Tag: Health Card

  • ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‍ಗೆ ಗ್ರಹಣ- ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲು

    ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್‍ಗೆ ಗ್ರಹಣ- ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲು

    ಬೆಂಗಳೂರು: ಬಿಪಿಎಲ್ ಕಾರ್ಡ್‍ದಾರರಿಗೆ (BPL Card) ಉಚಿತ ಚಿಕಿತ್ಸೆ ಹಾಗೂ ಎಪಿಎಲ್‍ನವರಿಗೆ 30% ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ಪಡೆಯುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹೆಲ್ತ್ ಕಾರ್ಡ್ ಯೋಜನೆಗೆ (Ayushman Bharat Arogya Karnataka) ಈಗ ಯಾವ ಕಿಮ್ಮತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ (Hospital) ಎಲ್ಲಿ ಕೇಳಿದ್ರೂ ಬಹುತೇಕ ಈ ಹೆಲ್ತ್ ಕಾರ್ಡ್‍ಗೆ (Health Card) ನಯಾ ಪೈಸೆ ಬೆಲೆಯೂ ಇಲ್ಲ ಎಂಬುದನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.

    ಬಡವರಿಗೆ ಉಚಿತವಾಗಿ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಸಿಗಬೇಕು. ಎಪಿಎಲ್ ಕಾರ್ಡ್‍ದಾರರಿಗೂ ರಿಯಾಯಿತಿಯಲ್ಲಿ ಚಿಕಿತ್ಸೆ ಸಿಗಬೇಕು ಎಂದು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‍ನ್ನು ಜಾರಿಗೆ ತಂದಿದೆ. ಈ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಹೆಲ್ತ್ ಕಾರ್ಡ್ ಈಗ ಕೋಮಾ ಸ್ಥಿತಿಯಲ್ಲಿದೆ. ರೋಗಿಗಳು ಈ ಕಾರ್ಡ್ ನಂಬಿಕೊಂಡು ಖಾಸಗಿ ಆಸ್ಪತ್ರೆಗೆ ಹೋದರೆ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಈ ಕಾರ್ಡ್‍ನ್ನು ಖಾಸಗಿ ಆಸ್ಪತ್ರೆಗಳು ಪರಿಗಣಿಸುತ್ತಿಲ್ಲ ಎಂಬುದು ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ಚಿಕನ್ ಸಾರು ಮಾಡಿಲ್ಲವೆಂದು ಪತ್ನಿ ಕೊಲೆಗೈದಿದ್ದ ಪತಿಗೆ 6 ವರ್ಷ ಜೈಲು

    ಪಬ್ಲಿಕ್ ಟಿವಿ 4 ಕಡೆಗಳಲ್ಲಿ ರಿಯಾಲಿಟಿ ಚೆಕ್ ಮಾಡಿ ಮಾಹಿತಿ ಕಲೆಹಾಕಿದೆ. ಈ ವೇಳೆ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕಾರ್ಡ್ ಅಪ್ಲೈ ಆಗುತ್ತಾ ಎಂದು ಕೇಳಿದ ಪ್ರಶ್ನೆಗೆ, ಆಸ್ಪತ್ರೆಯವರು ನಮ್ ಬಳಿ ಇಲ್ಲ. ಸ್ವಲ್ಪ ಎಮರ್ಜೆನ್ಸಿ ಇದೆ ಚೆಕ್ ಮಾಡಿ ಹೇಳಿ ಎಂದಿದ್ದಕ್ಕೆ, ಚೆಕ್ ಮಾಡಿಯೇ ಹೇಳುತ್ತಿದ್ದೇವೆ. ರೋಗಿಗೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ ಎನ್ನುತ್ತಿದ್ದಂತೆ ಪ್ರೈವೆಟ್ ಇನ್ಶೂರೆನ್ಸ್ ಇಲ್ವಾ? ಆಯುಷ್ಮಾನ್ ಕಾರ್ಡ್ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

    ಈ ಮೂಲಕ ಕೇಂದ್ರ ಸರ್ಕಾರದ ಮಹತ್ವದ ಯೊಜನೆಯೊಂದನ್ನು ಆಸ್ಪತ್ರೆಗಳು ಪರಿಗಣಿಸದೆ ವೆಚ್ಚ ಭರಿಸಲಾಗದ ರೋಗಿಗಳಿಂದ ಸುಲಿಗೆಗೆ ಮುಂದಾಗಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿಯ ತಂದೆ ಅನುಮಾನಾಸ್ಪದ ಸಾವು

  • ಮಾಸ್ಕ್‌ ಧರಿಸದೇ ಎಂಟ್ರಿ – ಪ್ರಶ್ನಿಸಿದ್ದಕ್ಕೆ ಕಂಪ್ಯೂಟರ್‌ ಎತ್ತಿ, ಪೀಠೋಪಕರಣ ಧ್ವಂಸ

    ಮಾಸ್ಕ್‌ ಧರಿಸದೇ ಎಂಟ್ರಿ – ಪ್ರಶ್ನಿಸಿದ್ದಕ್ಕೆ ಕಂಪ್ಯೂಟರ್‌ ಎತ್ತಿ, ಪೀಠೋಪಕರಣ ಧ್ವಂಸ

    – ನಾನು ಮಾಸ್ಕ್‌ ಖರೀದಿಸಲ್ಲ
    – ಪಂಚಾಯತ್‌ ಮಾಸ್ಕ್‌ ನೀಡಲಿ

    ಹಾಸನ: ಪಾನಮತ್ತ ವ್ಯಕ್ತಿಯೊಬ್ಬ ಮಾಸ್ಕ್ ಧರಿಸದೆ ಗ್ರಾಮ ಪಂಚಾಯಿತಿಗೆ ನುಗ್ಗಿ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ಆತಂಕ ಸೃಷ್ಟಿ ಮಾಡಿದ ಘಟನೆ ಹಾಸನ ಜಿಲ್ಲೆಯ, ಸಕಲೇಶಪುರ ತಾಲೂಕಿನಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

    ಗುರುವಾರ ಬ್ಯಾಕರವಳ್ಳಿ ಗ್ರಾಮ ಪಂಚಾಯತಿಗೆ ನುಗ್ಗಿದ ಹರೀಶ್, ನನಗೆ ಹೆಲ್ತ್ ಕಾರ್ಡ್ ಮಾಡಿಕೊಡಬೇಕು ಎಂದು ಸಿಬ್ಬಂದಿಗೆ ಜೋರು ದನಿಯಲ್ಲಿ ಕೇಳಿದ್ದಾನೆ. ಆಗ ಸಿಬ್ಬಂದಿ ಹಿರಿಯ ಅಧಿಕಾರಿಗಳು ಹೊರಗೆ ಹೋಗಿದ್ದಾರೆ ಅವರು ಬಂದ ನಂತರ ಮಾತನಾಡಿ ಎಂದು ಹೇಳಿದ್ದಾರೆ. ಇದಕ್ಕೆ ಸುಮ್ಮನಾಗದ ಹರೀಶ್ ಅವಾಚ್ಯ ಪದಗಳಿಂದ ನಿಂದಿಸುತ್ತಾ, ಕಚೇರಿಯಲ್ಲಿದ್ದ ಕಂಪ್ಯೂಟರ್ ಮೇಲಕ್ಕೆತ್ತಿ ಎಸೆಯುವ ಪ್ರಯತ್ನ ಮಾಡಿದ್ದಾನೆ.

    ಈ ಸಂದರ್ಭದಲ್ಲಿ ಅಲ್ಲೇ ಇದ್ದ ಇಬ್ಬರು ಸಿಬ್ಬಂದಿ ಆತನನ್ನು ಸಮಾಧಾನಪಡಿಸಿ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ನಂತರ ಬಂದ ಅಧಿಕಾರಿಗಳು ಮಾಸ್ಕ್ ಧರಿಸದೆ ಇದ್ದದ್ದಕ್ಕೆ ಆತನಿಗೆ ಬುದ್ಧಿವಾದವನ್ನು ಹೇಳಿ ನಿಮ್ಮ ಸೇವೆಗೆ ನಾವಿರುವುದು. ಹೆಲ್ತ್ ಕಾರ್ಡ್ ಆಗಲಿ ಮತ್ತೊಂದಾಗಲಿ ಮಾಡಿಕೊಡುತ್ತೇವೆ. ಅರ್ಜಿಯನ್ನು ಸಲ್ಲಿಸಿ ಎಂದು ಹರೀಶ್ ನ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಕುಪಿತಗೊಂಡ ಹರೀಶ್ ಕಾರ್ಯದರ್ಶಿಯ ನಿಂಗಯ್ಯ ಅವರಿಗೆ ಮಾಸ್ಕ್ ಗಳನ್ನು ನಾವು ತೆಗೆದುಕೊಳ್ಳುವುದಿಲ್ಲ ಪಂಚಾಯತಿಯಿಂದಲೇ ಕೊಡಬೇಕು ಎಂದು ಗಲಾಟೆ ಮಾಡಿದ್ದಾನೆ. ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.