Tag: health centre

  • ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಆರೋಗ್ಯ ಕೇಂದ್ರಗಳು ಮತ್ತೆ ಇಲಾಖೆಯ ಸುಪರ್ದಿಗೆ: ಸರ್ಕಾರ ಆದೇಶ

    ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಆರೋಗ್ಯ ಕೇಂದ್ರಗಳು ಮತ್ತೆ ಇಲಾಖೆಯ ಸುಪರ್ದಿಗೆ: ಸರ್ಕಾರ ಆದೇಶ

    – 51 ಆರೋಗ್ಯ ಕೇಂದ್ರಗಳ ಆಡಳಿತಾತ್ಮಕ, ಆರ್ಥಿಕ ನಿರ್ವಹಣೆಗೆ ಸರ್ಕಾರ ಮುಂದು

    ಬೆಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಸಮುದಾಯ ಕೇಂದ್ರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಲಾಗಿದೆ. ಆಡಳಿತಾತ್ಮಕ ಮತ್ತು ಆರ್ಥಿಕ ನಿಯಂತ್ರವಣವನ್ನು ಹೊಂದಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಸಮುದಾಯ ಕೇಂದ್ರಗಳನ್ನು ಈಗ ಸರ್ಕಾರವೇ ನೇರವಾಗಿ ನಡೆಸಲು ತೀರ್ಮಾನಿಸಿದೆ.

    ಈ ಬಗ್ಗೆ ಆದೇಶ ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಒಟ್ಟು 51 ಸರ್ಕಾರಿ ಆಸ್ಪತ್ರೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲಿದೆ. ನಗರ ಆರೋಗ್ಯ ಅಭಿಯಾನದಡಿ ಪಟ್ಟಿ ಮಾಡಿದ 35 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪಟ್ಟಿ ಮಾಡದ 14 ನಗರ ಪ್ರಾಥಮಿಕ ಕೇಂದ್ರಗಳು ಹಾಗೂ 2 ಸಮುದಾಯ ಆರೋಗ್ಯ ಕೇಂದ್ರಗಳು ಇನ್ನು ಮುಂದೆ ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಚರ್ಚ್‍ಗೆ ನುಗ್ಗಿ ದಾಂಧಲೆ- ಭಗವಾಧ್ವಜ ಹಾರಿಸಿ ಹನುಮಂತನ ಪೂಜೆ!

    ಬಿಬಿಎಂಪಿ ನೇಮಿಸಿರುವ ಸಿಬಂದಿಗಳು, ಪಿಠೋಪಕರಣಗಳು ಮತ್ತು ಸಲಕರಣೆಗಳು ಕೂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿಕೊಳ್ಳಲಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳು ರಾಜ್ಯದಾದ್ಯಂತ ಒಂದೇ ರೀತಿ ಸಿಗಬೇಕು ಅನ್ನುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇದನ್ನೂ ಓದಿ: ಇದು ಸೇಡಿನ ರಾಜಕಾರಣ: ಬಿಜೆಪಿ ಮುಖಂಡನ ಬಂಧನಕ್ಕೆ ನವಜೋತ್‌ ಸಿಧು ಕಿಡಿ

    BBMP

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ನಿರ್ವಹಣೆ ಒಂದೇ ರೀತಿ ನಡೆಯಬೇಕು. ಸರ್ಕಾರದ ಸೌಲಭ್ಯಗಳು ನಗರದ ಪ್ರದೇಶವಾಗಿರಲಿ, ಅಥವಾ ಹಳ್ಳಿಯೇ ಆಗಿರಲಿ, ಎಲ್ಲರಿಗೂ ಒಂದೇ ರೀತಿಯಲ್ಲಿ ಇರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳಲ್ಲಿ ಸಮನ್ವಯ ಸಾಧಿಸಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಇದು ನೆರವಾಗಲಿದೆ ಎಂದರು.

  • ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಡಾ.ಕೆ ಸುಧಾಕರ್

    ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ: ಡಾ.ಕೆ ಸುಧಾಕರ್

    ಬೆಂಗಳೂರು: ಮೊದಲ ಹಂತದಲ್ಲಿ ರಾಜ್ಯದಲ್ಲಿನ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿಸುವ ಯೊಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

    ಚಿಕ್ಕಬಳ್ಳಾಪುರ ನಗರದ ಪೆರೇಸಂದ್ರ ಗ್ರಾಮದಲ್ಲಿ ಬುಧವಾರ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಅವರು ಶಿಲಾನ್ಯಾಸ ಮಾಡುವ ಮೂಲಕ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 25 ಸಾವಿರ ಚದರ ಅಡಿಯಲ್ಲಿ ತಲಾ ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯು ಗುಣಮಟ್ಟದ ಆರೋಗ್ಯ ಸೌಲಭ್ಯ ದೊರಕಲಿದ್ದು, ಈಗಿರುವ 6 ಹಾಸಿಗೆಗಳ ಬದಲಾಗಿ 12 ಹಾಸಿಗೆಗಳ ವ್ಯವಸ್ಥೆ ಇರಲಿದೆ. ಒಬ್ಬ ವೈದ್ಯರ ಬದಲಾಗಗಿ ಮೂವರು ವೈದ್ಯರು ಇರುತ್ತಾರೆ. ದಾದಿಯರು, ತಾಂತ್ರಿಕ ಸಹಾಯಕರು, ಡಿ-ದರ್ಜೆ ನೌಕರರು ಸೇರಿದಂತೆ ಈಗಿರುವ ಎಲ್ಲಾ ಹುದ್ದೆಗಳ ಸಂಖ್ಯೆಗಳು ದ್ವಿಗುಣವಾಗಲಿವೆ ಎಂದರು.

    ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯೂ ಕೇಂದ್ರದಲ್ಲಿಯೇ ಉಳಿದುಕೊಳ್ಳಲು ವಸತಿ ಗೃಹಗಳನ್ನು ನಿರ್ಮಿಸಲಾಗುತ್ತದೆ. ಕಡ್ಡಾಯವಾಗಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವಸತಿ ಗೃಹಗಳಲ್ಲೇ ವಾಸವಿದ್ದು ಪಾಳಿ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಒಟ್ಟಾರೆ ಸುಸಜ್ಜಿತ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿ ದೇಶದಲ್ಲೇ ಮಾದರಿಯಾದ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಸರ್ಕಾರದ ಆಶಯವಾಗಿದೆ ಎಂದು ಹೇಳಿದರು.

    ಜಿಲ್ಲೆಯಲ್ಲಿ ಸದ್ಯಕ್ಕೆ ನಿರ್ಮಾಣವಾಗುತ್ತಿರುವ ಈ 3 ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾಮಗಾರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 30 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿನ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿಸಲಾಗುವುದು. ಈ ಮಹತ್ವಾಕಾಂಕ್ಷಿ ಯೊಜನೆಯ ಭಾಗವಾಗಿ ಇಂದು ಜಿಲ್ಲೆಯ ಪೆರೇಸಂದ್ರ, ಮತ್ತು ದಿಬ್ಬೂರು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದ್ದು, ಮುಂದಿನ ಸಂಕ್ರಾಂತಿ ವೇಳೆಗೆ ಈ ಕೇಂದ್ರಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

    ನಮ್ಮ ಜಿಲ್ಲೆಯ ಜನರ ಆಶೋತ್ತರಗಳಿಗನುಗುಣವಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು 700 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕನಸು ನನಸಾಗುವ ದಿನಗಳು ಹತ್ತಿರವಾಗಿದ್ದು, 2021-22 ನೇ ಸಾಲಿನಲ್ಲೇ ಸರ್ಕಾರಿ ವೈದ್ಯಕೀಯ ಕಾಲೇಜು ತಾತ್ಕಾಲಿಕ ವ್ಯವಸ್ಥೆಯಲ್ಲಿ ಮೊದಲು ಬಾಡಿಗೆ ಕಟ್ಟಡದಲ್ಲಿ ಜಿಲ್ಲೆಯಲ್ಲಿ ಆರಂಭವಾಗಲಿದೆ. ನಿರ್ಮಾಣ ಹಂತದಲ್ಲಿರುವ ವೈದ್ಯಕೀಯ ಕಾಲೇಜಿನ ಕಟ್ಟಡ ಬಳಕೆಗೆ ಲಭ್ಯವಾದ ಕೂಡಲೆ ಉದ್ಘಾಟನೆಯಾಗಿ ಶಾಶ್ವತವಾಗಿ ಜಿಲ್ಲಾ ಕೇಂದ್ರದಲ್ಲಿ (ಅರೂರು ಗ್ರಾ.ಪಂ ವ್ಯಾಪ್ತಿಯಲ್ಲಿ) ನಡೆಯಲಿದೆ. ಒಟ್ಟಾರೆ 2021-22 ಶೈಕ್ಷಣಿಕ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಿರುವ ವೈದ್ಯಕೀಯ ಶಿಕ್ಷಣ ಕಲಿಕಾ ವಿದ್ಯಾರ್ಥಿಗಳಿಗೆ ಇದರ ಲಾಭ ಈ ವರ್ಷವೇ ದೊರಕಲಿದೆ. ಈ ವರ್ಷವೇ 100 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದು,ಮುಂದಿನ ದಿನಗಳಲ್ಲಿ 50 ಸೀಟುಗಳು ಮಂಜೂರಾಗಿ ಪ್ರತಿ ವರ್ಷ 150 ವಿದ್ಯಾರ್ಥಿ ಸಾಮಥ್ರ್ಯದ ವೈದ್ಯಕೀಯ ಕಾಲೇಜಾಗಿ ಹೊರಹೊಮ್ಮಲಿದೆ.ಈ ಸಂಸ್ಥೆಯನ್ನು ರಾಷ್ಟ್ರದಲ್ಲೆ ಅತ್ಯುನ್ನತ ದರ್ಜೆಯ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನಾಗಿ ಬೆಳೆಸಲಾಗುವುದು ಎಂದರು. ಇದನ್ನೂ ಓದಿ: ಸತ್ಯ, ಸಮಾನತೆಯ ಮೊದಲ ಹೆಜ್ಜೆಗೆ ನನ್ನ ಪ್ರಣಾಮಗಳು: ರಾಹುಲ್ ಗಾಂಧಿ

    ಪ್ರಾಥಮಿಕ ಹಂತದಲ್ಲೇ ರೋಗವನ್ನು ಗುರುತಿಸಿ:
    ಸಾರ್ವಜನಿಕ ಆಸ್ಪತ್ರೆ, ಆರೋಗ್ಯ ಕೇಂದ್ರಗಳು ಹಾಗೂ ಚಿಕಿತ್ಸಾ ಕೇಂದ್ರಗಳಲ್ಲಿ ದೊರೆಯುವ ಆರೋಗ್ಯ ಸೌಲಭ್ಯಗಳ ಕುರಿತು ಅರಿವು ಅಗತ್ಯವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ಅವಕಾಶವಿದ್ದರೂ ಸಹ ವಿದ್ಯಾವಂತ ಮಹಿಳೆಯರು ಪರೀಕ್ಷೆಗೊಳಪಡಲು ಹಿಂಜರಿಯುತ್ತಿದ್ದಾರೆ. ಆದರೆ ಹಿಂಜರಿಕೆ ಬಿಟ್ಟು ಪ್ರಾರಂಭಿಕ ಹಂತದಲ್ಲೇ ರೋಗವನ್ನು ಗುರುತಿಸಿ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾಯಿಲೆ ಇರಲಿ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಎಚ್ಚರವಹಿಸುವುದು ಅತ್ಯಂತ ಪರಿಣಾಮಕಾರಿಯಾಗಿದ್ದು, ಉತ್ತಮ ಜೀವನ ಕ್ರಮ ಮತ್ತು ಆಹಾರ ಕ್ರಮವನ್ನು ಪಾಲಿಸುವ ಮೂಲಕ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ರೋಗವನ್ನು ಗುರುತಿಸಲು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ಡಾ: ಜಿ.ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ತಹಸೀಲ್ದಾರ್ ಗಣಪತಿಶಾಸ್ತ್ರೀ, ಮೆಡಿಕಲ್ ಕಾಲೇಜಿನ ಸಿ. ಇ. ಓ ಸಿದ್ಧೀಕ್, ಕಾರ್ಯಪಾಲಕ ಅಭಿಯಂತರರು ಮಂಜಪ್ಪ, ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ವಂದಿ ಸೇರಿದಂತೆ ಅರೂರು ಮತ್ತು ಪೆರೇಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಆಶಾ ಕಾರ್ಯಕರ್ತೆಯರು ಮುಂತಾದವರು ಉಪಸ್ಥಿತರಿದ್ದರು.

  • ಸ್ವಚ್ಛತೆ, ಸೇವೆಯಲ್ಲಿ ಮೈಸೂರಿನ ಸಮುದಾಯ ಆರೋಗ್ಯ ಕೇಂದ್ರ ಕರ್ನಾಟಕದಲ್ಲೇ ನಂಬರ್ 1

    ಸ್ವಚ್ಛತೆ, ಸೇವೆಯಲ್ಲಿ ಮೈಸೂರಿನ ಸಮುದಾಯ ಆರೋಗ್ಯ ಕೇಂದ್ರ ಕರ್ನಾಟಕದಲ್ಲೇ ನಂಬರ್ 1

    ಮೈಸೂರು: ಸರ್ಕಾರಿ ಆಸ್ಪತ್ರೆ, ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಎಂದ ಕೂಡಲೇ ಜನರು ಅಲ್ಲಿ ಸ್ಚಚ್ಚತೆ ಇರಲ್ಲ. ಅಲ್ಲಿ ಚಿಕಿತ್ಸೆ ವಿಳಂಬ. ಅಲ್ಲಿ ವೈದ್ಯರ ಸೇವೆ ಸರಿ ಇರಲ್ಲ ಎಂಬ ನೂರು ದೂರು ಹೇಳುತ್ತಾರೆ. ಆದರೆ ಮೈಸೂರಿನ ಒಂದು ಸಮುದಾಯ ಆರೋಗ್ಯ ಕೇಂದ್ರ ಈ ಎಲ್ಲಾ ದೂರುಗಳಿಂದ ಬಹು ದೂರ ಇದ್ದು ಸ್ವಚ್ಚತೆ, ಚಿಕಿತ್ಸೆ, ವೈದ್ಯರ ಸೇವೆ ಎಲ್ಲಾ ವಿಚಾರದಲ್ಲೂ ರಾಜ್ಯಕ್ಕೆ ಮಾದರಿಯಾಗಿದೆ.

    ಹೀಗಾಗಿ ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಜಯನಗರ ಆಸ್ಪತ್ರೆ ಎಂದು ಖ್ಯಾತಿ ಪಡೆದಿರುವ ಮೈಸೂರಿನ ಜಯ ನಗರದ ನಗರ ಸಮುದಾಯ ಆರೋಗ್ಯ ಕೇಂದ್ರ ಈಗ ರಾಜ್ಯದ ನಂಬರ್ ಒನ್ ಆರೋಗ್ಯ ಕೇಂದ್ರ. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಚ್ಛ ಭಾರತ ಯೋಜನೆಯ ಅಡಿ ನೀಡುವ ಕಾಯಕಲ್ಪ ಪ್ರಶಸ್ತಿಯನ್ನು ಈ ಕೇಂದ್ರಕ್ಕೆ ನೀಡಿದೆ.

    ಸ್ವಚ್ಚತೆ, ಸುಸಜ್ಜಿತ ವ್ಯವಸ್ಥೆ ಹಾಗೂ ರೋಗಿಗಳ ಪ್ರತಿಕ್ರಿಯೆ ಎಲ್ಲದರಲ್ಲೂ ಈ ಆಸತ್ರೆ 98.5 ಅಂಕ ಗಳಿಸುವ ಮೂಲಕ ರಾಜ್ಯದ ನಂಬರ್ ಒನ್ ಸಮುದಾಯ ಕೇಂದ್ರ ಎಂಬ ಪಟ್ಟ ಗಿಟ್ಟಿಸಿದೆ. ರಾಷ್ಟ್ರೀಯ ಗುಣಮಟ್ಟ ಮೌಲ್ಯಮಾಪನ ಸಮಿತಿ ಇಲ್ಲಿಗೆ ಭೇಟಿ ನೀಡಿ ಆಸ್ಪತ್ರೆಯನ್ನು ಪರಿಶೀಲಿಸಿತ್ತು.

    ರಾಜ್ಯದ 28 ನಗರ ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ ಮೈಸೂರಿನ ಜಯನಗರದ ನಗರ ಸಮುದಾಯ ಆರೋಗ್ಯ ಕೇಂದಕ್ಕೆ ಮೊದಲ ಪ್ರಶಸ್ತಿ ಲಭಿಸಿದೆ. ಇದಿಷ್ಟೆ ಅಲ್ಲದೆ UNIDO (ಯುನೈಟೆಡ್ ನೇಷನ್ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ ಆರ್ಗನೈಜೇಷನ್) ವತಿಯಿಂದಲೂ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯಲ್ಲಿಯೂ ಜಯ ನಗರ ಆಸ್ಪತ್ರೆ ಅತ್ಯುತ್ತಮ ಪ್ರಶಸ್ತಿ ಗಳಿಸಿದ್ದು 10,000 ರೂ.ಗಳ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. 30 ಬೆಡ್ ಸಾಮಥ್ರ್ಯದ ಜಯನಗರ ನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಿಂಗಳು 8000 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗರ್ಭಿಣಿಯರು ಮತ್ತು ಮಕ್ಕಳಿಗೆ ಉತ್ತಮ ಚಿಕಿತ್ಸೆ ಇಲ್ಲಿ ದೊರಕುತ್ತಿದೆ.

  • ಕೊಠಡಿಯಲ್ಲಿ ಕೂಡಿ ಹಾಕಿ ನರ್ಸ್ ಗೆ ವೈದ್ಯರಿಂದ್ಲೇ ಚಿತ್ರಹಿಂಸೆ, ಕೊಲೆಯತ್ನ!

    ಕೊಠಡಿಯಲ್ಲಿ ಕೂಡಿ ಹಾಕಿ ನರ್ಸ್ ಗೆ ವೈದ್ಯರಿಂದ್ಲೇ ಚಿತ್ರಹಿಂಸೆ, ಕೊಲೆಯತ್ನ!

    ಕೊಪ್ಪಳ: ಜಿಲ್ಲೆಯ ಕುಕನೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ವಿರುದ್ಧ ಕೊಲೆಯತ್ನ ಆರೋಪವೊಂದು ಕೇಳಿಬಂದಿದೆ.

    ಈ ಆರೋಪ ಮಾಡ್ತಿರೋದು ರೋಗಿಗಳ ಸಂಬಂಧಿಗಳಲ್ಲ ಬದಲಿಗೆ ಅಲ್ಲಿಯೇ ಕೆಲಸ ಮಾಡುತ್ತಿರುವ ನರ್ಸ್ ಸಂಗೀತಾ ಇಟಗಿ. ರಜೆ ವಿಷಯಕ್ಕೆ ನಡೆದ ಜಗಳ ಕೊಲೆಗೆ ಯತ್ನಿಸುವ ಹಂತ ತಲುಪಿದೆಯಂತೆ.

    ವೈದ್ಯಾಧಿಕಾರಿ ಡಾ.ಚನ್ನಬಸಯ್ಯ ಹಿರೇಮಠ, ಡಾ.ಮಮತಾ ಹಾಗೂ ನರ್ಸ್ ಗಳಾದ ರೂಪಾ, ಉಷಾ, ರತ್ನ ಸೇರಿಕೊಂಡು ಸಂಗೀತಾಳನ್ನು ಕೊಠಡಿಯಲ್ಲಿ ಕೂಡಿಹಾಕಿ ಮಾನಸಿಕ ಹಿಂಸೆ ನೀಡಿ, ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

    ರಜೆ ಕೊಡ್ಲಿಲ್ಲ ಅನ್ನೋ ಕೋಪಕ್ಕೆ ಸಂಗೀತಾ ಅಲ್ಲಿನ ಅವ್ಯವಹಾರ ಬಯಲು ಮಾಡಲು ಮುಂದಾಗಿದ್ದರಂತೆ. ಈ ವಿಚಾರದ ತಿಳಿದ ವೈದ್ಯರು, ನನ್ನನ್ನು ಕೂಡಿ ಹಾಕಿ ಕಿರುಕುಳ ನೀಡಿದ್ದಾರೆ. ಮೊಬೈಲ್ ಕಸಿದು ಕೆಲ ಫೋಟೋ ಡಿಲೀಟ್ ಮಾಡಿದ್ದಾರೆ. ನನ್ನ ಪತಿ ಬರದೇ ಇದ್ದಿದ್ರೆ ಕೊಲೆ ಮಾಡ್ತಿದ್ರೂ ಅಂತಾ ನರ್ಸ್ ಸಂಗೀತಾ ಆರೋಪಿಸಿದ್ದಾರೆ.

    ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳು ತನಿಖೆಯ ಭರವಸೆ ನೀಡಿದ್ದಾರೆ. ಕುಕನೂರು ಪೊಲೀಸರು ತನಿಖೆ ನಡೆಸ್ತಿದ್ದಾರೆ.