Tag: Health Condition

  • ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು – ಆಪ್ತರಿಂದ ಮಾಹಿತಿ

    ರತನ್ ಟಾಟಾ ಆರೋಗ್ಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು – ಆಪ್ತರಿಂದ ಮಾಹಿತಿ

    ಮುಂಬೈ: ಟಾಟಾ ಸನ್ಸ್ (Tata Sons) ಮಾಜಿ ಅಧ್ಯಕ್ಷ ರತನ್ ಟಾಟಾ (Ratan Tata) (86) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ (Breach Candy Hospital) ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    20ಕ್ಕೂ ಹೆಚ್ಚು ವರ್ಷಗಳಿಂದ ಟಾಟಾ ಸನ್ಸ್ ಕಂಪನಿಯನ್ನು ನಡೆಸಿಕೊಂಡು ಬಂದಿರುವ 86 ವರ್ಷದ ರತನ್ ಟಾಟಾ ಅವರು ಸೋಮವಾರ ತಮ್ಮ ವಯೋಸಹಜ ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.ಇದನ್ನೂ ಓದಿ: ನಿತೀಶ್‌-ರಿಂಕು ಸ್ಫೋಟಕ ಫಿಫ್ಟಿ; ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 86 ರನ್‌ಗಳ ಜಯ

    ಟಾಟಾ ಸಮೂಹದ ಆಪ್ತರೊಬ್ಬರು, ರತನ್ ಟಾಟಾ ಅವರ ಆರೋಗ್ಯ ಪರಿಸ್ಥಿತಿಯ ಕುರಿತು ನೇರ ಮಾಹಿತಿಯನ್ನು ತಿಳಿದು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದು, ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ.

    ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದರು. ವಯೋಸಹಜ ಸಮಸ್ಯೆಗಳಿಂದ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದೇನೆ. ಆಂತಕಗೊಳ್ಳುವ ಅಗತ್ಯವಿಲ್ಲ. ಸಾಮಾನ್ಯ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದೇನೆ. ನನ್ನ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿವೆ. ಆ ಬಗ್ಗೆ ನನಗೆ ಮಾಹಿತಿ ಇದೆ. ನಾನು ಹಿಂದಿನ ಉತ್ಸಾಹದಲ್ಲೇ ಇರುತ್ತೇನೆ. ತಪ್ಪು ಮಾಹಿತಿ ಹರಡದಂತೆ ಮನವಿ ಮಾಡುತ್ತೇನೆ ಎಂದು ರತನ್ ಟಾಟಾ ಸ್ಪಷ್ಟನೆ ನೀಡಿದ್ದರು.

    ಕಂಪನಿಯ ನಿರ್ವಾಹಕರೊಬ್ಬರು ಮಾತನಾಡಿ, ಮೊದಲಿನಂತೆ ಟಾಟಾ ಅವರು ದಿನನಿತ್ಯದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಲ್ಲ. ಆದರೆ ಟಾಟಾ ಸನ್ಸ್ ನಾಯಕತ್ವದಿಂದ ಕೆಲವು ನಿರ್ಧಾರಗಳ ಕುರಿತು ಸಲಹೆ ನೀಡುತ್ತಾರೆ ಎಂದು ತಿಳಿಸಿದರು.

    ಸದ್ಯ ಇದೀಗ ಅವರು ಟಾಟಾ ಟ್ರಸ್ಟ್ನ ಲೋಕೋಪಕಾರಿ ಸಂಸ್ಥೆಯನ್ನು ನಡೆಸುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಬೈಕ್ ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ – ಆರೋಪಿಗಳ ಅರೆಸ್ಟ್

  • 14 ತಿಂಗಳಿಂದ ಮೂತ್ರ ಮಾಡದೇ ಒದ್ದಾಡಿದ ಮಹಿಳೆ – ಮುಂದೇನಾಯ್ತು ನೋಡಿ..

    14 ತಿಂಗಳಿಂದ ಮೂತ್ರ ಮಾಡದೇ ಒದ್ದಾಡಿದ ಮಹಿಳೆ – ಮುಂದೇನಾಯ್ತು ನೋಡಿ..

    – ಯುವತಿಯರಲ್ಲೇ ಹೆಚ್ಚಾಗಿ ಕಂಡುಬರುತ್ತಂತೆ ಈ ಕಾಯಿಲೆ

    ಲಂಡನ್‌: ಮೂತ್ರವನ್ನು ಆಗಾಗ್ಗೆ ದೇಹದಿಂದ ಹೊರ ಹಾಕುವುದು ಬಹಳ ಮುಖ್ಯ. ಮೂತ್ರ ಕಟ್ಟಿಕೊಂಡರೆ ಆರೋಗ್ಯದಲ್ಲಿ (Health) ಸಮಸ್ಯೆ ಉಂಟಾಗುತ್ತದೆ. ಕೆಲವರು ಹಗಲಿನಲ್ಲಿ ಪದೇ-ಪದೇ ಮೂತ್ರ ವಿಸರ್ಜನೆ ಮಾಡಿದರೆ, ಕೆಲವರು ರಾತ್ರಿ ವೇಳೆ ಈ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ (UK Woman) ಬರೋಬ್ಬರಿ 1 ವರ್ಷ 2 ತಿಂಗಳ ಕಾಲ ಮೂತ್ರ ವಿಸರ್ಜನೆಗೇ ಹೋಗಿಲ್ಲವಂತೆ.

     

    View this post on Instagram

     

    A post shared by Elle Adams ???? (@ellenextdoor)

    ಹೌದು… ಇಂಗ್ಲೆಂಡ್‌ನ (England) ಮಹಿಳೆಯೊಬ್ಬಳು ಬರೋಬ್ಬರಿ 14 ತಿಂಗಳ ಕಾಲ ಮೂತ್ರ ವಿಸರ್ಜನೆಗೇ ಹೋಗಿಲ್ಲವಂತೆ. ತಪಾಸಣೆಯ ಬಳಿಕ ಯುಕೆ ವೈದ್ಯರು (UK Doctors) ಇದಕ್ಕೆ ಕಾರಣವೇನೆಂಬುದನ್ನು ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: ನೀರಿನಲ್ಲೂ ಶತ್ರುಸೈನ್ಯ ನಾಶಮಾಡುವ ನ್ಯೂಕ್ಲಿಯರ್ ಡ್ರೋನ್ ಪರೀಕ್ಷೆ ಯಶಸ್ವಿ – ಸಾಮರ್ಥ್ಯ ಎಷ್ಟಿದೆ ಗೊತ್ತಾ?

    ಹೌದು.. 30 ವರ್ಷ ವಯಸ್ಸಿನ ಮಹಿಳೆ ಎಲ್ಲೆ ಆಡಮ್ಸ್‌ಗೆ 2020ರ ಅಕ್ಟೋಬರ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಇದನ್ನು ಫೌಲರ್ಸ್ ಸಿಂಡ್ರೋಮ್ (Fowlers Syndrome) ಎಂದು ಕರೆಯುತ್ತಾರೆ. ಈ ಕಾಯಿಲೆ ಮೂತ್ರಕೋಶವನ್ನು ಖಾಲಿ ಮಾಡಲಾಗದ ಅಸಮರ್ಥತೆ ಉಂಟುಮಾಡುತ್ತದೆ. ಈ ಕಾಯಿಲೆ ಯುವತಿಯರಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ಈ ಸಿಂಡ್ರೋಮ್‌ನಿಂದಾಗಿ ಆಡಮ್ಸ್‌ ಎಷ್ಟೇ ನೀರು ಅಥವಾ ಇತರ ದ್ರವ ಕುಡಿದರೂ ಮೂತ್ರ ವಿಸರ್ಜಿಸಲು ಸಾಧ್ಯವಾಗುತ್ತಿರಲ್ಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮುಸ್ಲಿಮರಿಗೆ ತೊಂದರೆಕೊಡುವ ಉದ್ದೇಶದಿಂದ ಮೀಸಲಾತಿಯಲ್ಲಿ ದ್ರೋಹ – ಸಿದ್ದು ಸಿಡಿಮಿಡಿ

    ನಂತರ ಆಡಮ್ಸ್ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ರೋಗಲಕ್ಷಣಗಳನ್ನು ವಿವರಿಸಿ ಚಿಕಿತ್ಸೆ ಪಡೆಯಲು ನಿರ್ಧರಿಸಿದರು. ವೈದ್ಯರು ಆಕೆಯ ದೇಹವನ್ನು ಕೂಲಕುಂಷವಾಗಿ ಪರಿಶೀಲನೆ ನಡೆಸಿ, ಆಕೆಯ ಮೂತ್ರಕೋಶದಲ್ಲಿ ಒಂದು ಲೀಟರ್ ಮೂತ್ರವಿದೆ ಎಂದು ತಿಳಿಸಿದರು. ಸಾಮಾನ್ಯವಾಗಿ ಮೂತ್ರಕೋಶವು ಮಹಿಳೆಯರಲ್ಲಿ 500 ಮಿಲಿ ಮತ್ತು ಪುರುಷರಲ್ಲಿ 700 ಮಿಲಿ ಮೂತ್ರವನ್ನು ಮಾತ್ರ ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿದೆ. ಹೀಗಾಗಿ ವೈದ್ಯರ ತಂಡ ತಕ್ಷಣ ಟ್ಯೂಬ್‌ ಮೂಲಕ ಮೂತ್ರವನ್ನು ಹೊರತೆಗೆಯುವ ಕೆಲಸ ಮಾಡಿತು.

    ಒಂದು ವಾರದ ನಂತರ ಮೂತ್ರಶಾಸ್ತ್ರ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಆಡಮ್ಸ್ ಅವರಿಗೆ ಸ್ವಯಂ-ಟ್ಯೂಬ್ ಮೂಲಕ ಮೂತ್ರ ತೆಗೆಯುವುದು ಹೇಗೆಂದು ಕಲಿಸಿ ಮನೆಗೆ ಕಳುಹಿಸಲಾಯಿತು. ಇದೀಗ ಮಹೀಳೆ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.

    ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಡಮ್ಸ್‌, ನನಗೆ ಮೊದಲು ಮೂತ್ರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಂತರದ ದಿನಗಳಲ್ಲಿ ಎಷ್ಟು ನೀರು ಕುಡಿದರೂ ಮೂತ್ರ ಬರುವ ಅನುಭವ ಆಗುವುದೇ ನಿಂತು ಹೋಯಿತು. ಬಳಿಕ ನಾನು ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆದುಕೊಂಡೆ. ಇದೀಗ ನಾನು ಅತ್ಯಂತ ಆರೋಗ್ಯವಂತಳಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.