ ಜಿಲ್ಲೆಯ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಸೀಲ್ ಡೌನ್ ಇದ್ದವರು ಹೊರಗೆ ಬಂದ್ರೆ ಕೇಸ್ ಬೀಳುತ್ತೆ. ಪೊಲೀಸ್, ಹೋಂ ಗಾರ್ಡ್ ಗಳನ್ನು ನೇಮಿಸುತ್ತೇವೆ. ಆಶಾ, ಅಂಗನವಾಡಿ ಕಾರ್ಯಕರ್ತರು ನಿಗಾ ಇಡುತ್ತಾರೆ. ಹೊರಬಂದ್ರೆ ಸುತ್ತಮುತ್ತಲ ಮನೆಯವರು ಮಾಹಿತಿ ಕೊಡಬೇಕು. ತುಂಬಾ ಬಡವರಿದ್ದರೆ ಆ ಮನೆಗೆ ದೇವಸ್ಥಾನದ ಮೂಲಕ ಕಿಟ್ ಒದಗಿಸಲಾಗುವುದು. ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಅಪಾರ್ಟ್ ಮೆಂಟ್ ಸೀಲ್ ಮಾಡಲ್ಲ. ಒಂದು ಮನೆಯನ್ನು ಮಾತ್ರ ಸೀಲ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೊನಾ ಸ್ಫೋಟವಾಗಿದ್ರೂ ಸಾಂಸ್ಥಿಕ ಕ್ವಾರಂಟೈನ್ ರದ್ದು ಮಾಡಿ ಹೋಂ ಕ್ವಾರಂಟೈನ್ ಮಾಡುವ ನಿರ್ಧಾರವನ್ನು ಸಚಿವರು ಪ್ರಕಟಿಸಿದ್ದರು. ಸರ್ಕಾರದ ಈ ನಡೆ ವಿರೋಧಿಸಿ ಪಬ್ಲಿಕ್ ಟಿವಿ ನಿರಂತರ ಸುದ್ದಿ ಪ್ರಸಾರ ಮಾಡಿತ್ತು. ಕೊನೆಗೂ ಪಬ್ಲಿಕ್ ಆಗ್ರಹಕ್ಕೆ ಮಣಿದು ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಬದಲು 7 ದಿನ ಸಾಂಸ್ಥಿಕ ಕ್ವಾರಂಟೈನ್ ನಿರ್ಧಾರ ಪ್ರಕಟಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ರದ್ದು ಇಲ್ಲ. ಬದಲಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.

  • ‘ವಾರಿಯರ್ಸ್‍ಗೆ ಕೇವಲ ಹೂಮಳೆ ಸುರಿಸಿ, ಚಪ್ಪಾಳೆ ತಟ್ಟಿದ್ರೆ ಸಾಕಾ?’: ಆರೋಗ್ಯ ಸಿಬ್ಬಂದಿ ಪ್ರಶ್ನೆ

    ‘ವಾರಿಯರ್ಸ್‍ಗೆ ಕೇವಲ ಹೂಮಳೆ ಸುರಿಸಿ, ಚಪ್ಪಾಳೆ ತಟ್ಟಿದ್ರೆ ಸಾಕಾ?’: ಆರೋಗ್ಯ ಸಿಬ್ಬಂದಿ ಪ್ರಶ್ನೆ

    – ‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ’
    – ಆರೋಗ್ಯ ಇಲಾಖೆ ಒಳ, ಹೊರ ಗುತ್ತಿಗೆ ನೌಕರರ ಮುಷ್ಕರ

    ಶಿವಮೊಗ್ಗ: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಕಳೆದ 15-20 ವರ್ಷಗಳಿಂದ ಒಳ ಹಾಗೂ ಹೊರಗುತ್ತಿಗೆ ಅಡಿಯಲ್ಲಿ ಕಡಿಮೆ ವೇತನಕ್ಕೆ ಆರೋಗ್ಯ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ತಾರತಮ್ಯ ನಿವಾರಿಸುವಂತೆ ಹಾಗೂ ಗುತ್ತಿಗೆ ನೌಕರರನ್ನೇ ಖಾಯಂಗೊಳಿಸುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಿಬ್ಬಂದಿ ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಡಾ.ಹೇಮಲತಾ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ನ್ಯಾಯಾಲಯ ಸಹ ಹೇಳಿದೆ. ಈಗಿದ್ದರೂ ಸರ್ಕಾರ ನಮ್ಮನ್ನು ಅತ್ಯಂತ ನಿಷ್ಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದರು.

    ಅಲ್ಲದೇ ಸರ್ಕಾರ ನಿರ್ಲಕ್ಷ್ಯ ಖಂಡಿಸಿ ಜೂನ್ 4 ರಿಂದ ಆರೋಗ್ಯ ಸಿಬ್ಬಂದಿ ಕರ್ತವ್ಯಕ್ಕೆ ಗೈರು ಹಾಜರಾಗಿ ಮನೆಯಲ್ಲೇ ಕುಳಿತು ಅಸಹಕಾರ ಚಳುವಳಿ ಮಾಡುವುದಾಗಿ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಿಬ್ಬಂದಿ ತಿಳಿಸಿದ್ದಾರೆ.

    ಕೊರೊನಾ ಸೋಂಕಿನ ಸಂದಿಗ್ಧ ಸಂದರ್ಭದಲ್ಲಿ ನಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಅದಕ್ಕೆ ಪ್ರತಿಯಾಗಿ ಸರ್ಕಾರ ಹೂ ಮಳೆ ಸುರಿಸಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದೆ. ಆದರೆ ಕೇವಲ ಅಷ್ಟೇ ಸಾಕಾ? ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಜೂನ್ 4 ರಿಂದ ಮುಷ್ಕರ ಕೈಗೊಂಡಿದ್ದು, ಒಂದು ವೇಳೆ ಏನಾದರೂ ಅನಾಹುತವಾದರೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತವಾಗಿ ಭರವಸೆ ನೀಡಿದರೆ ಮುಷ್ಕರ ಹಿಂಪಡೆಯುತ್ತೇವೆ. ಇಲ್ಲದಿದ್ದರೆ ರಾಜ್ಯಾದ್ಯಂತ ಸಾವಿರಾರು ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.

  • ಸಲೂನ್ ಶಾಪ್‍ನಲ್ಲಿ ಸೋಂಕಿತ ಕಟಿಂಗ್- ನಂತ್ರ 15ಕ್ಕೂ ಹೆಚ್ಚು ಜನರಿಂದ ಹೇರ್ ‌‍ಕಟ್

    ಸಲೂನ್ ಶಾಪ್‍ನಲ್ಲಿ ಸೋಂಕಿತ ಕಟಿಂಗ್- ನಂತ್ರ 15ಕ್ಕೂ ಹೆಚ್ಚು ಜನರಿಂದ ಹೇರ್ ‌‍ಕಟ್

    – ಮಲೇಷಿಯಾದಿಂದ ಬಂದ ಸೋಂಕಿತನ ಎಡವಟ್ಟು

    ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸಲೂನ್ ಒಂದರಲ್ಲಿ ಕೊರೊನಾ ಸೋಂಕಿತ ಕಟಿಂಗ್ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸಲೂನ್ ಶಾಪ್ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ.

    ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಜಿಲ್ಲೆಯಲ್ಲಿ ಈವರೆಗೆ 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದುವರೆಗೂ ಐವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಕೋಲಾರ ಜಿಲ್ಲೆಗೆ ಹೊರ ರಾಜ್ಯ, ವಿದೇಶದಿಂದ ಬಂದವರಿಂದಲೇ ಕಂಟಕ ಎದುರಾಗುತ್ತಿದೆ. ಸದ್ಯಕ್ಕೆ ಮಲೇಷಿಯಾದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿರುವುದು ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ.

    ಈ ನಡುವೆ ಸಲೂನ್ ಶಾಪ್‍ನಿಂದ ಬಂಗಾರಪೇಟೆಗೆ ಆತಂಕ ಶುರುವಾಗಿದೆ. ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರಕ್ಕೆ ಮಲೇಷಿಯಾದಿಂದ ಬಂದಿದ್ದ ರೋಗಿ 3186 ವ್ಯಕ್ತಿ ಬಂಗಾರಪೇಟೆ ಪಟ್ಟಣದ ಸೂಪರ್ ಜೆಂಟ್ಸ್ ಪಾರ್ಲರ್ ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದ. ಅದಾದ ನಂತರ ಸುಮಾರು 15ಕ್ಕೂ ಹೆಚ್ಚು ಜನ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದು, ಅವರಿಗಾಗಿ ಅಧಿಕಾರಿಗಳು ಹುಡುಕಾಟ ಮಾಡುತ್ತಿದ್ದಾರೆ.

    ಅಲ್ಲದೇ ಆ ದಿನ ಯಾರೆಲ್ಲಾ ಶೇವಿಂಗ್ ಮತ್ತು ಕಟಿಂಗ್ ಮಾಡಿಸಿಕೊಂಡಿದ್ದಾರೋ ಅವರೆಲ್ಲ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕೆಂದು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣದ ಬೀದಿ ಬೀದಿಯಲ್ಲಿ ಮೈಕ್‍ನಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ಈ ಮೂಲಕ ಸಲೂನ್ ಶಾಪ್‍ನಿಂದ ಬಂಗಾರಪೇಟೆ ಪಟ್ಟಣದಲ್ಲಿ ಆತಂಕ ಶುರುವಾಗಿದೆ.

    ಸಲೂನ್ ಮಾಲೀಕರಿಂದ ವಿಭಿನ್ನ ಪ್ರಯತ್ನ:
    ಕೋಲಾರದಲ್ಲಿ ಎಚ್ಚೆತ್ತ ಸಲೂನ್ ಮಾಲೀಕರು ಸಲೂನ್‍ನಲ್ಲಿ ಪಿಪಿಇ ಕಿಟ್ ಧರಿಸಿ ಗ್ರಾಹಕರಿಗೆ ಕಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಮಂಜುನಾಥ್ ಹೇರ್ ಕಟಿಂಗ್ ಶಾಪ್‍ನ ಮಾಲೀಕ ವಿಭಿನ್ನ ಪ್ರಯತ್ನ ಮಾಡುತ್ತಿದ್ದು, ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಹೇರ್ ಕಟಿಂಗ್ ಮಾಡುತ್ತಿದ್ದಾರೆ. ಸೋಂಕು ಹರಡದಂತೆ ಸಲೂನ್ ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

  • ದಿನೇ ದಿನೇ ಬೆಂಗ್ಳೂರಲ್ಲಿ ಏರಿಕೆ ಆಗ್ತಿದೆ ಸೋಂಕು – ಯಾವ ದಿನ ಎಷ್ಟಿತ್ತು?

    ದಿನೇ ದಿನೇ ಬೆಂಗ್ಳೂರಲ್ಲಿ ಏರಿಕೆ ಆಗ್ತಿದೆ ಸೋಂಕು – ಯಾವ ದಿನ ಎಷ್ಟಿತ್ತು?

    – ಜನರು, ಆರೋಗ್ಯಾಧಿಕಾರಿಗಳಿಗೆ ಡೇಂಜರ್ ಅಲಾರಂ

    ಬೆಂಗಳೂರು: ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಆರೋಗ್ಯಾಧಿಕಾರಿಗಳಿಗೆ ಮತ್ತು ಜನರಿಗೆ ಡೇಂಜರ್ ಅಲಾರಂ ಬಂದಿದೆ.

    ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂತು ಎಂಬ ಹೊತ್ತಲ್ಲೇ ಆಘಾತಕಾರಿ ಬೆಳವಣಿಗೆಯೊಂದು ಕಾಣಿತ್ತಿದೆ. ಬೆಂಗಳೂರಿನಲ್ಲಿ 8-10 ಬರುತ್ತಿದ್ದ ಪ್ರಕರಣಗಳು ಈಗ ದಿನಕ್ಕೆ 25-30 ಪ್ರಕರಣಗಳು ಬರಲು ಆರಂಭವಾಗುತ್ತಿವೆ. ಅದರಲ್ಲೂ ಹೊಸ ಏರಿಯಾಗಳಲ್ಲಿ ಕೊರೊನಾ ಪಾಸಿಟಿವ್ ಬರುತ್ತಿದೆ. ಈ ಮೂಲಕ ಕೊರೊನಾ ಪ್ರಕರಣಗಳು ಡೇಂಜರ್ ಅಲಾರಂ ಆಗಿವೆ.

    ಈ ಬೆಳವಣಿಗೆಯಿಂದ ಬೆಂಗಳೂರಿಗೆ ಕಂಟಕ ಕಾದಿದ್ಯಾ, ಈ ಪ್ರಕರಣಗಳು ಎಚ್ಚರಿಕೆವಹಿಸುವಂತೆ ಮುನ್ಸೂಚನೆ ಕೊಡ್ತಾ ಇದೆಯಾ ಎಂಬ ಆತಂಕ ಶುರುವಾಗಿದೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರಕರಣಗಳಲ್ಲಿ ದ್ವಿಗುಣವಾಗಿದೆ. ಇದು ಬೆಂಗಳೂರಿಗೆ ಆತಂಕಕಾರಿ ಬೆಳವಣಿಗೆನಾ ಎಂಬ ಭಯ ಶುರುವಾಗಿದೆ..

    ಇಡೀ ದೇಶವೇ ಅನ್‍ಲಾಕ್ ಆಗುತ್ತಿರುವ ಬೆನ್ನಲ್ಲೇ ಬೆಂಗಳೂರಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮೇ ತಿಂಗಳಲ್ಲಿ ಡಬಲ್ ಆಗಿದೆ. ಆಘಾತಕಾರಿ ಅಂಶವೆಂದರೆ ಮೇ ಕೊನೆ ವಾರದಲ್ಲೇ ಬೆಂಗಳೂರಲ್ಲಿ 100 ಗಡಿ ಹತ್ತಿರಕ್ಕೆ ಬಂದಿದೆ. ಲಾಕ್‍ಡೌನ್ ರಿಲೀಫ್ ಸಿಗುತ್ತಿರುವಂತೆ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಆಗುತ್ತಿದೆ.

    ಹೆಚ್ಚಳ ಹೇಗೆ?
    ಏಪ್ರಿಲ್ 30ರ ವರೆಗೂ ಬೆಂಗಳೂರಿನಲ್ಲಿ 182 ಮಂದಿಯಲ್ಲಿ ಕೊರೊನಾ ಕಂಡು ಬಂದಿತ್ತು. ಆದರೆ ಮೇ 31ರ ವರೆಗೆ ಬರೋಬ್ಬರಿ 361 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಂದೇ ತಿಂಗಳಲ್ಲಿ ಕೊರೊನಾ ಪ್ರಕರಣ ದ್ವಿಗುಣವಾಗಿದೆ. ಒಂದೇ ತಿಂಗಳಲ್ಲಿ ಸೋಂಕಿತರ ಸಂಖ್ಯೆ 185ಕ್ಕೆ ಹೆಚ್ಚಳವಾಗಿದೆ. ಅದರಲ್ಲೂ ಮೇ ಕೊನೆ ವಾರದಲ್ಲಿ 102 ಕೊರೊನಾ ಪಾಸಿಟಿವ್ ಬಂದಿದೆ. ಅಂದರೆ ಮೇ 24ರಿಂದ ಮೇ 31ರ ನಡುವೆ 102 ಮಂದಿಗೆ ಕೊರೊನಾ ಬಂದಿದೆ.

    ಈ ರೀತಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣ ಆಗುತ್ತಾ ಹೋಗುತ್ತಿದ್ದು, ಮತ್ತೊಂದು ಆತಂಕಕಾರಿ ವಿಚಾರ ಅಂದರೆ ಬೆಂಗಳೂರಿನ ಹೊಸ ಏರಿಯಾಗಳಲ್ಲಿ ಸೊಂಕು ಪತ್ತೆಯಾಗುತ್ತಿದೆ. ಸೋಂಕಿತರ ಸಂಪರ್ಕದಲ್ಲಿ ಇಲ್ಲದಿದ್ದರೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಇಡೀ ಬೆಂಗಳೂರಿಗೆ ಸಮುದಾಯಕ್ಕೆ ಹಬ್ಬಿದ್ಯಾ ಎಂಬ ಆತಂಕ ಶುರುವಾಗಿದೆ.

    ಹೊಸ ಏರಿಯಾಗಳಲ್ಲಿ ಸೋಂಕು:
    ಕೆಜಿಹಳ್ಳಿ – ಓರ್ವ ಕೊರೊನಾಗೆ ಬಲಿ, ಡಿಜೆ ಹಳ್ಳಿ – 15, ಮಹಾಲಕ್ಷ್ಮೀ ಲೇ ಔಟ್ – 1, ಯಲಹಂಕ ನ್ಯೂ ಟೌನ್ – 1, ಲಕ್ಕಸಂದ್ರ – 2, ನಾಗರಭಾವಿ – 2, ಪದ್ಮನಾಭ ನಗರ – 1, ಯಶವಂತಪುರ – 4, ಗುರಪ್ಪನ ಪಾಳ್ಯ – 1, ಹೊಂಬೇಗೌಡ ನಗರ – 1, ದೀಪಾಂಜಲಿ ನಗರ – 4, ಶ್ರೀ ರಾಂಪುರ – 1, ವಿಜಯ ನಗರ – 1, ಆಸ್ಟಿನ್ ಟೌನ್ – 3, ಈ ರೀತಿ 14ಕ್ಕೂ ಹೆಚ್ಚು ಹೊಸ ಏರಿಯಾಗಳಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಇನ್ನಿತರ ಹೊಸ ಏರಿಯಾಗಳಿಗೂ ಸೋಂಕು ಹಬ್ಬುವ ಭೀತಿ ಎದುರಾಗಿದೆ.

    ಲಾಕ್‍ಡೌನ್ ಸಡಿಲಿಕೆ ನಡುವೆ ಬೆಂಗಳೂರಿನಲ್ಲಿ ಜನರ ಓಡಾಟ ಜಾಸ್ತಿಯಾಗಿದ್ದು ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ದಿನಕ್ಕೆ 30 ಪ್ರಕರಣಗಳು ಬರುತ್ತಿವೆ. ಜನರು ಮತ್ತಷ್ಟು ಎಚ್ಚರದಿಂದ ಇರಬೇಕಾಗಿದೆ.

  • ಯಾದಗಿರಿ 60, ರಾಯಚೂರು 62 – ರಾಜ್ಯದಲ್ಲಿ 178 ಮಂದಿಗೆ ಕೊರೊನಾ

    ಯಾದಗಿರಿ 60, ರಾಯಚೂರು 62 – ರಾಜ್ಯದಲ್ಲಿ 178 ಮಂದಿಗೆ ಕೊರೊನಾ

    – ಸೋಂಕಿತರ ಸಂಖ್ಯೆ 2,711ಕ್ಕೆ ಏರಿಕೆ
    – ಮತ್ತೆ ಮೈಸೂರಿನಲ್ಲಿ ಕೊರೊನಾ ಸೋಂಕು

    ಬೆಂಗಳೂರು: ಇಂದು ಸಹ ಮಹಾಮಾರಿ ಕೊರೊನಾ ಶತಕದ ಗಡಿಯನ್ನ ದಾಟಿದ್ದು, 178 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2, 711ಕ್ಕೆ ಏರಿಕೆಯಾಗಿದೆ.

    ಇಂದು ಬೆಳಗ್ಗೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ನಲ್ಲಿ 178 ಮಂದಿಗೆ ಸೋಂಕು ದೃಢವಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಬೆಂಗಳೂರು 10, ಬೆಂಗಳೂರು ಗ್ರಾಮಾಂತರ 1, ಯಾದಗಿರಿ 60, ರಾಯಚೂರು 62, ಕಲಬುರಗಿ 15, ಚಿಕ್ಕಬಳ್ಳಾಪುರ 4, ಉಡುಪಿ 15, ಮಂಡ್ಯ 2, ಮೈಸೂರು 2, ದಾವಣಗೆರೆ 4, ಶಿವಮೊಗ್ಗ 1, ಚಿತ್ರದುರ್ಗ 1 ಮತ್ತು ಧಾರವಾಡ 1 ಹೊಸ ಪ್ರಕರಣಗಳು ದಾಖಲಾಗಿದೆ.

    ಇಂದು ಒಟ್ಟು 35 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ 869 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಸೋಂಕಿತರ ವಿವರಗಳು:

    1. ರೋಗಿ- 2534: ಉಡುಪಿಯ 49 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
    2. ರೋಗಿ- 2535: ಉಡುಪಿಯ 63 ವರ್ಷದ ವೃದ್ಧ- ಮಹಾರಾಷ್ಟ್ರದಿಂದ ವಾಪಸ್
    3. ರೋಗಿ- 2536: ಉಡುಪಿಯ 38 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
    4. ರೋಗಿ- 2537: ಉಡುಪಿಯ 07 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
    5. ರೋಗಿ- 2538: ಉಡುಪಿಯ 39 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    6. ರೋಗಿ- 2539: ಉಡುಪಿಯ 34 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    7. ರೋಗಿ- 2540: ಉಡುಪಿಯ 36 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    8. ರೋಗಿ- 2541: ಉಡುಪಿಯ 39 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    9. ರೋಗಿ- 2542: ಉಡುಪಿಯ 80 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್
    10. ರೋಗಿ- 2543: ಉಡುಪಿಯ 27 ವರ್ಷದ ವೃದ್ಧೆ- ಮಹಾರಾಷ್ಟ್ರದಿಂದ ವಾಪಸ್

    11. ರೋಗಿ- 2544: ಉಡುಪಿಯ 41 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
    12. ರೋಗಿ- 2545: ಬೆಂಗಳೂರಿನ 28 ವರ್ಷದ ಯುವಕ- ಆಂಧ್ರಪ್ರದೇಶದಿಂದ ವಾಪಸ್
    13. ರೋಗಿ- 2546: ಉಡುಪಿಯ 06 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
    14. ರೋಗಿ- 2547: ಉಡುಪಿಯ 36 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    15. ರೋಗಿ- 2548: ಮಂಡ್ಯದ 10 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
    16. ರೋಗಿ- 2549: ಮಂಡ್ಯದ 50 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
    17. ರೋಗಿ- 2550: ಬೆಂಗಳೂರಿನ 35 ವರ್ಷದ ಯುವಕ- ಅನಾರೋಗ್ಯ
    18. ರೋಗಿ- 2551: ಯಾದಗಿರಿಯ 55 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
    19. ರೋಗಿ- 2552: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
    20. ರೋಗಿ- 2553: ಯಾದಗಿರಿಯ 15 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್

    21. ರೋಗಿ- 2554: ಯಾದಗಿರಿಯ 10 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
    22. ರೋಗಿ- 2555: ಯಾದಗಿರಿಯ 13 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
    23. ರೋಗಿ- 2556: ಯಾದಗಿರಿಯ 30 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    24. ರೋಗಿ- 2557: ದಾವಣಗೆರೆಯ 65 ವರ್ಷದ ಮಹಿಳೆ- ರೋಗಿ 2208ರ ಸಂಪರ್ಕ
    25. ರೋಗಿ- 2558: ದಾವಣಗೆರೆಯ 68 ವರ್ಷದ ವೃದ್ಧೆ- ರೋಗಿ 2208ರ ಸಂಪರ್ಕ
    26. ರೋಗಿ- 2559: ದಾವಣಗೆರೆಯ 08 ವರ್ಷದ ಬಾಲಕ- ರೋಗಿ 992ರ ಸಂಪರ್ಕ
    27. ರೋಗಿ- 2560: ದಾವಣಗೆರೆಯ 68 ವರ್ಷದ ವೃದ್ಧೆ- ಅನಾರೋಗ್ಯ
    28. ರೋಗಿ- 2561: ಮೈಸೂರಿನ 26 ವರ್ಷದ ಯುವಕ- ರಾಜಸ್ಥಾನದಿಂದ ವಾಪಸ್
    29. ರೋಗಿ- 2562: ಬೆಂಗಳೂರಿನ 23 ವರ್ಷದ ಯುವಕ- ನವದೆಹಲಿಯಿಂದ ವಾಪಸ್
    30. ರೋಗಿ- 2563: ಬೆಂಗಳೂರಿನ 03 ವರ್ಷದ ಬಾಲಕ- ನವದೆಹಲಿಯಿಂದ ವಾಪಸ್

    31. ರೋಗಿ- 2564: ಬೆಂಗಳೂರಿನ 23 ವರ್ಷದ ಯುವತಿ- ನವದೆಹಲಿಯಿಂದ ವಾಪಸ್
    32. ರೋಗಿ- 2565: ಮೈಸೂರಿನ 28 ವರ್ಷದ ಯುವಕ- ಐರ್ ಲ್ಯಾಂಡ್ ನಿಂದ ವಾಪಸ್
    33. ರೋಗಿ- 2566: ಉಡುಪಿಯ 35 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
    34. ರೋಗಿ- 2567: ಉಡುಪಿಯ 33 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    35. ರೋಗಿ- 2568: ಕಲಬುರಗಿಯ 20 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    36. ರೋಗಿ- 2569: ಕಲಬುರಗಿಯ 25 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
    37. ರೋಗಿ- 2570: ಕಲಬುರಗಿಯ 08 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
    38. ರೋಗಿ- 2571: ಕಲಬುರಗಿಯ 23 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    39. ರೋಗಿ- 2572: ಕಲಬುರಗಿಯ 10 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
    40. ರೋಗಿ- 2573: ಕಲಬುರಗಿಯ 20 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್

    41. ರೊಗಿ- 2574: ಕಲಬುರಗಿಯ 34 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
    42. ರೋಗಿ- 2575: ಕಲಬುರಗಿಯ 36 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
    43. ರೋಗಿ- 2576: ಕಲಬುರಗಿಯ 33 ವರ್ಷದ ಮಹಿಳೆ- ಮಹಾರಾಷ್ಟ್ರದಿಂದ ವಾಪಸ್
    44. ರೋಗಿ- 2577: ಕಲಬುರಗಿಯ 06 ವರ್ಷದ ಬಾಲಕ- ಮಹಾರಾಷ್ಟ್ರದಿಂದ ವಾಪಸ್
    45. ರೋಗಿ- 2578: ಕಲಬುರಗಿಯ 42 ವರ್ಷದ ವ್ಯಕ್ತಿ- ಮಹಾರಾಷ್ಟ್ರದಿಂದ ವಾಪಸ್
    46. ರೋಗಿ- 2579: ಕಲಬುರಗಿಯ 32 ವರ್ಷದ ಯುವತಿ- ಮಹಾರಾಷ್ಟ್ರದಿಂದ ವಾಪಸ್
    47. ರೋಗಿ- 2580: ಕಲಬುರಗಿಯ 12 ವರ್ಷದ ಬಾಲಕಿ- ಮಹಾರಾಷ್ಟ್ರದಿಂದ ವಾಪಸ್
    48. ರೋಗಿ- 2581: ಕಲಬುರಗಿಯ 35 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    49. ರೋಗಿ- 2582: ಕಲಬುರಗಿಯ 38 ವರ್ಷದ ಯುವಕ- ಮಹಾರಾಷ್ಟ್ರದಿಂದ ವಾಪಸ್
    50. ರೋಗಿ- 2583: ಶಿವಮೊಗ್ಗದ 35 ವರ್ಷದ ಮಹಿಳೆ- ನವದೆಹಲಿಯಿಂದ ವಾಪಸ್

    51. ರೋಗಿ- 2584: ಚಿತ್ರದುರ್ಗದ 23 ವರ್ಷದ ಯುವಕ- ನವದೆಹಲಿ ಪ್ರಯಾಣದ ಹಿನ್ನೆಲೆ
    52. ರೋಗಿ- 2585: ರಾಯಚೂರಿನ 27 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    53. ರೋಗಿ- 2586: ರಾಯಚೂರಿನ 20 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    54. ರೋಗಿ- 2587: ರಾಯಚೂರಿನ 18 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    55. ರೋಗಿ- 2588: ರಾಯಚೂರಿನ 54 ವರ್ಷದ ವೃದ್ಧ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    56. ರೋಗಿ- 2589: ರಾಯಚೂರಿನ 34 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    57. ರೋಗಿ- 2590: ರಾಯಚೂರಿನ 13 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    58. ರೋಗಿ- 2591: ರಾಯಚೂರಿನ 29 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    59. ರೋಗಿ- 2592: ರಾಯಚೂರಿನ 32 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    60. ರೋಗಿ- 2593: ರಾಯಚೂರಿನ 29 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    61. ರೋಗಿ- 2594: ರಾಯಚೂರಿನ 20 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    62. ರೋಗಿ- 2595: ರಾಯಚೂರಿನ 21 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    63. ರೋಗಿ- 2596: ರಾಯಚೂರಿನ 20 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ


    64. ರೋಗಿ- 2597: ರಾಯಚೂರಿನ 55 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    65. ರೋಗಿ- 2598: ರಾಯಚೂರಿನ 16 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    66. ರೋಗಿ- 2599: ರಾಯಚೂರಿನ 41 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    67. ರೋಗಿ- 2600: ರಾಯಚೂರಿನ 11 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    68. ರೋಗಿ- 2601: ರಾಯಚೂರಿನ 12 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    69. ರೋಗಿ- 2602: ರಾಯಚೂರಿನ 35 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    70. ರೋಗಿ- 2603: ರಾಯಚೂರಿನ 24 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    71. ರೋಗಿ- 2604: ರಾಯಚೂರಿನ 25 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    72. ರೋಗಿ- 2605: ರಾಯಚೂರಿನ 09 ವರ್ಷದ ಹೆಣ್ಣು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    73. ರೋಗಿ- 2606: ರಾಯಚೂರಿನ 49 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    74. ರೋಗಿ- 2607: ರಾಯಚೂರಿನ 37 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    75. ರೋಗಿ- 2608: ರಾಯಚೂರಿನ 54 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    76. ರೋಗಿ- 2609: ರಾಯಚೂರಿನ 44 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    77. ರೋಗಿ- 2610: ರಾಯಚೂರಿನ 46 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ


    78. ರೋಗಿ- 2611: ರಾಯಚೂರಿನ 42 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    79. ರೋಗಿ- 2612: ರಾಯಚೂರಿನ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    80. ರೋಗಿ- 2613: ರಾಯಚೂರಿನ 16 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    81. ರೋಗಿ- 2614: ರಾಯಚೂರಿನ 35 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    82. ರೋಗಿ- 2615: ರಾಯಚೂರಿನ 48 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    83. ರೋಗಿ- 2616: ರಾಯಚೂರಿನ 34 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    84. ರೋಗಿ- 2617: ರಾಯಚೂರಿನ 16 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    85. ರೋಗಿ- 2618: ರಾಯಚೂರಿನ 48 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    86. ರೋಗಿ- 2619: ರಾಯಚೂರಿನ 19 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    87. ರೋಗಿ- 2620: ರಾಯಚೂರಿನ 32 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    88. ರೋಗಿ- 2621: ರಾಯಚೂರಿನ 30 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    89. ರೋಗಿ- 2622: ರಾಯಚೂರಿನ 35 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    90. ರೋಗಿ- 2623: ರಾಯಚೂರಿನ 07 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ


    91. ರೋಗಿ- 2624: ರಾಯಚೂರಿನ 11 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    92. ರೋಗಿ- 2625: ರಾಯಚೂರಿನ 19 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    93. ರೋಗಿ- 2626: ರಾಯಚೂರಿನ 18 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    94. ರೋಗಿ- 2627: ರಾಯಚೂರಿನ 45 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    95. ರೋಗಿ- 2628: ರಾಯಚೂರಿನ 22 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    96. ರೋಗಿ- 2629: ರಾಯಚೂರಿನ 30 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    97. ರೋಗಿ- 2630: ರಾಯಚೂರಿನ 16 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    98. ರೋಗಿ- 2631: ರಾಯಚೂರಿನ 08 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    99. ರೋಗಿ- 2632: ರಾಯಚೂರಿನ 13 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    100. ರೋಗಿ- 2633: ರಾಯಚೂರಿನ 23 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

    101. ರೋಗಿ- 2634: ರಾಯಚೂರಿನ 17 ವರ್ಷದ ಹುಡುಗಿ – ಮಹಾರಾಷ್ಟ್ರದಿಂದ ವಾಪಸ್
    102. ರೋಗಿ- 2635: ರಾಯಚೂರಿನ 32 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    103. ರೋಗಿ- 2636: ರಾಯಚೂರಿನ 34 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    104. ರೋಗಿ- 2637: ರಾಯಚೂರಿನ 15 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್
    105. ರೋಗಿ- 2638: ರಾಯಚೂರಿನ 45 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    106. ರೋಗಿ- 2639: ರಾಯಚೂರಿನ 38 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
    107. ರೋಗಿ- 2640: ರಾಯಚೂರಿನ 18 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
    108. ರೋಗಿ- 2641: ರಾಯಚೂರಿನ 22 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
    109. ರೋಗಿ- 2642: ರಾಯಚೂರಿನ 13 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
    110. ರೋಗಿ- 2643: ರಾಯಚೂರಿನ 18 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
    111. ರೋಗಿ- 2644: ರಾಯಚೂರಿನ 45 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    112. ರೋಗಿ- 2645: ರಾಯಚೂರಿನ 15 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್
    113. ರೋಗಿ- 2646: ರಾಯಚೂರಿನ 38 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    114. ರೋಗಿ- 2647: ಬೆಂಗಳೂರಿನ 26 ವರ್ಷದ ಯುವಕ – ತಮಿಳುನಾಡಿನಿಂದ ವಾಪಸ್
    115. ರೋಗಿ- 2648: ಚಿಕ್ಕಬಳ್ಳಾಪುರದ 17 ವರ್ಷದ ಹುಡುಗ – ರೋಗಿ 790ರ ಸಂಪರ್ಕ


    116. ರೋಗಿ- 2649: ಚಿಕ್ಕಬಳ್ಳಾಪುರದ 32 ವರ್ಷದ ಹುಡುಗ – ಅನಾರೋಗ್ಯದಿಂದ ಕೊರೊನಾ ಸೋಂಕು
    117. ರೋಗಿ- 2650: ಬೆಂಗಳೂರಿನ 36 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
    118. ರೋಗಿ- 2651: ಬೆಂಗಳೂರಿನ 46 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
    119. ರೋಗಿ- 2652: ಬೆಂಗಳೂರಿನ 49 ವರ್ಷದ ಮಹಿಳೆ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
    120. ರೋಗಿ- 2653: ಚಿಕ್ಕಬಳ್ಳಾಪುರದ 68 ವರ್ಷದ ವೃದ್ಧ – ತೀವ್ರ ಉಸಿರಾಟದ ತೊಂದರೆಯಿಂದ ಕೊರೊನಾ
    121. ರೋಗಿ- 2654: ಬೆಂಗಳೂರಿನ 31 ವರ್ಷದ ಪುರುಷ – ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
    122. ರೋಗಿ- 2655: ಚಿಕ್ಕಬಳ್ಳಾಪುರದ 28 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
    123. ರೋಗಿ- 2656: ಯಾದಗಿರಿಯ 25 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
    124. ರೋಗಿ- 2657: ಯಾದಗಿರಿಯ 32 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
    125. ರೋಗಿ- 2658: ಯಾದಗಿರಿಯ 3 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
    126. ರೋಗಿ- 2659: ಯಾದಗಿರಿಯ 27 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
    127. ರೋಗಿ- 2660: ಯಾದಗಿರಿಯ 26 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
    128. ರೋಗಿ- 2661: ಯಾದಗಿರಿಯ 35 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    129. ರೋಗಿ- 2662: ಯಾದಗಿರಿಯ 38 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    130. ರೋಗಿ- 2663: ಯಾದಗಿರಿಯ 30 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
    131. ರೋಗಿ- 2664: ಯಾದಗಿರಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್


    132. ರೋಗಿ- 2665: ಯಾದಗಿರಿಯ 18 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
    133. ರೋಗಿ- 2666: ಯಾದಗಿರಿಯ 17 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
    134. ರೋಗಿ- 2667: ಯಾದಗಿರಿಯ 17 ವರ್ಷದ ಯುವತಿ – ಮಹಾರಾಷ್ಟ್ರದಿಂದ ವಾಪಸ್
    135. ರೋಗಿ- 2668: ಯಾದಗಿರಿಯ 44 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    136. ರೋಗಿ- 2669: ಯಾದಗಿರಿಯ 8 ವರ್ಷದ ಬಾಲಕಿ – ಮಹಾರಾಷ್ಟ್ರದಿಂದ ವಾಪಸ್
    137. ರೋಗಿ- 2670: ಯಾದಗಿರಿಯ 5 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
    138. ರೋಗಿ- 2671: ಯಾದಗಿರಿಯ 14 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
    139. ರೋಗಿ- 2672: ಯಾದಗಿರಿಯ 53 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    140. ರೋಗಿ- 2673: ಯಾದಗಿರಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
    141. ರೋಗಿ- 2674: ಯಾದಗಿರಿಯ 25 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್
    142. ರೋಗಿ- 2675: ಯಾದಗಿರಿಯ 17 ವರ್ಷದ ಹುಡುಗ – ಮಹಾರಾಷ್ಟ್ರದಿಂದ ವಾಪಸ್
    143. ರೋಗಿ- 2676: ಯಾದಗಿರಿಯ 27 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್


    144. ರೋಗಿ- 2677: ಯಾದಗಿರಿಯ 54 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    145. ರೋಗಿ- 2678: ಯಾದಗಿರಿಯ 24 ವರ್ಷದ ಮಹಿಳೆ – ಮಹಾರಾಷ್ಟ್ರದಿಂದ ವಾಪಸ್
    146. ರೋಗಿ- 2679: ಯಾದಗಿರಿಯ 35 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    147. ರೋಗಿ- 2680: ಯಾದಗಿರಿಯ 12 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
    148. ರೋಗಿ- 2681: ಯಾದಗಿರಿಯ 35 ವರ್ಷದ ಪುರುಷ – ಮಹಾರಾಷ್ಟ್ರದಿಂದ ವಾಪಸ್
    149. ರೋಗಿ- 2682: ಯಾದಗಿರಿಯ 8 ವರ್ಷದ ಬಾಲಕ – ಮಹಾರಾಷ್ಟ್ರದಿಂದ ವಾಪಸ್
    150. ರೋಗಿ- 2683: ಯಾದಗಿರಿಯ 24 ವರ್ಷದ ಯುವಕ – ಮಹಾರಾಷ್ಟ್ರದಿಂದ ವಾಪಸ್

    151. ರೋಗಿ- 2684: ಯಾದಗಿರಿಯ 03 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    152. ರೋಗಿ- 2685: ಯಾದಗಿರಿಯ 20 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    153. ರೋಗಿ- 2686: ಯಾದಗಿರಿಯ 40 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    154. ರೋಗಿ- 2687: ಯಾದಗಿರಿಯ 38 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    155. ರೋಗಿ- 2688: ಯಾದಗಿರಿಯ 24 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    156. ರೋಗಿ- 2689: ಯಾದಗಿರಿಯ 29 ವರ್ಷದ ಯವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    157. ರೋಗಿ- 2690: ಯಾದಗಿರಿಯ 50 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    158. ರೋಗಿ- 2691: ಯಾದಗಿರಿಯ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    159. ರೋಗಿ- 2692: ಯಾದಗಿರಿಯ 10 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    160. ರೋಗಿ- 2693: ಯಾದಗಿರಿಯ 40 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    161. ರೋಗಿ- 2694: ಯಾದಗಿರಿಯ 12 ವರ್ಷದ ಬಾಲಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    162. ರೋಗಿ- 2695: ಯಾದಗಿರಿಯ 50 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ


    163. ರೋಗಿ- 2696: ಯಾದಗಿರಿಯ 48 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    164. ರೋಗಿ- 2697: ಯಾದಗಿರಿಯ 33 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    165. ರೋಗಿ- 2698: ಯಾದಗಿರಿಯ 35 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    166. ರೋಗಿ- 2699: ಯಾದಗಿರಿಯ 03 ವರ್ಷದ ಗಂಡು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    167. ರೋಗಿ- 2700: ಯಾದಗಿರಿಯ 22 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    168. ರೋಗಿ- 2701: ಯಾದಗಿರಿಯ 02 ವರ್ಷದ ಗಂಡು ಮಗು- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    169. ರೋಗಿ- 2702: ಯಾದಗಿರಿಯ 22 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    170. ರೋಗಿ- 2703: ಯಾದಗಿರಿಯ 24 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    171. ರೋಗಿ- 2704: ಯಾದಗಿರಿಯ 34 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    172. ರೋಗಿ- 2705: ಯಾದಗಿರಿಯ 25 ವರ್ಷದ ಯುವತಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ

    173. ರೋಗಿ- 2706: ಯಾದಗಿರಿಯ 28 ವರ್ಷದ ಮಹಿಳೆ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    174. ರೋಗಿ- 2707: ಯಾದಗಿರಿಯ 37 ವರ್ಷದ ಯುವಕ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    175. ರೋಗಿ- 2708: ಯಾದಗಿರಿಯ 14 ವರ್ಷದ ಬಾಲಕಿ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    176. ರೋಗಿ- 2709: ಯಾದಗಿರಿಯ 30 ವರ್ಷದ ಪುರುಷ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    177. ರೋಗಿ- 2710: ಧಾರವಾಡದ 65 ವರ್ಷದ ವೃದ್ಧ- ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
    178. ರೋಗಿ- 2711: ಬೆಂಗಳೂರು ನಗರದ 37 ವರ್ಷದ ಮಹಿಳೆ- ಸಂಪರ್ಕ ಪತ್ತೆಹಚ್ಚಲಾಗುತ್ತಿದೆ

  • ದೇಶದಲ್ಲಿ ದಾಖಲೆ ಸೋಂಕು ಪತ್ತೆ – ಜಾಗತಿಕ ಮಟ್ಟದಲ್ಲಿ 9ನೇ ಸ್ಥಾನದಲ್ಲಿ ಭಾರತ

    ದೇಶದಲ್ಲಿ ದಾಖಲೆ ಸೋಂಕು ಪತ್ತೆ – ಜಾಗತಿಕ ಮಟ್ಟದಲ್ಲಿ 9ನೇ ಸ್ಥಾನದಲ್ಲಿ ಭಾರತ

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಮತ್ತೊಂದು ಹೊಸ ದಾಖಲೆ ಬರೆದಿದೆ. ಕಳೆದ 24 ಗಂಟೆಯಲ್ಲಿ 7,466 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತ ಒಂಭತ್ತನೇ ಸ್ಥಾನಕ್ಕೆ ಏರಿದೆ.

    ಭಾರತದಲ್ಲಿ ಈವರೆಗೂ 1,65,799 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ 1,60,979 ಸೋಂಕಿತರು ಹೊಂದಿ ಒಂಭತ್ತನೇ ಸ್ಥಾನದಲ್ಲಿದ್ದ ಟರ್ಕಿಯನ್ನು ಹಿಂದಿಕ್ಕಿದೆ. ಇತ್ತಿಚೀಗಷ್ಟೇ ಭಾರತ, ಪೆರು, ಇರಾನ್, ಕೆನಡಾವನ್ನು ಹಿಂದಿಕ್ಕಿ ಹತ್ತನೇ ಸ್ಥಾನದಲ್ಲಿತ್ತು.

    ಇಂದಿನ ವರದಿಯಲ್ಲಿ ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 7,466 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 175 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೂ ಕೊರೊನಾ ಪೀಡಿತರ ಸಂಖ್ಯೆ 1,65,799ಕ್ಕೆ ಏರಿಕೆಯಾದರೆ 89,987 ಸಕ್ರಿಯ ಪ್ರಕರಣ ಹಾಗೂ 71,105 ಮಂದಿ ಕೊರೊನಾ ಗುಣಮುಖ ಹೊಂದಿದ್ದಾರೆ. ಈವರೆಗೂ ದೇಶದಲ್ಲಿ 4,706 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

    ಕಳೆದೊಂದು ವಾರದಿಂದ ದೇಶದಲ್ಲಿ ಕೊರೊನಾ ಸೋಂಕು ನಿರಂತರವಾಗಿ ಹೆಚ್ಚಾಗುತ್ತಿದೆ. ಮೇ 21 ರಂದು 6,088, ಮೇ 22 ರಂದು 6,654, ಮೇ 23 ರಂದು 6,767, ಮೇ 24 ರಂದು 6,977, ಮೇ 25 ರಂದು 6,535, ಮೇ 26 ರಂದು 6,387, ಮೇ 27 ರಂದು 6,566 ಮತ್ತು ಮೇ 28 ರಂದು 7,466 ಹೊಸ ಪ್ರಕರಣಗಳು ಪತ್ತೆಯಾಗಿವೆ.

    ಪರಿಸ್ಥಿತಿ ಹೀಗೆ ಮುಂದುವರಿದರೆ ಭಾರತ, ಫ್ರಾನ್ಸ್ ಮತ್ತು ಜರ್ಮನಿಯನ್ನು ಹಿಂದಿಕ್ಕುವ ಸಾಧ್ಯತೆಗಳಿದೆ. ದಿನ ಕಳೆದಂತೆ ಭಾರತ ಅತಿ ಹೆಚ್ಚು ಕೊರೊನಾ ಪೀಡಿತ ಟಾಪ್ ಐದು ದೇಶಗಳ ಪಟ್ಟಿ ಸೇರುವ ಸಾಧ್ಯತೆ ಇದ್ದು, ಆತಂಕ ಹೆಚ್ಚು ಮಾಡಿದೆ.

  • ಕೊರೊನಾ ಹೊಡೆದೋಡಿಸಲು ಕರ್ನಾಟಕದಿಂದ ಅಸ್ತ್ರ ರೆಡಿ

    ಕೊರೊನಾ ಹೊಡೆದೋಡಿಸಲು ಕರ್ನಾಟಕದಿಂದ ಅಸ್ತ್ರ ರೆಡಿ

    – ಇಸ್ರೇಲ್ ಮಾದರಿ ಸೂತ್ರ ಅನುಸರಿಸಲು ಸಿದ್ಧತೆ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ ಹೊಡೆದೋಡಿಸಲು ಕರ್ನಾಟಕ ಹೊಸ ಅಸ್ತ್ರ ರೆಡಿ ಮಾಡುತ್ತಿದೆ.

    ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಹೊಸ ಸೂತ್ರ ಸಿದ್ಧತೆ ಮಾಡಲಾಗುತ್ತಿದ್ದು, ಕರ್ನಾಟಕದಲ್ಲೂ ಇಸ್ರೇಲ್ ಮಾದರಿ ಸೂತ್ರ ಅನುಸರಿಸಲು ಸಿದ್ಧತೆ ಮಾಡಲಾಗುತ್ತಿದೆ. ತಜ್ಞ ವೈದ್ಯರ ಸಲಹೆ ಮೇರೆಗೆ ಇಸ್ರೇಲ್ ಮಾದರಿಯಲ್ಲಿ ರಾಜ್ಯದಲ್ಲೂ ಆರೋಗ್ಯ ನೋಂದಾವಣೆಗೆ ಸರ್ಕಾರ ಸಿದ್ಧತೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರವಾಗಿ ಆರೋಗ್ಯ ನೋಂದಾವಣೆ ಬಗ್ಗೆ ಅಧಿಕೃತ ಆದೇಶಕ್ಕೆ ಸರ್ಕಾರ ತಯಾರಿ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಇಸ್ರೇಲ್ ಮಾದರಿಯಲ್ಲಿ ರಾಜ್ಯದ ಪ್ರತಿಯೊಬ್ಬರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಲು ನಿರ್ಧಾರ ಮಾಡಲಾಗಿದ್ದು, ಈ ಮೂಲಕ ಕೊರೊನಾ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಹೆಜ್ಜೆ ಇಡುತ್ತಿದೆ. ಪ್ರಾಥಮಿಕ ಹಾಗೂ ಪ್ರಾಯೋಗಿಕ ಆರೋಗ್ಯ ನೋಂದಾವಣೆಯನ್ನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತವರು ಜಿಲ್ಲೆಯಿಂದಲೇ ಆರಂಭಿಸಲು ಚಿಂತನೆ ನಡೆದಿದೆ. ಅಂದರೆ ಜೂನ್ ಎರಡನೇ ವಾರದಲ್ಲಿ ರಾಜ್ಯದಲ್ಲಿ ಇಸ್ರೆಲ್ ಮಾದರಿಯ ಹೆಲ್ತ್ ನೋಂದಾಣಿ ಆರಂಭವಾಗುವ ಸಾಧ್ಯತೆ ಇದೆ.

    ಇಸ್ರೆಲ್ ಮಾದರಿಯ ಆರೋಗ್ಯ ನೋಂದಾವಣೆ ಅಂದರೆ ಏನು ಹೇಗಿರುತ್ತೆ?
    * ರಾಜ್ಯದ ಪ್ರತಿಯೊಬ್ಬ ನಾಗರೀಕನ ಆರೋಗ್ಯ ಮಾಹಿತಿ ಸಂಗ್ರಹಿಸಿ ನೋಂದಾವಣೆ ಮಾಡುವುದು.
    * ವ್ಯಕ್ತಿಯ ಹೆಸರು, ವಯಸ್ಸು ಹಾಗೂ ಅನಾರೋಗ್ಯದ ಸಮಸ್ಯೆ ಇದ್ದರೆ ಅದರ ಮಾಹಿತಿ ನೋಂದಾವಣೆ.
    * ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಹೋಗಿ ಈ ಮಾಹಿತಿಯನ್ನ ಸಂಗ್ರಹಿಸುತ್ತಾರೆ.
    * ಎಪಿಎಲ್ ಅಥವಾ ಬಿಪಿಎಲ್ ಕಾರ್ಡುದಾರ ಅನ್ನೋ ಮಾಹಿತಿ ಹಾಗೂ ಇದುವರೆಗಿನ ಅನಾರೋಗ್ಯದ ವಿವರ ನಮೂದು
    * ಇದುವರೆಗೆ ಪಡೆದಿರುವ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಎಲ್ಲದರ ಮಾಹಿತಿ ನೋಂದಾವಣೆ

    * ಹೀಗೆ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನ ಆರೋಗ್ಯ ಇಲಾಖೆಯಲ್ಲಿ ನೋಂದಾವಣೆ ಮಾಡಲಾಗುತ್ತದೆ.
    * ಮುಂದಿನ ದಿನಗಳಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾದರೆ ಹೆಲ್ತ್ ರಿಜಿಸ್ಟರ್ ಮೂಲಕ ಆ ವ್ಯಕ್ತೀಯ ಸಂಪೂರ್ಣ ಮಾಹಿತಿ ಕ್ಷಣಾರ್ಧದಲ್ಲಿ ಆರೋಗ್ಯ ಇಲಾಖೆಗೆ ಮಾಹಿತಿ ಲಭ್ಯವಾಗಲಿದೆ.
    * ಅನಾರೋಗ್ಯ ಪೀಡಿತ ವ್ಯಕ್ತಿಯ ಸಂಪೂರ್ಣ ಹೆಲ್ತ್ ರಿಪೋರ್ಟ್ ಸಿಕ್ಕರೆ ಚಿಕಿತ್ಸೆಗೆ ಅನುಕೂಲವಾಗಲಿದೆ.
    * ಹೆಲ್ತ್ ರಿಜಿಸ್ಟರ್ ಆದರೆ ಮುಂದಿನ ದಿನಗಳಲ್ಲಿ ಕೋವಿಡ್ ನಂತರ ಯಾವುದೇ ಆರೋಗ್ಯ ಸಮಸ್ಯೆ ಸವಾಲು ಎದುರಾದರೆ ಸೂಕ್ತ ತೀರ್ಮಾನಕ್ಕೆ ಇದು ನೆರವಾಗಲಿದೆ.

    ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಇಸ್ರೆಲ್ ಮಾದರಿಯ ಆರೋಗ್ಯ ನೋಂದಾವಣೆಗೆ ಸಿದ್ಧತೆ ಆರಂಭವಾಗಿದ್ದು, ತಜ್ಞ ವೈದ್ಯರಾದ ಡಾ.ಸಚ್ಚಿದಾನಂದ, ಡಾ.ಗಿರೀಶ್, ಡಾ.ವಿವೇಕ್ ಜವಳಿ, ಡಾ.ಶರಣ್ ಪಾಟೀಲ್ ಮೊದಲಾದ ತಜ್ಞಾರ ಸಮಿತಿಯಿಂದ ಸರ್ಕಾರ ವರದಿ ಸಿದ್ಧಪಡಿಸುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಈ ಪ್ರಯತ್ನಕ್ಕೆ ಸಿಎಂ ಸಹ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

    ತಜ್ಞರ ತಂಡ ಈಗಾಗಲೇ ಈ ಸಂಬಂಧ ತಮ್ಮ ಅಭಿಪ್ರಾಯವನ್ನ ಸರ್ಕಾರದ ಮುಂದಿಟ್ಟಿದ್ದು, ಸರ್ಕಾರವು ಆಸಕ್ತಿ ವಹಿಸಿ ಇನ್ನಷ್ಟು ಮಾಹಿತಿಯನ್ನ ತಜ್ಞರಿಂದ ಕೇಳಿದೆ. ಎಲ್ಲವು ಸರಿಯಾದರೆ ಮುಂದಿನ ಕ್ಯಾಬಿನೆಟ್‍ನಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕು ಜೂನ್ ಎರಡನೇ ವಾರದ ನಂತರ ಅಧಿಕೃತವಾಗಿ ಹೆಲ್ತ್ ರಿಜಿಸ್ಟ್ರೇಷನ್ ಆರಂಭವಾಗಬಹುದು.