Tag: health department

  • Explainer: 20ಕ್ಕೂ ಅಧಿಕ ಮಕ್ಕಳ ಪ್ರಾಣ ಕಸಿದುಕೊಂಡ ಕೋಲ್ಡ್ರಿಫ್ ಕಾಫ್‌ ಸಿರಪ್‌ – ಮುನ್ನೆಚ್ಚರಿಕೆ ಏನು?

    Explainer: 20ಕ್ಕೂ ಅಧಿಕ ಮಕ್ಕಳ ಪ್ರಾಣ ಕಸಿದುಕೊಂಡ ಕೋಲ್ಡ್ರಿಫ್ ಕಾಫ್‌ ಸಿರಪ್‌ – ಮುನ್ನೆಚ್ಚರಿಕೆ ಏನು?

    ಧ್ಯಪ್ರದೇಶದಲ್ಲಿ ಮಾರಕ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತೆ 6 ಮಕ್ಕಳು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಕೆಮ್ಮಿಗೆ ತೆಗದುಕೊಂಡ ಸಿರಪ್ ಮಕ್ಕಳ ಪ್ರಾಣವನ್ನೇ ಕಸಿದುಕೊಂಡಿದೆ. ಮಕ್ಕಳಿಗೆ ಸಿರಪ್‌ ನೀಡುವ ಮುನ್ನ ಪೋಷಕರು ನೂರು ಬಾರಿ ಯೋಚಿಸುವ ಪರಿಸ್ಥಿತಿ ಬಂದೊದಗಿದೆ. ಹಾಗಿದ್ರೆ ಮಕ್ಕಳು ಸಾವನ್ನಪ್ಪಲು ಸಿರಪ್‌ ಕಾರಣವಾಗಿದ್ದು ಹೇಗೆ? ಮಕ್ಕಳಲ್ಲಿ ಕಿಡ್ನಿ ವೈಪಲ್ಯಗೊಳ್ಳಲು ಕಾರಣವೇನು? ಮಕ್ಕಳಿಗೆ ಸಿರಪ್‌ ನೀಡುವ ಮುನ್ನ ಪೋಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಮಧ್ಯಪ್ರದೇಶ ಸಿರಪ್‌ ದುರಂತ:
    ಚೆನ್ನೈ ಮೂಲದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಮಕ್ಕಳ ಕೆಮ್ಮಿನ ಸಿರಪ್ ಸೇವನೆಯಿಂದಾಗಿ 20ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಕ್ಕಳಿಗೆ ಕೆಮ್ಮು, ಶೀತ ಅಂತಾ ಸಿರಪ್‌ ಹಾಕಲು ಪೋಷಕರನ್ನು ನೂರು ಬಾರಿ ಯೋಚಿಸುವಂತೆ ಮಾಡಿದೆ. ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ, ಶೀತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು, ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಕುಡಿದ ನಂತರ ಕಿಡ್ನಿ ವೈಪಲ್ಯದಿಂದ ಸಾವನ್ನಪ್ಪಿದ್ದಾರೆ. ಸಿರಪ್ ಮಾದರಿಗಳಲ್ಲಿ ವಿಷಕಾರಿ ದ್ರಾವಕವಾದ ಡೈಥಿಲೀನ್ ಗ್ಲೈಕೋಲ್ ಹೆಚ್ಚಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸೆಪ್ಟೆಂಬರ್ ಮೊದಲಾರ್ಧದಲ್ಲಿ, ಚಿಂದ್ವಾರ ಜಿಲ್ಲೆಯಲ್ಲಿ, ಕಿಡ್ನಿ ವೈಫಲ್ಯದಿಂದ ಮಕ್ಕಳು ಸಾವನ್ನಪ್ಪುತ್ತಿರುವ ಘಟನೆ ವರದಿಯಾಗಲು ಆರಂಭವಾಗಿತ್ತು. ಮೃತ ಮಕ್ಕಳ ಪೋಷಕರು ಒಂದೇ ರೀತಿಯ ಲಕ್ಷಣಗಳ ಬಗ್ಗೆ ಹೇಳಿದರು. ಈ ಸಿಪರ್‌ ಸೇವಿಸಿದ ನಂತರ ಮಕ್ಕಳಲ್ಲಿ ಮೊದಲಿಗೆ ಶೀತ ಕಡಿಮೆಯಾಗಿದೆ, ನಂತರ ಉಸಿರಾಟದ ತೊಂದರೆ ಕಂಡುಬಂದಿದೆ. ಕೊನೆಯಲ್ಲಿ ಮೂತ್ರ ವಿಸರ್ಜನೆಯಲ್ಲಿ ಹಠಾತ್ ಕುಸಿತ ಮತ್ತು ಮೂತ್ರಪಿಂಡ ವೈಫಲ್ಯಗೊಂಡು ಮಕ್ಕಳು ಸಾವನ್ನಪ್ಪಿದ್ದಾರೆ.

    ಈ ಮೊದಲು ಮಧ್ಯಪ್ರದೇಶದ ಛಿಂದ್ವಾಡದ 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ದೃಢಪಡಿಸಿತ್ತು. ಅದಾದ ಬಳಿಕ ಮತ್ತೆ ಮಂಗಳವಾರ (ಅ.7) ಛಿಂದ್ವಾಡದಲ್ಲಿ 4 ಹಾಗೂ ಬೇತುಲ್‌ನಲ್ಲಿ 2 ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೂ 6 ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

    ಸಿರಪ್ ಸೇವಿಸಿ ಅಸ್ವಸ್ಥರಾದ ಮಕ್ಕಳ ಚಿಕಿತ್ಸೆಯ ಖರ್ಚನ್ನು ತಾನೇ ಭರಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಅತ್ತ ಕೋಲ್ಡ್ರಿಫ್‌ನಲ್ಲಿ ನರಸಂಬಂಧಿ ಕಾಯಿಲೆಗೆ ಕಾರಣವಾಗಬಹುದಾದ ಅಂಶ ಕಂಡುಬಂದದ್ದರಿಂದ, ಅದರ ಉತ್ಪಾದಕ ಸ್ರೆಸನ್ ಫಾರ್ಮಾಸುಟಿಕಲ್ಸ್‌ ಕಂಪನಿಯ ಮಾಲೀಕ ರಂಗನಾಥನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ಮಧ್ಯಪ್ರದೇಶದಲ್ಲಿ ಸಿರಪ್‌ ದುರಂತದ ಬಳಿಕ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್‌ ಸಿರಪ್‌ ಅನ್ನು ಹಲವು ರಾಜ್ಯಗಳಲ್ಲಿ ನಿಷೇಧಿಸಲಾಯಿತು. ಈ ಬೆನ್ನಲ್ಲೇ ಸ್ರೆಸನ್‌ ಫಾರ್ಮಾ ಕಂಪನಿಯ ಮಾಲೀಕ ರಂಗನಾಥನ್‌ ತಲೆಮರೆಸಿಕೊಂಡಿದ್ದ. ರಂಗನಾಥನ್‌ ಬಗ್ಗೆ ಮಾಹಿತಿ ನೀಡಿದವರಿಗೆ 20,000 ರೂ. ಬಹುಮಾನವನ್ನೂ ಘೋಷಿಸಲಾಗಿತ್ತು. ಅಂತಿಮವಾಗಿ ಚೆನ್ನೈನಲ್ಲಿ ರಂಗನಾಥನ್‌ನನ್ನು ಪೊಲೀಸರು ಸೆರೆಹಿಡಿದಿದ್ದಾರೆ.

    ಡೈಥಿಲೀನ್ ಗ್ಲೈಕೋಲ್ ಪತ್ತೆ:
    ಅಧಿಕಾರಿಗಳ ಪ್ರಕಾರ, ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ನಡೆಸಿದ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಸಿರಪ್‌ನಲ್ಲಿ ಶೇ.48.6 ರಷ್ಟು ಡೈಥಿಲೀನ್ ಗ್ಲೈಕೋಲ್ ಇರುವುದು ಪತ್ತೆಯಾಗಿದೆ. ಎರಡೂ ರಾಸಾಯನಿಕಗಳು ಕೈಗಾರಿಕಾ ದ್ರಾವಕಗಳಾಗಿವೆ ಮತ್ತು ಔಷಧೀಯ ಬಳಕೆಗೆ ನಿಷೇಧಿಸಲಾಗಿದೆ. ಇದು ಸಣ್ಣ ಪ್ರಮಾಣದಲ್ಲಿ ಸಹ ಮಾರಕವಾಗಬಹುದು, ವಿಶೇಷವಾಗಿ ಮಕ್ಕಳಿಗೆ ಪ್ರಾಣಕ್ಕೆ ಕುತ್ತು ತರುವಂತಹ ಅಂಶ ಇದಾಗಿದೆ.

    ಪರವಾನಗಿ ರದ್ದು:
    ಘಟನೆಯ ನಂತರ, ಮಧ್ಯಪ್ರದೇಶ ಸರ್ಕಾರವು ಕೋಲ್ಡ್ರಿಫ್ ತಯಾರಿಸುವ ತಮಿಳುನಾಡು ಮೂಲದ ಕಾಂಚೀಪುರಂನಲ್ಲಿರುವ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಸ್ರೆಸನ್‌ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಮತ್ತು ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಘಟನೆ ಬೆನ್ನಲ್ಲೇ, ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತ ಸಿರಪ್‌ಗಳನ್ನು ಶಿಫಾರಸು ಮಾಡಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

    ಸಿರಪ್ ತಯಾರಿಸಿದ ಕಂಪನಿ ಮತ್ತು ಕೋಲ್ಡ್ರಿಫ್ ಸಿರಪ್‌ ತೆಗೆದುಕೊಳ್ಳುವಂತೆ ಪ್ರಿಸ್ಕ್ರಿಪ್ಷನ್‌ ನೀಡಿದ ವೈದ್ಯ ಡಾ. ಸೋನಿ ವಿರುದ್ಧ ಪರಾಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪ್ರವೀಣ್ ಸೋನಿಯನ್ನು ಬಂಧಿಸಲಾಗಿದೆ. ಇಬ್ಬರ ಮೇಲೂ, ಭಾರತೀಯ ನ್ಯಾಯ ಸಂಹಿತಾ (ಕಲಬೆರಕೆ ಔಷಧಿಗಳ ಮಾರಾಟ) ಸೆಕ್ಷನ್ 276 ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ, 1940 ರ ಸೆಕ್ಷನ್ 27A ಅಡಿಯಲ್ಲಿ ಕೇಸ್‌ ದಾಖಲಾಗಿದೆ.

    ಡೈಥಿಲೀನ್ ಗ್ಲೈಕಾಲ್, ಎಥಿಲೀನ್ ಗ್ಲೈಕಾಲ್ ಏಕೆ ಡೇಂಜರ್?
    ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಸಿರಪ್ ದ್ರವಗಳಾಗಿವೆ. ಇವುಗಳನ್ನು ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಆದರೆ ಸೇವನೆಗೆ ಸೂಕ್ತವಲ್ಲ. ಅದರಲ್ಲೂ ಮಕ್ಕಳಿಗೆ ಅಪಾಯಕಾರಿ. ದೇಹದಲ್ಲಿ, ಇವು ಚಯಾಪಚಯ ಆಮ್ಲವ್ಯಾಧಿಯನ್ನು ಪ್ರಚೋದಿಸಬಹುದು ಮತ್ತು ತ್ವರಿತ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯ, ನರವೈಜ್ಞಾನಿಕ ಹಾನಿ ಮತ್ತು ಸಾವಿಗೆ ಕಾರಣವಾಗಬಹುದು. ಈ ಔಷಧಿ ಮಕ್ಕಳಿಗೆ ವಿಶೇಷವಾಗಿ ದುರ್ಬಲವಾಗಿದ್ದು, ಸ್ವಲ್ಪ ಪ್ರಮಾಣದ ಸೇವನೆ ಕೂಡ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು.

    ಛಿಂದ್ವಾರಾ ದುರಂತದ ಬಳಿಕ ಮಧ್ಯಪ್ರದೇಶವು ಕೋಲ್ಡ್ರಿಫ್ ಮತ್ತು ಸ್ರೆಸನ್ ಫಾರ್ಮಾಸ್ಯುಟಿಕಲ್ಸ್‌ನ ಎಲ್ಲಾ ಉತ್ಪನ್ನಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ʼತಪ್ಪಿತಸ್ಥರನ್ನು ಬಿಡುವುದಿಲ್ಲʼ ಎಂದು ಘೋಷಿಸಿದ್ದಾರೆ. ಅಲ್ಲದೇ ಕೆಮ್ಮಿನ ಸಿರಪ್ ಸೇವನೆಯಿಂದ ಸಾವನ್ನಪ್ಪಿದ ಮಕ್ಕಳ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

    ತಮಿಳುನಾಡಿನಲ್ಲಿ, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇಕಡಾ 48.6 ರಷ್ಟು ಡೈಥಿಲೀನ್ ಗ್ಲೈಕೋಲ್ ಪತ್ತೆಯಾದ ನಂತರ ರಾಜ್ಯ ಸರ್ಕಾರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಅದರ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ. ಅಲ್ಲದೇ ತಯಾರಕರ ಪರವಾನಗಿಯನ್ನು ರದ್ದುಗೊಳಿಸಿದೆ, ಕ್ರಿಮಿನಲ್ ಮೊಕದ್ದಮೆ ಹೇರಿದೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಸಿರಪ್ ಮಾರಾಟ ಅಥವಾ ಸೇವನೆಯ ವಿರುದ್ಧ ಸಾರ್ವಜನಿಕ ಸೂಚನೆಯನ್ನು ನೀಡಿದೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತವು ಮಾರಾಟವನ್ನು ಸ್ಥಗಿತಗೊಳಿಸಿದೆ ಮತ್ತು ಸಂಬಂಧಿತ ಬ್ಯಾಚ್‌ನ ದಾಸ್ತಾನನ್ನು ವಶಪಡಿಸಿಕೊಂಡಿದೆ, ಕೇರಳವು ಕೂಡ ವಿತರಣೆಯನ್ನು ಸ್ಥಗಿತಗೊಳಿಸಿದೆ.

    ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಕಾಫ್​ ಸಿರಪ್​ ಕುಡಿದ ಮಕ್ಕಳು ಸಾವನ್ನಪ್ಪಿದ ಹಿನ್ನೆಲೆ ಸಣ್ಣ ಮಕ್ಕಳಿಗೆ ಕಾಫ್​ ಸಿರಪ್​ ಕೊಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದರ ನಡುವೆ ಮಧ್ಯಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ, ತೆಲಂಗಾಣದಲ್ಲಿ ಕೋಲ್ಡ್ರಿಫ್ ಸಿರಪ್ ಮಾರಾಟ ನಿಷೇಧ ಮಾಡಲಾಗಿದೆ. ಕೋಲ್ಡ್ರಿಫ್‌ ಕೆಮ್ಮಿನ ಸಿರಪ್‌ನಿಂದ ಸಾವುಗಳು ಸಂಭವಿಸುತ್ತಿರುವ ಪರಿಣಾಮ ಅದರ ಮಾರಾಟ, ವಿತರಣೆ ಮತ್ತು ಬಳಕೆಯನ್ನು ಪಂಜಾಬ್ ಸರ್ಕಾರ ನಿಷೇಧಿಸಿದೆ. ಅಲ್ಲದೇ ಮಕ್ಕಳ ಸರಣಿ ಸಾವಿನ ಬಳಿಕ ಕರ್ನಾಟಕದಲ್ಲಿಯೂ ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು, ಶೀತದಂತಹ ಯಾವುದೇ ಸಿರಪ್ ನೀಡಬಾರದು 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆ ನಂತರ ತಜ್ಞ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಕಡಿಮೆ ಅವಧಿಗೆ ಕನಿಷ್ಠ ಡೋಸ್ ಬಳಸಿ:
    5 ವರ್ಷದ ಮಕ್ಕಳಿಗೂ ಕೆಮ್ಮಿನ ಸಿರಪ್ ಅನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಬಳಸತಕ್ಕದ್ದು. ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಡೋಸ್ ಬಳಸಿ. ಬಹು ಔಷಧಿಗಳ ಸಂಯೋಜನೆ ಇರುವ ಸಿರಪ್ ಉಪಯೋಗಿಸಬಾರದು ಎಂದು ಗೈಡ್​​ಲೈನ್​​ನಲ್ಲಿ ತಿಳಿಸಲಾಗಿದೆ.

    ಮನೆ ಮದ್ದುಗಳ ಬಳಕೆ ಉತ್ತಮ:
    ಸುರಕ್ಷಿತ ಮನೆಮದ್ದುಗಳ ಬಳಕೆ ಉತ್ತಮವಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಮಕ್ಕಳಲ್ಲಿ ಕೆಮ್ಮು , ಶೀತ ಸೌಮ್ಯವಾಗಿರುತ್ತದೆ. ಸುರಕ್ಷಿತ ಕ್ರಮಗಳಿಂದ ನಿಧಾನವಾಗಿ ಉತ್ತಮಗೊಳ್ಳುತ್ತದೆ. ಪೋಷಕರು ಮಕ್ಕಳಿಗೆ ಸಾಕಷ್ಟು ದ್ರವ ಪದಾರ್ಥಗಳನ್ನು ನೀಡುವುದು. ಸಾಕಷ್ಟು ವಿಶ್ರಾಂತಿ, ನಿದ್ದೆ ಮಾಡಲು ಅವಕಾಶ ನೀಡುವುದು, ಪೌಷ್ಟಿಕ ಆಹಾರ ನೀಡುವುದು ಉತ್ತಮ.

    ಹಳೆಯ ಸಿರಪ್ ಬಳಸಬೇಡಿ:
    ಸ್ವಯಂ ಔಷಧೋಪಚರ ಮಾಡಬೇಡಿ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಕೆಮ್ಮಿನ ಸಿರಪ್ ಖರೀದಿಸಬೇಡಿ, ಬಳಸಲೂಬೇಡಿ. ಈ ಹಿಂದೆ ಬಳಸಿ ಉಳಿದ ಔಷಧಿಗಳನ್ನು , ಇತರರು ಶಿಫಾರಸು ಮಾಡಿದ ಔಷಧಿಗಳನ್ನು ಬಳಸಬೇಡಿ. ಯಾವುದೇ ಅಸಹಜ ಪ್ರಕ್ರಿಯೆ, ನಿದ್ರಾವಸ್ಥೆ, ವಾಂತಿ, ಉಸಿರಾಟದ ತೊಂದರೆ ಇದ್ದರೆ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಯಾವಾಗಲೂ ಔಷಧಗಳ ಎಕ್ಸ್‌ಪರಿ ಡೇಟ್ ಖಚಿತಪಡಿಸಿಕೊಳ್ಳಿ.

    ಮಕ್ಕಳಿಗೆ ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಅತಿಯಾದ ಜ್ವರ, ಆಹಾರ ತಿರಸ್ಕಾರ, ನಿದ್ರಾವಸ್ಥೆ ಈ ಗುಣಲಕ್ಷಣಗಳು ಕಂಡು ಬಂದರೆ ಆರೋಗ್ಯ ಕೇಂದ್ರಗಳಿಗೆ ಭೇಟಿ‌ ನೀಡುವುದು ಉತ್ತಮ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ ಎರಡು ಕೆಮ್ಮಿನ ಸಿರಪ್‌ಗಳು ಅಸುರಕ್ಷಿತ ಎಂಬುದು ಆರೋಗ್ಯ ಇಲಾಖೆಯ ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ 14 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌ನ ಬ್ಯಾಚ್ SR-13ರಲ್ಲಿ ವಿಷಕಾರಿ ಅಂಶ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾತ್ರವಲ್ಲದೇ ವೈದ್ಯರ ಸಲಹೆಯನ್ನು ಕಡ್ಡಾಯಗೊಳಿಸಿದೆ.

  • 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ – ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

    2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ – ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಮಧ್ಯಪ್ರದೇಶದಲ್ಲಿ (Madhya Pradesh) ಕೆಮ್ಮಿನ ಸಿರಪ್ (Cough Syrup) ಕುಡಿದು ಮಕ್ಕಳು ಸಾವನ್ನಪ್ಪಿದ ಬಳಿಕ ಅಲರ್ಟ್‌ ಆದ ರಾಜ್ಯ ಆರೋಗ್ಯ ಇಲಾಖೆ (Health Department) ಮಹತ್ವದ ಸಭೆ ನಡೆಸಿ ಕೆಮ್ಮಿನ ಸಿರಪ್ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

    ಆರೋಗ್ಯ ಇಲಾಖೆ ಮಾರ್ಗಸೂಚಿಯ ಪ್ರಕಾರ, 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡುವಂತಿಲ್ಲ. 2-5 ವರ್ಷದ ಮಕ್ಕಳಿಗೆ ತಜ್ಞರ ಸಲಹೆ ಮೇರೆಗೆ ಔಷಧಿ ನೀಡಬೇಕು. ಅಲ್ಲದೇ 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ಔಷಧಿ ನೀಡಬೇಕು. ಕಡಿಮೆ ಅವಧಿಗೆ ಕನಿಷ್ಠ ಅಗತ್ಯವಿರುವ ಡೋಸ್ ಬಳಸಬೇಕು. ಮಲ್ಟಿಮೆಡಿಸನ್ ಒಳಗೊಂಡ ಸಿರಪ್‌ಗಳನ್ನ ಬಳಸಬಾರದು ಎಂದು ತಿಳಿಸಿದೆ. ಇದನ್ನೂ ಓದಿ: ಹರ್ಷ ಕೊಲೆ ಕೇಸ್‌ನ ಸಾಕ್ಷಿ ಅಮ್ಜದ್ ಹತ್ಯೆ – ಶಿವಮೊಗ್ಗಕ್ಕೆ ಮತ್ತೆ ಎಂಟ್ರಿ ಕೊಟ್ಟ ಎನ್‌ಐಎ

    ಇನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್‌ಗಳನ್ನ ಖರೀದಿಸಬಾರದು, ಬಳಸಬಾರದು. ಈ ಹಿಂದೆ ಬಳಸಿದ ಔಷಧಿಗಳನ್ನ ಮರುಬಳಕೆ ಮಾಡಬಾರದು. ಕೆಮ್ಮು ಉಲ್ಬಣಗೊಂಡರೆ ವೈದ್ಯರನ್ನ ಸಂಪರ್ಕಿಸಿ. ಅವಧಿ ಮೀರಿದ ಔಷಧಿಗಳನ್ನ ನೋಡಿ ಬಳಸಬೇಕು. ಯಾವುದೇ ಅಸಹಜ ಪ್ರತಿಕ್ರಿಯೆ, ನಿದ್ರಾವಸ್ಥೆ ವಾಂತಿ ಅಥವಾ ಉಸಿರಾಟ ತೊಂದರೆ ಇದ್ದರೆ ಹತ್ತಿರದ ವೈದ್ಯರನ್ನ ಸಂಪರ್ಕಿಸಿ. ಔಷಧ ಅವಧಿ ಮುಗಿಯುವ ದಿನಾಂಕವನ್ನು ಪರಿಶೀಲಿಸಿ ಮತ್ತು ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಿ ಎಂದು ಸೂಚಿಸಲಾಗಿದೆ. ಇದನ್ನೂ ಓದಿ: Bengaluru | ಪತಿಯೊಂದಿಗೆ ಗಲಾಟೆ – ಗೃಹಿಣಿ ನೇಣಿಗೆ ಶರಣು

    ಮಕ್ಕಳ ಸಿರಪ್ ಬಳಕೆಗೆ ಏನು ಗೈಡ್‌ಲೈನ್ಸ್?
    – ಚಿಕ್ಕಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ.
    – 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಮತ್ತು ಶೀತದ ಸಿರಪ್ ನೀಡಬೇಡಿ.
    – 2.2 ರಿಂದ 5 ವರ್ಷಗಳ ವಯಸ್ಸಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆಯ ನಂತರ ತಜ್ಞ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿ ನೀಡಬೇಕು.

    ಹಿರಿಯ ಮಕ್ಕಳಿಗೆ ಏನು ಸಲಹೆ?
    – ಕೆಮ್ಮಿನ ಸಿರಪ್ ವೈದ್ಯರ ಸಲಹೆ ಮೇರೆಗೆ ಸ್ವೀಕರಿಸಬೇಕು.
    – ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕಡಿಮೆ ಡೋಸ್ ಅನ್ನು ಬಳಸಬೇಕು.
    – ಬಹುಔಷಧ ಸಂಯೋಜನೆ ಇರುವ ಸಿರಪ್‌ಗಳನ್ನು ಬಳಸಬಾರದು.

    ಮನೆ ಮದ್ದುಗಳು:
    – ಸಾಕಷ್ಟು ದ್ರವರೂಪದ ಪದಾರ್ಥ ನೀಡುವುದು.
    – ಸಾಕಷ್ಟು ವಿಶ್ರಾಂತಿ ಮತ್ತು ನಿದ್ದೆ ಮಾಡಲು ಅವಕಾಶ ನೀಡುವುದು.
    – ಪೌಷ್ಠಿಕ ಆಹಾರ ನೀಡುವುದು.

    ಈ ರೋಗಲಕ್ಷಣಗಳು ಉಂಟಾದರೆ ವೈದ್ಯರನ್ನು ಸಂಪರ್ಕಿಸಿ:
    – ಉಸಿರಾಟದ ತೊಂದರೆ ಅಥವಾ ವೇಗವಾಗಿ ಉಸಿರಾಟ
    – ನಿರಂತರ ಅಥವಾ ಉಲ್ಬಣಗೊಳ್ಳುತ್ತಿರುವ ಕೆಮ್ಮು
    – ಅತಿಯಾದ ಜ್ವರ ಮತ್ತು ಆಹಾರ ಸೇವನೆ ಮಾಡದೇ ಇರೋದು
    – ನಿದ್ರಾವಸ್ಥೆ ಅಥವಾ ಅಸಹಜ ಪ್ರತಿಕ್ರಿಯೆ

  • ಮಧ್ಯಪ್ರದೇಶ ಸಿರಪ್ ದುರಂತ; ನಮ್ಮ ರಾಜ್ಯದಲ್ಲಿ ಈ ಸಿರಪ್ ಸರಬರಾಜು ಆಗಿಲ್ಲ: ದಿನೇಶ್ ಗುಂಡೂರಾವ್

    ಮಧ್ಯಪ್ರದೇಶ ಸಿರಪ್ ದುರಂತ; ನಮ್ಮ ರಾಜ್ಯದಲ್ಲಿ ಈ ಸಿರಪ್ ಸರಬರಾಜು ಆಗಿಲ್ಲ: ದಿನೇಶ್ ಗುಂಡೂರಾವ್

    – ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು

    ಹಾಸನ: ಮಧ್ಯಪ್ರದೇಶ ಸಿರಪ್ ದುರಂತ (Madhya Pradesh Cough Syrup Row) ಪ್ರಕರಣದ ಬಳಿಕ ನಮ್ಮ ರಾಜ್ಯದಲ್ಲಿ ಕೂಡ ಈ ಬಗ್ಗೆ ಕ್ರಮ ವಹಿಸಲಾಗಿದೆ. ಔಷಧ ಮಾದರಿ ಪರೀಕ್ಷೆಯಲ್ಲಿ ರಾಜ್ಯ ನಂಬರ್ ಒನ್ ಇದೆ. ಈ ಕಾಫ್ ಸಿರಪ್ ನಮ್ಮ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

    ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹುಟ್ಟುಹಬ್ಬ ಹಿನ್ನೆಲೆ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಧ್ಯಪ್ರದೇಶದ ಘಟನೆ ಅತ್ಯಂತ ಆಘಾತಕಾರಿ. ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಈ ಬಗ್ಗೆ ಒಂದು ಮಾರ್ಗಸೂಚಿ ಕೂಡ ಬಿಡುಗಡೆ ಮಾಡುತ್ತೇವೆ. ಈ ಹಿಂದೆ ಆರೋಗ್ಯ ಸುರಕ್ಷತೆ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲಾಗಿದೆ. ಮಿನರಲ್ ವಾಟರ್ ತಯಾರಿಗೆ ಸಂಬಂಧ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಸಂಜೆ ಬಿಹಾರ ಚುನಾವಣೆಗೆ ದಿನಾಂಕ ಪ್ರಕಟ

    ಕರ್ನಾಟಕದಲ್ಲೂ ಎರಡು ಸಿರಪ್ ಪತ್ತೆ ಪ್ರಕರಣ ಕುರಿತು ಮಾತನಾಡಿ, ನಮ್ಮ ಇಲಾಖೆಯಿಂದ ಇಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತಾರೆ. ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸುತ್ತಾರೆ. ಇದೇ ತರಹ ಬೇರೆ ಕಂಪನಿಗಳು ಕಾಫ್ ಸಿರಪ್ ತಯಾರಿಕೆ ಮಾಡಿದರೆ ಅದರ ಮಾದರಿ ಸಂಗ್ರಹಣೆ ಮಾಡಿ ತಪಾಸಣೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಒಂದೆರಡು ದಿನದಲ್ಲಿ ಅದರ ರಿಪೋರ್ಟ್ ಬರುತ್ತದೆ, ಎಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು. ಇದನ್ನೂ ಓದಿ: ಕ್ರಿಕೆಟ್‌ ನೋಡಿ ಮರಳುತ್ತಿದ್ದಾಗ ಬಿತ್ತು ಮರ – ಯುವತಿಯ ಮೃತದೇಹ ವಿಕ್ಟೋರಿಯಾಗೆ ರವಾನೆ

    ನಾವು ಬಂದ ಮೇಲೆ ನಮ್ಮ ಇಲಾಖೆಯನ್ನು ಚುರುಕುಗೊಳಿಸಿದ್ದೇವೆ. ಸಾಕಷ್ಟು ತಪಾಸಣೆ ಮಾಡಿಸುತ್ತಿದ್ದೇವೆ. ಕರ್ನಾಟಕ ಈಗ ಬಹಳ ಮುಂಚೂಣಿಯಲ್ಲಿದೆ. ಔಷಧ ವಿಚಾರದಲ್ಲಿ ಪಾರದರ್ಶಕತೆ ತರುವ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳ ಜೊತೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ತಯಾರಿಕೆ ಮಾಡುವವರು ಒಂದು ಕಡೆ ಇರುತ್ತಾರೆ, ಸರಬರಾಜು ಮಾಡುವವರು ಮತ್ತೊಂದು ಕಡೆ ಇರುತ್ತಾರೆ. ಕರ್ನಾಟಕದಲ್ಲಿ ಮಾದರಿ ಸರಿ ಇಲ್ಲ ಎಂದು ಗೊತ್ತಾದಾಗ ಇಡೀ ದೇಶಕ್ಕೆ ಗೊತ್ತಾಗಬೇಕು. ಈ ಕಾಫ್ ಸಿರಪ್ ನಮ್ಮಲ್ಲಿ ಎಲ್ಲೂ ಸರಬರಾಜು ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದಸರೆಗೆ ಊರಿಗೆ ಹೋದವರು ವಾಪಸ್ – ಬೆಳಗ್ಗೆ ಅರ್ಧಗಂಟೆ ಬಂದ್ ಆಗಿತ್ತು ಯಶವಂತಪುರ ಮೆಟ್ರೋ ನಿಲ್ದಾಣ

    ತಮಿಳುನಾಡು, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ಒರಿಸ್ಸಾದಲ್ಲಿ ಉಪಯೋಗ ಮಾಡಿದ್ದಾರೆ. ತಯಾರಿಕಾ ಘಟಕಗಳ ಬೇಜವಾಬ್ದಾರಿ ಇದೆ. ಡೈ ಎಥಿಲಿನ್, ಗ್ಲೈಕಾಲ್ ಅನ್ನು ಉಪಯೋಗಿಸಿದ್ದಾರೆ. ಮಕ್ಕಳಿಗೆ ಸಿರಪ್ ಕೊಡುವಾಗ ಎಚ್ಚರಿಕೆ ವಹಿಸಬೇಕು. ಐದು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ಯಾವುದೇ ಕಾಫ್ ಸಿರಪ್ ಕೊಡುವಾಗ ಎಚ್ಚರ ಇರಬೇಕು ಎಂದರು. ಇದನ್ನೂ ಓದಿ: ಸಿದ್ದರಾಮಯ್ಯನವರೇ, ಮೊದಲು ಬೆಂಗಳೂರಿನ ಗುಂಡಿ ಮುಚ್ಚಿ, ಬಳಿಕ ನಮ್ಮ ಮೆಟ್ರೋ ಹೆಸರು ಬದಲಾಯಿಸಿ

    ಇನ್ನು ಹೊರ ರಾಜ್ಯದಲ್ಲಿ ಸಿರಪ್ ಸೇವನೆಯಿಂದ ಮಕ್ಕಳು ಸಾವನ್ನಪ್ಪಿದ ಬಳಿಕ ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಮಕ್ಕಳ ಸಿರಪ್ ಬಳಕೆ ಬಗ್ಗೆ ಮಾರ್ಗಸೂಚಿ ಬಿಡುಗಡೆಗೆ ನಿರ್ಧರಿಸಿದೆ. ಇಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಾಗುಪ್ತಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪೋಷಕರು, ಖಾಸಗಿ ಆಸ್ಪತ್ರೆ ಮತ್ತು ವೈದ್ಯರು ಮಕ್ಕಳ ಸಿರಪ್ ಬಳಕೆಗೆ ಸಂಬಂಧಿಸಿದಂತೆ ಯಾವ ರೀತಿ ಮಾರ್ಗಸೂಚಿಯನ್ನ ಅನುಸರಿಸಬೇಕು ಎಂದು ನಿರ್ಧಾರ ಆಗಲಿದೆ. ಇದನ್ನೂ ಓದಿ: Darjeeling Flood | ರಣಭೀಕರ ಮಳೆಗೆ ಭೂಕುಸಿತ – ಸಾವಿನ ಸಂಖ್ಯೆ 23ಕ್ಕೆ ಏರಿಕೆ

  • ಸ್ಫೋಟಕ ರಹಸ್ಯ ಬಯಲು – ಆಂಧ್ರದಲ್ಲಿ ಕರ್ನಾಟಕ ತಾಯಂದಿರಿಂದ ಹೆಣ್ಣು ಭ್ರೂಣ ಹತ್ಯೆ

    ಸ್ಫೋಟಕ ರಹಸ್ಯ ಬಯಲು – ಆಂಧ್ರದಲ್ಲಿ ಕರ್ನಾಟಕ ತಾಯಂದಿರಿಂದ ಹೆಣ್ಣು ಭ್ರೂಣ ಹತ್ಯೆ

    – 17 ವರ್ಷಗಳಿಂದ ಸಕ್ರಿಯವಾಗಿದ್ದ ಜಾಲ
    – ಆಂಧ್ರದ ಆಶಾ ಕಾರ್ಯಕರ್ತೆಯೇ ಇದರ ಕಿಂಗ್‌ಪಿನ್‌

    ಬೆಂಗಳೂರು: ಹೆಣ್ಣನ್ನು ಅತಿ ಹೆಚ್ಚು ಗೌರವಿಸುವ ಪುಣ್ಯ ನಾಡು ನಮ್ಮದು ಅಂತಲೇ ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುತ್ತೇವೆ. ಶತಮಾನಗಳ ಇತಿಹಾಸ, ಪುರಾಣ ಕಥನ, ಮಿಥ್ಯೆಗಳಲ್ಲೂ ಸಹ ಇದನ್ನು ಗುರುತಿಸುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣ, ಪೌಷ್ಟಿಕತೆ, ಆರೋಗ್ಯ ಮತ್ತು ಜೀವನೋಪಾಯದ ಮಾರ್ಗಗಳನ್ನು ಹಸನುಗೊಳಿಸಲು ನೂರಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ʻಬೇಟಿ ಬಚಾವೋ ಬೇಟಿ ಪಢಾವೋʼ ಕೂಡ ಒಂದು. ಹೀಗಿದ್ದೂ ಹೆಣ್ಣುಮಕ್ಕಳ ಭ್ರೂಣ ಹತ್ಯೆ (Foeticide) ಮತ್ತೊಂದೆಡೆ ಅವ್ಯಾಹತವಾಗಿ ನಡೆಯುತ್ತಿದೆ. ಗಂಡು ಮಗುವಿನ ಮೇಲಿನ ಆದ್ಯತೆ, ಹೆಣ್ಣುಮಕ್ಕಳ ಕುರಿತಾದ ತಾರತಮ್ಯ, ಸಾಮಾಜಿಕ ಕಟ್ಟುಪಾಡು, ಶಿಕ್ಷಣದ ಕೊರತೆಯಂತಹ ಕಾರಣಗಳಿಂದ ತಾಯಿ ಗರ್ಭದಲ್ಲಿರುವ ಹೆಣ್ಣು ಭ್ರೂಣವನ್ನ ಅಕ್ರಮವಾಗಿ ಲಿಂಗ ಪರೀಕ್ಷೆ ನಡೆಸಿ ಕೊಲ್ಲಲಾಗುತ್ತಿದೆ.

    ಕೆಲ ದಿನಗಳ ಹಿಂದಷ್ಟೇ ಮಂಡ್ಯದಲ್ಲಿ ಅಕ್ರಮವಾಗಿ ಭ್ರೂಣಹತ್ಯೆ ಮಾಡುತ್ತಿದ್ದ ಜಾಲವೊಂದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಹೊಸ ಅವತಾರದಲ್ಲಿ ಭ್ರೂಣ ಹತ್ಯೆ ವ್ಯವಸ್ಥಿತವಾಗಿ ನಡೆಯುತ್ತಿದ್ದದ್ದು ಕಂಡುಬಂದಿದೆ. ಕರ್ನಾಟಕದ ಕೆಲವು ಮಹಿಳೆಯರು (Karnataka Womens) ನೆರೆಯ ರಾಜ್ಯದಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿದ್ದದ್ದು ಆರೋಗ್ಯ ಇಲಾಖೆ (Health Department) ಅಧಿಕಾರಿಗಳ ಕುಟುಕು ಕಾರ್ಯಾಚರಣೆ ವೇಳೆ ಬಟಾ ಬಯಲಾಗಿದೆ.

    ಹೌದು. ಕರ್ನಾಟಕದ ಕೆಲ ತಾಯಂದಿರು ನೆರೆಯ ಆಂಧ್ರ ಪ್ರದೇಶದಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿದ್ದ ಘೋರ ಕೃತ್ಯ ಆರೋಗ್ಯ ಇಲಾಖೆ ಕಾರ್ಯಚರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಿಚ್ಛೇದಿತೆಗೆ ಮದುವೆ ಆಗೋದಾಗಿ ನಂಬಿಸಿ ವಂಚನೆ ಆರೋಪ – ಬೆಂಗಳೂರಿನ ಕ್ರಿಕೆಟ್‌ ಕೋಚ್‌ ವಿರುದ್ಧ ಎಫ್‌ಐಆರ್‌

    ಏನಿದು ಘಟನೆ?
    30 ವರ್ಷದ ಮಹಿಳೆಯೊಬ್ಬರು ಮಳವಳ್ಳಿಯಲ್ಲಿ ಬಂಡೂರು ಬಸವಗುಡಿ ದೇವಸ್ಥಾನವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂಬುದು ಆಶಾ ಕಾರ್ಯಕರ್ತೆಯರ ಗಮನಕ್ಕೆ ಬಂದಿತ್ತು. ತಕ್ಷಣ ವೈದ್ಯಕೀಯ ಸಿಬ್ಬಂದಿ ಮೂಲಕ ಆಕೆಯ ವಿಚಾರಣೆ ನಡೆಸಲಾಯಿತು. ಬಳಿಕ ಏಜೆಂಟ್‌ ಮೂಲಕ ಆಕೆಯ ಭ್ರೂಣ ಲಿಂಗ ಪತ್ತೆ ಮಾಡಿದಾಗ ಹೆಣ್ಣು ಅಂತಾ ಗೊತ್ತಾಯಿತು. ಈಗಾಗಲೇ ಮೂರು ಹೆಣ್ಣು ಮಕ್ಕಳು ಹೊಂದಿದ್ದ ಕಾರಣ ಹೆಣ್ಣು ಮಗುವಿಗೆ ದಂಪತಿ ಕೂಡ ನಿರಾಕರಿಸಿದ್ದರಂತೆ.

    ಈ ಬಗ್ಗೆ ಖಚಿತ ಮಾಹಿತಿ ಪಡೆದ ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಅಲರ್ಟ್‌ ಆಗಿದ್ದಾರೆ. ಆಂಧ್ರ ಪ್ರದೇಶದ ಆಯುಕ್ತರಿಗೆ ಮಾಹಿತಿಯನ್ನೂ ನೀಡಿದ್ದಾರೆ. ನಂತ್ರ ಸೆ.21ರಂದು ಜಂಟಿಯಾಗಿ ಕರ್ನೂಲ್‌ನಲ್ಲಿರುವ ಭಾಷಾ ನರ್ಸಿಂಗ್ ಹೋಂಗೆ ವಿಸಿಟ್ ಮಾಡಿ ಸ್ಟಿಂಗ್‌ ಆಪರೇಷನ್‌ ನಡೆಸಿ ಜಾಲವನ್ನು ಪತ್ತೆಹಚ್ಚಿದ್ದಾರೆ. ಈ ಆಸ್ಪತ್ರೆ ಬಳ್ಳಾರಿ, ರಾಯಚೂರು, ವಿಜಯನಗರ, ಗಡಿ ಭಾಗಕ್ಕೂ ಹತ್ತಿರವಿದೆ. ಕಾರ್ಯಾಚರಣೆ ಬಳಿಕ ಎಲ್ಲಾ ಪುರಾವೆಗಳನ್ನು ಆಂಧ್ರದ ನೋಡಲ್ ಅಧಿಕಾರಿಗೆ ರವಾನಿಸಿದ್ದಾರೆ. ಇದನ್ನೂ ಓದಿ: ಪ್ರೀತಿಗೆ ಮನೆಯವರ ವಿರೋಧ – ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನ; ಯುವತಿ ಸಾವು, ಯುವಕ ಪಾರು 

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಮಳವಳ್ಳಿಯ ಈ ದಂಪತಿಗೆ ಭ್ರೂಣ ಕೊಲ್ಲಲು 20 ಸಾವಿರ ರೂ.ಗೆ ಬೇಡಿಕೆ ಇಡಲಾಗಿತ್ತು. ಆದ್ರೆ ಇದಕ್ಕೆ ಒಪ್ಪದ ದಂಪತಿ ವಾಪಸ್‌ ಆಗಿದ್ರು. ಬಳಿಕ ವೈದ್ಯಕೀಯ ಸಿಬ್ಬಂದಿ ಜೊತೆ ಮಾತುಕತೆ ನಡೆಸುವಾಗ ಈ ಬಗ್ಗೆ ಬಾಯ್ಬಿಟ್ಟಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಈ ದಂಪತಿಗಳನ್ನೇ ಮುಂದಿಟ್ಟುಕೊಂಡು ಸ್ಟಿಂಗ್‌ ಆಪರೇಷನ್‌ ನಡೆಸಿತು. ಸದ್ಯ ಜಾಲವನ್ನು ಪತ್ತೆಹಚ್ಚಿದ ಆರೋಗ್ಯ ಇಲಾಖೆ ಆಂಧ್ರ ಪ್ರದೇಶದ ಭಾಷ ನರ್ಸಿಂಗ್ ಹೋಂಗೆ ಬೀಗ ಜಡಿದಿದೆ. ಇದನ್ನೂ ಓದಿ: ಮೋದಿ ರಾಷ್ಟ್ರಧ್ವಜ ಹಾರಿಸೋದನ್ನ ತಡೆಯಲು ಬಹುಮಾನ ಘೋಷಿಸಿದ್ದ ಪನ್ನುನ್ ವಿರುದ್ಧ ಕೇಸ್

    ಕಾರ್ಯಾಚರಣೆ ಬಗ್ಗೆ ಡಾ. ವಿವೇಕ್ ಹೇಳಿದ್ದೇನು?
    ಸ್ಟಿಂಗ್‌ ಆಪರೇಷನ್‌ ಬಳಿಕ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ವೈದ್ಯಕೀಯ ಕಾಯ್ದೆ ಉಪನಿರ್ದೇಶಕರಾದ ಡಾ. ವಿವೇಕ್ ದೊರೈ, ಆಂಧ್ರದ ಆಶಾ ಕಾರ್ಯಕರ್ತೆಯೇ ಇದ್ರ ಕಿಂಗ್‌ಪಿನ್‌. 17 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.‌ ಭಾಷಾ ನರ್ಸಿಂಗ್‌ ಹೋಮ್‌ 50 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ನಾವು ರೇಡ್‌ಗೆ ಹೋದ ತಕ್ಷಣ ಡಾಕ್ಟರ್‌ ಸ್ಪಾಟ್‌ನಿಂದ ಓಡಿ ಹೋಗಿದ್ದಾನೆ ಎಂದು ತಿಳಿಸಿದ್ದಾರೆ.

    ಅಲ್ಲದೇ ಅಲ್ಲಿನ ಅಲ್ಲಿನ ನೋಡಲ್ ಅಧಿಕಾರಿಗೆ, ಏಜೆಂಟ್‌ಗಳಿಗೆ ಹಣ ನೀಡಿದ್ದು, ಎಲ್ಲ ಸಾಕ್ಷ್ಯವನ್ನು ನಮ್ಮ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಹ್ಯಾಂಡೋವರ್ ಮಾಡ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 17 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ – ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ FIR

  • ಮಾಸಿಕ ಪ್ರೋತ್ಸಾಹಧನ ಹೆಚ್ಚಳಕ್ಕೆ ಆಗ್ರಹ – ಆಶಾ ಕಾರ್ಯಕರ್ತೆಯರಿಂದ ರಾಜ್ಯವ್ಯಾಪಿ ಹೋರಾಟ

    ಮಾಸಿಕ ಪ್ರೋತ್ಸಾಹಧನ ಹೆಚ್ಚಳಕ್ಕೆ ಆಗ್ರಹ – ಆಶಾ ಕಾರ್ಯಕರ್ತೆಯರಿಂದ ರಾಜ್ಯವ್ಯಾಪಿ ಹೋರಾಟ

    ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ (ASHA workers) 10 ಸಾವಿರ ರೂ. ಗೌರವ ಧನ ನೀಡುವ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಇಂದಿನಿಂದ ರಾಜ್ಯವ್ಯಾಪಿ ಹೋರಾಟ ಆರಂಭಿಸಿದೆ.

    ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿಯೂ ಆಶಾ ಕಾರ್ಯಕರ್ತೆಯರು ʻಮುಖ್ಯಮಂತ್ರಿಗಳೇ, ನಿಮ್ಮ ಮಾತು ಉಳಿಸಿರಿʼ ಎಂಬ ಘೋಷಣೆಯೊಂದಿಗೆ ಇಂದಿನಿಂದ ರಾಜ್ಯವ್ಯಾಪಿ ಹೋರಾಟ ಶುರು ಮಾಡಿದ್ದಾರೆ. ಆಗಸ್ಟ್‌ 14ರ ವರೆಗೂ ಹೋರಾಟ ಮುಂದುವರಿಯಲಿದೆ. ಮಳೆ, ಚಳಿಯನ್ನೂ ಲೆಕ್ಕಿಸದೇ, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡು ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದಿದ್ದಾರೆ.

    ಈ ವರ್ಷದ ಮೊದಲಿನಲ್ಲಿ ಮುಖ್ಯಮಂತ್ರಿಗಳು ಅವರ ಬೇಡಿಕೆಗಳನ್ನು ಒಪ್ಪಿಕೊಂಡು, 2025ರ ಏಪ್ರಿಲ್‌ನಿಂದಲೇ 10,000 ರೂ. ಗೌರವಧನ ನೀಡುವುದಾಗಿ ಘೋಷಿಸಿದ್ದರು. ಆದ್ರೆ, ಇದುವರೆಗೆ ಸರ್ಕಾರ ಘೋಷಣೆಯನ್ನ ಜಾರಿಗೊಳಿಸದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ಹೋರಾಟಕ್ಕಿಳಿದಿದ್ದಾರೆ. ಈ ನಡುವೆ ಕಾರ್ಯಕ್ರಮ ನಿರ್ದೇಶಕ ಪ್ರಭುಗೌಡ ಅವರು ಎನ್‌ಎಚ್‌ಎಮ್ ಪರವಾಗಿ ಆಶಾ ಕಾರ್ಯಕರ್ತೆಯರ ಬೇಡಿಕೆ ಪತ್ರವನ್ನು ಸ್ವೀಕರಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.

    ಮೈಸೂರು, ಗದಗ, ದಾವಣಗೆರೆ, ಚಿತ್ರದುರ್ಗ, ಕಾರವಾರ ಮತ್ತು ವಿಜಯಪುರ ಮುಂತಾದ ಮಳೆಯಾದ ಪ್ರದೇಶಗಳಲ್ಲಿಯೂ ಆಶಾ ಕಾರ್ಯಕರ್ತೆಯರು ಧರಣಿ ಮುಂದುವರಿಸಿದ್ದಾರೆ.

    ಆಶಾ ಕಾರ್ಯಕರ್ತೆಯರ ಬೇಡಿಕೆಗಳೇನು?
    * 2025ರ ಏಪ್ರಿಲ್‌ನಿಂದ ರಾಜ್ಯ ಸರ್ಕಾರದ ಗೌರವಧನ ಹಾಗೂ ಕೇಂದ್ರ ಸರ್ಕಾರದ ಪ್ರೋತ್ಸಾಹಧನವನ್ನು ಒಳಗೊಂಡಂತೆ 10,000 ರೂ. ನೀಡಬೇಕು.
    * ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಇತರ ಯೋಜನಾ ಕಾರ್ಮಿಕರಿಗೆ ನೀಡಿದಂತೆ, ಆಶಾ ಕಾರ್ಯಕರ್ತೆಯರಿಗೂ 1,000 ರೂ. ಹೆಚ್ಚಳ ನೀಡಬೇಕು.
    * ‘ರೇಷನಲೈಸೇಶನ್’ ಎಂಬ ಹೆಸರಿನಲ್ಲಿ ಯಾರನ್ನೂ ಕೆಲಸದಿಂದ ತೆಗೆದು ಹಾಕಬಾರದು.
    * ಕಾರ್ಯಕ್ಷಮತೆ ಆಧಾರಿತ ಮೌಲ್ಯಮಾಪನ ನೀತಿಯನ್ನು ಹಿಂತೆಗೆದುಕೊಳ್ಳಬೇಕು.
    * ಆಶಾ ಫೆಸಿಲಿಟೇಟರ್ ವ್ಯವಸ್ಥೆಯನ್ನು ಮುಂದುವರಿಸಿ, ಅವರಿಗೆ ಸೂಕ್ತ ವೇತನ ನೀಡಬೇಕು.
    * ನಗರ/ಪಟ್ಟಣಗಳ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಜೀವನಾವಶ್ಯಕ ವೆಚ್ಚಕ್ಕೆ ಅನುಗುಣವಾಗಿ 2,000 ರೂ. ಹೆಚ್ಚಿಸಬೇಕು.
    * ನಿವೃತ್ತರಾದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಒಮ್ಮೆ ನಿವೃತ್ತಿ ಭತ್ಯೆ ನೀಡಬೇಕು.
    * 2025ರ ಜೂನ್–ಜುಲೈನಲ್ಲಿ ಕೇಂದ್ರ ಸರ್ಕಾರ ನೀಡಿದ ಹೆಚ್ಚುವರಿ ಮೊತ್ತವನ್ನು ರಾಜ್ಯದಲ್ಲಿ ಜಾರಿಗೆ ತರಬೇಕು.

  • ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಸದಂತೆ ಆರೋಗ್ಯ ಇಲಾಖೆಯಿಂದ ಸೂಚನೆ

    ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಸದಂತೆ ಆರೋಗ್ಯ ಇಲಾಖೆಯಿಂದ ಸೂಚನೆ

    ಬೆಂಗಳೂರು: ಅಡುಗೆ ಎಣ್ಣೆ ಮರುಬಳಕೆ ಮಾಡುತ್ತಿರುವ ಮಾಹಿತಿ ಬೆನ್ನಲ್ಲೇ ಆರೋಗ್ಯ ಇಲಾಖೆ ಹೊಸ (Department of Health) ಮಾರ್ಗಸೂಚಿಯನ್ನು ಪ್ರಕಟಿಸಿದೆ.

    ಎಣ್ಣೆ ಉದ್ದಿಮೆದಾರರು ಹಾಗೂ ಬೇಕರಿ, ಹೋಟೆಲ್‌ನವರಿಗೆ ಖಡಕ್ ನಿರ್ದೇಶನ ಹೊರಡಿಸಿದ್ದಾರೆ. ಈ ಮೂಲಕ ಅಡುಗೆ ಎಣ್ಣೆ ತಯಾರಿಕಾ ಘಟಕದವರು ಕಡ್ಡಾಯವಾಗಿ ಆರು ತಿಂಗಳಿಗೊಮ್ಮೆ ಗುಣಮಟ್ಟ ವಿಶ್ಲೇಷಣೆ ತಪಾಸಣೆ ಮಾಡಿಸಬೇಕು ಎಂದು ಸೂಚಿಸಿದೆ.ಇದನ್ನೂ ಓದಿ: ತಾಯಿಯನ್ನು ಕೊಂದ ಪಾಪಿಯಿಂದ ತಂದೆಯ ಮೇಲೂ ಮೃಗೀಯ ವರ್ತನೆ – ಚರ್ಮ ಸುಲಿಯುವಂತೆ ಹಲ್ಲೆ

    ರಾಜ್ಯದಲ್ಲಿ ಹೆಚ್ಚಾದ ಹೃದಯಘಾತ ಪ್ರಕರಣದ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಕೆಲ ಅಡುಗೆ ಎಣ್ಣೆಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವಾಗಿ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕುರಿತು ತಜ್ಞರ ಜೊತೆ ಪರಾಮರ್ಶಿಸಿ ಆಹಾರ ಸುರಕ್ಷತಾ ಇಲಾಖೆಯಿಂದ ಸೂಚನೆ ನೀಡಿದೆ. ಸದ್ಯ 32,68,999 ಲೀಟರ್ ಬಳಕೆ ಮಾಡಿದ ಎಣ್ಣೆಯಿದ್ದು, ಸೂಕ್ತ ವಿಲೇವಾರಿ ಹಾಗೂ ಬಯೋ ಡಿಸೇಲ್ ಘಟಕಕ್ಕೆ ರವಾನಿಸಲು ತಿಳಿಸಿದೆ.

    ಪ್ಯಾಕಿಂಗ್, ಲೇಬಲಿಂಗ್ ಸ್ವಚ್ಛತೆ, ಎ&ಡಿ ವಿಟಮಿನ್ ಇರುವ ಎಣ್ಣೆ ಮಾರಾಟ ಮಾಡುವಂತೆ ತಿಳಿಸಿದ್ದಾರೆ. ಜೊತೆಗೆ ಟ್ರಾನ್ಸ್ ಫ್ಯಾಟ್ ಕಡಿಮೆ ಇರುವ ಎಣ್ಣೆಯನ್ನು ಬಳಕೆ ಮಾಡಬೇಕು. ಒಂದು ಬಾರಿ ಉಪಯೋಗಿಸಿದ ಅಡುಗೆ ಎಣ್ಣೆಯನ್ನು ಮತ್ತೆ ಮರುಬಳಕೆ ಮಾಡಬಾರದು ಎಂದು ಹೋಟೆಲ್ ಬೇಕರಿಯವರಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ.ಇದನ್ನೂ ಓದಿ: ಅನಾಮಿಕ ವ್ಯಕ್ತಿ ನಟೋರಿಯಸ್ ಕೆಲಸ ಮಾಡಿ ಕ್ಷೇತ್ರದಿಂದ ಉಚ್ಚಾಟನೆಗೊಂಡಿದ್ದ: ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ

  • ಸ್ಯಾನಿಟರಿ ಪ್ಯಾಡ್ ಸುಟ್ಟ ಕೇಸ್ – ಫರಹತಾಬಾದ್ ಪಿಹೆಚ್‌ಸಿ ವೈದ್ಯಾಧಿಕಾರಿಗೆ ನೋಟಿಸ್

    ಸ್ಯಾನಿಟರಿ ಪ್ಯಾಡ್ ಸುಟ್ಟ ಕೇಸ್ – ಫರಹತಾಬಾದ್ ಪಿಹೆಚ್‌ಸಿ ವೈದ್ಯಾಧಿಕಾರಿಗೆ ನೋಟಿಸ್

    – ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ

    ಕಲಬುರಗಿ: ಫರಹತಾಬಾದ್ (Farhatabad) ಪಿಹೆಚ್‌ಸಿ ಹಳೆ ಕಟ್ಟಡದಲ್ಲಿ ಸ್ಯಾನಿಟರಿ ಪ್ಯಾಡ್ (Sanitary Pad) ಸುಟ್ಟ ವರದಿಯನ್ನು ನಿಮ್ಮ ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಿದ್ದು, ವರದಿ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಪಿಹೆಚ್‌ಸಿ ವೈದ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಈ ಮಧ್ಯೆ ಆರೋಗ್ಯ ಇಲಾಖೆ ಜೊತೆಗೆ ಫರಹತಾಬಾದ್ ಸರ್ಕಾರಿ ಪ್ರೌಡ ಶಾಲೆ ಶಿಕ್ಷಕರ ಎಡವಟ್ಟು ಸಹ ಇದೀಗ ಕಂಡು ಬರುತ್ತಿದೆ.

    ಸರ್ಕಾರ ಗ್ರಾಮೀಣ ಭಾಗದ ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸಮಸ್ಯೆ ಆಗಬಾರದು, ಶುಚಿತ್ವ ಕಾಪಾಡಿಕೊಳ್ಳಬೇಕು ಅಂತಾ ಆರೋಗ್ಯ ಇಲಾಖೆ ಮುಖಾಂತರ ಸರ್ಕಾರಿ ಪ್ರೌಡ ಶಾಲೆಗಳು ಸೇರಿದಂತೆ ಮಹಿಳೆಯರಿಗೆ ಶುಚಿ ಪ್ಯಾಡ್‌ಗಳನ್ನು ಉಚಿತವಾಗಿ ಕೊಡುತ್ತದೆ. ಅದೇ ರೀತಿ ಕಲಬುರಗಿಯ ಫರಹತಾಬಾದ್ ಪಿಹೆಚ್‌ಸಿಗೆ 2017ರಲ್ಲಿ ನೂರಾರು ಬಾಕ್ಸಗಳಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಶುಚಿ ಪ್ಯಾಡ್‌ಗಳನ್ನು ನೀಡಲಾಗಿತ್ತು. ಆದರೆ ಹೀಗೆ ಸರ್ಕಾರದಿಂದ ಬಡ ಮಹಿಳೆಯರಿಗಾಗಿ ವಿತರಿಸಬೇಕಾದ ಪ್ಯಾಡ್‌ಗಳು 8 ವರ್ಷಗಳಾದರೂ ಸಹ ವಿತರಣೆಯಾಗಿರಲಿಲ್ಲ. ಆ ಹಳೆ ಪಿಹೆಚ್‌ಸಿ ಕಟ್ಟಡ ಡೆಮಾಲಿಶ್ ಮಾಡಲು ಮುಂದಾದ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ವಿತರಣೆಯಾಗದಿರುವದು ಬೆಳಕಿಗೆ ಬಂದಿದೆ. ಈ ವೇಳೆ ವಿತರಣೆಯಾಗದ ಪ್ಯಾಡ್‌ಗಳನ್ನು ಆರೋಗ್ಯ ಇಲಾಖೆಯ ಕೆಲ ಸಿಬ್ಬಂದಿ ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಫರಹತಾಬಾದ್ ಪಿಹೆಚ್‌ಸಿಯ ವೈದ್ಯಾಧಿಕಾರಿಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ವೇಗಿ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ – FIR ದಾಖಲು

    ಫರಹತಾಬಾದ್ ಪಿಹೆಚ್‌ಸಿಗೆ ಸರಬರಾಜು ಆದ ಪ್ಯಾಡ್‌ಗಳು ಅಲ್ಲಿನ ಸರ್ಕಾರಿ ಪ್ರೌಢಶಾಲೆಗೆ ವಿತರಣೆಯಾಗಬೇಕಿತ್ತು. ಆದರೆ ಆರೋಗ್ಯ ಅಧಿಕಾರಿಗಳು ಆ ಶಾಲೆಗೆ ವಿತರಣೆ ಮಾಡಿಲ್ಲ. ಇನ್ನೂ ಪ್ರೌಢ ಶಾಲೆಯ ಹೆಣ್ಣುಮಕ್ಕಳಿಗೆ ವಿತರಿಸುವ ಕೆಲಸವನ್ನು ಶಾಲೆಯವರು ಸಹ ಮಾಡಿಲ್ಲ. ಹೀಗಾಗಿ ಈ ಎರಡು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಲಕ್ಷಾಂತರ ಪ್ಯಾಡ್‌ಗಳು ವಿತರಣೆಯಾಗದೇ ಹಾಳಾಗಿವೆ. ಸದ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಇಲಾಖೆ 2017ರಿಂದ 2025ರವರೆಗೆ ಪಿಹೆಚ್‌ಸಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ವೈದ್ಯಾಧಿಕಾರಿಗಳನ್ನು ನೋಟಿಸ್ ಕೊಡುವುದಕ್ಕೆ ಇದೀಗ ಮುಂದಾಗಿದೆ. ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ರದ್ದು

  • ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ, ಚಿಕಿತ್ಸೆ ಕೊರತೆ ಇದ್ರೆ ದೂರು ಕೊಡಿ – ಆರೋಗ್ಯ ಇಲಾಖೆಯಿಂದ ವಾಟ್ಸಪ್‌ ನಂಬರ್‌ ರಿಲೀಸ್‌

    ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ, ಚಿಕಿತ್ಸೆ ಕೊರತೆ ಇದ್ರೆ ದೂರು ಕೊಡಿ – ಆರೋಗ್ಯ ಇಲಾಖೆಯಿಂದ ವಾಟ್ಸಪ್‌ ನಂಬರ್‌ ರಿಲೀಸ್‌

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಚಿಕಿತ್ಸೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಕಂಡುಬಂದರೆ ದೂರು ನೀಡುವಂತೆ ಆರೋಗ್ಯ ಇಲಾಖೆ ವಾಟ್ಸಪ್‌ ನಂಬರ್‌ ಬಿಡುಗಡೆ ಮಾಡಿದೆ.

    ಸರ್ಕಾರಿ ಆಸ್ಫತ್ರೆಗಳಲ್ಲಿ ಅವ್ಯವಸ್ಥೆಯೇ? ಚಿಕಿತ್ಸೆ ಕೊರತೆ ಇದೆಯಾ? ಈಗಲೇ ವಾಟ್ಸಾಪ್ ಮೂಲಕ ದೂರು ಕೊಡಿ ಎಂದು ಸರ್ಕಾರಿ ಆಸ್ಫತ್ರೆಗಳ ಸಮಸ್ಯೆ ಕುರಿತು ದೂರು ಸಲ್ಲಿಕೆಗೆ ವಾಟ್ಸಾಪ್ ನಂಬರ್ ಬಿಡುಗಡೆಗೊಳಿಸಿದೆ.

    ಸರ್ಕಾರಿ ಆಸ್ಫತ್ರೆಗಳ ಸೇವೆ ಕುರಿತು ದೂರು ಮತ್ತು ಸಲಹೆಗಳನ್ನ ನೀಡುವಂತೆ ತಿಳಿಸಿದೆ. ಪೋಟೊ, ವೀಡಿಯೋ ಸಮೇತ ವಾಟ್ಸಪ್ ಮಾಡಿ ಸರ್ಕಾರಿ ಆಸ್ಫತ್ರೆಗಳಲ್ಲಿ ಸಮಸ್ಯೆ ಬಗ್ಗೆ ಸಾರ್ವಜನಿಕರು ದೂರು ನೀಡಬಹುದಾಗಿದೆ.

    ವಾಟ್ಸಪ್ ನಂಬರ್ 9449843001ಗೆ ವಾಟ್ಸಾಪ್ ಮೂಲಕ ಮೆಸೇಜ್ ವಿಡಿಯೋ, ಪೋಟೋ ಕಳಿಸಿ ದೂರು ಸಲ್ಲಿಸಬಹುದಾಗಿದೆ.

  • ಕೋವಿಡ್ ಕೇಸ್ ಏರಿಕೆ – ಆರೋಗ್ಯ ಇಲಾಖೆಯಿಂದ ಸಹಾಯವಾಣಿ ಬಿಡುಗಡೆ

    ಕೋವಿಡ್ ಕೇಸ್ ಏರಿಕೆ – ಆರೋಗ್ಯ ಇಲಾಖೆಯಿಂದ ಸಹಾಯವಾಣಿ ಬಿಡುಗಡೆ

    ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳು (Covid 19) ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ (Health Department) ಸಹಾಯವಾಣಿ ಬಿಡುಗಡೆ ಮಾಡಿದೆ.

    ಆರೋಗ್ಯ ಸಲಹೆಗಾಗಿ 18004258330 ನಂಬರ್‌ಗೆ ಕರೆ ಮಾಡಿ ಸಲಹೆ ಪಡೆಯಲು ಸಾರ್ವಜನಿಕರಿಗೆ ಇಲಾಖೆ ಸೂಚನೆ ನೀಡಿದೆ.

    ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಏನು ಸಲಹೆ?
    1. ಜನದಟ್ಟಣೆ ಪ್ರದೇಶಗಳಲ್ಲಿ ಮಾಸ್ಕ್ ಹಾಕಿ, ಸಾಮಾಜಿಕರ ಅಂತರ ಕಾಪಾಡಬೇಕು
    2. ಉತ್ತಮ ನೈರ್ಮಲ್ಯ ಕಾಪಾಡಬೇಕು
    3. ವಿದೇಶಗಳಿಂದ ಬರುವ ಪ್ರಯಾಣಿಕ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲು ಸಲಹೆ
    4. ಜ್ವರ, ಕೆಮ್ಮು, ತಲೆನೋವು, ಉಸಿರಾಟರ ಸಮಸ್ಯೆ ಇದ್ದರೆ ವೈದ್ಯರನ್ನ ಭೇಟಿ ಆಗಬೇಕು
    5. ಆರೋಗ್ಯ ಸಲಹೆಗಾಗಿ ಸಹಾಯವಾಣಿ ಸಂಖ್ಯೆ 18004258330 ಗೆ ಕರೆ ಮಾಡಲು ಸೂಚನೆ
    6. ಕೊವಿಡ್ ರೋಗಲಕ್ಷಣಗಳು ಇದ್ದರೆ ಕೂಡಲೇ ಪರೀಕ್ಷೆ ಮಾಡಿಸಿ, ಪರೀಕ್ಷೆಗೆ ಸಹಕರಿಸಿ
    7. ಶಾಲೆಗಳಲ್ಲಿ ಕಣ್ಗಾವಲು ಇರಿಸಿ ರೋಗ ಲಕ್ಷಣ ಇರುವ ಮಕ್ಕಳನ್ನ ಶಾಲೆಗೆ ಕಳಿಸಬೇಡಿ

    ಹೆಲ್ತ್ ಕೇರ್ ವರ್ಕರ್ಸ್ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
    ಕೊವಿಡ್ ಟೆಸ್ಟಿಂಗ್, ಟ್ರ್ಯಾಕಿಂಗ್, ಚಿಕಿತ್ಸೆಗೆ ಸಂಬಂಧಿಸಿದ ಮಾರ್ಗಸೂಚಿ
    1. 5% ಐಎಲ್ ಐ ಸ್ಯಾರಿ ಕೇಸ್ ಗಳ ಟೆಸ್ಟ್ ಮಾಡಬೇಕು
    2. ಹೈ ರಿಸ್ಕ್ ವ್ಯಕ್ತಿಗಳಿಗೆ ಟೆಸ್ಟ್ ಮಾಡಬೇಕು
    3. ಹೈ ರಿಸ್ಕ್ ಇರುವ ಮಕ್ಕಳು, ಗರ್ಭಿಣಿಯರು, ವೃದ್ದರಿಗೆ ಟೆಸ್ಟ್ ಮಾಡಬೇಕು
    4. ಅಂದಿನ ಕೊವಿಡ್ ಕೇಸ್ ಡಿಟೇಲ್ಸ್ ಆ ದಿನವೇ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕು
    5. ಆಸ್ಪತ್ರೆಯ ಇನ್‌ಫೆಕ್ಷನ್ ಕಂಟ್ರೋಲ್ ಕಮಿಟಿ ಮಾನಿಟರ್ ಮಾಡಬೇಕು

    ಶಾಲೆಗಳಿಗೆ ಹೊಸ ಮಾರ್ಗಸೂಚಿಯಲ್ಲಿ ಏನಿದೆ?
    1. ಮಕ್ಕಳಿಗೆ ನೆಗಡಿ, ಜ್ವರ, ಕೆಮ್ಮು ಇದ್ರೆ ಶಾಲೆಗೆ ಕಳುಹಿಸದೇ ವೈದ್ಯರ ಸಲಹೆ ಪಡೆದುಕೊಂಡು ಸೂಕ್ತ ಚಿಕಿತ್ಸೆ, ಆರೈಕೆ ನೀಡಬೇಕು
    2. ಜ್ವರ ಸಂಪೂರ್ಣ ಗುಣಮುಖವಾದ ಬಳಿಕ ಮಕ್ಕಳನ್ನ ಶಾಲೆಗೆ ಕಳಿಸಬೇಕು
    3. ಶಾಲೆಗೆ ಬಂದ ನಂತ್ರ ಮಕ್ಕಳಲ್ಲಿ ಜ್ವರ ಶೀತ ಗುಣಲಕ್ಷಣಗಳು ಕಂಡುಬಂದ್ರೇ ತಕ್ಷಣ ಪೋಷಕರ ಗಮನಕ್ಕೆ ತಂದು ಮನೆಗೆ ಕಳುಹಿಸಬೇಕು
    4. ಶಾಲಾ ಶಿಕ್ಷಕರಿಗೆ ಸಿಬ್ಬಂದಿಗೆ ಜ್ವರ, ಶೀತದಂತಹ ಲಕ್ಷಣ ಕಂಡುಬಂದ್ರೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
    5. ಸ್ಯಾನಿಟೈಸ್ ಬಳಕೆ, ಕೈಗಳ ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಸೇರಿದಂತೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನ ಶಾಲೆಯಲ್ಲಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

    ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಕೊರೊನಾ ಪ್ರಕರಣ
    ರಾಜ್ಯದಲ್ಲಿ ಕೋವಿಡ್ ಕೇಸ್ ಗಣನೀಯವಾಗಿ ಏರಿಕೆ ಕಂಡಿದೆ. ರಾಜ್ಯದ ಒಟ್ಟು ಆಕ್ಟೀವ್ ಕೇಸ್ 234 ಇದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 150ಕ್ಕೂ ಹೆಚ್ಚು ಆಕ್ಟೀವ್ ಕೇಸ್‌ಗಳು ದಾಖಲಾಗಿದೆ. ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ. ಐಎಲ್ ಮತ್ತು ಸಾರಿ ಕೇಸ್‌ಗಳಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಲು ಸರ್ಕಾರ ಸೂಚಿಸಿದೆ. ಇನ್ನು ಬೆಂಗಳೂರಿನಲ್ಲಿ ಕೇಸ್ ಏರಿಕೆ ಆಗುತ್ತಿದ್ದು, ಕೋವಿಡ್ ನಿಯಂತ್ರಣ ಜೊತೆಗೆ ಡೆಂಗ್ಯೂ ಕಾಪಾಡಿಕೊಳ್ಳೋದು ಸವಾಲಾಗಿದೆ. ಮಳೆಗಾಲ ಆಗಿರುವುದರಿಂದ ಬಿಬಿಎಂಪಿ ಆರೋಗ್ಯ ವಿಭಾಗ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

    ಬೆಂಗಳೂರಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ವು ಐಎಲ್‌ಐ, ಸಾರಿ ಕೇಸ್‌ಗಳು ಇವೆ ಎಂಬ ಮಾಹಿತಿ ಇದೆ. ಬಿಬಿಎಂಪಿಯ ಎಂಟು ವಲಯ ಮಹಾದೇವಪುರ, ಯಲಹಂಕ, ಪೂರ್ವ ವಲಯ, ಪಶ್ಚಿಮ ವಲಯ ಮತ್ತು ಬೆಂಗಳೂರು ದಕ್ಷಿಣದಲ್ಲೂ ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಮತ್ತು ಬೇರೆ ಬೇರೆ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅಂತಹವರ ಬಗ್ಗೆ ನಿಗಾವಹಿಸಲು ಪಾಲಿಕೆ ಮುಂದಾಗಿದೆ. ಆದರೆ ಮಹಾದೇವಪುರ ಬೆಂಗಳೂರು ದಕ್ಷಿಣ ವಲಯ ಜೊತೆಗೆ ಪೂರ್ವ ವಲಯದಲ್ಲಿ ಕೇಸ್ ಏರಿಕೆ ಆಗುತ್ತಿದೆ. ಪೂರ್ವ ವಲಯದಲ್ಲಿ 30ರ ಗಡಿ ದಾಟಿದೆ. ಮಹಾದೇವಪುರದಲ್ಲಿ ಆಕ್ಟೀವ್ ಕೇಸ್ 30ರ ಗಡಿ ದಾಟಿದೆ ಜೊತೆಗೆ ದಕ್ಷಿಣ ವಲಯದಲ್ಲೂ ಕೇಸ್ ಏರಿಕೆ ಆಗಿದೆ.

    ಇನ್ನೂ ಡೆಂಗ್ಯೂ ಜೊತೆಗೆ ಕೋವಿಡ್ ಕಂಟ್ರೋಲ್ ಮಾಡಲು ಬಿಬಿಎಂಪಿ ಹಲವು ಕ್ರಮ ವಹಿಸುತ್ತಿದೆ. ಐಎಲ್‌ಐ ಮತ್ತು ಸಾರಿ ಕೇಸ್‌ಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿದೆ.

  • ಕೋವಿಡ್‌ ಕೇಸ್‌ ಹೆಚ್ಚಳ ಬೆನ್ನಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿ ರಿಲೀಸ್‌

    ಕೋವಿಡ್‌ ಕೇಸ್‌ ಹೆಚ್ಚಳ ಬೆನ್ನಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿ ರಿಲೀಸ್‌

    ಬೆಂಗಳೂರು: ಕೊರೊನಾ (Corona) ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್‌ ಆಗಿದ್ದು, ಶಾಲೆಗಳಿಗೆ ಹೊಸ ಮಾರ್ಗಸೂಚಿ (Covid Guidelines For Schools) ಬಿಡುಗಡೆ ಮಾಡಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಹೊರಡಿಸಿದೆ.

    ಶಾಲೆಗಳಿಗೆ ಹೊಸ ಮಾರ್ಗಸೂಚಿಯಲ್ಲಿ ಏನಿದೆ?
    * ಮಕ್ಕಳಿಗೆ ನೆಗಡಿ, ಜ್ವರ, ಕೆಮ್ಮು ಇದ್ರೆ ಶಾಲೆಗೆ ಕಳುಹಿಸದೇ ವೈದ್ಯರ ಸಲಹೆ ಪಡೆದುಕೊಂಡು ಸೂಕ್ತ ಚಿಕಿತ್ಸೆ, ಆರೈಕೆ ನೀಡಬೇಕು
    * ಜ್ವರ ಸಂಪೂರ್ಣ ಗುಣಮುಖವಾದ ಬಳಿಕ ಮಕ್ಕಳನ್ನ ಶಾಲೆಗೆ ಕಳಿಸಬೇಕು
    * ಶಾಲೆಗೆ ಬಂದ ನಂತ್ರ ಮಕ್ಕಳಲ್ಲಿ ಜ್ವರ ಶೀತ ಗುಣಲಕ್ಷಣಗಳು ಕಂಡುಬಂದ್ರೇ ತಕ್ಷಣ ಪೋಷಕರ ಗಮನಕ್ಕೆ ತಂದು ಮನೆಗೆ ಕಳುಹಿಸಬೇಕು
    * ಶಾಲಾ ಶಿಕ್ಷಕರಿಗೆ ಸಿಬ್ಬಂದಿಗೆ ಜ್ವರ, ಶೀತದಂತಹ ಲಕ್ಷಣ ಕಂಡುಬಂದ್ರೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
    * ಸ್ಯಾನಿಟೈಸ್ ಬಳಕೆ, ಕೈಗಳ ಸ್ವಚ್ಛತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳೋದು ಸೇರಿದಂತೆ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನ ಶಾಲೆಯಲ್ಲಿ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

    ಬೆಂಗಳೂರಿನಲ್ಲಿ 150ರ ಗಡಿ ದಾಟಿದ ಕೊರೊನಾ ಪ್ರಕರಣ
    ರಾಜ್ಯದಲ್ಲಿ ಕೋವಿಡ್ ಕೇಸ್ ಗಣನೀಯವಾಗಿ ಏರಿಕೆ ಕಂಡಿದೆ. ರಾಜ್ಯದ ಒಟ್ಟು ಆಕ್ಟೀವ್ ಕೇಸ್ 234 ಇದ್ದು, ಅದರಲ್ಲಿ ಬೆಂಗಳೂರು ಒಂದರಲ್ಲೇ ಬರೋಬ್ಬರಿ 150ಕ್ಕೂ ಹೆಚ್ಚು ಆಕ್ಟೀವ್ ಕೇಸ್‌ಗಳು ದಾಖಲಾಗಿದೆ. ಬೆಂಗಳೂರು ಮತ್ತೆ ಕೊರೊನಾ ಹಾಟ್‌ಸ್ಪಾಟ್ ಆಗುತ್ತಿದೆ. ಐಎಲ್ ಮತ್ತು ಸಾರಿ ಕೇಸ್‌ಗಳಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಲು ಸರ್ಕಾರ ಸೂಚಿಸಿದೆ. ಇನ್ನು ಬೆಂಗಳೂರಿನಲ್ಲಿ ಕೇಸ್ ಏರಿಕೆ ಆಗುತ್ತಿದ್ದು, ಕೋವಿಡ್ ನಿಯಂತ್ರಣ ಜೊತೆಗೆ ಡೆಂಗ್ಯೂ ಕಾಪಾಡಿಕೊಳ್ಳೋದು ಸವಾಲಾಗಿದೆ. ಮಳೆಗಾಲ ಆಗಿರುವುದರಿಂದ ಬಿಬಿಎಂಪಿ ಆರೋಗ್ಯ ವಿಭಾಗ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

    ಬೆಂಗಳೂರಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ವು ಐಎಲ್‌ಐ, ಸಾರಿ ಕೇಸ್‌ಗಳು ಇವೆ ಎಂಬ ಮಾಹಿತಿ ಇದೆ. ಬಿಬಿಎಂಪಿಯ ಎಂಟು ವಲಯ ಮಹಾದೇವಪುರ, ಯಲಹಂಕ, ಪೂರ್ವ ವಲಯ, ಪಶ್ಚಿಮ ವಲಯ ಮತ್ತು ಬೆಂಗಳೂರು ದಕ್ಷಿಣದಲ್ಲೂ ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಮತ್ತು ಬೇರೆ ಬೇರೆ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಅಂತಹವರ ಬಗ್ಗೆ ನಿಗಾವಹಿಸಲು ಪಾಲಿಕೆ ಮುಂದಾಗಿದೆ. ಆದರೆ ಮಹಾದೇವಪುರ ಬೆಂಗಳೂರು ದಕ್ಷಿಣ ವಲಯ ಜೊತೆಗೆ ಪೂರ್ವ ವಲಯದಲ್ಲಿ ಕೇಸ್ ಏರಿಕೆ ಆಗುತ್ತಿದೆ. ಪೂರ್ವ ವಲಯದಲ್ಲಿ 30ರ ಗಡಿ ದಾಟಿದೆ. ಮಹಾದೇವಪುರದಲ್ಲಿ ಆಕ್ಟೀವ್ ಕೇಸ್ 30ರ ಗಡಿ ದಾಟಿದೆ ಜೊತೆಗೆ ದಕ್ಷಿಣ ವಲಯದಲ್ಲೂ ಕೇಸ್ ಏರಿಕೆ ಆಗಿದೆ.

    ಇನ್ನೂ ಡೆಂಗ್ಯೂ ಜೊತೆಗೆ ಕೋವಿಡ್ ಕಂಟ್ರೋಲ್ ಮಾಡಲು ಬಿಬಿಎಂಪಿ ಹಲವು ಕ್ರಮ ವಹಿಸುತ್ತಿದೆ. ಐಎಲ್‌ಐ ಮತ್ತು ಸಾರಿ ಕೇಸ್‌ಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿದೆ.

    ಕೋವಿಡ್ ಲಕ್ಷಣಗಳಿದ್ದರೆ ಏನು ಮಾಡಬೇಕು?
    * ಐಎಲ್‌ಐ, ಸಾರಿ ರೋಗಲಕ್ಷಣಗಳಿದ್ದರೆ ಟೆಸ್ಟ್ ಮಾಡಿಸಬೇಕು.
    * ಆರೋಗ್ಯದಲ್ಲಿ ಏರುಪೇರಾದ್ರೆ ವೈದ್ಯರನ್ನ ಭೇಟಿ ಮಾಡಬೇಕು.
    * ಸಭೆ, ಸಮಾರಂಭಗಳಲ್ಲಿ ಕೊರೊನಾ ನಿಯಮಾವಳಿ ಪಾಲಿಸಬೇಕು.
    * ಮಾಸ್ಕ್ ಹಾಕಬೇಕು, ಸ್ಯಾನಿಟೈಸೇಷನ್ ಮಾಡಿಕೊಳ್ಳಬೇಕು.
    * ಬೇರೆ ಬೇರೆ ಖಾಯಿಲೆಯಿಂದ ಬಳಲುತ್ತಿದ್ದರೆ ಚಿಕಿತ್ಸೆ ಅಗತ್ಯ.